Tag: hate

  • ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ದ್ವೇಷದ ಕಸಕ್ಕೆ ಹೋಲಿಸಿದ ನಿರ್ದೇಶಕ ಡಿಲನ್ ಮೋಹನ್ ಗ್ರೇ

    ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ದ್ವೇಷದ ಕಸಕ್ಕೆ ಹೋಲಿಸಿದ ನಿರ್ದೇಶಕ ಡಿಲನ್ ಮೋಹನ್ ಗ್ರೇ

    ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಭಾರತದಲ್ಲಿ ಸಖತ್ ಸದ್ದು ಮಾಡಿದ ಚಿತ್ರ. ಕಾಶ್ಮೀರ್ ಪಂಡಿತರ ಹತ್ಯೆಯನ್ನು ಆಧರಿಸಿ ನಿರ್ಮಾಣವಾದ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ 200 ಕೋಟಿಗೂ ಅಧಿಕ ಹಣ ಗಳಿಸುವ ಮೂಲಕ ಸದ್ದು ಮಾಡಿತ್ತು. ಈ ಸಿನಿಮಾವನ್ನು ಪ್ರತಿಯೊಬ್ಬರೂ ನೋಡಲೇಬೇಕು ಎನ್ನುವ ಕಾರಣಕ್ಕಾಗಿ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ತೆರಿಗೆ ವಿನಾಯತಿ ಘೋಷಣೆ ಮಾಡಿದ್ದವು. ಅನೇಕರು ಈ ಸಿನಿಮಾ ಬಗ್ಗೆ ಕೊಂಡಾಡಿದ್ದರು. ಆದರೆ, ಇಲ್ಲೊಬ್ಬ ನಿರ್ದೇಶಕರು  ಈ ಸಿನಿಮಾವನ್ನುಕಸಕ್ಕೆ ಹೋಲಿಸಿದ್ದಾರೆ.

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಆಸ್ಕರ್ ಪ್ರಶಸ್ತಿಗಾಗಿ ಕಳುಹಿಸುವ ಕುರಿತು ಭಾರೀ ಚರ್ಚೆ ನಡೆದಿದೆ. ಇದೇ ಸಂದರ್ಭದಲ್ಲಿ ಕೆನಡಾದ ಹೆಸರಾಂತ ನಿರ್ದೇಶಕ ಡಿಲನ್ ಮೋಹನ್ ಗ್ರೇ ಸಿನಿಮಾದ ಕಂಟೆಂಟ್ ಕುರಿತು ಕಟುವಾಗಿಯೇ ಟೀಕೆ ಮೂಡಿದ್ದಾರೆ. ಈ ಸಿನಿಮಾ ದ್ವೇಷ ಬಿತ್ತುವ ಕಸ ಎಂದು ನುಡಿದಿದ್ದಾರೆ. ಇಂತಹ ಸಿನಿಮಾಗಳಿಗೆ ಮಾನ್ಯತೆ ನೀಡಬಾರದು ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಶೂಟಿಂಗ್ ವೇಳೆ ಅವಘಡ: ಆಸ್ಪತ್ರೆ ಸೇರಿದ ಬಾಹುಬಲಿ ಬಿಜ್ಜಳದೇವ ಪಾತ್ರಧಾರಿ ನಾಸರ್

    ದಿ ಕಾಶ್ಮೀರ್ ಫೈಲ್ಸ್  ಕಲಾತ್ಮಕ ಅರ್ಹತೆ ಇಲ್ಲದ ಸಿನಿಮಾ. ಇಂತಹ ಸಿನಿಮಾವೇನಾದರೂ ಆಸ್ಕರ್ ಯಾದಿಯಲ್ಲಿ ಕಾಣಿಸಿಕೊಂಡರೆ, ಅದು ಭಾರತಕ್ಕೆ ಆಗುವ ಅವಮಾನ ಎಂದೂ ಡಿಲನ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇಂತಹ ಸಿನಿಮಾಗಳನ್ನು ಭಾರತದಂತಹ ಶಾಂತಿ ನಾಡಿನಲ್ಲಿ ಪೋಷಿಸಿದ್ದು ನನಗೆ ಅಚ್ಚರಿ ತಂದಿದೆ ಎಂದೂ ಅವರು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊಡಲಿಯಿಂದ ತಲೆಗೆ ಹೊಡೆದು ಯುವಕನ ಕೊಲೆ

    ಕೊಡಲಿಯಿಂದ ತಲೆಗೆ ಹೊಡೆದು ಯುವಕನ ಕೊಲೆ

    ಬಾಗಲಕೋಟೆ: ಯುವಕನ ತಲೆಗೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಚಿಕ್ಕನಾಳದಲ್ಲಿ ನಡೆದಿದೆ.

