Tag: HD Deveanna

  • ನಮ್ ಸರ್ಕಾರನಾ ಏಕೆ ಟೀಕಿಸ್ತೀರಾ – ಈಶ್ವರಪ್ಪ ಜೊತೆ ರೇವಣ್ಣ ಶಿಷ್ಯರ ತಗಾದೆ

    ನಮ್ ಸರ್ಕಾರನಾ ಏಕೆ ಟೀಕಿಸ್ತೀರಾ – ಈಶ್ವರಪ್ಪ ಜೊತೆ ರೇವಣ್ಣ ಶಿಷ್ಯರ ತಗಾದೆ

    – ಏನು ಕುಡಿದಿದ್ದೀಯಾ ಸುಮ್ನಿರು ಎಂದ ಈಶ್ವರಪ್ಪ

    ಬೆಂಗಳೂರು: ವಿಧಾನಸೌಧದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಕೊಠಡಿ ಮುಂದೆ ಮೆಗಾ ಡ್ರಾಮಾ ನಡೆದಿದೆ. ಸಚಿವ ರೇವಣ್ಣರನ್ನ ಭೇಟಿ ಮಾಡಲು ಅವರ ಕೊಠಡಿ ಬಳಿ ಮಾಜಿ ಡಿಸಿಎಂ ಈಶ್ವರಪ್ಪ ಹೋಗಿದ್ದರು. ಆದರೆ ಅಲ್ಲಿ ಸಚಿವರು ಇರಲಿಲ್ಲ. ವಾಪಸ್ ಆಗುತ್ತಿದ್ದ ವೇಳೆ ಸಚಿವ ರೇವಣ್ಣರ ಶಿಷ್ಯರು ನಮ್ಮ ಸರ್ಕಾರವನ್ನು ಏಕೆ ಟೀಕಿಸುತ್ತೀರಿ ಎಂದು ಈಶ್ವರಪ್ಪ ಜೊತೆ ತಗಾದೆ ತೆಗೆದರು.

    ಈಶ್ವರಪ್ಪನವರು ಮಾಧ್ಯಮದವರ ಜತೆ ಮಾತನಾಡುವಾಗ ರೇವಣ್ಣ ಶಿಷ್ಯರು ತಗಾದೆ ತೆಗೆಯಲು ಆರಂಭಿಸಿದರು. ಜೆಡಿಎಸ್ ಸರ್ಕಾರವನ್ನ ಏಕೆ ಟೀಕೆ ಮಾಡ್ತಿರಾ ಅಂತಾ ಪ್ರಶ್ನೆ ಮಾಡಿದ್ರು. ಬಿಜೆಪಿ ಸರ್ಕಾರವಿದ್ದಾಗ ಮೂವರು ಮುಖ್ಯಮಂತ್ರಿಗಳನ್ನು ರಾಜ್ಯ ನೋಡಿದ್ದೇವೆ. ಅಂದು ನೀವು ಏನು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೀರಿ ಹೇಳಿ ಎಂದು ಕೇಳಿದರು. ಇದರಿಂದ ಸಿಟ್ಟಿಗೆದ್ದ ಈಶ್ವರಪ್ಪ, ಏನು ಕುಡಿದ್ದೀಯಾ…ಮುಚ್ಕೊಂಡು ಇರು ಅಂತಾ ಹೇಳಿ ಬಿಸಿ ಮುಟ್ಟಿಸಿದರು.

    ಸಚಿವ ರೇವಣ್ಣರಿಗೆ ರಾಜ್ಯ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆಯನ್ನು ನೀಡಿದೆ. ತಮ್ಮ ಇಲಾಖೆಯ ಕೆಲಸಗಳನ್ನು ನೋಡುವುದು ಬಿಟ್ಟು ಎಲ್ಲದರಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಒಬ್ಬ ಶಾಸಕನಾಗಿ ಸಚಿವರ ಈ ಹಸ್ತಕ್ಷೇಪ ತಪ್ಪು ಎಂದು ಹೇಳುತ್ತಿದ್ದೇನೆ. ಈಶ್ವರಪ್ಪರ ಅಥವಾ ಯಡಿಯೂರಪ್ಪರ ಬಗೆ ಮಾತನಾಡುವ ಹಕ್ಕು ರೇವಣ್ಣರಿಗಿಲ್ಲ ಎಂದು ಗುಡುಗಿದರು.

