Tag: HAWAII

  • ರಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ – ಸುನಾಮಿ ಎಚ್ಚರಿಕೆ

    ರಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ – ಸುನಾಮಿ ಎಚ್ಚರಿಕೆ

    – ಕೇವಲ 1 ಗಂಟೆಯಲ್ಲಿ 5 ಬಾರಿ ಪ್ರಬಲ ಭೂಕಂಪ

    ಮಾಸ್ಕೋ: ಒಂದು ಗಂಟೆ ಅವಧಿಯಲ್ಲಿ 5 ಪ್ರಬಲ ಭೂಕಂಪಗಳು ಸಂಭವಿಸಿದ ಪರಿಣಾಮ, ಹವಾಯಿಯ (Hawaii) ರಷ್ಯಾಕ್ಕೆ (Russia) ಸುನಾಮಿ ಎಚ್ಚರಿಕೆ ನೀಡಲಾಗಿದೆ.

    ಯುಎಸ್ ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರವು, ರಷ್ಯಾದ ದೂರದ ಪೂರ್ವದ ಕಮ್ಚಟ್ಕಾದ ಪೂರ್ವ ಕರಾವಳಿಯಲ್ಲಿ ಭಾನುವಾರ ರಷ್ಯಾ ಮತ್ತು ಹವಾಯಿಯ ಕೆಲವು ಭಾಗಗಳಿಗೆ ಸುನಾಮಿ (Tsunami) ಎಚ್ಚರಿಕೆ ನೀಡಿದೆ. ಭೂಕಂಪಗಳು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿವೆ. ಇದನ್ನೂ ಓದಿ: 20 ವರ್ಷ ಕೋಮಾದಲ್ಲಿದ್ದ ಸೌದಿ ರಾಜಕುಮಾರ `ಸ್ಲೀಪಿಂಗ್ ಪ್ರಿನ್ಸ್’ ನಿಧನ

    ಜರ್ಮನ್ ಸಂಶೋಧನಾ ಕೇಂದ್ರ ಜಿಯೋ ಸೈನ್ಸಸ್ (ಜಿಎಫ್‌ Z ಡ್) 6.7 ತೀವ್ರತೆಯಲ್ಲಿ ಭೂಕಂಪವಾಗಿದೆ ಎಂದು ವರದಿ ಮಾಡಿತ್ತು. ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ (ಇಎಂಎಸ್ಸಿ) ಮತ್ತು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) 7.4 ತೀವ್ರತೆಯಲ್ಲಿ ಭೂಕಂಪವಾಗಿದೆ ಎಂದು ವರದಿ ಮಾಡಿವೆ.

    ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ಪ್ರಕಾರ, ಈ ಪ್ರದೇಶದಲ್ಲಿ ಒಟ್ಟು ಐದು ಭೂಕಂಪಗಳು ಸಂಭವಿಸಿವೆ. ಎಲ್ಲವೂ ಸುಮಾರು 10 ಕಿಲೋಮೀಟರ್ ಆಳದಲ್ಲಿವೆ. ಇದನ್ನೂ ಓದಿ: ವಿಯೆಟ್ನಾಂನಲ್ಲಿ ಪ್ರವಾಸಿ ದೋಣಿ ಮಗುಚಿ 34 ಮಂದಿ ಸಾವು – ಹಲವರು ಮಿಸ್ಸಿಂಗ್‌

