Tag: HDKumaraswamy

  • ಜೆಡಿಎಸ್‍ಗೆ ಕೇಡುಗಾಲ ಬಂದಿತ್ತು: ಕುಮಾರಸ್ವಾಮಿಗೆ ಆಮೆ-ಮೊಲದ ಕಥೆ ಹೇಳಿದ ವಿಜಯೇಂದ್ರ

    ಜೆಡಿಎಸ್‍ಗೆ ಕೇಡುಗಾಲ ಬಂದಿತ್ತು: ಕುಮಾರಸ್ವಾಮಿಗೆ ಆಮೆ-ಮೊಲದ ಕಥೆ ಹೇಳಿದ ವಿಜಯೇಂದ್ರ

    ಮಂಡ್ಯ: ಜೆಡಿಎಸ್‍ಗೆ ಕೇಡುಗಾಲ ಬಂದಿತ್ತು ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಆಮೆ-ಮೊಲದ ಕಥೆಯನ್ನು ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಹೇಳುವ ಮೂಲಕ ತಿರುಗೇಟು ಕೊಟ್ಟರು.

    ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆಯ ಬಿಜೆಪಿ ಸಭೆಯಲ್ಲಿ ಕೆ.ಆರ್.ಪೇಟೆ ಉಪಚುನಾವಣೆ ಘಟನೆ ನೆನೆದ ಅವರು, ನಾರಾಯಣಗೌಡ ಜಾಗದಲ್ಲಿ ನಾನು ಇದ್ದಿದ್ರು ನಾನು ರಾಜೀನಾಮೆ ಕೊಡುತ್ತಿರಲಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇಟ್ಟು ರಾಜೀನಾಮೆ ಕೊಟ್ಟು ನಮ್ಮ ಪಕ್ಷಕ್ಕೆ ಬಂದರು. ಅವರನ್ನು ಗೆಲ್ಲಿಸಬೇಕೆಂದು ನಾವು ಹಗಲಿರುಳು ಶ್ರಮಪಟ್ಟೆವು ಎಂದರು. ಇದನ್ನೂ ಓದಿ: ನಳಿನ್ ಕುಮಾರ್ ಕಟೀಲ್ ಪ್ರಬುದ್ಧ ರಾಜಕಾರಣಿ ಅಲ್ಲ: ಸಿದ್ದರಾಮಯ್ಯ

    ಯಡಿಯೂರಪ್ಪ ಅವರು ಒಂದೇ ದಿನ ಎರಡು ಕಡೆ ಪ್ರಚಾರ ಸಭೆ ನಡೆಸಿದ್ರು. ಮತದಾನಕ್ಕೆ ಮೂರ್ನಾಲ್ಕು ದಿನಗಳ ಬಾಕಿ ಇರುವಾಗ ಯಾಕೋ ಸ್ವಲ್ಪ ಕಷ್ಟ ಇದೆ, ಸೋಲುತ್ತೇವೆ ಎನ್ನಿಸುತ್ತೆ ಎಂದು ನಾರಾಯಣಗೌಡ ಅವರಿಗೆ ಕೇಳಿದೆ. ಆದ್ರು ಪರವಾಗಿಲ್ಲ ನಾವು ನಮ್ಮ ಶ್ರಮ ಹಾಕೋಣಾ ಎಂದರು. ಆ ವೇಳೆ ಎಲ್ಲರೂ ಬಿಜೆಪಿ ಎಲ್ಲಿ ಗೆಲ್ಲುತ್ತೇ, ನಾವು ಎಷ್ಟು ಉಪಚುನಾವಣೆ ಮಾಡಿಲ್ಲ ಎಂದಿದ್ದರು ಎಂದು ತಿಳಿಸಿದರು.

    ನಾವು ಅದ್ಯಾವುದಕ್ಕೂ ಕಿವಿ ಕೊಡಲಿಲ್ಲ. ನಾವು ನಮ್ಮ ಕೆಲಸ ಮಾಡಿದ್ದೆವು. ಜೆಡಿಎಸ್‍ಗೆ ಆಗ ಕೇಡುಗಾಲ ಬಂದಿತ್ತು. ಕೊನೆದಿನದ ಪ್ರಚಾರಕ್ಕೆ ಬರಬೇಕಿದ್ದ ಮಾಜಿ ಸಿಎಂ ಕುಮಾರಸ್ವಾಮಿಗೆ ಹೆಲಿಕಾಪ್ಟರ್ ಕೈ ಕೊಡ್ತು. ಅವತ್ತು ಜೆಡಿಎಸ್‍ನ ವಿಶ್ವಾಸ ನೋಡಿದ್ರೆ, ನಂಗೆ ಮೊಲ, ಆಮೆಯ ಕಥೆ ನೆನಪಾಗುತ್ತೆ. ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಮೊಲ ಆಗಿತ್ತು, ನಾವು ಆಮೆಯಾಗಿದ್ದೋ. ಆಮೆ ರೇಸ್‍ನಲ್ಲಿ ಮುಂದೆ ಹೋದ್ರೆ, ಮೊಲ ನಿದ್ದೆ ಮಾಡ್ತಾ ಇತ್ತು ಎಂದು ವಿವರಿಸಿದರು.

    ನಾವು ಆಮೆಯಂತೆ ನಮ್ಮ ಆತ್ಮವಿಶ್ವಾಸ ಬಿಡದೇ ನಮ್ಮ ಕೆಲಸ ಮಾಡಿದೋ. ಮೊದಲ ರೌಂಡ್ ಬಿಟ್ಟರೇ ಉಳಿದ ಎಲ್ಲ ರೌಂಡ್‍ಗಳಲ್ಲೂ ನಮ್ಮ ಅಭ್ಯರ್ಥಿ ಮುನ್ನಡೆ ಸಾಧಿಸಿದರು. ಜೆಡಿಎಸ್‍ನವರು ಮಲಗಿ ಮೇಲೆ ಎದ್ದಿದ್ದು, ಫಲಿತಾಂಶ ಬಂದ ಮೇಲೆ. ಕೆ.ಆರ್.ಪೇಟೆಯಲ್ಲಿ ಬಿಜೆಪಿ ಗೆದ್ದಾಗ ಯಡಿಯೂರಪ್ಪ ಅವರು ತುಂಬಾ ಖುಷಿ ಪಟ್ಟರು. ಇಡೀ ರಾಜ್ಯವನ್ನೆ ಗೆದ್ದಷ್ಟು ಖುಷಿ ಅವರ ಮುಖದಲ್ಲಿ ಕಾಣುತ್ತಿತ್ತು ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಇಮ್ರಾನ್ ಖಾನ್‌ರ ಒಂದು ಕೂದಲಿಗೆ ಹಾನಿಯಾದರೂ ನಾನೇ ಆತ್ಮಹತ್ಯಾ ದಾಳಿ ನಡೆಸುತ್ತೇನೆ: ಪಾಕ್ ಶಾಸಕನ ಬೆದರಿಕೆ

    ಮಂಡ್ಯದಲ್ಲಿ ಜೆಡಿಎಸ್ ಪುಡಾರಿಗಳ ದಬ್ಬಾಳಿಕೆ ಇದ್ರು ಸಹ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಮಂಡ್ಯ ಕಾರ್ಯಕರ್ತರು ಶ್ರಮಪಟ್ಟಿದ್ದಾರೆ. ಈಗ ಆ ಶ್ರಮದ ಫಲ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಗೆದ್ದಿದೆ. ಕೆಆರ್‌ಪೇಟೆಯಲ್ಲಿ ಆರಂಭವಾಗಿರುವ ವಿಜಯಯಾತ್ರೆ ಮಂಡ್ಯದ ಎಲ್ಲ ಕ್ಷೇತ್ರದಲ್ಲೂ ಆರಂಭವಾಗಬೇಕು ಎಂದು ಹೇಳಿದರು.

