Tag: hatric hero

  • ಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ ಹ್ಯಾಟ್ರಿಕ್ ಹೀರೋ ವಿಶ್- ಅಪ್ಪು ನಂಗೆ ಮಗ ಇದ್ದಂಗೆ ಅಂದ್ರು ಶಿವಣ್ಣ

    ಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ ಹ್ಯಾಟ್ರಿಕ್ ಹೀರೋ ವಿಶ್- ಅಪ್ಪು ನಂಗೆ ಮಗ ಇದ್ದಂಗೆ ಅಂದ್ರು ಶಿವಣ್ಣ

    ಬೆಂಗಳೂರು: ಸ್ಯಾಂಡಲ್ ವುಡ್‍ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಇಂದು 43ನೇ ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಅಣ್ಣ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶುಭಾಶಯ ಕೋರಿದ್ದಾರೆ.

    ಯಾರಿ ನಂಬರ್ ಒನ್ ಶೂಟಿಂಗ್ ನಲ್ಲಿ ಬ್ಯೂಸಿ ಇದ್ದ ಶಿವಣ್ಣ ಅವರು ಅಪ್ಪು ಮನೆಗೆ ಬಂದು ಶುಭಾಶಯ ತಿಳಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪು ಚಿಕ್ಕ ಮಗು ತರ. ಅವನನ್ನು ನಾನು ನನ್ನ ಮಗ ಅಂದ್ರು ತಪ್ಪಾಗಲ್ಲ. ಯಾಕಂದ್ರೆ ನನಗೆ 13 ವರ್ಷವಾದಾಗ ಅಪ್ಪು ಹುಟ್ಟಿದ್ದಾನೆ. ಹೀಗಾಗಿ ಅವನನ್ನ ಚಿಕ್ಕ ಮಗುವಿನಿಂದಲೂ ನೋಡ್ತಾ ಇದ್ದೀನಿ. ಎತ್ತಿ ಆಡಿಸಿದ್ದೀನಿ. ಒಟ್ಟಿನಲ್ಲಿ ಇಂದು ಹುಟ್ಟುಹಬ್ಬ ಅಂದಾಗ ಖುಷಿಯಾಗುತ್ತದೆ ಅಂದ್ರು.

    ಅಪ್ಪುಗೆ ಇಷ್ಟು ಬೇಗ 43 ವರ್ಷ ವಯಸ್ಸಾಯಿತಾ ಅಂತ ಆಶ್ಚರ್ಯವಾಗುತ್ತಿದೆ. ಹೀಗಾಗಿ ಅವನಿಗೆ ಇಷ್ಟೊಂದು ವಯಸ್ಸಾಗಿದೆ ಅಂತ ನನಗೆ ಅನಿಸೋದೇ ಇಲ್ಲ. ಇನ್ನು 20-22 ವರ್ಷದ ಹುಡುಗನ ತರ ಕಾಣ್ತಾನೆ. ಒಟ್ಟಿನಲ್ಲಿ ಇಂದು ಯುವಕರು, ಮಕ್ಕಳು, ಅಭಿಮಾನಿಗಳು ಸೇರಿದಂತೆ ಎಲ್ಲರೂ ಅವರ ಹುಟ್ಟುಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸುವುದನ್ನು ನೋಡಿದ್ರೆ ಹೆಮ್ಮೆ ಹಾಗೂ ಖುಷಿ ಅನಿಸುತ್ತಿದೆ ಅಂತ ಹೇಳಿದ್ರು.

    ಅಪ್ಪು ತುಂಬಾ ಶ್ರಮ ಜೀವಿ. ಹೀಗಾಗಿ ಅವನ ಶ್ರಮ ಇನ್ನು ಮುಂದೆಯೂ ಹೀಗೆ ಇರುತ್ತದೆ. ಜೀವನದಲ್ಲಿ ತುಂಬಾನೆ ಕಷ್ಟ ಪಡುತ್ತಾನೆ. ಹಾಗೂ ಆತನಿಗೆ ಏನ್ ಮಾಡಬೇಕು ಎಂಬುದು ಗೊತ್ತು. ಬುದ್ಧಿವಂತ ಹಾಗೂ ಉತ್ತಮ ಮನುಷ್ಯ ಅಂತ ತಮ್ಮನ ಬಗ್ಗೆ ಅಣ್ಣ ಹೆಮ್ಮೆ ವ್ಯಕ್ತಪಡಿಸಿದ್ರು.

     

  • ಪೊಗದಸ್ತಾದ ಟಗರು ನೋಡಿ ಜಬರ್ದಸ್ತಾದ ಹೇರ್ ಕಟ್ ಮಾಡಿಸ್ಕೊಂಡ ಅಭಿಮಾನಿ

    ಪೊಗದಸ್ತಾದ ಟಗರು ನೋಡಿ ಜಬರ್ದಸ್ತಾದ ಹೇರ್ ಕಟ್ ಮಾಡಿಸ್ಕೊಂಡ ಅಭಿಮಾನಿ

    ರಾಮನಗರ: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ `ಟಗರು’ ಚಿತ್ರ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸ್ತಾ ಇದೆ. ಶಿವಣ್ಣನ ಚಿತ್ರಕ್ಕಾಗಿ ಕಾದು ಕೂತ ಶಿವಣ್ಣನ ಅಭಿಮಾನಿಗಳು ತಮ್ಮ ಅಭಿಮಾನವನ್ನು ಹಲವು ರೀತಿಯಲ್ಲಿ ವ್ಯಕ್ತಪಡಿಸ್ತಿದ್ದಾರೆ.

