ಹಾಸನ: ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು. ಅದೇ ರೀತಿ ನಿಂಬೆಹಣ್ಣನ್ನು ನಿಂಬೆಹಣ್ಣಿಂದ ತೆಗೆಯಬೇಕು ಎಂದು ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಪರೋಕ್ಷವಾಗಿ ಶಾಸಕ ಪ್ರೀತಂಗೌಡ ವ್ಯಂಗ್ಯವಾಡಿದ್ದಾರೆ.
ಇಂದು ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ನಾಮಪತ್ರ ಸಲ್ಲಿಸಲು ಹಾಸನ ಡಿಸಿ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ್ದ ಪ್ರೀತಂಗೌಡ ತಮ್ಮ ಪಕ್ಷದವರ ಜೊತೆ ಪರೋಕ್ಷವಾಗಿ ಹೆಚ್‍ಡಿ.ರೇವಣ್ಣ ವಿರುದ್ಧ ವ್ಯಂಗ್ಯವಾಗಿ ಮಾತನಾಡಿದ್ದು, ಅವರು ಮಾತನಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಕುಟುಂಬದಿಂದ ಒಬ್ಬರೇ ಚುನಾವಣೆಗೆ ನಿಲ್ಲಲಿ ಎಂದು ಕಾನೂನು ತರಲಿ: ಹೆಚ್.ಡಿ ರೇವಣ್ಣ
ನಮ್ಮದು 12:05 ಕ್ಕೆ ನಾಮಪತ್ರ ಸಲ್ಲಿಸಲು ಸಮಯ ಕೇಳಿದ್ದೇವೆ. ನಮ್ಮದೂ ನಿಂಬೆಹಣ್ಣಿನ ಶಾಸ್ತ್ರವೇ. ವಿರೋಧಿಗಳು ಏನು ಮಾಡ್ತಾರೋ ನಾವು ಅದನ್ನೆ ಮಾಡುತ್ತೇವೆ. ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು. ಅದೇ ರೀತಿ ನಿಂಬೆಹಣ್ಣನ್ನು ನಿಂಬೆಹಣ್ಣಿಂದ ತೆಗೆಯಬೇಕು ಎಂದು ರೇವಣ್ಣಗೆ ಪರೋಕ್ಷವಾಗಿ ಪ್ರೀತಂಗೌಡ ಟಾಂಗ್ ಕೊಟ್ಟರು. ಇದನ್ನೂ ಓದಿ: ರಾಜ್ಯದಲ್ಲಿ ತಗ್ಗಿದ ಮಳೆ, ಮೋಡ ಕವಿದ ವಾತಾವರಣ ಮುಂದುವರೆಯಲಿದೆ: ಹವಾಮಾನ ಇಲಾಖೆ
ಹಾಸನ: ಕುಟುಂಬದಿಂದ ಒಬ್ಬರೇ ಚುನಾವಣೆಗೆ ನಿಲ್ಲಲಿ ಎಂದು ಕಾನೂನು ತರಲಿ ಅಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ.
ಎಂ.ಎಲ್.ಸಿ. ಚುನಾವಣೆಗೆ ಸೂರಜ್ ರೇವಣ್ಣ ಸ್ಪರ್ಧೆಗೆ ಬಿಜೆಪಿ-ಕಾಂಗ್ರೆಸ್ ಟೀಕೆ ವಿಚಾರ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷ ಯಾವುದು..? ಇಂಧಿರಾಗಾಂಧಿ, ರಾಜೀವ್ ಗಾಂಧಿ, ಸಂಜಯ್ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಬಂದರು. ಯಡಿಯೂರಪ್ಪ ಅವರ ಮಕ್ಕಳು ರಾಜಕೀಯಕ್ಕೆ ಬಂದರು. ನಾವೇನು ಹಿಂದುಗಡೆ ಬಾಗಿಲಿನಿಂದ ಬರುತ್ತಿದ್ದೇವಾ ಎಂದು ಪ್ರಶ್ನಿಸುತ್ತಾ ವಾಗ್ದಾಳಿ ನಡೆಸಿದ್ದಾರೆ.
ರಿಸರ್ವೇಷನ್ ಇಲ್ಲದಿದ್ದಾಗ ಹಿಂದುಳಿದ ವರ್ಗದವರನ್ನು ಜಿ.ಪಂ. ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಅವರೇನು ನಮ್ಮ ಕುಟುಂಬದವರಾ..? ಎಂದು ಇದೇ ವೇಳೆ ಜೆಡಿಎಸ್ ನಿಂದ ಅಧ್ಯಕ್ಷರನ್ನಾಗಿ ಮಾಡಿದವರ ಹೆಸರು ಹೇಳಿ ರೇವಣ್ಣ ವಾಗ್ದಾಳಿ ನಡೆಸಿದರು. ಕಾಂಗ್ರೆಸ್, ಬಿಜೆಪಿ ಕಾನೂನು ತರಲಿ. ಕುಟುಂಬದಿಂದ ಒಬ್ಬರೇ ನಿಲ್ಲಲಿ ಎಂದು ಕಾನೂನು ತರಲಿ. ಆ ಕಾನೂನನ್ನು ನಾನು ಒಪ್ಪುತ್ತೇನೆ. ಜೆಡಿಎಸ್ ಪ್ರೊಡಕ್ಷನ್ ಪಾರ್ಟಿ. ಕಾಂಗ್ರೆಸ್-ಬಿಜೆಪಿಯಲ್ಲಿರುವವರೆಲ್ಲಾ ದೇವೇಗೌಡರ ಕಂಪನಿಲಿ ಸರ್ವಿಸ್ ಆಗಿರುವವರು. ಪ್ರೊಡಕ್ಷನ್ ಬೈ ಎಚ್.ಡಿ.ದೇವೇಗೌಡ ಬಿಜೆಪಿ-ಕಾಂಗ್ರೆಸ್ ನಲ್ಲಿರೋದು ಜೆಡಿಎಸ್ ಪ್ರೊಡಕ್ಷನ್ ನವರು ಎಂದರು.
ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರೇವಣ್ಣ, ಹಾಸನ ಜಿಲ್ಲೆಯಲ್ಲಿ ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕುಯ್ಲಿಗೆ ಬಂದಿದ್ದ ಜೋಳ, ರಾಗಿ, ಭತ್ತ ನಾಶವಾಗಿದೆ. 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಉದುರಿ ಹೋಗಿದೆ. 4,200 ಹೆಕ್ಟೇರ್ ಪ್ರದೇಶದಲ್ಲಿ ಕಾಳುಮೆಣಸು ಹಾಳಾಗಿದೆ. 2000 ಎಕರೆ ಪ್ರದೇಶದಲ್ಲಿ ತರಕಾರಿ, 1000 ಎಕರೆ ಪ್ರದೇಶದಲ್ಲಿ ಇತರೆ ಬೆಳೆಗಳು ನಾಶವಾಗಿದೆ. 420 ಕೋಟಿಗೂ ಅಧಿಕ ನಷ್ಟವಾಗಿದೆ. ರಾಜ್ಯ ಸರ್ಕಾರ ಸತ್ತೋಗಿದೆ. ಇದು ರೈತರ ಪರವಾದ ಸರ್ಕಾರವಲ್ಲ ಎಂದು ಹೇಳಿದರು.
