Tag: Health Advice

  • ಮಧ್ಯಾಹ್ನ 12 ರಿಂದ 3 ಗಂಟೆ ವರೆಗೆ ಮನೆಯಿಂದ ಹೊರಗೆ ಬರಬೇಡಿ: ದಿನೇಶ್ ಗುಂಡೂರಾವ್

    ಮಧ್ಯಾಹ್ನ 12 ರಿಂದ 3 ಗಂಟೆ ವರೆಗೆ ಮನೆಯಿಂದ ಹೊರಗೆ ಬರಬೇಡಿ: ದಿನೇಶ್ ಗುಂಡೂರಾವ್

    ರಾಯಚೂರು: ಈ ವರ್ಷ ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆಯಿದ್ದು, ಮಧ್ಯಾಹ್ನ 12 ರಿಂದ 3 ರವರೆಗೆ ಹೊರಗೆ ಕೆಲಸ ಮಾಡಬಾರದು, ಮನೆ, ಕಚೇರಿಯಲ್ಲೇ ಇರಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಹೇಳಿದ್ದಾರೆ.ಇದನ್ನೂ ಓದಿ: ಲಿವ್‌ ಇನ್‌ನಲ್ಲಿದ್ದಾಗ ಕೊಟ್ಟಿದ್ದ ಹಣ, ಒಡವೆ ಕೊಡು ಎಂದವನಿಗೆ ಥಳಿಸಿ ವಿಷ ಕುಡಿಸಿದ ಮಾಜಿ ಪ್ರೇಯಸಿ!

    ರಾಯಚೂರಿನ (Raichuru) ಮಾನ್ವಿಯಲ್ಲಿ (Manvi) ಮಾತನಾಡಿದ ಅವರು, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಈಗಾಗಲೇ ಸೂಚಿಸಿದ್ದೇವೆ. ಬಿಸಿಲು ಹೆಚ್ಚಾಗುತ್ತಿರುವುದರಿಂದ ಸರ್ಕಾರಿ ಕಚೇರಿಗಳ ಕೆಲಸದ ಸಮಯ ಬದಲಾವಣೆಯ ಬಗ್ಗೆ ಸರ್ಕಾರ ಮಟ್ಟದಲ್ಲಿ ತೀರ್ಮಾನ ಮಾಡಿಕೊಳ್ಳಲಿ. ಮಧ್ಯಾಹ್ನ ಹೊತ್ತು ಫೀಲ್ಡ್ ವಿಸಿಟ್ ಮಾಡುವುದನ್ನು ಅಧಿಕಾರಿಗಳು ಬಿಡಬೇಕು. ಸರ್ಕಾರಿ ನೌಕರರು ಹೊರಗಡೆ ವೀಕ್ಷಣೆಯನ್ನು ಮಧ್ಯಾಹ್ನ 12 ರಿಂದ 3ರ ವರೆಗೆ ಮಾಡಬಾರದು. ಬೆಳಗಿನ ಜಾವ ಅಥವಾ ಸಾಯಂಕಾಲ ಮಾಡಬೇಕು. ಸರ್ಕಾರ ರಜೆ ಕೊಡಬೇಕು ಅಂತ ಹೇಳುವುದಿಲ್ಲ, ಸಮಯ ಬದಲಾವಣೆ ಮಾಡಿಕೊಂಡರೆ ಒಳ್ಳೆಯದು ಎಂದರು.

