Tag: HD Revanna

  • ಹೆಚ್.ಡಿ ರೇವಣ್ಣಗೆ ಇಂದು ಸಿಗುತ್ತಾ ರಿಲೀಫ್?

    ಹೆಚ್.ಡಿ ರೇವಣ್ಣಗೆ ಇಂದು ಸಿಗುತ್ತಾ ರಿಲೀಫ್?

    ಬೆಂಗಳೂರು: ಕಿಡ್ನಾಪ್ ಪ್ರಕರಣದಲ್ಲಿ (Kidnap Case) ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಚಿವ ಹೆಚ್. ಡಿ ರೇವಣ್ಣ (HD Revanna) ಅವರ ಜಾಮೀನು ಅರ್ಜಿ ವಿಚಾರಣೆ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ.

    ಪ್ರಕರಣ ಸಂಬಂಧ ಮಾಜಿ ಸಚಿವರು ಏಳು ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಂದು ಕೋರ್ಟ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಸಲಿದೆ. ಎಸ್ ಪಿಪಿ ಜೈನಾ ಕೊಥಾರಿ ಹಾಗೂ ಆಶೋಕ್ ನಾಯಕ್ ಅವರು ವಿಶೇಷ ತನಿಖಾ ತಂಡ (SIT) ಪರ ವಾದ ಮಂಡಿಸಲಿದ್ದು, ಇತ್ತ ಹಿರಿಯ ವಕೀಲ ಸಿ.ವಿ ನಾಗೇಶ್ ಅವರು ರೇವಣ್ಣ ಪರ ವಾದ ಮಂಡಿಸಲಿದ್ದಾರೆ. ಈಗಾಗಲೇ ಜಾಮೀನಿಗೆ ಎಸ್‍ಐಟಿ ಆಕ್ಷೇಪಣೆ ಸಲ್ಲಿಸಿದೆ.

    ಸಂತ್ರಸ್ತೆ ಕಿಡ್ನಾಪ್ ಸಂಬಂಧ ಹೆಚ್.ಡಿ ರೇವಣ್ಣ ಹಾಗೂ ಸತೀಶ್ ಬಾಬಣ್ಣ ವಿರುದ್ಧ ಕೆ.ಆರ್ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಈ ಪ್ರಕರಣದಲ್ಲಿ ರೇವಣ್ಣ ಮೊದಲನೇ ಆರೋಪಿಯಾಗಿದ್ದಾರೆ. ಕಿಡ್ನಾಪ್ ಪ್ರಕರಣದ ತನಿಖೆ ನಡೆಸುತ್ತಿರೋ ಎಸ್‍ಐಟಿ, ರೇವಣ್ಣರನ್ನ ನಾಲ್ಕು ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದೆ. ವಿಚಾರಣೆ ಬಳಿಕ ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

    ಮಾಜಿ ಸಚಿವರು ಕಳೆದ ಬುಧವಾರ ಪರಪ್ಪನ ಆಗ್ರಹಾರ ಜೈಲು ಸೇರಿದ್ದರು. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ರೇವಣ್ಣಾಗೆ ಜೈಲಿನಿಂದ ಮುಕ್ತಿ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಕಿಡ್ನ್ಯಾಪ್‌ ಕೇಸ್‌ಗೆ ಟ್ವಿಸ್ಟ್; ಭವಾನಿ ಅಕ್ಕ, ರೇವಣ್ಣ, ಪ್ರಜ್ಜು ಅಣ್ಣನಿಂದ ಏನೂ ತೊಂದ್ರೆ ಆಗಿಲ್ಲವೆಂದ ಸಂತ್ರಸ್ತೆ!

  • ಕಿಡ್ನ್ಯಾಪ್‌ ಕೇಸ್‌ಗೆ ಟ್ವಿಸ್ಟ್; ಭವಾನಿ ಅಕ್ಕ, ರೇವಣ್ಣ, ಪ್ರಜ್ಜು ಅಣ್ಣನಿಂದ ಏನೂ ತೊಂದ್ರೆ ಆಗಿಲ್ಲವೆಂದ ಸಂತ್ರಸ್ತೆ!

    ಕಿಡ್ನ್ಯಾಪ್‌ ಕೇಸ್‌ಗೆ ಟ್ವಿಸ್ಟ್; ಭವಾನಿ ಅಕ್ಕ, ರೇವಣ್ಣ, ಪ್ರಜ್ಜು ಅಣ್ಣನಿಂದ ಏನೂ ತೊಂದ್ರೆ ಆಗಿಲ್ಲವೆಂದ ಸಂತ್ರಸ್ತೆ!

    ಬೆಂಗಳೂರು: ಕೆ.ಆರ್ ನಗರದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ವಿರುದ್ಧ ದಾಖಲಾಗಿದ್ದ ಕಿಡ್ನ್ಯಾಪ್‌ ಪ್ರಕರಣದ (Kidnap Case) ಸಂತ್ರಸ್ತೆಯ ಹೇಳಿಕೆ ವಿಡಿಯೋ ವೈರಲ್ ಆಗಿದೆ.

    ನಾಪತ್ತೆಯಾಗಿದ್ದ ಸಂತ್ರಸ್ತೆಯ (Victim Video) ಹೇಳಿಕೆಯ ವಿಡಿಯೋ ಏಕಾಏಕಿ ಬಹಿರಂಗಗೊಂಡಿದೆ. ವಿಡಿಯೋದಲ್ಲಿ ಸಂತ್ರಸ್ತೆ, ನನ್ನನ್ನು ಯಾರೂ ಬಲವಂತವಾಗಿ ಕರೆದೊಯ್ದಿಲ್ಲ. ನನ್ನನ್ನ ಯಾರೂ ಕಿಡ್ನ್ಯಾಪ್‌ ಮಾಡಿಲ್ಲ. ನಾನೇ ಸಂಬಂಧಿಕರ ಮನೆಗೆ ಹೋಗಿದ್ದೆ. ನನ್ನ ಮಗ ಏನೂ ಗೊತ್ತಿಲ್ಲದಂತೆ ದೂರು ಕೊಟ್ಟಿದ್ದಾನೆ ಎಂದಿದ್ದಾರೆ. ಇದನ್ನೂ ಓದಿ: ಪೆನ್‍ಡ್ರೈವ್ ಕೇಸ್: ಜೆಡಿಎಸ್ ಪಕ್ಷವನ್ನು ಸಂಪೂರ್ಣವಾಗಿ ಮುಗಿಸುವ ಪ್ರಯತ್ನ ಮಾಡಿದ್ದಾರೆ – ಎ.ಮಂಜು

