ನಮ್ಮನ್ನು ರೇವಣ್ಣ (Revanna) ಕುಟುಂಬಸ್ಥರು ಚೆನ್ನಾಗಿ ನೋಡಿಕೊಂಡಿದ್ದಾರೆ. ಇಷ್ಟು ವರ್ಷ ರಾಜಕೀಯ ಮಾಡಿದ್ದಾರೆ? ಯಾವುದೇ ಕಪ್ಪು ಚುಕ್ಕಿ ಇಲ್ಲ. ದೂರು ನೀಡಿದವರದ್ದೇ ತಪ್ಪು ಎಂದು ದೂರಿದರು.
ಭವಾನಿ ಅಕ್ಕ ಅವರಿಗೆ ತುಂಬಾ ಸಹಾಯ ಮಾಡಿದ್ದಾರೆ. ಮೇಡಂ, ಸಾಹೇಬರು ನಮಗೆ ದೇವರಿದ್ದಂತೆ. ತಂತ್ರಜ್ಞಾನ ಬಳಸಿ ಏನು ಬೇಕಾದರೂ ಮಾಡಿರಬಹುದು. ಆಕೆ ಐದು ವರ್ಷದ ಹಿಂದೆಯೇ ಮನೆ ಬಿಟ್ಟಿದ್ದಾಳೆ. ಹೆಣ್ಣಾದವಳು ಐದು ವರ್ಷದ ಹಿಂದೆಯೇ ಹೇಳಬಹುದಿತ್ತು. ಇಂದು ಯಾಕೆ ಅವರ ವಿರುದ್ಧ ಮಾತನಾಡುತ್ತಿದ್ದಾಳೆ? ವಿಡಿಯೋ ಸತ್ಯದ ಬಗ್ಗೆ ಪ್ರಶ್ನಿಸಿ ದೂರುದಾರರ ವಿರುದ್ಧವೇ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.
– ಇಂತಹ ಹಲವು ತನಿಖೆ ನಾವು ಎದುರಿಸಿದ್ದೇವೆ
– ಇದಕ್ಕೆಲ್ಲಾ ಹೆದರಿ ಓಡಿ ಹೋಗಲ್ಲ ಎಂದ ಮಾಜಿ ಸಚಿವ
ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ತಂದೆ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ (HD Revanna) ವಿರುದ್ಧವೂ ದೌರ್ಜನ್ಯ ಆರೋಪ ಕೇಳಿಬಂದಿದೆ. ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ರೇವಣ್ಣ ಮತ್ತು ಹೆಚ್.ಡಿ ರೇವಣ್ಣ ವಿರುದ್ಧ ದೂರು ದಾಖಲಾಗಿದೆ. ಅದರನ್ವಯ ಎಫ್‌ಐಆರ್‌ನಲ್ಲಿ ಹೆಚ್.ಡಿ.ರೇವಣ್ಣ ಎ1 ಮತ್ತು ಪ್ರಜ್ವಲ್ ರೇವಣ್ಣ ಎ2 ಆರೋಪಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ ಅವರು, ನಾಲ್ಕೈದು ವರ್ಷದ ಕಥೆ ತಂದು ಈಗ ದೂರು ಕೊಟ್ರೆ ಏನರ್ಥ ಎಂದಿದ್ದಾರೆ. ಇದೆಲ್ಲಾ ಷಡ್ಯಂತ್ರ, ಇದಕ್ಕೆಲ್ಲಾ ಹೆದರಿ ಓಡಿ ಹೋಗಲ್ಲ. ಕಾನೂನು ಹೋರಾಟ ಮಾಡ್ತಿನಿ. ನನ್ನ ವಿರುದ್ಧ ನೀಡಿದ ದೂರಿನ ಬಗ್ಗೆ, ಯಾವುದೇ ಪ್ರತಿಕ್ರಿಯೆ ಕೊಡಲ್ಲ. ಸರ್ಕಾರ ಎಸ್‌ಐಟಿಗೆ ವಹಿಸಿದೆಯಲ್ಲಾ, ಎಸ್‌ಐಟಿ ತನಿಖೆ ಮಾಡಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ – ಸಮಗ್ರ ತನಿಖೆಗೆ ಎಸ್‌ಐಟಿ ರಚನೆ
ಪ್ರಜ್ವಲ್ ರೇವಣ್ಣ ವಿದೇಶ ಪ್ರಯಾಣ ಮೊದಲೇ ನಿರ್ಧಾರವಾಗಿತ್ತು. ಎಫ್‌ಐಆರ್ ಹಾಕ್ತಾರೆ ಅನ್ನೋದು ಗೊತ್ತಿರಲಿಲ್ಲ. ತನಿಖೆಗೆ ಕರೆದರೆ ಅವನೂ ಬರ‍್ತಾನೆ. ದೇವೇಗೌಡರ ಕುಟುಂಬದ ವಿರುದ್ಧ ಷಡ್ಯಂತ್ರ ಹೊಸದಲ್ಲ. ಇಂತಹ ಹಲವು ತನಿಖೆ ನಾವು ಎದುರಿಸಿದ್ದೇವೆ. ದೇವೇಗೌಡರ ಮೇಲೆ ಸಿಒಡಿ ತನಿಖೆ ನಡೆಸಿದ್ದರು, ನಾನು ದೇವೇಗೌಡರ ಬಳಿ ಈ ವಿಷಯ ಮಾತನಾಡಿಲ್ಲ. ಕಾನೂನು ರೀತಿ ಏನಿದೆ ಅದು ನಡೆಯಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೆಚ್.ಡಿ.ರೇವಣ್ಣ ಎ1, ಪ್ರಜ್ವಲ್ ರೇವಣ್ಣ ಎ2 ಆರೋಪಿ – ಮನೆ ಕೆಲಸದಾಕೆಯಿಂದ ದೂರು
ಹಾಸನ: ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರಗಳ ಸಲ್ಲಿಕೆ ಗುರುವಾರ ಅಂತ್ಯಗೊಂಡಿದ್ದು, ಹಾಸನ ಕ್ಷೇತ್ರದಲ್ಲಿ ಒಟ್ಟು 29 ನಾಮಪತ್ರಗಳು ಸಲ್ಲಿಕೆಯಾಗಿವೆ.
