Tag: head coach

  • ಮುಖ್ಯಕೋಚ್‌ ಹುದ್ದೆಗೆ ಗುಡ್‌ಬೈ – ಒಂದೇ ವರ್ಷಕ್ಕೆ RR ಫ್ರಾಂಚೈಸಿಯಿಂದ ಹೊರಬಂದ ರಾಹುಲ್‌ ದ್ರಾವಿಡ್‌

    ಮುಖ್ಯಕೋಚ್‌ ಹುದ್ದೆಗೆ ಗುಡ್‌ಬೈ – ಒಂದೇ ವರ್ಷಕ್ಕೆ RR ಫ್ರಾಂಚೈಸಿಯಿಂದ ಹೊರಬಂದ ರಾಹುಲ್‌ ದ್ರಾವಿಡ್‌

    ಜೈಪುರ: 2026ರ ಐಪಿಎಲ್‌ ಟೂರ್ನಿಗೂ ಮುನ್ನವೇ ರಾಹುಲ್‌ ದ್ರಾವಿಡ್‌ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ತಂಡದ ಮುಖ್ಯಕೋಚ್‌ ಹುದ್ದೆಯಿಂದ ಕೆಳಗಿಳಿದಿದ್ದಾರೆ. 2025ರ ಐಪಿಎಲ್‌ ಟೂರ್ನಿ ವೇಳೆ ರಾಜಸ್ಥಾನ್‌ ತಂಡದ ಕೋಚ್‌ ಆಗಿದ್ದ ದ್ರಾವಿಡ್‌ (Rahul Dravid) ಒಂದೇ ವರ್ಷಕ್ಕೆ ಫ್ರಾಂಚೈಸಿಯಿಂದ ಹೊರಬಂದಿದ್ದಾರೆ.

    19ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ದ್ರಾವಿಡ್‌ ಹೆಡ್‌ ಕೋಚ್‌ (Head Coach) ಹುದ್ದೆಯಿಂದ ಕೆಳಗಿಳಿಯುವ ಬಗ್ಗೆ ರಾಜಸ್ಥಾನ್‌ ರಾಯಲ್ಸ್‌ ಶನಿವಾರ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ – ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಿಸಿದ ಆರ್‌ಸಿಬಿ

    ರಾಜಸ್ಥಾನ್‌ ರಾಯಲ್ಸ್ ತಂಡದ ಪ್ರಯಾಣದಲ್ಲಿ ರಾಹುಲ್ ಹಲವು ವರ್ಷಗಳಿಂದ ಕೇಂದ್ರಬಿಂದುವಾಗಿದ್ದಾರೆ. ಅವರ ನಾಯಕತ್ವವು ಒಂದು ಪೀಳಿಗೆಯ ಆಟಗಾರರ ಮೇಲೆ ಪ್ರಭಾವ ಬೀರಿದೆ. ತಂಡದೊಳಗೆ ದೊಡ್ಡ ಮೌಲ್ಯಗಳನ್ನು ನಿರ್ಮಿಸಿದೆ ಮತ್ತು ಫ್ರಾಂಚೈಸಿಯೊಂದಿಗೆ ಅಳಿಸಲಾಗದ ಗುರುತು ಬಿಟ್ಟಿದ್ದಾರೆ. ಫ್ರಾಂಚೈಸಿ ರಚನಾತ್ಮಕ ಪರಿಶೀಲನೆಯ ಭಾಗವಾಗಿ, ರಾಹುಲ್‌ಗೆ ಫ್ರಾಂಚೈಸಿಯಲ್ಲಿ ವಿಶಾಲವಾದ ಸ್ಥಾನ ನೀಡಲಾಗಿತ್ತು, ಆದರೆ ಅದನ್ನು ತೆಗೆದುಕೊಳ್ಳದಿರಲು ಅವರು ನಿರ್ಧರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

    ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಮತ್ತು ವಿಶ್ವದಾದ್ಯಂತ ಇರುವ ಫ್ರಾಂಚೈಸಿಯ ಎಲ್ಲಾ ಆಟಗಾರರು ಹಾಗೂ ಲಕ್ಷಾಂತರ ಅಭಿಮಾನಿಗಳು ರಾಹುಲ್‌ ದ್ರಾವಿಡ್‌ ಅವರ ಸೇವೆಗೆ ಹೃತ್ಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ ಎಂದು ಫ್ರಾಂಚೈಸಿ ಹೇಳಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ – ಅಭಿಮಾನಿಗಳಿಗೆ ಕೇರ್‌ ಸೆಂಟರ್‌ ತೆರೆಯಲಿದೆ ಆರ್‌ಸಿಬಿ

