Tag: hc mahadevappa

  • ಸಂಪುಟ ಸಭೆಯಲ್ಲಿ ಮಹದೇವಪ್ಪ ಕೂಗಾಟ, ಬಾಕಿ ಕೇಳಿದ್ದಕ್ಕೆ ಜಾರ್ಜ್ ಮೇಲೆ ಸಿಟ್ಟು – ಸಿಎಂ ಹೇಳಿದ್ದೇನು?

    ಸಂಪುಟ ಸಭೆಯಲ್ಲಿ ಮಹದೇವಪ್ಪ ಕೂಗಾಟ, ಬಾಕಿ ಕೇಳಿದ್ದಕ್ಕೆ ಜಾರ್ಜ್ ಮೇಲೆ ಸಿಟ್ಟು – ಸಿಎಂ ಹೇಳಿದ್ದೇನು?

    ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಇವತ್ತು ಸಿಎಂ ಆಪ್ತ ಸಚಿವ ಹೆಚ್.ಸಿ ಮಹದೇವಪ್ಪ (HC Mahadevappa) ರೋಷಾವೇಶ ಜೋರಾಗಿತ್ತು ಎನ್ನಲಾಗಿದೆ. ಇಬ್ಬರು ಸಿಎಂ ಆಪ್ತ ಸಚಿವರ ನಡುವೆ ಕಾವೇರಿದ ಚಕಮಕಿ ಆಗಿದ್ದು, ಸಿಎಂ (Siddaramaiah) ಇಬ್ಬರನ್ನ ಸಮಾಧಾನಪಡಿಸಿದ್ರು ಎಂದು ಮೂಲಗಳಿಂದ ಗೊತ್ತಾಗಿದೆ.p

    ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದ ವಿಷಯದಲ್ಲಿ ಜಟಾಪಟಿ ನಡೆದಿದ್ದು, ನಾನು ಎದ್ದು ಹೊರಟೇ ಬಿಡುತ್ತೇನೆ ಎಂದು ಹೆಚ್.ಸಿ ಮಹದೇವಪ್ಪ ಕೂಗಾಡಿದ್ದಾರೆ. ಎಸ್‌ಸಿಪಿ, ಟಿಎಸ್‌ಪಿ ಹಣ ಸರಿಯಾಗಿ ಬಳಕೆ ಆಗುತ್ತಿಲ್ಲ, ಹಂಚಿಕೆ ಆದ ಹಣವನ್ನ ಬೇರೆ ಕಡೆ ಬಳಕೆ ಮಾಡುತ್ತಿದ್ದೀರಿ. ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ. ಈಗ ಹಣ ಕೊಡಿ ಅಂದ್ರೆ ಅಂತಾ ಜೋರು ದ್ಚನಿಯಲ್ಲಿ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: 1,545 ಕೋಟಿ ನೆರೆ ಪರಿಹಾರ ಕೇಳಲು ಕೇಂದ್ರಕ್ಕೆ ಮನವಿ: ಕ್ಯಾಬಿನೆಟ್ ಸಭೆ ನಿರ್ಧಾರ

    ಸ್ವತಃ ಸಿಎಂ ಅವರ ಬಳಿಯೂ ಕೂಗಾಡಿದ್ದಾರೆ ಎನ್ನಲಾಗಿದೆ. ಏಕಾಏಕಿ ಮಹದೇವಪ್ಪ ಆಕ್ರೋಶ ಕಂಡು ಸಂಪುಟ ಸಹೋದ್ಯೋಗಿಗಳು ಕಕ್ಕಾಬಿಕ್ಕಿ ಆಗಿದ್ದರು. ಆದಾದ ಬಳಿಕ ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿ ನಾವು ಮೂವರು ಕುಳಿತು ಮಾತಾಡೋಣ. ವಿದ್ಯುತ್ ಶುಲ್ಕ ಹೆಚ್ಚಳದ ಬಗ್ಗೆ ತೀರ್ಮಾನ ಮಾಡೋಣ ಎಂದು ಹೇಳಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಉಡುಪಿ ಸೇರಿ ಹಲವೆಡೆ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸರ್ಕಾರಿ ಜಾಗ ಮಂಜೂರು: ಕ್ಯಾಬಿನೆಟ್ ಅಸ್ತು

  • ಸಿಎಂ ಜೊತೆ ತೆರೆದ ಜೀಪ್‌ನಲ್ಲಿ ಮೊಮ್ಮೊಗ ಪ್ರಯಾಣ; ಪ್ರೋಟೋಕಾಲ್ ವ್ಯಾಪ್ತಿಗೆ ಬರಲ್ಲ ಎಂದ ಹೆಚ್‌ಸಿಎಂ

    ಸಿಎಂ ಜೊತೆ ತೆರೆದ ಜೀಪ್‌ನಲ್ಲಿ ಮೊಮ್ಮೊಗ ಪ್ರಯಾಣ; ಪ್ರೋಟೋಕಾಲ್ ವ್ಯಾಪ್ತಿಗೆ ಬರಲ್ಲ ಎಂದ ಹೆಚ್‌ಸಿಎಂ

    ಮೈಸೂರು: ದಸರಾ ಜಂಬೂಸವಾರಿ (Dasara Jamboo Savari) ದಿನ ತೆರೆದ ಜೀಪಿನಲ್ಲಿ ಸಿಎಂ, ಡಿಸಿಎಂ ಜೊತೆ ತಮ್ಮ ಮೊಮ್ಮಗನನ್ನೂ ಕರೆದು ಕೊಂಡು ಹೋದ ನಡೆಗೆ ಆಕ್ಷೇಪ ವ್ಯಕ್ತವಾದ ಕುರಿತು ಸಚಿವ ಮಹದೇವಪ್ಪ (HC Mahadevappa) ಸ್ಪಷ್ಟನೆ ನೀಡಿದ್ದಾರೆ.