ಪ್ರಜ್ವಲ್ ಆರ್. (ಜೆಡಿಎಸ್), ಜೆಕೆ ಚಿಕ್ಕಯ್ಯ (ಪಕ್ಷೇತರ), ಬಿ.ಎನ್ ಸುರೇಶ್ (ಪಕ್ಷೇತರ), ಶ್ರೇಯಸ್ ಎಂ. ಪಟೇಲ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಬಿ.ಎನ್ ಹೇಮಂತ್ ಕುಮಾರ್ (ಪಕ್ಷೇತರ), ಜಿ.ಎನ್ ಆನಂದ್ (ಭಾರತೀಯ ಡಾ.ಬಿ.ಆರ್ ಅಂಬೇಡ್ಕರ್ ಜನತಾಪಕ್ಷ), ಎಸ್.ಕೆ ನಿಂಗರಾಜ (ಬಹುಜನ್ ಭಾರತ್ ಪಾರ್ಟಿ), ಪರಮೇಶ ಎನ್.ಎಂ. (ಪಕ್ಷೇತರ), ಸಿದ್ಧಾಭೋವಿ (ಪಕ್ಷೇತರ), ಶೇಖ್ ಅಹಮದ್ (ನವರಂಗ್ ಕಾಂಗ್ರೆಸ್) ಶಿವರಾಜ್ ಬಿ. (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಭಾರತ್) ಅವರು ಗುರುವಾರ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿ ಸಿ. ಸತ್ಯಭಾಮಾ ಅವರಿಗೆ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಇದುವರೆಗೆ ನಾಮಪತ್ರಗಳನ್ನು ಸಲ್ಲಿಸಿರುವ ಇತರೆ ಅಭ್ಯರ್ಥಿಗಳು:
ದೇವರಾಜಾಚಾರಿ ಎಂ.ವೈ. (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ಆರ್.ಜಿ. ಸತೀಶ್ (ಪಕ್ಷೇತರ), ಎಚ್.ಡಿ. ರೇವಣ್ಣ (ಪೂರ್ವಾಂಚಲ ಮಹಾಪಂಚಾಯತ್ ಪಕ್ಷ), ಗಂಗಾಧರ ಡಿ.ಎಸ್. (ಬಹುಜನ ಸಮಾಜ ಪಕ್ಷ), ಹೊಳೆಯಪ್ಪ ಜಿ (ಲೋಕ್ ಶಕ್ತಿ), ಎಂ. ಮಹೇಶ್ ಉರ್ಫ್ ಹರ್ಷ(ಪಕ್ಷೇತರ), ಬಸವರಾಜು ಜೆ.ಡಿ. (ಪಕ್ಷೇತರ), ಸಂತೋಷ್ ಬಿ.ಎನ್. (ಅಖಿಲ ಭಾರತ ಹಿಂದೂ ಮಹಾಸಭಾ), ಪ್ರತಾಪ ಕೆ.ಎ. (ಉತ್ತಮ ಪ್ರಜಾಕೀಯ ಪಾರ್ಟಿ), ಕೆ.ಆರ್. ಗಂಗಾಧರ (ಪಕ್ಷೇತರ). ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏ.8 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ. ಏ.26 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಸಿ.ಸತ್ಯಭಾಮ ತಿಳಿಸಿದ್ದಾರೆ.
ಬೆಳಗಾವಿ: ಭವಾನಿ ರೇವಣ್ಣ (Bhavani Revanna) ಆಡಿದ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ರಾಜ್ಯದ ಜನರಿಗೆ ಪತ್ನಿಯ ಪರವಾಗಿ ನಾನೇ ಕ್ಷಮೆ ಕೇಳುತ್ತೇನೆ ಎಂದು ಹೆಚ್‌ಡಿ ರೇವಣ್ಣ (HD Revanna) ಹೇಳಿದ್ದಾರೆ.