  • ಹಿಂದೂಗಳನ್ನು ಒಂದು ಮಾಡಲು ಹೊರಟರೆ ದಕ್ಷಿಣ ಕರ್ನಾಟಕ ಬಿಜೆಪಿ ಪಾಲಿಗೆ ಬಂದ್

    ಹಿಂದೂಗಳನ್ನು ಒಂದು ಮಾಡಲು ಹೊರಟರೆ ದಕ್ಷಿಣ ಕರ್ನಾಟಕ ಬಿಜೆಪಿ ಪಾಲಿಗೆ ಬಂದ್

    ರಾಮನಗರ: ಹಿಂದೂಗಳನ್ನು ಒಂದು ಮಾಡಲು ಹೊರಟರೆ ಬಿಜೆಪಿ ಪಾಲಿಗೆ ದಕ್ಷಿಣ ಕರ್ನಾಟಕ ಸಂಪೂರ್ಣ ಬಂದ್ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

    ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿ ಚುನಾವಣಾ ಪೂರ್ವ ಸಿದ್ಧತೆಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರಿಗೋಸ್ಕರ ತಲ್ವಾರ್ ತೋರಿಸುತ್ತಿದ್ದೀರಿ? ಕರ್ನಾಟಕವನ್ನು ಮತ್ತೊಂದು ಗುಜರಾತ್ ಮಾಡಲು ಹೊರಟಿದ್ದೀರಾ? ಕರ್ನಾಟಕದಲ್ಲಿ ಮತ್ತೊಂದು ಗೋಧ್ರಾ ಹತ್ಯಾಕಾಂಡಕ್ಕೆ ಯತ್ನಿಸುತ್ತಿದ್ದೀರಾ? ಹತ್ಯಾಕಾಂಡ ನಡೆಸಲು ಇದು ಉತ್ತರಪ್ರದೇಶ ಅಥವಾ ಗುಜರಾತ್ ಅಲ್ಲ. ರಾಜ್ಯ ಸರ್ಕಾರ ಇಂತಹ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಅದಕ್ಕಾಗಿ ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಿದ್ದೇನೆ. ಅಷ್ಟರಲ್ಲಿ ಇಂತಹ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ಮಾತನಾಡಲ್ಲ, ನನ್ನ ಆಕ್ಷನ್ ಮಾತನಾಡುತ್ತದೆ: ವಿಪಕ್ಷಗಳಿಗೆ ಬೊಮ್ಮಾಯಿ ತಿರುಗೇಟು

    GODHRA

    ಬಿಜೆಪಿ ಹಾಗೂ ಅಂಗಪಕ್ಷಗಳು ಇದೇ ರೀತಿ ರಾಜ್ಯದಲ್ಲಿ ಹಿಂದೂಗಳನ್ನು ಒಂದು ಮಾಡುತ್ತೇವೆ ಎಂದು ಹೋಗುತ್ತಿದ್ದರೆ, ಕರ್ನಾಟಕದ ಜನತೆಯಿಂದಲೇ ಕರ್ನಾಟಕದ ಹೆಬ್ಬಾಗಿಲು ಆಗಿರುವ ದಕ್ಷಿಣ ಕರ್ನಾಟಕ ಭಾಗ ಬಿಜೆಪಿ ಪಾಲಿಗೆ ಸಂಪೂರ್ಣ ಬಂದ್ ಆಗುತ್ತದೆ ಎಂದು ಹೇಳಿದ್ದಾರೆ.

    ಕಲ್ಲಂಗಡಿ ಒಡೆದಿದ್ದಕ್ಕೆ ಕನಿಕರ ತೋರುವವರು ಸುಮ್ಮನಿದ್ದರು. ತಲೆ ಒಡೆದಾಗ ಕನಿಕರ ತೋರಲಿಲ್ಲವೆಂಬ ಸಿ.ಟಿ.ರವಿ ಹೇಳಿಕೆಗೆ ತಿರುಗೇಟು ನೀಡಿದ ಹೆಚ್‌ಡಿಕೆ, ನೀವು ತಲೆ ಒಡೆಯುವ ಕೆಲಸ ಮಾಡುತ್ತೀರಿ. ರಾಜ್ಯದ ಶಾಂತಿ ಸುವ್ಯವಸ್ಥೆ ಹಾಳುಮಾಡುತ್ತೀರಿ. ನಿಮ್ಮಂಥವರ ಪ್ರಚೋದನಕಾರಿ ಹೇಳಿಕೆಯಿಂದ ಹೀಗಾಗುತ್ತಿದೆ. ಇಷ್ಟು ಅರ್ಥಮಾಡಿಕೊಳ್ಳದಿದ್ದರೆ ಯಾವ ದೇಶ ಕಟ್ಟುತ್ತೀರಿ ನೀವು? ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಬೆಳಗಾವಿ ಬಿಜೆಪಿಯಲ್ಲಿನ ಭಿನ್ನಮತ ಶಮನಕ್ಕೆ ಮುಂದಾದ ಅರುಣ್ ಸಿಂಗ್, ಬಿಎಸ್‍ವೈ

    HDK

    94 ನದಿಗಳ ನೀರು ಸಂಗ್ರಹಿಸಿ ಪೂಜೆ
    2023ರ ಚುನಾವಣಾ ಪೂರ್ವ ಸಿದ್ಧತೆ ಪ್ರಾರಂಭಿಸಲು ಕರ್ನಾಟಕ ರಾಜ್ಯದ 94 ನದಿಗಳು, ಉಪ ನದಿಗಳಿಂದ ನೀರು ಸಂಗ್ರಹಿಸಿ ಪೂಜೆ ಸಲ್ಲಿಸಲು ನಿರ್ಧರಿಸಲಾಗಿದೆ. ನಾಳೆ ಬೆಳಿಗ್ಗೆ 10:30ಕ್ಕೆ ರಾಮನಗರದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ಜರುಗಲಿದೆ. 15 ವಾಹನಗಳಲ್ಲಿ ಜನತಾ ಜಲಧಾರೆಯ ಕಳಶ ಸ್ಥಾಪಿಸಲಾಗಿದೆ. ರಾಮನಗರದಲ್ಲಿ ಪೂಜೆ ನೆರವೇರಿದ ನಂತರ ನದಿ ನೀರು ಸಂಗ್ರಹಿಸಲು ವಾಹನಗಳು ತೆರಳಲಿವೆ. ನಾಳೆ 15 ಕ್ಷೇತ್ರಗಳಲ್ಲಿ ನದಿ ನೀರು ಸಂಗ್ರಹಿಸುವ ಗುರಿ ಹೊಂದಿದ್ದು, ಉಳಿದಂತೆ 94, ನದಿ, ಉಪನದಿಗಳಲ್ಲಿ ನೀರು ಸಂಗ್ರಹಿಸಿ, ಏಪ್ರಿಲ್ 4ರಂದು ಬೆಂಗಳೂರು ತಲುಪಲಿವೆ. ದೂರದ ಸ್ಥಳಗಳಿಗೆ ತೆರಳಿದ ವಾಹನಗಳು ಏಪ್ರಿಲ್ 8ರಂದು ಬೆಂಗಳೂರು ಸೇರಲಿವೆ ಎಂದು ಹೇಳಿದರು. ಇದನ್ನೂ ಓದಿ: ಲವ್ ಜಿಹಾದ್ ಬದಲಿಗೆ `ಲವ್ ಕೇಸರಿ’ ಟ್ರೆಂಡ್ ಸೃಷ್ಟಿಸಲು ಶ್ರೀರಾಮಸೇನೆ ಕರೆ

    SHRIRAMASENE

    ರಾಜ್ಯದ ನೀರಾವರಿ ಯೋಜನೆ ಜಾರಿಗೆ ಬಿಜೆಪಿ ಪ್ರಯತ್ನಿಸಿಲ್ಲ. ನೀರಾವರಿ ಯೋಜನೆ ಜಾರಿಗೆ ಬಿಜೆಪಿ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ಧಾರ್ಮಿಕ ಅಂಶಗಳನ್ನು ಮುಂದಿಟ್ಟು ಜನರ ದಾರಿ ತಪ್ಪಿಸುತ್ತಿದೆ. ಮೇಕೆದಾಟು, ಮಹದಾಯಿ, ಕೃಷ್ಣಾ, ಭದ್ರಾ ಮೇಲ್ದಂಡೆ ಯೋಜನೆ, ನೀರಾವರಿ ಯೋಜನೆ ಪೂರ್ಣಗೊಳಿಸಲು 5 ಲಕ್ಷ ಕೋಟಿ ಬೇಕು. ಜೆಡಿಎಸ್‌ಗೆ ಪೂರ್ಣಪ್ರಮಾಣದ ಅಧಿಕಾರ ನೀಡಿದರೆ ಯೋಜನೆ ಜಾರಿ ಮಾಡುತ್ತೇವೆ. ರಾಜ್ಯದ ನೀರಾವರಿ ಯೋಜನೆ ಜಾರಿಮಾಡದಿದ್ದರೆ ಪಕ್ಷವನ್ನೇ ವಿಸರ್ಜನೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಪುನರುಚ್ಛರಿಸಿದ್ದಾರೆ.

