Tag: HD Revanna

  • ಹಾಸನ ಟಿಕೆಟ್ ಫೈಟ್‍ಗೆ ಮೂರನೇ ವ್ಯಕ್ತಿ ಎಂಟ್ರಿ- ರಾಜೇಗೌಡ ಪರ ರೇವಣ್ಣ ಫ್ಯಾಮಿಲಿ ಬ್ಯಾಟಿಂಗ್

    ಹಾಸನ ಟಿಕೆಟ್ ಫೈಟ್‍ಗೆ ಮೂರನೇ ವ್ಯಕ್ತಿ ಎಂಟ್ರಿ- ರಾಜೇಗೌಡ ಪರ ರೇವಣ್ಣ ಫ್ಯಾಮಿಲಿ ಬ್ಯಾಟಿಂಗ್

    ಹಾಸನ: ವಿಧಾನಸಭಾ ಕ್ಷೇತ್ರದ ಟಿಕೆಟ್‍ಗಾಗಿ ಭವಾನಿ ರೇವಣ್ಣ (Bhavani Revanna) ಹಾಗೂ ಎಚ್.ಪಿ ಸ್ವರೂಪ್ (H.P Swaroop) ನಡುವೆ ಟಿಕೆಟ್‍ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಟಿಕೆಟ್ ಪ್ರಹಸನಕ್ಕೆ ಇನ್ನೂ ಕೂಡ ತೆರೆ ಬಿದ್ದಿಲ್ಲ. ಇದೀಗ ಇಬ್ಬರ ಜಗಳ ಮೂರನೇಯವನಿಗೆ ಲಾಭ ಎನ್ನುವಂತೆ ಮೂರನೇ ವ್ಯಕ್ತಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದೆ.

    ಎರಡು ಬಾರಿ ಕಾಂಗ್ರೆಸ್‍ (Congress) ನಿಂದ ಸ್ಪರ್ಧಿಸಿ ಎಚ್.ಎಸ್ ಪ್ರಕಾಶ್ (H S Prakash) ವಿರುದ್ಧ ಸೋತು ನಂತರ ಜೆಡಿಎಸ್‍ಗೆ ಸೇರಿದ್ದ ಮಾಜಿ ಹುಡಾ ಅಧ್ಯಕ್ಷ ಕೆ.ಎಂ ರಾಜೇಗೌಡರಿಗೆ ಮಣೆ ಹಾಕಲು ದಳಪತಿಗಳು ಮುಂದಾಗಿದ್ದಾರೆ. ಈಗಾಗಲೇ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ (HD Devegowda) ರು ಹಾಗೂ ಎಚ್.ಡಿ ಕುಮಾರಸ್ವಾಮಿ (H D Kumaraswamy) ಕೆ.ಎಂ.ರಾಜೇಗೌಡರ ಮಾತುಕತೆ ನಡೆಸಿದ್ದಾರೆ. ಇದರಿಂದಾಗಿ ಎಚ್.ಪಿ.ಸ್ವರೂಪ್‍ಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಹೆಚ್ಚಾಗಿದೆ.

    ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಕಿತ್ತಾಟ ತಾರಕಕ್ಕೇರಿದ್ದು, ಟಿಕೆಟ್ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಾರ್ಯಕರ್ತ ಸ್ವರೂಪ್ ಮತ್ತು ರೇವಣ್ಣ ಪತ್ನಿ ಭವಾನಿ ಹೆಸರಿನ ಜೊತೆಗೆ ಮತ್ತೊಂದು ಹೆಸರು ಕೇಳಿ ಬಂದಿದೆ. ಸ್ವರೂಪ್ ಪ್ರಕಾಶ್ ಹೆಸರು ಮನದಲ್ಲಿಟ್ಟುಕೊಂಡು ಕಾರ್ಯಕರ್ತನಿಗೆ ಟಿಕೆಟ್ ಅಂತಿರುವ ಎಚ್.ಡಿ ಕುಮಾರಸ್ವಾಮಿಗೆ ಬ್ರದರ್ ಎಚ್.ಡಿ.ರೇವಣ್ಣ ಫ್ಯಾಮಿಲಿ ಟಕ್ಕರ್ ಕೊಡಲು ಮುಂದಾಗಿದೆ. ಸ್ವರೂಪ್ ಹೆಸರಿನ ಜೊತೆಗೆ ಜೆಡಿಎಸ್ ಹಿರಿಯ ನಾಯಕ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಎಂ.ರಾಜೇಗೌಡ ಹೆಸರನ್ನು ಪ್ರಸ್ತಾಪಿಸಿದೆ. ಈ ಮೂಲಕ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಎನ್ನುವುದಾದರೆ ರಾಜೇಗೌಡರಿಗೆ ಕೊಡಿ ಎಂಬ ಹೊಸ ದಾಳ ಉರುಳಿಸಿದ್ದಾರೆ.