ರೈತರನ್ನೇ ಮಟ್ಟ ಹಾಕಲು ಬಂದಿರುವ ಸರ್ಕಾರ. ಈ ಸರ್ಕಾರ ಯಾವಾಗ ಹೋಗುತ್ತೆ ಅಂಥಾ ಜನ ಶಾಪ ಹಾಕುತ್ತಿದ್ದಾರೆ. ಸರ್ಕಾರ ಎಲ್ಲಾ ಬೆಳೆಗಳಿಗೂ 6000 ಪರಿಹಾರ ನೀಡುತ್ತಿದೆ. ಯಾರೂ ಹೇಳೋರು ಕೇಳೋರು ಇಲ್ಲಾ. ಕುಮಾರಸ್ವಾಮಿ ಶಂಖ ಕೊಟ್ಟ ಊದುತ್ತಾ ಕೂತಿದ್ದಾರೆ. ಜನರ ಸತ್ತರೆ ಮಸಣಕ್ಕೆ ದುಡ್ಡು ಕೊಡ್ತೀವಿ ಅಂತ ಕೂತಿದ್ದಾರೆ. ಯಡಿಯೂರಪ್ಪ ಭಾಷಣ ಮಾಡಿದ್ದೇ ಮಾಡಿದ್ದು, ದೇವಸ್ಥಾನದ ಹುಂಡಿ ತರ ಡಬ್ಬಿ ಇಟ್ಟುಕೊಂಡಿದ್ದರು. ಯಾರು ದುಡ್ಡು ಹಾಕ್ತಾರೆ ಅವರಿಗೆ ಕೆಲಸ ಮಾಡಿಕೊಡುತ್ತಿದ್ದರು ಎಂದು ಕಿಡಿಕಾರಿದರು. ಇದನ್ನೂ ಓದಿ: ಕೊಹ್ಲಿ ಪುತ್ರಿಯನ್ನು ರೇಪ್ ಮಾಡ್ತಿನಿ ಅಂದಿದ್ದ ಐಐಟಿ ಪದವೀಧರನಿಗೆ ಜಾಮೀನು
ನೀರಾವರಿ ಇಲಾಖೆಯಲ್ಲಿ ಬೋಗಸ್ ಬಿಲ್ ನಡೆಯುತ್ತಿದೆ. ಎಷ್ಟು ಆಗುತ್ತೆ ಅಷ್ಟು ಬಾಚೋಣ ಅಂತ ಅಧಿಕಾರಿಗಳು ಕುಳಿತಿದ್ದಾರೆ. ಈ ರಾಜ್ಯವನ್ನು ಯಾರೂ ಹೇಳೋರು, ಕೇಳೋರು ಇಲ್ಲ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಚುನಾವಣೆ ಒಂದೇ ಸಾಕು. ಎರಡೂ ಸೇರಿ ಪ್ರಾದೇಶಿಕ ಪಕ್ಷವನ್ನು ಮುಗಿಸಲು ಪ್ರಯತ್ನಿಸುತ್ತಿವೆ. ಕುಮಾರಣ್ಣ ಇಲ್ಲದಿದ್ದರೆ ಬಿಜೆಪಿಯಲ್ಲಿ ಶಂಖ ಊದಲು ಜನ ಸಿಕ್ಕುತ್ತಿರಲಿಲ್ಲ. ಕುಮಾರಣ್ಣನ ಶಂಖ ರಾಜ್ಯದಲ್ಲಿ ಊದುತ್ತಿರುವುದು. ಕುಮಾರಣ್ಣ-ಕಾಂಗ್ರೆಸ್ ಮಾಡಿದ್ದರಿಂದ ಬಿಜೆಪಿಯವರು ಶಂಖ ಊದುತ್ತಿದ್ದಾರೆ. ದೇವಸ್ಥಾನದಲ್ಲಿ ಶಂಖ ಊದಿದರೆ ಹುಂಡಿಗೆ ಕಾಸು ಹಾಕುತ್ತಾರೆ. ಅದೇ ರೀತಿ ಬಿಜೆಪಿಯವರು ಒಂದು ಹುಂಡಿ ಇಟ್ಟುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮನೇ ಬಿದ್ದು ಹೋಗಿ ಬೀದಿಯಲ್ಲಿ ಮಲಗುತ್ತಿದ್ದಾರೆ. ಕಳೆದ ವರ್ಷ ಸುರಿದ ಮಳೆಗೆ ರಸ್ತೆಯಲ್ಲಿ ಬಿದ್ದಿರುವ ಒಂದೇ ಒಂದು ಗುಂಡಿ ಮುಚ್ಚಿಲ್ಲ. ಸರ್ಕಾರವನ್ನು ಒತ್ತಾಯಿಸುತ್ತೇನೆ. ಬೆಳೆ ನಷ್ಟಕ್ಕೆ ರೈತರು ಖರ್ಚು ಮಾಡಿರುವ ಹಣವನ್ನಾದರೂ ಕೊಡಿ. ರಾಜ್ಯದಲ್ಲಿ, ಪಶುಪಾಲನಾ ಇಲಾಖೆ, ಕೃಷಿ ಇಲಾಖೆ ತೋಟಗಾರಿಕೆ ಸತ್ತು ಹೋಗಿದೆ. ಬೆಳಗ್ಗೆ ಎದ್ದರೆ ಯಡಿಯೂರಪ್ಪ ಹೆಗಲ ಮೇಲೆ ಹಸಿರು ಶಾಲು, ಈಗ ಶಾಲು ಎಲ್ಲಿಟ್ಟಿದ್ದಾರೆ ಗೊತ್ತಿಲ್ಲ. ಯಡಿಯೂರಪ್ಪ ಸೂಟ್ ಕೇಸ್ ನಲ್ಲಿ ಶಾಲು ಇಟ್ಟಿರಬೇಕು. 2023ಕ್ಕೆ ಶಾಲು ತೆಗೆಯುತ್ತಾರಾ ನೋಡಬೇಕು. ಯಡಿಯೂರಪ್ಪ ಮಾಡಿರುವ ಘನಕಾರ್ಯಗಳನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ. ಪ್ರಧಾನಮಂತ್ರಿಗಳೇ ಇತ್ತ ಕಣ್ಣು ಬಿಡಿ. ಕೇಂದ್ರ ಸರ್ಕಾರದದಿಂದ ಒಂದು ತಂಡ ಕಳಿಸಬೇಕು. ಇಡೀ ರಾಜ್ಯವನ್ನು ವೀಕ್ಷಣೆ ಮಾಡಲಿ. ಮಂತ್ರಿಗಳ ಊರಲ್ಲೇ ಜನ ಬೀದಿಗೆ ಬಿದ್ದಿದ್ದಾರೆ. ಜನ ಉಗಿದ ಮೇಲೆ ಸಿಎಂ ವಿಸಿಟ್ ಮಾಡಿದ್ದಾರೆ ಎಂದು ರೇವಣ್ಣ ಗರಂ ಆದರು. ಇದನ್ನೂ ಓದಿ: ವಿರಾಟ್ ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ ಪ್ರಕರಣ- ಇಂಜಿನಿಯರ್ ಅರೆಸ್ಟ್
ಹಾಸನ: ನಾನು ಜೀವನದಲ್ಲಿ ಯಾರಿಗೂ ಕಿರುಕುಳ ನೀಡಿಲ್ಲ. ಹಾಗೇನಾದ್ರು ಮಾಡಿದ್ರೆ ಆ ತಾಯಿಯೇ ಶಿಕ್ಷೆ ನೀಡಲಿ ಎಂದು ಶಾಸಕ ಹೆಚ್‍ಡಿ.ರೇವಣ್ಣ ಹೇಳಿದ್ದಾರೆ.