ಬೆಳಗಾವಿಯ (Belagavi) ಸುವರ್ಣ ಸೌಧದಲ್ಲಿ ಮಾತನಾಡಿದ ಹೆಚ್‌ಡಿ ರೇವಣ್ಣ, ಬೈಕ್ ಚಾಲಕನಿಗೆ ಹೆಚ್ಚು ಕಡಿಮೆ ಆಗಿದ್ದರೆ ಏನಾಗುತ್ತಿತ್ತು? ಭವಾನಿಯವರು ಏನೂ ಅಹಂಕಾರದ ಮಾತಾಡಿಲ್ಲ. ಭವಾನಿಯವರು ಯಾರದ್ದೋ ಸ್ನೇಹಿತರ ಕಾರಿನಲ್ಲಿ ಹೋಗಿದ್ದರು. ಅವರು ಅಪಘಾತ ಸಂಭವಿಸಿದಾಗ ಸಿಟ್ಟಿನಲ್ಲಿ ಮಾತನಾಡಿದ್ದಾರೆ. ನಮ್ಮ ಕುಟುಂಬ ಯಾರಿಗೂ ನೋವು ಆಗುವ ಕೆಲಸ ಮಾಡಿಲ್ಲ ಎಂದು ಹೇಳಿದರು.
ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಏನಾಗುವುದು? ಅದರ ವೀಡಿಯೋವನ್ನು ಬೇಕಂತಲೇ ಯಾರೋ ವೈರಲ್ ಮಾಡಿದ್ದಾರೆ. ಅವರು ಬೈಕ್‌ನವನ ಪ್ರಾಣದ ಬಗ್ಗೆ ಮಾತನಾಡಿಲ್ಲ. ಇವರದ್ದೇ ಪ್ರಾಣ ಹೋಗಿದ್ದರೆ ಏನು ಮಾಡುವುದು? ಅದರಿಂದ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ಬೇಕಿದ್ದರೆ ಭವಾನಿ ಹತ್ತಿರನೂ ಕ್ಷಮೆ ಕೇಳಿಸೋಣ ಬಿಡಿ ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ: ತಾಯಿ ಅಕ್ಷಮ್ಯ ಪದ ಬಳಕೆಗೆ ಕ್ಷಮೆಯಾಚಿಸಿದ ಸೂರಜ್ ರೇವಣ್ಣ
ಭವಾನಿ ಯಾವತ್ತೂ ಯಾರಿಗೂ ನೋವು ಮಾಡಿಲ್ಲ. ಸ್ನೇಹಿತರ ಕಾರು ಅಂತ ಅವರು ಹಾಗೆ ಮಾಡಿದ್ದಾರೆ. ನಮ್ಮ ಕುಟುಂಬ ಆ ಥರ ಇಲ್ಲ. ಗಾಡಿ ಅವಘಡ ಆದ ಮೇಲೆ ದೂರು ಕೊಡದಿದ್ದರೆ ತಪ್ಪಾಗಲ್ಲವಾ? ಘಟನೆ ನಡೆದ ಬಳಿಕ ಠಾಣೆಗೆ ತಿಳಿಸಬೇಕಲ್ಲವಾ? ಯಾರಿಗಾದರೂ ನೋವಾಗಿದ್ದರೂ ವಿಷಾದ ವ್ಯಕ್ತಪಡಿಸುತ್ತೇನೆ. ಆತ ಕುಡಿದು ಬಂದು ಗಾಡಿಗೆ ಗುದ್ದಿದ್ದಾನೆ. ಕಾರಿನಲ್ಲಿದ್ದವರ ಪ್ರಾಣಕ್ಕೆ ತೊಂದರೆ ಆಗಿದ್ದರೆ? ಎಷ್ಟೇ ನಿಧಾನವಾಗಿ ಹೋಗಿದ್ದರು ಬಂದು ಮಧ್ಯದಲ್ಲಿ ಗುದ್ದಿದ್ದಾನೆ. ಅದನ್ನು ದೊಡ್ಡ ವಿಷಯ ಮಾಡಬೇಡಿ ಎಂದು ಕೇಳಿಕೊಂಡರು.
ಕಾರನ್ನು ಎಷ್ಟೇ ಸೈಡಿಗೆ ತೆಗೆದುಕೊಂಡು ಹೋದರೂ ಬೈಕಿನವ ಕಾರಿಗೆ ಅಡ್ಡ ಬಂದು ಅಪಘಾತ ಮಾಡಿದ್ದಾನೆ. ದೂರು ಕೊಟ್ಟಿದ್ದಾರೆ, ಕಾರು ಅಪಘಾತ ಆಗಿರುವ ಕಾರಣ ಇನ್‌ಶ್ಯೂರೆನ್ಸ್ಗಾಗಿ ದೂರು ನೀಡಿದ್ದಾರೆ. ಯಾರನ್ನೂ ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶ ಹೊಂದಿಲ್ಲ. ಬೈಕ್ ಸವಾರ ಕುಡಿದಿದ್ದ ಕಾರಣ ಅಪಘಾತ ಸಂಭವಿಸಿದೆ. ಆತನ ವಿರುದ್ಧ ದೂರು, ಕ್ರಮ ಕೈಗೊಳ್ಳಲ್ಲ. ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಮ್ಮ ಕುಟುಂಬದಿಂದ ಯಾರಿಗೂ ನೋವನ್ನುಂಟು ಮಾಡುವುದಿಲ್ಲ. ಅವರ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೆಚ್‌ಡಿ ರೇವಣ್ಣ ನುಡಿಸಿದ್ದಾರೆ. ಇದನ್ನೂ ಓದಿ: ಎಕ್ಸೆಲ್ ಕಟ್ ಆಗಿ ನಿಯಂತ್ರಣ ತಪ್ಪಿದ್ದ ಬಸ್ – ದೊಡ್ಡ ದುರಂತ ತಪ್ಪಿಸಿದ ಚಾಲಕನಿಗೆ ಸನ್ಮಾನ
ಹಾಸನ: ಹಾಸನಾಂಬೆ (Hasanamba) ಸಾರ್ವಜನಿಕ ದರ್ಶನೋತ್ಸವ ಇಂದಿನಿಂದ ಆರಂಭವ ಆಗಿದೆ. ಮೊದಲ ದಿನವೇ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.
