Tag: HD Revanna

  • ಸ್ವರೂಪ್‍ಗೆ ಟಿಕೆಟ್ ನೀಡುವಂತೆ ಒತ್ತಾಯ – ಕಾರ್ಯಕರ್ತರನ್ನು ಎದ್ದು ಹೋಗಿ ಎಂದು ಕೆಂಡಾಮಂಡಲವಾದ ರೇವಣ್ಣ

    ಸ್ವರೂಪ್‍ಗೆ ಟಿಕೆಟ್ ನೀಡುವಂತೆ ಒತ್ತಾಯ – ಕಾರ್ಯಕರ್ತರನ್ನು ಎದ್ದು ಹೋಗಿ ಎಂದು ಕೆಂಡಾಮಂಡಲವಾದ ರೇವಣ್ಣ

    ಹಾಸನ: ನಗರದ ಜಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಸಭೆ ಉದ್ಘಾಟಿಸುವ ಮುನ್ನವೇ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಇದು ಟಿಕೆಟ್ ಘೋಷಣೆ ಮಾಡುವ ಸಭೆಯಲ್ಲ ಪಕ್ಷ ಸಂಘಟನೆ ಹಾಗೂ ಮಳೆಯಿಂದ ಆಗಿರುವ ಹಾನಿ ಮತ್ತು ಪರಿಹಾರ ನೀಡುವಂತೆ ಗಮನ ಸೆಳೆಯಲು ಚರ್ಚಿಸಲು ಕರೆದಿರುವ ಸಭೆಯಾಗಿದ್ದು ಯಾರು ಯಾರ ಪರ ಘೋಷಣೆ ಕೂಗಬಾರದೆಂದು ತಾಕೀತು ಮಾಡಿದರು.

    ಸಭೆ ಉದ್ಘಾಟನೆ ಆಗುತ್ತಿದ್ದಂತೆ ಮಾಜಿ ಶಾಸಕ ದಿ.ಎಚ್.ಎಸ್.ಪ್ರಕಾಶ್ ಪುತ್ರ ಹೆಚ್.ಪಿ.ಸ್ವರೂಪ್‍ಗೆ ಹಾಸನ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಿವಂತೆ ಕಾರ್ಯಕರ್ತರು ಒತ್ತಾಯಿಸಿದರು. ಇದರಿಂದ ಕೆರಳಿದ ರೇವಣ್ಣ ಇವೆಲ್ಲ ನನ್ನ ಹತ್ರ ನಡೆಯಲ್ಲ. ಎಣ್ಣೆ ಕುಡಿಸಿಕೊಂಡು ಬಂದು ಘೋಷಣೆ ಕೂಗಿದ್ರೆ ನಾನು ಹೆದರಲ್ಲ ಎದ್ದು ಹೊರಗೆ ಹೋಗಿ ಎಂದು ಗದರಿದರು. ಇದರಿಂದ ಕೆರಳಿದ ಸ್ವರೂಪ್ ಬೆಂಬಲಿಗರು ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಂಬಲಿಗರ ಆಕ್ರೋಶದಿಂದ ರೇವಣ್ಣ ವೇದಿಕೆಯಲ್ಲಿ ಸುಮ್ಮನೆ ಕುಳಿತರು. ಇದನ್ನೂ ಓದಿ: ಸಮವಸ್ತ್ರ ನಿರ್ಧಾರ ಶಿಕ್ಷಣ ಹಕ್ಕು ಉಲ್ಲಂಘನೆಯಲ್ಲ – ಹಿಜಬ್ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಅಭಿಪ್ರಾಯ

    ನಂತರ ವೇದಿಕೆಯ ಮೇಲೆ ಕುಳಿತಿದ್ದ ಎಚ್.ಪಿ.ಸ್ವರೂಪ್ ವಿರುದ್ಧ ರೇವಣ್ಣ ಕೆಂಡಾಮಂಡಲರಾದರು. ಮೈಕ್ ಎಸೆದು ಸ್ವರೂಪ್ ವಿರುದ್ಧ ಸಿಟ್ಟಾದರು. ಈ ವೇಳೆ ಬೆಂಬಲಿಗರನ್ನು ಸಮಾಧಾನ ಮಾಡಲು ಸ್ವರೂಪ್ ಹರಸಾಹಸಪಟ್ಟರು. ಆದರೂ ಸುಮ್ಮನಾಗದ ಕಾರ್ಯಕರ್ತರು ಸ್ವರೂಪ್ ಪರ ಘೋಷಣೆಗಳನ್ನು ಕೂಗಿ ಸಭೆಯಿಂದ ಹೊರ ನಡೆದರು. ಅಲ್ಲೇ ಹಾಕಲಾಗಿದ್ದ ಜೆಡಿಎಸ್ ಮುಖಂಡ ಪ್ರಸಾದ್‍ಗೌಡರ ಫ್ಲೆಕ್ಸ್‌ಗಳನ್ನು ಹರಿದು ಹಾಕಿದರು. ಸ್ವರೂಪ್‌ಗೆ ಟಿಕೆಟ್ ಕೊಡಬೇಕು ಮನೆಮನೆಗೆ ಹೋಗಿ ಜನರ ಕಾಲಿಗೆ ಬಿದ್ದು ಗೆಲ್ಲಿಸಿಕೊಂಡು ಬರುತ್ತೇವೆ. ಇಲ್ಲವಾದಲ್ಲಿ ಬುದ್ಧಿ ಕಲಿಸುತ್ತೇವೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ನಿದ್ರೆ ಬರುತ್ತಿಲ್ಲ ಅಂತ 19ರ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

    Live Tv
    [brid partner=56869869 player=32851 video=960834 autoplay=true]

  • ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಿ- ಮತ್ತೆ ರೇವಣ್ಣಗೆ ಆಹ್ವಾನ ನೀಡಿದ ಪ್ರೀತಂಗೌಡ

    ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಿ- ಮತ್ತೆ ರೇವಣ್ಣಗೆ ಆಹ್ವಾನ ನೀಡಿದ ಪ್ರೀತಂಗೌಡ

    ಹಾಸನ: ರೇವಣ್ಣ ಅವರೇ ನಿಮಗೆ ಹಾಸನ ವಿಧಾನಸಭಾ ಕ್ಷೇತ್ರದ ಬಗ್ಗೆ ತುಂಬಾ ಆಸಕ್ತಿ ಇದ್ದರೆ ನೀವು ಬಂದು ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಿ ಎಂದು ಮತ್ತೊಮ್ಮೆ ಶಾಸಕ ಪ್ರೀತಂಗೌಡ ಮಾಜಿಸಚಿವ ಎಚ್.ಡಿ.ರೇವಣ್ಣ ಅವರಿಗೆ ಆಹ್ವಾನ ಕೊಟ್ಟಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಹೆಚ್.ಡಿ. ರೇವಣ್ಣ ಅವರ ಆಲೋಚನೆಗಳು ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಒಗ್ಗೋದಿಲ್ಲ. ಅವರೇನು ರಾಜ ಕಾರಣ ಮಾಡುತ್ತಾರೋ ಅದೇ ರಾಜಕಾರಣವನ್ನು ನಾನು ಮಾಡುತ್ತಿದ್ದೇನೆ. ನನ್ನ ಕ್ಷೇತ್ರದ ಪ್ರತಿಯೊಂದು ಕೆಲಸಕ್ಕೆ ಮಾಜಿ ಸಚಿವರು ಹಾಗೂ ಹೊಳೆನರಸೀಪುರದ ಶಾಸಕರಾದ ಹೆಚ್.ಡಿ.ರೇವಣ್ಣ ಹಸ್ತಕ್ಷೇಪ ಮಾಡುತ್ತಿದ್ದಾರೆ. ಹಿಂದೆ ನಾನು ಹೇಳಿದ್ದೇ, ನನ್ನ ವಿರುದ್ಧ ರೇವಣ್ಣ ಸ್ಪರ್ಧಿಸಿದರೆ ಐವತ್ತು ಸಾವಿರ ಓಟಿನಿಂದ ಗೆಲ್ಲುತ್ತೇನೆ ಹೇಳಿದ್ದು, ಈಗಲೂ ಆ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದರು.