    ಮೈಸೂರಲ್ಲಿ (Mysuru) ಮಾತನಾಡಿದ ಅವರು, ಅಲ್ಲಿ ಯಾವ ಪ್ರೋಟೋಕಾಲ್ ಕೂಡ ಉಲ್ಲಂಘನೆಯಾಗಿಲ್ಲ. ಅದು ಪ್ರೋಟೋಕಾಲ್‌ ವ್ಯಾಪ್ತಿಗೆ ಬರುವುದೇ ಇಲ್ಲ. ಏಕೆಂದ್ರೆ ಅದು ಪೇರೆಡ್ ಅಲ್ಲ, ಅಲ್ಲಿ ಯಾವ ಧ್ವಜ ವಂದನೆಯೂ ಇರಲಿಲ್ಲ. ಕೇವಲ ಜನರಿಗೆ ವಂದನೆ ಸಲ್ಲಿಸಲು ಎಲ್ಲರೂ ಒಟ್ಟಾಗಿ ಹೋದೆವು. ದಸರಾ ಅಚರಣೆ ಬಗ್ಗೆ ಗೊತ್ತಿಲ್ಲದವರು ಈ ರೀತಿಯ ಸುದ್ದಿ ಹಬ್ಬಿಸುತ್ತಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಡಿಸೆಂಬರ್‌ನಲ್ಲಿ ಹೊಸ ಮನೆ ಗೃಹ ಪ್ರವೇಶ – ಯಾರಿಗೂ ಆಹ್ವಾನ ನೀಡಲ್ಲ ಎಂದ ಸಿದ್ದರಾಮಯ್ಯ!

    ಅರಮನೆ ಹೊರ ಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ನಂದಿ ಧ್ವಜ ಪೂಜೆ ಮುಗಿಸಿ, ಅರಮನೆಯ ಆವರಣಕ್ಕೆ ಗಣ್ಯರು ತೆರೆದ ಜೀಪಿನಲ್ಲಿ ಸಿಎಂ, ಡಿಸಿಎಂ ಆಗಮಿಸಿದ್ದರು. ಸಿಎಂ ಹಾಗೂ ಡಿಸಿಎಂ ಅಲ್ಲಿ ನೆರೆದಿದ್ದ ಜನರಿಗೆ ಶುಭಾಶಯ ತಿಳಿಸುವ ಸಲುವಾಗಿ ತೆರೆದ ಜೀಪಿನಿಂದ ಕೈ ಬೀಸಿದ್ದರು. ಈ ಜೀಪಿನಲ್ಲಿ ಮಹದೇವಪ್ಪ ಅವರ ಜೊತೆ ಅವರ ಮೊಮ್ಮಗನೂ ಪ್ರಯಾಣಿಸಿದ್ದ. ಇದನ್ನೂ ಓದಿ: ಮೈಸೂರು ದಸರಾ | ಸಿಎಂ ಜೊತೆ ತೆರೆದ ಜೀಪಿನಲ್ಲಿ ಮಹದೇವಪ್ಪ ಮೊಮ್ಮೊಗನ ಪ್ರಯಾಣ

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಈಗ ಹರಿದಾಡುತ್ತಿದ್ದು, ಜನರು 6 ಸಾವಿರ ರೂ. ನೀಡಿ ಗೋಲ್ಡನ್‌ ಪಾಸ್‌ ಪಡೆದರೂ ಒಳಗಡೆ ಬಿಡಲಿಲ್ಲ. ಆದರೆ ಮಂತ್ರಿಗಳ ಮೊಮ್ಮಕ್ಕಳು ಜೀಪಿನಲ್ಲಿ ತೆರಳುತ್ತಾರೆ. ಇದು ನಾಡಹಬ್ಬ ಅಲ್ಲ, ಇದು ರಾಜಕೀಯ ಹಬ್ಬ ಎಂದು ಸಿಟ್ಟು ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ಮುಂದಿನ ವರ್ಷ ಅಂಬಾರಿ ಹೊತ್ತರೆ ʻಅಭಿಮನ್ಯು ಯುಗʼ ಮುಗಿಯಿತು – ಮುಂದಿನ ಸಾರಥಿ ಯಾರು?

  • ಪ್ರತಾಪ್ ಸಿಂಹ ಭಾರತೀಯ ನಾಗರಿಕನಂತೆ ನಡೆದುಕೊಳ್ಳಲಿ: ಮಹದೇವಪ್ಪ

    ಪ್ರತಾಪ್ ಸಿಂಹ ಭಾರತೀಯ ನಾಗರಿಕನಂತೆ ನಡೆದುಕೊಳ್ಳಲಿ: ಮಹದೇವಪ್ಪ

    ಬೆಂಗಳೂರು: ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಮತೀಯ ಅಂಧ ಭಾವನೆಗಳಿಂದ ಹೊರಗೆ ಬಂದು ಭಾರತೀಯ ನಾಗರಿಕರಾಗಿ ನಡೆದುಕೊಳ್ಳಲಿ ಎಂದು ಸಚಿವ ಮಹದೇವಪ್ಪ (Mahadevappa) ಕಿಡಿಕಾರಿದ್ದಾರೆ.

    ದಸರಾ (Dasara) ಉದ್ಘಾಟನೆ ಬಾನು ಮುಷ್ತಾಕ್ (Banu Mushtaq) ಮಾಡಬಾರದು ಎಂದು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಚುನಾಯಿತ ಸರ್ಕಾರ ಇದೆ. ಚುನಾಯಿತ ಸರ್ಕಾರದಲ್ಲಿ ಸಂವಿಧಾನಾತ್ಮಕವಾಗಿ ನಮ್ಮ ನಡೆ ನಿರ್ಧಾರ ಆಗಬೇಕು. ದಸರಾ ಉದ್ಘಾಟನೆ ವಿಚಾರದಲ್ಲಿ ನಾವು ಅದಕ್ಕೆ ಪೂರಕವಾದ ನಿರ್ಧಾರ ಮಾಡಿದ್ವಿ. ಅನವಶ್ಯಕವಾಗಿ ಅಂಕಣಕಾರರ ಆಗಿದ್ದವರು, ಎಂಪಿ ಆದವರು, ಸಂವಿಧಾನ ಹಾಗೂ ಅದರ ಹಕ್ಕುಗಳನ್ನ ತಿಳಿದುಕೊಂಡ ಪ್ರತಾಪ್ ಸಿಂಹ ಅವರು ಹೀಗೆ ಮಾತಾಡಿದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪ್ರತಾಪ್ ಸಿಂಹ, ಬಿಜೆಪಿ ನಾಯಕರು ಮೊದಲು ಸಂವಿಧಾನ ಓದಿಕೊಳ್ಳಲಿ: ಡಿಕೆಶಿ

    ನ್ಯಾಯಾಲಯ ಸಂವಿಧಾನದ ಕಸ್ಟೋಡಿಯನ್. ಸಂವಿಧಾನದ ಪ್ರಕಾರ ಏನು ಮಾಡಬೇಕು ಅಂತ ಕೋರ್ಟ್ ಹೇಳಿದೆ. ಇನ್ನಾದ್ರು ಅವರು ಬುದ್ಧಿ ಕಲಿಯಲಿ. ಅವರಲ್ಲಿ ತುಂಬಿರೋ ಮತೀಯ ಅಂಧ ಭಾವನೆಗಳು ಹೊರಗೆ ಬಂದು ಭಾರತೀಯ ನಾಗರಿಕರಾಗಿ ನಡೆದುಕೊಳ್ಳಲಿ ಎಂದಿದ್ದಾರೆ.

