Tag: Hatrick Hero

  • ಚಿಕಿತ್ಸೆ ಪಡೆದು ಬೆಂಗ್ಳೂರಿಗೆ ಹ್ಯಾಟ್ರಿಕ್ ಹೀರೋ ವಾಪಸ್

    ಚಿಕಿತ್ಸೆ ಪಡೆದು ಬೆಂಗ್ಳೂರಿಗೆ ಹ್ಯಾಟ್ರಿಕ್ ಹೀರೋ ವಾಪಸ್

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಭುಜ ನೋವಿಗೆ ಶಸ್ತ್ರ ಚಿಕಿತ್ಸೆಯ ಪಡೆದು ಕ್ಷೇಮವಾಗಿ ಲಂಡನ್‍ನಿಂದ ವಾಪಸ್ ಆಗಿದ್ದಾರೆ.

    ಶಿವರಾಜ್‍ಕುಮಾರ್ ಮಂಗಳವಾರ ಸಂಜೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ಬಂದಿಳಿದರು. ಈ ವೇಳೆ ಅವರನ್ನು ನೋಡಿದ ಅಭಿಮಾನಿಗಳು ಯೋಗಕ್ಷೇಮ ವಿಚಾರಿಸಲು ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಹೀಗಾಗಿ ಭದ್ರತಾ ಸಿಬ್ಬಂದಿ ಅಭಿಮಾನಿಗಳನ್ನು ತಡೆದು, ಶಿವಣ್ಣ ಅವರನ್ನು ಕಾರಿನವರೆಗೂ ಕರೆದುಕೊಂಡು ಬಿಟ್ಟರು.

    ಶಿವಣ್ಣ ಅವರು ಕಳೆದ ಆರು ತಿಂಗಳಿನಿಂದ ಭುಜದ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಕೆಲ ದಿನಗಳ ಹಿಂದೆಯಷ್ಟೇ ಶಸ್ತ್ರ ಚಿಕಿತ್ಸೆಗಾಗಿ ಲಂಡನ್‍ಗೆ ತೆರಳಿದ್ದರು. ಕಳೆದ ಗುರುವಾರ ಅವರ ಶಸ್ತ್ರಚಿಕಿತ್ಸೆ ಯಶ್ವಸಿಯಾಗಿ ನಡೆದಿತ್ತು. ಶಿವಣ್ಣ ಅವರ ಜೊತೆ ಪತ್ನಿ ಗೀತಾ ಶಿವರಾಜ್ ಕುಮಾರ್, ಪುತ್ರಿ ನಿವೇದಿತಾ ಕೂಡ ಲಂಡನ್‍ಗೆ ತೆರಳಿದ್ದರು. ಪುನೀತ್ ರಾಜಕುಮಾರ್ ಅವರು ಕೂಡ ಲಂಡನ್‍ಗೆ ತೆರಳಿ ಅವರ ಆರೋಗ್ಯವನ್ನು ನೋಡಿಕೊಂಡಿದ್ದರು.

  • ಲಂಡನ್‍ನಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಭುಜದ ಶಸ್ತ್ರ ಚಿಕಿತ್ಸೆ ಯಶಸ್ವಿ

    ಲಂಡನ್‍ನಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಭುಜದ ಶಸ್ತ್ರ ಚಿಕಿತ್ಸೆ ಯಶಸ್ವಿ

    – ಶಿವಸೈನ್ಯ ಬಳಗದಿಂದ ಶಿವಣ್ಣನ ಹುಟ್ಟುಹಬ್ಬ ಆಚರಣೆ

    ಬೆಂಗಳೂರು: ಲಂಡನ್‍ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಭುಜದ ನೋವಿನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.

    ಶಿವಣ್ಣ ಅವರು ಕಳೆದ ಆರು ತಿಂಗಳಿನಿಂದ ಭುಜದ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಕೆಲ ದಿನಗಳ ಹಿಂದೆಯಷ್ಟೇ ಶಸ್ತ್ರ ಚಿಕಿತ್ಸೆಗಾಗಿ ಲಂಡನ್‍ಗೆ ತೆರಳಿದ್ದರು. ಹುಟ್ಟುಹಬ್ಬದ ಮುನ್ನಾದಿನವೇ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಶಿವಣ್ಣ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್, ಪುತ್ರಿ ನಿವೇದಿತಾ ಕೂಡ ಲಂಡನ್‍ಗೆ ತೆರಳಿದ್ದಾರೆ. ಪುನೀತ್ ರಾಜಕುಮಾರ್ ಅವರು ಅಣ್ಣನ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ಡಾ.ಶಿವರಾಜ್ ಕುಮಾರ್ ಆರೋಗ್ಯವಾಗಿದ್ದಾರೆ. ವೈದ್ಯರು ಒಂದು ತಿಂಗಳು ವಿಶ್ರಾಂತಿಗೆ ಸೂಚಿಸಿದ್ದಾರೆ ಎಂದು ಆಪ್ತ ಹಾಗೂ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಟ್ವೀಟ್ ಮಾಡಿದ್ದಾರೆ.

