Tag: havri

  • ಹಾವೇರಿಯಲ್ಲಿ ಮತ್ತಿಬ್ಬರಿಗೆ ಕೊರೊನಾ- ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆ

    ಹಾವೇರಿಯಲ್ಲಿ ಮತ್ತಿಬ್ಬರಿಗೆ ಕೊರೊನಾ- ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆ

    ಹಾವೇರಿ: ಜಿಲ್ಲೆಯಲ್ಲಿ ಮತ್ತಿಬ್ಬರಿಗೆ ಮಹಾಮಾರಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

    ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದ 62 ವರ್ಷದ ವ್ಯಕ್ತಿ ಮತ್ತು ಶಿಗ್ಗಾಂವಿ ಮೂಲದ 46 ವರ್ಷದ ಮಹಿಳೆಯಲ್ಲಿ ಕೊರೊನಾ ದೃಢಪಟ್ಟಿದೆ. ಮೇ 19,ರಂದು ಮುಂಬೈನಿಂದ ಬಂದಿದ್ದ 46 ವರ್ಷದ ಮಹಿಳೆ ರೋಗಿ-4534ರಲ್ಲಿ ಸೋಂಕು ದೃಢಪಟ್ಟಿದ್ದು, ಮುಂಬೈನಿಂದ ಬಂದು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದರು.

    ಓಲಾ ಕಾರು ಬಾಡಿಗೆ ಮಾಡಿಕೊಂಡು ಮುಂಬೈನಿಂದ ಪತಿ ಮತ್ತು ಮಗಳೊಂದಿಗೆ ಆಗಮಿಸಿದ್ದರು. ಜೂನ್ 1 ಸೋಂಕಿತೆಯ ಪತಿ ಮತ್ತು ಜೂನ್ 2 ರಂದು ಮಗಳಲ್ಲಿ ಕೊರೊನಾ ದೃಢಪಟ್ಟಿದ್ದು, ಇಂದು ತಾಯಿಗೆ ಸೋಂಕು ಕಾಣಿಸಿಕೊಂಡಿದೆ. ಬಂಕಾಪುರದ 62 ವರ್ಷದ ವ್ಯಕ್ತಿ ರೋಗಿ-4533ರಲ್ಲಿ ಸೋಂಕು ಧೃಡಪಟ್ಟಿದ್ದು, ರೋಗಿ- 1691 ರೋಗಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಮತ್ತು ಕಂಟೈನ್ಮೆಂಟ್ ಝೋನ್‍ನಲ್ಲಿದ್ದ 62 ವರ್ಷದ ಸೋಂಕಿತ ವ್ಯಕ್ತಿಯಾಗಿದ್ದಾನೆ.

  • ಮನೆಯೊಳಗೆ ನುಗ್ಗಿದ ಚಿರತೆ ಮರಿ- ಆತಂಕಕ್ಕೊಳಗಾದ ಗ್ರಾಮಸ್ಥರು

    ಮನೆಯೊಳಗೆ ನುಗ್ಗಿದ ಚಿರತೆ ಮರಿ- ಆತಂಕಕ್ಕೊಳಗಾದ ಗ್ರಾಮಸ್ಥರು

    ಹಾವೇರಿ: ಚಿರತೆ ಮರಿಯೊಂದು ಮನೆಯೊಳಗೆ ನುಗ್ಗಿದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಅಂಗರಗಟ್ಟಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದಲ್ಲಿ ಮಾಲತೇಶ ಬೆಳೋಡಿ ಎಂಬವರ ಮನೆಯೊಳಗೆ ಈ ಚಿರತೆ ಮರಿ ಸೇರಿಕೊಂಡಿತ್ತು. ಮನೆಯ ಒಳಗಡೆಯ ಮಂಚದ ಕೆಳಗೆ ಕೆಲ ಕಾಲ ಅವಿತಿದ್ದ ಈ ಮರಿಯನ್ನು ಕಂಡು ಮನೆಯ ಕುಟುಂಬ ಸದಸ್ಯರು ಹೊರಗೆ ಓಡಿ ಬಂದು ಮನೆಯ ಬಾಗಿಲು ಹಾಕಿದ್ರು.

    ಚಿರತೆ ಮರಿ ಮನೆಗೆ ನುಗ್ಗಿರೋದನ್ನು ಕಂಡು ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದರು. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಸ್ಥಳೀಯರ ಸಹಾಯ ಪಡೆದು ಚಿರತೆ ಮರಿ ಸೆರೆ ಹಿಡಿದ್ದಾರೆ.

    ರಟ್ಟಿಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಗ್ರಾಮದ ಬಳಿ ಬರೋ ಚಿರತೆಗಳನ್ನ ಹಿಡಿದು ದೂರದ ಅರಣ್ಯ ಪ್ರದೇಶಕ್ಕೆ ಬಿಟ್ಟು ಬರಬೇಕು ಎಂದು ಆಗ್ರಹಿಸಿದ್ದಾರೆ.