ಇಂದಿನಿಂದ 12 ದಿನ ಭಕ್ತರಿಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ನಿಡಲಾಗಿದೆ. ಇಂದು (ಶುಕ್ರವಾರ) ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ದರ್ಶನಕ್ಕೆ ಅವಕಾಶ ಇದೆ.
ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಇಂದು ಮಧ್ಯರಾತ್ರಿಯಿಂದಲೇ ಸರತಿ ಸಾಲಿನಲ್ಲಿ ನಿಂತು ಭಕ್ತರು ಕಾಯುತ್ತಿದ್ದಾರೆ. ಈ ಮೂಲಕ ವರ್ಷದ ಬಳಿಕ ಶಕ್ತಿ ದೇವತೆ ಹಾಸನಾಂಬೆಯ ದರ್ಶನವನ್ನು ಪಡೆಯುತ್ತಿದ್ದಾರೆ. ಇದನ್ನೂ ಓದಿ: ಭಾರತೀಯ ಮೂಲದ ವಿದ್ಯಾರ್ಥಿಗೆ ಚೂರಿ ಇರಿತ ಪ್ರಕರಣದಿಂದ ವಿಚಲಿತರಾಗಿದ್ದೇವೆ: ಯುಎಸ್
ಹೆಚ್‌ಡಿ ರೇವಣ್ಣ ಭೇಟಿ: ಹಾಸನಾಂಬೆ ದೇವಿಯ ದರ್ಶನ ಹಿನ್ನೆಲೆಯಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಬೆಳ್ಳಂಬೆಳಗ್ಗೆ ದೇಗುಲಕ್ಕೆ ಭೇಟಿ ಮಾಡಿ ದರ್ಶನ ಪಡೆದಿದ್ದಾರೆ. ಇಂದು ಶುಕ್ರವಾರ ಹಿನ್ನೆಲೆಯಲ್ಲಿ ಮೊದಲ ಪೂಜೆಗೆ ರೇವಣ್ಣ ಆಗಮಿಸಿದ್ದಾರೆ. ತಮ್ಮ ಆಪ್ತರ ಜೊತೆ ಹಾಸನಾಂಬೆ ದರ್ಶನಕ್ಕೆ ಬಂದಿದ್ದಾರೆ.
ಹಾಸನ: ಪ್ರಥಮ ದರ್ಜೆ ಗುತ್ತಿಗೆದಾರನ ಮತ್ತು ಎಚ್.ಡಿ ರೇವಣ್ಣ (HD Revanna) ಆಪ್ತನ ಕೊಲೆಗೆ ಯತ್ನಿಸಿದ ಘಟನೆ ಹಾಸನದಲ್ಲಿ (Hassan) ನಡೆದಿದೆ.
ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿ ಗ್ರಾಮದ ಹಂಪ್ಸ್ ಬಳಿ ಮಂಗಳವಾರ ರಾತ್ರಿ ಅಟ್ಯಾಕ್ ನಡೆದಿದ್ದು, ಎಚ್‍ಡಿಆರ್ ಆಪ್ತರಾಗಿರುವ ಅಶ್ವಥ್ ನಾರಾಯಣಗೌಡ ಮೇಲೆ ದಾಳಿ ನಡೆದಿದೆ. ಕೂದಲೆಳೆ ಅಂತರದಲ್ಲಿ ಅಶ್ವತ್ಥ್ ನಾರಾಯಣ ಗೌಡ ಪಾರಾಗಿದ್ದಾರೆ.
