Tag: Hayley Matthews

  • ಗುಜರಾತ್‌ ವಿರುದ್ಧ ಮುಂಬೈಗೆ 47 ರನ್‌ಗಳ ಭರ್ಜರಿ ಜಯ –  ಶನಿವಾರ ಡೆಲ್ಲಿ ವಿರುದ್ಧ ಫೈನಲ್‌

    ಗುಜರಾತ್‌ ವಿರುದ್ಧ ಮುಂಬೈಗೆ 47 ರನ್‌ಗಳ ಭರ್ಜರಿ ಜಯ – ಶನಿವಾರ ಡೆಲ್ಲಿ ವಿರುದ್ಧ ಫೈನಲ್‌

    ಮುಂಬೈ: ಹೇಲಿ ಮ್ಯಾಥ್ಯೂಸ್ (Hayley Matthews) ಆಲ್‌ರೌಂಡರ್‌ ಆಟದಿಂದಾಗಿ ಎಲಿಮಿನೆಟರ್‌ (Eliminator) ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ (Gujarat Giants) ವಿರುದ್ಧ 47 ರನ್‌ಗಳ ಭರ್ಜರಿ ಜಯ ಸಾಧಿಸಿದ ಮುಂಬೈ (Mumbai Indians) ಡಬ್ಲ್ಯೂಪಿಎಲ್‌ ಫೈನಲ್‌ ಪ್ರವೇಶಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ 4 ವಿಕೆಟ್‌ ನಷ್ಟಕ್ಕೆ 213 ರನ್‌ ಹೊಡೆಯಿತು. ಕಠಿಣ ಸವಾಲನ್ನು ಬೆನ್ನಟ್ಟಿದ ಗುಜರಾತ್‌ 19.2 ಓವರ್‌ಗಳಲ್ಲಿ 166 ರನ್‌ಗಳಿಗೆ ಆಲೌಟ್‌ ಆಯ್ತು.

    ಈ ಗೆಲುವಿನೊಂದಿಗೆ ಮುಂಬೈ ಎರಡನೇ ಬಾರಿ ಫೈನಲ್‌ ಪ್ರವೇಶಿಸಿದಂತಾಯಿತು. 2023 ರಲ್ಲಿ ನಡೆದ ಮೊದಲ ಆವೃತ್ತಿ ಮುಂಬೈ ಡೆಲ್ಲಿಯನ್ನು ಸೋಲಿಸಿ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಶನಿವಾರ ಫೈನಲ್‌ನಲ್ಲಿ ಅದೇ ಡೆಲ್ಲಿ ವಿರುದ್ಧ ಸೆಣಸಾಡಲಿದೆ.

    ಗುಜರಾತ್‌ ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತ್ತು. 43 ರನ್‌ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್‌ ಕಳೆದುಕೊಂಡಿತ್ತು. ಹೇಲಿ ಮ್ಯಾಥ್ಯೂಸ್ 3 ವಿಕೆಟ್‌, ಅಮೆಲಿಯಾ ಕೆರ್ 2 ವಿಕೆಟ್‌ ಪಡೆದರು.

    ಮುಂಬೈ ಪರ ಯಸ್ತಿಕಾ ಭಾಟಿಯಾ 15 ರನ್‌ ಗಳಿಸಿ ಔಟಾದರೂ ಎರಡನೇ ವಿಕೆಟಿಗೆ ಹೇಲಿ ಮ್ಯಾಥ್ಯೂಸ್ ಮತ್ತು ನ್ಯಾಟ್ ಸಿವರ್-ಬ್ರಂಟ್ 71 ಎಸೆತಗಳಲ್ಲಿ 133 ರನ್‌ ಜೊತೆಯಾಟವಾಡಿದರು.

    ಹೇಲಿ ಮ್ಯಾಥ್ಯೂಸ್ 77 ರನ್‌(50 ಎಸೆತ, 10 ಬೌಂಡರಿ, 3 ಸಿಕ್ಸರ್‌) ಹೊಡೆದರೆ ನ್ಯಾಟ್ ಸಿವರ್-ಬ್ರಂಟ್ 77 ರನ್‌( 41 ಎಸೆತ, 10 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರು. ಕೊನೆಯಲ್ಲಿ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur) 36 ರನ್‌( 12 ಎಸೆತ, 2 ಬೌಂಡರಿ, 4 ಸಿಕ್ಸರ್‌) ಸಿಡಿಸಿದ ಪರಿಣಾಮ ಮುಂಬೈ ತಂಡ 200 ರನ್‌ಗಳ ಗಡಿಯನ್ನು ದಾಟಿತ್ತು.

