Tag: HD Revanna

  • ನಿಖಿಲ್, ಅನಿತಾ ಕುಮಾರಸ್ವಾಮಿ ಗೆಲ್ತಾರೆ- ಭವಾನಿ ಪರ ರೇವಣ್ಣ ಬ್ಯಾಟಿಂಗ್

    ನಿಖಿಲ್, ಅನಿತಾ ಕುಮಾರಸ್ವಾಮಿ ಗೆಲ್ತಾರೆ- ಭವಾನಿ ಪರ ರೇವಣ್ಣ ಬ್ಯಾಟಿಂಗ್

    ಬೆಂಗಳೂರು: ಹಾಸನ (Hassan) ಟಿಕೆಟ್ ವಿಚಾರದಲ್ಲಿ ರೇವಣ್ಣ (HD Revanna) ವರ್ಸಸ್ ಕುಮಾರಸ್ವಾಮಿ (HD Kumaraswamy) ಗೇಮ್ ಶುರುವಾಯ್ತಾ ಅಂತ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ. ಹಾಸನದಲ್ಲಿ ದೇವೇಗೌಡ, ಕುಮಾರಸ್ವಾಮಿ ನಿರ್ಧಾರವೇ ಫೈನಲ್ ಎಂದೇ ರಾಜಕೀಯ ಆಟ ಆಡ್ತಿದ್ದಾರಾ ರೇವಣ್ಣ ಎಂಬ ಚರ್ಚೆ ಪ್ರಾರಂಭವಾಗಿದೆ.

    ಭಾನುವಾರ ಸುದ್ದಿಗೋಷ್ಠಿಯಲ್ಲಿ ನಿಖಿಲ್ ರಾಮನಗರದಿಂದ ಗೆಲ್ತಾನೆ, ಅನಿತಾ ಕುಮಾರಸ್ವಾಮಿ ಮಧುಗಿರಿಯಲ್ಲಿ ಗೆಲ್ತಾರೆ ಎಂದು ರೇವಣ್ಣ ಹೇಳಿದ್ದರು. ರೇವಣ್ಣ ಮಾತಿನ ಅರ್ಥವೇನು? ಎಂಬುದು ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಶುರುವಾಗಿದೆ.

    ಕುಮಾರಸ್ವಾಮಿ ಪತ್ನಿ, ಮಗನ ಹೆಸರು ರೇವಣ್ಣ ಪ್ರಸ್ತಾಪ ಮಾಡಿ ಭವಾನಿ ರೇವಣ್ಣಗೆ (Bhavani Revanna) ಟಿಕೆಟ್ ಕೊಡಿಸುವ ಒತ್ತಡ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದರೆ ನಿಖಿಲ್, ಅನಿತಾ ಕುಮಾರಸ್ವಾಮಿ ಮುಂದಿಟ್ಟುಕೊಂಡು ರಾಜಕೀಯ ದಾಳ ಉರುಳಿಸಿದ್ರಾ ರೇವಣ್ಣ? ಅವರಿಗೆ ಟಿಕೆಟ್ ಕೊಟ್ಟಿದ್ದೀರಾ ನಮಗೂ ಟಿಕೆಟ್ ಕೊಡಿ ಎಂಬ ಒತ್ತಡ ತಂತ್ರನಾ? ಅವರು ಗೆಲ್ಲಬಹುದಾದರೆ ನಾವು ಗೆಲ್ಲಲೂ ಆಗೋದಿಲ್ಲವಾ ಎಂಬ ಮಾತಿನ ಅರ್ಥದಲ್ಲಿ ದಾಳ ಉರುಳಿಸಿದ್ರಾ ರೇವಣ್ಣ? ಎಂಬ ಲೆಕ್ಕಚಾರ ಶುರುವಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಸ್ವಂತ ಬಲದಲ್ಲಿ ಗೆಲ್ಲಲು ಬಿಜೆಪಿಯಿಂದ ರೆಡಿಯಾಯ್ತು ಸೀಟ್ ಶೇರಿಂಗ್ ಫಾರ್ಮುಲಾ

    ರೇವಣ್ಣ ಮಾತಿನಿಂದ ನಿಖಿಲ್, ಅನಿತಾ ಕುಮಾರಸ್ವಾಮಿ ಇಬ್ಬರು ಗೆಲ್ತಾರೆ ಎಂದು ಹೇಳಿ ಇಬ್ಬರಿಗೂ ಟಿಕೆಟ್ ಕೊಟ್ಟಿದ್ದೀರಾ ಎಂಬ ಸಂದೇಶ ಸ್ಪಷ್ಟ ಪಡಿಸೋದು. ಒಂದೇ ಕುಟುಂಬದಲ್ಲಿ ಇಬ್ಬರಿಗೂ ಟಿಕೆಟ್ ಕೊಟ್ಟಿದ್ದೀರಾ ಅಂತ ಪರೋಕ್ಷವಾಗಿ ಭವಾನಿಗೆ ಟಿಕೆಟ್ ಕೊಡಿಸುವ ತಂತ್ರ ಶುರು ಮಾಡಿದ್ರಾ? ನಿಖಿಲ್, ಅನಿತಾ ಕುಮಾರಸ್ವಾಮಿ ಸ್ವಂತ ಶಕ್ತಿಯಿಂದ ಗೆಲ್ತಾರೆ. ಅದೇ ರೀತಿ ಭವಾನಿ ರೇವಣ್ಣ ಕೂಡಾ ಸ್ವಂತ ಶಕ್ತಿ ಮೇಲೆ ಗೆಲ್ತಾರೆ ಎಂಬ ಸಂದೇಶನಾವನ್ನ ರೇವಣ್ಣ ಕೊಟ್ರಾ? ಅವರಿಗೂ ಟಿಕೆಟ್ ಕೊಟ್ಟಿದ್ದೀರಾ, ಅದೇ ರೀತಿ ನಮಗೂ ಟಿಕೆಟ್ ಕೊಡಿ ಎಂಬ ಸಂದೇಶವನ್ನು ರೇವಣ್ಣ ಕೊಟ್ಟರಾ? ಭವಾನಿ ರೇವಣ್ಣ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದಾರೆ. ಅವರು ಕೂಡಾ ಸ್ವಂತ ಶಕ್ತಿಯಿಂದ ಗೆಲ್ತಾರೆ ಎಂಬ ಸಂದೇಶ ಕೊಡೋ ಮೂಲಕ ಭವಾನಿ ಪರ ಬ್ಯಾಟಿಂಗ್ ಮಾಡಿದ್ದಾರೆ ರೇವಣ್ಣ. ಇದನ್ನೂ ಓದಿ: India China Border Rowː ಚೀನಾ ಗಡಿ ಸಂಘರ್ಷ – ಕೇಂದ್ರದ ನಡೆ ಅತ್ಯಂತ ಅಪಾಯಕಾರಿ ಎಂದ ರಾಗಾ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕುಟುಂಬದಿಂದ ಒಬ್ಬರೇ ನಿಲ್ಲುವಂತೆ ಕಾನೂನು ಮಾಡಲಿ – ಸೂರಜ್, ಪ್ರಜ್ವಲ್‌ಗೆ ಈಗ್ಲೇ ರಾಜೀನಾಮೆ ಕೊಡಿಸ್ತೀನಿ: ರೇವಣ್ಣ

    ಕುಟುಂಬದಿಂದ ಒಬ್ಬರೇ ನಿಲ್ಲುವಂತೆ ಕಾನೂನು ಮಾಡಲಿ – ಸೂರಜ್, ಪ್ರಜ್ವಲ್‌ಗೆ ಈಗ್ಲೇ ರಾಜೀನಾಮೆ ಕೊಡಿಸ್ತೀನಿ: ರೇವಣ್ಣ

    ಹಾಸನ: ಒಂದು ಕುಟುಂಬದಿಂದ ಒಬ್ಬರೇ ಚುನಾವಣೆಗೆ (Election) ನಿಲ್ಲುವಂತೆ ಕಾನೂನು ಮಾಡಲಿ, ನಾನು ಈಗಲೇ ಪ್ರಜ್ವಲ್ ರೇವಣ್ಣ (Prajwal Revanna) ಹಾಗೂ ಸೂರಜ್ ರೇವಣ್ಣಗೆ (Suraj Revanna) ರಾಜೀನಾಮೆ ಕೊಡಿಸ್ತೀನಿ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಹೇಳಿದ್ದಾರೆ.

