Tag: HC Balakrishna

  • ಡಿಕೆಶಿಗೆ ಸಿಎಂ ಆಗುವ ಅವಕಾಶ ಇದೆ, ಯೋಗೇಶ್ಬರ್ ಗೆಲ್ಲಿಸಿದ್ರೆ ಶಕ್ತಿ ಬರುತ್ತೆ: ಎಂಎಲ್‌ಸಿ ಪುಟ್ಟಣ್ಣ

    ಡಿಕೆಶಿಗೆ ಸಿಎಂ ಆಗುವ ಅವಕಾಶ ಇದೆ, ಯೋಗೇಶ್ಬರ್ ಗೆಲ್ಲಿಸಿದ್ರೆ ಶಕ್ತಿ ಬರುತ್ತೆ: ಎಂಎಲ್‌ಸಿ ಪುಟ್ಟಣ್ಣ

    ರಾಮನರಗ: ಸಿದ್ದರಾಮಯ್ಯ ಅವರ ಬಳಿಕ ಡಿ.ಕೆ ಶಿವಕುಮಾರ್‌ (DK Shivakumar) ಅವರಿಗೆ ಸಿಎಂ ಆಗುವ ಎಲ್ಲಾ ಅವಕಾಶ ಇದೆ. ಸಿ.ಪಿ ಯೋಗೇಶ್ವರ್‌ ಅವರನ್ನ ಗೆಲ್ಲಿಸಿದ್ರೆ ಡಿ.ಕೆ ಶಿವಕುಮಾರ್‌ಗೆ ಶಕ್ತಿ ಬರುತ್ತೆ ಎಂದು ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ (MLC Puttanna) ಹೇಳಿದ್ದಾರೆ.

    ಚನ್ನಪಟ್ಟಣ ಉಪಚುನಾವಣೆ (Channapatna By Election) ಹಿನ್ನೆಲೆಯಲ್ಲಿ ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮನ್ವಯ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಇದನ್ನೂ ಓದಿ: ಕುಮಾರಸ್ವಾಮಿ ಮನೆದೇವ್ರು ದುರ್ಯೋಧನ, ಲಾಂಛನ ನಾಗರಹಾವು ಅಂದಿದ್ದು ಯಡಿಯೂರಪ್ಪ: ಬಾಲಕೃಷ್ಣ

    ಸಿದ್ದರಾಮಯ್ಯ (Siddaramaiah) ಬಳಿಕ ಸಿಎಂ ಆಗುವ ಎಲ್ಲಾ ಅವಕಾಶ ಡಿಕೆಶಿಗೆ ಇದೆ. ಯೋಗೇಶ್ವರ್ ಗೆಲ್ಲಿಸಿದ್ರೆ ಶಿವಕುಮಾರ್‌ಗೆ ಶಕ್ತಿ ಬರುತ್ತೆ. ಡಿ.ಕೆ ಸುರೇಶ್ ಸೋಲಿಸಲು ಕುಮಾರಸ್ವಾಮಿ ಬಾವನನ್ನ ತಂದು ನಿಲ್ಲಿಸಿದ್ರು. ಈಗ ಈ ಕ್ಷೇತ್ರವನ್ನ ಯೋಗೇಶ್ವರ್‌ಗೆ ಬಿಟ್ಟುಕೊಡಬಹುದಿತ್ತು. ಆದರೆ ಅವರ ಮನೆಯವರಿಗೆ ಬಿಟ್ಟು ಬೇರೆ ಯಾರಿಗೂ ಕುಮಾರಸ್ವಾಮಿ ಟಿಕೆಟ್ ಕೊಡಲ್ಲ. ಕುಮಾರಸ್ವಾಮಿ ಟೂರಿಂಗ್ ಟಾಕೀಸ್, ಎಲ್ಲೂ ನಿಲ್ಲಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಕ್ಷೇತ್ರದ 5,000ಕ್ಕೂ ಅಧಿಕ ಹೆಣ್ಣುಮಕ್ಕಳಿಗೆ ಕೆಲಸ ಕೊಟ್ಟಿದ್ದೇವೆ, ಇದು ಪರ್ಮನೆಂಟ್ ಗ್ಯಾರಂಟಿ: ಭರತ್ ಬೊಮ್ಮಾಯಿ

    ಡಿ.ಕೆ ಸುರೇಶ್ ಅವರ ಸೋಲನ್ನು ಮರೆಯೋಕೆ ಸಿಪಿವೈ ಗೆಲ್ಲಿಸಬೇಕು. ಅದಕ್ಕಾಗಿ ಎಲ್ಲರನ್ನೂ ಮನವೊಲಿಸಿ ಯೋಗೇಶ್ವರ್ ಪರ ಕೆಲಸ ಮಾಡಬೇಕು. ಯೋಗೇಶ್ವರ್ ಕ್ಷೇತ್ರಕ್ಕೆ ನೀರಿನ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ. ಡಿಕೆಶಿ ಕ್ಷೇತ್ರದ ಜನರಿಗೆ ಟ್ರಾನ್ಸ್ಫಾರ್ಮರ್ ಕೊಟ್ಟಿದ್ದಾರೆ. ಕುಮಾರಸ್ವಾಮಿ ಎರಡು ಬಾರಿ ಗೆದ್ದು ಏನು ಕೊಟ್ಟಿದ್ದಾರೆ? ಕಾಂಗ್ರೆಸ್‌ ಸರ್ಕಾರ ಇನ್ನೂ 3 ವರ್ಷ ಇರುತ್ತೆ. ಸಿಪಿವೈ ಗೆದ್ದರೆ ಹೆಚ್ಚಿನ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡ್ತಾರೆ. ಸ್ವಾಭಿಮಾನ ಉಳಿಸಿಕೊಳ್ಳಬೇಕು ಅಂದ್ರೆ ಯೋಗೇಶ್ವರ್ ಗೆಲ್ಲಿಸಬೇಕು ಎಂದು ಕರೆ ಕೊಟ್ಟಿದ್ದಾರೆ.