  • ನನ್ನ ಮುಖನೂ ಮಿಣಿ ಮಿಣಿ ಅಂತಿದೆ: ಡಿಕೆಶಿ

    ನನ್ನ ಮುಖನೂ ಮಿಣಿ ಮಿಣಿ ಅಂತಿದೆ: ಡಿಕೆಶಿ

    ಕಲಬುರಗಿ: ನನ್ನ ಮುಖ, ನಿಮ್ಮ ಮುಖನೂ ಮಿಣಿ ಮಿಣಿ ಅಂತಿದೆ. ಮಿಣಿ ಅಂದ್ರೆ ತಪ್ಪಾಗಿ ಬಿಡುತ್ತಾ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

    ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಿಣಿ ಮಿಣಿಯ ಬಗ್ಗೆ ನನಗೆ ಗೊತ್ತಿಲ್ಲ. ಕುಮಾರಸ್ವಾಮಿಯವರು ನಮ್ಮ ರಾಜ್ಯ ಮಾಜಿ ಮುಖ್ಯಮಂತ್ರಿ. ನಮ್ಮ ಪಕ್ಕದ ಕ್ಷೇತ್ರದವರು. ಅವರ ಕೈ ಕೆಳಗೆ ಕೆಲಸ ಮಾಡಿರೋರು. ಬಿಜೆಪಿ ನಾಯಕರು ಕೆಲವು ಮಾತುಗಳನ್ನಾಡುತ್ತಿದ್ದಾರೆ. ಮಂತ್ರಿಗಳು, ಶಾಸಕರು ಮಾತನಾಡಿದ ಮಾತುಗಳನ್ನು ಹೇಳುತ್ತಿಲ್ಲ. ಕುಮಾರಸ್ವಾಮಿ ಮಿಣಿಮಿಣಿ ಪೌಡರ್ ವಿಚಾರ ಅಪಹಾಸ್ಯ ಮಾಡುವುದು ಸರಿಯಲ್ಲ, ಎಂದು ಬಿಜೆಪಿಯವರಿಗೆ ಹೆಚ್‍ಡಿಕೆ ಪರ ಬ್ಯಾಟ್ ಬೀಸಿದರು. ಇದನ್ನೂ ಓದಿ: ಮಿಣಿ ಮಿಣಿ ಪೌಡರ್ ಹೇಳಿಕೆ ವೈರಲ್- ಹೆಚ್‍ಡಿಕೆ ಮೊದಲ ಪ್ರತಿಕ್ರಿಯೆ

    ದೇಶಕ್ಕೆ ಸಮಾಜಕ್ಕೆ ಅನುದಾನ, ಅಭಿವೃದ್ಧಿ, ಯುವಕರು, ದ್ವೇಷ ಸಾಧನೆ, ಕೇಸು ಇವುಗಳ ಬಗ್ಗೆ ಯಾರೂ ಮಾತಾಡುತ್ತಿಲ್ಲ. ಮಿಣಿ ಮಿಣಿ ಅಂದ್ರೆ ತಪ್ಪಾಗಿ ಬಿಡುತ್ತಾ ಎಂದು ಪ್ರಶ್ನಿಸಿದರು. ಅಲ್ಲದೆ ನನ್ನ ಮುಖನೂ ಮಿಣಿ ಮಿಣಿ ಅಂತಿದೆಪ್ಪಾ. ನಿಮ್ಮ ಮುಖನೂ ಮಿಣಿ ಮಿಣಿ ಅಂತಿದೆ. ಅದಕ್ಕೆ ಏನು ಮಾಡೋಕೆ ಆಗುತ್ತೆ. ಅದೊಂದು ವಿಷಯನಾ ಎಂದು ಮರು ಪ್ರಶ್ನೆ ಹಾಕುವ ಮೂಲಕ ಹೆಚ್‍ಡಿಕೆ ಹೇಳಿಕೆಯನ್ನು ಡಿಕೆಶಿ ಬೆಂಬಲಿಸಿದರು. ಇದನ್ನೂ ಓದಿ: ಮಿಣಿ ಮಿಣಿ ಪದ ಟ್ರೋಲ್, ಕನ್ನಡ- ಗ್ರಾಮೀಣ ಕರ್ನಾಟಕಕ್ಕೆ ಅಪಮಾನ: ಹೆಚ್‍ಡಿಕೆ

    ಕೆಪಿಸಿಸಿ ಅಧ್ಯಕ್ಷ ಆಯ್ಕೆಗೇ ನಾನು ಅರ್ಜಿನೂ ಹಾಕಿಲ್ಲ. ಆಕಾಂಕ್ಷಿನೂ ಅಲ್ಲ. ಸದ್ಯ ದಿನೇಶ ಗುಂಡೂರಾವ್ ಅವರು ನಮ್ಮ ನಾಯಕರು ಅವರೇ ಅಧ್ಯಕ್ಷರಾಗಿದ್ದಾರೆ. ಅವರು ರಾಜೀನಾಮೆ ನೀಡಿದರೂ ಅದನ್ನ ಪಕ್ಷದ ವರಿಷ್ಠರು ಅಂಗೀಕರಿಸಿಲ್ಲ. ಹೀಗಾಗಿ ಕೆಪಿಸಿಸಿ ಹುದ್ದೆ ಸಹ ಖಾಲಿ ಇಲ್ಲ. ಇನ್ನು ಆ ಹುದ್ದೆಯೇ ಕೇಳಿಲ್ಲ ಅಂದ್ರೆ ಯಾರು ತಾನೇ ಅಡ್ಡಗಾಲು ಹಾಕಲು ಸಾಧ್ಯ ಅಂತ ತಮ್ಮ ಎದುರಾಳಿ ಗುಂಪಿಗೆ ಡಿಕೆಶಿ ಟಾಂಗ್ ನೀಡಿದರು. ಇದನ್ನೂ ಓದಿ: ತುಳುನಾಡಿನ ಯಕ್ಷಗಾನದಲ್ಲೂ ಎಚ್‍ಡಿಕೆಯ ‘ಮಿಣಿ ಮಿಣಿ ಪೌಡರ್’ ಡೈಲಾಗ್ ಟ್ರೋಲ್ 

  • ಮಿಣಿಮಿಣಿ ಖ್ಯಾತಿಯ ಕುಮಾರಸ್ವಾಮಿಗೆ ಇದು ಶೋಭೆ ತರಲ್ಲ: ರವಿಕುಮಾರ್

    ಮಿಣಿಮಿಣಿ ಖ್ಯಾತಿಯ ಕುಮಾರಸ್ವಾಮಿಗೆ ಇದು ಶೋಭೆ ತರಲ್ಲ: ರವಿಕುಮಾರ್

    ಬೆಂಗಳೂರು: ಪೊಲೀಸ್ ಇಲಾಖೆಯನ್ನು ಅವಮಾನಿಸುವ ಕೆಲಸ ಮಿಣಿಮಿಣಿಯ ಖ್ಯಾತಿಯ ಕುಮಾರಸ್ವಾಮಿಗೆ ಶೋಭೆ ತರಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮನಸ್ಸೋ ಇಚ್ಚೆ ಮಾತಾಡುತ್ತಿದ್ದಾರೆ. ಬಾಂಬ್ ನಿಷ್ಕ್ರಿಯ ಮಾಡಿದ್ದಕ್ಕೆ ಪೋಲೀಸ್ ಇಲಾಖೆಯನ್ನು ಅಭಿನಂದಿಸಬೇಕಿತ್ತು.ಆದರೆ ಅವರನ್ನು ಅನುಮಾನಿಸುವ ಕೆಲಸ ಮಾಡಿದ್ದಾರೆ. ಇದು ಮಿಣಿಮಿಣಿ ಖ್ಯಾತಿಯ ಕುಮಾರಸ್ವಾಮಿಗೆ ಶೋಭೆ ತರಲ್ಲ ಎಂದಿದ್ದಾರೆ.