    ಕುಮಾರಸ್ವಾಮಿಯನ್ನು ಬಿಟ್ಟು ನಾನು ಏನೂ ಮಾಡಲ್ಲ - ಟಿಕೆಟ್ ದಂಗಲ್ ಬಗ್ಗೆ ಮೌನ ಮುರಿದ ರೇವಣ್ಣ

    ಹೊಳೆನರಸೀಪುರದ ತಮ್ಮ ನಿವಾಸದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದು ಕುಟುಂಬದಿಂದ ಒಬ್ಬರೇ ನಿಲ್ಲುವಂತೆ ಕಾನೂನು ಮಾಡಲಿ ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿಯನ್ನು ಬಿಟ್ಟು ನಾನು ಏನೂ ಮಾಡಲ್ಲ – ಟಿಕೆಟ್ ದಂಗಲ್ ಬಗ್ಗೆ ಮೌನ ಮುರಿದ ರೇವಣ್ಣ

    ಪ್ರಜ್ವಲ್ ಹೇಳಿದ್ರೂ ಅಷ್ಟೇ, ರೇವಣ್ಣ ಹೇಳಿದ್ರೂ ಅಷ್ಟೇ ನಮ್ಮ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮವಾಗಿ ತೀರ್ಮಾನ ಮಾಡೋದು ದೇವೇಗೌಡರು (HD Devegowda), ಕುಮಾರಸ್ವಾಮಿ (HD Kumaraswamy), ಇಬ್ರಾಹಿಂ. ನಾನು ರಾಷ್ಟ್ರೀಯ ಪಕ್ಷಗಳಿಗೆ ಹೇಳ್ತೀನಿ, ನಿಮ್ಮ ಕುಟುಂಬದಲ್ಲೂ ಯಾರನ್ನು ನಿಲ್ಲಿಸೋದು ಬೇಡ. ಬೇಕಿದ್ದರೆ ಒಂದು ಕುಟುಂಬದಿಂದ ಒಬ್ಬರೇ ನಿಲ್ಲುವಂತೆ ಕಾನೂನು ಮಾಡಲಿ, ನಾನು ಈಗಲೇ ಸೂರಜ್, ಪ್ರಜ್ಬಲ್ ರೇವಣ್ಣ ರಾಜೀನಾಮೆ ಕೊಡಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತೀರ್ಮಾನ ಮಾಡಿದ್ದೇನೆ: ಬಿಎಸ್‌ವೈ

    ಕುಮಾರಣ್ಣನ ಮಗ ರಾಮನಗರದಲ್ಲಿ (Ramanagara) ಸ್ವಂತ ಶಕ್ತಿ ಮೇಲೆ ಗೆಲ್ತಾನೆ, ಅವರ ಪತ್ನಿ ಚನ್ನಪಟ್ಟಣದಲ್ಲಿ ಸ್ವಂತ ಶಕ್ತಿಯಿಂದ ಗೆಲ್ತಾರೆ. ನಾನು ಬದುಕಿರುವವರೆಗೂ ಕುಮಾರಸ್ವಾಮಿ, ರೇವಣ್ಣ ಹೊಡೆದಾಡುವ ಪ್ರಶ್ನೆಯೇ ಇಲ್ಲಾ. ದೇವೇಗೌಡರು, ಕುಮಾರಸ್ವಾಮಿ, ಇಬ್ರಾಹಿಂ ಹಾಗೂ ಜಿಲ್ಲೆಯ ಶಾಸಕರು, ಕಾರ್ಯಕರ್ತರು ಕುಳಿತು ಚರ್ಚಿಸಿ ಅಭ್ಯರ್ಥಿ ಬಗ್ಗೆ ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕುಮಾರಸ್ವಾಮಿಯನ್ನು ಬಿಟ್ಟು ನಾನು ಏನೂ ಮಾಡಲ್ಲ – ಟಿಕೆಟ್ ದಂಗಲ್ ಬಗ್ಗೆ ಮೌನ ಮುರಿದ ರೇವಣ್ಣ

    ಕುಮಾರಸ್ವಾಮಿಯನ್ನು ಬಿಟ್ಟು ನಾನು ಏನೂ ಮಾಡಲ್ಲ – ಟಿಕೆಟ್ ದಂಗಲ್ ಬಗ್ಗೆ ಮೌನ ಮುರಿದ ರೇವಣ್ಣ

    ಹಾಸನ: ನಾನು ಹೆಚ್‌.ಡಿ ಕುಮಾರಸ್ವಾಮಿಯನ್ನು (H.D Kumaraswamy) ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಕೆಲವರು ಭವಾನಿ ಅವರಿಗೆ ಟಿಕೆಟ್‌ ಕೊಡಿ ಅಂತಾರೆ, ಕೆಲವರು ಇನ್ನೊಬ್ಬರಿಗೆ ಕೊಡಿ ಅಂತಾರೆ. ಅದನ್ನೆಲ್ಲಾ ಕೂತು ತೀರ್ಮಾನ ಮಾಡೋದು ಪಕ್ಷ. ಕುಮಾರಸ್ವಾಮಿ ಮತ್ತು ಹೆಚ್‌.ಡಿ ದೇವೇಗೌಡರು (H.D DeveGowd)  ಏನ್ ತೀರ್ಮಾನ ಮಾಡ್ತಾರೋ ಅದೇ ಅಂತಿಮ ಎಂದು ಹಾಸನದ ಟಿಕೆಟ್ (Hassan Constituency Ticket) ಗೊಂದಲದ ಚರ್ಚೆಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D Revanna) ತೆರೆ ಎಳೆದಿದ್ದಾರೆ.

    ಹೊಳೆನರಸೀಪುರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಕುಮಾರಸ್ವಾಮಿ ಮತ್ತು ದೇವೇಗೌಡರು ರಾಜ್ಯದ ಅಧ್ಯಕ್ಷರು ಜಿಲ್ಲಾ ಮುಖಂಡರು ಏನು ತೀರ್ಮಾನ ಮಾಡ್ತಾರೆ ಅದೇ ಅಂತಿಮ. ನಾನು ಕುಮಾರಸ್ವಾಮಿಯನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಕೆಲವರು ಭವಾನಿ (Bhavani) ಅವರಿಗೆ ಕೊಡಿ ಅಂತಾರೆ, ಕೆಲವರು ಇನ್ನೊಬ್ಬರಿಗೆ ಕೊಡಿ ಅಂತಾರೆ. ಅದನ್ನೆಲ್ಲಾ ಕೂತು ತೀರ್ಮಾನ ಮಾಡೋದು ಪಕ್ಷ. ನಾನಾಗಲಿ, ಸೂರಜ್ ಆಗಲಿ, ಪ್ರಜ್ವಲ್ ಆಗಲಿ ಯಾರೂ ತೀರ್ಮಾನ ಮಾಡುವ ಪ್ರಶ್ನೆ ಇಲ್ಲ. ಪಕ್ಷದ ಹೈಕಮಾಂಡ್ ಏನು ಹೇಳುತ್ತೆ ಅದಕ್ಕೆ ಎಲ್ಲರೂ ಬದ್ಧರಾಗಿ ಇರಬೇಕಾಗುತ್ತೆ. ಕುಮಾರಸ್ವಾಮಿ ಮತ್ತೆ ದೇವೇಗೌಡರು ಇಬ್ರಾಹಿಂ ಸಾಹೇಬ್ರು ಜಿಲ್ಲೆಯ ಶಾಸಕರು ನಮ್ಮ ಏಳು ಸೀಟ್ ತೀರ್ಮಾನ ಮಾಡ್ತಾರೆ. ನಮ್ಮ ಜಿಲ್ಲೆಯ ಅಭಿವೃದ್ಧಿ ಮುಖ್ಯ. ಕುಮಾರಸ್ವಾಮಿ, ದೇವೇಗೌಡರ ತೀರ್ಮಾನವೇ ಅಂತಿಮ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಮಹಿಳಾ ಶಕ್ತಿಗೆ ಮತ್ತೊಂದು ಭರವಸೆ ಭವಾನಿ ಅಮ್ಮ – ಸಾಮಾಜಿಕ ಜಾಲತಾಣದಲ್ಲಿ JDS ಬೆಂಬಲಿಗರ ಬ್ಯಾಟಿಂಗ್

    ಕುಮಾರಸ್ವಾಮಿ ಮತ್ತು ರೇವಣ್ಣನನ್ನು ಯಾವುದೇ ಕಾರಣದಿಂದ ಬೇರ್ಪಡಿಸಲು ಆಗಲ್ಲ. ಯಾರಾದ್ರು ಬೇರ್ಪಡಿಸುತ್ತೇನೆ ಎಂದುಕೊಂಡಿದ್ದರೆ ಅದು ಭ್ರಮೆ. ನಮ್ಮ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರ ದೇವೇಗೌಡರು, ಕುಮಾರಸ್ವಾಮಿ ರಾಜ್ಯದ ಅಧ್ಯಕ್ಷ, ಸಿ.ಎಂ ಇಬ್ರಾಹಿಂ ತೀರ್ಮಾನ ಮಾಡ್ತಾರೆ. ಎಲ್ಲರೂ ಕೂತು ಚರ್ಚೆ ಮಾಡಿ ಜನರ ವಿಶ್ವಾಸ, ಸ್ಥಳೀಯ ಶಾಸಕರ ಅಭಿಪ್ರಾಯ ಪಡೆಯುತ್ತಾರೆ. ನಾನೊಬ್ಬನೇ ತೀರ್ಮಾನ ಮಾಡುವ ಪ್ರಶ್ನೆಯೇ ಇಲ್ಲಾ. ಕಳೆದ ಹತ್ತು ವರ್ಷದಿಂದ ಹಾಸನ ಜಿಲ್ಲೆ ಅಭಿವೃದ್ಧಿ ಆಗಿಲ್ಲ. ಏರ್‌ಪೋರ್ಟ್‌  ನಿಲ್ಲಿಸಿದ್ದಾರೆ. ಐಐಟಿ ಜಾಗ ಬೇರೆಯದಕ್ಕೆ ಬಳಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ತಾರಕಕ್ಕೇರಿದ ಹಾಸನ `ಟಿಕೆಟ್’ ಸಂಘರ್ಷ – ಜೆಡಿಎಸ್‍ನಲ್ಲಿ ಕುಟುಂಬ ಕದನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೆ.ಆರ್‌. ಪೇಟೆಯಲ್ಲಿ  ಜೆಡಿಎಸ್‍ ಬಂಡಾಯದ ಬಾವುಟ – ಹೆಚ್‍ಡಿಕೆ ನಡೆಗೆ ವಿರೋಧ