    ಜುಲೈ 12 ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಜನ್ಮದಿನ. ಶಿವಣ್ಣನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಕುಟುಂಬದವರು ಮತ್ತು ಹೆಸರಾಂತ ನಿರ್ದೇಶಕರು ನಿರ್ಮಾಪಕರು ಆಪ್ತರೆಲ್ಲರೂ ಸಜ್ಜಾಗಿದ್ದು, ವಿಶೇಷವಾಗಿ ಶಿವರಾಜ್ ಕುಮಾರ್ ಅವರ ಅಭಿಮಾನದ ಹೆಮ್ಮೆಯ ತಂಡ ಶಿವಸೈನ್ಯದ ಬಳಗ ಹಲವಾರು ಮಹೋನ್ನತ ಕಾರ್ಯಗಳ ಮೂಲಕ ಜನ್ಮದಿನ ಆಚರಿಸಲು ಮುಂದಾಗುತ್ತಿದೆ.

    ಹುಟ್ಟುಹಬ್ಬದಂದು 11 ಗಂಟೆಗೆ ಅಣ್ಣಾವ್ರ ಪುಣ್ಯ ಭೂಮಿಯಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರು ಕೇಕ್ ಕತ್ತರಿಸಿ, ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ಆಚರಣೆಗೆ ಮೆರಗು ನೀಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಶಿವಣ್ಣ ಅವರಿಗೋಸ್ಕರ ಡೆಡಿಕೇಟ್ ಮಾಡಲು ಶಿವಸೈನ್ಯದವರು ಸಿದ್ಧ ಮಾಡಿರುವ ಮಹಾನ್ ಕಲಾವಿದ ಹಾಡನ್ನು, ನಿರ್ಮಾಪಕರು ಮತ್ತು ಅಣ್ಣಾವ್ರ ಕುಟುಂಬದ ಆಪ್ತರಾದ ಕೆ.ಪಿ.ಶ್ರೀಕಾಂತ್ ಅವರು ಬಿಡುಗಡೆಗೊಳಿಸಲಿದ್ದಾರೆ.

    ಶಿವಣ್ಣ ಮತ್ತು ಪುನೀತ್ ರಾಜ್ ಕುಮಾರ್ ಅವರು ಇಬ್ಬರೂ ಸಹ ಲಂಡನ್‍ನಲ್ಲಿ ಇದ್ದಾರೆ. ಹೀಗಾಗಿ ಶುಕ್ರವಾರ ಮಧ್ಯಾಹ್ನ 1:00 ಕ್ಕೆ ಅಭಿಮಾನಿಗಳೊಂದಿಗೆ ಮಾತನಾಡಲು ಅಣ್ಣಾವ್ರ ಪುಣ್ಯಭೂಮಿಯಲ್ಲಿ ಎಲ್‍ಇಡಿ ಸ್ಕ್ರೀನ್ ಮುಖಾಂತರ ವಿಡಿಯೋ ಮೂಲಕ ಬರಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಅನ್ನದಾನ ಸಹ ಏರ್ಪಡಿಸಲಾಗಿದ್ದು, ಸಂತೃಪ್ತಿಯ ಹುಟ್ಟಹಬ್ಬಕ್ಕೆ ಸಾಕ್ಷಿಯಾಗಲಿದೆ.

