Tag: Hashim Musa

  • Operation Sindoor Debate | ಹೋರಾಡಿದ್ದು ಸೇನೆ, ಕ್ರೆಡಿಟ್‌ ಬಯಸುತ್ತಿರೋದು ಮೋದಿ – ಪ್ರಿಯಾಂಕಾ ಗಾಂಧಿ ಕಿಡಿ

    Operation Sindoor Debate | ಹೋರಾಡಿದ್ದು ಸೇನೆ, ಕ್ರೆಡಿಟ್‌ ಬಯಸುತ್ತಿರೋದು ಮೋದಿ – ಪ್ರಿಯಾಂಕಾ ಗಾಂಧಿ ಕಿಡಿ

    – ಪಹಲ್ಗಾಮ್‌ ದಾಳಿ ನಡೆದಿದ್ದೇಕೆ? ಈಗಲೂ ನನ್ನನ್ನು ಕಾಡುತ್ತಿದೆ; ಸಂಸದೆ ಕಳವಳ

    ನವದೆಹಲಿ: ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆಯಲ್ಲಿ ಸೇನೆಯು ದೇಶಕ್ಕಾಗಿ ಹೋರಾಡಿತು. ಆದ್ರೆ ಅದರ ಕ್ರೆಡಿಟ್‌ ಅನ್ನು ಪ್ರಧಾನಿ ಮೋದಿ ಬಯಸುತ್ತಿದ್ದಾರೆ. ನಿಮಗೆ ದೊಡ್ಡ ನಮಸ್ಕಾರ ಅಂತ ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ವಾದ್ರಾ ತಿವಿದರು.

    ಪಹಲ್ಗಾಮ್‌ ಭಯೋತ್ಪಾದಕ ದಾಳಿ (Pahalgam Terror Attack) ಮತ್ತು ಆಪರೇಷನ್‌ ಸಿಂಧೂರ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೀವು 11 ವರ್ಷದಿಂದ ಅಧಿಕಾರದಲ್ಲಿದ್ದೀರಿ. ನಿನ್ನೆ ಗೌರವ್‌ ಗೊಗೊಯ್‌ ಅವರು ಜವಾಬ್ದಾರಿ ಬಗ್ಗೆ ಮಾತನಾಡುತ್ತಿದ್ದಾಗ ರಾಜನಾಥ್‌ ಸಿಂಗ್‌ ತಲೆಯಾಡಿಸುತ್ತಿದ್ದರು, ಗೃಹ ಸಚಿವರು ನಗುತ್ತಿದ್ದರು. ಮುಂಬೈ ದಾಳಿ ನಡೆದಾಗ ಮನಮೋಹನ್‌ ಸಿಂಗ್‌ ಸರ್ಕಾರ ಏನೂ ಮಾಡಲಿಲ್ಲ ಅಂತ ಹೇಳಿದ್ರು. ಆದ್ರೆ ಅವರಿಗೆ ನೆನಪಿಲ್ಲ ಅನ್ನಿಸುತ್ತೆ, ದಾಳಿ ನಡೆಯುತ್ತಿದ್ದಾಗಲೇ ಮೂವರು ಉಗ್ರರು ಹತರಾದರು, ಬದುಕುಳಿದ ಒಬ್ಬನನ್ನು ಹಿಡಿದು ಗಲ್ಲಿಗೇರಿಸಲಾಯಿತು. ಆ ಸಂದರ್ಭದಲ್ಲಿ ಮಹಾರಾಷ್ಟ್ರದ ಸಿಎಂ, ದೇಶದ ಗೃಹ ಸಚಿವರಾಗಿದ್ದವರು ರಾಜೀನಾಮೆ ಕೊಟ್ಟರು. ಆದ್ರೆ ಉರಿ-ಪುಲ್ವಾಮಾ ದಾಳಿ ರಾಜನಾಥ್‌ ಸಿಂಗ್‌ ಗೃಹ ಸಚಿವರಾಗಿದ್ದರು, ಈಗ ರಕ್ಷಣಾ ಸಚಿವರಾಗಿದ್ದಾರೆ. ಅಮಿತ್‌ ಶಾ ಅವರ ಅಧಿಕಾರವಧಿಯಲ್ಲಿ ಮಣಿಪುರ ಹೊತ್ತಿ ಉರಿಯುತ್ತಿದೆ. ದೆಹಲಿಯಲ್ಲಿ ಗಲಭೆಗಳು ನಡೆಯುತ್ತಿವೆ. ಅದೇ ಹಾದಿಯಾಗಿ ಪಹಲ್ಗಾಮ್‌ ದಾಳಿಯೂ ನಡೆಯಿತು. ರಾಜೀನಾಮೆ ಕೊಡದೇ ಈಗಲೂ ಗೃಹಸಚಿವರಾಗಿಯೇ ಇದ್ದಾರೆ ಎಂದು ಕುಟುಕಿದರು.

