Tag: Hashmatullah Shahidi

  • ನೋವಿನಲ್ಲೂ ಮ್ಯಾಕ್ಸಿ ಬೆಂಕಿ ಆಟಕ್ಕೆ ಅಫ್ಘಾನ್‌ ಧೂಳಿಪಟ – ಸೆಮೀಸ್‌ಗೆ ಆಸೀಸ್‌ ಗ್ರ್ಯಾಂಡ್‌ ಎಂಟ್ರಿ

    ನೋವಿನಲ್ಲೂ ಮ್ಯಾಕ್ಸಿ ಬೆಂಕಿ ಆಟಕ್ಕೆ ಅಫ್ಘಾನ್‌ ಧೂಳಿಪಟ – ಸೆಮೀಸ್‌ಗೆ ಆಸೀಸ್‌ ಗ್ರ್ಯಾಂಡ್‌ ಎಂಟ್ರಿ

    ಮುಂಬೈ: ಗ್ಲೇನ್‌ ಮ್ಯಾಕ್ಸ್‌ವೆಲ್‌ (Glenn Maxwell) ಭರ್ಜರಿ ದ್ವಿಶತಕದ ನೆರವಿನೊಂದಿಗೆ ಆಸ್ಟ್ರೇಲಿಯಾ (Australia) ತಂಡವು ಅಫ್ಘಾನಿಸ್ತಾನದ ವಿರುದ್ಧ 3 ವಿಕೆಟ್‌ಗಳ ಅಮೋಘ ಜಯ ಸಾಧಿಸಿದ್ದು, ವಿಶ್ವಕಪ್‌ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಪಂದ್ಯಗೆದ್ದು ಸೆಮೀಸ್‌ ಪ್ರವೇಶಿಸುವ ಆಸೆಯಲ್ಲಿದ್ದ ಅಫ್ಘಾನಿಸ್ತಾನ ತಂಡದ ಕನಸು ಭಗ್ನಗೊಂಡಿದೆ.

    ಟಾಸ್‌ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ (Afghanistan) ತಂಡ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 291 ರನ್‌ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡ 46.5 ಓವರ್‌ಗಳಲ್ಲೇ 293 ರನ್‌ ಗಳಿಸಿ ಜಯ ಸಾಧಿಸಿತು. ಇದನ್ನೂ ಓದಿ: ವಿಶ್ವಕಪ್‌ನಲ್ಲಿ `Timed Out’ ಟಾಕ್‌ ವಾರ್‌ ಜೋರು – ವೀಡಿಯೋ ಪ್ರೂಫ್‌ ಕೊಟ್ಟ ಮಾಥ್ಯೂಸ್

    ಆಸ್ಟ್ರೇಲಿಯಾ ಆರಂಭದಲ್ಲೇ ಎಡವಿತು, ಪವರ್‌ ಪ್ಲೇ ಮುಗಿಯುವಷ್ಟರಲ್ಲೇ 52 ರನ್‌ಗಳಿಗೆ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತ್ತು. ಆ ನಂತರವೂ ಆಫ್ಘನ್‌ ಬೌಲರ್‌ಗಳು ಬೆಂಬಿಡದೇ ಆಸೀಸ್‌ ಮೇಲೆ ತಮ್ಮ ಪರಾಕ್ರಮ ಮುಂದುವರಿಸಿ 39 ರನ್‌ಗಳ ಅಂತರದಲ್ಲೇ ಇನ್ನೂ 7 ವಿಕೆಟ್‌ಗಳನ್ನ ಉಡೀಸ್‌ ಮಾಡಿದ್ದರು. ಇದು ಆಸ್ಟ್ರೇಲಿಯಾಗೆ ದೊಡ್ಡ ಆಘಾತವಾಯಿತು. ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಎಂದೇ ಗುರುತಿಸಿಕೊಂಡಿದ್ದ ಟ್ರಾವಿಸ್‌ ಹೆಡ್‌, ಜೋಸ್‌ ಇಂಗ್ಲಿಸ್‌ ಶೂನ್ಯ ಸುತ್ತಿದ್ದರು. ಡೇವಿಡ್‌ ವಾರ್ನರ್‌ 18 ರನ್‌, ಮಿಚೆಲ್‌ ಮಾರ್ಚ್‌ 24 ರನ್‌, ಮಾರ್ನಸ್‌ ಲಾಬುಶೇನ್‌ 14 ರನ್‌, ಮಾರ್ಕಸ್‌ ಸ್ಟೋಯ್ನಿಸ್‌ 6 ರನ್‌, ಮಿಚೆಲ್‌ ಸ್ಟಾರ್ಕ್‌ 3 ರನ್‌ಗಳಿಗೆ ವಿಕೆಟ್‌ ಕೈಚೆಲ್ಲಿದರು.