    ಪಬ್ಲಿಕ್ ಟಿವಿ ಜೊತೆ ಜೂನ್ 24ರಂದು ಮಾತನಾಡಿದ್ದ ಶಿವರಾಜ್‍ಕುಮಾರ್ ಅವರು, ಹುಟ್ಟುಹಬ್ಬ ದಿನ ನನ್ನ ಶಸ್ತ್ರಚಿಕಿತ್ಸೆ ಇದೆ. ನನಗೆ ಭುಜದ ನೋವು ಆಗಾಗ ಕಾಣಿಸುತ್ತಿದೆ. ಹಾಗಾಗಿ ನಾನು ಶಸ್ತ್ರಚಿಕಿತ್ಸೆಗೆ ಹೋಗಬೇಕಾಗುತ್ತೆ. ಹುಟ್ಟುಹಬ್ಬ ನಂತರ ಹೋಗೋಣ ಎಂದುಕೊಂಡೆ. ಆದರೆ ನನಗೆ ಬೇರೆ ದಿನ ಅಪಾಯಿಂಟ್‍ಮೆಂಟ್ ಸಿಗಲಿಲ್ಲ. ಇದನ್ನು ಮಿಸ್ ಮಾಡಿದ್ರೆ ಆಗಸ್ಟ್ ವರೆಗೂ ಕಾಯಬೇಕು. ಹೀಗಾಗಿ ನಾನು ಲಂಡನ್‍ಗೆ ಹೋಗಲೇಬೇಕು ಎಂದಿದ್ದರು.

    ಆಗಸ್ಟ್ ವರೆಗೂ ಕಾಯಬೇಕೆಂದರೆ ನೋವು ಜಾಸ್ತಿ ಆಗುತ್ತೆ. ಆಗ ನನ್ನ ಸಮಸ್ಯೆ ಜಾಸ್ತಿ ಆಗುತ್ತದೆ. ಅಭಿಮಾನಿಗಳಿಗೆ ಈ ಬಗ್ಗೆ ಗೊತ್ತು. ಅವರು ಕೂಡ ಆರೋಗ್ಯ ಮುಖ್ಯ ಹೋಗಿ ಬನ್ನಿ ಎಂದು ಹೇಳಿದ್ದಾರೆ. ನಾನು ಕೂಡ ನನ್ನ ಹುಟ್ಟುಹಬ್ಬವನ್ನು ಮಿಸ್ ಮಾಡಿಕೊಳ್ಳುತ್ತೇನೆ. ಏಕೆಂದರೆ ಅವರು ನನ್ನ ಹುಟ್ಟುಹಬ್ಬವನ್ನು ಹೇಗೆ ಸಂಭ್ರಮದಿಂದ ಆಚರಿಸುತ್ತಾರೋ, ನನಗೂ ಹಾಗೇ ಅವರ ಹುಟ್ಟುಹಬ್ಬ ಆಚರಿಸುವುದು ಸಂಭ್ರಮನೇ. ಅವರು ಮಿಸ್ ಮಾಡಿಕೊಂಡರೆ ನಾನು ಡಬಲ್ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು.

    ನನ್ನ ಹುಟ್ಟುಹಬ್ಬಕ್ಕೆ ಸ್ವಲ್ಪ ರೇಗಾಟ, ಪ್ರೀತಿ, ಊಟ ಇರುತ್ತೆ. ಎಲ್ಲರೂ ಹಾಗೂ ಚಿತ್ರರಂಗದ ಸದಸ್ಯರು ಬಂದು ಶುಭಾಶಯ ತಿಳಿಸುತ್ತಾರೆ. ನಾನು ಇಲ್ಲಿ ಇಲ್ಲ ಎಂದರು ಅಭಿಮಾನಿಗಳು ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಹಾಗಾಗಿ ನಾನು ಲಂಡನ್‍ನಿಂದ ಹಿಂತಿರುಗಿ ಬಂದ ನಂತರ ಒಂದು ಗೆಟ್- ಟು-ಗೆದರ್ ಮಾಡುತ್ತೇನೆ ಎಂದು ನಟ ಶಿವರಾಜ್‍ಕುಮಾರ್ ತಿಳಿಸಿದ್ದರು.

    ನನಗೆ ಭುಜದ ನೋವಿದೆ. ನನಗೆ ಚಿಕಿತ್ಸೆ ನೀಡಿದ್ದ ವೈದ್ಯರೇ ಶಾರೂಕ್ ಖಾನ್ ಹಾಗೂ ಎಸ್. ಎಂ ಕೃಷ್ಣ ಅವರಿಗೂ ಚಿಕಿತ್ಸೆ ನೀಡುತ್ತಿದ್ದಾರೆ. ಸರ್ಜರಿ ಮಾಡಿದ ಬಳಿಕ ನಾಲ್ಕು ತಿಂಗಳು ಆಯಕ್ಷನ್ ಸೀನ್ ಮಾಡಬಾರದು. ನಾಲ್ಕು ತಿಂಗಳ ಮೇಲೆಯೇ ಆ್ಯಕ್ಷನ್ ಸೀನ್ ಮಾಡಲಿದ್ದೇನೆ. ಚಿಕ್ಕ ಪುಟ್ಟ ಆ್ಯಕ್ಷನ್ ಸೀನ್ ಮಾಡಬಹುದು. ಬಳಿಕ `ಭಜರಂಗಿ- 2′ ಚಿತ್ರದಲ್ಲಿ ಸಾಕಷ್ಟು ಆಯಕ್ಷನ್ ಸೀನ್ ಇದೆ. ಆ ಚಿತ್ರೀಕರಣದಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಶಿವರಾಜ್‍ಕುಮಾರ್ ಹೇಳಿದ್ದರು.

  • ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಬರ್ತ್ ಡೇ ಸಂಭ್ರಮ – ಪುತ್ರಿಯಿಂದ ಸಿಕ್ತು ಗಿಫ್ಟ್

    ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಬರ್ತ್ ಡೇ ಸಂಭ್ರಮ – ಪುತ್ರಿಯಿಂದ ಸಿಕ್ತು ಗಿಫ್ಟ್

    ಬೆಂಗಳೂರು: ಸ್ಯಾಂಡಲ್ ವುಡ್‍ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗಿಂದು 56 ನೇ ಹುಟ್ಟು ಹಬ್ಬದ ಸಂಭ್ರಮ. ತಮ್ಮ ನಿವಾಸದಲ್ಲಿ ತಡರಾತ್ರಿ ಕುಟುಂಬಸ್ಥರು, ಸ್ನೇಹಿತರ ಹಾಗೂ ನೂರಾರು ಜನ ಅಭಿಮಾನಿಗಳ ಸಮ್ಮುಖದಲ್ಲಿ ಶಿವಣ್ಣ ಸರಳವಾಗಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

    ಪತ್ನಿ ಗೀತಾ ಶಿವರಾಜ್ ಕುಮಾರ್ ಜೊತೆ ಮೊದಲಿಗೆ ಕೇಕ್ ಕತ್ತರಿಸಿ, ಬಳಿಕ ಸ್ನೇಹಿತರು ಮತ್ತು ಅಭಿಮಾನಿಗಳ ಜೊತೆ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿದರು. ತಮ್ಮ ನೆಚ್ಚಿನ ನಟನಿಗೆ ಶುಭಕೋರಲು ನಾನಾ ಜಿಲ್ಲೆಗಳಿಂದ ಅಭಿಮಾನಿಗಳು ಶಿವಣ್ಣರ ನಿವಾಸಕ್ಕೆ ಆಗಮಿಸಿ ಶುಭಕೋರಿದರು.

    ಅಭಿಮಾನಿಗಳ ಈ ಸಂಭ್ರಮ ಅಭಿಮಾನ ನೋಡಿದರೆ ನಿಜಕ್ಕೂ ಸಂತೋಷ ಆಗುತ್ತದೆ. ಟಗರು ಅಂತಹ ವಿಭಿನ್ನ ಚಿತ್ರಗಳನ್ನ ಮಾಡಿ ಯಶಸ್ಸು ಕಂಡಿರದು ತುಂಬಾ ಖುಷಿ ಇದೆ. ಹೆಸರು ಅಲ್ಲದೇ ಪಾತ್ರದ ಹೆಸರುಗಳಿಂದ ಡಾಲಿ, ಚಿಟ್ಟೆ ಈ ರೀತಿ ಕರೆಯುತ್ತಾರಲ್ಲ ಅದು ತುಂಬಾ ಖುಷಿ. ವಿಲನ್ ನಂತರ ಕವಚ, ರುಸ್ತುಂ ಸಿನಿಮಾಗಳಲ್ಲಿ ನಟನೆ ಮಾಡುತ್ತಾ ಇದ್ದೇನೆ. ವಿಶೇಷ ಗಿಷ್ಟ್ ಏನಿಲ್ಲಾ ನನ್ನ ಮಗಳು ಯುವರ ರಾಜ್ ಟೀ ಶರ್ಟ ಗಿಷ್ಟ್ ಕೊಟ್ಟಿದ್ದಾರೆ ಎಂದು ಶಿವರಾಜ್‍ಕುಮಾರ್ ತಿಳಿಸಿದರು.