    ಟ್ರಕ್ ಟರ್ಮಿನಲ್ ವಿಚಾರ ಹಾಗೂ ಪದೇ ಪದೇ ಹಾಸನದ ವಿಚಾರಕ್ಕೆ ಬರುತ್ತಿದ್ದಾರೆ. ನೀವು ಮಾಜಿ ಸಚಿವರು, ನೀವು ಈಗಿರುವ ಸರ್ಕಾರದ ಭಾಗವಲ್ಲ. ನಿಮಗೆ ಹಾಸನ ವಿಧಾನಸಭಾ ಕ್ಷೇತ್ರದ ಬಗ್ಗೆ ತುಂಬಾ ಆಸಕ್ತಿ ಇದ್ದರೆ, ನೀವು ಬಂದು ನನ್ನ ವಿರುದ್ಧ ಚುನಾವಣೆಗೆ ನಿಲ್ಲಿ ಎಂದು ಆಹ್ವಾನ ಕೊಟ್ಟಿರುವುದು ನೂರಕ್ಕೆ ನೂರು ಸತ್ಯ. ನನ್ನ ಹೇಳಿಕೆಯನ್ನು ಯಾರು ಯಾವ ರೀತಿಯಾದರೂ ಅರ್ಥ ಮಾಡಿಕೊಳ್ಳಲಿ. ದಿನ ಬೆಳಗ್ಗೆ ಎದ್ದು ಹಾಸನ ವಿಧಾನಸಭಾ ಕ್ಷೇತ್ರದ ವಿಚಾರಕ್ಕೆ ಬಂದಾಗ ಒಬ್ಬ ಜನಪ್ರತಿನಿಧಿಯಾಗಿ ನನಗೆ ಕಿರಿಕಿರಿ ಆಗಿರುವುದು ಸತ್ಯ ಎಂದು ತಿಳಿಸಿದರು. ಇದನ್ನೂ ಓದಿ: ಕ್ಷಮೆ ಕೇಳೋಕೆ ಸಿದ್ಧ, ಒತ್ತುವರಿ ತೆರವು ಮಾಡಿಸಿ- ಕಾಂಗ್ರೆಸ್‍ಗೆ ಲಿಂಬಾವಳಿ ಟಾಂಗ್

    ಹೊಳೆನರಸೀಪುರ ಶಾಸಕರಾಗಿ ಹಾಸನ ವಿಧಾನಸಭಾ ಕ್ಷೇತ್ರದ ಬಿ.ಎಂ. ರಸ್ತೆ ಒಡೆದರು. ದಾಸರಕೊಪ್ಪಲಿನ ರೈತರಿಗೆ ತೊಂದರೆ ಕೊಟ್ಟಿದ್ದಾರೆ. ಅದೇ ರೀತಿ ಸಾಕಷ್ಟು ನೋವು ಅನುಭವಿಸಿರುವವರು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಇದ್ದಾರೆ. ಅವರ ರಾಜಕಾರಣದ ಆಲೋಚನೆಗಳು ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಒಗ್ಗುವುದಿಲ್ಲ. ರೇವಣ್ಣ ಅವರು ನನ್ನ ವಿರುದ್ಧ ಚುನಾವಣೆಗೆ ನಿಂತರೆ ನನಗೇನು ಸಂಕೋಚವಿಲ್ಲ ಎಂದು ಹೇಳಿದರು.

    ರೇವಣ್ಣ ಅವರು ಬಹಳ ಹಿರಿಯರು, ಅವರ ಬಗ್ಗೆ ಬಹಳ ಗೌರವವಿದೆ. ರಾಜಕಾರಣ ಬಂದಾಗ ನಾನು ಬಿಜೆಪಿ, ಅವರು ಜನತಾದಳ, ಅವರೇನು ಏನು ರಾಜಕಾರಣ ಮಾಡುತ್ತಾರೋ, ನಾನು ಅದೇ ರಾಜಕಾರಣ ಮಾಡುತ್ತಿದ್ದೇನೆ. ಈಗ ಅವರಿಗೆ ಚಾಲೆಂಜ್, ಪಂಥಹ್ವಾನ ಏನು ಇಲ್ಲ. ನಿಮ್ಮ ಕ್ಷೇತ್ರ ಹೊಳೆನರಸೀಪುರ ಸ್ವಾಮಿ, ನೀವು ನಿಮ್ಮ ಕ್ಷೇತ್ರದ ಕೆಲಸ ಮಾಡಿ. ನಾನು ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ನಾನು ಇಲ್ಲಿ ಕೆಲಸ ಮಾಡ್ತಿನಿ ಎಂದು ಗುಡುಗಿದರು. ಇದನ್ನೂ ಓದಿ: ಬಿಜೆಪಿಯಲ್ಲೇ ಇರಿ, ಆದ್ರೆ ಎಎಪಿಗಾಗಿ ಕೆಲಸ ಮಾಡಿ: BJP ಕಾರ್ಯಕರ್ತರಲ್ಲಿ ಕೇಜ್ರಿವಾಲ್‌ ಮನವಿ

    ನೀವು ಮಂತ್ರಿಯಾದರೆ ಇಡೀ ಜಿಲ್ಲೆಯ ಬಗ್ಗೆ ಯೋಚನೆ ಮಾಡಿ, ನಾನು ಮಂತ್ರಿಯಾದರೆ ಇಡೀ ಜಿಲ್ಲೆಯ ಬಗ್ಗೆ ಯೋಚನೆ ಮಾಡುತ್ತೇನೆ. ನಮ್ಮ ನಮ್ಮ ಕೆಲಸ ಮಾಡಿಕೊಂಡು ಸೌಹಾರ್ದಯುತವಾಗಿ ಜನರ ಏಳಿಗೆಗೆ ಕೆಲಸ ಮಾಡೋಣ ಎಂದು ಕುಟುಕಿದರು.

    ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಫುಲ್ ಆ್ಯಕ್ಟೀವ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಾಸನ ವಿಧಾನಸಭಾ ಕ್ಷೇತ್ರ ಘಟಾನುಘಟಿ ನಾಯಕರನ್ನು ಹೊಂದಿರುವ ಕ್ಷೇತ್ರ, ಜನರ ಆಶೀರ್ವಾದ, ತಾಯಿ ಹಾಸನಾಂಬೆ ಕೃಪೆಯಿಂದ ನಾನು ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಎಲ್ಲಾ ಪಕ್ಷದ ಮುಖಂಡರು ರಾಜಕಾರಣ ಹಾಗೂ ಚುನಾಯಿತ ಜನಪ್ರತಿನಿಧಿಯಾಗಲು ಪ್ರಯತ್ನ ಪಡುತ್ತಿದ್ದಾರೆ. ಅವರೆಲ್ಲರೂ ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಇರಲಿ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜನರ ಸೇವೆ ಮಾಡಲು ಬಂದರೆ ಬೇಡ ಅನ್ನುವ ಶಕ್ತಿ ನನ್ನಲ್ಲಿಲ್ಲ. ಅವರು ಜನರ ಕೆಲಸ ಮಾಡಲಿ, ನಾನು ಮಾಡುತ್ತೇನೆ, ಜನರಿಗೆ ಒಳಿತಾಗುವ ಕೆಲಸವನ್ನು ಮಾಡೋಣ ಎಂದರು.