ಹಾಸನಾಂಬೆ ದೇವಿ ಹುಂಡಿಯಲ್ಲಿ ಭಕ್ತರ ನಾನಾ ಬಗೆಯ ಬೇಡಿಕೆ ಪತ್ರಗಳು ಗಮನ ಸೆಳೆದವು. ಇದರಲ್ಲಿ ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಅವರನ್ನ ಹೊಳೆನರಸೀಪುರ ಶಾಸಕ ಸ್ಥಾನದಿಂದ ಬದಲಿಸಿ, ಭೂಗಳ್ಳರಿಂದ ನನ್ನ ಭೂಮಿ ವಾಪಸ್ ಕೊಡಿಸು, ಮಗಳಿಗೆ ಮದುವೆ ಮಾಡಿಸು, ಸರ್ಕಾರಿ ಕೆಲಸ ಕೊಡಿಸು ಹೀಗೆ ವಿಭಿನ್ನ ಪತ್ರಗಳು ಹಾಸನಾಂಬೆ ಹುಂಡಿಯಲ್ಲಿ ಸಿಕ್ಕಿ ಗಮನ ಸೆಳೆದವು. ಇದನ್ನೂ ಓದಿ:ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ
ತಮ್ಮ ಬಗ್ಗೆ ಪತ್ರ ಸಿಕ್ಕಿದ್ದ ಬಗ್ಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಜೀವನದಲ್ಲಿ ಯಾರಿಗೂ ಕಿರುಕುಳ ನೀಡಿಲ್ಲ. ಹಾಗೇನಾದರು ಮಾಡಿದ್ದರೆ ಆ ತಾಯಿಯೇ ಶಿಕ್ಷೆ ನೀಡಲಿ. ಯಾರಾದರೂ ಕಿಡಿಗೇಡಿಗಳು ಇರ್ತಾರಲ್ಲ ಅವರು ಇದನ್ನ ಮಾಡಿಸುತ್ತಾರೆ. ನಾವು ಮಂದೆ ಎರಡು ರಾಷ್ಟ್ರೀಯ ಪಕ್ಷಗಳನ್ನ ತೆಗೆಯೋವರೆಗೂ ಕೊರೊನಾ ಹೋಗಲ್ಲ ಅಂತ ಬರೆಸಿ ಹಾಕ್ಬೇಕಾಗುತ್ತೆ. ಹಾಗೇನಾದರು ಇದ್ದರೆ ದೇವಿ ತೆಗೆಯಲಿ ಆಕೆ ನೋಡಿ ಕೊಳ್ಳಲಿ. ನಮಗೇನು ನಾವು ಆಲೂಗೆಡ್ಡೆ ಹೊರವುದಕ್ಕೂ ರೆಡಿ, ಬೆಡ್ ಶೀಟ್ ಹೊದ್ಕಂಡ್ ಮಲಗೋಕೂ ರೆಡಿ ಎಂದಿದ್ದಾರೆ. ಇದನ್ನೂ ಓದಿ: ಹೆಚ್.ಡಿ ರೇವಣ್ಣ ಕುಟುಂಬಸ್ಥರು ಜನರ ಪ್ರಾಣ ಹಿಂಡ್ತಿದ್ದಾರೆ – ಹಾಸನಾಂಬೆಗೆ ಪತ್ರ
ಹಾಸನ: ಹೆಚ್.ಡಿ ರೇವಣ್ಣ ಕುಟುಂಬದವರು ಜನರ ಪ್ರಾಣ ಹಿಂಡುತ್ತಿದ್ದಾರೆ. ಅವರನ್ನು ಸೋಲಿಸಿಬಿಡು ಎಂದು ಹಾಸನಂಬೆ ದೇವಿಗೆ ಭಕ್ತರೊಬ್ಬರು ಪತ್ರ ಬರೆಯುವ ಮೂಲಕ ಕೋರಿಕೊಂಡಿದ್ದಾರೆ.
ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬೆ ದೇವಾಲಯಕ್ಕೆ ರಾಜ್ಯದ ಮೂಲೆ ಮೂಲಗಳಿಂದ ಜನರು ಆಗಮಿಸಿ ದೇವಿಯ ದರ್ಶನ ಪಡೆದು, ಪತ್ರ ಬರೆಯುವ ಮೂಲಕ ತಮ್ಮ ಕೋರಿಕೆಗಳನ್ನು ನೆರವೇರಿಸುವಂತೆ ಬೇಡಿಕೊಳ್ಳುತ್ತಾರೆ. ಇದನ್ನೂ ಓದಿ: ಪದ್ಮಶ್ರೀ ಅಲ್ಲ, ಪುನೀತ್ ಅಮರಶ್ರೀ: ಶಿವರಾಜ್‍ಕುಮಾರ್
ಪ್ರತಿವರ್ಷದಂತೆ ಈ ವರ್ಷವು ಭಕ್ತರು ಅನೇಕ ಪತ್ರಗಳನ್ನು ದೇವರಿಗೆ ಬರೆದು ಪ್ರಾರ್ಥಿಸಿದ್ದಾರೆ. ಹಲವಾರು ಪತ್ರಗಳ ಮಧ್ಯೆ ಭಕ್ತರೊಬ್ಬರು, ತಾಯಿ ಹಾಸನಾಂಬೆ, ನಿನ್ನ ಕೃಪೆಯಿಂದ ಹೊಳೆನರಸಿಪುರದ ಎಂಎಲ್‍ಎ ಬದಲಾಗಬೇಕು. ಜನರನ್ನು ಕಷ್ಟದಿಂದ ಪಾರುಮಾಡಬೇಕು. ಹೆಚ್. ಡಿ ರೇವಣ್ಣ ಕುಟುಂಬದ ಸದಸ್ಯರು ಜನರ ಪ್ರಾಣ ಹಿಂಡುತ್ತಿದ್ದಾರೆ. ಅವರ ಕುಟುಂಬದವರೆಲ್ಲರನ್ನು ಸೋಲಿಸಿ ಬಿಡು ತಾಯಿ. ಅವರು ಮುಂದೆ ಯಾರನ್ನು ಬರಲು ಬಿಡುತ್ತಿಲ್ಲ. ಒಳ್ಳೆಯದು ಮಾಡು ತಾಯಿ ಎಂದು ಹೆಚ್.ಎನ್ ಪುರ ಜನತೆ ಪರವಾಗಿ ಬರೆದಿದ್ದಾರೆ. ಇದನ್ನೂ ಓದಿ: ಹೊಸ ಸಿನಿಮಾ ಅನೌನ್ಸ್ ಮಾಡಿದ ಬಾಹುಬಲಿ ಬೆಡಗಿ ಅನುಷ್ಕಾ ಶೆಟ್ಟಿ
