Tag: HD Rewanna

  • ಎರಡು ರಾಷ್ಟ್ರೀಯ ಪಕ್ಷಗಳು ನನ್ನ ಹೆಸರಿನ ವ್ಯಕ್ತಿಯಿಂದ ನಾಮಪತ್ರ ಹಾಕಿಸಿವೆ: ರೇವಣ್ಣ

    ಎರಡು ರಾಷ್ಟ್ರೀಯ ಪಕ್ಷಗಳು ನನ್ನ ಹೆಸರಿನ ವ್ಯಕ್ತಿಯಿಂದ ನಾಮಪತ್ರ ಹಾಕಿಸಿವೆ: ರೇವಣ್ಣ

    ಹಾಸನ: ಎರಡು ರಾಷ್ಟ್ರೀಯ ಪಕ್ಷಗಳು ನನ್ನ ಹೆಸರಿನ ವ್ಯಕ್ತಿಯಿಂದ ನಾಮಪತ್ರ ಹಾಕಿಸಿವೆ. ನಾವು ಅಷ್ಟೊಂದು ಫೇಮಸ್ ಆಗಿದ್ದೀವಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಗರಂ ಆಗಿದ್ದಾರೆ.

    bjp - congress

    ಎಂಎಲ್‍ಸಿ ಚುನಾವಣೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳನ್ನು ದೂರವಿಟ್ಟು ಜೆಡಿಎಸ್ ಗೆ ಅವಕಾಶ ಕೊಡಬೇಕು. ಕಳೆದ ಬಾರಿ ತಪ್ಪು ಮಾಡಿದ್ದೇವೆ, ಈ ಬಾರಿ ಸರಿಮಾಡಿಕೊಳ್ಳಬೇಕು ಎಂದು ಸದಸ್ಯರು ತೀರ್ಮಾನ ಮಾಡಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳು ನನ್ನ ಹೆಸರಿನ ವ್ಯಕ್ತಿಯಿಂದ ನಾಮಪತ್ರ ಹಾಕಿಸಿವೆ. ನಾವು ಅಷ್ಟೊಂದು ಫೇಮಸ್ ಆಗಿದ್ದೀವಿ. ಎರಡು ಪಕ್ಷಗಳಿಗೆ ಈ ಪರಿಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಇತಿಹಾಸದಲ್ಲಿಯೇ ಮೊದಲಬಾರಿಗೆ ಅಂಟಾರ್ಟಿಕಾದಲ್ಲಿ ಏರ್ಬಸ್ ವಿಮಾನ

    ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡುತ್ತೇನೆ. ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಪ್ರತಿಸ್ಪರ್ಧಿ ಎಂದು ಹೇಳುತ್ತಿದ್ದಾರೆ. ಜೆಡಿಎಸ್ ಏನು ಎಂದು ಈಗ ಎಲ್ಲರಿಗೂ ಗೊತ್ತಾಗಿದೆ. ನಮ್ಮ ಬಗ್ಗೆ ಮಾತನಾಡಿ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂದು ಗೊತ್ತಲ್ಲ. ನಾವೇನು ಅದರ ಬಗ್ಗೆ ಮಾತನಾಡಲ್ಲ ಎಂದು ಟೀಕಿಸಿದರು.

    ಮಾಜಿ ಸಿಎಂ ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿನ ಕೆಲವು ಲೀಡರ್ ಗಳಿಗಿಲ್ಲ. ನಮ್ಮ ಮನೆ ಬಾಗಿಲಿಗೆ ಬಂದು ನೀವೇ ಐದು ವರ್ಷ ಸಿಎಂ ಆಗಿ ಅಂದಿದ್ದರು. ಕುಮಾರಸ್ವಾಮಿ ಅವರಿಗೆ ಒಳ್ಳೆಯ ಹೆಸರು ಬರುತ್ತೆ ಎಂದು ಸರ್ಕಾರವನ್ನು ಬೀಳಿಸಿದರು. ಇದೇ ರೀತಿ ದೇವೇಗೌಡರನ್ನು ಪ್ರಧಾನಿ ಮಾಡಿದ್ದರು. 10 ತಿಂಗಳಿಗೆ ಕೆಳಗೆ ಇಳಿಸಿದ್ರು. ಕುಮಾರಸ್ವಾಮಿ ಅವರ ವಿರುದ್ಧ ಯಾವುದೋ ಬುಡುಬುಡಿಕೆ ಕೈಯಲ್ಲಿ ಸ್ಟೇಟ್ ಮೆಂಟ್ ಕೊಡಿಸುತ್ತಿದ್ದಾರೆ ಎಂದು ಕಿಡಿಕಾಡಿದರು.  ಇದನ್ನೂ ಓದಿ: ಪುನೀತ್‍ರಂತೆಯೇ ಯಾವಾಗಲು ಒಳ್ಳೆಯ ಕೆಲಸ ಮಾಡೋಣ: ವಿಜಯ ರಾಘವೇಂದ್ರ

    ಭ್ರಷ್ಟ ಅಧಿಕಾರಿಗಳ ನಿವಾಸದ ಮೇಲೆ ಎಸಿಬಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾಮಕಾವಾಸ್ಥೆಗೆ ಮಾಡೋದು ಬೇಡ. ಚುನಾವಣೆ ಬಂದಿದೆ ಎಂದು ದಾಳಿ ಮಾಡೋದು ಬೇಡ. ಭ್ರಷ್ಟರ ಮೇಲೆ ದಾಳಿ ಮಾಡಲಿ ಎಂದು ಹೇಳಿದರು.

  • ಉಪಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಟಾರ್ಗೆಟ್ ಮಾಡಿದವು: ಹೆಚ್.ಡಿ.ರೇವಣ್ಣ

    ಉಪಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಟಾರ್ಗೆಟ್ ಮಾಡಿದವು: ಹೆಚ್.ಡಿ.ರೇವಣ್ಣ

    ಹಾಸನ: ಉಪಚುನಾವಣೆಯಲ್ಲಿ ಬಿಜೆಪಿ ಅವರು ಕಾಂಗ್ರೆಸ್‍ನ ಬೈಯಲಿಲ್ಲ, ಕಾಂಗ್ರೆಸ್ಸಿಗೆ ಬಿಜೆಪಿ ಬೈಯಲಿಲ್ಲ. ಆದರೆ ಎರಡು ರಾಷ್ಟ್ರೀಯ ಪಕ್ಷಗಳು, ಜೆಡಿಎಸ್ ಟಾರ್ಗೆಟ್ ಮಾಡಿದರು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕಿಡಿಕಾರಿದರು.

    ಸಿಂಧಗಿ, ಹಾನಗಲ್ ಉಪಚುನಾವಣೆಯಲ್ಲಿ ಜೆಡಿಎಸ್ ಹೀನಾಯ ಸೋಲಿನ ವಿಚಾರದ ಬಗ್ಗೆ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳು, ಜೆಡಿಎಸ್ ಟಾರ್ಗೆಟ್ ಮಾಡಿದರು. ಈ ಪ್ರಾದೇಶಿಕ ಪಕ್ಷ ಮುಗಿಸಲು ಯಾರಿಂದಲೂ ಆಗಲ್ಲ. ಕಾಂಗ್ರೆಸ್ ಅವರು ಕೆಲವು ಬಟ್ಟಂಗಿಗಳನ್ನು ಇಟ್ಟುಕೊಂಡಿದ್ದರು ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ನನಗೆ ಅರ್ಥ ಮಾಡಿಕೊಳ್ಳಲು, ಈ ಸತ್ಯವನ್ನ ಅರಗಿಸಿಕೊಳ್ಳಲು ಆಗ್ತಿಲ್ಲ: ರಾಮ್ ಚರಣ್ ತೇಜಾ

    ಬೆಳಗ್ಗೆ ಎದ್ದರೆ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಬೈಯುತ್ತಿದ್ದರು. ಇದರಿಂದಲೇ ಸಿಂಧಗಿಯಲ್ಲಿ ಕಾಂಗ್ರೆಸ್ ಹೋಯ್ತು. ಅದು ನಮ್ಮ ಪಕ್ಷದವರನ್ನು ಕರೆದುಕೊಂಡು ಹೋಗಿ 31 ಸಾವಿರ ಮತಗಳಿಂದ ಸೋತರು. ಒಂದು ರಾಷ್ಟ್ರೀಯ ಪಕ್ಷ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ನಾಲ್ಕರಲ್ಲಿ ಮೂರು ಕಡೆ ಠೇವಣಿ ಕಳೆದುಕೊಂಡಿದೆ. ಒಂದು ರಾಷ್ಟ್ರೀಯ ಪಕ್ಷವೇ ಠೇವಣಿ ಕಳೆದುಕೊಂಡ ಮೇಲೆ ಜೆಡಿಎಸ್ ಏನಿದೆ? ಎಂದು ಪ್ರಶ್ನೆ ಹೇಳಿದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 300 ಸರ್ಕಾರಿ ಶಾಲೆಗಳ 600 ಕೊಠಡಿಗಳಿಗೆ ಹಾನಿ

    ಸಿಂಧಗಿಯಲ್ಲಿ ಬಿಜೆಪಿ ಗೆಲ್ಲಲು ಕಾಂಗ್ರೆಸ್ ಕಾರಣ. ಬಿಜೆಪಿಯ ಒಳಜಗಳದಿಂದ ಕಾಂಗ್ರೆಸ್ ಗೆದ್ದಿದೆ. ಮತದಾರರು ಪ್ರೀತಿಯಿಂದ ಮತ ಹಾಕಿಲ್ಲ, ಮುಖಂಡರಿಂದಲೂ ಗೆದ್ದಿಲ್ಲ. ಜೆಡಿಎಸ್ ಮುಗಿಸಬೇಕೆಂಬುದೇ ಕಾಂಗ್ರೆಸ್ಸಿನ ಮೊದಲ ಪ್ರಿಯಾರಿಟಿ. ಎರಡು ರಾಷ್ಟ್ರೀಯ ಪಕ್ಷಗಳಿಂದ ದುಡ್ಡು ಚೆಲ್ಲಾಟ ಆಗಿದೆ. ಕಾಂಗ್ರೆಸ್ ಅವರು ಎಲ್ಲ ಕಡೆ ಇದೇ ಕೆಲಸ ಮಾಡುತ್ತಿದ್ದಾರೆ. ಇದಕ್ಕೆಲ್ಲ ಧೃತಿಗೆಡಬೇಕಿಲ್ಲ, ಚುನಾವಣೆಯಲ್ಲಿ ಸೋಲು-ಗೆಲುವು ಸರ್ವೆ ಸಾಮಾನ್ಯ ಎಂದು ಕಿಡಿಕಾರಿದರು.

  • ಕುಮಾರಸ್ವಾಮಿ ಕೆಲವೊಂದನ್ನು ಬಿಡಬೇಕು, ಅಣ್ಣನಾಗಿ ಈ ಸಲಹೆ ನೀಡುತ್ತಿದ್ದೇನೆ – ರೇವಣ್ಣ

    ಕುಮಾರಸ್ವಾಮಿ ಕೆಲವೊಂದನ್ನು ಬಿಡಬೇಕು, ಅಣ್ಣನಾಗಿ ಈ ಸಲಹೆ ನೀಡುತ್ತಿದ್ದೇನೆ – ರೇವಣ್ಣ

    ಹಾಸನ: ಕುಮಾರಸ್ವಾಮಿ ಗೌರವದಿಂದ ಇರಬೇಕು. ರಾಜಕೀಯ ಶಾಶ್ವತವಲ್ಲದ ಕಾರಣ ಕೆಲವೊಂದನ್ನು ಬಿಡಬೇಕು. ಅಣ್ಣನಾಗಿ ಈ ಸಲಹೆ ನೀಡುತ್ತಿದ್ದೇನೆ ಎಂದು ರೇವಣ್ಣ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿ ಕೆಲವು ತಪ್ಪು ಮಾಡಿದ್ದಾರೆ. ಯಾವುದಕ್ಕೂ ಬಾರದವರನ್ನು ಶಾಸಕ, ಮಂತ್ರಿ, ಸಂಸರನ್ನಾಗಿ ಮಾಡಿದ್ದಾರೆ. ಮಾಡಿದ ತಪ್ಪಿಗೆ ಈಗ ಕುಮಾರಸ್ವಾಮಿ ಅನುಭವಿಸುತ್ತಿದ್ದಾರೆ. ಇವೆಲ್ಲ ಎಲ್ಲಿದ್ದವು? ಇವೆಲ್ಲವನ್ನು ನಾನು ಹತ್ತಿರಕ್ಕೆ ಸೇರಿಸಲ್ಲ. ಕುಮಾರಸ್ವಾಮಿಯದ್ದು ಸ್ವಲ್ಪ ದೊಡ್ಡ ಗುಣ, ಆಯ್ಯೋ ಅಂತಾ ಬಂದರೆ ತಥಾಸ್ತು ಅಂದು ಬಿಡುತ್ತಾನೆ. ಆಮೇಲೆ ಅವರೆಲ್ಲರೂ ಕುಮಾರಸ್ವಾಮಿಗೆ ಟೋಪಿ ಹಾಕಿ ಹೋಗುತ್ತಾರೆ ಎಂದು ಜೆಡಿಎಸ್ ಬಿಟ್ಟವರ ವಿರುದ್ಧ ಕಿಡಿಕಾರಿದರು.