    ಹಿರಿಯ ನಾಯಕ, ಕಾರ್ಯಕರ್ತನ ಹೆಸರು ಪ್ರಸ್ತಾಪಿಸಿ ಹೆಚ್‍ಡಿಕೆಯನ್ನು ಮಾಜಿ ಸಚಿವ ಎಚ್.ಡಿ.ರೇವಣ್ಣ ಫ್ಯಾಮಿಲಿ ಇಕ್ಕಟ್ಟಿಗೆ ಸಿಲುಕಿಸಿದೆ. ಭವಾನಿಗೆ ಟಿಕೆಟ್ ಇಲ್ಲ ಎಂದು ಎಚ್‍ಡಿಕೆ ಖಡಕ್ ಆಗಿ ಹೇಳಿದ್ದು, ಭವಾನಿಗೆ ಟಿಕೆಟ್ ಸಿಗದಿದ್ದರೆ ಸ್ವರೂಪ್‍ಗೂ ಬೇಡ ಎಂದು ರೇವಣ್ಣ ಕುಟುಂಬ ಪಟ್ಟು ಹಿಡಿದಿದೆ. ಹಾಗಾಗಿಯೇ ತಮ್ಮ ಆಪ್ತ, ಹಿರಿಯ ನಾಯಕ ಹಾಗೂ ದೇವೇಗೌಡರ ಜೊತೆಗೂ ಹೆಚ್ಚು ಒಡನಾಟ ಹೊಂದಿರುವ ರಾಜೇಗೌಡರಿಗೆ ಟಿಕೆಟ್ ಕೊಡಿಸಲು ಮೆಗಾಪ್ಲಾನ್ ಮಾಡಿದ್ದಾರೆ. ಭವಾನಿಗೆ ಟಿಕೆಟ್ ತಪ್ಪಿಸಿ ಸ್ವರೂಪ್‍ಗೆ ಟಿಕೆಟ್ ಕೊಟ್ಟರೆ ಜಿಲ್ಲೆಯಲ್ಲಿ ರೇವಣ್ಣರ ಪ್ರಾಬಲ್ಯ ಕುಗ್ಗುವ ಆತಂಕ ಎದುರಾಗಿದ್ದು, ತಮ್ಮನ್ನು ಲೆಕ್ಕಿಸದೆ ಟಿಕೆಟ್‍ಗಾಗಿ ಪೈಪೋಟಿ ನಡೆಸುತ್ತಿರುವ ಸ್ವರೂಪ್‍ಗೆ ರೇವಣ್ಣ ಅಡ್ಡಗಾಲಾಗಿದ್ದಾರೆ. ಏನೇ ಆದ್ರೂ ಸ್ವರೂಪ್, ರಾಜೇಗೌಡ ಗೊಂದಲದ ನಡುವೆ ಕೊನೆ ಗಳಿಗೆಯಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ಕೊಡಿಸುವ ತಂತ್ರಕ್ಕೆ ಮುಂದಾಗಿದೆ. ಹಾಗಾಗಿ ಇದೇ ಮಾನದಂಡ ಮುಂದಿಟ್ಟುಕೊಂಡು ಸ್ವರೂಪ್‍ಗೆ ಟಿಕೆಟ್ ಬೇಡ ಬೇರೆಯವರಿಗೆ ಕೊಡಿ ಎಂದು ರೇವಣ್ಣ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ.

    ಈ ಬಗ್ಗೆ ಕೆ.ಎಂ ರಾಜೇಗೌಡ ಪ್ರತಿಕ್ರಿಯಿಸಿದ್ದು, ದೇವೇಗೌಡರು ಹಾಗೂ ಕುಮಾರಸ್ವಾಮಿ ನನ್ನೊಂದಿಗೆ ಮಾತಾಡಿದ್ದಾರೆ. ಎಲ್ಲರೂ ಒಟ್ಟಿಗೆ ನನ್ನ ಪರ ನಿಲ್ಲುವುದಾದರೆ ನಾನು ಸ್ಪರ್ಧಿಸಲು ಸಿದ್ಧನಿದ್ದೇನೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪಕ್ಷ ಬಿಟ್ಟು ಜೆಡಿಎಸ್ ಸೇರಿದ್ದೆ. 2 ಬಾರಿ ಟಿಕೆಟ್ ಕೈ ತಪ್ಪಿತು ಈಗ ಅವಕಾಶ ಬಂದಿದೆ. ಭವಾನಿ ಸ್ಪರ್ಧಿಸುತ್ತಾರೆ ಎಂಬ ಕಾರಣಕ್ಕೆ ನಾನು ಟಿಕೆಟ್ ಕೇಳಿರಲಿಲ್ಲ. ಸ್ವರೂಪ್‍ಗೂ ದುಡುಕಬೇಡ, ರೇವಣ್ಣ ಕುಟುಂಬದ ವಿರುದ್ಧ ಹೋಗಬೇಡ ಎಂದಿದ್ದೆ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅಲೆ ಇಲ್ಲ, ಯಾವುದೇ ಸಿನಿಮಾ ಸ್ಟೈಲ್‌ನಲ್ಲೂ ರಾಜಕಾರಣ ನಡೆಯಲ್ಲ: ಮುನಿರತ್ನ

    ಒಟ್ಟಾರೆ ಸಾಮಾನ್ಯ ಕಾರ್ಯಕರ್ತನ ಹೆಸರಿನಲ್ಲಿ ಸ್ವರೂಪ್‍ಗೆ ಟಿಕೆಟ್ ಕೊಟ್ಟರೆ ಭವಾನಿ ಬೆಂಬಲಿಗರು ಸಿಡಿದೇಳುವ ಭೀತಿಯಿಂದ ರೇವಣ್ಣ ಫ್ಯಾಮಿಲಿ ಹೊಸ ಅಸ್ತ್ರ ಪ್ರಯೋಗಿಸಿ ಹೆಚ್‍ಡಿಕೆಯನ್ನು ಪೇಚಿಗೆ ಸಿಲುಕಿಸಿದೆ. ಇತ್ತ ದೇವೇಗೌಡರ ಅಂಗಳದಲ್ಲಿ ಟಿಕೆಟ್ ಚೆಂಡು ಬಿದ್ದಿದ್ದು ಹಾಸನದಲ್ಲಿ ಪಂಚರತ್ನ ಯಾತ್ರೆ ಮುಗಿಯುವ ವೇಳೆಗೆ ಅಂತಿಮವಾಗುತ್ತಾ ಕಾದು ನೋಡಬೇಕಿದೆ.

