Tag: HC Balakrishna

  • ರೈತರ ಸಮಸ್ಯೆ ಬಗೆಹರಿಸಲಿಲ್ಲ ಅಂದ್ರೆ ಮುಖಕ್ಕೆ ಹೊಡೆಯುತ್ತೇನೆ – ಅಧಿಕಾರಿಗಳಿಗೆ ಶಾಸಕ ಬಾಲಕೃಷ್ಣ ತರಾಟೆ

    ರೈತರ ಸಮಸ್ಯೆ ಬಗೆಹರಿಸಲಿಲ್ಲ ಅಂದ್ರೆ ಮುಖಕ್ಕೆ ಹೊಡೆಯುತ್ತೇನೆ – ಅಧಿಕಾರಿಗಳಿಗೆ ಶಾಸಕ ಬಾಲಕೃಷ್ಣ ತರಾಟೆ

    ರಾಮನಗರ: ರೈತರ (Farmers) ಸಮಸ್ಯೆ ಬಗೆಹರಿಸಲಿಲ್ಲ ಅಂದರೆ ಮುಖಕ್ಕೆ ಹೊಡೆಯುತ್ತೇನೆ. ನೀವು ಮಾಡುವ ಕೆಲಸಕ್ಕೆ ಜನ ನಮ್ಮ ಮುಖಕ್ಕೆ ಉಗಿಯುತ್ತಿದ್ದಾರೆ ಎಂದು ಜನಸ್ಪಂದನಾ ಸಭೆಯಲ್ಲಿ (Janaspandana Meeting) ಅಧಿಕಾರಿಗಳನ್ನ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ (HC Balakrishna) ತರಾಟೆಗೆ ತೆಗೆದುಕೊಂಡಿದ್ದಾರೆ.

    ಮಾಗಡಿ (Magadi) ತಾಲೂಕು ಕಚೇರಿಯಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಮಾಗಡಿ ತಹಶೀಲ್ದಾರ್ ಶರತ್ ಹಾಗೂ ಎಡಿಎಲ್‌ಆರ್ ಆನಂದ್‌ಗೆ ಶಾಸಕ ಹೆಚ್.ಸಿ.ಬಾಲಕೃಷ್ಣ ಹಿಗ್ಗಾಮುಗ್ಗ ಜಾಡಿಸಿದ್ದಾರೆ. ಸಭೆಯಲ್ಲಿ ಪೋಡಿ ದುರಸ್ತಿ ಬಗ್ಗೆ ಅಧಿಕಾರಿಗಳ ವಿರುದ್ಧ ರೈತ ದೂರು ನೀಡಿದ ಹಿನ್ನೆಲೆ ಆಕ್ರೋಶಗೊಂಡ ಶಾಸಕ, ಅಧಿಕಾರಿಗಳು ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿದ್ದೀರಿ. ಇಬ್ಬರಿಗೂ ಮುಖಕ್ಕೆ ಹೊಡೆಯುತ್ತೇನೆ. ನೀವು ಬಂದಾಗಿನಿಂದ ರೈತರ ಒಂದು ಸಮಸ್ಯೆ ಬಗೆಹರಿಸಲಾಗಿಲ್ಲ. ನಿಮ್ಮಿಬ್ಬರ ಕೆಲಸಕ್ಕೆ ಜನ ನಮ್ಮ ಮುಖಕ್ಕೆ ಉಗಿಯುತ್ತಿದ್ದಾರೆ ಎಂದು ಕ್ಲಾಸ್ ತೆಗೆದುಕೊಂಡರು. ಇದನ್ನೂ ಓದಿ: ಕೊಡಗು | ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಗೂಡ್ಸ್‌ ವಾಹನ ಪಲ್ಟಿ

    ರೈತರ ವಿಚಾರದಲ್ಲಿ ತಮಾಷೆ ಮಾಡುತ್ತಿದ್ದೀರಾ? ರಸ್ತೆಯಲ್ಲಿ ನಿಲ್ಲಿಸಿ ಇಬ್ಬರಿಗೂ ಹಾರ ಹಾಕಿ ಸನ್ಮಾನ ಮಾಡಿಸುತ್ತೇನೆ. ನಾಚಿಕೆ ಆಗಲ್ವಾ ನಿಮಗೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: RSS ಇಂದಿರಾ ಗಾಂಧಿಗೆ ಹೆದರಿಲ್ಲ, ನೆಹರೂ ಮುಂದೆ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?- ಸುನಿಲ್ ಕುಮಾರ್

  • ನಾವು ಸಿದ್ದರಾಮಯ್ಯ ಶಿಷ್ಯರೇ, ಬ್ರೈನ್ ಮ್ಯಾಪಿಂಗ್‌ಗೆ ನಾನು ರೆಡಿ – ರಾಜಣ್ಣ ವಿರುದ್ಧ ಮತ್ತೆ ಕಿಡಿಕಾರಿದ ಮಾಗಡಿ ಬಾಲಕೃಷ್ಣ

    ನಾವು ಸಿದ್ದರಾಮಯ್ಯ ಶಿಷ್ಯರೇ, ಬ್ರೈನ್ ಮ್ಯಾಪಿಂಗ್‌ಗೆ ನಾನು ರೆಡಿ – ರಾಜಣ್ಣ ವಿರುದ್ಧ ಮತ್ತೆ ಕಿಡಿಕಾರಿದ ಮಾಗಡಿ ಬಾಲಕೃಷ್ಣ

    ಬೆಂಗಳೂರು: ಮಾಜಿ ಸಚಿವ ರಾಜಣ್ಣ (KN Rajanna), ಅವರ ಪುತ್ರನ ವಿರುದ್ಧ ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ (HC Balakrishna) ಕಿಡಿಕಾರಿದ್ದಾರೆ. ರಾಜಣ್ಣ ಅವರನ್ನ ವಜಾ ಮಾಡಲಾಗಿದೆ. ಇದರಲ್ಲಿ ಯಾರ ಷಡ್ಯಂತ್ರವೂ ಇಲ್ಲ. ಆದರೆ ರಾಜಣ್ಣ ಷಡ್ಯಂತ್ರ ಅಂತಾ ಹೇಳಿ ಡಿಸಿಎಂ ಮೇಲೆ ಗೂಬೆ ಕೂರಿಸ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಾತಿಗೆ ಮುಂಚೆ ಷಡ್ಯಂತ್ರ ಷಡ್ಯಂತ್ರ ಎಂದು ಹೇಳುತ್ತಾರೆ. ಆರ್‌ಎಸ್‌ಎಸ್ ಗೀತೆ ಹೇಳಿದ್ದಾರಂತೆ, ಅವರ ಮೇಲೆ ಕ್ರಮ ಆಗಬೇಕು ಅಂತಾರೆ. ಅದಕ್ಕೆ ಡಿಕೆಶಿಯವರು (DK Shivakumar) ಸ್ಪಷ್ಟನೆ ಕೊಟ್ಟು, ಕ್ಷಮೆ ಕೇಳಿದ್ದಾರೆ. ಅದಕ್ಕೂ ಇದಕ್ಕೂ ಹೋಲಿಕೆ ಮಾಡೋದಲ್ಲ. ಹೈಕಮಾಂಡ್ ವಿರುದ್ಧ ಸೆಡ್ಡು ಹೊಡೆಯುತ್ತೇನೆ, ಜನರನ್ನ ಕರೆದುಕೊಂಡು ಹೋಗುತ್ತೇನೆ ಅಂದ್ರೆ ಯಾರೂ ಲೆಕ್ಕಕ್ಕಿಲ್ಲ ಅನ್ನೋ ಮಾತಾಡ್ತಾರೆ ಅಲ್ವಾ? ಅದಕ್ಕೆ ನಾನು ಹೇಳಿದ್ದು ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಮುಂದಿನ ಮೂರ್ನಾಲ್ಕು ದಿನ ಬೆಂಗ್ಳೂರಿಗೆ ಮಳೆ ಅಲರ್ಟ್‌