    ಇದರಿಂದ ಆಸ್ಟ್ರೇಲಿಯಾ ತಂಡದ ಸೋಲು ಖಚಿತ ಎಂದೇ ಭಾವಿಸಲಾಗಿತ್ತು. ಆದ್ರೆ ಮ್ಯಾಕ್ಸ್‌ವೆಲ್‌ ಏಕಾಂಗಿ ಹೋರಾಟದಿಂದ ಆಸೀಸ್‌ ತಂಡ ಅಮೋಘ ಜಯ ಸಾಧಿಸಿತು. ಮುರಿಯದ 8ನೇ ವಿಕೆಟ್‌ಗೆ ಗ್ಲೇನ್‌ ಮ್ಯಾಕ್ಸ್‌ವೆಲ್‌ ಹಾಗೂ ನಾಯಕ ಪ್ಯಾಟ್‌ ಕಮ್ಮಿನ್ಸ್‌ ಜೋಡಿ 170 ಎಸೆತಗಳಲ್ಲಿ 202 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡವನ್ನು ಗೆಲುವಿನ ತಡ ಸೇರಿಸಿದರು. ಮ್ಯಾಕ್ಸ್‌ವೆಲ್‌ 128 ಎಸೆತಗಳಲ್ಲಿ 201 ರನ್‌ (10 ಸಿಕ್ಸರ್‌, 21 ಬೌಂಡರಿ) ಬಾರಿಸಿದ್ರೆ, ಪ್ಯಾಟ್‌ ಕಮ್ಮಿನ್ಸ್‌ 12 ರನ್‌ ಗಳಿಸಿ ಅಜೇಯರಾಗುಳಿದರು. ಇದನ್ನೂ ಓದಿ: World Cup 2023: ಆಸೀಸ್‌ ವಿರುದ್ಧ ಹಲವು ದಾಖಲೆ ನಿರ್ಮಿಸಿದ ಅಫ್ಘಾನ್‌..!

    40.2ನೇ ಓವರ್‌ನಲ್ಲಿ ಆಸೀಸ್‌ 237 ರನ್‌ ಗಳಿಸಿದ್ದಾಗ ಮ್ಯಾಕ್ಸ್‌ವೆಲ್‌ಗೆ ತೀವ್ರವಾಗಿ ಕಾಲುನೋವು ಕಾಣಿಸಿಕೊಂಡಿತ್ತು. ಅವರು ಮೈದಾನ ತೊರೆಯುವ ಸಂದರ್ಭ ಎದುರಾಗಿತ್ತು. ಆದ್ರೆ ತಂಡಕ್ಕಾಗಿ ಆಡಿಯೇ ತೀರುತ್ತೇನೆ ಎಂದು ನಿಂತ ಮ್ಯಾಕ್ಸಿ ದ್ವಿಶತಕ ಸಿಡಿಸುವ ಜೊತೆಗೆ ತಂಡಕ್ಕೆ ಗೆಲುವು ತಂದುಕೊಟ್ಟರು. ಜೊತೆಗೆ ಆಸ್ಟ್ರೇಲಿಯಾ ಪರ ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎಂಬ ಖ್ಯಾತಿ ಗಳಿಸಿದ್ದು, ಮಾತ್ರವಲ್ಲದೇ 48 ವರ್ಷಗಳ ವಿಶ್ವಕಪ್‌ ಕ್ರಿಕೆಟ್‌ ಇತಿಹಾಸದಲ್ಲಿ ಚೇಸಿಂಗ್‌ನಲ್ಲಿ 5ನೇ ಕ್ರಮಾಂಕದಲ್ಲಿ ಅತಿಹೆಚ್ಚು ರನ್‌ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನೂ ಮಾಡಿದರು. ಅಫ್ಘಾನಿಸ್ತಾನ ಪರ ನವೀನ್-ಉಲ್-ಹಕ್, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್ ತಲಾ 2 ವಿಕೆಟ್‌ ಕಿತ್ತರು.

