Tag: HDKumaraswamy

  • ನಿಮ್ಮ ಜೊತೆ ಯೋಗ್ಯನಾಗಿ ಕೆಲಸ ಮಾಡಲು ಇದೊಂದು ಬಾರಿ ಅವಕಾಶ ಮಾಡಿಕೊಡಿ: ನಿಖಿಲ್‌

    ನಿಮ್ಮ ಜೊತೆ ಯೋಗ್ಯನಾಗಿ ಕೆಲಸ ಮಾಡಲು ಇದೊಂದು ಬಾರಿ ಅವಕಾಶ ಮಾಡಿಕೊಡಿ: ನಿಖಿಲ್‌

    – ಮಂಡಿಯೂರಿ ಜನತೆಗೆ ನಮಸ್ಕರಿಸಿದ ನಿಖಿಲ್‌ – ರೇವತಿ

    ರಾಮನಗರ: ಹಳ್ಳಿ-ಹಳ್ಳಿಗಳಲ್ಲಿ ನಿಖಿಲ್ ಗೆಲ್ಲಬೇಕು ಎಂದು ಜನ ಅಂದುಕೊಂಡಿದ್ದಾರೆ. ಇದು ನಿಖಿಲ್ ಭವಿಷ್ಯದ ಪ್ರಶ್ನೆ ಅಲ್ಲ, ಪ್ರಾದೇಶಿಕ ಪಕ್ಷದ ಅಸ್ತಿತ್ವದ ಪ್ರಶ್ನೆಯಾಗಿದೆ. ಈ ಭೂಮಿ ಮೇಲೆ ನಿಮ್ಮ ಜೊತೆ ಯೋಗ್ಯನಾಗಿ ಕೆಲಸ ಮಾಡಲು ಮೂರೂವರೆ ವರ್ಷ ಅವಕಾಶ ಮಾಡಿಕೊಡಿ ಎಂದು ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಜನತೆಗೆ ಮನವಿ ಮಾಡಿದ್ದಾರೆ. ಇದೇ ವೇಳೆ ಪತ್ನಿ ರೇವತಿ ಜೊತೆಗೂಡಿ ನಿಖಿಲ್‌ ಮಂಡಿಯೂರಿ ಜನರಿಗೆ ನಮಸ್ಕರಿಸಿದ್ದಾರೆ.

    ರಾಮನಗರದಲ್ಲಿ (Ramanagara) ಪ್ರಚಾರದ ವೇಳೆ ಮಾತನಾಡಿದ ಅವರು, ನಾನು ಭಾವನಾತ್ಮಕ ಜೀವಿ, ಕ್ಷಮಿಸಿ ಇದರ ಹಿಂದೆ ಬೇರೆ ಉದ್ದೇಶ ಇಲ್ಲ. ಪ್ರತೀ ಹಳ್ಳಿಯಲ್ಲಿ ತಾಯಂದಿರು ಆಶೀರ್ವಾದ ಮಾಡಿದರು. ಪ್ರತೀ ದೇವಸ್ಥಾನಗಳ ದೇವರು ಆಶೀರ್ವಾದ ಮಾಡಿದ್ದಾರೆ. ನನಗೊಂದು ಅವಕಾಶ ಮಾಡಿಕೊಡುವ ಆತ್ಮಸ್ಥೈರ್ಯ ಇಲ್ಲಿನ ಜನ ಮೂಡಿಸಿದ್ದಾರೆ ಅದಕ್ಕಾಗಿ, ಇದನ್ನು ಕಂಡು ನಾನೆಂಥ ಪುಣ್ಯವಂತ ಅನ್ನಿಸಿತು. ಹಳ್ಳಿ ಹಳ್ಳಿಗಳಲ್ಲಿ ನಿಖಿಲ್ ಗೆಲ್ಲಬೇಕೆಂದು ಜನ ಅಂದುಕೊಂಡಿದ್ದಾರೆ. ಇದು ನಿಖಿಲ್ ಭವಿಷ್ಯದ ಪ್ರಶ್ನೆ ಅಲ್ಲ, ಪ್ರಾದೇಶಿಕ ಪಕ್ಷದ ಅಸ್ತಿತ್ವದ ಪ್ರಶ್ನೆಯಾಗಿದೆ. ಮೂರೂವರೆ ವರ್ಷ ಅವಕಾಶ ಮಾಡಿಕೊಡಿ ನಾನು ಹೇಗೆ ಕೆಲಸ ಮಾಡುತ್ತೇನೆ ಎಂದು ನೀವೇ ನೋಡಿ ಎಂದು ವೇದಿಕೆ ಮೇಲೆ ಪತಿ-ಪತ್ನಿ ಜೊತೆಯಾಗಿ ಕೈಮುಗಿದು ಮತ ಯಾಚನೆ ಮಾಡಿದರು. ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆಗೆ 5,000 ಕೋಟಿ ಅಕ್ರಮವಾಗಿ ಕಳಿಸಿದ್ದಾರೆ: ಮೋದಿ ಬಳಿಕ ಹೆಚ್‌ಡಿಡಿ ಬಾಂಬ್‌

    ದೇವೇಗೌಡರು ಮೊಮ್ಮಗನನ್ನು ಗೆಲ್ಲಿಸಲು ಆಂಬುಲೆನ್ಸ್‌ನಲ್ಲಿ ಬರುತ್ತಾರೆ ಎಂದು ವಿರೋಧ ಪಕ್ಷದ ನಾಯಕರೊಬ್ಬರು ಹೇಳಿದ್ದರು. ಚನ್ನಪಟ್ಟಣದಲ್ಲಿ (Channapatna) ನಿಖಿಲ್ ನಿಂತಿದ್ದಾನೆ ಎಂದು ದೇವೇಗೌಡರು ಬಂದು ಪ್ರಚಾರ ಮಾಡುತ್ತಿದ್ದಾರೆ ಅನ್ನುವ ಪ್ರಶ್ನೆ ಅಲ್ಲ. ಯಾವುದೇ ಸಾಮಾನ್ಯ ಕಾರ್ಯಕರ್ತ ನಿಂತಿದ್ದರೂ ದೇವೇಗೌಡರು (HDDevegowda) ಪ್ರಚಾರಕ್ಕೆ ಬರುತ್ತಿದ್ದರು. ಈ ಜಿಲ್ಲೆಗೂ ದೇವೇಗೌಡರಿಗೂ ಬಹಳ ಹಳೆಯ ನಂಟಿದೆ. ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದೇನೆ. ಈಗ ನಾನು ನಿಲ್ಲುವುದಿಲ್ಲ, ಪಕ್ಷ ಕಟ್ಟೋದಿಕ್ಕೆ ಸ್ವಲ್ಪ ಸಮಯ ಕೊಡಿ ಎಂದು ಹೇಳಿದ್ದೆ. ನಂತರ ಏನೇನಾಯ್ತು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಸದ್ಯದಲ್ಲೇ ನನ್ನ ನಿಶ್ಚಿತಾರ್ಥ: ಮದುವೆಯಾಗಲಿರುವ ಹುಡುಗನ ಬಗ್ಗೆ ಸೋನು ಓಪನ್‌ ಟಾಕ್

    ವರದೇಗೌಡರು ನಮ್ಮ ಪಕ್ಷದಿಂದ ಶಾಸಕರಾಗಿ ಮನೆ ಮಗನಾಗಿ ಇಲ್ಲಿ ಕೆಲಸ ಮಾಡಿದವರು. ಇವರೆಲ್ಲ ನನಗೆ ಆದರ್ಶ ಹಾಗೂ ಸ್ಫೂರ್ತಿಯಾಗಿದ್ದಾರೆ. ಈ ಚುನಾವಣೆ ನನ್ನ ಬದುಕಿನ ಬಹುದೊಡ್ಡ ಅಗ್ನಿಪರೀಕ್ಷೆಯಾಗಿದೆ. ನೀನು ಇಲ್ಲಿ ಯಾವ ಪಾತ್ರ ಮಾಡ್ತೀಯಪ್ಪ ಎಂದು ಹಲವರು ಕೇಳುತ್ತಾರೆ. ಕುರುಕ್ಷೇತ್ರ ಸಿನೆಮಾದಲ್ಲಿ ನಾನು ಅಭಿಮನ್ಯು ಆಗಿದ್ದೆ. ನಾನು ಅರ್ಜುನನಾ ಅಥವಾ ಅಭಿಮನ್ಯುನಾ ಎಂದು ಚನ್ನಪಟ್ಟಣ ಜನರೇ ನಿರ್ಧಾರ ಮಾಡುತ್ತಾರೆ. ನನಗೆ ಗೊತ್ತಿರುವುದು ಮನುಷ್ಯತ್ವ ಮಾತ್ರ ಎಂದರು. ಇದನ್ನೂ ಓದಿ: ರಾಮಮಂದಿರ ಸೇರಿ ಹಿಂದೂ ದೇವಾಲಯಗಳ ಮೇಲೆ ದಾಳಿ ಬೆದರಿಕೆ; ಖಲಿಸ್ತಾನಿ ಉಗ್ರ ಪನ್ನುನ್ ವೀಡಿಯೋ ರಿಲೀಸ್‌