    ರಾಜಣ್ಣಗೆ ಪಕ್ಷ ಅನಿವಾರ್ಯ ಅಲ್ಲ ಅಂತಾ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ ರಾಜಣ್ಣ ಏನೂ ರಿಯಾಕ್ಟ್ ಮಾಡುತ್ತಿಲ್ಲ ಅಲ್ವಾ? ಪಕ್ಷದಿಂದ ನಾನು ಗೆದ್ದಿದ್ದು ಅಂತಾ ಹೇಳಬೇಕಿತ್ತು ಅಲ್ವಾ. ಬ್ರೈನ್ ಮ್ಯಾಪಿಂಗ್‌ಗೆ ನಾನು ರೆಡಿ ಇದ್ದೀನಿ. ಡಿಕೆಶಿ ಪಕ್ಷದ ಇತಿಮಿತಿ ಬಿಟ್ಟು ಏನೂ ಮಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟರು. ನಾವು ಕೂಡ ಸಿದ್ದರಾಮಯ್ಯನವರ ಶಿಷ್ಯರೇ. ಸಿದ್ದರಾಮಯ್ಯ ಹೆಸರೇಳಿ ಓಲೈಕೆ ಮಾಡಿಕೊಳ್ಳಲು ಹೇಳೋದು, ಸಿದ್ದರಾಮಯ್ಯಗೆ ಮುಜುಗರ ಆಗದೇ ಇರೋ ರೀತಿ ನಡೆದುಕೊಳ್ಳಬೇಕಿತ್ತು. ನಿಜವಾದ ಕಾರ್ಯಕರ್ತ, ಸಿದ್ದರಾಮಯ್ಯ ನಿಜವಾದ ಅಭಿಮಾನಿಯಾದರೆ ಅವರಿಗೆ ಮುಜುಗರ ಆಗದ ರೀತಿ ನಡೆದುಕೊಳ್ಳಬೇಕಿತ್ತು. ಕ್ರಾಂತಿ ಬಗ್ಗೆ ರಾಜಣ್ಣ ಬಿಟ್ಟು ಬೇರೆ ಯಾರದರೂ ಹೇಳಿದ್ದಾರಾ? ರಾಹುಲ್ ಗಾಂಧಿಯವರ ಬಗ್ಗೆ, ಅವರ ನಿಲುವಿನ ಬಗ್ಗೆ ಉಡಾಫೆಯಾಗಿ ಮಾತಾಡಬಹುದಾ? ಸುರ್ಜೇವಾಲ ಬಂದರೆ ಕೆಟ್ಟದಾಗಿ ಮಾತನಾಡೋದು ಎಂದು ಕಿಡಿಕಾರಿದರು. ಇದನ್ನೂ ಓದಿ: ದೆಹಲಿಯಲ್ಲಿ ಭಾರೀ ಮಳೆ – ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಯಮುನಾ

    ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬಿಜೆಪಿ ಅವರು ಇದ್ದಾರೆ. ಏಕೆ ಉಳಿಸಿಕೊಂಡಿದ್ದಾರೆ ಅಂತಾ ರಾಜಣ್ಣ ಹೇಳಬೇಕು. ನಮ್ಮ ಪಕ್ಷದವರನ್ನ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಬಹುದಿತ್ತಲ್ವಾ? ಇದಕ್ಕೆ ರಾಜಣ್ಣ ಅವರ ಸುಪುತ್ರ ಹೇಳಬೇಕು. ಯಾರೂ ಸನ್ಯಾಸಿಗಳಲ್ಲ. ಸಿಎಂ ಮಾತನ್ನೂ ಧಿಕ್ಕರಿಸಿ, ಮುಂದುವರೆಸಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಅಲೆಮಾರಿ ಸಮುದಾಯಕ್ಕೆ 1% ಮೀಸಲಾತಿ ಮಾಡಿಸಿ ಕೊಡ್ತೀನಿ – ರಾಯರೆಡ್ಡಿ ಭರವಸೆ

  • ರಾಜಣ್ಣ ಬಿಜೆಪಿಗೆ ಹೋಗಲು ಅರ್ಜಿ ಹಾಕಿದ್ದಾರೆ – ಬಾಲಕೃಷ್ಣ ಸ್ಫೋಟಕ ಹೇಳಿಕೆ

    ರಾಜಣ್ಣ ಬಿಜೆಪಿಗೆ ಹೋಗಲು ಅರ್ಜಿ ಹಾಕಿದ್ದಾರೆ – ಬಾಲಕೃಷ್ಣ ಸ್ಫೋಟಕ ಹೇಳಿಕೆ

    – ಅವರ ಬ್ರೈನ್ ಮ್ಯಾಪಿಂಗ್ ಮಾಡಿದ್ರೆ ಸತ್ಯ ಗೊತ್ತಾಗುತ್ತೆ ಎಂದ ಶಾಸಕ

    ರಾಮನಗರ: ಕೆ.ಎನ್.ರಾಜಣ್ಣ (KN Rajanna) ಬಿಜೆಪಿಗೆ (BJP) ಹೋಗಲು ಅರ್ಜಿ ಹಾಕಿದ್ದಾರೆ. ಅವರ ಬ್ರೈನ್ ಮ್ಯಾಪಿಂಗ್ ಮಾಡಿದ್ರೆ ಸತ್ಯ ಗೊತ್ತಾಗುತ್ತದೆ. ಅವರು ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ರಾಮನಗರದಲ್ಲಿ (Ramanagar) ಮಾಧ್ಯಮದವರೊಂದಿಗೆ ಮಾತನಾಡಿ ಕೆ.ಎನ್.ರಾಜಣ್ಣರನ್ನ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲು ಒತ್ತಡ ಹೇರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ನನಗಿರುವ ಮಾಹಿತಿ ಪ್ರಕಾರ ಕೆ.ಎನ್.ರಾಜಣ್ಣ ಬಿಜೆಪಿಗೆ ಅರ್ಜಿ ಹಾಕಿದ್ದಾರೆ. ಹೈಕಮಾಂಡ್ ವಿರುದ್ಧ ಮಾತನಾಡಿದ್ದಕ್ಕೆ ಅವರು ವಜಾ ಆಗಿದ್ದಾರೆ. ಹೀಗಾಗಿ ಬೇರೆ ಪಕ್ಷಕ್ಕೆ ಹೋಗುವ ಮುನ್ನ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತಿದ್ದಾರೆ. ಈಗೇನೋ ದೆಹಲಿಯಲ್ಲಿ ಸಮಾವೇಶ ಮಾಡ್ತಾರಂತೆ ಮಾಡಲಿ. ಕೆ.ಎನ್.ರಾಜಣ್ಣ ಬಿಜೆಪಿಗೆ ಹೋಗ್ತಿದ್ದಾರೋ? ಇಲ್ವೋ? ಅಂತ ಅವರನ್ನೇ ಕೇಳಿ. ಅವರ ಬ್ರೈನ್ ಮ್ಯಾಪಿಂಗ್ ಮಾಡಿಸಿದ್ರೆ ಎಲ್ಲಾ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ವರುಣಾರ್ಭಟಕ್ಕೆ ಉತ್ತರ ಭಾರತ ತತ್ತರ – ವಿಶೇಷ ಪ್ಯಾಕೇಜ್ ಘೋಷಿಸಲು ಖರ್ಗೆ ಆಗ್ರಹ