  • ಸಚಿವ ಹೆಚ್‌.ಸಿ ಮಹದೇವಪ್ಪ ಹೆಸರಿನಲ್ಲಿ ಬರೋಬ್ಬರಿ 27 ಲಕ್ಷ ರೂ. ವಂಚಿಸಿದ ಮಹಿಳೆ

    ಸಚಿವ ಹೆಚ್‌.ಸಿ ಮಹದೇವಪ್ಪ ಹೆಸರಿನಲ್ಲಿ ಬರೋಬ್ಬರಿ 27 ಲಕ್ಷ ರೂ. ವಂಚಿಸಿದ ಮಹಿಳೆ

    – ಸರ್ಕಾರಿ ಯೋಜನೆಗಳ ಸವಲತ್ತು ಕೊಡಿಸೋದಾಗಿ ನಂಬಿಸಿ ದೋಖಾ

    ಮೈಸೂರು: ಸಚಿವ ಹೆಚ್.ಸಿ ಮಹದೇವಪ್ಪ (HC Mahadevappa) ಅವರ ಹೆಸರಿನಲ್ಲಿ ಖತರ್ನಾಕ್‌ ಮಹಿಳೆಯೊಬ್ಬಳು 27 ಲಕ್ಷ ರೂ. ವಂಚಿಸಿರುವ ಘಟನೆ ಜಿಲ್ಲೆಯ ಟಿ.‌ ನರಸೀಪುರ (T Narasipura) ತಾಲೂಕಿನ ಕೊಳತ್ತೂರು ಗ್ರಾಮದಲ್ಲಿ ನಡೆದಿದೆ.

    ಇದೇ ಗ್ರಾಮದ ಜ್ಯೋತಿ ಎಂಬ ಮಹಿಳೆ, ಸರ್ಕಾರದ ವಿವಿಧ ಯೋಜನೆಗಳ ಸವಲತ್ತು ಹಾಗೂ ಸಾಲ ಕೊಡಿಸುವುದಾಗಿ ನಂಬಿಸಿ ನೂರಾರು ಮಹಿಳೆಯರು ಮತ್ತು ಯುವಕರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ್ದಾಳೆ (Fraud). ಇದನ್ನೂ ಓದಿ: ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು – ಎದೆಗೆ ಗುಂಡಿಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷನ ಹತ್ಯೆ

    ಬರೋಬ್ಬರಿ 27 ಲಕ್ಷ ರೂ. ವರೆಗೆ ಹಣ ವಂಚನೆ ಮಾಡಿದ್ದಾಳೆ. ವಂಚನೆಗೊಳಗಾದ ಗ್ರಾಮಸ್ಥರು ತಲಕಾಡು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದು, ನ್ಯಾಯ ಕೊಡಿಸುವಂತೆ ಪೋಲೀಸರಿಗೆ ಮೊರೆ ಇಟ್ಟಿದ್ದಾರೆ. ಪೊಲೀಸರು ತನಿಖೆಗೆ ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್ – ಮುಂದಿನ ವಾರದಿಂದ ಟ್ರ‍್ಯಾಕಿಗಿಳಿಯಲಿದೆ ನಾಲ್ಕನೇ ರೈಲು

  • ಟಿಪ್ಪು ಡ್ಯಾಂ ಕಟ್ಟಿದ್ದ ಅಂತ ನಾನು ಎಲ್ಲಿಯೂ ಕೂಡ ಹೇಳಿಲ್ಲ – ಮಹದೇವಪ್ಪ ಯೂಟರ್ನ್

    ಟಿಪ್ಪು ಡ್ಯಾಂ ಕಟ್ಟಿದ್ದ ಅಂತ ನಾನು ಎಲ್ಲಿಯೂ ಕೂಡ ಹೇಳಿಲ್ಲ – ಮಹದೇವಪ್ಪ ಯೂಟರ್ನ್

    ಬೆಂಗಳೂರು: ಕನ್ನಂಬಾಡಿ ಅಣೆಕಟ್ಟೆಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ (Tippu Sultan) ಎಂದಿದ್ದ ಸಚಿವ ಮಹದೇವಪ್ಪ (HC Mahadevappa) ವ್ಯಾಪಕ ಟೀಕೆ ಬಳಿಕ ಯೂಟರ್ನ್ ಹೊಡೆದಿದ್ದಾರೆ. ಕೆಆರ್‌ಎಸ್ ಡ್ಯಾಂ (KRS Dam) ಕಟ್ಟಿದ್ದು ಟಿಪ್ಪು ಅಂತ ನಾನು ಹೇಳಿಲ್ಲ, ಹೇಳೋದಕ್ಕೂ ಬರೋದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

    1911ರಲ್ಲಿ ಕೆಆರ್‌ಎಸ್ ಕಟ್ಟೋದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅಡಿಗಲ್ಲು ಹಾಕಿದರು. ಅವರು ಡ್ಯಾಂ ಕಟ್ಟಲು ಪ್ರಾರಂಭಿಸಿದಾಗ ಅಲ್ಲೊಂದು ಶಿಲಾ ಶಾಸನ ಸಿಕ್ಕಿದೆ. 1794ರಲ್ಲಿ ಟಿಪ್ಪು ಕಾಲದಲ್ಲಿ ಬರೆದ ಪರ್ಷಿಯನ್ ಭಾಷೆಯ ಶಿಲಾ ಶಾಸನ. ಅದರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಬೇಕು ಎಂಬ ಪ್ರಸ್ತಾಪ ಇದೆ. ಅದನ್ನೂ ಕೂಡ ಕೆಆರ್‌ಎಸ್‌ನಲ್ಲಿಯೇ ಇಡಲಾಗಿದೆ. ನಾನು ಎಲ್ಲಿಯೂ ಕೂಡ ಟಿಪ್ಪು ಡ್ಯಾಂ ಕಟ್ಟಿದ್ದ ಅಂತ ಹೇಳಿಯೇ ಇಲ್ಲ ಎಂದರು. ಇದನ್ನೂ ಓದಿ: ಮಚ್ಚಿನಿಂದ ಕೊಲೆಗೈದ ಕೇಸ್‌ಗೆ ಟ್ವಿಸ್ಟ್ – ಪ್ರಿಯತಮೆಗಾಗಿ ಮಾಜಿ ಲವ್ವರ್‌ನನ್ನೇ ಕೊಂದ ಪ್ರಿಯಕರ

