Tag: HD Revanna

  • ಟ್ರಕ್ ಟರ್ಮಿನಲ್ ನಿರ್ಮಾಣ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಗ್ರಾಮಸ್ಥರು

    ಟ್ರಕ್ ಟರ್ಮಿನಲ್ ನಿರ್ಮಾಣ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಗ್ರಾಮಸ್ಥರು

    ಹಾಸನ: ಹೇಮ ಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಎದುರು ಮೂರು ಎಕರೆ, 24 ಗುಂಟೆ ಜಾಗದಲ್ಲಿ ನಿರ್ಮಾಣ ಮಾಡಲು ಹೊರಟಿರುವ ಟ್ರಕ್ ಟರ್ಮಿನಲ್ ವಿವಾದ ಶಾಸಕರಾದ ಪ್ರೀತಂಗೌಡ ಹಾಗೂ ಹೆಚ್.ಡಿ.ರೇವಣ್ಣ ನಡುವೆ ಪ್ರತಿಷ್ಠೆಯ ಸಮರವಾಗಿದೆ. ಈ ನಡುವೆ ಇದೇ ವಿಚಾರವಾಗಿ ಡಿಸಿಗೆ ಕಂದಾಯ ಇಲಾಖೆಯ ಉಪ ಕಾರ್ಯದರ್ಶಿಯಿಂದ ಪತ್ರ ಬಂದಿದೆ. ಟ್ರಕ್ ಟರ್ಮಿನಲ್ ವಿರುದ್ಧ ಗ್ರಾಮಸ್ಥರು, ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

    Preetam Gowda, Hassan, JDS, BJP, Revanna,

    ಹಾಸನದ ಕೆಂಚಟ್ಟಹಳ್ಳಿ ಬಳಿ ಇರುವ ಹೇಮಗಂಗೋತ್ರಿ ಟ್ರಕ್ ಟರ್ಮಿನಲ್ ನಿರ್ಮಾಣ ವಿವಾದ ತಾರಕಕ್ಕೇರಿತ್ತು. ಇದು ಸರ್ಕಾರಿ ಗೋಮಾಳ ಜಾಗವಾಗಿ ಉಳಿಯಲಿ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಕಾಲೇಜಿನ ಮುಂಭಾಗ ಹಾಗೂ ಮಹಿಳಾ ಹಾಸ್ಟೆಲ್ ಪಕ್ಕದಲ್ಲಿದ್ದು, ಇಂತಹ ಜಾಗದಲ್ಲಿ ನಿರ್ಮಾಣ ಮಾಡಬಾರದು ಎಂದು ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ಯಪಡಿಸಿದ್ದರು. ಇದನ್ನೂ ಓದಿ: ಬುರ್ಖಾ ಹಾಕಿ ಅಸಭ್ಯವಾಗಿ ವರ್ತಿಸಿದರೆ ಧರ್ಮದೇಟು – ಮಂಗಳೂರಿನಲ್ಲಿ ತಾಲಿಬಾನ್ ಸಂಸ್ಕೃತಿ ಹೇರಿಕೆಗೆ ಯತ್ನ 

    ಇದು ತೀವ್ರ ಸ್ವರೂಪ ಪಡೆದು ಮಾಜಿಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ಬಲ್ ರೇವಣ್ಣ, ಎಂಎಲ್‍ಸಿ ಸೂರಜ್ ರೇವಣ್ಣ ಗ್ರಾಮಸ್ಥರೊಂದಿಗೆ ಧರಣಿ ನಡೆಸಿದ್ದರು. ಇನ್ನೊಂದೆಡೆ ಶಾಸಕ ಪ್ರೀತಂಗೌಡ ಬೆಂಬಲಿಗರು ಮುಂದೆ ನಿಂತು ಕಾಮಗಾರಿ ಆರಂಭಿಸಿದ್ದು, ಇದು ವಿಕೋಪಕ್ಕೆ ತಿರುತ್ತಿದ್ದಂತೆ 144 ಸೆಕ್ಷನ್ ಜಾರಿ ಮಾಡಲಾಗಿತ್ತು.

    Preetam Gowda, Hassan, JDS, BJP, Revanna, (2)

    ಇದೀಗ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದು, ಇಂದು ಡಬಲ್ ಬೆಂಚ್‍ನಲ್ಲಿ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಹೈಕೋರ್ಟ್‍ನಲ್ಲಿ ನಮಗೆ ನ್ಯಾಯ ದೊರಕಲಿದೆ ಎಂದು ಗ್ರಾಮಸ್ಥರು ವಿಶ್ವಾಸ ವ್ಯಕ್ಯಪಡಿಸಿದ್ದಾರೆ. ಇದರ ಮಧ್ಯೆ ಜಿಲ್ಲಾಧಿಕಾರಿಯವರು ಸರ್ಕಾರದ ಆದೇಶದಂತೆ ಸದರಿ ಜಮೀನನ್ನು ಕಂದಾಯ ವ್ಯಾಪ್ತಿಯ ಸುಪರ್ದಿಯಲ್ಲೇ ಇರಿಸಿಕೊಳ್ಳತಕ್ಕದ್ದು ಎಂದು ಸರ್ಕಾರದ ಉಪ ಕಾರ್ಯದರ್ಶಿ ಕವಿತರಾಣಿ ಮಂಗಳವಾರ ಆದೇಶ ಹೊರಡಿಸಿದ್ದರು.

    ಗ್ರಾಮಸ್ಥರು ಹೇಳಿದ್ದೇನು?
    ಟ್ರಕ್ ಟರ್ಮಿನಲ್ ಮಾಡಲು ಈಗಾಗಲೇ ನಮಗೆ ಜಾಗ ನೀಡಿದ್ದಾರೆ. ನಾವು ಟ್ರಕ್ ಟರ್ಮಿನಲ್ ನಿರ್ಮಿಸಲು ಈಗಾಗಲೇ ಲಕ್ಷಾಂತರ ರೂ. ಹಣ ಖರ್ಚು ಮಾಡಿದ್ದೇವೆ. ಈಗ ನಮಗೆ ಬೇರೆ ಕಡೆ ಜಾಗ ನೀಡುತ್ತಾರೆ ಎಂದರೆ ಒಪ್ಪಲು ಸಾಧ್ಯವಿಲ್ಲ. ಸರ್ಕಾರ ಆ ಜಾಗವನ್ನು ಟ್ರಕ್‍ಟರ್ಮಿನಲ್‍ಗೆ ಈಗಾಗಲೇ ಮೀಸಲಿಟ್ಟಿದೆ ಎಂದು ಹೇಳುತ್ತಿರುವುದು ಸಂತಸ ತಂದಿದೆ. ನಮಗೆ ಯಾವ ರಾಜಕೀಯ ನಾಯಕರು, ರಾಜಕೀಯ ಮುಖ್ಯವಲ್ಲ. ಆದರೆ ನಮಗೆ ಅದೇ ಜಾಗದಲ್ಲಿ ಟ್ರಕ್‍ಟರ್ಮಿನಲ್ ನಿರ್ಮಾಣ ಆಗಬೇಕು ಎಂದು ಲಾರಿ ಚಾಲಕರು ಮತ್ತು ಮಾಲೀಕರು ಒತ್ತಾಯಿಸುತ್ತಿದ್ದಾರೆ. ಇದನ್ನೂ ಓದಿ:  ನೀಚರು, ನಿರ್ಲಜ್ಯರಿಂದ ಪಾಕಿಸ್ತಾನ ಪರ ಘೋಷಣೆ: ಮುತಾಲಿಕ್ 

    ಒಟ್ಟಿನಲ್ಲಿ ಟ್ರಕ್ ಟರ್ಮಿನಲ್ ವಿವಾದ ಶಾಸಕರುಗಳಾದ ಎಚ್.ಡಿ.ರೇವಣ್ಣ ಹಾಗೂ ಪ್ರೀತಂಗೌಡ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಇದೀಗ ಈ ವಿವಾದ ಹೈಕೋರ್ಟ್ ಅಂಗಳದಲ್ಲಿದ್ದು, ತೀರ್ಪು ಯಾರ ಪರ ಬರಲಿದೆ ಎಂಬುದನ್ನು ಕಾದುನೋಡಬೇಕಿದೆ.

  • ಹಾಸನದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಕಂದಾಯ ಇಲಾಖೆ ಅಸ್ತು

    ಹಾಸನದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಕಂದಾಯ ಇಲಾಖೆ ಅಸ್ತು

    ಹಾಸನ: ಹಾಸನದಲ್ಲಿ ಟ್ರಕ್‌ಟರ್ಮಿನಲ್ ನಿರ್ಮಾಣ ವಿಚಾರವಾಗಿ ಮಾಜಿ ಸಚಿವ ಹೆಚ್‌ಡಿ.ರೇವಣ್ಣ ವರ್ಸಸ್ ಶಾಸಕ ಪ್ರೀತಂಗೌಡರ ನಡುವೆ ಜಟಾಪಟಿ ಜೋರಾಗಿರುವ ಹೊತ್ತಿನಲ್ಲೇ ಈ ಬಗ್ಗೆ, ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಿಂದ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ.

