Tag: HD Revanna

  • ಕಾಂಗ್ರೆಸ್ ಸರ್ಕಾರ ಬಂದ್ಮೇಲೂ ಸಾಬ್ರಿಗೆ ರಕ್ಷಣೆ ಇಲ್ಲ: ರೇವಣ್ಣ

    ಕಾಂಗ್ರೆಸ್ ಸರ್ಕಾರ ಬಂದ್ಮೇಲೂ ಸಾಬ್ರಿಗೆ ರಕ್ಷಣೆ ಇಲ್ಲ: ರೇವಣ್ಣ

    ಬೆಂಗಳೂರು: ಈ ಸರ್ಕಾರ ಬಂದ ಮೇಲೂ ಸಾಬ್ರಿಗೆ (Muslim) ರಕ್ಷಣೆ ಇಲ್ಲ ಎಂದು ವಿಧಾನಸಭೆಯಲ್ಲಿ ಜೆಡಿಎಸ್ (JDS) ಶಾಸಕ ಹೆಚ್‌ಡಿ ರೇವಣ್ಣ (HD Revanna) ಹೇಳಿದ್ದಾರೆ.

    ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಚರ್ಚೆ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ರೇವಣ್ಣ, ಹಾಸನ ಆರ್ಟ್ಸ್ ಕಾಲೇಜಿನಲ್ಲಿ ಮುಸ್ಲಿಮರು ಎಂಬ ಕಾರಣಕ್ಕಾಗಿ ಪ್ರಾಂಶುಪಾಲ ಹುದ್ದೆ ಕೊಟ್ಟಿಲ್ಲ. ಮುಸ್ಲಿಂ ವ್ಯಕ್ತಿಗೆ ಸೀನಿಯಾರಿಟಿ ಇದ್ದರೂ ಅವರಿಗೆ ಹುದ್ದೆ ಕೊಟ್ಟಿಲ್ಲ. ಬದಲಾಗಿ ಜೂನಿಯರ್ ವ್ಯಕ್ತಿಗೆ ಹುದ್ದೆ ನೀಡಲಾಗಿದೆ. ಇನ್ನೂ ಸಾಬ್ರಿಗೆ ರಕ್ಷಣೆ ಇಲ್ಲ. ಈ ಸರ್ಕಾರದ ಬಂದ ಮೇಲೂ ರಕ್ಷಣೆ ಇಲ್ಲ ಎಂದು ಹೇಳಿದರು.

    ಈಗಲಾದರೂ ಸಾಬ್ರಿಗೆ ರಕ್ಷಣೆ ಕೊಡಿ. ಸಾಬ್ರು ಇಷ್ಟೆಲ್ಲ ನಿಮಗೆ ಓಟ್ ಹಾಕಿದ್ದಾರೆ. ಅದನ್ನು ಸರಿಪಡಿಸಿ ಎಂದು ರೇವಣ್ಣ ಆಗ್ರಹಿಸಿದರು. ಪಾಪ ನಮ್ ಸ್ಪೀಕರ್ ಖಾದರ್ ಸಾಹೇಬ್ರು ಏನಾದ್ರೂ ಮಾಡ್ತಿದ್ದರೇನೋ, ಸಚಿವರಿಗೆ ಸೂಚನೆ ನೀಡಬೇಕು ಎಂದು ರೇವಣ್ಣ ಮನವಿ ಮಾಡಿದರು. ಇದನ್ನೂ ಓದಿ: ಟ್ರೋಲ್‍ಗೆ ಕೇರ್ ಮಾಡ್ಬೇಡಿ- ವಿಧಾನಸಭೆಯಲ್ಲಿ ಸ್ಪೀಕರ್ ಕಿವಿಮಾತು

    ರೇವಣ್ಣ ಮಾತನಾಡುವ ವೇಳೆ ಸ್ಪೀಕರ್ ಪೀಠದಲ್ಲಿ ಉಪಸಭಾಧ್ಯಕ್ಷ ರಾಮಪ್ಪ ಲಮಾಣಿ ಆಸೀನರಾಗಿದ್ದರು. ಸ್ಪೀಕರ್ ಖಾದರ್ ಪೀಠದಲ್ಲಿ ಇರಲಿಲ್ಲ. ಇದನ್ನೂ ಓದಿ: ವಿರೋಧ ಪಕ್ಷದ ನಾಯಕ ಕುಮಾರಸ್ವಾಮಿ? – ಸದನದಲ್ಲಿ ಸ್ವಾರಸ್ಯಕರ ಚರ್ಚೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇವೇಗೌಡ್ರು ಇನ್ನೂ ಏಳೆಂಟು ವರ್ಷ ಬದುಕಿರುತ್ತಾರೆ, ಮತ್ತೆ ಪಾರ್ಲಿಮೆಂಟ್‍ಗೆ ಕರೆದೊಯ್ತೇವೆ: ರೇವಣ್ಣ

    ದೇವೇಗೌಡ್ರು ಇನ್ನೂ ಏಳೆಂಟು ವರ್ಷ ಬದುಕಿರುತ್ತಾರೆ, ಮತ್ತೆ ಪಾರ್ಲಿಮೆಂಟ್‍ಗೆ ಕರೆದೊಯ್ತೇವೆ: ರೇವಣ್ಣ

    ಹಾಸನ: ಮಾಜಿ ಪಿಎಂ ಹೆಚ್.ಡಿ ದೇವೇಗೌಡ (HD Devegowda) ರು ಇನ್ನೂ ಏಳೆಂಟು ವರ್ಷ ಬದುಕಿರುತ್ತಾರೆ. ದೇವೇಗೌಡರನ್ನು ಮತ್ತೆ ಪಾರ್ಲಿಮೆಂಟ್‍ಗೆ ಕರೆದುಕೊಂಡು ಹೋಗಿಯೇ ಹೋಗ್ತೀವಿ. ದೇವೇಗೌಡರನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸುತ್ತೇವೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನು ಮಾಡಬೇಕು ಅಂತ ನನ್ನ ಆಸೆ ಇದೆ. ನಾನು ಬದುಕಿರುವುದರೊಳಗೆ ಮಾಡಿ ತೋರಿಸ್ತೀನಿ. ಐದು ವರ್ಷಕ್ಕೆ ಮಾಡ್ತೀನೋ, ಹತ್ತು ವರ್ಷಕ್ಕೆ ಮಾಡ್ತೀನೋ. ಇಡೀ ರಾಜ್ಯದಲ್ಲಿ ಹಾಸನ ಜಿಲ್ಲೆಯನ್ನು ನಂಬರ್ ಒನ್ ಮಾಡಿ ತೋರಿಸ್ತೀನಿ. ಇಲ್ಲವಾದಲ್ಲಿ ಇನ್ನೊಂದು ಸಾರಿ ರಾಜಕೀಯಕ್ಕೆ ಬರಲ್ಲ ಎಂದು ಚಾಲೆಂಜ್ ಹಾಕಿದರು.