    ಸಂತ್ರಸ್ತೆ ವೀಡಿಯೋದಲ್ಲಿ ಹೇಳಿದ್ದೇನು?
    ಊರಲ್ಲೆಲ್ಲಾ ಹಿಂಗೆ ಮಾತಾಡ್ತಿದ್ದಕ್ಕೆ ಬೇಜಾರಾಗಿ ಸಂಬಂಧಿಕರ ಮನೆಯಲ್ಲಿ ನಾಲ್ಕು ದಿವಸ ಕಾಲ ಕಳೆದುಕೊಂಡು ಬರೋಣ ಅಂತಾ ಹೋದೆ. ಆದ್ರೆ ಇವತ್ತು ಟಿವಿ ನೋಡಬೇಕಾದ್ರೆ ಗೊತ್ತಾಯ್ತು. ಈ ತರ ಎಲ್ಲಾ ಮಾಡ್ತಿದ್ದಾರೆ ಅಂತ. ಅದನ್ನ ನೋಡಿ ಯಾಕಪ್ಪ ಹೀಗೆಲ್ಲಾ ಮಾಡಿದ್ರು ಅಂತ ಯೋಚನೆ ಬಂತು. ಆದ್ರೆ ಯಾವ ತೊಂದ್ರೆನೂ ಈಗ ಇಲ್ವಲ್ಲ. ಯಾಕ್ ಹೀಗೆ ಮಾಡ್ತಿದ್ದಾರೆ. ಅಂತ ನಾನೇ ವಿಡಿಯೋ ಮಾಡಿಸಿದೆ.

    ನಮಗೆ ಯಾವುದೇ ರೀತಿ ತೊಂದರೆ ಇಲ್ಲ. ಭವಾನಿ ಅಕ್ಕ, ರೇವಣ್ಣ ಆಗ್ಲಿ, ಪ್ರಜ್ಜು ಅಣ್ಣ ಆಗ್ಲಿ ಅವರಿಂದ ನಮಗೇನೂ ತೊಂದ್ರೆ ಇಲ್ಲ. ನಮ್ಮಿಂದ ಅವರಿಗೂ ತೊಂದ್ರೆ ಇಲ್ಲ. ಬಾಬಣ್ಣ ಇರಲಿ, ಯಾರೂ ಏನೂ ತೊಂದ್ರೆ ಮಾಡಿಲ್ಲ. ಆದ್ರೆ ಚೆನ್ನಾಗಿ ನೋಡ್ಕಂಡೆ ಕಳುಹಿಸಿದ್ದಾರೆ. ಈ ಮೊಬೈಲ್ ವೀಡಿಯೋಗೆ ನಮಗೆ ಸಂಬಂಧವೇ ಇಲ್ಲ. ನನ್ನನ್ನ ಯಾರೂ ಅಪಹರಿಸಿಯೂ ಇಲ್ಲ ಎಂದು ಹೇಳಿದ್ದಾರೆ.

    ನನ್ನ ಮಗನಾದ್ರೂ ಅಷ್ಟೇ ಏನೂ ಭಯ ಪಡಬೇಡ, ಚೆನ್ನಾಗಿ ಇದ್ದಿನಿ. ಬರ್ತಿನಿ ಎರಡು ದಿವಸದೊಳಗೆ. ಏನೂ ತೊಂದ್ರೆ ಆಗೋದಿಲ್ಲ ಚೆನ್ನಾಗಿದ್ದೀನಿ. ಯಾರೇ ಏನೇ ಅಂದರೂ ತಲೆಗೆ ಹಾಕಿಕೊಳ್ಳಬೇಡ ಎಂದು ಪುತ್ರನಿಗೆ ಅಭಯ ನೀಡಿದ್ದಾರೆ. ಇದನ್ನೂ ಓದಿ: ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ ಚಲಾಯಿಸಿ: ಮೋದಿ ಕರೆ

    ನಾವೂ ಕೂಲಿ ಮಾಡಿಕೊಂಡು ಜೀವನ ಸಾಗಿಸೋರು. ನಮ್ಮ ಹೊಟ್ಟೆ ಮೇಲೆ ಹೊಡಿಬೇಡಿ. ನೆಮ್ಮದಿಯಿಂದ ಕೂಲಿ ಮಾಡಿಕೊಂಡು ಇದೀವಿ ಬಿಟ್ಟುಬಿಡಿ. ನಮ್ಮ ಗಂಡನಿಗೆ ಯಾರಿಗೆ, ಏನೇ ಆದ್ರೂ ನೀವೇ ಹೊಣೆ ಎಂದು ಪೊಲೀಸ್‌ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

  • ಮಾಜಿ ಸಚಿವ ಎಚ್.ಡಿ.ರೇವಣ್ಣ ಬೆನ್ನಲ್ಲೇ ಪತ್ನಿ ಭವಾನಿಗೂ ಸಂಕಷ್ಟ!

    ಮಾಜಿ ಸಚಿವ ಎಚ್.ಡಿ.ರೇವಣ್ಣ ಬೆನ್ನಲ್ಲೇ ಪತ್ನಿ ಭವಾನಿಗೂ ಸಂಕಷ್ಟ!

    ಹಾಸನ: ಸಂತ್ರಸ್ತ ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್‌.ಡಿ.ರೇವಣ್ಣ (HD Revanna) ಜೈಲುಪಾಲಾಗಿದ್ದರೆ, ಇತ್ತ ಪತ್ನಿ ಭವಾನಿಗೂ ಸಂಕಷ್ಟ ಎದುರಾಗಿದೆ.