    Preetam Gowda, Hassan, JDS, BJP, Revanna, (3)

    ಪತ್ರದಲ್ಲಿ ಹಾಸನದ ಕೆಂಚಟ್ಟಳ್ಳಿ ಗ್ರಾಮದ ಸರ್ವೆ ನಂಬರ್ 31 ರಲ್ಲಿ, 3 ಎಕರೆ 24 ಗುಂಟೆ ಸರ್ಕಾರಿ ಗೋಮಾಳವನ್ನು ಟ್ರಕ್‌ಟರ್ಮಿನಲ್ ಉದ್ದೇಶಕ್ಕೆ ಕಾಯ್ದಿರಿಸಿರುವ ಬಗ್ಗೆ ಸರ್ಕಾರ ಈಗಾಗಲೇ ಪೂರ್ವಾನುನತಿ ನೀಡಿರುವ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಕಲಂ 71 ರಡಿ ಟ್ರಕ್ ಟರ್ಮಿನಲ್ ಉದ್ದೇಶಕ್ಕೆ ಕಾಯ್ದಿರಿಸಲು ಸರ್ಕಾರ ಪೂರ್ವಾನುಮತಿ ನೀಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ನಾನು ಧರಣಿ ಕುಳಿತರು ಸ್ಥಳಕ್ಕೆ ಡಿಸಿ ಬರಲಿಲ್ಲ, ನಾನೇನು ದನಕಾಯೋನ: ಹೆಚ್‍ಡಿ.ರೇವಣ್ಣ

    ಜಿಲ್ಲಾಧಿಕಾರಿಗಳು ಸರ್ಕಾರದ ಆದೇಶದಂತೆ ಸದರಿ ಜಮೀನನ್ನು ಕಂದಾಯ ವ್ಯಾಪ್ತಿಯ ಸುಪರ್ದಿಯಲ್ಲೇ ಇರಿಸಿಕೊಳ್ಳತಕ್ಕದ್ದು. ಈ ಜಮೀನನ್ನು ಮುಂದೆ ಯಾವುದಾದರೂ ಸಂಸ್ಥೆ, ಇಲಾಖೆಗೆ ನೀಡಬೇಕಾದಲ್ಲಿ ಸರ್ಕಾರದ ಅನುಮತಿಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಪತ್ರದಲ್ಲಿ ಸೂಚಿಸಲಾಗಿದೆ.

    Preetam Gowda, Hassan, JDS, BJP, Revanna, (2)

    ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಮುಂದೆ ನಡೆಯುತ್ತಿರುವ ಟ್ರಕ್‌ಟರ್ಮಿನಲ್ ಕಾಮಗಾರಿಗೆ ಹೆಚ್.ಡಿ.ರೇವಣ್ಣ, ಸ್ಥಳೀಯರು, ವಿದ್ಯಾರ್ಥಿಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಟ್ರಕ್‌ಟರ್ಮಿನಲ್ ಕಾಮಗಾರಿ ಮಾಡಿಯೇ ಸಿದ್ಧ ಎಂದು ಶಾಸಕ ಪ್ರೀತಂಗೌಡ ಪಣತೊಟ್ಟಿದ್ದರು. ಹೀಗಾಗಿ ಸ್ಥಳೀಯರೊಂದಿಗೆ ಸ್ವತಃ ಹೋರಾಟಕ್ಕಿಳಿದಿದ್ದ ಹೆಚ್‌ಡಿ.ರೇವಣ್ಣ, ತಾತ್ಕಾಲಿಕವಾಗಿ ಕಾಮಗಾರಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಇದನ್ನೂ ಓದಿ: ಹಾಸನದಲ್ಲಿ ನಿಲ್ಲದ ಪ್ರೀತಂ ಗೌಡ Vs ಎಚ್‍.ಡಿ.ರೇವಣ್ಣ ಜಟಾಪಟಿ – ರಾತ್ರೋ ರಾತ್ರಿ ತಾಲೂಕು ಕಚೇರಿ ಡೆಮಾಲಿಶ್ 

    HD REVANNA

    ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ 144 ಸೆಕ್ಷನ್ ಜಾರಿ ಗೊಳಿಸಲಾಗಿತ್ತು. ಇದರಿಂದ ಟ್ರಕ್‌ಟರ್ಮಿನಲ್ ನಿರ್ಮಾಣದಿಂದ ಸ್ಥಳವನ್ನು ಕಂದಾಯ ಸಚಿವರು ಖುದ್ದು ಪರಿಶೀಲನೆ ನಡೆಸಲಿ ಎಂದು ಪಟ್ಟು ಹಿಡಿದಿದ್ದ ರೇವಣ್ಣ, ಅಧಿಕಾರಿಗಳು ಒಪ್ಪಿದರೆ ಅಲ್ಲಿಯೇ ಟ್ರಕ್‌ಟರ್ಮಿನಲ್ ಕಾಮಗಾರಿ ನಡೆಸಲಿ ಎಂದು ಆಕ್ರೋಶ ಹೊರಹಾಕಿದ್ದರು. ಇದೀಗ ಕಂದಾಯ ಇಲಾಖೆಯಿಂದಲೇ ಕೆಂಚಟ್ಟಳ್ಳಿ ಗ್ರಾಮದ ಸರ್ವೆ ನಂಬರ್ 31 ರಲ್ಲಿ, 3 ಎಕರೆ 24 ಗುಂಟೆ ಸರ್ಕಾರಿ ಗೋಮಾಳವನ್ನು ಟ್ರಕ್‌ಟರ್ಮಿನಲ್ ಉದ್ದೇಶಕ್ಕೆ ಕಾಯ್ದಿರಿಸಿರುವ ಬಗ್ಗೆ ಸ್ಪಷ್ಟನೆ ನೀಡಲಾಗಿದೆ.

  • ನಾನು ಧರಣಿ ಕುಳಿತರು ಸ್ಥಳಕ್ಕೆ ಡಿಸಿ ಬರಲಿಲ್ಲ, ನಾನೇನು ದನಕಾಯೋನ: ಹೆಚ್‍ಡಿ.ರೇವಣ್ಣ

    ನಾನು ಧರಣಿ ಕುಳಿತರು ಸ್ಥಳಕ್ಕೆ ಡಿಸಿ ಬರಲಿಲ್ಲ, ನಾನೇನು ದನಕಾಯೋನ: ಹೆಚ್‍ಡಿ.ರೇವಣ್ಣ

    ಹಾಸನ: ಆಲೂಗೆಡ್ಡೆ ಬಿತ್ತನೆ ಬೀಜ ವಿಚಾರವಾಗಿ ಡಿಸಿ ಸಭೆ ಕರೆದಿದ್ದಾರೆ. ನನ್ನ ಪಿಎಗೆ ಫೋನ್ ಮಾಡಿ ಹೇಳಿದ್ದಾರೆ. ನನಗೆ ಯಾವುದೇ ಲೆಟರ್ ಕೊಟ್ಟಿಲ್ಲ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ವಿರುದ್ಧ ಮಾಜಿಸಚಿವ ಎಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದರು.

    ಹಾಸನದಲ್ಲಿ ಮಾತನಾಡಿದ ಅವರು, ಡಿಸಿ ಸಭೆಗೆ ಹೋದರೆ ಬೆಲೆ ಕೊಡಲ್ಲ. ಡಿಸಿ ಎಷ್ಟು ದಿನ ಆಡ್ತಾನೆ ಆಡ್ಲಿ ಎಂದು ಬೇಸರ ಹೊರಹಾಕಿದರು. ರಾತ್ರಿ ವೇಳೆ ಹಾಸನ ತಾಲೂಕು ಕಚೇರಿ ಕಟ್ಟಡ ಒಡೆದು ಹಾಕಿದ ಬಗ್ಗೆಯೂ ಅಸಮಾಧಾನ ಹೊರಹಾಕಿದ ರೇವಣ್ಣ ಅವರು, ಡಿಸಿಯವರಿಗೆ ಪುರುಸೊತ್ತಿಲ್ಲ, ರಾತ್ರಿ ವೇಳೆ ಬಿಲ್ಡಿಂಗ್ ಹೊಡೆಯುವುದರಲ್ಲಿ ಬ್ಯುಸಿ ಇದ್ದಾರೆ. ಡಿಸಿ ಅನ್ನೋ ಪದ ತೆಗೆಯಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ:  ಹನುಮಾನ್ ಚಾಲೀಸಾ ನುಡಿಸುವುದು ಒಂದು ದಿನದ ವಿಷಯವಲ್ಲ, ಅದು ಮುಂದುವರಿಯಬೇಕು: ರಾಜ್ ಠಾಕ್ರೆ 