    Live Tv
    [brid partner=56869869 player=32851 video=960834 autoplay=true]

  • ಮನೆಗೊಂದು ಬಾವುಟ, ಕೊಟ್ಟಿದ್ದಾರೆ, ಹೋಗ್ತಾ, ಬರುತ್ತಾ ಹಾರಿಸುತ್ತಿರಿ: HD ರೇವಣ್ಣ

    ಮನೆಗೊಂದು ಬಾವುಟ, ಕೊಟ್ಟಿದ್ದಾರೆ, ಹೋಗ್ತಾ, ಬರುತ್ತಾ ಹಾರಿಸುತ್ತಿರಿ: HD ರೇವಣ್ಣ

    ಹಾಸನ: ಬಿಜೆಪಿ ಆಡಳಿತ ಸರ್ಕಾರದ ವಿರುದ್ಧ ಇಂದು ಆಕ್ರೋಶ ಹೊರಹಾಕಿರುವ ಮಾಜಿಸಚಿವ ಹಾಗೂ ಹಾಲಿ ಶಾಸಕ ಹೆಚ್.ಡಿ.ರೇವಣ್ಣ ಬಿಜೆಪಿ ಸರ್ಕಾರದ ಆಡಳಿತವನ್ನು ಬ್ರಿಟಿಷರ ಆಳ್ವಿಕೆಗೆ ಹೋಲಿಸಿದ್ದಾರೆ.

    ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬ್ರಿಟಿಷರು ಆಳ್ವಿಕೆ ಮಾಡುತ್ತಿದ್ದರು. ಈಗ ಕೆಲವೇ ಕೆಲವು ವರ್ಗದವರು ಆಡಳಿತ ಮಾಡ್ತಿದ್ದಾರೆ. ಉಳ್ಳವರು ರಾಜ್ಯವನ್ನು ಆಳುತ್ತಿದ್ದಾರೆ. ಇದನ್ನು ನಾನು ನೊಂದು ಹೇಳುತ್ತಿದ್ದೇನೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ದೇವೇಗೌಡರು, ಅವರ ಕುಟುಂಬ ಬಿಟ್ಟು ರಾಜಕಾರಣ ಮಾಡಲು ಆಗಲ್ಲ: ಸೂರಜ್‍ರೇವಣ್ಣ

    ರಾಜ್ಯದಲ್ಲಿ ಆಡಳಿತ ಇದೇ ರೀತಿ ಮುಂದುವರಿದರೆ ಯಡಿಯೂರಪ್ಪ ಮನೆ ಮನೆಗೆ ಹೋಗಿ ಗಂಟೆ ಹೊಡೆಯಬೇಕಾಗುತ್ತೆ, ಬಿಜೆಪಿ 40 ಸೀಟಿಗೆ ಬಂದು ನಿಲ್ಲುತ್ತೆ. ಜೆಡಿಎಸ್ ಮುಗಿಸುತ್ತೀನಿ ಅಂಥ ಎರಡೂ ರಾಷ್ಟ್ರೀಯ ಪಕ್ಷಗಳು ಅಂದುಕೊಂಡಿದ್ದರೆ, ಅದು ಭ್ರಮೆ. ರಾಜ್ಯದಲ್ಲಿ ಜೆಡಿಎಸ್ ಏನು ಅಂಥ ತೋರಿಸ್ತೀವಿ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಎರಡು ಪಕ್ಷಗಳಿಗೆ ಪರ್ಯಾಯವಾಗಿ ನಿಲ್ಲಲಿದೆ ಎಂದು ಸವಾಲು ಹಾಕಿದ್ದಾರೆ.

    75 ವರ್ಷವಾದರೂ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಸರ್ಕಾರಿ ಕಾಲೇಜುಗಳನ್ನು ಮುಚ್ಚಿಬಿಡಿ. ಮನೆಗೊಂದು ಬಾವುಟ ಕೊಟ್ಟಿದ್ದಾರೆ. ಹೋಗಾಬೇಕಾದರೆ, ಬರಬೇಕಾದರೆ ಬಾವುಟ ಬೀಸಿ ಅಂಥ, ಗಾಳಿ ಬೀಸಕೆ, ಸೊಳ್ಳೆ ಓಡ್ಸೋಕೆ ಬಾವುಟ ಕೊಟ್ಟವರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದೊಡ್ಡಗೌಡರ ಮೇಲೆ ಯಾರದ್ದೋ ಕೆಟ್ಟ ಕಣ್ಣು ಬಿದ್ದಿದೆ – ಹೆಚ್‌ಡಿಕೆ, ರೇವಣ್ಣ ಕಣ್ಣೀರು

    ತೋಟಗಾರಿಕೆ ಹಾಗೂ ಪ್ರವಾಸೋದ್ಯಮ ಸಚಿವರು ಕಾಣೆಯಾಗಿದ್ದಾರೆ. ಅವರನ್ನ ಹುಡುಕಿಕೊಟ್ಟವರಿಗೆ ಬಹುಮಾನವಾಗಿ ಸೌತೆಕಾಯಿ ಕೊಡುತ್ತೇನೆ ಎಂದು ರೇವಣ್ಣ ವ್ಯಂಗ್ಯವಾಡಿದ್ದಾರೆ.

    ಸಚಿವ ಮಾಧುಸ್ವಾಮಿ ಒಬ್ಬರೇ ಎಷ್ಟು ಅಂತಾ ಬಡ್ಕೋತಾರೆ. ಅವರ ಬಗ್ಗೆ ಗೌರವವಿದೆ. ಪಾಪ ಆತ ಅಸೆಂಬ್ಲಿಯಲ್ಲೂ ಮಾತನಾಡುತ್ತಾರೆ. ಇದನ್ನು ಸಹಿಸದ ಕೆಲ ಗಿರಾಕಿಗಳು ಅವರ ಮೇಲೆಯೇ ಸವಾರಿ ಮಾಡಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.

    ಅದ್ಯಾರೋ ತೋಟಗಾರಿಕೆ ಮಂತ್ರಿ ಅಂಥ ಮಾಡಿದ್ದಾರೆ. ನಾನು ಮುಖ್ಯ ಕಾರ್ಯದರ್ಶಿ ಹಾಗೂ ಐಜಿ ಅವರಿಗೆ ಮನವಿ ಮಾಡುತ್ತೇನೆ. ಆ ತೋಟಗಾರಿಕೆ ಮಂತ್ರಿ ಎಲ್ಲಿ ಸಿಕ್ತಾರೆ ಅಂತ ಹೇಳಿ, ಇಲ್ಲ ತೋಟಗಾರಿಕೆ ಮಂತ್ರಿಗಳನ್ನು ಹುಡುಕಿಕೊಡಿ. ಅವರ ದರ್ಶನ ಪಡೆಯಲು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್.ಡಿ.ರೇವಣ್ಣ ಕಾಯುತ್ತಿದ್ದಾರೆ. ಅವರ ದರ್ಶನ ಯಾವಾಗ ಸಿಗುತ್ತೆ? ಡಿಜಿ ಮತ್ತು ಐಜಿ ಅವರ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಕೆ.ಎನ್.ರಾಜಣ್ಣ ಹೀಗೆ ಮಾತಾಡಿದ್ರೆ ಹುಚ್ಚು ನಾಯಿಗೆ ಹೊಡೆದಂಗೆ ಹೊಡಿತಾರೆ – ಪ್ರಜ್ವಲ್ ರೇವಣ್ಣ ಕಿಡಿ

