Tag: HD Revanna

  • ಫೋನ್ ಟ್ಯಾಪ್‌ನಂತಹ ನೀಚ ಕೆಲಸ ಮಾಡಲ್ಲ: ಸಿದ್ದರಾಮಯ್ಯ ತಿರುಗೇಟು

    ಫೋನ್ ಟ್ಯಾಪ್‌ನಂತಹ ನೀಚ ಕೆಲಸ ಮಾಡಲ್ಲ: ಸಿದ್ದರಾಮಯ್ಯ ತಿರುಗೇಟು

    ಬೆಂಗಳೂರು: ಫೋನ್ ಟ್ಯಾಪ್‌ನಂತಹ (Phone Tapping) ನೀಚ ಕೆಲಸ ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಅವರಿಗೆ ತಿರುಗೇಟು ನೀಡಿದ್ದಾರೆ.

    ಸರ್ಕಾರ ನಮ್ಮ ಕುಟುಂಬವರ ಫೋನ್ ಟ್ಯಾಪ್ ಮಾಡ್ತಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ರಾಜಕೀಯ ಜೀವನದಲ್ಲಿ ಯಾವತ್ತು ಫೋನ್ ಟ್ಯಾಪ್ ಮಾಡೋ ನೀಚ ಕೆಲಸ ಮಾಡಿಲ್ಲ.ಈಗಲೂ ಮಾಡಿಲ್ಲ, ಹಿಂದೆ ಸಿಎಂ ಆಗಿದ್ದಾಗಲೂ ಮಾಡಿಲ್ಲ.ಇಲ್ಲಿವರೆಗೂ ನಾನು ಅಂತಹ ಕೆಲಸ ಮಾಡಿಲ್ಲ ಮುಂದೆ ಮಾಡುವುದಿಲ್ಲ ಎಂದರು.  ಇದನ್ನೂ ಓದಿ: ಗೃಹ ಸಚಿವಾಲಯದ ಕಚೇರಿಗೆ ಬಾಂಬ್ ಬೆದರಿಕೆ

    ಪ್ರಜ್ವಲ್ ರೇವಣ್ಣ ಪ್ರಕರಣವನ್ನು (Prajwal Revanna Case) ಬೇರೆ ಕಡೆ ಕಡೆ ತಿರುಗಿಸಲು ಹೀಗೆಲ್ಲ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

  • ಜಾಮೀನು ಸಿಕ್ಕರೂ ರೇವಣ್ಣಗೆ ತಪ್ಪಿಲ್ಲ ಸಂಕಷ್ಟ- ಹೈಕೋರ್ಟ್ ಮೆಟ್ಟಿಲೇರಿದ ಎಸ್‍ಐಟಿ

    ಜಾಮೀನು ಸಿಕ್ಕರೂ ರೇವಣ್ಣಗೆ ತಪ್ಪಿಲ್ಲ ಸಂಕಷ್ಟ- ಹೈಕೋರ್ಟ್ ಮೆಟ್ಟಿಲೇರಿದ ಎಸ್‍ಐಟಿ

    ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಸಿಕ್ಕರೂ ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D Revanna) ಅವರಿಗೆ ಕಾನೂನು ಸಂಕಷ್ಟ ತಪ್ಪಿಲ್ಲ.

    ಹೌದು. ಜಾಮೀನು ಪಡೆದು ನಿರಾಳವಾಗಿದ್ದ ಹೆಚ್.ಡಿ ರೇವಣ್ಣಗೆ ವಿಶೇಷ ತನಿಖಾ ತಂಡ (SIT) ಶಾಕ್ ನೀಡಿದೆ. ಜನಪ್ರತಿನಿಧಿಗಳ ನ್ಯಾಯಾಲಯದ ಜಾಮೀನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದೆ. ಇದನ್ನೂ ಓದಿ: ಸಂಸದ ಪ್ರಜ್ವಲ್ ರೇವಣ್ಣ ಪಾಸ್‍ಪೋರ್ಟ್ ರದ್ದು ಮಾಡಲು ಚಿಂತನೆ

    ರೇವಣ್ಣ ಜಾಮೀನು ಆದೇಶ ವಜಾ ಮಾಡುವಂತೆ ಹೈಕೋರ್ಟ್‍ಗೆ ಎಸ್‍ಐಟಿ ಅರ್ಜಿ ಅಲ್ಲಿಸಿದೆ. ಹೈಕೋರ್ಟ್‍ನ ಜನಪ್ರತಿನಿಧಿಗಳ ಪೀಠಕ್ಕೆ ಅರ್ಜಿ ಸಲ್ಲಿಸಿದ ಎಸ್‍ಐಟಿ, ಕೆಳ ನ್ಯಾಯಾಲಯದ ಜಾಮೀನು ಆದೇಶ ರದ್ದು ಮಾಡುವಂತೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನಲ್ಲಿ ನಡೆಯುವ ವಾದ-ಪ್ರತಿಪಾದ ತೀವ್ರ ಕುತೂಹಲ ಕೆರಳಿಸಿದೆ.

    ಎಸ್‍ಐಟಿ ಪರ ಎಸ್‍ಪಿಪಿ ರವಿ ವರ್ಮಕುಮಾರ್ ಹಾಗೂ ರೇವಣ್ಣ ಪರ ಸಿವಿ ನಾಗೇಶ್ ವಾದ ಮಂಡಿಸುವ ಸಾಧ್ಯತೆಗಳಿವೆ. ಇನ್ನು ಎಸ್‍ಐಟಿ ಹೈಕೋರ್ಟ್‍ಗೆ ಸಲ್ಲಿಸಿರುವ ಅರ್ಜಿಗೆ ರೇವಣ್ಣ ಪರ ವಕೀಲರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  • ಫೋನ್‌ ಟ್ಯಾಪ್‌ ಮಾಡಲು ಅವರೇನು ಭಯೋತ್ಪಾದಕರೇ – ಹೆಚ್‌ಡಿಕೆಗೆ ಡಿಕೆಶಿ ತಿರುಗೇಟು