    ನಾನು ಒಬ್ಬ ಶಾಸಕನಾಗಿದ್ದೇನೆ. ನನಗೂ ಎರಡು ಹೋಬಳಿ ಬರುತ್ತೆ. ಮಂತ್ರಿ ಹೇಳಿದ್ರು ಅಂತಾರೆ, ಮಂತ್ರಿ ಇವರಿಗೆ ನನಗಲ್ಲ. ಕಟ್ಟಡವನ್ನು ರಾತ್ರಿ ಹೊಡೆಯದು ಏನಿತ್ತು, ಬೆಳಗ್ಗೆ ಹೊಡಿಬೇಕಿತ್ತು. ಹೇಳೋರು, ಕೇಳೋರು ಯಾರು ಇಲ್ಲ ಇವರಿಗೆ. ಅಧಿಕಾರ ಇದೆ ಎಂದು ದರ್ಪ ತೋರಿದ್ರೆ ಹೆಚ್ಚು ದಿನ ನಡೆಯಲ್ಲ. ಪೊಲೀಸ್ ಇಲಾಖೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ನಾನು ಧರಣಿ ಕುಳಿತರು ಸ್ಥಳಕ್ಕೆ ಡಿಸಿ ಬರಲಿಲ್ಲ, ನಾವೇನು ದನಕಾಯೋನ? ಏನ್ ಯಾವಾಗ್ಲು ಬಿಜೆಪಿ ಇರುತ್ತೆ ಅನ್ಕಂಡಿದ್ದಾರೆ. ನಾನು ಇಪ್ಪತ್ತೈದು ವರ್ಷದಿಂದ ಎಲ್ಲವನ್ನೂ ನೋಡಿದ್ದೇನೆ ಎಂದು ಆಕ್ರೋಶ ಹೊರಹಾಕಿದರು.

    ಡಿಸಿ ಆಫೀಸ್ ಹೊಡೆದ್ರೆ ಅದರ ಪರಿಣಾಮ ಬೇರೆ ಆಗುತ್ತೆ. ಜಿಲ್ಲಾಧಿಕಾರಿ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು. ನಾನು ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ. ಡಿಸಿ ರಬ್ಬರ್ ಸ್ಟಾಂಪ್ ಇದ್ದಂಗೆ, ಡಿಸಿ ಆಗುವುದಕ್ಕೆ ಅವರಿಗೆ ಯೋಗ್ಯತೆಯಿಲ್ಲ. ಯಾವೋನೋ ಹೇಳ್ದಾ ಕಟ್ಟಡ ಹೊಡುದ್ರು. ಎಷ್ಟು ದಿನ ದಬ್ಬಾಳಿಕೆ ಮಾಡ್ತಾರೆ ಮಾಡ್ಲಿ. ಕೆಲವು ಅಧಿಕಾರಿಗಳು ಮುಂದಿನ ದಿನಗಳಲ್ಲಿ ಅನುಭವಿಸುತ್ತಾರೆ. ಇವರೆಲ್ಲ ಜನಹಿತ ಕಾಪಾಡುವುದಿಲ್ಲ. ಇವರು ಬರಿ ದುಡ್ಡು ಹೊಡೆಯುತ್ತಾರೆ. ಡಿಸಿ ಮೇಲೆ ಕ್ರಿಮಿನಲ್ ಕೇಸ್ ಹಾಕುವಂತೆ ರಾಜ್ಯಪಾಲರು, ಸಿಎಂಗೆ ಮನವಿ ಕೊಟ್ಟಿದ್ದೇನೆ ಎಂದರು. ಇದನ್ನೂ ಓದಿ:  ಆರೋಗ್ಯಮೇಳದಲ್ಲಿ ಭಾಗವಹಿಸಿ ಆರೋಗ್ಯಕರ ಜೀವನ ನಿಮ್ಮದಾಗಿಸಿಕೊಳ್ಳಿ: ಸುಧಾಕರ್

  • ಹಾಸನದಲ್ಲಿ ನಿಲ್ಲದ ಪ್ರೀತಂ ಗೌಡ Vs ಎಚ್‍.ಡಿ.ರೇವಣ್ಣ ಜಟಾಪಟಿ – ರಾತ್ರೋ ರಾತ್ರಿ ತಾಲೂಕು ಕಚೇರಿ ಡೆಮಾಲಿಶ್

    ಹಾಸನದಲ್ಲಿ ನಿಲ್ಲದ ಪ್ರೀತಂ ಗೌಡ Vs ಎಚ್‍.ಡಿ.ರೇವಣ್ಣ ಜಟಾಪಟಿ – ರಾತ್ರೋ ರಾತ್ರಿ ತಾಲೂಕು ಕಚೇರಿ ಡೆಮಾಲಿಶ್

    ಹಾಸನ: ಶಾಸಕ ಪ್ರೀತಂಗೌಡ ನೇತೃತ್ವದಲ್ಲಿ ಕೈಗೊಂಡ ಹಲವು ಕಾಮಗಾರಿಗಳಲ್ಲಿ ಹಾಸನದಲ್ಲಿ ಹಳೆತಾಲೂಕು ಕಚೇರಿ ಕೆಡವಿ ನೂತನವಾಗಿ ನಿರ್ಮಿಸುವುದು ಮತ್ತು ಟ್ರಕ್ ಟರ್ಮಿನಲ್ ಕೂಡ ಸೇರಿದ್ದವು. ಆದ್ರೆ ಇವೆರೆಡು ಕಾಮಗಾರಿಗಳನ್ನು ಮಾಜಿ ಸಚಿವ ಎಚ್‍.ಡಿ.ರೇವಣ್ಣ ವಿರೋಧಿಸುತ್ತಲೇ ಬಂದಿದ್ದರು. ಒಂದು ಕಡೆ ಟ್ರಕ್ ಟರ್ಮಿನಲ್ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ರೇವಣ್ಣ ಯಶಸ್ವಿಯಾಗಿದ್ರು. ಆದ್ರೆ ರೇವಣ್ಣ ಅವರನ್ನೇ ಯಾಮಾರಿಸಿ ಇದೀಗ ರಾತ್ರೋ ರಾತ್ರಿ ಹಾಸನ ತಾಲೂಕು ಕಚೇರಿ ಕೆಡವಿದ್ದು ಹಾಸನದಲ್ಲಿ ಮತ್ತೊಂದು ಜಿದ್ದಾಜಿದ್ದಿಗೆ ಕಾರಣವಾದಂತಾಗಿದೆ.

    ಟ್ರಕ್ ಟರ್ಮಿನಲ್ ವಿರೋಧಿಸಿ ಎಚ್‍ಡಿ.ರೇವಣ್ಣ & ಸನ್ಸ್ ಹೋರಾಟಕ್ಕಿಳಿದ ಪರಿಣಾಮ ಇದೀಗ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹಾಸನದ ಕೆಂಚಟ್ಟಹಳ್ಳಿ ಬಳಿ ಇರುವ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಮುಂಭಾಗ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ಮತ್ತು ವಿದ್ಯಾರ್ಥಿಗಳು ಹೋರಾಟ ನಡೆಸಿದ್ರು. ಅವರಿಗೆ ಎಚ್‍.ಡಿ.ರೇವಣ್ಣ ಬೆಂಬಲ ಸೂಚಿಸಿದ್ರು. ಆದ್ರೆ ಯಾವುದೇ ಕಾರಣಕ್ಕೂ ಟ್ರಕ್ ಟರ್ಮಿನಲ್ ನಿಲ್ಲಿಸಲ್ಲ ಎಂದು ಪ್ರೀತಂ ಗೌಡ ಸವಾಲು ಹಾಕಿದ್ರು. ಇದಾದ ನಂತರ ನಿನ್ನೆ ರೇವಣ್ಣ ಮತ್ತು ಅವರ ಪುತ್ರರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಮಗಾರಿ ತಡೆದು, ಕಾಂಪೌಂಡ್ ಗೋಡೆ ಕೆಡವಲಾಗಿತ್ತು. ಇದೀಗ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಕಾಮಗಾರಿ ಕೆಲಸ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದನ್ನೂ ಓದಿ: ತಾಕತ್ತಿದ್ದರೆ ನನ್ನ ವಿರುದ್ಧ ರೇವಣ್ಣ ನಿಲ್ಲಲಿ: ಪ್ರೀತಂ ಸವಾಲು