    ಕೆ.ಆರ್‌. ಪೇಟೆಯಲ್ಲಿ ಜೆಡಿಎಸ್‍ ಬಂಡಾಯದ ಬಾವುಟ – ಹೆಚ್‍ಡಿಕೆ ನಡೆಗೆ ವಿರೋಧ

    ಮಂಡ್ಯ: ಇಷ್ಟು ದಿನಗಳ ಕಾಲ ಮಾತಿನ ಮೂಲಕ ಜೆಡಿಎಸ್‍ನಲ್ಲಿ (JDS) ಬಂಡಾಯ ಸೂಚಿಸುತ್ತಿದ್ದ ಕೆ.ಆರ್‌. ಪೇಟೆ (KR Pete) ನಾಯಕರು, ಇದೀಗ ಬಂಡಾಯ ಸಭೆ ನಡೆಸುವ ಮೂಲಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರ ನಿರ್ಧಾರದ ವಿರುದ್ಧ ಬಹಿರಂಗವಾಗಿ ಬಂಡಾಯದ ಬಾವುಟ ಹಾರಿಸಿದ್ದಾರೆ.

    ಇಷ್ಟು ವರ್ಷಗಳ ಕಾಲ ಕೊನೆಯ ಹಂತದಲ್ಲಿ ಚುನಾವಣೆಗೆ (Election) ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದ್ದ ಕುಮಾರಸ್ವಾಮಿ ಈ ಬಾರಿ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇರುವಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ, ಮುಂಬರುವ ವಿಧಾನಸಭಾ ಚುನಾವಣೆಯನ್ನು ಡಿಫರೆಂಟ್ ಸ್ಟ್ರ್ಯಾಟಜಿ ಮೂಲಕ ಎದುರಿಸಲು ಮುಂದಾಗಿದ್ರು. ಅದ್ರಲ್ಲೂ ಮಂಡ್ಯ ಜಿಲ್ಲೆಯ ಕೆ.ಆರ್‌. ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿ ಕೊನೆಯ ಹಂತದಲ್ಲಿ ಅಭ್ಯರ್ಥಿ ಆಯ್ಕೆಯನ್ನು ಮಾಡಲಾಗುತ್ತಿತ್ತು. ಆದ್ರೆ ಈ ಬಾರಿ ಬಹುಬೇಗನೇ ಕುಮಾರಸ್ವಾಮಿ ತಮ್ಮ ಆಪ್ತರಾದ ಹೆಚ್.ಡಿ.ಮಂಜು ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಕುಮಾರಸ್ವಾಮಿ ಅವರ ಈ ಸ್ಟ್ರ್ಯಾಟಜಿ ನಡೆಗೆ ಕೆ.ಆರ್‌. ಪೇಟೆ ಜೆಡಿಎಸ್‍ನಲ್ಲಿ ಹೆಚ್.ಡಿ.ರೇವಣ್ಣ (HD Revanna) ಅವರ ಜೊತೆ ಗುರುತಿಸಿಕೊಂಡಿರುವ ನಾಯಕರು ಬಂಡಾಯ ಎದ್ದಿದ್ದಾರೆ.

    ಕಳೆದ ಬಾರಿ ಕೆ.ಆರ್‌. ಪೇಟೆ ಉಪಚುನಾಣೆಯ ಜೆಡಿಎಸ್ ಅಭ್ಯರ್ಥಿಯಾಗಿದ್ದ ಬಿ.ಎಲ್.ದೇವರಾಜು ಅವರಿಗೆ ಈ ಬಾರಿ ಟಿಕೆಟ್ ತಪ್ಪಿಸಿ ಕುಮಾರಸ್ವಾಮಿ ಅವರು ತಮ್ಮ ಆಪ್ತರಾದ ಹೆಚ್.ಡಿ.ಮಂಜುಗೆ ಟಿಕೆಟ್ ನೀಡಿದ್ದಕ್ಕೆ ಬಿ.ಎಲ್.ದೇವರಾಜು & ಟೀಮ್ ಬಂಡಾಯ ಎದ್ದಿದೆ. ಇಷ್ಟು ದಿನ ಜೆಡಿಎಸ್ ವಿರುದ್ಧ ಅಸಮಾಧಾನದ ಕುರಿತು ಮಾತನಾಡುವ ಮೂಲಕ ಬಂಡಾಯದ ಸೂಚನೆ ನೀಡುತ್ತಿದ್ದ ಬಿ.ಎಲ್.ದೇವರಾಜು, ಕೃಷ್ಣೇಗೌಡ ಹಾಗೂ ಸಂತೋಷ್ ಅವರು ಕೆ.ಆರ್‌. ಪೇಟೆಯಲ್ಲಿ ಕುಮಾರಸ್ವಾಮಿ ನಿರ್ಧಾರವನ್ನು ವಿರೋಧಿಸಿ ಬಂಡಾಯ ಸಭೆಯನ್ನು ನಡೆಸಿದ್ದಾರೆ. ಈ ಸಭೆಯಲ್ಲಿ ಐದು ಸಾವಿರ ಮಂದಿಯನ್ನು ಸೇರಿಸಿ ಸಭೆಯ ಉದ್ದಕ್ಕೂ ಕುಮಾರಸ್ವಾಮಿ ಅಭ್ಯರ್ಥಿ ಆಯ್ಕೆ ವಿಚಾರ ತಪ್ಪು, ಬಿ.ಎಲ್.ದೇವರಾಜು ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಆಗ್ರಹಿಸುವುದರ ಜೊತೆಗೆ ಬಿ.ಎಲ್.ದೇವರಾಜುಗೆ ಟಿಕೆಟ್ ನೀಡದಿದ್ದಲ್ಲಿ ಮುಂದೆ ಈ ಬಗ್ಗೆ ಯೋಚಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

     

    ಸಭೆಯ ಉದ್ದಕ್ಕೂ ಬಂಡಾಯ ನಾಯರು ಬಿ.ಎಲ್.ದೇವರಾಜು ಪರ ಬ್ಯಾಟ್ ಬೀಸಿದ್ರೆ, ದೇವರಾಜು ತನಗೆ ಅನ್ಯಾಯವಾಗುತ್ತಿದೆ ಎಂದು ಜನರಿಗೆ ಹೇಳಿದ್ರು. ನನಗೆ ಎರಡು ಬಾರಿ ಉಪಚುನಾವಣೆಯಲ್ಲಿ ಟಿಕೆಟ್ ಕೊಡಲಾಗಿದೆ. ಆದ್ರೆ ಸಾರ್ವಜನಿಕ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡಿಲ್ಲ. ಕಳೆದ ಉಪಚುನಾವಣೆಯಲ್ಲಿ ಕುಮಾರಸ್ವಾಮಿ ಒಂದು ದಿನ ಬಂದು ನನ್ನ ಪರ ಪ್ರಚಾರ ಮಾಡಿದ್ದರೆ ನಾನು ಗೆಲ್ಲುತ್ತಿದ್ದೆ. ಆದ್ರೆ ಕುಮಾರಸ್ವಾಮಿ ಒಂದು ದಿನವೂ ನನ್ನ ಪರ ಪ್ರಚಾರ ಮಾಡಲಿಲ್ಲ. ಯಡಿಯೂರಪ್ಪ ಹಾಗೂ ಅವರ ಮಗ ಇಲ್ಲೇ ಇದ್ದು ಚುನಾವಣೆ ಪ್ರಚಾರ ಮಾಡಿದ್ರು, ಆದ್ರೆ ಕುಮಾರಸ್ವಾಮಿ ಮಾತ್ರ ಬರಲಿಲ್ಲ. ಆಗಿದ್ರು ಸಹ ನಾನು 56 ಸಾವಿರ ಮತ ತೆಗೆದುಕೊಂಡಿದ್ದೇನೆ. ನನಗೆ ಟಿಕೆಟ್ ಕೊಡಲಿ, ಬಿಡಲಿ ನನಗೆ ಇದೇ ಚುನಾವಣೆ ಕೊನೆ ಎನ್ನುವ ಮೂಲಕ ಕೆ.ಆರ್‌. ಪೇಟೆ ಜೆಡಿಎಸ್‍ನಲ್ಲಿ ಬಂಡಾಯದ ಬಾವುಟವನ್ನು ದೇವರಾಜು ಹಾರಿಸಿದ್ದಾರೆ.