    ಫೋನ್‌ ಟ್ಯಾಪ್‌ ಮಾಡಲು ಅವರೇನು ಭಯೋತ್ಪಾದಕರೇ – ಹೆಚ್‌ಡಿಕೆಗೆ ಡಿಕೆಶಿ ತಿರುಗೇಟು

    ಬೆಂಗಳೂರು: ಕಾಂಗ್ರೆಸ್ ಸರ್ಕಾರ ಫೋನ್ ಟ್ಯಾಪ್ (Phone Tapping) ಮಾಡಲ್ಲ. ಮಾಡಲು ಅವರೇನು ಭಯೋತ್ಪಾದಕರೇ(Terrorist). ಅವರು ರಾಜಕೀಯ ನಾಯಕರು. ಅವರ ಫೋನ್‌ ಟ್ಯಾಪ್‌ (Phone Tapping) ಯಾಕೆ ಮಾಡಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಪ್ರಶ್ನಿಸಿದ್ದಾರೆ.

    ನನ್ನ ಮತ್ತು ರೇವಣ್ಣನ (HD Revanna) ಫೋನ್‌ ಟ್ಯಾಪ್‌ ಮಾಡಲಾಗುತ್ತಿದೆ ಎಂಬ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಭಯೋತ್ಪಾದಕರ ಫೋನನ್ನು ಅನುಮತಿ ಪಡೆದು ಟ್ಯಾಪ್ ಮಾಡಲಾಗುತ್ತದೆ. ಇವರು ನಮ್ಮ ರಾಜ್ಯದ ನಾಯಕರು, ಇವರ ಫೋನ್ ಟ್ಯಾಪ್ ಮಾಡುವ ಅವಶ್ಯಕತೆ ನಮ್ಮ ಸರ್ಕಾರಕ್ಕಿಲ್ಲ. ಕೇವಲ ಪ್ರಚಾರಕ್ಕಾಗಿ ಇಂತಹ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪ್ರಜ್ವಲ್‌ ತಪ್ಪು ಮಾಡದೇ ಇದ್ದರೆ ಜೆಡಿಎಸ್‌ನಿಂದ ಅಮಾನತು ಮಾಡಿದ್ದು ಯಾಕೆ : ಸಿಎಂ ಪ್ರಶ್ನೆ

    ಯಾರಿಗೂ ನಾನು ಏನೂ ಕೊಟ್ಟಿಲ್ಲ. ನಾನು ರಾಜಕಾರಣಿ ನನ್ನ ಭೇಟಿ ಮಾಡಲು ಬಿಜೆಪಿಯವರು ಸೇರಿ ನೂರಾರು ಜನ ಬರುತ್ತಾರೆ. ಬರುವ ಮೊದಲು ಸಮಯ ಕೇಳುತ್ತಾರೆ. ದೇವರಾಜೇಗೌಡ ಬಿಜೆಪಿಯವರೇ. ಅವರು ನನ್ನನ್ನು ಭೇಟಿ ಮಾಡಬೇಕು ಎಂದು ಕೇಳಿದ್ದರು. ಆದರೆ ನಾನು ಸಮಯ ಕೊಟ್ಟಿಲ್ಲ. ಅರ್ಧ ನಿಮಿಷವೂ ನಾನು ಮಾತನಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಇಲ್ಲ, ಕೊಲೆಗಡುಕ ರಾಜ್ಯ ಮಾಡಿದ್ದೇ ಸರ್ಕಾರದ ಸಾಧನೆ : ವಿಜಯೇಂದ್ರ ವಾಗ್ದಾಳಿ

    ಪೆನ್ ಡ್ರೈವ್‌ಗೂ ಸಂಬಂಧವಿಲ್ಲ:
    ಪೆನ್ ಡ್ರೈವ್ ಪ್ರಕರಣದಲ್ಲಿ ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್ ಅವರ ಪಾತ್ರದ ಬಗ್ಗೆ ಆರೋಪ ಮಾಡಿರುವ ಕುರಿತು ಕೇಳಿದಾಗ, ನನಗೂ ಈ ಪ್ರಕರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ನನ್ನ ಹೆಸರನ್ನು ಪ್ರಸ್ತಾಪ ಮಾಡದಿದ್ದರೆ ಅವರಿಗೆಲ್ಲ ನಿದ್ದೆ ಬರುವುದಿಲ್ಲ. ಮಾಧ್ಯಮಗಳು ಸಹ ಈ ವಿಚಾರದಲ್ಲಿ ನೈತಿಕತೆಯ ಗಡಿ ಮೀರಬಾರದು. ಉಪ್ಪು ತಿಂದವನು ನೀರು ಕುಡಿಯಬೇಕು ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದರು.

     

    ಯಾರ ಜೊತೆಯೂ ಮಾತನಾಡಿಲ್ಲ
    ಡಿ.ಕೆ.ಶಿವಕುಮಾರ್, ದೇವರಾಜೇಗೌಡ ಮತ್ತು ಶಿವರಾಮೇಗೌಡ ಅವರ ನಡುವಿನ ಸಂಭಾಷಣೆ ಆಡಿಯೋ ಬಿಡುಗಡೆ ಬಗ್ಗೆ ಕೇಳಿದ ಪ್ರಶ್ನೆಗೆ, ನಾನು ಯಾರ ಜೊತೆಯೂ ಮಾತನಾಡಬಾರದ್ದು ಮಾತನಾಡಿಲ್ಲ. ಯಾರಿಗೂ ನಾನು ಜಿಪಿಎ ಕೊಟ್ಟಿಲ್ಲ. ನಾನೊಬ್ಬ ರಾಜಕಾರಣಿ, ನನ್ನನ್ನು ಭೇಟಿ ಮಾಡಲು ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷದ ಕಾರ್ಯಕರ್ತರೂ ಬರುತ್ತಾರೆ. ಅವರು ಬಿಜೆಪಿಯವರು, ನನ್ನ ಭೇಟಿಗೆ ಸಮಯ ಕೇಳಿದ್ದರು. ನಾನು ಕೊಡಲಿಲ್ಲ. ಅರ್ಧ ನಿಮಿಷವೂ ನಾನು ಯಾರ ಬಳಿಯೂ ಮಾತನಾಡಿಲ್ಲ. ನನಗೂ ರಾಜಕೀಯ, ವ್ಯವಹಾರ ಪ್ರಜ್ಞೆ ಇದೆ. ಈ ವಿಚಾರದ ಗಂಭೀರತೆಯೂ ನನಗೆ ಅರ್ಥವಾಗುತ್ತದೆ ಎಂದು ತಿಳಿಸಿದರು.