    ಇದು ಕುಮಾರಣ್ಣ (H D Kumaraswamy) ಅವರ ಸ್ವಕ್ಷೇತ್ರ, ಅವರು ಸಂಸದರಾದ ಹಿನ್ನೆಲೆ ಕ್ಷೇತ್ರ ತೆರವಾಯಿತು. ಕಳೆದ ಎರಡು ಮೂರು ತಿಂಗಳ ಬೆಳವಣಿಗೆ ಎಲ್ಲರಿಗೂ ಗೊತ್ತಿದೆ. ಈ ಉಪಚುನಾವಣೆ ನನ್ನ ಪಾಲಿಗೆ ಅನಿರೀಕ್ಷಿತವಾಗಿದೆ. ಕಳೆದೆರಡು ಸೋಲುಗಳಿಂದ ನನ್ನ ಎದೆ ಗುಂದಲಿಲ್ಲ. ಮಂಡ್ಯದಲ್ಲಿ 5.45 ಲಕ್ಷ ಜನ ಆಶೀರ್ವಾದ ಮಾಡಿದರು, ಆದರೆ ವಿಪರ್ಯಾಸ ಗೆಲ್ಲಲು ಆಗಲಿಲ್ಲ. ಅದಕ್ಕೆ ಅನೇಕ ಕಾರಣ ಇದ್ದವು ಈಗ ಅದನ್ನು ಮಾತನಾಡುವುದಿಲ್ಲ. ರಾಮನಗರದಲ್ಲೂ ಕೊನೆಯ ಕ್ಷಣದಲ್ಲಿ ನನ್ನ ಸ್ಪರ್ಧೆಯ ತೀರ್ಮಾನ ಆಯ್ತು. 76.5 ಸಾವಿರ ಜನ ನನಗೆ ಆಶೀರ್ವಾದ ಮಾಡಿದರು. ಅಲ್ಲಿನ ಸೋಲಿಗೆ ಕಾಂಗ್ರೆಸ್ ಗಿಫ್ಟ್ ಕೂಪನ್ ಕಾರ್ಡ್ ಕಾರಣವಾಗಿದೆ. ಯಾವ ಕೂಪನ್, ಯಾವ ಆಮಿಷಕ್ಕೂ ಚನ್ನಪಟ್ಟಣದ ಜನ ಬಲಿಯಾಗುವುದಿಲ್ಲ ಅನ್ನುವ ವಿಶ್ವಾಸ ನನಗಿದೆ ಎಂದು ತಿಳಿಸಿದರು. ಇದನ್ನೂ  ಓದಿ: 6.79 ಲಕ್ಷಕ್ಕೆ 5 ಸ್ಟಾರ್ ಸೇಫ್ಟಿ ರೇಟೆಡ್ ಡಿಸೈರ್ ಕಾರು ಬಿಡುಗಡೆ

  • ಕುಮಾರಣ್ಣ ರಾಜ್ಯಕ್ಕೆ ಬೇಕೆಂದು ನಮ್ಮ ಶಾಸಕರು, ಮುಖಂಡರ ಕೂಗಾಗಿದೆ: ನಿಖಿಲ್

    ಕುಮಾರಣ್ಣ ರಾಜ್ಯಕ್ಕೆ ಬೇಕೆಂದು ನಮ್ಮ ಶಾಸಕರು, ಮುಖಂಡರ ಕೂಗಾಗಿದೆ: ನಿಖಿಲ್

    – ನನ್ನ ಸ್ಪರ್ಧೆಗೆ ತೆರೆ ಬಿದ್ದಿದೆ

    ಮಂಡ್ಯ: ಕುಮಾರಣ್ಣ ರಾಜ್ಯಕ್ಕೆ ಬೇಕು ಅಂತಾ ನಮ್ಮ ಶಾಸಕರು ಮತ್ತು ಮುಖಂಡರ ಕೂಗಾಗಿದೆ ಎಂದು ಜೆಡಿಎಸ್ (JDS) ಯುವನಾಯಕ ನಿಖಿಲ್ ಕುಮಾರಸ್ವಾಮಿ  (Nikhil Kumaraswamy) ತಿಳಿಸಿದ್ದಾರೆ.

    ಪಾಂಡವಪುರದಲ್ಲಿ (Pandavapura) ಸುದ್ದುಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ (Kumaraswamy)  ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದರ ಬಗ್ಗೆ ಮಾತನಾಡಿದ್ದಾರೆ. ಕುಮಾರಣ್ಣ ಅವರಿಗೆ ಹಲವು ಲೋಕಸಭಾ ಕ್ಷೇತ್ರದಲ್ಲಿ ಒತ್ತಾಯ ಇದೆ. ಎಲ್ಲಿ ಅಂತಾ ಅವರು ಸ್ಪರ್ಧೆ ಮಾಡ್ತಾರೆ. ಕುಮಾರಣ್ಣ ನಮ್ಮ ರಾಜ್ಯಕ್ಕೆ ಬೇಕು. ಅವರು ಲೋಕಸಭಾ ಸ್ಪರ್ಧೆ ಮಾಡೋದು ಬಿಡೋದು ಮುಂದೆ ಗೊತ್ತಾಗುತ್ತೆ. ಅವರ ಸ್ಪರ್ಧೆ ಬಗ್ಗೆ ನನಗೆ ಗೊತ್ತಿಲ್ಲ. ಅದು ಪಕ್ಷದ ವರಿಷ್ಠರ ತೀರ್ಮಾನ. ಅವರು ನಮ್ಮ ರಾಜ್ಯಕ್ಕೆ ಬೇಕು ಅಂತಾ ಶಾಸಕರು ಮುಖಂಡರ ಕೂಗಾಗಿದೆ ಎಂದು ಸುಳಿವು ನೀಡಿದ್ದಾರೆ. ಇದನ್ನೂ ಓದಿ: ಕುಟುಂಬ ಸಮೇತರಾಗಿ ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ದೆಹಲಿ ಸಿಎಂ

    ಕೆಲವರು ಕುಮಾರಣ್ಣ ಕೇಂದ್ರಕ್ಕೆ ಹೋಗಲಿ ಅಂತಾರೆ. ಕೆಲವರು ರಾಜ್ಯದಲ್ಲಿ ಉಳಿದುಕೊಳ್ಳಲಿ ಅಂತಾರೆ. ಅಂತಿಮವಾಗಿ ಏನ್ ಆಗುತ್ತೆ ಎನ್ನೋದು ಕಾದು ನೋಡೋಣ. ನನ್ನ ಸ್ಪರ್ಧೆಗೆ ತೆರೆ ಬಿದ್ದಿದೆ. ಏನೇ ಕೇಳಿದ್ರು ಇದೇ ಉತ್ತರ. 2019ರ ಸೋಲಿನ ಬಗ್ಗೆ ಚಿಂತಿಸಿ ಫಲ ಏನು ಇಲ್ಲ. ಮುಂದೆ ಆಗುವುದರ ಬಗ್ಗೆ ಯೋಚನೆ ಮಾಡಬೇಕು ಅಷ್ಟೇ. ನಾನು ಪಾಸಿಟಿವ್ ಡೈರಕ್ಷನ್ ಅಲ್ಲಿ ಹೋಗಬೇಕೆಂಬ ಮನಸ್ಥಿತಿಯಲ್ಲಿ ಇದ್ದೀನಿ. ಕಳೆದು ಹೋಗಿರುವ ವಿಚಾರದ ಬಗ್ಗೆ ನಾನು ಪ್ರಾಮುಖ್ಯತೆ ಕೊಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಇಡಿ, ಸಿಬಿಐ ಮೂಲಕ ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ: ಡಿಕೆಶಿ

    ಸುಮಲತಾ ಬಗ್ಗೆ ಮಾತನಾಡಿ, ಬಿಜೆಪಿ ಸುಮಲತಾ ಅವರ ಟಿಕೆಟ್ ಕೇಳಲು ಅಧಿಕಾರ ಇದೆ ಕೇಳ್ತಾರೆ. ಅಂತಿಮವಾಗಿ ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ. ಮೈತ್ರಿ ಬಗ್ಗೆ ಮಾತನಾಡುವವರ ಬಗ್ಗೆ ಅಮಿತ್ ಶಾ ಅವರು ಬಿಜೆಪಿ ನಾಯಕರಿಗೆ ಸಂದೇಶ ನೀಡಿದ್ದಾರೆ. ನಮ್ಮ ಪಕ್ಷದಲ್ಲಿ ಮೈತ್ರಿ ಬಗ್ಗೆ ಗೊಂದಲ ಇಲ್ಲ. ನಮ್ಮಲ್ಲಿ ಯಾರು ಅಪಸ್ವರದ ಮಾತನ್ನು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಗೃಹ ಇಲಾಖೆ ಕಾರ್ಯದರ್ಶಿಗೆ ನಿಂದನೆ- ದೆಹಲಿ ಪೊಲೀಸರಿಂದ ಆರೋಪಿ ಬಂಧನ

    ಡಿ.ಸಿ.ತಮ್ಮಣ್ಣ, ಪುಟ್ಟರಾಜು, ಸುರೇಶ್‌ಗೌಡ ಎಲ್ಲರೂ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಲಿ, ಅರ್ಹರಿದ್ದಾರೆ. ಪಕ್ಷದ ವರಿಷ್ಠರು ಕೇಂದ್ರದ ನಾಯಕರು ತೀರ್ಮಾನ ಮಾಡ್ತಾರೆ. 28 ಕ್ಷೇತ್ರಗಳ ಪಟ್ಟಿ ಒಂದೇ ಬಾರಿ ಬಿಡುಗೆಯಾಗುತ್ತೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಪಘಾತದಿಂದ ಯುವಕನ ಸಾವಿಗೆ ನಾನೇ ಕಾರಣ ಎಂದು ಆತ್ಮಹತ್ಯೆಗೆ ಶರಣಾದ!

  • ರಾಜ್ಯದಲ್ಲಿ ವಾಲ್ಮೀಕಿ ವಿಶ್ವವಿದ್ಯಾಲಯ ಆಗಲೇಬೇಕು: ಜಿ.ಪರಮೇಶ್ವರ್

    ರಾಜ್ಯದಲ್ಲಿ ವಾಲ್ಮೀಕಿ ವಿಶ್ವವಿದ್ಯಾಲಯ ಆಗಲೇಬೇಕು: ಜಿ.ಪರಮೇಶ್ವರ್

    ದಾವಣಗೆರೆ: ರಾಜ್ಯದಲ್ಲಿ ವಾಲ್ಮೀಕಿ (Valmiki) ವಿಶ್ವವಿದ್ಯಾಲಯ ಆಗಲೇಬೇಕು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ (G.Parameshwar) ಹೇಳಿದ್ದಾರೆ.

    ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಮಾಡುವುದರ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ವರ್ಣಾಶ್ರಮ ಪದ್ದತಿ ಇದೆ. ದೇಶದಲ್ಲಿ ಸಮಾನತೆ ಪ್ರತಿಪಾದನೆ ಮಾಡಿದ್ರು. ಆದರೆ ಜಾತಿ ವ್ಯವಸ್ಥೆ ಮಾತ್ರ ಜೀವಂತವಾಗಿದೆ. ವಾಲ್ಮೀಕಿ ಸಮಾಜ ದೇಶದಲ್ಲಿ ದೊಡ್ಡ ಸಮಾಜವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ವಿವಿಧ ಪಕ್ಷಗಳ ಸಂಸದರ ಜೊತೆ ಸಂಸತ್‌ನ ಕ್ಯಾಂಟೀನ್‌ನಲ್ಲಿ ಊಟ ಸವಿದ ಮೋದಿ

    ಆಂಧ್ರಪ್ರದೇಶ ಮತ್ತು ಪಂಜಾಬ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಲ್ಮೀಕಿ ಸಮಾಜ ಇದೆ. ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಮಾಡುವ ವಿಚಾರದಲ್ಲಿ ಆಗಿನ ಸಿಎಂ ಕುಮಾರಸ್ವಾಮಿ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದಿಸಲಿಲ್ಲ. ರಾಜ್ಯದಲ್ಲಿ ವಾಲ್ಮೀಕಿ ವಿಶ್ವವಿದ್ಯಾಲಯ ಆಗಲೇಬೇಕು. ವಾಲ್ಮೀಕಿ ಸಮಾಜಕ್ಕೆ ಅಲ್ಲ ರಾಜ್ಯಕ್ಕೆ ವಾಲ್ಮೀಕಿ ವಿವಿ ಸ್ಥಾಪನೆಗೆ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು. ಸಿಎಂ ಸಿದ್ದರಾಮಯ್ಯ ಈ ಕೆಲಸ ಮಾಡದೇ ಇದ್ರೆ, ಯಾರು ಕೂಡಾ ಮಾಡಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಟ್ರಾಫಿಕ್ ಫೈನ್ 50,000 ಇದ್ರೆ ಮನೆ ಬಾಗಿಲಿಗೆ ಬರಲಿದ್ದಾರೆ ಪೊಲೀಸರು ಹುಷಾರ್!

    ರಾಮನ ಸಂಬಂಧವೇ ಇಲ್ಲದವರಿಗೆ ಎನೇನೋ ಮಾಡುತ್ತಿದ್ದಾರೆ. ವಾಲ್ಮೀಕಿಗೆ ಸಂಬಂಧ ಇಲ್ಲದವರು ಏನೇನೊ ಮಾಡ್ತಾ ಇದ್ದಾರೆ. ನಮಗೆ ವಾಲ್ಮೀಕಿಗೆ ಸಂಬಂಧ ಇದೆ. ಈ ಕಾರಣಕ್ಕೆ ವಾಲ್ಮೀಕಿ ವಿವಿ ಸ್ಥಾಪನೆ ಆಗಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೊಡಗಲ್ಲಿ ಹಿಂದೂ ಒಬ್ಬ ಮುಸ್ಲಿಂನ್ನು ಹತ್ಯೆಗೈದಾಗ ಗಲಾಟೆ ಆಗ್ಲಿಲ್ಲ, ಹಿಂದೂವೇ ಹತ್ಯೆಯಾಗಿದ್ರೆ ಬೆಂಕಿ ಹಚ್ಚಿರೋರು: ದಿನೇಶ್ ಗುಂಡೂರಾವ್

  • ಕೇಂದ್ರವನ್ನು ರಾಜ್ಯ ಸರ್ಕಾರದವರು ದೂರುವುದು ಸರಿಯಲ್ಲ, ಅಗತ್ಯವಿದ್ದಾಗಲೆಲ್ಲ ನೆರವು ನೀಡಿದೆ: ಪ್ರಜ್ವಲ್ ರೇವಣ್ಣ

    ಕೇಂದ್ರವನ್ನು ರಾಜ್ಯ ಸರ್ಕಾರದವರು ದೂರುವುದು ಸರಿಯಲ್ಲ, ಅಗತ್ಯವಿದ್ದಾಗಲೆಲ್ಲ ನೆರವು ನೀಡಿದೆ: ಪ್ರಜ್ವಲ್ ರೇವಣ್ಣ

    ಹಾಸನ: ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರದವರು (State Government) ದೂರುವುದು ಸರಿಯಲ್ಲ. ಅಗತ್ಯ ಇದ್ದಾಗಲೆಲ್ಲ ನೆರವು ನೀಡಿದೆ ಎಂದು ಕಾಂಗ್ರೆಸ್ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ  (Prajwal Revanna) ಕಿಡಿಕಾರಿದ್ದಾರೆ.

    ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ (Congress) ಪ್ರತಿಭಟನೆ ಕುರಿತು ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಗಿದ್ದರೆ ಜನರ ತೆರಿಗೆ ಹಣವನ್ನು ಇವರ ಉಚಿತ ಗ್ಯಾರಂಟಿಗೆ ಬಳಸಿದ್ದಾರೆ. ಮುಂದೆ ತೆರಿಗೆ ಪಾವತಿದಾರರು ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೋರಾಟ ಮಾಡಿದರೆ ಏನು ಮಾಡೋದು ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರ ಅಗತ್ಯ ಇದ್ದಾಗಲೆಲ್ಲ ನೆರವು ನೀಡಿದೆ. ಕೇಂದ್ರದಿಂದ ಅನುದಾನ ಬಂದೇ ಇಲ್ಲ ಎಂಬ ಭಾವನೆ ಮೂಡಿಸುವುದು ತಪ್ಪು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಮ್ಮ ಹಕ್ಕು ಕೇಳಲು ದೆಹಲಿಯಲ್ಲಿ ಪ್ರತಿಭಟನೆ: ಸತೀಶ್ ಜಾರಕಿಹೊಳಿ

    ದಕ್ಷಿಣ ಭಾರತ ಪ್ರತ್ಯೇಕವಾಗಬೇಕು ಎಂಬ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿಕೆಯನ್ನು ಖಂಡಿಸಿ, ದೇಶ ಒಡೆಯುವ ಹೇಳಿಕೆ ಯಾರೂ ಕೊಡಬಾರದು. ಭಾರತ ಒಂದಾಗಿರುತ್ತದೆ. ಭಾರತೀಯರು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಇದೆ. ಈ ರೀತಿಯ ಹೇಳಿಕೆ ಅವರಿಗೆ ಶೋಭೆ ತರಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:  ಯಡಿಯೂರಪ್ಪರಿಂದ ಭಾರತ್ ಬ್ರ್ಯಾಂಡ್ ಅಕ್ಕಿ ವಿತರಣೆಗೆ ಚಾಲನೆ

    ಹೆಚ್.ಡಿ.ಕುಮಾರಸ್ವಾಮಿ ಕೇಸರಿ ಶಾಲು ಧರಿಸಿದ್ದಕ್ಕೆ ಮಾಜಿ ಪ್ರಧಾನಿ ದೇವೇಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಕೇಸರಿ ಶಾಲು ಎಂದರೆ ಬಿಜೆಪಿ ಎಂದು ಯಾಕೆ ಭಾವಿಸಬೇಕು? ದೇಗುಲ ಉದ್ಘಾಟನೆ ವೇಳೆ ನಮ್ಮ ಕಾರ್ಯಕರ್ತರೇ ಕೇಸರಿ ಶಾಲು ಹಾಕಿರುತ್ತಾರೆ. ಅದು ಧಾರ್ಮಿಕ ಸಂಕೇತ ಅಷ್ಟೆ. ಕೇಸರಿ ಶಾಲು ಹಾಕಿರೋರು ಬಿಜೆಪಿ ಕಾರ್ಯಕರ್ತರು ಎನ್ನೋಕೆ ಆಗುತ್ತಾ. ಮಂಡ್ಯ ಪ್ರತಿಭಟನೆ ವೇಳೆ ಕುಮಾರಸ್ವಾಮಿಗೆ ಯಾರೋ ಕಾರ್ಯಕರ್ತ ಬಂದು ಕೇಸರಿ ಶಾಲು ಹಾಕಿದ್ದರು. ಇದಕ್ಕೆ ತಪ್ಪಾಗಿ ತಿಳಿಯುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಸವದಿ ಹುಟ್ಟುಹಬ್ಬದ ಫ್ಲೆಕ್ಸ್‌ನಲ್ಲಿ ಕೈ ಚಿಹ್ನೆ ಮಾಯ!