    ಟೀಂ ಇಂಡಿಯಾದ ಮುಖ್ಯಕೋಚ್‌ ಹುದ್ದೆಯಿಂದ ಹೊರ ಬಂದ ಬಳಿಕ 2024ರ ಸೆಪ್ಟೆಂಬರ್‌ನಲ್ಲಿ ದ್ರಾವಿಡ್ ಅವರನ್ನು ಬಹು ವರ್ಷಗಳ ಒಪ್ಪಂದದ ಮೇಲೆ RR ತಂಡದ ಮುಖ್ಯಕೋಚ್‌ ಆಗಿ ನೇಮಕ ಮಾಡಿಕೊಳ್ಳಲಾಗಿತ್ತು. ಉದ್ಘಾಟನಾ ಆವೃತ್ತಿಯಲ್ಲಿ ಐಪಿಎಲ್‌ ಟ್ರೋಫಿ ಗೆದ್ದಿದ್ದ ರಾಜಸ್ಥಾನ್‌ ರಾಯಲ್‌ ಡ್ರಾವಿಡ್‌ ಅವರನ್ನು ಕೋಚ್‌ ಆಗಿ ನೇಮಿಸಿಕೊಂಡ ಬಳಿಕ ಮತ್ತೊಂದು ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದ್ರೆ 2025ರ ಐಪಿಎಲ್‌ನಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡವು ಕಳಪೆ ಪ್ರದರ್ಶನ ನೀಡಿತು, 14 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದು ಲೀಗ್‌ ಸುತ್ತಿನಲ್ಲೇ ಹೊರಬಿದ್ದಿತು.

  • ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಆಗಿ ಮಹೇಲಾ ಜಯವರ್ಧನೆ ಮರುನೇಮಕ

    ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಆಗಿ ಮಹೇಲಾ ಜಯವರ್ಧನೆ ಮರುನೇಮಕ

    ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಭಾನುವಾರ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ (Mahela Jayawardene) ಅವರನ್ನು ಮುಖ್ಯ ಕೋಚ್ ಆಗಿ ಮರುನೇಮಕ ಮಾಡಿದೆ.

    47 ವರ್ಷ ವಯಸ್ಸಿನ ಜಯವರ್ಧನೆ ಈ ಹಿಂದೆ 2017-2022 ರವರೆಗೆ ಇದೇ ತಂಡಕ್ಕೆ ಕೋಚ್‌ ಆಗಿದ್ದರು. ಈ ಅವಧಿಯಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ಮೂರು IPL ಟ್ರೋಫಿಗಳನ್ನು ಗೆದ್ದಿದೆ. 2022 ರಲ್ಲಿ ಜಯವರ್ಧನೆ ಅವರನ್ನು ಮುಖ್ಯ ತರಬೇತುದಾರನ ಸ್ಥಾನದಿಂದ MI ಫ್ರಾಂಚೈಸ್‌ಗಾಗಿ ಗ್ಲೋಬಲ್ ಹೆಡ್ ಆಫ್ ಕ್ರಿಕೆಟ್‌ಗೆ ವರ್ಗಾಯಿಸಲಾಗಿತ್ತು. ಇದನ್ನೂ ಓದಿ: ತೆಲಂಗಾಣ ಡಿಎಸ್‌ಪಿ ಆಗಿ ಅಧಿಕಾರ ವಹಿಸಿಕೊಂಡ ಸಿರಾಜ್‌ – ಪೊಲೀಸ್‌ ಡ್ರೆಸ್‌ನಲ್ಲಿ ವೇಗಿ