ರೇವಣ್ಣ ಜೊತೆಯೇ ನಾರಾಯಣಗೌಡ ರಾತ್ರಿ 8.30ರ ಸುಮಾರಿನಲ್ಲಿ ಚನ್ನರಾಯಪಟ್ಟಣದ ತಮ್ಮ ನಿವಾಸಕ್ಕೆ ಕೆಎ-53-ಎಂಎಫ್-5555 ನಂಬರಿನ ಫಾರ್ಚೂನರ್ ಕಾರಿನಲ್ಲಿ ಹೊರಟಿದ್ದರು. ಅಶ್ವಥ್ ಮನೆಗೆ ಹೊರಟಿರುವ ಬಗ್ಗೆ ಮಾಹಿತಿ ಪಡೆದು ಸೂರನಹಳ್ಳಿ ಹಂಪ್ಸ್ ಬಳಿ ಕಾರಿನ ಮೇಲೆ ದುಷ್ಕರ್ಮಿಗಳು ದಿಢೀರ್ ಅಟ್ಯಾಕ್ ಮಾಡಿದ್ದಾರೆ. ಇದನ್ನೂ ಓದಿ: ಸಮುದ್ರದಲ್ಲಿ ಮುಳುಗುತ್ತಿದ್ದ ಒಂದೇ ಕುಟುಂಬದ 7 ಜನರ ರಕ್ಷಣೆ
ಮೊದಲು ಕಲ್ಲನ್ನು ಕಾರಿನ ಗ್ಲಾಸ್ ಮೇಲೆ ಎತ್ತಿಹಾಕಿ ನಂತರ ಮಾರಕಾಸ್ತ್ರಗಳಿಂದ ಕೊಲೆ ಮಾಡಲು ಮುಂದಾಗಿದ್ದಾರೆ. ಕೂಡಲೇ ಕಾರನ್ನು ರಿವರ್ಸ್ ತೆಗೆದು ಅಶ್ವಥ್ ಎಸ್ಕೇಪ್ ಆಗಿದ್ದಾರೆ. ಮೂಡಲಹಿಪ್ಪೆ ಗ್ರಾಮದವರೆಗೂ ಅಶ್ವಥ್‍ರನ್ನು ಹಿಂಬಾಲಿಸಿದ ದುಷ್ಕರ್ಮಿಗಳು, ನಂತರ ಪರಾರಿಯಾಗಿದ್ದಾರೆ.
ಈ ಸಂಬಂಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾಸನ: ನಾವು ಯಾವ ಪಾರ್ಟಿ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಇವರಿಗೇನು ಹೊಟ್ಟೆ ಉರಿ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಕಾಂಗ್ರೆಸ್ (Congress) ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಜಾತ್ಯಾತೀತ ನಿಲುವಿನ ಬಗ್ಗೆ ಏಷ್ಟೆಲ್ಲಾ ಮಾತನಾಡುತ್ತಾರೆ. ಆದರೆ ಮುಸಲ್ಮಾನರಿಗೆ ಅವರು ನೀಡಿರುವ ಕೊಡುಗೆ ಏನು ಎಂದು ಹೇಳಲಿ? ಮುಸಲ್ಮಾನರಿಗೆ ಮೀಸಲಾತಿ, ರಾಜಕೀಯ ಅಧಿಕಾರ, ಎಲ್ಲಾ ರೀತಿಯ ಸವಲತ್ತು ಕೊಟ್ಟಿರುವುದು ಮಾಜಿ ಪ್ರಧಾನಿ ದೇವೇಗೌಡರು. ಅಲ್ಲದೇ ರಾಜ್ಯದಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟವರು ಅವರು. ಈ ರಾಷ್ಟ್ರದಲ್ಲಿ ಪ್ರಧಾನಿ ಹುದ್ದೆಯನ್ನೇ ತೊರೆದು ಬಂದ ಯಾವುದಾದರೂ ನಾಯಕ ಇದ್ದರೆ ಅದು ದೇವೇಗೌಡ್ರು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಐಟಿ ಭರ್ಜರಿ ಬೇಟೆ- 60 ಕಡೆ ದಾಳಿ; 2,500 ಕೋಟಿ ಅಕ್ರಮ ಬಯಲಿಗೆ
ಕಾಂಗ್ರೆಸ್‍ನವರಿಗೆ ಭಯ ಶುರುವಾಗಿದೆ. ಜನಕ್ಕೆ ಎಷ್ಟು ದಿನ ಸುಳ್ಳು ಹೇಳೋದಕ್ಕೆ ಆಗುತ್ತದೆ. ಇವರಿಗೆ ಮುಸಲ್ಮಾನರ ಬಗ್ಗೆ ಮತಾಡೋಕ್ಕೆ ಯಾವ ನೈತಿಕತೆ ಇದೆ? ಈ ದೇಶದಲ್ಲಿ ಕಾಂಗ್ರೆಸ್ ಈ ಸ್ಥಿತಿಗೆ ಬರಲು ಹಲವಾರು ಕಾರಣಗಳಿವೆ. ಗಾಂಧೀಜಿ ಅವರು ಕಟ್ಟಿದ ಕಾಂಗ್ರೆಸ್ ಆಗಿ ಈಗ ಉಳಿದಿಲ್ಲ. ಒಂದಲ್ಲ ಒಂದು ದಿನ ಮುಸಲ್ಮಾನರು ಕಾಂಗ್ರೆಸ್‍ನ್ನು ತಿರಸ್ಕಾರ ಮಾಡುವ ದಿನ ಬರುತ್ತದೆ ಎಂದಿದ್ದಾರೆ.
