Tag: Head Bush

  • ಟಾಪ್‌ಲೆಸ್ ಆಗಿ ಪೋಸ್ ನೀಡಿದ ಕನ್ನಡದ ʻಹೆಡ್‌ಬುಷ್ʼ ನಟಿ ಪಾಯಲ್

    ಟಾಪ್‌ಲೆಸ್ ಆಗಿ ಪೋಸ್ ನೀಡಿದ ಕನ್ನಡದ ʻಹೆಡ್‌ಬುಷ್ʼ ನಟಿ ಪಾಯಲ್

    RX 100 ಸಿನಿಮಾ ಮೂಲಕ ಪಾಯಲ್‌ ರಜಪೂತ್ ಟಾಲಿವುಡ್‌ಗೆ ನಾಯಕಿಯಾಗಿ ಪಾದಾಪಣೆ ಮಾಡಿದ್ದರು. ಇದೀಗ‌ ಮತ್ತೆ ಚೊಚ್ಚಲ ಸಿನಿಮಾ ನಿರ್ದೇಶಕನ ಜೊತೆ ಪಾಯಲ್ ಕೈಜೊಡಿಸಿದ್ದಾರೆ. ಟಾಪ್‌ಲೆಸ್ ಅವತಾರದ ಮೂಲಕ ‘ಹೆಡ್‌ಬುಷ್’ ಬ್ಯೂಟಿ ಎಂಟ್ರಿ ಕೊಟ್ಟಿದ್ದಾರೆ.

    ಕನ್ನಡದ ‘ಹೆಡ್‌ಬುಷ್’ ನಟಿ ಪಾಯಲ್ ರಜಪೂತ್ (Payal Rajput) ಅವರು RX 100 ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು ಕೂಡ ಹೇಳಿಕೊಳ್ಳುವಂತಹ ಬ್ರೇಕ್ ಅವರಿಗೆ ಸಿಗಲಿಲ್ಲ. ಆದರೂ ಪಾಯಲ್ ರಜಪೂತ್‌ಗೆ ಬೇಡಿಕೆ ಕಮ್ಮಿಯಾಗಿಲ್ಲ. ಕೈತುಂಬಾ ಸಿನಿಮಾಗಳು ಅವರ ಕೈಯಲ್ಲಿದೆ. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ

    ಇದೀಗ ತಮ್ಮ ಮೊದಲ ಸಿನಿಮಾ ನಿರ್ದೇಶಕ ಅಜಯ್ ಭೂಪತಿ (Ajay Bhupathi) ಜೊತೆ ‘ಮಂಗಳವಾರಂ’ (Mangalavaram) ಚಿತ್ರಕ್ಕೆ ಪಾಯಲ್ ಸಾಥ್ ನೀಡಿದ್ದಾರೆ. ನೀವು ನೋಡಿದರೆ ಈ ನೋಟವೇ ಸಾಕಷ್ಟು ವಿಷಯ ಹೇಳುತ್ತದೆ ಎಂಬ ಕ್ಯಾಪ್ಷನ್‌ನೊಂದಿಗೆ ಪಾಯಲ್ ರಜಪೂತ್ ಅವರು ಈ ಪೋಸ್ಟರ್ ಹಂಚಿಕೊಂಡಿದ್ದಾರೆ. ಆ ಮೂಲಕ ಅವರು ಸಿನಿಮಾ ಬಗ್ಗೆ ಕೌತುಕ ಮೂಡಿಸಿದ್ದಾರೆ.

    ಚಿತ್ರದ ಪೋಸ್ಟರ್‌ನಲ್ಲಿ ನಟಿ ಅರೆ ಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ. ನಟಿ ಬೋಲ್ಡ್ ಲುಕ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಏಬ್ಬಿಸಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ. ಅಂದಹಾಗೆ, ಪಾಯಲ್ ಕಳೆದ ವರ್ಷ ಡಾಲಿ (Daali) ನಟನೆ, ನಿರ್ಮಾಣದ ‘ಹೆಡ್‌ಬುಷ್’ (Head Bush) ಸಿನಿಮಾದಲ್ಲಿ ನಟಿಸಿದ್ದರು. ಈ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು.

  • ಹಿಂದೆ ನನ್ನ ಬೈದವರೆಲ್ಲ ಚಂದಾಗಿರಲಿ: ಕನಕದಾಸರ ನೆನೆದ ಡಾಲಿ ಧನಂಜಯ್

    ಹಿಂದೆ ನನ್ನ ಬೈದವರೆಲ್ಲ ಚಂದಾಗಿರಲಿ: ಕನಕದಾಸರ ನೆನೆದ ಡಾಲಿ ಧನಂಜಯ್

    ಹೆಡ್ ಬುಷ್ ಸಿನಿಮಾ ವಿವಾದದಿಂದ ದೂರವಾಗಿ, ಹೊಯ್ಸಳ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನಟ ಡಾಲಿ ಧನಂಜಯ್, ತಮ್ಮ ಬದುಕಿಗೂ ಮತ್ತು ಕನಕದಾಸರ ಪದಕ್ಕೂ ಹೋಲಿಕೆ ಮಾಡಿಕೊಂಡು ಇವತ್ತೊಂದು ಪೋಸ್ಟ್ ಮಾಡಿದ್ದಾರೆ. ಅದು ಕನಕದಾಸರ ರಚನೆಯಾದರೂ, ಧನಂಜಯ್ ತಮ್ಮ ವೈರಿಗಳಿಗೆ ಈ ಮೂಲಕ ಟಾಂಗ್ ಕೊಟ್ಟಿದ್ದಾರೆ. ಇತ್ತೀಚಿಗೆ ಡಾಲಿ ವೃತ್ತಿ ಜೀವನದಲ್ಲಿ ನಡೆದ ಘಟನೆಯನ್ನು ನೆನಪಿಸುತ್ತಲೇ, ತಮ್ಮ ಬಗ್ಗೆ ಸಲ್ಲದ ಆರೋಪಗಳನ್ನು ಮಾಡುವವರಿಗೆ ಈ ಮೂಲಕ ಎಚ್ಚರಿಸಿದ್ದಾರೆ.