    ಕೇವಲ ಟ್ರಕ್ ಟರ್ಮಿನಲ್ ವಿಚಾರವಲ್ಲ. ಹಾಸನದಲ್ಲಿ ಈಗಿರುವ ತಾಲೂಕು ಕಚೇರಿ ಕೆಡವಿ, ನೂತನವಾಗಿ ತಾಲೂಕು ಕಚೇರಿ ನಿರ್ಮಿಸಲು ಪ್ರೀತಂ ಗೌಡ ಯೋಜನೆ ರೂಪಿಸಿದ್ರು. ಆದ್ರೆ ಅದಕ್ಕೂ ಯಾವುದೇ ಕಾರಣಕ್ಕೂ ಅವಕಾಶ ಕೊಡಲ್ಲ. ಈಗಿರುವ ಹಳೆಯ ಕಟ್ಟಡವೇ ಇರಬೇಕೆಂದು ರೇವಣ್ಣ ಪಟ್ಟುಹಿಡಿದಿದ್ರು. ಯಾವಾಗ ಟ್ರಕ್ ಟರ್ಮಿನಲ್ ಕೆಲಸವನ್ನು ರೇವಣ್ಣ & ಸನ್ಸ್ ತಡೆಹಿಡಿದ್ರೋ, ಇದೀಗ ರಾತ್ರೋ ರಾತ್ರಿ ಹಾಸನ ತಾಲೂಕು ಕಚೇರಿಯನ್ನು, ಕಿಟಕಿ ಬಾಗಿಲುಗಳ ಸಮೇತವೇ ನೆಲಕ್ಕುರುಳಿಸುವ ಕೆಲಸ ಮಾಡಿಸಿರುವ ಪ್ರೀತಂಗೌಡ, ಎಚ್‍ಡಿ.ರೇವಣ್ಣನಿಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಆ್ಯಸಿಡ್ ಎರಚಿದ ಕಿರಾತಕನಿಗೆ ಲುಕ್‍ಔಟ್ ನೊಟೀಸ್ ಜಾರಿ

    ಒಟ್ಟಾರೆ ಚುನಾವಣೆ ಇನ್ನೂ ಒಂದು ವರ್ಷವಿರುವಾಗಲೇ ಹಾಸನದಲ್ಲಿ ಅಭಿವೃದ್ಧಿ ಹೆಸರಲ್ಲಿ ಪ್ರೀತಂಗೌಡ ಮತ್ತು ಎಚ್‍ಡಿ.ರೇವಣ್ಣ ನಡುವಿನ ಜಟಾಪಟಿ ಜೋರಾಗಿಯೇ ನಡೆಯುತ್ತಿದೆ. ನನ್ನ ಅಭಿವೃದ್ಧಿ ಕೆಲಸಕ್ಕೆ ರೇವಣ್ಣ ಬೇಕಂತಲೇ ಸಮಸ್ಯೆ ಮಾಡ್ತಿದ್ದಾರೆ ಅನ್ನೋದು ಪ್ರೀತಂಗೌಡ ಆರೋಪವಾದ್ರೆ, ಇದೆಲ್ಲ ಕೇವಲ ಹಣ ಮಾಡುವ ಕಾಮಗಾರಿ ಅನ್ನೋದು ರೇವಣ್ಣ ಆರೋಪವಾಗಿದೆ.

  • ಸೆಂಟ್ ಹಾಕಿಕೊಳ್ಳದೆ ಈಚೆಗೆ ಬರಲ್ಲ ಈ ಗಿರಾಕಿ – ಅಶ್ವತ್ಥ್ ನಾರಾಯಣ್ ವಿರುದ್ಧ ರೇವಣ್ಣ ಕಿಡಿ

    ಸೆಂಟ್ ಹಾಕಿಕೊಳ್ಳದೆ ಈಚೆಗೆ ಬರಲ್ಲ ಈ ಗಿರಾಕಿ – ಅಶ್ವತ್ಥ್ ನಾರಾಯಣ್ ವಿರುದ್ಧ ರೇವಣ್ಣ ಕಿಡಿ

    ಹಾಸನ: ಸೆಂಟ್ ಹಾಕಿಕೊಳ್ಳದೆ ಈಚೆಗೆ ಬರಲ್ಲ ಈ ಗಿರಾಕಿ ಎಂದು ಹೇಳುವ ಮೂಲಕ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಸಚಿವ ಅಶ್ವತ್ಥ್ ನಾರಾಯಣ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ರೇವಣ್ಣ ಅವರಿಗೆ ಶಿಕ್ಷಣ ಅಂದರೆ ಏನು ಅಂತ ಗೊತ್ತಿಲ್ಲ ಎಂಬ ಅಶ್ವತ್ಥ್ ನಾರಾಯಣ್ ಹೇಳಿಕೆ ವಿಚಾರವಾಗಿ ಹಾಸನದಲ್ಲಿ ಪ್ರತಿಕ್ರಿಯಿಸಿದ ಅವರು, ಶಿಕ್ಷಣ ಸಚಿವರ ಬಗ್ಗೆ ನಮಗೆ ಗೌರವವಿದೆ. ಅವರು ಬಂದ ಕೂಡಲೇ ಉನ್ನತ ಶಿಕ್ಷಣದಲ್ಲಿ ಕ್ರಾಂತಿ ಮಾಡುತ್ತಾರೆ ಅಂದುಕೊಂಡಿದ್ದೆ. ನಾವು ಯಾವುದೇ ಶಿಕ್ಷಣ ಸಂಸ್ಥೆ ನಡೆಸುತ್ತಿಲ್ಲ. ಬಿಜೆಪಿ ಐದು ವರ್ಷ ಅಧಿಕಾರದಲ್ಲಿತ್ತು. ಹಾಸನಕ್ಕೆ ಒಂದು ಲ್ಯಾಬ್ ಕೊಟ್ಟಿದ್ದಾರಾ ನೈತಿಕತೆ ಇದ್ದರೆ ಹೇಳಲಿ ಎಂದು ಅಶ್ವತ್ಥ್ ನಾರಾಯಣ್‍ಗೆ ಸವಾಲೆಸೆದಿದ್ದಾರೆ.

    ನಾಚಿಕೆಯಾಗಬೇಕು ಇವರಿಗೆ, ಇವರ ಹಗರಣಗಳ ಬಗ್ಗೆ ಸಮಯ ಬಂದಾಗ ಹೇಳ್ತೀನಿ. ನಾನು ಸಾಮಾನ್ಯ ರೈತನ ಮಗ, ಅವರ ಹಾಗೆ ಬಾರ್ ಅಟ್‍ಲಾ ಮಾಡಿಲ್ಲ. ಇಲ್ಲಿ ಬಂದು ಅವನಿಗೆ ನೋಡೋಕೆ ಹೇಳಿ. ಈ ಮಂತ್ರಿಗೆ ಶಿಕ್ಷಣ ಖಾತೆ ಅಂದರೆ ಏನೂ ಅಂತ ಗೊತ್ತೆ ಇಲ್ವೇನೋ. ಖಾಸಗಿಯವರ ಜೊತೆ ಶಾಮೀಲಾಗಿದ್ದಾರೆ. ನಾನು ಹಳ್ಳಿ ಗಮಾಡು ಒಂದನೇ ಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದೇನೆ. ಬನ್ನಿ ಅಶ್ವತ್ಥ್ ನಾರಾಯಣ್ ಅವರೇ ಹಾಸನ ಜಿಲ್ಲೆಯನ್ನು ನೋಡಿ. ಖಾಸಗಿಯವರ ಗುಲಾಮರಾಗಿ ಕೆಲಸ ಮಾಡಬೇಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನೀವು ಮಾಡಿರುವ ತಪ್ಪಿಗೆ ನಮ್ಮನ್ನು ದೋಷಿಸಬೇಡಿ – ಮೋದಿ ವಿರುದ್ಧ ಠಾಕ್ರೆ ಕಿಡಿ

    ಕಾಂಗ್ರೆಸ್‍ನವರ ವಚನ ಭ್ರಷ್ಟದಿಂದ ಈ ಸರ್ಕಾರ ಇರೋದು. ಇವರು ಸರ್ಕಾರ ಕಾಲೇಜುಗಳನ್ನು ಬಾಗಿಲು ಮುಚ್ಚುವ ಶಾಸಕರು. ಸೆಂಟ್ ಹಾಕಿಕೊಳ್ಳದೆ ಈಚೆಗೆ ಬರಲ್ಲ ಈ ಗಿರಾಕಿ. ನನ್ನ ಮೇಲಿನ ಸೇಡಿಗೆ ಉಪನ್ಯಾಸರನ್ನು ಕಲಬುರಗಿಗೆ ವರ್ಗ ಮಾಡಿದ್ದಾರೆ. ನಾನು ನೊಂದು ಹೆಳ್ತೀನಿ. ಮುಖ್ಯಮಂತ್ರಿಗೆ ಬಡವರ ಬಗ್ಗೆ ಕಾಳಜಿ ಇಲ್ವ. ಮುಖ್ಯಮಂತ್ರಿ ತಂದೆ, ದೇವೇಗೌಡರು ಒಟ್ಟಿಗೆ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಮೊಸಳೆಹೊಸಳ್ಳಿ ಎಂಜಿನಿಯರ್ ಕಾಲೇಜು ಮುಚ್ಚಲೇಬೇಕು ಅಂತ ಈ ಮಂತ್ರಿ ಹೋರಾಡಿದ್ರು. ಇಡೀ ರಾಜ್ಯದಲ್ಲಿ ಮೊಸಳೆಹೊಸಳ್ಳಿ ಕಾಲೇಜು ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಹಾಸನ ಎಂಜಿನಿಯರ್ ಕಾಲೇಜು ಇದೆ. ರಾಜಕೀಯವಾಗಿ ಎದುರಿಸಲು ನಾನು ರೆಡಿ ಎಂದು ಕಿಡಿಕಾರಿದ್ದಾರೆ.