    ಟಿಪ್ಪು ಕಟ್ಟಿದ್ದು ಅಲ್ಲವೇ ಅಲ್ಲ, ಆದರೆ ಟಿಪ್ಪುಗೂ ಕೂಡ ಅದೇ ಥರದ ಕನಸು ಇತ್ತು ಎಂಬುದಷ್ಟೇ ಹೇಳಿದ್ದು. ಇದರ ನೈಜತೆಯ ಬಗ್ಗೆ ಇತಿಹಾಸಕಾರರು ಹೇಳಬೇಕು. ಕೆಆರ್‌ಎಸ್ ಡ್ಯಾಂ ಕಟ್ಟಿದ್ದು ನಮ್ಮ ಇಂಜಿನಿಯರ್‌ಗಳು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ಡ್ಯಾಂನ ಎಸ್ಟಿಮೇಟ್ ಹಾಕಿ ಎಷ್ಟು ಜಮೀನು ಬೇಕು ಎಂದು ತೀರ್ಮಾನಿಸಿ ಕಟ್ಟಿದ್ದು. ಆದರೆ ನಾನು ಅಲ್ಲಿ ಇಟ್ಟಿರುವ ಶಿಲಾ ಶಾಸನದ ಬಗ್ಗೆ ಮಾತ್ರ ಹೇಳಿದ್ದೇನೆ. ಬಿಜೆಪಿಯವರು ಏನು ಬೇಕಾದರೂ ಟೀಕೆ ಮಾಡಿಕೊಳ್ಳಲಿ. ನಾನು ಅನಗತ್ಯ ಗೊಂದಲ ಇರಬಾರದು ಎಂದು ಮಾತ್ರ ಹೇಳಿದ್ದೇನೆ. ಯಾರನ್ನೋ ಓಲೈಸಲು ಸಮಾಧಾನಪಡಿಸಲು ಹೇಳಿಲ್ಲ ಎಂದು ಬಿಜೆಪಿಗರು, ರಾಜವಂಶಸ್ಥ ಯದುವೀರ್‌ಗೆ ಮಹದೇವಪ್ಪ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ದಾಳಿ ಮಾಡಿದ್ದು ಪಾಕಿಸ್ತಾನ ಉಗ್ರರು: ಭದ್ರತಾ ಸಂಸ್ಥೆ ಸ್ಪಷ್ಟನೆ

  • KRS ಡ್ಯಾಂ ಮೈಸೂರು ರಾಜಮನೆತನದ ತ್ಯಾಗದಿಂದ ನಿರ್ಮಾಣವಾಗಿದೆ – ಮಂತ್ರಾಲಯ ಶ್ರೀ

    KRS ಡ್ಯಾಂ ಮೈಸೂರು ರಾಜಮನೆತನದ ತ್ಯಾಗದಿಂದ ನಿರ್ಮಾಣವಾಗಿದೆ – ಮಂತ್ರಾಲಯ ಶ್ರೀ

    ರಾಯಚೂರು: ಕಾವೇರಿ ಪ್ರಾಂತ್ಯದ ಜನರಿಗೆ ನೀರಿನ ವ್ಯವಸ್ಥೆ ಮಾಡಬೇಕು ಎನ್ನುವ ಉದ್ದೇಶದಿಂದ ಮೈಸೂರು (Mysuru) ಸಂಸ್ಥಾನದ ಆಗಿನ ರಾಜಮಾತೆ ತಮ್ಮ ಆಭರಣಗಳನ್ನ ಮಾರಾಟ ಮಾಡಿ ಕೆಆರ್‌ಎಸ್ ಜಲಾಶಯವನ್ನು (KRS Dam) ಕಟ್ಟಿಸಿದ್ದಾರೆ ಎಂದು ಗುರುರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ (Shri Subhudendra Theertha) ತಿಳಿಸಿದ್ದಾರೆ.

    ಮಂತ್ರಾಲಯದಲ್ಲಿ ಮಾತನಾಡಿದ ಶ್ರೀಗಳು ಕೆಆರ್‌ಎಸ್ ಡ್ಯಾಂಗೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದು ಎನ್ನುವ ಸಚಿವ ಮಹಾದೇವಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ರಾಜಮನೆತನದ ತ್ಯಾಗದ ಫಲವಾಗಿ ಕೆಆರ್‌ಎಸ್ ಡ್ಯಾಂ ನಿರ್ಮಾಣವಾಗಿದೆ. ಇನ್ನೂ ಬೇರೆ ಬೇರೆ ವಿಚಾರ ಬಂದರೆ, ಬೇರೆಯವರ ಹೆಸರುಗಳು ಬಂದರೆ ಅದರ ಬಗ್ಗೆ ಇತಿಹಾಸ ತಜ್ಞರೇ ಹೇಳಬೇಕು ಹೊರತು ನಾವು ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.ಇದನ್ನೂ ಓದಿ: ಬಿಬಿಎಂಪಿ ಚುನಾವಣೆ; ನವೆಂಬರ್ 3ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ

    ಇದೇ ವೇಳೆ ಧರ್ಮಸ್ಥಳದ ಪ್ರಸ್ತುತ ವಿಚಾರಗಳ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ಧಾರ್ಮಿಕ ಸ್ಥಳ, ಕ್ಷೇತ್ರಗಳಲ್ಲಿ ಸಣ್ಣಪುಟ್ಟ ಲೋಪದೋಷಗಳಾದರೆ ಕ್ಷೇತ್ರದ ಪಾವಿತ್ರ್ಯತೆ ಹಾಗೂ ಕ್ಷೇತ್ರದ ಮಹತ್ವಕ್ಕೆ ಜೋಡಣೆ ಮಾಡಬಾರದು. ಅಲ್ಲಿನ ವ್ಯವಸ್ಥೆ, ಕಾನೂನು ವ್ಯವಸ್ಥೆ ಬಗ್ಗೆ ಮಾತನಾಡಬೇಕು. ಕ್ಷೇತ್ರ ಅತ್ಯಂತ ಪವಿತ್ರವಾದದ್ದು, ನಮ್ಮೆಲ್ಲರಿಗೂ ಅತ್ಯಂತ ಭಕ್ತಿ, ಶ್ರದ್ಧೆಯ ಕೇಂದ್ರವಾಗಿದೆ. ಅಲ್ಲಿ ಯಾವುದೇ ಪ್ರಕರಣ,ವಿಚಾರಗಳು ಇದ್ದರೂ ಕೂಡ ಕಾನೂನು ವಿಚಾರಣೆ ನಡೆಸುತ್ತದೆ ಎಂದು ಹೇಳಿದ್ದಾರೆ.

    ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಮಂತ್ರಾಲಯ ಭಕ್ತರಿಗೆ ತೊಂದರೆ ವಿಚಾರ ಕುರಿತು ಮಾತನಾಡಿ, ಸಾರಿಗೆ ಇಲಾಖೆಯವರು ತಮ್ಮ ಬೇಡಿಕೆ ಈಡೇರಿಕೆಗಾಗಿ ಹಲವಾರು ಬಾರಿ ಅಹವಾಲು ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಅವರ ಅಹವಾಲನ್ನ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸಾರಿಗೆ ನೌಕರರಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸುತ್ತದೆ ಎನ್ನುವ ಅನ್ನೋ ಧೃಡ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

    ಇದಕ್ಕೂ ಮುನ್ನ ಸಚಿವ ಹೆಚ್.ಸಿ ಮಹದೇವಪ್ಪ (HC Mahadevappa) ಅವರು ಕನ್ನಂಬಾಡಿ ಕಟ್ಟೋದಕ್ಕೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದರು. ಆದರೆ, ಈಗ ಅದನ್ನು ಹೇಳೋಕೆ ಯಾರಿಗೂ ಧೈರ್ಯ ಇಲ್ಲ. ಕೆಆರ್‌ಎಸ್ ಗೇಟ್ ಹೆಬ್ಬಾಗಿಲಿನಲ್ಲಿ ಈಗಲೂ ಅದನ್ನು ಕಾಣಬಹುದು. ಚರಿತ್ರೆ ಗೊತ್ತಿಲ್ಲದವರು ಚರಿತ್ರೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಟಿಪ್ಪು ಮಸೀದಿ ಇದೆ, ಪಕ್ಕದಲ್ಲಿ ದೇವಸ್ಥಾನ ಇದೆ. ಈ ಕಡೆ ಅಲ್ಲಾವೋ ಅಕ್ಬರ್ ಅಂತಾರೆ, ಆ ಕಡೆ ಗಂಟೆ ಟಣ್, ಟಣ್ ಅನ್ನುತ್ತೆ. ಎರಡನ್ನು ಕೇಳ್ತಿದ್ರು ಅವರು. ಸಮಚಿತ್ತರಾಗಿದ್ದವರು ಟಿಪ್ಪು ಎಂದು ಬಣ್ಣಿಸಿದ್ದರು.ಇದನ್ನೂ ಓದಿ: ಆ.5ರಂದು ಸಾರಿಗೆ ನೌಕರರ ಮುಷ್ಕರ; 40% ಖಾಸಗಿ ಬಸ್ ರಸ್ತೆಗಿಳಿಸಲು ಸರ್ಕಾರ ನಿರ್ಧಾರ

  • ಕೆಆರ್‌ಎಸ್ ಡ್ಯಾಂಗೆ ಟಿಪ್ಪು ಅಡಿಗಲ್ಲು ಹಾಕಿಲ್ಲ ಅಂತಾರೆ ತಜ್ಞರು; ನಾಮಫಲಕದಲ್ಲಿ ಏನಿದೆ?

    ಕೆಆರ್‌ಎಸ್ ಡ್ಯಾಂಗೆ ಟಿಪ್ಪು ಅಡಿಗಲ್ಲು ಹಾಕಿಲ್ಲ ಅಂತಾರೆ ತಜ್ಞರು; ನಾಮಫಲಕದಲ್ಲಿ ಏನಿದೆ?

    ಮಂಡ್ಯ: ಕನ್ನಂಬಾಡಿ ಕಟ್ಟೆಗೆ (Kannambadi Katte) ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ (Tippu Sultan) ಎಂಬ ಸಚಿವ ಹೆಚ್.ಸಿ ಮಹದೇವಪ್ಪ ಹೇಳಿಕೆ ಇದೀಗ ವ್ಯಾಪಕ ಚರ್ಚೆಯಾಗುತ್ತಿದೆ. ಒಂದು ಕಡೆ ಇತಿಹಾಸ ತಜ್ಞರು, ಟಿಪ್ಪು ಕನ್ನಂಬಾಡಿ ಕಟ್ಟೆಗೆ ಅಡಿಗಲ್ಲು ಹಾಕಿಲ್ಲ. ಆತ ಬೇರೆ ಕಡೆ ಅಣೆಕಟ್ಟನ್ನು ಕಟ್ಟಬೇಕೆಂದು ಚಿಂತನೆ ಮಾಡಿ ಅಡಿಗಲ್ಲು ಹಾಕಿರೋದು ಎಂದು ಹೇಳುತ್ತಿದ್ದಾರೆ.

    ಇನ್ನೊಂದು ಕಡೆ ಸಚಿವ ಮಹದೇವಪ್ಪ (H C Mahadevappa) ಕೆಆರ್‌ಎಸ್ ಮುಖ್ಯ ದ್ವಾರದಲ್ಲಿ ಇರುವ ನಾಮಫಲಕವನ್ನು ಹಾಕಿ ಎಂದು ನಾನು ಹೇಳಿದ್ದಕ್ಕೆ ಸಾಕ್ಷಿ ಎಲ್ಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಳೆಯಿಂದ ರಸ್ತೆಗಿಳಿಯಲ್ಲ ಬಸ್? – ಇಂದು ಸಿಎಂ ಸಭೆ, ಖಾಸಗಿ ಬಸ್‌ಗಳನ್ನ ರಸ್ತೆಗಿಳಿಸಲು ಜಿಲ್ಲಾಡಳಿತ ಕ್ರಮ

    ಕೆಆರ್‌ಎಸ್ ಡ್ಯಾಂನ (KRS Dam) ಸೌತ್ ಗೇಟ್‌ನಲ್ಲಿ ನಾಮಫಲಕಗಳು ಇವೆ. ಇದರಲ್ಲಿ ಡ್ಯಾಂ ನಿರ್ಮಾಣದ ಪ್ರಾರಂಭ, ಕಾಮಗಾರಿ ಮುಕ್ತಾಯವಾಗಿದ್ದು, ಆ ಸಂದರ್ಭದಲ್ಲಿ ಯಾವ ರಾಜರಿದ್ದರು? ದಿವಾನರು, ಎಂಜಿನಿಯರ್‌ಗಳು ಯಾರು? ಹಾಗೂ ಡ್ಯಾಂನ ನೀಲಿ ನಕ್ಷೆಯ ಮಾಹಿತಿಗಳನ್ನು ಒಳಗೊಂಡಿವೆ. ಇದಲ್ಲದೇ ಕನ್ನಡ, ಪರ್ಷಿಯನ್, ಇಂಗ್ಲಿಷ್ ಭಾಷೆಯಲ್ಲಿ ಈ ನಾಮಫಲಕಗಳಿವೆ. ಇದನ್ನೂ ಓದಿ: ಕೈದಿ ನಂ. 15528 – ಪ್ರಜ್ವಲ್‍ಗೆ 524 ರೂ. ದಿನಗೂಲಿ, ಕೆಲಸವೇನು ಗೊತ್ತಾ?

