Tag: HD Revanna

  • ಪರ್ಸೆಂಟೇಜ್ ಬಗ್ಗೆ ಟೈಂ ಬಂದಾಗ ಹೇಳ್ತಿನಿ: ಹೆಚ್.ಡಿ.ರೇವಣ್ಣ

    ಪರ್ಸೆಂಟೇಜ್ ಬಗ್ಗೆ ಟೈಂ ಬಂದಾಗ ಹೇಳ್ತಿನಿ: ಹೆಚ್.ಡಿ.ರೇವಣ್ಣ

    ಹಾಸನ: ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ತೇರಿನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಭಾಗಿಯಾಗಿದ್ದರು. ಈ ವೇಳೆ ಚನ್ನಕೇಶವಸ್ವಾಮಿಗೆ ಪೂಜೆ ಸಲ್ಲಿಸಿ ರಾಜ್ಯದ ಜನತೆಗೆ, ರೈತರಿಗೆ ಒಳ್ಳೆಯ ಆರೋಗ್ಯ ಕೊಡಲಿ ಎಂದು ಪೂಜೆ ಸಲ್ಲಿಸಿದರು.

    ಪೂಜೆಯಲ್ಲಿ ಭಾಗಿಯಾದ ನಂತರ ಬೇಲೂರಿನಲ್ಲಿ ಮಾತನಾಡಿದ ಅವರು, ಒಳ್ಳೆಯ ಮಳೆ, ಬೆಳೆ ಆಗಿ ರೈತರು ಸಮೃದ್ಧಿಯಾಗಿರಲಿ. ಭಗವಂತ ರಾಜ್ಯ, ಜಿಲ್ಲೆಯ ಜನತೆಗೆ ಆರೋಗ್ಯ ಕೊಡಲಿ. ಯಾವುದೇ ಕಷ್ಟಕ್ಕೆ ಸಿಗದಂತೆ ಕಾಪಾಡಲಿ ಎಂದು ಸೌಮ್ಯ ಚನ್ನಕೇಶವಸ್ವಾಮಿಯನ್ನು ಬೇಡಿದ್ದೇವೆ. ರಾಜ್ಯದಲ್ಲಿ ಶಾಂತಿ ವಾತಾವರಣ ನೆಲೆಸಬೇಕು. ಯಾವುದೇ ಕಾರಣಕ್ಕೂ ಕೋಮುಗಲಭೆಗಳಿಗೆ ಅವಕಾಶ ಕೊಡಬೇಡಿ ಎಂದು ತಿಳಿಸಿದರು. ಇದನ್ನೂ ಓದಿ: ಹಳದಿ ಶೆರ್ವಾನಿ ಹಾಕಿಕೊಂಡು ಆಲಿಯಾ-ರಣಬೀರ್ ಅರಿಶಿಣ ಶಾಸ್ತ್ರಕ್ಕೆ ಹೊರಟ ಕರಣ್ ಜೋಹರ್

    ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ಕೊಡುವ ಪರಿಸ್ಥಿತಿ ನಾನಗಿಲ್ಲ. ರಾಜ್ಯ ಸರ್ಕಾರಯಿದೆ. ಅದರ ಬಗ್ಗೆ ತೀರ್ಮಾನ ಮಾಡುತ್ತೆ, ಅದು ಅವರಿಗೆ ಬಿಟ್ಟ ವಿಷಯ. ಅದರ ಬಗ್ಗೆ ಮಾತನಾಡುವ ಮಟ್ಟಕ್ಕೆ ನಾವು ಬೆಳೆದಿಲ್ಲ. ಪರ್ಸೆಂಟೇಜ್ ಬಗ್ಗೆ ಟೈಂ ಬಂದಾಗ ಹೇಳ್ತಿನಿ ಎಂದು ತಿಳಿಸಿದರು.

    ಹಿಂದೂ, ಮುಸ್ಲಿಂ ಬೇರೆಯಲ್ಲ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕು. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ನಡೆದುಕೊಳ್ಳಬೇಕು. ಯಾರೋ ಪುಣ್ಯಾತ್ಮರು ಹಿಂದೆ ನಡೆಸಿಕೊಂಡು ಬಂದಿರುವ ಹಾದಿಯನ್ನು ಮುಂದುವರಿಸಿಕೊಂಡು ಹೋಗಬೇಕು. ಯಾವುದೇ ಗಲಭೆಗಳಿಗೆ ಅವಕಾಶ ಕೊಡಬೇಡಿ ಎಂದು ರಾಜ್ಯ ಸರ್ಕಾರವನ್ನು ಕೋರುತ್ತೇನೆ ಎಂದರು. ರಾಜ್ಯ ಹಾಗೂ ಜಿಲ್ಲೆಯ ಅಭಿವೃದ್ಧಿ ಕಡೆ ಹೆಚ್ಚು ಗಮನಕೊಡಿ ಎಂದು ರಾಜ್ಯ ಸರ್ಕಾರವನ್ನು ಮನವಿ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಬಾಲಿವುಡ್‍ನತ್ತ ಗೂಗ್ಲಿ ಡೈರೆಕ್ಟರ್: ಬಾಲಿವುಡ್ ಸ್ಟಾರ್ ಪರಂಬ್ರತ ಚಟ್ಟೋಪಾಧ್ಯಾಯಗೆ ಪವನ್ ಒಡೆಯರ್ ಆಕ್ಷನ್ ಕಟ್ 

  • ವೇದಿಕೆ ಮೇಲೆ ನಿಂಬೆ ಹಣ್ಣು ಉರುಳಿಬಿಟ್ಟ ಹೆಚ್‍ಡಿ ರೇವಣ್ಣ!

    ವೇದಿಕೆ ಮೇಲೆ ನಿಂಬೆ ಹಣ್ಣು ಉರುಳಿಬಿಟ್ಟ ಹೆಚ್‍ಡಿ ರೇವಣ್ಣ!

    ಹಾಸನ: ಮಾಜಿ ಸಚಿವ ಹೆಚ್‍ಡಿ ರೇವಣ್ಣ ಅಭಿಮಾನಿಗಳತ್ತ ನಿಂಬೆ ಹಣ್ಣು ಉರುಳಿಸಿದ್ದಾರೆ.

    ಅರಸೀಕೆರೆ ತಾಲೂಕಿನ ನಾಗರಹಳ್ಳಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ರೇವಣ್ಣ ವೇದಿಕೆ ಮೇಲಿಂದ ನಿಂಬೆ ಹಣ್ಣು ಉರುಳಿಸಿದ್ದಾರೆ.

    ಮೊದಲಿಗೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ ರೆವಣ್ಣ ಅವರಿಗೆ ನಿಂಬೆ ಹಣ್ಣು ಕೊಟ್ಟು ತಮಾಷೆ ಮಾಡಿದರು. ಬಳಿಕ ಅಭಿಮಾನಿಗಳು ನಿಂಬೆ ಹಣ್ಣು ನೀಡುವಂತೆ ರೇವಣ್ಣ ಅವರಲ್ಲಿ ಮನವಿ ಮಾಡಿದ್ದಾರೆ. ರೇವಣ್ಣ ವೇದಿಕೆ ಮೇಲಿಂದ ಬೇಸಿನ್‍ನಲ್ಲಿದ್ದ ಎಲ್ಲಾ ನಿಂಬೆ ಹಣ್ಣುಗಳನ್ನು ಒಂದೊಂದಾಗಿ ಅಭಿಮಾನಿಗಳತ್ತ ಉರುಳಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಮರ ಆಜಾನ್ ರೀತಿಯಲ್ಲೇ ರಾಮಜಪ ಮಾಡಿದ ಕಾಳಿಶ್ರೀ

    ರೇವಣ್ಣ ಉರುಳಿಸಿದ ನಿಂಬೆ ಹಣ್ಣುಗಳನ್ನು ಅಭಿಮಾನಿಗಳು ಒಂದೊಂದಾಗಿಯೇ ಆಯ್ದುಕೊಂಡಿದ್ದಾರೆ. ಈ ತಮಾಷೆಯ ಗಳಿಗೆಯಲ್ಲಿ ವೇದಿಕೆ ಮೇಲೆ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿಯೂ ಭಾಗಿಯಾಗಿದ್ದರು. ಇದನ್ನೂ ಓದಿ: ದೇಶದಲ್ಲಿ ಹುಲಿಗಳ ಸಾವಿನ ಸಂಖ್ಯೆ ಗಣನೀಯ ಏರಿಕೆ!

  • ಶಿಕ್ಷಣ ಕೊಡಿ ಅಂದ್ರೆ ಮಂತ್ರಿ ಮಗನೇ ಕೇಸರಿ ಶಾಲು ಹಂಚಲು ಹೋಗಿದ್ದಾರೆ: ರೇವಣ್ಣ ಟೀಕೆ

    ಶಿಕ್ಷಣ ಕೊಡಿ ಅಂದ್ರೆ ಮಂತ್ರಿ ಮಗನೇ ಕೇಸರಿ ಶಾಲು ಹಂಚಲು ಹೋಗಿದ್ದಾರೆ: ರೇವಣ್ಣ ಟೀಕೆ

    ಹಾಸನ: ಜನಕ್ಕೆ ಶಿಕ್ಷಣ ಕೊಡಿ ಎಂದರೆ ಮಂತ್ರಿ ಮಗನೇ ಕೇಸರಿ ಶಾಲು ಹಂಚಲು ಹೋದರೆ ಏನಾಗುತ್ತದೆ ಹೇಳಿ. ಅವರ ಧರ್ಮವನ್ನು ಆಚರಣೆ ಮಾಡಿದರೆ ತೊಂದರೆ ಏನು ಎಂದು ಮಾಜಿ ಸಚಿವ ಹೆಚ್‍ಡಿ.ರೇವಣ್ಣ ಹಿಜಬ್ ಪರವಾಗಿ ಮಾತನಾಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಇದು ಇಂದು ನಿನ್ನೆ ಶುರುವಾದ ಪದ್ಧತಿಯಲ್ಲ. ಹಿಂದಿನಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ. ಯಾರೂ ಯಾವ ಬಟ್ಟೆಯನ್ನಾದರೂ ಹಾಕಿಕೊಂಡು ಬರಲಿ. ಸರ್ಕಾರ ಗಂಭೀರವಾಗಿ ಚಿಂತನೆ ಮಾಡಬೇಕು. ಇಲ್ಲವಾದಲ್ಲಿ ಸರ್ಕಾರಕ್ಕೆ ಏಟು ಎಂದು ಸಲಹೆ ನೀಡಿದರು.

    ಒಂದು ಪಕ್ಷ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ. ಇನ್ನೊಂದು ಪಕ್ಷ ಹಿಂದೂಗಳ ಪರ ಇದೆ. ಎರಡು ಸಮಾಜವನ್ನು ಹೊಡೆದಾಡಿಸಲು ಹೋಗಬಾರದು. ಇಂತಹ ಕೆಟ್ಟ ಸರ್ಕಾರವನ್ನು ನನ್ನ ಜೀವನದಲ್ಲಿ ನೋಡಿರಲಿಲ್ಲ. ಇದು ಸತ್ತೋಗಿರುವ, ಪಾಪರ್ ಬಿದ್ದಿರುವ ಸರ್ಕಾರ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉಳ್ಳವರ ಪರ ಇದೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಡಿಕೆಶಿ ಪಾಕಿಸ್ತಾನ ಪರ ಹೇಳಿಕೆ ಕೊಡುವವರ ಪರವೋ ಅಥವಾ ಭಾರತ ಮಾತೆಯ ಪರವೋ: ರೇಣುಕಾಚಾರ್ಯ

    ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಒಂದು ವರ್ಷ ಆದರೂ ಕೆಡಿಪಿ ಸಭೆ ಕರೆದಿಲ್ಲ. ಜಿಲ್ಲೆಯ ಪರಿಸ್ಥಿತಿ ಏನಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಸುಖಾಸುಮ್ಮನೆ ಅಧಿಕಾರಿಗಳಿಗೆ ಧಮ್ಕಿ ಹಾಕೋದು ಬಿಡಬೇಕು. ಜಿಲ್ಲೆಯಲ್ಲಿ ಇಷ್ಟ ಬಂದಂತೆ ಸಿಎಲ್ 7 ಲೈಸೆನ್ಸ್ ನೀಡಲಾಗಿದೆ. ಉದ್ಯಮಿಗಳು ನಾವು ಜಿಲ್ಲಾ ಉಸ್ತುವಾರಿ ಸಚಿವರ ಪಾರ್ಟ್‍ನರ್ಸ್‍ಗಳು ಎನ್ನುತ್ತಿದ್ದಾರೆ ಎಂದು ಗ್ರಾಮೀಣ ಸಚಿವ ಈಶ್ವರಪ್ಪ ಅವರ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಹಿಜಬ್ ನಮ್ಮ ಕುಟುಂಬದ ವಿವಾದ ಪಾಕಿಸ್ತಾನ ತಲೆಹಾಕಬಾರದು: ಫಾತಿಮಾ ಹುಸೇನ್ ಆಕ್ರೋಶ