ಕಾಂಗ್ರೆಸ್‍ನವರು ಬೆಳಗ್ಗೆ ಎದ್ದರೆ ದೇವೇಗೌಡ್ರು, ಕುಮಾರಣ್ಣ ಎನ್ನುತ್ತಾರೆ. ಇವರಿಗ್ಯಾಕೆ ಉಸಾಬರಿ, ನಿಮ್ಮದು ಏನಿದೆ ಅನ್ನೋದನ್ನು ನೋಡಿಕೊಳ್ಳಿ. ಕಳೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ನಿಮ್ಮ ಸ್ಥಾನ 45ಕ್ಕೆ ಬಂದಿದೆ. ಹಾಗಾಗಿಯೇ ಈಗ ಎಲ್ಲರನ್ನೂ ಹೋಗಿ ತಬ್ಬಿಕೊಳ್ತಾರೆ. ಅದೆನೋ ಐಎನ್‍ಡಿಐಎ ಎಂದು ಮಾಡಿಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ನಾನು ಬದುಕಿರುವವರೆಗೂ ಹಾಸನ ಜಿಲ್ಲೆಯ ಅಲ್ಪಸಂಖ್ಯಾತರ ಜೊತೆ ಇರುತ್ತೇನೆ. ಈ ಜಿಲ್ಲೆಯೊಳಗೆ ಕಾಂಗ್ರೆಸ್‍ನವರು ವೀರಶೈವ ಸಮಾಜಕ್ಕೆ ಒಂದು ಸೀಟ್ ಕೊಡಲಿಲ್ಲ. ಶಾಮನೂರು ಶಿವಶಂಕರಪ್ಪ ಅವರು ಸುಮ್ಮನೆ ಏನೂ ಇಲ್ಲದೇ ಹೇಳ್ತಾರಾ? ಅವರು ಎಷ್ಟು ನೋವನ್ನು ನುಂಗಿಕೊಂಡಿದ್ದಾರೆ. ಅವರು ಮನಸ್ಸು ಮಾಡಿದ್ದರೆ ಇಷ್ಟರೊಳಗೆ ಕೇಂದ್ರ ಸಚಿವರಾಗುತ್ತಿದ್ದರು ಎಂದಿದ್ದಾರೆ. ಇದನ್ನೂ ಓದಿ: ಇದು ಪ್ರಿ ಅರೇಂಜ್ ಮ್ಯಾರೇಜ್- ಬಿಜೆಪಿ ದೋಸ್ತಿಗೆ ಮತ್ತೆ ಸಿಎಂ ಇಬ್ರಾಹಿಂ ವಿರೋಧ
ಬೆಂಗಳೂರು: ಕಾವೇರಿ (Cauvery) ವಿಚಾರ ಚರ್ಚೆ ಮಾಡಲು ಸರ್ಕಾರ ಕೂಡಲೇ ವಿಶೇಷ ಅಧಿವೇಶನ ಕರೆಯಬೇಕು ಎಂದು ಮಾಜಿ ಸಚಿವ ಹೆಚ್‌ಡಿ ರೇವಣ್ಣ (HD Revanna) ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶನಿವಾರ ಮಂಡ್ಯ ಬಂದ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಂಡ್ಯ ಬಂದ್‌ಗೆ ನಮ್ಮ ಪಕ್ಷದ ಬೆಂಬಲ ಇದೆ. ರಾಜ್ಯದ ಜಲ ಮತ್ತು ನೆಲದ ವಿಷಯದಲ್ಲಿ ರಾಜಕೀಯ ಮಾಡಬಾರದು. ತಪ್ಪು ಯಾರದ್ದೇ ಇರಲಿ ಈಗ ಚರ್ಚೆ ಬೇಡ. ಏನು ಸರಿಪಡಿಸಬೇಕು ಎಂದು ಸರ್ಕಾರ ಯೋಚನೆ ಮಾಡಲಿ. ಕಾವೇರಿ ವಿಷಯಕ್ಕಾಗಿ ವಿಶೇಷ ಅಧಿವೇಶನ ಕರೆದು ಒಂದು ನಿರ್ಣಯ ಮಾಡಬೇಕು ಎಂದು ಒತ್ತಾಯ ಮಾಡಿದರು.
ಹೇಮಾವತಿ ವಿಚಾರವಾಗಿ ಸಲಹಾ ಸಮಿತಿ ಸಭೆ ಮಾಡಿ ಎಂದು ಅನೇಕ ದಿನಗಳಿಂದ ನಾನು ಹೇಳಿದ್ದೇನೆ. ಒಂದು ಕಡೆ ಬರ, ಮತ್ತೊಂದು ಕಡೆ ಕಾವೇರಿ ವಿಷಯ. ಇದಕ್ಕೆ ಪರಿಹಾರ ಕೊಡಬೇಕು ಅಂದರೆ ಚರ್ಚೆ ಆಗಬೇಕು. ಇದಕ್ಕಾಗಿ ವಿಶೇಷ ಅಧಿವೇಶನ ಕರೆದು ನಿರ್ಣಯ ಮಾಡಬೇಕು. ಅನೇಕ ಜನ ಹಿರಿಯ ಶಾಸಕರು ಇದ್ದಾರೆ. ಸರ್ಕಾರ ಅವರಿಂದ ಸಲಹೆ ಪಡೆಯಬೇಕು. ಬೆಂಗಳೂರಿನ ನಗರಕ್ಕೆ ಕುಡಿಯುವ ನೀರಿಲ್ಲ. ಈಗ ನೀರು ಬಿಟ್ಟು ಆಮೇಲೆ ವಾಪಸ್ ತರೋಕೆ ಆಗಲ್ಲ. ಸಿಎಂ ಕೂಡಲೇ ವಿಶೇಷ ಅಧಿವೇಶನ ಕರೆಯಬೇಕು. 2, 3, 4 ದಿನವೋ ವಿಶೇಷ ಅಧಿವೇಶನ ಮಾಡಬೇಕು ಎಂದು ಒತ್ತಾಯ ಮಾಡಿದರು. ಇದನ್ನೂ ಓದಿ: ಬಂಗಾರಪ್ಪ ಸಿಎಂ ಆಗಿದ್ದಾಗ ಚಿಟಿಕೆ ಹೊಡೆಯುವುದರಲ್ಲಿ ಕಾವೇರಿ ಸಮಸ್ಯೆಗೆ ಉತ್ತರ ಕೊಟ್ಟಿದ್ದರು: ಮಧು ಬಂಗಾರಪ್ಪ
ಕಾವೇರಿ ವಿಚಾರ ಸೇರಿದಂತೆ ನೀರಾವರಿಯ ಯಾವುದೇ ವಿಷಯಕ್ಕೆ ಜೆಡಿಎಸ್ ಬೆಂಬಲ ಇದೆ. ದೇವೇಗೌಡರು ನೀರಾವರಿ ಬಗ್ಗೆಯೇ ಹೋರಾಟ ಮಾಡಿದ್ದಾರೆ. ಕಾವೇರಿ ಬಗ್ಗೆಯೂ ಹೋರಾಟ ಮಾಡಿದ್ದಾರೆ. ನಮ್ಮ ಪಕ್ಷ ಕೂಡಾ ಬೆಂಬಲ ಕೊಡಲಿದೆ ಎಂದರು.