    ಮಂತ್ರಿಗಳು ಊರು ಬಿಟ್ಟು ಹೋಗಿ ಕಾಣಿಯಾಗಿದ್ದಾರೆ. ಅವರ ಜೊತೆ ಪ್ರವಾಸೋದ್ಯಮ ಮಂತ್ರಿಗಳು, ವಿಜಯನಗರ ಹೊಸ ಜಿಲ್ಲೆ ಮಾಡಿದಂತಹ ಮಂತ್ರಿಗಳು ಕಾಣೆಯಾಗಿದ್ದಾರೆ. ಕೂಡಲೇ ಮಂತ್ರಿಗಳನ್ನ ಹುಡುಕಿಕೊಟ್ಟರೆ ನಮ್ಮ ಹೊಳೆನರಸೀಪುರ ತಾಲ್ಲೂಕಿನ ಜನತೆ ಕಡೆಯಿಂದ ಅವರಿಗೆ ಬಹುಮಾನ ಕೊಡಲಾಗುವುದು. ನಮ್ಮಲ್ಲಿ ಒಳ್ಳೆಯ ಟೇಸ್ಟ್ ಆಗಿರುವ ಸೌತೆಕಾಯಿ ಸಿಗುತ್ತೆ. ಎಲ್ಲೂ ಆ ರೀತಿ ಟೇಸ್ಟ್ ಇರಲ್ಲ, ಆ ಸೌತೆಕಾಯಿಯನ್ನೇ ಬಹುಮಾನವಾಗಿ ಕೊಡಲಾಗುವುದು ಎಂದು ಲೇವಡಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೊಡ್ಡಗೌಡರ ಮೇಲೆ ಯಾರದ್ದೋ ಕೆಟ್ಟ ಕಣ್ಣು ಬಿದ್ದಿದೆ – ಹೆಚ್‌ಡಿಕೆ, ರೇವಣ್ಣ ಕಣ್ಣೀರು

    ದೊಡ್ಡಗೌಡರ ಮೇಲೆ ಯಾರದ್ದೋ ಕೆಟ್ಟ ಕಣ್ಣು ಬಿದ್ದಿದೆ – ಹೆಚ್‌ಡಿಕೆ, ರೇವಣ್ಣ ಕಣ್ಣೀರು

    ಮಂಡ್ಯ: ಮಂಡ್ಯದಲ್ಲಿ ಪಕ್ಷ ನೆಲೆ ಗಟ್ಟಿ ಮಾಡಿಕೊಳ್ಳಲು ದಳಪತಿಗಳು ಕಸರತ್ತು ನಡೆಸಿದ್ದಾರೆ. ನಾಗಮಂಗಲದಲ್ಲಿ ಶಕ್ತಿ ಪ್ರದರ್ಶನ ಮಾಡುವ ಜೊತೆ ಜೊತೆಗೆ ತಂದೆ ದೇವೇಗೌಡರ ಅನಾರೋಗ್ಯ ನೆನೆದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಹೆಚ್.ಡಿ.ರೇವಣ್ಣ ಸೋದರರು ವೇದಿಕೆ ಮೇಲೆ ಕಣ್ಣೀರು ಇಟ್ಟಿದ್ದಾರೆ.

    ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಮನೆಯಲ್ಲಿಯೇ ಕುಳಿತು ನಾಗಮಂಗಲ ಕಾರ್ಯಕ್ರಮ ವೀಕ್ಷಿಸುತ್ತಿರುವ ವೀಡಿಯೋವನ್ನು ವೇದಿಕೆಯ ಎಲ್‌ಇಡಿ ಸ್ಕ್ರೀನ್‌ನಲ್ಲಿ ಪ್ರದರ್ಶಿಸಲಾಯ್ತು. ಈ ದೃಶ್ಯವನ್ನು ನೋಡಿದ ಕೂಡಲೇ ಕುಮಾರಸ್ವಾಮಿ ಮತ್ತು ರೇವಣ್ಣ ಕಂಬನಿ ಮಿಡಿದರು. ಇದಕ್ಕೂ ಮುನ್ನ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವಾಗಲೂ ಕುಮಾರಸ್ವಾಮಿ ಕಣ್ಣಲ್ಲಿ ನೀರು ಜಿನುಗಿತ್ತು. ಇದನ್ನೂ ಓದಿ: ನಿಮ್ಮ ಬರ್ತ್‌ಡೇ ಇದ್ರೆ ಹೇಳಿ ಅದಕ್ಕೂ ಬರ್ತೀವಿ: ಡಿಕೆಶಿ

    ದೇವೇಗೌಡರು ಕಾರ್ಯಕ್ರಮಕ್ಕೆ ಬರಲು ಆಗದ ಸ್ಥಿತಿ ಇದೆ. ಯಾರದೋ ಕೆಟ್ಟ ಕಣ್ಣು ಬಿದ್ದಿದೆ. ನಾನು ಅಳಬಾರದು ಅಂತಾ ಇದ್ದೆ. ಆದರೆ ನಮ್ಮದು ಕಟುಕ ಹೃದಯ ಅಲ್ಲ. ಈ ಕಣ್ಣೀರು ನಾಟಕವೂ ಅಲ್ಲ ಎಂದಿದ್ದಾರೆ. ಮಂಡ್ಯದ ಜನ ನಿಖಿಲ್‌ನನ್ನು ಸೋಲಿಸಲಿಲ್ಲ. ಎದುರಾಳಿಗಳು ಚಕ್ರವ್ಯೂಹದಲ್ಲಿ ಸಿಲುಕಿಸಿ ಸೋಲಿಸಿದ್ರು ಎಂದು ಅಲವತ್ತುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರೇವಣ್ಣಗೆ ಕ್ಲೀನ್ ಚಿಟ್ ಕೊಟ್ಟ ಚುನಾವಣಾ ಆಯೋಗ

    ರೇವಣ್ಣಗೆ ಕ್ಲೀನ್ ಚಿಟ್ ಕೊಟ್ಟ ಚುನಾವಣಾ ಆಯೋಗ

    ಬೆಂಗಳೂರು: ರಾಜ್ಯಸಭಾ ಚುನಾವಣೆ ವೇಳೆ ಜೆಡಿಎಸ್ ಶಾಸಕ ಹೆಚ್‌ಡಿ ರೇವಣ್ಣ ಅವರ ಮತ ತಿರಸ್ಕೃತವಾಗುತ್ತದೆ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಅವರ ಮತ ಸಿಂಧು ಎಂದು ಚುನಾವಣಾ ಅಧಿಕಾರಿ ಅಧಿಕೃತವಾಗಿ ತಿಳಿಸಿದ್ದಾರೆ.