    ಪಹಲ್ಗಾಮ್‌ ದಾಳಿಯನ್ನ ಖಂಡಿಸಲು ಇಡೀ ದೇಶವೇ ಒಗ್ಗಟ್ಟಾಗಿ ನಿಂತಿತು. ದೇಶದ ಮೇಲೆ ದಾಳಿ ನಡೆದರೆ ನಾವೆಲ್ಲರೂ ಸರ್ಕಾರದ ಜೊತೆ ಒಟ್ಟಾಗಿ ನಿಲ್ಲುತ್ತೇವೆ ಅನ್ನೋದನ್ನ ತೋರಿಸಿಕೊಟ್ಟಿತು. ಅದರಂತೆ ಆಪರೇಷನ್‌ ಸಿಂಧೂರಲ್ಲಿ ಸೇನೆಯು ಧೈರ್ಯದಿಂದ ಹೋರಾಡಿತು. ಆದ್ರೆ ಅದರ ಕ್ರೆಡಿಟ್‌ ಮೋದಿ ಬಯಸುತ್ತಿದ್ದಾರೆ ಎಂದು ಅಮಾಧಾನ ಹೊರಹಾಕಿದರು.

    ಈಗಲೂ ನನ್ನನ್ನು ಕಾಡುತ್ತಿದೆ:
    ಸಚಿವರು ಎಲ್ಲಾ ಅಂಶಗಳನ್ನು ನೀಡಿದ್ರು, ಆದ್ರೆ ಪಹಲ್ಗಾಮ್‌ ದಾಳಿ ಹೇಗೆ ಮತ್ತು ಏಕೆ ಆಯಿತು? ಈ ಪ್ರಶ್ನೆ ನನ್ನನ್ನ ಇನ್ನೂ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಜನ ಸರ್ಕಾರವನ್ನ ನಂಬಿ ಪಹಲ್ಗಾಮ್‌ಗೆ ಹೋಗಿದ್ದರು. ಆದ್ರೆ ಸರ್ಕಾರ ಏನು ಮಾಡಿತು? ದಾಳಿಗೆ ಯಾರು ಹೊಣೆ? ನಾಗರಿಕರ ಸುರಕ್ಷತೆ ರಕ್ಷಣಾ ಸಚಿವರ ಜವಾಬ್ದಾರಿಯಲ್ಲವೇ, ಗೃಹ ಸಚಿವರ ಜವಾಬ್ದಾರಿಯಲ್ಲವೇ? ಎಂದು ಪ್ರಶ್ನೆಗಳ ಮಳೆ ಸುರಿಸಿದರಲ್ಲೇ ಟಿಆರ್‌ಎಫ್ ಭಯಾನಕ ದಾಳಿಯನ್ನ ಹೇಗೆ ಯೋಜಿಸುತ್ತಿದೆ ಅನ್ನೋದರ ಪರಿಕಲ್ಪನೆ ಸರ್ಕಾರದ ಯಾವುದೇ ಸಂಸ್ಥೆಗೆ ಇಲ್ಲದಂತಾಗಿದೆ. ಇದು ಏಜೆನ್ಸಿಗಳ ವೈಫಲ್ಯ ಅಲ್ಲವೇ? ಖಂಡಿತಾ ಇದು ಭದ್ರತಾ ಸಂಸ್ಥೆಗಳ ಬಹುದೊಡ್ಡ ವೈಫಲ್ಯ ಎಂದು ಆಕ್ರೋಶ ಹೊರಹಾಕಿದರು.