    ಒಟ್ಟಾರೆ ಸದ್ಯ ಕಮಲ ಅರಳಿಸುವ ಪ್ಲ್ಯಾನ್‌ನಲ್ಲಿರುವ ಕೆ.ಆರ್‌. ಪೇಟೆ ಕ್ಷೇತ್ರದಲ್ಲಿ ಮತ್ತೆ ದಳಪತಿಗಳು ಲಗ್ಗೆ ಇಡಲು ಕುಮಾರಸ್ವಾಮಿ ಅವರು ಮಾಡಿದ್ದ ಸ್ಟ್ರ್ಯಾಟಜಿ ಬಂಡಾಯದ ಬೇಗುದಿಯ ಮೂಲಕ ರಿವರ್ಸ್ ಆಗಿದೆ. ಈ ಬಂಡಾಯವನ್ನು ಜೆಡಿಎಸ್ ನಾಯಕರು ಎಷ್ಟರ ಮಟ್ಟಿಗೆ ಶಮನ ಮಾಡುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೆಆರ್‌ ಪೇಟೆಯಲ್ಲಿ ಜೆಡಿಎಸ್‌ ಕಾರ್ಯಕರ್ತರ, ಬಂಡಾಯ ನಾಯಕರ ನಡುವೆ ವಾಗ್ಯುದ್ಧ

    ಕೆಆರ್‌ ಪೇಟೆಯಲ್ಲಿ ಜೆಡಿಎಸ್‌ ಕಾರ್ಯಕರ್ತರ, ಬಂಡಾಯ ನಾಯಕರ ನಡುವೆ ವಾಗ್ಯುದ್ಧ

    ಮಂಡ್ಯ: ಕಳೆದ ಉಪಚುನಾವಣೆಯಲ್ಲಿ ಬಿಜೆಪಿ (BJP) ಗೆಲುವಿನ ಮೂಲಕ ಭದ್ರಕೋಟೆಯಾಗಿದ್ದ ಕೆ.ಆರ್‌. ಪೇಟೆಯನ್ನು (KR Pete) ಮರಳಿ ಪಡೆಯಲು ಜೆಡಿಎಸ್‌ (JDS) ಹಲವು ಸ್ಟ್ಯಾಟರ್ಜಿಯೊಂದಿಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಆದರೆ ಇದೀಗ ಅಭ್ಯರ್ಥಿಯನ್ನು ಇಷ್ಟು ಬೇಗ ಘೋಷಣೆ ಮಾಡಿದ್ದೆ ತಪ್ಪಾಯಿತಾ ಎಂದು ಜೆಡಿಎಸ್ ನಾಯಕರಿಗೆ ತಲೆ ನೋವು ಉಂಟಾಗಿದೆ. ಅದಕ್ಕೆ ಪುಷ್ಠಿ ನೀಡುವಂತೆ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಹಾಗೂ ಬಂಡಾಯ ನಾಯಕರ ನಡುವೆ ವಾಗ್ಯುದ್ಧ ಸಹ ನಡೆದಿದೆ.

    ಸಕ್ಕರೆ ನಾಡು ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳು ಜೆಡಿಎಸ್‌‌ನ ಪ್ರಬಲ ಭದ್ರಕೋಟೆಗಳು. ಈ 7 ಭದ್ರ ಕೋಟೆಗಳ ಪೈಕಿ ಕಳೆದ ಕೆ.ಆರ್‌.ಪೇಟೆ ಉಪಚುನಾಚಣೆಯನ್ನು ಬಿಜೆಪಿ ಗೆಲುವು ಪಡೆಯುವ ಮೂಲಕ ಜೆಡಿಎಸ್ ಭದ್ರಕೋಟೆಗೆ ಲಗ್ಗೆ ಇಟ್ಟಿದೆ. ಇದೀಗ ಮರಳಿ ಈ ಕ್ಷೇತ್ರವನ್ನು ವಾಪಸ್ಸು ಪಡೆಯಬೇಕೆಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಚುನಾವಣೆಗೆ ಇನ್ನೂ 4 ತಿಂಗಳು ಬಾಕಿ ಇರುವಾಗಲೇ ಹೆಚ್.ಡಿ.ಮಂಜುರನ್ನು ಕೆ.ಆರ್‌.ಪೇಟೆ ಜೆಡಿಎಸ್ ಅಭ್ಯರ್ಥಿಯೆಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದೀಗ ಈ ಹೊತ್ತಿನಲ್ಲಿ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಜೆಡಿಎಸ್‌‌ನಲ್ಲಿ ದೊಡ್ಡ ಮಟ್ಟದ ಭಿನ್ನಮತದ ಹೊಗೆಯಾಡುತ್ತಿದೆ.

    ಕಳೆದ ಕೆ.ಆರ್‌.ಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಬಿ.ಎಲ್.ದೇವರಾಜು ಹಾಗೂ ತಂಡ ಇದೀಗ ಕೆ.ಆರ್‌.ಪೇಟೆ ಜೆಡಿಎಸ್‌ನ್ನು ಬಂಡಾಯದ ಬಾವುಟ ಹಾರಿಸಲು ಮುಂದಾಗಿದೆ. ಕುಮಾರಸ್ವಾಮಿ ಈ ಬಾರಿ ತಮ್ಮ ಬೆಂಬಲಿಗೆ ಮಂಜುಗೆ ಟಿಕೆಟ್ ಕೊಟ್ಟ ಕಾರಣ ರೇವಣ್ಣ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬಿ.ಎಲ್.ದೇವರಾಜು, ಬಸ್ ಕೃಷ್ಣೇಗೌಡ, ಬಸ್ ಸಂತೋಷ್ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಸಿ ಬಂಡಾಯ ಎದ್ದಿದ್ದಾರೆ.

    ಇದೀಗ ಈ ಎಲ್ಲಾ ಅತೃಪ್ತರು ಇದೇ ತಿಂಗಳ 18ರಂದು ಕೆ.ಆರ್‌.ಪೇಟೆಯಲ್ಲಿ‌ ದೊಡ್ಡ ಮಟ್ಟದ ಜೆಡಿಎಸ್ ಬಂಡಾಯ ಸಭೆ ನಡೆಸಲು ಮುಂದಾಗಿದ್ದಾರೆ‌. ಇದೇ ಕಾರಣಕ್ಕೆ ಹಳ್ಳಿ-ಹಳ್ಳಿಯನ್ನು ಬಿ.ಎಲ್.ದೇವರಾಜು ಮತ್ತು ತಂಡ ಸುತ್ತಿ ಅಂದಿನ ಸಭೆಗೆ ಬರುವಂತೆ ಆಹ್ವಾನ ನೀಡುತ್ತಿದ್ದಾರೆ. ಇದೇ ವೇಳೆ ಶಿಳನೆರೆ ಗ್ರಾಮಕ್ಕೆ ಹೋದ ವೇಳೆ ಜೆಡಿಎಸ್‌ ಕಾರ್ಯಕರ್ತರು ದೇವರಾಜು ಅವರನ್ನು ತಡೆದು ನಿಮಗೆ ಪಾರ್ಟಿ ಎಲ್ಲಾ ಮಾಡಿದೆ ಹಾಗಿದ್ರೆ ಹೀಗೆ ಯಾಕೆ ಆಡುತ್ತಾ ಇದೀರಾ ಎಂದು ತರಾಟಗೆ ಮುಂದಾಗಿದ್ದಾರೆ. ಇದೇ ವೇಳೆ ಬಿ.ಎಲ್.ದೇವರಾಜು ಬೆಂಬಲಿಗರು ಸಹ ಜೆಡಿಎಸ್ ಕಾರ್ಯಕರ್ತರಿಗೆ ಅನ್ಯಾಯ ಆಗಿರುವುದಕ್ಕೆ ಬಂದಿರುವುದು ಎಂದು ಅವರು ಸಹ ಮಾತಿಗೆ ಬಿದ್ದಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ಯುದ್ಧ ಸಹ ನಡೆದಿದೆ. ಇದನ್ನೂ ಓದಿ: 16 ವರ್ಷಗಳ ಹಿಂದೆ ಪತಿ, ಈಗ ಪತ್ನಿ – ದಂಪತಿ ಜೀವನ ವಿಮಾನ ದುರಂತದಲ್ಲಿ ಅಂತ್ಯ

    ಒಟ್ಟಾರೆ ಕೆ.ಆರ್‌.ಪೇಟೆಯನ್ನು ಮರಳಿ ಪಡೆಯಲು ಕುಮಾರಸ್ವಾಮಿ ಬೇರೆ ರೀತಿಯ ಗೇಮ್ ಪ್ಲ್ಯಾನ್ ಮಾಡಲು ಹೋಗಿ ಇದೀಗ ಆ‌ ಪ್ಲ್ಯಾನ್ ಉಲ್ಟಾ ಆಗುತ್ತಿದೆ. ಚುನಾವಣೆ ಘೋಷಣೆಗೂ ಮುನ್ನವೇ ರೇವಣ್ಣ ಬೆಂಬಲಿಗರು ಬಂಡಾಯ ಎದ್ದಿರುವುದು ಜೆಡಿಎಸ್‌ಗೆ ಮತ್ತೆ ಮಾರಕ ಆಗುತ್ತಾ ಅಥವಾ ಬಂಡಾಯ ಎದ್ದವರನ್ನು ನಾಯಕರು ಸಮಾಧಾನ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ಯತ್ನಾಳ್ ಆಟಾಟೋಪಕ್ಕೆ ಬಿಜೆಪಿ ವರಿಷ್ಠರು ಸುಸ್ತು- ಲಗಾಮು ಹಾಕದಷ್ಟು ವೀಕ್ ಆಯ್ತಾ ಹೈಕಮಾಂಡ್?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೆಚ್.ಡಿ ಕುಮಾರಸ್ವಾಮಿ ಬೆಂಬಲಿಗನಿಗೆ ಟಿಕೆಟ್ ಘೋಷಣೆ ಮಾಡಿದ್ದಕ್ಕೆ ರೇವಣ್ಣ ಆಪ್ತರು ಬಂಡಾಯ