    ಶೇ.10 ಕೊಟ್ಟರೆ ಏನು ಬೇಕಾದರೂ ಕೆಲಸ ಮಾಡುತ್ತಾರೆ. ಇಂತಹ ಲೂಟಿ ಸರ್ಕಾರವನ್ನು ನಾನು ಎಂದು ನೋಡಿಯೇ ಇಲ್ಲ. ಸರ್ಕಾರದಲ್ಲಿರುವವರು ಲೂಟಿ ಹೊಡೆಯುತ್ತಿದ್ದಾರೆ. ಇಂತಹ ದುರ್ಬಲ ಮುಖ್ಯಮಂತ್ರಿಯನ್ನು ನಾನು ನೋಡಿರಲಿಲ್ಲ. ಪ್ರಧಾನಿ ಮೋದಿಯವರು ಸರ್ಕಾರದ ನಡೆ ಗಮನಿಸಬೇಕು. ಯಾವುದೇ ಕಾರಣಕ್ಕೂ 2023ರಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಬರಲ್ಲ. ಬಿಜೆಪಿ 40 ಸೀಟ್‍ಗೆ ಇಳಿಯುತ್ತದೆ. 2013ರಲ್ಲಿ ಆದ ರೀತಿ ಆಗುತ್ತದೆ ಎಂದು ಭವಿಷ್ಯ ನುಡಿದರು.

  • ಕಾಂಗ್ರೆಸ್‍ಗೆ ಮಾನ-ಮರ್ಯಾದೆ ಇಲ್ಲ, ಸುಳ್ಳಿನಿಂದ ಜಾಸ್ತಿ ದಿನ ರಾಜಕೀಯ ನಡೆಯಲ್ಲ : ಎಚ್.ಡಿ.ರೇವಣ್ಣ

    ಕಾಂಗ್ರೆಸ್‍ಗೆ ಮಾನ-ಮರ್ಯಾದೆ ಇಲ್ಲ, ಸುಳ್ಳಿನಿಂದ ಜಾಸ್ತಿ ದಿನ ರಾಜಕೀಯ ನಡೆಯಲ್ಲ : ಎಚ್.ಡಿ.ರೇವಣ್ಣ

    ಹಾಸನ: ಕಾಂಗ್ರೆಸ್‍ಗೆ ಮಾನ-ಮರ್ಯಾದೆ ಇಲ್ಲ. ಅವರಿಗೆ ನಾಚಿಕೆಯಾಗಬೇಕು. ಇದು ದೊಂಬರಾಟ. ಸುಳ್ಳಿನಿಂದ ಜಾಸ್ತಿ ದಿನ ರಾಜಕೀಯ ನಡೆಯಲ್ಲ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಆಕ್ರೋಶ ಹೊರಹಾಕಿದ್ದಾರೆ.

    ಮೇಕೆದಾಟು ಯೋಜನೆಗೆ ಜೆಡಿಎಸ್-ಬಿಜೆಪಿ ಎರಡು ಪಕ್ಷಗಳು ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ರಾಜ್ಯದಲ್ಲಿ ದೇವೇಗೌಡರು ನೀರಾವರಿ ಮಂತ್ರಿಯಿಂದ ಇಳಿದ ಮೇಲೆ 30 ವರ್ಷಗಳು ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನು ಆಳಿವೆ. ರಾಜ್ಯದಲ್ಲಿ ಹತ್ತು ವರ್ಷ ಬಿಜೆಪಿ, ಹತ್ತು ವರ್ಷ ಕಾಂಗ್ರೆಸ್ ಸರ್ಕಾರವಿತ್ತು. ಕೇಂದ್ರದಲ್ಲಿ ಹತ್ತು ವರ್ಷ ಯುಪಿಎ, ಎಂಟು ವರ್ಷ ಎನ್‍ಡಿಎ. ಸರ್ಕಾರವಿತ್ತು. ಸಮ್ಮಿಶ್ರ ಸರ್ಕಾರದಲ್ಲೂ ನೀರಾವರಿ ಮಂತ್ರಿ ಯಾರಿಗೂ ಕೊಟ್ಟಿರಲಿಲ್ಲ, ಅವರೇ ಗುತ್ತಿಗೆ ತೆಗೆದುಕೊಂಡಿದ್ದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಮ್ಮಿಶ್ರ ಸರ್ಕಾರದಲ್ಲಿ ಈಗ ಮೆರವಣಿಗೆ ಹೊರಟಿರುವವರೇ ಜಲಸಂಪೂನ್ಮೂಲ ಸಚಿವರಾಗಿದ್ದರು. ಅದರಲ್ಲಿ ರುಚಿ ಕಂಡು ಆ ಹುದ್ದೆಯನ್ನು ಅವರೇ ಇಟ್ಟುಕೊಂಡಿದ್ದರು. ಬೂತಯ್ಯನ ಮಗ ಅಯ್ಯು ಸಿನಿಮಾದಲ್ಲಿ ಬರುವ ಲೋಕನಾಥ್ ಅವರ ಉಪ್ಪಿನಕಾಯಿ ಪಾತ್ರಕ್ಕೆ ಡಿಕೆಶಿಯನ್ನು ಹೋಲಿಸಿದ ವ್ಯಂಗ್ಯವಾಡಿದರು.

    ನಾಚಿಕೆಯಾಗಬೇಕು ಇವರಿಗೆ, ಇದು ದೊಂಬರಾಟ. ಈ ಹಿಂದೆ ನಮ್ಮನ್ನು ಕರೆದುಕೊಂಡು ಹೋಗಿ ದಸರಾ ನೋಡಿ, ಪ್ಯಾಲೇಸ್ ನೋಡಿ ಎನ್ನುತ್ತಿದ್ದರು. ಅದೇ ರೀತಿ ಇವರು ನಾವು ದುಡ್ಡು ಹೊಡೆಯುವುದು ನೋಡಿ, ಮೆರವಣಿಗೆ ನೋಡಿ ಎನ್ನುತ್ತಿದ್ದಾರೆ. ಸುಳ್ಳಿನಿಂದ ಜಾಸ್ತಿ ದಿನ ರಾಜಕೀಯ ನಡೆಯಲ್ಲ. ಈ ರಾಷ್ಟ್ರೀಯ ಪಕ್ಷದವರೇ ನೀರಾವರಿ ಮಂತ್ರಿಗಳಾಗಿದ್ದರು ಆಗ ಮಾಡಲಿಲ್ಲ. ಈಗ ನಮ್ಮ ಪಕ್ಷವನ್ನು ಎಳೆದು ತರುತ್ತಿದ್ದಾರೆ. ಈ ಕಾಂಗ್ರೆಸ್‍ಗೆ ಮಾನ-ಮರ್ಯಾದೆ ಇಲ್ಲ ಕಿಡಿಕಾರಿದರು. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಭಾರತದ ನೆರವು – ಇರಾನ್ ಸಹಾಯ