  • ಪಹಲ್ಗಾಮ್ ದಾಳಿ ಮಾಡಿದವ್ರು ಪಾಕಿಗಳು, ವೋಟರ್ ಐಡಿ, ಚಾಕ್ಲೆಟ್ ಸಾಕ್ಷ್ಯ – ವಿಪಕ್ಷಗಳಿಗೆ ಎಳೆಎಳೆಯಾಗಿ ಘಟನೆ ವಿವರಿಸಿದ ಅಮಿತ್ ಶಾ

    ಪಹಲ್ಗಾಮ್ ದಾಳಿ ಮಾಡಿದವ್ರು ಪಾಕಿಗಳು, ವೋಟರ್ ಐಡಿ, ಚಾಕ್ಲೆಟ್ ಸಾಕ್ಷ್ಯ – ವಿಪಕ್ಷಗಳಿಗೆ ಎಳೆಎಳೆಯಾಗಿ ಘಟನೆ ವಿವರಿಸಿದ ಅಮಿತ್ ಶಾ

    – ಉಗ್ರರ ಬಳಿ ಸಿಕ್ಕ ರೈಫಲ್‌ ಪಾಕಿಸ್ತಾನದಲ್ಲಿ ತಯಾರಾಗಿದ್ದು

    ನವದೆಹಲಿ: ಪಹಲ್ಗಾಮ್‌ ಭಯೋತ್ಪಾದಕ ದಾಳಿ (Pahalgam Terror Attack) ಮಾಡಿದವರು ಪಾಕಿಗಳೇ ಎಂಬುದಕ್ಕೆ ಸರ್ಕಾರದ ಬಳಿ ದೃಢವಾದ ಸಾಕ್ಷ್ಯಗಳಿವೆ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah), ಪಾಕ್‌ಗೆ ಕ್ಲೀನ್‌ ಚಿಟ್‌ ಕೊಟ್ಟ ಮಾಜಿ ಸಚಿವ ಚಿದರಂಬರಂ ವಿರುದ್ಧ ಹರಿಹಾಯ್ದರು.

    ಆಪರೇಷನ್‌ ಸಿಂಧೂರ (Operation Sindoor) ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಗೃಹ ಸಚಿವರು, ವಿಪಕ್ಷಗಳನ್ನ ತರಾಟೆಗೆ ತೆಗೆದುಕೊಂಡರು. ದಾಳಿಕೋರರು ಪಾಕಿಸ್ತಾನಿಯರೇ ಎಂಬುದಕ್ಕೆ ಸರ್ಕಾದ ಬಳಿ ಸ್ಪಷ್ಟ ಸಾಕ್ಷ್ಯಗಳಿವೆ. ಹತ್ಯೆಯಾದ ಉಗ್ರರ ಬಳಿ ಪಾಕಿಸ್ತಾನದ ವೋಟರ್‌ ಐಡಿ ಪತ್ತೆಯಾಗಿದೆ. ಜೊತೆಗೆ ಉಗ್ರರು ಬಳಸಿದ್ದ ರೈಫಲ್‌, ಕಾಟ್ರಿಡ್ಜ್‌ ಪಾಕಿಸ್ತಾನದಲ್ಲಿ ತಯಾರಾದ ಅಸ್ತ್ರಗಳು. ಸ್ಥಳದಲ್ಲಿ ಸಿಕ್ಕ ಚಾಕ್ಲೆಟ್‌ ಕೂಡ ಪಾಕಿಸ್ತಾನದ್ದೇ, ಇದಕ್ಕಿಂತ ಇನ್ನೇನು ಸಾಕ್ಷ್ಯ ಬೇಕು ಅಂತ ಪ್ರಶ್ನಿಸಿದರು.