    ಎಲ್ಲೆಲ್ಲೆ ಎಷ್ಟು ತೀವ್ರತೆಯಲ್ಲಿ ಭೂಕಂಪ?
    ಮ್ಯಾಗ್ನಿಟ್ಯೂಡ್ 6.6 (ಪೆಟ್ರೋಪಾವ್ಲೋವ್ಸ್ಕ್-ಕಾಮ್ಚಾಟ್ಸ್ಕಿಯ 147 ಕಿಮೀ ಇ, ರಷ್ಯಾ)
    ಮ್ಯಾಗ್ನಿಟ್ಯೂಡ್ 6.7 (ಪೆಟ್ರೋಪಾವ್ಲೋವ್ಸ್ಕ್-ಕಾಮ್ಚಾಟ್ಸ್ಕಿಯ 151 ಕಿಮೀ ಇ, ರಷ್ಯಾ)
    ಮ್ಯಾಗ್ನಿಟ್ಯೂಡ್ 7.4 (ಪೆಟ್ರೋಪಾವ್ಲೋವ್ಸ್ಕ್-ಕಾಮ್‌ಚಾಟ್ಸ್ಕಿಯ 144 ಕಿಮೀ ಇ, ರಷ್ಯಾ)
    ಮ್ಯಾಗ್ನಿಟ್ಯೂಡ್ 6.7 (ಪೆಟ್ರೋಪಾವ್ಲೋವ್ಸ್ಕ್-ಕಾಮ್‌ಚಾಟ್ಸ್ಕಿಯ 130 ಕಿಮೀ ಇ, ರಷ್ಯಾ)
    ಮ್ಯಾಗ್ನಿಟ್ಯೂಡ್ 7 (ಪೆಟ್ರೋಪಾವ್ಲೋವ್ಸ್ಕ್-ಕಾಮ್‌ಚಾಟ್ಸ್ಕಿಯ 142 ಕಿಮೀ ಇ, ರಷ್ಯಾ)

    ಅಧಿಕಾರಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಭೂಕಂಪಗಳಿಂದ ಗಮನಾರ್ಹ ಹಾನಿ ಅಥವಾ ಸಾವುನೋವುಗಳ ಬಗ್ಗೆ ಈವರೆಗೆ ಯಾವುದೇ ವರದಿಗಳು ಬಂದಿಲ್ಲ.

  • ದೊಡ್ಡ ದೊಡ್ಡ ಡ್ರೋನ್ ಬಳಸಿ ಹವಾಯ್‌ಗೆ ಸೊಳ್ಳೆಗಳ ಬಿಡುಗಡೆ – ಇಲ್ಲದಿದ್ರೆ ಈ ಪ್ರಭೇದವೇ ನಾಶವಾಗುತ್ತಂತೆ!

    ದೊಡ್ಡ ದೊಡ್ಡ ಡ್ರೋನ್ ಬಳಸಿ ಹವಾಯ್‌ಗೆ ಸೊಳ್ಳೆಗಳ ಬಿಡುಗಡೆ – ಇಲ್ಲದಿದ್ರೆ ಈ ಪ್ರಭೇದವೇ ನಾಶವಾಗುತ್ತಂತೆ!

    ಲಗಿದ್ದಾಗ ಅಥವಾ ಕುಳಿತಿದ್ದಾಗ ‘ಗುಯ್..’ ಅಂತ ಕಿವಿ ಹತ್ತಿರ ಸುಳಿಯುವ ಸೊಳ್ಳೆಗಳು ಅಂದ್ರೆ ಎಂತಹವರಿಗೂ ಹಿಂಸೆ. ಸಾಕಪ್ಪಾ.. ಸಾಕು ಈ ಸೊಳ್ಳೆಗಳ ಕಾಟ ಎನಿಸದೇ ಇರದು. ಮೈಮೇಲೆ ಕೂತು ಸೂಜಿ ಚುಚ್ಚಿ ರಕ್ತ ಹೀರುವಾಗ ಅದೆಷ್ಟು ಸೊಳ್ಳೆಯನ್ನು ಹೊಡೆದು ಕೊಂದಿಲ್ಲ. ಅದಕ್ಕೆ ಲೆಕ್ಕವೇ ಇಲ್ಲ. ಸೊಳ್ಳೆ ಸಂತಾನ ಇಲ್ಲದಿದ್ರೆ ಎಷ್ಟು ಆರಾಮಾಗಿ ನಿದ್ರೆ ಮಾಡಬಹುದಿತ್ತಲ್ವಾ ಅಂತ ಯೋಚಿಸಿದವರಿಲ್ಲ. ಸೊಳ್ಳೆಗಳು ಹತ್ತಿರ ಸುಳಿದಾಡಿದರೆ ಶತ್ರುಗಳಿಗಿಂತ ಹೆಚ್ಚು. ಅವುಗಳನ್ನು ಕೊಲ್ಲಲು ಸೊಳ್ಳೆಬತ್ತಿ, ಸೊಳ್ಳೆ ಬ್ಯಾಟ್ ಬಳಕೆಗೇನು ಕಮ್ಮಿಯಿಲ್ಲ. ಒಟ್ಟಾರೆ, ಸೊಳ್ಳೆ ಅಂದ್ರೆ ಕಿರಿಕಿರಿ.