    ಯಾರೋ ಒಬ್ಬರು ಜ್ಯೋತಿಷಿ ನೀರಿನಲ್ಲಿ ಮುಳುಗಿ ಎಂದು ಹೇಳಿದ್ದಾರೆ. ಪೂಜೆ ಮಾಡಲು ಹೋಗಿ ದುಬುಕ್ ಅಂಥಾ ಬಿದ್ದರು. ಇಡೀ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಗ್ರಹಣ ಹಿಡಿದಿದೆ. ಈ ಪೂಜೆಯಿಂದನಾದರೂ ಗ್ರಹಣ ಹೋಗುತ್ತದೆ ಅಂದುಕೊಂಡಿದ್ದೇನೆ. ಜೆಡಿಎಸ್ ನೀರಾವರಿ ಯೋಜನೆಗಳಿಗೆ ತಡೆ ಒಡ್ಡಲ್ಲ. ಇವರು ಕರೆದಾಗ ಪಾದಯಾತ್ರೆಗೆ ಹೋಗಲು ನಾವೇನು ಇದಲ್ಲ. ನೀವು ಮಾಡಿರುವ ಕರ್ಮಕಾಂಡ, ನೀವು ರಾಜ್ಯಕ್ಕೆ ದ್ರೋಹ ಬಗೆದಿದ್ದೀರಿ. ನಮಗೆ ಚುನಾವಣೆ, ಅಧಿಕಾರ ಮುಖ್ಯವಲ್ಲ. ರಾಜ್ಯದ ನೀರಾವರಿ ಯೋಜನೆಗಳು, ನೆಲ, ಜಲ ಎಲ್ಲಾ ಸಮಾಜವನ್ನು ಒಟ್ಟಿಗೆ ಕೊಂಡೊಯ್ಯುವುದೇ ನಮ್ಮ ಗುರಿ ಎಂದು ಹೇಳಿದರು.

    ಜನಕ್ಕೆ ಕಾಂಗ್ರೆಸ್ ಮೇಲೆ ಪ್ರೀತಿ ಇದ್ದರೆ ಸ್ವಯಂಪ್ರೇರಿತವಾಗಿ ಪಾದಯಾತ್ರೆಗೆ ಬರುತ್ತಿದ್ದರು. ಪಾದಯಾತ್ರೆಗೆ ಬಂದವರಿಗೆ 300 ರೂ. ಪೆಟ್ರೋಲ್ ಟೋಕನ್ ಏಕೆ ಕೊಡುತ್ತಿದ್ದಾರೆ. ಎಲ್ಲರಿಗೂ ಪೊಂಗಲ್, ಬಜ್ಜೆ, ಪಲಾವ್ ಏಕೆ ಮಾಡಿಸುತ್ತಿದ್ದಾರೆ. ಜೆಡಿಎಸ್ ಅಂದರೆ ಭಯವಿದೆ. ಜೆಡಿಎಸ್ ಮುಗಿಸಲು ಎರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ. ಅದಕ್ಕಾಗಿ ಜೆಡಿಎಸ್ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ತೈಲ ಬೆಲೆ ಭಾರೀ ಏರಿಕೆ, ಕಜಕಿಸ್ತಾನದಲ್ಲಿ ಹಿಂಸಾಚಾರ – ಸರ್ಕಾರ ಪತನ

  • ಕುಮಾರಸ್ವಾಮಿ, ನಾನು ಸೇರಿ ರಾಮನಗರ ಜಿಲ್ಲೆ ಮಾಡಿದ್ದು: ಎಚ್‍ಡಿ ರೇವಣ್ಣ

    ಕುಮಾರಸ್ವಾಮಿ, ನಾನು ಸೇರಿ ರಾಮನಗರ ಜಿಲ್ಲೆ ಮಾಡಿದ್ದು: ಎಚ್‍ಡಿ ರೇವಣ್ಣ

    ಹಾಸನ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಗೂ ನಾನು ಸೇರಿ ರಾಮನಗರವನ್ನು ಜಿಲ್ಲೆಯನ್ನಾಗಿ ಮಾಡಿದ್ದು ಎಂದು ಮಾಜಿ ಸಚಿವ ಎಚ್‍ಡಿ ರೇವಣ್ಣ ಹೇಳಿದ್ದಾರೆ.

    ಸಚಿವ ಅಶ್ವಥ್ ನಾರಾಯಣ್ ಸಂಸದ ಡಿ.ಕೆ.ಸುರೇಶ್ ನಡುವೆ ನಡೆದ ವಾಗ್ವಾದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ, ನಾನು ಸೇರಿ ರಾಮನಗರ ಜಿಲ್ಲೆ ಮಾಡಿದ್ದು. ರಾಮನಗರದಲ್ಲಿ ಡೈರಿ, ಡಿಸಿಸಿ ಬ್ಯಾಂಕ್ ಮಾಡಲು ಈ ಅಣ್ಣತಮ್ಮ ಬಿಡಲಿಲ್ಲ ಅಡ್ಡಗಾಲು ಹಾಕಿ ನಿಲ್ಲಿಸಿದ್ದರು. ರಾಮನಗರ ಜಿಲ್ಲೆಗೆ ಕುಮಾರಸ್ವಾಮಿ ಅವರದ್ದೇ ಹೆಚ್ಚು ಕೊಡುಗೆ ಇದೆ ಎಂದು ಡಿಕೆ ಬ್ರದರ್ಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ:  ಮೋದಿಯ ಎಲ್ಲಾ ರ‍್ಯಾಲಿಗಳನ್ನು ಬಂದ್ ಮಾಡಿ ನಂತರ ನಮ್ಮ ಪಾದಯಾತ್ರೆ ಬಗ್ಗೆ ಯೋಚಿಸುತ್ತೇವೆ: ಡಿ.ಕೆ.ಸುರೇಶ್

    ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಮುಳುಗುತ್ತಿರುವುದಕ್ಕೆ ಕೃಷ್ಣ ನಡೆ, ಮೇಕೆದಾಟು ನಡೆ ಮಾಡಲು ಹೊರಟಿದ್ದಾರೆ. ಮೇಕೆದಾಟು ಪಾದಯಾತ್ರೆ ಹದಿನೈದು ದಿನ ಬಿಟ್ಟು ಮಾಡಿದರೆ ಏನಾಗುತ್ತೆ, ಒಂದೆರಡು ತಿಂಗಳು ಬಿಟ್ಟು ಮಾಡಲಿ ಎಂದರು.