    ಕಾಂಗ್ರೆಸ್‍ (Congress) ನವರು ಮಾಡಿ ಕೊಟ್ಟರೆ ಸಂತೋಷ. ಇಲ್ಲವಾದರೆ ನಮಗೂ ಟೈಂ ಬರುತ್ತೆ. ನನ್ನ ಗ್ರಹಗತಿಗಳು ಇನ್ನೂ ಚೆನ್ನಾಗಿವೆ. ದೇವೇಗೌಡರು ಇನ್ನೂ ಏಳೆಂಟು ವರ್ಷ ಬದುಕಿರುತ್ತಾರೆ. ದೇವೇಗೌಡರನ್ನು ಮತ್ತೆ ಪಾರ್ಲಿಮೆಂಟ್‍ಗೆ ಕರ್ಕಂಡು ಹೋಗಿಯೇ ಹೋಗ್ತೀವಿ. ದೇವೇಗೌಡರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸ್ತೀವಿ. ಯಾವ ಕ್ಷೇತ್ರ ಅಂತ ಮುಂದೆ ನೋಡೋಣ ಎಂದರು. ಇದನ್ನೂ ಓದಿ: ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಹಲ್ಲೆ ಆರೋಪಕ್ಕೆ ಟ್ವಿಸ್ಟ್ – ಉಲ್ಟಾ ಹೊಡೆದ ಆಟೋ ಚಾಲಕ

    ದೇವೇಗೌಡರಿಗೆ ಇನ್ನೂ ಹೋರಾಟ ಮಾಡುವ ಶಕ್ತಿ ಇದೆ. ಅವರು ನಿಲ್ಲಲ್ಲ ಅಂದ್ರು ನಾವು ಬಿಡಲ್ಲ. ಲೋಕಸಭೆ ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಿ ಲೋಕಸಭೆಗೆ ಕಳುಹಿಸುತ್ತೇವೆ. ಹಾಸನ ಜಿಲ್ಲೆಯಿಂದ ಲೋಕಸಭೆ ಚುನಾವಣೆಗೆ ಪ್ರಜ್ವಲ್ ರೇವಣ್ಣ (Prajwal Revanna) ನೇ ಸ್ಪರ್ಧೆ ಮಾಡುತ್ತಾನೆ ಎಂದು ಹೇಳಿದರು.

  • ಭವಾನಿ ಅಕ್ಕ ನನ್ನನ್ನ 3ನೇ ಮಗ ಅಂದಿದ್ದಾರೆ – ಗೆಲುವಿನ ಬಳಿಕ ಸ್ವರೂಪ್ ಟೆಂಪಲ್‌ ರನ್‌

    ಭವಾನಿ ಅಕ್ಕ ನನ್ನನ್ನ 3ನೇ ಮಗ ಅಂದಿದ್ದಾರೆ – ಗೆಲುವಿನ ಬಳಿಕ ಸ್ವರೂಪ್ ಟೆಂಪಲ್‌ ರನ್‌

    ಮಂಡ್ಯ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೆಚ್‌.ಪಿ ಸ್ವರೂಪ್‌ (HP Swaroop) ಹಾಸನ ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಿದ ಬಳಿಕ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿರುವ ಕಾಲಭೈರವೇಶ್ವರನ ಸನ್ನಿಧಿಗೆ ಬಂದು ದರ್ಶನ ಪಡೆದಿದ್ದಾರೆ. ನಂತರ ನಿರ್ಮಲಾನಂದನಾಥ ಶ್ರೀಗಳ (Nirmalanandanatha Swamiji) ಆಶೀರ್ವಾದ ಪಡೆದಿದ್ದಾರೆ.

    ಆದಿಚುಂಚನಗಿರಿಗೆ ಬಂದ ಸ್ವರೂಪ್ ಮೊದಲು ಕಾಲಭೈರವೇಶ್ವರನ ದರ್ಶನ ಪಡೆದು ಬಳಿಕ ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದ್ದಾರೆ. ತೀವ್ರ ಕೂತುಹಲ ಕೆರಳಿಸಿದ್ದ ಹಾಸನ ಕ್ಷೇತ್ರದಲ್ಲಿ ಸ್ವರೂಪ್ ಜಯಭೇರಿ ಬಾರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಒಕ್ಕಲಿಗರ ಆರಾಧ್ಯ ದೈವವಾಗಿರುವ ಕಾಲಭೈರವೇಶ್ವರಸ್ವಾಮಿಗೆ ಸ್ವರೂಪ್ ನಮಸ್ಕರಿಸಿದರು. ಇದನ್ನೂ ಓದಿ: ಹಾಸನದಲ್ಲಿ ಗೆಲುವು ಸಾಧಿಸಿದ ಸ್ವರೂಪ್ – ಕರೆ ಮಾಡಿ ಶುಭಾಶಯ ತಿಳಿಸಿದ ಹೆಚ್‌ಡಿಡಿ

    ಬಳಿಕ ಮಾತನಾಡಿದ ಸ್ವರೂಪ್, ನಿಖಿಲ್ (Nikhil Kumaraswamy) ಅವರ ಸೋಲು ನನಗೆ ವೈಯಕ್ತಿಕವಾಗಿ ಬೇಸರವಾಗಿದೆ. ಅವರು ಸೋಲಬಾರದಿತ್ತು, ರಾಮನಗರದ ಬಗ್ಗೆ ನನಗೆ ಗೊತ್ತಿಲ್ಲ ಹೀಗಾಗಿ ನಿಖಿಲ್ ಅವರು ಏಕೆ ಸೋತರು ಅನ್ನೋದು ಅರ್ಥವಾಗುತ್ತಿಲ್ಲ. ನಾನು‌ ಹಾಗೂ ನನ್ನ ಹಾಸನದ ಜನತೆ ನಿಖಿಲ್ ಅವರ ಜೊತೆಗೆ ಇರುತ್ತೇವೆ. ನಮ್ಮ ಪಕ್ಷದ ನಾಯಕರ ಶ್ರಮದಿಂದ ನಾನು ಗೆಲುವು ಸಾಧಿಸಿದ್ದೇನೆ. ಹಾಸನದ ಎಲ್ಲ ಕಾರ್ಯಕರ್ತರು ಶ್ರಮಿಸಿದ್ದಾರೆ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಪ್ರೀತಂ ಗೌಡಗೆ ಸೋಲು – ಜಿಲ್ಲೆಯಲ್ಲಿ 2 ಸ್ಥಾನ ಗೆದ್ದ ಬಿಜೆಪಿ

    ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಭವಾನಿ ಅಕ್ಕ ನನ್ನನ್ನ 3ನೇ ಮಗ ಅಂದಿದ್ದಾರೆ. ಕುಮಾರಣ್ಣ, ರೇವಣ್ಣ ಎಲ್ಲರೂ ನನಗೆ ಸಹಕಾರ ನೀಡಿದ್ದಾರೆ. ಮುಂದೆ ಅವರ ಸಹಕಾರದಿಂದ ಉತ್ತಮ ಕೆಲಸ ಮಾಡುತ್ತೇನೆ. ನಾವು ಯಾರೊಂದಿಗೂ ಒಪ್ಪಂದ ಮಾಡಿಕೊಂಡಿರಲಿಲ್ಲ. ಜೆಡಿಎಸ್‌ ಮತ ಜೆಡಿಎಸ್‌ಗೆ ಬಂದಿದೆ ಸೋಲಿನ ವಿಶ್ಲೇಷಣೆ ಮಾಡುವವರು ಒಪ್ಪಂದ ಹೇಳ್ತಾರೆ ಅಷ್ಟೇ ಎಂದು ಸ್ವರೂಪ್ ಎದುರಾಳಿಗಳಿಗೆ ತಿರುಗೇಟು ಕೊಟ್ಟಿದ್ದಾರೆ.

  • ಹಾಸನ ನಗರಕ್ಕೆ ಬಿಜೆಪಿಯವರ ಕೊಡುಗೆ 60 ಬ್ರಾಂಡಿ ಶಾಪ್: ಹೆಚ್.ಡಿ ರೇವಣ್ಣ

    ಹಾಸನ ನಗರಕ್ಕೆ ಬಿಜೆಪಿಯವರ ಕೊಡುಗೆ 60 ಬ್ರಾಂಡಿ ಶಾಪ್: ಹೆಚ್.ಡಿ ರೇವಣ್ಣ

    ಹಾಸನ: ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ದೇವೇಗೌಡ (H.D Devegowda) ರ ಮಾರ್ಗದರ್ಶನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಿದ್ದು, ಗ್ರಾಮೀಣ, ನಗರ ಪ್ರದೇಶದ ಜನರಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಅಂತ ಹೋರಾಟ ಮಾಡಿದ್ದೇವೆ. ಈ ಬಾರಿಯ ಚುನಾವಣೆಯಲ್ಲಿ ಏಳೂ ಕಡೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ (HD Revanna) ಮನವಿ ಮಾಡಿದ್ದಾರೆ.

    ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳು ಶಿಕ್ಷಣವನ್ನು ವ್ಯಾಪಾರಿ ಸಂಸ್ಥೆ ಮಾಡಿಕೊಂಡಿದ್ದಾರೆ ಎಂದು ದೂರಿದರು. ಕೆಲವರು ಗಲ್ಲಿ ಗಲ್ಲಿ ರಸ್ತೆ ಆಗಿವೆ ಅಂತಾರೆ, ಅದು ದೊಡ್ಡದಾ ಇವತ್ತು ಎಂದು ಪ್ರಶ್ನಿಸಿದ ರೇವಣ್ಣ, ವರ್ಕ್ ಆರ್ಡರ್ ತಡೆ ಹಿಡಿಯುವುದೇ ಇವರ ಸಾಧನೆ. ತೋಟಗಾರಿಕಾ ಕಾಲೇಜು ಕಿತ್ತುಕೊಂಡರು. ಆದರೆ ಸ್ಥಳೀಯ ಶಾಸಕರು ಉಸಿರೇ ಬಿಡಲಿಲ್ಲ. ನಾನು ಏನು ಮಾಡಿದ್ದೇನೆ ಎಂಬುದನ್ನು ತೆಗೆದು ನೋಡಲಿ, ರೋಡ್‍ಗೆ ಇವತ್ತು ಟಾರು ಹಾಕಿದ್ರೆ ಬೆಳಗ್ಗೆ ಕಿತ್ತು ಹೋಗ್ತಿದೆ. ಇಂಜಿನಿಯರ್‍ಗಳು, ಕಂಟ್ರ್ಯಾಕ್ಟರ್ ಸೇರಿ ಲೂಟಿ ಹೊಡೆಯುವ ಕಾಮಗಾರಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ವಲ್ಲಭಾಯಿ ರೋಡ್ ಜಗ್ಗ ಎನ್ನುವವನ ಮೇಲೆ ಗ್ರೇಟ್ ಡಿವೈಎಸ್‍ಪಿ ಉದಯ್ ಭಾಸ್ಕರ್, ಗ್ರೇಟ್ ಸರ್ಕಲ್ ಇನ್ಸ್ ಪೆಕ್ಟರ್ ರೌಡಿ ಶೀಟರ್ ಓಪನ್ ಮಾಡಿ, ಮೂರು ತಿಂಗಳ ಹಿಂದೆ ಗಡಿಪಾರು ಮಾಡಿದ್ದಾರೆ. ಸ್ವರೂಪ್ (Swaroop) ಪರವಾಗಿ ವೋಟು ಹಾಕಿಸ್ತಾನೆ ಅಂತ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದ ರೇವಣ್ಣ, ಅವನೇನೂ ಮರ್ಡರ್ ಮಾಡಿದ್ನಾ ಎಂದು ಕಿಡಿಕಾರಿದರು. ರೌಡಿಗಳ ತಾಣದ ಪೋಷಕನಾಗಿದ್ದ ದಿ ಗ್ರೇಟ್ ಉದಯ್ ಭಾಸ್ಕರ್, ಯಾರನ್ನ ಬೇಕಾದ್ರೂ ಮರ್ಡರ್ ಮಾಡಿಸೋನು. ಈಗ ಇಡೀ ಅಧಿಕಾರಿಗಳೆಲ್ಲಾ ಸೇರಿ ರಜೆ ಮೇಲೆ ಕಳ್ಸಿದ್ದಾರೆ, ಪಾಪ ಅವನನ್ನು ಉಳಿಸಲು ಸ್ಥಳೀಯ ಶಾಸಕರು ಬಹಳ ಪ್ರಯತ್ನಪಟ್ಟರು ಎಂದು ದೂರಿದರು. ಇದನ್ನೂ ಓದಿ: Russia-Ukraine War: ಡ್ರೋನ್‌ ಅಟ್ಯಾಕ್‌ – ರಷ್ಯಾ ಅಧ್ಯಕ್ಷ ಪುಟಿನ್‌ ಹತ್ಯೆಗೆ ಸ್ಕೆಚ್‌