    ಇದರಲ್ಲಿ 1794ರಲ್ಲಿ ಟಿಪ್ಪು ಸುಲ್ತಾನ್ ಕಾಲದಲ್ಲಿ ಕಾವೇರಿ ನದಿಗೆ ಅಣೆಕಟ್ಟನ್ನು ನಿರ್ಮಾಣ ಮಾಡಲು ಶಂಕುಸ್ಥಾಪನೆ ಮಾಡಿರುವುದಾಗಿ ಉಲ್ಲೇಖವಾಗಿದೆ. ಆದರೆ ಈ ಬರಹಗಳಲ್ಲಿ ಎಲ್ಲೂ ಸಹ ಕನ್ನಂಬಾಡಿ ಕಟ್ಟೆಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದೇವೆ ಎಂದು ಉಲ್ಲೇಖವಾಗಿಲ್ಲ. ಕನ್ನಂಬಾಡಿ ಕಟ್ಟೆಯ ಕಾರ್ಯ ಆರಂಭವಾಗಿದ್ದು 1911ರಲ್ಲಿ, ಅಲ್ಲಿಗೆ ಟಿಪ್ಪು ಅಂದುಕೊಂಡಿದ್ದಕ್ಕೂ ಡ್ಯಾಂ ನಿರ್ಮಾಣ ಕಾರ್ಯ ಆರಂಭವಾಗಿದ್ದಕ್ಕೂ 119 ವರ್ಷಗಳ ಅಂತರವಿದೆ. ಇದನ್ನೂ ಓದಿ: ಗ್ರೌಂಡ್‌ ಪೆನೆಟ್ರೇಟಿಂಗ್ ರೇಡಾರ್‌ನಿಂದ ಅಸ್ಥಿಪಂಜರ ಪತ್ತೆ ಕಾರ್ಯ ನಡೆಸಿ – ಎಸ್‌ಐಟಿಗೆ ದೂರುದಾರ ಹೊಸ ರಿಕ್ವೆಸ್ಟ್‌

    ಹೀಗಾಗಿ ಕನ್ನಂಬಾಡಿ ಕಟ್ಟೆ ನಿರ್ಮಾಣಕ್ಕೆ ಟಿಪ್ಪು ಅಡಿಗಲ್ಲು ಹಾಕಿಲ್ಲ. ಟಿಪ್ಪು ಈ ಭಾಗದಲ್ಲಿ ಒಂದು ಅಣೆಕಟ್ಟನ್ನು ಕಟ್ಟಬೇಕೆಂದು ಶಂಕುಸ್ಥಾಪನೆ ಮಾಡಿದ್ದಾರೆ. ಆದರೆ ಈ ಜಾಗದಲ್ಲಿ ಕನ್ನಂಬಾಡಿ ಕಟ್ಟೆಗೆ ಶಂಕುಸ್ಥಾಪನೆ ಮಾಡಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್. ಟಿಪ್ಪು ಸಹ ಈ ಭಾಗದಲ್ಲಿ ಅಣೆಕಟ್ಟನ್ನು ನಿರ್ಮಾಣ ಮಾಡುಲು ಮುಂದಾಗಿದ್ದರು ಎಂಬ ಕಾರಣಕ್ಕೆ ಟಿಪ್ಪು ಸುಲ್ತಾನ್ ಕುರಿತ ಶಿಲಾನ್ಯಾಸವನ್ನು ಇಲ್ಲಿ ಹಾಕಲಾಗಿದೆ ಎಂದು ಇತಿಹಾಸ ತಜ್ಞರು ಹೇಳುತ್ತಿದ್ದಾರೆ.

  • ಮಲ್ಲಿಕಾರ್ಜುನ ಖರ್ಗೆಯವರಿಗೆ ಎಲ್ಲಾ ಹುದ್ದೆ ಅನುಭವಿಸುವ ಅರ್ಹತೆ ಇದೆ: ಮಹದೇವಪ್ಪ

    ಮಲ್ಲಿಕಾರ್ಜುನ ಖರ್ಗೆಯವರಿಗೆ ಎಲ್ಲಾ ಹುದ್ದೆ ಅನುಭವಿಸುವ ಅರ್ಹತೆ ಇದೆ: ಮಹದೇವಪ್ಪ

    ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಎಲ್ಲಾ ಹುದ್ದೆ ಅನುಭವಿಸುವ ಅರ್ಹತೆ ಇದೆ. ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಮಾಡುತ್ತದೆ ಎಂದು ಸಚಿವ ಮಹದೇವಪ್ಪ (Mahadevappa) ತಿಳಿಸಿದ್ದಾರೆ.ಇದನ್ನೂ ಓದಿ: ನವೆಂಬರ್-ಡಿಸೆಂಬರ್ ವೇಳೆಗೆ ಬಿಬಿಎಂಪಿ ಚುನಾವಣೆ ಅನುಮಾನ?

    ಸಿಎಂ ಸ್ಥಾನದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಖರ್ಗೆ ಅವರಿಗೆ ಎಲ್ಲಾ ಹುದ್ದೆ ಅನುಭವಿಸುವ ಅರ್ಹತೆ ಇದೆ. ಅವರು ಹಿರಿಯರು, ಅವಕಾಶ ಸಿಕ್ಕಾಗ ಎಲ್ಲಾ ಅಧಿಕಾರ ಸಿಗಬೇಕು ಎನ್ನುವುದು ನನ್ನ ಅನಿಸಿಕೆ. ಕಾಂಗ್ರೆಸ್‌ನಲ್ಲಿ ಸಂಜೀವಯ್ಯ, ಸುಶೀಲ್ ಕುಮಾರ್ ಶಿಂಧೆ ಸೇರಿ ಅನೇಕರು ದಲಿತ ಸಿಎಂ ಆಗಿದ್ದಾರೆ. ಖರ್ಗೆಯನ್ನು ಸಿಎಂ ಮಾಡುವ ಬಗ್ಗೆ ಸಮಯ ಬಂದಾಗ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದಿದ್ದಾರೆ.