    ಬಿಜೆಪಿ ಸರ್ಕಾರ 40% ಕಮೀಷನ್ ಸರ್ಕಾರ ಎಂಬ ಕೈ ಪಕ್ಷದ ಆರೋಪದ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಅದನ್ನು ಶುರು ಮಾಡಿದ್ದೇ ಕಾಂಗ್ರೆಸ್ ಪಕ್ಷದವರು. ಅಧಿಕಾರದಲ್ಲಿದ್ದಾಗ ಎರಡು ಸರ್ಕಾರಗಳು ಮೇಕೆದಾಟು ಯೋಜನೆ ಯಾಕೆ ಮಾಡಲಿಲ್ಲ. ಇವರಿಗೆ ಜನ ಸತ್ತರೂ ಪರ್ವಾಗಿಲ್ಲ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಸತ್ತು ಹೋಗಿದೆ. ಅದಕ್ಕೆ ಪಕ್ಷವನ್ನು ಮೇಲೆಳಿಸಲು ಈ ಗಿಮಿಕ್ ಮಾಡುತ್ತಿದ್ದಾರೆ. ಎರಡನೇ ಅಲೆಯಲ್ಲಿ ಚುನಾವಣೆ ಮಾಡಲು ಹೋಗಿ ಸಾವಿರಾರು ಜನ ಬೀದಿಪಾಲಾಗಿದ್ದಾರೆ. ಜನರು ದೇವೇಗೌಡರನ್ನು ಐವತ್ತು ವರ್ಷ ರಾಜಕೀಯದಲ್ಲಿ ಉಳಿಸಿದ್ದಾರೆ. ಹಾಸನ, ಮಂಡ್ಯ, ರಾಮನಗರ ಜನ ನಮ್ಮ ಕುಟುಂಬ ಉಳಿಸಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ನಾವು ರ‍್ಯಾಲಿ ಮಾಡಲ್ಲ, ಸಮಾವೇಶ ಮಾಡಲ್ಲ, ಕಾವೇರಿಗಾಗಿ ನಡೆಯುತ್ತೇವೆ: ಡಿಕೆಶಿ

    ಕುಮಾರಸ್ವಾಮಿ ಹತ್ತಿರ ಜನ ಇಲ್ಲಾ ಎಂಬ ಮಾಜಿ ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ ಹತ್ರ ಜನ, ದೇವರು ಇದ್ದಾರೆ. ಕುಮಾರಸ್ವಾಮಿ ಬಿಟ್ಟು ಹೋದವರು ಮನೆಯಲ್ಲಿ ಇದ್ದಾರೆ. ಕುಟುಂಬ ರಾಜಕಾರಣ ಅಂಥಾ ಎಲ್ಲಾ ಹೇಳಿದ್ದರು. ಈ ಕುಟುಂಬದ ಜೊತೆ ಜನ ಇದ್ದಾರೆ. ಅದಕ್ಕೆ ಎಂ.ಎಲ್.ಸಿ. ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ಗೆಲ್ಲಿಸಿದ್ದಾರೆ. 2023 ಕ್ಕೆ ನೋಡೋಣ, ನಾನು ಎಲ್ಲೂ ಹೋಗಲ್ಲ. ದೇವರ ಆಶೀರ್ವಾದ, ಜನತೆ ಶಕ್ತಿ ಕೊಟ್ಟರೆ ಕೆಲಸ ಮಾಡುತ್ತೇವೆ ಎಂದರು.

    ನೂತನ ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನಕ್ಕೆ ಡಾ.ಸೂರಜ್ ರೇವಣ್ಣ ಗೈರು ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಕೊರೊನಾ ವೇಳೆ ವಿಧಾನ ಪರಿಷತ್ ಸದಸ್ಯರ ಪ್ರಮಾಣವಚನ ಕಾರ್ಯಕ್ರಮ ಏಕೆ ಬೇಕಿತ್ತು? ನನ್ನ ಮಗ ಹೋಗುತ್ತೇನೆ ಎಂದಿದ್ದ. ಆದರೆ ಕೊರೊನಾ ಇದೆ ಬೇಡ ಅಂತಾ ನಾನೇ ಹೇಳಿದೆ. ಸೂರಜ್ ಜೊತೆ ಇಪ್ಪತ್ತೈದು ಜನ ಹೋಗುವುದು, ಕೊರೊನ ಮಾರ್ಗಸೂಚಿ ಉಲ್ಲಂಘನೆ ಆಗುವುದು ಏಕೆ ಬೇಕು? ಲಾಕ್ ಡೌನ್ ಮುಗಿಯಲಿ ಆಮೇಲೆ ಪ್ರಮಾಣವಚನ ತೆಗೆದುಕೊಂಡರೆ ಆಯ್ತು ಅಂತಾ ಹೇಳಿದೆ. 15 ದಿನದ ಸಂಬಳ ಹೋಗಲಿ ಬಿಡು ಅಂತಾ ತಡೆದಿದ್ದೇನೆ ಎಂದು ಹೇಳಿದರು.

  • ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಅವಶ್ಯಕತೆ ಏನಿದೆ?: ಎಚ್.ಡಿ ರೇವಣ್ಣ

    ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಅವಶ್ಯಕತೆ ಏನಿದೆ?: ಎಚ್.ಡಿ ರೇವಣ್ಣ

    ಬೆಳಗಾವಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯ ಅವಶ್ಯಕತೆ ಏನಿದೆ ಎಂದು ಸರ್ಕಾರಕ್ಕೆ ಮಾಜಿ ಸಚಿವ ಎಚ್‍.ಡಿ ರೇವಣ್ಣ ಪ್ರಶ್ನಿಸಿದ್ದಾರೆ.

    ಬೆಳಗಾವಿಯಲ್ಲಿ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ಜಾರಿಯ ಉದ್ದೇಶ ಸಮುದಾಯದ ಟಾರ್ಗೆಟ್ ಅಲ್ಲ, ಇದು ವೋಟ್‍ಗಳು ಟಾರ್ಗೆಟ್ ಆಗಿದೆ. ಹೀಗಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಗೆಗೆ ನಮ್ಮ ಸಂಪೂರ್ಣ ವಿರೋಧ ಇದೆ. ಮಹಾತ್ಮಾ ಗಾಂಧಿಜೀಯವರು ಹೇಳಿದಂತೆ ನಾವೆಲ್ಲರೂ ಒಗ್ಗಟ್ಟಾಗಿರಬೇಕು ಎಂಬುದು ನಮ್ಮ ಭಾವನೆ. ಇಚ್ಛೆ ಇದ್ದವರು ಮತಾಂತರ ಆಗುತ್ತಾರೆ, ಇಲ್ಲದವರು ಆಗಲ್ಲ. ನಾವು ಈ ಮಸೂದೆ ವಿರೋಧ ಮಾಡುತ್ತೇವೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ:  ಶಾಸಕರೊಬ್ಬರ ಸಂತೃಪ್ತಿಗೆ ಡಿಕೆಶಿ ಎಂಇಎಸ್ ಪರ ಬ್ಯಾಟಿಂಗ್: ಸಚಿವ ಈಶ್ವರಪ್ಪ

