Tag: haveri labour

  • ಕಾರ್ಮಿಕನನ್ನು ಮ್ಯಾನ್‌ಹೋಲ್‌ಗೆ ಇಳಿಸಿ ಚರಂಡಿ ಕ್ಲೀನ್‌ ಮಾಡಿಸಿದ ಅಧಿಕಾರಿ!

    ಕಾರ್ಮಿಕನನ್ನು ಮ್ಯಾನ್‌ಹೋಲ್‌ಗೆ ಇಳಿಸಿ ಚರಂಡಿ ಕ್ಲೀನ್‌ ಮಾಡಿಸಿದ ಅಧಿಕಾರಿ!

    ಹಾವೇರಿ: ಕಾರ್ಮಿಕನನ್ನು ಮ್ಯಾನ್‌ಹೋಲ್‌ಗೆ ಇಳಿಸಿ ಅಧಿಕಾರಿಯು ಚರಂಡಿ ಕ್ಲೀನ್‌ ಮಾಡಿಸಿರುವ ಅಮಾನವೀಯ ಘಟನೆ ಘಟನೆ ಹಾವೇರಿ‌ ಜಿಲ್ಲೆ ರಾಣೆಬೆನ್ನೂರು ನಗರದಲ್ಲಿ ನಡೆದಿದೆ.

    ರಾಣೇಬೆನ್ನೂರು ನಗರದ ಮೇಡ್ಲೇರಿ ರಸ್ತೆಯಲ್ಲಿರುವ ಮ್ಯಾನ್‌ಹೋಲ್‌ನಲ್ಲಿ ಕಾರ್ಮಿಕನನ್ನು ಇಳಿಸಿ ಕ್ಲೀನ್ ಮಾಡಿಸಿದ್ದಾರೆ. ಮ್ಯಾನ್‌ಹೋಲ್‌ನಲ್ಲಿ ಕಾರ್ಮಿಕರನ್ನು ಇಳಿಸಿ ಕೆಲಸ ಮಾಡಿಸಬಾರದು ಎಂಬ ಸರ್ಕಾರದ ನಿಯಮವನ್ನು ಅಧಿಕಾರಿಗಳು ಉಲ್ಲಂಘಿಸಿದ್ದಾರೆ. ಗಬ್ಬು ವಾಸನೆಯಿಂದ ಕೂಡಿರುವ ಮ್ಯಾನ್‌ಹೋಲ್‌ಗೆ ಕಾರ್ಮಿಕನನ್ನು ಇಳಿಸಿ ಸ್ವಚ್ಛತೆ ಮಾಡಿಸಿದ್ದಾರೆ. ಅಧಿಕಾರಿಯ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಂದ್ರನ ಮೇಲೆ ಗುಡಿಸಲು? – ಫೋಟೋ ಶೇರ್ ಮಾಡಿದ ವಿಜ್ಞಾನಿಗಳು

    ಸ್ಥಳೀಯರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಕೆಯುಐಡಿಎಫ್‌ಸಿ ಸಹಾಯಕ ಇಂಜನಿಯರ್ ರವೀಂದ್ರ ಕಾರ್ಮಿಕನನ್ನು ಮ್ಯಾನ್‌ಹೋಲ್‌ನಿಂದ ಮೇಲೆ ಹತ್ತಿಸಿದ್ದಾರೆ. ಮಾನವೀಯತೆ ಮರೆತು ಕಾರ್ಮಿಕನನ್ನು ಮ್ಯಾನ್‌ಹೋಲ್‌ನಲ್ಲಿ ಇಳಿಸಿದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

    ಕಳೆದ ಕೆಲವು ದಿನಗಳಿಂದ ಒಳಚರಂಡಿ ಬ್ಲಾಕ್ ಆಗಿ ಸ್ಥಗಿತಗೊಂಡಿದ್ದರಿಂದ ಮ್ಯಾನ್‌ಹೋಲ್‌ನಲ್ಲಿ ಕಾರ್ಮಿಕನನ್ನು ಇಳಿಸಿ ಇಂಜಿನಿಯರ್‌ ಕೆಲಸ ಮಾಡಿಸುತ್ತಿದ್ದರು. ಮುಂದೆ ಈ ರೀತಿ ಮಾಡದಂತೆ ಅಧಿಕಾರಿಗಳಿಗೆ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಹಾವುಗಳ ಕಾಟಕ್ಕೆ ಬಂಗಲೆಗೆ ಬೆಂಕಿಯಿಟ್ಟ- 13 ಕೋಟಿ ರೂ. ಮನೆ ಸುಟ್ಟು ಭಸ್ಮ