ಮತ್ತೋರ್ವ ಭಕ್ತ, ಅಮ್ಮ ಆ ಧರ್ಮಾತ್ಮ ಪುನೀತ್ ರಾಜ್‍ಕುಮಾರ್ ಸಾಯುವುದರ ಬದಲು, ಈ ರಾಜಕೀಯದಲ್ಲಿ ನಾಟಕವಾಡಿ ಅವರು ತಿಂದು, ಅವರ ಮರಿಮೊಮ್ಮಕ್ಕಳು ತಿಂದು ತೇಗಿದರು ಕರಗದ ಆಸ್ತಿ ಮಾಡಿದ್ದಾರಲ್ಲ ಅವರು ಸಾಯಬೇಕಿತ್ತು. ಸಭೆಗಳಲ್ಲಿ ನಾಟಕವಾಡುತ್ತಾರಲ್ಲಾ ಅಂಥಾ ಬೇ.. ರಾಜಕಾರಣಿಗಳನ್ನು ಸಾಯಿಸು. ಆಗ ನಮ್ಮ ಕರ್ನಾಟಕ ರಾಜ್ಯ ಮುಂದುವರಿಯುತ್ತದೆ. ಇದನ್ನೂ ಓದಿ: ಭ್ರಷ್ಟ ರಾಜಕಾರಣಿಗಳು ಸಾಯಬೇಕಿತ್ತು – ಹಾಸನಾಂಬೆಗೆ ಪತ್ರ ಬರೆದ ಅಪ್ಪು ಅಭಿಮಾನಿ
ಬಡವರು ಕರ್ನಾಟಕದಲ್ಲಿ ಸುಖವಾಗಿರುತ್ತಾರೆ. ನಿನ್ನೆ, ಮೊನ್ನೆ ಬಂದ ಈ ಕೆಲ ರಾಜಕಾರಣಿಗಳು ಕೋಟಿ ಕೋಟಿ ಆಸ್ತಿ ಮಾಡಿಕೊಂಡು ಬೀಗುತ್ತಾರಲ್ಲ ಅವರಿಗೆ ಕರ್ಮದ ಸಾವು ಬರಲಿ. ಪಾಪ ಪುನೀತ್ ಇದ್ದಿದ್ದರೆ ನಾಲ್ಕು ಜನ ನೆಮ್ಮದಿಯಿಂದ ಇರುತ್ತಿದ್ದರು ತಾಯಿ ಎಂದು ಭಕ್ತ ಪತ್ರದಲ್ಲಿ ಬರೆದಿದ್ದಾನೆ.
ಹಾಸನ: ಜಿಲ್ಲೆಯ ಜನ ಜೆಡಿಎಸ್‍ನಿಂದ ಸ್ವಾತಂತ್ರ್ಯ ಪಡೆಯಬೇಕಿದ್ದು, ಅದರಲ್ಲೂ ಹೊಳೆನರಸೀಪುರ ಕ್ಷೇತ್ರದ ಜನರಿಗೆ ಹೆಚ್.ಡಿ ರೇವಣ್ಣ ಶಾಸಕರಾದ ಬಳಿಕ ವೈಯಕ್ತಿಕ ಸ್ವಾತಂತ್ರ್ಯವೇ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ಕಿಡಿಕಾರಿದ್ದಾರೆ.
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ, ಹೆಚ್‍ಡಿಕೆ ಹೇಳಿಕೆ ವಿರೋಧಿಸಿ, ನಾನು ರೇವಣ್ಣ ವಿರುದ್ಧ ಸ್ಪರ್ಧೆ ಮಾಡಿದ್ದರಿಂದ ಇದನ್ನು ಹೇಳುತ್ತಿದ್ದೇನೆ. ಅಲ್ಲಿಯ ಜನ ಹೆದರಿಕೊಂಡಿರೋದು ನಿಜ. ಈ ಹಿಂದೆ ಆ ಕ್ಷೇತ್ರದ ಸಚಿವರಾಗಿದ್ದ ಎಂಬಿ.ಪಾಟೀಲ್ ಬಳಿ ಹೋಗಿದ್ದೇವು. ರೇವಣ್ಣ ವಿರುದ್ಧ ಯಾರು ಮಾತನಾಡುತ್ತಾರೆ ಅವರ ಮೇಲೆ ರೌಡಿಶೀಟರ್ ಕೇಸ್ ಹಾಕಿಸುತ್ತಿದ್ದಾರೆ ಅದನ್ನು ತಪ್ಪಿಸಿ ಎಂದು ಮನವಿ ಮಾಡಿಕೊಂಡಿದ್ದೇವು. ಆಗ ಎಂಬಿ.ಪಾಟೀಲ್ ಎಸ್‍ಪಿಗೆ ಫೋನ್ ಮಾಡಿ ಆ ರೀತಿ ಮಾಡಬೇಡಿ ಎಂದಿದ್ದರು ಆದರೂ ಪ್ರಯೋಜನ ಆಗಲಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಎಲ್ಲಕ್ಕಿಂತ ಮುಖ್ಯವಾಗಿ ಬೈಗಮಿ – ಎಚ್‌ಡಿಕೆಯ ದ್ವಿಪತ್ನಿತ್ನ ವಿಚಾರ ಪ್ರಸ್ತಾಪಿಸಿ ಕಾಲೆಳೆದ ಬಿಜೆಪಿ
ಹೊಳೆನರಸೀಪುರದಲ್ಲಿ ಮುಕ್ತ ಚುನಾವಣೆ ನಡೆಯಲ್ಲ. ಇದನ್ನು ನಾನು ಅಭ್ಯರ್ಥಿಯಾಗಿದ್ದಾಗ ಅನುಭವಿಸಿದ್ದೇನೆ. ಸುಮಾರು 70 ಹಳ್ಳಿಗಳಲ್ಲಿ ಯಾವ ಪೊಲೀಸರು ಬರಲ್ಲ. ಈ ಬಗ್ಗೆ ಯಾವ ಎಲೆಕ್ಷನ್ ಕಮಿಟಿಗೆ ದೂರು ಕೊಟ್ಟರೂ ಏನು ಆಗಲ್ಲ. ಜೆಡಿಎಸ್ ಪಕ್ಷದವರು ಜನ ಯಾರಿಗೆ ವೋಟ್ ಹಾಕ್ತಾರೆ ಎಂದು ಬೂತ್ ಬಳಿ ನಿಂತು ನೋಡುತ್ತಾರೆ. ಹೀಗಾಗಿ ಜನ ತಮಗೆ ಬೇಕಾದವರಿಗೆ ವೋಟ್ ಹಾಕಲು ಹೆದರುತ್ತಾರೆ. ಈ ಪರಿಸ್ಥಿರಿ ಸರಿಯಾಗಬೇಕಾದರೆ ನಮ್ಮ ಕಾಂಗ್ರೆಸ್ ರಾಜ್ಯ ನಾಯಕರು ಜಿಲ್ಲೆಯಲ್ಲಿ ಪ್ರವಾಸ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ರೇವಣ್ಣ ವಿರುದ್ಧ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಬಾಗೂರು ಮಂಜೇಗೌಡ ಸೋಲನುಭವಿಸಿದ್ದರು. ಆ ಬಳಿಕ ಇದೀಗ ರೇವಣ್ಣ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ್ ಪ್ರವಾಹಪೀಡಿತ ಭಾಗದಲ್ಲಿ 10 ಕನ್ನಡಿಗರಿಗೆ ಸಂಕಷ್ಟ