    ಮಹೇಲಾ ಅವರು ಮುಂಬೈ ಇಂಡಿಯನ್ಸ್‌ನ ಮುಖ್ಯ ಕೋಚ್ ಆಗಿ ಮರಳಿ ಬಂದಿರುವುದಕ್ಕೆ ನಾವು ರೋಮಾಂಚನಗೊಂಡಿದ್ದೇವೆ. ನಮ್ಮ ಜಾಗತಿಕ ತಂಡಗಳು ತಮ್ಮ ಪರಿಸರ ವ್ಯವಸ್ಥೆಯಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡಿದ್ದರಿಂದ, ಅವರನ್ನು MI ಗೆ ಮರಳಿ ಕರೆತರುವ ಅವಕಾಶ ಸಿಕ್ಕಿದೆ. ಅವರ ನಾಯಕತ್ವ, ಜ್ಞಾನ ಮತ್ತು ಆಟದ ಮೇಲಿನ ಉತ್ಸಾಹವು ಯಾವಾಗಲೂ MI ಗೆ ಪ್ರಯೋಜನವನ್ನು ನೀಡುತ್ತದೆ ಎಂದು ಫ್ರಾಂಚೈಸಿ ಮಾಲೀಕ ಆಕಾಶ್ ಅಂಬಾನಿ ಪ್ರತಿಕ್ರಿಯಿಸಿದ್ದಾರೆ.

    ಕಳೆದೆರಡು ಋತುಗಳಲ್ಲಿ ಜಯವರ್ಧನೆ ಅನುಪಸ್ಥಿತಿಯಲ್ಲಿ ಪಾತ್ರ ವಹಿಸಿದ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಮಾರ್ಕ್ ಬೌಚರ್ ಅವರ ಸೇವೆಗಳನ್ನು ಇದೇ ವೇಳೆ ಅಂಬಾನಿ ಶ್ಲಾಘಿಸಿದ್ದಾರೆ. ಕಳೆದ ಎರಡು ಋತುಗಳಲ್ಲಿ ಮಾರ್ಕ್ ಬೌಚರ್ ಅವರು ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಪರಿಣತಿ ಮತ್ತು ಸಮರ್ಪಣೆಯು ಪ್ರಮುಖವಾಗಿತ್ತು. ಈಗ MI ಕುಟುಂಬದ ಅವಿಭಾಜ್ಯ ಸದಸ್ಯರಾಗಿದ್ದಾರೆ ಎಂದು ಆಕಾಶ್‌ ಅಂಬಾನಿ ತಿಳಿಸಿದ್ದಾರೆ. ಇದನ್ನೂ ಓದಿ: ನನಗೆ ಐಪಿಎಲ್‌ಗಿಂತಲೂ ಟೆಸ್ಟ್‌ ಕ್ರಿಕೆಟ್‌ ಮುಖ್ಯ: ಬಿಸಿಸಿಐ ಹೊಸ ನಿಯಮದ ಕುರಿತು ಕಮ್ಮಿನ್ಸ್‌ ರಿಯಾಕ್ಷನ್‌

    ಮುಂಬೈ ಇಂಡಿಯನ್ಸ್‌, ಐಪಿಎಲ್‌ 2023 ರಲ್ಲಿ ಪ್ಲೇಆಫ್‌ಗೆ ತಲುಪಿತ್ತು. 2024 ರ ಋತುವಿನಲ್ಲಿ ಬೌಚರ್ ಕೋಚ್‌ ಆಗಿದ್ದಾಗ, 10 ನೇ ಸ್ಥಾನಕ್ಕೆ ಕುಸಿದಿತ್ತು. ಈ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ತಂಡದ ನಾಯಕರಾಗಿದ್ದರು. 2013 ರಿಂದ 2023 ರವರೆಗೆ MI ಅನ್ನು ಮುನ್ನಡೆಸಿದ್ದ ರೋಹಿತ್‌ ಶರ್ಮಾ, ತಂಡಕ್ಕೆ ಐದು ಟ್ರೋಫಿಗಳನ್ನು ತಂದುಕೊಟ್ಟಿದ್ದರು.

  • ಟೀಂ ಇಂಡಿಯಾ ಕೋಚ್ ಹುದ್ದೆಗೆ ದ್ರಾವಿಡ್ ಅಧಿಕೃತ ಅರ್ಜಿ ಸಲ್ಲಿಕೆ

    ಟೀಂ ಇಂಡಿಯಾ ಕೋಚ್ ಹುದ್ದೆಗೆ ದ್ರಾವಿಡ್ ಅಧಿಕೃತ ಅರ್ಜಿ ಸಲ್ಲಿಕೆ

    ಮುಂಬೈ : ಭಾರತದ ಹಿರಿಯರ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಹುದ್ದೆಗೆ ಮಾಜಿ ನಾಯಕ ರಾಹುಲ್ ದ್ರಾವಿಡ್ ನಿನ್ನೆ ಅರ್ಜಿ ಸಲ್ಲಿಸಿದ್ದಾರೆ.