  • ರೇವಣ್ಣ ಅವರ ಕ್ಷೇತ್ರವನ್ನು ನೋಡಿಕೊಳ್ಳಲಿ, ಹಾಸನ ಕ್ಷೇತ್ರದವರೆಗೂ ಬರೋದು ಬೇಡ: ಆರ್.ಅಶೋಕ್

    ರೇವಣ್ಣ ಅವರ ಕ್ಷೇತ್ರವನ್ನು ನೋಡಿಕೊಳ್ಳಲಿ, ಹಾಸನ ಕ್ಷೇತ್ರದವರೆಗೂ ಬರೋದು ಬೇಡ: ಆರ್.ಅಶೋಕ್

    ಹಾಸನ: ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಮೊದಲು ಅವರ ಕ್ಷೇತ್ರವನ್ನು ನೋಡಿಕೊಳ್ಳಲಿ, ಹಾಸನ ಕ್ಷೇತ್ರದವರೆಗೆ ಬರುವುದು ಬೇಡ ಎಂದು ಸಚಿವ ಆರ್. ಅಶೋಕ್ ಹೇಳಿದರು.

    ಹಾಸನದಲ್ಲಿ ನೂತನ ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೆ ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಹಾಸನದಲ್ಲಿ ಮಾತಮಾಡಿದ ಆರ್.ಅಶೋಕ್, ಹಾಸನದಲ್ಲೂ ಮಾದರಿಯಾದ ಆಡಳಿತ ಸೌಧ ಆದರೆ ನಿಮಗ್ಯಾಕೆ ಹೊಟ್ಟೆಉರಿ ಎಂದು ರೇವಣ್ಣ ಅವರಿಗೆ ಪ್ರಶ್ನೆ ಮಾಡಿದ್ದಾರೆ.

    ಅಭಿವೃದ್ಧಿ ಕಾರ್ಯಕ್ಕೆ ಯಾರು ತೊಂದರೆ ಕೊಡಬಾರದು. ಹಾಸನದಲ್ಲೂ ಮಾದರಿಯಾದ ಆಡಳಿತ ಸೌಧ ಆದರೆ ನಿಮಗ್ಯಾಕೆ ಹೊಟ್ಟೆಉರಿ. ನಿಮ್ಮ ಕೈಯಲ್ಲಿ ಮಾಡೋದಕ್ಕೆ ಆಗಿಲ್ಲ. ಹೊಸದಾಗಿ ಮಾಡೋಕೆ ಹೋದರೆ ಯಾಕೆ ಕಲ್ಲು ಹಾಕ್ತೀರಿ. ರೇವಣ್ಣ ಅವರ ಕ್ಷೇತ್ರವನ್ನು ನೋಡಿಕೊಳ್ಳಲಿ, ಇಲ್ಲಿಯವರೆಗೂ ಬರೋದು ಬೇಡ. ಅವರ ಕಾಲದಲ್ಲಿ ಆಗಿಲ್ಲ ಅಂತ ಬೇಜಾರು ಅವರಿಗೆ. ಎಲ್ಲಾ ನಾನೇ ಮಾಡಿದೆ ಅಂತಾರೆ. ಈ ಮೈಂಡ್ ಸೆಟಪ್ ಮೊದಲು ಹೋಗಬೇಕು. ನೀವು ಮಾಡಿದ್ರೆ ನ್ಯಾಯ, ಬೇರೆಯವರು ಮಾಡಿದ್ರೆ ಯಾಕೆ ನಂಬಲ್ಲ ಎಂದು ಪ್ರಶ್ನಿಸಿ ಕಿಡಿಕಾರಿದರು. ಇದನ್ನೂ ಓದಿ: ಸದ್ಯಕ್ಕೆ ಟಫ್ ರೂಲ್ಸ್ ಜಾರಿಯಿಲ್ಲ: ಸಿಎಂ

    ನಾವು ‘ಎ’ ಟಿಂ ‘ಬಿ’ ಟೀಂ ಮಾತು ಕೇಳಲ್ಲ. ಕಾಂಗ್ರೆಸ್-ಜೆಡಿಎಸ್ ‘ಎ’ ಟೀಂ ‘ಬಿ’ ಟೀಂ. ಲೋಕಸಭಾ ಚುನಾವಣೆ ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡ್ರಿ..?. ದೇವೇಗೌಡರು ಯಾರ ಬೆಂಬಲದಿಂದ ಪ್ರಧಾನಮಂತ್ರಿ ಆದರು. ಹತ್ತು ಸರಿ ಹೊಂದಾಣಿಕೆ ಮಾಡಿಕೊಂಡು ‘ಎ’ ಟೀಂ ‘ಬಿ’ ಟೀಂ ಅಲ್ಲ ಅಂತ ಏಕೆ ನಮ್ಮ ಮೇಲೆ ಆಪಾದನೆ ಮಾಡುತ್ತೀರಿ. ಪಕ್ಕಾ ಇವರಿಬ್ಬರು ಅಣ್‍ತಮ್ಮಾಸ್ ಇದ್ದಂಗೆ. ದೇವೇಗೌಡರಿಗೆ ಇವತ್ತು ಕಾಂಗ್ರೆಸ್ ಕಡೆಗೆ ಒಲವಿದೆ ಎಂದು ಆರ್.ಅಶೋಕ್ ಅಸಮಾಧಾನ ಹೊರಹಾಕಿದ್ರು.

  • ರೇವಣ್ಣನಿಗೆ ಶಿಕ್ಷಣ ಅಂದರೆ ಏನು ಅಂತ ಗೊತ್ತಿಲ್ಲ: ಅಶ್ವತ್ಥ್ ನಾರಾಯಣ್

    ರೇವಣ್ಣನಿಗೆ ಶಿಕ್ಷಣ ಅಂದರೆ ಏನು ಅಂತ ಗೊತ್ತಿಲ್ಲ: ಅಶ್ವತ್ಥ್ ನಾರಾಯಣ್

    – ಗೃಹಸಚಿವರು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದಾರೆ
    – ಕೆಲವರಿಗೆ ದುಡ್ಡು ಮಾಡಬೇಕೆಂಬ ಮಾನಸಿಕ ಕಾಯಿಲೆ ಇದೆ

    ಹಾಸನ: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೆ ಶಿಕ್ಷಣ ಎಂದರೆ ಏನು ಅಂತ ಗೊತ್ತಿಲ್ಲ ಎಂದು ಹಾಸನದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ವ್ಯಂಗ್ಯವಾಡಿದರು.

    ಮಾಧ್ಯಮಗಳೊಂದಿಗೆ ರೇವಣ್ಣ ಹೇಳಿಕೆ ಕುರಿತು ಮಾತನಾಡಿದ್ದು, ರೇವಣ್ಣ ಅವರಿಗೆ ಶಿಕ್ಷಣ ಅಂದರೆ ಏನು ಅಂತ ಗೊತ್ತಿಲ್ಲ. ನಾಲ್ಕು ಬಿಲ್ಡಿಂಗ್ ಕಟ್ಟೋದನ್ನೇ ಶಿಕ್ಷಣ ಅನ್ಕೊಂಡಿದ್ದಾರೆ. ದೇವೇಗೌಡರನ್ನು ಕಂಡರೆ ಎಲ್ಲರಿಗೂ ಅಪಾರ ಗೌರವವಿದೆ. ಮಾಜಿ ಸಿಎಂ ಕುಮಾರಸ್ವಾಮಿ, ರೇವಣ್ಣ ಅವರಿಗೆ ಯಾವ ರೀತಿ ಕೆಲಸ ನಡೆಸಬೇಕು, ಸುಧಾರಣೆ ಮಾಡಬೇಕೆಂಬ ಕಲ್ಪನೆ ಇಲ್ಲ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: 118 ವರ್ಷದ ಸನ್ಯಾಸಿನಿ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ 

    ಉನ್ನತ ಶಿಕ್ಷಣದಲ್ಲಿ ಸಾಕಷ್ಟು ಸುಧಾರಣೆ ತಂದಿದ್ದೇವೆ. ಪಾಪ ರೇವಣ್ಣ ಅವರಿಗೆ ಇದೆಲ್ಲ ಗೊತ್ತಿಲ್ಲ, ಸಹಿಸಿಕೊಳ್ಳಲು ಆಗುತ್ತಿಲ್ಲ. ಇವರ ವೇಗಕ್ಕೆ ನಾವೀಲ್ಲವಲ್ಲ, ಅಡ್ರೆಸ್ ಇಲ್ಲದಂಗೆ ಹೊಗಿದ್ದೇವೆ ಅನ್ನೋ ಸಮಸ್ಯೆಯಾಗಿದೆ. ಅವರು ಎಲ್ಲೆಲ್ಲೂ ಲೆಕ್ಕಕ್ಕೆ ಇಲ್ಲ, ರಿಯಾಯಿತಿ ಕೇಸ್‍ಗಳು ಅವರು ಕೆಲಸ ಮಾಡುವುದು ಹೇಗೆ ಅನ್ನೋದನ್ನು ತೋರಿಸಿ ಕೊಡುತ್ತೇನೆ ಎಂದರು.