  • ಟಿಕೆಟ್ ಗೊಂದಲ ಮಧ್ಯೆ ಪಂಚರತ್ನ ಯಾತ್ರೆ- ಎ.ಮಂಜುಗೆ ಟಿಕೆಟ್ ನೀಡಿದ್ದಕ್ಕೆ ತೀವ್ರ ವಿರೋಧ

    ಟಿಕೆಟ್ ಗೊಂದಲ ಮಧ್ಯೆ ಪಂಚರತ್ನ ಯಾತ್ರೆ- ಎ.ಮಂಜುಗೆ ಟಿಕೆಟ್ ನೀಡಿದ್ದಕ್ಕೆ ತೀವ್ರ ವಿರೋಧ

    – ಅರಕಲಗೂಡು ಕ್ಷೇತ್ರದ ಜೆಡಿಎಸ್‍ನಲ್ಲಿ ಅಪಸ್ವರ

    ಹಾಸನ: ಜೆಡಿಎಸ್ (JDS) ಭದ್ರಕೋಟೆ ಹಾಸನ ಜೆಲ್ಲೆಯಲ್ಲಿ ಗೊಂದಲ ಮುಂದುವರಿದಿದೆ. ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಇನ್ನೂ ಫೈನಲ್ ಆಗಿಲ್ಲ. ಇದೆಲ್ಲದರ ನಡುವೆ ಮಂಗಳವಾರದಿಂದ 5 ದಿನಗಳ ಕಾಲ 5 ವಿಧಾನಸಭಾ ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆ (Panchayatre Yatre) ನಡೆಯಲಿದೆ.

    ಹೌದು, ಹಾಸನ ಜಿಲ್ಲೆ ಜೆಡಿಎಸ್ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ. ಹಾಸನ ಟಿಕೆಟ್ ಗೊಂದಲ ಮುಂದುವರಿದಿದೆ. ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ (Shivalinge Gowda), ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ (At Ramaswamy) ಜೆಡಿಎಸ್ ಪಕ್ಷ ತೊರೆದಿದ್ದಾರೆ. ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಈ ಮಧ್ಯೆ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಸಾಗಲಿದೆ.

    ಎ.ಮಂಜು ಜೆಡಿಎಸ್ ಸೇರ್ಪಡೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ (HD Revanna) ಅಧ್ಯಕ್ಷತೆಯಲ್ಲಿ ಜೆಡಿಎಸ್ ಪ್ರಮುಖರ ಸಭೆ ನಡೆಸಲಾಯಿತು. ಸಭೆಯಲ್ಲಿ ಎ.ಮಂಜು ಅಭ್ಯರ್ಥಿಯಾದರೆ ಹೇಗೆ ಎಂಬ ಅಭಿಪ್ರಾಯ ಸಂಗ್ರಹಿಸಲಾಯ್ತು. ಆದರೆ ಸಭೆಯಲ್ಲಿ ಮಾಜಿ ಸಚಿವ ಎ.ಮಂಜುಗೆ ಟಿಕೆಟ್ ಕೊಡಲು ಅಪಸ್ವರ ಕೇಳಿ ಬಂದಿದೆ. ಎ.ಟಿ.ರಾಮಸ್ವಾಮಿ ಪಕ್ಷದಲ್ಲಿ ಹಿಂದೆ ಸರಿದಂತಾಗಿದೆ. ಎ. ಮಂಜುಗೆ ಟಿಕೆಟ್ ಕೊಟ್ರೆ ನಮ್ಮ ಕಾರ್ಯಕರ್ತರಿಗೆ ಅವಕಾಶ ಸಿಗಲ್ಲ ಅಂತ ಅಸಮಾಧಾನ ಹೊರಹಾಕಿದ್ರು. ಕೆಲವರು ವಿರೋಧಿಸಿದ್ರೆ, ಇನ್ನೂ ಕೆಲವರು ಬೆಂಬಲ ಸೂಚಿಸಿದ್ರು. ಇದನ್ನೂ ಓದಿ: ಮೋದಿ ಸ್ವಾಗತ ವೇಳೆ ಫೈಟರ್ ರವಿ- ಪ್ರಧಾನಿ ಹುದ್ದೆಗೆ ಕಳಂಕವೆಂದು ಕುಟುಕಿದ ಕಾಂಗ್ರೆಸ್

    ಆದರೆ ರೇವಣ್ಣ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಮಂಜು ಹೆಸರು ಘೋಷಣೆ ಮಾಡಿದ್ರು. ಅಧಿಕೃತವಾಗಿ ದೇವೇಗೌಡರು, ಕುಮಾರಸ್ವಾಮಿ ಅವರು ಏನು ಹೇಳಿದ್ದಾರೆ ಅದಕ್ಕೆ ಸಮ್ಮತಿ ಇದೆ. ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಎ.ಮಂಜಣ್ಣ ಅವರು ನಿಲ್ತಾರೆ ಅಂತ ರೇವಣ್ಣ ಹೇಳಿದ್ರು.