    ಭಯೋತ್ಪಾದಕರು ಪಾಕಿಸ್ತಾನದಿಂದಲೇ ಬಂದರು ಅನ್ನೋದಕ್ಕೆ ಸಾಕ್ಷ್ಯ ಏನಿದೆ? ಪಾಕಿಸ್ತಾನವನ್ನು ಉಳಿಸುವುದರಿಂದ ಅವರಿಗೆ ಏನು ಸಿಗುತ್ತೆ? ಅಂತ ಚಿದಂಬರಂ ಕೇಳ್ತಾರೆ. ಇದರರ್ಥ ಪಾಕಿಸ್ತಾನಕ್ಕೆ ಅವರು ಕ್ಲೀನ್‌ ಚಿಟ್‌ ಕೊಡ್ತಿದ್ದಾರೆ ಅಂತ ಟೀಕಿಸಿದರು. ಇದನ್ನೂ ಓದಿ: ಪಹಲ್ಗಾಮ್‌ ಪಾತಕಿಗಳನ್ನ ಕೊಂದಿದ್ದೇವೆ – ʻಸಿಂಧೂರʼ ಚರ್ಚೆ ವೇಳೆ ಅಬ್ಬರಿಸಿದ ಅಮಿತ್‌ ಶಾ

    ವಿಮಾನದಲ್ಲಿ ಉಗ್ರರ ರೈಫಲ್ ಚಂಡೀಗಢಕ್ಕೆ ಕಳಿಸಿ FSL ಟೆಸ್ಟ್
    ಸಿಂಧೂರ ಚರ್ಚೆ ವೇಳೆ ಅಬ್ಬರಿಸಿ ಬೊಬ್ಬರಿಸಿದ ಅಮಿತ್‌ ಶಾ, ಉಗ್ರರು ಪಾಕಿಸ್ತಾನಕ್ಕೆ ವಾಪಸ್ ಆಗಲು ನಾವು ಅವಕಾಶ ಕೊಡಲಿಲ್ಲ. ಪಾತಕಿಗಳನ್ನ ಇಲ್ಲಿಯೇ ಕೊಲ್ಲಲಾಗಿದೆ. ಅಲ್ಲದೇ ಪಹಲ್ಗಾಮ್‌ನಲ್ಲಿ ಬಳಸಿದ್ದ ರೈಫಲ್‌ಗಳು, ಹತ್ಯೆಯಾದ ಉಗ್ರನ ಬಳಿ ಸಿಕ್ಕಿದ್ದ ರೈಫಲ್‌ ಒಂದೇ ಅಂತ ಖಚಿತಪಡಿಸಿದ್ದೇವೆ. ನಿನ್ನೆಯೇ ಚಂಡೀಗಢಕ್ಕೆ ವಿಮಾನದಲ್ಲಿ ರೈಫಲ್ ಕಳಿಸಿ ದೃಢಪಡಿಸಿದ್ದೇವೆ. ಪಹಲ್ಗಾಮ್‌ ದಾಳಿಯಲ್ಲಿ ಸಿಕ್ಕಿದ ಗುಂಡು ಮತ್ತು ನಿನ್ನೆ ಚಂಡೀಗಢ ಎಫ್‌ಎಸ್‌ಎಲ್‌ನಲ್ಲಿ ರೈಫಲ್ ಬಳಸಿ ಅದರಿಂದಲೂ ಗುಂಡು ಹಾರಿಸಿ ಖಚಿತಪಡಿಸಿದ್ದೇವೆ. ಈ ಮೂರೂ ರೈಫಲ್‌ಗಳನ್ನ ಬಳಸಿಯೇ ಪಹಲ್ಗಾಮ್‌ನಲ್ಲಿ ದಾಳಿ ಮಾಡಿರೋದು ಖಚಿತವಾಗಿದೆ. ಸತ್ತ ಇಬ್ಬರು ಉಗ್ರರ ಬಳಿ ಪಾಕಿಸ್ತಾನದ ವೋಟರ್ ಐಡಿ ಇತ್ತು. ಅಲ್ಲದೇ ಸ್ಥಳದಲ್ಲಿ ಸಿಕ್ಕಿದ ಚಾಕ್ಲೆಟ್ ಪಾಕಿಸ್ತಾನದ್ದೇ ಎಂದು ಇಂಚಿಂಚೂ ಮಾಹಿತಿಯನ್ನ ವಿವರಿಸಿದ್ರು. ಇದನ್ನೂ ಓದಿ: ರಕ್ತ ಹರಿಯುವ ಕಡೆ ಮಾತುಕತೆ ಪ್ರಸ್ತಾಪವೇ ಬರಲ್ಲ – ಆಪರೇಷನ್ ಸಿಂಧೂರ ಚರ್ಚೆಯಲ್ಲಿ ರಾಜನಾಥ್‌ ಸಿಂಗ್‌ ಘರ್ಜನೆ

