Tag: hdrevanna

  • Exclusive: ರೇವಣ್ಣ ಕಿಡ್ನ್ಯಾಪ್‌ ಕೇಸ್‌ – ಅಪಹರಿಸಿ ಸಂತ್ರಸ್ತೆಯನ್ನಿರಿಸಿದ್ದ ತೋಟದ ಮನೆ ಪತ್ತೆ; ಕೂಲಿ ಕಾರ್ಮಿಕರಿಂದ ಸ್ಫೋಟಕ ಮಾಹಿತಿ!

    Exclusive: ರೇವಣ್ಣ ಕಿಡ್ನ್ಯಾಪ್‌ ಕೇಸ್‌ – ಅಪಹರಿಸಿ ಸಂತ್ರಸ್ತೆಯನ್ನಿರಿಸಿದ್ದ ತೋಟದ ಮನೆ ಪತ್ತೆ; ಕೂಲಿ ಕಾರ್ಮಿಕರಿಂದ ಸ್ಫೋಟಕ ಮಾಹಿತಿ!

    – ಕೂಲಿ ಕೆಲಸದಾಕೆ ಅಂತ ಹೇಳಿ ನಮಗೆ ಪರಿಚಯಿಸಲಾಗಿತ್ತು ಎಂದ ಕಾರ್ಮಿಕರು
    – ಆಕೆ ಕ್ಷಣಕ್ಕೊಂದು ಮಾತನಾಡುತ್ತಿದ್ದಳು, ಸಾಲದ ಕಥೆ ಹೇಳ್ತಿದ್ದಳು

    ಮೈಸೂರು: ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಮೇಲಿನ ಅಪಹರಣ ಪ್ರಕರಣದ (HD Revanna Kidnap Case) ಸಂತ್ರಸ್ತ ಮಹಿಳೆ ಕಳೆದ 5 ದಿನಗಳಿಂದ ರೇವಣ್ಣನ ಆಪ್ತ ಸಹಾಯಕನ ತೋಟದ ಮನೆಯಲ್ಲಿ ಇದ್ದರು.

    ಈ ತೋಟದ ಮನೆ ಇರೋದು ಮೈಸೂರು ಜಿಲ್ಲೆಯ ಹುಣಸೂರು (Hunsur) ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದ ಹೊರ ವಲಯದಲ್ಲಿ. ಈ ತೋಟದ ಮನೆಯಲ್ಲಿ (Farmhouse) ಆಕೆ ಏನು ಮಾಡುತ್ತಿದ್ದರು? ನಿಜವಾಗಿಯೂ ಆಕೆಗೆ ತೊಂದರೆ ಕೊಡುತ್ತಿದ್ರಾ ಅನ್ನೋ? ಬಗ್ಗೆ ಕುತೂಹಲಕಾರಿ ಸಂಗತಿಗಳು ಇಲ್ಲಿವೆ.

    ಕೂಲಿ ಕೆಲಸಕ್ಕೆ ಬಂದಿರೋ ಮಹಿಳೆ ಅಂತಾ ಹೇಳಿದ್ರು:
    ಸಂತ್ರಸ್ತ ಮಹಿಳೆಯನ್ನು ಇಟ್ಟಿದ್ದ ತೋಟದ ಮನೆಯಲ್ಲಿ ಬೇರೆ ಯಾರಿಗೂ ಅನುಮಾನ ಬಾರದಂತೆ ಇರಲು ಸಂತ್ರಸ್ತೆ ಮಹಿಳೆಯನ್ನು ಕೂಲಿಗೆ ಬಂದ ಮಹಿಳೆ ಅಂತಾ ಬಿಂಬಿಸಲಾಗಿತ್ತು. ತೋಟದ ಮನೆಯಲ್ಲಿನ ಕೆಲಸಗಾರರಿಗೆ ಆ ಮಹಿಳೆಯನ್ನು ಹೊಸ ಕೂಲಿಯವಳು ಅಂತಾ ಪರಿಚಯಿಸಲಾಗಿತ್ತು. ಆಕೆ ಕ್ಷಣಕ್ಕೊಂದು ಮಾತಾಡುತ್ತಿದ್ದಳು, ಮಹಿಳೆಯನ್ನು ವಾಪಾಸ್ ಕಳಿಸಿ ಅಂತಾ ಕಾರ್ಮಿಕರು ತೋಟದ ಮಾಲೀಕರಿಗೆ ಹೇಳಿದ್ದರು. ಆದರೆ ಇದಕ್ಕೆ ಮಾಲೀಕ ಒಪ್ಪದೇ ನಿಮಗೆ ಯಾಕೆ ಅಂತ ಸುಮ್ಮನಿರಿಸಿದ್ದರು ಎಂದು ಕಾರ್ಮಿಕರು ಹೇಳಿದ್ದಾರೆ.