    ರೇವಣ್ಣ ಮತವನ್ನು ಹಾಕಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಬ್ಯಾಲೆಟ್ ಪೇಪರ್ ತೋರಿಸಿದ್ದರು. ಜೆಡಿಎಸ್ ಶಾಸಕರಿಗೆ ಮಾತ್ರ ತೋರಿಸಬೇಕಾದ ರೇವಣ್ಣ ಡಿಕೆಶಿಗೆ ತೋರಿಸಿದ್ದಾರೆ ಎಂದು ಬಿಜೆಪಿ ಏಜೆಂಟರು ಕೊಠಡಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ರೇವಣ್ಣ ಅವರ ಮತವನ್ನು ತಿರಸ್ಕೃತಗೊಳಿಸಬೇಕೆಂದು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು. ಇದನ್ನೂ ಓದಿ: ಆ ಮನುಷ್ಯನಿಗೆ ಮಾನ, ಮರ್ಯಾದೆ ಇದ್ರೆ ರಾಜೀನಾಮೆ ಕೊಡಲಿ: ಶ್ರೀನಿವಾಸ್ ಗೌಡ ವಿರುದ್ಧ ಹೆಚ್‌ಡಿಕೆ ಕಿಡಿ

    ದೂರಿನನ್ವಯ ಚುನಾವಣಾಧಿಕಾರಿಗಳು ಸಿಸಿಟಿವಿ ಫೂಟೇಜ್ ಸೇರಿದಂತೆ ಎಲ್ಲಾ ರೀತಿಯ ಪರಿಶೀಲನೆ ನಡೆಸಿದ್ದಾರೆ. ರೇವಣ್ಣ ಕೇವಲ ಜೆಡಿಎಸ್ ಏಜೆಂಟರಿಗೆ ತೋರಿಸಿ ಮತ ಹಾಕಿದ್ದಾರೆ. ಕಾಂಗ್ರೆಸ್ ಏಜೆಂಟರಿಗೆ ತೋರಿಸಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲೂ ಮತ ಅಸಿಂಧು ಆಗುವುದಿಲ್ಲ ಎಂದು ಚುನಾವಣಾ ಅಧಿಕಾರಿ ವಿಶಾಲಾಕ್ಷಿ ಆದೇಶ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಜೆಡಿಎಸ್‌ಗೆ ಬಿಗ್ ಶಾಕ್ ಕೊಟ್ಟ ಗುಬ್ಬಿ ಶ್ರೀನಿವಾಸ್

    ಚುನಾವಣಾಧಿಕಾರಿಯ ಆದೇಶ ಪ್ರಶ್ನಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡುವ ಸಾಧ್ಯತೆಯಿದೆ. ತಮ್ಮ ದೂರನ್ನು ಪರಿಶೀಲಿಸುವಂತೆ ಕೈ ಪಾಳಯದಿಂದ ಪತ್ರ ಬರೆಯುವ ಸಾಧ್ಯತೆಯಿದೆ.

  • ರಾಜ್ಯಸಭಾ ಚುನಾವಣೆ: ರೇವಣ್ಣ ಮತ ತಿರಸ್ಕೃತವಾಗುತ್ತಾ?

    ರಾಜ್ಯಸಭಾ ಚುನಾವಣೆ: ರೇವಣ್ಣ ಮತ ತಿರಸ್ಕೃತವಾಗುತ್ತಾ?

    ಬೆಂಗಳೂರು: ಜೆಡಿಎಸ್ ಶಾಸಕ ಎಚ್‌ಡಿ ರೇವಣ್ಣ ಅವರ ಮತ ತಿರಸ್ಕೃತವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.

    ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷಗಳು ವಿಪ್ ಜಾರಿ ಮಾಡಿದ್ದರಿಂದ ಶಾಸಕರು ಕಡ್ಡಾಯವಾಗಿ ಮತ ಹಾಕಿದ ಬಳಿಕ ತಾನು ಯಾರಿಗೆ ಮತ ಹಾಕಿದ್ದೇನೆ ಎನ್ನುವುದನ್ನು ಕೊಠಡಿಯಲ್ಲಿ ಕುಳಿತಿದ್ದ ತನ್ನ ಪಕ್ಷದ ಏಜೆಂಟ್‌ಗೆ ತೋರಿಸಬೇಕಾಗುತ್ತದೆ. ಇದನ್ನೂ ಓದಿ: ಬೇರೆಯವರು ತಾಳಿಕಟ್ಟಿದವರ ಬಳಿ ಹೋಗಿ ಲವ್ ಲೆಟರ್ ಬರೆದರೆ ಆಗುತ್ತಾ : ಸಿಎಂ ಇಬ್ರಾಹಿಂ

    ಇಂದು ನಡೆದ ಚುನಾವಣೆಯಲ್ಲಿ ರೇವಣ್ಣ ಮತವನ್ನು ಹಾಕಿದ ಬಳಿಕ ಡಿಕೆಶಿಗೆ ತೋರಿಸಿದ್ದಾರೆ. ಜೆಡಿಎಸ್ ಶಾಸಕರಿಗೆ ಮಾತ್ರ ತೋರಿಸಬೇಕಾದ ರೇವಣ್ಣ ಡಿಕೆ ಶಿವಕುಮಾರ್ ಅವರಿಗೆ ಪೇಪರ್ ತೋರಿಸಿದ್ದಕ್ಕೆ ಬಿಜೆಪಿ ಏಜೆಂಟರು ಕೊಠಡಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಬಿಜೆಪಿ ನಾಯಕರು ರೇವಣ್ಣ ಅವರ ಮತವನ್ನು ತಿರಸ್ಕೃತಗೊಳಿಸಬೇಕೆಂದು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಮೊದಲ ಅಡ್ಡಮತದಾನ

    ಈ ಬಗ್ಗೆ ಪ್ರತಿಕ್ರಿಯಿಸಿದ ರೇವಣ್ಣ, ನಾನು ಯಾಕೆ ಮತ ತೋರಿಸಿ ಹಾಕಲಿ. ವಿಡಿಯೋ ಇರುತ್ತೆ ಬೇಕಾದ್ರೆ ನೋಡಿಕೊಳ್ಳಲಿ. ಸೋಲುವ ಭೀತಿಯಿಂದ ಬಿಜೆಪಿಯವರು ಹಾಗೆ ಹೇಳ್ತಿದ್ದಾರೆ. ನಾನು ಪುಟ್ಟರಾಜು ಅವರಿಗೆ ತೋರಿಸಿ ಹಾಕಿದ್ದಾರೆ. ನಾನು ಡಿಕೆ ಶಿವಕುಮಾರ್ ಅವರಿಗೆ ಯಾಕೆ ತೋರಿಸಲಿ. ಅಲ್ಲೇ ಯಾಕೆ ದೂರು ಕೊಡಲಿಲ್ಲ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

  • ಸಿದ್ದರಾಮಯ್ಯ ಭೇಟಿ ಮಾಡಿ ಬೆಂಬಲ ಕೇಳುತ್ತೇನೆ, ನಮ್ಮಿಬ್ಬರ ನಡುವೆ ವಿಶ್ವಾಸ ಚೆನ್ನಾಗಿದೆ: ರೇವಣ್ಣ

    ಸಿದ್ದರಾಮಯ್ಯ ಭೇಟಿ ಮಾಡಿ ಬೆಂಬಲ ಕೇಳುತ್ತೇನೆ, ನಮ್ಮಿಬ್ಬರ ನಡುವೆ ವಿಶ್ವಾಸ ಚೆನ್ನಾಗಿದೆ: ರೇವಣ್ಣ

    ಹಾಸನ: ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಬೆಂಬಲ ಕೇಳುತ್ತೇನೆ. ಸಿದ್ದರಾಮಯ್ಯ ಮತ್ತು ನನ್ನ ನಡುವೆ ಇಲ್ಲಿಯವರೆಗೂ ವಿಶ್ವಾಸ ಚೆನ್ನಾಗಿದೆ ಎಂದು ಮಾಜಿ ಸಚಿವ ಹೆಚ್‍ಡಿ.ರೇವಣ್ಣ ತಿಳಿಸಿದರು.

