Tag: HD Revanna

  • ನನಗೆ ಟಿಕೆಟ್ ಸಿಗೋ ವಿಶ್ವಾಸವಿದೆ, ಯಾರಿಗೆ ಸಿಕ್ಕಿದ್ರೂ ಒಟ್ಟಾಗಿ ಕೆಲಸ ಮಾಡ್ತೀವಿ: ಸ್ವರೂಪ್

    ನನಗೆ ಟಿಕೆಟ್ ಸಿಗೋ ವಿಶ್ವಾಸವಿದೆ, ಯಾರಿಗೆ ಸಿಕ್ಕಿದ್ರೂ ಒಟ್ಟಾಗಿ ಕೆಲಸ ಮಾಡ್ತೀವಿ: ಸ್ವರೂಪ್

    ಹಾಸನ: ನಮ್ಮ ನಾಯಕರಾದ ದೇವೇಗೌಡರು, ರೇವಣ್ಣ, ಕುಮಾರಣ್ಣ ಹಾಗೂ ಇಬ್ರಾಹಿಂ ಸಾಹೇಬರು ಸೇರಿ 2ನೇ ಪಟ್ಟಿ ಘೋಷಣೆ ಮಾಡುತ್ತಾರೆ. ಅಂತಿಮವಾಗಿ ಯಾರಿಗೆ ಟಿಕೆಟ್ ನೀಡಿದರೂ ನಾವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡ್ತೇವೆ ಎಂದು ಟಿಕೆಟ್ ಆಕಾಂಕ್ಷಿ ಹೆಚ್‌ಪಿ ಸ್ವರೂಪ್ ಪ್ರಕಾಶ್ (HP Swaroop) ಹೇಳಿದ್ದಾರೆ.

    ಸೋಮವಾರ ಅಭಿಮಾನಿಗಳೊಂದಿಗೆ ತಮ್ಮ 40ನೇ ಹುಟ್ಟು ಹಬ್ಬ ಆಚರಿಸಿಕೊಂಡು ಮಾತನಾಡಿದ ಅವರು, ಹಾಸನದಲ್ಲಿ (Hassana) ನೂರಕ್ಕೆ ನೂರರಷ್ಟು ಜೆಡಿಎಸ್ (JDS) ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ. ಹಾಸನದಲ್ಲಿ ಈ ಬಾರಿ ಜೆಡಿಎಸ್ ಗೆಲುವು ಶತಸಿದ್ಧ. ಹಿರಿಯರೆಲ್ಲಾ ಸೇರಿ ಅಂತಿಮವಾಗಿ ಯಾರು ಅಭ್ಯರ್ಥಿ ಎಂದು ಘೋಷಣೆ ಮಾಡುತ್ತಾರೋ ಅವರಿಗೆ ನಾವೆಲ್ಲಾ ಕೆಲಸ ಮಾಡುತ್ತೇವೆ ಎಂದು ಹೇಳಿದರು.

    ಕುಮಾರಸ್ವಾಮಿ (HD Kumaraswamy) ಅವರ ಹೇಳಿಕೆಯನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಸಾಮಾನ್ಯ ಕಾರ್ಯಕರ್ತ ಎಂದು ಹೇಳಿದ್ದು, ಯಾರಿಗೆ ಅಂತಿಮವಾಗಿ ಟಿಕೆಟ್ ಕೊಡುತ್ತಾರೆ ನೋಡೋಣ. ಇನ್ನೆರಡು ದಿನಗಳಲ್ಲಿ ಬಹುತೇಕ 2ನೇ ಪಟ್ಟಿ ಬಿಡುಗಡೆ ಆಗುತ್ತದೆ. ಯಾರು ಅಭ್ಯರ್ಥಿ ಎಂದು ಅದರಲ್ಲಿ ಗೊತ್ತಾಗಲಿದೆ ಎಂದು ಹೇಳಿದರು.

    ಖಂಡಿತವಾಗಿಯೂ ನಾನು ಆಕಾಂಕ್ಷಿಯಾಗಿದ್ದು ಟಿಕೆಟ್ ಸಿಗುವ ವಿಶ್ವಾಸವಿದೆ. ಪಕ್ಷದ ಕಾರ್ಯಕರ್ತರು, ಸ್ನೇಹಿತರು ಒಗ್ಗಟ್ಟಿನಿಂದ ಕೆಲಸ ಮಾಡಲು ಕಾತರದಿಂದ ಕಾಯುತ್ತಾ ಇದ್ದೇವೆ. ಚುನಾವಣೆ ಎಂದ ಮೇಲೆ ಎಲ್ಲರನ್ನೂ ಒಗ್ಗೂಡಿಸಿ, ಒಗ್ಗಟ್ಟಿನಿಂದ ಹೋದರೆ ಮಾತ್ರ ಗೆಲುವು ಸಾಧಿಸಲು ಸಾಧ್ಯ. ಇಂದು ಕೂಡಾ ಹಾಸನಕ್ಕೆ ನಮ್ಮ ಪಕ್ಷದಿಂದ ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸುವ ಕೆಲಸ ಮಾಡಲು ಎಲ್ಲಾ ಕಾರ್ಯಕರ್ತರು ಕಾಯುತ್ತಾ ಇದ್ದಾರೆ ಎಂದು ನುಡಿದರು. ಇದನ್ನೂ ಓದಿ: ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ ಮಾಡಬೇಕು ಎಂಬುದು ಕಾರ್ಯಕರ್ತರ ಅಪೇಕ್ಷೆ : ಬಿ.ವೈ ರಾಘವೇಂದ್ರ

    ಟಿಕೆಟ್ ವಿಚಾರವಾಗಿ ಯಾರೂ ನನ್ನ ಜೊತೆ ಚರ್ಚೆ ಮಾಡಿಲ್ಲ. ನಾವು ಪ್ರಚಾರ ಮಾಡುತ್ತಾ ಇದ್ದೇವೆ. ಮಾಧ್ಯಮದವರು ಪ್ರಚಾರ ಮಾಡುತ್ತಿದ್ದಾರೆ. ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಕ್ಷೇತ್ರದಲ್ಲಿ ಓಡಾಡಿದ ನಂತರ ನಗರದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದೇವೆ. ಇಲ್ಲಿ ವಿರುದ್ಧ ಪ್ರಶ್ನೆ ಉದ್ಭವವಾಗಲ್ಲ. ರೇವಣ್ಣ ಸಾಹೇಬರು ಯಾರಿಗೆ ಟಿಕೆಟ್ ಘೋಷಣೆ ಮಾಡಿದರೂ ನಾವೆಲ್ಲಾ ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದರು.

    ಇದಕ್ಕೂ ಮುನ್ನ ಸ್ವರೂಪ್ ತಮ್ಮ ನೂರಾರು ಅಭಿಮಾನಿಗಳಿಂದ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹೇಮಾವತಿ ನಗರದಲ್ಲಿರುವ ಸ್ವರೂಪ್ ಅವರ ನಿವಾಸದ ಬಳಿ ಜಮಾಯಿಸಿದ ಅಭಿಮಾನಿಗಳು ಅವರಿಗೆ ಶುಭಾಶಯ ಕೋರಿದರು. ಅಭಿಮಾನಿಗಳು ತಂದಿದ್ದ ಹತ್ತಾರು ಕೇಕ್‌ಗಳನ್ನು ಕತ್ತರಿಸಿ ಎಲ್ಲರಿಗೂ ಸ್ವರೂಪ್ ಸಿಹಿ ತಿನ್ನಿಸಿದರು. ನಂತರ ನೀರುವಾಗಿಲು ಆಂಜನೇಯ ಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಸಚಿವೆ ಶಶಿಕಲಾ ಜೊಲ್ಲೆಗೆ ಗ್ರಾಮಸ್ಥರಿಂದ ಕ್ಲಾಸ್

  • ಹಾಸನದಲ್ಲಿ ಸ್ವರೂಪ್‌ಗೆ ಟಿಕೆಟ್ ಫಿಕ್ಸ್ – ಪರೋಕ್ಷವಾಗಿ ಸುಳಿವು ಕೊಟ್ಟ HDK

    ಹಾಸನದಲ್ಲಿ ಸ್ವರೂಪ್‌ಗೆ ಟಿಕೆಟ್ ಫಿಕ್ಸ್ – ಪರೋಕ್ಷವಾಗಿ ಸುಳಿವು ಕೊಟ್ಟ HDK

    – ನನ್ನ ಹತ್ರ ಬ್ಲ್ಯಾಕ್‌ಮೇಲ್‌ ನಡೆಯಲ್ಲ; ರೇವಣ್ಣ ದಂಪತಿಗೆ ಟಾಂಗ್

    ಬೆಂಗಳೂರು: ಹಾಸನ ಟಿಕೆಟ್ (Hassan Ticket) ಕಗ್ಗಂಟು ಮತ್ತೊಂದು ಹಂತದಲ್ಲಿ ಕುತೂಹಲ ಕೆರಳಿಸಿದೆ.