    ರಾಯಚೂರು ಜಿಲ್ಲೆ ಸೇರಿ ಈ ಭಾಗದಲ್ಲಿ 43 ರಿಂದ 44 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಹೋಗುತ್ತದೆ. ಮಧ್ಯಾಹ್ನ ಸಮಯದಲ್ಲಿ ಮನೆಯೊಳಗೆ ಅಥವಾ ಕಚೇರಿಯೊಳಗೆ ಇರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಶಾಲೆಗಳು, ಎಲ್ಲಾ ಸಂಸ್ಥೆಗಳು ಆ ಬಗ್ಗೆ ಗಮನ ಕೊಡಬೇಕು. ಆಹಾರದ ಬಗ್ಗೆಯೂ ಗಮನ ಕೊಡಬೇಕು. ಆಗಾಗ ನೀರು ಕುಡಿದರೆ ನಿರ್ಜಲೀಕರಣದಿಂದ ದೂರ ಇರಬಹುದು. ಬಿಸಿಲಿನ ತಾಪಮಾನ ಹೆಚ್ಚಳ ಹಿನ್ನೆಲೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಪೆಷಲ್ ವಾರ್ಡ್ ಅಗತ್ಯ ಇಲ್ಲ. ನಮ್ಮಲ್ಲಿ ಎಲ್ಲಾ ಸೌಲಭ್ಯಗಳಿವೆ ಎಂದು ತಿಳಿಸಿದರು.ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ವಕ್ಫ್‌ ಅಧ್ಯಕ್ಷ ಸ್ಥಾನ ವಿಚಾರದಲ್ಲಿ ಜಟಾಪಟಿ – ಅಧ್ಯಕ್ಷರಾಗಿ ಸೈಯದ್ ಹುಸೈನಿ ಆಯ್ಕೆ

  • ಸಕ್ಕರೆ ಕಾಯಿಲೆ ಹೇಗೆ ಬರುತ್ತೆ? ಬಂದ್ರೆ ಏನು ಮಾಡಬೇಕು- ಇಲ್ಲಿದೆ ಸರಳ ಮಾರ್ಗ

    ಸಕ್ಕರೆ ಕಾಯಿಲೆ ಹೇಗೆ ಬರುತ್ತೆ? ಬಂದ್ರೆ ಏನು ಮಾಡಬೇಕು- ಇಲ್ಲಿದೆ ಸರಳ ಮಾರ್ಗ

    ತ್ತೀಚಿನ ದಿನಗಳಲ್ಲಿ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಸಾಮಾನ್ಯವಾಗಿ ಬಿಟ್ಟಿದೆ. ಚಿಕ್ಕ ಮಕ್ಕಳಿಂದ ದೊಡ್ಡ ವಯಸ್ಸಿವರೆಗೂ ಈ ಕಾಟ ತಪ್ಪಿದಲ್ಲ. ಸಕ್ಕರೆ ಕಾಯಿಲೆ ಹೇಗೆ ಬರುತ್ತೆ? ಅದನ್ನು ಹೇಗೆ ಗುರುತಿಸುವುದು ಎಂಬುದೇ ತಿಳಿದಿಲ್ಲ. ಅದಕ್ಕೆ ಇಲ್ಲಿ ಸರಳ ಮಾರ್ಗಗಳು ಅದನ್ನು ನಾವು ಮನೆಯಲ್ಲಿ ಹೇಗೆ ಗುರುತಿಸಬಹುದು. ಹೇಗೆ ಬಗೆಹರಿಸಿಕೊಳ್ಳಬಹುದು ಎಂಬುದಕ್ಕೆ ಈ ಸುದ್ದಿ ಓದಿ.

    ಮಧುಮೇಹಕ್ಕೆ ಮುಖ್ಯವಾಗಿ ಎರಡು ಕಾರಣ!

    ಒಂದು ಆಟೋಇಮ್ಮ್ಯೂನ್ ಕಾಯಿಲೆ. ಅಂದರೆ ದೇಹದ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತೆ. ಈ ಖಾಯಿಲೆಯಿಂದ ದೇಹದ ಪ್ಯಾಂಕ್ರಿಯಾಸ್ ನಲ್ಲಿರುವ ಬೀಟಾ ಸೆಲ್ಸ್ ಅನ್ನು ಆಕ್ರಮಣ ಮಾಡಿ, ಸಂಪೂರ್ಣವಾಗಿ ನಾಶ ಮಾಡುತ್ತೆ. ಮಧುಮೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಇರುವುದಿಲ್ಲ. ಈ ಪರಿಣಾಮ ಚಿಕ್ಕ ಮಕ್ಕಳಿಗೆ ಕಾಯಿಲೆ ಬರುವ ಸಾಧ್ಯತೆ ಹೆಚ್ಚಿರುತ್ತೆ. 15-16 ವರ್ಷ ಮೇಲ್ಪಟ್ಟವರಲ್ಲೂ ಸಹ ಈ ರೋಗ ಕಾಣಿಸಬಹುದು.