    ಹಾಸನ ರೈಲ್ವೆ ಮೇಲ್ಸೇತುವೆ ಕಾಮಗಾರಿ ಬಗ್ಗೆ ಮಾತನಾಡಿ, ಹಾಸನ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ರಾಜ್ಯ ಸರ್ಕಾರ ಹಣ ಕೊಡಲ್ಲ ಅಂತ ಹೇಳಿದೆ. ಆ ನಂತರ ಕೇಂದ್ರದ ಬಳಿ ಹೋಗಿದ್ದೇವೆ. ಮತ್ತೆರಡು ಮಾರ್ಗದ ಮೇಲ್ಸೇತುವೆಗಾಗಿ ಕೇಂದ್ರ ಸರ್ಕಾರದಲ್ಲಿ 48 ಕೋಟಿ ಅನುಮೋದನೆಗೆ ಹೋಗಿದೆ ಎಂದು ಹೇಳಿದರು. ಅದೇನು ಬಿಬಿಎಂಪಿ ಕೆಲಸ ಕೆಟ್ಟೋಯ್ತಾ, ಅದೇ ಚರಂಡಿಗೆ ಅದೇ ಕಲ್ಲು ಹಾಕೋಕೆ. ಹಣ ಕೊಡಿ ಎಂಬ ನಮ್ಮ ಮನವಿಗೆ, ಪತ್ರ ವ್ಯವಹಾರಕ್ಕೆ ನಾವು ಹಣ ಕೊಡಲು ಆಗಲ್ಲ ಎಂದು ಕಠಿಣವಾಗಿಯೇ ಉತ್ತರ ನೀಡಿದ್ದಾರೆ. ಸಹಕಾರವನ್ನೂ ಸಹ ಕೊಡಲ್ಲ ಎಂದಿದ್ದಾರೆ. ಅಲ್ಲಿಗೆ ಅದು ಮುಗಿದಿದೆ. ನಮಗೆ ರಾಜ್ಯ ಸರ್ಕಾರದಿಂದ ರೈಲ್ವೆ ಮೇಲ್ಸೇತುವೆಗೆ ಸಹಕಾರ ಬೇಕಾಗಿಲ್ಲ. ಮೂರು ಸಾರಿ ಕೊಡಲ್ಲ ಎಂದ ಮೇಲೆ ಬೇಡ ಎಂದು ನೇರವಾಗಿ ಹೇಳಿದ್ದಾರೆ. ಇದನ್ನೂ ಓದಿ: ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟ – 11 ಮಂದಿ ದುರ್ಮರಣ, 60 ಮಂದಿಗೆ ಗಾಯ

  • ಲೋಕಸಭೆಗೆ ಅಲ್ಲ, ರಾಜ್ಯಸಭೆಗೆ ದೆಹಲಿಯಲ್ಲಿ ವಿ.ಸೋಮಣ್ಣ ಲಾಬಿ!

    ಲೋಕಸಭೆಗೆ ಅಲ್ಲ, ರಾಜ್ಯಸಭೆಗೆ ದೆಹಲಿಯಲ್ಲಿ ವಿ.ಸೋಮಣ್ಣ ಲಾಬಿ!

    ನವದೆಹಲಿ: ರಾಜ್ಯಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಲಾಬಿ ಶುರುವಾಗಿದ್ದು ಮಾಜಿ ಸಚಿವ ವಿ.ಸೋಮಣ್ಣ (v.Somanna)  ವರಿಷ್ಠರ ಭೇಟಿಗೆ ಪ್ರಯತ್ನ ಆರಂಭಿಸಿದ್ದಾರೆ. ಭಾನುವಾರವ ರಾತ್ರಿಯೇ ದೆಹಲಿಗೆ ಆಗಮಿಸಿರುವ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಪ್ರಮುಖ ನಾಯಕರ ಭೇಟಿಗೆ ಪ್ರಯತ್ನಿಸುತ್ತಿದ್ದಾರೆ.

    ರಾಜ್ಯದ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮೂರು ಸ್ಥಾನ ಕಾಂಗ್ರೆಸ್‌ಗೆ (Congress) ಲಭ್ಯವಾಗಲಿದೆ. ಉಳಿದ ಬಾಕಿ ಒಂದು ಸ್ಥಾನ ಆಯ್ಕೆ ಮಾಡಿಕೊಳ್ಳಲು ಬಿಜೆಪಿಗೆ (BJP) ಅವಕಾಶವಿರುತ್ತದೆ. ಈ ಹಿನ್ನಲೆಯಲ್ಲಿ ದೆಹಲಿಯಲ್ಲಿ ಠಿಕಾಣಿ ಹೂಡಿರುವ ಅವರು ಲೋಕಸಭೆ ಬದಲಿಗೆ ರಾಜ್ಯಸಭೆಗೆ ತಮ್ಮ ಹೆಸರು ಘೋಷಿಸುವಂತೆ ವರಿಷ್ಠರಿಗೆ ಮನವಿ ಮಾಡುತ್ತಿದ್ದಾರೆ. ಇದನ್ನೂ ಓದಿ:  ವಿಶ್ವಾಸಮತ ಗೆದ್ದ ಜಾರ್ಖಂಡ್‌ ನೂತನ ಸಿಎಂ ಚಂಪೈ ಸೊರೇನ್‌

    ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ವರಿಷ್ಠರಿಗೆ ನನ್ನ ಭಾವನೆ ವ್ಯಕ್ತಪಡಿಸಿದ್ದೇನೆ. ಯಾರಿಗೆ ಅವಕಾಶ ಕೊಡುತ್ತಾರೆ ಗೊತ್ತಿಲ್ಲ. ಒಂದು ವೇಳೆ ಕೊಟ್ಟರೆ ಒಳ್ಳೆ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಕೊಡಲಿಲ್ಲ ಅಂದರೆ ಯಾವುದೇ ಬೇಸರ ಇಲ್ಲ ಎಂದಿದ್ದಾರೆ. ತುಮಕೂರು ಕ್ಷೇತ್ರಕ್ಕೆ ನಾನು ಸ್ಪರ್ಧಿಸಬೇಕು ಎನ್ನುವುದು ಹಾಲಿ ಸಂಸದ ಬಸವರಾಜು ಅವರ ಅಭಿಲಾಷೆ. ಸ್ಥಳೀಯ ನಾಯಕರೂ ಸಹ ಬೆಂಬಲ ನೀಡುತ್ತಿದ್ದಾರೆ. ಅಂತಿಮವಾಗಿ ಎಲ್ಲವೂ ಹೈಕಮಾಂಡ್ ನಿರ್ಧರ ಮಾಡಲಿದೆ. ಕೊಟ್ಟರೆ ಜವಾಬ್ದಾರಿ ನಿಭಾಯಿಸುತ್ತೇನೆ. ಇಲ್ಲ ಅಂದರೆ ಪಕ್ಷದ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನ್ನ ರಾಮನನ್ನು ಬಿಜೆಪಿಗೆ ಬಿಟ್ಟುಕೊಡಲ್ಲ – ಶಶಿ ತರೂರ್‌

    ಮಾಜಿ ಸಿಎಂ ಹೆಚ್‌ಡಿ.ಕುಮಾರಸ್ವಾಮಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಪಕ್ಷ ಬೇರೆ ಇರಬಹುದು. ಆದರೆ ನಾವು ಮೊದಲಿನಿಂದ ಪರಿಚಯ. ಮೊನ್ನೆ ಅವರ ತೋಟದ ಮನೆಯಲ್ಲಿ ಭೇಟಿ ಆಗಿದ್ದೇನೆ. ಅವರು 2 ಬಾರಿ ಮುಖ್ಯಮಂತ್ರಿಯಾದವರು. ಹೀಗಾಗಿ ಸಹಜವಾಗಿ ಮಾತಾಡಿದ್ದೇವೆ ಅಷ್ಟೇ. ನಾವು ಹಿಂದು ಹಿಂಗೇ ಮಾತಾಡೋಕೆ ದೇವೇಗೌಡರು ಕಾರಣ. ಅವರ ಒಡನಾಟ ಮತ್ತು ಅವರು ಕೊಟ್ಟಿರುವ ಅನುಭವ ಮಹತ್ವ ಎಂದು ಮಾಜಿ ಪ್ರಧಾನಿ ದೇವೇಗೌಡರನ್ನು ಸೋಮಣ್ಣ ಹೋಗಳಿದ್ದಾರೆ. ಇದನ್ನೂ ಓದಿ: ಹಸಿವು ಎಂದು ಬೆಕ್ಕಿನ ಹಸಿಮಾಂಸ ತಿಂದ ಭೂಪ!

    ಸುಧಾರಕರ್‌ಗೆ ಚಿಕ್ಕಬಳ್ಳಾಪುರದಿಂದ ಭರವಸೆ ನೀಡಿದ್ದಾರಾ ಇಲ್ವಾ ಗೊತ್ತಿಲ್ಲ. ಅದರ ಮಾಹಿತಿ ಇಲ್ಲ ಮತ್ತು ಆ ಬಗ್ಗೆ ಮಾತನಾಡುವುದಿಲ್ಲ. ಸುಮಲತಾ ಸ್ಪರ್ಧಿಸುವುದರ ಬಗ್ಗೆ ಹೈಕಮಾಂಡ್ ನಿರ್ಧರ ಮಾಡಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಮಥುರಾದಲ್ಲಿ ಕೃಷ್ಣ ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ – ಭಾರತೀಯ ಪುರಾತತ್ವ ಇಲಾಖೆ

  • ದೇವೇಗೌಡರಿಗೆ ನಾನೇ ಕೇಸರಿ ಶಾಲು ಹಾಕಿ ಸ್ವಾಗತಿಸುತ್ತೇನೆ: ಯಶ್‌ಪಾಲ್ ಸುವರ್ಣ

    ದೇವೇಗೌಡರಿಗೆ ನಾನೇ ಕೇಸರಿ ಶಾಲು ಹಾಕಿ ಸ್ವಾಗತಿಸುತ್ತೇನೆ: ಯಶ್‌ಪಾಲ್ ಸುವರ್ಣ

    ಉಡುಪಿ: ಮಾಜಿ ಪ್ರಧಾನಿ ದೇವೇಗೌಡರಿಗೆ (Devegowda) ನಾನೇ ಕೇಸರಿ ಶಾಲು ಹಾಕಿ ಸ್ವಾಗತಿಸುತ್ತೇನೆ ಎಂದು ಶಾಸಕ ಯಶ್‌ಪಾಲ್ ಸುವರ್ಣ (Yashpal Anand Suvarna) ಹೇಳಿದ್ದಾರೆ.

    ಉಡುಪಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ಎನ್‌ಡಿಎ ಒಪ್ಪಿಕೊಂಡು ಮೈತ್ರಿಕೂಟದ ಜೊತೆಗಿದ್ದಾರೆ. ಕೇಸರಿ ಶಾಲು ಧರಿಸಲ್ಲ ಎಂಬುದು ಅವರ ವೈಯಕ್ತಿಕ ಹೇಳಿಕೆಯೋ ಅಥವಾ ಪಕ್ಷದ ನಿಲುವೋ ಗೊತ್ತಿಲ್ಲ. ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಪ್ಪಿಕೊಂಡಿದ್ದಾರೆ. ಮೋದಿ ಕಾರ್ಯಕ್ರಮದ ಗುಣಗಾನವನ್ನು ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ 28ಕ್ಕೆ 28 ಗೆಲ್ಲುವ ಪ್ರಯತ್ನವನ್ನು ಎನ್‌ಡಿಎ ಮಾಡುತ್ತಿದೆ. ದೇವೇಗೌಡರ ಈ ಹೇಳಿಕೆ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ದೇವೇಗೌಡರು ಉಡುಪಿಗೆ ಬಂದಾಗ ನಾನು ಶಾಸಕನಾಗಿ ಕೇಸರಿ ಶಾಲು ಹಾಕಿ ಸ್ವಾಗತ ಮಾಡುತ್ತೇನೆ ಎಂದು ಯಶ್‌ಪಾಲ್ ಹೇಳಿದ್ದಾರೆ. ಇದನ್ನೂ ಓದಿ: ಹಿಂದೆಯೇ ಅಡ್ವಾಣಿಗೆ ಭಾರತ ರತ್ನ ಕೊಡಬೇಕಿತ್ತು: ಸತೀಶ್‌ ಜಾರಕಿಹೊಳಿ

    ಅಡ್ವಾಣಿಗೆ ಭಾರತ ರತ್ನ ಗೌರವ ಸಿಕ್ಕಿರುವ ಕುರಿತು ಮಾತನಾಡಿ, ಮಾಜಿ ಉಪ ಪ್ರಧಾನಿ, ರಾಷ್ಟ್ರದ ಹಿರಿಯ ನೇತಾರ ಎಲ್.ಕೆ.ಅಡ್ವಾಣಿಗೆ (Lal Krishna Advani) ಭಾರತ ರತ್ನ ಗೌರವ ಸಿಕ್ಕಿದೆ. ದೇಶಕ್ಕೆ ಅಡ್ವಾಣಿ ಅವರ ಕೊಡುಗೆ ಬಹಳಷ್ಟು ಇದೆ. ಸಂಸದರಾಗಿ, ಗೃಹ ಸಚಿವರಾಗಿ, ಉಪ ಪ್ರಧಾನಿಗಳಾಗಿ ಕೆಲಸ ಮಾಡಿದ್ದಾರೆ. ರಥಯಾತ್ರೆಯ ಮೂಲಕ ದೇಶಾದ್ಯಂತ ಜನರ ಮನ ಗೆದ್ದವರು. ರಾಮಮಂದಿರದ ಕನಸು ನನಸಾಗುವ ಸಂದರ್ಭದಲ್ಲಿ ಅಡ್ವಾಣಿ ಅವರಿಗೆ ಭಾರತ ರತ್ನ ಗೌರವ ಸಲ್ಲಿಕೆ ಆಗಿರುವುದು ನಮಗೆ ಬಹಳ ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗೆ ‘ಭಾರತ ರತ್ನ’ ಕೊಡಿ ಅಂತಾ ಪತ್ರ ಬರೆದಿದ್ದೆವು: ಸಿದ್ದರಾಮಯ್ಯ

    ರಾಮಮಂದಿರದ ಹೋರಾಟದಲ್ಲಿ ಅಡ್ವಾಣಿ ಅವರ ಯೋಚನೆ ಮತ್ತು ಯೋಜನೆ ಬಹಳಷ್ಟು ಇತ್ತು. ರಾಮನ ಪ್ರಾಣ ಪ್ರತಿಷ್ಠೆ ಸಂದರ್ಭ ಈ ಘೋಷಣೆ ಆಗಿರುವುದು ಅಡ್ವಾಣಿ ಅವರ ಗೌರವ ಮತ್ತಷ್ಟು ಹೆಚ್ಚಿಸಿದೆ. ಪ್ರತಿಷ್ಠಾಪನೆ ಸಂದರ್ಭ ಅನಾರೋಗ್ಯದ ಪರಿಣಾಮ ಅವರು ಭಾಗವಹಿಸಿರಲಿಲ್ಲ. ಉಡುಪಿ ಜನತೆಯ ಪರವಾಗಿ ಅಡ್ವಾಣಿ ಅವರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ. ರಥಯಾತ್ರೆಯ ಸಂದರ್ಭ ಡಾ.ವಿ.ಎಸ್.ಆಚಾರ್ಯ ಜೊತೆ ಬಹಳ ಒಡನಾಟ ಇದ್ದವರು. ದೇಶದ ಮತ್ತು ರಾಜ್ಯದ ಅಭಿವೃದ್ಧಿ ವಿಚಾರವಾಗಿ ಅಡ್ವಾಣಿ ಕಾಳಜಿ ತೋರಿದರು ಮತ್ತು ಸಲಹೆ ಸೂಚನೆಗಳನ್ನು ಕೊಟ್ಟವರು ಎಂದು ಅವರನ್ನು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ವೋಟ್ ಹಾಕಿಲ್ಲ ಅಂತ ಯಾರನ್ನಾದ್ರು ಓಡಿಸ್ಕೊಂಡು ಹೋಗ್ತಾ ಇದೀವಾ: ಹೆಚ್.ಸಿ.ಬಾಲಕೃಷ್ಣ

    ಸಿಎಂ ಸಿದ್ದರಾಮಯ್ಯ ಕುಂಕುಮ ನಿರಾಕರಿಸಿದ ಬಗ್ಗೆ ಮಾತನಾಡಿ, ಸಿದ್ದರಾಮಯ್ಯ ಭ್ರಷ್ಟಾಚಾರ ದೇಶ ವಿರೋಧಿ ಮತ್ತು ಹಿಂದೂ ವಿರೋಧಿ ನೀತಿ ಮುಂದುವರೆಸಿದ್ದಾರೆ. ಕಾಂಗ್ರೆಸ್ ಸಂಸದ ಪ್ರತ್ಯೇಕ ರಾಷ್ಟçದ ಕೂಗು ಎಬ್ಬಿಸಿದ್ದಾರೆ. ಕುಂಕುಮ ಕೊಡಲು ಬಂದಾಗ ಸಿದ್ದರಾಮಯ್ಯ ಅದನ್ನು ತಡೆದಿದ್ದಾರೆ. ಸಿದ್ದರಾಮಯ್ಯ ಕರ್ನಾಟಕದಲ್ಲಿದ್ದಾರಾ? ಪಾಕಿಸ್ತಾನದಲ್ಲಿ ಇದ್ದಾರಾ? ಎಂಬ ಸಂಶಯವಿದೆ. ಅಲ್ಪಸಂಖ್ಯಾತ ಮುಸ್ಲಿಮರ ಓಲೈಕೆಗಾಗಿ ಹೀಗೆ ಮಾಡಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ನಿವೃತ್ತಿ ಜೀವನವನ್ನು ಬಾಂಗ್ಲಾದೇಶ ಅಥವಾ ಪಾಕಿಸ್ತಾನದಲ್ಲಿ ಕಳೆಯುವ ಯೋಚನೆ ಮಾಡಿರಬಹುದು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಣ್ಣ-ತಂಗಿ ವರಸೆಯ ಪ್ರೀತಿಗೆ ಪೋಷಕರ ನಿರಾಕರಣೆ; ಪ್ರೇಮಿಗಳಿಬ್ಬರು ನೇಣಿಗೆ ಶರಣು

  • ವೋಟ್ ಹಾಕಿಲ್ಲ ಅಂತ ಯಾರನ್ನಾದ್ರು ಓಡಿಸ್ಕೊಂಡು ಹೋಗ್ತಾ ಇದೀವಾ: ಹೆಚ್.ಸಿ.ಬಾಲಕೃಷ್ಣ

    ವೋಟ್ ಹಾಕಿಲ್ಲ ಅಂತ ಯಾರನ್ನಾದ್ರು ಓಡಿಸ್ಕೊಂಡು ಹೋಗ್ತಾ ಇದೀವಾ: ಹೆಚ್.ಸಿ.ಬಾಲಕೃಷ್ಣ

    – ನಿಖಿಲ್ ಕುಮಾರಸ್ವಾಮಿಗೆ ಕಾಂಗ್ರೆಸ್ ಶಾಸಕ ತಿರುಗೇಟು

    ರಾಮನಗರ: ವೋಟ್ ಹಾಕಿಲ್ಲ ಅಂತ ಯಾರನ್ನಾದರೂ ಓಡಿಸ್ಕೊಂಡು ಹೋಗುತ್ತಿದ್ದೀವಾ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumarswamy) ವಿರುದ್ಧ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ (Balakrishna) ಕಿಡಿಕಾರಿದ್ದಾರೆ.