    ಯಲಹಂಕದಲ್ಲಿ ಪಂಚರತ್ನ ರಥಯಾತ್ರೆ ವೇಳೆ ಕಾರ್ಯಕರ್ತನೋರ್ವ, ಪಕ್ಷದ ಪರವಾಗಿ ಕೆಲಸ ಮಾಡಿದವರಿಗೆ ಟಿಕೆಟ್ ನೀಡಬೇಕು. ಹಾಸನದಲ್ಲಿ ಸ್ವರೂಪ್‌ಗೆ (Swaroop) ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅಮುಲ್ ದೇಶದ ಬ್ರ್ಯಾಂಡ್‌, ಭಾರತದಲ್ಲೇ ಮಾರಾಟ ಮಾಡಿದ್ರೆ ಏನು ತೊಂದ್ರೆ – ಸಿ.ಟಿ ರವಿ ಪ್ರಶ್ನೆ

    ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy), ಮಾಧ್ಯಮಮಿತ್ರರಿಗೂ ಹೇಳ್ತೀನಿ ಕೇಳಿಸಿಕೊಳ್ಳಿ. ಕಾರ್ಯಕರ್ತರ ಅಭಿಪ್ರಾಯವೇ ನಮ್ಮ ಅಭಿಪ್ರಾಯ. ಕಾರ್ಯಕರ್ತರಿಗೆ ಟಿಕೆಟ್ ಅಂತಾ ಹೇಳಿದ್ದೀನಿ. ಅದರಲ್ಲಿ ಬದಲಾವಣೆ ಇಲ್ಲ ಅಂತ ಪರೋಕ್ಷವಾಗಿ ಸ್ವರೂಪ್‌ಗೇ ಟಿಕೆಟ್ ಅಂತ ಹೇಳಿದ್ದಾರೆ. ಇದನ್ನೂ ಓದಿ: ದೇವೇಗೌಡ್ರು ಅಡುಗೆ ಮನೆಯಲ್ಲಿ ಅರ್ಧ ಗಂಟೆ ಕುಳಿತರೆ ಜೆಡಿಎಸ್ ಟಿಕೆಟ್ ಹಂಚಿಕೆ ಮುಗಿಯುತ್ತೆ: ತೇಜಸ್ವಿ ಸೂರ್ಯ ವ್ಯಂಗ್ಯ

    ಈ ಮಧ್ಯೆ, ಹಾಸನದಲ್ಲಿ ಭವಾನಿಗೆ (Bhavani Revanna) ಟಿಕೆಟ್ ತಪ್ಪಿದರೆ, ಹೊಳೇನರಸೀಪುರದಲ್ಲಿ ನಾನೂ ಕೂಡ ಸ್ಪರ್ಧೆ ಮಾಡಲ್ಲ ಅಂತಾ ಶುಕ್ರವಾರ ಸಭೆಯಲ್ಲಿ ರೇವಣ್ಣ (HD Revanna) ಹೇಳಿದ್ದಾರೆ ಅನ್ನೋದು ತಿಳಿದು ಬಂದಿದೆ. ಇದರ ಬೆನ್ನಲ್ಲೇ, ನನ್ನ ಹತ್ತಿರ ಬ್ಲ್ಯಾಕ್‌ ಮೇಲ್‌ ನಡೆಯಲ್ಲ ಅಂತಲೂ ಪರೋಕ್ಷವಾಗಿ ರೇವಣ್ಣ ದಂಪತಿಗೆ ಟಾಂಗ್ ಕೊಟ್ಟಿದ್ದಾರೆ.

  • ಭವಾನಿಗೆ ಟಿಕೆಟ್ ಮಿಸ್ ಆದ್ರೆ ಕೆಆರ್ ಪೇಟೆ ಮೇಲೂ ಪ್ರಭಾವ?

    ಭವಾನಿಗೆ ಟಿಕೆಟ್ ಮಿಸ್ ಆದ್ರೆ ಕೆಆರ್ ಪೇಟೆ ಮೇಲೂ ಪ್ರಭಾವ?

    ಹಾಸನ: ರಾಜ್ಯ ವಿಧಾನಸಭಾ ಚುನಾವಣೆಯ (Assembly Election) ಅಖಾಡ ಗರಿಗೆದರಿದೆ. ಅದರಲ್ಲೂ ಹಾಸನ (Hassan) ವಿಧಾನಸಭಾ ಕ್ಷೇತ್ರದ ಜೆಡಿಎಸ್ (JDS) ಟಿಕೆಟ್ ಹಂಚಿಕೆ ವಿಚಾರ ರಾಜ್ಯ ರಾಜಕಾರಣದಲ್ಲಿ ಫುಲ್ ಸೌಂಡ್ ಮಾಡ್ತಾ ಇದೆ. ಇಲ್ಲಿ ಭವಾನಿ ರೇವಣ್ಣ (Bhavani Revanna) ಬದಲಿಗೆ ಸ್ವರೂಪ್‌ಗೆ ‌(Swaroop) ಟಿಕೆಟ್ ನೀಡಿದರೆ ಕೇವಲ ಹಾಸನದಲ್ಲಿ ಮಾತ್ರವಲ್ಲ ಕೆಆರ್ ಪೇಟೆ (KR Pete) ಕ್ಷೇತ್ರದಲ್ಲಿ ಜೆಡಿಎಸ್ ಮೇಲೆ ಪ್ರಭಾವ ಬೀರಲಿದೆ.

    ಕಳೆದ 1-2 ತಿಂಗಳಿನಿಂದ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವುದು ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯ ಆಯ್ಕೆ ವಿಚಾರ. ಹಾಸನದಿಂದ ರೇವಣ್ಣ ಪತ್ನಿ ಭವಾನಿ ರೇವಣ್ಣ ಸ್ಪರ್ಧೆ ಮಾಡಬೇಕೆಂಬ ಅಭಿಲಾಷೆಯನ್ನು ಇಟ್ಟುಕೊಂಡಿದ್ದಾರೆ. ಇತ್ತ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತ ಸ್ವರೂಪ್‌ಗೆ ಟಿಕೆಟ್ ನೀಡಬೇಕೆಂದು ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ಇಬ್ಬರು ರಾಜಿಯಾಗದ ಕಾರಣ ಟಿಕೆಟ್ ಬಿಕ್ಕಟ್ಟಿನ ಫೈಟ್ ಜೋರಾಗಿ ನಡೆಯುತ್ತಿದೆ. ಇದಕ್ಕೆಲ್ಲಾ ಇದೇ ಶುಕ್ರವಾರ ದೇವೇಗೌಡರ ಸಮ್ಮುಖದಲ್ಲಿ ಇತಿಶ್ರೀ ಹಾಡಿ, ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಫೈನಲ್ ಮಾಡಲಾಗುತ್ತೆ ಎಂದು ಜೆಡಿಎಸ್ ಮೂಲಗಳು ಹೇಳುತ್ತಿವೆ.

