Tag: HDFC Bank

  • ಉತ್ತರಪ್ರದೇಶದಲ್ಲಿ ಕೂತಿದ್ದ ಕುರ್ಚಿಯಿಂದ ಬಿದ್ದು ಎಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿ ಸಾವು

    ಉತ್ತರಪ್ರದೇಶದಲ್ಲಿ ಕೂತಿದ್ದ ಕುರ್ಚಿಯಿಂದ ಬಿದ್ದು ಎಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿ ಸಾವು

    – ಅಧಿಕ ಕೆಲಸದೊತ್ತಡವೇ ಕಾರಣ ಎಂದು ಅಖಿಲೇಶ್ ಯಾದವ್ ಆರೋಪ

    ಲಕ್ನೋ: ಕೆಲಸ ಮಾಡುವಾಗ ಕೂತಿದ್ದ ಕುರ್ಚಿಯಿಂದ ಬಿದ್ದು ಬ್ಯಾಂಕ್ ಉದ್ಯೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಲಕ್ನೋದ ವಿಭೂತಿಖಂಡದ (VibhutiKhanda) ಹೆಚ್‌ಡಿಎಫ್‌ಸಿ ಬ್ಯಾಂಕ್ (HDFC Bank Branch) ಶಾಖೆಯಲ್ಲಿ ನಡೆದಿದೆ.

    ಇತ್ತಿಚೇಗಷ್ಟೇ ಕೆಲಸದ ಒತ್ತಡದಿಂದಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದ ಘಟನೆ ದೇಶಾದ್ಯಂತ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ.ಇದನ್ನೂ ಓದಿ: ಕೊಲೆ ಆರೋಪಿ ತಾಲೂಕು ಕಸಾಪ ಅಧ್ಯಕ್ಷ ಸ್ಥಾನದಿಂದ ತೆರವು – ರಾಜ್ಯಾಧ್ಯಕ್ಷ ಆದೇಶ

    ಮೃತ ಮಹಿಳೆಯನ್ನು 45 ವರ್ಷದ ಸದಾಫ್ ಫಾತಿಮಾ ಎಂದು ಗುರುತಿಸಲಾಗಿದ್ದು, ಲಕ್ನೋದ ವಿಭೂತಿಖಂಡದ ಹೆಚ್‌ಡಿಎಫ್‌ಸಿ ಬ್ಯಾಂಕ್ ಶಾಖೆಯಲ್ಲಿ ಹೆಚ್ಚುವರಿ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

    ವಿಭೂತಿಖಂಡದ ಸಹಾಯಕ ಪೊಲೀಸ್ ಆಯುಕ್ತ ರಾಧಾರಮಣ ಮಾತನಾಡಿ, ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಾವಿಗೆ ಕಾರಣ ಏನು ಎಂಬುದು ಪರೀಕ್ಷೆಯ ಬಳಿಕ ಸ್ಪಷ್ಟವಾಗುತ್ತದೆ ಎಂದಿದ್ದಾರೆ. ಈ ಬೆನ್ನಲ್ಲೇ ಆಕೆಯ ಸಹೋದ್ಯೋಗಿ ಪ್ರತಿಕ್ರಿಯಿಸಿ, ಫಾತಿಮಾ ಕೆಲಸದ ಒತ್ತಡದಲ್ಲಿದ್ದಳು ಎಂದು ತಿಳಿಸಿದ್ದಾರೆ.

    ಪ್ರಕರಣದ ಕುರಿತು ಸಮಾಜವಾದಿ ಪಕ್ಷದ (Samajwadi Party) ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಎಕ್ಸ್ (X) ಖಾತೆಯಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಇದು ಆತಂಕಕಾರಿ ವಿಷಯವಾಗಿದೆ. ದೇಶದ ಪ್ರಸ್ತುತ ಆರ್ಥಿಕ ಒತ್ತಡವನ್ನು ಪ್ರತಿಬಿಂಬಿಸುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕಂಪನಿಗಳು ಹಾಗೂ ಸರ್ಕಾರಿ ಇಲಾಖೆಗಳು ಗಂಭೀರವಾಗಿ ಯೋಚಿಸಬೇಕು. ಇದು ದೇಶದ ಮಾನವ ಸಂಪನ್ಮೂಲಕ್ಕೆ ತುಂಬಲಾರದ ನಷ್ಟ ಎಂದು ಬರೆದುಕೊಂಡಿದ್ದಾರೆ.ಇದನ್ನೂ ಓದಿ: ನಿನ್ನೆ ಬಂದಿರೋದು ಪೊಲಿಟಿಕಲ್‌ ಜಡ್ಜ್‌ಮೆಂಟ್‌: ಜಮೀರ್‌ ಅಹ್ಮದ್‌

  • ವಿಡಿಯೋ: ಎಚ್ಚರ, ಬೆಂಗಳೂರಿನಲ್ಲಿದೆ ಹಣ ನುಂಗೊ ಎಟಿಎಂ..!