    ಈ ಎಲ್ಲಾ ಬೆಳವಣಿಗೆಗಳ ನಡುವೆ ಇಂದಿನಿಂದ ಪಂಚರತ್ನ ಯಾತ್ರೆ ಆರಂಭವಾಗಲಿದೆ. ಇಂದು ಚನ್ನರಾಯಪಟ್ಟಣ, ನಾಳೆ ಅರಸೀಕೆರೆ, ನಾಡಿದ್ದರು ಹೊಳೆನರಸೀಪುರ ಹೀಗೆ ಅರಕಲಗೂಡು, ಸಕಲೇಶಪುರದಲ್ಲಿ ಪಂಚರತ್ನ ನಡೆಯಲಿದೆ. ಆದರೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಕಗ್ಗಂಟಿನಿಂದ ಪಂಚರತ್ನ ಯಾತ್ರೆ ನಿಗದಿ ಮಾಡಿಲ್ಲ.

  • ಟಿಕೆಟ್ ಕೇಳುವ ಹಕ್ಕು ಭವಾನಿಗೂ ಇದೆ, ಪ್ರತಿಯೊಬ್ಬ JDS  ಕಾರ್ಯಕರ್ತನಿಗೂ ಇದೆ – ಇಬ್ರಾಹಿಂ

    ಟಿಕೆಟ್ ಕೇಳುವ ಹಕ್ಕು ಭವಾನಿಗೂ ಇದೆ, ಪ್ರತಿಯೊಬ್ಬ JDS ಕಾರ್ಯಕರ್ತನಿಗೂ ಇದೆ – ಇಬ್ರಾಹಿಂ

    ಹಾಸನ: ಇಲ್ಲಿನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ (JDS) ಟಿಕೆಟ್ ಕೇಳುವ ಹಕ್ಕು ಭವಾನಿ (Bhvavani Revanna), ಸ್ವರೂಪ್ ಸೇರಿದಂತೆ ಪ್ರತಿಯೊಬ್ಬ ಕಾರ್ಯಕರ್ತನಿಗೂ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ಹೇಳಿದ್ದಾರೆ.

    ಹಾಸನ (Hassan) ಜಿಲ್ಲೆ ಬೇಲೂರು ಪಟ್ಟಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಟಿಕೆಟ್ ಯಾರಿಗೆ ಕೊಡಬೇಕು ಎನ್ನುವುದನ್ನು ಪಕ್ಷ ತೀರ್ಮಾನ ಮಾಡುತ್ತೆ ಎಂದಿದ್ದಾರೆ. ಜೊತೆಗೆ ಕಳೆದ ಭಾನುವಾರ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD KumaraSwamy) ಸಭೆ ಕರೆದೇ ಇಲ್ಲ ಎಂದು ಇಬ್ರಾಹಿಂ ಉಲ್ಟಾ ಹೊಡೆದಿದ್ದಾರೆ. ಇದನ್ನೂ ಓದಿ: ಪಾನ್‌ಕಾರ್ಡ್ ಅಪ್ಡೇಟ್ ಮಾಡ್ಬೇಕು ಅಂತಾ ಕರೆ – ಲಿಂಕ್ ಒತ್ತಿದ ಪೊಲೀಸಪ್ಪನ 73 ಸಾವಿರ ಗುಳುಂ!

    ಹೆಚ್.ಡಿ ರೇವಣ್ಣ (HD Revanna), ಹೆಚ್.ಡಿ ಕುಮಾರಸ್ವಾಮಿ, ಬಾಲಕೃಷ್ಣ, ರಮೇಶ್ ಈ ನಾಲ್ಕು ಜನ ಸಹೋದರರ ನಡುವೆ ಭಿನ್ನಾಭಿಪ್ರಾಯ ಬರುತ್ತೆ ಅಂತಾ ಯಾರಾದ್ರೂ ತಿಳಿದುಕೊಂಡಿದ್ದರೆ ಅದು ತಪ್ಪು ಕಲ್ಪನೆ. ಆ ನಾಲ್ಕು ಮಂದಿ ಯಾವತ್ತಿದ್ದರೂ ಒಂದೇ. ಅವರು ಹೇಗಿದ್ದಾರೆ ಅನ್ನೋದನ್ನ ಕಳೆದ 50 ವರ್ಷಗಳಿಂದಲೂ ನೋಡಿಕೊಂಡು ಬಂದಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: `ಸೀತಾ ರಾಮಂ’ ನಾಯಕಿಗೆ ಮದುವೆ ಪ್ರಪೋಸಲ್‌, ಖಡಕ್‌ ಉತ್ತರ ಕೊಟ್ಟ ನಟಿ

  • ಹಾಸನ ರಾಜಕೀಯ ದೊಂಬರಾಟಕ್ಕೆ ರೇವಣ್ಣ ಕಾರಣ: ಎ.ಟಿ.ರಾಮಸ್ವಾಮಿ

    ಹಾಸನ ರಾಜಕೀಯ ದೊಂಬರಾಟಕ್ಕೆ ರೇವಣ್ಣ ಕಾರಣ: ಎ.ಟಿ.ರಾಮಸ್ವಾಮಿ

    ಹಾಸನ: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಡೊಂಬರಾಟಕ್ಕೆಲ್ಲ ಮಾಜಿ ಸಚಿವ ರೇವಣ್ಣ (HD Revanna) ಅವರೇ ನೇರ ಕಾರಣ ಎಂದು ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ (AT Ramaswamy) ತೀವ್ರ ವಾಗ್ದಾಳಿ ನಡೆಸಿದರು.