    ಬೊಂಬೆನಗರಿ ಚನ್ನಪಟ್ಟಣದಲ್ಲೊಬ್ಬ ಶಿವಣ್ಣನ ಅಭಿಮಾನಿ `ಟಗರು’ ಚಿತ್ರದ ಟೈಟಲ್‍ನ್ನು ತನ್ನ ಹೇರ್‍ಕಟ್‍ನಲ್ಲಿ ಮೂಡಿಸಿಕೊಂಡಿದ್ದಾರೆ. ಚನ್ನಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಚಂದ್ರಕುಮಾರ್ ತನ್ನ ಹೇರ್ ಸ್ಟೈಲ್ ಮೂಲಕ ಚಿತ್ರದ ಪ್ರಮೋಷನ್ ಮಾಡ್ತಿದ್ದಾನೆ. ಅಲ್ಲದೇ ಚನ್ನಪಟ್ಟಣದ ಶಿವಾನಂದ ಥಿಯೇಟರ್ ಬಳಿ ನಿಂತು ಚಿತ್ರ ವೀಕ್ಷಣೆಗೆ ಬರುತ್ತಿರುವ ಚಿತ್ರರಸಿಕರ ಗಮನ ಸೆಳೆಯುತ್ತಿದ್ದಾರೆ. ಇದನ್ನೂ ಓದಿ; ಪೊಗದಸ್ತಾದ ಟಗರು!

    ಶಿವರಾಜ್ ಕುಮಾರ್ ರವರ ಅಪ್ಪಟ ಅಭಿಮಾನಿಯಾಗಿರುವ ಚಂದ್ರಕುಮಾರ್ ತನ್ನ ಹೇರ್ ಸ್ಟೈಲ್ ನೋಡಿ ಟಗರು ಚಿತ್ರವನ್ನ ಹೆಚ್ಚಾಗಿ ವೀಕ್ಷಣೆ ಮಾಡಲು ಅಲ್ಲದೇ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗಲಿ ಎಂದು ಹಾರೈಸ್ತಿದ್ದಾರೆ.

    ಪೊಲೀಸ್ ಪಾತ್ರ ಸೇರಿದಂತೆ ಹಲವಾರು ಗೆಟಪ್‍ಗಳಲ್ಲಿ ಶಿವಣ್ಣ ಮಿಂಚಿದ್ದರೆ, ಖಳನಾಯಕರ ಪಾತ್ರದಲ್ಲಿ ಧನಂಜಯ್ ಮತ್ತು ವಶಿಷ್ಠ ಸಿಂಹ ಅಭಿನಯಿಸಿದ್ದಾರೆ. ಇನ್ನು ಭಾವನಾ ಮೆನನ್ ಮತ್ತು ಮಾನ್ವಿತಾ ಹರೀಶ್ ನಾಯಕಿಯರಾಗಿ ಅಭಿನಯಿಸಿದ್ದಾರೆ.

  • ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಇಂದು ಶಬರಿಮಲೆಗೆ

    ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಇಂದು ಶಬರಿಮಲೆಗೆ

    ಬೆಂಗಳೂರು: ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ಸಂಜೆ ಶಬರಿಮಲೆಗೆ ತೆರಳಲಿದ್ದಾರೆ.

    ಗುರುಸ್ವಾಮಿ ಶಿವರಾಮ್ ನೇತೃತ್ವದಲ್ಲಿ ಮನೆಯಲ್ಲಿ ಇರುಮುಡಿಪೂಜೆ ಮುಗಿಸಿ ಅನ್ನಸಂತರ್ಪಣೆ ಮಾಡಿ ಬಳಿಕ ಶಿವಣ್ಣ ಶಬರಿಮಲೆಗೆ ಹೊರಡಲಿದ್ದಾರೆ. ಕಳೆದ 9 ವರ್ಷಗಳಿಂದ ಶಬರಿಮಲೆಗೆ ಶಿವರಾಜ್‍ಕುಮಾರ್ ತೆರಳುತ್ತಿದ್ದಾರೆ.

    ಈ ಬಾರಿ ಶಿವಣ್ಣ ಜೊತೆ ಸ್ನೇಹಿತರು, ಚಿತ್ರರಂಗದ ಸಹೋದ್ಯೋಗಿಗಳು ಹಾಗೂ ಕುಟುಂಬಸ್ಥರು ಸೇರಿ ಒಟ್ಟು 45 ಮಂದಿ ಶಬರಿಮಲೆಗೆ ತೆರಳುತ್ತಿದ್ದಾರೆ.