    ಹಾಸನ ನಗರಕ್ಕೆ ಬಿಜೆಪಿ ಅವರ ಕೊಡುಗೆ 60 ಬ್ರಾಂಡಿ ಶಾಪ್ ಕೊಟ್ಟು, ಕುಡ್ಕಂಡು ಇರಿ, ಅಂತ ಕೊಡುಗೆ ಕೊಟ್ಟಿದ್ದಾರೆ. ಮೋದಿಯವರೇ ನಿಮ್ಮ ಪಕ್ಷದ ಕೊಡುಗೆ ಸಿಎಲ್-7. ಮನೆ ಒಳಗಡೆ ಇದ್ದರು ಎದ್ದು ಇಂತಹ ಶಕ್ತಿಗಳನ್ನು ದಮನ ಮಾಡಲು ಹೊರಗೆ ಬಂದಿದ್ದಾರೆ ಎಂದು ಪ್ರೀತಂಗೌಡ ವಿರುದ್ಧ ಆಕ್ರೋಶ ಹೊರ ಹಾಕಿದರು. ಇದೇ ವೇಳೆ ಮಾಜಿ ಶಾಸಕ ಕೆ.ಎಂ ಶಿವಲಿಂಗೇಗೌಡ ವಿರುದ್ಧವೂ ವಾಗ್ದಾಳಿ ನಡೆಸಿದ ರೇವಣ್ಣ, ಹದಿನೈದು ವರ್ಷದಿಂದ ನಾನು ಸಾಕಿದ ಗಿಣಿ ಇತ್ತು, ಅದರ ಬಳಿ ಒಂದು ಸ್ವಲ್ಪ ದುಡ್ಡಿದೆ ಅಂತ ಕಾಂಗ್ರೆಸ್‍ನವರು ಗೆಲ್ಲುತ್ತೆ ಅಂತ ಕರ್ಕೊಂಡ್ರು. ಅವರು ಪುಕ್ಸಟ್ಟೆ ಯಾವುದನ್ನೂ ಮಾಡಲ್ಲ, ಸಾಕಿದ ಗಿಣಿನಾ ಬೋನಿಗೆ ಬಿಡಬೇಕು, ಈಚೆಗೆ ಬಿಡಬಾರದು ಅಂತ ದೇವರೇ ನಮ್ಮ ಹತ್ರ ಸಂತೋಷ್ ಅವರನ್ನು ಕಳುಹಿಸಿದ್ದಾನೆ ಎಂದರು.

    ಸಾಕಿದ ಗಿಣಿಗೆ ಬಲೆ ಬೀಸಿ ಕಾಂಗ್ರೆಸ್‍ನವರು ಇಟ್ಕಂಡವ್ರೆ, ಜನರೇ ಹದ್ದಾಗಿ ಕುಕ್ತಾರೆ ಎಂದು ಭವಿಷ್ಯ ನುಡಿದರು. ತಾಲೂಕಿನಲ್ಲಿ ಜೆಡಿಎಸ್‍ಗೆ 13 ಸಾವಿರ ವೋಟು ಇತ್ತು, ನಾನು ಬಂದ ಮೇಲೆ ಜಾಸ್ತಿ ಆಯ್ತು ಅನ್ನುತ್ತಿರುವವರು ಕಾಂಗ್ರೆಸ್ ಬಿಟ್ಟು ಸ್ಪರ್ಧೆ ಮಾಡಲಿ. ಎಷ್ಟು ವೋಟು ತಗೋತಾರೆ ನೋಡೋಣ ಎಂದು ಸವಾಲು ಹಾಕಿದರು. ಜೆಡಿಎಸ್ ಪಕ್ಷಕ್ಕೆ ವೋಟು ಕೊಡಿ, ಸ್ವರೂಪ್ ಅವರನ್ನು ಗೆಲ್ಲಿಸಿ. ಅವರ ತಂದೆ ಪ್ರಾಮಾಣಿಕವಾಗಿದ್ರು. ಸ್ವರೂಪ್ ಯುವಕ ಇದ್ದಾನೆ, ಐದು ವರ್ಷ ನೋಡೋಣ. ಸ್ವರೂಪ್ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕು, ಸ್ವರೂಪ್ ಅವರನ್ನು ಗೆಲ್ಲಿಸಲು ಬೆಂಬಲ ಕೊಟ್ಟಿರುವ ಎಲ್ಲಾ ಸಂಘ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ದುಡ್ಡಿಲ್ಲದಿದ್ದರೂ ಹೋರಾಟ ಮಾಡುತ್ತಿದ್ದಾರೆ. ಏಳು ಕ್ಷೇತ್ರಗಳನ್ನು ಗೆಲ್ಲಿಸಿ ನಿಮ್ಮ ಕೆಲಸ ತಪ್ಪದೇ ಮಾಡ್ತೀವಿ ಎಂದರು.

     

  • ಸ್ವರೂಪ್ ನನ್ನ ಮಗನಿದ್ದಂತೆ, ನಾನು ಪರಿಪೂರ್ಣವಾಗಿ ಆಶೀರ್ವಾದ ಮಾಡಿದ್ದೇನೆ – ಭವಾನಿ ರೇವಣ್ಣ

    ಸ್ವರೂಪ್ ನನ್ನ ಮಗನಿದ್ದಂತೆ, ನಾನು ಪರಿಪೂರ್ಣವಾಗಿ ಆಶೀರ್ವಾದ ಮಾಡಿದ್ದೇನೆ – ಭವಾನಿ ರೇವಣ್ಣ

    – ಹಾಸನದಲ್ಲಿ ಅಬ್ಬರದ ಭಾಷಣ; ರೇವಣ್ಣ ಕುಟುಂಬ ಒಗ್ಗಟ್ಟು ಪ್ರದರ್ಶನ

    ಹಾಸನ: ಸ್ವರೂಪ್ (Swaroop) ನನ್ನ ಮಗನಿದ್ದಂತೆ, ನಾನು ಸ್ವರೂಪ್‌ನನ್ನ ಮಗನಾಗಿಯೇ ನೋಡಿದ್ದೇನೆ. ನಾನು ಪರಿಪೂರ್ಣವಾಗಿ ಆಶೀರ್ವಾದ ಮಾಡಿದ್ದೇನೆ, ಈ ಕ್ಷೇತ್ರದಲ್ಲಿ ಸ್ವರೂಪ್‌ ಗೆದ್ದೇ ಗೆಲ್ತಾನೆ ಎಂದು ಭವಾನಿ ರೇವಣ್ಣ (Bhavani Revanna) ಭವಿಷ್ಯ ನುಡಿದಿದ್ದಾರೆ.