    ಕೊಲೆ ಬೆದರಿಕೆ ಇದ್ದರೆ ಸರ್ಕಾರಕ್ಕೆ ದೂರು ನೀಡಲಿ. ಸರ್ಕಾರ ಅವರಿಗೆ ಸೂಕ್ತ ಭದ್ರತೆ ಕೊಡುತ್ತೆ. ಈ ರೀತಿಯ ಮಾತುಗಳನ್ನು ಆಡುತ್ತಿರುವುದರಿಂದಲೇ ಅವರು ಒಂದೂ ಸ್ಥಾನ ಗೆಲ್ಲಲಿಲ್ಲ. ಹೀಗೆ ಮಾತಾಡುತ್ತಾ ಹೋದರೆ ಜೆಡಿಎಸ್ ನೆಲಕಚ್ಚಿ ಹೋಗುತ್ತದೆ. ಅವರು ರಾಜ್ಯದ ಘನತೆ ಎತ್ತಿ ಹಿಡಿಯುವ ಮಾತನ್ನಾಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

    ಮಿಣಿಮಿಣಿ ಪೌಡರ್ ಅನ್ನೋದು, ಹದಿನೈದು ದಿನಕ್ಕೊಮ್ಮೆ ಸಿಡಿ ಬಿಡುಗಡೆ ಮಾಡೋದನ್ನ ಬಿಡಲಿ ಎಂದು ರವಿಕುಮಾರ್ ಕಿಡಿಕಾರಿದ್ದಾರೆ.

  • ರಾಜಕೀಯ ಚಟುವಟಿಕೆಯಿಲ್ಲದೆ ಮೌನವಾದ ತೆನೆ ಹೊತ್ತ ಮಹಿಳೆ!

    ರಾಜಕೀಯ ಚಟುವಟಿಕೆಯಿಲ್ಲದೆ ಮೌನವಾದ ತೆನೆ ಹೊತ್ತ ಮಹಿಳೆ!

    ಬೆಂಗಳೂರು: ಲೋಕಸಭಾ ಚುನಾವಣೆ, ಸಮ್ಮಿಶ್ರ ಸರ್ಕಾರದ ಪತನ ಹಾಗೂ ಉಪ ಚುನಾವಣೆ ಸೋಲಿನ ನಂತರ ಜೆಡಿಎಸ್ ದಿನೇ ದಿನೇ ಮಂಕಾಗುತ್ತಿದೆ. ಪಕ್ಷದ ನಾಯಕರು ಆ್ಯಕ್ಟೀವ್ ಆಗಿಲ್ಲ. ಪಕ್ಷದ ಕಾರ್ಯಕರ್ತರು ಪಕ್ಷದ ಕಚೇರಿಗೂ ಬರುತ್ತಿಲ್ಲ. ಪಕ್ಷ ಸಂಘಟನೆ ನಿಂತಿಲ್ಲೇ ನಿಂತಿದೆ. ಶಾಸಕರು ಪಕ್ಷಕ್ಕೆ ಸಂಬಂಧ ಇಲ್ಲದಂತೆ ಮೌನವಾಗಿದ್ದಾರೆ. ಇದೆಲ್ಲದರ ಮಧ್ಯೆ ತೆನೆ ಹೊತ್ತ ಮಹಿಳೆ ಪ್ರಬಲ ನಾಯಕನಿಲ್ಲದೆ ಮೌನವಾಗಿದ್ದಾಳೆ.

    ಸೋತರು ಸದಾ ಪಕ್ಷ ಸಂಘಟನೆಯಲ್ಲಿ ಮುಂದಿರೋ ಮಾಜಿ ಪ್ರಧಾನಿ, ಪಕ್ಷದ ವರಿಷ್ಠ ದೇವೇಗೌಡರು ಅದ್ಯಾಕೋ ಪಕ್ಷದ ಸಂಘಟನೆಯಿಂದ ಕೊಂಚ ದೂರ ಉಳಿದಿದ್ದಾರೆ. ಆರೋಗ್ಯ ಸರಿಯಿಲ್ಲದ ಕಾರಣ ಕೇರಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿರಂತೂ ಪಕ್ಷದ ಚಟುವಟಿಕೆಯಿಂದಲೇ ದೂರ ಉಳಿದಿದ್ದಾರೆ. ಪಕ್ಷ ಇಂತಹ ಸಮಯದಲ್ಲಿ ಇದ್ದರು ಪ್ರವಾಸದ ಮೇಲೆ ಪ್ರವಾಸ ಮಾಡುತ್ತಿದ್ದಾರೆ.

    ಹುಟ್ಟು ಹಬ್ಬಕ್ಕಾಗಿ ಗೋವಾಗಿ ಫ್ಯಾಮಿಲಿ ಜೊತೆ ಹೋಗಿದ್ರು. ಈಗ ಹೊಸ ವರ್ಷದ ಆಚರಣೆಗೆ ಸಿಂಗಾಪುರ್ ಗೆ ಹಾರಿದ್ದು, ಪಕ್ಷ ಸಂಘಟನೆಯನ್ನೆ ಮರೆತಿದ್ದಾರೆ. ಮಾಜಿ ಸಚಿವ ರೇವಣ್ಣಗೆ ಹಾಸನವೇ ರಾಜ್ಯದಂತೆ ಅಲ್ಲಿಗೆ ಮಾತ್ರ ಸಿಮೀತವಾಗಿದ್ದಾರೆ. ಹೆಚ್‍ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಯುವ ಘಟಕದ ಅಧ್ಯಕ್ಷ ಆಗಿದ್ದರೂ ಇದುವರೆಗೂ ಒಂದೇ ಒಂದು ಸಭೆ ಮಾಡಿಲ್ಲ. ಯುವಕರನ್ನು ಆಕರ್ಷಣೆ ಮಾಡಿಲ್ಲ. ಕಾರ್ಯಕರ್ತರ ಜೊತೆಯೂ ಮಾತಾಡಿಲ್ಲ. ಸಂಸದ ಪ್ರಜ್ವಲ್ ರೇವಣ್ಣ ಅಲ್ಲಿ-ಇಲ್ಲಿ ಒಮ್ಮೊಮ್ಮೆ ರಾಜಕೀಯವಾಗಿ ಕಾಣಿಸಿಕೊಳ್ಳುತ್ತಾರೆ. ಮಾಜಿ ಸಚಿವರಂತೂ ಪಕ್ಷದ ಕಚೇರಿಗೂ ಮುಖ ಹಾಕಿಲ್ಲ.

    ಒಟ್ಟಿನಲ್ಲಿ ಪ್ರಬಲ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕಿದ್ದ ಜೆಡಿಎಸ್, ವಿರೋಧ ಪಕ್ಷ ಅನ್ನೋದು ಮರೆತು ಕುಳಿತಿದೆ. ಸರ್ಕಾರದ ವಿರುದ್ಧ ಒಂದೇ ಒಂದು ಹೋರಾಟ ಮಾಡಿಲ್ಲ. ಸರ್ಕಾರಕ್ಕೆ ಚಾಟಿ ಬೀಸುವ ಕೆಲಸವೂ ಮಾಡಿಲ್ಲ. ಜೆಡಿಎಸ್ ನಾಯಕರ ಈ ವರ್ತನೆ ನೋಡಿ ಪಕ್ಷದ ಕಾರ್ಯಕರ್ತರು ಬೇಸರಗೊಂಡಿದ್ದಾರೆ.

  • ಗೋವಾದಲ್ಲಿ ಹೆಚ್‍ಡಿಕೆ ಜಾಲಿ ಮೂಡ್

    ಗೋವಾದಲ್ಲಿ ಹೆಚ್‍ಡಿಕೆ ಜಾಲಿ ಮೂಡ್

    ಬೆಂಗಳೂರು: ಸಮಯ ಸಿಕ್ಕಾಗಲೆಲ್ಲ ವಿದೇಶಕ್ಕೆ ಹಾರಿ ರಿಲ್ಯಾಕ್ಸ್ ಆಗುತ್ತಿದ್ದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಇದೀಗ ಗೋವಾ ಕಡೆ ಮುಖ ಮಾಡಿದ್ದಾರೆ.