    ವಿಠ್ಠಲ್ ಸೀಮಿ(27) ಕೊಲೆಯಾದ ಯುವಕ. ಚಿಕ್ಕನಾಳ ಗ್ರಾಮದ ಹತ್ತಿರ ಸಾಯಿ ಪಾರ್ಕ್ ಹೋಟೆಲ್ ಬಳಿ ಸ್ನೇಹಿತರ ಜೊತೆ ವಿಠ್ಠಲ ಊಟಕ್ಕೆ ಬಂದಿದ್ದರು. ಈ ವೇಳೆ ಜಗದೀಶ್ ಭಂಡಾರಿ ಎನ್ನುವವರು ಈತನನ್ನು ನೋಡಿ ಆಕ್ರೋಶಕೊಂಡು ಕೊಡಲಿಯಿಂದ ತಲೆಗೆ ಹೊಡೆದು ಕೊಲೆಗೈದಿದ್ದಾರೆ. ಇಬ್ಬರು ಕುಷ್ಟಗಿ ತಾಲೂಕಿನ ಮಿಟ್ಟಲಕೋಡ ಗ್ರಾಮದ ನಿವಾಸಿಗಳು ಎಂಬುದು ತಿಳಿದುಬಂದಿದೆ.ಇದನ್ನೂ ಓದಿ:ಒಂದು ವರ್ಷದಿಂದ ಇವರು ಬಾಯಿ ಮುಚ್ಚಿದ್ರು: ಡಿಕೆಶಿ ವಿರುದ್ಧ ಅನಿಲ್ ಬೆನಕೆ ವಾಗ್ದಾಳಿ

    ಕೊಲೆಗೆ ಕಾರಣವೇನು?
    2016ರಲ್ಲಿ ಜಗದೀಶ್ ಭಂಡಾರಿ ಮನೆಯ ಒಬ್ಬ ಅಪ್ರಾಪ್ತೆ ಜೊತೆ ವಿಠ್ಠಲ್ ನಾಪತ್ತೆಯಾಗಿದ್ದರು. ಆಗ ವಿಠ್ಠಲ ವಿರುದ್ಧ ಈ ಕುಟುಂಬ ಫೊಕ್ಸೋ ಕೇಸ್ ದಾಖಲಿಸಿತ್ತು. ಈ ಪರಿಣಾಮ ವಿಠ್ಠಲ್ ಜೈಲು ಕೂಡ ಸೇರಿದ್ದು, ನಂತರ ಬಿಡುಗಡೆಯಾಗಿದ್ದರು. ಈ ಹಳೆಯ ದ್ವೇಷಕ್ಕೆ ಜಗದೀಶ್ ಅವರು ಈ ಕೊಲೆ ಮಾಡಿದ್ದರೆಂಬ ಶಂಕೆ ವ್ಯಕ್ತವಾಗುತ್ತಿದೆ.ಇದನ್ನೂ ಓದಿ:ಜಾತಿ, ಭಾಷೆಯ ವಿಷಬೀಜ ಬಿತ್ತಿ ಅಧಿಕಾರ ಹಿಡಿಯುವ ತಂತ್ರ ಪ್ರಾರಂಭವಾಗಿದೆ: ಈರಣ್ಣ ಕಡಾಡಿ

    ಘಟನೆ ನಡೆದ ಸ್ಥಳಕ್ಕೆ ಅಮೀನಗಡ ಪೊಲೀಸರು ಭೇಟಿ ನೀಡಿ ಈ ಕುರಿತು ಪರಿಶೀಲನೆ ಮಾಡುತ್ತಿದ್ದಾರೆ.

     

  • ನೀರು ಎರಚಿದ್ದನೆಂದು ದ್ವೇಷ- ಮಾರಾಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

    ನೀರು ಎರಚಿದ್ದನೆಂದು ದ್ವೇಷ- ಮಾರಾಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

    ಬೆಂಗಳೂರು: ಊರಹಬ್ಬದ ವೇಳೆ ಬಣ್ಣದ ನೀರು ಎರಚಿದ್ದಕ್ಕೆ ಹಳೆ ದ್ವೇಷವನ್ನು ಮುಂದಿಟ್ಟುಕೊಂಡು ಯುವಕನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ಕಾಟನ್‍ಪೇಟೆಯಲ್ಲಿ ನಡೆದಿದೆ.

    ಗೋವಿಂದ್‍ರಾಜು ಮೃತ ದುರ್ದೈವಿ. ಊರಹಬ್ಬದಲ್ಲಿ ಗೋವಿಂದರಾಜು ಹಾಗೂ ಶಂಕರ್ ಬಣ್ಣದ ನೀರು ಎರಚಾಡಿದ್ದಾರೆ. ನೀರು ಎರಚಿದ್ದನ್ನೆ ಮುಂದಿಟ್ಟುಕೊಂಡು ಆರೋಪಿ ಶಂಕರ್ ತನ್ನ ಬಳಿಯಿದ್ದ ಚಾಕುವಿನಿಂದ ಗೋವಿಂದ್ ರಾಜುನನ್ನು ಬರ್ಬರವಾಗಿ ಹತ್ಯಗೈದಿದ್ದಾನೆ.

    ಘಟನೆಗೆ ಸಂಬಂಧಿಸಿದಂತೆ ಆರೋಪಿ ಶಂಕರ್‍ನನ್ನು ಕಾಟನ್‍ಪೇಟೆ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಸ್ನೇಹಿತನನ್ನೇ ಗುಂಡಿಕ್ಕಿ ಹತ್ಯೆ- 10 ವರ್ಷದ ಹಿಂದಿನ ಜಗಳ ಅಂತ್ಯ