     

  • ಬಲಿಷ್ಠ ಮುಂಬೈಗೆ ಮೊದಲ ಸೋಲು – ಯುಪಿ ವಾರಿಯರ್ಸ್‌ಗೆ 5 ವಿಕೆಟ್‌ಗಳ ರೋಚಕ ಜಯ

    ಬಲಿಷ್ಠ ಮುಂಬೈಗೆ ಮೊದಲ ಸೋಲು – ಯುಪಿ ವಾರಿಯರ್ಸ್‌ಗೆ 5 ವಿಕೆಟ್‌ಗಳ ರೋಚಕ ಜಯ

    ಮುಂಬೈ: ಗೆಲುವಿನ ಹಾದಿಯಲ್ಲಿ ಮುನ್ನುಗ್ಗುತ್ತಿದ್ದ ಮುಂಬೈ ಇಂಡಿಯನ್ಸ್‌ಗೆ (Mumbai Indians) ಅಂತೂ ಯುಪಿ ವಾರಿಯರ್ಸ್‌ ತಂಡ ಸೋಲಿನ ರುಚಿ ತೋರಿಸಿದೆ. ಸೋಫಿ ಎಕ್ಲಿಸ್ಟೋನ್‌ ಮಿಂಚಿನ ಬೌಲಿಂಗ್‌ ಹಾಗೂ ಮೆಕ್‌ಗ್ರಾತ್‌, ಹ್ಯಾರಿಸ್‌ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಯುಪಿ ವಾರಿಯರ್ಸ್‌ (UP Warriorz) 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    ಶನಿವಾರ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಹರ್ಮನ್‌ ಪ್ರೀತ್‌ ಕೌರ್‌ ಪಡೆ ನಿಗದಿತ ಓವರ್‌ಗಳಲ್ಲಿ 127 ರನ್‌ ಗಳಿಗೆ ಸರ್ವಪತನ ಕಂಡಿತು. 128 ರನ್‌ಗಳ ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್‌ 19.3 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 129 ರನ್‌ ಗಳಿಸಿ ಜಯ ಸಾಧಿಸಿತು. ಇದನ್ನೂ ಓದಿ: ರಾಮ್‌ ಚರಣ್‌ಗೆ ವಿರಾಟ್‌ ಕೊಹ್ಲಿ ಬಯೋಪಿಕ್‌ನಲ್ಲಿ ನಟಿಸುವಾಸೆಯಂತೆ

    ಚೇಸಿಂಗ್‌ ಆರಂಭಿಸಿದ ನಾಯಕಿ ಅಲಿಸ್ಸಾ ಹೀಲಿ (Alyssa Healy) ಹಾಗೂ ದೇವಿಕಾ ವೈದ್ಯ ಬೇಗನೆ ಔಟಾಗಿ ತಂಡಕ್ಕೆ ಆಘಾತ ನೀಡಿದರು. ದೇವಿಕಾ 1 ರನ್‌, ಹೀಲಿ 8 ರನ್‌ ಗಳಿಸಿದರೆ, ಈ ಬೆನ್ನಲ್ಲೇ ಕಿರಣ್ ನವಗಿರೆ 12 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ತಾಲಿಯಾ ಮೆಕ್‌ಗ್ರಾತ್‌ ಹಾಗೂ ಗ್ರೇಸ್ ಹ್ಯಾರಿಸ್ ಜೋಡಿ ಭರ್ಜರಿ ಬ್ಯಾಟಿಂಗ್‌ ಮಾಡುವ ಮೂಲಕ ತಂಡವನ್ನು ಗೆಲುವಿನ ಹಾದಿಗೆ ತಂದರು.

    ಮೆಕ್‌ಗ್ರಾತ್‌ 25 ಎಸೆತಗಳಲ್ಲಿ 38 ರನ್‌ (6 ಬೌಂಡರಿ, 1 ಸಿಕ್ಸರ್‌) ಚಚ್ಚಿದರೆ, ಹ್ಯಾರಿಸ್‌ 28 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 39 ರನ್‌ ಬಾರಿಸಿ ತಂಡಕ್ಕೆ ನೆರವಾದರು. ಕೊನೆಯಲ್ಲಿ ದೀಪ್ತಿ ಶರ್ಮಾ 13 ರನ್‌, ಸೋಫಿ ಎಕ್ಲಿಸ್ಟೋನ್‌ ಅಜೇಯ 16 ರನ್‌ ಗಳಿಸಿ ಜಯ ದಾಖಲಿಸಿದರು.