    ಇಂದು ಕುಟುಂಬ ಸಮೇತ ಗೋವಾ ಪ್ರವಾಸಕ್ಕೆ ತೆರಳಿದ್ದು, 3 ದಿನಗಳ ಕಾಲ ಕುಟುಂಬದ ಜೊತೆ ಸಮಯ ಕಳೆಯಲಿದ್ದಾರೆ. ಪತ್ನಿ ಅನಿತಾ ಕುಮಾರಸ್ವಾಮಿ, ಮಗ ನಿಖಿಲ್ ಜೊತೆ ಸಮಯ ಕಳೆಯಲು ಗೋವಾ ಪ್ರವಾಸ ಕೈಗೊಂಡಿದ್ದಾರೆ.

    ಉಪ ಚುನಾವಣೆಯಲ್ಲಿ ಸತತ ಓಡಾಟದಿಂದ ಕುಮಾರಸ್ವಾಮಿ ಬಳಲಿದ್ದಾರೆ. ವೈದ್ಯರ ಸಲಹೆ ಮೇರೆಗೆ ಕಳೆದ 10 ದಿನಗಳಿಂದ ಕುಮಾರಸ್ವಾಮಿ ರೆಸ್ಟ್ ನಲ್ಲಿದ್ದರು. ವಾತಾವರಣ ಚೇಂಜ್ ಆಗಬೇಕು ಅನ್ನೋ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಗೋವಾಕ್ಕೆ ತೆರಳಿದ್ದಾರೆ. ಮೂರು ದಿನ ಗೋವಾದ ವಿವಿಧ ತಾಣಗಳಲ್ಲಿ ಸುತ್ತಾಟ ನಡೆಸಲಿದ್ದಾರೆ.

    ಗೋವಾದಲ್ಲಿ ಮಾಜಿ ಸಿಎಂ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಾಧ್ಯತೆ. ಸೋಮವಾರ ಕುಮಾರಸ್ವಾಮಿ ಅವರ ಹುಟ್ಟುಹಬ್ಬವಿದ್ದು, ಮನೆಯ ಬಳಿ ಸಾವಿರಾರು ಜನ ಅಭಿಮಾನಿಗಳು ಬರುತ್ತಾರೆ. ಇದರಿಂದ ಕುಮಾರಸ್ವಾಮಿಗೂ ಸ್ವಲ್ಪ ಕಿರಿಕಿರಿ ಅನ್ನಿಸುತ್ತದೆ. ಹೀಗಾಗಿ ಮನೆಯಲ್ಲಿ ಹುಟ್ಟುಹಬ್ಬ ಆಚರಣೆ ಬೇಡ ಅಂತ ಗೋವಾಕ್ಕೆ ತೆರಳಿದ್ದಾರೆ ಅಂತ ಮೂಲಗಳು ತಿಳಿಸಿವೆ.

  • ಉದ್ವೇಗಕ್ಕೆ ಒಳಗಾಗ್ಬೇಡಿ, ವಿಜೃಂಭಿಸಬೇಡಿ: ಸಿಎಂ ಮನವಿ

    ಉದ್ವೇಗಕ್ಕೆ ಒಳಗಾಗ್ಬೇಡಿ, ವಿಜೃಂಭಿಸಬೇಡಿ: ಸಿಎಂ ಮನವಿ

    – ರಾಮಮಂದಿರದ ಜೊತೆಗೆ ಅನ್ನದಾತನ ಬದುಕು ಕಟ್ಟಲು ಶ್ರಮಿಸೋಣ- ಹೆಚ್‍ಡಿಕೆ

    ಬೆಂಗಳೂರು: ಅಯೋಧ್ಯೆ ತೀರ್ಪು ಇಂದು ಹೊರಬಿದ್ದಿದ್ದು, ದೇಶಾದ್ಯಂತ ಜನ ಸುಪ್ರೀಂ ತೀರ್ಪನ್ನು ಸ್ವಾಗತಿಸುತ್ತಿದ್ದಾರೆ. ಹಾಗೆಯೇ ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತೀರ್ಪನ್ನು ಗೌರವಿಸೋಣ ಎಂದಿದ್ದಾರೆ.

    ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸುಪ್ರೀಂ ತೀರ್ಪನ್ನು ಗೌರವಪೂರ್ವಕವಾಗಿ ಸ್ವಾಗತಿಸಿದ್ದು, ಅಯೋಧ್ಯೆ ವಿವಾದದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿಸೋಣ. ಇದು ಯಾರೊಬ್ಬರ ಗೆಲುವು ಅಥವಾ ಸೋಲು ಎಂದು ಭಾವಿಸಬೇಡಿ. ಉದ್ವೇಗಕ್ಕೆ ಒಳಗಾಗಬೇಡಿ, ಯಾರೂ ವಿಜೃಂಭಿಸಬೇಡಿ. ಸಮಾಜದ ಸಾಮರಸ್ಯ ಕದಡದೆ, ಶಾಂತಿ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಈ ಬಗ್ಗೆ ಟ್ವೀಟ್ ಮಾಡಿ, ರಾಮ ಜನ್ಮ ಭೂ ವಿವಾದದ ತೀರ್ಪನ್ನು ಎಲ್ಲರೂ ಗೌರವಿಸೋಣ. ಶಾಂತಿ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ಈ ದೇಶದ ಸಿದ್ಧಾಂತವನ್ನು ಪಾಲಿಸೋಣ. ನಾವೆಲ್ಲರೂ ಎಂದಿನಂತೆ ಸಾಮರಸ್ಯದಿಂದ ಬದುಕುತ್ತಾ ಅಭಿವೃದ್ಧಿಯ ಕಡೆ ಚಿಂತಿಸೋಣ. ಅಂದಹಾಗೆ “ಅನ್ನ ದೇವರ ಮುಂದೆ ಇನ್ಯಾವ ದೇವರಿಲ್ಲ” ರಾಮಮಂದಿರದ ಜೊತೆಗೆ ಅನ್ನದಾತನ ಬದುಕು ಕಟ್ಟಲು ಶ್ರಮಿಸೋಣ ಎಂದು ಬರೆದುಕೊಂಡಿದ್ದಾರೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂವ್ಯಾಜ್ಯದ ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸೋಣ. ಪ್ರಜಾಪ್ರಭುತ್ವದ ಧರ್ಮವಾದ ಸಂವಿಧಾನದ ಮೇಲೆ ಭರವಸೆ ಇಡೋಣ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡೋಣ ಎಂದು ಹೇಳಿದ್ದಾರೆ.

    ತೀರ್ಪಿನ ಪ್ರಮುಖ ಅಂಶಗಳು:
    ಮುಸ್ಲಿಮರಿಗೆ 5 ಎಕರೆ ಪರ್ಯಾಯ ಭೂಮಿ ನೀಡಬೇಕು. ದೇವಸ್ಥಾನ ನಿರ್ಮಾಣಕ್ಕೆ 3 ತಿಂಗಳಲ್ಲಿ ಸಮಿತಿ ರಚಿಸಬೇಕು. ರಾಮ ಮಂದಿರ ನಿರ್ಮಾಣ ಹೊಣೆ ಕೇಂದ್ರ ಸರ್ಕಾರಕ್ಕೆ ಸೇರಿದ್ದು, ದೇವಸ್ಥಾನ ನಿರ್ಮಾಣಕ್ಕೆ ಟ್ರಸ್ಟ್ ಸ್ಥಾಪಿಸಬೇಕು. ವಿವಾದಿತ 2.77 ಎಕರೆಯಲ್ಲಿ ಕೇವಲ ರಾಮಲಲ್ಲಾಗಷ್ಟೇ ಅಧಿಕಾರವಿದೆ.

    ಬಾಬ್ರಿ ಮಸೀದಿ ಭೂಮಿ ಮಾಲೀಕತ್ವ ಶಿಯಾ ವಕ್ಫ್ ಬೋರ್ಡಿಗೆ ಒಳಪಟ್ಟಿದ್ದಲ್ಲ ಮತ್ತು ಹಕ್ಕಿಲ್ಲ. ಬಾಬರ್ ಕಮಾಂಡರ್ ಮೀರ್ ಬಾಕಿ ಬಾಬ್ರಿ ಮಸೀದಿ ನಿರ್ಮಿಸಿದ್ದಾನೆ. ಜನರ ಧಾರ್ಮಿಕ ನಂಬಿಕೆಗಳನ್ನು ಗೌರವಿಸ್ತೇವೆ. ಪೂಜೆ ಮಾಡುವವರ ಹಕ್ಕನ್ನು ಮಾನ್ಯ ಮಾಡಿದ್ದೇವೆ.