    ಹಾಸನ (Hassan) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ತಮ್ಮ ಸ್ವಾರ್ಥಕ್ಕೆ ಯಾರನ್ನಾದರೂ ಬಲಿ ಕೊಡುತ್ತಾರೆ, ಅವರನ್ನ ನಂಬಬೇಡಿ ಎನ್ನುವ ಮೂಲಕ ಪರೋಕ್ಷವಾಗಿ ರೇವಣ್ಣ ವಿರುದ್ಧ ಗರಂ ಆದರು. ದೇವೇಗೌಡರನ್ನು (HD Devegowda) ಜಿಲ್ಲೆಯಿಂದ ಹೊರಗಟ್ಟಿ, ಇಳಿವಯಸ್ಸಿನಲ್ಲೂ ಸೋಲುವಂತೆ ಮಾಡಿದ್ದು ನೋವಿನ ವಿಷಯ. ಅವರನ್ನೇ ಹೊರ ಹಾಕಿದವರಿಗೆ ನಾವು ಯಾವ ಲೆಕ್ಕ, ದೇವೇಗೌಡರ ತಪಸ್ಸು, ಜಪ ಹಾಗೂ ಅವರ ಹೆಸರಿನಿಂದ ಮೇಲೆ ಬಂದ ನಂತರ ಏಣಿ ಒದ್ದರು, ಇಳಿವಯಸ್ಸಿನಲ್ಲೂ ನೋವು ಕೊಟ್ಟರು. ಹಿರಿಯ ಜೀವ ಈಗ ನೋವಿನಿಂದ ನರಳುತ್ತಿದೆ ಎಂದು ಮರುಗಿದರು.

    ಜಿಲ್ಲೆಯಲ್ಲಿ ಏನೇನು ನಡೆಯುತ್ತಿದೆ, ಡೊಂಬರಾಟ, ರಾಜಕೀಯ ಬಿಕ್ಕಟ್ಟಿಗೆ ಹೊರಗಿನವರು ಕಾರಣಾನಾ ಎಂದು ಪ್ರಶ್ನಿಸಿದ ಅವರು, ಇದಕ್ಕೆಲ್ಲ ರೇವಣ್ಣನ ಮನೆಯವರೇ ಕಾರಣ ಎಂದು ನೇರ ಆರೋಪ ಮಾಡಿದರು. ರಾಮಸ್ವಾಮಿಯವರೇ ನೀವು ಪ್ರಾಮಾಣಿಕರು, ದೇವೇಗೌಡರಿಗೆ ಸಮಾನರಾದವರು, ನೀವು ರಾಜಕೀಯದಲ್ಲಿ ಇರಬೇಕು, ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ನಿಮ್ಮನ್ನು ಮಂತ್ರಿ ಮಾಡಲಾಗುವುದು ಎಂದೆಲ್ಲ ಹೇಳಿ, ಈಗ ಅವಹೇಳನ ಮಾಡಿ ಹೊರ ಓಡಿಸಿದ್ರಲ್ಲ, ನಾನು ಮಾಡಿದ ಅಪರಾಧ ಏನು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಯಾದಗಿರಿಯಲ್ಲಿ ಟಿಪ್ಪು ಸರ್ಕಲ್ ವಿವಾದ- ಕೋಮು ಪ್ರಚೋದನೆ ನೀಡಿದವರ ಮೇಲೆ ಕೇಸ್, ಅರೆಸ್ಟ್

    ಇಂತಹ ಚಟುವಟಿಕೆಗಳಿಂದ ಬೇಸತ್ತು ನಾನು ಇತ್ತೀಚಿನ ವರ್ಷಗಳಲ್ಲಿ ಜೆಡಿಎಸ್‌ನಿಂದ ದೂರ ಉಳಿದಿದ್ದೆ, ಆದರೆ ಶಾಸಕಾಂಗ ಸಭೆಗೆ ಬಂದಿಲ್ಲ ಎಂದು ಕುಮಾರಸ್ವಾಮಿ ಮಾಡಿರುವ ಆರೋಪ ಸುಳ್ಳು. ಪುಸ್ತಕ ತೆರೆದು ನೋಡಲಿ. ಯಾವುದೇ ಕಾರಣಕ್ಕೂ ಸತ್ಯ ಮರೆಮಾಚಬಾರದು ಎಂದರು. ಇದನ್ನೂ ಓದಿ: ದೊಡ್ಡಗೌಡರ ಖಡಕ್ ವಾರ್ನಿಂಗ್ – ಪ್ರತಿಭಟನೆ ಅರ್ಧಕ್ಕೆ ಕೈಬಿಟ್ಟ ಜೆಡಿಎಸ್ ಕಾರ್ಯಕರ್ತರು

  • ಭವಾನಿ-ರೇವಣ್ಣ ನಡೆಯಿಂದ ಮತ್ತೆ ಗೊಂದಲಕ್ಕೆ ಬಿದ್ದ ಸ್ವರೂಪ್‌

    ಭವಾನಿ-ರೇವಣ್ಣ ನಡೆಯಿಂದ ಮತ್ತೆ ಗೊಂದಲಕ್ಕೆ ಬಿದ್ದ ಸ್ವರೂಪ್‌

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಾಸನ ಟಿಕೆಟ್‌ ಗುಟ್ಟು ಬಿಡದ ರೇವಣ್ಣ ಫ್ಯಾಮಿಲಿ