    ಮೂವರು ಉಗ್ರರ ಹತ್ಯೆ:
    ಇದಕ್ಕೂ ಮುನ್ನ ಮಾತನಾಡಿದ ಸಚಿವರು, ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರ ಹಾಶಿಮ್‌ ಮೂಸಾ ಸೇರಿ ಮೂವರು ಉಗ್ರರನ್ನ ಎನ್‌ಕೌಂಟರ್‌ನಲ್ಲಿ ಹತ್ಯೆಗೈಯಲಾಗಿದೆ ಎಂದು ಲೋಕಸಭೆಗೆ ತಿಳಿಸಿದರು. ʻಆಪರೇಷನ್‌ ಮಹಾದೇವ್‌ʼ ಕಾರ್ಯಾಚರಣೆ ವೇಳೆ ಶ್ರೀನಗರದ ಡಚಿಗಮ್ ಎನ್‌ಕೌಂಟರ್‌ನಲ್ಲಿ ಉಗ್ರ ಹಾಶಿಮ್‌ ಮೂಸಾ (Hashim Musa) ಮತ್ತು ಇತರ ಇಬ್ಬರು ಉಗ್ರರನ್ನ ಕೊಲ್ಲಲಾಗಿದೆ. ಉಳಿದಿಬ್ಬರು ಕಳೆದ ವರ್ಷ ಸೋನಾಮಾರ್ಗ್ ಸುರಂಗ ದಾಳಿಯಲ್ಲಿ ಭಾಗಿಯಾಗಿದ್ದ ಜಿಬ್ರಾನ್ ಮತ್ತು ಹಮ್ಜಾ ಅಫ್ಘಾನಿ ಎಂದು ಗುರುತಿಸಲಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಉಗ್ರರು ಬಂದಿದ್ದು ಹೇಗೆ ಅಂತ ರಾಜನಾಥ್ ಸಿಂಗ್ ಮಾಹಿತಿಯೇ ನೀಡಲಿಲ್ಲ: ಕಾಂಗ್ರೆಸ್ ಮುಖಂಡ ಗೌರವ್ ಗೊಗೊಯ್

    ಸೋಮವಾರ ನಡೆದ ʻಆಪರೇಷನ್‌ ಮಹಾದೇವ್‌ʼ (Operation Mahadev) ಬಗ್ಗೆ ವಿವರ ನೀಡಿದ ಶಾ, ಭಾರತೀಯ ಸೇನೆ, ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಮತ್ತು ಜಮ್ಮು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ. ಸುಲೇಮಾನ್‌ ಮೂಸಾ, ಜಿಬ್ರಾನ್‌, ಹಮ್ಜಾ ಅಫ್ಘಾನಿ ಉಗ್ರರನ್ನ ಹತ್ಯೆಗೈಯಲಾಗಿದೆ. ಸುಲೇಮಾನ್ ಲಷ್ಕರ್-ಎ-ತೈಬಾ (LeT) ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಉಗ್ರನಾಗಿದ್ದ. ಅಲ್ಲದೇ ಈ ಮೂವರನ್ನೂ ʻAʼ ಗ್ರೇಡ್‌ನ ಉಗ್ರರು ಎಂದು ಪಟ್ಟಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ರಕ್ತ ಹರಿಯುವ ಕಡೆ ಮಾತುಕತೆ ಪ್ರಸ್ತಾಪವೇ ಬರಲ್ಲ – ಆಪರೇಷನ್ ಸಿಂಧೂರ ಚರ್ಚೆಯಲ್ಲಿ ರಾಜನಾಥ್‌ ಸಿಂಗ್‌ ಘರ್ಜನೆ