    ಡಿ.ಕೆ.ಶಿವಕುಮಾರ್ ಜೈಲಿಗೆ ಹೋದಾಗ ನಾನು ಅವರ ತಾಯಿಯನ್ನು ಸಾಂತ್ವನ ಮಾಡಿದ್ದೆ, ಆದರೆ ಅವರು ನನ್ನ ತಂದೆಗೆ ನೋವು ನೀಡುವುದು ಸರಿಯೇ ಎಂದು ಕುಮಾರಸ್ವಾಮಿ ಹೇಳಿಕೆಗೆ, ನನಗೆ ಅವರ ಪರಿಸ್ಥಿತಿ ಬಗ್ಗೆ ಅನುಕಂಪವಿದೆ. ನಾನು ಈ ವಿಚಾರದಲ್ಲಿ ಯಾರ ಬಗ್ಗೆಯೂ ಅಂದೂ ಮಾತನಾಡಿಲ್ಲ, ಇಂದೂ ಮಾತನಾಡುವುದಿಲ್ಲ ಎಂದರು.

     

  • ಮನೆಯ ಸಹಾಯಕಿ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌ – ರೇವಣ್ಣಗೆ ಜಾಮೀನು ಮಂಜೂರು

    ಮನೆಯ ಸಹಾಯಕಿ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌ – ರೇವಣ್ಣಗೆ ಜಾಮೀನು ಮಂಜೂರು

    ಬೆಂಗಳೂರು: ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಅವರಿಗೆ ಅವರಿಗೆ ರಿಲೀಫ್‌ ಸಿಕ್ಕಿದ್ದು ಕೋರ್ಟ್‌ ಜಾಮೀನು (Bail) ಮಂಜೂರು ಮಾಡಿದೆ.

    ಕಿಡ್ನಾಪ್ ಕೇಸ್‍ನಲ್ಲಿ ಈಗಾಗಲೇ ಮಧ್ಯಂತರ ಜಾಮೀನು ಮಂಜೂರು ಆಗಿತ್ತು. ಈಗ 42 ಎಸಿಎಎಂ ಕೋರ್ಟ್‌ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ನೀಡಿದೆ.

    5 ಲಕ್ಷ ರೂ. ಬಾಂಡ್, ಇಬ್ಬರು ಶ್ಯೂರಿಟಿ, ತನಿಖೆಗೆ ಸಹಕರಿಸಬೇಕು ಎಂದು ಕೋರ್ಟ್‌ ಷರತ್ತು ವಿಧಿಸಿದೆ.

    ಏನಿದು ಪ್ರಕರಣ?
    ರೇವಣ್ಣ ಮತ್ತು ಅವರ ಪುತ್ರ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 28 ರಂದು 47 ವರ್ಷದ ಮನೆಯ ಸಹಾಯಕಿಯು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು

    ಶಾಸಕರ ನಿವಾಸದಲ್ಲಿ ತಂದೆ ಮತ್ತು ಮಗ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು. ಈ ಪ್ರಕರಣದಲ್ಲಿ ರೇವಣ್ಣ ಪರ ವಕೀಲರು ನಿರೀಕ್ಷಣಾ ಜಾಮೀನು ಕೋರಿದ್ದರು.

  • ಲೈಂಗಿಕ ದೌರ್ಜನ್ಯ ಪ್ರಕರಣ- ಹೆಚ್.ಡಿ ರೇವಣ್ಣಗೆ ಸಿಗುತ್ತಾ ಜಾಮೀನು?

    ಲೈಂಗಿಕ ದೌರ್ಜನ್ಯ ಪ್ರಕರಣ- ಹೆಚ್.ಡಿ ರೇವಣ್ಣಗೆ ಸಿಗುತ್ತಾ ಜಾಮೀನು?

    ಬೆಂಗಳೂರು: ಹೊಳೆನರಸೀಪುರ ಲೈಂಗಿಕ ದೌರ್ಜನ್ಯ (Sexual Assault Case) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D Revanna) ಅವರಿಗೆ ಜಾಮೀನು ಅರ್ಜಿ ಭವಿಷ್ಯ ಇಂದು ನಿರ್ಧಾರವಾಗಲಿದೆ.

    ಮ್ಯಾಜಿಸ್ಟ್ರೇಟ್ 42 ರ ನ್ಯಾಯಾಧೀಶರು ಮುಖ್ಯ ಅರ್ಜಿಯ ತೀರ್ಪು ಪ್ರಕಟಿಸಲಿದ್ದಾರೆ. ಪ್ರಕರಣ ಸಂಬಂಧ ಜಾಮೀನು ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಇಬ್ಬರು ಎಸ್ ಪಿ ಪಿಗಳು ರೇವಣ್ಣಗೆ ಜಾಮೀನು ನೀಡದಂತೆ ಪ್ರಬಲ ವಾದ ಮಂಡಿಸಿದ್ದರು. ಎಸ್‍ಪಿಪಿಗಳ ವಾದಕ್ಕೆ ರೇವಣ್ಣ ಪರ ವಕೀಲ ಸಿ ವಿ ನಾಗೇಶ್ ಅವರು ಪ್ರಬಲ ಪ್ರತಿವಾದ ಸಲ್ಲಿಸಿದ್ದರು.