    ಹಿಂದೂ ದೇವಾಲಯ ನಾಶದ ಬಗ್ಗೆ ಸಾಕ್ಷ್ಯ ಇಲ್ಲ. 2ನೇ ಶತಮಾನದಲ್ಲಿ ದೇವಸ್ಥಾನ ಇದ್ದ ಬಗ್ಗೆ ಸಾಕ್ಷಿ ಇದೆ. ಕೇವಲ ಪುರಾತತ್ವ ಸಾಕ್ಷ್ಯವನ್ನಷ್ಟೇ ಅವಲಂಬಿಸಲು ಸಾಧ್ಯವಿಲ್ಲ. ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದ ಎನ್ನುವ ನಂಬಿಕೆ ಅವಿವಾದಿತ.

    ರಾಮನ ಮೂರ್ತಿ ಇಟ್ಟ ವಿಚಾರದಲ್ಲಿ ಸುನ್ನಿ ವಕ್ಫ್ ಬೋರ್ಡ್ ವಾದವನ್ನು ಮಾನ್ಯ ಮಾಡುತ್ತೇವೆ. 1949ರಲ್ಲಿ ರಾಮನ ಮೂರ್ತಿ ಇಡಲಾಗಿತ್ತು. 1856ರವರೆಗೆ ನಮಾಜ್ ಮಾಡಲಾಗಿತ್ತು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ.

    ಮಸೀದಿಯ ಕೆಳಗಡೆ ಹಿಂದೂ ರಚನೆ ಇದೆ ಅಂತ ನಂಬಲು ಸಾಧ್ಯವಿಲ್ಲ. ವಿವಾದಿತ ಜಾಗದಲ್ಲಿ ಹಿಂದೂ-ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಬ್ರಿಟೀಷರು ಆ ಜಾಗವನ್ನು ಪ್ರತ್ಯೇಕಿಸಿ ಬೇಲಿ ಹಾಕಿಸಿದ್ದರು. ಮಸೀದಿಯ ಒಳಗೆ ಮುಸ್ಲಿಮರು, ಆವರಣದಲ್ಲಿ ಹಿಂದೂಗಳು ಪ್ರಾರ್ಥನೆ ಮಾಡುತ್ತಿದ್ದರು.

    ಮಸೀದಿಯ ಒಳಭಾಗದ ಬಗ್ಗೆಯೂ ವಿವಾದವಿದೆ. ಭೂ ಮಾಲೀಕತ್ವ ನಂಬಿಕೆ ಮೇಲೆ ಆಗುವುದಿಲ್ಲ. ಬಾಬ್ರಿ ಮಸೀದಿ ಧ್ವಂಸ ಮಾಡಿದ್ದು ಪ್ರಾರ್ಥನೆ ಹಕ್ಕಿನ ಉಲ್ಲಂಘನೆ. ಅಲಹಾಬಾದ್ ಕೋರ್ಟ್ ಮೂವರು ಅರ್ಜಿದಾರರಿಗೆ ಸಮಾನವಾಗಿ ಮೂರು ಭಾಗವಾಗಿ ಹಂಚಿಕೆ ಮಾಡಿ ತೀರ್ಪು ನೀಡಿದ್ದು ತಪ್ಪು. ಸಂವಿಧಾನದ ಮುಂದೆ ಎಲ್ಲಾ ಧರ್ಮಗಳೂ ಒಂದೇ. ಜಡ್ಜ್ ಗಳಿಗೆ ಎಲ್ಲಾ ಧರ್ಮಗಳು ಒಂದೇ. ನಿರ್ಮೋಹಿ ಅಖಾರದ ಅರ್ಜಿಯನ್ನು ನಾವು ಪರಿಗಣಿಸುವುದಿಲ್ಲ. ಆದರೆ ಕೇಂದ್ರ ಸರ್ಕಾರ ದೇವಾಲಯ ನಿರ್ಮಾಣ ಮಾಡುವ ಟ್ರಸ್ಟ್ ನಲ್ಲಿ ನಿರ್ಮೋಹಿ ಅಖಾರಕ್ಕೆ ಪ್ರಾತಿನಿಧ್ಯ ನೀಡಬೇಕು.

  • ಬರಗಾಲ, ನೆರೆಗೆ ಸ್ಪಂದಿಸದ್ದಕ್ಕೆ ಮೋದಿಗೆ ಜನ ಉತ್ತರ ನೀಡಿದ್ದಾರೆ – ಎಚ್‍ಡಿಕೆ

    ಬರಗಾಲ, ನೆರೆಗೆ ಸ್ಪಂದಿಸದ್ದಕ್ಕೆ ಮೋದಿಗೆ ಜನ ಉತ್ತರ ನೀಡಿದ್ದಾರೆ – ಎಚ್‍ಡಿಕೆ

    ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ತಂದಾಗ ಜನ ಹೇಗೆ ಉತ್ತರ ಕೊಟ್ಟರೋ ಮುಂದೆ ಬಿಜೆಪಿಗೂ ಇದೇ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಭವಿಷ್ಯ ನುಡಿದಿದ್ದಾರೆ.

    ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ನಗರದ ಜೆ.ಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ದ್ವೇಷ ರಾಜಕಾರಣವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಜನರು ಇವರಿಗೆ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ತಂದಾಗ ಜನ ಹೇಗೆ ಉತ್ತರ ಕೊಟ್ರೋ ಮುಂದೆ ಬಿಜೆಪಿಗೂ ಇದೇ ಆಗುತ್ತದೆ. ಇದು ಮೋದಿಗೆ ಎಚ್ಚರಿಕೆ ಸಂದೇಶ ಎಂದರು.

    ಎರಡು ರಾಜ್ಯ ಗೆಲ್ಲಲು ಪ್ರಧಾನಿ, ಗೃಹ ಸಚಿವರು ಪಣ ತೊಟ್ಟಿದ್ರು. ನಾನು ದೆಹಲಿಗೆ ಹೋದಾಗ ಕೆಲವರು ಹರ್ಯಾಣ ಸರ್ಕಾರ ಜನರ ಆಶೋತ್ತರಗಳನ್ನು ಈಡೇರಿಸಿಲ್ಲ ಹೀಗಾಗಿ ಕಷ್ಟ ಅಂತ ಹೇಳಿದ್ದರು. ಮಹಾರಾಷ್ಟ್ರದಲ್ಲಿ ಸೀಟು ಕಡಿಮೆ ಆಗಿದೆ. ಬರಗಾಲ, ನೆರೆಗೆ ಪ್ರಧಾನಿ ಸ್ಪಂದನೆ ನೀಡಿಲ್ಲ. ಜನರಿಗೆ ಭರವಸೆ ನೀಡೋ ಕೆಲಸ ಮಾಡಿಲ್ಲ. ಕೇವಲ ಆರ್ಟಿಕಲ್ 370 ಬಗ್ಗೆ ಮಾತ್ರ ಮಾತಾಡಿದರು. ಮುಂದೆ ಈ ಫಲಿತಾಂಶ ಏನ್ ಆಗುತ್ತೋ ಗೊತ್ತಿಲ್ಲ ಎಂದು ಹೇಳಿದ್ದರು. ಇಂದಿನ ತೀರ್ಪು ಬಿಜೆಪಿ ಪರ ಜನ ಇಲ್ಲ ಅನ್ನೋದು ತೋರಿಸುತ್ತದೆ. ಈ ತೀರ್ಪು ಮತದಾರರನ್ನ ದಾರಿ ತಪ್ಪಿಸಲು ಸಾಧ್ಯವಿಲ್ಲ ಅನ್ನೋ ಸಂದೇಶ ಕೊಟ್ಟಿದ್ದಾರೆ ಎಂದರು.