    ಹಾಸನ ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ನಡೆದ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಒಂದೇ ವೇದಿಕೆಯಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಕುಟುಂಬ ಭಾಗಿಯಾಗಿ, ಸ್ವರೂಪ್ ಗೆಲ್ಲಿಸುವಂತೆ ಮನವಿ ಮಾಡಿದರು. ಈ ವೇಳೆ ಸ್ವರೂಪ್ ಅವರು, ರೇವಣ್ಣ ಹಾಗೂ ಭವಾನಿ ರೇವಣ್ಣ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು. ಇದನ್ನೂ ಓದಿ: ದೇಶಕ್ಕೆ ದೇವೇಗೌಡರು, ರಾಜ್ಯಕ್ಕೆ ಕುಮಾರಣ್ಣ, ಹಾಸನಕ್ಕೆ ರೇವಣ್ಣ : ಎ.ಮಂಜು – ಭವಾನಿ ಜುಗಲ್ ಬಂದಿ

    ಸಭೆಯಲ್ಲಿ ಮಾತನಾಡಿದ ಭವಾನಿ ಅವರು, ಯಾರಿಗೆ ಟಿಕೆಟ್ ನೀಡಬೇಕು ಅನ್ನುವ ಚರ್ಚೆ ನಡೆಯುತ್ತಿದ್ದಾಗ ಕುಮಾರಣ್ಣ ಸ್ವರೂಪ್‌ಗೆ ಟಿಕೆಟ್‌ ಕೊಟ್ಟಿದ್ದಾರೆ. ನಾವೂ ಮೂರು ಬಾರಿ ಫೋನ್ ಮಾಡಿ ಸ್ವರೂಪ್‌ಗೇ ಟಿಕೆಟ್ ಕೊಡಿ ಅಂತಾ ಕುಮಾರಣ್ಣಗೆ ಹೇಳಿದ್ವಿ ಎಂದು ಹೇಳಿದರು.

    ನನಗೆ ದೇವೇಗೌಡರ ಆರೋಗ್ಯ ಮುಖ್ಯವಾಗಿತ್ತು. ದೇವೇಗೌಡರಿಗಿಂತ ನಾನೇ ದೊಡ್ಡವಳಾ ಅಂತಾ ಅನ್ನಿಸಿಬಿಡ್ತು. ಹಾಗಾಗಿ ನಾನೇ ತೀರ್ಮಾನಿಸಿ ಸ್ವರೂಪ್ ಹೆಸರು ಅನೌನ್ಸ್ ಮಾಡಿಸಿದೆ. ಶುಕ್ರವಾರ ಒಳ್ಳೆಯ ದಿನ ಅನೌನ್ಸ್ ಮಾಡಿ ಅಂತಾ ಕುಮಾರಣ್ಣಗೆ ಹೇಳಿದೆ. ನನಗೆ ಟಿಕೆಟ್ ಸಿಕ್ಕಿಲ್ಲ ಅಂತಾ ಹಾಸನ ಕಡೆಗಣಿಸಲ್ಲ. ಒಟ್ಟಿನಲ್ಲಿ ಬಿಜೆಪಿ ಸೋಲಿಸಬೇಕು ಅಷ್ಟೇ ಎಂದು ಕರೆ ನೀಡಿದರು. ಇದನ್ನೂ ಓದಿ: ರೇವಣ್ಣ ಕುಟುಂಬದವ್ರು ನನ್ನ ಪರ ಪ್ರಚಾರಕ್ಕೆ ಬರುತ್ತಾರೆ: ಹಾಸನ ಜೆಡಿಎಸ್ ಅಭ್ಯರ್ಥಿ

    ಹಾಸನದಲ್ಲಿ ಬಿಜೆಪಿಯನ್ನ ಸಂಪೂರ್ಣವಾಗಿ ತೆಗೆದುಹಾಕಬೇಕು. ಅದಕ್ಕಾಗಿ ನಿದ್ರೆ ಬಿಟ್ಟು ಕೆಲಸ ಮಾಡಿ, ಸ್ವರೂಪ್ ಗೆಲ್ಲಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಅವರು, ನಾನು ಪರಿಪೂರ್ಣವಾಗಿ ಆಶೀರ್ವಾದ ಮಾಡುತ್ತಿದ್ದೇನೆ, ಈ ಕ್ಷೇತ್ರದಲ್ಲಿ ಗೆದ್ದೇ ಗೆಲ್ತಾನೆ ಎಂದು ನುಡಿದರು.

  • ನನ್ಗೆ MLA ಗಿರಿ ಮುಖ್ಯವಲ್ಲ, ದೇವೇಗೌಡರ ಆರೋಗ್ಯ ಮುಖ್ಯ: ಹೆಚ್.ಡಿ ರೇವಣ್ಣ

    ನನ್ಗೆ MLA ಗಿರಿ ಮುಖ್ಯವಲ್ಲ, ದೇವೇಗೌಡರ ಆರೋಗ್ಯ ಮುಖ್ಯ: ಹೆಚ್.ಡಿ ರೇವಣ್ಣ

    ಬೆಂಗಳೂರು: ನನಗೆ ಶಾಸಕ ಸ್ಥಾನ ಮುಖ್ಯವಲ್ಲ, ದೇವೇಗೌಡರ ಆರೋಗ್ಯ ಮುಖ್ಯ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಭವಾನಿಯನ್ನು (Bhavani Revanna) ನಿಲ್ಲಿಸೋಕೆ ಅಭಿಪ್ರಾಯಪಟ್ಟಿದ್ದರು. ಆದರೆ ಭವಾನಿ ನನ್ನ ಮಾವನವರ ಆರೋಗ್ಯ ಮುಖ್ಯ ಎಂದಿದ್ದಾರೆ. ನನಗೆ ಯಾವುದೇ ಬೇಸರವಿಲ್ಲ. ದೇವೆಗೌಡರ ಆದೇಶ ತಪ್ಪಿಲ್ಲ ಎಂದರು. ನನಗೆ ಬೇಕಾಗಿರೋದು ದೇವೆಗೌಡರ (HD Devegowda) ಆರೋಗ್ಯ. ದೇವೆಗೌಡರು ಏನ್ ಹೇಳ್ತಾರೆ ಅದ್ಕೆ ಬದ್ಧನೆಂದು ಭವಾನಿ 1 ತಿಂಗಳ ಮುಂಚೆಯೇ ಹೇಳಿದ್ದಾರೆ ಎಂದು ಹೇಳಿದರು.