    ರಾಜಣ್ಣ ಅವರನ್ನ ಸ್ವಾಗತ ಮಾಡ್ತಿರೋದು ಬಿಜೆಪಿ ನಾಯಕರೇ ಅಲ್ವಾ? ರಾಜಣ್ಣ ಈ ಹಿಂದೆ ನನಗೆ ಯಾವ ಪಕ್ಷದ ಅವಶ್ಯಕತೆಯೂ ಇಲ್ಲ ಅಂದಿದ್ದರು. ಈಗ ಯಾರ ಜೊತೆ ಸಂಪರ್ಕದಲ್ಲಿದ್ದಾರೆ ಅಂತ ಗೊತ್ತಾಗಬೇಕು. ನೂರಕ್ಕೆ ನೂರರಷ್ಟು ಅವರು ಬಿಜೆಪಿಗೆ ಸೇರುತ್ತಾರೆ. ನಮ್ಮ ಸರ್ಕಾರ ಇಲ್ಲ ಅಂದಿದ್ರೆ ಇಷ್ಟೊತ್ತಿಗೆ ಅವರು ಬಿಜೆಪಿ ಸೇರಿರುತ್ತಿದ್ದರು. ಈಗಾಗಲೇ ಒಂದು ಕಾಲು ಅವರು ಬಿಜೆಪಿಯಲ್ಲಿ ಇಟ್ಟಿದ್ದಾರೆ. ಜೊತೆಗೆ ಬಿಜೆಪಿ ಕೇಂದ್ರ, ರಾಜ್ಯ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ.

    ಕೆ.ಎನ್.ರಾಜಣ್ಣ ಮಂತ್ರಿಯಾಗಿದ್ದಾಗ ಯಾವ ರೀತಿ ನಡೆದುಕೊಂಡರು ಎಂದು ಎಲ್ಲರಿಗೂ ಗೊತ್ತಿದೆ. ಅವರ ನಡವಳಿಕೆ, ಮಾತು ಯಾವ ರೀತಿಯಿತ್ತು ಎನ್ನೋದು ಕೂಡ ಗೊತ್ತಿದೆ. ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು ಎನ್ನುವ ಹಾಗೇ ಅವರು ಮಾತಾಡುತ್ತಿದ್ದರು. ಅವರ ಮಾತಿನಿಂದಲೇ ಅವರು ಕೆಟ್ಟಿರೋದು, ಅದರ ಹಿಂದೆ ಯಾರ ಷಡ್ಯಂತ್ರವೂ ಇಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಕಿಡ್ನ್ಯಾಪ್‌ ಜಾಲ ಪತ್ತೆ – ಐವರು ಅರೆಸ್ಟ್‌, 6 ಮಕ್ಕಳ ರಕ್ಷಣೆ

  • ಡಿಕೆ ಶಿವಕುಮಾರ್, ಡಿಕೆ ಸುರೇಶ್ ಆಶೀರ್ವಾದ ಇರೋದಕ್ಕೆ ನನಗೆ ಅನುದಾನ ಸಿಗ್ತಿದೆ: ಹೆಚ್‌ಸಿ ಬಾಲಕೃಷ್ಣ

    ಡಿಕೆ ಶಿವಕುಮಾರ್, ಡಿಕೆ ಸುರೇಶ್ ಆಶೀರ್ವಾದ ಇರೋದಕ್ಕೆ ನನಗೆ ಅನುದಾನ ಸಿಗ್ತಿದೆ: ಹೆಚ್‌ಸಿ ಬಾಲಕೃಷ್ಣ

    ರಾಮನಗರ: ಡಿ.ಕೆ.ಶಿವಕುಮಾರ್ (DK Shivakumar) ಮತ್ತು ಡಿ.ಕೆ.ಸುರೇಶ್ (DK Suresh) ಆಶೀರ್ವಾದ ಇರೋದಕ್ಕೆ ನನಗೆ ಅನುದಾನ ಸಿಗುತ್ತಿದೆ. ನಮಗೆ ತೃಪ್ತಿ ಇದೆ. ಅವರ ಆಶೀರ್ವಾದ ಪಡೆದುಕೊಂಡರೆ ಅನುದಾನ ಸಿಗಬಹುದು ಎಂದು ಮಾಗಡಿ ಶಾಸಕ ಬಾಲಕೃಷ್ಣ (HC Balakrishna) ತಿಳಿಸಿದ್ದಾರೆ.

    ಸರ್ಕಾರದ ವಿರುದ್ಧ ಕಾಂಗ್ರೆಸ್ (Congress) ಶಾಸಕರ ಅಸಮಾಧಾನ ವಿಚಾರ ಕುರಿತು ಬಿಡದಿಯಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನ ಹಿರಿಯ ಶಾಸಕರಲ್ಲಿ ಮನವಿ ಮಾಡುತ್ತೇನೆ. ನಿಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು, ಸಿಎಂ ಭೇಟಿ ಮಾಡಿ. ನಿಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿ. ಬಜೆಟ್‌ನಲ್ಲಿ ಪ್ರತಿ ಶಾಸಕರಿಗೂ 50 ಕೋಟಿ ಹಣ ಕೊಡಿ ಅಂತ ಸಿಎಂ ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಎಲ್ಲಾ ಕ್ಷೇತ್ರಕ್ಕೂ ಅನುದಾನ ಬರುತ್ತೆ. ರಾಜಿನಾಮೆ ಕೊಡ್ತೀನಿ ಅನ್ನೋದು ಕೆಲವರ ವೈಯಕ್ತಿಕ ಅಭಿಪ್ರಾಯ. ಅದನ್ನ ಸೂಕ್ತ ವೇದಿಕೆಯಲ್ಲಿ ವ್ಯಕ್ತಪಡಿಸಬೇಕು ಎಂದರು. ಇದನ್ನೂ ಓದಿ: PublicTV Explainer: ಫಾಸ್ಟ್ಯಾಗ್ 3,000 ರೂ. ವಾರ್ಷಿಕ ಪಾಸ್‌ – ನಿಮಗೆ ಲಾಭನಾ, ನಷ್ಟನಾ?