    ಮುಂಬೈ ಪರ ಅಮೇಲಿ ಕೇರ್‌ 2 ವಿಕೆಟ್‌ ಪಡೆದರೆ, ನಾಟ್‌ ಸ್ಕಿವರ್‌ ಬ್ರಂಟ್‌, ಹೇಲಿ ಮ್ಯಾಥಿವ್ಸ್‌, ಇಸ್ಸಿವಾಂಗ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: IPL 2023: RCB ತಂಡಕ್ಕೆ ಆನೆ ಬಲ – ವಿಲ್‌ ಜಾಕ್ಸ್‌ ಬದಲಿಗೆ ಕಿವೀಸ್‌ ಸ್ಟಾರ್‌ ಆಲ್‌ರೌಂಡರ್‌ ಸೇರ್ಪಡೆ

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌, ಯುಪಿ ವಾರಿಯರ್ಸ್‌ ಬೌಲರ್‌ಗಳ ದಾಳಿಗೆ ತತ್ತರಿಸಿತು. ಹೇಲಿ ಮ್ಯಾಥಿವ್ಸ್‌ (Hayley Matthews) 30 ಎಸೆತಗಳಲ್ಲಿ 35 ರನ್‌ (1 ಬೌಂಡರಿ, 3 ಸಿಕ್ಸರ್‌), ಇಸ್ಸಿ ವಾಂಗ್‌ 19 ಎಸೆತಗಳಲ್ಲಿ ಸ್ಫೋಟಕ 32 ರನ್‌ (4 ಬೌಂಡರಿ, 1 ಸಿಕ್ಸರ್‌) ಹಾಗೂ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur) 22 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 25 ರನ್‌ ಗಳಿಸಿದರೆ, ಉಳಿದ ಅಗ್ರಕ್ರಮಾಂಕದ ಬ್ಯಾಟರ್‌ಗಳು ಕಳಪೆ ಪ್ರದರ್ಶನ ತೋರಿದರು. ಅಂತಿಮವಾಗಿ ಮುಂಬೈ 127 ರನ್‌ ಗಳಿಗೆ ಓವರ್‌ ಸಮಾಪ್ತಿಯೊಂದಿಗೆ ಆಲೌಟ್‌ ಆಯಿತು.

    ಯುಪಿ ವಾರಿಯರ್ಸ್‌ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಸೋಫಿ ಎಕ್ಲಿಸ್ಟೋನ್‌ 4 ಓವರ್‌ಗಳಲ್ಲಿ ಕೇವಲ 15 ರನ್‌ ನೀಡಿ 3 ವಿಕೆಟ್‌ ಕಿತ್ತರು. ದೀಪ್ತಿ ಶರ್ಮಾ ಹಾಗೂ ರಾಜೇಶ್ವರಿ ಗಾಯಕ್ವಾಡ್‌ ತಲಾ 2 ವಿಕೆಟ್‌ ಪಡೆದರೆ, ಅಂಜಲಿ ಸರ್ವಾನಿ 1 ವಿಕೆಟ್‌ ಪಡೆದು ಮಿಂಚಿದರು.

  • ಡೆಲ್ಲಿಗೆ ಡಿಚ್ಚಿ – ಬೌಲರ್‌ಗಳ ಆಟದಲ್ಲಿ ಮುಂಬೈಗೆ 8 ವಿಕೆಟ್‌ಗಳ ಸುಲಭ ಜಯ

    ಡೆಲ್ಲಿಗೆ ಡಿಚ್ಚಿ – ಬೌಲರ್‌ಗಳ ಆಟದಲ್ಲಿ ಮುಂಬೈಗೆ 8 ವಿಕೆಟ್‌ಗಳ ಸುಲಭ ಜಯ

    ಮುಂಬೈ: ಸಾಂಘಿಕ ಬೌಲಿಂಗ್‌ ಪ್ರದರ್ಶನದಿಂದ ಮುಂಬೈ ಇಂಡಿಯನ್ಸ್‌ (Mumbai Indians) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ 8 ವಿಕೆಟ್‌ಗಳ ಸುಲಭ ಜಯ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ಕಳಪೆ ಬ್ಯಾಟಿಂಗ್‌ ಪ್ರದರ್ಶನದಿಂದ 18 ಓವರ್‌ಗಳಲ್ಲಿ 105 ರನ್‌ಗಳಿಗೆ ಸರ್ವಪತನ ಕಂಡಿತು. 106 ರನ್‌ಗಳ ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur) ನಾಯಕತ್ವದ ಮುಂಬೈ ಇಂಡಿಯನ್ಸ್‌ ತಂಡ 15 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 109 ರನ್‌ ಗಳಿಸಿ ಸುಲಭ ಜಯ ಸಾಧಿಸಿತು. ಈ ಮೂಲಕ ಪಾಯಿಂಟ್ಸ್‌ ಟೇಬಲ್‌ ಪಟ್ಟಿಯಲ್ಲಿ ಹ್ಯಾಟ್ರಿಕ್‌ ಗೆಲುವು ದಾಖಲಿಸಿ ಅಗ್ರ ಸ್ಥಾನಕ್ಕೇರಿತು.