    ನಿನ್ನೆಯವರೆಗೂ ಉದ್ಯೋಗ ಇಲ್ಲದೇ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಕುಳಿತಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯರನವರು ಕಾಂಗ್ರೆಸ್ ನಿಂದ ಹೊರ ಹಾಕಿದಾಗ ಉದ್ಯೋಗವಿಲ್ಲದೇ ಕುಳಿತುಕೊಂಡಿದ್ದರು. ಇಂದು ರಾಜ್ಯಾಧ್ಯಕ್ಷರಾದ ಕೂಡಲೇ ಬಿಜೆಪಿ ಬಗ್ಗೆ ಮಾತನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಬಗ್ಗೆ ವಿಶ್ವನಾಥ್ ಹಗುರವಾಗಿ ಮಾತನಾಡಬಾರು ಎಂದು ಈಶ್ವರಪ್ಪ ಎಚ್ಚರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

    https://www.youtube.com/watch?v=-jOV2CgFzN4

  • ಸೀಟ್ ವಾಸ್ತುಪ್ರಕಾರ ಸರಿಯಾಗಿದೆ, ಮುಂದೆ ಬನ್ನಿ: ನಗೆಗಡಲಲ್ಲಿ ತೇಲಿಸಿದ ಸ್ಪೀಕರ್

    ಸೀಟ್ ವಾಸ್ತುಪ್ರಕಾರ ಸರಿಯಾಗಿದೆ, ಮುಂದೆ ಬನ್ನಿ: ನಗೆಗಡಲಲ್ಲಿ ತೇಲಿಸಿದ ಸ್ಪೀಕರ್

    ಬೆಂಗಳೂರು: ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಇಂದು ಸದನದಲ್ಲಿ ಹಿಂದಿನ ಸಾಲಿನಲ್ಲಿ ಕುಳಿತುಕೊಂಡಿದ್ದರು. ಆಗ ಅದನ್ನು ಗಮನಿಸಿದ ವಿಧಾನಸಭಾ ಸಭಾಪತಿ ರಮೇಶ್ ಕುಮಾರ್ ರೇವಣ್ಣರನ್ನು ಕರೆದು ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದರು.

    ತಕ್ಷಣ ಸಭಾಪತಿಗಳ ಮಾತಿಗೆ ಪ್ರತಿಕ್ರಿಯೆ ನೀಡಿದ ರೇವಣ್ಣ, ಮುಂದಿನ ಸೀಟುಗಳನ್ನು ಹಿರಿಯರಿಗೆ ಬಿಟ್ಟಿದ್ದೇನೆ. ಹೀಗಾಗಿ ಇಲ್ಲಿ ಕುಳಿತ್ತಿದ್ದೇನೆ ಎಂದು ಉತ್ತರಿಸಿದರು. ಅದಕ್ಕೆ ಸ್ಪೀಕರ್, ನೀವು ಮುಂದಿನ ಸಾಲಿನಲ್ಲಿ ಕುಳಿತರೇ ಲಕ್ಷಣ. ಬನ್ನಿ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಿ. ನೀವು ಮುಂದಿನ ಸಾಲಿನಲ್ಲಿ ಕುಳಿತುಕೊಂಡಿದ್ದರೆ ಅದನ್ನು ನೋಡಲು ಲಕ್ಷಣವಾಗಿರುತ್ತೆ. ಅಲ್ಲದೇ ಮುಂದಿನ ಸೀಟ್ ವಾಸ್ತುಪ್ರಕಾರವೂ ಚೆನ್ನಾಗಿದೆ ಎಂದು ಹೇಳಿ ಸದನದಲ್ಲಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು. ಇದನ್ನು ಓದಿ:  ವಾಸ್ತು ಪ್ರಕಾರ ಪೂಜೆ ಮಾಡ್ತಿಲ್ಲ ಅಂತಾ ಸಚಿವ ರೇವಣ್ಣರಿಂದ ಅರ್ಚಕರಿಗೆ ಕ್ಲಾಸ್