    ರೇವಣ್ಣ ಅವರು ಬಹಳ ದಕ್ಷ, ಪ್ರಾಮಾಣಿಕ, ಸ್ವಜನಪಕ್ಷಪಾತವಿಲ್ಲದೆ ಪಾರದರ್ಶಕವಾಗಿ ಕೆಲಸ ಮಾಡಿರುವವರು. ಅವರು ವಿಚಾರ ಏನು ಅಂತ ಅವರ ಊರಿನವರಿಗೆ, ಜೊತೆಯಲ್ಲಿರುವವರಿಗೆ ಇಡೀ ರಾಜ್ಯಕ್ಕೆ ಗೊತ್ತಿದೆ. ನನ್ನ ವಿಚಾರದಲ್ಲಿ ಮಾತನಾಡುವ ನೈತಿಕತೆ, ಬದ್ಧತೆ, ಅರ್ಹತೆ ಅವರಿಗಿಲ್ಲ. ನನ್ನ ಬಗ್ಗೆ ಹೇಳಿಕೆ ಕೊಡಲು ಅವರು ಒಳ್ಳೆಯ ಕಲ್ಪನೆಗಳನ್ನು ವಿಚಾರಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ಕೊಟ್ಟರು.

    ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟೀಸ್ ವಿಚಾರವಾಗಿ ಮಾತನಾಡಿದ ಅವರು, ಈ ಕುರಿತು ಅವರೇ ಬಂದು ಹೇಳಬೇಕು. ನಿಮ್ಮ ಬಳಿ ಮಾಹಿತಿ ಇದ್ದರೆ ಕೊಡಿ ಅಂತ ಕರೆದಿದ್ದಾರೆ. ನೀವು ಕ್ರೈಂ ಮಾಡಿದ್ದೀರಾ ಎಂದು ಕರೆದಿಲ್ಲ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯಬಾರದು. ನೇರವಾಗಿ ಹೇಳಬೇಕು, ಸಾಕ್ಷಿ ಕೊಡಬೇಕು. ಕಾನೂನು ಪಾಲನೆ ಮಾಡುವವರು, ಸರ್ಕಾರ ನಡೆಸುವವರು ಈ ರೀತಿ ಮಾತನಾಡಿದರೆ ಎಷ್ಟು ತಿಳುವಳಿಕೆ ಇದೆ ಎಂದು ಪ್ರಶ್ನಿಸಿದರು. ಗೊಡಂಬಿ, ದ್ರಾಕ್ಷಿ ಕೊಟ್ಟರೆ ಯಾರೂ ಬೇಕಾದರೂ ತಿನ್ನುತ್ತಾರೆ. ಇವರೇನು ತಿಂದು ವಾಂತಿ ಮಾಡುತ್ತಾರಾ? ಹೇಳಿಕೆ ಕೊಡುವ ಮುನ್ನ ಯೋಚನೆ ಮಾಡಲಿ ಎಂದು ಕಿಡಿಕಾರಿದರು.

    ಸಹಾಯಕ ಪ್ರಾಧ್ಯಾಪಕರು, ಪಿಎಸ್‍ಐ ನೇಮಕಾತಿಯಲ್ಲಿ ಅಕ್ರಮ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ದೂರನ್ನು ದಾಖಲು ಮಾಡಿದ್ದಾರೆ. ವಿಚಾರಣೆ ನಡಿಯುತ್ತಿದೆ, ನಂತರ ಕ್ರಮ ತೆಗೆದುಕೊಳ್ಳಲಾಗುವುದು. ಇದರಲ್ಲಿ ಗೃಹ ಸಚಿವರ ವೈಫಲ್ಯ ಇಲ್ಲ. ಅವರ ದೊಡ್ಡತನ ಅವರ ಗಮನಕ್ಕೆ ಬಂದ ಕೂಡಲೇ ಕ್ರಮ ತೆಗೆದುಕೊಂಡಿದ್ದಾರೆ. ಗೃಹಸಚಿವರು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದಾರೆ. ಬೇರೆ ಯಾವ ಸರ್ಕಾರದಲ್ಲೂ ಈ ರೀತಿ ಕ್ರಮ ತೆಗೆದುಕೊಳ್ಳುತ್ತಿರಲಿಲ್ಲ. ಗೃಹಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಆರಗ ಅವನ್ನು ಪ್ರಶಂಸಿಸಿದರು. ಇದನ್ನೂ ಓದಿ: 4ನೇ ಅಲೆ ತಡೆಯೋದು ನಮ್ಮ ಕೈಯಲ್ಲಿಯೇ ಇದೆ: ತಜ್ಞ ವೈದ್ಯರು

    ಯಾರೇ ತಪ್ಪು ಮಾಡಿದರೂ ತಪ್ಪೇ. ಉಪ್ಪು ತಿಂದವನು ನೀರು ಕುಡಿಯಲೇಬೇಕು. ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ. ಗುತ್ತಿಗೆದಾರರಿಂದ ಪರ್ಸಂಟೇಜ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರವನ್ನು ಸಂಸ್ಕೃತಿ ರೀತಿ ಬೆಳೆಸಿದೆ. ಭ್ರಷ್ಟಾಚಾರ ಒಂದು ಸಂಸ್ಕ್ರತಿ ರೀತಿ ಬೆಳೆದಿದೆ. ಅದನ್ನು ಸಂಪೂರ್ಣವಾಗಿ ಸರಿಪಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಯತ್ನ ಪಡುತ್ತಿದ್ದಾರೆ. ಮುಖ್ಯಮಂತ್ರಿಗಳು ಗುತ್ತಿಗೆದಾರರನ್ನು ಕರೆದು ಮಾತನಾಡಿದ್ದಾರೆ. ಕೆಲವರಿಗೆ ದುಡ್ಡು ಮಾಡಬೇಕೆಂಬ ಮಾನಸಿಕ ಕಾಯಿಲೆ ಇದೆ. ಲೂಟಿ ಮಾಡಬೇಕೆಂದು ಕೆಲವರಿಗೆ ತಲೆಯಲ್ಲಿ ಬಂದಿದೆ ಅದನ್ನು ಕಿತ್ತು ಹಾಕಬೇಕು ಎಂದು ವಿವರಿಸಿದರು.

  • ನೀನು ದನ ಕಾಯೋನು, EO ಕೆಲಸದಲ್ಲಿ ಇದ್ದೀಯ – ಅಧಿಕಾರಿ ವಿರುದ್ಧ ಎಚ್‍.ಡಿ.ರೇವಣ್ಣ ಗರಂ

    ನೀನು ದನ ಕಾಯೋನು, EO ಕೆಲಸದಲ್ಲಿ ಇದ್ದೀಯ – ಅಧಿಕಾರಿ ವಿರುದ್ಧ ಎಚ್‍.ಡಿ.ರೇವಣ್ಣ ಗರಂ

    ಹಾಸನ: ನೀನು ದನ ಕಾಯೋನು ಇಓ ಕೆಲಸದಲ್ಲಿ ಇದ್ದೀಯ. ದನಗೆ ಇಂಜೆಕ್ಷನ್ ಕೊಡೋಕೆ ಹೋಗು ಎಂದು ತಾ.ಪಂ ಇಓಗೆ ಏಕವಚನದಲ್ಲೇ ಮಾಜಿ ಸಚಿವ ಎಚ್.ಡಿ.ರೇವಣ್ಣ ತರಾಟೆಗೆ ತೆಗೆದುಕೊಂಡ ಘಟನೆ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ.

