Tag: Hatti Gold Mine

  • ಹವಾಮಾನ ವೈಪರೀತ್ಯ – ಸಿಎಂ ರಾಯಚೂರು ಪ್ರವಾಸ ರದ್ದು

    ಹವಾಮಾನ ವೈಪರೀತ್ಯ – ಸಿಎಂ ರಾಯಚೂರು ಪ್ರವಾಸ ರದ್ದು

    – 998 ಕೋಟಿ ವೆಚ್ಚದ ಶಂಕುಸ್ಥಾಪನೆ ಕಾರ್ಯಕ್ರಮ ಮುಂದೂಡಿಕೆ

    ರಾಯಚೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರ ಪ್ರವಾಸ ರದ್ದಾದ ಹಿನ್ನೆಲೆ ರಾಯಚೂರಿನ ಲಿಂಗಸುಗೂರಿನ ಹಟ್ಟಿ ಪಟ್ಟಣದಲ್ಲಿ ಆಯೋಜಿಸಿದ್ದ ʻಹಟ್ಟಿ ಚಿನ್ನದಗಣಿ (Hatti Gold Mine) ಕಂಪನಿ ಸಿಬ್ಬಂದಿ ಹಾಗೂ ಕಾರ್ಮಿಕರ ವಸತಿ ಸಮುಚ್ಚಯ ನಿರ್ಮಾಣʼದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

    ಇಂದು (ಆಗಸ್ಟ್ 6) ಮಧ್ಯಾಹ್ನ 12ಕ್ಕೆ ನಡೆಯಬೇಕಿದ್ದ 998 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಅಡಿಗಲ್ಲು ಸಮಾರಂಭಕ್ಕೆ ಸಿಎಂ ಗೈರು ಹಿನ್ನೆಲೆ ಕಾರ್ಯಕ್ರಮವನ್ನ ಮುಂದೂಡಲಾಗಿದೆ. ಹವಾಮಾನ ವೈಪರೀತ್ಯ ಹಿನ್ನೆಲೆ ಸಿಎಂ ರಾಯಚೂರು (Raichur) ಪ್ರವಾಸ ರದ್ದಾಗಿದೆ. ಹಟ್ಟಿ ಪಟ್ಟಣದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕಾಗಿ ಜಿಲ್ಲಾಡಳಿತ ಸುಮಾರು 10ಕ್ಕೂ ಅಧಿಕ ಪೂರ್ವಸಿದ್ಧತೆ ಸಭೆ ಮಾಡಿತ್ತು. ವೇದಿಕೆ ಸಿದ್ಧತೆ ಜೊತೆಗೆ ಸುಮಾರು 5 ಸಾವಿರಕ್ಕೂ ಅಧಿಕ ಜನರಿಗಾಗಿ ಆಸನಗಳ ವ್ಯವಸ್ಥೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಉತ್ತಾರಾಖಂಡದಲ್ಲಿ ಪ್ರವಾಹ – ಕಲಬುರಗಿ ಜಿಲ್ಲಾಡಳಿತದಿಂದ ಸಹಾಯವಾಣಿ ಕೇಂದ್ರ ಆರಂಭ