    ನಿಮಗೆ ಗೊತ್ತಾ? ಸೊಳ್ಳೆಯಿಂದ ಜೀವಸಂಕುಲ ಉಳಿಸಬಹುದು ಎನ್ನುತ್ತಾರೆ ವಿಜ್ಞಾನಿಗಳು. ಆ ನಿಟ್ಟಿನಲ್ಲಿ ಒಂದು ಕಾರ್ಯವನ್ನೂ ವಿಜ್ಞಾನಿಗಳು ಮಾಡಿದ್ದಾರೆ. ಈ ಪ್ರಯೋಗ ಅಮೆರಿಕಗೆ ಸೇರಿದ ಹವಾಯ್ (Hawaii) ದ್ವೀಪದಲ್ಲಿ ಅಂತಹದ್ದೊಂದು ಪ್ರಯೋಗ ಮಾಡಿದ್ದಾರೆ. ಏನಿದು ಪ್ರಯೋಗ? ಸೊಳ್ಳೆಗಳಿಂದಾಗುವ ಪ್ರಯೋಜನ ಏನು? ಜೀವಸಂಕುಲ ಉಳಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ.

    ಡ್ರೋನ್ ಬಳಸಿ ಸೊಳ್ಳೆ ರಿಲೀಸ್!
    ಹವಾಯಿಯ ದೂರದ ಕಾಡುಗಳಲ್ಲಿ ವಿಜ್ಞಾನಿಗಳು ದೈತ್ಯ ಡ್ರೋನ್ ಬಳಸಿ ಸೊಳ್ಳೆಗಳ ಹಿಂಡುಗಳನ್ನು ಬಿಡುತ್ತಿದ್ದಾರೆ. ಇದೊಂಥರ ವಿಚಿತ್ರ ಪರಿಪಾಠ ಅಂತ ಅನ್ನಿಸಬಹುದು. ಆದರೆ, ಅದರಲ್ಲೊಂದು ಉದ್ದೇಶ ಇದೆ. ವಿಜ್ಞಾನಿಗಳು ಹವಾಯಿಯಲ್ಲಿ ಜೀವವನ್ನು ಪುನರುತ್ಥಾನಗೊಳಿಸಲು ಈ ಕೀಟಗಳನ್ನು ಬಿಡುತ್ತಿದ್ದಾರೆ.

    ಅಳಿವಿನ ಅಂಚಿನಲ್ಲಿ ಹನಿಕ್ರೀಪರ್ಸ್?
    ಈ ಸುಂದರ ಉಷ್ಣವಲಯದ ದ್ವೀಪವು ಅಳಿವಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಒಂದು ಕಾಲದಲ್ಲಿ ಹವಾಯಿಯಲ್ಲಿ ಹೇರಳವಾಗಿದ್ದ ಹನಿಕ್ರೀಪರ್ಸ್ (Honeycreepers) ಹೆಸರಿನ ವರ್ಣರಂಜಿತ ಹಾಡುಹಕ್ಕಿಗಳು, ಆಕ್ರಮಣಕಾರಿ ಸೊಳ್ಳೆಗಳಿಂದ ಹರಡುವ ಪಕ್ಷಿ ಮಲೇರಿಯಾಗೆ ಬಲಿಯಾಗುತ್ತಿವೆ. ಪಕ್ಷಿಗಳು ಬದುಕುಳಿಯಲು ಹೆಣಗಾಡುತ್ತಿವೆ. ಈ ಪಕ್ಷಿಗಳ ಸಂತಾನ ಮತ್ತೆ ವೃದ್ಧಿಯಾಗಬೇಕೆಂದು ವಿಜ್ಞಾನಿಗಳು ಯೋಜನೆಯೊಂದನ್ನು ರೂಪಿಸಿದ್ದಾರೆ. ಪಕ್ಷಿಗಳ ಸಂತಾನೋತ್ಪತ್ತಿಗೆ ಅಡ್ಡಿಪಡಿಸುವ ಬ್ಯಾಕ್ಟೀರಿಯಾದ ತಳಿಗಳನ್ನು ಬೇರೆಡೆಗೆ ಸಾಗಿಸಲು, ಪ್ರಯೋಗಾಲಯದಲ್ಲಿ ಸಾಕಿದ ಮತ್ತು ಕಚ್ಚದ ಗಂಡು ಸೊಳ್ಳೆಗಳನ್ನು ಬಿಡಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ.