    ವಿಡಿಯೋ: ಎಚ್ಚರ, ಬೆಂಗಳೂರಿನಲ್ಲಿದೆ ಹಣ ನುಂಗೊ ಎಟಿಎಂ..!

    ಬೆಂಗಳೂರು: ಎಟಿಎಂ ಅಂದ್ರೆ ಹಣವನ್ನು ನೀಡುವ ಯಂತ್ರ ಎನ್ನುವುದು ಎಲ್ಲರಿಗೂ ತಿಳಿದಿರೋ ವಿಚಾರ. ಆದರೆ ಈಗ ಹಣ ನುಂಗಿರುವ ಘಟನೆ ನಗರದ ಬೇಗೂರು ರಸ್ತೆಯಲ್ಲಿರುವ ಎಟಿಎಂವೊಂದರಲ್ಲಿ ನಡೆದಿದೆ.

    ಬೇಗೂರು ರಸ್ತೆಯಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ಎಟಿಎಂ ಹಣ ನುಂಗುತ್ತಿದೆ. ನಗರದ ಮಹೇಶ್ ಎಂಬವರು ಈ ಎಟಿಎಂ ನಲ್ಲಿ 10 ಸಾವಿರ ರೂ. ಡ್ರಾ ಮಾಡಿದ್ದಾರೆ. ಆದರೆ ಅವರ ಕೈಗೆ ಸೇರಿರೋದು ಬರೀ ಒಂದು ಸಾವಿರ ರೂಪಾಯಿ ಮಾತ್ರ. ಆದರೆ ಅವರ ಬ್ಯಾಂಕ್ ಅಕೌಂಟ್ ನಲ್ಲಿ ಮಾತ್ರ 10 ಸಾವಿರ ರೂಪಾಯಿ ತೆಗೆದಿದ್ದೀರಿ ಎಂದು ತೋರಿಸುತ್ತಿದೆ.

    ಎಟಿಎಂ ಈ ರೀತಿ ಹಣ ನುಂಗುವ ವಿಚಾರವನ್ನು ಸ್ವತಃ ಮಹೇಶ್ ವೀಡಿಯೊ ಮಾಡಿದ್ದಾರೆ. ಈ ಕುರಿತಂತೆ ಎಚ್‍ಡಿಎಫ್‍ಸಿ ಬ್ಯಾಂಕಿಗೆ ದೂರನ್ನೂ ಕೂಡಾ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ಈ ರೀತಿ ಗ್ರಾಹಕರಿಗೆ ಎಟಿಎಂ ಮೋಸ ಮಾಡುತ್ತಿದೆ. ಈ ವಿಚಾರ ಕುರಿತು ಮಹೇಶ್, ಬ್ಯಾಂಕ್ ಅಧಿಕಾರಿಗಳಿಗೆ ದೂರನ್ನು ನೀಡಿದ್ದಾರೆ. ಆದರೆ ಬ್ಯಾಂಕ್ ನ ಸಿಬ್ಬಂದಿ ಮಾತ್ರ ಕ್ಯಾರೇ ಎನ್ನುತ್ತಿಲ್ಲ ಎಂದು ಹಣ ಕಳೆದುಕೊಂಡ ಗ್ರಾಹಕ ಮಹೇಶ್ ದೂರಿದ್ದಾರೆ.

    ಸಾರ್ವಜನಿಕರಲ್ಲಿ ಈ ಕುರಿತು ಭಯ ಕಾಡುತ್ತಿದೆ. ಬ್ಯಾಂಕುಗಳು ಹಣ ಇಡೋಕೆ ಹೆಚ್ಚು ಸೇಫ್. ಎಟಿಎಂ ಮೂಲಕ ಎಲ್ಲಿ ಬೇಕಾದ್ರೂ ಹಣ ಪಡೆಯಬಹುದು ಅಂತಾರೆ. ಆದರೆ ಈ ರೀತಿ ಬ್ಯಾಂಕ್ ಎಟಿಎಂಗಳೇ ಹಣ ನುಂಗಿದರೆ ನಮ್ಮ ಗತಿ ಏನು ಅಂತಾ ಗ್ರಾಹಕರು ಭಯಪಡುತ್ತಿದ್ದಾರೆ.

    https://www.youtube.com/watch?v=dGTTywDwZ8Y