    ಕೆಲವರು ಬೀಗರ ಊಟವನ್ನೇ ಹುಡುಕಿಕೊಂಡು ತಿರುಗುತ್ತಿದ್ದಾರೆ. ಎಲ್ಲಿ, ಯಾರ ಮನೆಯಲ್ಲಿ ಬೀಗರ ಊಟ ಇದೆ ಎಂದು ಹುಡುಕಿಕೊಂಡು ಓಡಾಡುತ್ತಿದ್ದಾರೆ. ಇವರಿಂದ ಕುಮಾರಸ್ವಾಮಿ ಪಾಠ ಕಲಿಯಬೇಕೇ? ರಾಜ್ಯದಲ್ಲಿ ಜೆಡಿಎಸ್ ಪಕ್ಷ ತನ್ನದೇ ಆದ ಅಸ್ತಿತ್ವ ಉಳಿಸಿಕೊಂಡಿದೆ. ಇದನ್ನು ರಾಷ್ಟ್ರೀಯ ಪಕ್ಷಗಳು ತೆಗೆಯಲು ಒಳಸಂಚನ್ನು ಮಾಡುತ್ತಿವೆ. ಆದರೆ ಈ ಎರಡೂ ರಾಷ್ಟ್ರೀಯ ಪಕ್ಷಗಳು ಇದರಲ್ಲಿ ಯಶಸ್ಸು ಕಾಣುವುದಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ.

    ರಾಷ್ಟ್ರೀಯ ಪಕ್ಷಗಳು ಏನೇ ಮಾಡಿದರು ಇದರಲ್ಲಿ ಯಶಸ್ವಿಯಾಗುವುದಿಲ್ಲ. ಇಂತಹ ಅಪಪ್ರಚಾರವನ್ನು ದೇವೇಗೌಡರು, ಕುಮಾರಸ್ವಾಮಿ ತುಂಬಾ ದಿನಗಳಿಂದ ನೋಡಿದ್ದಾರೆ. ಜೆಡಿಎಸ್‍ನ ಮುಗಿಸಲು ಯಾರಿಂದಲೂ ಆಗಲ್ಲ. ಜನತೆ, ದೇವರ ಆಶೀರ್ವಾದ ಇರೋವವರೆಗೂ ಜೆಡಿಎಸ್ ಮುಗಿಸಲು ಸಾಧ್ಯವಿಲ್ಲ. ದೇವೇಗೌಡರು ಇವೆಲ್ಲವನ್ನೂ ಎದುರಿಸಿಯೇ ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಿದ್ದಾರೆ. ಕಾಲವೇ ಎಲ್ಲವನ್ನೂ ನಿರ್ಧರಿಸುತ್ತದೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯುವ ಶಕ್ತಿ ಜೆಡಿಎಸ್‍ಗೆ ಇದೆ. ಜನರೇ ಎರಡು ರಾಷ್ಟ್ರೀಯ ಪಕ್ಷಗಳಿಗೆ ಉಗಿಯುವ ಕಾಲ ಬರಲಿದೆ. ಜೆಡಿಎಸ್ ಕಾರ್ಯಕರ್ತರು ಧೃತಿಗೆಡಬೇಕಿಲ್ಲ. ಜೆಡಿಎಸ್ ಮುಗಿಸಲು ಕಚೇರಿಯನ್ನು ಕಿತ್ತುಕೊಂಡರು. ಈಗ ಒಳ್ಳೆಯ ಕಚೇರಿ ಕಟ್ಟಿಲ್ಲವೇ, ಅಪ್ರಚಾರಗಳಿಗೆ ಕಿವಿಗೊಡಬಾರದು ಎಂದು ಸಲಹೆ ನೀಡಿದರು

    ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರಕ್ಕೆ ಬರದಿದ್ದರೆ 48 ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಆಗುತ್ತಿರಲಿಲ್ಲ. ತೆಂಗು, ಆಲೂಗಡ್ಡೆ ಬೆಳೆಗಾರರಿಗೆ ಪರಿಹಾರ, ಗೃಹಲಕ್ಷ್ಮಿ ಯೋಜನೆ, ಒಂದು ಸಾವಿರ ಇಂಗ್ಲಿಷ್ ಶಾಲೆಗಳನ್ನು ತೆರೆಯಲಾಗಿದೆ. ಇದೀಗ ದಳದಲ್ಲಿ ತಳಮಳ ಎನ್ನುತ್ತಾರೆ. ಆದರೆ ಇಲ್ಲಿ ಯಾವ ತಳನು ಇಲ್ಲ ಮಳನು ಇಲ್ಲ ಎಂದು ತಿರುಗೇಟು ನೀಡಿದರು.

    ಕುಮಾರಸ್ವಾಮಿಯನ್ನು ಮತ್ತೆ ಮುಖ್ಯಮಂತ್ರಿ ಮಾಡಲು ಛಲ ತೊಟ್ಟಿದ್ದೇವೆ. ಈ ರಾಜ್ಯದಲ್ಲಿ ರೈತರು ಉಳಿಯಬೇಕು. ಅದಕ್ಕಾಗಿ ಮತ್ತೊಮ್ಮೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲೇಬೇಕು. ಕುಮಾರಸ್ವಾಮಿ ಸಾಲಮನ್ನಾ ಮಾಡಿರುವ ಹಣವನ್ನೇ ತಡೆಹಿಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ದೇವೇಗೌಡರು ತೀರ್ಮಾನ ಮಾಡುತ್ತಾರೆ. ಕೋಮುವಾದಿ ಪಕ್ಷ ದೂರವಿಡಲು ಒಂದಾಗುವುದಾದರೆ ದೇವೇಗೌಡರು, ಕುಮಾರಸ್ವಾಮಿ ನಿರ್ಧರಿಸುತ್ತಾರೆ. ದೇವೇಗೌಡರು, ಕುಮಾರಸ್ವಾಮಿ ಅವರ ತೀರ್ಮಾನವೇ ಅಂತಿಮ ಎಂದರು.

    ಡಿ.ಕೆ.ಶಿವಕುಮಾರ್ ಕಷ್ಟದಲ್ಲಿದ್ದಾನೆ, ರಾಜ್ಯದಲ್ಲಿ ಡಿಕೆಶಿ ಒಬ್ಬನೇನಾ ದುಡ್ಡು ಮಾಡಿರೋದು, ನಾನು ದೇವೇಗೌಡರು ಡಿಕೆಶಿ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಕೆಲವರು ಬೆಳಿಗ್ಗೆ ಎದ್ದರೆ ಸಿದ್ದರಾಮಯ್ಯ ರಾತ್ರಿ ಆದರೆ ಯಡಿಯೂರಪ್ಪ ಮನೆಯ ಬಾಗಿಲು ತಟ್ಟುತ್ತವೆ. ಅವು ಕುಮಾರಸ್ವಾಮಿ ಯಾಕೆ ಡಿಕೆಶಿ ದರೋಡೆ ಮಾಡಿದಾ ಅಂತಾ ಹೇಳುತ್ತವೆ. ಅಂತಹವರು ಡಿ.ಕೆ.ಶಿವಕುಮಾರ್ ಉಳಿಸುತ್ತಾರಾ, ಕಾಲ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದು ಚೆಲುವರಾಯಸ್ವಾಮಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