    ಮಲೇರಿಯಾ ಹರಡುತ್ತಿರುವ ಹನಿಕ್ರೀಪರ್ ಆವಾಸಸ್ಥಾನಗಳಿಗೆ ಈ ವಿಶೇಷ ಗಂಡು ಸೊಳ್ಳೆಗಳನ್ನು (Mosquitoes) ನಿರಂತರವಾಗಿ ಬಿಡುಗಡೆ ಮಾಡಲಾಗುತ್ತಿದೆ. ಆ ಮೂಲಕ ವಿಜ್ಞಾನಿಗಳು ಕಚ್ಚುವ ಸೊಳ್ಳೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ರೋಗ ಹರಡುವಿಕೆಯನ್ನು ನಿಗ್ರಹಿಸಲು ಕ್ರಮಕೈಗೊಂಡಿದ್ದಾರೆ.

    ಏನಿದು ಬರ್ಡ್ಸ್, ನಾಟ್ ಸೊಳ್ಳೆಗಳು ಯೋಜನೆ?
    ‘ಬರ್ಡ್ಸ್, ನಾಟ್ ಸೊಳ್ಳೆಗಳು’ ಯೋಜನೆ ಮೂಲಕ ಈ ಕ್ರಮವಹಿಸಲಾಗಿದೆ. ಇದು ಸ್ಥಳೀಯ ಹವಾಯಿಯನ್ ಪಕ್ಷಿಗಳನ್ನು ರಕ್ಷಿಸಲು ಕೆಲಸ ಮಾಡುವ ಸಂಸ್ಥೆಗಳ ಒಕ್ಕೂಟವಾಗಿದೆ. ಯೋಜನೆಯನ್ನು 2023ರ ನವೆಂಬರ್‌ನಲ್ಲಿ ಪ್ರಾರಂಭಿಸಲಾಯಿತು. ಮಾಯಿ ಮತ್ತು ಕೌಯಿಯಲ್ಲಿನ ಹನಿಕ್ರೀಪರ್ ಆವಾಸಸ್ಥಾನಗಳಲ್ಲಿ 40 ಮಿಲಿಯನ್‌ಗಿಂತಲೂ ಹೆಚ್ಚು ಗಂಡು ಸೊಳ್ಳೆಗಳನ್ನು ಬಿಡುಗಡೆ ಮಾಡಿದ್ದಾರೆ.

    ಈ ಸೊಳ್ಳೆಗಳನ್ನು ಬಿಡುವುದರಿಂದ ಪಕ್ಷಿಗಳ ಆವಾಸಸ್ಥಾನದ ಕಾಡುಗಳಿಗೆ ಬೇರೆ ಸೊಳ್ಳೆಗಳು ಹೋಗಲು ಸಾಧ್ಯವಿಲ್ಲ ಎಂದು ಡ್ರೋನ್ ಕಾರ್ಯವನ್ನು ಮುನ್ನಡೆಸುತ್ತಿರುವ ಅಮೆರಿಕನ್ ಬರ್ಡ್ ಕನ್ಸರ್ವೆನ್ಸಿಯ ಹವಾಯಿ ಕಾರ್ಯಕ್ರಮ ನಿರ್ದೇಶಕ ಕ್ರಿಸ್ ಫಾರ್ಮರ್ ತಿಳಿಸಿದ್ದಾರೆ.