    ಹೆಚ್.ಡಿ ಕುಮಾರಸ್ವಾಮಿ ಬೆಂಬಲಿಗನಿಗೆ ಟಿಕೆಟ್ ಘೋಷಣೆ ಮಾಡಿದ್ದಕ್ಕೆ ರೇವಣ್ಣ ಆಪ್ತರು ಬಂಡಾಯ

    ಮಂಡ್ಯ: ಜೆಡಿಎಸ್ ಭದ್ರಕೋಟೆ ಅಂದರೆ ಸಕ್ಕರೆ ನಾಡು ಮಂಡ್ಯ. (Mandya) ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Election) ಏಳಕ್ಕೆ ಏಳು ಕ್ಷೇತ್ರ ಗೆಲ್ಲಬೇಕು ಎಂದು ಈಗಾಗಲೇ ಅಭ್ಯರ್ಥಿಗಳ ಹೆಸರನ್ನೂ ಘೋಷಣೆ ಮಾಡಲಾಗಿದೆ. ಆದರೆ ಅದೊಂದು ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿ ಘೋಷಣೆ ಮಾಡಿದ್ದೇ ಮುಳುವಾಗಿದ್ದು, ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹಾಗೂ ಹೆಚ್.ಡಿ.ರೇವಣ್ಣ (HD Revanna) ನಡುವೆಯೇ ಪ್ರತಿಷ್ಠೆ ಫೈಟ್ ಸಾಕ್ಷಿಯಾಗಿದೆ. ತಮ್ಮ ಬೆಂಬಲಿಗನಿಗೆ ಕುಮಾರಸ್ವಾಮಿ ಟಿಕೆಟ್ ನೀಡಿರುವುದಕ್ಕೆ, ಅತ್ತ ರೇವಣ್ಣ ಆಪ್ತರು ಬಂಡಾಯ ಎದ್ದಿದ್ದಾರೆ.

    ಮುಂಬರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ರಣಕಹಳೆ ಮೊಳಗಿಸಿರುವ ಜೆಡಿಎಸ್, ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ರಥಯಾತ್ರೆ ಮೂಲಕ ಬಿಜೆಪಿ (BJP) ಹಾಗೂ ಕಾಂಗ್ರೆಸ್ (Congress) ವಿರುದ್ಧ ಸಮರಕ್ಕೆ ಮುಂದಾಗಿದ್ದಾರೆ. ಆದರೆ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಮಾತ್ರ ದೇವೇಗೌಡರ ಪುತ್ರರಾದ ಕುಮಾರಸ್ವಾಮಿ ಹಾಗೂ ರೇವಣ್ಣ ನಡುವೆಯೇ ಪ್ರತಿಷ್ಠೆ ಶುರುವಾಗಿದ್ದು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಟಿ.ಮಂಜು ಅವರನ್ನು ಜೆಡಿಎಸ್ (JDS) ಅಭ್ಯರ್ಥಿ ಅಂತ ಘೋಷಣೆ ಮಾಡಿರುವುದಕ್ಕೆ ರೇವಣ್ಣ ಅವರಿಗೆ ಅಸಮಾಧಾನ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರೇವಣ್ಣ ಬೆಂಬಲಿಗರು ಪಕ್ಷದ ನಿರ್ಧಾರದ ವಿರುದ್ಧ ರೆಬೆಲ್ ಆಗಿದ್ದು, ಬಂಡಾಯದ ಬಾವುಟ ಹಾರಿಸುವುದಕ್ಕೆ ಮುಂದಾಗಿದ್ದಾರೆ.

    ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಹೆಚ್.ಡಿ.ಕುಮಾರಸ್ವಾಮಿ ಪ್ರಭಾವ ಹೆಚ್ಚಾಗಿದೆ. ಆದರೆ ಹಾಸನ ಜಿಲ್ಲೆಗೆ ಹೊಂದಿಕೊಂಡಿರುವ ಕೆ.ಆರ್.ಪೇಟೆಯಲ್ಲಿ ರೇವಣ್ಣರದ್ದೇ ಹೆಚ್ಚು ಪ್ರಭಾವವಿದೆ. ಕಳೆದ ಬೈ ಎಲೆಕ್ಷನ್‌ನಲ್ಲಿ ರೇವಣ್ಣ ಅವರು ತಮ್ಮ ಆಪ್ತ ಹಾಗೂ ಹಿರಿಯ ಮುಖಂಡ ಬಿ.ಎಲ್.ದೇವರಾಜು ಅವರಿಗೆ ಟಿಕೆಟ್ ಕೊಡಿಸಿದ್ದರು. ಆ ವೇಳೆ ಕುಮಾರಸ್ವಾಮಿ ಅವರು ಪ್ರಚಾರಕ್ಕಾಗಿಯೂ ಕ್ಷೇತ್ರಕ್ಕೆ ಬಾರದೇ ದೂರ ಉಳಿದಿದ್ದರು. ಆದರೂ ದೇವರಾಜು ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋತಿದ್ದರು. ಮತ್ತೆ ತಮಗೆ ಟಿಕೆಟ್ ಕೊಡಿಸುವಂತೆ ರೇವಣ್ಣ ಅವರ ಬಳಿ ದುಂಬಾಲು ಬಿದ್ದಿದ್ದರು. ಆದರೆ ಕುಮಾರಸ್ವಾಮಿ ಅವರು ತಮ್ಮ ಬೆಂಬಲಿಗ ಹೆಚ್.ಟಿ.ಮಂಜು ಅವರನ್ನು ಅಭ್ಯರ್ಥಿ ಅಂತ ಘೋಷಣೆ ಮಾಡಿದ್ದಾರೆ. ಇದು ರೇವಣ್ಣ ಅವರ ಬೇಸರಕ್ಕೆ ಕಾರಣವಾಗಿದೆ.

    ಇನ್ನೂ ಪಕ್ಷದ ನಿರ್ಧಾರದ ವಿರುದ್ಧ ಬಿ.ಎಲ್.ದೇವರಾಜು ಹಾಗೂ ಟೀಮ್ ತಿರುಗಿ ಬಿದ್ದಿದ್ದು, ಬಂಡಾಯದ ಬಾವುಟ ಹಾರಿಸುವ ಸೂಚನೆ ನೀಡೋದಕ್ಕೆ ಶುರು ಮಾಡಿದ್ದಾರೆ. ಇದೇ ತಿಂಗಳು 18ರಂದು ಬೆಂಬಲಿಗರ ಸಭೆ ಕರೆದಿರುವ ದೇವರಾಜು, ಗ್ರಾಮ ಮಟ್ಟದಲ್ಲಿ ಮುಖಂಡರ ಮನೆಗಳಿಗೆ ತೆರಳಿ ಸಭೆಗೆ ಆಹ್ವಾನ ನೀಡುವ ಜೊತೆಗೆ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.

    ಇನ್ನೊಂದೆಡೆ ಚುನಾವಣೆಗೆ ಸಿದ್ಧರಾಗುತ್ತಿರುವ ಹೆಚ್.ಟಿ.ಮಂಜು ಪ್ರತಿ ಸಮುದಾಯದ ಸಭೆ ನಡೆಸುವ ಮೂಲಕ ಸಂಘಟನೆ ಮಾಡುತ್ತಿದ್ದಾರೆ. ಬಿ.ಎಲ್.ದೇವರಾಜು ಅವರ ಅಸಮಾಧಾನದ ಬಗ್ಗೆ ಪ್ರಶ್ನೆ ಮಾಡಿದರೆ ಅವರು ಕೇಳುವುದರಲ್ಲಿ ಅರ್ಥ ಇದೆ. ಆದರೆ ಕಳೆದ ಉಪಚುನಾವಣೆಯಲ್ಲಿ ಟಿಕೆಟ್ ನೀಡುವ ವೇಳೆಯೇ ನಮ್ಮ ವರಿಷ್ಠರು ಇದೇ ನಿಮಗೆ ಕೊನೆ ಬಾರಿ ಟಿಕೆಟ್ ಮುಂದೆ ಹೆಚ್.ಟಿ.ಮಂಜುಗೆ ನೀಡುತ್ತೇವೆ ಎಂದು ಹೇಳಿದ್ದರು. ಅದಕ್ಕೆ ದೇವರಾಜು ಅವರು ಸಹ ಒಪ್ಪಿಗೆ ಸೂಚಿಸಿದ್ದರು. ಆದರೆ ಈಗ ಹೀಗೆ ಮಾಡಿದರೆ ಏನು ಮಾಡಲು ಸಾಧ್ಯ, ಈಗಾಗಲೇ ಕುಮಾರಸ್ವಾಮಿ ಅವರು ಮೂರು ಬಾರಿ ಕರೆದು ಮಾತನಾಡಿದ್ದಾರೆ. ಆದರೆ ದೇವರಾಜು ಅವರು ಇನ್ನೂ ಒಪ್ಪಿಲ್ಲ, ಮುಂದೆ ಸರಿಹೋಗುತ್ತದೆ ಎಂದು ಎಚ್.ಟಿ.ಮಂಜು ಹೇಳಿದ್ದಾರೆ. ಇದನ್ನೂ ಓದಿ: ಟೈರ್ ಬ್ಲಾಸ್ಟ್‌ನಿಂದ ವಾಹನ ಪಲ್ಟಿ – ಅಪಾರ ಪ್ರಮಾಣದ ಮದ್ಯ ನಾಶ