    ಇನ್ನೂ ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡ ಆಸ್ಟ್ರೇಲಿಯಾ ಮಾರಕ ಬೌಲರ್‌ಗಳ ಬೆವರಿಳಿಸಿದರು. ಅಫ್ಘಾನ್‌ ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್, ಜವಾಬ್ದಾರಿಯುತ ಶತಕ ಸಿಡಿಸಿ, ವಿಶ್ವಕಪ್‌ ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಅಫ್ಘಾನಿಸ್ತಾನದ ಆಟಗಾರನೊಬ್ಬ ಶತಕ ಸಿಡಿಸಿದ ಸಾಧನೆ ಮಾಡಿದರು. ಇದರೊಂದಿಗೆ ವಿಶ್ವಕಪ್‌ ಕ್ರಿಕೆಟ್‌ನಲ್ಲೇ ಅಫ್ಘಾನಿಸ್ತಾನ ತಂಡ ಗಳಿಸಿದ ಅತ್ಯಧಿಕ ಸ್ಕೋರ್‌ ಇದಾಗಿತ್ತು. ಇದನ್ನೂ ಓದಿ: ಕ್ರಿಕೆಟ್‌ ಆಡಬೇಕಂದ್ರೆ ಕೀಳು ಮನಸ್ಥಿತಿಯಿಂದ ಹೊರಬನ್ನಿ – ಶಕೀಬ್‌ ವಿರುದ್ಧ ಮಾಥ್ಯೂಸ್ ಕೆಂಡ

    ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡ ಒಂದೆಡೆ ವಿಕೆಟ್‌ ಕಳೆದುಕೊಂಡರೂ ಜವಾಬ್ದಾರಿಯುತ ರನ್‌ ಕಲೆಹಾಕುತ್ತಾ ಸಾಗಿತು. ಆದ್ರೆ ಕೊನೆಯಲ್ಲಿ ರಶೀದ್‌ ಖಾನ್‌ ಮತ್ತು ಜದ್ರಾನ್‌ ಅವರ ಸ್ಫೋಟಕ ಇನ್ನಿಂಗ್ಸ್‌ನಿಂದಾಗಿ ತಂಡದ ಮೊತ್ತ 300ರ ಗಡಿ ಸಮೀಪಿಸಿತು. ಅಫ್ಘಾನಿಸ್ತಾನದ ಪರ ಇಬ್ರಾಹಿಂ ಜದ್ರಾನ್ 129 ರನ್‌ (143 ಎಸೆತ, 3 ಸಿಕ್ಸರ್‌, 8 ಬೌಂಡರಿ), ರಶೀದ್‌ ಖಾನ್‌ 35 ರನ್‌ (18 ಎಸೆತ, 3 ಸಿಕ್ಸರ್‌, 2 ಬೌಂಡರಿ ಗಳಿಸಿ ಅಜೇಯರಾಗಿ ಉಳಿದರೆ, ರಹಮಾನುಲ್ಲಾ ಗುರ್ಬಾಜ್ 21 ರನ್‌. ರಹಮತ್‌ ಶಾ 30 ರನ್‌, ಹಸ್ಮತುಲ್ಲಾ ಶಾಹಿದಿ 26 ರನ್‌, ಅಜ್ಮತುಲ್ಲಾ ಒಮರ್ಜಾಯ್ 22 ರನ್‌, ಮೊಹಮ್ಮದ್‌ ನಬಿ 12 ರನ್‌ ಗಳಿಸಿ ಔಟಾದರು.