  • ಪಹಲ್ಗಾಮ್‌ ಪಾತಕಿಗಳನ್ನ ಕೊಂದಿದ್ದೇವೆ – ʻಸಿಂಧೂರʼ ಚರ್ಚೆ ವೇಳೆ ಅಬ್ಬರಿಸಿದ ಅಮಿತ್‌ ಶಾ

    ಪಹಲ್ಗಾಮ್‌ ಪಾತಕಿಗಳನ್ನ ಕೊಂದಿದ್ದೇವೆ – ʻಸಿಂಧೂರʼ ಚರ್ಚೆ ವೇಳೆ ಅಬ್ಬರಿಸಿದ ಅಮಿತ್‌ ಶಾ

    – ಪಹಲ್ಗಾಮ್‌ ದಾಳಿಯಲ್ಲಿ ಬಳಸಿದ್ದು, ಉಗ್ರನ ಬಳಿ ಸಿಕ್ಕ ರೈಫಲ್‌ ಒಂದೇ
    – ಸ್ಥಳದಲ್ಲಿ ಸಿಕ್ಕಿದ ಚಾಕ್ಲೆಟ್‌ ಕೂಡ ಪಾಕಿಸ್ತಾನದ್ದು; ಗೃಹ ಸಚಿವ ಇಂಚಿಂಚೂ ಮಾಹಿತಿ

    ನವದೆಹಲಿ: ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ (Pahalgam Terror Attack) ಭಾಗಿಯಾಗಿದ್ದ ಉಗ್ರ ಹಾಶಿಮ್‌ ಮೂಸಾ ಸೇರಿ ಮೂವರು ಉಗ್ರರನ್ನ ಎನ್‌ಕೌಂಟರ್‌ನಲ್ಲಿ ಹತ್ಯೆಗೈಯಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಲೋಕಸಭೆಗೆ ತಿಳಿಸಿದರು.

    ಇಂದು 2 ಆಪರೇಷನ್‌ ಸಿಂಧೂರ (Operation Sindoor) ಚರ್ಚೆ ಮುಂದುವರಿಸಿದ ಅಮಿತ್‌ ಶಾ ಅವರು, ವಿಪಕ್ಷಗಳ ವಿರುದ್ಧ ಅಬ್ಬರಿಸಿ ಬೊಬ್ಬರಿದರು. ʻಆಪರೇಷನ್‌ ಮಹದೇವ್‌ʼ ಕಾರ್ಯಾಚರಣೆ ವೇಳೆ ಶ್ರೀನಗರದ ಡಚಿಗಮ್ ಎನ್‌ಕೌಂಟರ್‌ನಲ್ಲಿ ಉಗ್ರ ಹಾಶಿಮ್‌ ಮೂಸಾ (Hashim Musa) ಮತ್ತು ಇತರ ಇಬ್ಬರು ಉಗ್ರರನ್ನ ಕೊಲ್ಲಲಾಗಿದೆ. ಉಳಿದಿಬ್ಬರು ಕಳೆದ ವರ್ಷ ಸೋನಾಮಾರ್ಗ್ ಸುರಂಗ ದಾಳಿಯಲ್ಲಿ ಭಾಗಿಯಾಗಿದ್ದ ಜಿಬ್ರಾನ್ ಮತ್ತು ಹಮ್ಜಾ ಅಫ್ಘಾನಿ ಎಂದು ಗುರುತಿಸಲಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಉಗ್ರರು ಬಂದಿದ್ದು ಹೇಗೆ ಅಂತ ರಾಜನಾಥ್ ಸಿಂಗ್ ಮಾಹಿತಿಯೇ ನೀಡಲಿಲ್ಲ: ಕಾಂಗ್ರೆಸ್ ಮುಖಂಡ ಗೌರವ್ ಗೊಗೊಯ್

    .

    ಸೋಮವಾರ ನಡೆದ ʻಆಪರೇಷನ್‌ ಮಹಾದೇವ್‌ʼ ಬಗ್ಗೆ ವಿವರ ನೀಡಿದ ಶಾ, ಭಾರತೀಯ ಸೇನೆ, ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಮತ್ತು ಜಮ್ಮು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ. ಸುಲೇಮಾನ್‌ ಮೂಸಾ, ಜಿಬ್ರಾನ್‌, ಹಮ್ಜಾ ಅಫ್ಘಾನಿ ಉಗ್ರರನ್ನ ಹತ್ಯೆಗೈಯಲಾಗಿದೆ. ಸುಲೇಮಾನ್ ಲಷ್ಕರ್-ಎ-ತೈಬಾ (LeT) ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಉಗ್ರನಾಗಿದ್ದ. ಅಲ್ಲದೇ ಈ ಮೂವರನ್ನೂ ʻAʼ ಗ್ರೇಡ್‌ನ ಉಗ್ರರು ಎಂದು ಪಟ್ಟಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ನಾವೆಷ್ಟು ಪಾಕಿಸ್ತಾನಿ ವಿಮಾನಗಳನ್ನ ಹೊಡೆದಿದ್ದೇವೆ ಅಂತ ಯಾರೊಬ್ಬರೂ ಕೇಳಲಿಲ್ಲ – ಸಂಸತ್‌ನಲ್ಲಿ ರಾಜನಾಥ್‌ ಸಿಂಗ್‌ ಬೇಸರ