    ಹಾಸನ ಟಿಕೆಟ್‌ ಗುಟ್ಟು ಬಿಡದ ರೇವಣ್ಣ ಫ್ಯಾಮಿಲಿ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಾಸನದಲ್ಲಿ ಟಿಕೆಟ್ ಗೊಂದಲ – ಮೂಕಾಂಬಿಕೆಯ ಮೊರೆ‌ ಹೋದ ರೇವಣ್ಣ ಕುಟುಂಬ

    ಹಾಸನದಲ್ಲಿ ಟಿಕೆಟ್ ಗೊಂದಲ – ಮೂಕಾಂಬಿಕೆಯ ಮೊರೆ‌ ಹೋದ ರೇವಣ್ಣ ಕುಟುಂಬ

    ಬೆಂಗಳೂರು/ ಉಡುಪಿ: ಜೆಡಿಎಸ್‌ನಲ್ಲಿ (JDS) ಹಾಸನ (Hassan) ಟಿಕೆಟ್‌ ಗೊಂದಲ ಬಗೆಹರಿಯುತ್ತಿಲ್ಲ. ಬದಲಾಗಿ ಇನ್ನಷ್ಟು ಗೋಜಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಮಾಜಿ ಮಂತ್ರಿ ಹೆಚ್‌.ಡಿ ರೇವಣ್ಣ (HD Revanna) ಕುಟುಂಬ ದೇವರ ಮೊರೆಹೋಗಿದೆ. ಪತ್ನಿ ಭವಾನಿ ರೇವಣ್ಣಗೆ ಟಿಕೆಟ್ ಸಿಗುವಂತೆ ಹೆಚ್.ಡಿ. ರೇವಣ್ಣ ವಿಶೇಷ ಯಾಗ ಮಾಡಿಸಿದ್ದಾರೆ.

    ಚುನಾವಣಾ ಹೊಸ್ತಿಲಲ್ಲೇ ರೇವಣ್ಣ ಮತ್ತು ಕುಟುಂಬದ ಸದಸ್ಯರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ನವದುರ್ಗಿ ಚಂಡಿಕಾ ಯಾಗವನ್ನು ಮಾಡಿಸಿದ್ದಾರೆ. ಭವಾನಿ ರೇವಣ್ಣ, ರೇವಣ್ಣ ಸೇರಿ ಕುಟುಂಬದ ಸದಸ್ಯರು ಯಾಗದಲ್ಲಿ ಭಾಗಿಯಾಗಿದ್ದಾರೆ. ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೂ ಈ ನವದುರ್ಗಿ ಚಂಡಿಕಾ ಯಾಗ ನಡೆದಿದೆ.

    ಮೂಲಗಳ ಪ್ರಕಾರ, ದೇವೇಗೌಡರ ಆರೋಗ್ಯದ ನೆಪದಲ್ಲಿ ವಿಶೇಷ ಪೂಜೆ ಆಯೋಜನೆ ಮಾಡಲಾಗಿದೆ‌. ದೇವೇಗೌಡರ ಆರೋಗ್ಯದಲ್ಲಿ ಸುಧಾರಣೆ ಆಗಬೇಕು ಅಂತ ಯಾಗ ನಡೆಸಲಾಗಿದೆ. ಇದೆಲ್ಲದೆ ಜೆಡಿಎಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಬರಬೇಕು ಅಂತ ಪೂಜೆ ಸಲ್ಲಿಕೆ ಮಾಡಲಾಗಿದೆ ಅಂತ ತಿಳಿಸಿವೆ. ಇದನ್ನೂ ಓದಿ: ಅಮಿತ್‌ ಶಾ ಕೊಟ್ಟ ಟಾಸ್ಕ್‌ನಲ್ಲಿ ಕರ್ನಾಟಕ ಬಿಜೆಪಿ ಫೇಲ್‌

    ಇತ್ತೀಚೆಗಷ್ಟೇ ಮಾಜಿ ಮಂತ್ರಿ ಹೆಚ್‌.ಡಿ.ರೇವಣ್ಣ (H.D.Revanna) ಮಾತನಾಡಿ, ಪಕ್ಷ ಸೂಚಿಸಿದ್ರೆ ಹಾಸನದಿಂದಲೂ ಸ್ಪರ್ಧೆಗೆ ರೆಡಿ ಎಂದು ಘೋಷಿಸಿದ್ದರು. ಹಾಸನದಿಂದ ಭವಾನಿ ರೇವಣ್ಣ ಟಿಕೆಟ್ ಪಟ್ಟು ಬೆನ್ನಲ್ಲೇ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡೋದಾಗಿ ಹೇಳಿದ್ದರು. ಇದನ್ನೂ ಓದಿ: ಉಡುಪಿಗೆ ನಡ್ಡಾ – ಇಂದು ಮೂರು ಕಾರ್ಯಕ್ರಮದಲ್ಲಿ ಭಾಗಿ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಾಸನದ ಜೆಡಿಎಸ್ ಸಿಂಹಾಸನ – ಬಗೆಹರಿಯದ ಕುಟುಂಬದೊಳಗಿನ ಕದನ