– ಸ್ವಂತ ಅಣ್ಣ ರೇವಣ್ಣನನ್ನೇ ಕುಮಾರಸ್ವಾಮಿ ಸಹಿಸಿಕೊಳ್ಳಲಿಲ್ಲ – ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ, ಜೆಡಿಎಸ್ ಹೈಕಮಾಂಡ್ ಪದ್ಮನಾಭ ನಗರದಲ್ಲಿ – RSS ವಿರುದ್ಧ ಮಾತಾನಾಡುತ್ತಿರುವುದು ಅಲ್ಪಸಂಖ್ಯಾತರ ಓಲೈಕೆಗಾಗಿ
ಬೆಂಗಳೂರು: ಕುಮಾರಸ್ವಾಮಿ ಯಾರನ್ನು ಸಹಿಸಿಕೊಳ್ಳುವುದಿಲ್ಲ, ಅವರು ಸ್ವಂತ ಅಣ್ಣ ರೇವಣ್ಣನನ್ನೇ ಸಹಿಸಿಕೊಳ್ಳಲಿಲ್ಲ. ರೇವಣ್ಣ ಅವರು ಡಿಸಿಎಂ ಆಗುವುದನ್ನು ತಪ್ಪಿಸಿದ್ದಾರೆ ಎಂದು ಶಾಸಕ ಜಮೀರ್ ಅಹಮ್ಮದ್ ಖಾನ್, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧವಾಗಿ ಬಾಂಬ್ ಸಿಡಿಸಿದ್ದಾರೆ.
ಕುಮಾರಸ್ವಾಮಿ RSS ವಿರುದ್ಧ ಮಾತಾನಾಡುತ್ತಿರುವುದು ಅಲ್ಪಸಂಖ್ಯಾತರ ಓಲೈಕೆಗಾಗಿ ಆಗಿದೆ. ಅವರು ಯಾರನ್ನ ಬೆಳೆಸಿದ್ದಾರೆ? ಒಬ್ಬ ಒಕ್ಕಲಿಗರನ್ನೂ ಬೆಳೆಸಲಿಲ್ಲ. ಸ್ವಂತ ಅಣ್ಣ ರೇವಣ್ಣನನ್ನೇ ಕುಮಾರಸ್ವಾಮಿ ಸಹಿಸಿಕೊಳ್ಳಲಿಲ್ಲ, ರೇವಣ್ಣ ಡಿಸಿಎಂ ಆಗ್ತಾರೆ ಅಂತ ಬಿಜೆಪಿಗೆ ಅಧಿಕಾರ ಕೊಡಲಿಲ್ಲ ಎಂದು ಕುಮಾರಸ್ವಾಮಿ ವಿರುದ್ಧವಾಗಿ ಗಂಭಿರ ಆರೋಪವನ್ನು ಮಾಡಿದ್ಧಾರೆ.
20-20 ಸರ್ಕಾರದಲ್ಲಿ ಅವರು ಬಿಜೆಪಿಗೆ ಯಾಕೆ ಅಧಿಕಾರ ಬಿಟ್ಟುಕೊಡಲಿಲ್ಲ ಗೊತ್ತಾ? ಬಿಜೆಪಿಗೆ ಬಿಟ್ಟುಕೊಡಬೇಕು ಅಂತಲ್ಲ ಬಿಜೆಪಿಗೆ ಅಧಿಕಾರ ಬಿಟ್ಟುಕೊಟ್ಟರೆ ರೇವಣ್ಣ ಡಿಸಿಎಂ ಆಗುತ್ತಾರೆ ಅನ್ನೋದನ್ನ ಸಹಿಸಿಕೊಳ್ಳೋಕೆ ಕುಮಾರಸ್ವಾಮಿಗೆ ಆಗಲಿಲ್ಲ. ಮುಸ್ಲಿಂ ಆಗಿ ನಾನೇ ಹೇಳಿದೆ ಆಡಿದ ಮಾತಿನಂತೆ ಬಿಜೆಪಿಯವರಿಗೆ ಅಧಿಕಾರ ಬಿಟ್ಟು ಕೊಡೋಣ ಎಂದಿದ್ದೆ. ಅವರು ಕೇಳಲಿಲ್ಲ ಅದನ್ನ ಈಗ ಅನುಭವಿಸುತ್ತಿದ್ದಾರೆ ಎಂದು ಕುಮಾಸ್ವಾಮಿ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೊದಲ ಡೋಸ್ ಪಡೆಯುವಾಗ ಇದ್ದ ಉತ್ಸಾಹ 2ನೇ ಡೋಸ್‍ಗೆ ಠುಸ್
ಸಿದ್ದರಾಮಯ್ಯ ಜೆಡಿಎಸ್‍ನಲ್ಲಿ ಇದ್ದಾಗ ಜೆಡಿಎಸ್ 58 ಸೀಟ್ ಗೆದ್ದಿತ್ತು. ಅಮೇಲೆ 28, 40, 37 ಸೀಟು ಗೆದ್ದಿದ್ದಾರೆ ಯಾವಾಗಲಾದರು 58ಕ್ಕೆ ರೀಚ್ ಆಯ್ತ, ಸಿದ್ದರಾಮಯ್ಯ ಬಿಟ್ಟಮೇಲೆ? ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ ಇದೆ. ಜೆಡಿಎಸ್ ಹೈ ಕಮಾಂಡ್ ಪದ್ಮನಾಭ ನಗರದಲ್ಲೇ ಇದೆ ಎನ್ನುತ್ತಾರೆ. ಇಲ್ಲೇ ಘೋಷಣೆ ಮಾಡಲಿ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಯನ್ನ ಸಿಎಂ ಮಾಡುತ್ತೇವೆ ಎಂದು ಘೋಷಣೆ ಮಾಡಲಿ. ನನ್ನನ್ನ ಜೆಡಿಎಸ್ ನಿಂದ ಸಿಎಂ ಮಾಡೋದಾದರೆ ಮೊದಲು ದೇವೇಗೌಡರು ಕುಮಾರಸ್ವಾಮಿ ಪ್ರೆಸ್ ಮೀಟ್ ಮಾಡಿ ಹೇಳಲಿ ಬಹಿರಂಗವಾಗಿ ಆಮೇಲೆ ಯೋಚನೆ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: 2023 ರಲ್ಲಿ ಜೆಡಿಎಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೆ, ಇದು ದೈವದ ಆಟ: ಶರವಣ