    ಬೇರೆಯವರಾಗಿದ್ದರೆ ಇಡಿ ಅಧಿಕಾರಿಗಳು ನೀಡುವ ಕಾಟವನ್ನು ತಾಳಲಾರದೆ, ಇಷ್ಟೊತ್ತಿಗೆ ಬಿಜೆಪಿಗೆ ಹೋಗಿ ಶರಣಾಗುತ್ತಿದ್ದರು. ಡಿಕೆಶಿ ಮತ್ತು ಡಿ.ಕೆ.ಸುರೇಶ್‍ಗೆ ಒಳ್ಳೆಯ ಶಕ್ತಿ ಇದೆ ಬೇರೆಯವರನ್ನು ಗೆಲ್ಲಿಸುವ ಶಕ್ತಿ ಇದೆ. ಹೀಗಾಗಿ ಅವರು ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  • ಒಂದು ಸಮಾಜವನ್ನು ಗುರಿಯಾಗಿಸಿಕೊಂಡು ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ – ರೇವಣ್ಣ ವಾಗ್ದಾಳಿ

    ಒಂದು ಸಮಾಜವನ್ನು ಗುರಿಯಾಗಿಸಿಕೊಂಡು ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ – ರೇವಣ್ಣ ವಾಗ್ದಾಳಿ

    – ಎಷ್ಟು ಪರ್ಸೆಂಟ್ ತಗೋಂಡಿದ್ದಾರೆ ಹೇಳ್ಬೇಕು

    ಹಾಸನ: ಒಂದು ಸಮಾಜವನ್ನು ಗುರಿಯಾಗಿಸಿಕೊಂಡು ವರ್ಗಾವಣೆ ದಂಧೆ ನಡೆಸುತ್ತಿದ್ದು, ವರ್ಗಾವಣೆಗೆ ಎಷ್ಟು ಪರ್ಸೆಂಟ್ ಹಣ ಪಡೆದಿದ್ದೀರಿ ಎಂದು ತಿಳಿಸಿ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿಗೆ ಬಂದು ಆರು ತಿಂಗಳೂ ಆಗಿರಲಿಲ್ಲ. ಆಗಲೇ ಮಹಿಳಾ ಅಧಿಕಾರಿಯನ್ನು ಬೆಂಗಳೂರಿನಿಂದ ಜಮಖಂಡಿಗೆ ವರ್ಗಾವಣೆ ಮಾಡಲಾಗಿದ್ದು, ಇದಕ್ಕಾಗಿ ಎಷ್ಟು ಪರ್ಸೆಂಟ್ ಕಮಿಷನ್ ಪಡೆದಿದ್ದಾರೆ ಸ್ಪಷ್ಟಪಡಿಸಲಿ. ಮಹಿಳಾ ಅಧಿಕಾರಿಗೆ ಕಿರುಕುಳ ಕೊಟ್ಟಿದ್ದಾರೆ. ಪಿಡಬ್ಲ್ಯೂಡಿ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಹಿಂದೆ ಟೆನ್ ಪರ್ಸೆಂಟ್ ಸರ್ಕಾರ ಎನ್ನುತ್ತಿದ್ದ ಮೋದಿಯವರು, ಇದೀಗ ಟೆನ್ ಅಥವಾ ಎಷ್ಟು ಪರ್ಸೆಂಟಾದರೂ ಮಾಡಿಸಲಿ. ವರ್ಗಾವಣೆ ದಂಧೆ ಮಾಡಿ ನಂತರ ನೆರೆ ಹಾನಿಗೆ ದುಡ್ಡು ಬಿಡುಗಡೆ ಮಾಡುತ್ತಾರೆ ಅನ್ನಿಸುತ್ತದೆ ಎಂದು ಹರಿಹಾಯ್ದಿದ್ದಾರೆ.

    ನಮ್ಮ ಜಿಲ್ಲೆಯಲ್ಲೂ ನೆರೆಯಿಂದ ಹಾನಿಯಾಗಿದೆ. ಆದರೆ, ಈವರೆಗೆ ಬಿಡಿಗಾಸು ಬಂದಿಲ್ಲ. ಹಾಸನ ಜಿಲ್ಲೆ ಅಂದರೆ ಇವರಿಗೆ ಒಂತರಾ ಅನ್ನಿಸುತ್ತದೆ. ಬೆಳೆಗಳು ನಷ್ಟವಾಗಿದ್ದರೂ ಯಾರೂ ಏನೂ ಕೇಳುತಿಲ್ಲ. ರೈತರು ನೊಂದಿರುವ ಕುರಿತು ನನಗೀಗ ಚಿಂತೆ ಶುರುವಾಗಿದೆ. ಯಾವ ಉದ್ದೇಶ ಇಟ್ಟುಕೊಂಡು ಈ ರೀತಿ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ದೇವೇಗೌಡರನ್ನು ಸೋಲಿಸಿದ್ದು ಯಾರು ಎಂದು ಇಡೀ ದೇಶಕ್ಕೆ ಗೊತ್ತಿದೆ. ಹಾಸನ ಜಿಲ್ಲೆಯಲ್ಲಿ ಏನು ನಡೆದಿದೆ ಎನ್ನುವುದೂ ಗೊತ್ತಿದೆ. ಹಾಸನದಲ್ಲಿ ಹವಾಯಿ ಚಪ್ಪಲಿ ಹಾಕಿಕೊಂಡು ಓಡಾಡುತ್ತಾರೆ. ಬೆಂಗಳೂರಲ್ಲಿ ಸೂಟು ಬೂಟು ಹಾಕ್ಕೊಂಡು ಓಡಾಡುತ್ತಾರೆ. ದೇವೇಗೌಡರು, ಕುಮಾರಸ್ವಾಮಿಗೆ ಇದೆಲ್ಲ ಗೊತ್ತಿದೆ ಎಂದು ಹರಿಹಾಯ್ದಿದ್ದಾರೆ.

  • 14 ತಿಂಗಳ ನೋವನ್ನು ಕುಮಾರಣ್ಣ ತಡೆದಿದ್ದಾರೆ- ಎಚ್.ಡಿ.ರೇವಣ್ಣ

    14 ತಿಂಗಳ ನೋವನ್ನು ಕುಮಾರಣ್ಣ ತಡೆದಿದ್ದಾರೆ- ಎಚ್.ಡಿ.ರೇವಣ್ಣ

    ಮಂಡ್ಯ: 14 ತಿಂಗಳುಗಳ ನೋವನ್ನು ಎಚ್.ಡಿ.ಕುಮಾರಸ್ವಾಮಿಯಾಗಿದ್ದಕ್ಕೆ ತಡೆದಿದ್ದಾರೆ. ಬೇರೆ ಯಾರು ಕೂಡ ಈ ಪ್ರಮಾಣದ ನೋವನ್ನು ತಡೆಯುತ್ತಿರಿಲ್ಲ ಎಂದು ಹೇಳುವ ಮೂಲಕ ಅನರ್ಹ ಶಾಸಕರು ಹಾಗೂ ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.