    ಹಾಸನದ ಜೆಡಿಎಸ್ ಸಿಂಹಾಸನ – ಬಗೆಹರಿಯದ ಕುಟುಂಬದೊಳಗಿನ ಕದನ

    ಬೆಂಗಳೂರು: ಅವರೊಂದು ನಿರ್ಧಾರ ಮಾಡಲಿ, ನಾವು ಎರಡು ನಿರ್ಧಾರ ಮಾಡುತ್ತೇವೆ. ಇದು ರೇವಣ್ಣ ಕುಟುಂಬದ ಹೊಸ ಸೂತ್ರನಾ? ಎಂಬ ಚರ್ಚೆ ನಡೆಯುತ್ತಿದೆ. ಹಾಸನ, ಅರಕಲಗೂಡು (Arakalagudu) ಟಿಕೆಟ್ ಯಾರಿಗೆ ಎಂದು ನಿರ್ಧಾರ ಮಾಡುವುದು ರೇವಣ್ಣನಾ (HD Revanna)? ಅರಸೀಕೆರೆ (Arsikere) ಟಿಕೆಟ್ ಯಾರಿಗೆ ಎಂದು ನಿರ್ಧಾರ ಮಾಡೋದು ಮಾಜಿ ಸಿಎಂ ಕುಮಾರಸ್ವಾಮಿನಾ (HD Kumaraswamy) ಎಂಬ ಕುತೂಹಲ ಗರಿಗೆದರಿದೆ.

    ಹೆಚ್‌ಡಿಕೆಯ ಬ್ರಾಹ್ಮಣ ಸಿಎಂ ಬಾಂಬ್ ಕಿಡಿಯಲ್ಲೂ ಹಾಸನ ಸಿಂಹಾಸನ ಕದನ ಒಳಗೊಳಗೆ ಕೊತಕೊತ ಕುದಿಯುತ್ತಿದೆ. ಅರಕಲಗೂಡು ಕ್ಷೇತ್ರದಲ್ಲಿ ಎ.ಮಂಜುಗೆ ಟಿಕೆಟ್ ಕೊಡಲು ರೇವಣ್ಣ ಪುತ್ರರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನಮ್ಮ ಮೇಲೆ ಕೇಸ್ ಹಾಕಿ ಹಾದಿ ಬೀದಿಯಲ್ಲಿ ಕೆಟ್ಟದಾಗಿ ಮಾತನಾಡಿದವರಿಗೆ ಟಿಕೆಟ್ ಬೇಡ, ಕುಮಾರಸ್ವಾಮಿ ಅವರು ಎರಡು ವಿಚಾರದಲ್ಲೂ ಆತುರವಾಗಿ ಮಾಧ್ಯಮಗಳಲ್ಲಿ ಘೋಷಣೆ ಮಾಡಿದ್ದಾರೆ. ಕುಟುಂಬದೊಳಗೆ ಕುಳಿತು ಚರ್ಚೆ ಮಾಡಿ ಆನಂತರ ಹೆಚ್‌ಡಿಕೆ ಮಾತನಾಡಬೇಕಿತ್ತು ಎಂಬುದು ರೇವಣ್ಣ ಪುತ್ರರ ಅಸಮಾಧಾನ ಎನ್ನಲಾಗಿದೆ. ಇದನ್ನೂ ಓದಿ: ಯುಪಿಎ ಅವಧಿಯದ್ದು ಭ್ರಷ್ಟಾಚಾರದ ದಶಕ, ನಮ್ಮದು ಭಾರತದ ದಶಕ: ನರೇಂದ್ರ ಮೋದಿ

    ಈ ನಡುವೆ ಹಾಸನ (Hassan) ಸ್ಪರ್ಧೆ ವಿಚಾರದಲ್ಲೂ ಭವಾನಿ ರೇವಣ್ಣ ಸ್ಪರ್ಧೆ ಅನಿವಾರ್ಯತೆ ಇಲ್ಲ ಎಂದು ಹೆಚ್‌ಡಿಕೆ ಎಂದಿದ್ದರು. ಅರಕಲಗೂಡು ಕ್ಷೇತ್ರದಿಂದ ಎ.ಮಂಜುಗೆ ಟಿಕೆಟ್ ಕೊಡುತ್ತೇವೆ ಎಂದು ಘೋಷಿಸಿದ್ದರು. ಈ ಎರಡು ಘೋಷಣೆಗಳ ಬಗ್ಗೆ ರೇವಣ್ಣ ಕುಟುಂಬದಲ್ಲಿ ಆಂತರಿಕ ಅಸಮಾಧಾನ ಇದೆ ಎನ್ನಲಾಗುತ್ತಿದೆ. ಹೀಗಾಗಿ ಎರಡು ಕ್ಷೇತ್ರಗಳ ನಿರ್ಧಾರವನ್ನು ರೇವಣ್ಣ ಅವರೇ ಮಾಡಲಿ ಎಂಬ ಒತ್ತಡ, ಅರಸೀಕೆರೆ ವಿಚಾರದಲ್ಲಿ ಕುಮಾರಸ್ವಾಮಿ ಬೇಕಾದರೆ ನಿರ್ಧಾರ ಮಾಡಿಕೊಳ್ಳಲಿ ಎಂಬ ಸೂತ್ರ ಮುಂದಿಟ್ಟಿದ್ದಾರೆ ಎನ್ನಲಾಗುತ್ತಿದೆ.