    ರಾಜ್ಯಸಭೆ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡ್ರು ಎಂತಹದ್ದನ್ನೆಲ್ಲಾ ಬಿಟ್ಟು ಹಾಕಿದ್ದಾರೆ. ಪ್ರಾದೇಶಿಕ ಪಕ್ಷ ಉಳ್ಕಳ್ಳಿ, ನಾವು ಯಾವತ್ತಾದರೂ ಉಪ್ಪಿನಕಾಯಿತರ ಉಪಯೋಗಕ್ಕೆ ಬರ್ತೀವಿ. ನಾನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಹರಿಪ್ರಸಾದ್, ಕುಮಾರಸ್ವಾಮಿ ಎಲ್ಲರಲ್ಲೂ ಮನವಿ ಮಾಡುತ್ತೇನೆ. ಎಲ್ಲರೂ ಒಟ್ಟಾಗಿ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಕುಪೇಂದ್ರ ರೆಡ್ಡಿ ಅವರನ್ನು ಬೆಂಬಲಿಸಿ ಎಂದು ಕೇಳಿಕೊಂಡರು. ಇದನ್ನೂ ಓದಿ: ಹಿಂದಿ ಹಿಂದುಳಿದ ರಾಜ್ಯಗಳ ಭಾಷೆ, ಇದು ಶೂದ್ರರಿಗೆ ಮಾತ್ರ: ಡಿಎಂಕೆ ಸಂಸದ 

    Siddaramaiah

    ಸಿದ್ದರಾಮಯ್ಯ ಅವರು ಸ್ವಲ್ಪ ಕೂಲ್ ಆಗಲಿ, ನಾನೂ ಹೋಗಿ ಭೇಟಿ ಮಾಡಿ ಬೆಂಬಲ ಕೇಳುತ್ತೇನೆ. ಸಿದ್ದರಾಮಯ್ಯ ಮತ್ತು ನನ್ನ ನಡುವೆ ಇಲ್ಲಿಯವರೆಗೂ ವಿಶ್ವಾಸ ಚೆನ್ನಾಗಿದೆ, ಮುಂದೆಯೂ ಚೆನ್ನಾಗಿರುತ್ತೆ. ನನಗೆ ಕೊನೆಯವರೆಗೂ ನಂಬಿಕೆಯಿದೆ. ಕೋಮುವಾದಿಗಳನ್ನು ದೂರವಿಡಬೇಕು ಅಂದ್ರೆ ನಾವೆಲ್ಲಾ ಒಗ್ಗಟ್ಟಾಗಬೇಕು. ಕೋಮುವಾದಿಗಳನ್ನು ದೂರವಿಡಲು ನಮಗೆ ಬೆಂಬಲ ಕೊಡುತ್ತಾರೆ ಅಂದುಕೊಂಡಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಮರಿತಿಬ್ಬೇಗೌಡಗೆ ತಿರುಗೇಟು
    ದಕ್ಷಿಣ ಪದವೀಧರ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬೆಂಬಲ ಕೊಡುತ್ತೇನೆ ಎಂಬ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಪಕ್ಷದಲ್ಲಿ ಎಲ್ಲ ಊಟ ಮಾಡಿ ಕಾಂಗ್ರೆಸ್‍ಗೆ ಬೆಂಬಲ ಕೊಡುತ್ತೇನೆ ಅಂದ್ರೆ ಹೇಗೆ ಉಪಸಭಾಪತಿ ಆಗಿದ್ದಾರೆ. ಎರಡು ಸಲ ಎಂಎಲ್‍ಸಿ ಮಾಡಿದ್ದೇವೆ ಇನ್ನೇನು ಮಾಡ್ಬೇಕು. ಹಾಗೇನಾದ್ರೂ ಇದ್ದರೆ ಓಪನ್ ಆಗಿ ಹೇಳಿ, ಹಿಂದೆ ಯಾಕೆ ಹೇಳ್ತಿರಿ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ರಾಯಚೂರು ಬಂದ್: ಕರ್ತವ್ಯಲೋಪ ಹಿನ್ನೆಲೆ ಜೂ.ಇಂಜಿನಿಯರ್ ವಜಾ

    ಜೆಡಿಎಸ್ ನಿಂದ ನನಗೆ ಅನ್ಯಾಯವಾಗಿದೆ ಅಂತಾ ಹೇಳಿ ರಾಜೀನಾಮೆ ಕೊಡಲಿ. ನಂತರ ಓಪನ್ ಆಗಿ ಪ್ರಚಾರ ಮಾಡ್ಲಿ, ಕಾಂಗ್ರೆಸ್ ಸೇರಿ ಮತ್ತೆ ಗೆಲ್ಲಲಿ. ಅವರು ದೊಡ್ಡವರಿದ್ದಾರೆ, ಅನುಭವಿಗಳಿದ್ದಾರೆ. ಇಂತಹ ನಿಲುವಿಗೆ ಹೋಗಬಾರದಿತ್ತು ಎಂಬುದು ನನ್ನ ಭಾವನೆ. ನಿಮಗಾಗಿ ಕುಮಾರಸ್ವಾಮಿ ಏನೇನ್ ಮಾಡಿದ್ದಾರೆ ಅಂತ ಗೊತ್ತಿದೆ. ಅದೆಲ್ಲ ಯಾವಾತ್ತಾದರೂ ತಿರುಗು ಬಾಣವಾಗುತ್ತೆ, ಇದು ಒಳ್ಳೆಯದಲ್ಲ ಎಂದು ವಾಗ್ದಾಳಿ ನಡೆಸಿದರು.

  • ಜೆಡಿಎಸ್ ಮುಖಂಡನ ಭೀಕರ ಹತ್ಯೆ – ಹಾಸನದಲ್ಲಿ ಪೊಲೀಸ್ ಸರ್ಪಗಾವಲು

    ಜೆಡಿಎಸ್ ಮುಖಂಡನ ಭೀಕರ ಹತ್ಯೆ – ಹಾಸನದಲ್ಲಿ ಪೊಲೀಸ್ ಸರ್ಪಗಾವಲು

    ಹಾಸನ: ಜೆಡಿಎಸ್ ಮುಖಂಡ, ಹಾಸನ ನಗರಸಭೆ ಸದಸ್ಯರೊಬ್ಬರನ್ನ ಹಾಸನ ನಗರದಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ನಗರಸಭೆ ಸದಸ್ಯರ ಹತ್ಯೆಯಿಂದ ಹಾಸನದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದ್ದು, ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

    ಜೆಡಿಎಸ್ ಮುಖಂಡ, ಹಾಸನ ನಗರಸಭೆ 16ನೇ ವಾರ್ಡ್ ಸದಸ್ಯ ಪ್ರಶಾಂತ್ ನಾಗರಾಜ್(41) ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಹಾಸನ ನಗರದ ಜವೇನಹಳ್ಳಿ ಮಠದ ರಸ್ತೆಯ, ಲಕ್ಷ್ಮೀಪುರ ಬಡಾವಣೆಯಲ್ಲಿ ಒಬ್ಬರೇ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಹಿಂಬಾಲಿಸಿದ ಹಂತಕರು ಅಟ್ಟಾಡಿಸಿ ಬರ್ಬರವಾಗಿ ಕೊಂದು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಸಚಿವ ಬಿ.ಸಿ ನಾಗೇಶ್ ಮನೆ ಮೇಲೆ NSUI ದಾಳಿ