    ತಮ್ಮ ವಿರುದ್ಧ ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು ನೀಡಿದ ವಿಚಾರ ಕುರಿತು ಮಾಗಡಿಯಲ್ಲಿ (Magadi) ಸುದ್ದಿಗಾರರ ಜೊತೆ ಪ್ರತಿಕ್ರಿಯಿಸಿ, ನಾವು ಹೇಳಿರೋದು ಜನರಿಗೆ ಗ್ಯಾರಂಟಿ ಬೇಕಾ? ಅಕ್ಷತೆ ಬೇಕಾ ಎಂದು. ನಾವು ಯಾರನ್ನ ಬ್ಲ್ಯಾಕ್‌ ಮೇಲ್ ಮಾಡ್ತಾ ಇದೀವಿ ಹೇಳಿ? ಯಾರನ್ನಾದರು ವೋಟ್ ಹಾಕಲಿಲ್ಲ ಅಂತ ಓಡಿಸ್ಕೊಂಡು ಹೋಗ್ತಾ ಇದೀವಾ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಗೂಗಲ್ ಪೇ ಮಾಡಿಸಿ ಸಿಕ್ಕಿಬಿದ್ದ ಹೆದ್ದಾರಿ ದರೋಡೆಕೋರರು

    ಜೆಡಿಎಸ್ ಅವರಿಗೆ ನಾನು ಎಂಎಲ್‌ಎ ಆಗಿರೋದನ್ನ ತಡೆದುಕೊಳ್ಳಲು ಆಗುತ್ತಿಲ್ಲ. ಅದಕ್ಕೆ ನನ್ನ ವಿರುದ್ಧ ದೂರು ಕೊಟ್ಟಿದ್ದಾರೆ. ಬೇಕಿದ್ರೆ ಕಾನೂನು ರೀತಿ ಪರಿಶೀಲನೆ ಮಾಡಲಿ. ಸತ್ಯಾಸತ್ಯತೆ ಹೊರಗೆ ಬರಲಿ. ನಾವು ಅಧಿಕಾರದಲ್ಲಿ ಇರೋದನ್ನ ಅವರ ಕುಟುಂಬ ಸಹಿಸುತ್ತಿಲ್ಲ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ನಿಖಿಲ್ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ರಾಜಸ್ಥಾನ ಮಾಜಿ ಸಿಎಂ ಅಶೋಕ್‌ ಗೆಹ್ಲೋಟ್‌ಗೆ ಹಂದಿ ಜ್ವರ & ಕೋವಿಡ್‌ ಪಾಸಿಟಿವ್‌

    ಗ್ಯಾರಂಟಿ ರದ್ದು ಮಾಡುವ ಬಗ್ಗೆ ಕಾಂಗ್ರೆಸ್ ಒಳಗೆ ಚರ್ಚೆ ಆಗುತ್ತಿದೆ ಎಂಬ ಹೆಚ್‌ಡಿಕೆ ಆರೋಪದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಆರೋಪಕ್ಕೆ ಗೌರವ ಕೊಡುವ ಅರ್ಥ ಇಲ್ಲ. ಕುಮಾರಸ್ವಾಮಿ ಒಂದೊಂದು ದಿನ ಒಂದೊಂದು ಥರ ಹೇಳ್ತಾರೆ. ಬಿಜೆಪಿಗೆ ವೋಟ್ ಹಾಕಿ ಒಂದು ದಿನ ಅನುಭವಿಸ್ತೀರಾ ಅಂತ ಹಿಂದೆ ಹೇಳಿದ್ದರು. ಶ್ರೀಲಂಕದಲ್ಲಿ ಆದಂಗೆ ಇಲ್ಲೂ ಆಗುತ್ತದೆ ಅಂತ ಹೇಳಿರಲಿಲ್ವಾ? ಈಗ ಅವರ ಜೊತೆಯೇ ಹೋಗಿಲ್ವಾ? ಹಾಗಾಗಿ ಅವರ ಹೇಳಿಕೆಗೆ ಮಹತ್ವ ಕೊಡೋದು ಒಳ್ಳೆಯದಲ್ಲ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಪೋಸ್ಟ್ ಮೂಲಕ ಡ್ರಗ್ಸ್ ಸರಬರಾಜು – ವ್ಯಕ್ತಿ ಅರೆಸ್ಟ್, 6.50 ಲಕ್ಷ ಮೌಲ್ಯದ ಡ್ರಗ್ಸ್ ವಶ

  • ಚಲುವರಾಯಸ್ವಾಮಿ ನನಗೆ ಎದುರಾಳಿಯೇ? ಆತನ ಬಗ್ಗೆ ಚರ್ಚೆ ಅಪ್ರಸ್ತುತ: ಹೆಚ್‌ಡಿಕೆ

    ಚಲುವರಾಯಸ್ವಾಮಿ ನನಗೆ ಎದುರಾಳಿಯೇ? ಆತನ ಬಗ್ಗೆ ಚರ್ಚೆ ಅಪ್ರಸ್ತುತ: ಹೆಚ್‌ಡಿಕೆ

    ರಾಮನಗರ: ಸಚಿವ ಚಲುವರಾಯಸ್ವಾಮಿ (Chaluvaraya Swamy) ನನಗೇನು ಎದುರಾಳಿನಾ, ಅವರ ಬಗ್ಗೆ ಚರ್ಚೆ ಅಪ್ರಸ್ತುತ ಎಂದು ಮಾಜಿ ಸಿಎಂ ಕುಮಾರಸ್ವಾಮಿ (H.D. Kumaraswamy) ತಿರುಗೇಟು ನೀಡಿದ್ದಾರೆ.

    ಚಲುವರಾಯಸ್ವಾಮಿ ಸ್ಪರ್ಧೆಯ ಕುರಿತು ಬಿಡದಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನ್ನ ಸೋಲಿನ ಬಗ್ಗೆ ಮಾತನಾಡುವವರು ಇವರೇಕೆ ಸೋತಿದ್ರು. ಮಂತ್ರಿ ಆಗಿದ್ದರೂ ಕೂಡಾ ಚಲುವರಾಯಸ್ವಾಮಿ ಸೋತಿದ್ರಲ್ಲ. ಈಗ ದೇವೇಗೌಡರ ಮುಖ ನೋಡಿಕೊಂಡು ಸುಮ್ಮನಿದ್ದೀನಿ ಅಂದ್ರಲ್ಲಾ? ಇಲ್ಲ ಅಂದರೆ ಏನು ಮಾಡ್ತಿದ್ರಿ. ನಿಮ್ಮ ಮಾತಿನ ಅರ್ಥ ಏನು. ನಾನು ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೀನಿ. ಅವರು ನನಗೇನು ಎದುರಾಳಿನಾ? ಅವರ ಬಗ್ಗೆ ಚರ್ಚೆ ಅಪ್ರಸ್ತುತ. ಅದೇನು ಮಾಡ್ತಿರೋ ಮಾಡಿ ನೋಡೊಣ ಎಂದು ಚಲುವರಾಯಸ್ವಾಮಿಗೆ ಹೆಚ್‌ಡಿಕೆ ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ರಾಷ್ಟ್ರ ವಿಭಜನೆಯ ಮಾತೇ ಅಪರಾಧ – ಸುರೇಶ್ ದೇಶದ ಕ್ಷಮೆ ಕೋರಲಿ ಸುನೀಲ್‍ಕುಮಾರ್

    ರಾಮಕೃಷ್ಣ ಹೆಗಡೆ ಮತ್ತು ಜೆ.ಹೆಚ್.ಪಟೇಲರನ್ನು ಹೊರಹಾಕಿದ್ದು ಹೆಚ್‌ಡಿಕೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಅವರನ್ನ ಹೊರಹಾಕಿದ್ನಾ? ರಾಮಕೃಷ್ಣ ಹೆಗಡೆಯವರು ನಮ್ಮ ಪಕ್ಷದಲ್ಲಿದಾಗ, ಆಗಿನ್ನೂ ನಾನು ಚಿಕ್ಕ ಹುಡುಗ. ಚಲುವರಾಯಸ್ವಾಮಿ ಅವರಿಗೆ ಇಷ್ಟೂ ಗೊತ್ತಿಲ್ವಾ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಹುಲ್ ಭಾರತ್ ಜೋಡೋ ಅಂತಾರೆ, ಸುರೇಶ್ ತೋಡೋ ಅಂತಾರೆ – ಕಾಂಗ್ರೆಸ್‍ಗೆ ಬುದ್ಧಿ ಭ್ರಮಣೆ ಎಂದ ರವಿಕುಮಾರ್

    ಕಾಂಗ್ರೆಸ್‌ನಲ್ಲೂ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂಬ ಕಾಂಗ್ರೆಸ್‌ನ ಮಾಜಿ ಸಚಿವ ಎಂ.ಸಿ.ಶಿವರಾಂ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ 40 ಪರ್ಸೆಂಟ್ ಇತ್ತು. ಕಾಂಗ್ರೆಸ್‌ನಲ್ಲಿ 59 ಪರ್ಸೆಂಟ್ ಇದೆ ಅಂತ ಮಾಜಿ ಸಚಿವರು ಹೇಳಿದ್ದಾರೆ. ಬಿಜೆಪಿಗಿಂತಲೂ ಕಾಂಗ್ರೆಸ್‌ನಲ್ಲಿ ಪರ್ಸೆಂಟ್ ಜಾಸ್ತಿ ಇದೆ ಅಂತ ತಲೆ ಚಚ್ಚಿಕೊಂಡಿದ್ದಾರೆ. ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣನ ನಮ್ಮ ಮಾರ್ಗದರ್ಶರು ಅಂತಿದರು. ಆದರೆ ಅವರೇ ಬಾಣಲಿಯಿಂದ ಬೆಂಕಿಗೆ ಬಿದ್ದಾಹಾಗಾಗಿದೆ ಅಂತ ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಮುಂದಿನ ಪೀಳಿಗೆ ಬಗ್ಗೆ ಆಲೋಚನೆ ಮಾಡ್ತಾರೆ.. ಅದಕ್ಕೆ ಉಚಿತ ಕೊಡುಗೆ ಕೊಟ್ಟಿಲ್ಲ: ವಿಜಯೇಂದ್ರ