    ಕುಮಾರಸ್ವಾಮಿ (HD Kumaraswamy), ದೇವೇಗೌಡ ನಿರ್ಧಾರವೇ ಅಂತಿಮ. ಜಿಲ್ಲೆಯಲ್ಲಿ ನಮ್ಮ ಪಕ್ಷ ಉಳಿಬೇಕು. ಕುಟುಂಬದ ತೀರ್ಮಾನದಂತೆ ಸ್ವರೂಪ್‌ಗೆ ಟಿಕೆಟ್ ಕೊಡ್ತಿದ್ದೇವೆ. ಹಾಸನದಲ್ಲಿ (Hassan) 4 ವರ್ಷದಿಂದ ಬಿಜೆಪಿ ಲೂಟಿ ಮಾಡಿದ್ದಾರೆ. ಹಾಸನದಲ್ಲಿ 7 ಕ್ಕೆ 7 ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಡೂರಿನಿಂದ ದತ್ತಾ : 1 ಕ್ಷೇತ್ರ ಬಿಟ್ಟು 49 ಕ್ಷೇತ್ರಗಳ ಜೆಡಿಎಸ್‌ ಪಟ್ಟಿ ಬಿಡುಗಡೆ

    ದೇವೆಗೌಡರಿಗೆ, ದತ್ತಾರಿಗೆ 50 ವರ್ಷ ಸಂಬಂಧವಿದೆ. ದತ್ತಾ ಅವರನ್ನು ಕಾಂಗ್ರೆಸ್ ಕರೆದುಕೊಂಡು ಹೋಗಿ ಮೋಸ ಮಾಡಿದರು. ಸಣ್ಣ ತಪ್ಪು ಮಾಡಿರಬಹುದು. ಅವರು ನೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪೂರ್ತಿ ಸಹಕಾರ ದತ್ತಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕೊನೆಗೂ ಹಾಸನ ಟಿಕೆಟ್‌ ಗೆದ್ದ ಸ್ವರೂಪ್‌

     

  • ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ಕೊಡ್ತೀನಿ ಅಂದ್ರೂ ಓಕೆ – ರೇವಣ್ಣ

    ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ಕೊಡ್ತೀನಿ ಅಂದ್ರೂ ಓಕೆ – ರೇವಣ್ಣ

    ಹಾಸನ: ದೇವೇಗೌಡರು (HD Devegowda) ಹಾಸನ ಜಿಲ್ಲೆಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ಕೊಡ್ತೀನಿ ಅಂದ್ರೂ ಓಕೆ ಅಂತೀನಿ ಎಂದು ಮಾಜಿ ಸಚಿವ ಹೆಚ್‌.ಡಿ ರೇವಣ್ಣ (HD Revanna) ಹೇಳಿದ್ದಾರೆ.

    ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಎಲ್ಲೂ ಹೇಳಿಲ್ಲ. ನಾನು ಈಗಾಗಲೇ ದೇವೇಗೌಡರ ಬಳಿ ಹೇಳಿದ್ದೇನೆ. ಅದು ನಮ್ಮಿಬ್ಬರಿಗೇ ಗೊತ್ತು. ದೇವೇಗೌಡರೇ ನಮಗೆ ಸುಪ್ರೀಂ ನಾಯಕರು. ಅವರು ಏನು ಹೇಳುತ್ತಾರೋ ಅದಕ್ಕೆ ನಾನು ಬದ್ಧ ದೇವೇಗೌಡರು ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಅಂತಾ ಹೇಳಿದ್ರೂ ನಾನು ಓಕೆ ಅಂತೀನಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೃಷ್ಟಿ ಮಂಜಾಗ್ತಿದೆ, ಕೈ-ಕಾಲು ಸ್ವಾಧೀನ ಕಳೆದುಕೊಳ್ತಿದೆ – ಪುಟಿನ್‌ ಆರೋಗ್ಯದಲ್ಲಿ ಬಿಗ್‌ ಅಪ್ಡೇಟ್ಸ್‌

    ಕಾಂಗ್ರೆಸ್ (Congress) ನಾಯಕರ ಜೊತೆ ಸಂಪರ್ಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ (Siddaramaiah) ಮತ್ತು ನನ್ನ ನಡುವಿನ ಬಾಂಧವ್ಯ ಬೇರೆ. ದೇವೇಗೌಡರು, ಕುಮಾರಣ್ಣ ಇಲ್ವಾ? ನಾನೇಕೆ ಕಾಂಗ್ರೆಸ್‌ಗೆ ಹೊಗಲಿ? ಹಾಸನ ಟಿಕೆಟ್ ವಿಚಾರದಲ್ಲಿ ಯಾವ ಗೊಂದಲವೂ ಇಲ್ಲ, ನಾನು ಕುಮಾರಣ್ಣ ಮೊದಲೇ ಮಾತನಾಡಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮ್ಯಾನ್ಮಾರ್: ಪ್ರತಿಭಟನಾಕಾರರ ಮೇಲೆ ವೈಮಾನಿಕ ದಾಳಿ – 100ಕ್ಕೂ ಅಧಿಕ ಜನ ಬಲಿ

    ಹಾಸನದಲ್ಲಿ ಶಕುನಿಗಳು ತಲೆಕೆಡಿಸುತ್ತಿದ್ದಾರೆ ಎಂಬ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಶಕುನಿಗಳ ಮಾತಿಗೆ ನಾನು ತಲೆಕೆಡಿಸಿಕೊಳ್ಳುವಂತಹ ವ್ಯಕ್ತಿಯಲ್ಲ. ಯಾರೂ ನನ್ನ-ಕುಮಾರಣ್ಣನನ್ನ ಹೊಡೆದಾಡಿಸಲು ಸಾಧ್ಯವಿಲ್ಲ. ಬೆಳಗಾವುದರೊಳಗೆ ಒಂದಾಗ್ತೀವಿ ಎಂದಿದ್ದಾರೆ.

  • ದೇವೇಗೌಡರ ತೀರ್ಮಾನವೇ ಅಂತಿಮ, ಅವರು ಹಾಕಿದ ಗೆರೆ ದಾಟಲ್ಲ : ಹೆಚ್.ಡಿ ರೇವಣ್ಣ

    ದೇವೇಗೌಡರ ತೀರ್ಮಾನವೇ ಅಂತಿಮ, ಅವರು ಹಾಕಿದ ಗೆರೆ ದಾಟಲ್ಲ : ಹೆಚ್.ಡಿ ರೇವಣ್ಣ

    ಹಾಸನ: ಟಿಕೆಟ್ ವಿಚಾರದಲ್ಲಿ ನಮ್ಮ ಸರ್ವೋಚ್ಛ ನಾಯಕರಾದ ಹೆಚ್.ಡಿ. ದೇವೇಗೌಡರ (HD Deve Gowda) ನಿರ್ಧಾರವೇ ಅಂತಿಮ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ (HD Revanna) ಹೇಳಿದರು.

    ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಆನೆಕೆರೆಯಮ್ಮ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಕುಟುಂಬ ಸಮೇತವಾಗಿ ಆನೆಕೆರೆಯಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ದೇವೇಗೌಡರಿಗೆ 60 ವರ್ಷದ ರಾಜಕೀಯ ಅನುಭವ ಇದೆ. ಅವರ ನಿರ್ಧಾರವೇ ಅಂತಿಮ. ನಾನು ಹಿಂದಿನಿಂದಲೂ ಯಾವುದೇ ಕ್ಷೇತ್ರದ ಟಿಕೆಟ್ ಕೇಳಿಲ್ಲ. ದೇವೇಗೌಡರೇ ಎಲ್ಲಾ ಕ್ಷೇತ್ರಗಳ ಟಿಕೆಟ್ ನಿರ್ಧಾರ ಮಾಡುತ್ತಿದ್ದಾರೆ. ಹಿಂದೆಯೂ ಅವರ ಮಾತು ಕೇಳಿದ್ದೇನೆ, ಈಗಲೂ ಕೇಳುತ್ತೇನೆ, ಮುಂದೆಯೂ ಕೇಳುತ್ತೇನೆ ಎಂದರು.

    ಸಾಮಾನ್ಯ ಕಾರ್ಯಕರ್ತನಿಗೆ ಹಾಸನ ಟಿಕೆಟ್ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿಕೆಗೆ ಟಾಂಗ್ ನೀಡಿದ ಅವರು, ಸಾಮಾನ್ಯ ಕಾರ್ಯಕರ್ತ ಅಂದರೆ ಯಾರು, ಪಕ್ಷದಿಂದ ಏನೂ ಫಲಾನುಭವ ಪಡೆಯದವನು, ಸಾಮಾನ್ಯ ಕಾರ್ಯಕರ್ತ ಎನ್ನುವ ಮೂಲಕ ಪರೋಕ್ಷವಾಗಿ ಸ್ವರೂಪ್ ಸಾಮಾನ್ಯ ಕಾರ್ಯಕರ್ತ ಅಲ್ಲ ಎಂಬ ಅಸಮಾಧಾನ ಹೊರಹಾಕಿದರು. ಹಾಸನದಲ್ಲಿ ಕೆಲ ಶಕುನಿಗಳು ನಮ್ಮ ಕುಟುಂಬ ಮುಗಿಸಲು ಹೊರಟಿದ್ದಾರೆ ಎಂಬ ಹೆಚ್‌ಡಿಕೆ ಹೇಳಿಕೆಗೆ ನಾನು ಅದಕ್ಕೆ ರಿಯಾಕ್ಟ್ ಮಾಡಲ್ಲ, ಅದೇನು ನನಗೆ ಗೊತ್ತಿಲ್ಲಪ್ಪ ಎಂದು ಹೇಳಿದರು.

    ದೇವೇಗೌಡರಿಗೆ ಈ ಜಿಲ್ಲೆಯದ್ದು ಎಲ್ಲಾ ಗೊತ್ತಿದೆ. ದೇವೇಗೌಡರು ಏನು ಹೇಳುತ್ತಾರೆಯೋ ನಾವು ಅದನ್ನು ಕೇಳುತ್ತೇವೆ. ಜಿಲ್ಲೆಯಲ್ಲಿ 7 ಕ್ಷೇತ್ರ ಗೆಲ್ಲಬೇಕು, ನಮ್ಮ ಜನ ಉಳಿಯಬೇಕು, ಕುಮಾರಸ್ವಾಮಿ ಅವರು ಸಿಎಂ ಆಗಬೇಕು ಎನ್ನೊದಷ್ಟೇ ನಮ್ಮ ಉದ್ದೇಶವಾಗಿದೆ. ಸಾಮಾನ್ಯ ಕಾರ್ಯಕರ್ತ ಯಾರು ಅಂತ ದೇವೇಗೌಡರು ಕಳೆದ ಜನವರಿಯಲ್ಲೇ ತೀರ್ಮಾನ ಮಾಡಿದ್ದಾರೆ. ದೇವೇಗೌಡರ ಮಾತು ಮೀರಿ ನಾನು ಹೋಗಲ್ಲ, ಹಿಂದೆನೂ ಹೋಗಿಲ್ಲ, ಮುಂದೆಯೂ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು.

    ನಾನೇಕೆ ಎರಡು ಕ್ಷೇತ್ರಗಳಲ್ಲಿ ನಿಲ್ಲಲಿ. ನನ್ನ ಕ್ಷೇತ್ರ ಹೊಳೆನರಸೀಪುರ, ಅಲ್ಲಿನ ಜನ ನನ್ನನ್ನು ಮೂವತ್ತು ವರ್ಷ ಸಾಕಿದ್ದಾರೆ. ಮೊದಲ ಆದ್ಯತೆ ಹೊಳೆನರಸೀಪುರ. ಈ ಜನರನ್ನು ನಾನಾಗಲಿ, ನನ್ನ ಕುಟುಂಬವಾಗಲೀ ಬಿಡುವ ಪ್ರಶ್ನೆಯೇ ಇಲ್ಲ. ಟಿಕೆಟ್ ಗೊಂದಲ ತೀರ್ಮಾನ ಯಾವಾಗ ಎಂದು ದೇವೇಗೌಡರನ್ನು ಕೇಳಿ ಎಂದು ತಿಳಿಸಿದರು. ಇದನ್ನೂ ಓದಿ: ಮಕ್ಕಳಾಗಲಿಲ್ಲ ಎಂಬ‌ ಕೊರಗಿನಿಂದ ಬಾವಿಗೆ ಬಿದ್ದು ಮಹಿಳೆ ಆತ್ಮಹತ್ಯೆ

    ಸರ್ವೇ ಮಾಡಿಸಿದ್ದೇನೆ, ಹಾಸನದಲ್ಲಿ ಭವಾನಿ ಗೆಲ್ಲಲ್ಲ ಎಂಬ ಹೆಚ್‌ಡಿಕೆ ಹೇಳಿಕೆಗೆ, ಅದೆಲ್ಲಾ ನನಗೆ ಗೊತ್ತಿಲ್ಲ. 6 ತಿಂಗಳ ಹಿಂದೆಯೇ ನನ್ನ ನಿರ್ಣಯ ಏನು ಅಂತ ಹೇಳಿದ್ದೇನೆ. ಅಂತಿಮ ನಿರ್ಣಯ ದೇವೇಗೌಡರಿಗೆ ಬಿಟ್ಟಿದ್ದು. ಈ ಜಿಲ್ಲೆಯ ಬಗ್ಗೆ 60 ವರ್ಷದಿಂದ ಸತತವಾಗಿ ಅವರಿಗೆ ಗೊತ್ತಿದೆ. ಅವರು ಸೋಲು, ಗೆಲುವು ಎರಡನ್ನೂ ಕಂಡಿದ್ದಾರೆ. ಅವರ ಆಶೀರ್ವಾದದಿಂದ ನಾನು 25 ವರ್ಷದಿಂದ ಶಾಸಕನಾಗಿದ್ದೀನಿ. ಪ್ರಜ್ವಲ್ ಸಂಸದರಾಗಿದ್ದಾರೆ, ಸೂರಜ್ ಎಂಎಲ್‌ಸಿ ಆಗಿದ್ದಾರೆ, ಭವಾನಿ ಜಿ.ಪಂ. ಸದಸ್ಯರಾಗಿದ್ದರು, ಹೀಗಾಗಿ ದೇವೇಗೌಡರ ತೀರ್ಮಾನವೇ ಅಂತಿಮ ಎಂದು ಪುನರುಚ್ಛರಿಸಿದರು. ಇದನ್ನೂ ಓದಿ: ಯಾರ ಒತ್ತಡಕ್ಕೆ ಮಣಿಯದೇ ಸ್ವ ಇಚ್ಛೆಯಿಂದ ಚುನಾವಣಾ ರಾಜಕೀಯಕ್ಕೆ ನಿವೃತ್ತಿ: ಈಶ್ವರಪ್ಪ

  • ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ಯಾವುದೇ ಕಾರಣಕ್ಕೂ ಗೆಲ್ಲಲ್ಲ: HDK

    ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ಯಾವುದೇ ಕಾರಣಕ್ಕೂ ಗೆಲ್ಲಲ್ಲ: HDK

    ಹುಬ್ಬಳ್ಳಿ: ಹಾಸನದಲ್ಲಿ (Hassan) ಭವಾನಿ ರೇವಣ್ಣ (Bhavani Revanna) ಸ್ಪರ್ಧೆ ಮಾಡಿದರೆ ಯಾವುದೇ ಕಾರಣಕ್ಕೂ ಗೆಲ್ಲಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ (Hassan) ಸದೃಢ ಕಾರ್ಯಕರ್ತರಿದ್ದಾರೆ. ಅವರ ನಿರ್ಧಾರವೇ ಅಂತಿಮವಾಗಿದೆ. ವಾಸ್ತವಿಕ ಮತ್ತು ಗ್ರೌಂಡ್ ರಿಯಾಲಿಟಿ ಅರಿತು ನಾನು ಮಾತನಾಡುತ್ತಿದ್ದೇನೆ. ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ಗೆಲ್ಲಲ್ಲ. ನಾನು ನನ್ನದೆಯಾದ ರೀತಿಯಲ್ಲಿ ಸರ್ವೇ ಮಾಡಿಸಿ ವರದಿ ತರಿಸಿಕೊಂಡಿದ್ದೇನೆ. ಅದನ್ನು ಗಮನದಲ್ಲಿಟ್ಟುಕೊಂಡು ಹೇಳುತ್ತಿದ್ದೇನೆ ಎಂದರು.

    ಗೊಂದಲ ಬಗ್ಗೆ ಹಲವಾರು ಚರ್ಚೆ, ನಾಲ್ಕು ಗೋಡೆಗಳಲ್ಲಿ ನಡೆದಿದ್ದಾಗಿದೆ. ಆದರೆ ಮಾಧ್ಯಮಗಳು ತಮಗೆ ಏನು ಬೇಕೋ ಹಾಗೇ ಮಾತನಾಡುತ್ತಿದ್ದಾರೆ. ಈಗ ಅವರಿಗೆ ಟಿಕೆಟ್ ಕೊಟ್ಟು ನಾಳೆ ಸೋತ ಮೇಲೆ ಮಾಧ್ಯಮಗಳಿಗೆ ಆಹಾರವಾಗಲ್ಲ. ನಾನು ಮೊದಲಿಂದಲೂ ಹಾಸನದ ಟಿಕೆಟ್ ಸಾಮಾನ್ಯ ಕಾರ್ಯಕರ್ತರಿಗೆ ನೀಡುವ ಕ್ಲೂ ನೀಡಿದ್ದೆ. ಕಳೆದ ಒಂದು ವರ್ಷದ ಹಿಂದೆ ಒಬ್ಬ ವ್ಯಕ್ತಿ ನಮ್ಮ ಕುಟುಂಬದ ಮೇಲೆ ಸವಾಲು ಹಾಕಿದ್ದರು. ಆಗಿನಿಂದ ನಾನು ನಿರ್ಧಾರ ಮಾಡಿದ್ದೇನೆ ಎಂದು ಹೇಳಿದರು.

    ರೇವಣ್ಣ (HD Revanna) ಮತ್ತು ಅವರ ಕುಟುಂಬಕ್ಕೆ ಯಾರು ತಲೆ ತುಂಬಿತ್ತಿದ್ದಾರೆ ಅಂತ ಗೊತ್ತು. ಆದರೆ ಅವರು ಅಂತಹ ಶಕುನಿಗಳ ಮಾತು ಕೇಳುತ್ತಿದ್ದಾರೆ. ಶಕುನಿಗಳು ದೇವೇಗೌಡರ ಕುಟುಂಬವನ್ನು ಮುಗಿಸಬೇಕು ಅಂತಿದ್ದಾರೆ. ಅವರು ಅಂತಹವರಿಗೆ ಹಾಲೆರಿಯುತ್ತಿದ್ದಾರೆ. ಈ ಮಣ್ಣಿನ ಗುಣದಲ್ಲಿಯೇ ಅದು ಇದೆ. ಇಂತಹ ಸಂಗತಿಗಳಿಂದ ಕುರುಕ್ಷೇತ್ರ ಯುದ್ಧವಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ನಂದಿನಿ ಹಾಲು ಖರೀದಿ ಮಾಡಿ ಹಂಚಿದ್ದ ಡಿಕೆಶಿಗೆ ನೀತಿ ಸಂಹಿತೆ ಉಲ್ಲಂಘನೆಯ ಬಿಸಿ

    ದೇವೇಗೌಡರ (HD Devegowda) ಕುಟುಂಬದಲ್ಲಿ ನಡೆಯುತ್ತಿರುವ ಬೆಳವಣಿಗೆ ಮಾಧ್ಯಮ ಸೃಷ್ಟಿಯಾಗಿದೆ. ನಾಲ್ಕು ಗೋಡೆಗಳ ನಡುವೆ ವಿಚಾರ ಹೇಗೆ ಮಾಧ್ಯಮಗಳಿಗೆ ಗೊತ್ತಾಗುತ್ತೆ? ಇದೆಲ್ಲಾ ಮಾಧ್ಯಮಗಳ ಅಂತೆ ಕಂತೆ ಸುದ್ದಿಯಾಗಿದೆ. ಎಲ್ಲಾ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರತಿಕ್ರಿಯೆ ನಡೆಯುತ್ತಿದೆ. ನಾನು ನಿರಂತರವಾಗಿ ನಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ಕೆಲವು ಸಣ್ಣ- ಪುಟ್ಟ ಸಮಸ್ಯೆಗಳಿಂದ ಎರಡನೇ ಪಟ್ಟಿ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: YouTube ಡೌನ್ – ಜಾಗತಿಕವಾಗಿ ಹಲವು ಬಳಕೆದಾರರಿಗೆ ಸ್ಥಗಿತ