    ಅಲ್ಲದೇ ನಾವು ಆಕೆಯನ್ನು ಯಾವ ಊರಿನವರು ಎಂದು ಹೇಳಿದಾಗ ಆಕೆ ಹೆಚ್‌.ಡಿ ಕೋಟೆ ತಾಲೂಕಿನ ಮಹಿಳೆ ಎಂದು ಹೇಳಿಕೊಂಡಿದ್ದಳು. ಅಲ್ಲದೇ 25 ಸಾವಿರ ಸಂಘಕ್ಕೆ ಸಾಲ ಕಟ್ಟಬೇಕು ಅಂತಾ ನಮ್ಮನ್ನೇ ಯಾಮಾರಿಸಿದ್ದಳು. ಇಲ್ಲಿಗೆ ಯಾರು ಕರೆದುಕೊಂಡುಬಂದು ಬಿಟ್ಟರು ಅಂತಾನೂ ಗೊತ್ತಿಲ್ಲ. ಶನಿವಾರ ರಾತ್ರಿ ನೋಡುವಷ್ಟರಲ್ಲಿ ಆಕೆ ಇರಲೇ ಇಲ್ಲ, ಭಾನುವಾರ ಬೆಳಗ್ಗೆ 9:30ರ ವೇಳೆಗೆ ಪೊಲೀಸರೇ ಕರೆತಂದಿದ್ದರು. ಆದ್ರೆ ಇಲ್ಲಿಂದ ಯಾರನ್ನ ಕರೆದುಕೊಂಡು ಹೋಗಿಲ್ಲ. ನಮಗೆ ಮುಂಚೆನೇ ಆಕೆ ಬಗ್ಗೆ ಗೊತ್ತಿದ್ದರೆ ನಾವೇ ಪೊಲೀಸರಿಗೆ ಹಿಡಿದುಕೊಡುತ್ತಿದ್ದೆವು ಎಂದು ಅಲ್ಲಿನ ಕೂಲಿ ಕಾರ್ಮಿಕರು ಮಾಹಿತಿ ನೀಡಿದ್ದಾರೆ.

    ತೋಟದ ಮನೆಗೆ ರೇವಣ್ಣ ಬಂದಿದ್ರಾ?
    ಈ ತೋಟ ರಾಜ್‌ಗೋಪಾಲ್‌ ಅವರದ್ದು, ರೇವಣ್ಣ ಅವರು ಇಲ್ಲಿಗೆ ಬಂದಿಲ್ಲ, ಈವರೆಗೂ ನಾನು ಅವರನ್ನು ಇಲ್ಲಿ ನೋಡಿಲ್ಲ, ನಾವು ಯಾಕೆ ಸುಳ್ಳು ಹೇಳಬೇಕು ಎಂದು ಕಾರ್ಮಿಕರು ಹೇಳಿದ್ದಾರೆ. ಮತ್ತೊಬ್ಬರು ಕಾರ್ಮಿಕರು ಇಲ್ಲಿ ಮಹಿಳೆ ಇದ್ದುದ್ದನ್ನೇ ನಾವು ನೋಡಿಲ್ಲ ಎಂದಿದ್ದಾರೆ.

  • ರಾಜಕೀಯ ಚಟುವಟಿಕೆಯಿಲ್ಲದೆ ಮೌನವಾದ ತೆನೆ ಹೊತ್ತ ಮಹಿಳೆ!

    ರಾಜಕೀಯ ಚಟುವಟಿಕೆಯಿಲ್ಲದೆ ಮೌನವಾದ ತೆನೆ ಹೊತ್ತ ಮಹಿಳೆ!

    ಬೆಂಗಳೂರು: ಲೋಕಸಭಾ ಚುನಾವಣೆ, ಸಮ್ಮಿಶ್ರ ಸರ್ಕಾರದ ಪತನ ಹಾಗೂ ಉಪ ಚುನಾವಣೆ ಸೋಲಿನ ನಂತರ ಜೆಡಿಎಸ್ ದಿನೇ ದಿನೇ ಮಂಕಾಗುತ್ತಿದೆ. ಪಕ್ಷದ ನಾಯಕರು ಆ್ಯಕ್ಟೀವ್ ಆಗಿಲ್ಲ. ಪಕ್ಷದ ಕಾರ್ಯಕರ್ತರು ಪಕ್ಷದ ಕಚೇರಿಗೂ ಬರುತ್ತಿಲ್ಲ. ಪಕ್ಷ ಸಂಘಟನೆ ನಿಂತಿಲ್ಲೇ ನಿಂತಿದೆ. ಶಾಸಕರು ಪಕ್ಷಕ್ಕೆ ಸಂಬಂಧ ಇಲ್ಲದಂತೆ ಮೌನವಾಗಿದ್ದಾರೆ. ಇದೆಲ್ಲದರ ಮಧ್ಯೆ ತೆನೆ ಹೊತ್ತ ಮಹಿಳೆ ಪ್ರಬಲ ನಾಯಕನಿಲ್ಲದೆ ಮೌನವಾಗಿದ್ದಾಳೆ.