    ಬಳಿಕ ಶಾಸಕ ಹೆಚ್.ಸಿ ಬಾಲಕೃಷ್ಣ ಮಾತನಾಡಿ, ಕುಮಾರಸ್ವಾಮಿ ಮನೆದೇವ್ರು ದುರ್ಯೋಧನ, ಅವರ ಲಾಂಛನ ನಾಗರಹಾವು. ಇದನ್ನ ಹೇಳಿದ್ದು ಇದೇ ಯಡಿಯೂರಪ್ಪನವರು. ಈಗ ಕಚ್ಚಿಸಿಕೊಳ್ಳೋಕೆ ಜೊತೆಗೆ ಕರೆದುಕೊಂಡಿದ್ದಾರೆ. ಕುಮಾರಸ್ವಾಮಿ ಯಾರನ್ನೂ ಬೆಳೆಸುವ ಕೆಲಸ ಮಾಡಿಲ್ಲ. ಎಲ್ಲಾ ಕಡೆ ಅವರ ಕುಟುಂಬದರನ್ನ ಪ್ರತಿಷ್ಠಾಪನೆ ಮಾಡ್ತಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಶಬರಿಮಲೆ ಯಾತ್ರಾರ್ಥಿಗಳಿಗೆ ವಿಮಾನಗಳ ಕ್ಯಾಬಿನ್ ಬ್ಯಾಗ್‌ನಲ್ಲಿ `ಇರುಮುಡಿ’ ಸಾಗಿಸಲು ಅನುಮತಿ

    ಕುಮಾರಸ್ವಾಮಿಗೆ ನಾವ್ಯಾರೂ ಒಕ್ಕಲಿಗರ ರೀತಿ ಕಾಣುವುದಿಲ್ವಾ? ನಾವು ಅಣ್ಣ-ತಮ್ಮಂದಿರು, ಈ ಜಿಲ್ಲೆಯ ಮಕ್ಕಳು ನಾವು. ಜಗಳ ಆಡಿದ್ದೀವಿ, ಆದ್ರೆ ದ್ವೇಷ ಮಾಡಿಲ್ಲ. ಸಿಪಿವೈಗೆ ಅನ್ಯಾಯ ಆಗೋದು ಗೊತ್ತಾದಾಗ ಅವರನ್ನು ಕರೆತಂದು ಟಿಕೆಟ್ ಕೊಟ್ಟಿದ್ದೀವಿ. ಅವರು ಟೂರಿಂಗ್ ಟಾಕೀಸ್. ಮಂಡ್ಯಕ್ಕೆ ಹೋದ್ರು, ರಾಮನಗರಕ್ಕೂ ಹೋದ್ರು ಈಗ ಇಲ್ಲಿಗೆ ಬಂದವ್ರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: 2025ರ ಐಪಿಎಲ್‌ನಲ್ಲೂ ಮಹಿ ಆಡೋದು ಫಿಕ್ಸ್‌ – ಅ.31ಕ್ಕೆ ರಿಟೇನ್‌ ಆಟಗಾರರ ಭವಿಷ್ಯ!

    ಚನ್ನಪಟ್ಟಣದವರಿಗೆ ಸ್ವಾಭಿಮಾನ ಇದ್ದರೆ ಯೋಗೇಶ್ವರ್‌ ಗೆಲ್ಲಿಸಿ:
    ರಾಮನಗರದಲ್ಲಿ ಸಾಮಾನ್ಯ ಕಾರ್ಯಕರ್ತನನ್ನ ತಂದು ಶಾಸಕನನ್ನಾಗಿ ಸುರೇಶ್ ಮಾಡಿದ್ರು. ಚನ್ನಪಟ್ಟಣದವರಿಗೆ ಸ್ವಾಭಿಮಾನ ಇಲ್ವಾ? ತಾಲೂಕಿಗೆ ನೀರುಕೊಟ್ಟ ಯೋಗೇಶ್ವರ್‌ನ ಸೋಲಿಸಿದ್ರಿ. ನೀರು ಕೊಟ್ಟ ಯೋಗೇಶ್ವರ್‌ಗೆ ವಿಷ ಹಾಕಿದ್ರಿ. ನಿಮಗೆ ದೇವರು ಒಳ್ಳೆಯದು ಮಾಡಲ್ಲ. ಈಗ ಸ್ವಾಭಿಮಾನ ಬೆಳೆಸಿಕೊಳ್ಳಿ ಯೋಗೇಶ್ವರ್ ಗೆಲ್ಲಿಸಿ ಎಂದು ಶಾಸಕ ಮಾರ್ಮಿಕವಾಗಿ ನುಡಿದಿದ್ದರೆ.

  • ಕುಮಾರಸ್ವಾಮಿ ಮನೆದೇವ್ರು ದುರ್ಯೋಧನ, ಲಾಂಛನ ನಾಗರಹಾವು ಅಂದಿದ್ದು ಯಡಿಯೂರಪ್ಪ: ಬಾಲಕೃಷ್ಣ

    ಕುಮಾರಸ್ವಾಮಿ ಮನೆದೇವ್ರು ದುರ್ಯೋಧನ, ಲಾಂಛನ ನಾಗರಹಾವು ಅಂದಿದ್ದು ಯಡಿಯೂರಪ್ಪ: ಬಾಲಕೃಷ್ಣ

    – ಚನ್ನಪಟ್ಟಣ ಜನಕ್ಕೆ ಸ್ವಾಭಿಮಾನ ಇದ್ದರೆ ಯೋಗೇಶ್ವರ್‌ ಗೆಲ್ಲಿಸಿ ಎಂದ ಶಾಸಕ

    ರಾಮನಗರ: ಕುಮಾರಸ್ವಾಮಿ (HD Kumaraswamy) ಮನೆದೇವ್ರು ದುರ್ಯೋಧನ, ಅವರ ಲಾಂಛನ ನಾಗರಹಾವು. ಇದನ್ನ ಹೇಳಿದ್ದು ಇದೇ ಯಡಿಯೂರಪ್ಪನವರು. ಈಗ ಕಚ್ಚಿಸಿಕೊಳ್ಳೋಕೆ ಜೊತೆಗೆ ಕರೆದುಕೊಂಡಿದ್ದಾರೆ ಎಂದು ಕಾಂಗ್ರೆಸ್‌ ಶಾಸಕ ಹೆಚ್.ಸಿ ಬಾಲಕೃಷ್ಣ (HC Balakrishna) ಲೇವಡಿ ಮಾಡಿದ್ದಾರೆ.

    ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ (CP Yogeshwar) ಪರ ಮಾಜಿ ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಸಮನ್ವಯ ಸಭೆ ನಡೆಸಿದರು. ತಾಲೂಕಿನ ಕೋಡಂಬಳ್ಳಿ ಜಿ.ಪಂ ವ್ಯಾಪ್ತಿಯ ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ಅಭ್ಯರ್ಥಿ ಯೋಗೇಶ್ವರ್‌, ಶಾಸಕ ಹೆಚ್.ಸಿ ಬಾಲಕೃಷ್ಣ, ಎಂಎಲ್‌ಸಿಗಳಾದ ಎಸ್.ರವಿ, ಪುಟ್ಟಣ್ಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್ ಉಪಸ್ಥಿತರಿದ್ದರು. ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆಯಲ್ಲಿ ಎಎಪಿ ಸ್ಪರ್ಧಿಸಲ್ಲ – ಮಹಾ ವಿಕಾಸ್‌ ಅಘಾಡಿ ಒಕ್ಕೂಟಕ್ಕೆ ಬೆಂಬಲ

    ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕರು, ಕುಮಾರಸ್ವಾಮಿ ಮನೆದೇವ್ರು ದುರ್ಯೋಧನ, ಅವರ ಲಾಂಛನ ನಾಗರಹಾವು. ಇದನ್ನ ಹೇಳಿದ್ದು ಇದೇ ಯಡಿಯೂರಪ್ಪನವರು. ಈಗ ಕಚ್ಚಿಸಿಕೊಳ್ಳೋಕೆ ಜೊತೆಗೆ ಕರೆದುಕೊಂಡಿದ್ದಾರೆ. ಕುಮಾರಸ್ವಾಮಿ ಯಾರನ್ನೂ ಬೆಳೆಸುವ ಕೆಲಸ ಮಾಡಿಲ್ಲ. ಎಲ್ಲಾ ಕಡೆ ಅವರ ಕುಟುಂಬದರನ್ನ ಪ್ರತಿಷ್ಠಾಪನೆ ಮಾಡ್ತಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ವಿಜಯಪುರದ ಸೈಬರ್ ಕ್ರೈಂ ವಂಚನೆ ಪ್ರಕರಣ ಉಲ್ಲೇಖಿಸಿ ಮನ್ ಕಿ ಬಾತ್‌ನಲ್ಲಿ ಮೋದಿ ಜಾಗೃತಿ

    ಕುಮಾರಸ್ವಾಮಿಗೆ ನಾವ್ಯಾರೂ ಒಕ್ಕಲಿಗರ ರೀತಿ ಕಾಣುವುದಿಲ್ವಾ? ನಾವು ಅಣ್ಣ-ತಮ್ಮಂದಿರು, ಈ ಜಿಲ್ಲೆಯ ಮಕ್ಕಳು ನಾವು. ಜಗಳ ಆಡಿದ್ದೀವಿ, ಆದ್ರೆ ದ್ವೇಷ ಮಾಡಿಲ್ಲ. ಸಿಪಿವೈಗೆ ಅನ್ಯಾಯ ಆಗೋದು ಗೊತ್ತಾದಾಗ ಅವರನ್ನು ಕರೆತಂದು ಟಿಕೆಟ್ ಕೊಟ್ಟಿದ್ದೀವಿ. ಅವರು ಟೂರಿಂಗ್ ಟಾಕೀಸ್. ಮಂಡ್ಯಕ್ಕೆ ಹೋದ್ರು, ರಾಮನಗರಕ್ಕೂ ಹೋದ್ರು ಈಗ ಇಲ್ಲಿಗೆ ಬಂದವ್ರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಶಬರಿಮಲೆ ಯಾತ್ರಾರ್ಥಿಗಳಿಗೆ ವಿಮಾನಗಳ ಕ್ಯಾಬಿನ್ ಬ್ಯಾಗ್‌ನಲ್ಲಿ `ಇರುಮುಡಿ’ ಸಾಗಿಸಲು ಅನುಮತಿ

    ಚನ್ನಪಟ್ಟಣದವರಿಗೆ ಸ್ವಾಭಿಮಾನ ಇದ್ದರೆ ಯೋಗೇಶ್ವರ್‌ ಗೆಲ್ಲಿಸಿ:
    ರಾಮನಗರದಲ್ಲಿ ಸಾಮಾನ್ಯ ಕಾರ್ಯಕರ್ತನನ್ನ ತಂದು ಶಾಸಕನನ್ನಾಗಿ ಸುರೇಶ್ ಮಾಡಿದ್ರು. ಚನ್ನಪಟ್ಟಣದವರಿಗೆ ಸ್ವಾಭಿಮಾನ ಇಲ್ವಾ? ತಾಲೂಕಿಗೆ ನೀರುಕೊಟ್ಟ ಯೋಗೇಶ್ವರ್‌ನ ಸೋಲಿಸಿದ್ರಿ. ನೀರು ಕೊಟ್ಟ ಯೋಗೇಶ್ವರ್‌ಗೆ ವಿಷ ಹಾಕಿದ್ರಿ. ನಿಮಗೆ ದೇವರು ಒಳ್ಳೆಯದು ಮಾಡಲ್ಲ. ಈಗ ಸ್ವಾಭಿಮಾನ ಬೆಳೆಸಿಕೊಳ್ಳಿ ಯೋಗೇಶ್ವರ್ ಗೆಲ್ಲಿಸಿ ಎಂದು ಶಾಸಕ ಮಾರ್ಮಿಕವಾಗಿ ನುಡಿದಿದ್ದರೆ.

  • ಬಿಜೆಪಿಯಿಂದ ಸಿದ್ದರಾಮಯ್ಯರ ಒಂದು ಕೂದಲು ಅಲುಗಾಡಿಸಲು ಸಾಧ್ಯವಿಲ್ಲ: ಹೆಚ್‌ಸಿ ಬಾಲಕೃಷ್ಣ

    ಬಿಜೆಪಿಯಿಂದ ಸಿದ್ದರಾಮಯ್ಯರ ಒಂದು ಕೂದಲು ಅಲುಗಾಡಿಸಲು ಸಾಧ್ಯವಿಲ್ಲ: ಹೆಚ್‌ಸಿ ಬಾಲಕೃಷ್ಣ

    – ದ್ವೇಷದ ರಾಜಕಾರಣ ಮಾಡಿ ರಾಜ್ಯವನ್ನು ಬಾಂಗ್ಲಾ, ಶ್ರೀಲಂಕಾ ಸ್ಥಿತಿಗೆ ತರುವ ಪ್ರಯತ್ನ

    ರಾಮನಗರ: ಬಿಜೆಪಿಯಿಂದ (BJP) ಸಿದ್ದರಾಮಯ್ಯರ (Siddaramaiah) ಒಂದು ಕೂದಲು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಮಾಗಡಿ ಶಾಸಕ ಹೆಚ್‌ಸಿ ಬಾಲಕೃಷ್ಣ (HC Balakrishna) ವಾಗ್ದಾಳಿ ನಡೆಸಿದ್ದಾರೆ.

    ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ (MUDA Scam) ಅನುಮತಿ ನೀಡಿದ ವಿಚಾರದ ಕುರಿತು ಮಾಗಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ಅಂದುಕೊಂಡಿರಲಿಲ್ಲ. ರಾಜ್ಯ ಕಂಡ ಏಕೈಕ ಅತ್ಯುತ್ತಮ ನಾಯಕ ಸಿದ್ದರಾಮಯ್ಯ. ಅಧಿಕಾರ ಇದ್ದ ಸಂದರ್ಭದಲ್ಲಿ ಕುಟುಂಬದವರನ್ನು ಅಕ್ಕಪಕ್ಕ ಸೇರಿಸದೇ ಆಡಳಿತ ಮಾಡಿದ್ದಾರೆ. ಬಿಜೆಪಿಯವರು ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಯುಪಿಯಲ್ಲಿ ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್ ರೈಲು – ತಪ್ಪಿದ ಭಾರಿ ಅನಾಹುತ

    ಸಿದ್ದರಾಮಯ್ಯ ಕಾಲದಲ್ಲಿ ಆಗದೇ ಇರುವ ವಿಚಾರವನ್ನು ಅವರ ಹಣೆಗೆ ಕಟ್ಟುವ ಕೆಲಸ ಆಗುತ್ತಿದೆ. ಬಿಜೆಪಿಯವರಿಗೆ ಸಿದ್ದರಾಮಯ್ಯನ ಜನಪ್ರಿಯತೆ ಸಹಿಸಲು ಆಗುತ್ತಿಲ್ಲ. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ನಮ್ಮ ತಟ್ಟೆಯ ನೊಣದ ಬಗ್ಗೆ ಮಾತನಾಡುತ್ತಾರೆ. ಬಹುಶಃ ಇದರಿಂದ ಅವರಿಗೆ ಯಾವುದೇ ಅನುಕೂಲ ಆಗಲ್ಲ. ದ್ವೇಷದ ರಾಜಕಾರಣ ಮಾಡಿ ರಾಜ್ಯವನ್ನು ಬಾಂಗ್ಲಾ, ಶ್ರೀಲಂಕಾ ಸ್ಥಿತಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಇಷ್ಟೊಂದು ದ್ವೇಷದ ರಾಜಕಾರಣ ಮಾಡಿರೋ ಉದಾಹರಣೆಯೇ ಇಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿಜೆಪಿ ನಾಯಕರ ಆಗ್ರಹ

  • ರಾಮನಗರ ಹೆಸರು ಮರುನಾಮಕರಣಕ್ಕೆ ಜೆಡಿಎಸ್ ವಿರೋಧ ಇಲ್ಲ, ಹಾಸನದವರ ವಿರೋಧ ಇದೆ: ಹೆಚ್‌ಸಿ ಬಾಲಕೃಷ್ಣ

    ರಾಮನಗರ ಹೆಸರು ಮರುನಾಮಕರಣಕ್ಕೆ ಜೆಡಿಎಸ್ ವಿರೋಧ ಇಲ್ಲ, ಹಾಸನದವರ ವಿರೋಧ ಇದೆ: ಹೆಚ್‌ಸಿ ಬಾಲಕೃಷ್ಣ

    ರಾಮನಗರ: ಜಿಲ್ಲೆ ಮರುನಾಮಕರಣಕ್ಕೆ ವಿರೋಧ ಮಾಡುತ್ತಿರುವುದು ಜೆಡಿಎಸ್‌ನವರಲ್ಲ (JDS), ಬದಲಾಗಿ ಹಾಸನದವರು ಎಂದು ಪರೋಕ್ಷವಾಗಿ ಕುಮಾರಸ್ವಾಮಿಗೆ (HD Kumaraswamy) ಮಾಗಡಿ ಶಾಸಕ ಹೆಚ್‌ಸಿ ಬಾಲಕೃಷ್ಣ  (HC Balakrishna) ತಿರುಗೇಟು ನೀಡಿದ್ದಾರೆ.

    ರಾಮನಗರ (Ramanagara) ಜಿಲ್ಲೆ ಮರುನಾಮಕರಣಕ್ಕೆ ಜೆಡಿಎಸ್ ವಿರೋಧ ವಿಚಾರ ಕುರಿತು ಮಾಗಡಿಯಲ್ಲಿ ಮಾತನಾಡಿದ ಅವರು, ಹಾಸನದವರಿಗೆ ಬೆಂಗಳೂರಿನ ಗಮ್ಮತ್ತು ಗೊತ್ತಿಲ್ಲ. ಆದ್ದರಿಂದ ಇದಕ್ಕೆ ವಿರೋಧ ಮಾಡುತ್ತಿದ್ದಾರೆ. ನಮಗೂ ಬೆಂಗಳೂರಿಗೂ ಅವಿನಾಭಾವ ಸಂಬಂಧ ಇದೆ. ನಾವು ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯವರೇ. ರಾಮನಗರ ಹೆಸರು ಬದಲಾವಣೆ ಆದರೆ ಕಚೇರಿಗಳು ಎಲ್ಲೂ ಹೋಗಲ್ಲ. ರಾಮನಗರವೇ ಜಿಲ್ಲಾ ಕೇಂದ್ರವಾಗಿರುತ್ತದೆ. ಆದರೆ ಬೆಂಗಳೂರು ದಕ್ಷಿಣ ಎಂಬ ಹೆಸರು ಬದಲಾವಣೆಗೆ ಮನವಿ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ – ಜನಜೀವನ ಅಸ್ತವ್ಯಸ್ತ

    ಇನ್ನೂ ಮುಡಾ ಬಹುಕೋಟಿ ಹಗರಣ ವಿಚಾರ ಕುರಿತು ಮಾತನಾಡಿ, ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಮುಡಾ ಭೂಸ್ವಾಧೀನ ಮಾಡಿದ ಬಳಿಕ ಜಾಗದ ಮಾಲೀಕರಿಗೆ 50:50 ಅನುಪಾತದಲ್ಲಿ ಸೈಟ್ ಹಂಚುತ್ತಾರೆ. ಅದೇ ರೀತಿ ಸಿಎಂ ಕೂಡ ಸೈಟ್ ಪಡೆದಿದ್ದಾರೆ. ಇಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ ಎಂದು ಹೇಳಿದರು. ಇದನ್ನೂ ಓದಿ: ದೆಹಲಿಯಂತೆ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರ

  • ಒಕ್ಕಲಿಗರು ನಂಬಿದ್ದ ಜೆಡಿಎಸ್ ಅನ್ನು ಮೋದಿ ಪಾದಕ್ಕೆ ಹೆಚ್‌ಡಿಕೆ ಅಡ ಇಟ್ಟಿದ್ದಾರೆ: ಹೆಚ್.ಸಿ ಬಾಲಕೃಷ್ಣ

    ಒಕ್ಕಲಿಗರು ನಂಬಿದ್ದ ಜೆಡಿಎಸ್ ಅನ್ನು ಮೋದಿ ಪಾದಕ್ಕೆ ಹೆಚ್‌ಡಿಕೆ ಅಡ ಇಟ್ಟಿದ್ದಾರೆ: ಹೆಚ್.ಸಿ ಬಾಲಕೃಷ್ಣ

    ರಾಮನಗರ: ಜೆಡಿಎಸ್ ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದು ಒಕ್ಕಲಿಗ ಸಮುದಾಯ. ಒಕ್ಕಲಿಗರೆಲ್ಲಾ ಜೆಡಿಎಸ್ (JDS Party) ಪಕ್ಷವನ್ನ ನಂಬಿದ್ದರು. ಅಂತಹ ಪಕ್ಷವನ್ನು ತೆಗೆದುಕೊಂಡು ಹೋಗಿ ಮೋದಿ ಪಾದಕ್ಕೆ ಅಡ ಇಟ್ಟಿದ್ದೀರಿ. ಈಗ ಒಕ್ಕಲಿಗರ ಸ್ಥಿತಿ ಏನಾಗಬೇಕು ಎಂದು ಹೆಚ್ಡಿಕೆ ವಿರುದ್ಧ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ತಿರುಗೇಟು ನೀಡಿದ್ದಾರೆ.