    ಆಕ್ರಮಣಕಾರಿ ಸೊಳ್ಳೆಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಅನೇಕ ಸ್ಥಳೀಯ ಪಕ್ಷಿ ಪ್ರಭೇದಗಳು ಶಾಶ್ವತವಾಗಿ ಕಣ್ಮರೆಯಾಗುತ್ತವೆ. ಕನಿಷ್ಠ 33 ಜಾತಿಯ ಹನಿಕ್ರೀಪರ್‌ಗಳು ಈಗ ಅಳಿದುಹೋಗಿವೆ. ಮೌಯಿಯಲ್ಲಿರುವ ಕಿವಿಕಿಯು, ಅಕೊಹೆಕೊಹೆ ಮತ್ತು ಕೌಯಿಯಲ್ಲಿರುವ ಅಕೆಕೆ ಸೇರಿದಂತೆ ಉಳಿದಿರುವ 17 ಜಾತಿಗಳಲ್ಲಿ ಹಲವು ಪಕ್ಷಿಗಳು ಅಳಿವಿನಂಚಿನಲ್ಲಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

    ಸಂತಾನೋತ್ಪತ್ತಿ ಸಮಸ್ಯೆ ಇರುವ ಸೊಳ್ಳೆಗಳನ್ನು ಬಿಡುಗಡೆ ಮಾಡುವುದರಿಂದ ನಿರೀಕ್ಷಿತ ಫಲಿತಾಂಶ ಸಿಗುತ್ತದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಆದರೆ, ಹನಿಕ್ರೀಪರ್ ಸಂಖ್ಯೆಯನ್ನು ಉಳಿಸಲು ಈ ಸೊಳ್ಳೆಗಳಿಗೆ ಸಾಧ್ಯವಾಗಬಹುದು ಎಂದು ವಿಜ್ಞಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.

    ಹವಾಯ್‌ಗೆ ಮಾರಕ ಸೊಳ್ಳೆಗಳು ಬಂದಿದ್ಹೇಗೆ?
    ಸಾಮಾನ್ಯವಾಗಿ, ಸೊಳ್ಳೆಗಳು ಹವಾಯಿಯಲ್ಲಿ ವಾಸಿಸುವುದಿಲ್ಲ. ಆದರೆ 1826 ರಲ್ಲಿ ಒಂದು ತಿಮಿಂಗಿಲ ಬೇಟೆಯ ಹಡಗು ಆಕಸ್ಮಿಕವಾಗಿ ಅವುಗಳನ್ನು ದ್ವೀಪಗಳಿಗೆ ತಂದು ಬಿಟ್ಟಿವೆ. ಅವು ಬೆಚ್ಚಗಿನ, ಆರ್ದ್ರ ವಾತಾವರಣದಲ್ಲಿ ವೃದ್ಧಿಯಾಗಿ ಅಭಿವೃದ್ಧಿ ಹೊಂದಿದವು. ಈಗ ಪಕ್ಷಿ ಪ್ರಭೇದಕ್ಕೆ ಕಂಟಕವಾಗಿ ಪರಿಣಮಿಸಿವೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ಗಾದೆಯಂತೆ, ಆಕ್ರಮಣಕಾರಿ ಸೊಳ್ಳೆಗಳನ್ನು ಮಟ್ಟ ಹಾಕಲು ಸಾಕಿದ ಸೊಳ್ಳೆಗಳ ಅಸ್ತ್ರ ಪ್ರಯೋಗವನ್ನು ವಿಜ್ಞಾನಿಗಳು ಮಾಡುತ್ತಿದ್ದಾರೆ.

  • ಹವಾಯಿಯಲ್ಲಿ ಕಾಡ್ಗಿಚ್ಚು – 93 ಕ್ಕೇರಿದ ಸಾವಿನ ಸಂಖ್ಯೆ

    ಹವಾಯಿಯಲ್ಲಿ ಕಾಡ್ಗಿಚ್ಚು – 93 ಕ್ಕೇರಿದ ಸಾವಿನ ಸಂಖ್ಯೆ

    ನ್ಯೂಯಾರ್ಕ್:‌ ಹವಾಯಿ (Hawaii Wildfire) ಐತಿಹಾಸಿಕ ಮಾಯಿ ಪಟ್ಟಣದಲ್ಲಿ ಕಾಡ್ಗಿಚ್ಚಿನಿಂದ ಸತ್ತವರ ಸಂಖ್ಯೆ 93 ಕ್ಕೆ ಏರಿಕೆ ಆಗಿದೆ. ಇದು ಅಮೆರಿಕದ (US) ಒಂದು ಶತಮಾನದ ಇತಿಹಾಸದಲ್ಲೇ ಸಂಭವಿಸಿದ ಭೀಕರ ಕಾಡ್ಗಿಚ್ಚು ಎಂದು ವಿಶ್ಲೇಷಿಸಲಾಗಿದೆ.