    ಎರಡೂ ಕಡೆಯ ವಾದ ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರು ಇಂದಿಗೆ ಇಂದಿಗೆ ಆದೇಶ ಕಾಯ್ದಿರಿಸಿದ್ದರು. ಸದ್ಯ ಮಧ್ಯಂತರ ಜಾಮೀನಿನ ಮೇಲಿರುವ ರೇವಣ್ಣಗೆ ಇಂದು ಜಾಮೀನು ಸಿಗುತ್ತಾ ಅಥವಾ ಮತ್ತೆ ಜೈಲು ಫಿಕ್ಸಾ ಎಂಬ ಕುತೂಹಲ ಮನೆ ಮಾಡಿದೆ. ಒಂದು ವೇಳೆ ಜಾಮೀನು ಸಿಕ್ಕರೆ ರೇವಣ್ಣಗೆ ಬಿಗ್ ರಿಲೀಫ್ ಸಿಗಲಿದೆ. ಇದನ್ನೂ ಓದಿ: ಶಿವರಾಮೇಗೌಡ ಮನೆ ಮೇಲೆ ಮೊಟ್ಟೆ ಎಸೆತ- ಪೊಲೀಸರಿಂದ ಬಿಗಿಭದ್ರತೆ

  • ಪೆನ್‌ಡ್ರೈವ್ ಪ್ರಕರಣದಲ್ಲಿ ಅನೇಕರು ಭಾಗಿಯಾಗಿದ್ದಾರೆ – ಕೊನೆಗೂ ಮೌನ ಮುರಿದ ದೊಡ್ಡಗೌಡರು

    ಪೆನ್‌ಡ್ರೈವ್ ಪ್ರಕರಣದಲ್ಲಿ ಅನೇಕರು ಭಾಗಿಯಾಗಿದ್ದಾರೆ – ಕೊನೆಗೂ ಮೌನ ಮುರಿದ ದೊಡ್ಡಗೌಡರು

    – ಪ್ರಜ್ವಲ್ ವಿರುದ್ಧ ಕ್ರಮ ತಗೆದುಕೊಳ್ಳಲು ನಮ್ಮ ತಕರಾರಿಲ್ಲ
    – ಸಂತ್ರಸ್ತ ಹೆಣ್ಣುಮ್ಕಳಿಗೆ ನ್ಯಾಯ ಸಿಗಬೇಕು ಎಂದ ಮಾಜಿ ಪ್ರಧಾನಿ

    ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣದ (Prajwal Revanna Case) ಬಗ್ಗೆ ಕೊನೆಗೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (HD Deve Gowda) ಅವರು ಮೌನ ಮುರಿದಿದ್ದಾರೆ.

    ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿನ ಜೆಪಿ ನಗರ ಲಕ್ಷ್ಮಿ-ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗಿ ಬಂದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಪ್ರಜ್ವಲ್ ರೇವಣ್ಣ ಮತ್ತು ರೇವಣ್ಣ ಅವರ ಪ್ರಕಣದಲ್ಲಿ ಏನೇನು ನಡೆಯುತ್ತಿದೆ ಅನ್ನೋದು ಗೊತ್ತಿದೆ. ಪ್ರಕರಣ ಕೋರ್ಟ್‌ನಲ್ಲಿ ಇರೋದ್ರಿಂದ ನಾನು ಅದರ ಬಗ್ಗೆ ಕಾಮೆಂಟ್ ಮಾಡಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್‌ ನಿವಾಸದ ಸಿಸಿಟಿವಿ ಟ್ಯಾಂಪರಿಂಗ್‌ ಮಾಡಲಾಗುತ್ತಿದೆ: ಸ್ವಾತಿ ಮಲಿವಾಲ್‌

    ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹೋಗಿದ್ದಾರೆ. ಆದ್ರೆ ನೆಲದ ಕಾನೂನು ವ್ಯಾಪ್ತಿಯಲ್ಲಿ ಏನೇನು ಕ್ರಮ ತೆಗೆದುಕೊಳ್ಳಬೇಕೋ ಅದು ಸರ್ಕಾರದ ಜವಾಬ್ದಾರಿ. ಈ ಪ್ರಕರಣದಲ್ಲಿ ಅನೇಕರು ಭಾಗಿಯಾಗಿದ್ದಾರೆ. ನಾನು ಯಾರ ಹೆಸರನ್ನೂ ಹೇಳಲ್ಲ. ಆದ್ರೆ ಯಾರೆಲ್ಲ ಭಾಗಿಯಾಗಿದ್ದಾರೆ ಅವರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ED ಜಾಹೀರಾತು ನೋಡುತ್ತಿದ್ದೇವೆ: ಬಾಂದ್ರಾ-ವರ್ಲಿ ಸೀ ಲಿಂಕ್ ಉದಾಹರಿಸಿ ರಶ್ಮಿಕಾಗೆ ಕೇರಳ ಕಾಂಗ್ರೆಸ್‌ ತಿರುಗೇಟು

    ಅಲ್ಲದೇ ಈ ಪ್ರಕರಣದಲ್ಲಿ ಯಾರೆಲ್ಲಾ ಅಪಾಯಕ್ಕೆ ಸಿಲುಕಿದ್ದಾರೋ ಆ ಹೆಣ್ಣುಮಕ್ಕಳಿಗೆ ನ್ಯಾಯ ಸಿಗಬೇಕು, ಜನತೆಗೆ ನ್ಯಾಯ ಸಿಗಬೇಕು ಎಂದು ಕುಮಾರಸ್ವಾಮಿ (HD Kumaraswamy) ಬಿಡಿಸಿ ಬಿಡಿಸಿ ಹೇಳಿದ್ದಾರೆ. ಪ್ರಜ್ವಲ್ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ನಮಗೆ ಯಾವುದೇ ತಕರಾರು ಇಲ್ಲ. ಆದ್ರೆ ರೇವಣ್ಣ ಬಗ್ಗೆ ಮಾಡಿರೋ ಕೇಸ್ ಬಗ್ಗೆ ರಾಜ್ಯದ ಜನತೆ ನೋಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಸದ್ಯ ಮಾಜಿ ಸಚಿವ ಹೆಚ್‌.ಡಿ ರೇವಣ್ಣ (HD Revanna) ವಿರುದ್ಧ ದಾಖಲಾಗಿದ್ದ ಅಪಹರಣ ಪ್ರಕರಣದಲ್ಲಿ ಜಾಮೀನು ಮಂಜೂರಾಗಿದೆ. ಆದ್ರೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಧ್ಯಂತರ ಜಾಮೀನನ್ನು ಸೋಮವಾರದವರೆಗೆ ಕೋರ್ಟ್‌ ಕಾಯ್ದಿರಿಸಿದೆ.