ಕುಮಾರಸ್ವಾಮಿ ಎರಡು ಕಡೆ ನಿಲ್ಲುವ ಅಗತ್ಯ ಏನಿತ್ತು? ರಾಮನಗರ ಮುಸ್ಲಿಂ ಅಭ್ಯರ್ಥಿಗೆ ಬಿಟ್ಟು ಕೊಡಬೇಕಿತ್ತು. ಬೈ ಎಲೆಕ್ಷನ್‍ನಲ್ಲೂ ಅದರೂ ಬೇರೆ ಅಭ್ಯರ್ಥಿ ನಿಲ್ಲಲು ಹೇಳಬೇಕಿತ್ತು. ರಾಮನಗರದಲ್ಲಿ ಮುಸ್ಲಿಂ ಅಭ್ಯರ್ಥಿ ಈ ಹಿಂದೆ ಗೆದ್ದಿದ್ದರು. ಅನಿತಾಕ್ಕನಿಗೆ ಕೊಡದೇ ಮುಸ್ಲಿಂ ಅವರಿಗೆ ಕೊಡಬೇಕಿತ್ತು. ಮುಸ್ಲಿಂ ಕಾಳಜಿ ತೋರಿಸಬೇಕಿತ್ತು. ಕುಮಾರಸ್ವಾಮಿ ಸ್ವಂತ ಅಣ್ಣಾ ರೇವಣ್ಣ ಸಹಿಸಿಕೊಳ್ಳಲಿಲ್ಲ. ಯಡಿಯೂರಪ್ಪಗೆ ಅಧಿಕಾರ ಬಿಟ್ಟು ಕೊಟ್ರೆ ರೇವಣ್ಣ ಡಿಸಿಎಂ ಆಗುತ್ತಾನೆ ಅಂತ ಅಧಿಕಾರ ಬಿಟ್ಟು ಕೊಡಲಿಲ್ಲ. ದೇವೇಗೌಡರು ಜಾತ್ಯತೀತ ನಾಯಕರಾಗಿದ್ದಾರೆ. ಕುಮಾರಸ್ವಾಮಿ ದೇವೇಗೌಡರಲ್ಲಿ ಒಂದು ಪರ್ಸೆಂಟ್ ಸಹ ಇಲ್ಲ. ಸಿಎಂ ಇಬ್ರಾಹಿಂ ಒಳ್ಳೆಯ ಭಾಷಣಕಾರರಾಗಿದ್ದಾರೆ. ಸಿದ್ದರಾಮಯ್ಯ ಅವರನ್ನ ಬೆಳೆಸಿದ್ರು ಟಿಕೆಟ್ ಕೊಟ್ರೆ ಮೂರನೇ ಸ್ಥಾನಕ್ಕೆ ಹೋದ್ರು. ಒಂದು ಕಾಲು ಕಾಂಗ್ರೆಸ್ ಒಂದು ಕಾಲು ಜೆಡಿಎಸ್‍ಲ್ಲಿ ಇಟ್ಟಿದ್ದಾರೆ. ಸಿಎಂ ಇಬ್ರಾಹಿಂ ಟಿಪ್ಪು ಜಯಂತಿ ವಿರೋಧ ಮಾಡಿದವರು. ಹಾಗಾದ್ರೆ ಟಿಪ್ಪು ಜಯಂತಿಯಲ್ಲಿ ಯಾಕೆ ಭಾಗವಹಿಸಿದ್ರು ಎಂದು ಪ್ರಶ್ನೆ ಮಾಡಿದ್ಧಾರೆ. ಇದನ್ನೂ ಓದಿ: ಕುಮಾರಸ್ವಾಮಿ ಒಬ್ಬ ಡೀಲರ್: ಜಮೀರ್ ವಾಗ್ದಾಳಿ
ಜಾಫರ್ ಷರೀಫ್ ಅವರನ್ನ ರಾಜಕೀಯವಾಗಿ ಕೊಲೆ ಮಾಡಿದ್ರು. ಸಿಎಂ ಇಬ್ರಾಹಿಂ ಅವರನ್ನ ಅವರ ವಿರುದ್ಧ ನಿಲ್ಲಿಸಿ ಸೋಲಿಸಿದರು. ಜಾಫರ್ ಷರಿಫ್ ಬಗ್ಗೆ ಕಾಳಜಿ ತೋರಿಸಿದ್ರಾ? ಅವರ ಮೊಮ್ಮಗ ಹೆಬ್ಬಾಳದಲ್ಲಿ ಸೋಲಿಸಿದವರು ಜೆಡಿಎಸ್ ಅವರೇ ಆಗಿದ್ದಾರೆ. ಅವನ ವಿರುದ್ಧ ಮುಸ್ಲಿಂ ಅಭ್ಯರ್ಥಿ ಹಾಕಿ ಸೋಲಿಸಿದ್ದಾರೆ. ಫಾರೂಖ್ ಅವರನ್ನ ಡಿಸಿಎಂ ಮಾಡಿ ಗೃಹ ಮಂತ್ರಿ ಮಾಡುತ್ತೇವೆ ಎಂದು 2018 ಪ್ರಚಾರ ಸಮಯದಲ್ಲಿ ಹೇಳಿದ್ದರು ಮಾಡಿದ್ರಾ? ಗೆದ್ದ ಬಳಿಕ ಪರಿಷತ್ ಸದಸ್ಯ ಮಾಡಿದ್ದೇ ಜಾಸ್ತಿಯಾಗಿದೆ. ಫಾರೂಕ್ ಕಾಲಿಗೆ ಬಿದ್ದು ಕೇಳಿದ್ರೂ ಮಾಡಲಿಲ್ಲ, ಇದು ಮುಸ್ಲಿಂರ ಮೇಲೆ ಇರೋ ಕಾಳಜಿಯಾಗಿದೆ ಎಂದು ಕುಮಾರಸ್ವಾಮಿ ವಿರುದ್ಧವಾಗಿ ಜಮೀರ್ ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಅಗರ ಕೆರೆ ರಾಜಕಾಲುವೆಗಳು, ಸುತ್ತಲಿನ ಲೇಔಟ್ ಚರಂಡಿ ದುರಸ್ತಿಗೆ ಶೀಘ್ರ ಕ್ರಮ: ಬೊಮ್ಮಾಯಿ
ಹಾಸನ: ಜಮೀರ್ ಅಹ್ಮದ್‍ಗೆ ನಮ್ಮ ಸುದ್ದಿ ಬೇಡ. ಕುಮಾರಸ್ವಾಮಿ ರೇವಣ್ಣ ಹೊಡೆದಾಡುತ್ತಾರೆ ಎಂದು ಬಿಜೆಪಿ, ಕಾಂಗ್ರೆಸ್ ಪಕ್ಷದವರು ಕನಸಲ್ಲಿ ಕಂಡರೂ ಆಗಲ್ಲ ಎಂದು ಜಮೀರ್ ಹೇಳಿಕೆಗೆ ಜೆಡಿಎಸ್ ಮುಖಂಡ ಹೆಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.