    ಇನ್ನೂ ಸಿಎಂ ಬಳಿ ಈಗ ಹಣ ಇಲ್ಲ, ಕೇಂದ್ರದ ಬಳಿ ಕೇಳಬೇಕು ಎಂಬ ಪರಮೇಶ್ವರ್ (G Parameshwar) ಹೇಳಿಕೆ ವಿಚಾರ ಕುರಿತು ಮಾತನಾಡಿ, ಕೇಂದ್ರದಿಂದ ನಮಗೆ ಬರಬೇಕಾದ ಹಣ ಬಂದಿಲ್ಲ. ಕೇಂದ್ರದವರು ನಮಗೆ ಹಣ ಕೊಡಬೇಕು. ನಮ್ಮ ಹತ್ತಿರವೂ ಹಣ ಇದೆ, ಅದರ ಜೊತೆ ಅವರೂ ಕೊಟ್ಟರೆ ಹೆಚ್ಚು ಅಭಿವೃದ್ಧಿ ಮಾಡಬಹುದು. ಇದು ಪರಮೇಶ್ವರ್ ಅವರ ಮಾತಿನ ಅರ್ಥ. ಕೇಂದ್ರದ ಹಣಕ್ಕೆ ಹಿಂದೆಯಿಂದಲೂ ಒತ್ತಾಯ ಮಾಡಿದ್ದೇವೆ. ದೆಹಲಿಗೂ ಹೋಗಿ ಹಣ ಕೇಳಿದ್ದೇವೆ, ಅವರು ಹಣ ಕೊಟ್ಟರೆ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಬಹುದು ಎಂದು ಪರಮೇಶ್ವರ್ ಹೇಳಿಕೆಯನ್ನ ಸಮರ್ಥಿಸಿಕೊಂಡರು. ಇದನ್ನೂ ಓದಿ: `ಕೈ’ ಕಂಪನ ಸಂಕಟ: 2 ವರ್ಷ ಗ್ಯಾರಂಟಿ ಪಿರಿಯೆಡ್, ವೇಯ್ಟಿಂಗ್ ಪಿರಿಯೆಡ್ ಮುಗಿತು, ಇನ್ನೇನಿದ್ರೂ ಫೈಟಿಂಗ್ ಪಿರಿಯೆಡ್!

    ಕೆಲವೊಂದು ಸಂದರ್ಭಗಳಲ್ಲಿ ಏರುಪೇರು ಆದಾಗ ಮನಸ್ಸಿಗೆ ಬೇಸರ ಆಗುತ್ತೆ. ಬೇಸರ ಆಗುವುದರಿಂದ ಸಮಸ್ಯೆ ಬಗೆಹರಿಯಲ್ಲ. ಸಿಎಂ, ಡಿಸಿಎಂ ಜೊತೆ ಕೂತು ಮಾತುಕತೆ ಮಾಡಬೇಕು. ರಾಜಿನಾಮೆ ಕೊಟ್ರೆ, ಇನ್ನೊಬ್ಬ ಎಂಎಲ್‌ಎ ಆಗುತ್ತಾನೆ. ರಾಜಿನಾಮೆ ಕೊಟ್ರೆ ಸಮಸ್ಯೆ ಬಗೆಹರಿಯುತ್ತಾ? ಜನ ಆಶೀರ್ವಾದ ಮಾಡಿದ್ದಾರೆ, ನಾವು ಕೆಲಸ ಮಾಡಬೇಕು. ಸಿಎಂ, ಡಿಸಿಎಂ ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡು ಅನುದಾನ ತರಬೇಕು. ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬುದು ಅವರ ಸಮಸ್ಯೆ, ಹಣ ಕೊಟ್ಟಿಲ್ಲ ಎಂದು ಅವರು ಹೇಳುತ್ತಿಲ್ಲ ಎಂದರು. ಇದನ್ನೂ ಓದಿ: ಸಾಹಿತಿ ಪ್ರೊ.ದೊಡ್ಡ ರಂಗೇಗೌಡರ ಆರೋಗ್ಯ ವಿಚಾರಿಸಿದ ಸಚಿವ ಶಿವರಾಜ ತಂಗಡಗಿ

  • ಕಾಶ್ಮೀರದ ಉಗ್ರರ ದಾಳಿ ಹೊಣೆಯನ್ನ ಕೇಂದ್ರ ಸರ್ಕಾರವೇ ಹೊರಬೇಕು: ಹೆಚ್.ಸಿ ಬಾಲಕೃಷ್ಣ

    ಕಾಶ್ಮೀರದ ಉಗ್ರರ ದಾಳಿ ಹೊಣೆಯನ್ನ ಕೇಂದ್ರ ಸರ್ಕಾರವೇ ಹೊರಬೇಕು: ಹೆಚ್.ಸಿ ಬಾಲಕೃಷ್ಣ

    – ಯಾರು ಅಮಾಯಕರ ರಕ್ಷಣೆ ಮಾಡಬೇಕಿತ್ತೋ ಅವರು ಮಾಡಿಲ್ಲ; ಶಾಸಕ

    ರಾಮನಗರ: ಜಮ್ಮು-ಕಾಶ್ಮೀರ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ (Pahalgam Terror Attack) ಹೊಣೆಯನ್ನು ಕೇಂದ್ರ ಸರ್ಕಾರವೇ ಹೊರಬೇಕು ಎಂದು ಮಾಗಡಿ ಶಾಸಕ ಹೆಚ್‌.ಸಿ ಬಾಲಕಷ್ಣ (HC Balakrishna) ಹೇಳಿದ್ದಾರೆ.

    ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿಕೆಗೆ ಸಹಮತ ವ್ಯಕ್ತಪಡಿಸುತ್ತೇನೆ. ಇದರಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ. ಯಾವ ಸರ್ಕಾರ ಅಧಿಕಾರದಲ್ಲಿ ಇರುತ್ತೋ ಅದೇ ಸರ್ಕಾರ ಹೊಣೆ ಹೊರಬೇಕು. ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆ ಫೆಲ್ಯೂರ್ ಆಗಿದೆ. ಹಾಗಾಗಿ ಅಮಾಯಕರು ಬಲಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ಮಂತ್ರಾಲಯದಿಂದ ತಲಾ 1 ಲಕ್ಷ ಪರಿಹಾರ

    ಕಾಶ್ಮೀರದಲ್ಲಿ ಪ್ರವಾಸಿಗರಿಗೆ ರಕ್ಷಣೆ ನೀಡಬೇಕಿತ್ತು. ಕೆಂದ್ರದಲ್ಲಿ ಅಧಿಕಾರ ನಡೆಸುವವರೇ ಇದಕ್ಕೆ ಜವಾಬ್ದಾರಿ. ಮೃತರ ಕುಟುಂಬಕ್ಕೆ ಇಡೀ ರಾಜ್ಯ ಸರ್ಕಾರ ಸಾಂತ್ವನ ಹೇಳಿದೆ. ಸಿಎಂ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಸಂತೋಷ್ ಲಾಡ್ ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರನ್ನ ರಕ್ಷಣೆ ಮಾಡಿದ್ದಾರೆ. ನಾವು ನಮ್ಮ ಕೆಲಸ ಮಾಡಿದ್ದೇವೆ. ಯಾರು ಅಮಾಯಕರ ರಕ್ಷಣೆ ಮಾಡಬೇಕಿತ್ತೋ ಅವರು ಮಾಡಿಲ್ಲ ಎಂಬುದು ದೂರು ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: Pahalgam Terrorist Attack | ರಾಜನಾಥ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಶುರು – ರಾಹುಲ್‌, ಖರ್ಗೆ ಭಾಗಿ