    ಸ್ಥಳದಲ್ಲಿ ಸಿಕ್ಕಿದ ಚಾಕ್ಲೆಟ್ ಪಾಕಿಸ್ತಾನದ್ದು:
    ಸಿಂಧೂರ ಚರ್ಚೆ ವೇಳೆ ಅಬ್ಬರಿಸಿ ಬೊಬ್ಬರಿಸಿದ ಅಮಿತ್‌ ಶಾ, ಉಗ್ರರು ಪಾಕಿಸ್ತಾನಕ್ಕೆ ವಾಪಸ್ ಆಗಲು ನಾವು ಅವಕಾಶ ಕೊಡಲಿಲ್ಲ. ಪಾತಕಿಗಳನ್ನ ಇಲ್ಲಿಯೇ ಕೊಲ್ಲಲಾಗಿದೆ. ಅಲ್ಲದೇ ಪಹಲ್ಗಾಮ್‌ನಲ್ಲಿ ಬಳಸಿದ್ದ ರೈಫಲ್‌ಗಳು, ಹತ್ಯೆಯಾದ ಉಗ್ರನ ಬಳಿ ಸಿಕ್ಕಿದ್ದ ರೈಫಲ್‌ ಒಂದೇ ಅಂತ ಖಚಿತಪಡಿಸಿದ್ದೇವೆ. ನಿನ್ನೆಯೇ ಚಂಡೀಗಢಕ್ಕೆ ವಿಮಾನದಲ್ಲಿ ರೈಫಲ್ ಕಳಿಸಿ ದೃಢಪಡಿಸಿದ್ದೇವೆ. ಪಹಲ್ಗಾಮ್‌ ದಾಳಿಯಲ್ಲಿ ಸಿಕ್ಕಿದ ಗುಂಡು ಮತ್ತು ನಿನ್ನೆ ಚಂಡೀಗಢ ಎಫ್‌ಎಸ್‌ಎಲ್‌ನಲ್ಲಿ ರೈಫಲ್ ಬಳಸಿ ಅದರಿಂದಲೂ ಗುಂಡು ಹಾರಿಸಿ ಖಚಿತಪಡಿಸಿದ್ದೇವೆ. ಈ ಮೂರೂ ರೈಫಲ್‌ಗಳನ್ನ ಬಳಸಿಯೇ ಪಹಲ್ಗಾಮ್‌ನಲ್ಲಿ ದಾಳಿ ಮಾಡಿರೋದು ಖಚಿತವಾಗಿದೆ. ಸತ್ತ ಇಬ್ಬರು ಉಗ್ರರ ಬಳಿ ಪಾಕಿಸ್ತಾನದ ವೋಟರ್ ಐಡಿ ಇತ್ತು. ಅಲ್ಲದೇ ಸ್ಥಳದಲ್ಲಿ ಸಿಕ್ಕಿದ ಚಾಕ್ಲೆಟ್ ಪಾಕಿಸ್ತಾನದ್ದೇ ಎಂದು ಇಂಚಿಂಚೂ ಮಾಹಿತಿಯನ್ನ ವಿವರಿಸಿದ್ರು. ಇದನ್ನೂ ಓದಿ: ರಕ್ತ ಹರಿಯುವ ಕಡೆ ಮಾತುಕತೆ ಪ್ರಸ್ತಾಪವೇ ಬರಲ್ಲ – ಆಪರೇಷನ್ ಸಿಂಧೂರ ಚರ್ಚೆಯಲ್ಲಿ ರಾಜನಾಥ್‌ ಸಿಂಗ್‌ ಘರ್ಜನೆ

  • ಉಗ್ರರ ದಾಳಿ ಹಿಂದೆ ಪಾಕ್, ಐಎಸ್‌ಐ ನಂಟು – ಪಾಕ್ ಪ್ಯಾರಾ ಕಮಾಂಡೋ ಆಗಿದ್ದ ಹಾಶೀಮ್ ಮೂಸಾ!