    ನಮ್ಮದು ಪ್ರಾದೇಶಿಕ ಪಕ್ಷ, ಉತ್ತರ ಕರ್ನಾಟಕದ ಅಭಿವೃದ್ಧಿ ಉದ್ದೇಶವಿಟ್ಟೇ ಎಚ್.ಡಿಕೆ ಬೆಳಗಾವಿಯಲ್ಲಿ ಅಧಿವೇಶನಕ್ಕೆ ನಾಂದಿ ಹಾಡಿದರು. ಉತ್ತರ ಕರ್ನಾಟಕಕಕ್ಕೆ ಕುಮಾರಸ್ವಾಮಿ ಏನೇನು ಮಾಡಿದ್ದಾರೆ ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಬೆಳಗಾವಿಯಲ್ಲಿ ನಡೆದ ಘಟನೆ ಬಗ್ಗೆ ರಾಷ್ಟ್ರೀಯ ಪಕ್ಷಗಳ ನಾಯಕರು ವಿಭಿನ್ನ ಹೇಳಿಕೆ ನೀಡುತ್ತಿದ್ದಾರೆ. ಪ್ರಚೋದನೆ ಮಾಡುವ ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಆಗಬೇಕು ಎಂಬುದು ನಮ್ಮ ನಿಲುವು ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆ ಸಂವಿಧಾನಕ್ಕೆ ವಿರುದ್ಧವಾಗಿದೆ: ಡಿಕೆಶಿ

    BJP - CONGRESS

    ನಮ್ಮ ಪಕ್ಷದ ಶಾಸಕರು ಕಿಡಿಗೇಡಿಗಳ ಕೃತ್ಯವನ್ನು ಸದನದಲ್ಲಿ ಖಂಡಿಸಿದ್ದಾರೆ. ಆದರೆ ಬೆಳಗಾವಿಯ ನಾಯಕರು ಹಾಗೂ ಎರಡು ರಾಷ್ಟ್ರೀಯ ಪಕ್ಷಗಳು ವೋಟ್‍ಗಾಗಿ ಹಿಂದೆ ಬಿದ್ದಿವೆ. ಮತಕ್ಕಾಗಿ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಕರ್ನಾಟಕದ ಸಮಗ್ರ ಅಭಿವೃದ್ಧಿ, ನೀರಾವರಿ ಯೋಜನೆಗಳ ಚರ್ಚೆಗೆ ನಿಲುವಳಿ ಸೂಚನೆ ಮಂಡಿಸಲಿದ್ದೇವೆ. ಮಹದಾಯಿ ವಿವಾದ ಬಗೆಹರಿಸಲು ಇಷ್ಟು ವರ್ಷ ಬೇಕಾ? ಮಹದಾಯಿ, ಕೃಷ್ಣಾ, ಘಟಪ್ರಭಾ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆಗೆ ನಿಲುವಲಿ ಸೂಚನೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಳ್ಳ ಸೇರುತ್ತಿದೆ ಉಮೇಶ್ ಕತ್ತಿ ಮಾಲೀಕತ್ವದ ಸಕ್ಕರೆ ಕಾರ್ಖಾನೆ ತ್ಯಾಜ್ಯ ನೀರು

  • ಕನ್ನಡಿಗರಿಗೆ ಧಕ್ಕೆ ತರುವಂತಹ ಸನ್ನಿವೇಶ ಬಂದರೆ ನಾವೆಲ್ಲ ಹೋರಾಟ ಮಾಡಬೇಕು: ಹೆಚ್.ಡಿ.ರೇವಣ್ಣ

    ಕನ್ನಡಿಗರಿಗೆ ಧಕ್ಕೆ ತರುವಂತಹ ಸನ್ನಿವೇಶ ಬಂದರೆ ನಾವೆಲ್ಲ ಹೋರಾಟ ಮಾಡಬೇಕು: ಹೆಚ್.ಡಿ.ರೇವಣ್ಣ

    ಹಾಸನ: ರಾಜ್ಯದ ಕನ್ನಡಿಗರಿಗೆ ಏನೇ ಆದರೂ, ಧಕ್ಕೆ ತರುವಂತಹ ಸನ್ನಿವೇಶ ಬಂದರೆ ನಾವೆಲ್ಲ ಕನ್ನಡಿಗರು ಹೋರಾಟ ಮಾಡಬೇಕು. ಸರ್ಕಾರ ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಬೆಳಗಾವಿಯಲ್ಲಿ MES ಪುಂಡಾಟದ ವಿರುದ್ಧ ಹಾಸನದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.

    ಎಂಇಎಸ್, ಶಿವಸೇನೆ ಯಾವುದೇ ಇರಲಿ. ಈ ರಾಜ್ಯದ ಹಿತಕ್ಕೆ ಧಕ್ಕೆಯಾದಾಗ ಎಲ್ಲಾ ಪಕ್ಷಗಳು ಒಂದಾಗಿ ನಮ್ಮ ರಾಜ್ಯದ ನೆಲ ಜಲ ಉಳಿಸಿಕೊಳ್ಳಬೇಕು. ಇದರಲ್ಲಿ ಪಕ್ಷಭೇದ ಮರೆತು ಎಲ್ಲರೂ ಒಟ್ಟಾಗಬೇಕು. ಬೆಳಗಾವಿಯಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಇದಕ್ಕೆ ಸರ್ಕಾರ ಅವಕಾಶ ಕೊಡಬಾರದು. ಮುಖ್ಯಮಂತ್ರಿಗಳಿಗೆ, ಗೃಹಮಂತ್ರಿಗಳಿಗೆ, ಬೆಳಗಾವಿ ಉಸ್ತುವಾರಿ ಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದರು.  ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

    ಬೇರೆ ಬೇರೆ ರಾಜ್ಯದಲ್ಲಿರುವ ಕನ್ನಡಿಗರಿಗೆ ಯಾವುದೇ ನೋವಾದಾಗ, ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಅದನ್ನು ತಡೆಗಟ್ಟುವ ಪ್ರಯತ್ನ ಮಾಡಬೇಕು. ಬೇರೆ ರಾಜ್ಯದಲ್ಲಿರುವ ಕನ್ನಡಿಗರ ರಕ್ಷಣೆಯಾಗಬೇಕು. ಮಹಾರಾಷ್ಟ್ರದಲ್ಲಿ ಕನ್ನಡಿಗರು ಇರುತ್ತಾರೆ. ಅಲ್ಲಿ ಹೋಗಿ ಯಾರಾದರೂ ಗಲಾಟೆ ಮಾಡಿದರೆ ಅವರಿಗೆ ರಕ್ಷಣೆ ಕೊಡುವ ಕಾರ್ಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇತುವೆಯಾಗಿ ಕೆಲಸ ಮಾಡಬೇಕು ಎಂದು ರೇವಣ್ಣ ಸಲಹೆ ನೀಡಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಮರಾಠಿಗರ ಮೇಲೆ ದಾಳಿ ನಡೆಯುತ್ತಿದೆ – ಸುಳ್ಳು ಆರೋಪ ಹೊರಿಸಿದ ಉದ್ಧವ್ ಠಾಕ್ರೆ