    ರವಿ ಶಾಸ್ತ್ರಿ ಬಳಿಕ ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆ ಬಾಕಿ ಇದೆ. ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆ ದಿನವಾದ ನಿನ್ನೆ ದ್ರಾವಿಡ್ ಅರ್ಜಿ ಸಲ್ಲಿಸಿದ್ದಾರೆ.

    ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‍ಸಿಎ) ನಿರ್ದೇಶಕರಾಗಿರುವ ದ್ರಾವಿಡ್ ಆ ಹುದ್ದೆಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ. ದ್ರಾವಿಡ್ ಕೋಚ್ ಹುದ್ದೆಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗಿದ್ದರೂ, ದಿನಗಳ ಹಿಂದಷ್ಟೇ ದ್ರಾವಿಡ್ ಇದಕ್ಕೆ ಇನ್ನೂ ಒಪ್ಪಿಕೊಂಡಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಚ್ಚರಿಯ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ರೋಹಿತ್ ಡ್ರಾಪ್ ಮಾಡ್ತೀರಾ – ಪ್ರಶ್ನೆಗೆ ತಲೆ ಕೆಳಗಡೆ ಹಾಕಿ Unbelievable ಎಂದ ಕೊಹ್ಲಿ

    ಪ್ರಧಾನ ಕೋಚ್ ಹುದ್ದೆಯ ಆಯ್ಕೆಯ ಬಗ್ಗೆ ಗೊಂದಲ ಸೇಷ್ಟಿಯಾಗಿತ್ತು. ನಿನ್ನೆ ಕೋಚ್ ಹುದ್ದೆಗೆ ಅಧಿಕೃತವಾಗಿ ಅರ್ಜಿ ಸಲ್ಲಿಸುವ ಮೂಲಕ ರಾಹುಲ್ ದ್ರಾವಿಡ್ ಗೊಂದಗಳಿಗೆ ತೆರೆ ಎಳೆದಿದ್ದಾರೆ.

    ಭಾರತದ ಮಾಜಿ ವಿಕೆಟ್ ಕೀಪರ್ ಅಜಯ್ ರಾತ್ರಾ, ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ದೇಸೀ ಕ್ರಿಕೆಟ್ ತಂಡಗಳಿಗೆ ಕೋಚ್ ಆಗಿ ಸೇವೆಸಲ್ಲಿಸಿರುವ 39 ವರ್ಷದ ಅಜಯ್, ಐಪಿಎಲ್‍ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಾರ್ಯನಿರ್ವಹಿಸಿದ್ದರು. ಭಾರತ ಮಹಿಳಾ ತಂಡದಲ್ಲೂ ರಾತ್ರಾ ಕೆಲಸ ಮಾಡಿದ್ದರು. ಅಜಯ್ ರಾತ್ರಾ ಹಾಗೂ ಅಭಯ್ ಶರ್ಮಾ ನಡುವೆ ಫೀಲ್ಡಿಂಗ್ ಕೋಚ್ ಹುದ್ದೆಗೆ ಪೈಪೋಟಿ ಏರ್ಪಡಲಿದೆ. ಇದನ್ನೂ ಓದಿ:  ಚಿನ್ನದ ಮೊಟ್ಟೆ ಇಟ್ಟ ಐಪಿಎಲ್‌ – 2008ರಲ್ಲಿ ಬಿಡ್‌ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