    ಒಂದು ವೇಳೆ ಹಾಸನದಿಂದ ಭವಾನಿಗೆ ಟಿಕೆಟ್ ತಪ್ಪಿಸಿ ಸ್ವರೂಪ್‌ಗೆ ನೀಡಿದ್ದಲ್ಲಿ ಹಾಸನ ಕ್ಷೇತ್ರದ ಜೆಡಿಎಸ್‌ನಲ್ಲಿ ಒಂದಷ್ಟು ಡ್ಯಾಮೇಜ್ ಆಗೋದು ಗ್ಯಾರಂಟಿ. ಈ ಡ್ಯಾಮೇಜ್ ಕೇವಲ ಹಾಸನ ಕ್ಷೇತ್ರದಲ್ಲಿ ಮಾತ್ರವಲ್ಲ ಹಾಸನ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಸಮಸ್ಯೆ ಎದುರಾಗೋದು ಕಟ್ಟಿಟ್ಟ ಬುತ್ತಿ. ಇದನ್ನೂ ಓದಿ: ಮಹಿಳೆಯನ್ನು ನಿಂದಿಸಿ ಹಲ್ಲೆ ಆರೋಪ – ಮುಳಬಾಗಿಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿರುದ್ಧ ಎಫ್‌ಐಆರ್

    ಏಕೆಂದರೆ ಕೆಆರ್ ಪೇಟೆ ಕ್ಷೇತ್ರದ ಮೇಲೆ ರೇವಣ್ಣ ಅವರ ಹಿಡಿತವಿದೆ. ಈಗಾಗಲೇ ಕೆಆರ್ ಪೇಟೆ ಜೆಡಿಎಸ್ ಟಿಕೆಟ್ ಹಂಚಿಕೆಯ ವಿಚಾರದಲ್ಲಿ ರೇವಣ್ಣ ಆಪ್ತರಿಗೆ ಟಿಕೆಟ್ ನೀಡದೇ ಹೆಚ್‌ಡಿಕೆ ತಮ್ಮ ಆಪ್ತರಾಗಿರುವ ಹೆಚ್‌ಡಿ ಮಂಜುಗೆ ಟಿಕೆಟ್ ನೀಡಿದ್ದಾರೆ. ಈ ವಿಚಾರದಲ್ಲಿ ಬೇಸರಗೊಂಡು ರೇವಣ್ಣ ಆಪ್ತರಾದ ಬಿಎಲ್ ದೇವರಾಜು, ಬಸ್ ಕೃಷ್ಣೇಗೌಡ ಸೇರಿದಂತೆ ಹಲವರು ಕಾಂಗ್ರೆಸ್ ಸೇರಿದ್ದಾರೆ.

    ಹೀಗಿರುವಾಗ ಭವಾನಿ ರೇವಣ್ಣಗೆ ಟಿಕೆಟ್ ಕೈ ತಪ್ಪಿದ್ರೆ, ರೇವಣ್ಣ ಬಯಸಿದ ಹಾಗೆ ಕೆಆರ್ ಪೇಟೆ ಕ್ಷೇತ್ರದಲ್ಲಿ ತಮ್ಮ ಆಪ್ತನಿಗೆ ಹಾಗೂ ಹಾಸನ ಕ್ಷೇತ್ರದಲ್ಲಿ ಪತ್ನಿಗೆ ಟಿಕೆಟ್ ಕೊಡಿಸದಂತೆ ಆಗುತ್ತದೆ. ಹೀಗಾಗಿ ಹಾಸನ ಕ್ಷೇತ್ರದ ಜೊತೆಗೆ ಕೆಆರ್ ಪೇಟೆ ಕ್ಷೇತ್ರದಲ್ಲೂ ರೇವಣ್ಣ ಬೆಂಬಲಿಗರು ಜೆಡಿಎಸ್ ಅಭ್ಯರ್ಥಿ ಪರ ಕೆಲಸ ಮಾಡದೇ ಇರಬಹುದು. ಇದೇ ಕಾರಣಕ್ಕೋ ಏನೋ ಕುಮಾರಸ್ವಾಮಿ ಕಳೆದ 2 ದಿನಗಳ ಹಿಂದೆ ಕೆಆರ್ ಪೇಟೆ ಭಾಷಣದ ವೇಳೆ, ನಮ್ಮ ನೆಂಟರೇ ಈ ಕ್ಷೇತ್ರಕ್ಕೆ ಬರಬಹುದು. ಅವರು ಬಂದು ಜೆಡಿಎಸ್ ಅಭ್ಯರ್ಥಿ ಸೋಲಿಸಿ ಎಂದು ಹೇಳಬಹುದು. ಅವರ ಕುತಂತ್ರಗಳಿಗೆ ಯಾರು ಒಳಗಾಗಬೇಡಿ ಎಂದು ಹೇಳಿದ್ದರು.

    ಒಟ್ಟಾರೆ ಭವಾನಿ ರೇವಣ್ಣಗೆ ಟಿಕೆಟ್ ಕೈ ತಪ್ಪಿದರೆ ಹಾಸನ ಕ್ಷೇತ್ರದ ಜೊತೆಗೆ ಕೆಆರ್ ಪೇಟೆ ಕ್ಷೇತ್ರದಲ್ಲೂ ಜೆಡಿಎಸ್‌ಗೆ ಪೆಟ್ಟು ಬೀಳಬಹುದು. ಅದೇ ಕಾರಣಕ್ಕೆ ಕುಮಾರಸ್ವಾಮಿ ಮೊದಲೇ ನಿರೀಕ್ಷಣಾ ಜಾಮೀನು ಹಾಕಿಕೊಂಡಿರಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ: ಏ. 9ಕ್ಕೆ ಮೋದಿ ಬಂಡೀಪುರ ಭೇಟಿ – ಪ್ರವಾಸಿಗರಿಗೆ ಇಂದಿನಿಂದ 4 ದಿನ ಸಫಾರಿ, ರೆಸಾರ್ಟ್ ವಾಸ್ತವ್ಯ ಬಂದ್

  • ಮೀಸಲಾತಿ ತೆಗೆದವರಿಗೆ ಶಾಪ ತಟ್ಟಲಿದೆ: ಹೆಚ್‌ಡಿ ರೇವಣ್ಣ

    ಮೀಸಲಾತಿ ತೆಗೆದವರಿಗೆ ಶಾಪ ತಟ್ಟಲಿದೆ: ಹೆಚ್‌ಡಿ ರೇವಣ್ಣ

    – ದೇವೇಗೌಡರ ಕುಟುಂಬವನ್ನು ಯಾರಿಂದ್ಲೂ ಒಡೆಯಲು ಆಗಲ್ಲ

    ಹಾಸನ: ಅಲ್ಪಸಂಖ್ಯಾತರಿಗೆ ಎಲ್ಲಿಯೂ ಮೀಸಲಾತಿ (Reservation) ಕೊಟ್ಟಿರಲಿಲ್ಲ. 1994 ರಲ್ಲಿ ದೇವೇಗೌಡರು (HD Deve Gowda) 2ಬಿ ಮೀಸಲಾತಿ ಕೊಟ್ಟರು. ಆದರೀಗ ಈ ಮೀಸಲಾತಿಯನ್ನು ದುರುದ್ದೇಶ ಪೂರಿತವಾಗಿ ತೆಗೆದಿದ್ದು, ವಂಚಿತ ಜನರ ಶಾಪ ರದ್ದು ಮಾಡಿದವರಿಗೆ ತಟ್ಟಲಿದೆ ಎಂದು ಮಾಜಿ ಸಚಿವ ಹೆಚ್‌ಡಿ ರೇವಣ್ಣ (HD Revanna) ಕಿಡಿಕಾರಿದ್ದಾರೆ.