    ಮೈತ್ರಿ ಸರ್ಕಾರದಲ್ಲಿ ಸಿಎಂ ಕ್ಯಾಂಡಿಡೇಟ್ ಅಂತ ಹೆಚ್‌ಡಿಕೆ ಅವರನ್ನು ಘೋಷಣೆ ಮಾಡಲು ಸಾಧ್ಯವೇ.? ಅವರು ಘೋಷಣೆ ಮಾಡಿಸಲಿ ನಾವೂ ಸಪೋರ್ಟ್ ಮಾಡ್ತೇವೆ. ಒಕ್ಕಲಿಗರ ಪಾರುಪತ್ಯ ಇದ್ದ ಜನತಾದಳದ ಕಥೆ ಮುಗಿಸಿದ್ದಾರೆ. ಈ ಪಕ್ಷವನ್ನ ಮೋದಿ ಪಾದಕ್ಕೆ ಅಡ ಇಟ್ಟಿದ್ದಾರೆ. ಮುಂದೆ ಕುಮಾರಸ್ವಾಮಿ ಅವರ ಸ್ಥಿತಿ ಏನು.? ಈಗ ಎರಡು ಸೀಟ್ ಪಡೆಯೋಕೆ ತಿಣುಕಾಡ್ತಿದ್ದಾರೆ. ಅವರು ಯಾವ ಪಕ್ಷದ ಜೊತೆ ಹೋದರೂ ಅಸಮಾಧಾನ ಹೊರಹಾಕ್ತಾರೆ. ಇನ್ನೂ ಒಂದು ತಿಂಗಳ ಬಳಿಕ ಮೋದಿ, ಅಮಿತ್ ಶಾ ಅವರನ್ನು ಹೇಗೆ ಬೈತಾರೆ ನೋಡಿ. ಅವರು ಎಲ್ಲೋದ್ರು ಕೂಡಾ ಎಲ್ಲರನ್ನೂ ಬೈದುಕೊಂಡೆ ಆಚೆ ಬರ್ತಾರೆ‌ ಎಂದು ಹೆಚ್‌ಡಿಕೆ ವಿರುದ್ಧ ಮಾಗಡಿ ಶಾಸಕ ಹೆಚ್. ಸಿ.ಬಾಲಕೃಷ್ಣ (HC Balakrishna) ವಾಗ್ದಾಳಿ ನಡೆಸಿದ್ದಾರೆ.

    ಕುಮಾರಸ್ವಾಮಿ ಯಾವಾಗಲೂ ಗಿಮಿಕ್ ರಾಜಕಾರಣಿ. ಈ ರೀತಿ ವಿರೋಧಿಗಳ ಮೇಲೆ ಅಪಪ್ರಚಾರ ಮಾಡಿ ಅನುಕಂಪ ಗಿಟ್ಟಿಸಿಕೊಳ್ಳಲು ಮಾತನಾಡ್ತಾರೆ. ಚುನಾವಣೆ ಅಂದಮೇಲೆ ಎಲ್ಲವೂ ಇರುತ್ತೆ. ಚಾಣಕ್ಯನ ತಂತ್ರ ಕುಮಾರಸ್ವಾಮಿಗೆ ಹೆಚ್ಚು ಗೊತ್ತು. ಅದನ್ನ ಇಲ್ಲಿ ಉಪಯೋಗಿಸಿಕೊಳ್ತಿದ್ದಾರೆ. ಅನುಕಂಪದ ಅಲೆ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ. ಇದು ಇನ್ಮುಂದೆ ನಡೆಯಲ್ಲ ಎಂದು ಹೆಚ್‌ಡಿಕೆಗೆ ಬಾಲಕೃಷ್ಣ ತಿರುಗೇಟು ನೀಡಿದ್ದಾರೆ.

  • ಬಿಜೆಪಿ ಸಂಸದರು ಗಂಡಸರಲ್ಲ, ಶೋ ಪೀಸ್‌ಗಳು: ಹೆಚ್‌ಸಿ ಬಾಲಕೃಷ್ಣ ವಿವಾದಾತ್ಮಕ ಹೇಳಿಕೆ

    ಬಿಜೆಪಿ ಸಂಸದರು ಗಂಡಸರಲ್ಲ, ಶೋ ಪೀಸ್‌ಗಳು: ಹೆಚ್‌ಸಿ ಬಾಲಕೃಷ್ಣ ವಿವಾದಾತ್ಮಕ ಹೇಳಿಕೆ

    ರಾಮನಗರ: ಬಿಜೆಪಿ (BJP) ಸಂಸದರೆಲ್ಲಾ ಗಂಡಸರಲ್ಲ, ಶೋ ಪೀಸ್‌ಗಳು. ಕೇವಲ ದೆಹಲಿಗೆ (New Delhi) ಹೋಗೋದು ಟಿಎ-ಡಿಎ ತೆಗೆದುಕೊಂಡು ಬರೋದು ಅಷ್ಟೇ ಇವರ ಕೆಲಸ ಎಂದು ಮಾಗಡಿ ಶಾಸಕ ಹೆಚ್‌ಸಿ ಬಾಲಕೃಷ್ಣ ( HC Balakrishna) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಕೇಂದ್ರದಿಂದ ಅನುದಾನ ತಾರತಮ್ಯ ಖಂಡಿಸಿ ದೆಹಲಿಯಲ್ಲಿ ಹೋರಾಟ ವಿಚಾರ ಕುರಿತು ರಾಮನಗರದ (Ramanagar) ನಾಗರಕಲ್ಲುದೊಡ್ಡಿ ಗ್ರಾಮದಲ್ಲಿ ಮಾತನಾಡಿದ ಅವರು, ಹೆಚ್ಚು ಟ್ಯಾಕ್ಸ್ ಕಟ್ಟುವ ಎರಡನೇ ರಾಜ್ಯ ನಮ್ಮ ಕರ್ನಾಟಕ. ಆದರೆ ನಮಗೆ ಕೊಡಬೇಕಾದ ಅನುದಾನವನ್ನು ಕೇಂದ್ರ ನಮಗೆ ಕೊಡುತ್ತಿಲ್ಲ. ಬಿಜೆಪಿಯ ಸಂಸದರು ನರೇಂದ್ರ ಮೋದಿ (Narendra Modi) ಮುಂದೆ ಕೂರೋದು ಇಲ್ಲ, ಏಳೋದು ಇಲ್ಲ. ಕೇವಲ ಮೋದಿ ಹೆಸರಲ್ಲಿ ಗೆಲ್ಲುತ್ತಾರೆ. ಅವರಿಗೆ ವೈಯಕ್ತಿಕ ವರ್ಚಸ್ಸು ಇಲ್ಲ. ಪಕ್ಕದ ತಮಿಳುನಾಡು ತನ್ನ ಹಕ್ಕಿಗಾಗಿ ಮಾಡುವ ಹೋರಾಟವನ್ನ ನೋಡಿ ಕಲಿಯಲಿ ಎಂದು ಟೀಕೆ ಮಾಡಿದರು. ಇದನ್ನೂ ಓದಿ: ಅಂಧ ಭಕ್ತರು ಹೆಚ್ಚಿರುವ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಹುನ್ನಾರ: ಹರಿಪ್ರಸಾದ್ ವಾಗ್ದಾಳಿ