    ಎನ್‍ಸಿಎಗೆ ಲಕ್ಷ್ಮಣ್ ಹೊಸ ನಿದೇಶಕ:
    ದ್ರಾವಿಡ್ ರಾಜೀನಾಮೆ ನೀಡಿದರೆ ತೆರವಾಗಲಿರುವ ಎನ್‍ಸಿಎ ನಿರ್ದೇಶಕ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ನೇಮಕವಾಗುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ಲಕ್ಷ್ಮಣ್ ಎನ್‍ಸಿಎ ನಿರ್ದೇಶಕ ಹುದ್ದೆಯನ್ನು ನಿರ್ವಹಿಸಲಿ ಆಸಕ್ತಿ ಹೊದಿಲ್ಲ, ಬಿಸಿಸಿಐ ಪ್ರಸ್ತಾಪವನ್ನು ಅವರು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿತ್ತು. ಲಕ್ಷ್ಮಣ್ ನಿರ್ದೇಶಕ ಹುದ್ದೆ ಅಲಂಕರಿಸಿದರೆ ಅವರು ಐಪಿಎಲ್‍ನಲ್ಲಿ ಮೆಂಟರ್, ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬೇಕಿದೆ. ಜೊತೆಗೆ ಮಾಧ್ಯಮಗಳಲ್ಲಿ ಲೇಖನ ಬರೆಯುವುದಕ್ಕೂ ಅವಕಾಶವಿರುವುದಿಲ್ಲ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅವ ವೇತನ ನಿಗದಿಯಾಗಲಿದೆ.

  • ರವಿಶಾಸ್ತ್ರಿ ಬಳಿಕ ಟೀಂ ಇಂಡಿಯಾಕ್ಕೆ ಕನ್ನಡಿಗ ಕೋಚ್?

    ರವಿಶಾಸ್ತ್ರಿ ಬಳಿಕ ಟೀಂ ಇಂಡಿಯಾಕ್ಕೆ ಕನ್ನಡಿಗ ಕೋಚ್?

    ಮುಂಬೈ: ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿಯವರ ಒಪ್ಪಂದ ಕೊನೆಗೊಳ್ಳುತ್ತದೆ. ಈ ನಡುವೆ ಬಿಸಿಸಿಐ ಈಗಾಗಲೇ ಕೋಚ್‍ಗಳ ಹುಡುಕಾಟದಲ್ಲಿ ತೊಡಗಿದ್ದು, ಕನ್ನಡಿಗರೊಬ್ಬರಿಗೆ ಕೋಚ್ ಆಗುವಂತೆ ಆಫರ್ ಕೂಡ ಕೊಟ್ಟಿದೆ ಎಂದು ವರದಿಯಾಗಿದೆ.

    ದುಬೈನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕೊನೆಗೊಳ್ಳುತ್ತಿದ್ದಂತೆ ರವಿಶಾಸ್ತ್ರಿ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಶಾಸ್ತ್ರಿ 2014ರಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಡೈರೆಕ್ಟರ್ ಆಗಿ ಆಯ್ಕೆಗೊಂಡರು. 2016ರ ಬಳಿಕ ಒಂದು ವರ್ಷಗಳ ಕಾಲ ಕನ್ನಡಿಗ ಅನಿಲ್ ಕುಂಬ್ಳೆ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದರು. ನಂತರ 2017ರಲ್ಲಿ ರವಿಶಾಸ್ತ್ರಿ ಮುಖ್ಯ ಕೋಚ್ ಆಗಿ ಟೀಂ ಇಂಡಿಯಾಗೆ ನೇಮಕಗೊಂಡರು. ರವಿಶಾಸ್ತ್ರಿ ಸಾರಥ್ಯದಲ್ಲಿ ಮುನ್ನಡೆದ ಭಾರತ ತಂಡ ಚಾಂಪಿಯನ್ ಟ್ರೋಫಿ, ಆಸ್ಟ್ರೇಲಿಯಾ ಸರಣಿ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸಹಿತ ಹಲವು ಮಹತ್ವದ ಪಂದ್ಯಗಳಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ.

    2019ರ ಏಕದಿನ ವಿಶ್ವಕಪ್‍ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಭಾರತ ಸೋತರು ಕೂಡ ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿತ್ತು. ತವರಿನಲ್ಲಿ ನಡೆದ ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌತ್ ಆಫ್ರಿಕಾ, ಸರಣಿ ಗೆಲ್ಲುವ ಮೂಲಕ ಭಾರತ ತಂಡ ವಿಶೇಷ ಸಾಧನೆ ಮಾಡಿದೆ. ಟೀ ಇಂಡಿಯಾದಲ್ಲಿ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಾಧಿಸಿದ್ದೇವೆ ಎಂಬ ಸಂತೃಪ್ತಿ ಇದೆ ಎಂದು ಶಾಸ್ತ್ರಿ ಕೂಡ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಕುಂಬ್ಳೆ, ಲಕ್ಷ್ಮಣ್ !