    ಜಿಲ್ಲೆಯ ಕೆ.ಆರ್.ಪೇಟೆಯ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕುಮಾರಣ್ಣ ರೈತರ ಸಾಲವನ್ನು ಮನ್ನಾ ಮಾಡಿದರು. ಆಗ ಸಹಾಯ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರೂ ಸಹ ಒಂದು ರೂಪಾಯಿ ಕೊಡಲಿಲ್ಲ. ತುಮಕೂರು ಜಿಲ್ಲೆಯ ತೆಂಗಿನಮರಗಳು ಹಾನಿಯಾಗಿದ್ದವು. ಇದಕ್ಕೆ ಬಿಜೆಪಿಯವರು ಒಂದು ರೂಪಾಯಿ ಸಹ ಕೊಡಲಿಲ್ಲ. ಕುಮಾರಣ್ಣ 200 ಕೋಟಿ ರೂಪಾಯಿ ಕೊಟ್ಟಿದ್ದರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

    ಮಾರವಾಡಿಗಳಿಗೆ ಚಿನ್ನ ಅಡವಿಟ್ಟು ಸಾಲ ತೆಗೆದುಕೊಳ್ಳುತ್ತಿದ್ದರು. ಇದರಿಂದಲೇ ಮಾರವಾಡಿಗಳು ಹೆಚ್ಚು ಮನೆಗಳನ್ನು ಕಟ್ಟಿದ್ದಾರೆ. ಆದರೆ, ಕುಮಾರಣ್ಣ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದರಿಂದ ಇಂದು ಜನ ಉಸಿರು ಬಿಡುತ್ತಿದ್ದಾರೆ. ಇಲ್ಲವಾಗಿದ್ದರೆ ಈ ಸಾಲವೂ ಸಹ ಅವರಿಗೆ ಹೊರೆಯಾಗುತ್ತಿತ್ತು ಎಂದು ಕುಮಾರಸ್ವಾಮಿ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಕುಮಾರಣ್ಣ ಒಳ್ಳೆಯವರನ್ನೂ ನಂಬುತ್ತಾರೆ, ಕೆಟ್ಟವರನ್ನು ನಂಬುತ್ತಾರೆ. ನಾನು ದೊಡ್ಡವರ ಮಾತು ಕೇಳು ಎಂದು ಹೇಳುತ್ತೇನೆ, ಆದರೆ ಕೇಳಲ್ಲ. ಎಲ್ಲರನ್ನೂ ನಂಬಿ ಪಕ್ಷಕ್ಕೆ ಕರೆ ತರುತ್ತಾನೆ. ಅವರು ಚಂಗಲು ಬಿದ್ದಿರುತ್ತಾರೆ. ಮೇವು ಸಿಕ್ಕಿದ ಕಡೆಗೆ ಹೋಗುತ್ತಾರೆ. ಹೊಟೇಲ್‍ನಲ್ಲಿ ಇದ್ದವರನ್ನು ಕುಮಾರಣ್ಣ ಪಕ್ಷಕ್ಕೆ ಕರೆ ತಂದರು. ಆದರೆ, ಅವು ಚಂಗಲುಗಳು, ಮೇವು ಎಲ್ಲಿ ಸಿಗುತ್ತದೆ ಎಂದು ನೋಡುತ್ತಿರುತ್ತವೆ. ಮೇವು ಸಿಕ್ಕ ಕಡೆ ಹಾರುತ್ತಿರುತ್ತಾರೆ ಎಂದು ಅನರ್ಹ ಶಾಸಕ ನಾರಾಯಣಗೌಡ ವಿರುದ್ಧ ಪರೋಕ್ಷವಾಗಿ ವಗ್ದಾಳಿ ನಡೆಸಿದರು.

    ಕೆಲಸ ಮಾಡುವ ಎತ್ತಿಗೆ ಹುಲ್ಲು ಹಾಕು ಎಂದು ನಾನು ಹೇಳುತ್ತೇನೆ. ನನ್ನ ಮಾತನ್ನು ಕೇಳುವುದಿಲ್ಲ, ಈಗ ನೋಡಿ ಏನಾಗಿದೆ ಎಂದು. ಅದಕ್ಕೆ ಇಲ್ಲಿಗೆ ಕುಮಾರಣ್ಣ ಬಂದಿಲ್ಲ. ಮನೆ ಹತ್ತಿರ ಹೋದರೆ ಟೀ ಕೊಡೋದಿಲ್ಲ ಎನ್ನುತ್ತಾರೆ, ಯಾರ ಮನೆಯಲ್ಲಿ ಟೀ ಕೊಡುವುದಿಲ್ಲ. ಇವರು ಟೀ ಕುಡಿಯೋರಲ್ಲ, ಚಂಗಲುಗಳು ಇವರು ಎಂದು ವಾಗ್ದಾಳಿ ನಡೆಸಿದರು.

  • ಡಿಕೆಶಿ ನಮ್ಮ ಸಮಾಜದವನು, ಕಾಂಗ್ರೆಸ್ಸಿನಲ್ಲಿ ಬೆಳೆಯುತ್ತಾನೆಂದು ಇಡಿಯಿಂದ ಅರೆಸ್ಟ್ – ರೇವಣ್ಣ

    ಡಿಕೆಶಿ ನಮ್ಮ ಸಮಾಜದವನು, ಕಾಂಗ್ರೆಸ್ಸಿನಲ್ಲಿ ಬೆಳೆಯುತ್ತಾನೆಂದು ಇಡಿಯಿಂದ ಅರೆಸ್ಟ್ – ರೇವಣ್ಣ

    ಹಾಸನ: ಡಿ.ಕೆ.ಶಿವಕುಮಾರ್ ನಮ್ಮ ಸಮಾಜದವನು. ಕಾಂಗ್ರೆಸ್‍ ನಲ್ಲಿ ಬೆಳೆಯುತ್ತಾನೆ ಎಂಬ ಉದ್ದೇಶದಿಂದ ಇಡಿಯಿಂದ ಅರೆಸ್ಟ್ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಎಚ್.ಡಿ.ರೇವಣ್ಣ ಹರಿಹಾಯ್ದಿದ್ದಾರೆ.