    ಹೊಸದಾಗಿ ಬಿಡುಗಡೆಯಾದ ಅಂಕಿಅಂಶದ ಪ್ರಕಾರ, ಉತ್ತರ ಕ್ಯಾಲಿಫೋರ್ನಿಯಾದಲ್ಲಿ 2018 ರಲ್ಲಿ ಸಂಭವಿಸಿದ ಕ್ಯಾಂಪ್ ಫೈರ್‌ನ ಸಂಖ್ಯೆಯನ್ನೂ ಇದು ಮೀರಿಸಿದೆ. ಕ್ಯಾಂಪ್‌ ಫೈರ್‌ 85 ಜನರು ಬಲಿ ತೆಗೆದುಕೊಂಡಿತ್ತು. ಇದನ್ನೂ ಓದಿ: ಸ್ವಾತಂತ್ರ್ಯ ದಿನದ ಮುನ್ನಾ ದಿನವೇ ಪಾಕ್‍ನಲ್ಲಿ ಚೀನಾ ಇಂಜಿನಿಯರ್‌ಗಳ ಮೇಲೆ ಉಗ್ರರ ದಾಳಿ – ಸೈನಿಕರು ಸೇರಿ 13 ಸಾವು

    ಶವಗಳ ಶೋಧಕ್ಕಾಗಿ ಶ್ವಾನ ತಂಡಗಳನ್ನು ಬಳಸಿಕೊಳ್ಳಲಾಗಿದೆ. ಮಾಯಿಯ ಕೆಲವು ಭಾಗಗಳನ್ನು ಧ್ವಂಸಗೊಳಿಸಿದ ಕಾಡ್ಗಿಚ್ಚು ಇನ್ನೂ ಉರಿಯುತ್ತಿದೆ. ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಮಂಗಳವಾರ ಹೊತ್ತಿಕೊಂಡ ಮೂರು ಪ್ರಮುಖ ಕಾಡ್ಗಿಚ್ಚು ಇನ್ನೂ ನಂದಿಸಲ್ಪಟ್ಟಿಲ್ಲ. ಲಹೈನಾದಲ್ಲಿ 85%, ಪುಲೆಹು/ಕಿಹೆಯಿನಲ್ಲಿ 80%, ಅಪ್‌ಕಂಟ್ರಿ ಮಾಯಿ ಬಳಿ 50% ನಷ್ಟು ಕಾಡ್ಗಿಚ್ಚು ಹಬ್ಬಿಕೊಂಡಿದೆ.

    ಲಾಹೈನಾಕ್ಕೆ ಹೋಗುವ ಹೆದ್ದಾರಿಯಲ್ಲಿ ಬೆಂಕಿಯಿಂದ ನಾಶವಾದ ಐತಿಹಾಸಿಕ ಪಟ್ಟಣ, ಕಾರುಗಳು, ಟ್ರಕ್‌ಗಳು ಮತ್ತು ಸರಬರಾಜುಗಳನ್ನು ಹೊತ್ತ ಬಸ್‌ಗಳು ಕಂಡುಬಂದಿವೆ. ಲಹೈನಾಗೆ ಮರಳಲು ಸ್ಥಳೀಯ ನಿವಾಸಿಗಳಿಗೆ ಸೂಚನೆ ನೀಡಲಾಗಿದೆ. ಆದರೆ ಪಶ್ಚಿಮ ಮಾಯಿಯಲ್ಲಿ ಇನ್ನೂ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದನ್ನೂ ಓದಿ: ಸೌದಿ ಕ್ಲಬ್‌ ಸೇರಿದ ಬಳಿಕ ಚೊಚ್ಚಲ ಟ್ರೋಫಿ ಗೆದ್ದ ರೊನಾಲ್ಡೊ – ಅಲ್-ನಾಸ್ರ್‌ಗೆ ಐತಿಹಾಸಿಕ ಜಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 20 ಅಡಿ ಉದ್ದದ ಭಯಾನಕ ಶಾರ್ಕ್ ಜೊತೆ ಮಹಿಳೆ ಈಜಾಟ- ವಿಡಿಯೋ ವೈರಲ್