    ಕೇಂದ್ರ ಗೃಹ ಮಂತ್ರಿಗಳು ಈಗ ಆ ಜಾಗಕ್ಕೆ ಹೋದ್ರೆ ಸತ್ತವರು ಬದುಕಿ ಬರೋಲ್ಲ. ಘಟನೆ ನಡೆಯದ ಹಾಗೆ ತಡೆಯುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಮುಗಿದ ಮೇಲೆ ಸಾಂತ್ವನ ಎಲ್ಲರೂ ಹೇಳುತ್ತಾರೆ‌. ಘಟನೆ ನಡೆಯುವ ಮುನ್ನವೇ ಮಿಲಿಟರಿ ನಿಯೋಜನೆ ಮಾಡಬೇಕಿತ್ತು. ಸೂಕ್ಷ್ಮ ಪ್ರದೇಶದಲ್ಲಿ ಹೇಗೆ ಕಾರ್ಯ ನಿರ್ವಹಣೆಯ ಮಾಡಬೇಕೆಂದು ಕೇಂದ್ರಕ್ಕೆ ಗೊತ್ತಿರಲಿಲ್ವಾ? ಎಂದು ಕೇಂದ್ರ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ‘ರಾಮಾಯಣ’ ಚಿತ್ರ ಕೈಬಿಟ್ಟಿದ್ಯಾಕೆ ಶ್ರೀನಿಧಿ ಶೆಟ್ಟಿ?- ಇಂಟ್ರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ‘ಕೆಜಿಎಫ್ 2’ ನಟಿ

  • ನಟಿ ರನ್ಯಾಗೆ KIADB ಜಾಗ ಕೊಟ್ಟಿದ್ದೇ ಬಿಜೆಪಿ, ಈಗ ಕಾಂಗ್ರೆಸ್ ಮೇಲೆ ಆರೋಪ ಮಾಡೋ ನೈತಿಕತೆ ಅವರಿಗಿಲ್ಲ: ಹೆಚ್.ಸಿ ಬಾಲಕೃಷ್ಣ

    ನಟಿ ರನ್ಯಾಗೆ KIADB ಜಾಗ ಕೊಟ್ಟಿದ್ದೇ ಬಿಜೆಪಿ, ಈಗ ಕಾಂಗ್ರೆಸ್ ಮೇಲೆ ಆರೋಪ ಮಾಡೋ ನೈತಿಕತೆ ಅವರಿಗಿಲ್ಲ: ಹೆಚ್.ಸಿ ಬಾಲಕೃಷ್ಣ

    – ಅಲ್ಪಸಂಖ್ಯಾತರಿಗೆ ಕೊಟ್ಟಿರೋದು 4 ಸಾವಿರ ಕೋಟಿ, ಬಜೆಟ್ ಗಾತ್ರ 4 ಲಕ್ಷ ಕೋಟಿ ಎಂದ ಶಾಸಕ

    ರಾಮನಗರ: ಗೋಲ್ಡ್‌ ಸ್ಮಗ್ಲಿಂಗ್ ಕೇಸ್‌ನಲ್ಲಿ ಬಂಧನವಾಗಿರುವ ನಟಿ ರನ್ಯಾಗೆ (Ranya Rao) ಕಾಂಗ್ರೆಸ್ ಸಚಿವರು ಬೆಂಬಲ ನೀಡ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ರಾಮನಗರದಲ್ಲಿ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ (HC Balakrishna) ತಿರುಗೇಟು ನೀಡಿದ್ದಾರೆ.

    ನಟಿಗೆ ಈ ಹಿಂದೆ ಜಾಗ ಕೊಟ್ಟಿದ್ದೇ ಬಿಜೆಪಿ ಸರ್ಕಾರ. ಕೆಐಎಡಿಬಿಯಿಂದ (KIADB) ಜಾಗ ಕೊಟ್ಟ ಬಿಜೆಪಿ ಈಗ ನಮ್ಮ ವಿರುದ್ಧ ಆರೋಪ ಮಾಡ್ತಿದೆ. ಯಾರಾದ್ರೂ ಬಂದು ಸಹಕಾರ ಕೇಳ್ತಾರೆ. ಸಹಾಯ ಕೇಳಿಕೊಂಡು ಬಂದಾಗ ಯಾರು ಕಳ್ರು, ಯಾರು ಒಳ್ಳೆಯವರು ಗೊತ್ತಾಗಲ್ಲ. ಅವರು ಕದ್ದು ಸಿಕ್ಕಿಬಿದ್ದ ಮೇಲೆ ಕಳ್ಳರು ಅಂತ ಗೊತ್ತಾಗೋದು. ಆ ನಟಿಗೆ ಜಾಗ ಕೊಟ್ಟ ಬಿಜೆಪಿಗೆ ನಮ್ಮ ಮೇಲೆ ಆರೋಪ ಮಾಡುವ ನೈತಿಕತೆ ಇಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡ್ತಿದ್ದಾರೆ. ಅವರು ರಾಜಕೀಯಕ್ಕೆ ಬಂದಿರೋದು ಅಭಿವೃದ್ಧಿ ಮಾಡೋಕಲ್ಲ. ಕೇವಲ ಕ್ಷುಲ್ಲಕ ರಾಜಕಾರಣ ಮಾಡೊದಕ್ಕೆ ಅಷ್ಟೇ ಎಂದು ಬಿಜೆಪಿ ನಾಯಕರ ಆರೋಪಕ್ಕೆ ಹೆಚ್.ಸಿ ಬಾಲಕೃಷ್ಣ ಟಾಂಗ್ ನೀಡಿದ್ದಾರೆ.

    ಇನ್ನೂ ರಾಜ್ಯ ಬಜೆಟ್ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದ ವಿಚಾರ ಕುರಿತು ಮಾತನಾಡಿದ ಅವರು, ಅಲ್ಪಸಂಖ್ಯಾತರಿಗೆ ಅನುದಾನ ಕೊಟ್ಟಿದ್ದಕ್ಕೆ ಬಿಜೆಪಿಯವ್ರು ಪ್ರತಿಭಟನೆ ಮಾಡಿದ್ದಾರೆ. ಅಲ್ಪಸಂಖ್ಯಾತರಿಗೆ ಕೊಟ್ಟಿರೋದು 4 ಸಾವಿರ ಕೋಟಿ, ನಮ್ಮ ಬಜೆಟ್ ಗಾತ್ರ 4 ಲಕ್ಷ ಕೋಟಿ. ಕೇವಲ ಒಂದು ಪರ್ಸೆಂಟ್ ಅಷ್ಟೇ ಕೊಟ್ಟಿದ್ದಕ್ಕೆ ಇವರಿಗೆ ಸಹಿಸಲು ಆಗ್ತಿಲ್ಲ. ಎಲ್ಲಾ ರೀತಿಯ ಅಭಿವೃದ್ಧಿಗೂ ಈ ಬಜೆಟ್ ಪೂರಕ. ಮಾಗಡಿಯಲ್ಲಿ ಆಸ್ಪತ್ರೆ ಅಭಿವೃದ್ಧಿಗೆ 45 ಕೋಟಿ ಹಣ ಕೊಟ್ಟಿದ್ದಾರೆ. ರಸ್ತೆ, ಮಾರುಕಟ್ಟೆ ಅಭಿವೃದ್ಧಿ, ರೇಷ್ಮೆ ಬೆಳೆಗೆ ಪ್ರೋತ್ಸಾಹ ಎಲ್ಲವನ್ನೂ ನಮ್ಮ ಸರ್ಕಾರ ಕೊಟ್ಟಿದೆ. ಮತ ನೀಡಿರೋ ಜನರಿಗೆ ಕೆಲಸ ಮಾಡ್ತಿದ್ದೇವೆ. ನಿಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆಯೂ ಹೇಳಿ ಸರಿ ಮಾಡ್ತೇವೆ. ಕೇವಲ ಜನರನ್ನ ದಿಕ್ಕುತಪ್ಪಿಸುವ ಕೆಲಸವನ್ನ ಬಿಜೆಪಿ ಮಾಡ್ತಿದೆ. ರಾಜ್ಯದಲ್ಲಿ 500 ಕೆಪಿಎಸ್ ಶಾಲೆಗಳನ್ನ ತೆರೆಯಲಾಗ್ತಿದೆ. ನಮ್ಮ ಜಿಲ್ಲೆಗೆ 30 ಪಬ್ಲಿಕ್ ಶಾಲೆಗಳು ಬರುತ್ತೆ. ಗ್ಯಾರಂಟಿ ಜೊತೆಗೆ ಅಭಿವೃದ್ಧಿಗೂ ಹಣ ನೀಡ್ತಿದ್ದೇವೆ ಎಂದು ಬಿಜೆಪಿ ಆರೋಪಕ್ಕೆ ಬಾಲಕೃಷ್ಣ ತಿರುಗೇಟು ನೀಡಿದ್ದಾರೆ.