    ಸೋತರು ಸದಾ ಪಕ್ಷ ಸಂಘಟನೆಯಲ್ಲಿ ಮುಂದಿರೋ ಮಾಜಿ ಪ್ರಧಾನಿ, ಪಕ್ಷದ ವರಿಷ್ಠ ದೇವೇಗೌಡರು ಅದ್ಯಾಕೋ ಪಕ್ಷದ ಸಂಘಟನೆಯಿಂದ ಕೊಂಚ ದೂರ ಉಳಿದಿದ್ದಾರೆ. ಆರೋಗ್ಯ ಸರಿಯಿಲ್ಲದ ಕಾರಣ ಕೇರಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿರಂತೂ ಪಕ್ಷದ ಚಟುವಟಿಕೆಯಿಂದಲೇ ದೂರ ಉಳಿದಿದ್ದಾರೆ. ಪಕ್ಷ ಇಂತಹ ಸಮಯದಲ್ಲಿ ಇದ್ದರು ಪ್ರವಾಸದ ಮೇಲೆ ಪ್ರವಾಸ ಮಾಡುತ್ತಿದ್ದಾರೆ.

    ಹುಟ್ಟು ಹಬ್ಬಕ್ಕಾಗಿ ಗೋವಾಗಿ ಫ್ಯಾಮಿಲಿ ಜೊತೆ ಹೋಗಿದ್ರು. ಈಗ ಹೊಸ ವರ್ಷದ ಆಚರಣೆಗೆ ಸಿಂಗಾಪುರ್ ಗೆ ಹಾರಿದ್ದು, ಪಕ್ಷ ಸಂಘಟನೆಯನ್ನೆ ಮರೆತಿದ್ದಾರೆ. ಮಾಜಿ ಸಚಿವ ರೇವಣ್ಣಗೆ ಹಾಸನವೇ ರಾಜ್ಯದಂತೆ ಅಲ್ಲಿಗೆ ಮಾತ್ರ ಸಿಮೀತವಾಗಿದ್ದಾರೆ. ಹೆಚ್‍ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಯುವ ಘಟಕದ ಅಧ್ಯಕ್ಷ ಆಗಿದ್ದರೂ ಇದುವರೆಗೂ ಒಂದೇ ಒಂದು ಸಭೆ ಮಾಡಿಲ್ಲ. ಯುವಕರನ್ನು ಆಕರ್ಷಣೆ ಮಾಡಿಲ್ಲ. ಕಾರ್ಯಕರ್ತರ ಜೊತೆಯೂ ಮಾತಾಡಿಲ್ಲ. ಸಂಸದ ಪ್ರಜ್ವಲ್ ರೇವಣ್ಣ ಅಲ್ಲಿ-ಇಲ್ಲಿ ಒಮ್ಮೊಮ್ಮೆ ರಾಜಕೀಯವಾಗಿ ಕಾಣಿಸಿಕೊಳ್ಳುತ್ತಾರೆ. ಮಾಜಿ ಸಚಿವರಂತೂ ಪಕ್ಷದ ಕಚೇರಿಗೂ ಮುಖ ಹಾಕಿಲ್ಲ.

    ಒಟ್ಟಿನಲ್ಲಿ ಪ್ರಬಲ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕಿದ್ದ ಜೆಡಿಎಸ್, ವಿರೋಧ ಪಕ್ಷ ಅನ್ನೋದು ಮರೆತು ಕುಳಿತಿದೆ. ಸರ್ಕಾರದ ವಿರುದ್ಧ ಒಂದೇ ಒಂದು ಹೋರಾಟ ಮಾಡಿಲ್ಲ. ಸರ್ಕಾರಕ್ಕೆ ಚಾಟಿ ಬೀಸುವ ಕೆಲಸವೂ ಮಾಡಿಲ್ಲ. ಜೆಡಿಎಸ್ ನಾಯಕರ ಈ ವರ್ತನೆ ನೋಡಿ ಪಕ್ಷದ ಕಾರ್ಯಕರ್ತರು ಬೇಸರಗೊಂಡಿದ್ದಾರೆ.