ಆದಿ ಚುಂಚನಗಿರಿ ಶ್ರೀಗಳಿಂದ ಪ್ರತಿಭಟನೆಗೆ ಬೆಂಬಲ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿರ್ಮಲಾನಂದ ಶ್ರೀಗಳು ಇರಬಹುದು, ಬಾಲಗಂಗಾಧರನಾಥ ಶ್ರೀಗಳು ಇರಬಹುದು ರಾಜ್ಯದ ಹಿತ ಕಾಪಾಡೋದ್ರಲ್ಲಿ ಮುಂದೆ ಇದ್ದರು. ಆದಿಚುಂಚನಗಿರಿ ಶ್ರೀಗಳು ನೀರಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಶ್ರೀಗಳ ನಿರ್ಧಾರವನ್ನು ನಾವು ಸ್ವಾಗತ ಮಾಡುತ್ತೇವೆ ಎಂದರು. ಇದನ್ನೂ ಓದಿ: ಮಹಿಳಾ ಮೀಸಲಾತಿ ಅಂಗೀಕಾರ – ಇದು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡೋ ದಿನ: ಪ್ರಹ್ಲಾದ್ ಜೋಶಿ
ಹಾಸನ: ನಾನು ಬದುಕಿರುವವರೆಗೂ ಅಲ್ಪ ಸಂಖ್ಯಾತರಿಗೆ (Minorities) ಅನ್ಯಾಯ ಆಗಲು ಬಿಡಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಹೇಳಿದ್ದಾರೆ.
ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ (BJP-JDS) ಮೈತ್ರಿ ವಿಚಾರವಾಗಿ ಮಾತನಾಡುತ್ತಲೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಜೊತೆ ನಮ್ಮ ಪಕ್ಷವನ್ನ ವಿಲೀನ ಮಾಡಲು ಹೋಗಿಲ್ಲ. ಜೆಡಿಎಸ್ (JDS) ಪಕ್ಷವಾಗಿಯೇ ಉಳಿಯುತ್ತೆ. ನಾನು ಬದುಕಿರುವವರೆಗೂ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರಿಗೆ ಅನ್ಯಾಯ ಮಾಡಲು ಬಿಡಲ್ಲ. ನಾವು ಅವರ ಜೊತೆ ಇದ್ದೇ ಇರುತ್ತೇವೆ. ಇದು ನನ್ನ ಧರ್ಮ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಮಹಿಳಾ ಅಂಧರ ಕ್ರಿಕೆಟ್‌ನಲ್ಲಿ ಚಿನ್ನಗೆದ್ದ ಕರ್ನಾಟಕದ ಯುವತಿಗೆ ವಿಶೇಷ ಸನ್ಮಾನ
ರೈತರು ಹಾಳು ಬಿದ್ದು ಹೋಗಲಿ ಅನ್ನೋ ಪರಿಸ್ಥಿತಿಗೆ ಬಂದಿರುವ ಸರ್ಕಾರ, ಬರೀ ಗ್ಯಾರಂಟಿ ಕಡೆಗೆ ಗಮನ ಕೊಡುತ್ತಿದೆ. ನಾವೇನಾದ್ರೂ ಮಾತನಾಡಿದ್ರೆ ಜೆಡಿಎಸ್ ಮುಗಿದು ಹೋಗುತ್ತೆ, ಅವರತ್ರ ಹೋಗ್ತಾರೆ, ಇವರತ್ರ ಹೋಗ್ತಾರೆ ಅಂತಾರೆ. ನಾವು ಎಲ್ಲಾದ್ರೂ ಹೋಗ್ತಿವಿ. ನೀವು ಮೊದಲು ರೈತರನ್ನ ಉಳಿಸಿಕೊಳ್ಳಿ. ಇಲ್ಲದಿದ್ದರೆ ರೈತರು ಮನಸ್ಸು ಮಾಡಿದ್ರೆ ಏನು ಬೇಕಾದರೂ ಆಗಲಿದೆ. ಆದ್ದರಿಂದ ಸರ್ಕಾರ ಕೂಡಲೇ ಅಧಿವೇಶನ ಕರೆದು ಚರ್ಚೆ ಮಾಡಬೇಕು ಎಂದು ಎಚ್ಚರಿಸಿದ್ದಾರೆ.