    ಇನ್ನೂ ಇದು ಸಿದ್ದರಾಮಯ್ಯನವರ ಕೊನೆಯ ಬಜೆಟ್ ಎಂಬ ಬಿಜೆಪಿ ಟೀಕೆ ವಿಚಾರ ಕುರಿತು ಮಾತನಾಡಿ, ಬಿಜೆಪಿಯವರಿಗೆ ಮಾತನಾಡುವ ತೆವಲು, ಮಾತನಾಡಲಿ. ಇದು ಕೊನೆಯದ್ದೋ ಅಥವಾ ಮೊದಲದ್ದೋ ತೀರ್ಮಾನ ಮಾಡೊದು ನಮ್ಮ ಹೈಕಮಾಂಡ್. ರಾಜ್ಯದಲ್ಲಿ ನಮ್ಮ ಯಜಮಾನಿಕೆ ನಡೆಯುತ್ತಿದೆ. ಈ ಮೂರು ವರ್ಷ ಅಲ್ಲದೇ ಇನ್ನೂ ಐದು ವರ್ಷ ನಮ್ಮ ಯಜಮಾನಿಕೆ ನಡೆಯುತ್ತೆ. ಕಾಂಗ್ರೆಸ್ ನವರು ಯಜಮಾನ ಆಗ್ತಾರೆ, ಯಜಮಾನ ಯಾರು ಅಂತ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಬಾಲಕೃಷ್ಣ ತಿಳಿಸಿದ್ದಾರೆ.

  • ಹೆಚ್‌ಡಿಕೆ ಕೇಂದ್ರ ಮಂತ್ರಿಯಾಗಿ ರಾಜ್ಯಕ್ಕೆ ಯಾವುದೇ ಅನುದಾನ ತಂದಿಲ್ಲ: ಹೆಚ್‌ಸಿ ಬಾಲಕೃಷ್ಣ

    ಹೆಚ್‌ಡಿಕೆ ಕೇಂದ್ರ ಮಂತ್ರಿಯಾಗಿ ರಾಜ್ಯಕ್ಕೆ ಯಾವುದೇ ಅನುದಾನ ತಂದಿಲ್ಲ: ಹೆಚ್‌ಸಿ ಬಾಲಕೃಷ್ಣ

    – ನಿಮ್ಮ ಮೇಲಿನ ನಿರೀಕ್ಷೆ ಹುಸಿಯಾಗಿದೆ ಎಂದ ಮಾಗಡಿ ಶಾಸಕ

    ರಾಮನಗರ: ಕುಮಾರಸ್ವಾಮಿ (HD Kumaraswamy) ಕೇಂದ್ರ ಮಂತ್ರಿ ಆದ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಆ ನಿರೀಕ್ಷೆಗಳೆಲ್ಲ ಹುಸಿಯಾಗಿವೆ ಎಂದು ಮಾಗಡಿ ಶಾಸಕ ಹೆಚ್‌ಸಿ ಬಾಲಕೃಷ್ಣ (HC Balakrishna) ಹೇಳಿದ್ದಾರೆ.

    ಕೃಷಿಗೆ ಗ್ಯಾರಂಟಿ ಹಣ ಕೊಟ್ಟರೆ ರಾಜ್ಯ ಹೆಚ್ಚು ಅಭಿವೃದ್ಧಿ ಆಗುತ್ತೆ ಎಂಬ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಗ್ಯಾರಂಟಿ ಯೋಜನೆಗೆ ಅನುದಾನ ಕೊಟ್ಟಿದ್ದೇವೆ. ಕೇಂದ್ರ ಸಚಿವ ಕುಮಾರಸ್ವಾಮಿ ಕೃಷಿಗೆ ಅನುದಾನ ನೀಡಲಿ. ಅವರೇ ಅದರ ಕ್ರೆಡಿಟ್ ಕೂಡಾ ತೆಗೆದುಕೊಳ್ಳಲಿ. ಕೃಷಿಗೆ ವಿಶೇಷ ಅನುದಾನ ತರುವಂತೆ ಮನವಿ ಮಾಡುತ್ತೇನೆ ಎಂದರು. ಇದನ್ನೂ ಓದಿ:  ಅನೈತಿಕ ಸಂಬಂಧ ಶಂಕೆ – ಪತ್ನಿ, ಸ್ನೇಹಿತನನ್ನು ಕಡಿದು ಹಾಕಿದ ಪತಿ

    ಮಂಡ್ಯ ಭಾಗದಲ್ಲಿ ರಸ್ತೆ ಮಾಡಿಸುತ್ತಿದ್ದಾರೆ ಅಷ್ಟೇ ಬಿಟ್ಟರೆ ರಾಜ್ಯಕ್ಕೆ ಯಾವುದೇ ವಿಶೇಷ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಮೇಕೆದಾಟು ಯೋಜನೆ, ರೈತರಿಗೆ ವಿಶೇಷ ಅನುದಾನ, ನೀರಾವರಿ ಯೋಜನೆಯನ್ನ ಮಾಡಿಲ್ಲ. ಮೀಸಲಿಟ್ಟ ಭದ್ರಾ ಮೇಲ್ದಂಡೆ ಯೋಜನೆಯ 5,000 ಕೋಟಿ ಅನುದಾನ ಬಿಡುಗಡೆ ಮಾಡಿಸಿಲ್ಲ. ಕುಮಾರಸ್ವಾಮಿ ಎಲ್ಲರ ರೀತಿ ಮಂತ್ರಿಯಾಗಬಾರದು. ವಿಭಿನ್ನ ಕಾರ್ಯ ಚಟುವಟಿಕೆಗಳನ್ನ ತೋರಿಸಿ ರಾಜ್ಯಕ್ಕೆ ಅನುಕೂಲ ಮಾಡಬೇಕು ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ; ನಾವು ಫಿಲ್ಟರ್ ಮಾಡ್ತಿಲ್ಲ, ಎಲ್ಲರಿಗೂ ಹಣ ಸಿಗುತ್ತೆ: ಲಕ್ಷ್ಮಿ ಹೆಬ್ಬಾಳ್ಕರ್