    ಹಾಸನದ ಕೆಂಚಟ್ಟಹಳ್ಳಿ ಬಳಿ ಇರುವ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಮುಂಭಾಗ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ವಿದ್ಯಾರ್ಥಿಗಳು, ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕಾಮಗಾರಿ ವಿಚಾರವಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಆಗಮಿಸಿ ಜಿಲ್ಲಾಧಿಕಾರಿ ಮತ್ತು ತಾಪಂ ಇಒ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಎಚ್.ಡಿ.ರೇವಣ್ಣ, ತಾಪಂ ಇಒ ಕುರಿತು ನೀನು ದನ ಕಾಯೋನು, ಇಓ ಕೆಲಸದಲ್ಲಿ ಇದ್ದೀಯ. ಹೆಣ್ಣುಮಕ್ಕಳನ್ನು ಹೆದರಿಸ್ತೀಯಾ, ದನ ಕಾಯಕೆ ಹೋಗು ಎಂದು ಗದರಿದ್ರು. ಅದಕ್ಕೆ ಇಒ ಕಾಮಗಾರಿ ನಡೆಸಲು ಡಿಸಿ ನಿರ್ದೇಶನ ನೀಡಿದ್ದರು ಹಾಗಾಗಿ ಕಾಮಗಾರಿ ನಡೆಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಭು ಚವ್ಹಾಣ್ ಬಳಿ ಸಾಕ್ಷ್ಯ ಕೇಳಲ್ಲ ಯಾಕೆ – ಆರಗಗೆ ಪ್ರಿಯಾಂಕ್‌ ಖರ್ಗೆ ಸವಾಲು

    ಈ ಉತ್ತರ ಕೇಳಿ ಮತ್ತಷ್ಟು ಕೆರಳಿದ ರೇವಣ್ಣ, ಡಿಸಿ ಮನೆಗೆ ನುಗ್ಗು ಅಂತಾನೆ ಹೋಗಿ ನುಗ್ಗು ನೀನು. ಏ ಪಿಎ ಕರೆಯೋ ಅವನ್ಯಾರು? ಡಿಸಿ. ಇವರಿಬ್ಬರು ಸೇರಿಕೊಂಡು ಅದೇನ್ ಮಾಡ್ತರೆ ಮಾಡ್ಲಿ. ಎಷ್ಟು ಹೆಣ ಉರುಳಿಸುತ್ತಾರೆ ಉರುಳಿಸಲಿ. ವರ್ಗಾವಣೆಗೋಸ್ಕರ ಈ ರೀತಿ ಮಾಡ್ತೀರ ಎಂದು ಕಿಡಿಕಾರಿದರು. ಇದನ್ನೂ ಓದಿ: ಭಾರತದ 10, ಪಾಕಿಸ್ತಾನದ 6 ಯೂಟ್ಯೂಬ್ ಚ್ಯಾನೆಲ್‌ಗಳು ಬ್ಯಾನ್

    ಈ ವೇಳೆ ಜಿಲ್ಲಾಧಿಕಾರಿ ಆರ್.ಗಿರೀಶ್, ಸ್ವಲ್ಪ ಸಮಾಧಾನವಾಗಿ ಕೇಳಿ ಸರ್ ಎಂದು ರೇವಣ್ಣ ಅವರಿಗೆ ತಿಳಿಸಿದ್ರು. ಆಗ ರೇವಣ್ಣ ಜನ ವಿರೋಧ ಮಾಡುತ್ತಿದ್ದಾರೆ. ಟ್ರಕ್ ಟರ್ಮಿನಲ್ ಕಾಮಗಾರಿ ನಿಲ್ಲಿಸಿ. ಟ್ರಕ್ ಟರ್ಮಿನಲ್‍ಗೆ ಬೇರೆ ಕಡೆ ಜಾಗ ಕೊಡಿ. ಮಿನಿಸ್ಟರ್ ಹೇಳ್ತಾರೆ ಡಿಸಿ ಕಚೇರಿ ಎಂಎಲ್‍ಎಗೆ ಬರೆದು ಕೊಡಿ ಅಂತ, ಬರೆದು ಕೊಡುತ್ತೀರಾ? ಹಾಸನನ ಏನ್ ಎಂಎಲ್‍ಎಗೆ ಬರೆದುಕೊಟ್ಟಿದ್ದಾರ ಎಂದು ಪ್ರಶ್ನಿಸಿದರು. ಈ ವೇಳೆ ರೇವಣ್ಣ ಅವರಲ್ಲಿ ಮನವಿ ಮಾಡಿದ ಜಿಲ್ಲಾಧಿಕಾರಿ ಆರ್.ಗಿರೀಶ್, ನಾಳೆ, ನಾಡಿದ್ದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ಕರೆಯುತ್ತೇನೆ ಎಂದು ತಿಳಿಸಿದರು.

  • ಭವಾನಿ ರೇವಣ್ಣ ಶಾಸಕರಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ: ಹೆಚ್‍ಡಿ.ರೇವಣ್ಣ

    ಭವಾನಿ ರೇವಣ್ಣ ಶಾಸಕರಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ: ಹೆಚ್‍ಡಿ.ರೇವಣ್ಣ

    ಹಾಸನ: ಭವಾನಿರೇವಣ್ಣ ಒಂದು ದಿನ ಎಂಎಲ್‍ಎ ಆಗೇ ಆಗುತ್ತಾರೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಹೆಚ್‍ಡಿ.ರೇವಣ್ಣ ಹೇಳಿದ್ದು ಈ ಮೂಲಕ ಶಾಸಕ ಪ್ರೀತಂಗೌಡ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಹಾಸನದಲ್ಲಿ ಮತ್ತೆ ಹೆಚ್.ಡಿ.ರೇವಣ್ಣ ಮತ್ತು ಪ್ರೀತಂಗೌಡ ನಡುವೆ ವಾಕ್ಸಮರ ಜೋರಾಗಿದೆ. ನಿನ್ನೆ ಹಾಸನದಲ್ಲಿ ನಡೆದ ಶಾಸಕ ಎನ್.ಮಹೇಶ್ ಅಭಿಮಾನಿಗಳು ಹಾಗೂ ಬೆಂಬಲಿಗರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೀತಂಗೌಡ ಅವರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದ ಬಗ್ಗೆ ಟೀಕೆ ಮಾಡಿದ್ದರು. ಒಬ್ಬ ದಲಿತ ಸಮಾಜದ ಬಂಧು ಇಲ್ಲಿಯ ತನಕ ದೊಡ್ಡಗೌಡರ ಮನೆ ಒಳಗೆ ಹೋಗಿರುವ ಒಂದು ನಿದರ್ಶನ ನಮ್ಮ ಕಣ್ಮುಂದೆ ಇಲ್ಲ. ದಲಿತ ಬಂಧುಗಳು ದೊಡ್ಡಗೌಡರ ಮನೆಗೆ ಹೋದ ವೇಳೆ ಅವರು ಮನೆಯಿಂದ ಹೊರಟಿದ್ದಾರೆ. ದಲಿತ ಸಮಾಜದ ಬಂಧುಗಳನ್ನು ನೋಡಿದರೆ ಮತ್ತೆ ಮನೆ ಒಳಗೆ ಹೋಗಿ ಸ್ನಾನ ಮಾಡಿ ಬರುವ ಸಂಸ್ಕøತಿಯನ್ನು ಒಗ್ಗೂಡಿಸಿಕೊಂಡಿದ್ದಾರೆ. ಅಂತಹ ನಾಯಕತ್ವ ಜೆಡಿಎಸ್ ಅವರದ್ದು, ಹಾಸನ ಜಿಲ್ಲೆಯಲ್ಲಿ ದಲಿತ ಸಮಾಜವನ್ನು ಯಾರು ಕೇವಲವಾಗಿ ನೋಡುತ್ತಾರೆ ಅಂದರೆ ಅದು ಜಾತ್ಯಾತೀತ ಜನತಾದಳದವರು ಎಂದು ಶಾಸಕ ಪ್ರೀತಂಗೌಡ ಟೀಕೆ ಮಾಡಿದ್ದರು.

    ಹಾಸನ ಕ್ಷೇತ್ರದಿಂದ ನನ್ನ ವಿರುದ್ಧ ಸ್ಪರ್ಧಿಸುವಂತೆ ನಾನೇ ರೇವಣ್ಣ ಹಾಗೂ ಭವಾನಿ ಅಕ್ಕ ಅವರನ್ನು ಒತ್ತಾಯ ಮಾಡುತ್ತಿದ್ದೇನೆ. ರೆಡಿಯಾಗಿ ಬರಬೇಕಿರುವವರು ಅವರು, ನಾನು ರೆಡಿಯಾಗಿ ಫೀಲ್ಡ್ ಅಲ್ಲಿ ಇದ್ದೀನಿ ಎಂದು ಪಂಥಾಹ್ವಾನ ನೀಡಿದ್ದರು. ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್- ಬಿಜೆಪಿ ಎರಡೇ ಆಯ್ಕೆ, ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ: ಪ್ರೀತಂಗೌಡ

    ಇದೀಗ ಪ್ರೀತಂಗೌಡ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿರುವ ಹೆಚ್‍ಡಿ.ರೇವಣ್ಣ, ಅವರು ದೊಡ್ಡವರು. ದಿನ ಅವರ ಮನೆಯಲ್ಲಿ ದಲಿತರಿಗೆ ಊಟ ಹಾಕುತ್ತಿದ್ದಾರೆ. ಮೀಸಲಾತಿ ಇಲ್ಲದಿದ್ದಾಗ ಅಧಿಕಾರ ಕೊಟ್ಟಿರುವ ಪಕ್ಷ ಯಾವುದಾದರೂ ಇದ್ದರೆ ಅದು ದೇವೇಗೌಡರ ಪಕ್ಷ. ಇವರ ಯೋಗ್ಯತೆಗೆ ಅಲ್ಪಸಂಖ್ಯಾತರ ಮೇಲೆ ಆರೋಪ ಮಾಡಲು ಹೊರಟಿದ್ದಾರೆ. ನಮ್ಮ ಮನೆಗೆ ಎಷ್ಟು ಜನ ದಲಿತರನ್ನು ಕರೆದುಕೊಂಡು ಬರುತ್ತಾರೋ ಬರಲಿ ಊಟ ಹಾಕುತ್ತೇನೆ. ನಮ್ಮ ಬಗ್ಗೆ ಮಾತನಾಡದಿದ್ದರೆ ಅವರ ಹೊಟ್ಟೆಪಾಡು ನಡೆಯಲ್ಲ. ಮಾನ ಮಾರ್ಯಾದೆ ಇದ್ದರೆ ಇರುವಷ್ಟು ದಿನ ವ್ಯಾಪಾರ ಮಾಡಿಕೊಂಡು ಮನೆಯಲ್ಲಿ ಇರಲಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರದ ಜನ್ಮವೇ ಭ್ರಷ್ಟಾಚಾರದ್ದು: ಡಿಕೆಶಿ