    20 ಅಡಿ ಉದ್ದದ ಭಯಾನಕ ಶಾರ್ಕ್ ಜೊತೆ ಮಹಿಳೆ ಈಜಾಟ- ವಿಡಿಯೋ ವೈರಲ್

    ಲಾಸ್ ಏಂಜಲೀಸ್: ಸಮುದ್ರದ ಆಳದಲ್ಲಿ ಬರೋಬ್ಬರಿ 20 ಅಡಿ ಉದ್ದದ ಭಯಾನಕ ಬಿಳಿ ಶಾರ್ಕ್ ಒಂದರ ಜೊತೆ ಮಹಿಳೆ ಈಜಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತ ಫುಲ್ ವೈರಲ್ ಆಗಿದೆ.

    ಹವಾಯ್ ಕಡಲ ತೀರದಲ್ಲಿ ಕಂಡುಬಂದಿದ್ದ ಅತೀ ದೊಡ್ಡ ಬಿಳಿ ಶಾರ್ಕ್ ಒಂದರ ಜೊತೆಯಲ್ಲಿ ಮಹಿಳೆ ಈಜಿದ್ದಾರೆ. ಈ ಅಪರೂಪದ ದೃಶ್ಯವನ್ನು ಮಹಿಳೆ ಜೊತೆಗಿದ್ದ ಈಜುಗಾರರೊಬ್ಬರು ದೃಶ್ಯವನ್ನು ಸೆರೆಹಿಡಿದಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದ್ದು, ವಿಡಿಯೋ ನೋಡಿದವರು ಅಬ್ಬಾ! ಎಂಥಾ ದೃಶ್ಯ ಅಂತ ಅಚ್ಚರಿ ಪಟ್ಟಿದ್ದಾರೆ.

    ಈ ದೈತ್ಯಾಕಾರದ ಬಿಳಿ ಶಾರ್ಕ್ ಇದುವರೆಗೂ ಕಂಡು ಬಂದಿರುವ ಶಾರ್ಕ್ ಗಳಲ್ಲಿ ಅತೀ ದೊಡ್ಡ ಗಾತ್ರದಾಗಿದ್ದು, ಡೀಪ್ ಬ್ಯ್ಲೂ ಎಂದು ಹೆಸರು ಪಡೆದಿದೆ. ಈ ಶಾರ್ಕ್ 5 ವರ್ಷಗಳ ಹಿಂದೆ ಮೆಕ್ಸಿಕೋದ ಸಮುದ್ರಾಳದಲ್ಲಿ ಕಂಡುಬಂದಿತ್ತು. ಈಗ ಮತ್ತೆ ಹಲವು ವರ್ಷಗಳ ಬಳಿಕ ಮಂಗಳವಾರ ಹವಾಯ್ ಸಮುದ್ರದಲ್ಲಿ ಕಾಣಿಸಿಕೊಂಡಿದೆ. ಈ ಅಪರೂಪದ ಶಾರ್ಕ್ ಕಂಡ ಈಜುಗಾರರು ಬೆಳಗ್ಗೆಯಿಂದ ಸಂಜೆವರೆಗೂ ಅದರೊಂದಿಗೆ ಸಮಯ ಕಳೆದಿದ್ದಾರೆ ಅಂತ ಪ್ರತಿಕೆಯೊಂದರಲ್ಲಿ ಪ್ರಕಟವಾಗಿದೆ.

    https://www.instagram.com/p/BstzkcZlZHg/?utm_source=ig_embed&utm_campaign=embed_video_watch_again

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಸ್ತೆಗೆ ನುಗ್ಗಿದ ಜ್ವಾಲಾರಸ-82 ಮನೆಗಳು ನಾಶ

    ರಸ್ತೆಗೆ ನುಗ್ಗಿದ ಜ್ವಾಲಾರಸ-82 ಮನೆಗಳು ನಾಶ

    ಹವಾಯಿ: ಜ್ವಾಲಾಮುಖಿಯಿಂದಾಗಿ ಕರಗಿದ ಬಂಡೆಯ ಜ್ವಾಲಾರಸವು ನಗರದ ಬೀದಿಗಳಿಗೆ ನುಗ್ಗಿದ ಪರಿಣಾಮ ಹಲವಾರು ಮನೆಗಳು ನಾಶಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.