    ಆಸೀಸ್‌ ಪರ 9 ಓವರ್‌ನಲ್ಲಿ 70 ರನ್‌ ಬಿಟ್ಟುಕೊಟ್ಟ ಮಿಚೆಲ್‌ ಸ್ಟಾರ್ಕ್‌ 1 ವಿಕೆಟ್‌ ಪಡೆದರೆ, ಜೋಶ್‌ ಹ್ಯಾಜಲ್‌ವುಡ್‌ 2 ವಿಕೆಟ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌ ಮತ್ತು ಆಡಂ ಝಂಪಾ ತಲಾ ಒಂದೊಂದು ವಿಕೆಟ್‌ ಪಡೆದರು.

  • World Cup 2023: ಆಸೀಸ್‌ ವಿರುದ್ಧ ಹಲವು ದಾಖಲೆ ನಿರ್ಮಿಸಿದ ಅಫ್ಘಾನ್‌..!

    World Cup 2023: ಆಸೀಸ್‌ ವಿರುದ್ಧ ಹಲವು ದಾಖಲೆ ನಿರ್ಮಿಸಿದ ಅಫ್ಘಾನ್‌..!

    ಮುಂಬೈ: ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಅಫ್ಘಾನಿಸ್ತಾನ (Afghanistan) ಕ್ರಿಕೆಟ್‌ ತಂಡ ಆಸ್ಟ್ರೇಲಿಯಾ (Australia) ವಿರುದ್ಧ ಪಂದ್ಯದಲ್ಲಿ ಹಲವು ದಾಖಲೆಗಳನ್ನ ಸೃಷ್ಟಿ ಮಾಡಿದೆ.

    ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡ 5 ವಿಕೆಟ್‌ ನಷ್ಟಕ್ಕೆ 291 ರನ್‌ ಗಳಿಸಿದ್ದು, ಎದುರಾಳಿ ಆಸ್ಟ್ರೇಲಿಯಾ ತಂಡಕ್ಕೆ 292 ರನ್‌ಗಳ ಸವಾಲಿನ ಗುರಿ ನೀಡಿದೆ. ಇದೇ ಪಂದ್ಯದಲ್ಲಿ ಹೊಸ ಹೊದ ದಾಖಲೆಗಳು ಸೇರ್ಪಡೆಯಾಗಿವೆ. ಇದನ್ನೂ ಓದಿ: ಕ್ರಿಕೆಟ್‌ ಆಡಬೇಕಂದ್ರೆ ಕೀಳು ಮನಸ್ಥಿತಿಯಿಂದ ಹೊರಬನ್ನಿ – ಶಕೀಬ್‌ ವಿರುದ್ಧ ಮಾಥ್ಯೂಸ್ ಕೆಂಡ

    ಆಸ್ಟ್ರೇಲಿಯಾ ಮಾರಕ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಅಫ್ಘಾನಿಸ್ತಾನದ ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್ (Ibrahim Zadran), ಜವಾಬ್ದಾರಿಯುತ ಶತಕ ಸಿಡಿಸಿ, ವಿಶ್ವಕಪ್‌ ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಅಫ್ಘಾನಿಸ್ತಾನದ ಆಟಗಾರನೊಬ್ಬ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಅಲ್ಲದೇ ಜದ್ರಾನ್‌ ಶತಕ ಸಿಡಿಸಿದ ಕಿರಿಯ ವಯಸ್ಸಿನ ಕ್ರಿಕೆಟಿಗ ಎಂಬ ವಿಶೇಷ ಸಾಧನೆಗೂ ಪಾತ್ರರಾಗಿದ್ದಾರೆ. ಇದರೊಂದಿಗೆ ಅಫ್ಘಾನಿಸ್ತಾನ ತಂಡ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಗಳಿಸಿದ ಅತ್ಯಧಿಕ ಸ್ಕೋರ್‌ ಇದಾಗಿದೆ.

    ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡ ಒಂದೆಡೆ ವಿಕೆಟ್‌ ಕಳೆದುಕೊಂಡರೂ ಜವಾಬ್ದಾರಿಯುತ ರನ್‌ ಕಲೆಹಾಕುತ್ತಾ ಸಾಗಿತು. ಆದ್ರೆ ಕೊನೆಯಲ್ಲಿ ರಶೀದ್‌ ಖಾನ್‌ (Rashid Khan) ಮತ್ತು ಜದ್ರಾನ್‌ ಅವರ ಸ್ಫೋಟಕ ಇನ್ನಿಂಗ್ಸ್‌ನಿಂದಾಗಿ ತಂಡದ ಮೊತ್ತ 300ರ ಗಡಿ ಸಮೀಪಿಸಿತು. ಇದನ್ನೂ ಓದಿ: ವಿಶ್ವಕಪ್‌ನಲ್ಲಿ `Timed Out’ ಟಾಕ್‌ ವಾರ್‌ ಜೋರು – ವೀಡಿಯೋ ಪ್ರೂಫ್‌ ಕೊಟ್ಟ ಮಾಥ್ಯೂಸ್

    ಅಫ್ಘಾನಿಸ್ತಾನದ ಪರ ಇಬ್ರಾಹಿಂ ಜದ್ರಾನ್ 129 ರನ್‌ (143 ಎಸೆತ, 3 ಸಿಕ್ಸರ್‌, 8 ಬೌಂಡರಿ), ರಶೀದ್‌ ಖಾನ್‌ 35 ರನ್‌ (18 ಎಸೆತ, 3 ಸಿಕ್ಸರ್‌, 2 ಬೌಂಡರಿ ಗಳಿಸಿ ಅಜೇಯರಾಗಿ ಉಳಿದರೆ, ರಹಮಾನುಲ್ಲಾ ಗುರ್ಬಾಜ್ 21 ರನ್‌. ರಹಮತ್‌ ಶಾ 30 ರನ್‌, ಹಸ್ಮತುಲ್ಲಾ ಶಾಹಿದಿ 26 ರನ್‌, ಅಜ್ಮತುಲ್ಲಾ ಒಮರ್ಜಾಯ್ 22 ರನ್‌, ಮೊಹಮ್ಮದ್‌ ನಬಿ 12 ರನ್‌ ಗಳಿಸಿ ಔಟಾದರು.

    ಆಸೀಸ್‌ ಪರ 9 ಓವರ್‌ನಲ್ಲಿ 70 ರನ್‌ ಬಿಟ್ಟುಕೊಟ್ಟ ಮಿಚೆಲ್‌ ಸ್ಟಾರ್ಕ್‌ 1 ವಿಕೆಟ್‌ ಪಡೆದರೆ, ಜೋಶ್‌ ಹ್ಯಾಜಲ್‌ವುಡ್‌ 2 ವಿಕೆಟ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌ ಮತ್ತು ಆಡಂ ಝಂಪಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು. ಇದನ್ನೂ ಓದಿ: ಬಾಂಗ್ಲಾಗೆ 3 ವಿಕೆಟ್‌ ಜಯ – ಟೈಮ್ಡ್‌ ಔಟಾಗಿದ್ದಕ್ಕೆ ಶಕೀಬ್‌ ವಿರುದ್ಧ ಸೇಡು ತೀರಿಸಿಕೊಂಡ ಮ್ಯಾಥ್ಯೂಸ್‌