    ಇಂದು ಕನಕದಾಸರ ಜಯಂತಿ. ಈ ನೆಪದಲ್ಲಿ ಕನಕದಾಸರ ರಚನೆಯ ‘ ಹಿಂದೆ ನನ್ನ ಬೈದವರೆಲ್ಲ ಚೆಂದಾಗಿರಲಿ, ಮುಂದೆ ನನ್ನ ಬಯ್ಯುವರೆಲ್ಲ ಅಂದಣವೇರಲಿ, ಕುಂದು ಇಟ್ಟವರೆಲ್ಲ ಕುದುರೆಯ ಕಟ್ಟಿ ಬಾಳಲಿ, ಬಂದು ಒದ್ದವರಿಗೆ ಭತ್ತದ ಗದ್ದೆ ಬೆಳೆಯಲಿ. ಜನರೊಳಗೆ ಮಾನಭಂಗ ಮಾಡಿದವರಿಗೆ ಜೇನು ತುಪ್ಪು, ಸಕ್ಕರೆ ಊಟ ಆಗಲಿ ಅವರಿಗೆ. ಹಾನಿ ಬಾರದಂತಹ ಲೋಕ ಆಗಲಿ ಅವರಿಗೆ. ಮಹಾನುಭಾವ ಮುಕ್ತಿಯ ಕೊಡುವ ನೆಲೆಯಾದಿಕೇಶವ’ ಎಂದು ದಾಸರಪದವನ್ನು ಹಾಕುವ ಮೂಲಕ ತಮಗೆಲ್ಲ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ:ಕನ್ನಡದಲ್ಲೂ ಮೂಡಿ ಬರಲಿದೆ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಹೊಸ ಸಿನಿಮಾ

    ಪ್ರಗತಿಪರ ವಿಚಾರಧಾರೆಗಳನ್ನು ಆಗಾಗ್ಗೆ ತಮ್ಮ ಅಭಿಮಾನಿಗಳಿಗೆ ಹಂಚಿಕೊಳ್ಳುವ ಧನಂಜಯ್, ಮನುಷ್ಯತ್ವದ ಬಗ್ಗೆ ಕೆಲವು ಸಾಲುಗಳನ್ನು ಬರೆದುಕೊಂಡಿದ್ದರು. ಇದೇ ಅವರಿಗೆ ಮುಳುವಾಗಿತ್ತು. ಹೆಡ್ ಬುಷ್ ಸಿನಿಮಾದಲ್ಲಿ ವೀರಗಾಸೆಗೆ ಅಪಮಾನ ಮಾಡಿದ್ದಾರೆ ಎಂದು ವಿವಾದ ಸೃಷ್ಟಿ ಮಾಡಲಾಯಿತು. ಕರಗದ ವಿಚಾರದಲ್ಲೂ ಎಳೆತರಲಾಯಿತು. ಬಡವರ ಮಕ್ಳು ಬೆಳೆಯಬೇಕು ಎನ್ನುವ ಅವರ ಮಾತನ್ನು ಟ್ರೋಲ್ ಮಾಡಲಾಯಿತು. ತಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿರುವ ಎಲ್ಲರಿಗೂ ಈ ಕನಕದಾಸರ ರಚನೆಯ ಮೂಲಕ ಉತ್ತರಿಸಿದ್ದಾರೆ ಧನಂಜಯ್.

    Live Tv
    [brid partner=56869869 player=32851 video=960834 autoplay=true]

  • ‘ಹೆಡ್‌ ಬುಷ್’ ವಿವಾದ : ವಿವಾದಿತ ದೃಶ್ಯದ ಕತ್ತರಿಗೆ ಪಂಚವಾದ್ಯದ ಬಿಸಿ

    ‘ಹೆಡ್‌ ಬುಷ್’ ವಿವಾದ : ವಿವಾದಿತ ದೃಶ್ಯದ ಕತ್ತರಿಗೆ ಪಂಚವಾದ್ಯದ ಬಿಸಿ

    ತುಮಕೂರು : ನಟ ಡಾಲಿ‌ ಧನಂಜಯ (Dolly Dhananjay) ನಟನೆಯ ಹೆಡ್‌ ಬುಷ್ (Head Bush) ಚಿತ್ರದಲ್ಲಿನ ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕುವಂತೆ ಆಗ್ರಹಿಸಿ ಪಂಚವಾದ್ಯದ ವಿನೂತನ ಪ್ರತಿಭಟನೆ (Protest) ತುಮಕೂರಿನಲ್ಲಿ ನಡೆಸಲಾಯಿತು. ತುಮಕೂರು ನಗರದ ಮಾರುತಿ ಚಿತ್ರ ಮಂದಿರ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಲ್ಲದೆ ನಿರ್ದೇಶಕ, ಕತೆ, ಸಂಭಾಷಣೆಗಾರ ಅಗ್ನಿ ಶ್ರೀಧರ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

    ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ವತಿಯಿಂದ ನಡೆಸಲಾದ ಪ್ರತಿಭಟನೆಯ ನೇತೃತ್ವವನ್ನು ಶ್ರೀ ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಸರಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪಂಚವಾದ್ಯವನ್ನು ನುಡಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಗಮನ ಸೆಳೆಯಲಾಯಿತು. ಇದನ್ನೂ ಓದಿ:ಹಿಂದಿಯಲ್ಲಿ 50 ಕೋಟಿ ಗಳಿಸಿದ ‘ಕಾಂತಾರ’ ಸಿನಿಮಾ

    ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮವನ್ನು ಬಿತ್ತರಿಸುವಂತಹ ಕಲೆಗೆ ಬಹಳಷ್ಟು ನೋವುಂಟು ಮಾಡಿದೆ. ಚಲನಚಿತ್ರದಲ್ಲಿನ ವಿವಾದಿತ ದೃಶ್ಯವನ್ನು ಕಟ್ ಮಾಡಿ ಜನರಿಗೆ ಒಳ್ಳೆಯ ಸಂದೇಶ ಸಾರುವಂತಾಗಬೇಕು ಎಂದು ಮನವಿ ಮಾಡಿದರು. ಭಾರತೀಯ ಸಂಸ್ಕೃತಿಯ ಕಲೆಗಳನ್ನು ಉಳಿಸುವಂತಹ ಬಹಳಷ್ಟು ಕಲೆಗಳಿವೆ. ಅಂತಹ ಕಲೆಗಳನ್ನು ಹೆಡ್‌ಬುಷ್ ಮಾತ್ರವಲ್ಲ ಯಾವುದೇ ಚಲನಚಿತ್ರಗಳು ನಮ್ಮ ಸಂಸ್ಕೃತಿಗಳನ್ನು ತುಳಿಯುವಂತಹ, ಅವಮಾನ ಮಾಡುವಂತಹ ಕೆಲಸ ಮಾಡಬಾರದು ಎಂದರು.

    ನಮ್ಮ ಸಂಸ್ಕೃತಿನ ನಾವೇ ಉಳಿಸಲಿಲ್ಲ ಅಂದರೆ ಇನ್ಯಾರು ಉಳಿಸಿಯಾರು. ಮುಂದಿನ ದಿನಗಳಲ್ಲಿ ಆ ರೀತಿ ಆಗದಂತೆ ಕಾಪಾಡಬೇಕು ಎಂದು ಸ್ವಾಮೀಜಿ ಎಲ್ಲರಲ್ಲಿ ಪ್ರಾರ್ಥನೆ ಮಾಡಿದರು.