    ಲೀಲಾನಿ ಎಸ್ಟೇಟ್ ವಸತಿ ಅಭಿವೃದ್ಧಿಗೆ ಸೇರಿದ ಸುಮಾರು 82 ಮನೆಗಳು ನಾಶವಾಗಿದೆ ಎಂದು ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ಏಜೆನ್ಸಿ ತಿಳಿಸಿದೆ. ಸಾರ್ವಜನಿಕರಿಗೆ ಜ್ವಾಲಾರಸದಿಂದ ತಪ್ಪಿಸಿಕೊಳ್ಳುವಂತೆ ಅಧಿಕಾರಿಗಳು ಮುನ್ಸೂಚನೆ ಕೊಟ್ಟಿದ್ದಾರೆ.

    ಮೇ 3 ರಿಂದ 2,200 ಎಕರೆ ವ್ಯಾಪ್ತಿಯಲ್ಲಿ ಲಾವಾರಸ ಹರಡಿದೆ. ಕಳೆದ 100 ವರ್ಷದಲ್ಲೇ ಹವಾಯಿ ದ್ವೀಪ ರಾಷ್ಟ್ರ ಕಂಡ ವಿನಾಶಕಾರಕ ಕಿಲೂಯೆ ಜ್ವಾಲಾಮುಖಿ ಇದಾಗಿದೆ ಎನ್ನಲಾಗಿದೆ.

    ಕೌಪುಲಿ ರಸ್ತೆಯಲ್ಲಿ ನಿಂತು ಪಕ್ಕದ ರಸ್ತೆಗೆ ಜ್ವಾಲಾರಸ ಹೋಗುತ್ತಿರುವ ವಿಡಿಯೊವನ್ನು ಇಕಾಕ್ ಮಾರ್ಜೊ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ವೈರಲ್ ಆಗಿದೆ.

    ಜ್ವಾಲಾರಸ ಸುಮಾರು 100 ಅಡಿಗಳ ಎತ್ತರಕ್ಕೆ ಚಿಮ್ಮಿ ಕರಗಿದ ಬಂಡೆಗಳ ಕೊಳಗಳು ನಿರ್ಮಾಣವಾಗುತ್ತಿವೆ. ಕಹುಕೈ ಮತ್ತು ಮೊಹಾಲಾ ರಸ್ತೆಗಳ ಕಡೆ ಲಾವಾ ರಸ ಹರಿದು ಬರುವ ಸಾಧ್ಯತೆ ಇದೆ ಎಂದು ಅಗ್ನಿಶಾಮಕ ದಳದವರು ಪ್ರತಿಯೊಂದು ಮನೆಗೂ ಭೇಟಿ ನೀಡಿ ಅಲ್ಲಿಯ ನಿವಾಸಿಗಳನ್ನು ಸ್ಥಳಾಂತರಿಸುತ್ತಿದ್ದಾರೆ.

    ಕೆಲವು ರಸ್ತೆಗಳ ಸುತ್ತ ಲಾವಾರಸ ಹರಿದು ಅಲ್ಲಿರುವವರನ್ನು ತಲುಪಲಿಕ್ಕೆ ಆಗದ ಸ್ಥಿತಿ  ಕೂಡ ನಿರ್ಮಾಣವಾಗಿದೆ ಎನ್ನಲಾಗಿದೆ. ಈಗ ಹೊರಬರುತ್ತಿರುವ ಲಾವಾರಸ ಜ್ವಾಲಾಮುಖಿಯ ಒಂದು ಸಣ್ಣ ಭಾಗ ಎಂದು ಹೇಳಲಾಗುತ್ತಿದೆ.

    https://www.facebook.com/ikaika.marzo/videos/1814217715297423/