    ರಾಜ್ಯದಲ್ಲಿ ಮುಂದೆ ಖರ್ಗೆ ಸಿಎಂ ಆಗುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ನನ್ನ ವ್ಯಾಪ್ತಿಯಲ್ಲಿ ಇಲ್ಲ. ಅದು ರಾಷ್ಟ್ರೀಯ ಮಟ್ಟದಲ್ಲಿ ಇದೆ. ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಕಾನೂನು, ಕಾಯ್ದೆ ಪ್ರಕಾರವೇ ಗ್ಯಾರಂಟಿಗೆ ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣ ಬಳಕೆ: ಮಹದೇವಪ್ಪ

  • ಕಾಂಗ್ರೆಸ್‌ನಲ್ಲಿ ಏನೇ ಆದರೂ ಹೈಕಮಾಂಡ್ ತೀರ್ಮಾನವೆ ಅಂತಿಮ: ಹೆಚ್.ಸಿ ಮಹದೇವಪ್ಪ

    ಕಾಂಗ್ರೆಸ್‌ನಲ್ಲಿ ಏನೇ ಆದರೂ ಹೈಕಮಾಂಡ್ ತೀರ್ಮಾನವೆ ಅಂತಿಮ: ಹೆಚ್.ಸಿ ಮಹದೇವಪ್ಪ

    ಬೆಂಗಳೂರು: ಕಾಂಗ್ರೆಸ್‌ನಲ್ಲಿ (Congress) ಏನೇ ತೀರ್ಮಾನ ಆಗಬೇಕಾದರೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ (HC Mahadevappa) ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಭೇಟಿ ಬಳಿಕ ಮಾತನಾಡಿದ ಅವರು ಸತೀಶ್ ಜಾರಕಿಹೊಳಿ ಹಾಗೂ ನಮ್ಮ ಸಂಬಂಧ ಮೂವತ್ತು ವರ್ಷಕ್ಕಿಂತ ಹೆಚ್ಚಿನದು. ಸತೀಶ್ ಜಾರಕಿಹೊಳಿ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರನ್ನು ಭೇಟಿ ಮಾಡಿ ಟನಲ್ ಬಗ್ಗೆ ಎಲ್ಲಾ ಚರ್ಚೆ ಮಾಡಿದರು. ದೆಹಲಿಗೆ ಹೋದಾಗ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುವುದು ಎಲ್ಲಾ ಸಹಜ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಪವರ್ ಶೇರಿಂಗ್ ಏನೇ ಅಂದರು ಹೈಕಮಾಂಡ್ ಏನು ಅಭಿಪ್ರಾಯ ಹೇಳುತ್ತೋ ಅದೇ ಅಂತಿಮ. ನಮ್ಮಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದರು. ಇದನ್ನೂ ಓದಿ: ಸಿಎಸ್‌ಕೆ ಸೋಲಿಸಿ ಬೆಂಗಳೂರಿಗೆ ಆರ್‌ಸಿಬಿ ಟೀಂ ಗ್ರ್ಯಾಂಡ್‌ ಎಂಟ್ರಿ – ಏರ್‌ಪೋರ್ಟ್‌ನಲ್ಲಿ ಫ್ಯಾನ್ಸ್ ಜಯಘೋಷ

    ರಾಜೇಂದ್ರ ಅವರು ಕಂಪ್ಲೆಂಟ್ ಕೊಟ್ಟಿದ್ದಾರೆ. ಪ್ರಭಾವಿ ಯಾರೂ ಎಂದು ನಾನು ಹೇಗೆ ಹೇಳೋಕಾಗುತ್ತದೆ. ತನಿಖೆ ಆಗಲಿ, ಸತ್ಯಾಸತ್ಯತೆ ಗೊತ್ತಾಗುತ್ತದೆ. ಸಂಪುಟ ಪುನರ್ ರಚನೆ ಹೈಕಮಾಂಡ್‌ಗೆ ಬಿಟ್ಟಿದ್ದು. ಶುಕ್ರವಾರ ಸಿಎಂ ಭೇಟಿ ಮಾಡಿದ್ದೆ. ದಲಿತ ಸಮಾವೇಶದ ಬಗ್ಗೆ ಚರ್ಚೆ ಆಗಿಲ್ಲ, ಅಂಬೇಡ್ಕರ್ ಜಯಂತಿ ಆಚರಣೆ ಬಗ್ಗೆ ಮಾತನಾಡಿದೆ ಅಷ್ಟೇ ಎಂದು ತಿಳಿಸಿದರು. ಇದನ್ನೂ ಓದಿ: ಯುಗಾದಿ, ರಾಮನವಮಿ ಹಲಾಲ್ ಮುಕ್ತ ಆಗಲಿ: ಪ್ರಮೋದ್ ಮುತಾಲಿಕ್

  • ಗ್ಯಾರಂಟಿಗಳಿಗೆ SCSP – TSP ಹಣ ಬಳಕೆ – ದಲಿತರ ಎಷ್ಟು ಕೋಟಿ ಹಣ ಬಳಕೆ? ಇಲ್ಲಿದೆ ಲೆಕ್ಕ..

    ಗ್ಯಾರಂಟಿಗಳಿಗೆ SCSP – TSP ಹಣ ಬಳಕೆ – ದಲಿತರ ಎಷ್ಟು ಕೋಟಿ ಹಣ ಬಳಕೆ? ಇಲ್ಲಿದೆ ಲೆಕ್ಕ..

    – ನಮ್ಮ ಸರ್ಕಾರ ಮಾತ್ರವಲ್ಲ ಬಿಜೆಪಿ ಸರ್ಕಾರವೂ ಬಳಸಿದೆ: ಮಹದೇವಪ್ಪ ಸಮರ್ಥನೆ

    ಬೆಂಗಳೂರು: ಎಸ್‌ಸಿ-ಎಸ್‌ಟಿ ಸಮುದಾಯದ (SC ST Community) ಅಭಿವೃದ್ಧಿಗೆ ಮೀಸಲಾದ ಅನುದಾನವನ್ನು ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ (Guarantee Scheme) ಬಳಸ್ತಿರೋ ವಿಷಯ ಪರಿಷತ್‌ನಲ್ಲಿಂದು ಕೋಲಾಹಲ ಎಬ್ಬಿಸಿದೆ.