    ಹಾಸನ (Hassan) ಜಿಲ್ಲೆ, ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವ ರಥೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಂಜಾನ್ ಉಪವಾಸ ಸಂದರ್ಭದಲ್ಲೇ ಮೀಸಲಾತಿ ತೆಗೆದಿದ್ದಾರೆ. ಆ ಭಕ್ತಿಯೇ ಈ ಸರ್ಕಾರ ತೆಗೆಯಲಿದೆ. ನಾವ್ಯಾರೂ ತೆಗೆಯಬೇಕಿಲ್ಲ. ಮುಂದೆ ಮೀಸಲಾತಿಯನ್ನು ನಾವು ಜಾರಿ ಮಾಡುತ್ತೇವೆ. ಕಾಂಗ್ರೆಸ್ ಕೇವಲ ಅಲ್ಪಸಂಖ್ಯಾತರ ಮತ ಹಾಕಿಸಿಕೊಂಡಿತು. ಆದರೆ ಮೀಸಲಾತಿ ಕೊಟ್ಟಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಬಿಜೆಪಿ-ಕಾಂಗ್ರೆಸ್ ಎರಡೂ ಅಡ್ಜೆಸ್ಟ್ಮೆಂಟ್ ಸರ್ಕಾರ. ರಾತ್ರಿ ಹೊತ್ತು ಇಬ್ಬರೂ ಮಾತಾಡ್ತಾರೆ. ಬೆಳಗ್ಗೆ ಇವರನ್ನು ಅವರು, ಅವರನ್ನು ಇವರು ಬೈಯ್ದಾಡುತ್ತಾರೆ. ಮೀಸಲಾತಿ ಹೆಸರಿನಲ್ಲಿ ಹೊಡೆದಾಡಿಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

    2 ವರ್ಷ ಸ್ವಾಮೀಜಿಗಳು ಹೋರಾಟ ಮಾಡಿದ್ರೆ, ಈಗ ಅದನ್ನು ಜಾರಿ ಮಾಡಿದ್ದಾರೆ. ಅದೂ ಜಾರಿ ಆಗುತ್ತೋ, ಇಲ್ಲವೊ ಗೊತ್ತಿಲ್ಲ. ಜನರು ಎಚ್ಚರಿಕೆಯಿಂದ ಇರಬೇಕು. ಜಾತಿ ಜಾತಿ ನಡುವೆ ಹೊಡೆದಾಡಿಸುತ್ತಿದ್ದಾರೆ. ಜಾತಿ ಸಂಘರ್ಷ ಮಾಡಿಕೊಂಡು ರಾಜಕೀಯ ಮಾಡಲು ಹೊರಟಿದ್ದಾರೆ. ಜನರು ಎಚ್ಚರಿಕೆಯಿಂದ ಮತ ಚಲಾವಣೆ ಮಾಡಬೇಕು ಎಂದು ಮನವಿ ಮಾಡಿದರು.

    2023ರ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಕುಮಾರಸ್ವಾಮಿ (HD Kumaraswamy) ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದಾರೆ. ಎರಡೂ ಪಕ್ಷಗಳನ್ನು ಜನರು ನೋಡಿದ್ದಾರೆ. ಕುಮಾರಸ್ವಾಮಿ ಅವರ 14 ತಿಂಗಳ ಆಡಳಿತ ಕೂಡ ನೋಡಿದ್ದಾರೆ. ಕೊಟ್ಟ ಮಾತು ಉಳಿಸಿಕೊಳ್ಳುವ ನಾಯಕ ಯಾರಾದ್ರು ಇದ್ದರೆ ಅದು ಕುಮಾರಸ್ವಾಮಿ. 25 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ. ಹಿಂದೆ ಕೆಲವರು ಹಾಸನ ಬಜೆಟ್, ಮಂಡ್ಯ ಬಜೆಟ್, ರಾಮನಗರ ಬಜೆಟ್ ಎಂದು ಅಣಕಿಸಿದ್ರೂ ತಲೆ ಕೆಡಿಸಿಕೊಳ್ಳದೆ ಕೆಲಸ ಮಾಡಿದ್ದಾರೆ. ಆದರೆ ಬಿಜೆಪಿಯವರು ಹಾಸನಕ್ಕೆ ತಾಂತ್ರಿಕ ವಿವಿ ತಡೆ ಹಿಡಿದರು ಎಂದರು.

    ಲಿಂಗೇಶ್ ಅವರ ಪ್ರಾಮಾಣಿಕ ಪ್ರಯತ್ನದಿಂದ ಬೇಲೂರಿಗೆ ರಣಘಟ್ಟ ಯೋಜನೆ ಆಗಿದೆ. ನಾನು ಸಚಿವ ಆಗಿದ್ದಾಗ ನೀರಾವರಿ ಯೋಜನೆಗೆ 5 ಸಾವಿರ ಕೋಟಿ ಹಣ ಬಂದಿದೆ. ಕಳೆದ ಬಾರಿ ಅಪಪ್ರಚಾರದ ನಡುವೆಯೂ 38 ಸೀಟ್ ಬಂದಿತ್ತು. ನಮ್ಮ ಜಿಲ್ಲೆಗೆ ಕೊಟ್ಟ ಹಣವನ್ನು ಬೇರೆ ಜಿಲ್ಲೆಗೆ ತೆಗೆದುಕೊಂಡು ಹೋದರು. ಆದರೂ ನಮ್ಮ ಸರ್ಕಾರದ ಅವಧಿಯಲ್ಲಿ ಹಾಸನ ಜಿಲ್ಲೆ ಸಾಕಷ್ಟು ಅಭಿವೃದ್ಧಿಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಿದ್ದರೆ ಅದು ಹಾಸನ ಜಿಲ್ಲೆಯಲ್ಲಿ ಎಂದರು. ಇದನ್ನೂ ಓದಿ: ಜನಾರ್ದನ ರೆಡ್ಡಿ ಸಮ್ಮುಖದಲ್ಲೇ ಅಭ್ಯರ್ಥಿಗೆ 1 ಲಕ್ಷ ಹಣ ನೀಡಿದ ಸ್ವಾಮೀಜಿ

    ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಅಡಿಗಲ್ಲು ಹಾಕಿದ ಯೋಜನೆ ರದ್ದು ಮಾಡಿದ್ದರು. ಬೇಲೂರು-ಹಾಸನ 4 ಪಥದ ರಸ್ತೆಗೆ ಮತ್ತೆ 900 ಕೋಟಿ ರೂ. ಜಾರಿಯಾಗಿದೆ. ಜಿಲ್ಲೆಯ ಎಲ್ಲಾ ರಸ್ತೆಗೆ ನಾನು ಸಚಿವನಾಗಿದ್ದಾಗ 2 ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದೆ. ಈಗ ಹೊಸದಾಗಿ ಎಲ್ಲೋ ಶೆಡ್ ಹಾಕಲು ಅನುದಾನ ಕೊಟ್ಟಿರಬೇಕು ಎಂದು ಶಾಸಕ ಪ್ರೀತಂಗೌಡ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.

    ದೇವೇಗೌಡರ ಕುಟುಂಬವನ್ನು ಒಡೆಯಲು ಯಾರಿಂದಲೂ ಆಗಲ್ಲ. ಯಾರೂ ತಲೆ ಕೆಡಿಸಿಕೊಳ್ಳಬೇಡಿ. ರಾಜ್ಯದಲ್ಲಿ ಬೇರೆ ಯಾರೂ ಇಲ್ಲವೇ, ಅದೇನೊ ದೇವೇಗೌಡರನ್ನೇ ತೋರಿಸಬೇಕು ಎಂದು ಅಸಮಧಾನ ಹೊರ ಹಾಕಿದರು. ಬೇಲೂರಿನ ಚನ್ನಕೇಶವಸ್ವಾಮಿ ರಥೋತ್ಸವ ಆಗಿದೆ. ಇದೊಂದು ಐತಿಹಾಸಿಕ ದಿನ. ಬೇಲೂರು ಹಾಗೂ ಅಕ್ಕಪಕ್ಕದ ಜಿಲ್ಲೆಯಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದಾರೆ. ಅವರ ಕುಟುಂಬಗಳು ಯಾವುದೇ ಸಂಕಷ್ಟಕ್ಕೆ ಸಿಗಬಾರದೆಂದು ಪ್ರಾರ್ಥನೆ ಮಾಡಿ ಹೋಗಿದ್ದಾರೆ. ನಾನೂ ಪ್ರತಿ ವರ್ಷ ಬೇಲೂರು ಜಾತ್ರೆಗೆ ಬರುತ್ತೇನೆ ಎಂದರು. ಇದನ್ನೂ ಓದಿ: 70 ಸೀಟ್ ಬಂದ್ರೆ ಲಿಂಗಾಯತರು ಸಿಎಂ ಆಗ್ತಾರೆ: ಶಾಮನೂರು ಸ್ಫೋಟಕ ಹೇಳಿಕೆ

  • ರೇವಣ್ಣ ಆರೋಪಕ್ಕೆ ಬೇಸತ್ತು ವರ್ಗಾವಣೆ ಕೋರಿದ ಡಿವೈಎಸ್‌ಪಿ

    ರೇವಣ್ಣ ಆರೋಪಕ್ಕೆ ಬೇಸತ್ತು ವರ್ಗಾವಣೆ ಕೋರಿದ ಡಿವೈಎಸ್‌ಪಿ

    – ರಾಜಕಾರಣಿಗಳು ನನ್ನಿಂದ ಕಾನೂನು ಬಾಹಿರ ಕ್ರಮ ಆಪೇಕ್ಷಿಸುತ್ತಿದ್ದಾರೆ

    ಹಾಸನ: ಡಿವೈಎಸ್‌ಪಿ ಉದಯ್ ಭಾಸ್ಕರ್ (Uday Bhaskar) ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿ ಅವರ ವಿರುದ್ಧ ಕ್ರಮಕ್ಕೆ ಹೆಚ್‌ಡಿ ರೇವಣ್ಣ (HD Revanna) ಒತ್ತಾಯಿಸಿದ್ದರು. ಇದೀಗ ಡಿವೈಎಸ್‌ಪಿ ಮನನೊಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದು ಸ್ವಯಂ ವರ್ಗಾವಣೆಗೆ (Transfer) ಕೋರಿದ್ದಾರೆ.