  • ಟ್ರಾಫಿಕ್ ಜಾಮ್ ವಿರುದ್ಧ ಪ್ರತಿಭಟನೆಗಿಳಿದ ಶಿವರಾಜ್ ಕುಮಾರ್

    ಟ್ರಾಫಿಕ್ ಜಾಮ್ ವಿರುದ್ಧ ಪ್ರತಿಭಟನೆಗಿಳಿದ ಶಿವರಾಜ್ ಕುಮಾರ್

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಗರದಲ್ಲಿನ ಟ್ರಾಫಿಕ್ ಜಾಮ್‍ಗೆ ಬೇಸತ್ತು ಇಂದು ಪ್ರತಿಭಟನೆಯಲ್ಲಿ ಭಾಗಿಯಾಗಿ ಆಕ್ರೋಶವನ್ನು ಹೊರ ಹಾಕಿದರು.

    ಮಾನ್ಯತಾ ಟೆಕ್‍ಪಾರ್ಕ್ ರೆಸಿಡೆನ್ಸಿ ಅಸೋಸಿಯೇಷನ್‍ನಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಿನ ನಿತ್ಯ ಬೆಳಗ್ಗೆ ಹಾಗೂ ಸಂಜೆ ಸುಮಾರು 3 ರಿಂದ 4 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗುತ್ತದೆ. ಇಲ್ಲಿನ ನಿವಾಸಿಗಳಿಗೆ ಮನೆಯಿಂದ ಹೊರಗೆ ಹೋಗಬೇಕು ಎಂದರೆ ಒಂದು ಗಂಟೆಯ ಕಾಲ ಸಮಯ ತೆಗೆದುಕೊಳ್ಳತ್ತದೆ. ಈ ಟ್ರಾಫಿಕ್ ನಲ್ಲಿಯೇ ಸಮಯವೆಲ್ಲಾ ಹಾಳು ಆಗುತ್ತದೆ. ಮನೆಯಿಂದ ಯಾರಾದರೂ ಒಬ್ಬರು ಹೊರಗೆ ಹೋಗಿ ಬರಬೇಕು ಎಂದರೆ ಟ್ರಾಫಿಕ್ ಗೆಂದೇ ಜಾಸ್ತಿ ಸಮಯವನ್ನು ಇಟ್ಟುಕೊಂಡು ಹೋಗಬೇಕು. ಇದರಿಂದ ಎಲ್ಲರಿಗೂ ಬಹಳ ತೊಂದರೆಯಾಗುತ್ತದೆ ಎಂದು ಹೇಳಿದರು.

    ಈ ವಿಚಾರವಾಗಿ ನಮ್ಮ ಅಸೋಸಿಯೇಷನ್ ಅವರು ಬಿಡಿಎ, ಟ್ರಾಫಿಕ್ ಪೊಲೀಸ್ ಅವರಿಗೆ ದೂರು ನೀಡಿದರೂ ಯಾರೂ ಸಹ ಇದರ ಕಡೆ ಗಮನವೇ ಹರಿಸಿಲ್ಲ. ರಸ್ತೆಗಳೆಲ್ಲಾ ಹಾಳಾಗಿ ಗುಂಡಿಬಿದ್ದು ಹೋಗಿವೆ ಎಂದು ದೂರಿದರು.

    ಶೂಟಿಂಗ್ ಗೆ ಹೋಗುವಾಗಲು ನಾವು ಬೆಳಗ್ಗೆ 7:30 ರ ವೇಳೆಗೆ ಬಿಟ್ಟರೆ ಮಾತ್ರ ಬೇಗ ಹೋಗಲು ಸಾಧ್ಯವಾಗುತ್ತದೆ. ಮಾನ್ಯತಾ ಟೆಕ್ ಪಾರ್ಕ್ ರೆಸಿಡೆನ್ಸಿ ರಸ್ತೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಟ್ರಾಫಿಕ್ ಜಾಮ್ ಆಗದಂತೆ ತಡೆಯಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಮಾನ್ಯತಾ ಟೆಕ್ ಪಾರ್ಕ್ ರೆಸಿಡೆನ್ಸಿಯವರು ಕೊಟ್ಟ ಆಶ್ವಾಸನೆಯನ್ನು ನೆರವೇರಿಸಲಿಲ್ಲ ಅವರ ಆದಾಯಕ್ಕೆ ತಕ್ಕಂತೆ ಅವರು ನೋಡಿ ರೆಸಿಡೆನ್ಸಿಯನ್ನು ನಿರ್ಮಿಸಿದ್ದಾರೆ ಎಂದು ಆರೋಪಿಸಿದರು.