    ಎರಡನೇದು ಡಯಾಬಿಟೀಸ್. ಇದಕ್ಕೆ ಬಹಳ ರೀತಿಯ ಕಾರಣಗಳಿರುತ್ತೆ. ಬೊಜ್ಜು ಇದಕ್ಕೆ ಮುಖ್ಯ ಕಾರಣ. ಅದರಲ್ಲೂ ಹೊಟ್ಟೆಯ ಬೊಜ್ಜು ಅಥವಾ ಸೆಂಟ್ರಲ್ ಒಬೆಸಿಟಿ ಇಂದ ದೇಹದಲ್ಲಿ ಇನ್ಸುಲಿನ್ ಪ್ರತಿರೋಧ ಉಂಟಾಗುತ್ತೆ. ಇದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿ ಈ ಸಮಸ್ಯೆ ಬರುತ್ತದೆ. ಇದಕ್ಕೆ ಮುಖ್ಯ ಕಾರಣ ಸ್ಥೂಲಕಾಯ. ಇದಲ್ಲದೆ ಬೆಳಗ್ಗೆ ಹೊತ್ತು ಮಲಗುವುದು, ರಾತ್ರಿ ಸರಿಯಾಗಿ ಮಲಗದೆ ಇರುವುದು. ಸರಿಯಾದ ಕ್ರಮದಲ್ಲಿ ಆಹಾರ ತಿನ್ನುದೆ ಇರುವುದು ಹಾಗು ದೇಹದ ತೂಕ ನಿಯಂತ್ರಣಕ್ಕೆ ಬಾರದಿರುವುದು. ಇದನ್ನೂ ಓದಿ: ರಾಜ್ಯದಲ್ಲಿಂದು 310 ಕೇಸ್, 6 ಸಾವು

    ಗುರುತಿಸುವುದು ಹೇಗೆ?

    * ಸಕ್ಕರೆ ಖಾಯಿಲೆ ಬಂದಾಗ ಅತಿಯಾದ ಬಾಯಾರಿಕೆಯಾಗುವುದು ಹಾಗೂ ಎಷ್ಟು ನೀರನ್ನು ಕುಡಿದರು ಸಹ ಬಾಯಾರಿಕೆ ಹೋಗುವುದಿಲ್ಲ.
    * ಹೆಚ್ಚು ಮೂತ್ರ ವಿಸರ್ಜನೆ, ದೇಹದಲ್ಲಿ ಆದ ಗಾಯ ಬೇಗ ವಾಸಿಯಾಗದಿರುವುದು
    * ರಾತ್ರಿ ಹೊತ್ತು ಗಾಡಿ ಓಡಿಸುವಾಗ ಕಣ್ಣು ಹೆಚ್ಚು ಮಂಜಾಗುವುದು
    * ಅತಿ ಬೇಗನೆ ದೇಹದ ತೂಕ ಇಳಿಯುವುದು ಕೂಡ ಮುಖ್ಯ ಲಕ್ಷಣಗಳು

    ಪರಿಹಾರ:


    ಬೆಂಡೆಕಾಯಿ: ಎರಡು ಬೆಂಡೆಕಾಯಿಯನ್ನು ಉದ್ದುದ್ದ ಕತ್ತರಿಸಿ ರಾತ್ರಿ ನೀರಿನಲ್ಲಿ ನೆನೆಸಬೇಕು. ಮರುದಿನ ಬೆಳಿಗ್ಗೆ ನೆನೆಹಾಕಿದ ನೀರಿನಿಂದ ಬೆಂಡೆಕಾಯಿಯನ್ನು ತೆಗೆದು, ಲೋಳೆಯ ನೀರನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದನ್ನು ಕ್ರಮವಾಗಿ ಮಾಡಿಕೊಂಡು ಬಂದರೆ ಸಕ್ಕರೆ ಖಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