    ಇದನ್ನೆಲ್ಲಾ ಕುಮಾರಸ್ವಾಮಿ ಪ್ರಶ್ನೆ ಮಾಡಿದರೆ ಅವರಿಗೆ ಅಸಹನೆ, ಮೆಂಟಲ್ ಬ್ಯಾಲೆನ್ಸ್ ತಪ್ಪಿದೆ ಅಂತಾರೆ. ಪ್ರತಿನಿತ್ಯ ವರ್ಗಾವಣೆ ಮಾಡೋ ಕೆಲಸವೇ ಆಗಿದೆ. ನಿನ್ನೆ ಸಿದ್ದರಾಮಯ್ಯ ಮೋದಿ ಬಗ್ಗೆ ಕಮೆಂಟ್ ಮಾಡಿದ್ದಾರೆ. ಮೊದಲು ನಿಮ್ಮ ಸ್ಥಿತಿ ನೋಡಿಕೊಳ್ಳಿ ಎಂದು ಬಿಡದಿಯಲ್ಲಿ ಹೆಚ್‌ಡಿಕೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:  ಗ್ಯಾರಂಟಿ ರದ್ದು ಹೇಳಿಕೆ; ‘ಕೈ’ ಶಾಸಕನ ವಿರುದ್ಧ ಚುನಾವಣಾ ಆಯೋಗಕ್ಕೆ ಜೆಡಿಎಸ್‌ ದೂರು

  • ಜೆಡಿಎಸ್‌ ವಿರುದ್ಧ ಶಿವರಾಮೇಗೌಡ ಸ್ವಾಭಿಮಾನದ ಕಹಳೆ

    ಜೆಡಿಎಸ್‌ ವಿರುದ್ಧ ಶಿವರಾಮೇಗೌಡ ಸ್ವಾಭಿಮಾನದ ಕಹಳೆ

    ಮಂಡ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಸ್ವಾಭಿಮಾನದ ಹೆಸರಿನಲ್ಲಿ ನನಗೆ ಮತ ನೀಡಿ ಎಂದು ಸೆರಗೊಡ್ಡಿ ಜೆಡಿಎಸ್‌‌ನ್ನು (JDS) ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಮಣಿಸಿದ್ದರು. ಇದೀಗ ಇದೇ ಸ್ವಾಭಿಮಾನದ ಹೆಸರಿನಲ್ಲಿ ಜೆಡಿಎಸ್ ಮೇಲೆ ಸೇಡು ತೀರಿಸಿಕೊಳ್ಳಲು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ (Shivarame Gowda) ಮುಂದಾಗಿದ್ದಾರೆ. ಈ ಮೂಲಕ ಮಂಡ್ಯ (Mandya) ಜಿಲ್ಲೆಯಲ್ಲಿ ಮತ್ತೊಂದು ಸ್ವಾಭಿಮಾನದ ಕದನಕ್ಕೆ ರಂಗ ಸಿದ್ಧವಾಗುತ್ತಿದೆ.

    ಕಳೆದ ಲೋಕಸಭಾ ಚುನಾವಣೆಯ ವೇಳೆ ಇಡೀ ದೇಶದ ಕಣ್ಣು ಮಂಡ್ಯ ಜಿಲ್ಲೆಯ ಮೇಲೆ ಇತ್ತು. ಇದಕ್ಕೆ ಕಾರಣವಾಗಿದ್ದು ಜೆಡಿಎಸ್ ಹಾಗೂ ಸುಮಲತಾ ಅಂಬರೀಶ್ ಅಂಬರೀಶ್ ನಡುವಿನ ಫೈಟ್ ಆಗಿತ್ತು. ಈ ವೇಳೆ ಸ್ವಾಭಿಮಾನಿ ಕಹಳೆ ಊದಿದ್ದ ಸುಮಲತಾ ಅಂಬರೀಶ್ ಬಹಿರಂಗ ಸಭೆಯಲ್ಲಿ ಸ್ವಾಭಿಮಾನಿ ಮತದಾರರೇ ನನಗೆ ಮತ ನೀಡಿ ಗೆಲ್ಲಿಸಿ ಎಂದು ಭಾವುಕರಾಗಿ ಹೇಳಿದ್ದರು. ಇದಾದ ನಂತರ ಮಂಡ್ಯ ಜಿಲ್ಲೆಯ ಜನರು ಸುಮಲತಾ ಅಂಬರೀಶ್ ಅವರ ಸ್ವಾಭಿಮಾನದ ಕಹಳೆಗೆ ಉಘೇ ಉಘೇ ಎಂದು ಗೆಲ್ಲಿಸುವ ಮೂಲಕ ಜೆಡಿಎಸ್‌ಗೆ ಮಾಸ್ಟರ್ ಸ್ಟ್ರೋಕ್ ನೀಡಿದ್ದರು. ಇದೀಗ ಸುಮಲತಾ ಅಂಬರೀಶ್ ಅವರ ಹಾದಿಯನ್ನು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ತುಳಿದಿದ್ದಾರೆ.

    ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಮಂಡ್ಯದ 7 ಕ್ಷೇತ್ರಗಳ‌ ಪೈಕಿ ನಾಗಮಂಗಲ ಕ್ಷೇತ್ರ ಹೈವೊಲ್ಟೇಜ್ ಕ್ಷೇತ್ರವಾಗಲಿದೆ. ಈ ಕ್ಷೇತ್ರದಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಮೂಲಕ ಜೆಡಿಎಸ್ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ.‌ ಜೆಡಿಎಸ್‌ನಿಂದ ಉಚ್ಚಾಟನೆ ಮಾಡಿದ ಬಳಿಕ ನಾಗಮಂಗಲ ಕ್ಷೇತ್ರದಲ್ಲಿ ಫುಲ್ ಆಕ್ಟೀವ್ ಆಗಿರುವ ಶಿವರಾಮೇಗೌಡ, ಇದೀಗ ಸ್ವಾಭಿಮಾನದ ಹೆಸರ ಮೂಲಕ ಜನರ ಮುಂದೆ ಹೊಗುತ್ತಿದ್ದಾರೆ.

    ನಾಗಮಂಗಲ ಕ್ಷೇತ್ರದ ಎಲ್ಲಾ ಗ್ರಾ.ಪಂ ವ್ಯಾಪ್ತಿಯಲ್ಲಿ ಎಲ್.ಆರ್.ಎಸ್ ಸ್ವಾಭಿಮಾನಿ ಪರ್ವ ಎಂಬ ಕಾರ್ಯಕ್ರಮದ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯ ನಾಗಮಂಗಲದ ರಣಕಣದಲ್ಲಿ ಜೆಡಿಎಸ್ ವಿರುದ್ಧ ಶಿವರಾಮೇಗೌಡ ಕಹಳೆ ಊದಿದ್ದಾರೆ. ಕಳೆದ ಎಂಪಿ ಚುನಾವಣೆಯಲ್ಲಿ ಅಂಬರೀಶ್ ಅಣ್ಣನ ಪತ್ನಿ ಸ್ವಾಭಿಮಾನದಿಂದ ನಿಮ್ಮ ಬಳಿ ಮತ ಕೇಳಿದರು. ಆಗ ಯಾರನ್ನು ನೋಡದೇ ಸುಮಲತಾ ಅವರಿಗೆ ಮತ ಹಾಕಿ ಗೆಲ್ಲಿಸಿದ್ದೀರಾ. ಈಗ ನಾನು ಸಹ ನಿಮ್ಮ ಮುಂದೆ ಟವಲ್‌ವೊಡ್ಡಿ ಭಿಕ್ಷೆ ಬೇಡುತ್ತಿದ್ದೇನೆ, ನನ್ನ ಗೆಲ್ಲಿಸಿ ಎಂದು ನಾಗಮಂಗಲದ ಕದಬಹಳ್ಳಿಯ ಸ್ವಾಭಿಮಾನಿ ಪರ್ವ ಕಾರ್ಯಕ್ರಮದಲ್ಲಿ‌ ಶಿವರಾಮೇಗೌಡ ಭಾವುಕರಾಗಿ ಹೇಳಿದ್ದಾರೆ.

    ಇದೇ ಸ್ವಾಭಿಮಾನಿ ಪರ್ವದಲ್ಲಿ ಒಂದು ಕಡೆ ನನ್ನ ಕೈ ಹಿಡಿಯಿರಿ ಎಂದು ಜನರ ಬಳಿ ಮನವಿ ಮಾಡಿರುವ ಶಿವರಾಮೇಗೌಡ ಇನ್ನೊಂದು ಕಡೆ ನನಗೆ ಜೆಡಿಎಸ್‌ ಹಾಗೂ ಕುಮಾರಸ್ವಾಮಿ ಅನ್ಯಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕುಮಾರಸ್ವಾಮಿ 2018ರ ಮಂಡ್ಯ ಲೋಕಸಭಾ ಉಪಚುನಾವಣೆಗಾಗಿ ನನ್ನಿಂದ‌ 32 ಕೋಟಿ ರೂ. ಖರ್ಚು ಮಾಡಿಸಿದ್ದಾರೆ. ಆದರೆ ನನಗೆ 5 ತಿಂಗಳು ಮಾತ್ರ ಸಂಸದರನ್ನಾಗಿ ಮಾಡಿದರು. 5 ತಿಂಗಳಿಗೆ 32 ಕೋಟಿ‌ ಖರ್ಚು ಮಾಡಿಸಿ ನನ್ನ ಸಾಲಗಾರನನ್ನಾಗಿ ಮಾಡಿದ್ದಾರೆ ಎಂದು ಕಿಡಿಕಾರಿದರು.