    ಕಿಡ್ನಾಪ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಮೊದಲನೇ ನೋಟೀಸ್ ನೀಡಿದ್ದು, ಇದಕ್ಕೆ ಉತ್ತರ ನೀಡದ ಹಿನ್ನೆಲೆಯಲ್ಲಿ ಎರಡನೇ ನೋಟೀಸ್ ಜಾರಿ ಮಾಡಿದೆ. ಸದ್ಯ ಭವಾನಿ ಬೆಂಗಳೂರಿನ ಬಸವಗುಡಿ ನಿವಾಸದಲ್ಲಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಹೆಚ್‌.ಡಿ.ರೇವಣ್ಣ ಹಾಗೂ ಭವಾನಿ ರೇವಣ್ಣ ಮತ್ತೋರ್ವ ಪುತ್ರ ಎಂಎಲ್‌ಸಿ ಸೂರಜ್‌ ರೇವಣ್ಣ (Suraj Revanna) ಮೌನಕ್ಕೆ ಜಾರಿದ್ದಾರೆ.

    ಇತ್ತ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ಪೆನ್‌ಡ್ರೈವ್ ಅಶ್ಲೀಲ ವೀಡಿಯೋ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ‌. ಕೆ.ಆರ್‌.ನಗರ ಮೂಲದ ಸಂತ್ರಸ್ತೆಯ ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪರಪ್ಪನ ಅಗ್ರಹಾರ ಜೈಲು ಸೇರಿದ್ದರೆ, ಪತ್ನಿ ಭವಾನಿ ರೇವಣ್ಣ ತೀವ್ರ ನೋವಿನಲ್ಲಿದ್ದಾರೆ. ಇದರ ನಡುವೆ ಸಂತ್ರಸ್ತೆಯ ಕಿಡ್ನಾಪ್ ಪ್ರಕರಣದಲ್ಲಿ ವಿಶೇಷ ತನಿಖಾ ತಂಡವು ಭವಾನಿ ರೇವಣ್ಣಗೆ ವಿಚಾರಣೆಗೆ ಹಾಜರಾಗುವಂತೆ ಎರಡನೇ ನೋಟಿಸ್ ನೀಡಿದ್ದು ಭವಾನಿ ರೇವಣ್ಣ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ‌. ಕಳೆದ ಮೂರು ದಿನಗಳಿಂದ ಬೆಂಗಳೂರಿನ ಬಸವನಗುಡಿ ನಿವಾಸದಲ್ಲಿ ಭವಾನಿ ರೇವಣ್ಣ ಬೀಡು ಬಿಟ್ಟಿದ್ದಾರೆ. ಸದಾ ಜೊತೆಗಿರುತ್ತಿದ್ದ ಪತಿ ಜೈಲಿನಲ್ಲಿದ್ದರೆ, ಪುತ್ರ ಪ್ರಜ್ವಲ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮತ್ತೋರ್ವ ಪುತ್ರ ಮೌನಕ್ಕೆ ಶರಣಾಗಿದ್ದಾರೆ. ಇದನ್ನೂ ಓದಿ: ಪೆನ್‌ಡ್ರೈವ್‌ ಕೇಸ್; ಕಾರ್ತಿಕ್, ದೇವರಾಜೇಗೌಡಗೆ ಎಸ್‌ಐಟಿ ನೋಟಿಸ್

    ತಂದೆ-ತಾಯಿ ಹಾಗೂ ಸಹೋದರನಿಗೆ ಯಾರು ಊಹಿಸಲಾಗದ ಸಮಸ್ಯೆ ಎದುರಾಗಿದ್ದರೂ ಸೂರಜ್‌ ರೇವಣ್ಣ ಮಾತ್ರ ತೋಟದ ಮನೆ ಸೇರಿದ್ದಾರೆ. ತಮ್ಮ ಕುಟುಂಬಕ್ಕೆ ಎದುರಾಗಿರುವ ಸಂಕಷ್ಟದಿಂದ ಕಂಗಾಲಾಗಿರುವ ಸೂರಜ್‌ ರೇವಣ್ಣ ಮುಂದೇನು ಎಂಬ ಯೋಚನೆಯಲ್ಲಿದ್ದಾರೆ. ಇನ್ನೊಂದೆಡೆ ಜೆಡಿಎಸ್ ಭದ್ರಕೋಟೆಯಾಗಿರುವ ಹಾಸನ ಜಿಲ್ಲೆಯ ಜೆಡಿಎಸ್‌ಗೆ ಬರಸಿಡಿಲು ಬಡಿದಂತಾಗಿದ್ದು, ತಮ್ಮ ನೆಚ್ಚಿನ ನಾಯಕರು ಜೈಲು ಸೇರಿರುವುದು ಎಲ್ಲರನ್ನು ಕಂಗೆಡಿಸಿದೆ. ಸದಾ ಚಟುವಟಿಕೆಯಿಂದ ಹೆಚ್.ಡಿ.ರೇವಣ್ಣ ಅವರನ್ನು ಕಂಡರೆ ಜಿಲ್ಲೆಯ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಇನ್ನಿಲ್ಲದ ಪ್ರೀತಿ ತೋರುತ್ತಿದ್ದರು. ಇದೀಗ ನಾಯಕನ ಆಸರೆ ಇಲ್ಲದೆ ದಿಕ್ಕಾಪಾಲಾಗಿದ್ದು ಆದಷ್ಟು ಬೇಗ ಜೈಲಿನಿಂದ ಬಿಡುಗಡೆ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

    ಒಟ್ಟಿನಲ್ಲಿ ಸಂಸತ್ರ ಮಹಿಳೆಯ ಕಿಡ್ನಾಪ್ ಪ್ರಕರಣ ಮಾಜಿಸಚಿವ ಹೆಚ್.ಡಿ.ರೇವಣ್ಣ ಜೊತೆಗೆ ಪತ್ನಿ ಭವಾನಿ ರೇವಣ್ಣರನ್ನು ಇಕ್ಕಟ್ಟಿಗೆ ಸಿಲುಕಿಸಿದೆ‌‌. ಈ ಎಲ್ಲಾ ಬೆಳವಣಿಗೆಗಳಿಂದ ಜಿಲ್ಲೆಯ ಜೆಡಿಎಸ್ ಪಾಳಯದಲ್ಲಿ ನೀರವ ಮೌನ ಆವರಿಸಿದ್ದು ಭವಾನಿ ರೇವಣ್ಣ ಅವರು ಬಂಧನವಾಗುತ್ತಾರಾ ಎಂಬ ಆತಂಕದಲ್ಲಿದ್ದಾರೆ.