    ಹಾಗಲಕಾಯಿ: ಸಕ್ಕರೆ ಕಾಯಿಲೆಗೆ ರಾಮಬಾಣ ಹಾಗಲಕಾಯಿ ಎಂದರೆ ತಪ್ಪಾಗುವುದಿಲ್ಲ. ಇದನ್ನು ನಮ್ಮ ದಿನ ನಿತ್ಯದ ಆಹಾರ ಪದ್ದತಿಯಲ್ಲಿ ಹೆಚ್ಚಾಗಿ ಸೇವಿಸಿದರೆ ಸಕ್ಕರೆ ಅಂಶ ಬೇಗ ಕಡಿಮೆಯಾಗುತ್ತೆ. ಅಂದರೆ ಹಾಗಲಕಾಯಿ ಪಲ್ಯ, ಜ್ಯೂಸ್ ಅಥವಾ ಹಾಗಲಕಾಯಿ ಸಾಂಬಾರ್ ಮಾಡಿ ಸೇವಿಸುವುದರಿಂದ ಸಕ್ಕರೆ ಖಾಯಿಲೆ ಕಡಿಮೆಯಾಗುತ್ತೆ.

    ಮೆಂತ್ಯ: ಮೆಂತ್ಯ ಪುಡಿ, ಕರಿ ಜೀರಿಗೆ ಪುಡಿ ಹಾಗು ದನಿಯ ಪುಡಿ. ಈ ಮೂರನ್ನು ಸರಿ ಪ್ರಮಾಣದಲ್ಲಿ ಮಿಶ್ರಣ ಮಾಡಿ ಪ್ರತಿ ನಿತ್ಯ ಒಂದು ಲೋಟ ಬಿಸಿ ನೀರಿನಲ್ಲಿ ಕುಡಿಯುವುದರಿಂದ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಾಯವಾಗುತ್ತೆ.

    ವ್ಯಾಯಾಮ: ಪ್ರತಿ ನಿತ್ಯ ಸಕ್ಕರೆ ಕಾಯಿಲೆ ಇರುವವರು 30-45 ನಿಮಿಷಗಳ ಕಾಲ ವ್ಯಾಯಾಮ ಮಾಡಲೇ ಬೇಕು. ವಾಕಿಂಗ್ ಮಾಡಬೇಕು. ಇದರಿಂದ ತಮ್ಮ ರಕ್ತ ಪ್ರಮಾಣ ನಿಯಂತ್ರಣಕ್ಕೆ ಬರಲು ಸಹಾಯವಾಗುತ್ತೆ. ಇದು ರೀಸೆಂಟ್ ಆರಿಜಿನ್ ಆಗಿದ್ದ ಪಕ್ಷದಲ್ಲಿ ಇದರಿಂದ ಬೇಗನೆ ಗುಣಮುಕ್ತರಾಗಬಹುದು. ಅದಷ್ಟು ಬೆವರನ್ನು ಆಚೆ ಹಾಕುವುದರಿಂದ ಸಕ್ಕರೆ ಕಾಯಿಲೆ ಕಡಿಮೆಯಾಗಲು ಸಹಾಯವಾಗುತ್ತೆ. ಇದನ್ನೂ ಓದಿ: ಕೊರೊನಾ ಜಾಗೃತಿಗಾಗಿ ಕಾಶ್ಮೀರ ಟು ಕನ್ಯಾಕುಮಾರಿ ರೈಡ್ ಆರಂಭಿಸಿದ ಯುವಕ

    ಜಂಕ್ ಫುಡ್, ಫಾಸ್ಟ್ ಫುಡ್ ಹಾಗು ರುಚಿಯಾಗಿದೆ ಎಂದು ಹೆಚ್ಚಾಗಿ ಹೊರಗಿನ ಆಹಾರ ತಿನ್ನುವುದು ಇವೆಲ್ಲವೂ ಕೂಡ ಸಕ್ಕರೆ ಖಾಯಿಲೆಗೆ ಕಾರಣವಾಗುತ್ತೆ. ಹಾಗಾಗಿ ಹೊರಗಿನ ಊಟ ಹೆಚ್ಚಾಗಿ ತಿನ್ನದೇ ಅಪರೂಪಕ್ಕೆ ಒಮ್ಮೆ ತಿಂದರೆ ಏನು ಸಮಸ್ಯೆ ಆಗುವುದಿಲ್ಲ ಎನ್ನುತ್ತಾರೆ ಮಧುಮೇಹ ತಜ್ಞರು.