    ಹೀಗಾದರೆ ಹಾಸನ ಜಿಲ್ಲೆಯ ಜೆಡಿಎಸ್ ಟಿಕೆಟ್ ಗೊಂದಲ ಅಧಿವೇಶನಕ್ಕೂ ಮುನ್ನ ಬಗೆಹರಿಯುತ್ತಾ? ಯಾರ ಸೂತ್ರಕ್ಕೆ ಜಯ ಸಿಗುತ್ತದೆ? ಎಂಬುದಕ್ಕೆ ಈ ತಿಂಗಳ ಅಂತ್ಯದಲ್ಲಿ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ. ಇದನ್ನೂ ಓದಿ: ಹೆಚ್‌ಡಿಕೆ ಜಾತಿ ಅಸ್ತ್ರಗಳಿಗೆ ಸಾಮ್ರಾಟ್ ಸಾಫ್ಟ್ ರಾಗ – ಅಶೋಕ್ ನಡೆಗೆ ಪಕ್ಷದಲ್ಲೇ ಆಕ್ಷೇಪ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 2 ಬಾರಿ ಆಪರೇಷನ್ ಆದ್ರೂ ಆರೋಗ್ಯ ಲೆಕ್ಕಿಸದೇ ಪಕ್ಷಕ್ಕಾಗಿ ಹೋರಾಟ: ರೇವಣ್ಣ ಭಾವುಕ

    2 ಬಾರಿ ಆಪರೇಷನ್ ಆದ್ರೂ ಆರೋಗ್ಯ ಲೆಕ್ಕಿಸದೇ ಪಕ್ಷಕ್ಕಾಗಿ ಹೋರಾಟ: ರೇವಣ್ಣ ಭಾವುಕ

    ಹಾಸನ: ಎರಡು ಬಾರಿ ಆಪರೇಷನ್ ಆಗಿದ್ದರೂ ಕುಮಾರಣ್ಣ (HD Kumaraswamy) ಆರೋಗ್ಯ ಲೆಕ್ಕಿಸದೇ ಪಕ್ಷಕ್ಕಾಗಿ ಹೋರಾಟ ಮಾಡ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಭಾವುಕರಾಗಿದ್ದಾರೆ.

    ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಎರಡು ಬಾರಿ ಆಪರೇಷನ್ ಆಗಿದ್ದರೂ ಆರೋಗ್ಯ ಲೆಕ್ಕಿಸದೇ ಕುಮಾರಣ್ಣ ಹೋರಾಟ ಮಾಡ್ತಿದ್ದಾರೆ. ಅವರಿಗೆ ಯಾವುದೇ ರೀತಿಯಲ್ಲೂ ನೋವಾಗದಂತೆ ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ. ಹಾಸನ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಗೊಂದಲ ಬಗೆಹರಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಆಶಿಕಾ ರಂಗನಾಥ್‌ಗೆ ಮನಸಾರೆ ಹಾರೈಸಿದ ಜ್ಯೂ.ಎನ್‌ಟಿಆರ್‌

    ದೇವೇಗೌಡರಿಗೆ ದೇವರು ಇನ್ನಷ್ಟು ಆರೋಗ್ಯ ಕೊಡಬೇಕು. ಏಕೆಂದರೆ ಕುಮಾರಣ್ಣ ನಮ್ಮ ನಾಯಕರು, ಈ ಬಾರಿ ಚುನಾವಣೆಯಲ್ಲಿ (Karnataka Election 2023) 123 ಸೀಟು ಗೆದ್ದು, ಮುಖ್ಯಮಂತ್ರಿಯಾಗಿ ವಿಧಾನಸೌಧದಲ್ಲಿ ಜೆಡಿಎಸ್ (JDS) ಬಾವುಟ ಹಾರಿಸುವುದನ್ನ ಅವರು ನೋಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೊರಗಿನ ಪರಿಸ್ಥಿತಿ ಏನೇ ಇರಲಿ, ಆಂತರಿಕವಾಗಿ ಭಾರತ ಗಟ್ಟಿಯಾಗಿದೆ: ಮೋದಿ

    ಕುಮಾರಣ್ಣ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ನಾಯಕ, ಅವರು ಮುಖ್ಯಮಂತ್ರಿ ಆಗಿದ್ದಾಗ 28 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದಾರೆ. ಈಗ ಪಂಚರತ್ನ ಯಾತ್ರೆ ಮಾಡ್ತಿದ್ದಾರೆ. ನಮ್ಮ ಜಿಲ್ಲೆಯಲ್ಲೂ ಸಹ ಹಿರಿಯ ಮುಖಂಡರಿಗೆ ಶಕ್ತಿ ತುಂಬುವ ಕೆಲಸ ಮಾಡ್ತಿದ್ದೇವೆ. ಅರಸೀಕೆರೆಯಲ್ಲಿ ಫೆ.12 ರಂದು ಸಭೆ ಇದೆ. ಕುಮಾರಣ್ಣ ಸೇರಿದಂತೆ ಎಲ್ಲರೂ ಅಲ್ಲಿಗೆ ಬರ್ತಾರೆ. ಹಾಸನ (Hassan) ಜಿಲ್ಲೆಯಲ್ಲೂ ಸಭೆ ಮಾಡುವ ಮೂಲಕ ಸಮಸ್ಯೆಗಳನ್ನ ಬಗೆಹರಿಸುತ್ತೇವೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k