ತಮಿಳುನಾಡಿಗೆ 20 ಟಿಎಂಸಿ ನೀರು ಬಿಟ್ಟರು. ಹೇಮಾವತಿ ನದಿಯಿಂದ ತುಮಕೂರಿಗೆ (Tumakur) ಎರಡು ತಿಂಗಳಿನಿಂದ ನೀರು ಬಿಟ್ಟಿದ್ದಾರೆ. ಜೆಡಿಎಸ್‌ಗೆ ವೋಟು ಹಾಕಿದ್ದಾರೆ ಎಂದು ಹಾಸನ ಜಿಲ್ಲೆಗೆ ನೀರು ಹರಿಸಿಲ್ಲ. ನೀರು ಬಿಡುವುದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಲ್ಲೂ ಬರಗಾಲವಿದೆ. 7 ಕ್ಷೇತ್ರಗಳಿಗೂ ಬರ ಘೋಷಣೆ ಮಾಡುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸನಾತನ ಧರ್ಮದ ವಿರುದ್ಧ ಮಾತನಾಡುವವರ ನಾಲಿಗೆ, ಕಣ್ಣು ಕಿತ್ತುಹಾಕಬೇಕು: ಗಜೇಂದ್ರ ಸಿಂಗ್ ಶೇಖಾವತ್
ಜಿಲ್ಲೆಯಲ್ಲಿ 1,18,292 ಹೆಕ್ಟೇರ್‌ನಲ್ಲಿ ತೆಂಗಿನ ಮರಗಳಿದ್ದು, ಮಳೆ ಕೊರತೆಯಿಂದ ಹಾಳಾಗ್ತಿವೆ. ಅರಸೀಕೆರೆ, ಹಾಸನ, ಹೊಳೆನರಸೀಪುರ, ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲಿ ಹೆಚ್ಚು ನಷ್ಟವಾಗಿದೆ. ಈ ನಡುವೆ ಶೇ.60 ರಷ್ಟು ತೆಂಗಿನ ಮರಗಳಿಗೆ ರೋಗ ತಗುಲಿದ್ದು, ನಿಯಂತ್ರಣಕ್ಕೆ ಔಷಧಿ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರಂತೆಯೇ ಮಾಜಿ ಸಚಿವ ಹೆಚ್‌ಡಿ ರೇವಣ್ಣ (HD Revanna) ಮತ್ತು ಹಾಲಿ ಜೆಡಿಎಸ್ ಶಾಸಕ ಎ ಮಂಜು (A Manju) ಅನರ್ಹರಾಗಲಿದ್ದಾರೆ ಎಂದು ಬಿಜೆಪಿ ಮುಖಂಡೆ, ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ (Pramila Nesargi) ಹೇಳಿದ್ದಾರೆ.
ಈ ಪ್ರಜ್ವಲ್ ರೇವಣ್ಣ ಅವರ ಅಕ್ರಮ ಕೆಲಸಕ್ಕೆ ಹೆಚ್‌ಡಿ ರೇವಣ್ಣ ಸಹಕಾರ ನೀಡಿದ್ದಾರೆ. ಸಹಕಾರ ನೀಡಿದ್ದರಿಂದ ಹೆಚ್‌ಡಿ ರೇವಣ್ಣ ಅವರು ತಪ್ಪಿತಸ್ಥರು. ಅವರನ್ನು ಅನರ್ಹಗೊಳಿಸಬೇಕೆಂದು ಎಂದು ನಾವು ಮನವಿ ಮಾಡಿದ್ದೇವೆ. ಕೋರ್ಟ್ ಮನವಿ ಪುರಸ್ಕರಿಸಿ ರೇವಣ್ಣ ಅವರಿಗೂ ನೋಟಿಸ್ ಜಾರಿ ಮಾಡಿದೆ ಎಂದು ಹೇಳಿದರು.
ಮಂಜು ಸಹ ಅಕ್ರಮ ಮಾಡಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ಕೋರ್ಟ್ ಗಮನಕ್ಕೆ ತಂದಿದ್ದರು. ಹೀಗಾಗಿ ಎ ಮಂಜು ಅವರಿಗೂ ನಿಮ್ಮನ್ನು ಯಾಕೆ ಅನರ್ಹ ಮಾಡಬಾರದು ಎಂದು ಕೋರಿ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಇಬ್ಬರು ಅನರ್ಹರಾಗಲಿದ್ದು ಇಬ್ಬರ ವಿರುದ್ಧವೂ ನಾವು ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ಪ್ರಮೀಳಾ ನೇಸರ್ಗಿ ತಿಳಿಸಿದರು.