    ಇದೀಗ ಟಿ-20 ವಿಶ್ವಕಪ್ ಬಳಿಕ ಬಿಸಿಸಿಐ ಜೊತೆಗಿನ ಒಪ್ಪಂದ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಮುಖ್ಯ ಕೋಚ್ ಹುದ್ದೆಗೆ ಕನ್ನಡಿಗ ಅನಿಲ್ ಕುಂಬ್ಳೆ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಈ ಹಿಂದೆ 2016-17ರ ನಡುವೆ ಒಂದು ವರ್ಷ ಕುಂಬ್ಳೆ ಕೋಚ್ ಆಗಿ ತಂಡದಲ್ಲಿ ಕಾರ್ಯನಿರ್ವಹಿಸಿದ್ದರು. ಬಳಿಕ ವಿರಾಟ್ ಕೊಹ್ಲಿ ಜೊತೆಗಿನ ವೈಮನಸ್ಸಿನಿಂದಾಗಿ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದರು. ಇದೀಗ ಮತ್ತೆ ಬಿಸಿಸಿಐ ಕುಂಬ್ಳೆ ಕಡೆಗೆ ಒಲವನ್ನು ತೋರಿದೆ ಎಂದು ವರದಿಯಾಗಿದೆ.

    ಕುಂಬ್ಳೆ ಜೊತೆ ಕನ್ನಡಿಗ ರಾಹುಲ್ ದ್ರಾವಿಡ್ ಹೆಸರು ಕೂಡ ಕೇಳಿ ಬರುತ್ತಿದೆ. ಆದರೆ ದ್ರಾವಿಡ್ ಕೋಚ್ ಹುದ್ದೆ ಸ್ವೀಕರಿಸಲು ಸಿದ್ಧರಿಲ್ಲ ಎಂದು ಕೇಳಿಬರುತ್ತಿದೆ. ಈ ನಡುವೆ ಮಾಜಿ ಆಟಗಾರ ವಿ.ವಿ.ಎಸ್ ಲಕ್ಷ್ಮಣ್, ಪ್ರಸ್ತುತ ಬ್ಯಾಟಿಂಗ್ ಕೋಚ್ ಆಗಿರುವ ವಿಕ್ರಮ್ ರಾಥೋರ್ ಅವರ ಹೆಸರಿನೊಂದಿಗೆ ಕೆಲ ವಿದೇಶಿ ಕೋಚ್‍ಗಳ ಹೆಸರು ಕೇಳಿ ಬರುತ್ತಿದೆ. ಆದರೆ ಬಿಸಿಸಿಐ ಮಾತ್ರ ಸ್ವದೇಶಿ ಕೋಚ್‍ಗಳನ್ನು ಪರಿಗಣಿಸಲು ಒಲವು ತೋರಿಸಿದೆ ಎಂಬ ಮಾಹಿತಿ ಇದೆ. ಇದನ್ನೂ ಓದಿ: ನಾಳೆಯಿಂದ ದುಬೈನಲ್ಲಿ ಐಪಿಎಲ್ ಕಲರವ

    ರವಿಶಾಸ್ತ್ರಿ ಕೋಚ್ ಆಗಿ ಕಾರ್ಯನಿರ್ವಹಿಸಿದ ಬಳಿಕ ಭಾರತ ತಂಡದಲ್ಲಿ ಆಟಗಾರರ ಬೆಂಚ್ ಸ್ಟ್ರೆಂತ್ ತುಂಬಾನೆ ಬೆಳೆದಿದ್ದು, ಹಲವು ಉದಯೋನ್ಮುಕ ಆಟಗಾರರು ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಅವರ ಸರದಿ ಮುಗಿದ ಬಳಿಕ ಮುಂದಿನ ಕೋಚ್ ಯಾರಗಳಿದ್ದಾರೆ ಎಂಬ ಕುರಿತು ಕ್ರಿಕೆಟ್ ಅಂಗಳದಲ್ಲಿ ಚರ್ಚೆ ಜೋರಾಗಿದೆ. ಇದನ್ನೂ ಓದಿ:ಮಾಸ್ಕ್ ಹಾಕಿ, ಲಸಿಕೆ ಪಡೆಯಿರಿ- ಧೋನಿ ಕ್ಯಾಂಪೇನ್