    Raichuru Hatti gold mine program

    1980ರಲ್ಲಿ ಅಂದಿನ ಸಿಎಂ ಆರ್.ಗುಂಡೂರಾವ್ ಬಿಟ್ಟರೆ ಬೇರೆ ಯಾವ ಮುಖ್ಯಮಂತ್ರಿಯೂ ಅಧಿಕೃತ ಕಾರ್ಯಕ್ರಮಕ್ಕಾಗಿ ಹಟ್ಟಿ ಚಿನ್ನದಗಣಿಗೆ ಭೇಟಿ ನೀಡಿರಲಿಲ್ಲ. ಸಿದ್ದರಾಮಯ್ಯ ಎರಡನೇ ಸಿಎಂ ಆಗಿ ಭೇಟಿ ನೀಡುತ್ತಾರೆ ಅನ್ನೋ ನಿರೀಕ್ಷೆಯಲ್ಲಿದ್ದವರಿಗೆ ಈಗ ನಿರಾಸೆಯಾಗಿದೆ. ಬೆಂಗಳೂರಿನಿಂದ ಗಿಣಿಗೇರಾ ಏರ್ ಸ್ಟ್ರಿಪ್‌ಗೆ ವಿಮಾನದಲ್ಲಿ ಆಗಮಿಸಿ, ಹಟ್ಟಿಗೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಬೇಕಿದ್ದ ಸಿಎಂ ಪ್ರವಾಸ ಕಾರ್ಯಕ್ರಮ ಹವಾಮಾನ ವೈಪರೀತ್ಯ ಹಿನ್ನೆಲೆ ರದ್ದಾಗಿದೆ. ಇದನ್ನೂ ಓದಿ: ಆ.6ಕ್ಕೆ ರಾಯಚೂರಿಗೆ ಸಿಎಂ, ಡಿಸಿಎಂ – ಹಟ್ಟಿ ಚಿನ್ನದಗಣಿಯ 998 ಕೋಟಿ ಕಾಮಗಾರಿಗೆ ಶಂಕುಸ್ಥಾಪನೆ

  • ಆ.6ಕ್ಕೆ ರಾಯಚೂರಿಗೆ ಸಿಎಂ, ಡಿಸಿಎಂ – ಹಟ್ಟಿ ಚಿನ್ನದಗಣಿಯ 998 ಕೋಟಿ ಕಾಮಗಾರಿಗೆ ಶಂಕುಸ್ಥಾಪನೆ

    ಆ.6ಕ್ಕೆ ರಾಯಚೂರಿಗೆ ಸಿಎಂ, ಡಿಸಿಎಂ – ಹಟ್ಟಿ ಚಿನ್ನದಗಣಿಯ 998 ಕೋಟಿ ಕಾಮಗಾರಿಗೆ ಶಂಕುಸ್ಥಾಪನೆ

    ರಾಯಚೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಬುಧವಾರ (ಆ.6) ರಾಯಚೂರು (Raichuru) ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದಗಣಿ (Hatti Gold Mine) ವಸತಿ ಸಮುಚ್ಛಯದ 998 ಕೋಟಿ ರೂ. ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ: ದಿನಕ್ಕೆ ಅಂದಾಜು 2 ಲಕ್ಷ ರೂ. ಖರ್ಚು- ಯಾವುದಕ್ಕೆ ಎಷ್ಟು?

    ಲಿಂಗಸುಗೂರಿನ (Lingasuguru) ಹಟ್ಟಿ ಪಟ್ಟಣದ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ಅಂತಿಮ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ಅಧ್ಯಕ್ಷ ಹಾಗೂ ಶಾಸಕ ಜೆ.ಟಿ.ಪಾಟೀಲ್ ಪರಿಶೀಲನೆ ನಡೆಸಿದ್ದಾರೆ. ನಾಳೆ ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ.

    ಕಾರ್ಯಕ್ರಮದಲ್ಲಿ 998 ಕೋಟಿ ರೂ. ವೆಚ್ಚದ 952ಕ್ಕೂ ಹೆಚ್ಚು ಮನೆಗಳು ಹಾಗೂ ಆಸ್ಪತ್ರೆ ಕಾಮಗಾರಿಗೆ ಸಿಎಂ ಸಿದ್ದರಾಮಯ್ಯ ಅವರು ಅಡಿಗಲ್ಲು ಹಾಕಲಿದ್ದಾರೆ. ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಗಣಿ ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಸೇರಿ ಹಲವರು ಭಾಗವಹಿಸಲಿದ್ದಾರೆ.ಇದನ್ನೂ ಓದಿ: ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ – ಸಾವಿನ ಸಂಖ್ಯೆ 4ಕ್ಕೆ ಏರಿಕೆ