    ಬಿಜೆಪಿ ಎಂಪಿಗಳು, ಮಂತ್ರಿಗಳು ರಾಜ್ಯದ ಪರ ಧ್ವನಿ ಎತ್ತಿಲ್ಲ. ಹಾಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಪಾಪ ನಮ್ಮ ಹೋರಾಟ ನೋಡಿ ಬಿಜೆಪಿಯ ಗಂಡಸರು ಹೋರಾಟ ಮಾಡುತ್ತಾರಾ ಎಂದು ನೋಡೋಣ. ಮಾಡಿಲ್ಲ ಅಂದರೆ ಬಿಜೆಪಿಯಲ್ಲಿ ಯಾರೂ ಗಂಡಸರು ಇಲ್ಲ ಎಂದರ್ಥ. ಈಗಿರುವ ಬಿಜೆಪಿ ಎಂಪಿಗಳು ಯಾರು ಗಂಡಸರಲ್ಲ ಎಂದು ಬಿಜೆಪಿ ಸಂಸದರನ್ನ ಟೀಕಿಸುವ ಭರದಲ್ಲಿ ಮಾಗಡಿ ಶಾಸಕ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಇದನ್ನೂ ಓದಿ: ಯುಪಿಎ Vs ಎನ್‌ಡಿಎ – ಯಾರ ಅವಧಿಯಲ್ಲಿ ಎಷ್ಟು ಹಣ ಕರ್ನಾಟಕಕ್ಕೆ ಬಂದಿದೆ? – ಬಿಜೆಪಿಯಿಂದ ದಾಖಲೆ ರಿಲೀಸ್‌

  • ಲೋಕಸಭೆಯಲ್ಲಿ ಜನ ಮತ ಹಾಕಿಲ್ಲ ಎಂದರೆ ಗ್ಯಾರಂಟಿ ಅವಶ್ಯಕತೆ ಇಲ್ಲಾ ಎಂದರ್ಥ: ಕಾಂಗ್ರೆಸ್ ಶಾಸಕ

    ಲೋಕಸಭೆಯಲ್ಲಿ ಜನ ಮತ ಹಾಕಿಲ್ಲ ಎಂದರೆ ಗ್ಯಾರಂಟಿ ಅವಶ್ಯಕತೆ ಇಲ್ಲಾ ಎಂದರ್ಥ: ಕಾಂಗ್ರೆಸ್ ಶಾಸಕ

    – ನಾವು ಗ್ಯಾರಂಟಿ ಕೊಟ್ಟಿದ್ದು ಚುನಾವಣೆಗಾಗಿಯೆ ಎಂದ ಹೆಚ್‌ಸಿ ಬಾಲಕೃಷ್ಣ

    ಬೆಂಗಳೂರು: ನಾವು ಗ್ಯಾರಂಟಿ (Guarantee Scheme) ಕೊಟ್ಟಿದ್ದು ಚುನಾವಣೆಗಾಗಿಯೇ. ಲೋಕಸಭೆಯಲ್ಲಿ (Lok Sabha Election) ಜನ ಮತ ಹಾಕಿಲ್ಲ ಎಂದರೆ ಗ್ಯಾರಂಟಿ ಅವಶ್ಯಕತೆ ಇಲ್ಲಾ ಎಂದರ್ಥ ಎಂದು ಮಾಗಡಿ ಶಾಸಕ ಹೆಚ್‌ಸಿ ಬಾಲಕೃಷ್ಣ (HC Balakrishna) ಹೇಳಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್  (Congress) ಪಕ್ಷ ಸೋತರೆ ಗ್ಯಾರಂಟಿಗಳು ರದ್ದಾಗಬಹುದು ಎಂಬ ಬಾಲಕೃಷ್ಣ ಅವರ ಹೇಳಿಕೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಗ್ಯಾರಂಟಿ ಬದಲು ಅಭಿವೃದ್ಧಿಗೆ ಹಣ ಬಳಸಲಿ ಅನ್ನೋದು ನನ್ನ ವೈಯುಕ್ತಿಕ ಅಭಿಪ್ರಾಯ. ನಾವು ಗ್ಯಾರಂಟಿ ಕೊಟ್ಟಿರೋದೇ ಚುನಾವಣೆ ಗೆಲ್ಲೋಕೆ. ಅವರು ದೇವಸ್ಥಾನ ಉದ್ಘಾಟನೆ ಮಾಡಿದ್ದು, ಮಂತ್ರಾಕ್ಷತೆ ಕೊಟ್ಟಿದ್ದು ಚುನಾವಣೆ ಗೆಲ್ಲೋಕೆ. ಬಿಜೆಪಿಯವರು (BJP) ಲೋಕಸಭೆ ಚುನಾವಣೆ ದೃಷ್ಟಿಯಿಂದ ದೇವಸ್ಥಾನ ಉದ್ಘಾಟನೆ ಮಾಡಿದರು. ನಮ್ಮ ದೀಪ ನಾವೆ ಹಚ್ಚಬೇಕು. ನಮ್ಮ ಕುಂಕುಮ ನಮಗೆ ನಾಮ ಹಾಕಿ ಅವರು ಅಧಿಕಾರಕ್ಕೆ ಬಂದರು ಎಂದು ಕಿಡಿಕಾರಿದರು. ಇದನ್ನೂ ಓದಿ: ಡಾ.ಮಂಜುನಾಥ್‌ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿ: ಸಿಎಂಗೆ ಆರ್‌.ಅಶೋಕ್‌ ಮನವಿ