    ನಾನು ನಿಷ್ಪಕ್ಷಪಾತ, ನೇರ ನುಡಿಯ ವ್ಯಕ್ತಿತ್ವವುಳ್ಳವನು. ರಾಜಕಾರಣಿಗಳು ನನ್ನಿಂದ ಕಾನೂನು ಬಾಹಿರ ಕ್ರಮ ಆಪೇಕ್ಷಿಸುತ್ತಿದ್ದಾರೆ. ಅವರ ಒತ್ತಾಯಗಳಿಗೆ ನಾನು ಮಣಿಯದ ಕಾರಣ ನನ್ನ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಉದಯ್ ಭಾಸ್ಕರ್ ಪರೋಕ್ಷವಾಗಿ ಮಾಜಿ ಸಚಿವ ರೇವಣ್ಣ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮತ್ತೆ ರಾಜ್ಯಕ್ಕೆ ಮೋದಿ – ಕಾಂಗ್ರೆಸ್‌, ಜೆಡಿಎಸ್‌ ಭದ್ರಕೋಟೆಯಲ್ಲೇ ನಡೆಯಲಿದೆ ಸಮಾವೇಶ

    ನನ್ನ ಮೇಲೆ ಆರೋಪ ಮಾಡಿ ನನ್ನ ಮೇಲಾಧಿಕಾರಿಗಳಿಗೆ ಮಾನಸಿಕ ಒತ್ತಡಗಳನ್ನು ನೀಡುತ್ತಿದ್ದಾರೆ. ರಾಜಕಾರಣಿಗಳು ಈ ಚುನಾವಣಾ ಸಂದರ್ಭದಲ್ಲಿ ನನಗೆ ಸುಗಮವಾಗಿ ಕೆಲಸ ಮಾಡಲು ಅಡ್ಡಿಪಡಿಸಿ ಗೊಂದಲ ಸೃಷ್ಟಿಪಡಿಸುವುದು ಖಚಿತ. ಇದರಿಂದ ಮೇಲಾಧಿಕಾರಿಗಳಿಗೂ ಇರುಸುಮುರುಸು ಉಂಟಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಇದೀಗ ಬೇಸರದಿಂದಲೇ ತಮ್ಮ ವರ್ಗಾವಣೆಗೆ ಬೇಡಿಕೆ ಇಟ್ಟಿರುವ ಉದಯ್ ಭಾಸ್ಕರ್, ಚುನಾವಣಾ ಪ್ರಕ್ರಿಯೆ ಮುಗಿಯುವ ತನಕ ನನ್ನನ್ನು ಹಾಸನ ಜಿಲ್ಲೆಯಿಂದ ತಮಗೆ ಸರಿ ಎನಿಸಿದ ಸ್ಥಳಕ್ಕೆ ತಾತ್ಕಾಲಿಕ ವರ್ಗಾವಣೆಗೆ ಕೋರುತ್ತೇನೆ ಎಂದು ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಪ್ರಮುಖ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಸಿಗುತ್ತಿಲ್ಲ ಅಭ್ಯರ್ಥಿಗಳು!

  • ಹಾಸನ ಟಿಕೆಟ್‌ಗೆ ಒತ್ತಡ ತರಬೇಡಿ, ನಾವು ಕೊಡುವ ಅಭ್ಯರ್ಥಿ ಪರ ಕೆಲಸ ಮಾಡಿ: ದೇವೇಗೌಡ ಕಿವಿಮಾತು

    ಹಾಸನ ಟಿಕೆಟ್‌ಗೆ ಒತ್ತಡ ತರಬೇಡಿ, ನಾವು ಕೊಡುವ ಅಭ್ಯರ್ಥಿ ಪರ ಕೆಲಸ ಮಾಡಿ: ದೇವೇಗೌಡ ಕಿವಿಮಾತು

    ಬೆಂಗಳೂರು: ಹಾಸನ ಕ್ಷೇತ್ರದ ಟಿಕೆಟ್ ಗೊಂದಲ ಇನ್ನೂ ಕಗ್ಗಂಟಾಗಿದೆ. ಇಂದು ದೇವೇಗೌಡರ ನಿವಾಸದಲ್ಲಿ ಹಾಸನದ ಮುಖಂಡರ ಸಭೆಯನ್ನು ದೇವೇಗೌಡ (HD Deve Gowda) ನಡೆಸಿದರು.

    ಸಭೆಯಲ್ಲಿ ಕೆಲವು ಮುಖಂಡರು ಭವಾನಿ ರೇವಣ್ಣಗೆ (Bhavani Revanna) ಟಿಕೆಟ್ ಕೊಡುವಂತೆ ಒತ್ತಾಯ ಮಾಡಿದರು. ಭವಾನಿ ರೇವಣ್ಣಗೆ ಕೊಡದೇ ಹೋದರೂ ರೇವಣ್ಣರನ್ನೆ ಹಾಸನದಿಂದ (Hassan) ನಿಲ್ಲಿಸಿ ಎಂದು ಮುಖಂಡರು ಒತ್ತಾಯ ಮಾಡಿದರು.

    ಸಭೆಯಲ್ಲಿ ಮುಖಂಡರಿಗೆ ದೇವೇಗೌಡರು ಕಿವಿಮಾತು ಹೇಳಿದ್ದಾರೆ. ಹಾಸನ ಕ್ಷೇತ್ರದಲ್ಲಿ ಪರಿಶೀಲನೆ ಮಾಡಿಯೇ ಟಿಕೆಟ್ ನೀಡುತ್ತೇವೆ. ಹೆಚ್.ಡಿ ರೇವಣ್ಣ ಹೊಳೆನರಸೀಪುರದಿಂದ ಸ್ಪರ್ಧಿಸುತ್ತಾರೆ. ಎರಡೂ ಕ್ಷೇತ್ರದಲ್ಲಿ ರೇವಣ್ಣ (HD Revanna) ಚುನಾವಣೆಗೆ ನಿಲ್ಲುವುದಿಲ್ಲ. ನಮಗೆ ಹಾಸನ ಕ್ಷೇತ್ರ ಉಳಿಸಿಕೊಳ್ಳುವುದಷ್ಟೇ ಗುರಿ. ಹಾಸನ‌ ಕ್ಷೇತ್ರಕ್ಕೆ ಟಿಕೆಟ್ ಯಾರಿಗೆ ಕೊಡಬೇಕು ಎನ್ನುವುದನ್ನು ನಿರ್ಧಾರ ಮಾಡುತ್ತೇನೆ. ಎಲ್ಲರೂ ಬೆಂಬಲಿಸುವಂತೆ ಸಭೆಯಲ್ಲಿ ಮನವಿ ಮಾಡಿದರು.

    ಹಾಸನ ರಾಜಕಾರಣ ನನಗೆ 40 ವರ್ಷದಿಂದ ಗೊತ್ತಿದೆ. ಗೆಲ್ಲುವ ಅಭ್ಯರ್ಥಿ ಹಾಗೂ ಕಾರ್ಯಕರ್ತರಿಗೆ ಟಿಕೆಟ್ ಕೊಡುತ್ತೇವೆ. ದಯವಿಟ್ಟು ಒತ್ತಡ ತರಬೇಡಿ ಎಂದ ದೇವೇಗೌಡರು ಮನವಿ ಮಾಡಿದರು.