  • ಇದು ರಾಜಕೀಯ ಪ್ರೇರಿತ ಕೇಸ್‌, ಪ್ರಾದೇಶಿಕ ಪಕ್ಷದ ಮೇಲೆ ದಾಳಿ – ಕೋರ್ಟ್‌ನಲ್ಲಿ ಇಂದು ವಾದ, ಪ್ರತಿವಾದ ಹೇಗಿತ್ತು?

    ಇದು ರಾಜಕೀಯ ಪ್ರೇರಿತ ಕೇಸ್‌, ಪ್ರಾದೇಶಿಕ ಪಕ್ಷದ ಮೇಲೆ ದಾಳಿ – ಕೋರ್ಟ್‌ನಲ್ಲಿ ಇಂದು ವಾದ, ಪ್ರತಿವಾದ ಹೇಗಿತ್ತು?

    – ರೇವಣ್ಣ ಪರ ವಕೀಲ ಸಿವಿ ನಾಗೇಶ್‌ ವಾದ
    – ಮತ್ತಷ್ಟು ಸಮಯಾವಕಾಶ ಕೇಳಿದ ಎಸ್‌ಪಿಪಿ

    ಬೆಂಗಳೂರು: ಸಂತ್ರಸ್ತೆಯನ್ನು ಕಿಡ್ನಾಪ್ (Kidnap) ಮಾಡಿಸಿದ ಆರೋಪ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ (Judicial Custody) ಮಾಜಿ ಮಂತ್ರಿ ಹೆಚ್‌ಡಿ ರೇವಣ್ಣಗೆ (HD Revanna) ಇಂದು ಕೂಡ ಜಾಮೀನು (Bail) ಸಿಗಲಿಲ್ಲ. ಸುದೀರ್ಘ ವಿಚಾರಣೆ ಬಳಿಕ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸೋಮವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ.

    ಇಂದು ಬೆಳಗ್ಗೆ ಜಾಮೀನು (Bail) ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿ (SIT) ಪರ ವಕೀಲರು ಮತ್ತಷ್ಟು ಸಮಯಾವಕಾಶ ಕೋರಿದರು. ಇದಕ್ಕೆ ಜಡ್ಜ್ ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿ ದಿನ ಹೊಸ ವಿಶೇಷ ಸಾರ್ವಜನಿಕ ಅಭಿಯೋಜಕರು (SPP) ಬರುತ್ತಾರೆ. ಹಾಗೆಂದ ಮಾತ್ರಕ್ಕೆ ಸಮಯ ನೀಡಲು ಆಗುವುದಿಲ್ಲ. ನಾನು ವಾದ-ಪ್ರತಿವಾದ ಆಲಿಸಲು ರೆಡಿ ಇದ್ದೇನೆ. ನೀವು ಮಧ್ಯಾಹ್ನವೇ ವಾದ ಮಂಡಿಸಿ ಎಂದ ನ್ಯಾಯಾಧೀಶರು ಕೆಲ ಹೊತ್ತು ವಿಚಾರಣೆ ಮುಂದೂಡಿದರು. ಇದನ್ನೂ ಓದಿ: ಕರ್ನಾಟಕ ಬಿಜೆಪಿ ಐಟಿ ಸೆಲ್‌ ಸಂಚಾಲಕ ಪ್ರಶಾಂತ್‌ ಮಾಕನೂರು ಅರೆಸ್ಟ್‌

     

    ಮಧ್ಯಾಹ್ನವೂ ಎಸ್‌ಐಟಿ ಪರ ವಕೀಲರು ಇದೇ ವಿಚಾರ ತಿಳಿಸಿದರೂ ನ್ಯಾಯಾಧೀಶರು ವಾದ-ಪ್ರತಿವಾದಕ್ಕೆ ಅವಕಾಶ ನೀಡಿದರು. ಈ ಸಂದರ್ಭದಲ್ಲಿ ರೇವಣ್ಣ ಪರ ವಕೀಲ ಸಿವಿ ನಾಗೇಶ್, ಕಿಡ್ನಾಪ್ ಪ್ರಕರಣದಲ್ಲಿ ರೇವಣ್ಣ ಪಾತ್ರ ಸಾಬೀತಾಗಿಲ್ಲ. ಪ್ರಕರಣವನ್ನು ಅಗತ್ಯಕ್ಕಿಂತ ಹೆಚ್ಚು ವೈಭವೀಕರಿಸಲಾಗಿದೆ. ಯಾರೋ ಬಂದು ಯಾರದ್ದೋ ಹೆಸರು ಹೇಳಿದ ಮಾತ್ರಕ್ಕೆ ಕಕ್ಷಿದಾರರು ಆರೋಪಿ ಆಗುವುದಿಲ್ಲ. ಇದು ರಾಜಕೀಯ ಪ್ರೇರಿತ ಪ್ರಕರಣವಾಗಿದೆ. ಪ್ರಾದೇಶಿಕ ಪಕ್ಷದ ಮೇಲೆ ದಾಳಿ ನಡೆಸಲಾಗ್ತಿದೆ ಎಂದು ವಾದ ಮಂಡಿಸಿದರು. ಇದನ್ನೂ ಓದಿ: ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣಕ್ಕೆ ಟ್ವಿಸ್ಟ್- ಸಂತ್ರಸ್ತೆಗೆ ಮೂವರಿಂದ ಬೆದರಿಕೆ!

    ಸಂತ್ರಸ್ತೆ ಸಿಕ್ಕಿದ್ದಾರೆ ಎನ್ನುತ್ತಿದ್ದಾರೆ. ಆದರೆ ಸಂತ್ರಸ್ತೆಯ ವಿವರ ನೀಡುತ್ತಿಲ್ಲ. ಸಂತ್ರಸ್ತೆ ಪತ್ತೆಯಾದ ಜಾಗದಲ್ಲಿ ಸ್ಥಳ ಮಹಜರು ನಡೆಸಿಲ್ಲ ಎಂದು ಎಸ್‌ಐಟಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು. ಇದೊಂದು ಸಾಮಾನ್ಯ ಪ್ರಕರಣ. ವಿಚಾರಣೆಗೂ ರೇವಣ್ಣ ಸಹಕರಿಸಿದ್ದಾರೆ. ಜಾಮೀನು ಮಂಜೂರು ಮಾಡಿ ಎಂದು ಮನವಿ ಮಾಡಿದರು.