ರೇವಣ್ಣ ಉಪಮುಖ್ಯಮಂತ್ರಿ ಆಗುವುದದನ್ನೇ ಕುಮಾರಸ್ವಾಮಿ ಸಹಿಸಲಿಲ್ಲ ಎಂಬ ಜಮೀರ್ ಹೇಳಿಕೆಗೆ ಹಾಸನದಲ್ಲಿ ಆಕ್ರೋಶ ಹೊರಹಾಕಿದ ಅವರು, ಪ್ರಾದೇಶಿಕ ಪಕ್ಷವಾದ ನಾವು ಒಬ್ಬರು ಸಾಬ್ರನ್ನು ಅಧ್ಯಕ್ಷರನ್ನಾಗಿ ಮಾಡಿ, ಕೇಂದ್ರದ ಮಂತ್ರಿ ಮಾಡಿದ್ದೇವೆ. ಇವರು ಇಬ್ರಾಹಿಂ ಬಳಿ ಕೆಲಸ ಮಾಡಿಸಿಕೊಂಡು ಎಂಎಲ್‍ಸಿ ಮಾಡಲು ಎಷ್ಟು ಗೋಳು ಹೊಯ್ದುಕೊಂಡಿದ್ದಾರೆ ಗೊತ್ತು. ಅವರಿಗೆ ಒಂದು ಮಾತು ಹೇಳ್ತೀನಿ, ಅವರಿಗೆ ನಮ್ಮ ಸುದ್ದಿ ಬೇಡ. ಕುಮಾರಸ್ವಾಮಿ ರೇವಣ್ಣ ಹೊಡೆದಾಡುತ್ತಾರೆ ಎಂದು ಬಿಜೆಪಿ, ಕಾಂಗ್ರೆಸ್ ಅವರು ಕನಸಲ್ಲಿ ಕಂಡರೂ ಆಗಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: 2023 ರಲ್ಲಿ ಜೆಡಿಎಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೆ, ಇದು ದೈವದ ಆಟ: ಶರವಣ
ಉಪ ಮುಖ್ಯಮಂತ್ರಿ ಆಗಬೇಕು ಎಂದರೆ ನಾನು ಕುಮಾರಸ್ವಾಮಿ ಕುಳಿತು ಮಾತನಾಡುತ್ತೇವೆ. ಕುಮಾರಣ್ಣಂದು ಏನು, ರೇವಣ್ಣಂದು ಏನು ಗೊತ್ತಿದೆ? ಕಾಲ ಬಂದಾಗ ಕುಮಾರಣ್ಣ ಸ್ಥಾನಮಾನ ಕೊಡುತ್ತಾನೆ. ಆದರೆ ನನ್ನನ್ನು ಉಪಮುಖ್ಯಮಂತ್ರಿ ಮಾಡೋಕೆ ಕಾಂಗ್ರೆಸ್‍ನವರು ಬಿಡಲಿಲ್ಲ. 17 ಜನರನ್ನು ಕರೆದುಕೊಂಡು ಹೋದರು. ಕುಮಾರಸ್ವಾಮಿ ಮಗನನ್ನು, ದೇವೇಗೌಡರನ್ನು ಸೋಲಿಸಿದ್ರು ಎಂದು ರೇವಣ್ಣ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕುಮಾರಸ್ವಾಮಿ ಒಬ್ಬ ಡೀಲರ್: ಜಮೀರ್ ವಾಗ್ದಾಳಿ
ಹಾಸನ: ಯಾವನ್ ಅವನು, ಹೊರಗಡೆ ಎತ್ತಾಕ್ರಿ ಹೇಳ್ತೀನಿ ಎಂದು ತಾವು ಮಾತನಾಡುವಾಗ ಪದೇ, ಪದೇ ಮಾತನಾಡುತ್ತ ತೊಂದರೆ ಕೊಡುತ್ತಿದ್ದ ವ್ಯಕ್ತಿಯ ವಿರುದ್ಧ ಜೆಡಿಎಸ್ ನಾಯಕ ಹೆಚ್‍ಡಿ.ರೇವಣ್ಣ ಆಕ್ರೋಶ ಹೊರಹಾಕಿದ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನದ ಹೆಚ್.ಆಲದಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಹೆಚ್‍ಡಿ.ರೇವಣ್ಣ ಆಗಮಿಸಿದ್ದರು. ಈ ವೇಳೆ ಅವರು ಮಾಧ್ಯಮದವರ ಜೊತೆ ಪಾಣಿ, ಇನ್ಕಮ್ ಸರ್ಟಿಫಿಕೇಟ್, ಖಾಸಗಿ ಶಾಲೆ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬ ಪದೇ ಪದೇ ರೇವಣ್ಣ ಮಾತಿಗೆ ಅಡ್ಡಿಪಡಿಸುತ್ತಿದ್ದ. ಈ ವೇಳೆ ತಾಳ್ಮೆ ಕಳೆದುಕೊಂಡ ಹೆಚ್.ಡಿ.ರೇವಣ್ಣ, ಯಾವನು ಅವನು ಎತ್ತಿಹಾಕಿ ಎಂದರು. ಇದನ್ನೂ ಓದಿ: ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ – ಸಿದ್ದರಾಮಯ್ಯ ವಿರುದ್ಧ ಹೆಚ್‍ಡಿಕೆ ಟ್ವೀಟ್ ವಾರ್