  • ಆರ್​ಸಿಬಿ ತಂಡಕ್ಕೆ ಮೈಕ್ ಹೆಸನ್ ನೂತನ ಕೋಚ್

    ಆರ್​ಸಿಬಿ ತಂಡಕ್ಕೆ ಮೈಕ್ ಹೆಸನ್ ನೂತನ ಕೋಚ್

    ಬೆಂಗಳೂರು: ಯುಎಇಯಲ್ಲಿ ನಡೆಯಲಿರುವ ಐಪಿಎಲ್‍ನ ಎರಡನೇ ಭಾಗಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೈಕ್ ಹೆಸನ್ ಅವರನ್ನು ನೂತನ ಕೋಚ್ ಆಗಿ ನೇಮಕ ಮಾಡಿದೆ.

    ಈ ಹಿಂದೆ ಆರ್​ಸಿಬಿ ತಂಡದ ಕೋಚ್ ಆಗಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ಸೈಮನ್ ಕ್ಯಾಟಿಚ್ ಅವರು ವೈಯಕ್ತಿಕ ಕಾರಣ ಹೇಳಿ ಐಪಿಎಲ್ ಕೋಚ್ ಸ್ಥಾನದಿಂದ ಹಿಂದೆ ಸರಿದಿದ್ದಾರೆ. ಅವರ ಬದಲು ಮೈಕ್ ಹಸನ್ ಅವರಿಗೆ ಮುಖ್ಯ ಕೋಚ್ ಹುದ್ದೆಯನ್ನು ನೀಡಲಾಗಿದೆ ಎಂದು ಆರ್​ಸಿಬಿ ತಂಡದ ವ್ಯವಸ್ಥಾಪಕರಾದ ರಾಜೇಶ್ ಮೆನನ್ ಸ್ಥಳೀಯ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ ಟ್ರೋಫಿಯ ಆನ್‍ಲೈನ್ ವಿಶ್ವದರ್ಶನ ಪ್ರಾರಂಭ

    ಕ್ಯಾಟಿಚ್ ಅವರು ಕೋಚ್ ಆಗಿ ಉತ್ತಮ ಕಾರ್ಯ ಆರ್​ಸಿಬಿ ತಂಡದ ಪರ ನಿರ್ವಹಿಸಿದ್ದರು ಅವರಿಗೆ ಧನ್ಯವಾದ. ಈ ಆವೃತ್ತಿಯ ಅಂತ್ಯದವರೆಗೆ ಮೈಕ್ ಹೆಸನ್ ಅವರು ಆರ್​ಸಿಬಿ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ತಂಡಕ್ಕೆ ಶ್ರೀಲಂಕಾದ ಆಲ್‍ರೌಂಡರ್ ವನಿಂದು ಹಸರಂಗ ಅವರನ್ನು ಆಸ್ಟ್ರೇಲಿಯಾದ ಆಟಗಾರ ಆ್ಯಡಂ ಜಂಪಾ ಅವರ ಸ್ಥಾನಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಐಪಿಎಲ್‍ಗೆ ವಿಶೇಷ ನಿಯಮ ಜಾರಿ ಮಾಡಿದ ಬಿಸಿಸಿಐ

    ಐಪಿಎಲ್ ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ಆರಂಭಗೊಂಡು, ಅಕ್ಟೋಬರ್ 15ಕ್ಕೆ ಅಂತ್ಯಗೊಳ್ಳಲಿದೆ. ಈಗಾಗಲೇ ಕೆಲ ತಂಡಗಳು ಯುಎಇಗೆ ತೆರಳಿ ಅಭ್ಯಾಸ ಆರಂಭಿಸಿದೆ.