    ಅಲ್ಲದೇ ಈ ಸಂದರ್ಭದಲ್ಲಿ ಎಲ್ಲಿ ಇನ್ನೂ ಇಬ್ಬರು ಸಚಿವರು ಕಾಣ್ತಿಲ್ಲ, ಜಮೀರ್ ಅಹ್ಮದ್ ಮತ್ತು ಯು ಟಿ ಖಾದರ್ ಇನ್ನು ಬಂದಿಲ್ಲ ಅಂತಾ ಸಭಾಪತಿ ರಮೇಶ್ ಕುಮಾರ್ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಗೆ ಪ್ರಶ್ನಿಸಿದರು.

  • ಇಷ್ಟೇ ದಿನ ಸರ್ಕಾರ ಇರುತ್ತೆ ಅಂಥಾ ಹೇಳಲ್ಲ – ದೋಸ್ತಿ ಸರ್ಕಾರದ ಆಯಸ್ಸಿನ ಬಗ್ಗೆ ರೇವಣ್ಣಗೆ ಡೌಟ್

    ಇಷ್ಟೇ ದಿನ ಸರ್ಕಾರ ಇರುತ್ತೆ ಅಂಥಾ ಹೇಳಲ್ಲ – ದೋಸ್ತಿ ಸರ್ಕಾರದ ಆಯಸ್ಸಿನ ಬಗ್ಗೆ ರೇವಣ್ಣಗೆ ಡೌಟ್

    ಹಾಸನ: ಸಮ್ಮಿಶ್ರ ಸರ್ಕಾರ ಇಷ್ಟೇ ದಿನ ಇರುತ್ತೆ ಎಂದು ಹೇಳಲು ಸಾಧ್ಯವಿಲ್ಲ ಎಂದು ರಾಜ್ಯ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಅನುಮಾನ ವ್ಯಕ್ತಪಡಿಸಿದ್ದಾರೆ.

    ಸಚಿವ ಸ್ಥಾನ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಹಾಸನ ಜಿಲ್ಲೆಗೆ ಆಗಮಿಸಿದ್ದ ರೇವಣ್ಣ ಅವರು ಬೇಲೂರಿನ ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಇಷ್ಟೇ ದಿನ ಸರ್ಕಾರ ಇರುತ್ತೆ ಎಂದು ನಾನು ಹೇಳುವುದಿಲ್ಲ. ಇದ್ದಷ್ಟು ದಿನ ಅಭಿವೃದ್ಧಿ ಕೆಲಸ ಮಾಡುವೆ. ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂದು ಹೇಳುವ ಮೂಲಕ ಪೂರ್ಣವಧಿ ಸರ್ಕಾರದ ಕುರಿತು ಪರೋಕ್ಷವಾಗಿ ಸಂದೇಹದ ಮಾತುಗಳನ್ನಾಡಿದರು.