  • ಹಾಸನವನ್ನು ರಾಜ್ಯದಲ್ಲಿ ಮೊದಲನೇ ಸ್ಥಾನಕ್ಕೆ ತೆಗೆದುಕೊಂಡು ಹೋಗುವುದೇ ನಮ್ಮ ಗುರಿ: ಎಚ್.ಡಿ.ರೇವಣ್ಣ

    ಹಾಸನವನ್ನು ರಾಜ್ಯದಲ್ಲಿ ಮೊದಲನೇ ಸ್ಥಾನಕ್ಕೆ ತೆಗೆದುಕೊಂಡು ಹೋಗುವುದೇ ನಮ್ಮ ಗುರಿ: ಎಚ್.ಡಿ.ರೇವಣ್ಣ

    ಹಾಸನ: ಜಿಲ್ಲೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಗೊಳಿಸಿ ರಾಜ್ಯದಲ್ಲಿ ಮೊದಲನೇ ಸ್ಥಾನಕ್ಕೆ ತೆಗೆದುಕೊಂಡು ಹೋಗುವುದು ನಮ್ಮ ಗುರಿ ಎಂದು ಮಾಜಿ ಸಚಿವ ಎಚ್‌ಡಿ. ರೇವಣ್ಣ ತಿಳಿಸಿದರು.

    ಸೂರಜ್ ರೇವಣ್ಣ ಗೆಲುವಿನ ನಂತರ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಮಾಡಿದ ಅಭಿವೃದ್ಧಿ ಕೆಲಸ, ಸೇವೆ ಇಂದು ಸೂರಜ್ ಗೆಲುವಿಗೆ ಕಾರಣವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಜೆಡಿಎಸ್ ಅಧಿಕಾರಕ್ಕೆ ತರುವ ಗುರಿ ಇದೆ ಎಂದರು. ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಗೆಲುವು

    ಜಿಲ್ಲೆಯ ಆರು ಶಾಸಕರು, ಸಂಸದರು ಹಾಗೂ ದೇವೇಗೌಡರ ಆಶೀರ್ವಾದದ ಫಲವಾಗಿ ಸೂರಜ್ ಗೌಡ ಅವರಿಗೆ ಗೆಲುವಾಗಿದೆ. ಸ್ಥಳೀಯ ಸಂಸ್ಥೆಗಳ ಎಲ್ಲ ಪ್ರತಿನಿಧಿಗಳು ಸೂರಜ್ ಅವರನ್ನು ಪಕ್ಷಾತೀತವಾಗಿ ಗೆಲ್ಲಿಸಿದ್ದಾರೆ. ಈ ಗೆಲುವನ್ನು ಸಂಸದರು, ಶಾಸಕರು, ಕಾರ್ಯಕರ್ತರಿಗೆ ಅರ್ಪಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ನಾನು ಸಾಯುವವರೆಗೂ ಹಾಸನ ಜಿಲ್ಲೆಗಾಗಿ ಕೆಲಸ ಮಾಡುವ ಆಸೆ ಇದೆ: ಭವಾನಿ ರೇವಣ್ಣ

    ಶೃಂಗೇರಿ ಗುರುಗಳು, ಶಾರದಾ ದೇವಿ ಆಶೀರ್ವಾದ, ಸುತ್ತೂರು ಮಠದ ಆಶೀರ್ವಾದ ಈ ಕುಟುಂಬಕ್ಕೆ ಇದೆ. ಸೂರಜ್ ಏನು ದಡ್ಡರಲ್ಲ, ಡಾಕ್ಟರ್ ಓದಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವಿಧಾನ ಪರಿಷತ್‌ನಲ್ಲಿ ಅವರು ಚರ್ಚೆ ನಡೆಸಲಿದ್ದಾರೆ. 2023ರಲ್ಲಿ ಹಾಸನದಿಂದಲೇ ಈ ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ ಪಕ್ಷ ಅಧಿಕಾರಿಕ್ಕೆ ಬರಲಿದೆ ಎಂದು ರೇವಣ್ಣ ತಿಳಿಸಿದ್ದಾರೆ.

     

  • ಕುಟುಂಬ ರಾಜಕಾರಣ ನಿಲ್ಲಲು ಐಡಿಯಾ ಕೊಟ್ಟ ರೇವಣ್ಣ

    ಕುಟುಂಬ ರಾಜಕಾರಣ ನಿಲ್ಲಲು ಐಡಿಯಾ ಕೊಟ್ಟ ರೇವಣ್ಣ

    ಹಾಸನ: ಮೋದಿಯವರು ಬಿಜೆಪಿಯಲ್ಲಿ 75 ವರ್ಷ ಆದವರು ಅಧಿಕಾರದಲ್ಲಿ ಇರೋ ಹಾಗಿಲ್ಲ ಎಂಬ ಕಾನೂನು ಮಾಡಿದ್ದಾರೆ. ಅದೇ ರೀತಿ ಕುಟುಂಬದಲ್ಲಿ ಒಬ್ಬರು ನಿಲ್ಲಬೇಕೆಂದು ಬಿಲ್ ತರಲಿ ಎಂದು ಶಾಸಕ ಎಚ್‌ಡಿ ರೇವಣ್ಣ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷದ ಅಭ್ಯರ್ಥಿಯನ್ನು ಕುಟುಂಬ ರಾಜಕಾರಣ ಎಂದು ಟೀಕಿಸುತ್ತಿದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿ ಒಂದೇ ಕುಟುಂಬದ ನಾಲ್ಕು ಜನ ಎಂ.ಎಲ್.ಎ., ಎಂ.ಎಲ್.ಸಿ. ಹೀಗೆ ಬೇರೆ ಬೇರೆ ಹುದ್ದೆಗಳಲ್ಲಿ ಇದ್ದಾರೆ. ಕುಟುಂಬ ರಾಜಕಾರಣ ಎಂದು ಮಾತನಾಡಲು ಕಾಂಗ್ರೆಸ್‌ನವರಿಗೆ ಯಾವ ನೈತಿಕತೆ ಇದೆ. ಇವರು ಜೆಡಿಎಸ್ ಕುಟುಂಬ ರಾಜಕಾರಣ ಅನ್ನೋದು ಬಿಟ್ಟರೆ ಜಿಲ್ಲೆಗೆ ಅವರ ಕೊಡುಗೆ ಏನು ಎಂದು ಕಿಡಿಕಾರಿದರು.