    Live Tv
    [brid partner=56869869 player=32851 video=960834 autoplay=true]

  • ಕೆಲಸವಿಲ್ಲದವ ಮಂಗನ ಜೊತೆ ಆಡಲು ಹೊರಟಂತೆ ಸುನಿಲ್ ಕುಮಾರ್ ವಿವಾದ ಸೃಷ್ಟಿಸಲು ಹೊರಟಿದ್ದಾರೆ: ಕಾಂಗ್ರೆಸ್

    ಕೆಲಸವಿಲ್ಲದವ ಮಂಗನ ಜೊತೆ ಆಡಲು ಹೊರಟಂತೆ ಸುನಿಲ್ ಕುಮಾರ್ ವಿವಾದ ಸೃಷ್ಟಿಸಲು ಹೊರಟಿದ್ದಾರೆ: ಕಾಂಗ್ರೆಸ್

    ಬೆಂಗಳೂರು: ಪಠ್ಯಪುಸ್ತಕದಲ್ಲಿ, ಗಣರಾಜ್ಯೋತ್ಸವ ಪರೇಡ್‍ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನವಾದಾಗ ನಿಮ್ಮೊಳಗಿನ ಸಂಸ್ಕೃತಿ ವೀರ ಹೆಡೆ ಎತ್ತಲಿಲ್ಲವೇಕೆ? ನಿಮ್ಮದು ಸೆಲೆಕ್ಟೆಡ್ ಸಂಸ್ಕೃತಿ ರಕ್ಷಣೆಯೇ? ಕೆಲಸವಿಲ್ಲದವ ಮಂಗನ ಜೊತೆ ಆಡಲು ಹೊರಟಂತೆ ಸಚಿವ ಸುನಿಲ್ ಕುಮಾರ್ (Sunil Kumar) ಅವರು ಇಲ್ಲದ ವಿವಾದ ಸೃಷ್ಟಿಸಿ ಮೈಲೇಜ್ ಪಡೆಯಲು ಹೊರಟಿದ್ದಾರೆ ಎಂದು ಕಾಂಗ್ರೆಸ್ (Congress) ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.

    ಟ್ವೀಟ್‍ನಲ್ಲಿ ಏನಿದೆ:
    ಹೆಡ್ ಬುಷ್ (Head Bush)  ಚಿತ್ರದಲ್ಲಿ ಇಲ್ಲದ ವಿವಾದ ಕಣ್ಣಿಗೆ ಬೀಳುತ್ತಲೇ ಹೆಡೆ ಎತ್ತಿ ಬುಸ್, ಬುಸ್ ಎನ್ನಲು ಹೊರಟಿರುವ ಸುನಿಲ್ ಕುಮಾರ್ ಅವರೇ, ಪಠ್ಯಪುಸ್ತಕದಲ್ಲಿ, ಗಣರಾಜ್ಯೋತ್ಸವ ಪರೇಡ್‍ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನವಾದಾಗ ನಿಮ್ಮೊಳಗಿನ ಸಂಸ್ಕೃತಿ ವೀರ ಹೆಡೆ ಎತ್ತಲಿಲ್ಲವೇಕೆ? ನಿಮ್ಮದು ಸೆಲೆಕ್ಟೆಡ್ ಸಂಸ್ಕೃತಿ ರಕ್ಷಣೆಯೇ? ಕೆಲಸವಿಲ್ಲದವ ಮಂಗನ ಜೊತೆ ಆಡಲು ಹೊರಟಂತೆ ಸಚಿವ ಸುನಿಲ್ ಕುಮಾರ್ ಅವರು ಇಲ್ಲದ ವಿವಾದ ಸೃಷ್ಟಿಸಿ ಮೈಲೇಜ್ ಪಡೆಯಲು ಹೊರಟಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸ್ಥಿತಿ `ಮನೆಯೊಂದು ಮೂರು ಬಾಗಿಲು’ ಆಗಿದೆ – ಜೋಶಿ ಲೇವಡಿ

    ಪಠ್ಯದಲ್ಲಿ ಸುರಪುರದ ವೀರರಿಗೆ ಅವಮಾನವಾದಾಗ ಎಲ್ಲಿ ಹೋಗಿದ್ದರು? ತಮ್ಮ ಇಂಧನ ಇಲಾಖೆಯ ಅಕ್ರಮಗಳನ್ನು ತಡೆಯಲು, ಅವ್ಯವಸ್ಥೆ ನಿವಾರಿಸಲು ಆಸಕ್ತಿ ಇಲ್ಲವೇಕೆವಿವಾದಗಳಿಗೆ ಮಾತ್ರ ಇವರ ಆಸಕ್ತಿಯೇ ಎಂದು ಪ್ರಶ್ನಿಸಿದೆ.

    ಪೊಲೀಸರನ್ನೇ ಕೀಳಾಗಿ ಕಾಣುವ ಗೃಹಸಚಿವರು ಇರುವಾಗ ಪೊಲೀಸರ ಗೋಳು ಕೇಳುವವರು ಯಾರು? ಕ್ಲರಿಕಲ್ ಸಿಬ್ಬಂದಿಗಳಿಂದ ಪೊಲೀಸರಿಗೆ ನಿರಂತರ ಕಿರುಕುಳವಾಗುತ್ತಿದ್ದರೂ, ಈ ಬಗ್ಗೆ ಹಿಂದೆಯೇ ನಾವು ದನಿ ಎತ್ತಿದ್ದರೂ ಸಚಿವರು ಕ್ರಮ ಕೈಗೊಂಡಿಲ್ಲ. ಆರಗ ಜ್ಞಾನೇಂದ್ರ ಅವರೇ (Araga Jnanendra), ಇಲಾಖೆಯೊಳಗಿನ ಈ ಭ್ರಷ್ಟಾಚಾರವನ್ನು ನಿಯಂತ್ರಿಸಿ ನಿಮ್ಮ ಸಾಮರ್ಥ್ಯ ತೋರಿಸಿ. ತಮ್ಮದೇ ಸರ್ಕಾರದ ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಘಾರಸು ಪಟ್ಟಿಯಲ್ಲಿ ಇಲ್ಲದವರನ್ನು ಯಾವ ಅರ್ಹತೆಯ ಮೇಲೆ ನೇಮಿಸಿದ್ದೀರಿ ಬೊಮ್ಮಾಯಿ (Basavaraj Bommai) ಅವರೇ? ಮಕ್ಕಳ ಆಯೋಗವೆಂದರೆ ಮಕ್ಕಳಾಟವೇ? ಬಿಜೆಪಿಯ ಒಂದು ಮೋರ್ಚಾವೇ? ಅಥವಾ ರಾಜಕೀಯ ಆಶ್ರಯತಾಣ ಎಂದು ತಿಳಿದಿರುವಿರಾ? ಮಕ್ಕಳ ಅಭಿವೃದ್ಧಿ ಇಲಾಖೆಯ ಆಕ್ಷೇಪವಿದ್ದರೂ ಈ ಬಂಡತನವೇಕೆ? ಇದನ್ನೂ ಓದಿ: ಪೊಲೀಸರಿಗೆ ಒಂದು ದೇಶ, ಒಂದು ಸಮವಸ್ತ್ರ – ಕಲ್ಪನೆ ಪ್ರಸ್ತಾಪಿಸಿದ ಮೋದಿ