    ಪೂರ್ತಿ ಆಗದ ದೇವಸ್ಥಾನವನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ದು ಚುನಾವಣೆಗಾಗಿ. ಅವರು ಮಾಡಿರುವುದು ಚುನಾವಣೆಗಾಗಿ. ನಾವು ಗ್ಯಾರಂಟಿ ಕೊಟ್ಟಿದ್ದು ಚುನಾವಣೆಗಾಗಿಯೇ. ಸಿಎಂ ಡಿಸಿಎಂ ಇಬ್ಬರ ಹತ್ತಿರವೂ ಈ ವಿಚಾರ ಚರ್ಚೆ ಮಾಡಿದ್ದೇನೆ. ಅವರು ಏನೇ ಹೇಳದಿರಬಹುದು. ನನ್ನ ವೈಯುಕ್ತಿಕ ಅಭಿಪ್ರಾಯ ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಆದರೆ ಜನರಿಗೆ ಗ್ಯಾರಂಟಿ ಬೇಡವಾಗಿದೆ ಎಂದು ತೀರ್ಮಾನ ಮಾಡಬೇಕು ಎಂದರು. ಇದನ್ನೂ ಓದಿ: ಕರ್ತವ್ಯ ಲೋಪ ಆರೋಪ – ವಿಜಯಪುರ ಡಿಡಿಪಿಐ ಅಮಾನತು

    ಗ್ಯಾರಂಟಿಯಿಂದಾಗಿ ಅಭಿವೃದ್ಧಿಗೆ ಹಣ ಕೊರತೆ ಆಗುತ್ತಿದೆ. 60 ಸಾವಿರ ಕೋಟಿ ಹಣ ಗ್ಯಾರಂಟಿಗೆ ಬೇಕು. ಜನ ಈ ಗ್ಯಾರಂಟಿಗೆ ಮತ ಹಾಕಿಲ್ಲ ಎಂದರೆ ಅದೇ ಹಣವನ್ನು ಅಭಿವೃದ್ಧಿಗೆ ಬಳಸೋಣ. ನನ್ನ ಕ್ಷೇತ್ರಕ್ಕೂ 500 ಕೋಟಿ ಅಭಿವೃದ್ಧಿಗೆ ಸಿಗುತ್ತದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಹನುಮಧ್ವಜ ಇಳಿಸಿದಂತೆಯೇ ನಿಮ್ಮನ್ನು ಹಿಂದೂಗಳು ಕುರ್ಚಿಯಿಂದ ಇಳಿಸುವ ದಿನ ದೂರವಿಲ್ಲ: ಸಿಎಂಗೆ ಆರ್.ಅಶೋಕ್ ಠಕ್ಕರ್

  • ಲೋಕಸಭೆ ಚುನಾವಣೆಯಲ್ಲಿ ಮತ ನೀಡದಿದ್ರೆ ಗ್ಯಾರಂಟಿ ಯೋಜನೆ ರದ್ದು: ಚರ್ಚೆಗೆ ಗ್ರಾಸವಾಯ್ತು ಬಾಲಕೃಷ್ಣ ಹೇಳಿಕೆ

    ಲೋಕಸಭೆ ಚುನಾವಣೆಯಲ್ಲಿ ಮತ ನೀಡದಿದ್ರೆ ಗ್ಯಾರಂಟಿ ಯೋಜನೆ ರದ್ದು: ಚರ್ಚೆಗೆ ಗ್ರಾಸವಾಯ್ತು ಬಾಲಕೃಷ್ಣ ಹೇಳಿಕೆ

    ರಾಮನಗರ : ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Loksabha Election) ಮತ ನೀಡದಿದ್ದರೆ ಗ್ಯಾರಂಟಿ ಯೋಜನೆ ರದ್ದು ಎಂದು ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ (HC Balakrishna) ಹೇಳಿದ್ದಾರೆ.

    ಸದ್ಯ ಶಾಸಕರ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮತದಾರರಿಗೆ ಮತ್ತೆ ಬ್ಲ್ಯಾಕ್ ಮೇಲ್ ಮಾಡಿದ್ರಾ ಎಂಬ ಪ್ರಶ್ನೆ ಎದ್ದಿದೆ. ಮಾಗಡಿ ತಾಲೂಕಿನ ಶ್ರೀಗಿರಿಪುರದ ಜನಸಂಪರ್ಕ ಸಭೆ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ ಸುರೇಶ್ ಪರ ಮತ ನೀಡುವಂತೆ ಶಾಸಕರು ತಾಕೀತು ಮಾಡಿದ್ದಾರೆ.

    ಶಾಸಕರು ಹೇಳಿದ್ದೇನು..?: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಗ್ಯಾರಂಟಿ ರದ್ದು ಮಾಡಲಾಗುವುದು. ಬಿಜೆಪಿಯವರು ಅಕ್ಷತೆ ಕಾಳು ನೀಡಿ ಮತ ಕೇಳುತ್ತಿದ್ದಾರೆ. ನಾವು ಐದು ಗ್ಯಾರಂಟಿಗಳನ್ನ ನೀಡಿ ಮತ ಕೇಳುತ್ತಿದ್ದೇವೆ. ಕಾಂಗ್ರೆಸ್ (Congress) ಹೆಚ್ಚು ಸ್ಥಾನ ಗೆಲ್ಲದಿದ್ರೆ ಜನರಿಗೆ ಐದು ಗ್ಯಾರಂಟಿಗಳು ಇಷ್ಟ ಇಲ್ಲ ಅಂತ ಅರ್ಥ. ಹಾಗಾಗಿ ಈ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಜೊತೆಯೂ ಚರ್ಚೆ ಮಾಡಿದ್ದೇನೆ ಎಂದರು.

    ನಿಮ್ಮ ಮತ ಅಕ್ಷತೆ ಕಾಳಿಗಾ ಅಥವಾ ಐದು ಗ್ಯಾರಂಟಿಗಾ (Congress Guarantee) ಯೋಚನೆ ಮಾಡಿ. ಈ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಿದ್ರೆ ಗ್ಯಾರಂಟಿ ಯೋಜನೆ ಮುಂದುವರಿಸುತ್ತೇವೆ. ಒಂದು ವೇಳೆ ಗೆಲ್ಲಿಸದೇ ಇದ್ದರೆ ಗ್ಯಾರಂಟಿ ಯೋಜನೆ ತಿರಸ್ಕಾರ ಮಾಡಿದ್ದೀರಿ ಅಂತ ಅಲ್ವಾ ಎಂದು ಬಾಲಕೃಷ್ಣ ಪ್ರಶ್ನಿಸುವ ಮೂಲಕ ಮತದಾರರಿಗೆ ಮತ ನೀಡುವಂತೆ ಒತ್ತಾಯಿಸಿದ್ದಾರೆ.