    ಸೂರಜ್ ರೇವಣ್ಣ ವಿರುದ್ಧ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡುವುದಿಲ್ಲ. ನ್ಯಾಯಾಲಯದ ತೀರ್ಮಾನಕ್ಕೆ ತಲೆ ಬಾಗುತ್ತೇವೆ. ಯಾರು ಅರ್ಜಿ ಹಾಕಿದ್ದಾರೆ ಎನ್ನುವುದು ಗೊತ್ತಿಲ್ಲ. ಆದರೆ ನ್ಯಾಯಾಲಯದ ಬಗ್ಗೆ ನಮಗೆ ಗೌರವವಿದೆ. ನ್ಯಾಯಾಲಯ ಏನು ತೀರ್ಪು ನೀಡುತ್ತದೆಯೊ ಅದಕ್ಕೆ ಬದ್ಧರಾಗಿರುತ್ತೇವೆ ಎಂದರು. ಇದನ್ನೂ ಓದಿ:  ಮದುವೆ ವಿಚಾರ ಮುಚ್ಚಿಟ್ಟಿದ್ದಾರೆ – ಸೂರಜ್ ರೇವಣ್ಣರ ನಾಮಪತ್ರ ತಿರಸ್ಕರಿಸಿ

    ರಾಜ್ಯಲ್ಲಿ ಬಿ ಮತ್ತು ಸಿ ಟೀಂ: ರಾಜ್ಯದಲ್ಲಿ ಬಿ ಮತ್ತು ಸಿ ಎಂಬ ಎರಡು ಟೀಂ ಇದೆ. ಬಿ ಅಂದರೆ ಬಿಜೆಪಿ, ಸಿ ಅಂದರೆ ಕಾಂಗ್ರೆಸ್. ಇವೆರಡು ಟೀಂಗಳು ನಮಗೆ ಬೇಡ. ಇವರಿಂದ ರಾಜ್ಯದಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲ. ಇದರಿಂದಾಗಿ 2023ರಲ್ಲಿ ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಭರವಸೆ ನೀಡಿದರು.

    bjp - congress

    ಕಾಂಗ್ರೆಸ್‌ನ್ನು ನಾವ್ಯಾರು ತೆಗೆಯಬೇಕಿಲ್ಲ. 26 ರಾಜ್ಯಗಳಲ್ಲಿ ಜನತೆಯೆ ಮನೆಗೆ ಕಳುಹಿಸಿದ್ದಾರೆ. 27ನೇಯದು ಕರ್ನಾಟಕವಾಗಿದ್ದು, ಇಲ್ಲೂ ಅವರನ್ನು ಮನೆಗೆ ಕಳುಹಿಸುತ್ತಾರೆ ಎಂದು ವ್ಯಂಗ್ಯವಾಡಿದರು.

    ಹಣದಿಂದ ರಾಜಕೀಯ ಮಾಡಲು ಆಗಲ್ಲ. ಜನತೆ, ದೇವರ ಆಶೀರ್ವಾದ ಇರುವವರೆಗೂ ರಾಜಕೀಯ ಮಾಡಬಹುದು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗುತ್ತದೆ. ಕಾಂಗ್ರೆಸ್ ಮುಖಂಡರೆ ಕಾಂಗ್ರೆಸ್ ಪಕ್ಷ ಮುಗಿಸುತ್ತಾರೆ. ನೆಹರು ಕಾಲದ ಕಾಂಗ್ರೆಸ್ ಈಗ ಇಲ್ಲಾ. ಕೇಂದ್ರದಲ್ಲಿ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್ ಡಬಲ್ ಇಂಜಿನ್ ಸರ್ಕಾರ ಇತ್ತು ಎಂದು ಟೀಕಿಸಿದರು. ಇದನ್ನೂ ಓದಿ:  ಅಪ್ಪು ಕನಸು ನನಸು- ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಔಟ್

  • ನೀವು ನನಗೆ ವೋಟ್ ಹಾಕಲ್ಲ- ಹೆಚ್.ಡಿ.ರೇವಣ್ಣ ತಮಾಷೆ

    ನೀವು ನನಗೆ ವೋಟ್ ಹಾಕಲ್ಲ- ಹೆಚ್.ಡಿ.ರೇವಣ್ಣ ತಮಾಷೆ

    ಹಾಸನ: ಮಳೆ ಹಾನಿ ವೀಕ್ಷಣೆ ವೇಳೆ ಎಲ್ಲಿ ನೀವು ನನಗೆ ವೋಟ್ ಹಾಕಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಮಹಿಳೆಯೊಬ್ಬರಿಗೆ ತಮಾಷೆ ಮಾಡಿದ ಪ್ರಸಂಗ ಹಾಸನದಲ್ಲಿ ನಡೆದಿದೆ.

    ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆ ಗ್ರಾಮದಲ್ಲಿ ಮಳೆಗೆ ಕುಸಿದ ಬಿದ್ದಿದ್ದ ಮನೆಯನ್ನು ನಿನ್ನೆ ರೇವಣ್ಣ ವೀಕ್ಷಣೆ ಮಾಡುತ್ತಿದ್ದರು. ಮನೆ ವೀಕ್ಷಣೆ ನಂತರ ಗ್ರಾಮದ ಸುಧಾ ಅವರಿಗೆ, ಎಲ್ಲಿ ನೀವು ನನಗೆ ವೋಟ್ ಹಾಕಲ್ಲ ಎಂದು ರೇವಣ್ಣ ತಮಾಷೆ ಮಾಡಿದ್ದಾರೆ.  ಇದನ್ನೂ ಓದಿ: ನಾನು ಅಧಿಕಾರ ಬಯಸಿಲ್ಲ, ಜನ ಸೇವೆಯೇ ಗುರಿ: ಮೋದಿ

    ಕೂಡಲೇ ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ, ನಾವು ನಿಮಗೆ ಯಾವಾಗಲೂ ವೋಟ್ ಹಾಕುವುದು ಎಂದು ನಗುತ್ತ ಉತ್ತರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಎಲ್ಲಿ ಪುಟ್ಟರಾಜಣ್ಣ ಇಲ್ಲಾ ಅಂಥಾ ಹೇಳ್ತಾವ್ನೆ ಎಂದ ರೇವಣ್ಣ ನಕ್ಕು ಸುಮ್ಮನಾಗಿದ್ದಾರೆ. ಈ ವೇಳೆ ಮಾತನಾಡಿದ ರೇವಣ್ಣ ಅವರು, ಯಾರೆಲ್ಲ ಮನೆ, ಬೆಳೆ ಕಳೆದುಕೊಂಡಿದ್ದೀರ ಅವರಿಗೆಲ್ಲ ಶೀಘ್ರವಾಗಿ ಪರಿಹಾರ ಒದಗಿಸಿಕೊಡುವ ಭರವಸೆ ನೀಡಿದ್ದಾರೆ.