    ಸಭೆ ಬಳಿಕ ಮಾತನಾಡಿದ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy), ಪಕ್ಷದ ಕೆಲ ಮುಖಂಡರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಗೌಡರಿಗೆ ಆರೋಗ್ಯ ಸರಿಯಿಲ್ಲ. ಬೆಂಬಲಿಗರು ಬೇಡಿಕೆ ಇಟ್ಟಿದ್ದಾರೆ. ಸೂಕ್ತ ನಿರ್ಣಯ ಆಗುತ್ತದೆ. ಆದರೆ ಇಂತಹದ್ದೆ ನಿರ್ಣಯ ಆಗುತ್ತೆ ಎಂದು ಹೇಳುವುದಕ್ಕೆ ಆಗಲ್ಲ ಎಂದರು. ಇದನ್ನೂ ಓದಿ: ದೇವೇಗೌಡರ ಕುಟುಂಬ ಯಾರನ್ನೂ ಬೆಳೆಯಲು ಬಿಡಲ್ಲ- ಜೆಡಿಎಸ್ ವಿರುದ್ಧ ನಾರಾಯಣಗೌಡ ವಾಗ್ದಾಳಿ

    ಹಾಸನ ಟಿಕೆಟ್ ವಿಚಾರ ಇನ್ನೂ ಚರ್ಚೆಯ ಹಂತದಲ್ಲೇ ಇದೆ. ಎಲ್ಲರೂ ಒಗ್ಗೂಡಿ ಒಂದೇ ತೀರ್ಮಾನ ಆಗಿರುತ್ತದೆ. ಅದಕ್ಕೆ ಎಲ್ಲರೂ ಬದ್ಧ. ಈಗ ನಡೆದ ಸಭೆಯಲ್ಲಿ ಯಾವುದೇ ತೀರ್ಮಾನ ಆಗಿಲ್ಲ. 2 ದಿನ ಕಾದು ನೋಡೋಣ ಎಂದು ಹೇಳಿದರು. ಇದನ್ನೂ ಓದಿ: ಮಾಜಿ ಶಾಸಕ ಎ.ಟಿ ರಾಮಸ್ವಾಮಿ ಬಿಜೆಪಿಗೆ ಸೇರ್ಪಡೆ

  • ದೇವೇಗೌಡರ ಮಕ್ಕಳು ಜಗಳ ಆಡ್ತಾರೆ ಅಂದರೆ ನೀವು ಸುಳ್ಳಾಗ್ತೀರಾ: ಸಿ.ಎಂ ಇಬ್ರಾಹಿಂ

    ದೇವೇಗೌಡರ ಮಕ್ಕಳು ಜಗಳ ಆಡ್ತಾರೆ ಅಂದರೆ ನೀವು ಸುಳ್ಳಾಗ್ತೀರಾ: ಸಿ.ಎಂ ಇಬ್ರಾಹಿಂ

    ಬೆಂಗಳೂರು: ದೇವೇಗೌಡರ (HD DeveGowda) ಮಕ್ಕಳು ಯಾವತ್ತು ಜಗಳ ಆಡುವುದಿಲ್ಲ. ಜಗಳ ಆಡ್ತಾರೆ ಅಂದುಕೊಂಡರೆ‌ ನೀವು ಸುಳ್ಳಾಗ್ತೀರಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ಸ್ಪಷ್ಟಪಡಿಸಿದರು.

    ಹಾಸನ (Hassan) ಟಿಕೆಟ್ ವಿಚಾರದಲ್ಲಿ ರೇವಣ್ಣ ಹೇಳಿಕೆ ವಿಚಾರ‌ ಮತ್ತು ಸ್ವರೂಪ್ ಯಾರು ಅಂತ ಗೊತ್ತಿಲ್ಲ ಎಂಬ ರೇವಣ್ಣ (HD Revanna) ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ದೇವೇಗೌಡರ ಮಕ್ಕಳಲ್ಲಿ ಜಗಳ, ಭಿನ್ನಾಭಿಪ್ರಾಯ ಗೋಚಾರ ಆಗುವುದಿಲ್ಲ. ಆಗೋದು ಇಲ್ಲ. ಅವರು 4 ಜನರು ಒಂದೇ. ಅವರಲ್ಲಿ ಜಗಳ ಅಂತ ನೀವು ನಂಬಿದ್ರೆ ನೀವು ಸುಳ್ಳಾಗ್ತೀರಾ ಎಂದರು. ಇದನ್ನೂ ಓದಿ: ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ಅನರ್ಹ

    ರೇವಣ್ಣ ಹೇಳಿಕೆಯಲ್ಲಿ ಬೇರೆ ಅರ್ಥ ಬೇಡ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಅವರು ತಮಾಷೆಗೂ ಹೇಳಿರಬಹುದು. 4-5 ದಿನಗಳಲ್ಲಿ ಎರಡನೇ ಪಟ್ಟಿ ರಿಲೀಸ್ ಆಗುತ್ತದೆ. ಆಗ ಹಾಸನ ಟಿಕೆಟ್ ಕೂಡಾ ಘೋಷಣೆ ಆಗುತ್ತದೆ. ಹಾಸನ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ನಮಗೆ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಮೊಹಮ್ಮದ್ ನಲಪಾಡ್ ವಿರುದ್ಧ ದೂರು ದಾಖಲು

  • ಕಾಂಗ್ರೆಸ್, ಬಿಜೆಪಿಯವರೇ ಅಭ್ಯರ್ಥಿಗಳ ಪಟ್ಟಿ ರಿಲೀಸ್‌ ಮಾಡೋಕೆ ಒದ್ದಾಡ್ತಿದ್ದಾರೆ, ಇನ್ನೂ ನಮ್ದೆನ್ರೀ; ಹೆಚ್.ಡಿ.ರೇವಣ್ಣ

    ಕಾಂಗ್ರೆಸ್, ಬಿಜೆಪಿಯವರೇ ಅಭ್ಯರ್ಥಿಗಳ ಪಟ್ಟಿ ರಿಲೀಸ್‌ ಮಾಡೋಕೆ ಒದ್ದಾಡ್ತಿದ್ದಾರೆ, ಇನ್ನೂ ನಮ್ದೆನ್ರೀ; ಹೆಚ್.ಡಿ.ರೇವಣ್ಣ

    ಹಾಸನ: ಕಾಂಗ್ರೆಸ್ (Congress), ಬಿಜೆಪಿಯವರೇ (BJP) ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಆಗುತ್ತಿಲ್ಲ, ಇನ್ನೂ ನಮ್ದೆನ್ರೀ. ನಾವೆಲ್ಲ ಸಿದ್ಧ ಮಾಡಿ ಇಟ್ಟುಕೊಂಡಿದ್ದೇವೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ (HD Revanna) ಹೇಳಿದರು.