    ಬಿಜೆಪಿಯ 40% ಕಮಿಷನ್ ಸರ್ಕಾರ ಜನರ ಜೀವ ತೆಗೆಯಲೆಂದೇ ಬಂದಿದೆ. ಆಕ್ಸಿಜನ್ ಕೊರತೆಯಿಂದ ಜೀವ ಬಿಟ್ಟರು. ರಸ್ತೆ ಗುಂಡಿಗೆ ಜನ ಬಲಿಯಾದರು. ಕಮಿಷನ್ ಕಿರುಕುಳಕ್ಕೆ ಜೀವ ಬಿಟ್ಟರು. ರೈತರ ಆತ್ಮಹತ್ಯೆ ಏರಿಕೆಯಾಗಿದೆ. ನಿರುದ್ಯೋಗದಿಂದ ಜೀವ ಬಿಟ್ಟರು. ಈಗ ಕುಲುಷಿತ ನೀರು ಕುಡಿದು ಜನ ಸಾಯುತ್ತಿದ್ದಾರೆ. ಇವೆಲ್ಲ ಸಾವುಗಳಿಗೆ ಸರ್ಕಾರವೇ ಹೊಣೆ ಎಂದು ಕಾಂಗ್ರೆಸ್ ಟೀಕಿಸಿದೆ.

    Live Tv
    [brid partner=56869869 player=32851 video=960834 autoplay=true]

  • ‘ಜುಜುಬಿ ಕರಗ’ ಪದ ಮ್ಯೂಟ್ ಮಾಡಲು ಧನಂಜಯ್ ಹಾಗೂ ಹೆಡ್ ಬುಷ್ ತಂಡ ಒಪ್ಪಿಗೆ

    ‘ಜುಜುಬಿ ಕರಗ’ ಪದ ಮ್ಯೂಟ್ ಮಾಡಲು ಧನಂಜಯ್ ಹಾಗೂ ಹೆಡ್ ಬುಷ್ ತಂಡ ಒಪ್ಪಿಗೆ

    ಹೆಡ್ ಬುಷ್ (Head Bush) ಸಿನಿಮಾಗೆ ಸಂಬಂಧ ಪಟ್ಟಂತೆ ಎರಡೆರಡು ವಿವಾದಗಳು ಚಿತ್ರತಂಡಕ್ಕೆ ಮಗ್ಗಲುಮುಳ್ಳಾಗಿ ಕಾಡುತ್ತಿವೆ. ವೀರಗಾಸೆ ಕಲಾವಿದರಿಗೆ ಅವಮಾನ ಮಾಡಲಾಗಿದೆ ಎನ್ನುವುದು ಒಂದು ವಿವಾದವಾದರೆ, ‘ಜುಜುಬಿ ಕರಗ’ (Karaga) ಎನ್ನುವ ಪದವನ್ನು ಬಳಸಲಾಗಿದ್ದು ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು. ನಿನ್ನೆಯಷ್ಟೇ ವೀರಗಾಸೆಗೆ ಸಂಬಂಧಿಸಿದಂತೆ ಚಿತ್ರತಂಡ ಕ್ಷಮೆ ಕೇಳಿತ್ತು. ಈಗ ಜುಜುಬಿ ಕರಗ ಎನ್ನುವ ಪದವನ್ನು ಮ್ಯೂಟ್ ಮಾಡುವುದಾಗಿ ತಂಡ ಒಪ್ಪಿಕೊಂಡಿದೆ.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಧರ್ಮರಾಯ ಸ್ವಾಮಿ ದೇವಸ್ಥಾನದ ಹಿರಿಯರು, ಚಿತ್ರತಂಡದ ಸದಸ್ಯರು ಮತ್ತು ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್, ಕಾರ್ಯದರ್ಶಿ ಸುಂದರರಾಜ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಸಂಧಾನ ಸಭೆಯಲ್ಲಿ ಜುಜುಬಿ ಕರಗ ಎನ್ನುವ ಪದವನ್ನು ಮ್ಯೂಟ್ ಮಾಡುವುದಾಗಿ ಚಿತ್ರತಂಡ ಒಪ್ಪಿಕೊಳ್ಳುವ ಮೂಲಕ ಈ ವಿವಾದಕ್ಕೂ ಸುಖಾಂತ್ಯ ಹಾಡಲಾಗಿದೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ

    ವಿವಾದಕ್ಕೆ (Controversy) ಸಂಬಂಧ ಪಟ್ಟಂತೆ ಧನಂಜಯ್ (Dhananjay) ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಬೆಂಬಲ ವ್ಯಕ್ತವಾಗುತ್ತಿದ್ದು, ‘ನಿಮ್ಮೊಂದಿಗೆ ನಾವಿದ್ದೇವೆ’ ಎನ್ನುವ ಹ್ಯಾಷ್ ಟ್ಯಾಗ್ ಕೂಡ ಟ್ರೆಂಡ್ ಆಗಿದೆ. ಕೇವಲ ಅಭಿಮಾನಿಗಳು ಮಾತ್ರವಲ್ಲ, ಸಿನಿಮಾ ರಂಗದ ಅನೇಕರು ಧನಂಜಯ್ ಪರ ಧ್ವನಿ ಎತ್ತಿದ್ದಾರೆ.

    ಈ ವಿವಾದದ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿರುವ ನಟ ಚೇತನ್, ‘ನಾನು ಸಿನಿಮಾ ಅನ್ನು ವೀಕ್ಷಿಸಿದೆ. ಕೆಲವು ವಿಭಾಗಗಳಿಗೆ ಆಕ್ಷೇಪಾರ್ಹ ಎಂದು ಕರೆಯಬಹುದಾದ ಚಲನಚಿತ್ರದ ದೃಶ್ಯಗಳನ್ನು ಕತ್ತರಿಸುವಂತೆ ಒತ್ತಾಯಿಸಲಾಗಿದೆ. ಪ್ರಸ್ತುತ ಬೇಡಿಕೆಗಳು ಸೃಜನಶೀಲ ಸ್ವಾತಂತ್ರ್ಯಗಳಿಗೆ ವಿರುದ್ಧವಾಗಿವೆ. ಸೆನ್ಸಾರ್ ಮಂಡಳಿಯ ಅನುಮತಿ ಪಡೆದ ನಂತರ ಚಿತ್ರ ಮತ್ತು ಚಿತ್ರಣಕ್ಕೆ ಸ್ವಾತಂತ್ರ್ಯ ನೀಡಬೇಕು. ಭಿನ್ನಾಭಿಪ್ರಾಯವು ಪ್ರಜಾಸತ್ತಾತ್ಮಕವಾಗಿದೆ, ಹೊರತು ಬೆದರಿಕೆಗಳಲ್ಲ’ ಎಂದು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವೀರಗಾಸೆಗೆ ಈಗಾಗಲೇ ಮಾಸಾಶನ ಕೊಡಲಾಗುತ್ತಿದೆ: ಸಚಿವ ಸುನೀಲ್ ಕುಮಾರ್