  • ಅಮಾಯಕ ಸೈನಿಕರ ಬಲಿ ಪಡೆದ ಕೀರ್ತಿ ಮೋದಿಗೆ ಸಲ್ಲುತ್ತೆ: ಬಾಲಕೃಷ್ಣ ವಾಗ್ದಾಳಿ

    ಅಮಾಯಕ ಸೈನಿಕರ ಬಲಿ ಪಡೆದ ಕೀರ್ತಿ ಮೋದಿಗೆ ಸಲ್ಲುತ್ತೆ: ಬಾಲಕೃಷ್ಣ ವಾಗ್ದಾಳಿ

    ರಾಮನಗರ: ಪ್ರಧಾನಿ ನರೇಂದ್ರ ಮೋದಿಯವ (Narendra Modi) ವಿರುದ್ಧ ಮಾಗಡಿ ಕಾಂಗ್ರೆಸ್ ಶಾಸಕ ಹೆಚ್.ಸಿ ಬಾಲಕೃಷ್ಣ (H.C Balakrishna) ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಮಾಗಡಿ ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಸೈನಿಕರನ್ನು ಬಲಿ ಪಡೆದ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲುತ್ತೆ. ಬಿಜೆಪಿಯವರು ಬ್ರಿಟಿಷರಿದ್ದಂತೆ… ಜನರ ಮಧ್ಯೆ ಗುಂಪು ಕಟ್ಟಿ, ಎತ್ತಿಕಟ್ಟುವ ಕೆಲಸ ಮಾಡುತ್ತಾರೆ ಎಂದು ಹೇಳುವ ಮೂಲಕ ಬಾಲಕೃಷ್ಣ ಅವರು ಬಿಜೆಪಿಯನ್ನು ಬ್ರಿಟೀಷರಿಗೆ ಹೋಲಿಕೆ ಮಾಡಿದರು.

    ಇದೇ ವೇಳೆ ಕುಮಾರಸ್ವಾಮಿ, (HD Kumaraswamy) ದೇವೇಗೌಡರ (HD Devegowda) ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಕುಮಾರಣ್ಣ ಮಾತೆತ್ತಿದ್ರೆ ನಾವು ಜಾತ್ಯಾತೀತ ಅಂತಾರೆ.  ದೇವೇಗೌಡರನ್ನು ಕೋಮುವಾದಿ ಮಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಎಸ್‍ಪಿಗೆ ಬಂದ ಗತಿ, ಕರ್ನಾಟಕದಲ್ಲಿ ಜೆಡಿಎಸ್ ಬರುತ್ತೆ. ಆ ರೀತಿ ಜೆಡಿಎಸ್ ಪಕ್ಷವನ್ನ ಬಿಜೆಪಿಯವರು ಮಾಡದಿದ್ದರೆ, ನಾನು ನನ್ನ ಹೆಸರು ಬದಲಾಯಿಸಿಕೊಳ್ತೀನಿ. ಜೆಡಿಎಸ್ ಎಚ್ಚೆತ್ತುಕೊಳ್ಳದಿದ್ದರೆ ಸಂಪೂರ್ಣ ಅಸ್ಥಿತ್ವವೇ ಮುಗಿಯುತ್ತೆ ಎಂದು ಶಾಸಕರು ಬಿಜೆಪಿ-ಜೆಡಿಎಸ್ ಮೈತ್ರಿಗೆ ಕಿಡಿಕಾರಿದರು. ಇದನ್ನೂ ಓದಿ: ಲೋಕ ಸಮರ ಗೆಲ್ಲಲು ದಳಪತಿ-ಕಮಲ ಸಾರಥಿ ಇನ್‌ಸೈಡ್‌ ಮೀಟಿಂಗ್!

  • ಹೆಚ್‌ಡಿಕೆ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ: ಹೆಚ್‌ಸಿ ಬಾಲಕೃಷ್ಣ

    ಹೆಚ್‌ಡಿಕೆ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ: ಹೆಚ್‌ಸಿ ಬಾಲಕೃಷ್ಣ

    ರಾಮನಗರ: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಮ್ಮ ಆಸ್ತಿ ಮೌಲ್ಯ ಹೆಚ್ಚಿಸಲು ಜಿಲ್ಲೆಗೆ ಮರುನಾಮಕರಣ ಮಾಡುತ್ತಿದ್ದಾರೆ ಎಂಬ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಆರೋಪಕ್ಕೆ ಮಾಗಡಿ ಶಾಸಕ ಹೆಚ್‌ಸಿ ಬಾಲಕೃಷ್ಣ (HC Balakrishna) ಮತ್ತೆ ಸವಾಲು ಹಾಕಿದ್ದಾರೆ.

    ರಾಮಾಯಣದ ಕಥೆ ಹೇಳುವ ಮೂಲಕ ಹೆಚ್‌ಡಿಕೆಗೆ ಟಕ್ಕರ್ ಕೊಟ್ಟಿರೋ ಬಾಲಕೃಷ್ಣ, ನೀವು ಮಾಡಿರೋ ಆರೋಪಗಳನ್ನು ಒಪ್ಪುತ್ತೇವೆ. ಆದರೆ ನೀವು ಸತ್ಯಹರಿಶ್ಚಂದ್ರ ಆಗಿದ್ದರೆ, ಸೀತೆ ಪತಿವ್ರತೆ ಅಂತ ನಿರೂಪಿಸಲು ಅಗ್ನಿಪ್ರವೇಶ ಮಾಡಿದ್ದರು. ಬಳಿಕ ಅಗ್ನಿಯಿಂದ ಸುಡದೇ ಆಚೆ ಬಂದು ಪತಿವ್ರತೆ ಅಂತ ನಿರೂಪಿಸಿದ್ದಳು. ಹಾಗೆಯೇ ನಿಮ್ಮದು ಸತ್ಯಹರಿಶ್ಚಂದ್ರ ಕುಟುಂಬ ಆಗಿದ್ದರೆ ನೀವೂ ಬಂದು ಪ್ರಮಾಣ ಮಾಡಿ ನಿರೂಪಿಸಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಕೇರಳದ ಕಲಮಶ್ಯೆರಿಯಲ್ಲಿ ಬಾಂಬ್ ಸ್ಪೋಟ- ಓರ್ವ ದುರ್ಮರಣ

    ಧರ್ಮಸ್ಥಳದಲ್ಲಿ ಬಂದು ನಾನು ಸರ್ಕಾರದ ಹಣ ತಿಂದಿಲ್ಲ ಎಂದು ಪ್ರಮಾಣ ಮಾಡಿ. ಪ್ರಮಾಣ ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಆರೋಪ ಮಾಡುವುದನ್ನು ಬಿಟ್ಟು ಸತ್ಯ ನಿರೂಪಿಸಿ. ಇಲ್ಲ ಸುಮ್ಮನೆ ಖಾಲಿ ಮಾತನಾಡುವುದನ್ನು ಬಿಡಿ ಎಂದು ಹೆಚ್‌ಡಿಕೆಗೆ ಬಾಲಕೃಷ್ಣ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬಸ್ಥರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]