    ಪ್ರಶ್ನೋತ್ತರ ಅವಧಿಯಲ್ಲಿ ವಿಪಕ್ಷಗಳು ಈ ವಿಚಾರ ಪ್ರಸ್ತಾಪಿಸಿದವು. ಸರ್ಕಾರವೇ ಕೊಟ್ಟಿರೋ ಮಾಹಿತಿಗಳ ಪ್ರಕಾರ, ಕಳೆದ 2 ವರ್ಷಗಳಲ್ಲಿ 19,084.72 ಕೋಟಿ ಹಣವನ್ನು ಗ್ಯಾರಂಟಿಗಾಗಿ ಬಳಕೆ ಮಾಡಲಾಗಿದೆ. ಈ ವಿಚಾರವಾಗಿ, ಸಮಾಜಕಲ್ಯಾಣ ಇಲಾಖೆ ಸಚಿವ ಮಹದೇವಪ್ಪ-ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಧ್ಯೆ ಕಾವೇರಿದ ವಾಕ್ಸಮರವೇ ನಡೆಯಿತು. 1.50 ಕೋಟಿ ಜನರಿಗೆ ಅನ್ಯಾಯ ಆಗ್ತಿದೆ ಅಂತ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ರೋಷಾವೇಶಭರಿತವಾಗಿ ಮಾತಾಡಿದರು. ಇದನ್ನೂ ಓದಿ: Public TV Explainer: ಭಾರತಕ್ಕೆ ಎಂಟ್ರಿ ಕೊಡಲಿದೆ ಸ್ಟಾರ್‌ಲಿಂಕ್‌: ಸಿಗುತ್ತಾ ಕೇಬಲ್‌, ಟವರ್‌ ರಹಿತ ಹೈಸ್ಪೀಡ್‌ ಇಂಟರ್ನೆಟ್‌? – ದರ ಎಷ್ಟು?

    ಇದಕ್ಕೆ ಅಂಕಿ-ಅಂಶಗಳ ಸಮೇತ ಸಚಿವ ಮಹದೇವಪ್ಪ ಟಾಂಗ್ ಕೊಟ್ಟರು. ನಮ್ಮ ಸರ್ಕಾರ ಮಾತ್ರ ಬಳಸ್ತಿಲ್ಲ. ಹಿಂದಿನ ಬಿಜೆಪಿ ಸರ್ಕಾರವೂ ಬಳಸಿದೆ ಅಂದ್ರು. ಮಹದೇವಪ್ಪ ಬೆಂಬಲಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಎದ್ದು ನಿಂತರು. ಇದಕ್ಕೆ ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸ್ತಿದ್ರು. ಇಬ್ಬರ ಮಧ್ಯೆಯೂ ಪದೇ ಪದೇ ಜೋರು ವಾಕ್ಸಮರ ನಡೀತು. ಕಾಂಗ್ರೆಸ್-ದೋಸ್ತಿ ಸದಸ್ಯರು ದನಿಗೂಡಿಸಿದ್ರು. ಸದನ ಗದ್ದಲದ ಗೂಡಾಗಿ ಸ್ವಲ್ಪ ಹೊತ್ತು ಕಲಾಪವನ್ನು ಸಭಾಪತಿಗಳು ಮುಂದೂಡಿದರು. ಇದನ್ನೂ ಓದಿ: ವಿದ್ಯಾರ್ಥಿನಿಯರ ಮೇಲೆ ಬಣ್ಣ ಎರಚಿದ ಕಿಡಿಗೇಡಿಗಳು – 8 ಮಂದಿ ಅಸ್ವಸ್ಥ

    ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣ ಎಷ್ಟು ಮೀಸಲಿಡಲಾಗಿತ್ತು? ಅದರಲ್ಲಿ ಪಂಚ ಗ್ಯಾರಂಟಿಗಳಿಗೆ ಎಷ್ಟು ಬಳಸಲಾಗಿದೆ ಅನ್ನೋದರ ಅಂಕಿ-ಅಂಶ ಇಲ್ಲಿದೆ. ಇದನ್ನೂ ಓದಿ: ಯುಪಿಯ ಪುರುಷನಿಗೆ ಪಾಕ್ ಏಜೆಂಟ್ ನೇಹಾ ಆಮಿಷ – ರಕ್ಷಣಾ ಇಲಾಖೆಯ ಮಾಹಿತಿ ಸೋರಿಕೆ ಮಾಡ್ತಿದ್ದವನ ಬಂಧನ

    ಯಾವುದಕ್ಕೆ ಎಷ್ಟು ಹಣ ಬಳಕೆ?
    2025-26ರಲ್ಲಿ – 13,433.76 ಕೋಟಿ ರೂ.
    * ಗೃಹಲಕ್ಷ್ಮಿಗೆ – 7,438.11 ಕೋಟಿ ರೂ.
    * ಗೃಹಜ್ಯೋತಿಗೆ – 2,626 ಕೋಟಿ ರೂ.
    * ಅನ್ನಭಾಗ್ಯಕ್ಕೆ – 1,670.76 ಕೋಟಿ ರೂ.
    * ಶಕ್ತಿ ಯೋಜನೆಕ್ಕೆ – 1,537 ಕೋಟಿ ರೂ.
    * ಯುವ ನಿಧಿಗೆ – 162 ಕೋಟಿ ರೂ.

    2024-25ರಲ್ಲಿ – 39,122 ಕೋಟಿ ರೂ.
    * ಎಸ್‌ಸಿಎಸ್‌ಪಿಯಿಂದ – 27,674 ಕೋಟಿ ರೂ.
    * ಟಿಎಸ್‌ಪಿಯಿಂದ – 11,448 ಕೋಟಿ ರೂ.
    * ಗ್ಯಾರಂಟಿಗೆ ಬಳಕೆ – 14,282 ಕೋಟಿ ರೂ.

    2023-24ರಲ್ಲಿ – 35,222 ಕೋಟಿ ರೂ.
    * ಎಸ್‌ಸಿಎಸ್‌ಪಿಯಿಂದ – 25,164 ಕೋಟಿ ರೂ.
    * ಟಿಎಸ್‌ಪಿಯಿಂದ – 10,058 ಕೋಟಿ ರೂ.
    * ಗ್ಯಾರಂಟಿಗೆ ಬಳಕೆ – 10,355 ಕೋಟಿ ರೂ.