  • ಕಾನೂನು ಬಿಟ್ಟು ನಾನೇನು ಮಾತಾಡಲ್ಲ, ಕೈ ಮುಗಿಯುತ್ತೇನೆ ಬಿಟ್ಟುಬಿಡಿ: ಹೆಚ್.ಡಿ ರೇವಣ್ಣ

    ಕಾನೂನು ಬಿಟ್ಟು ನಾನೇನು ಮಾತಾಡಲ್ಲ, ಕೈ ಮುಗಿಯುತ್ತೇನೆ ಬಿಟ್ಟುಬಿಡಿ: ಹೆಚ್.ಡಿ ರೇವಣ್ಣ

    ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಪ್ರಕರಣದ (Kidnap Case) ಆರೋಪ ಹೊತ್ತಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಕಾನೂನು ಬಿಟ್ಟು ನಾನೇನು ಮಾತನಾಡಲ್ಲ. ಕೈ ಮುಗಿಯುತ್ತೇನೆ ಬಿಟ್ಟು ಬಿಡಿ ಎಂದು ಗರಂ ಆದ ಘಟನೆ ವಿಧಾನಸೌಧದಲ್ಲಿ ನಡೆದಿದೆ‌.

    ವಿಧಾನಸಭೆಯ ಕಾಗದ ಪತ್ರ ಸಮಿತಿ ಅಧ್ಯಕ್ಷರಾಗಿರುವ ಹೆಚ್‌.ಡಿ ರೇವಣ್ಣ ಅವರಿಂದು ಸಮಿತಿಯ ಸಭೆಗೆ ವಿಧಾನಸೌಧಕ್ಕೆ (Vidhana Soudha) ಬಂದಿದ್ದರು. ಈ ವೇಳೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ಕೊಡದೆ ಮೌನವಾಗಿಯೇ ತೆರಳಿದ ರೇವಣ್ಣ, 15 ನಿಮಿಷಗಳಲ್ಲೇ ಕಾಗದ ಪತ್ರ ಸಮಿತಿ ಸಭೆ ಮುಗಿಸಿ ಹೊರಟರು.

    ಸದ್ಯ ರೇವಣ್ಣ ಅವರನ್ನು ಕಾಗದ ಪತ್ರ ಸಮಿತಿ ಅಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡುವಂತೆ ಮನವಿ ಸಹ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ದೇಶದ ಬೆಳವಣಿಗೆಗೆ ಸಾಕ್ಷಿಯಾಗಲು ತೃಪ್ತಿಕರವಾಗಿದೆ: ಮೋದಿ ಪ್ರತಿಕ್ರಿಯೆಗೆ ರಶ್ಮಿಕಾ ಸಂತಸ

    ವಿಧಾನಸೌಧದಿಂದ ವಾಪಾಸ್ ಹೋಗುವಾಗ, ಪ್ರತಿಕ್ರಿಯೆ ಕೊಡಲು ನಿರಾಕರಿಸಿದ ರೇವಣ್ಣ ಅವರು, ಅಸಮಧಾನ, ಬೇಸರ, ಕೋಪದ ನಡುವೆಯೇ ನಾನು ಏನೂ ಮಾತಾಡಲ್ಲ, ಕಾನೂನು ಬಿಟ್ಟು ಏನೂ ಮಾತಾಡಲ್ಲ. ದಯವಿಟ್ಟು ಅರ್ಥಮಾಡಿಕೊಳ್ಳಿ ಎಂದು ಗರಂ ಆಗಿದ್ದಾರೆ. ಬಳಿಕ ಸಿಡುಕುತ್ತಲೇ ವಿಧಾನಸೌಧದಿಂದ ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: ಕೊಲೆ ಆರೋಪಿ ಗೋವಾ, ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಳ್ಳಲು ಪ್ಲ್ಯಾನ್‌ ಮಾಡಿದ್ದ: ರೇಣುಕಾ ಸುಕುಮಾರ

  • ಸೋಮವಾರದವರೆಗೆ ರೇವಣ್ಣಗೆ ಮಧ್ಯಂತರ ಜಾಮೀನು ಮುಂದುವರಿಕೆ

    ಸೋಮವಾರದವರೆಗೆ ರೇವಣ್ಣಗೆ ಮಧ್ಯಂತರ ಜಾಮೀನು ಮುಂದುವರಿಕೆ

    – ಲೈಂಗಿಕ ದೌರ್ಜನ್ಯ ಪ್ರಕರಣ- ಮೇ 20ಕ್ಕೆ ವಿಚಾರಣೆ ಮುಂದೂಡಿಕೆ

    ಬೆಂಗಳೂರು: ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್. ಡಿ ರೇವಣ್ಣ (H.D Revanna) ಅವರ ಮಧ್ಯಂತರ ಜಾಮೀನು ಸೋಮವಾರದವರೆಗೆ ಮುಂದುವರಿಕೆಯಾಗಿದೆ.

    ಕಿಡ್ನಾಪ್ ಕೇಸ್‍ನಲ್ಲಿ  ಈಗಾಗಲೇ ಮಧ್ಯಂತರ ಜಾಮೀನು ಮಂಜೂರು ಆಗಿದೆ. ಈ ನಡುವೆ ಇಂದು ಮುಖ್ಯ ಜಾಮೀನು ಅರ್ಜಿಯ ವಿಚಾರಣೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯಿತು. ವಾದ – ಪ್ರತಿವಾದ ಆಲಿಸಿದ ನ್ಯಾಯಾಧೀಶರು ಮೇ 20 ಸೋಮವಾರಕ್ಕೆ ಆದೇಶ ಕಾಯ್ದಿರಿಸಿದರು.