    Revanna

    ಇದೇ ವೇಳೆ, ಹಾಸನಕ್ಕೆ ಭವಾನಿ ರೇವಣ್ಣ ಬರಲಿ ಎಂದು ಆಹ್ವಾನ ನೀಡಿದ್ದ ಪ್ರೀತಂಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, ಇವನನ್ನು ಕೇಳಿ ಯಾರೂ ಅಭ್ಯರ್ಥಿ ಮಾಡುತ್ತಾರೆ. ಕಾಂಗ್ರೆಸ್ ಮಾಡಿದ ತಪ್ಪಿಗೆ ಬಿಜೆಪಿ ಬಂತು, ಇಲ್ಲ ಅಂದಿದ್ದರೆ ಈ ಗಿರಾಕಿ ಎಲ್ಲಿ ಇರುತ್ತಿರಲಿಲ್ಲ. ಯಡಿಯೂರಪ್ಪನ ಸರ್ಕಾರ ಬಂದಿದ್ದಕ್ಕೆ ಜೀವ ಉಳಿಸಿಕೊಂಡಿದ್ದಾನೆ. ನಾನು ಅವನನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಅವರು ದೊಡ್ಡ ವ್ಯಕ್ತಿ. ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ, ನಾನು ಹೆಬ್ಬೆಟ್ಟು. ಅವರು ಬಾರ್‍ಅಟ್‍ಲಾ ಓದಿರುವವರು. ಅವರು ಯಡಿಯೂರಪ್ಪ, ಅವರ ಮಗನ ಹತ್ತಿರ ಓದಿ ಬಂದಿರುವವರು. ಭವಾನಿರೇವಣ್ಣ ಒಂದು ದಿನ ಎಂಎಲ್‍ಎ ಆಗೇ ಹಾಗುತ್ತಾರೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಐದು ವರ್ಷ, ಹತ್ತು ವರ್ಷ ಆಗುತ್ತೋ ಹೊಳೆನರಸೀಪುರದಲ್ಲಿ ಭವಾನಿರೇವಣ್ಣಗೆ ಟಿಕೆಟ್ ಕೊಟ್ಟರೆ ನಾನು ಕೆಲಸ ಮಾಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

  • ಪಾಪ ಈಶ್ವರಪ್ಪ – ಕಾಂಗ್ರೆಸ್ ಕಾಲದಲ್ಲಿ ನಡೆದ ಪರ್ಸಂಟೇಜ್ ಬಗ್ಗೆ ಯಾರು ಮಾತನಾಡಲಿಲ್ಲ: ಹೆಚ್‍ಡಿ.ರೇವಣ್ಣ

    ಪಾಪ ಈಶ್ವರಪ್ಪ – ಕಾಂಗ್ರೆಸ್ ಕಾಲದಲ್ಲಿ ನಡೆದ ಪರ್ಸಂಟೇಜ್ ಬಗ್ಗೆ ಯಾರು ಮಾತನಾಡಲಿಲ್ಲ: ಹೆಚ್‍ಡಿ.ರೇವಣ್ಣ

    ಹಾಸನ: ಭ್ರಷ್ಟಾಚಾರ ಯಾರ್ಯಾರಿಂದ ಎಲ್ಲೆಲ್ಲಿ ಹುಟ್ಟಿಕೊಂಡಿದೆ. ಪಾಪ ಈಶ್ವರಪ್ಪ ಅವರ ಬಗ್ಗೆ ನಾನು ಮಾತನಾಡಲ್ಲ. ಕಾಂಗ್ರೆಸ್‍ನವರು ಈಗ ಮೇಲೆ ಹತ್ತಿ ಕುಣಿಯುತ್ತಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ನಡೆದ ಪರ್ಸಂಟೇಜ್ ಬಗ್ಗೆ ಯಾಕೆ ಮಾತನಾಡಲಿಲ್ಲ ಎಂದು ಮಾಜಿ ಸಚಿವ ಹೆಚ್‍.ಡಿ ರೇವಣ್ಣ ಪ್ರಶ್ನೆ ಮಾಡಿದ್ದಾರೆ.


    ಹಾಸನದಲ್ಲಿ ಮಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಮೇಲೆ ಹತ್ತಿ ಕುಣಿಯದು ಬೇಡ, ನಿಮ್ಮ ಕಾಲದಲ್ಲಿ ಏನಾಗಿದೆ. ಈಶ್ವರಪ್ಪ ತಪ್ಪು ಮಾಡಿದ್ದರೆ ತಪ್ಪೇ. ತನಿಖೆ ನಂತರ ಸತ್ಯಾಂಶ ತಿಳಿಯಲಿದೆ. ವರ್ಕ್ ಆರ್ಡರ್ ಇಲ್ಲದೆ ಕೆಲಸ ಮಾಡಿದ್ದರೆ ಸರ್ಕಾರ ಆ ಕುಟುಂಬಕ್ಕೆ ಪರಿಹಾರ ಕೊಡಬೇಕು. ಆ ಕುಟುಂಬಕ್ಕೆ ದೇವರು ದು:ಖ ಭರಿಸುವ ಶಕ್ತಿ ನೀಡಲಿ. ರಾಷ್ಟ್ರದ ಐಕ್ಯತೆಗೆ ಧಕ್ಕೆ ತರಬೇಡಿ, ಎರಡು ರಾಷ್ಟ್ರೀಯ ಪಕ್ಷಗಳಿಗೂ ಹೇಳುತ್ತೇನೆ. ಎಲ್ಲಾ ಸಮುದಾಯದವರು ಸೇರಿ ದೇಶ ಕಟ್ಟಬೇಕಿದೆ. ರಾಜಕೀಯಕ್ಕೋಸ್ಕರ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಬೇರೆ ಬೇರೆ ಅಂತ ಮಾಡಲು ಹೋಗಬೇಡಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಾವೆಲ್ಲಾ ಬಾರ್‌ನಲ್ಲಿ ಕುಡಿದಿದ್ವಿ, ಸಂತೋಷ್ ಫ್ರೂಟ್ ಜ್ಯೂಸ್ ತಗೊಂಡು ರೂಮ್‍ಗೆ ಹೋಗಿದ್ದರು – ಸ್ನೇಹಿತರು ಹೇಳಿದ್ದೇನು?

    ನಾಲ್ಕು ದಿನ ಹಾಸನ ಜಿಲ್ಲೆಯಲ್ಲಿ ಜನತಾ ಜಲಧಾರೆ ಕಾರ್ಯಕ್ರಮ
    ನಾಳೆ ಹಾಸನ ಜಿಲ್ಲೆಯ ಎರಡು ಕಡೆ ಜನತಾ ಜಲಧಾರೆ ಕಾರ್ಯಕ್ರಮ ನಡೆಯಲಿದೆ. ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನ ಶ್ರೀರಾಮದೇವರ ಕಟ್ಟೆ ಹಾಗೂ ಸಕಲೇಶಪುರ ತಾಲೂಕಿನ ಹೆನ್ನಲಿಯಲ್ಲಿ ಎತ್ತಿನಹೊಳೆಯಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಹಾಸನ ಜಿಲ್ಲೆಯ ಶ್ರೀರಾಮದೇವರ ಕಟ್ಟೆ, ಗೊರೂರು ಅಣೆಕಟ್ಟು, ವಾಟೆಹೊಳೆ, ಎತ್ತಿನಹೊಳೆ, ಯಗಚಿ ಡ್ಯಾಂನಲ್ಲಿ ಕಾರ್ಯಕ್ರಮ ಮಾಡಲಾಗುವುದು. ಜಿಲ್ಲೆಯ ಎಲ್ಲಾ ಶಾಸಕರು, ತುಮಕೂರಿನ ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಏ.20 ರಂದು ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ತಪ್ಪು ಮಾಡಿದ್ದರೆ ಶಿಕ್ಷಿಸು, ಇಲ್ಲವೇ ರಕ್ಷಿಸು – ಮನೆದೇವರ ಮೊರೆಹೋದ ಈಶ್ವರಪ್ಪ