    ಬೇಲೂರಿನಲ್ಲಿ ಜೆಡಿಎಸ್ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಗೆ  ಏನು ಮಾಡುತ್ತಿದ್ದಾರೆ. ಅದನ್ನು ನಾನು ಖಂಡಿಸುತ್ತೇನೆ. ಬೇಕಂತಲೇ ಈ ರೀತಿ ಮಾಡುತ್ತಿದ್ದಾರೆ. ಡಿಕೆಶಿ ತಂದೆಗೆ ಎಡೆ ಇಡುತ್ತೇನೆ ಎಂದರೂ ಕರುಣೆ ತೋರಿಸಲಿಲ್ಲ. ನಾನು ಇದನ್ನೆಲ್ಲ ನೋಡುತ್ತಿದ್ದೇನೆ. ಯಡಿಯೂರಪ್ಪ ಅವರ ಮಗ ಡಿಕೆಶಿ ಮನೆಗೆ ಹೋಗಿ ಯೋಜನೆಗಳಿಗೆ ಹಣವನ್ನು ಬಿಡುಗಡೆ ಮಾಡಿಸಿಕೊಂಡಿದ್ದರೂ ದ್ವೇಷದ ರಾಜಕಾರಣ ಬಿಡಲಿಲ್ಲ ಎಂದು ಬಿಎಸ್‍ವೈ ವಿರುದ್ಧ ಕಿಡಿಕಾರಿದರು.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಅಧಿಕಾರ ವಹಿಸಿಕೊಂಡ ನಂತರ ಸಂಜೆಯೇ ಕೆಎಂಎಫ್ ಫೈಲ್ ತೆಗೆದರು. ಬಿ.ಎಸ್.ಯಡಿಯೂರಪ್ಪನವರಿಗೆ ದೇವರೇ ಶಿಕ್ಷೆ ಕೊಡುವ ಕಾಲ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬಿಜೆಪಿ ಶಾಸಕರಿಗೆ ನೈತಿಕತೆ ಇದ್ದರೆ, ಸಿಎಂ ಯಡಿಯೂರಪ್ಪ ಅವರನ್ನು ಕೇಳಲಿ, ಮುಖ್ಯಮಂತ್ರಿಯಾಗಿ ಎಂಟು ದಿನಕ್ಕೆ ಶಿವಮೊಗಕ್ಕೆ ಎರಡು ಸಾವಿರ ಕೋಟಿ ರೂ. ಹಣ ತೆಗೆದಿದ್ದಾರೆ. ಕುಮಾರಸ್ವಾಮಿಗೆ ಹಾಸನ ಬಜೆಟ್ ಅಂತಿದ್ರಲ್ಲಾ? ಇದು ಶಿಕಾರಿಪುರ ಬಜೆಟ್ಟಾ? ಜಗದೀಶ್ ಶೆಟ್ಟರ್ ನಮ್ಮ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದರು. ಈಗ ಸಿಎಂ ಯಡಿಯೂರಪ್ಪನವರನ್ನು ಕೇಳೋಕೆ ಭಯವೇ? ಸಿಕ್ಕ ಮಂತ್ರಿ ಪದವಿ ಹೋಗುತ್ತೆ ಅಂತ ಜಗದೀಶ್ ಶೆಟ್ಟರ್ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಜೆಡಿಎಸ್ ಅಂದರೆ ನಾಯಕರನ್ನು ತಯಾರಿಸುವ ಕಾರ್ಖಾನೆ. ಬೆಳೆದ ಮೇಲೆ ಮೇವು ಎಲ್ಲಿ ಸಿಗುತ್ತೋ ಅಲ್ಲಿಗೆ ಹೋಗುತ್ತವೆ. ನಮ್ಮ ಕೆಲಸ ಯಾರೂ ತಡೆಯೋಕೆ ಆಗಲ್ಲ, ಬೇಕಿದ್ದರೆ ನಿಧಾನ ಮಾಡಬಹುದು. ನಮ್ಮ ಕೆಲಸಗಳನ್ನು ನಾನು ಮಾಡಿಯೇ ತೀರುತ್ತೇನೆ ಎಂದು ಹೇಳಿದರು.

  • ಬೆಲ್ ಹೊಡೆದಿದ್ದನ್ನೇ ದೊಡ್ಡದು ಮಾಡಿದ್ರು- ಮಾಧ್ಯಮಗಳ ವಿರುದ್ಧ ರೇವಣ್ಣ ಕಿಡಿ

    ಬೆಲ್ ಹೊಡೆದಿದ್ದನ್ನೇ ದೊಡ್ಡದು ಮಾಡಿದ್ರು- ಮಾಧ್ಯಮಗಳ ವಿರುದ್ಧ ರೇವಣ್ಣ ಕಿಡಿ

    ಹಾಸನ: ಸಂತ್ರಸ್ತರ ಸಮಸ್ಯೆಗಳನ್ನು ಆಲಿಸುತ್ತಿದ್ದಾಗ ಅಧಿಕಾರಿಗಳನ್ನು ಕರೆಯಲು ಬೆಲ್ ಹೊಡೆದ ವಿಚಾರನ್ನೇ ದೊಡ್ಡದಾಗಿ ಮಾಡಿದರು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಮಾಧ್ಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಸಂತ್ರಸ್ತರ ಸಮಸ್ಯೆ ಆಲಿಸುವಾಗ ಅಧಿಕಾರಿಗಳನ್ನು ಬೆಲ್ ಹಿಡಿದಿದ್ದನ್ನೇ ದೊಡ್ಡದು ಮಾಡಿದರು. ನೊಂದವರ ಕುರಿತು ವಿಚಾರಿಸಲು ಅಲ್ಲಿಯೇ ಉಳಿದುಕೊಂಡು ಅವರನ್ನು ಮಾತಾಡಿಸಿದ್ದೇನೆ. ಖಾನಾಪೂರದಲ್ಲಿ ಎಲ್ಲ ಮನೆಗಳು ಕುಸಿದಿವೆ. ಹೊಳೆನರಸೀಪುರದಲ್ಲಿ ಸಹ ಪ್ರವಾಹದಿಂದ ಮನೆಗಳ ಹಾನಿಯಾಗಿದೆ. ನಮ್ಮ ಜಿಲ್ಲೆಯಲ್ಲಿ ಮತ್ತು ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಕಣ್ಣಿಂದ ನೋಡಲಾಗದಷ್ಟು ಜನ ಸಂಕಷ್ಟದಲ್ಲಿದ್ದಾರೆ. ಒಂದೆಡೆ ಐದಾರು ಸಾವಿರ ನಿರಾಶ್ರಿತರು ಮತ್ತೊಂದೆಡೆ ಶಾಲಾ ಮಕ್ಕಳನ್ನು ನೋಡಿದರೆ ನೋವಾಗುತ್ತದೆ ಎಂದು ತಿಳಿಸಿದರು.

    ಕೆಎಂಎಫ್ ಚುನಾವಣೆ ಬಗ್ಗೆ ಏನೂ ಮಾತನಾಡುವುದಿಲ್ಲ. ಬಾಲಚಂದ್ರ ಜಾರಕಿಹೊಳಿ ಹೇಳಿಕೆ ಕುರಿತು ಸಹ ಪ್ರತಿಕ್ರಿಯೆ ನೀಡಲ್ಲ. ಇವತ್ತು ರಾಜಕೀಯ ಮಾತನಾಡುವ ಸಮಯ ಅಲ್ಲ. ಸಂತ್ರಸ್ತರಿಗೆ ಸಾಂತ್ವನ ಹೇಳುವ ಸಮಯ ಎಂದು ಕೆಎಂಎಫ್ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

    ನಮ್ಮ ಜಿಲ್ಲೆಯ ಹಲವೆಡೆ ಸಮಸ್ಯೆ ಆಗಿದೆ. ಹೊಳೆನರಸೀಪುರದಲ್ಲಿ ಹೊಳೆಗೆ ವಾಲ್ ಮಾಡಿದ್ದು ಸರಿ ಎಂದು ಈಗ ಹೇಳುತ್ತಾರೆ. ಈ ವಾಲ್ ಕಟ್ಟದಿದ್ದರೆ, ಅರ್ಧ ಹೊಳೆ ನರಸೀಪುರ ಕೊಚ್ಚಿ ಹೋಗುತ್ತಿತ್ತು. ಈಗ ಅದನ್ನು ನಿರ್ಮಾಣ ಮಾಡಿದರೆ ಎರಡು ಪಟ್ಟು ಹಣ ಖರ್ಚಾಗುತ್ತದೆ. ಕೂಡಲೇ ತುರ್ತು ಅಧಿವೇಶನ ಕರೆಯಬೇಕು. ರಾಜ್ಯದಲ್ಲಿ ಆಗಿರುವ ಅನಾಹುತಗಳ ಬಗ್ಗೆ ಚರ್ಚೆಯಾಗಬೇಕು. ಒಡಿಶಾ ಚುನಾವಣೆ ಸಂದರ್ಭದಲ್ಲಿ ಪ್ರವಾಹ ಆದಾಗ ಪ್ರಧಾನಿ ನರೇಂದ್ರ ಮೋದಿ ಒಂದು ಲಕ್ಷ ಕೋಟಿ ರೂ. ಘೋಷಣೆ ಮಾಡಿದ್ದರು. ಅದೇ ರೀತಿ ಕೇಂದ್ರ ಸರ್ಕಾರ ಇಲ್ಲಿಗೂ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.