    ಸಂತ್ರಸ್ತೆಯ ಸ್ವ-ಇಚ್ಚಾ ಹೇಳಿಕೆಯನ್ನು ಓದಿದ ಎಸ್‍ಪಿಪಿ, ನಾನು ಆ ಮನೆಗೆ ಸೇರಿದಾಗ ನನ್ನ ಪ್ರಜ್ವಲ್ ರೇವಣ್ಣ ಬಗ್ಗೆ ಎಚ್ಚರಿಕೆ ನೀಡುತ್ತಾ ಇದ್ದರು. ಪ್ರಜ್ವಲ್ ಪದೇ ಪದೇ ಬಂದು ಮೈ ಮುಟ್ಟಿ ಎಳೆಯುತ್ತಾ ಇದ್ದರು. ಎಣ್ಣೆ ಹಚ್ಚು ಬಾ ಎಂದು ಹೇಳುತ್ತಾ ಇದ್ದರು. ರೇವಣ್ಣ ಕೂಡ ನನ್ನ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದಾರೆ. ಹೊಟ್ಟೆ ಎದೆಯ ಭಾಗವನ್ನು ಮುಟ್ಟಿ ಎಳೆದಾಡಿದ್ದಾರೆ. ರೇವಣ್ಣ ವರ್ತನೆ ಬಗ್ಗೆ ದೂರು ನೀಡಿದ್ರು ಯಾವುದೇ ಪ್ರಯೋಜನ ಆಗಲಿಲ್ಲ ಎಂದು ಹೇಳಿದರು.

    ಭವಾನಿ ಅವರಿಗೂ ಈ ಮಾಹಿತಿಯನ್ನು ನೀಡಿದ್ದೇನೆ ಯಾವುದೇ ಉಪಯೋಗ ಆಗಿಲ್ಲ. ಭವಾನಿ ಇಲ್ಲದ ಸಮಯದಲ್ಲಿ ಸೊಂಟ ಜಿಗುಟುತ್ತಿದ್ದರು. ರೇವಣ್ಣ ಲೈಂಗಿಕ ಕಿರುಕುಳ ಇಷ್ಟಕ್ಕೆ ನಿಂತಿಲ್ಲ. ಆಶ್ರಯ ಮಂಜೂರು ಮನೆಯಿಂದ ಹೊರ ಹಾಕಿದ್ದರು. ಈ ಮೂಲಕ ಗೊತ್ತಾಗ್ತಾ ಇದೆ ಲೈಂಗಿಕ ದೌರ್ಜನ್ಯ ನಡೆದಿದೆ. ಸಂತ್ರಸ್ತ ಮಹಿಳೆಯೇ ಹೇಳಿಕೊಂಡಿದ್ದಾರೆ. ಈಗ ಅದೇ ಎಫ್ ಐ ಆರ್ ಗೆ 376 ಅನ್ನು ಸೇರಿಸಲಾಗಿದೆ. ಸೆಕ್ಷನ್ ಸೇರ್ಪಡೆಯಾಗಿರೋದ್ರಿಂದ ಈ ಪ್ರಕರಣ ಸೆಷನ್ಸ್ ಕೋರ್ಟ್ ಅಲ್ಲಿ ನಡೆಯಬೇಕು. 376 ಜಾಮೀನು ರಹಿತ ಪ್ರಕರಣ ಈ ಅರ್ಜಿ ವಿಚಾರಣೆ ನಡೆಯಲು ಇಲ್ಲಿ ಅವಕಾಶ ಇಲ್ಲ ಎಂದು ತಿಳಿಸಿದರು.

    ಎಸ್‍ಐಟಿ ಪರ ವಕೀಲರು, ಸೆಷನ್ ಕೋರ್ಟ್ ಅಲ್ಲಿ ನಡೆಯಬೇಕಾಗಿರೋದ್ರಿಂದ ಈ ಜಾಮೀನು ಅರ್ಜಿ ಇಲ್ಲಿ ನಡೆಯೋದು ಸರಿಯಲ್ಲ. ಇದೆಲ್ಲವನ್ನೂ ಕೂಡ ಓಪನ್ ಕೋರ್ಟ್ ಅಲ್ಲಿ ಹೇಳಲು ಸಾಧ್ಯವಿಲ್ಲ. ಇನ್ ಕ್ಯಾಮರಾ ಅಲ್ಲಿ ವಿವರವಾಗಿ ಹೇಳಬಹುದು. ಈ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಗೆ ಜಾಮೀನು ನೀಡುವ ವ್ಯಾಪ್ತಿ ಇಲ್ಲ. ಬೇಲೆಬಲ್ ಸೆಕ್ಷನ್ ಇದ್ದಾಗ ಮಾತ್ರ ಸೆ.436 ಪ್ರಕಾರ ಜಾಮೀನು ನೀಡಬಹುದು. ಆದ್ರೆ ಈ ಪ್ರಕರಣದಲ್ಲಿ ನಾನ್ ಬೇಲೆಬಲ್ ಸೆಕ್ಷನ್ ಇರೋದ್ರಿಂದ ಸೆ.436 ಅಡಿ ಜಾಮೀನು ನೀಡುವಂತಿಲ್ಲ. ನಾನ್ ಬೇಲೆಬಲ್ ಸೆಕ್ಷನ್ ಇರೋದ್ರಿಂದ ಸೆಷನ್ಸ್ ಕೋರ್ಟ್ ನಲ್ಲಿ ವಿಚಾರಣೆ ನಡೆಯಬೇಕು. ಹೀಗಾಗಿ ಸೆ.436 ಅಡಿ ಈ ಕೋರ್ಟ್ ನಿಂದ ಜಾಮೀನು ನೀಡಲು ಸಾಧ್ಯವಿಲ್ಲ ಎಂದರು.