    ವೀರಗಾಸೆಗೆ ಈಗಾಗಲೇ ಮಾಸಾಶನ ಕೊಡಲಾಗುತ್ತಿದೆ: ಸಚಿವ ಸುನೀಲ್ ಕುಮಾರ್

    ದೈವ ನರ್ತಕರಿಗೆ ಮಾಸಾಶನ ಘೋಷಿಸಿದ ಬೆನ್ನಲ್ಲೇ, ವೀರಗಾಸೆ ಸೇರಿದಂತೆ ಇತರ ಕಲಾವಿದರಿಗೂ ಮಾಸಾಶನ ನೀಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಧನಂಜಯ್ (Dhananjay) ನಟನೆಯ ಹೆಡ್ ಬುಸ್ (Head Bush) ಸಿನಿಮಾದಲ್ಲಿ ವೀರಗಾಸೆ ಕಲಾವಿದರಿಗೆ ಅವಮಾನ ಮಾಡಿದ್ದಾರೆ ಎನ್ನುವುದು ವಿವಾದಕ್ಕೆ ಕಾರಣವಾಗಿತ್ತು. ಅದಕ್ಕೆ ಸಚಿವ ಸುನೀಲ್ ಕುಮಾರ್ ಕೂಡ ಪ್ರತಿಕ್ರಿಯಿಸಿದ್ದರು. ಹಾಗಾಗಿ ವೀರಗಾಸೆ ಕಲಾವಿದರಿಗೆ ಮಾಸಾಶನ ಕೊಟ್ಟು ಅವರ ಮೇಲೆ ಪ್ರೀತಿ ತೋರಿಸಿ ಎಂದು ಟ್ರೆಂಡ್ ಮಾಡಲಾಗಿತ್ತು.

    ಈ ಕುರಿತಂತೆ ಮಾತನಾಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ (Sunil Kumar), ‘ಈಗಾಗಲೇ ವೀರಗಾಸೆ, ಕಂಸಾಳೆಯವರಿಗೆ ಮಾಸಾಶನ ಕೊಡಲಾಗ್ತಿದೆ. ಇದರಲ್ಲಿ ಯಾವುದೇ  ಗೊಂದಲ ಬೇಡ.  ದೈವ ನರ್ತಕರನ್ನ ಸೇರಿಸಿರಲಿಲ್ಲ ಈಗ ಸೇರಿಸಿದ್ದೇವೆ.’ ಎಂದಿದ್ದಾರೆ. ಈ ಮೂಲಕ ವೀರಗಾಸೆ, ಕಂಸಾಳೆ ಅವರಿಗೆ ಮಾಸಾಶನ ಕೊಡುತ್ತಿರುವ ಕುರಿತಾದ ವಿವಾದಕ್ಕೆ ತೆರೆ ಎಳೆದಿದ್ದಾರೆ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ಹೆಡ್ ಬುಶ್ ಸಿನಿಮಾದ ಬಗ್ಗೆಯೂ ಮಾತನಾಡಿರುವ ಸಚಿವರು, ‘ನಾನು ನೋಡಿಲ್ಲ. ವಿವಾದದ ಬಗ್ಗೆ ಕೇಳಿ ತಿಳಿದುಕೊಂಡಿದ್ದೇನೆ. ಮನರಂಜನೆಗಾಗಿ ಸಾಂಸ್ಕೃತಿಕ ಚಟುವಟಿಕೆಗೆ ಅವಮಾನ ಮಾಡೋದು ಬೇಡ. ಸಿನಿಮಾ ಮಾತ್ರ ಅಲ್ಲ, ಯಾವುದೇ ಸಾಂಸ್ಕೃತಿಕ ಚಟುವಟಿಕೆಗೆ ಯಾವುದೇ ಅಪಮಾನ ಮಾಡೋದು ಬೇಡ . ಚಿತ್ರ ನಿರ್ದೇಶಕರೇ ಇದನ್ನ ಗಮನಿಸಬೇಕು. ಪುರುಸೋತ್ತು ಸಿಕ್ಕರೆ ಸಿನಿಮಾ ನೋಡ್ತೀನಿ’ ಎಂದಿದ್ದಾರೆ ಸುನಿಲ್ ಕುಮಾರ್.

    ವೀರಗಾಸೆಗೆ (Veeragase) ಅವಮಾನ ಆಗಿದ್ದರೆ, ಅದನ್ನು ಚಿತ್ರತಂಡ ಸರಿಪಡಿಸಿ ಎಂದು ಸಚಿವರು ಟ್ವಿಟ್ ಮಾಡಿ, ತಮ್ಮ ಕಾಳಜಿ ತೋರುತ್ತಿದ್ದಂತೆಯೇ ಬರೀ ನಿಮ್ಮ ಭಾಗದ ಕಲಾವಿದರಿಗೆ ಮಾತ್ರ ಮಾಸಾಶನ ನೀಡಿ ತಾರತಮ್ಯ ತೋರುತ್ತಿದ್ದೀರಿ. ನಿಮಗೆ ವೀರಗಾಸೆಯ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ, ಕೂಡಲೇ ಅವರಿಗೂ ಮಾಸಾಶನ ನೀಡಬೇಕು ಎಂದು ಹಲವರು ಆಗ್ರಹಿಸಿದ್ದರು. ಸಾವಿರಾರು ಜನರು ಸಚಿವರಿಗೆ ಟ್ವಿಟ್ ಮಾಡಿದ್ದರು. ಅದಕ್ಕೆ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೆಡ್ ಬುಷ್ ವಿವಾದ : ಸರಕಾರಕ್ಕೆ ತಂದಿಟ್ಟ ಸಂಕಷ್ಟ

    ಹೆಡ್ ಬುಷ್ ವಿವಾದ : ಸರಕಾರಕ್ಕೆ ತಂದಿಟ್ಟ ಸಂಕಷ್ಟ

    ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ (Head Bush) ಸಿನಿಮಾದ ವಿವಾದ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಅದರಲ್ಲೂ ಪ್ರಾಂತ್ಯ, ಭಾಷೆಯ ವಿಚಾರವನ್ನು ಇಲ್ಲಿಗೆ ಎಳೆತರಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ (Sunil Kumar) ವೀರಗಾಸೆ ಕುರಿತಾಗಿ ಟ್ವಿಟ್ ಮಾಡುತ್ತಿದ್ದಂತೆಯೇ ಅನೇಕರು ಅವರ ಮೇಲೆ ಮುಗಿ ಬಿದ್ದಿದ್ದಾರೆ. ಕೇವಲ ಒಂದು ಸಮುದಾಯಕ್ಕೆ ಮಾತ್ರ ಮಾಸಾಶನ ಕೊಟ್ಟಿದ್ದೀರಿ. ವೀರಗಾಸೆ, ಕಂಸಾಳೆ ಹೀಗೆ ಎಲ್ಲ ಜಾನಪದ ಪ್ರಕಾರದ ಕಲಾವಿದರಿಗೂ ಕೊಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಿದ್ದಾರೆ.