    ಇನ್ನೊಂದೆಡೆ ನಿನ್ನೆಯಷ್ಟೇ ದೇವರಾಜು ಆಂಡ್ ಟೀ ಸಂಸದ ಸೂರಜ್ ರೇವಣ್ಣ ಅವರನ್ನು ಕರೆಸಿಕೊಂಡು ಅದ್ಧೂರಿಯಾಗಿ ಬರ್ತ್ ಡೇ ಆಚರಣೆ ಮಾಡಿ ಶಕ್ತಿ ಪ್ರದರ್ಶನವನ್ನು ಮಾಡಿದ್ದಾರೆ. ಇದು ನೋಡಿದರೆ ರೇವಣ್ಣ ಅವರು ದೇವರಾಜು ಪರವಾಗಿರುವುದು ಸ್ಪಷ್ಟವಾಗಿದ್ದು, ಪಟ್ಟು ಹಿಡಿದು ಕೊನೆ ಕ್ಷಣದಲ್ಲಿ ಟಿಕೆಟ್ ಬದಲಾವಣೆ ಮಾಡಿಸುತ್ತಾರಾ, ಅಥವಾ ಹೆಚ್.ಟಿ.ಮಂಜುವೇ ಅಭ್ಯರ್ಥಿಯಾಗಿ ಇರುತ್ತಾರಾ ಎಂದು ಕಾದುನೋಡಬೇಕಿದೆ. ಇದನ್ನೂ ಓದಿ: ಹೊಸ ಪಕ್ಷದೊಂದಿಗೆ ಫುಲ್ ಆಕ್ಟೀವ್- ಜನಾರ್ದನ ರೆಡ್ಡಿ ಓಡಾಟದಿಂದ ಬಿಜೆಪಿಗೆ ಶುರುವಾಯ್ತು ನಡುಕ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಾಸನ ಜೆಡಿಎಸ್ ಕಾರ್ಯಕರ್ತರಿಗೆ ಮೈಸೂರಿನಲ್ಲಿ ಭರ್ಜರಿ ಬಾಡೂಟ

    ಹಾಸನ ಜೆಡಿಎಸ್ ಕಾರ್ಯಕರ್ತರಿಗೆ ಮೈಸೂರಿನಲ್ಲಿ ಭರ್ಜರಿ ಬಾಡೂಟ

    ಮೈಸೂರು: ದೊಡ್ಡ ಗೌಡರ ಮನೆಯ ಹಾಸನ (Hassan) ಜಿಲ್ಲೆಯ ಪಾಲಿಟಿಕ್ಸ್ (Politics) ಈಗ ಮೈಸೂರಿನವರೆಗೂ (Mysuru) ವಿಸ್ತಾರಗೊಂಡಿದೆ.

    ಹಾಸನ ಜಿಲ್ಲೆಯ ಶಾಸಕ ಪ್ರೀತಂ ಗೌಡಗೆ ಟಕ್ಕರ್ ಕೊಡಲು ಮುಂದಾದ ಭವಾನಿ ರೇವಣ್ಣ (Bhavani Revanna) ಹಾಸನದ ಮತದಾರರಿಗೆ (Voters) ಮೈಸೂರಿನಲ್ಲಿ ಬಾಡೂಟ ಹಾಕಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರು ಹಾಜರಾಗದಿದ್ರೆ ನಮಗೂ ಉನ್ನತ ಶಿಕ್ಷಣ ಬೇಡ – ತಾಲಿಬಾನ್‌ಗೆ ವಿದ್ಯಾರ್ಥಿಗಳಿಂದ ಎಚ್ಚರಿಕೆ

    ಭವಾನಿ ಹುಟ್ಟೂರು ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದಲ್ಲಿ ಭಾನುವಾರ ಭರ್ಜರಿ ಔತಣ ಕೂಟ ಆಯೋಜನೆ ಮಾಡಿದ್ದರು. ಭವಾನಿ ರೇವಣ್ಣ ಅವರ ಸಹೋದರ ಪ್ರಕಾಶ್ ಅವರ ಮನೆಯಲ್ಲಿ ಔತಣ ಕೂಟ ಆಯೋಜನೆಯಾಗಿತ್ತು. ಇದನ್ನೂ ಓದಿ: ಬೆಂಗಳೂರು-ತುಮಕೂರು ದಶಪಥ ಹೆದ್ದಾರಿ 2025ರ ಆಗಸ್ಟ್ ವೇಳೆಗೆ ಸಿದ್ಧ: ಗಡ್ಕರಿ 

    ರೇವಣ್ಣ ದಂಪತಿಯೇ ಮುಂದೆ ನಿಂತು ಹಾಸನದ ಪ್ರತಿಯೊಬ್ಬ ಜೆಡಿಎಸ್ (JDS) ಕಾರ್ಯಕರ್ತರನ್ನ ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಭವಾನಿ ರೇವಣ್ಣ ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಕೂಡ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರೀತಂಗೌಡ V/S ಹೆಚ್.ಡಿ.ರೇವಣ್ಣ- ಹಾಸನದಲ್ಲಿ ಚುನಾವಣೆಗೆ ನಿಲ್ಲುವಂತೆ ಶಾಸಕರ ಸವಾಲು

    ಪ್ರೀತಂಗೌಡ V/S ಹೆಚ್.ಡಿ.ರೇವಣ್ಣ- ಹಾಸನದಲ್ಲಿ ಚುನಾವಣೆಗೆ ನಿಲ್ಲುವಂತೆ ಶಾಸಕರ ಸವಾಲು

    ಹಾಸನ: ಹಾಸನದಲ್ಲಿ ಶಾಸಕ ಪ್ರೀತಂಗೌಡ (Preetham Gowda) ಮತ್ತು ಹೆಚ್.ಡಿ.ರೇವಣ್ಣ (HD Revanna) ಮಧ್ಯೆ ರಾಜಕೀಯ ಜಟಾಪಟಿ ಜೋರಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ (K Gopalaiah) ಅಧ್ಯಕ್ಷತೆಯಲ್ಲಿ ನಡೆದ 2022-2023ನೇ ಸಾಲಿನ 2ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀನಾ ಸಭೆಯಲ್ಲಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯ ಎಲ್ಲಾ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು.

    ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ನಮ್ಮ ಸರ್ಕಾರದ ಅವಧಿಯಲ್ಲಿ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ 144 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. ಈ ಯೋಜನೆ ಬದಲಿಸಿ ಬೇರೆ ಕಾಮಗಾರಿಗೆ ಬಳಸಲಾಗಿದೆ. ಕೆಲಸ ಕೂಡ ಸರಿಯಾಗಿ ನಡೆಯುತ್ತಿಲ್ಲ. ಈ ಬಗ್ಗೆ ತನಿಖೆ ನಡೆಯಬೇಕು ಎಂದರು. ಇದನ್ನೂ ಓದಿ: ನನ್ಮೇಲೆ ದಾಳಿ ಮಾಡಿದ್ರೆ, ನಾನು ಆನೆಯನ್ನ ಕೊಲ್ತೀನಿ: ಮಾಜಿ ಶಾಸಕ

    ರೇವಣ್ಣ ಮಾತಿಗೆ ಪ್ರತ್ಯುತ್ತರ ನೀಡಿದ ಶಾಸಕ ಪ್ರೀತಂಗೌಡ, ಯಾವ ತನಿಖೆ ಬೇಕಾದ್ರೂ ಮಾಡಿಸಲಿ ನಾನು ಹೆದರಲ್ಲ. ಕ್ಯಾಬಿನೆಟ್ (Cabinet) ನಿರ್ಧಾರವನ್ನು ಇಲ್ಲಿ ಚರ್ಚೆ ಮಾಡುವುದಾದ್ರೆ ಕ್ಯಾಬಿನೆಟ್‍ನ್ನು ಕೆಡಿಪಿ ಮಟ್ಟಕ್ಕೆ ಇಳಿಸಬೇಡಿ ಸಂಪುಟ ಸಭೆಯಲ್ಲಿ ತೀರ್ಮಾನ ಆದಂತೆ ಕಾಮಗಾರಿ ನಡೆಯುತ್ತಿದೆ ಎಂದರು. ಮತ್ತೆ ರೇವಣ್ಣ ಮಾತನಾಡಿ, ನೀರಾವರಿ ಸೇರಿದಂತೆ ಬಿಜೆಪಿ ಸರ್ಕಾರ, ಜಿಲ್ಲೆಗೆ ಯಾವುದೇ ಅನುದಾನ ಕೊಟ್ಟಿಲ್ಲ. ಈ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದರು. ಹಳೇಬೀಡು ರಣಘಟ್ಟ ನೀರಾವರಿ ಯೋಜನೆಗೆ ಹಣ ಕೊಟ್ಟಿಲ್ವಾ, ನೀವು ಬರೀ ಘೋಷಣೆ ಮಾಡಿ ಹೋಗ್ತೀರಾ, ಕೆಲಸ ಮಾಡೋದು ನಾವೇ. ನಾಚಿಕೆ ಯಾರಿಗೆ ಆಗಬೇಕೋ ಅವರಿಗೆ ಆಗಲಿ ಎಂದು ತಿರುಗೇಟು ನೀಡಿದ್ರು.