    ರೇವಣ್ಣ ಪರ ವಕೀಲ ಸಿ ವಿ ನಾಗೇಶ್ ವಾದ ಮಂಡಿಸಿ, ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಇದಾಗಿದೆ. ಆ  ಪೊಲೀಸ್ ಠಾಣೆಯಲ್ಲಿ 354ಎ ಹಾಗೂ 506-509 ಪ್ರಕರಣ ದಾಖಲಾಗಿದ್ದು, ಇವೆಲ್ಲಾ ಜಾಮೀನು ಸಹಿತ ಪ್ರಕರಣಗಳಾಗಿವೆ. ಹೀಗಾಗಿ ಜಾಮೀನು ನೀಡಬಹುದಾಗಿದೆ. ಸಂತ್ರಸ್ತ ಮಹಿಳೆ ಏ. 28 ರಂದು ದೂರು ನೀಡಿದ್ದಾಳೆ. ಅಂದು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ಆಗಿದೆ. ಲೈಂಗಿಕ ದೌರ್ಜನ್ಯ 28 ಏಪ್ರಿಲ್ ಅಲ್ಲಿ ಆಗಿದ್ಯಾ…?. ಅತ್ಯಾಚಾರ ಏ.28 ರಂದು ಆಗಿದ್ಯಾ?. ಇಲ್ಲ ಏಪ್ರಿಲ್ ತಿಂಗಳ ಯಾವುದಾದರೂ ದಿನದಂದು ನಡೆದಿದ್ಯಾ …? ಅಪರಾಧ ಎರಡು ದಿನ, ಎರಡು ತಿಂಗಳ ಮುಂಚೆ ಆಗಿಲ್ಲ. ಇದು ಐದು ವರ್ಷಗಳ ಹಿಂದೆ ನಡೆದಿದೆ ಎಂಬುದಲ್ಲ. ಅನೇಕ ವರ್ಷಗಳಾಗಿವೆ ಎಂದು ತಿಳಿಸಿದರು.

    ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಸೋಮವಾರಕ್ಕೆ ಆದೇಶ ಕಾಯ್ದಿರಿಸಿದರು. ಈ ಹಿನ್ನೆಲೆಯಲ್ಲಿ ರೇವಣ್ಣ ಅವರ ಜಾಮೀನು ಭವಿಷ್ಯ ಮೇ 20 ಕ್ಕೆ ನಿರ್ಧಾರವಾಗಲಿದೆ.

  • ಕೇಸ್‌ ದಾಖಲಾಗುವ ಮೊದಲೇ A2 ಆರೋಪಿಯನ್ನು ಬಂಧಿಸಿದ್ದು ಅನುಮಾನಾಸ್ಪದ – ರೇವಣ್ಣ ಜಾಮೀನು ಆದೇಶದಲ್ಲಿ ಏನಿದೆ?

    ಕೇಸ್‌ ದಾಖಲಾಗುವ ಮೊದಲೇ A2 ಆರೋಪಿಯನ್ನು ಬಂಧಿಸಿದ್ದು ಅನುಮಾನಾಸ್ಪದ – ರೇವಣ್ಣ ಜಾಮೀನು ಆದೇಶದಲ್ಲಿ ಏನಿದೆ?

    ಬೆಂಗಳೂರು: ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ (Kidnap Case) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಾಸಕ, ಮಾಜಿ ಸಚಿವ ಹೆಚ್‌ಡಿ ರೇವಣ್ಣಗೆ (HD Revanna) ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಕೋರ್ಟ್‌ ಜಾಮೀನು ಮಂಜೂರು (Bail) ಮಾಡುವ ನಿರ್ಧಾರಕ್ಕೆ ಬಂದಿದ್ದು ಯಾಕೆ ಎನ್ನುವುದನ್ನು ಕೋರ್ಟ್‌ ತನ್ನ ಆದೇಶದಲ್ಲಿ ಹಲವು ಕಾರಣಗಳನ್ನು ನೀಡಿದೆ.

    ಕೋರ್ಟ್‌ ಆದೇಶದಲ್ಲಿ ಏನಿದೆ?
    ಮಹಿಳೆಗೆ ಆರೋಪಿಯಿಂದ ತೊಂದರೆಯಿದೆ, ಜೀವ ಭಯ ಇದೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಗಳು ಇಲ್ಲ. ಪ್ರಕರಣ ದಾಖಲಾಗುವ ಮೊದಲೇ ಎ2 ಆರೋಪಿ ಸತೀಶ್ ಬಾಬುವನ್ನು ವಶಕ್ಕೆ ಪಡೆದಿದ್ದು ಅನುಮಾನಸ್ಪದವಾಗಿದೆ. ಐಪಿಸಿ ಸೆಕ್ಷನ್‌ 364 ಎ (ಬೆದರಿಸಿ ಅಪಹರಣ) ಅನ್ವಯವಾಗುವ ಪೂರಕವಾದ ಯಾವುದೇ ಸಾಕ್ಷಿಗಳು ಇಲ್ಲ.