    ವೀರಗಾಸೆಗೆ (Veeragase) ಅವಮಾನ ಆಗಿದ್ದರೆ, ಅದನ್ನು ಚಿತ್ರತಂಡ ಸರಿಪಡಿಸಿ ಎಂದು ಸಚಿವರು ಟ್ವಿಟ್ ಮಾಡಿ, ತಮ್ಮ ಕಾಳಜಿ ತೋರುತ್ತಿದ್ದಂತೆಯೇ ಬರೀ ನಿಮ್ಮ ಭಾಗದ ಕಲಾವಿದರಿಗೆ ಮಾತ್ರ ಮಾಸಾಶನ ನೀಡಿ ತಾರತಮ್ಯ ತೋರುತ್ತಿದ್ದೀರಿ. ನಿಮಗೆ ವೀರಗಾಸೆಯ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ, ಕೂಡಲೇ ಅವರಿಗೂ ಮಾಸಾಶನ ನೀಡಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಇದರಿಂದಾಗಿ ಸಚಿವರು ಇರಸುಮುರಸು ಎದುರಿಸುವಂತಾಗಿದೆ. ಇದನ್ನೂ ಓದಿʻಹೆಡ್‌ ಬುಷ್‌ʼ ವಿವಾದ – ಟ್ವಿಟ್ಟರ್‌ನಲ್ಲಿ ಟ್ರೆಂಡ್‌ ಆಯ್ತು #WeStandWithDhananjaya ಹ್ಯಾಷ್‌ ಟ್ಯಾಗ್‌

    ಸಾವಿರಾರು ಜನರು ಸಚಿವರಿಗೆ ಟ್ವಿಟ್ ಮಾಡಿ, ಟ್ಯಾಗ್ ಮಾಡಿದ್ದಾರೆ. ಆದರೆ, ಈ ಕುರಿತು ಸುನೀಲ್ ಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ, ಭರವಸೆಯನ್ನೂ ಕೊಟ್ಟಿಲ್ಲ. ಸಚಿವರ ಈ ನಡೆ ಭಾರೀ ವಿರೋಧಕ್ಕೂ ಕಾರಣವಾಗಿದೆ. ಡಾಲಿ ಧನಂಜಯ್ (Dhananjay) ಕೂಡ ಪತ್ರಿಕಾಗೋಷ್ಠಿಯಲ್ಲಿ ಮಾಸಾಶನದ ಬಗ್ಗೆ ಮಾತನಾಡಿದ್ದಾರೆ. ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಸರಕಾರ ಇದಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡತ್ತೋ ಕಾದು ನೋಡಬೇಕು.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಿಷಬ್ ಶೆಟ್ಟಿ (Rishabh Shetty) ದೈವ ಕಟ್ಟುವವರಿಗೆ ಮಾಸಾಶನ ನೀಡಿದಂತೆ ರಾಜ್ಯದ ಇತರ ಕಲಾವಿದರಿಗೂ ಅದನ್ನು ವಿಸ್ತರಿಸಬೇಕು. ಎಲ್ಲ ಕಲಾವಿದರೂ ನನಗೆ ಒಂದೇ. ಈ ಮೂಲಕನ ನಾನೂ ಕೂಡ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ʻಹೆಡ್‌ ಬುಷ್‌ʼ ವಿವಾದ – ಟ್ವಿಟ್ಟರ್‌ನಲ್ಲಿ ಟ್ರೆಂಡ್‌ ಆಯ್ತು #WeStandWithDhananjaya ಹ್ಯಾಷ್‌ ಟ್ಯಾಗ್‌

    ʻಹೆಡ್‌ ಬುಷ್‌ʼ ವಿವಾದ – ಟ್ವಿಟ್ಟರ್‌ನಲ್ಲಿ ಟ್ರೆಂಡ್‌ ಆಯ್ತು #WeStandWithDhananjaya ಹ್ಯಾಷ್‌ ಟ್ಯಾಗ್‌

    ಡಾಲಿ ಧನಂಜಯ್‌ ನಟನೆಯ ಹೆಡ್‌ ಬುಷ್‌ (Head Bush) ಸಿನಿಮಾದಲ್ಲಿ ಕರಗ ಮತ್ತು ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಸಿನಿಮಾ ಬೈಕಾಟ್‌ ಕೂಗು ಒಂದೆಡೆ ಕೇಳಿಬಂದಿದ್ದರೆ, ನಾವು ಡಾಲಿ ಧನಂಜಯ್‌ ಪರವಾಗಿದ್ದೇವೆ ಎಂಬ ಧ್ವನಿ ಜೋರಾಗಿ ಸದ್ದು ಮಾಡುತ್ತಿದೆ. ಕನ್ನಡದ ಇತರ ಸ್ಟಾರ್‌ ನಟ ಜೊತೆಗಿರುವ ಡಾಲಿ ಧನಂಜಯ್‌ (Dhananjaya) ಫೋಟೋ ಹಾಗೂ ಅವರು ಮಾತನಾಡಿರುವ ವೀಡಿಯೋಗಳ ತುಣುಕು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, #WeStandWithDhananjaya ಹ್ಯಾಷ್‌ ಟ್ಯಾಗ್‌ ಟ್ವಿಟ್ಟರ್‌ನಲ್ಲಿ ಟ್ರೆಂಡ್‌ ಆಗಿದೆ.