  • ಡಿಸಿಎಂ, ಮಿನಿಸ್ಟರ್ ಬೇಡ ಕೆಎಂಎಫ್ ಅಧ್ಯಕ್ಷ ಸ್ಥಾನ ಸಾಕು: ಬಾಲಚಂದ್ರ ಜಾರಕಿಹೊಳಿ

    ಡಿಸಿಎಂ, ಮಿನಿಸ್ಟರ್ ಬೇಡ ಕೆಎಂಎಫ್ ಅಧ್ಯಕ್ಷ ಸ್ಥಾನ ಸಾಕು: ಬಾಲಚಂದ್ರ ಜಾರಕಿಹೊಳಿ

    ಬೆಂಗಳೂರು: ಕೆಎಂಎಫ್ ಅಧ್ಯಕ್ಷ ಸ್ಥಾನ ನನಗೆ ಸಚಿವ ಸ್ಥಾನಕ್ಕಿಂತಲೂ ಹೆಚ್ಚು. ಡಿಸಿಎಂ, ಮಿನಿಸ್ಟರ್ ಹುದ್ದೆ ಬೇಡ, ಕೆಎಂಎಫ್ ಅಧ್ಯಕ್ಷ ಸ್ಥಾನ ಒಂದೇ ಸಾಕು ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

    ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿ ಆಗಿರಲಿಲ್ಲ. ಸಚಿವ ಸ್ಥಾನ ಸಿಗದಿರುವ ಕುರಿತು ಯಾವುದೇ ಅಸಮಾಧಾನ ಇರಲಿಲ್ಲ. ನನ್ನ ಆಲೋಚನೆಗಳೇ ಬೇರೆ ಇದ್ದವು, ಹೀಗಾಗಿ ನನಗೆ ಯಾವುದೇ ಸ್ಥಾನ ಬೇಡ ಎಂದು ಹೇಳಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಕೆಎಂಎಫ್ ಅಧ್ಯಕ್ಷನಾಗುವುದು ನನ್ನ ಆಸೆಯಾಗಿತ್ತು, ರಾಜಕೀಯದ ಭವಿಷ್ಯದ ದೃಷ್ಟಿಯಿಂದ ಕೆಎಂಎಫ್ ಅಧ್ಯಕ್ಷನಾಗಲು ನಿರ್ಧರಿಸಿದೆ. ಇದಕ್ಕಾಗಿ ಸಾಕಷ್ಟು ಪ್ರಯತ್ನವೂ ನಡೆದಿದ್ದು, ಇದರ ಭಾಗವಾಗಿ ನನ್ನ ಪರವಾಗಿ ಕೆಎಂಎಫ್‍ನ 6 ನಿರ್ದೇಶಕರು ನನ್ನ ಭೇಟಿ ಮಾಡಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಎಂದು ಮನವಿ ಮಾಡಿದರು. ಹೀಗಾಗಿ ನಾನು ಯೋಜನೆ ರೂಪಿಸಿಕೊಂಡು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದೆ ಎಂದು ತಿಳಿಸಿದರು.

    ನಾನು ಸಹಕಾರ ವಲಯದಿಂದ ಬಂದಿರುವವನು. ರೈತರ ಸೇವೆ ಮಾಡಲು ಒಳ್ಳೆಯ ಅವಕಾಶ ಎಂದು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಒಲವು ತೋರಿದೆ. ಕೆಎಂಎಫ್ ದೊಡ್ಡ ಸಂಸ್ಥೆ, ಬೆಳಗಾವಿ ಡೈರಿಯಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಹೀಗಾಗಿ ಕೆಎಂಎಫ್ ಅಧ್ಯಕ್ಷನಾಗಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

    ಕೆಎಂಎಫ್‍ನ ಒಟ್ಟು 12 ನಿರ್ದೇಶಕರ ಪೈಕಿ 6 ಜನ ನನಗೆ ಸಹಕಾರ ನೀಡುತ್ತಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿದೆ, ಅವರೂ ಸಹ ಒಪ್ಪಿಗೆ ಸೂಚಿಸಿದರು. ಕಾಂಗ್ರೆಸ್‍ನ ಭೀಮಾನಾಯ್ಕ್ ಸಹ ಆಕಾಂಕ್ಷಿಯಾಗಿದ್ದಾರೆ. ಅವರೂ ಪ್ರಯತ್ನ ಪಡುತ್ತಿದ್ದಾರೆ. ಜೆಡಿಎಸ್‍ನಿಂದ ಎಚ್.ಡಿ.ರೇವಣ್ಣ ಅವರೂ ಸಹ ಪ್ರಯತ್ನ ಪಡುತ್ತಿದ್ದಾರೆ. ನಾನು ಅವಿರೋಧವಾಗಿ ಆಯ್ಕೆಯಾಗಲು ತೀರ್ಮಾನಿಸಿದ್ದೇನೆ. ಈ ಸಂಬಂಧ ಎಚ್.ಡಿ.ರೇವಣ್ಣ, ಭೀಮಾನಾಯ್ಕ್ ಜೊತೆಗೂ ಚರ್ಚೆ ನಡೆಸುತ್ತೇನೆ. ಕೆಎಂಎಫ್ ನಿರ್ದೇಶಕರ ಜೊತೆಗೂ ಚರ್ಚೆ ಮಾಡ್ತೇನೆ ಎಂದು ತಿಳಿಸಿದರು.

    ಎಲ್ಲರೂ ಒಪ್ಪಿದಲ್ಲಿ ಅವಿರೋಧವಾಗಿ ಆಯ್ಕೆಯಾಗುತ್ತೇನೆ. ಯಾರೂ ಒಪ್ಪದಿದ್ದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಹಿಂದೆ ನಾಲ್ವರು ನಿರ್ದೇಶಕರನ್ನು ಎಚ್.ಡಿ.ರೇವಣ್ಣ ಹೈಜಾಕ್ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಉತ್ತರಿಸಿದ ಬಾಲಚಂದ್ರ ಜಾರಕಿಹೊಳಿ, ರೇವಣ್ಣ ಅವರು ಯಾರನ್ನೂ ಹೈಜಾಕ್ ಮಾಡಿರಲಿಲ್ಲ. ನಿರ್ದೇಶಕರೇ ಒಪ್ಪಿ ರೇವಣ್ಣ ಪರ ಇದ್ದರು ಎಂದು ರೇವಣ್ಣ ಪರ ಬಾಲಚಂದ್ರ ಬ್ಯಾಟಿಂಗ್ ಮಾಡಿದ್ದಾರೆ.