ಇದಕ್ಕೆ ಪ್ರತಿಯಾಗಿ ಸ್ಥಳೀಯ ವ್ಯಕ್ತಿ ನನ್ನೇ ಎತ್ತಾಕಿ ಅಂತೀರಾ ಎಂದು ಮರು ಪ್ರಶ್ನೆ ಮಾಡಿದ್ದ. ಅದಕ್ಕೆ ರೇವಣ್ಣ, ನಾನು ಹಳ್ಳಿ ರೈತರ ಬಗ್ಗೆ ಮಾತನಾಡುತ್ತಿದ್ದೇನೆ, ಈ ವೇಳೆ ತಾಳ್ಮೆಯಿಂದ ಇರಬೇಕು ಎಂದು ಸೂಚಿಸಿದರು. ಇದಕ್ಕೂ ಬಗ್ಗದ ಆತ ನಾನೂ ಕೂಡ ರೈತನ ಮಗ ಎಂದು ಮಧ್ಯೆ, ಮಧ್ಯೆ ಮಾತಾಡುತ್ತಲೇ ಇದ್ದ. ಇದರಿಂದ ತಾಳ್ಮೆ ಕಳೆದುಕೊಂಡ ರೇವಣ್ಣ, ನೀವೇ ಎತ್ತಾಕ್ತಿರಾ, ಇಲ್ಲಾ ನಾನೇ ಎತ್ತಿ ಹಾಕ್ಲಾ ಎಂದು ಪೊಲೀಸರಿಗೆ ಗದರಿಸದರು. ಈ ವೇಳೆ ವ್ಯಕ್ತಿಯನ್ನು ದೂರ ಎಳೆದೊಯ್ಯುತ್ತಿದ್ದ ಪೊಲೀಸರು ಮತ್ತು ಸ್ಥಳೀಯರನ್ನು ನೋಡಿದ ರೇವಣ್ಣ, ಆ ವ್ಯಕ್ತಿಯನ್ನು ವಾಪಸ್ ಕರೆಸಿ ಸಮಾಧಾನದಿಂದ ವರ್ತಿಸುವಂತೆ ತಿಳಿ ಹೇಳಿದರು. ಇದನ್ನೂ ಓದಿ: ಮಾಜಿ ಮಂತ್ರಿ ಎನ್.ಎಚ್ ಶಿವಶಂಕರರೆಡ್ಡಿ ವಿರುದ್ಧ ನಿಂದನೆ ಆರೋಪ -ಆಡಿಯೋ ವೈರಲ್
ಹಾಸನ: ನಮಗೆ ವೈರಿಗಳ ಕಾಟ ಹೆಚ್ಚು. ದೇವರ ದರ್ಶನ ಮಾಡದಿದ್ರೆ ವೈರಿಗಳ ಕಾಟಕ್ಕೆ ಬದುಕಲು ಆಗಲ್ಲ. ಹೀಗಾಗಿ ಬೆಳಗ್ಗೆ ಎದ್ದು ದೇವರ ದರ್ಶನ ಮಾಡುತ್ತೇನೆ ಎಂದು ಮಾಜಿ ಸಚಿವ ಹೆಚ್‍ಡಿ.ರೇವಣ್ಣ ಹೇಳಿದ್ದಾರೆ. ಇದನ್ನೂ ಓದಿ:ಉಪ ಚುನಾವಣೆ ಗೆಲ್ಲುವ ವಿಶ್ವಾಸ ಇದೆ: ದೇವೇಗೌಡ
ಹಾಸನದಲ್ಲಿ ಮಾತನಾಡಿದ ಅವರು, ತಾವು ಯಾಕೆ ದೇವರ ಮೇಲೆ ಅಪಾರ ನಂಬಿಕೆ ಇಟ್ಟಿದ್ದೇವೆ ಎಂಬ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ದೇವರ ದರ್ಶನ ಮಾಡದೆ ಹೋದರೆ ನಮಗೆ ವೈರಿಗಳ ಕಾಟ. ವೈರಿಗಳ ಕಾಟದಲ್ಲಿ ಬದುಕಲು ಆಗಲ್ವಲಾ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೆಜಿಎಫ್ 2 ಚಿತ್ರೀಕರಣದ ಫೋಟೋ ವೈರಲ್
ಬೆಳಿಗ್ಗೆ ಎದ್ದು ಲಕ್ಷ್ಮೀನರಸಿಂಹ ನೋಡಿಕೊಂಡು ಬಂದೆ. ಲಕ್ಷ್ಮೀನರಸಿಂಹ ಅಂದರೆ ಯಾರೇ ಏನೇ ಮಾಟ ಮಾಡಿದರೆ ಅವರಿಗೆ ರಿವರ್ಸ್ ಆಗುತ್ತದೆ. ಇವತ್ತು ಸಾಯಂಕಾಲ ಚಾಮುಂಡಿ ಬೆಟ್ಟಕ್ಕೆ ಹೋಗಿ ಬರೋಣ ಅಂಥಾ ಮಾಡಿದ್ದೀನಿ ಎಂದು ರೇವಣ್ಣ ತಿಳಿಸಿದ್ದಾರೆ. ಇದನ್ನೂ ಓದಿ: ಡಿಎಪಿ,ಪೊಟ್ಯಾಷ್‍ಗಾಗಿ ರಾಜ್ಯದಿಂದ ಕೇಂದ್ರಕ್ಕೆ ಬೊಮ್ಮಾಯಿ ಮನವಿ
ಹಾಸನ: ಮಾನ ಮರ್ಯಾದೆ ಇದ್ದರೆ ಕಾಂಗ್ರೆಸ್ ಬಾಗಿಲು ಮುಚ್ಚಿ, ಹೊಸ ಕಾಂಗ್ರೆಸ್ ಸ್ಥಾಪನೆ ಮಾಡಲಿ ಎಂದು ಮಾಜಿ ಸಚಿವ ಹೆಚ್‍ಡಿ ರೇವಣ್ಣ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಹರೂ ಕಾಲದ ಕಾಂಗ್ರೆಸ್ ಈಗಿಲ್ಲ. ಕೋಮುವಾದಿ ಜೊತೆ ಹೋಗಲ್ಲ ಅಂತ ಮಂಡ್ಯದಲ್ಲಿ ಕುಮಾರಣ್ಣನ ಮಗನನ್ನು ತೆಗೆದ್ರು. ತುಮಕೂರಿನಲ್ಲಿ ಕೋಮುವಾದಿ ಪಕ್ಷದ ಜೊತೆ ಸೇರಿ ದೇವೇಗೌಡರನ್ನ ಸೋಲಿಸಿದ್ರು ಎಂದರು. ಇದನ್ನೂ ಓದಿ: ಮಾನ ಮಾರ್ಯಾದೆ ಇಲ್ಲದವರ ಬಗ್ಗೆ ನಾನು ಮಾತನಾಡುವುದಿಲ್ಲ: ರಮೇಶ್ ಕುಮಾರ್
ಕಾಂಗ್ರೆಸ್ಸಿನವರು ಮಲ್ಲಿಕಾರ್ಜುನ ಖರ್ಗೆಯವರಿಗೆ ಎಂತಹ ಸ್ಥಿತಿ ತಂದರು. ಕಾಂಗ್ರೆಸ್ ನವರು ಕಾಂಗ್ರೆಸ್ ನವರನ್ನೇ ಸೋಲಿಸುತ್ತಾರೆ. 2023 ರ ಚುನಾವಣೆಯಲ್ಲೂ ಕಾಂಗ್ರೆಸ್ ನವರನ್ನ ಕಾಂಗ್ರೆಸ್ ನವರೇ ಸೋಲಿಸುತ್ತಾರೆ. ಕಾಂಗ್ರೆಸ್ ಗೆ ಇಂತಹ ಸ್ಥಿತಿ ಬಂತಲ್ಲಪ್ಪ ಅಂತ ನನಗೆ ವ್ಯಥೆ ಆಗ್ತಿದೆ ಎಂದು ವ್ಯಂಗ್ಯವಾಡಿದ್ರು.
ಇದೇ ವೇಳೆ ಜೆಡಿಎಸ್ ಪಕ್ಷ ತೊರೆಯುತ್ತಿರುವವರ ಬಗ್ಗೆ ಮಾತನಾಡಿ, ಜೆಡಿಎಸ್ ಪಕ್ಷ ತೊರೆದು ಹೋಗುವವರು ಹೋಗಲಿ, ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ರು.