    ನಗರಸಭೆ 16ನೇ ವಾರ್ಡ್‌ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸ್ಪರ್ಧಿಸಿ ಸುಮಾರು 1,700 ಮತಗಳ ಅಂತರದಿಂದ ಗೆದಿದ್ದ ಪ್ರಶಾಂತ್, ಸಂಜೆ ಕೆಲಸ ಮುಗಿಸಿ ಮನೆ ತಲುಪಲು ಕೇವಲ ಅರ್ಧ ಕಿಮೀ ಇದ್ದಾಗಲೇ ದಿಢೀರ್ ಅಟ್ಯಾಕ್ ಮಾಡಿ ದುರುಳರು ಜೀವ ತೆಗೆದಿದ್ದಾರೆ. ತಲೆ ಮತ್ತು ಕೈ ಭಾಗಕ್ಕೆ ಬಲವಾಗಿ ಹೊಡೆದು ಗುರುತು ಸಿಗದಂತೆ ಕೊಚ್ಚಿದ್ದು, ಪ್ರಶಾಂತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ದೇಶದ ಒಳಿತಿಗಾಗಿ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿದವರಿಗೆ ಕೊಡುವ ಬೆಲೆ ಇದೆಯೇ?: ಕೇಂದ್ರ ಸರ್ಕಾರಕ್ಕೆ ಡಿಕೆಶಿ ಪ್ರಶ್ನೆ

    ಪ್ರಶಾಂತ್ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆಯೇ ಹಿಮ್ಸ್ ಆಸ್ಪತ್ರೆ ಆವರಣಕ್ಕೆ ದೌಡಾಯಿಸಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಯಾವುದೇ ಕಾರಣಕ್ಕೂ ಮೃತದೇಹವನ್ನು ಆಂಬುಲೆನ್ಸ್‌ನಿಂದ ಕೆಳಗಿಳಿಸಕೂಡದು. ನಗರದಲ್ಲಿ ರೌಡಿಸಂಗೆ ಪೊಲೀಸ್ ಇಲಾಖೆ ಬೆಂಬಲವಾಗಿ ನಿಂತಿದೆ. ಇದರಿಂದಲೇ ಗೂಂಡಾಗಿರಿ ಹೆಚ್ಚಿ, ಚುನಾಯಿತ ಪ್ರತಿನಿಧಿಯ ಕೊಲೆ ನಡೆದಿದೆ ಎಂದು ಗುಡುಗಿದರು. ಕರ್ತವ್ಯಲೋಪ ಆರೋಪದಡಿ ಯಾರದೋ ಗುಲಾಮರಾಗಿ ಕೆಲಸ ಮಾಡುತ್ತಿರುವ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳು ಕೂಡಲೇ ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    CRIME 2

    ಘಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಎಸ್‌ಪಿ ಆರ್.ಶ್ರೀನಿವಾಸ್‌ಗೌಡ, ಹೆಚ್ಚುವರಿ ಎಸ್‌ಪಿ ಡಾ.ಬಿ.ಎನ್.ನಂದಿನಿ, ಪೆನ್‌ಶೆನ್ ಮೊಹಲ್ಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಮಂಕಿಪಾಕ್ಸ್ ತಡೆಯಬೇಕಾದ್ರೆ ಸೆಕ್ಸ್ ಮಾಡೋದು ನಿಲ್ಲಿಸಿ, ಇಲ್ಲವೇ 8 ವಾರ ಕಾಂಡೋಮ್ ಬಳಸಿ – UK

    ಜೆಡಿಎಸ್ ಮುಖಂಡನ ಹತ್ಯೆಯಿಂದಾಗಿ ಹಾಸನದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ನಿರ್ಮಾಣವಾಗಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ಥ್ ಹಾಕಲಾಗಿದೆ. ಆದಷ್ಟು ಬೇಗ ಪೊಲೀಸರು ಕೊಲೆಗಡುಕರನ್ನು ಪತ್ತೆಹಚ್ಚಿ, ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

  • ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಬೆಂಬಲ ಕೇಳಿದ ರೇವಣ್ಣ

    ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಬೆಂಬಲ ಕೇಳಿದ ರೇವಣ್ಣ

    ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಇಂದೇ ಕೊನೆ ದಿನವಾಗಿದ್ದು, ಇದೀಗ ರಾಜ್ಯದಲ್ಲಿ ರಾಜಕೀಯ ಚದುರಂಗದಾಟ ಪ್ರಾರಂಭವಾಗಿದೆ. ಕಾಂಗ್ರೆಸ್ ಬೆಂಬಲ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕೇಳಿರುವುದು ಮಹತ್ವದ ತಿರುವು ಪಡೆದುಕೊಂಡಿದೆ.

    ಈ ಬಗ್ಗೆ ಮಾತನಾಡಿ, ನಮ್ಮ ಬಳಿ 32 ವೋಟ್ ಇದೆ. ಈಗ ಮೊದಲ ಪ್ರಾಶಸ್ತ್ಯ 32 ಇದೆ. ಎರಡೂ ರಾಷ್ಟ್ರೀಯ ಪಕ್ಷ ಇದೆ. ಅದರಲ್ಲಿ ಒಂದು ಕೋಮುವಾದಿ ಪಕ್ಷವಾದರೆ ಮತ್ತೊಂದು ಕೋಮುವಾದ ವಿರುದ್ಧ ಇರುವ ರಾಷ್ಟ್ರೀಯ ಪಕ್ಷವಾಗಿದೆ ಎಂದು ತಿಳಿಸಿದರು.

    ನಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿಯನ್ನು ಕಣಕ್ಕಿಳಿಸಿದ್ದೇವೆ. ಈ ಹಿನ್ನೆಲೆಯಲ್ಲಿ ನಮ್ಮ ಅಭ್ಯರ್ಥಿ ಬೆಂಬಲಿಸಲು ಸೋನಿಯಾಗಾಂಧಿ ಜೊತೆ ಚರ್ಚೆ ಮಾಡಿದ್ದೇವೆ. ಕುಪೇಂದ್ರ ರೆಡ್ಡಿ ಕೂಡ ಡಿಕೆಶಿ ಅವರನ್ನ ಭೇಟಿ ಮಾಡಿದ್ದಾರೆ. ರಾಮಲಿಂಗಾರೆಡ್ಡಿ ಎಲ್ಲರನ್ನೂ ಭೇಟಿ ಮಾಡಿದ್ದರು. ಅಷ್ಟೇ ಅಲ್ಲದೇ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಅವಕಾಶ ಕೇಳಿದ್ದೇವೆ ಎಂದರು.

    ಶುಕ್ರವಾರವೇ ಸೋನಿಯಾ ಗಾಂಧಿ ಜೊತೆ ದೇವೇಗೌಡರು ಮಾತನಾಡಿದ್ದರು. ಆದರೆ ನಿನ್ನೆ ಕಾಂಗ್ರೆಸ್ ದಿಢೀರ್ ಅಂತ ಮತ ಇಲ್ಲದಿದ್ದರೂ ಎರಡನೇ ಅಭ್ಯರ್ಥಿಯನ್ನು ಹಾಕಿದ್ದಾರೆ. ಅವರಿಗೆ ಮತ ಇಲ್ಲದಿದ್ದರೂ ಹಾಕಿದ್ದಾರೆ. ಆದರೂ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಅವರಿಗೂ ಮನವಿ ಮಾಡುತ್ತೇನೆ. ಪ್ರಾದೇಶಿಕ ಪಕ್ಷವನ್ನ ಬೆಂಬಲಿಸಿ, ಕೋಮುವಾದ ಪಕ್ಷವನ್ನ ದೂರ ಇಡಲು ಕಾಂಗ್ರೆಸ್ ನಮ್ಮನ್ನ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಕಾಂಗ್ರೆಸ್‍ಗೆ ಗುಡ್ ಬೈ ಹೇಳಿದ್ದ ಹಾರ್ದಿಕ್ ಪಟೇಲ್ ಶೀಘ್ರವೇ ಬಿಜೆಪಿಗೆ ಸೇರ್ಪಡೆ?

