Tag: hd devegowa

  • ಯುಗಾದಿ ಹಬ್ಬಕ್ಕೆ ಹೆಚ್‍ಡಿಡಿ, ಮೋದಿ ಸೇರಿದಂತೆ ಗಣ್ಯರಿಂದ ಶುಭಾಶಯ

    ಯುಗಾದಿ ಹಬ್ಬಕ್ಕೆ ಹೆಚ್‍ಡಿಡಿ, ಮೋದಿ ಸೇರಿದಂತೆ ಗಣ್ಯರಿಂದ ಶುಭಾಶಯ

    ಬೆಂಗಳೂರು: ದೇಶಾದ್ಯಂತ ಇಂದು ಯುಗಾದಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಈ ಯುಗಾದಿ (Ugadi 2024) ಹಬ್ಬಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (HD Devegowda) ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿದಂತೆ ಗಣ್ಯರು ಶುಭಾಶಯಗಳನ್ನು ತಿಳಿಸಿದ್ದಾರೆ.

    ಪ್ರಧಾನಿ ಮೋದಿಯವರು ಕನ್ನಡದಲ್ಲೇ ವಿಶ್ ಮಾಡಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಯುಗಾದಿಯು ಹೊಸತನ ಮತ್ತು ನವೀಕರಣದ ಭರವಸೆಯೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಶುಭಾಶಯಗಳು. ಎಲ್ಲರಿಗೂ ಅಪರಿಮಿತ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿದ ವರ್ಷವನ್ನು ಆಶೀಸುತ್ತೇನೆ. ಈ ಶುಭ ಸಂದರ್ಭವು ಜೀವನದ ಪ್ರತಿಯೊಂದು ವಿಷಯದಲ್ಲೂ ನಿಮಗೆ ಸಂತೋಷವನ್ನು ತರಲಿ ಎಂದು ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಪ್ರಕೃತಿಯ ರಮ್ಯಚೈತ್ರ ಕಾಲವೇ ‘ಯುಗಾದಿ’

    ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಕೂಡ ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಸಯಗಳನ್ನು ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮರಸ್ವಾಮಿಯವರು, ನಾಡಿನ ಸಮಸ್ತ ಜನತೆಗೆ ನಮ್ಮೆಲ್ಲರ ಹೊಸ ವರುಷದ ದಿನವಾದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಪ್ರಕೃತಿ ಮತ್ತು ಬದುಕಿನ ನಡುವಿನ ಸಂಭ್ರಮವಾಗಿ ಮೇಳೈಸಿರುವ ಈ ಹಬ್ಬವೂ ನಾಡಿನಲ್ಲಿ ಉಂಟಾಗಿರುವ ದುರಿತ ಕಾಲವನ್ನು ಅಳಿಸಲಿ, ಬರದಿಂದ ಕಂಗೆಟ್ಟಿರುವ ಜನರ ಬಾಳಿಗೆ ನೆಮ್ಮದಿ, ಸುಖ-ಶಾಂತಿಯನ್ನು ನೀಡಲಿ. ಆ ವರುಣದೇವನು ಕರುಣೆ ತೋರಿ ಬರದ ಬೇಗೆಯನ್ನು ತೊಲಗಿಸಲಿ ಎಂದು ಪ್ರಾರ್ಥಿಸುತ್ತೇನೆ. ಕ್ರೋಧಿನಾಮ ಸಂವತ್ಸರವು ಎಲ್ಲರಿಗೂ ಶುಭವನ್ನೇ ತರಲಿ ಎಂದು ಆಶಿಸುತ್ತೇನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಹುಬ್ಬಳ್ಳಿ ಕೇಶವ ಕುಂಜದಲ್ಲಿರುವ ಆರ್ ಎಸ್ ಎಸ್ ಕಚೇರಿಯಲ್ಲಿ ನಡೆದ ಯುಗಾದಿ ಸಂಭ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಭಾಗಿಯಾಗಿದ್ದಾರೆ. ಆರ್ ಎಸ್ ಎಸ್ ಸಮವಸ್ತ್ರದಲ್ಲಿ ಭಾಗಿಯಾಗಿರುವ ಜೋಶಿಯವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ನಾಡಿನ ಜನತೆಗೆ ಯುಗಾದಿ ಶುಭಾಶಯಗಳನ್ನು ತಿಳಿಸಿದ್ದಾರೆ. ಎಲ್ಲಾ ಕ್ಷೇತ್ರದಲ್ಲಿ ತನ್ನ ವೈಚಾರಿಕ ತಳಹದಿಯಲ್ಲಿ ಅಧಿಪತ್ಯವನ್ನು ಆರ್ ಎಸ್ ಎಸ್ ಮುಂದುವರಿಸುತ್ತಿದೆ. ಇದನ್ನು ಇನ್ನು ಶಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಪ್ರತಿ ವರ್ಷ ಯುಗಾದಿ ದಿನ ನಾನು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂದರು.