    ಹಾಸನ ಜಿಲ್ಲೆಯ ಜನರು 7 ಸ್ಥಾನಗಳಲ್ಲಿ 6 ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಪಕ್ಷಕ್ಕೆ ಮತ ನೀಡಿ ಬೆಂಬಲ ನೀಡಿದ ಮತದಾರರಿಗೆ ಧನ್ಯವಾದ. ಕಳೆದ 10 ವರ್ಷಗಳಿಂದ ಜಿಲ್ಲೆಯಲ್ಲಿ ಉಂಟಾದ ಸಂಕಷ್ಟ ಪರಿಸ್ಥಿತಿಯನ್ನು ಬದಲಾವಣೆ ತಂದು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತೇನೆ. ಇದೇ ವೇಳೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ತಾಕತ್ತಿದ್ದರೆ ರೈತರ ಸಾಲಮನ್ನಾ ಮಾಡಲಿ. ನಾಲ್ಕು ವರ್ಷದ ಅವಧಿಯಲ್ಲಿ ರೈತರಿಗೆ ಯಾವ ಸವಲತ್ತು ನೀಡಿದೆ ಎಂಬುದನ್ನು ರಾಜ್ಯ ಬಿಜೆಪಿ ನಾಯಕರು ತಿಳಿಸಲಿ ಎಂದು ಸವಾಲು ಎಸೆದರು.

    ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಪಕ್ಷದಲ್ಲೂ ಖಾತೆ ಹಂಚಿಕೆ ಕುರಿತು ಅಸಮಾಧಾನ ವ್ಯಕ್ತವಾಗಿದೆ. ಜೆಡಿಎಸ್ ಸಚಿವರಾದ ಸಿಎಸ್ ಪುಟ್ಟರಾಜು ಅವರಿಗೆ ಸಣ್ಣ ನೀರಾವರಿ ಹಾಗೂ ಡಿಸಿ ತಮ್ಮಣ್ಣ ಅವರಿಗೆ ಸಾರಿಗೆ ಖಾತೆ ನೀಡಿದ್ದರಿಂದ ಹಲವು ಕಾರ್ಯಕರ್ತರು ನಾಯಕರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಉಳಿದಂತೆ ಉನ್ನತ ಶಿಕ್ಷಣ ಖಾತೆ ಪಡೆದಿರುವ ಜಿ.ಟಿ. ದೇವೇಗೌಡ ಅವರ ಖಾತೆಯ ಬಗ್ಗೆ ಪುನರ್ ವಿಮರ್ಶೆ ಮಾಡಬೇಕು ಎಂದು ಜೆಡಿಎಸ್ ಶಾಸಕ ವಿಶ್ವನಾಥ್ ಸಿಎಂ ಬಳಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಕ್ಷೇತ್ರದ ಕಾರ್ಯಕರ್ತರು ಸಹ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸುವುದಾಗಿ ಜಿಟಿಡಿ ಸ್ಪಷ್ಟನೆ ನೀಡಿದ್ದಾರೆ.

    ಇತ್ತ ಕಾಂಗ್ರೆಸ್ ಬಂಡಾಯ ಶಮನ ಮಾಡಲು ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಹಲವು ನಾಯಕರು ಪ್ರಯತ್ನಿಸುತ್ತಿದ್ದರು, ಎಂಬಿ ಪಾಟೀಲ್ ಸೇರಿದಂತೆ ಹಲವು ನಾಯಕರು ಸಚಿವ ಸ್ಥಾನ ದೊರೆಯದ ಕುರಿತ ತಮ್ಮ ಅಸಮಾಧಾನವನ್ನು ಪ್ರದರ್ಶಿಸುತ್ತಿದ್ದಾರೆ. ಇದರ ನಡುವೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ತಮ್ಮ ಪಕ್ಷಕ್ಕೆ ಸೇರ್ಪಡೆಯಾಗಲು ಕಾಂಗ್ರೆಸ್ ಜೆಡಿಎಸ್ ಬಂಡಾಯ ಶಾಸಕರು ಸಿದ್ಧರಿದ್ದಾರೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಇದರ ಬೆನ್ನಲ್ಲೇ ಇಂದು ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಕಾಂಗ್ರೆಸ್‍ನ ನಾಯಕ ಎಂಬಿ ಪಾಟೀಲ್ ರನ್ನು ಭೇಟಿ ಮಾಡಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.