    SIDDARAMAIAH

    ನಾವು ಜೆಡಿಎಸ್ ಬೆಂಬಲ ಕೇಳುವುದಿಲ್ಲ. ನಾವು ಅವರಿಗೆ ಬೆಂಬಲ ನೀಡುವುದಿಲ್ಲ ಎಂದು ಸಿದ್ದರಾಮಯ್ಯ ನೇರವಾಗಿ ಹೇಳಿದ್ದರು. ಈಗ ಜೆಡಿಎಸ್ ಅಭ್ಯರ್ಥಿಯನ್ನು ಇಳಿಸಿದ್ದರಿಂದ ಕಾಂಗ್ರೆಸ್ ಬೆಂಬಲ ನೀಡುತ್ತಾ? ಅಥವಾ ಜೆಡಿಎಸ್‍ನವರು ಅಡ್ಡ ಮತದಾನ ಮಾಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಟಿಕಾಯತ್‌ಗೆ ಮಸಿː ಒಳಗಡೆ ಮೋದಿಗೆ ಜೈ ಜೈ, ಹೊರಗಡೆ ಡೌನ್‌ ಡೌನ್‌ ಅಂದ್ರು

  • PSI ಹಗರಣದಲ್ಲಿ ಜೆಡಿಎಸ್‌ನವರಿದ್ದರೂ ಬಲಿಹಾಕಿ – ಎಚ್.ಡಿ.ರೇವಣ್ಣ

    PSI ಹಗರಣದಲ್ಲಿ ಜೆಡಿಎಸ್‌ನವರಿದ್ದರೂ ಬಲಿಹಾಕಿ – ಎಚ್.ಡಿ.ರೇವಣ್ಣ

    ಹಾಸನ: ಪಿಎಸ್‌ಐ ಹಗರಣದಲ್ಲಿ ಜೆಡಿಎಸ್‌ನವರಿದ್ದರೂ ಬಲಿ ಹಾಕಿ. ಅದಕ್ಕೂ ಮುನ್ನ `ನನ್ನ ಮಕ್ಳು ಪೊಲೀಸ್ ಆಗ್ಲಿ’ ಅಂತ ಹೊಲ, ಮನೆ ಮಾರಿ ಬಡವರು ಕೊಟ್ಟಿರುವ ದುಡ್ಡನ್ನು ವಾಪಸ್ ಕೊಡಿಸಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದ್ದಾರೆ.

    ಹಾಸನಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಿಎಸ್‌ಐ ಹಗರಣದಲ್ಲಿ ಜೆಡಿಎಸ್, ಕಾಂಗ್ರೆಸ್ ಯಾರೇ ಭಾಗಿಯಾಗಿದ್ದರೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ನಮ್ಮ ಪಾರ್ಟಿಯವರಿದ್ದರೂ ಅವರನ್ನು ಬಲಿ ಹಾಕಬೇಕು. ಆದರೆ, ಯಾರೋ ಬಡವರು `ನಮ್ಮ ಮಕ್ಕಳು ಎಸ್‌ಐ ಆಗ್ತಾರೆ’ ಅಂತ ಹೊಲ, ಮನೆ ಮಾರಿ ದುಡ್ಡು ಕೊಟ್ಟಿರುತ್ತಾರೆ. ಆ ದುಡ್ಡನ್ನು ವಾಪಸ್ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಒಂದೇ ಘಟಕವಾಗಿ ಚುನಾವಣೆ ಎದುರಿಸಬೇಕಲ್ಲವೇ? ಡಿಕೆಶಿಗೆ ನಟಿ ರಮ್ಯಾ ಪ್ರಶ್ನೆ

    PSI ಹಗರಣದಲ್ಲಿ ಮಂತ್ರಿಗಳಿದ್ದಾರೋ, ಯಾರಿದ್ದಾರೋ ನನಗೆ ಗೊತ್ತಿಲ್ಲ. ಕಿಂಗ್ ಪಿನ್ನು ಅನ್ನೋದು ಗೊತ್ತಿಲ್ಲ, ನಾವು ಹಳ್ಳಿ ರೈತರು, SSLC ಓದಿದ್ದೀನಿ ಅಷ್ಟೇ. ಯಾರೇ ತಪ್ಪು ಮಾಡಿದ್ರು ಶಿಕ್ಷೆಯಾಗಲಿ ಎಂದು ನನ್ನ ಒತ್ತಾಯವಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

    ಇದೇ ವೇಳೆ `ಸಮ್ಮಿಶ್ರ ಸರ್ಕಾರದಲ್ಲಿ ನಡೆದಿರುವ ಹಗರಣಗಳ ದಾಖಲೆ ಬಿಡುಗಡೆ ಮಾಡ್ತೇನೆ’ ಎಂಬ ಸಚಿವ ಅಶ್ವಥ್ ನಾರಾಯಣ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಸಮ್ಮಿಶ್ರ ಸರ್ಕಾರದಲ್ಲಿ ಯಾವ್ಯಾವ ಹಗರಣಗಳು ನಡೆದಿವೆ? ಕೂಡಲೇ ದಾಖಲೆ ಬಿಡುಗಡೆ ಮಾಡಲಿ. ನನ್ನನ್ನೂ ಸೇರಿದಂತೆ ತನಿಖೆ ನಡೆಸಲಿ, ಯಾರು ತಪ್ಪಿತಸ್ಥರಿದ್ದಾರೆ ಅವರನ್ನು ಬಲಿ ಹಾಕಲಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಧ್ವನಿವರ್ಧಕ ಬಳಸುವ ಬಗ್ಗೆ ಗೊಂದಲ ಇಲ್ಲ: ಕಮಲ್ ಪಂತ್

    Ashwath Narayan, HD Revanna,

    ನಾನು ಲೋಕೋಪಯೋಗಿ ಸಚಿವನಾಗಿದ್ದೆ ನನ್ನನ್ನೂ ಸೇರಿಸಿ ತನಿಖೆ ನಡೆಸಿ. ಇವರೇ ಮುಖ್ಯಮಂತ್ರಿಗಳಿಗೆ ಅರ್ಜಿ ಕೊಟ್ಟು ತನಿಖೆ ಒಳಪಡಿಸಿಕೊಳ್ಳಲಿ. ಮುಖ್ಯಮಂತ್ರಿಗಳು ಸ್ವಯಂಪ್ರೇರಿತವಾಗಿ ತನಿಖೆ ಮಾಡಲು ಆದೇಶ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಮ್ಮಿಶ್ರ ಸರ್ಕಾರದ್ದು, ಈಗಿನ ಸರ್ಕಾರದ ಹಗರಣಗಳನ್ನೂ ತನಿಖೆ ಮಾಡಲಿ. ಅವರದ್ದೇ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲೇ ಸಿಬಿಐ ಇದೆ. ಕೆಲವರಿಗೆ ಸಿಐಡಿ ಮೇಲೆ ನಂಬಿಕೆ ಇಲ್ಲ ಅಂತಾರೆ. ನಮ್ಮ ರಾಜ್ಯದ ಪೊಲೀಸ್ ಇಲಾಖೆ ಅಧಿಕಾರಿಗಳು ದಕ್ಷತೆಯಿಂದ ಇದ್ದಾರೆ. ಅವರು ಸಿಬಿಐಗಿಂತಲೂ ಚೆನ್ನಾಗಿ ತನಿಖೆ ಮಾಡ್ತಾರೆ. ನಾವು ರಾಜಕಾರಣಿಗಳು ಅವರಿಗೆ ಬೆಂಬಲ ಕೊಡಬೇಕು ಎಂದು ಸಲಹೆ ನೀಡಿದ್ದಾರೆ.