     

    ಇದಕ್ಕೆ ಎಸ್‌ಐಟಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ಅಪಹರಣ ಪ್ರಕರಣ ಆರೋಪಿಯ ಮೇಲೆ ಈಗಾಗಲೇ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಇದು ದೊಡ್ಡ ಅಪರಾಧ. ಅವರು ಹೊರಗೆ ಬಂದರೆ ಸಾಕ್ಷಿ ನಾಶ ಮಾಡುವ ಸಂಭವ ಇದೆ. ತಮಗೆ ವಾದ ಮುಂದುವರೆಸಲು ಸೋಮವಾರದವರೆಗೂ ಅವಕಾಶ ಬೇಕು ಎಂದು ಕೋರಿದರು. ಇದು ಕಾಲಹರಣ ಪ್ರಯತ್ನ ಎಂದು ರೇವಣ್ಣ ಪರ ವಕೀಲರು ದೂರಿದರು. ಕೊನೆಗೆ ವಿಚಾರಣೆಯನ್ನು ನ್ಯಾಯಾಧೀಶರು ಸೋಮವಾರಕ್ಕೆ ಮುಂದೂಡಿದರು.

     

  • ಸೋಮವಾರದವರೆಗೂ ಹೆಚ್‌ಡಿ ರೇವಣ್ಣಗೆ ಜೈಲು ಫಿಕ್ಸ್‌

    ಸೋಮವಾರದವರೆಗೂ ಹೆಚ್‌ಡಿ ರೇವಣ್ಣಗೆ ಜೈಲು ಫಿಕ್ಸ್‌

    ಬೆಂಗಳೂರು: ಸಂತ್ರಸ್ತೆಯ ಅಪಹರಣ (Kidnap Case) ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಸದ್ಯ ನಾಯಾಂಗ ಬಂಧನದಲ್ಲಿರುವ (Judicial Custody) ಹೆಚ್‌ಡಿ ರೇವಣ್ಣ (HD Revanna) ಸೋಮವಾರದವರೆಗೆ ಜೈಲಿನಲ್ಲೇ ಕಾಲ ಕಳೆಯಬೇಕಿದೆ.

    ರೇವಣ್ಣ ಸಲ್ಲಿಸಿದ್ದ ಜಾಮೀನು (Bail) ಅರ್ಜಿಯ ವಿಚಾರಣೆ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು.

    ವಿಶೇಷ ತನಿಖಾ ತಂಡ (SIT) ಮತ್ತು ರೇವಣ್ಣ ಕಡೆಯ ವಾದವನ್ನು ಆಲಿಸಿದ ಕೋರ್ಟ್‌ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು. ಹೀಗಾಗಿ ಮೇ 13ರ ವರೆಗೂ ಪರಪ್ಪನ ಅಗ್ರಹಾರದಲ್ಲೇ ರೇವಣ್ಣ ಇರಬೇಕಾಗುತ್ತದೆ.

    ಗುರುವಾರ ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯ ರೇವಣ್ಣಗೆ 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತ್ತು.

  • ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇವಣ್ಣ ಫಸ್ಟ್ ಡೇ

    ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇವಣ್ಣ ಫಸ್ಟ್ ಡೇ

    ಬೆಂಗಳೂರು: ಕಿಡ್ನ್ಯಾಪ್ ಕೇಸ್‌ನಲ್ಲಿ (Kidnap Case) ಪರಪ್ಪನ ಅಗ್ರಹಾರ (Parappana Agrahara) ಜೈಲು ಸೇರಿರುವ ಮಾಜಿ ಸಚಿವ ಹೆಚ್‌ಡಿ ರೇವಣ್ಣ (HD Revanna) ಜೈಲಿನಲ್ಲಿ ಮೊದಲ ದಿನ ಕಳೆದಿದ್ದಾರೆ.

    ಬುಧವಾರ ಸಂಜೆ 04:30ರ ಸುಮಾರಿಗೆ ಮುಖ್ಯದ್ವಾರದ ಮೂಲಕ ರೇವಣ್ಣ ಜೈಲಿನ ಒಳಗೆ ಪ್ರವೇಶಿಸಿದ್ದರು. ಜೈಲಿನ ಒಳಗೆ ಹೋದ ರೇವಣ್ಣಗೆ ಮೊದಲು ಪ್ರಾಥಮಿಕ ಆರೋಗ್ಯ ತಪಾಸಣೆ ಮಾಡಲಾಯಿತು. ವಿಚಾರಣಾಧೀನ ಕೈದಿ ನಂಬರ್ 4567 ನಂಬರ್ ನೀಡಿ ವಿಐಪಿ ಸೆಲ್‌ನಲ್ಲಿ ಇರಿಸಲಾಯಿತು. ಇದನ್ನೂ ಓದಿ: ಇಂದು ಜೆಡಿಎಸ್ ಕೋರ್ ಕಮಿಟಿ ಸಭೆ – ಪಕ್ಷದಿಂದ ಪ್ರಜ್ವಲ್ ಉಚ್ಚಾಟನೆ ಬಗ್ಗೆ ಚರ್ಚೆ ಸಾಧ್ಯತೆ

    ರಾತ್ರಿ ಊಟಕ್ಕೆ ಮುದ್ದೆ, ಚಪಾತಿ, ಅನ್ನ ಮತ್ತು ಸಾಂಬರ್ ನೀಡಲಾಯಿತು. ಆದರೆ ರೇವಣ್ಣ ಮುದ್ದೆ ಮತ್ತು ಅನ್ನ ಸೇವಿಸಿದ್ದಾರೆ ಎನ್ನಲಾಗಿದೆ. ವಿಐಪಿ ಸೆಲ್‌ನಲ್ಲಿ ಓರ್ವ ಸಿಬ್ಬಂದಿ ಭದ್ರತೆ ಜೊತೆಗೆ ಇರಿಸಲಾಗಿದೆ. ಜೈಲು ಮೊದಲ ದಿನವಾಗಿದ್ದರಿಂದ ಬಹಳ ಸೈಲೆಂಟ್ ಆಗಿದ್ದ ರೇವಣ್ಣ ತಡರಾತ್ರಿವರೆಗೂ ಕೂತಿದ್ದು ನಂತರ ನಿದ್ದೆಗೆ ಜಾರಿದ್ದಾರೆ. ಬೆಳಗಿನ ಜಾವ ಬೇಗನೆ ಎದ್ದು ಎಂದಿನಂತೆ ಜೈಲಿನಲ್ಲೇ ವಾಕ್ ಮಾಡಿ, ಜೈಲಿನಲ್ಲೇ ಇದ್ದ ಪೇಪರ್ ನೋಡಿ, ಪುಳಿಯೊಗರೆ ಸೇವಿಸಿದ್ದಾರೆ. ಇದನ್ನೂ ಓದಿ: ಅನ್ಯಕೋಮಿನ ಯುವತಿಯೊಂದಿಗೆ ಯುವಕ ಲವ್ ಮ್ಯಾರೇಜ್ – ಹಿಂದೂ ಕಾರ್ಯಕರ್ತರು, ಪೊಲೀಸರ ನಡುವೆ ಘರ್ಷಣೆ!