    ಹಾಸನ (Hassan) ಕ್ಷೇತ್ರಕ್ಕೆ ಜೆಡಿಎಸ್ (JDS) ಅಭ್ಯರ್ಥಿ ಆಯ್ಕೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳೇ ಒದ್ದಾಡುತ್ತಿವೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ನಮ್ಮದು ಯಾವ ನಿಖರವಾಗಿ ಯಾವುದೇ ದಿನಾಂಕವೂ ಇಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆ ನಡೆಸಿದ್ದರು. ಯಾರ‍್ಯಾರನ್ನು ಹೇಗೆ ಸಿದ್ಧ ಮಾಡಿ ರಾಷ್ಟ್ರೀಯ ಪಕ್ಷಗಳ ಮೇಲೆ ಯುದ್ಧಕ್ಕೆ ಬಿಡಬೇಕು ಬಿಡುತ್ತೇವೆ. ಈ ವಿಚಾರದಲ್ಲಿ ಯಾರೂ ತಲೆ ಕೆಡಿಸಿಕೊಳ್ಳಬೇಕಿಲ್ಲ. ರಾಷ್ಟ್ರೀಯ ಪಕ್ಷಗಳೇ ಏನು ಮಾಡುವುದು ಅಂತಾ ಯೋಚನೆ ಮಾಡ್ತಾ ಇದ್ದಾರೆ. ಅವರ ಪರಿಸ್ಥಿತಿನೇ ಹೀಗಿರುವಾಗ ನಮ್ಮ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ ಎಂದರು. ಇದನ್ನೂ ಓದಿ: ಗಾಂಧಿ ಕುಟುಂಬವನ್ನು ರಾಮನ ವಂಶಕ್ಕೆ ಹೋಲಿಸಿರುವುದು ಅಹಂಕಾರ : ಅನುರಾಗ್ ಠಾಕೂರ್

    ಮೀಸಲಾತಿ ಹಂಚಿಕೆ ವಿಚಾರಕ್ಕೆ ಕಿಡಿಕಾರಿದ ಅವರು, ಇಷ್ಟು ದಿನ ಯಾಕೆ ಇವರು ಮೀಸಲಾತಿ ಬಗ್ಗೆ ಮಾತಾಡಿರಲಿಲ್ಲ. ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದು ದೇವೇಗೌಡರು, ಅದು ಈಗ ಎಲ್ಲರಿಗೂ ಗೊತ್ತಾಗ್ತಾ ಇದೆ‌. ದೇವೇಗೌಡರು ಕೊಟ್ಟ ಮೀಸಲಾತಿ ಯಾಕೆ ತೆಗೆದರು?‌ ಚುನಾವಣೆ ವೇಳೆಯಲ್ಲಿ ಜಾತಿ ನಡುವೆ ಹೊಡೆದಾಡಲು ಮುಂದಾಗಿದ್ದಾರೆ. ಮುಸ್ಲಿಮರ ಮೀಸಲಾತಿ ಕಿತ್ತು ಒಕ್ಕಲಿಗರು ಮತ್ತು ಲಿಂಗಾಯಿತರಿಗೆ ನೀಡಿದ್ದಾರೆ.‌ ನೈತಿಕತೆ ಇದ್ದರೆ ಕೂಡಲೇ ಮುಸ್ಲಿಂ ಸಮುದಾಯದ ಧರಣಿ ಮಾಡಬೇಕು. ಜಿಲ್ಲೆಯ ಎಲ್ಲಾ ಕಡೆ ಧರಣಿ ಕೂರಬೇಕು. ಬಿಜೆಪಿ ವಿರುದ್ಧ ಹೋರಾಟ ಮಾಡಿ ಎಂದು ಕರೆ ನೀಡಿದರು. ಇದನ್ನೂ ಓದಿ: ಬಿಎಸ್‍ವೈ ಮನೆ ಮೇಲೆ ದಾಳಿ ರಾಜಕೀಯ ಪ್ರೇರಿತವೂ ಇರಬಹುದು: ಸಚಿವ ಜೋಶಿ

  • ರೇವಣ್ಣಗೆ ಭವಾನಿಯವರ ಚಿಂತೆ, ಕುಮಾರಣ್ಣನಿಗೆ ನಿಖಿಲ್ ಚಿಂತೆ, ಸಿದ್ದರಾಮಯ್ಯಗೆ ಕ್ಷೇತ್ರದ ಚಿಂತೆ – ಪ್ರತಾಪ್‌ಸಿಂಹ ವ್ಯಂಗ್ಯ

    ರೇವಣ್ಣಗೆ ಭವಾನಿಯವರ ಚಿಂತೆ, ಕುಮಾರಣ್ಣನಿಗೆ ನಿಖಿಲ್ ಚಿಂತೆ, ಸಿದ್ದರಾಮಯ್ಯಗೆ ಕ್ಷೇತ್ರದ ಚಿಂತೆ – ಪ್ರತಾಪ್‌ಸಿಂಹ ವ್ಯಂಗ್ಯ

    – ಎಲ್ಲ ಭಾಗ್ಯಗಳನ್ನ ಕೊಟ್ಟ ಸಿದ್ದರಾಮಯ್ಯಗೆ ಕ್ಷೇತ್ರಭಾಗ್ಯವೇ ಇಲ್ಲವೆಂದು ಲೇವಡಿ

    ಮಡಿಕೇರಿ: ರೇವಣ್ಣಗೆ ಭವಾನಿಯವರ (Bhavani Revanna) ಚಿಂತೆ, ಕುಮಾರಣ್ಣ (HD Kumaraswamy) ಅವ್ರಿಗೆ ನಿಖಿಲ್‌ನ ಚಿಂತೆಯಾದ್ರೆ ಸಿದ್ದರಾಮಯ್ಯ ಅವರಿಗೆ ಕ್ಷೇತ್ರದ ಚಿಂತೆಯಾಗಿದೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ವ್ಯಂಗ್ಯವಾಡಿದ್ದಾರೆ.

    ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣಗೆ ಭವಾನಿಯವರ ಚಿಂತೆ, ಕುಮಾರಣ್ಣ ಅವ್ರಿಗೆ ನಿಖಿಲ್‌ನ ಚಿಂತೆಯಾದ್ರೆ ಸಿದ್ದರಾಮಯ್ಯಗೆ (Siddaramaiah) ಕ್ಷೇತ್ರದ ಚಿಂತೆ. ಇವರಿಗೆಲ್ಲ ಅವರವರ ಕುಟುಂಬಗಳ ಚಿಂತೆ ಇದೆ ಆದ್ದರಿಂದ ಕರ್ನಾಟಕದ ಜನ ಇವರ ಮಾತಿಗೆ ಮರುಳಾಗಿ ಮಂಗಗಳಾಗಬೇಡಿ ಎಂದು ಲೇವಡಿ ಮಾಡಿದ್ದಾರೆ.

    ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯ ಕೊಟ್ಟೆ ಎನ್ನುವ ಸಿದ್ದರಾಮಯ್ಯನವರಿಗೆ ಕ್ಷೇತ್ರಭಾಗ್ಯವೇ ಇಲ್ಲ. ಇದನ್ನ ನೋಡಿದ್ರೆ ಬಹಳ ಆಶ್ಚರ್ಯವಾಗುತ್ತೆ, ಅಷ್ಟೇ ಸೋಜಿಗವೂ ಆಗುತ್ತೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಯುಗಾದಿಯಂದೇ ಕಳ್ಳತನ – ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

    ಕರ್ನಾಟಕದ ಜನ ಮಂಗಗಳಾಗಬೇಡಿ:
    ಸಿದ್ದರಾಮಯ್ಯ ಅವರಿಗೆ ಯುಗಾದಿ ದಿನ ಕಾಂಗ್ರೆಸ್ ಟಿಕೆಟ್ ಘೋಷಣೆ ಆಗಬೇಕಾಗಿತ್ತು. ಆದರೆ ಇವತ್ತಿನವರೆಗೆ ಟಿಕೆಟ್ ಘೋಷಣೆ ಆಗಿಲ್ಲ. ಒಂದು ಕ್ಷೇತ್ರ ಹುಡುಕಿಕೊಳ್ಳಲು ಸಿದ್ದರಾಮಯ್ಯ ಅವರಿಗೆ ಈ ಪರಿಸ್ಥಿತಿ ಬಂದಿದ್ರೆ ಅಂದ್ರೆ ಅವರ ಭಾಗ್ಯಗಳಿಗೆ ಜನ ಬೆಲೆ ಕೊಟ್ಟಿಲ್ಲ. ನಾನು ಈಗಲೂ ಹೇಳುತ್ತೇನೆ ಅವರು ಕಡೆಗೆ ಮೈಸೂರಿನ ವರುಣಾಕ್ಕೆ ಬರುತ್ತಾರೆ. ಹೀಗಾಗಿ ಕರ್ನಾಟಕದ ಜನ ಇವರ ಮಾತಿಗೆ ಮರುಳಾಗಿ ಮಂಗಗಳಾಗಬೇಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಲೆಗೆ ಪೆಟ್ಟುಬಿದ್ದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾವು – ಹಾಸನ ಡಿಸಿ