    ಎಲ್ಲರನ್ನೂ ಒಪ್ಪಿಸಲು ಪ್ರಯತ್ನಿಸುತ್ತೇನೆ. ಒಂದು ವೇಳೆ ಒಪ್ಪದಿದ್ದಲ್ಲಿ ಚುನಾವಣೆ ನಡೆಯಲಿ, ನನಗೆ ಗೆಲ್ಲುವ ಭರವಸೆ ಇದೆ. ಚುನಾವಣೆಯಲ್ಲಿ ನಾನು ಖಂಡಿತಾ ಗೆಲ್ಲುತ್ತೇನೆ. ಎಷ್ಟು ಜನ ನಿರ್ದೇಶಕರು ನನ್ನ ಪರ ಇದ್ದಾರೆ ಎಂಬುದು 31 ರಂದು ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.

  • ಸೂಪರ್ ಸಿಎಂ ರೇವಣ್ಣ ಇಲಾಖೆಯಲ್ಲಿ ಬರೋಬ್ಬರಿ ಒಂದೇ ದಿನ 800 ಅಧಿಕಾರಿಗಳಿಗೆ ಬಡ್ತಿ

    ಸೂಪರ್ ಸಿಎಂ ರೇವಣ್ಣ ಇಲಾಖೆಯಲ್ಲಿ ಬರೋಬ್ಬರಿ ಒಂದೇ ದಿನ 800 ಅಧಿಕಾರಿಗಳಿಗೆ ಬಡ್ತಿ

    ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಕೌಂಟ್‍ಡೌನ್ ಆರಂಭವಾಗಿದ್ದರೆ, ಇತ್ತ ಮೈತ್ರಿಯ ಸೂಪರ್ ಸಿಎಂ ಎಂದೇ ಬಿಂಬಿತವಾಗಿರುವ ಸಚಿವ ಹೆಚ್.ಡಿ.ರೇವಣ್ಣರ ಇಲಾಖೆಯಲ್ಲಿ ಒಂದೇ ದಿನದಲ್ಲಿ 800 ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಿದ್ದಾರೆ. ಒಂದೇ ದಿನದಲ್ಲಿ ನೂರಕ್ಕೂ ಹೆಚ್ಚು ಎಂಜಿನಿಯರ್ ಗಳನ್ನು ವರ್ಗಾವಣೆಯ ಆದೇಶಕ್ಕೆ ರೇವಣ್ಣ ಸಹಿ ಹಾಕಿದ್ದಾರೆ.

    ಸೋಮವಾರ ಸಚಿವರೆಲ್ಲಾ ರಾಜೀನಾಮೆ ನೀಡಿದ್ದರೂ, ರೇವಣ್ಣ ಅವರು ತಮ್ಮ ಲೋಕೋಪಯೋಗಿ ಇಲಾಖೆಯಲ್ಲಿ ಇನ್ನು ಸಕ್ರೀಯವಾಗಿದ್ದು, ಅಧಿಕಾರಿಗಳ ವರ್ಗಾವಣೆ ಮತ್ತು ಬಡ್ತಿ ಸಂಬಂಧ ತರಾತುರಿಯಲ್ಲಿ ಇಲಾಖಾ ಪದೋನ್ನತಿ ಸಮಿತಿ (ಡಿಸಿಪಿ) ಸಭೆಯನ್ನೂ ನಡೆಸಿದ್ದಾರೆ. ಮೈತ್ರಿ ಉಳಿಸಿಕೊಳ್ಳಲು ಎರಡೂ ಪಕ್ಷದ ಮುಖಂಡರು ಓಡಾಡುತ್ತಿದ್ದರೆ, ರೇವಣ್ಣ ಅವರು ಮಾತ್ರ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

    ಸರ್ಕಾರ ಪತನದಂಚಿಗೆ ತಲುಪಿರುವ ಸಮಯದಲ್ಲಿ ದಿಢೀರ್ ಎಂದು ಅಧಿಕಾರಿಗಳಿಗೆ ಬಡ್ತಿ ನೀಡಿರುವ ಹಿಂದೆ ಸಚಿವರ ಸ್ವಹಿತಾಸಕ್ತಿ ಅಡಗಿದೆ ಎಂಬ ಆರೋಪ ಕೇಳಿ ಬಂದಿದೆ. ಆತುರದಲ್ಲಿ ಬಡ್ತಿ ನೀಡುವ ವಿಷಯ ಕುರಿತು ಸಭೆ ನಡೆಸಲು ಅಧಿಕಾರಿಗಳ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ವಿಕಾಸಸೌಧದಲ್ಲಿ ನೆಪಮಾತ್ರಕ್ಕೆ ಸಭೆ ನಡೆಸಿದ ಅಧಿಕಾರಿಗಳು ರಹಸ್ಯ ಸ್ಥಳಕ್ಕೆ ತೆರಳಿ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ರೇವಣ್ಣ ಸಚಿವರಾಗುತ್ತಿದ್ದಂತೆ ಹಲವು ವಿಭಾಗೀಯ ಕಚೇರಿಗಳನ್ನು ಹಾಸನಕ್ಕೆ ಸ್ಥಳಾಂತರಿಸಿಕೊಂಡಿದ್ದರು. ರೇವಣ್ಣ ಅವರ ಈ ನಡೆಗೆ ಸಚಿವ ಸಂಪುಟದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿಂದೆ ಲೋಕೋಪಯೋಗಿ ಇಲಾಖೆಯಲ್ಲಿ ಕೈ ಬಿಟ್ಟ ಪ್ರಕರಣಗಳನ್ನು ಸಹ ಇತ್ಯರ್ಥಪಡಿಸಲು ಸಚಿವರು ಅಧಿಕಾರಿಗಳ ಮೂಲಕ ಮುಂದಾಗಿದ್ದಾರೆ. ಇದರಲ್ಲಿಯೂ ಸಚಿವರ ಸ್ವಹಿತಾಸಕ್ತಿಯೇ ಅಡಗಿದೆ ಎಂಬ ಆರೋಪಗಳು ಬಲವಾಗಿ ಕೇಳಿ ಬಂದಿದೆ.

    ಬಡ್ತಿ ಪಡೆದ ಅಧಿಕಾರಿಗಳ ವಿವರ ಹೀಗಿದೆ
    ಎಇ ಹುದ್ದೆಯಿಂದ ಎಇಇ ಹುದ್ದೆ-100
    ಜೆಇ ಹುದ್ದೆಯಿಂದ ಎಇಇ(2)-200
    ಎಇಇ ಹುದ್ದೆಯಿಂದ ಇಇ – 400
    ಇಇ ಹುದ್ದೆಯಿಂದ ಎಸ್‍ಇ-126