     

    ಸಂತ್ರಸ್ತೆಯ 164 ಹೇಳಿಕೆಯನ್ನು (ನ್ಯಾಯಾಧೀಶರ ಮುಂದೆ ನೀಡುವ ಹೇಳಿಕೆ) ಪಡೆಯಬೇಕಿದೆ ಎಂದು ಆರೋಪಿಯ ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿತ್ತು. ಆದರೆ 161 ಹೇಳಿಕೆಯನ್ನು (ತನಿಖಾಧಿಕಾರಿ ಮುಂದೆ ಹೇಳಿಕೆ) ಯಾವಾಗ ದಾಖಲು ಮಾಡಿದ್ದಾರೆ ಎಂದು ಉಲ್ಲೇಖ ಮಾಡಿಲ್ಲ

    ಸಂತ್ರಸ್ತೆಯ ಹೇಳಿಕೆ ನೀಡಿದ್ದ ಪೊಲೀಸರ ವರದಿ ಪ್ರಕಾರ ಆರೋಪಿಯ (ರೇವಣ್ಣ) ಮಗನ ವಿರುದ್ಧ ಅತ್ಯಾಚಾರದ ಆರೋಪಗಳು ಮಾತ್ರ ನಮೂದಾಗಿದೆ. ಆದರೆ ರೇವಣ್ಣ ಅಪಹರಣ ಮಾಡಿದ್ದಕ್ಕೆ ಹೇಳಿಕೆ ಉಲ್ಲೇಖ ಮಾಡಿಲ್ಲ.  ಇದನ್ನೂ ಓದಿ: 380ರ ಪೈಕಿ ಈಗಾಗಲೇ ಮೋದಿ 270 ಗೆದ್ದಿದ್ದಾರೆ : ಅಮಿತ್‌ ಶಾ ವಿಶ್ವಾಸ

     

    ಸಂತ್ರಸ್ತೆಯ 164 ಹೇಳಿಕೆ ದಾಖಲು ಮಾಡಲು ತಡವಾಗಿದ್ದು ಯಾಕೆ ಎಂಬುದನ್ನು ತಿಳಿಸಲು ಎಸ್‌ಐಟಿ (SIT) ಸಫಲವಾಗಿಲ್ಲ. ಸಂತ್ರಸ್ತ ಮಹಿಳೆಗೆ ಜೀವ ಬೆದರಿಕೆ ಅಥವಾ ಯಾವುದೇ ಬೇಡಿಕೆ ಕೇಳಿರುವುದಕ್ಕೆ ಪೂರಕ ಸಾಕ್ಷ್ಯಗಳು ಇಲ್ಲ

    ಇಡೀ ಪ್ರಕರಣದಲ್ಲಿ 364 ಎ ಅಳವಡಿಕೆಗೆ ಪೂರಕವಾದ ಸಾಕ್ಷ್ಯಗಳು ಇಲ್ಲ. ಮಗನನ್ನು ರಕ್ಷಣೆ ಮಾಡಿದ್ದಾರೆ. ಅದಕ್ಕೆ ಈ ಕೃತ್ಯವನ್ನು ಮಾಡಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯಗಳನ್ನು ಎಸ್‌ಐಟಿ ಒದಗಿಸಿಲ್ಲ.

    2019 ರ ಚುನಾವಣಾ ಅಕ್ರಮದ ಬಗ್ಗೆ ಇಲ್ಲಿ ಉಲ್ಲೇಖಸಿದ್ದಾರೆ. ಆದರೆ ಆ ಪ್ರಕರಣಕ್ಕೆ ಸುಪ್ರೀಂ ಕೋರ್ಟ್‌ನಿಂದ ತಡೆಯಾಜ್ಞೆ ಇದೆ ಹೀಗಾಗಿ ಆ ವಿಚಾರ ಮಾನ್ಯ ಮಾಡಲು ಸಾಧ್ಯವಿಲ್ಲ. ಇಲ್ಲಿ ಗಂಭೀರವಾದ ಆರೋಪ ಇರುವುದು ಪ್ರಜ್ವಲ್ ರೇವಣ್ಣ ಮೇಲೆ ಹೊರತು ರೇವಣ್ಣ ಮೇಲೆ ಅಲ್ಲ.

     

  • ಜೈಲಿನಿಂದ ಹೊರಬರುತ್ತಿದ್ದಂತೆ ರೇವಣ್ಣ ದೇಗುಲ ಯಾತ್ರೆ!

    ಜೈಲಿನಿಂದ ಹೊರಬರುತ್ತಿದ್ದಂತೆ ರೇವಣ್ಣ ದೇಗುಲ ಯಾತ್ರೆ!

    ಬೆಂಗಳೂರು: ಅಪಹರಣ ಪ್ರಕರಣದಲ್ಲಿ ಶಾಸಕ, ಮಾಜಿ ಸಚಿವ ಹೆಚ್‌ಡಿ ರೇವಣ್ಣಗೆ (HD Revanna) ಜಾಮೀನು (Bail) ಸಿಕ್ಕಿದ ಬೆನ್ನಲ್ಲೇ ದೇಗುಲ (Temple) ಯಾತ್ರೆ ಆರಂಭಿಸಿದ್ದಾರೆ.

    ಪರಪ್ಪನ ಅಗ್ರಹಾರ (Parappana Agrahara) ಜೈಲಿನಿಂದ ನೇರವಾಗಿ ಪದ್ಮನಾಭ ನಗರದಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರ (Devegowda) ನಿವಾಸಕ್ಕೆ ಆಗಮಿಸಿ ದೇವರ ಕೋಣೆಯಲ್ಲಿ ಪೂಜೆ ಮಾಡಿದರು. ಇದನ್ನೂ ಓದಿ: ಕಾರ್ಯಕರ್ತರ ಮುಂದೆ ರೇವಣ್ಣ ಕಣ್ಣೀರು!

     

    ನಂತರ ರೇವಣ್ಣ ಬೆಂಗಳೂರಿನ ಜೆಪಿ ನಗರದಲ್ಲಿರುವ ತಿರುಮಲ ಲಕ್ಷ್ಮಿ ವೆಂಕಟೇಶ್ವರ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆಯಲ್ಲಿ ಭಾಗಿಯಾಗಿದರು. ದೇವಾಲಯದಲ್ಲಿ ಕುಂಬಳಕಾಯಿ, ಈಡುಗಾಯಿ ದೃಷ್ಟಿ ತೆಗೆಸಿ ರೇವಣ್ಣ ಒಬ್ಬರೇ ಪೂಜೆ ಮಾಡಿದರು. ಇಲ್ಲಿಂದ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಳೆ ಶೃಂಗೇರಿಗೆ ರೇವಣ್ಣ ಭೇಟಿ ನೀಡುವ ಸಾಧ್ಯತೆಯಿದೆ.