    ಈ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಭಯದಲ್ಲಿ ಚುನಾವಣಾ ಪ್ರಚಾರ ಮಾಡಿದವು. ದೇಶದ ವ್ಯವಸ್ಥೆ ಬಗ್ಗೆ ಜನರ ಮುಂದೆ ಇಡೋದಕ್ಕೆ ಹಾಗೂ ಕೆಲವರು ಚುನಾವಣೆ ಪ್ರಚಾರಕ್ಕೂ ಹೋಗದೆ ಭಯ ಬಿದ್ರು. ಚುನಾವಣೆ ಸಮೀಕ್ಷೆ ಕೂಡ ಬಿಜೆಪಿಗೆ ಬಹುಮತ ಅಂತ ಹೆಳುತ್ತಿತ್ತು. ಆದರೆ ಚುನಾವಣಾ ಸಮೀಕ್ಷೆ ಬುಡಮೇಲು ಆಗಿದೆ ಎಂದರು.

    ಆಳುವ ಪಕ್ಷಗಳಿಗೆ ಇದು ಎಚ್ಚರಿಕೆ ಸಂದೇಶವಾಗಿದ್ದು, ಕೇಂದ್ರದಲ್ಲಿ ಬಿಜೆಪಿ ಎರಡನೇ ಬಾರಿ ಬಂದಾಗಿನಿಂದ ದೇಶದ ವ್ಯವಸ್ಥೆ ಬದಲಾಗುತ್ತಿದೆ. ಸ್ವತಂತ್ರವಾಗಿ ಸಂಸ್ಥೆಗಳು ಕೆಲಸ ಮಾಡಲು ಆಗದ ರೀತಿ ಬಂದಿದೆ. ಅಘೋಷಿತ ತುರ್ತು ಪರಿಸ್ಥಿತಿ ದೇಶದಲ್ಲಿ ಇದೆ. ಇತ್ತೀಚೆಗೆ ಮಾಧ್ಯಮಗಳು ಸರ್ಕಾರದ ವಿಷಯಗಳನ್ನ ದಿಟ್ಟವಾಗಿ ಹೇಳುತ್ತಿವೆ. ಕೆಲ ಮಾಧ್ಯಮಗಳು ಸತ್ಯವನ್ನ ಹೇಳುತ್ತಿವೆ ಎಂದು ತಿಳಿಸಿದರು.

    ಬಿಜೆಪಿಯವರು ವಿರೋಧ ಪಕ್ಷ ಇರಬಾರದು ಅಂತ ಅಜೆಂಡಾ ಇಟ್ಟುಕೊಂಡು ಇದ್ದಾರೆ. ಆದರೆ ಇದು ಸಾಧ್ಯವಿಲ್ಲ ಅಂತ ಜನ ತೋರಿಸಿದ್ದಾರೆ. ಕೇಂದ್ರ ಸರ್ಕಾರ ತಮ್ಮ ನಡವಳಿಕೆ ಬದಲಾವಣೆ ಮಾಡಿಕೊಳ್ಳದೆ ಇದ್ದರೆ ಮುಂದೆ ಕಷ್ಟ ಅನ್ನೋ ಸಂದೇಶ ಜನ ಕೊಟ್ಟಿದ್ದಾರೆ. ವಿರೋಧ ಪಕ್ಷ ನಾಶ ಮಾಡಲು ಸಾಧ್ಯವಿಲ್ಲ ಅಂತ ಜನ ಸಂದೇಶ ಕೊಟ್ಟಿದ್ದಾರೆ ಎಂದು ಹೇಳಿದರು.

    ಈ ಫಲಿತಾಂಶ ಕರ್ನಾಟಕದ ಉಪ ಚುನಾವಣೆ ಮೇಲೆ ಪ್ರಭಾವ ಬೀರುತ್ತದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಶ್ರಮ ಪಟ್ಟು ಸರ್ಕಾರ ರಚನೆ ಮಾಡಿದ್ದಾರೆ. ಸ್ವಲ್ಪ ದಿನದಲ್ಲಿ 100 ದಿನ ಪೂರೈಸುತ್ತಿದ್ದಾರೆ. ಎಲ್ಲವನ್ನೂ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಬಿಜೆಪಿಗೆ ಉಪ ಚುನಾವಣೆ ಸುಲಭವಲ್ಲ. ಉಪ ಚುನಾವಣೆ ನಡೆಯುತ್ತಾ, ಮಧ್ಯಂತರ ಚುನಾವಣೆ ಆಗುತ್ತಾ ನೋಡಬೇಕು. ತೀರ್ಪು ಏನು ಬರುತ್ತೋ ನೋಡೋಣ ಅಂದರು.

    ದೇಶದಲ್ಲಿ ಅಮಾಯಕರ ಮೇಲೆ ಕಾನೂನು ಬಾಹಿರವಾಗಿ ದಬ್ಬಾಳಿಕೆ ನಡೆಯುತ್ತಿದೆ. ಸಾಂವಿಧಾನಿಕ ಸಂಸ್ಥೆಗಳು ಇಂದು ಕಪಿಮುಷ್ಠಿಯಲ್ಲಿ ಇವೆ. ದೇಶದಲ್ಲಿ ವಿಪಕ್ಷಗಳು ಅಧಿಕಾರಕ್ಕೆ ಬರಬೇಕು ಅನ್ನೋದಕ್ಕಿಂತ ಒಟ್ಟಾಗಿ ಹೋಗಬೇಕು ಅನ್ನೋ ಸಂದೇಶ ಇವತ್ತು ಸಿಕ್ಕಿದೆ. ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ಪಾಠ ಕಲಿಸ್ತಾರೆ. ಹರ್ಯಾಣ, ಮಹಾರಾಷ್ಟ್ರದಲ್ಲಿ ಆಪರೇಷನ್ ಗೆ ಬಲಿಯಾದವರು ಇವತ್ತು ಸೋತಿದ್ದಾರೆ. ರಾಜ್ಯದಲ್ಲೂ ಇದೇ ಪರಿಸ್ಥಿತಿ ನಿರ್ಮಾಣ ಆಗುತ್ತೆ ಎಂದರು.

  • ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಲಘುವಾಗಿ ಪರಿಗಣಿಸ್ಬೇಡಿ: ಎಚ್‍ಡಿಕೆ

    ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಲಘುವಾಗಿ ಪರಿಗಣಿಸ್ಬೇಡಿ: ಎಚ್‍ಡಿಕೆ

    ಬೆಂಗಳೂರು: ನೂತನ ಸರ್ಕಾರದ ಬಗ್ಗೆ ಯಾರಿಗೂ ಅನುಮಾನಬೇಡ, ರಾಜ್ಯದ ಜನತೆಗೆ ಸುಭದ್ರ ಸರ್ಕಾರ ನೀಡುತ್ತೇವೆ ಅಂತಾ ಭರವಸೆ ನೀಡುತ್ತೇನೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದಾಗಿ ಮೈತ್ರಿ ಸರ್ಕಾರ ರಚನೆಯಾಗಿದೆ. ಯಾರು ಸಹ ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಲಘುವಾಗಿ ಪರಿಗಣಿಸಬೇಡಿ ಅಂತಾ ಎಚ್ಚರಿಕೆ ನೀಡಿದ್ರು.

    ನಾಡಿದ್ದು ನಾವು ವಿಶ್ವಾಸಮತ ಪಡೆಯುವಲ್ಲಿ ಯಶಸ್ವಿಯಾಗುತ್ತವೆ. ರಾಜೀನಾಮೆಗೂ ಮುನ್ನ ಮಾಜಿ ಸಿಎಂ ಯಡಿಯೂರಪ್ಪ ಅಧಿವೇಶನದಲ್ಲಿ ಭಾವನಾತ್ಮಕವಾಗಿ ಮಾತನಾಡಿ, ಸರ್ಕಾರದ ವಿರುದ್ಧ ರಸ್ತೆಗಿಳಿದು ಪ್ರತಿಭಟನೆ ಮಾಡುತ್ತೇವೆ ಅಂತಾ ಹೇಳಿದ್ರು. ರಸ್ತೆಗಿಳಿದು ಪ್ರತಿಭಟನೆ ಮಾಡುವ ಅವಕಾಶವೇ ನಮ್ಮ ಸರ್ಕಾರ ನೀಡಲ್ಲ ಅಂತಾ ಟಾಂಗ್ ಕೊಟ್ಟರು.