  • ದೇವೇಗೌಡ್ರ ಕುಟುಂಬದವರು ಬಂದ್ರೆ ನಾವು ಸಪೋರ್ಟ್ ಮಾಡ್ತೀವಿ- ಕೆಆರ್‌ಪೇಟೆ  ಜೆಡಿಎಸ್ ಬಂಡಾಯ ನಾಯಕರು

    ದೇವೇಗೌಡ್ರ ಕುಟುಂಬದವರು ಬಂದ್ರೆ ನಾವು ಸಪೋರ್ಟ್ ಮಾಡ್ತೀವಿ- ಕೆಆರ್‌ಪೇಟೆ  ಜೆಡಿಎಸ್ ಬಂಡಾಯ ನಾಯಕರು

    ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ಕ್ಷೇತ್ರ (KR Pete Constituency) ದ ಜೆಡಿಎಸ್ (JDS) ಬಂಡಾಯದ ಬಿಸಿ ಜೋರಾಗಿದೆ. ಇಷ್ಟು ದಿನ ಬಿ.ಎಲ್ ದೇವರಾಜುಗೆ ಟಿಕೆಟ್ ನೀಡಬೇಕು ಎಂದು ಸಿಡಿದೆದ್ದ ನಾಯಕರು, ಇದೀಗ ಮತ್ತೊಂದು ವರಸೆ ತೆಗೆದಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (HD Devegowda) ರ ಕುಟುಂಬದವರನ್ನೇ ಅಸ್ತ್ರವಾಗಿ ಬಳಸಿಕೊಂಡು ಅಭ್ಯರ್ಥಿ ಹೆಚ್.ಟಿ ಮಂಜುರನ್ನ ಇಕ್ಕಟ್ಟಿಗೆ ಸಿಲುಕಿಸುವ ಪ್ಲಾನ್ ಮಾಡಿದ್ದಾರೆ.

    ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಆಪ್ತ ಹೆಚ್.ಟಿ ಮಂಜುಗೆ ಟಿಕೆಟ್ ಘೋಷಣೆ ಬೆನ್ನಲ್ಲೆ ಮಾಜಿ ಸಚಿವ ರೇವಣ್ಣ (HD Revanna) ಆಪ್ತರಾದ ಬಿ.ಎಲ್ ದೇವರಾಜು, ಬಸ್ ಸಂತೋಷ್, ಬಸ್ ಕೃಷ್ಣೇಗೌಡ ಬಂಡಾಯ ಸಾರಿದ್ದಾರೆ. ಮೂಲ, ವಲಸಿಗ ಚರ್ಚೆ ಹುಟ್ಟು ಹಾಕಿದ್ದಾರೆ. ಅಲ್ಲದೇ ಒಂದು ದಿನದ ಹಿಂದೆಯಷ್ಟೇ ಬೆಂಬಲಿಗರ ಸಭೆ ಕರೆದ ಬಂಡಾಯ ನಾಯಕರು ಅಭ್ಯರ್ಥಿಯನ್ನ ಮತ್ತೊಮ್ಮೆ ಮರುಪರಿಶೀಲಿಸುವಂತೆ ಆಗ್ರಹಿಸಿದ್ದಾರೆ. ಆದರೆ ವರಿಷ್ಠರು ಅಭ್ಯರ್ಥಿ ಬದಲಾವಣೆ ಮಾಡೋದು ಡೌಟ್ ಎನ್ನಲಾಗ್ತಿದ್ದು, ಇದರಿಂದ ಕಂಗೆಟ್ಟಿರುವ ಬಂಡಾಯ ಮುಖಂಡರು ಹೆಚ್.ಡಿ.ಡಿ ಕುಟುಂಬವನ್ನೇ ಅಸ್ತ್ರವಾಗಿ ಬಳಸಿಕೊಂಡು ಘೋಷಣೆಯಾದ ಅಭ್ಯರ್ಥಿಗೆ ಬಿ ಫಾರಂ ತಪ್ಪಿಸಲು ಪ್ಲಾನ್ ಮಾಡಿದ್ದಾರೆ. ಇದನ್ನೂ ಓದಿ: ಕೆ.ಆರ್‌. ಪೇಟೆಯಲ್ಲಿ ಜೆಡಿಎಸ್‍ ಬಂಡಾಯದ ಬಾವುಟ – ಹೆಚ್‍ಡಿಕೆ ನಡೆಗೆ ವಿರೋಧ

    ಹೆಚ್.ಟಿ ಮಂಜು ಕೆಲ ವರ್ಷಗಳ ಹಿಂದೆಯಷ್ಟೆ ಪಕ್ಷಕ್ಕೆ ಬಂದಿರೋದು. ಪಕ್ಷಕ್ಕಾಗಿ ದುಡಿದ ಹಲವು ನಾಯಕರಿದ್ದು, ಇವರಿಗೆ ಟಿಕೆಟ್ ಘೋಷಣೆ ಮಾಡಿರೋದು ಸರಿಯಲ್ಲ. ಪಕ್ಷಕ್ಕಾಗಿ 45 ವರ್ಷಗಳ ಕಾಲ ದುಡಿದ ಬಿ.ಎಲ್ ದೇವರಾಜು ಗೆ ಟಿಕೆಟ್ ನೋಡಿ, ಇಲ್ಲ ಹೆಚ್.ಡಿ ದೇವೇಗೌಡರ ಕುಟುಂಬದವರಿಗೆ ಟಿಕೆಟ್ ನೀಡಿ. ನಿಖಿಲ್, ರೇವಣ್ಣ, ಕುಮಾರಸ್ವಾಮಿ ಸೇರಿದಂತೆ ಹೆಚ್.ಡಿ ದೇವೇಗೌಡರ ಕುಟುಂಬದ ಯಾರೇ ಬರಲಿ ಒಗ್ಗಟ್ಟಿನಿಂದ ಗೆಲ್ಲಿಸುತ್ತೇವೆ. ಮಂಜುಗೆ ಟಿಕೆಟ್ ಎಂದ್ರೆ ನಾವು ಬಂಡಾಯವಾಗಿ ಸ್ಪರ್ಧಿಸಲು ಸಿದ್ಧ ಎಂದು ಬಂಡಾಯ ಮುಖಂಡ ಬಸ್ ಸಂತೋಷ್ ಹೇಳಿದ್ದಾರೆ. ಈ ಅಸಮಾಧಾನಿತ ನಾಯಕರ ಈ ವರಸೆಯನ್ನ ಹೆಚ್.ಡಿ ದೇವೇಗೌಡರ ಕುಟುಂಬ ಹೇಗೆ ಪರಿಗಣಿಸುತ್ತೆ ಎಂಬುದನ್ನ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k