  • ಬೆಂಗ್ಳೂರು ಎನ್‍ಸಿಎ ಹೆಡ್‍ಕೋಚ್ ರೇಸಿನಲ್ಲಿ ದ್ರಾವಿಡ್

    ಬೆಂಗ್ಳೂರು ಎನ್‍ಸಿಎ ಹೆಡ್‍ಕೋಚ್ ರೇಸಿನಲ್ಲಿ ದ್ರಾವಿಡ್

    ಮುಂಬೈ: ಟೀಂ ಇಂಡಿಯಾ ಜೂನಿಯರ್ ಕೋಚ್ ರಾಹುಲ್ ದ್ರಾವಿಡ್ ಅವರನ್ನು ರಾಷ್ಟ್ರಿಯ ಕ್ರಿಕೆಟ್ ಅಕಾಡೆಮಿ (ಎನ್‍ಸಿಎ) ಮುಖ್ಯ ತರಬೇತುದಾರರನ್ನಾಗಿ ನೇಮಕ ಮಾಡಲು ಬಿಸಿಸಿಐ ಪ್ರಕ್ರಿಯೆ ಆರಂಭಿಸಿದೆ ಎಂಬ ಮಾಹಿತಿ ಲಭಿಸಿದೆ.

    ಬಿಸಿಸಿಐ ಹೊಸದಾಗಿ ಸೃಷ್ಟಿ ಮಾಡಿರುವ ಹೆಡ್‍ಕೋಚ್ ಹುದ್ದೆ ಜವಾಬ್ದಾರಿಯನ್ನು ನಿರ್ವಹಿಸಲು ಕೋಚ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಈಗಾಗಲೇ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಅಂಡರ್ 19, ಟೀಂ ಇಂಡಿಯಾ ‘ಎ’ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಅವರನ್ನು ಎನ್‍ಸಿಎ ಮುಖ್ಯ ಕೋಚ್ ಆಗಿ ನೇಮಕ ಮಾಡಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.

    ಸದ್ಯ ಎನ್‍ಸಿಎ ಜವಾಬ್ದಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತುಫಾನ್ ಘೋಷ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಮುಖ್ಯ ಕೋಚ್ ನೇಮಕವಾದ ಬಳಿಕ ಅಕಾಡೆಮಿಯ ಇತರೆ ಕೋಚ್‍ಗಳ ನೇಮಕದಿಂದ ಹಿಡಿದು, ಎಲ್ಲಾ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಮುಖ್ಯ ಕೋಚ್ ಅವರು ನಿರ್ವಹಿಸಲಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಬಿಸಿಸಿಐ ವಕ್ತಾರರೊಬ್ಬರು ಪ್ರತಿಕ್ರಿಯಿಸಿ, ಬಿಸಿಸಿಐ ನಿಯಮಗಳ ಅನ್ವಯವೇ ಕೋಚ್ ಪದವಿಗೆ ಅರ್ಜಿ ಆಹ್ವಾನ ಮಾಡಿ ನೇಮಕ ಮಾಡಲಾಗುತ್ತದೆ. ಈ ರೇಸ್ ನಲ್ಲಿ ದ್ರಾವಿಡ್ ಅವರು ಮುಂದಿದ್ದಾರೆ. ಆದರೆ ಇಂದಿಗೂ ಅವರು ಟೀಂ ಇಂಡಿಯಾ ಜೂನಿಯರ್ ತಂಡ ಕೋಚ್ ಆಗಿ ಮುಂದುವರಿದಿದ್ದಾರೆ ಎಂದು ತಿಳಿಸಿದರು.

    ಬಿಸಿಸಿಐ ನೀಡಿರುವ ಮಾಹಿತಿಯಂತೆ ದ್ರಾವಿಡ್ ಅವರಿಗೆ ಕೋಚ್ ಹೆಚ್ಚಿನ ಜವಾಬ್ದಾರಿಯುತ ಹುದ್ದೆ ಬಹುತೇಕ ಖಚಿತ ಎನ್ನಲಾಗಿದ್ದು, ನಿಯಮಗಳನ್ನು ಪೂರೈಸಲು ಪ್ರಕ್ರಿಯೆ ಆರಂಭಿಸಲಾಗಿದೆ. ಈ ಹಿಂದೆ ಇಂತಹ ಹುದ್ದೆಗಳಿಗೆ ನೇರ ನೇಮಕಾತಿ ನಡೆದ ವೇಳೆ ಕೇಳಿ ಬಂದ ವಿಮರ್ಶೆಗಳ ಹಿನ್ನೆಲೆಯಲ್ಲಿ ಬಿಸಿಸಿಐ ಈ ಬಾರಿ ಇಂತಹ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.