    ಎರಡು ಪಕ್ಷಗಳಿಗೆ ಕ್ರೆಡಿಟ್: ಇದು ಮೈತ್ರಿ ಸರ್ಕಾರವಾಗಿದ್ದು, ಎಲ್ಲವನ್ನು ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲರ ವಿಶ್ವಾಸವನ್ನೇ ತೆಗೆದುಕೊಂಡು ಯೋಜನೆಗಳನ್ನು ಜಾರಿ ಮಾಡುತ್ತೇವೆ. ರಾಜ್ಯದ ಅಭಿವೃದ್ಧಿಗಾಗಿ ಜಾರಿಯಾಗುವ ಯೋಜನೆಗಳ ಕ್ರೆಡಿಟ್ ಎರಡೂ ಪಕ್ಷಗಳಿಗೆ ಹೋಗಬೇಕು. ರೈತರ ಸಾಲ ಮನ್ನಾ ಮಾಡಲ್ಲ ಅಂತಾ ನಾನು ಎಲ್ಲಿಯೂ ಹೇಳಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಎರಡೂ ಪಕ್ಷಗಳ ಪ್ರಣಾಳಿಕೆಗಳನ್ನು ಜಾರಿಗೊಳಿಸಬೇಕು. ನನ್ನ ಬಳಿಯೂ ಯಾವ ರೀತಿಯಲ್ಲಿ ಸಾಲಮನ್ನಾ ಮಾಡಬೇಕೆಂಬ ಬ್ಲೂ ಪ್ರಿಂಟ್ ಬಳಿ ಇದೆ. ಒಬ್ಬ ಸಾಮಾನ್ಯ ಪತ್ರಕರ್ತ ಸಹ ನನ್ನ ಕಚೇರಿಗೆ ಬಂದು ನನ್ನ ತಪ್ಪುಗಳ ಬಗ್ಗೆ ಮಾಹಿತಿ ನೀಡಬಹುದು. ಇದು ನನಗೆ ರಾಜ್ಯದ ಜನತೆಗೆ ಉತ್ತಮ ಸರ್ಕಾರ ನೀಡುವಲ್ಲಿ ಸಹಾಯವಾಗಲಿದೆ ಅಂತಾ ತಿಳಿಸಿದ್ರು.

    ನಾನು ಹಿಂದೆ ಸುವರ್ಣ ಗ್ರಾಮ ಯೋಜನೆ ಅಂತಹ ಹಲವು ಕಾರ್ಯಕ್ರಮಗಳನ್ನು ಆರಂಭಿಸಿದ್ದೆ. ಆದ್ರೆ ನಮ್ಮ ಸರ್ಕಾರದ ಬಳಿಕ ಎಲ್ಲವೂ ನಿಂತು ಹೋಗಿವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಬರಲ್ಲ ಪರಮೇಶ್ವರ್ ಅವರ ಬದಲಾಗಿ ನಾನೇ ಭರವಸೆ ನೀಡುತ್ತೇನೆ ಅಂತಾ ಹೇಳಿದ್ರು.

    ಕೆಲವು ಸ್ವಾಮೀಜಿಗಳು ನಿಮಗೆ ಜಾತಿ ವ್ಯಾಮೋಹವಿದ್ರೆ ಅದನ್ನ ನಿಮ್ಮ ಕ್ಷೇತ್ರದಲ್ಲಿ ಇಟ್ಟುಕೊಳ್ಳಿ. ನಾನು ರಾಜಕಾರಣದಲ್ಲಿ ಯಾರನ್ನು ಜಾತಿಯಿಂದ ಗುರುತಿಸಿಲ್ಲ. ಇವತ್ತು ಬೆಳಗ್ಗೆ ಒಬ್ಬ ಹಿರಿಯ ಸ್ವಾಮೀಜಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಬಗ್ಗೆ ಅತ್ಯಂತ ಕೆಟ್ಟದಾಗಿ ಟೀಕಿಸಿದ್ರು. ಹೀಗೆ ಟೀಕೆ ಮಾಡುವವರು ರಾಜಕಾರಣಕ್ಕೆ ಬನ್ನಿ, ಗುರುವಿನ ಸ್ಥಾನದಲ್ಲಿದ್ದವರು ರಾಜಕಾರಣದ ಬಗ್ಗೆ ಟೀಕಿಸಬಾರದು. ನಿಮ್ಮ ಕೆಲಸ ಧರ್ಮದ ಪ್ರಚಾರ, ನಾಡಿನ ಜನತೆಗೆ ಒಳ್ಳೆಯ ಮಾರ್ಗದಲ್ಲಿ ನಡೆಯುವಂತೆ ಆಶೀರ್ವದಿಸಬೇಕು. ನಾನು ಮಠಾಧೀಶರಿಗೆ ಗೌರವ ನೀಡುವವನು. ಈ ರೀತಿಯ ಬಗ್ಗೆ ಮಾತನಾಡುವದರಿಂದ ಜನರು ನಿಮ್ಮ ಬಗ್ಗೆ ಏನು ಯೋಚನೆ ಮಾಡ್ತಾರೆ ಅಂತಾ ತಿಳಿದುಕೊಳ್ಳಿ. ಸ್ವಾಮೀಜಿಗಳು ರಾಜಕೀಯ ಪಕ್ಷಗಳ ಬಗ್ಗೆ ಲಘುವಾಗಿ ಮಾತನಾಡೋದ್ನು ನಿಲ್ಲಿಸಬೇಕು ಎಂದು ಹೇಳಿದರು.

    ಕುದುರೆಯನ್ನು ಕಟ್ಟಿ ಹಾಕಿದ್ದೇವೆ: ಕರ್ನಾಟಕದಲ್ಲಿ ಸಂಪೂರ್ಣ ಮುಳುಗಿ ಹೋಗುತ್ತಿದ್ದ ಬಿಜೆಪಿ ನನ್ನ ಲಾಭ ಪಡೆದುಕೊಂಡು ಸರ್ಕಾರ ರಚನೆ ಮಾಡಿತ್ತು. ಈಗ ನರೇಂದ್ರ ಮೋದಿಯವರ ಅಶ್ವಮೇಧ ಕುದುರೆಯನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆಯಾಗಿ ಕಟ್ಟಿ ಹಾಕಿದೆ. ಸದ್ಯ ಕುದುರೆಯನ್ನು ನಾವು ಕಟ್ಟಿಹಾಕಿದ್ದು, ಮುಂದಿನ ದಿನಗಳಲ್ಲಿ ಅಮಿತ್ ಶಾ ಜೀವವಿಲ್ಲದ ಕುದುರೆಯನ್ನು ತೆಗೆದುಕೊಂಡು ಪ್ರಧಾನಿಗಳ ಬಳಿ ಹೋಗಬಹುದು. ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಯಾರ ಬಗ್ಗೆ ಲಘುವಾಗಿ ಮಾತನಾಡಬೇಡಿ ಅಂತಾ ವಾಗ್ದಾಳಿ ನಡೆಸಿದ್ರು.

    ಬಿಜೆಪಿ ಐದು ವರ್ಷದ ಆಡಳಿತದಲ್ಲಿ ಬೆಂಗಳೂರೂ ಜನರಿಗೆ ಏನು ಕೊಟ್ಟಿದ್ದೀರಿ. ಮಹದಾಯಿ ಬಗ್ಗೆ ಭರವಸೆ ಕೊಟ್ಟಿದ್ದರಿಂದ ಅಲ್ಲಿಯ ಜನರು ಬಿಜೆಪಿಗೆ ಮತ ಹಾಕಿದ್ದಾರೆ. ಮಹದಾಯಿ ನ್ಯಾಯಾಧಿಕರಣ ತನ್ನ ತೀರ್ಪನ್ನು ಕೊಡುವ ಬದಲು, ಮೋದಿಯವರು ಮಧ್ಯಸ್ಥಿಕೆ ವಹಿಸಬೇಕಿತ್ತು. ಈ ಸಂಬಂಧ ದೇವೇಗೌಡರು ಪ್ರಧಾನಿಗಳನ್ನು ಭೇಟಿ ಮಾಡಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ನ್ಯಾಯಾಧಿಕರಣ ತೀರ್ಪು ಬಂದ ಬಳಿಕ ಚರ್ಚೆ ನಡೆಸಲಾಗುವುದು. ಲಿಂಗಾಯತ ವಿವಾದಕ್ಕಿಂತಲೂ ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ಮೊದಲು ಎಲ್ಲವನ್ನು ಪರಿಹಾರವಾದ ಬಳಿಕ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುತ್ತೇವೆ ಅಂತಾ ಸ್ಪಷ್ಟಪಡಿಸಿದ್ರು.