    ಈಗಾಗಲೇ ಕಾಂಗ್ರೆಸ್ ಅವರು ಕೊಡುವ 200 ಯೂನಿಟ್ ವಿದ್ಯುತ್ ಉಚಿತ, ಗೃಹಿಣಿಯರಿಗೆ 2,000 ರೂ. ಮಾಸಿಕ ಭತ್ಯೆ ಕೊಡುತ್ತೇನೆ ಅನ್ನೋದನ್ನೆಲ್ಲಾ ನಂಬಬೇಡಿ. ಪಂಜಾಬ್ ನಲ್ಲಿ ಎಎಪಿಯವರು ಇದನ್ನೇ ಹೇಳಿ ಟೋಪಿ ಹಾಕಿದ್ದಾರೆ. ಈಗ ಕಾಂಗ್ರೆಸ್ ಅವರು ರಾಜ್ಯದ ಜನರಿಗೆ ಟೋಪಿ ಹಾಕಲು ಹೋರಟಿದ್ದಾರೆ. ಯಾವುದೇ ಪಕ್ಷ ಸುಳ್ಳು ಹೇಳಿಕೊಂಡು ಮತ ಕೇಳಿದರೂ, ಜನರು ಅರಿತು ಮತ ನೀಡಿ ಬಿಜೆಪಿ ಅವರು ಸುಳ್ಳು ಹೇಳಿದ್ರೂ ಮತ ನೀಡಬೇಡಿ ನಾನು ಬಿಜೆಪಿ ಕಾರ್ಯಕರ್ತನಾಗಿ ಈ ಮಾತು ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ.

  • ನನ್ನ ಆಡು ಭಾಷೆ, ನನ್ನ ಸಂಸ್ಕೃತಿ, ನನ್ನ ಹೋರಾಟ ನನ್ನ ಕ್ಷೇತ್ರದ ಜನರಿಗೆ ಗೊತ್ತಿದೆ: ಶಿವಲಿಂಗೇಗೌಡ

    ನನ್ನ ಆಡು ಭಾಷೆ, ನನ್ನ ಸಂಸ್ಕೃತಿ, ನನ್ನ ಹೋರಾಟ ನನ್ನ ಕ್ಷೇತ್ರದ ಜನರಿಗೆ ಗೊತ್ತಿದೆ: ಶಿವಲಿಂಗೇಗೌಡ

    ಹಾಸನ: ನನ್ನ ಆಡು ಭಾಷೆ, ನನ್ನ ಸಂಸ್ಕೃತಿ, ನನ್ನ ಹೋರಾಟ ನನ್ನ ಕ್ಷೇತ್ರದ ಜನರಿಗೆ ಗೊತ್ತಿದೆ. ಅಂತಿಮವಾದಂತಹ ತೀರ್ಮಾನವನ್ನು ಜನತೆ, ಜನಾರ್ದನ ಕೊಡ್ತಾರೆ ಎಂದು ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡ (KM Shivalinge Gowda) ಹೇಳಿದ್ದಾರೆ.

    ಎಚ್.ಡಿ ರೇವಣ್ಣ (HD Revanna) ಹಾಗೂ ತಮ್ಮ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ವಿಚಾರ ಸಂಬಂಧ ತೀವ್ರ ಬೇಸರ ವ್ಯಕ್ತಪಡಿಸಿರುವ ಅವರು, ನನ್ನ ಮತ್ತು ರೇವಣ್ಣ ಅವರ ನಡುವಿನ ಸಂಭಾಷಣೆ ವೈರಲ್ ಆಗಿದೆ. ನಾನು ರೇವಣ್ಣ ಅವರು ಅರ್ಧಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದೇವೆ. ಆದರೆ ಅದನ್ನು ಎಡಿಟಿಂಗ್ ಮಾಡಿ ತಮಗೆ ಉಪಯುಕ್ತವಾಗುವ ರೀತಿಯಲ್ಲಿ ತುಂಡು ತುಂಡು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದಾರೆ. ನನ್ನ ಕ್ಷೇತ್ರದ ಜನರನ್ನ ದಿಕ್ಕುತಪ್ಪಿಸುವ ಕೆಲಸವನ್ನು ತಾವು ಮಾಡ್ತಾ ಇದ್ದೀರಿ. ಇದರಿಂದ ನೀವು ಯಶಸ್ಸು ಕಾಣುವುದಿಲ್ಲ. ಕ್ಷೇತ್ರದ ಜನತೆಗೆ ನಾನು ಯಾರು ಏನು ಅಂತಾ ಗೊತ್ತಿದೆ ಎಂದರು.

    ಮಾಜಿ ಸಚಿವರಾಗಿ, ಜಿಲ್ಲೆಯ ನಾಯಕರಾಗಿ ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರ ಬಿಡುವಂತಹ ಕೆಲಸವನ್ನು ನೀವು ಏನ್ ಮಾಡ್ತಿದ್ದೀರಿ ನಿಮಗೆ ಶೋಭೆ ತರುವಂತಹದ್ದಲ್ಲ. ನೀವು ಕೀಪ್ಯಾಡ್ ಫೋನ್ ಇಟ್ಟುಕೊಂಡಿದ್ದೀರಿ, ನಾನು ಕೀಪ್ಯಾಡ್ ಫೋನ್ ಇಟ್ಟುಕೊಂಡಿದ್ದೀನಿ. ನಿಮಗೆ ಸಾಮಾಜಿಕ ಜಾಲತಾಣದ ಬಗ್ಗೆ ಅಷ್ಟು ಅರಿವಿಲ್ಲ ಅಂತ ಭಾವಿಸಿದ್ದೇನೆ. ನನಗೂ ಅದರ ಬಗ್ಗೆ ಅರಿವಿಲ್ಲ. ಆದರೆ ಯಾರೋ ಮಧ್ಯದಲ್ಲಿ ರಾಜಕೀಯ ಕುತಂತ್ರವನ್ನು ಮಾಡುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚುನಾವಣೆ ಹೊತ್ತಲ್ಲೇ ಆಡಿಯೋ ಬಾಂಬ್- ರೇವಣ್ಣ, ಶಿವಲಿಂಗೇಗೌಡ ಮಾತುಕತೆ ಆಡಿಯೋ ವೈರಲ್

    ಅವರ ಮಾತಗಳನ್ನು ಕೇಳಿ ಇಂತಹ ಸಣ್ಣತನದ ರಾಜಕಾರಣ ನೀವು ಮಾಡಲಿಕ್ಕೆ ಪ್ರೇರಣೆಯನ್ನು ಕೊಡತಕ್ಕಂಹದ್ದು ನಿಮ್ಮ ರಾಜಕೀಯ ಜೀವನಕ್ಕೆ ಒಂದು ಕಳಂಕ ಆಗುತ್ತೆ. ರೇವಣ್ಣ ಅವರೇ ಇದಕ್ಕೆ ಅವಕಾಶವನ್ನು ಕೊಡಬೇಡಿ. ರಾಜಕೀಯದಲ್ಲಿ ಪಕ್ಷಾಂತರ ಅನ್ನುವುದು ಸರ್ವೆ ಸಾಮಾನ್ಯವಾದ ವಿಚಾರ. ನಿಮಗೂ ನಮಗೂ ಭಿನ್ನಾಭಿಪ್ರಾಯ ಬಂತು. ನಾವು ಇವತ್ತು ಬೇರೆ ಕಡೆ ಹೋಗ್ತಾ ಇದ್ದೀವಿ, ನೀವು ಬೇರೆ ಕಡೆ ಇದ್ದೀರಾ. ಯಾವುದೇ ರೀತಿಯಾದ ಭಿನ್ನಾಭಿಪ್ರಾಯ ನಮ್ಮಲ್ಲಿ ನಿಮ್ಮಲ್ಲಿ ಇಲ್ಲ. ಕೆಲವೊಂದು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಬಂದು ನಾವು ಬೇರೆ ಆಗಿದ್ದೇವೆ. ಅದಕ್ಕೆ ನೀವು ಈ ರೀತಿ ಸಣ್ಣತನಕ್ಕೆ ಇಳಿದು ಇಂತಹ ಪ್ರವೃತ್ತಿಯನ್ನು ರೂಢಿಮಾಡಿಕೊಳ್ಳಬಾರದು ಅದು ಒಳ್ಳೆಯದಲ್ಲ ಎಂದು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ ಎಂದರು.