  • ಅವರ-ಇವರ ನಡುವಿನ `ಕಾಲ’ ಕಥೆಯಿಂದಾಗಿ ಸಿಎಂಗಿಲ್ಲ ಮನೆ!

    ಅವರ-ಇವರ ನಡುವಿನ `ಕಾಲ’ ಕಥೆಯಿಂದಾಗಿ ಸಿಎಂಗಿಲ್ಲ ಮನೆ!

    ಬೆಂಗಳೂರು: ಇದು ಮನೆಯೊಂದು ಮೂರು ಬಾಗಿಲು ಅಲ್ಲ. ಇದು 1 ಮನೆ, 3 ಕಥೆಯ ಇಂಟ್ರೆಸ್ಟಿಂಗ್ ಕಹಾನಿಯಾಗಿದೆ. ಸರ್ಕಾರಿ ಬಂಗಲೆಯಲ್ಲಿ ವಾಸ ಇದ್ದವರು ಈಗ ಖಾಲಿ ಮಾಡುತ್ತಿಲ್ಲ. ಮನೆ ಖಾಲಿ ಮಾಡಿ ಅಂದರೆ ಮಾಜಿ ಸಚಿವರು ಕಾಲ-ಘಳಿಗೆ ನೋಡುತ್ತಿದ್ದಾರೆ.

    ಹೌದು. ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಕಾಲ-ಘಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ತಂದಿಟ್ಟಿದೆ. ಅಲ್ಲದೆ ಇದರ ಎಫೆಕ್ಟ್ ಹಾಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಮೇಲೂ ಬೀರಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕುಮಾರಕೃಪ ಅನೆಕ್ಷ್ಚರ್ 1 ನಲ್ಲಿ ಸರ್ಕಾರಿ ಬಂಗಲೆ ಪಡೆದ ಮಾಜಿ ಸಚಿವ ರೇವಣ್ಣ ಇನ್ನೂ ಮನೆ ಖಾಲಿ ಮಾಡಿಲ್ಲ. ಆದರೆ ಆ ನಿವಾಸ ಮಾಜಿ ಸಿಎಂ, ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಅಲರ್ಟ್ ಮಾಡಲಾಗಿದೆ. ಸಿದ್ದರಾಮಯ್ಯ ಇರುವ ಕಾವೇರಿ ನಿವಾಸವನ್ನ ಸಿಎಂ ಯಡಿಯೂರಪ್ಪರಿಗೆ ನೀಡಲಾಗಿದೆ. ಆದರೆ ಮನೆ ಖಾಲಿ ಮಾಡೋಕೆ ಸಮಯ, ಮುಹೂರ್ತ ನೋಡುತ್ತಿರುವ ರೇವಣ್ಣ ಅವರು ಡೆಡ್‍ಲೈನ್ ಮುಗಿದರೂ ಮನೆ ಖಾಲಿ ಮಾಡಿಲ್ಲ.

    ತಮ್ಮ ಪಾಲಿನ ಮನೆ ಖಾಲಿ ಆಗದ ಕಾರಣಕ್ಕೆ ಸಿದ್ದರಾಮಯ್ಯ ಸಹ ಕಾವೇರಿ ನಿವಾಸವನ್ನ ಖಾಲಿ ಮಾಡಿಲ್ಲ. ತಮ್ಮ ಖಾಸಗಿ ನಿವಾಸ ದವಳಗಿರಿಯಲ್ಲೇ ಇರುವ ಸಿಎಂ ಯಡಿಯೂರಪ್ಪನವರಿಗೆ ಸಿದ್ದರಾಮಯ್ಯ ಕಾವೇರಿ ನಿವಾಸ ಖಾಲಿ ಮಾಡದ ಹೊರತು ತಮ್ಮ ಪಾಲಿನ ಸರ್ಕಾರಿ ಬಂಗಲೆಗೆ ಹೋಗುವ ಯೋಗವಿಲ್ಲ.

    ರೇವಣ್ಣರ ಸಂಕ್ರಾಂತಿ, ಕಾಲ, ಮುಹೂರ್ತ ಯಾವಾಗ ಕೂಡಿ ಬರುತ್ತೋ ಆಗಲೇ ಮಾಜಿ ಸಿಎಂ ಹಾಗೂ ಹಾಲಿ ಸಿಎಂಗೆ ಸರ್ಕಾರಿ ಬಂಗಲೆ ಯೋಗ ಕೂಡಿ ಬರಬೇಕಿದೆ ಎಂಬಂತಾಗಿದೆ.