  • ಹಟ್ಟಿ ಚಿನ್ನದಗಣಿ | 2,800 ಅಡಿ ಆಳದಲ್ಲಿ ಏರ್ ಬ್ಲಾಸ್ಟ್ – ಕಾರ್ಮಿಕ ದುರ್ಮರಣ

    ಹಟ್ಟಿ ಚಿನ್ನದಗಣಿ | 2,800 ಅಡಿ ಆಳದಲ್ಲಿ ಏರ್ ಬ್ಲಾಸ್ಟ್ – ಕಾರ್ಮಿಕ ದುರ್ಮರಣ

    ರಾಯಚೂರು: ಜಿಲ್ಲೆಯ ಲಿಂಗಸುಗೂರಿನ ಹಟ್ಟಿ ಚಿನ್ನದಗಣಿಯಲ್ಲಿ (Hatti Gold Mine) ಏರ್ ಬ್ಲಾಸ್ಟ್ (Air Blast) ಆಗಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಮೃತನನ್ನು ಶರಣಬಸವ (40) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಕಾರ್ಮಿಕನನ್ನು ನಿರುಪಾದಿ ಎಂದು ಗುರುತಿಸಲಾಗಿದೆ. ಚಿನ್ನದ ಗಣಿಯ ಮಲ್ಲಪ್ಪ ಶಾಫ್ಟ್‍ನಲ್ಲಿ ಈ ಅವಘಡ ಸಂಭವಿಸಿದೆ. ಸುಮಾರು 2,800 ಅಡಿ ಆಳದಲ್ಲಿ ಗಣಿಗಾರಿಕೆ ಮಾಡುತ್ತಿದ್ದಾಗ ಏರ್ ಬ್ಲಾಸ್ಟ್ ಆಗಿದೆ ಎಂದು ತಿಳಿದು ಬಂದಿದೆ.

    ಕೆಳಗೆ ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಚಿನ್ನದ ಗಣಿ ರೆಸ್ಕ್ಯೂ ಟೀಂನಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗಾಯಗೊಂಡ ಕಾರ್ಮಿಕನನ್ನ ಚಿನ್ನದ ಗಣಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಮಣ್ಣು ಕುಸಿತ – ಓರ್ವ ಕಾರ್ಮಿಕನ ಸ್ಥಿತಿ ಗಂಭೀರ

    ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಮಣ್ಣು ಕುಸಿತ – ಓರ್ವ ಕಾರ್ಮಿಕನ ಸ್ಥಿತಿ ಗಂಭೀರ

    ರಾಯಚೂರು: ಜಿಲ್ಲೆಯ ಲಿಂಗಸುಗೂರು (Lingasuguru) ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ (Hatti Gold Mine) ಕಂಪನಿಯಲ್ಲಿ ಮಣ್ಣು ಕುಸಿತಗೊಂಡ ಪರಿಣಾಮ ಓರ್ವ ಕಾರ್ಮಿಕ ಗಾಯಗೊಂಡಿದ್ದು, ಸ್ಥಿತಿ ಗಂಭೀರವಾಗಿದೆ.

    ಗಾಯಗೊಂಡಿರುವ ಕಾರ್ಮಿಕನನ್ನು ಲಕ್ಷ್ಮಣ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಮಹಿಳೆಯರಿಗೆ ತಿಂಗಳಿಗೆ 1,000 ರೂ. ಗ್ಯಾರಂಟಿ ಕಟ್ – ಸರ್ಕಾರದ ವಿರುದ್ಧ ವಿಪಕ್ಷಗಳು ಕೆಂಡ

    ಗಣಿಯ ಮಲ್ಲಪ್ಪ ಶಾಫ್ಟ್‌ನಲ್ಲಿ 2,600 ಅಡಿ ಆಳದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ. ತಲೆ ಹಾಗೂ ಕೈ-ಕಾಲಿಗೆ ಗಂಭೀರ ಗಾಯಗಳಾಗಿದ್ದು, ಚಿನ್ನದ ಗಣಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ (Belagavi) ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಸ್ಧಳಕ್ಕೆ ಗಣಿ ಕಂಪನಿಯ ಅಧಿಕಾರಿಗಳ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಹಟ್ಟಿ ಪೊಲೀಸ್ ಠಾಣಾ (Hatti Police Station)  ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: ಸಿನಿಮಾ ರೂಪದಲ್ಲಿ ಬರುತ್ತಿದೆ ಸಿಎಂ ಯೋಗಿ ಆದಿತ್ಯನಾಥ್ ಜೀವನ ಚರಿತ್ರೆ