  • ಕೈದಿ ನಂಬರ್ 4567 – ಕೋರ್ಟ್‌ನಲ್ಲಿ ರೇವಣ್ಣ ಕಣ್ಣೀರು!

    ಕೈದಿ ನಂಬರ್ 4567 – ಕೋರ್ಟ್‌ನಲ್ಲಿ ರೇವಣ್ಣ ಕಣ್ಣೀರು!

    ಬೆಂಗಳೂರು: ಅತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ (Kidnap Case) ಬಂಧಿಸಲಾಗಿರುವ ಹೆಚ್.ಡಿ ರೇವಣ್ಣ (HD Revanna) ಜೈಲುಪಾಲಾಗಿದ್ದಾರೆ.

    4 ದಿನಗಳ ವಿಶೇಷ ತನಿಖಾ ದಳ (SIT) ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಾಳೆ ನಡೆಯಲಿದೆ. ಹಾಗಾಗಿ ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ (Judicial Custody) ಜಡ್ಜ್ ಆದೇಶಿಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣ- ಡಿಕೆಶಿಗೆ ದೇವರಾಜೇಗೌಡ ಓಪನ್‌ ಚಾಲೆಂಜ್

     

    ಇಂದಿನಿಂದ 7 ದಿನಗಳವರೆಗೆ ರೇವಣ್ಣ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ಇರಲಿದ್ದಾರೆ. ಜೀರೋ ಟ್ರಾಫಿಕ್‌ನಲ್ಲಿ ಎಸ್‌ಐಟಿ ಮಧ್ಯಾಹ್ನ 4:15ರ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲಿಗೆ ರೇವಣ್ಣರನ್ನು ಕರೆದೊಯ್ಯಿತು.

    ಜೈಲು ವೈದ್ಯರು ಬಿಪಿ, ಶುಗರ್ ಸೇರಿದಂತೆ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಕ್ವಾರಂಟೈನ್ ಸೆಲ್‌ಗೆ ರೇವಣ್ಣರನ್ನು ಶಿಫ್ಟ್ ಮಾಡಲಾಗಿದೆ. ರೇವಣ್ಣಗೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ವಿಚಾರಣಾ ಕೈದಿ ನಂಬರ್ 4567 ನೀಡಿದ್ದಾರೆ. ಕೋರ್ಟ್ ಜೈಲಿನ ಆದೇಶ ನೀಡುತ್ತಿದ್ದಂತೆಯೇ ರೇವಣ್ಣ ಕಣ್ಣೀರಿಟ್ಟಿದ್ದಾರೆ ಅಂತ ತಿಳಿದು ಬಂದಿದೆ.

    ಕೋರ್ಟ್‌ಗೆ ಹಾಜರುಪಡಿಸುವ ಮೊದಲು ಹೊಟ್ಟೆ ನೋವಿನಿಂದ ಬಳಲಿದ್ದ ರೇವಣ್ಣಗೆ ವಿಕ್ಟೋರಿಯಾದದಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಹರ್ನಿಯಾ ಸಮಸ್ಯೆ ಎನ್ನಲಾಗಿದ್ದು, ಎಂಡೋಸ್ಕೋಪಿಯಲ್ಲಿ ಎಲ್ಲವೂ ನಾರ್ಮಲ್ ಎಂಬ ವರದಿ ಬಂದಿದೆ. ಇದನ್ನೂ ಓದಿ: 7 ದಿನಗಳ ಒಳಗಡೆ ವಿಚಾರಣೆಗೆ ಹಾಜರಾಗಿ – ನಡ್ಡಾ, ವಿಜಯೇಂದ್ರಗೆ ಬೆಂಗಳೂರು ಪೊಲೀಸರಿಂದ ಸಮನ್ಸ್‌

     

  • ಮಾಜಿ ಸಚಿವ ರೇವಣ್ಣ ಜೈಲುಪಾಲು

    ಮಾಜಿ ಸಚಿವ ರೇವಣ್ಣ ಜೈಲುಪಾಲು

    ಬೆಂಗಳೂರು: ಮಾಜಿ ಸಚಿವ ಹೆಚ್‌ಡಿ ರೇವಣ್ಣ (HD Revanna) ಜೈಲುಪಾಲಾಗಿದ್ದಾರೆ.

    ಕೆಆರ್‌ ನಗರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ರೇವಣ್ಣ ಅವರನ್ನು 7 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್‌ ಆದೇಶ ಪ್ರಕಟಿಸಿದೆ.

    ರೇವಣ್ಣ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ಇಂದು 17ನೇ ಎಸಿಎಂಎಂ ಕೋರ್ಟ್‌ನಲ್ಲಿ ನಡೆಯಿತು. ಎಸ್‌ಐಟಿ ಪರ ವಾದ ಜಗದೀಶ್‌ ವಾದ ಮಂಡಿಸಿ, ಎಸ್‌ಐಟಿ ಕಸ್ಟಡಿಯ ವೇಳೆ ರೇವಣ್ಣ ಉತ್ತರ ನೀಡಿಲ್ಲ. ತನಿಖೆಗೆ ಸಹಕಾರವನ್ನು ನೀಡಿಲ್ಲ. ಪ್ರಕರಣದ ತನಿಖೆ ಇನ್ನೂ ಮುಂದುವರೆದಿದೆ. ಪ್ರಕರಣದ ಪ್ರಮುಖ ಆರೋಪಿ ನಮಗೆ ಇನ್ನೂ ಸಿಕ್ಕಿಲ್ಲ.  ತನಿಖಾಧಿಕಾರಿ ಕೇಳಿದ ಪ್ರಶ್ನೆಗಳಿಗೆ ರೇವಣ್ಣ ಸರಿಯಾದ ಉತ್ತರ ನೀಡಿಲ್ಲ. ಬರೀ ನಕಾರಾತ್ಮಕ ಉತ್ತರ ನೀಡಿದ್ದಾರೆ . ದೂರುದಾರರ ದೂರಿನಲ್ಲಿ ಪ್ರಾಣ ಬೆದರಿಕೆ ಆರೋಪವಿದೆ. ಕೋರ್ಟ್‌ನಲ್ಲಿ ಸಾಕ್ಷಿ ಇಲ್ಲ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಹೀಗಾಗಿ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.