  • ರಸ್ತೆ ತಿರುವಿನಲ್ಲಿ ಆಟೋ ಪಲ್ಟಿ – ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದ ಹೆಚ್‌ಸಿ ಬಾಲಕೃಷ್ಣ

    ರಸ್ತೆ ತಿರುವಿನಲ್ಲಿ ಆಟೋ ಪಲ್ಟಿ – ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದ ಹೆಚ್‌ಸಿ ಬಾಲಕೃಷ್ಣ

    ರಾಮನಗರ: ರಸ್ತೆ ತಿರುವಿನಲ್ಲಿ ಆಟೋ (Auto) ಪಲ್ಟಿಯಾಗಿ ಆಟೋದಲ್ಲಿದ್ದ ಪ್ರಯಾಣಿಕರ ಗಾಯಗೊಂಡ ಹಿನ್ನೆಲೆ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ (HC Balakrishna) ತಕ್ಷಣ ಗಾಯಾಳುಗಳ ನೆರವಿಗೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ.

    ಮದ್ದೂರಿನ (Maddur) ತಿಮ್ಮದಾಸ್ ಹೋಟೆಲ್ ಮುಂಭಾಗ ಕುಣಿಗಲ್ ರಸ್ತೆಯ ತಿರುವಿನಲ್ಲಿ ಪ್ಯಾಸೆಂಜರ್ ಆಟೋವೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಅದೇ ಮಾರ್ಗವಾಗಿ ಮದ್ದೂರಿನ ಕಡೆಗೆ ಹೋಗುತ್ತಿದ್ದ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ, ತಕ್ಷಣ ತಾವೇ ಕಾರಿನಿಂದ ಇಳಿದು ಸ್ಥಳೀಯರ ಸಹಾಯದಿಂದ ಆಟೋವನ್ನು ಮೇಲಕ್ಕೆ ಎತ್ತಿದ್ದಾರೆ. ಬಳಿಕ ಆಟೋದಲ್ಲಿದ್ದ 6 ಮಂದಿ ಪ್ರಯಾಣಿಕರನ್ನು ಸಮಾಧಾನ ಪಡಿಸಿ ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ರವಾನಿಸಿದ್ದಾರೆ. ಇದನ್ನೂ ಓದಿ: ಅಡಿಗೆ 10 ರೂ. ಬದಲು 1,000 ರೂ. ವಸೂಲಿ – ಕಿವಿ ಓಲೆ ಅಡ ಇಟ್ಟು ಸುಂಕ ಕಟ್ಟಿದ ಅಜ್ಜಿ

    ಅಲ್ಲದೇ ಕೂಡಲೇ ಪಿಡಬ್ಲ್ಯೂಡಿ ಎಂಜಿನಿಯರ್‌ಗೆ ಕರೆಮಾಡಿ ತಿರುವಿನ ರಸ್ತೆಗೆ ಹಂಪ್ ನಿರ್ಮಾಣ ಮಾಡುವಂತೆ ಸೂಚನೆ ನೀಡಿದ್ದಾರೆ. ಶಾಸಕ ಹೆಚ್.ಸಿ.ಬಾಲಕೃಷ್ಣ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮುದ್ದಿನ ಬೆಕ್ಕು ಸಾವು – ಮೃತದೇಹದ ಜೊತೆ 2 ದಿನ ಕಳೆದು ಮಹಿಳೆ ನೇಣಿಗೆ ಶರಣು

  • ಕೆಎನ್ ರಾಜಣ್ಣ ಬಾಯಿ ಚಪಲಕ್ಕೆ ಮಾತನಾಡಬಾರದು: ಹೆಚ್.ಸಿ ಬಾಲಕೃಷ್ಣ

    ಕೆಎನ್ ರಾಜಣ್ಣ ಬಾಯಿ ಚಪಲಕ್ಕೆ ಮಾತನಾಡಬಾರದು: ಹೆಚ್.ಸಿ ಬಾಲಕೃಷ್ಣ

    ರಾಮನಗರ: ರಾಜಣ್ಣ (KN Rajanna) ಬಾಯಿ ಚಪಲಕ್ಕೆ, ತಮ್ಮ ತೆವಲು ತೀರಿಸಿಕೊಳ್ಳಲು ಈ ರೀತಿ ಹೇಳಿಕೆ ಕೊಡಬಾರದು ಎಂದು ಮಾಗಡಿ ಶಾಸಕ ಬಾಲಕೃಷ್ಣ (Magadi Balakrishna) ಎಚ್ಚರಿಕೆ ನೀಡಿದ್ದಾರೆ.

    ಮಾಗಡಿಗೆ ಹೇಮಾವತಿ (Hemavathi) ನೀರು ಕೊಡಲ್ಲ ಎಂಬ ಸಚಿವ ರಾಜಣ್ಣ ಹೇಳಿಕೆಗೆ ಬಾಲಕೃಷ್ಣ ಕೆಂಡಾಮಂಡಲವಾಗಿದ್ದಾರೆ. ತುಮಕೂರಿನಲ್ಲಿ (Tumakuru) ಹೈನುಗಾರಿಕೆ ಮಾಡುವ ಜನ ನಮ್ಮ ಕುದೂರಿನಲ್ಲಿ ಹಾಲು ಮಾರಾಟ ಮಾಡುತ್ತಿದ್ದಾರೆ. ತುಮಕೂರು ಹಾಲು ಉತ್ಪನ್ನ ಬೆಂಗಳೂರಿನಲ್ಲಿ ಅರ್ಧ ಭಾಗ, ನಮ್ಮ ಕುದೂರಿನಲ್ಲಿ ಅರ್ಧ ಭಾಗ ಮಾರಾಟ ಆಗುತ್ತಿದೆ. ನಾವು ಅದನ್ನು ಏನಾದರೂ ತಡೆದು ನಿಲ್ಲಿಸಿದ್ರೆ ಹೇಗೆ? ನಿಮ್ಮ ಹಾಲು ಬೇಡ, ನಿಮ್ಮ ನೀರು ಬೇಡ ಅಂತಾ ತಡೆದು ನಿಲ್ಲಿಸಿದ್ರೆ ಅದರಿಂದ ಹಾನಿ ಆಗೋದು ತುಮಕೂರಿನ ರೈತರಿಗೆ. ಅದನ್ನು ನಾವು ಮಾಡಬೇಕಾ ಎಂದು ಕಿಡಿಕಾರಿದರು. ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಯುವಕ, ಯುವತಿ ಸಾವು ಕೇಸ್‌ಗೆ ಟ್ವಿಸ್ಟ್ – ಹುಡ್ಗಿ ಕೊಲೆ ಮಾಡಿ ಹುಡ್ಗ ಸೂಸೈಡ್!