    ಆರಂಭಿಕರಾಗಿ ಕಣಕ್ಕಿಳಿದ ಹೇಲಿ ಮ್ಯಾಥ್ಯೂಸ್‌ (Hayley Matthews), ಯಸ್ತಿಕಾ ಭಾಟಿಯಾ ನಿಧಾನಗತಿಯಲ್ಲಿ ಬ್ಯಾಟಿಂಗ್‌ ಆರಂಭಿಸಿದರೂ ಉತ್ತಮ ರನ್‌ ಕಲೆಹಾಕುವಲ್ಲಿ ಯಶಸ್ವಿಯಾದರು. ಮುಂಬೈ ಮೊದಲ ವಿಕೆಟ್‌ ಪತನಕ್ಕೆ 8.5 ಓವರ್‌ಗಳಲ್ಲಿ 65 ರನ್‌ ಕಲೆಹಾಕಿತು. ಈ ವೇಳೆ ಯಸ್ತಿಕಾ ಭಾಟಿಯಾ 32 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 41 ರನ್‌ ಗಳಿಸಿ ಔಟಾದರು. ಈ ಬೆನ್ನಲ್ಲೇ ಹೇಲಿ ಮ್ಯಾಥ್ಯೂಸ್‌ ಸಹ 31 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ 32 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ನಂತರ ಜೊತೆಗೂಡಿದ ನ್ಯಾಟ್ ಸ್ಕಿವರ್-ಬ್ರಂಟ್ ಹಾಗೂ ಹರ್ಮನ್‌ಪ್ರೀತ್‌ ಕೌರ್‌ ಜೋಡಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಯಿತು. ಸ್ಕಿವರ್‌ 19 ಎಸೆತಗಳಲ್ಲಿ 4 ಬೌಂಡರಿ ಸಹಿತ 23 ರನ್‌ ಚಚ್ಚಿದರೆ, ಕೌರ್‌ 11 ರನ್‌ ಗಳಿಸಿದರು. ಇತರೇ ರೂಪದಲ್ಲಿ 2 ರನ್‌ ತಂಡಕ್ಕೆ ಸೇರ್ಪಡೆಯಾಯಿತು.

    ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ತಂಡ ಮುಂಬೈ ಬೌಲರ್‌ಗಳ ದಾಳಿಗೆ ತತ್ತರಿಸಿತು. ಶಫಾರ್ಲಿ ವರ್ಮಾ (Shafali Verma) ಕೇವಲ 2 ರನ್‌ಗಳಿಸಿ ಔಟಾಗುವ ಮೂಲಕ ಡೆಲ್ಲಿ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಬಳಿಕ ಏಕಾಂಗಿ ಹೋರಾಟ ನಡೆಸಿದ ನಾಯಕಿ ಮೆಗ್‌ ಲ್ಯಾನಿಂಗ್‌ 41 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 43 ರನ್‌ ಗಳಿಸಿದರು. ಇದರೊಂದಿಗೆ ಜೆಮಿಮಾ ರೊಡ್ರಿಗಸ್‌ 25 ರನ್‌ (18 ಎಸೆತ, 3 ಬೌಂಡರಿ) ಗಳಿಸಿ ಸಾತ್‌ ನೀಡಿದರು. ಕೊನೆಯಲ್ಲಿ ಕ್ರೀಸ್‌ಗಿಳಿದ ರಾಧಾ ಯಾದವ್‌ 10 ರನ್‌ ಗಳಿಸಿದ್ರೆ, ಉಳಿದ ಎಲ್ಲ ಬ್ಯಾಟರ್‌ಗಳು ಒಂದಂಕಿ ರನ್‌ಗಳಿಸಿ ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿದರು.

    ಪರಿಣಾಮ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ರನ್‌ ಕಲೆಹಾಕಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 105 ಗಳಿಸಿ ಮುಂಬೈಗೆ ಸುಲಭ ತುತ್ತಾಯಿತು.

    ಬೌಲರ್‌ಗಳ ಕಮಾಲ್‌: ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಸಾಂಘಿಕ ಪ್ರದರ್ಶನ ನೀಡಿದ ಬೌಲರ್‌ಗಳು ಅತ್ಯಲ್ಪ ಮೊತ್ತಕ್ಕೆ ಡೆಲ್ಲಿ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಸೈಕಾ ಇಶಾಕ್, ಇಸೀ ವಾಂಗ್ ಹಾಗೂ ಹೇಲಿ ಮ್ಯಾಥ್ಯೂಸ್ ತಲಾ 3 ವಿಕೆಟ್ ಕಬಳಿಸಿದರೆ, ಪೂಜಾ ವಸ್ತ್ರಾಕರ್ ಒಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.