    ವಾಕ್ಸಮರ ಮುಂದುವರಿಸಿದ ರೇವಣ್ಣ, ಕುಮಾರಸ್ವಾಮಿ (HD Kumaraswamy) ಅವಧಿಯಲ್ಲಿ ಮಾಡಿದ್ದು, ನಿಮ್ಮ ಸರ್ಕಾರ ಏನೂ ಮಾಡಿಲ್ಲ. ಯಡಿಯೂರಪ್ಪ (BS Yediyurappa) ಈ ಜಿಲ್ಲೆಗೆ ಏನೆಲ್ಲಾ ಅನ್ಯಾಯ ಮಾಡಿದ್ದಾರೆ ಎಂಬುದನ್ನು ಸಮಯ ಬಂದಾಗ ಹೇಳುತ್ತೇನೆ ಎಂದರು. ನೀವು ಬಜೆಟ್‍ (Budget) ನಲ್ಲಿ ಅನೌನ್ಸ್ ಮಾಡಿ ಮನೆಗೆ ಹೋಗುವುದಲ್ಲ. ಕೆಲಸ ಮಾಡಿಸಬೇಕು. ರಾಜಕಾರಣ ಹೊರಗೆ ಮಾಡೋಣ, ನಾನು ಹೆದರಿ ಓಡಿ ಹೋಗೋದಿಲ್ಲ. ಇಲ್ಲಿ ಕೆಡಿಪಿ ಸಭೆ ನಡೆಯುತ್ತಿದೆ. ಜಿಲ್ಲೆಯ ಅಭಿವೃದ್ಧಿ ಕಾರ್ಯಕಗಳ ಬಗ್ಗೆ ಮಾತಾಡಿ ಎಂದು ಪ್ರೀತಂಗೌಡ ಹೇಳಿದರು.

    ಜಲಜೀವನ್ ಮಾಡಿರುವುದು ಪ್ರಧಾನಿ ಮೋದಿ (Narendra Modi) ಅವರು, ಅದನ್ನೂ ನಾನೇ ಮಾಡಿದ್ದು ಅಂತಿಯಾ ಎಂದು ರೇವಣ್ಣ ಅವರನ್ನು ಏಕ ವಚನದಲ್ಲೇ ಪ್ರೀತಂ ಕುಟುಕಿದರು. ಜಿಲ್ಲಾ ಕೇಂದ್ರ ಎಂದು ಎಲ್ಲರೂ ಹಾಸನಕ್ಕೆ ಬಂದು ಎಂಎಲ್‍ಎ ಗಿರಿ ಮಾಡಿದರೆ ನಾನು ನನ್ನ ಕ್ಷೇತ್ರಬಿಟ್ಟು ಹೊಳೆನರಸೀಪುರಕ್ಕೆ ಹೋಗಿ ಅಧಿಕಾರ ಚಲಾಯಿಸಲು ಆಗುತ್ತಾ? ರೇವಣ್ಣ ಅವರಿಗೆ ಜಿಲ್ಲಾ ಕೇಂದ್ರದ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ 2023 ರ ಚುನಾವಣೆಯಲ್ಲಿ ಹಾಸನದಿಂದಲೇ ಸ್ಪರ್ಧಿಸಲಿ ಎಂದು ಮತ್ತೊಮ್ಮೆ ಬಹಿರಂಗ ಆಹ್ವಾನ ನೀಡಿದರು.

    ರೇವಣ್ಣ ಅವರ ಆರೋಪಕ್ಕೆ ಪ್ರೀತಂಗೌಡ ಖಾರವಾಗಿಯೇ ಪ್ರತ್ಯುತ್ತರ ನೀಡಿದ್ದು, ರೇವಣ್ಣ ಮತ್ತಷ್ಟು ಕೆರಳಲು ಕಾರಣವಾಯಿತು. ನೀನಾ, ನಾನಾ ಎಂಬಂತೆ ಇಬ್ಬರ ನಡುವೆ ನಡೆದ ವಾಕ್ಸಮರ ಮುಂದಿನ ಚುನಾವಣೆಯಲ್ಲಿ ಎದುರು ಬದುರಾಗುವ ಮುನ್ಸೂಚನೆಯೇ ಎಂದು ಅನೇಕರು ಮಾತನಾಡಿಕೊಂಡರು.

    Live Tv
    [brid partner=56869869 player=32851 video=960834 autoplay=true]

  • ಜೆಡಿಎಸ್‍ನಲ್ಲಿ ಭಿನ್ನಮತ ಸ್ಫೋಟ- ಬಹಿರಂಗವಾಗಿ ಆಕ್ರೋಶ ಹೊರಹಾಕಿದ ಹೆಚ್.ಡಿ.ರೇವಣ್ಣ

    ಜೆಡಿಎಸ್‍ನಲ್ಲಿ ಭಿನ್ನಮತ ಸ್ಫೋಟ- ಬಹಿರಂಗವಾಗಿ ಆಕ್ರೋಶ ಹೊರಹಾಕಿದ ಹೆಚ್.ಡಿ.ರೇವಣ್ಣ

    ಹಾಸನ: ಜೆಡಿಎಸ್‍ನಲ್ಲಿ (JDS) ಭಿನ್ನಮತ ಸ್ಫೋಟಗೊಂಡಿದೆ. ಸೆ.13 ರಂದು ಹಾಸನದಲ್ಲಿ (Hassana) ನಡೆದಿದ್ದ ದಿ. ಮಾಜಿ ಶಾಸಕ ಎಚ್.ಎಸ್.ಪ್ರಕಾಶ್ ಹುಟ್ಟುಹಬ್ಬದ ಕಾರ್ಯಕ್ರಮದ ಬಗ್ಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ (H.D Revanna) ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ.

    ಕಾರ್ಯಕ್ರಮದ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ಗರಂ ಆದ ಎಚ್.ಡಿ.ರೇವಣ್ಣ ಅದೇನು ಅಂತ ನನಗೆ ಗೊತ್ತಿಲ್ಲ. ನನಗೆ ಆ ವಿಷಯವೇ ಗೊತ್ತಿಲ್ಲ. ನನಗೆ ಅವರು ಯಾವ ವಿಷಯಕ್ಕೆ ಕಾರ್ಯಕ್ರಮ ಮಾಡಿದ್ದಾರೆ, ಅದೇನು ಅಂತ ಗೊತ್ತಿಲ್ಲ. ನನ್ನ ಜೊತೆ ಯಾರು ಫೋನ್‍ನಲ್ಲಿ ಮಾತನಾಡಿಲ್ಲ ಎಂದು ಫುಲ್ ಗರಂ ಆದರು. ಇದನ್ನೂ ಓದಿ: ಹರಿಯುವ ನೀರಿನಲ್ಲಿ ಸಿಲುಕಿದ ತಾಯಿ, ಮಗ – ಗುಜುರಿ ವ್ಯಾಪಾರಿಯಿಂದ ರಕ್ಷಣೆ

    ಹಾಸನದಲ್ಲಿ ನಡೆದಿದ್ದ ದಿ.ಎಚ್.ಎಸ್.ಪ್ರಕಾಶ್ ಅವರ 71 ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾಜಿಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, (H.DKumaraswamy) ಸಿ.ಎಂ.ಇಬ್ರಾಹಿಂ (C.M Ibrahim) ಹಾಗೂ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಎಚ್.ಪಿ.ಸ್ವರೂಪ್‍ಗೆ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಎಂದು ಪರೋಕ್ಷವಾಗಿ ಹೆಚ್‌ಡಿಕೆ ಹೇಳಿದ್ದರು. ಅಲ್ಲದೇ ರೇವಣ್ಣ ಜೊತೆ ಫೋನ್‍ನಲ್ಲಿ ಮಾತನಾಡಿದ್ದೇನೆ ಎಂದಿದ್ದರು. ಇದರಿಂದ ಕೆಂಡಾಮಂಡಲರಾಗಿರುವ ರೇವಣ್ಣ ಕಾರ್ಯಕ್ರಮದ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ಸಿಟ್ಟಿನಿಂದಲೇ ಮಾಧ್ಯಮಗೋಷ್ಠಿಯಿಂದ ಎದ್ದು ಹೋದರು. ಇದನ್ನೂ ಓದಿ: ನಾವು ಕತ್ತೆ ಕಾಯೋಕೆ ಇಲ್ಲಿ ಬಂದಿಲ್ಲ- ಸದನದಲ್ಲಿ ಮಾಧುಸ್ವಾಮಿ ಗರಂ

    Live Tv
    [brid partner=56869869 player=32851 video=960834 autoplay=true]

  • ರೇವಣ್ಣನನ್ನು ಹಿಟ್ಲರ್‌ಗೆ ಹೋಲಿಸಿದ ಶಾಸಕ ಪ್ರೀತಂ ಗೌಡ

    ರೇವಣ್ಣನನ್ನು ಹಿಟ್ಲರ್‌ಗೆ ಹೋಲಿಸಿದ ಶಾಸಕ ಪ್ರೀತಂ ಗೌಡ

    ಹಾಸನ: ದಬ್ಬಾಳಿಕೆ ರಾಜಕಾರಣ ಒಪ್ಪಲ್ಲ, ಹಿಟ್ಲರ್ ಸಂಸ್ಕೃತಿಯನ್ನು ಹಾಸನದ ಜನರು ಒಪ್ಪುವುದಿಲ್ಲ. ಜೆಡಿಎಸ್(JDS) ಕಾರ್ಯಕರ್ತರ ಸಭೆಗೆ ಪೊಲೀಸ್ ಪ್ರೊಟೆಕ್ಷನ್ ಕೇಳುವ ಸ್ಥಿತಿಗೆ ರೇವಣ್ಣ ಬಂದಿದ್ದಾರೆ ಎಂದರೆ, ಅವರ ಪರಿಸ್ಥಿತಿ ರಾಜಕೀಯವಾಗಿ ಯಾವ ಮಟ್ಟಕ್ಕೆ ಹೋಗಿದೆ ಎಂಬುದನ್ನು ಊಹೆ ಮಾಡಿ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ(HD Revanna) ಅವರ ವಿರುದ್ಧ ಶಾಸಕ ಪ್ರೀತಂ ಗೌಡ(Preetham Gowda) ವಾಗ್ದಾಳಿ ನಡೆಸಿದ್ದಾರೆ.

    ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಕಾರ್ಯಕರ್ತರನ್ನು ಒಂದು ಸಭೆಯಲ್ಲಿ ರೌಡಿಶೀಟರ್ ಎಂದರು. ಇನ್ನೊಂದು ಸಭೆಯಲ್ಲಿ ಕುಡುಕರು ಎಂದರು. ನಾನು ಬೇರೆ ಪಕ್ಷದ ಕಾರ್ಯಕರ್ತರ ಬಗ್ಗೆ ಮಾತನಾಡುವುದೇ ಇಲ್ಲ. ಆದರೆ ರೇವಣ್ಣ ಅವರು ತಮ್ಮ ಪಕ್ಷದ ಕಾರ್ಯಕರ್ತರ ಬಗ್ಗೆಯೇ ಆ ತರಹ ಮಾತನಾಡಿದ್ದಾರೆ ಎಂದರು.

    ಜೆಡಿಎಸ್ ಕಾರ್ಯಕರ್ತರ ಸಭೆಗೆ ಪೊಲೀಸ್ ಪ್ರೊಟೆಕ್ಷನ್ ಕೇಳುವ ಸ್ಥಿತಿಗೆ ರೇವಣ್ಣ ಅವರು ಬಂದಿದ್ದಾರೆ ಅಂತ ಹೇಳಿದರೆ, ರೇವಣ್ಣ ಅವರ ಪರಿಸ್ಥಿತಿ ರಾಜಕೀಯವಾಗಿ ಏನಾಗಿದೆ ಅಂತ ಕ್ಷಣಕ್ಕೆ ಊಹೆ ಮಾಡಿ. ನಾನು ನಮ್ಮ ಕಾರ್ಯಕರ್ತರ ಸಭೆ ನಡೆಸಬೇಕಾದರೆ ಪೊಲೀಸರನ್ನು ಕರೆಯುವುದೇ ಇಲ್ಲ. ಗೌಪ್ಯವಾಗಿ ಸಭೆ ಮಾಡುತ್ತೇನೆ. ಅವರ ಕಾರ್ಯಕರ್ತರ ಜೊತೆ ಅವರು ಮಾತನಾಡಲು ಪೊಲೀಸ್ ಪ್ರೊಟೆಕ್ಷನ್ ಬೇಕು ಎಂದರೆ, ಅವರ ಪರಿಸ್ಥಿತಿ ಏನಾಗಿದೆ ಎಂಬುದನ್ನು ಯೋಚಿಸಿ ಎಂದು ಕುಟುಕಿದರು. ಇದ್ನನೂ ಓದಿ: ಗಣಪತಿ ಡಿಜೆ – ನಿಮ್ಮ ಪುಂಗಿ ಇಲ್ಲಿ ನಡಿಯೋದಿಲ್ಲ, ನೀವು ಪುಂಗಿ ಊದಿದ್ರೆ, ನಾವು ನಮ್ಮ ಪುಂಗಿ ಊದುತ್ತೇವೆ: ಇನ್ಸ್‌ಪೆಕ್ಟರ್‌ ಅವಾಜ್

    ನನ್ನ ಸಭೆಗೆ ನಾನು ಯಾವತ್ತೂ ಪೊಲೀಸರನ್ನು ಕರೆಯುವುದಿಲ್ಲ. ನನ್ನ ಕಾರ್ಯಕರ್ತರ ಮೇಲೆ ನನಗೆ ನಂಬಿಕೆ ಇದೆ. ನಮ್ಮ ಕಾರ್ಯಕರ್ತರನ್ನು ನಾವು ಯಾವತ್ತೂ ಕುಡುಕರು, ರೌಡಿಶೀಟರ್ ಅಂತ ಕರೆಯುವುದಿಲ್ಲ. ಸಭೆಯಿಂದ ಎದ್ದು ಹೋಗಿ ಅಂತ ಹೇಳೋದಿಲ್ಲ ಎಂದು ತಿಳಿಸಿದರು.

    ನಮ್ಮ ಐಡಿಯಾಲಜಿಯನ್ನು ಹಾಸನದ ಜನರು ಒಪ್ಪಿದ್ದಾರೆ. ಅವರ ಐಡಿಯಾಲಜಿಯನ್ನು ಹಾಸನದ ಜನ ಒಪ್ಪುವುದಿಲ್ಲ. ಅವರ ಐಡಿಯಾಲಜಿ ಎಂದರೆ ಕಾರ್ಯಕರ್ತರನ್ನು ಎದ್ದು ಹೋಗಿ ಎನ್ನುವುದು, ಕುಡುಕರು, ರೌಡಿಶೀಟರ್ ಎನ್ನುವುದು. ಆ ಐಡಿಯಾಲಜಿಯನ್ನು, ದಬ್ಬಾಳಿಕೆ ರಾಜಕಾರಣವನ್ನು, ಹಿಟ್ಲರ್ ಸಂಸ್ಕೃತಿಯನ್ನು ಹಾಸನದ ಜನ ಒಪ್ಪುವುದಿಲ್ಲ. ಇಲ್ಲಿ ಏನೇ ಇದ್ದರೂ ಗೌರವ ಕೊಟ್ಟು ಗೌರವ ತೆಗೆದುಕೊಳ್ಳುವುದು ಎಂದು ಟೀಕಿಸಿದರು.

    ಸಾಮಾನ್ಯ ಕಾರ್ಯಕರ್ತರನ್ನೂ ನಾನು ಅಣ್ಣ ಎಂದೇ ಮಾತನಾಡಿಸುತ್ತೇನೆ, ಹೋಗಿ ಬನ್ನಿ ಎನ್ನುತ್ತೇನೆ. ನಾನು ಯಾರಿಗೂ ಇಲ್ಲಿಯವರೆಗೆ ಏಕವಚನದಲ್ಲಿ ಮಾತನಾಡಿಸಿಲ್ಲ. ಇನ್ನು ಎದ್ದು ಹೋಗಿ ಎನ್ನುವುದು ದೂರದ ಪ್ರಶ್ನೆ. ಇದೇ ಪ್ರೀತಂ ಗೌಡನಿಗೂ ಮಾನ್ಯ ರೇವಣ್ಣ ಅವರಿಗೂ ಇರುವ ವ್ಯತ್ಯಾಸ ಎಂದು ಹೇಳಿದರು.

    ಹಾಸನದ ಜನರು ಮಾತ್ರ ಕೂಲಿ ಕಾರ್ಮಿಕರಾಗಿ ಇರಬೇಕು, ಇವರು ಮಾತ್ರ ಕಾರಿನಲ್ಲಿ ಓಡಾಡಬೇಕು. ರೈತರ ಭೂಮಿಗೆ ಬೆಲೆ ಬಂದರೆ ಕಾರಿನಲ್ಲಿ ಓಡಾಡುತ್ತಾರೆ. ಇವರು ಮಾತ್ರ ಕಾರಿನಲ್ಲಿ ಓಡಾಡಬೇಕಾ? ನಿಮ್ಮ ಕಾರ್ಯಕರ್ತರೇ ನಿಮ್ಮನ್ನು ತಿರಸ್ಕಾರ ಮಾಡಿದ್ದಾರೆ, ನಾವು ಕಾರ್ಯಕರ್ತರನ್ನು ದೇವರು ಎಂದು ಕರೆಯುತ್ತೇವೆ. 45 ವರ್ಷ ರಾಜಕೀಯ ಮಾಡಿರುವವರು 5 ವರ್ಷ ರಾಜಕೀಯ ಮಾಡಿರೋ ಪ್ರೀತಂ ಗೌಡನ ಬಗ್ಗೆ ಯಾಕೆ ಇಷ್ಟು ತಲೆ ಕೆಡಿಸಿಕೊಳ್ಳುತ್ತಾರೆ? ಆರಾಮಾಗಿ ಇರಲು ಹೇಳಿ ಎಂದು ವ್ಯಂಗ್ಯವಾಡಿದರು. ಇದ್ನನೂ ಓದಿ: ಗಣಿಗಾರಿಕೆಯಿಂದ ಭಾರತದ GDPಗೆ ಶೇ.2.5 ರಷ್ಟು ಕೊಡುಗೆ: ಪ್ರಲ್ಹಾದ್ ಜೋಶಿ

    Live Tv
    [brid partner=56869869 player=32851 video=960834 autoplay=true]