    ರಾಜಣ್ಣ ಅವರು ವಿವೇಚನೆಯಿಂದ ಮಾತನಾಡಬೇಕು. ಅವರು ಹಿರಿಯ ಮಂತ್ರಿಗಳು, ಈ ರೀತಿ ಬಾಲಿಷ ಹೇಳಿಕೆಯನ್ನ ನೀಡಬಾರದು. ಅದೇನೇ ಹೇಳೊದು ಇದ್ದರೂ ಸರ್ಕಾರದ ಹಂತದಲ್ಲಿ ಹೇಳಬೇಕು. ಕೊಡೋದೆ ಇಲ್ಲ, ಬಿಡೋದೆ ಇಲ್ಲ ಅಂದರೆ ಹೇಗೆ? ತುಮಕೂರಿನಿಂದ ಬರುವ ಹಾಲು ನಾವು ನಿಲ್ಲಿಸಿದ್ರೆ ಹೇಗೆ? ಇದು ಒಕ್ಕೂಟದ ವ್ಯವಸ್ಥೆ, ಒಂದೇ ದೇಶ, ಒಂದೇ ರಾಜ್ಯದಲ್ಲಿ ಬದುಕುತ್ತಿದ್ದೇವೆ. ಒಬ್ಬ ಹಿರಿಯ ಸಚಿವರಾಗಿ ಈ ರೀತಿ ಚಿಲ್ಲರೆ ಹೇಳಿಕೆ ಕೊಡಬಾರದು. ತೆವಲು ತೀರಿಸಿಕೊಳ್ಳಲು ಈ ರೀತಿ ಮಾತನಾಡಬಾರದು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜಮೀನಿಗೆ ಬಂದ ಜೀವಂತ ಮೊಸಳೆ ಸೆರೆ – ಜೆಸ್ಕಾಂ ಕಚೇರಿ ಬಳಿ ತಂದು ರೈತರ ಪ್ರತಿಭಟನೆ

  • ಡಿಕೆಶಿ ಮುಂದಿನ ಸಿಎಂ ಎಂದು ಪರೋಕ್ಷವಾಗಿ ಸುಳಿವು ಕೊಟ್ಟ ಮಾಗಡಿ ಬಾಲಕೃಷ್ಣ

    ಡಿಕೆಶಿ ಮುಂದಿನ ಸಿಎಂ ಎಂದು ಪರೋಕ್ಷವಾಗಿ ಸುಳಿವು ಕೊಟ್ಟ ಮಾಗಡಿ ಬಾಲಕೃಷ್ಣ

    ರಾಮನಗರ: ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲು ಡಿಕೆ ಶಿವಕುಮಾರ್ (DK Shivakumar) ಸಿದ್ಧರಾಗಿದ್ದಾರೆ ಎಂಬ ಮೂಲಕ ಪರೋಕ್ಷವಾಗಿ ಮುಂದಿನ ಸಿಎಂ ಡಿಕೆ ಶಿವಕುಮಾರ್ ಎಂಬ ಸುಳಿವನ್ನು ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ (HC Balakrishna) ನೀಡಿದ್ದಾರೆ.

    ಚನ್ನಪಟ್ಟಣದಲ್ಲಿ (Channapatna) ನಡೆದ ಕಾಂಗ್ರೆಸ್ (Congress) ಕೃತಜ್ಞತಾ ಸಮಾವೇಶದಲ್ಲಿ ಸ್ವಾಗತ ಭಾಷಣ ಮಾಡುವ ವೇಳೆ ಬಾಲಕೃಷ್ಣ ಈ ಮಾತನ್ನು ಆಡಿದ್ದಾರೆ. ಮುಂದುವರಿದು ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಕ್ಷೇತ್ರದ ಜನರು ನಮ್ಮ ಕೈ ಹಿಡಿದಿದ್ದಾರೆ. ನಮ್ಮ ಅಭ್ಯರ್ಥಿ ಮಾಜಿ ಪ್ರಧಾನಿಗಳ ಮೊಮ್ಮಗ ಅಲ್ಲ. ಸಾಧಾರಣ ಮೇಷ್ಟ್ರ ಮಗ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತನೆ ಇರುವ ವ್ಯಕ್ತಿ. ಇಂತಹ ವ್ಯಕ್ತಿಯನ್ನು ಕ್ಷೇತ್ರದ ಜನ ಆಯ್ಕೆ ಮಾಡಿ ಪಕ್ಷದ ಮರ್ಯಾದೆ ಹೆಚ್ಚಿಸಿದ್ದಾರೆ ಎಂದರು. ಇದನ್ನೂ ಓದಿ: ಕಾಲ್ತುಳಿತ ಪ್ರಕರಣ – ಮರಣೋತ್ತರ ಪರೀಕ್ಷೆ ನಡೆಸದೇ ಯುಪಿ ಸರ್ಕಾರದಿಂದ ಡೆತ್ ಸರ್ಟಿಫಿಕೇಟ್

    ಕ್ಷೇತ್ರದ ಅಭಿವೃದ್ಧಿಗೆ ಚುನಾವಣೆಗೂ ಮುನ್ನವೇ 500 ಕೋಟಿ ಯೋಜನೆಗಳಿಗೆ ಚಾಲನೆ ಕೊಡಲಾಗಿತ್ತು. ಇವತ್ತು ಸಿದ್ದರಾಮಯ್ಯ ಬಂದಿದ್ದರೆ ಮತ್ತೊಂದಷ್ಟು ಅನುದಾನದ ಬಗ್ಗೆ ಮನವಿ ಮಾಡಬಹುದಿತ್ತು. ಬಜೆಟ್ ಬಳಿಕ ಮತ್ತೊಮ್ಮೆ ಅವರನ್ನು ಕ್ಷೇತ್ರಕ್ಕೆ ಕರೆತರುವ ಪ್ರಯತ್ನ ಮಾಡೋಣ. ನಾವು ಚುನಾವಣಾ ಪೂರ್ವದಲ್ಲಿ ನಮ್ಮ ಜಿಲ್ಲೆಯ ಮಕ್ಕಳಿಗೆ ವೋಟ್ ಹಾಕಿ ಎಂದು ಕೇಳಿದ್ದೆವು. ಅದಕ್ಕೆ ಮನ್ನಣೆ ನೀಡಿ ಈ ಜಿಲ್ಲೆಯ ಮಕ್ಕಳ ಮರ್ಯಾದೆ ಉಳಿಸಿದ್ದೀರಿ. ಅದಕ್ಕಾಗಿ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇವೆ. ಹಿಂದೆ 3 ತಿಂಗಳಿಗೋ, 6 ತಿಂಗಳಿಗೋ ಬರುವ ಶಾಸಕರಿದ್ದರು. ಈಗ ನಿತ್ಯ ಕ್ಷೇತ್ರದಲ್ಲೇ ಇರುವ ಶಾಸಕರು ಸಿಕ್ಕಿದ್ದಾರೆ ಎಂದು ಪರೋಕ್ಷವಾಗಿ ಹೆಚ್‌ಡಿಕೆಗೆ ಟಾಂಗ್ ನೀಡಿದರು. ಇದನ್ನೂ ಓದಿ:  ತಿಂಗಳಿಂದ ಕುಡಿಯಲು ಕಲುಷಿತ ನೀರು – ಬನ್ನೇರುಘಟ್ಟ ಗ್ರಾಪಂ ಅಧಿಕಾರಿಗಳ ವಿರುದ್ಧ ಜನಾಕ್ರೋಶ