    ತಮ್ಮ ಮಗನನ್ನು ಸಂಸದನನಾಗಿ ಮಾಡವುದಾಗಿ ಹೇಳಿ ನನಗೆ ಮೋಸ ಮಾಡಿದರು. ನಾನು ಏನು ದ್ರೋಹ ಮಾಡಿದ್ದೆ ಕುಮಾರಸ್ವಾಮಿ ಅವರೇ ನಿಮಗೆ ಎಂದು ಜೆಡಿಎಸ್‌ನಲ್ಲಿ ತಮಗೆ ಅನ್ಯಾಯವಾಗಿದೆ. ನಾನು ಈ ಚುನಾವಣೆಯಲ್ಲಿ ಗೆದ್ದು ಅವರಿಗೆ ನಾನ್ಯಾರು ಎಂದು ತೋರಿಸುತ್ತೇನೆ ಎಂದು ಶಿವರಾಮೇಗೌಡ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ನೆರೆಯ ನೇಪಾಳದಲ್ಲಿ 5.3 ತೀವ್ರತೆಯ ಭೂಕಂಪ – ಉತ್ತರಾಖಂಡದಲ್ಲೂ ಕಂಪಿಸಿದ ಅನುಭವ

    ಒಟ್ಟಾರೆ ಎಂಪಿ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಸ್ವಾಭಿಮಾನದ ಮೂಲಕ ಜೆಡಿಎಸ್‌ಗೆ ಪಾಠ ಕಲಿಸಿದರು. ಇದೀಗ ನಾಗಮಂಗಲದಲ್ಲಿ ಶಿವರಾಮೇಗೌಡ ಸ್ವಾಭಿಮಾನದ ಮೂಲಕ ದಳಪತಿಳಿಗೆ ಟಕ್ಕರ್‌ ನೀಲು ಮುಂದಾಗಿದ್ದು, ಜೆಡಿಎಸ್‌ಗೆ ಮತ್ತೊಂದು ಸ್ವಾಭಿಮಾನದ ಕಹಳೆ ಮುಳುವಾಗುತ್ತಾ ಎಂದು‌ ಕಾದುನೋಡಬೇಕಿದೆ. ಇದನ್ನೂ ಓದಿ: ಮಿನಿ ಬಸ್, ಸಾರಿಗೆ ಬಸ್ ಮುಖಾಮುಖಿ ಡಿಕ್ಕಿ – 12 ವಿದ್ಯಾರ್ಥಿಗಳಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • HDK ಪ್ರಧಾನಿಯಾದ್ರೆ ಜೆಡಿಎಸ್‍ನಲ್ಲಿ ದಲಿತ, ಮುಸ್ಲಿಂ CM: ಸಿಎಂ ಇಬ್ರಾಹಿಂ

    HDK ಪ್ರಧಾನಿಯಾದ್ರೆ ಜೆಡಿಎಸ್‍ನಲ್ಲಿ ದಲಿತ, ಮುಸ್ಲಿಂ CM: ಸಿಎಂ ಇಬ್ರಾಹಿಂ

    – ಡಿ.18ರ ನಂತ್ರ ರಾಜ್ಯದಲ್ಲಿ ಬದಲಾವಣೆ – ಜನತೆಗೆ ಬಿಗ್ ಸರ್‌ಪ್ರೈಸ್‌

    ಹುಬ್ಬಳ್ಳಿ: ಡಿಸೆಂಬರ್ 18ರ ನಂತರ ರಾಜ್ಯದಲ್ಲಿ ಬದಲಾವಣೆಯಾಗಲಿದೆ. ಜನತೆಗೆ ಬಿಗ್ ಸರ್‌ಪ್ರೈಸ್‌ ಸಿಗಲಿದೆ. ಹಾಲಿ ಶಾಸಕರು, ಮಾಜಿ ಶಾಸಕರು ಜೆಡಿಎಸ್‍ಗೆ (JDS) ಬರಲಿದ್ದಾರೆ. ಕೆಲ ಜಿಲ್ಲೆಗಳು ಬಿಜೆಪಿ (BJP) ಹಾಗೂ ಕಾಂಗ್ರೆಸ್ (Congress) ಮುಕ್ತ ಜಿಲ್ಲೆಗಳಾಗಲಿವೆ. ಕುಮಾರಸ್ವಾಮಿ ಪ್ರಧಾನ ಮಂತ್ರಿಯಾದ್ರೆ ಜೆಡಿಎಸ್‍ನಲ್ಲಿ ದಲಿತ, ಮುಸ್ಲಿಂ ಸಿಎಂ ಅವಕಾಶ ನೀಡುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಭವಿಷ್ಯ ನುಡಿದಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷಕ್ಕೆ ಟಿಕೆಟ್ ಆಕಾಂಕ್ಷಿಗಳು ಜಾಸ್ತಿಯಾಗಿದ್ದಾರೆ. ರಮೇಶ್ ಜಾರಕಿಹೊಳಿ ಜೊತೆ ಕುಮಾರಸ್ವಾಮಿ (H.D Kumaraswamy) ಮಾತನಾಡಿದ್ದಾರೆ. ಜಾರಕಿಹೊಳಿ ಕುಟುಂಬದಲ್ಲಿ ಎಷ್ಟು ಜನ ಬರುತ್ತಾರೆ ಅನ್ನೋದು ಕುಮಾರಸ್ವಾಮಿ ಅವರಿಗೆ ಗೊತ್ತು. ನಾವು ಇದುವರೆಗೂ ಎಲ್ಲೂ ಕೂಡಾ ಅಧಿಕೃತವಾಗಿ ಅಭ್ಯರ್ಥಿ ಘೋಷಣೆ ಮಾಡಿಲ್ಲ ಎಂದಿದ್ದಾರೆ. ಇದನ್ನೂ ಓದಿ: ನಾನೂ ರೌಡಿ, ಬಿಜೆಪಿಗೆ ನನ್ನನ್ನು ಸೇರಿಸಿಕೊಳ್ಳಿ – ಏಕಾಂಗಿ ಪ್ರತಿಭಟನೆ ನಡೆಸಿದ ಪಾನಿಪುರಿ ಮಂಜು

    ಧಾರವಾಡ ಜಿಲ್ಲೆಯಲ್ಲೂ ಸೋಲಿನ ಭಯದಿಂದ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. ಬಿಜೆಪಿ ಕಾಂಗ್ರೆಸ್ ಮತದಾರರ ಆಮೀಷಗಳನ್ನು ರೆಕಾರ್ಡ್ ಮಾಡಿ ನಾವು ಚುನಾವಣೆಗೆ ಮುನ್ನ ದೂರು ಕೊಡ್ತೀವಿ. ಶಾಸಕ ಸ್ಥಾನಕ್ಕೆ ನಿಲ್ಲಲು ಅರ್ಹರಲ್ಲ ಎಂದು ಚುನಾವಣೆ ಮುನ್ನ ಕೋರ್ಟ್‍ಗೆ ಹೋಗ್ತೀವಿ. ಕ್ರಿಮಿನಲ್ ಹಿನ್ನೆಲೆಯುಳ್ಳವರಿಗೆ ಟಿಕೆಟ್ ಕೊಟ್ರೆ ನಾವು ಚುನಾವಣೆಗೆ ಮುನ್ನ ಕೋರ್ಟ್ ಕೇಸ್ ಹಾಕುತ್ತೇವೆ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಜನವರಿಯಲ್ಲಿ ನಮ್ಮ ರಾಜ್ಯದ ಚುನಾವಣೆ ನಡಿಬೇಕು. ಮುಂದೆ ಸರ್ಕಾರ ಮಾಡೋರೆ ನಾವು. ಕಾಂಗ್ರೆಸ್, ಬಿಜೆಪಿ ರೌಡಿಗಳನ್ನು ಪಾರ್ಟಿಗೆ ಸೇರಿಸಿಕೊಳ್ಳುತ್ತಿದ್ದಾರೆ. ನಮ್ಮ ಪಾರ್ಟಿಯಲ್ಲಿ ಕ್ರಿಮಿನಲ್ ಕೇಸ್, ರೌಡಿಶೀಟರ್ ಆಗಿ ಹೆಸರಿದ್ರೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕೇಸರಿ ಶಲ್ಯ ಹಾಕಿಕೊಂಡು ಸಿ.ಟಿ ರವಿ ಮನೆಗೆ ಮುತ್ತಿಗೆಗೆ ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರು

    ಬೊಮ್ಮಾಯಿ (Basavaraj Bommai) ಸ್ವತಂತ್ರವಾಗಿ ಕೆಲಸ ಮಾಡ್ತಿಲ್ಲ. ಕೇಶವ ಕೃಪಾದಲ್ಲಿ ಏನ್ ಹೇಳ್ತಾರೆ ಅದನ್ನು ಮಾಡ್ತಾರೆ. ಬಿಜೆಪಿಗೆ 60 ರಿಂದ 65 ಸೀಟ್ ಬರಲ್ಲ. ನಾನು ಪಕ್ಷದ ಅಧ್ಯಕ್ಷನಾಗಿ ಹೇಳ್ತೀನಿ ನಮ್ಮ ಮುಖ್ಯಮಂತ್ರಿ ಕುಮಾರಸ್ವಾಮಿ. ಮುಸ್ಲಿಂ, ದಲಿತ ಸಿಎಂ ಮಾಡಬೇಕು ಅನ್ನೋದು ಕುಮಾರಸ್ವಾಮಿ ಇಚ್ಛೆ. ಆದ್ರೆ ನಮ್ಮ ಮುಖ್ಯಮಂತ್ರಿ ಕುಮಾರಸ್ವಾಮಿ. ದಲಿತ, ಮುಸ್ಲಿಮರಲ್ಲಿ ಒಬ್ಬರನ್ನು ಉಪಮುಖ್ಯಮಂತ್ರಿ ಮಾಡ್ತೀವಿ. ಕುಮಾರಸ್ವಾಮಿ ಪ್ರಧಾನ ಮಂತ್ರಿಯಾದ್ರೆ ಜೆಡಿಎಸ್‍ನಲ್ಲಿ ದಲಿತ, ಮುಸ್ಲಿಂ ಸಿಎಂ ಅವಕಾಶ. ಕುಮಾರಸ್ವಾಮಿ ಗ್ರಹಬಲ ನೋಡಿದ್ರೆ, ಅವರು ಕೇಂದ್ರಕ್ಕೆ ಹೋಗ್ತಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]