    ದರ್ಶನ್‌, ಕಿಚ್ಚ ಸುದೀಪ್‌, ಕೆಜಿಎಫ್‌ ಸ್ಟಾರ್‌ ಯಶ್‌ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್‌ ಖ್ಯಾತ ಕಲಾವಿದರ ಜೊತೆ ಡಾಲಿ ಧನಂಜಯ್‌ ಇರುವ ಫೋಟೋ ಜೊತೆ #WeStandWithDhananjaya ಹ್ಯಾಷ್‌ ಟ್ಯಾಗ್‌ ಟ್ವಿಟ್ಟರ್‌ನಲ್ಲಿ ಟ್ರೆಂಡ್‌ ಆಗಿದೆ. ಇದನ್ನೂ ಓದಿ: ವೀರಗಾಸೆ, ಕರಗ ವಿವಾದ : ಕ್ಷಮೆ ಕೇಳಿದ ‘ಹೆಡ್ ಬುಷ್’ ಸಿನಿಮಾ ತಂಡ

    https://twitter.com/iCnote8/status/1585284114432684033

    ಚಿತ್ರೋದ್ಯಮವನ್ನು ನಿಯಂತ್ರಿಸಲು ಸಂಘಿಗಳಿಗೆ ಬಿಡಬೇಡಿ.. ಸಿನಿಮಾದಲ್ಲಿ ರಾಜಕೀಯ/ಧರ್ಮ ಪ್ರೇರಿತ ಕೆಸರು ಎರಚುವುದು ನಿಲ್ಲಬೇಕಿದೆ.. ಯಾವ ವಿವಾದವೂ ನಿಮ್ಮನ್ನು ತುಳಿಯಲು ಸಾಧ್ಯವಿಲ್ಲ.. ಜನರಿಂದ ಮಾನವೀಯತೆ ನಿರೀಕ್ಷಿಸುವುದು ಅಪರಾಧವೇ? ಎಂದು ಅನೇಕರು ಟ್ವಿಟ್ಟರ್‌ನಲ್ಲಿ ಕಾಮೆಂಟ್‌ಗಳನ್ನು ಮಾಡಿ ʼನಾವು ಧನಂಜಯ್‌ ಜೊತೆಗಿದ್ದೇವೆʼ ಎಂದು ಟ್ವೀಟ್‌ ಮಾಡಿದ್ದಾರೆ.

    ವಿವಾದ ಏನು?
    ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ (Head Bush) ಸಿನಿಮಾ ಎರಡು ಕಾರಣಗಳಿಂದಾಗಿ ವಿವಾದಕ್ಕೆ ತುತ್ತಾಗಿದೆ. ಸಿನಿಮಾದಲ್ಲಿ ಕರಗ (Karaga) ಮತ್ತು ವೀರಗಾಸೆಗೆ (Veeragase) ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಹಲವರು ದೂರು ಕೂಡ ದಾಖಲಿಸಿದ್ದಾರೆ. ಹೀಗಾಗಿ ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿತ್ತು. ಸಿನಿಮಾ ಬೈಕಾಟ್ ಮಾಡಬೇಕು, ದೃಶ್ಯಗಳನ್ನು ಕತ್ತರಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿತ್ತು. ಇದನ್ನೂ ಓದಿ: ‘ಹೆಡ್ ಬುಷ್’ ಚಿತ್ರದ ವಿರುದ್ಧ ಕರಗ ಸಮಿತಿಯೂ ಆಕ್ರೋಶ: ಎರಡೆರಡು ವಿವಾದಲ್ಲಿ ಡಾಲಿ

    ಎರಡೂ ವಿವಾದಗಳ (Controversy) ಕುರಿತು ಪ್ರತಿಕ್ರಿಯೆ ನೀಡಿದ್ದ ಧನಂಜಯ್ (Dhananjay), ತಾವು ಯಾವುದೇ ರೀತಿಯಲ್ಲಿ ತಪ್ಪು ಮಾಡಿಲ್ಲ. ಅವಮಾನ ಕೂಡ ಮಾಡಿಲ್ಲ. ಸಿನಿಮಾ ನೋಡಿದ ನಂತರ ಮಾತನಾಡಿ ಎಂದು ಕೇಳಿಕೊಂಡಿದ್ದರು. ಆದರೂ, ಪ್ರತಿಭಟನೆ ಮಾತ್ರ ನಿಲ್ಲಲಿಲ್ಲ. ಫಿಲ್ಮ್ ಚೇಂಬರ್ ಗೂ ದೂರು ದಾಖಲಿಸಿದ್ದರು. ಹಾಗಾಗಿ ಇಂದು ತಮ್ಮ ತಂಡದೊಂದಿಗೆ ಪತ್ರಿಕಾಗೋಷ್ಠಿ ಮಾಡಿದ ಧನಂಜಯ್, ಕ್ಷಮೆ ಕೇಳಿದ್ದರು.

    Live Tv
    [brid partner=56869869 player=32851 video=960834 autoplay=true]

  • ವೀರಗಾಸೆ, ಕರಗ ವಿವಾದ : ಕ್ಷಮೆ ಕೇಳಿದ ‘ಹೆಡ್ ಬುಷ್’ ಸಿನಿಮಾ ತಂಡ

    ವೀರಗಾಸೆ, ಕರಗ ವಿವಾದ : ಕ್ಷಮೆ ಕೇಳಿದ ‘ಹೆಡ್ ಬುಷ್’ ಸಿನಿಮಾ ತಂಡ

    ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ (Head Bush) ಸಿನಿಮಾ ಎರಡು ಕಾರಣಗಳಿಂದಾಗಿ ವಿವಾದಕ್ಕೆ ತುತ್ತಾಗಿದೆ. ಸಿನಿಮಾದಲ್ಲಿ ಕರಗ (Karaga) ಮತ್ತು ವೀರಗಾಸೆಗೆ (Veeragase) ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಹಲವರು ದೂರು ಕೂಡ ದಾಖಲಿಸಿದ್ದಾರೆ. ಹೀಗಾಗಿ ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿತ್ತು. ಸಿನಿಮಾ ಬೈಕಾಟ್ ಮಾಡಬೇಕು, ದೃಶ್ಯಗಳನ್ನು ಕತ್ತರಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿತ್ತು.

    ಎರಡೂ ವಿವಾದಗಳ (Controversy) ಕುರಿತು ಪ್ರತಿಕ್ರಿಯೆ ನೀಡಿದ್ದ ಧನಂಜಯ್ (Dhananjay), ತಾವು ಯಾವುದೇ ರೀತಿಯಲ್ಲಿ ತಪ್ಪು ಮಾಡಿಲ್ಲ. ಅವಮಾನ ಕೂಡ ಮಾಡಿಲ್ಲ. ಸಿನಿಮಾ ನೋಡಿದ ನಂತರ ಮಾತನಾಡಿ ಎಂದು ಕೇಳಿಕೊಂಡಿದ್ದರು. ಆದರೂ, ಪ್ರತಿಭಟನೆ ಮಾತ್ರ ನಿಲ್ಲಲಿಲ್ಲ. ಫಿಲ್ಮ್ ಚೇಂಬರ್ ಗೂ ದೂರು ದಾಖಲಿಸಿದ್ದರು. ಹಾಗಾಗಿ ಇಂದು ತಮ್ಮ ತಂಡದೊಂದಿಗೆ ಪತ್ರಿಕಾಗೋಷ್ಠಿ ಮಾಡಿದ ಧನಂಜಯ್, ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ

    ನಾವು ಯಾರನ್ನೂ ನೋಯಿಸುವ ಉದ್ದೇಶದಿಂದ ಸಿನಿಮಾ ಮಾಡಿಲ್ಲ. ದೇವರ ಬಗ್ಗೆ, ವೀರಗಾಸೆ ಹಾಗೂ ಕರಗದ ಬಗ್ಗೆ ನಮಗೂ ಅಪಾರವಾದ ಅಭಿಮಾನಿ, ಭಕ್ತಿ ಇದೆ. ಆದರೂ, ನಿಮಗೆ ನೋವು ಆಗಿದ್ದರೆ ಕ್ಷಮಿಸಿ ಎಂದು ನಿರ್ದೇಶಕ ಶೂನ್ಯ ಅವರು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. ಆದರೂ, ಕರಗ ಸಮಿತಿಯ ಸದಸ್ಯರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೋಗಿ ದೂರು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಹೆಡ್ ಬುಷ್’ ಸಿನಿಮಾದಲ್ಲಿ ವೀರಗಾಸೆಗೆ ಅವಮಾನ: ಡಾಲಿ ಧನಂಜಯ್ ಸ್ಪಷ್ಟನೆ

    ‘ಹೆಡ್ ಬುಷ್’ ಸಿನಿಮಾದಲ್ಲಿ ವೀರಗಾಸೆಗೆ ಅವಮಾನ: ಡಾಲಿ ಧನಂಜಯ್ ಸ್ಪಷ್ಟನೆ

    ಗಾಗಲೇ ರಾಜ್ಯಾದ್ಯಂತ ರಿಲೀಸ್ ಆಗಿ, ಯಶಸ್ವಿ ಪ್ರದರ್ಶನ ಕಾಣುತ್ತಿರುವ ಡಾಲಿ ಧನಂಜಯ್ (Dhananjay) ನಟನೆಯ ‘ಹೆಡ್ ಬುಷ್’ (head bush) ಸಿನಿಮಾದಲ್ಲಿ ವೀರಭದ್ರ ದೇವರ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ವೀರಗಾಸೆ ಕಲಾವಿದರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಸಾಹಸ ಸನ್ನಿವೇಶದಲ್ಲಿ ವೀರಗಾಸೆ ಕಲಾವಿದರಿಗೆ ಒದೆಯಲಾಗಿದೆ. ಅದು ಕಲೆ ಮತ್ತು ವೀರಭದ್ರ ದೇವರಿಗೆ ಮಾಡಿದ ಅಪಮಾನ ಎಂದು ಕಲಾವಿದರು ಆಕ್ಷೇಪಿಸಿದ್ದಾರೆ. ಇದೀಗ ವಿವಾದವಾಗಿ (controversy) ಮಾರ್ಪಟ್ಟಿದೆ.

    ವೀರಗಾಸೆ (Veeragase) ಕಲೆಗೆ ಮತ್ತು ಅದಕ್ಕೆ ಸಂಬಂಧಿಸಿದ ವೀರಭದ್ರ ದೇವರಿಗೆ (Veerabhadra God) ಅವಮಾನ ಮಾಡಿದ ನಿರ್ದೇಶಕರು, ಕಲಾವಿದರು ಹಾಗೂ ನಿರ್ಮಾಪಕರು ಕೂಡಲೇ ಕ್ಷಮೆ ಕೇಳಬೇಕು ಹಾಗೂ ಆ ದೃಶ್ಯವನ್ನು ಸಿನಿಮಾದಿಂದ ಕೈ ಬಿಡಬೇಕು ಎಂಬ ಆಗ್ರಹ ಕೂಡ ಕೇಳಿ ಬರುತ್ತಿದೆ. ಈ ಕುರಿತು ನಟ ಧನಂಜಯ್ ಪ್ರತಿಕ್ರಿಯೆ ನೀಡಿದ್ದಾರೆ. ತಾನೂ ಕೂಡ ವೀರಭದ್ರ ದೇವರ ಆರಾಧಕ ಆಗಿರುವುದರಿಂದ ಯಾವುದೇ ಕಾರಣಕ್ಕೂ ಅವಮಾನ ಮಾಡಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:ಚೇತನ್ ಕಾಂಟ್ರವರ್ಸಿಗೆ ಪ್ರಗತಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ

    ಧನಂಜಯ್ ಈವರೆಗೂ ಯಾವುದೇ ವಿವಾದಕ್ಕೆ ಒಳಗಾದವರು ಅಲ್ಲ. ಅದರಲ್ಲೂ ಶರಣ ಪರಂಪರೆಯನ್ನು ಓದಿಕೊಂಡು ಬೆಳೆದವರು. ಕಲೆ ಮತ್ತು ಸಂಸ್ಕೃತಿ ಬಗ್ಗೆ ಅಪಾರ ಅಭಿಮಾನ ಹೊಂದಿದವರು. ಈ ಕಾರಣದಿಂದಾಗಿಯೇ ಇಂದು ವೀರಗಾಸೆ ಕಲಾವಿದರನ್ನು ಧನಂಜಯ್ ಭೇಟಿ ಮಾಡುತ್ತಿದ್ದಾರೆ. ಅವರೊಂದಿಗೆ ಆ ದೃಶ್ಯದ ಕುರಿತು ವಿವರಣೆಯನ್ನು ಕೊಡಲಿದ್ದಾರೆ. ಆ ದೃಶ್ಯ ಹಾಗೂ ಅದನ್ನು ಸಿನಿಮಾದಲ್ಲಿ ಯಾಕೆ ಆ ರೀತಿ ಅಳವಡಿಸಲಾಗಿದೆ ಎನ್ನುವ ಕುರಿತು ಚರ್ಚಿಸಲಿದ್ದಾರೆ.

    ಇಂದು ವೀರಗಾಸೆ ಕಲಾವಿದರನ್ನು ಬೆಂಗಳೂರಿನಲ್ಲಿ ಭೇಟಿ ಮಾಡುತ್ತಿದ್ದೇನೆ. ಕಲಾವಿದರೊಂದಿಗೆ ಚರ್ಚೆ ಮಾಡಿ, ಈ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುತ್ತೇನೆ. ನನಗೂ ವೀರಭದ್ರ ದೇವರ ಮೇಲೆ ಅಪಾರ ಭಕ್ತಿ. ವೀರಗಾಸೆ ಕಲೆಯನ್ನು ತುಂಬಾ ಇಷ್ಟ ಪಡುವವನು. ಹಾಗಾಗಿ ನನ್ನಿಂದ ಯಾವುದೇ ಅವಮಾನ ಆಗುವಂತಹ ಕೆಲಸ ಆಗಲ್ಲ ಎಂದಿದ್ದಾರೆ ಧನಂಜಯ್.

    Live Tv
    [brid partner=56869869 player=32851 video=960834 autoplay=true]