    ಈ ವೇಳೆ ಕೋರ್ಟ್‌ಗೆ ಹಾಜರಾಗಿದ್ದ ರೇವಣ್ಣ,  ಮೂರು ದಿನದಿಂದ ವಿಚಾರಣೆ ನಡೆಸುತ್ತಿದ್ದಾರೆ. ಅನಾರೋಗ್ಯ ಇದ್ದರೂ ವಿಚಾರಣೆಗೆ ಸಹಕರಿಸಿದ್ದೇನೆ. ನನಗೆ ಎಷ್ಟು ಸಾಧ್ಯವೋ ಅಷ್ಟು ಸಹಕಾರ ನೀಡಿದ್ದೇನೆ. ಮೂರು ರಾತ್ರಿ ನಿದ್ರೆ ಮಾಡಲು ಬಿಟ್ಟಿಲ್ಲ. ನನ್ನ ತಂದೆಯ ಮನೆಯಲ್ಲಿ ಇದ್ದೆ. ನನಗೆ ಈ ಕೇಸ್ ಬಗ್ಗೆ ಏನೂ ಗೊತ್ತಿಲ್ಲ. ನನಗೆ ಚಿಕಿತ್ಸೆಯ ಅವಶ್ಯಕತೆಯಿದೆ ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.

    ರೇವಣ್ಣ ಮನವಿಗೆ ಸ್ಪಂದಿಸದ ಕೋರ್ಟ್‌ ಮೇ 14 ರವರೆಗೆ ನ್ಯಾಯಾಂಗ ಬಂಧನ ವಿಧಿಸಿತು. ಈ ಆದೇಶದ ಅನ್ವಯ 7 ದಿನ ರೇವಣ್ಣ ಪರಪ್ಪನ ಅಗ್ರಹಾರದಲ್ಲಿ ಇರಬೇಕಾಗುತ್ತದೆ.

  • ಹೆಚ್.ಡಿ ರೇವಣ್ಣ ಆಸ್ಪತ್ರೆಗೆ ದಾಖಲು- ವಿಕ್ಟೋರಿಯಾ ಸುತ್ತ ಬಿಗಿ ಭದ್ರತೆ

    ಹೆಚ್.ಡಿ ರೇವಣ್ಣ ಆಸ್ಪತ್ರೆಗೆ ದಾಖಲು- ವಿಕ್ಟೋರಿಯಾ ಸುತ್ತ ಬಿಗಿ ಭದ್ರತೆ

    ಬೆಂಗಳೂರು: ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಸರಿಯಾಗಿ ಊಟ ಮಾಡದ ಕಾರಣ ಅಸಿಡಿಟಿ ಸಮಸ್ಯೆ ಕಾಣಿಸಿಕೊಂಡಿದೆ. ಅಲ್ಲದೇ ಚಿಕ್ಕದಾಗಿ ಹರ್ನಿಯಾ ಸಮಸ್ಯೆ ಇರೋದು ಪತ್ತೆಯಾಗಿದೆ. ಹೀಗಾಗಿ ವಿಕ್ಟೋರಿಯಾ ಗ್ಯಾಸ್ಟ್ರೋಎಂಟ್ರಾಲಜಿ ವೈದ್ಯರಿಂದ ತಪಾಸಣೆ ಮಾಡಿಸಲು ಹಾಗೂ ಕಾರ್ಡಿಯಾಲಜಿಸ್ಟರ್ ಓಪಿನಿಯನ್ ತೆಗೆದುಕೊಳ್ಳಲು ಬೌರಿಂಗ್ ಆಸ್ಪತ್ರೆಯ ವೈದ್ಯರು ಸೂಚನೆ ನೀಡಿದ್ದಾರೆ.

    ವಿಕ್ಟೋರಿಯಾ ಆವರಣದ ಪಿಎಂಎಸ್ ವೈ ಆಸ್ಪತ್ರೆಯಲ್ಲಿ ಕಾರ್ಡಿಯಾಲಾಜಿಸ್ಟ್ ಮತ್ತು ಗ್ಯಾಸ್ಟ್ರೋ ಎಂಟ್ರೋಲಜಿಗೆ ನುರಿತ ತಜ್ಞರು ಇದ್ದು ವೈದ್ಯಕೀಯ ತಪಾಸಣೆ ನಡೆಸಲಿದ್ದಾರೆ. ಇದನ್ನೂ ಓದಿ: ಪೊಲೀಸರನ್ನೇ ಮುಂದಿಟ್ಟುಕೊಂಡು 25,000 ಪೆನ್‌ಡ್ರೈವ್‌ ಹಂಚಿದ್ದಾರೆ: ಹೆಚ್‌ಡಿಕೆ ಬಾಂಬ್‌

    ಕಳೆದ ಬಾರಿ ರೇವಣ್ಣ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರಿಂದ ಈ ಬಾರಿ ಖಾಕಿ ಕಣ್ಗಾವಲು ಇಟ್ಟಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬ್ಯಾರಿಕೇಡ್ ಗಳನ್ನ ಹಾಕಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.

  • ಸಂತ್ರಸ್ತೆಯನ್ನು ತೋಟದ ಮನೆಯಿಂದ ರಕ್ಷಿಸಿದ್ದು ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಾರಾ ಮಹೇಶ್

    ಸಂತ್ರಸ್ತೆಯನ್ನು ತೋಟದ ಮನೆಯಿಂದ ರಕ್ಷಿಸಿದ್ದು ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಾರಾ ಮಹೇಶ್

    ಮೈಸೂರು: ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D Revanna) ಕಿಡ್ನಾಪ್ ಮಾಡಿದ್ದಾರೆ ಎನ್ನಲಾದ ಮಹಿಳೆಯ ತೋಟದ ಮನೆಯಲ್ಲಿ ಸಿಕ್ಕಿಲ್ಲ ಎಂದು ಶಾಸಕ ಸಾರಾ ಮಹೇಶ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

    ಇಂದು ಮೈಸೂರಿನಲ್ಲಿ ಮಾಜಿ ಸಚಿವ ಜಿ.ಟಿ. ದೇವೇಗೌಡ (G.T Devegowda), ಶಾಸಕ ಸಾರಾ ಮಹೇಶ್ (Sara Mahesh) ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕರು, ರೇವಣ್ಣ ವಿರುದ್ಧ ಕೆ.ಆರ್. ನಗರದಲ್ಲಿ ಕೇಸ್ ದಾಖಲು ಆಗವುದಕ್ಕೆ ಮುಂಚೆಯೇ ಮಾಧ್ಯಮಗಳಿಗೆ ಹೇಗೆ ಗೊತ್ತಾಯ್ತು? ತೋಟದಲ್ಲಿ ಆ ಮಹಿಳೆ ಇದ್ದರು ಎಂಬುದರ ಒಂದು ವೀಡಿಯೋ ಯಾಕೆ ಬಂದಿಲ್ಲ?. ಅಷ್ಟಕ್ಕೂ ಸಂತ್ರಸ್ತ ಮಹಿಳೆ ತೋಟದಲ್ಲಿ ಸಿಕ್ಕಿಲ್ಲ. ಹುಣಸೂರಿನ ಕರಿಗೌಡ ರಸ್ತೆಯಲ್ಲಿರುವ ಸಂತ್ರಸ್ತೆಯ ಸಂಬಂಧಿ ಮನೆಯಿಂದ ಆಕೆಯನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

    ರಾಜಗೋಪಾಲ್ ತೋಟದಿಂದ ಸಂತ್ರಸ್ತ ಮಹಿಳೆಯನ್ನು ರಕ್ಷಿಸಿದ್ದು ಸಾಬೀತು ಮಾಡಿದ್ರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ಈ ಕ್ಷಣವೇ ಜೆಡಿಎಸ್ ಗೂ ರಾಜೀನಾಮೆ ಕೊಡುತ್ತೇನೆ ಎಂದು ಸವಾಲೆಸೆದರು. ಇದನ್ನೂ ಓದಿ: ವೀಡಿಯೋದಲ್ಲಿ ನಮ್ಮ ಕುಟುಂದವರೇ ಇದ್ದರೂ ರಕ್ಷಣೆ ಮಾಡಲ್ಲ: ಹೆಚ್‍ಡಿಕೆ

    ಪೆನ್ ಡ್ರೈವ್ ಹಂಚಿದವರನ್ನು ಯಾಕೆ ಇನ್ನೂ ಬಂಧಿಸಿಲ್ಲ. ಎಸ್‍ಐಟಿಯಲ್ಲಿ ಇರುವ ಕೆಲ ಅಧಿಕಾರಿಗಳು ಕಾಂಗ್ರೆಸ್‍ನ ಕೈ ಗೊಂಬೆ ರೀತಿ ವರ್ತಿಸುತ್ತಿದ್ದಾರೆ. ಜೆಡಿಎಸ್ ಮುಖಂಡರನ್ನು ಹತ್ತಿಕುವ ಕೆಲಸ ಈ ಪ್ರಕರಣದ ಮೂಲಕ ಆಗ್ತಿದೆ. ಸಂತ್ರಸ್ತ ಮಹಿಳೆಯನ್ನು ಇನ್ನೂ ಯಾಕೆ ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ?. ಆ ಸಂತ್ರಸ್ತ ಮಹಿಳೆಯನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದಿರಾ?. ಎಸ್‍ಐಟಿ ಅಧಿಕಾರಿಗಳನ್ನು ಇಟ್ಟುಕೊಂಡು ನಮ್ಮ ನಾಯಕರನ್ನು ಹೆದರಿಸುವ ಕೆಲಸ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

    ಡಿಕೆಶಿ ಅಪ್ಪಣೆ ಪಡೆದು ಕಾರ್ತಿಕ್ ಪೆನ್‍ಡ್ರೈವ್ ಹಂಚಿಕೆ: ಇದೇ ಮಾತನಾಡಿದ ಜಿಟಿಡಿ, ಡ್ರೈವರ್ ಕಾರ್ತಿಕ್ ನನ್ನು ಹೊರ ದೇಶಕ್ಕೆ ಕಳಿಸಿದ್ದು ಕಾಂಗ್ರೆಸಿಗರು. ಡಿ.ಕೆ ಶಿವಕುಮಾರ್ ಅಪ್ಪಣೆ ಪಡೆದು ಕಾರ್ತಿಕ್ ಪೆನ್ ಡ್ರೈವ್ ಹಂಚಿದ್ದಾನೆ. ಯಾರನ್ನು ಬಂಧಿಸಬೇಕು, ಯಾರನ್ನು ಎ.1 ಮಾಡಬೇಕು ಯಾರನ್ನು ಎ. 2 ಮಾಡಬೇಕು ಎಂಬ ನಿರ್ದೇಶನ ಸಿಎಂ ಹಾಗೂ ಡಿಸಿಎಂ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಹಾಲಿ ನ್ಯಾಯಾಧೀಶರ ಮೂಲಕ ನ್ಯಾಯಾಂಗ ತನಿಖೆ ಆಗಬೇಕು. ಡಿಸಿಎಂ ಈ ವಿಚಾರದಲ್ಲಿ ಸಂಪೂರ್ಣ ನೇತೃತ್ವ ವಹಿಸಿದ್ದಾರೆ. ಅವರು ಇದರಲ್ಲಿ ತಪ್ಪಿಸ್ಥರ ರೀತಿ ಕಾಣುತ್ತಿದ್ದಾರೆ. ಡಿಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವೇ ಸರಕಾರ ಅವರನ್ನು ವಜಾ ಮಾಡಲಿ ಎಂದು ಆಗ್ರಹಿಸಿದರು.