    ಉಗ್ರರ ದಾಳಿ ಹಿಂದೆ ಪಾಕ್, ಐಎಸ್‌ಐ ನಂಟು – ಪಾಕ್ ಪ್ಯಾರಾ ಕಮಾಂಡೋ ಆಗಿದ್ದ ಹಾಶೀಮ್ ಮೂಸಾ!

    – ಲಷ್ಕರ್ ಎ ತೈಬಾ ಜೊತೆಗೂ ಗುರುತಿಸಿಕೊಂಡಿದ್ದ
    – ಸ್ಥಳೀಯರಲ್ಲದವರನ್ನ ಕೊಲ್ಲಲೆಂದೇ ಭಾರತಕ್ಕೆ ಬಂದಿದ್ದ ಮೂಸಾ

    ಶ್ರೀನಗರ: ಪಹಲ್ಗಾಮ್‌ನಲ್ಲಿ ನಡೆದ ಪೈಶಾಚಿಕ ಕೃತ್ಯದ (Pahalgam Terrorist Attack) ಕುರಿತು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅನೇಕ ರಹಸ್ಯಗಳನ್ನು ಬಯಲಿಗೆಳೆಯುತ್ತಿದೆ. ಈ ನಡುವೆ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಪಾಕಿಸ್ತಾನಿ ಭಯೋತ್ಪಾದಕ ಹಾಶೀಮ್ ಮೂಸಾ (Hashim Musa), ಪಾಕ್‌ನ ವಿಶೇಷ ಪಡೆಗಳಲ್ಲಿ ಪ್ಯಾರಾ-ಕಮಾಂಡೋ ಆಗಿದ್ದ ಅನ್ನೋ ಸ್ಫೋಟಕ ಮಾಹಿತಿಯನ್ನ ಎನ್‌ಐಎ ಬಹಿರಂಗಪಡಿಸಿದೆ.

    ಪಾಕಿಸ್ತಾನಿ ದಾಳಿಕೋರರಿಗೆ ಸಹಾಯ ಮಾಡಿದ ಶಂಕಿತ 15 ಕಾಶ್ಮೀರಿ ಭೂಗತ ಕಾರ್ಮಿಕರ (OGWs) ವಿಚಾರಣೆಯ ಸಮಯದಲ್ಲಿ ಮೂಸಾನ ಮಿಲಿಟರಿ ಹಿನ್ನೆಲೆ ಬಹಿರಂಗವಾಗಿದೆ. ಇದನ್ನೂ ಓದಿ: ಏ.20ರಂದೇ ನಡೆಯಬೇಕಿದ್ದ ಪಹಲ್ಗಾಮ್ ದಾಳಿ 2 ದಿನ ತಡವಾಗಿದ್ದೇಕೆ? – NIA ತನಿಖೆಯಲ್ಲಿ ರೋಚಕ ಅಂಶ

    ಹಿರಿಯ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಉಗ್ರ ಮೂಸಾ ಪಾಕಿಸ್ತಾನ ಸೇನೆಯ ಹಿನ್ನೆಲೆ ಹೊಂದಿದ್ದಾನೆ. ಪಲ್ಗಾಮ್ ದಾಳಿಯಲ್ಲಿ ISI ಪಾತ್ರದ ಇರುವುದಕ್ಕೆ ಇದು ಪ್ರಬಲ ಸಾಕ್ಷಿಯಾಗಿದೆ. ಈ ಹಿಂದೆ ಕಾಶ್ಮೀರದಲ್ಲಿ ನಡೆದ ದಾಳಿಗಳಲ್ಲೂ ISI ಕೈವಾಡವಿತ್ತು ಎಂದಿದ್ದಾರೆ. ಸದ್ಯ ದಾಳಿಯ ಸ್ಥಳವನ್ನು ಗುರುತಿಸಲಾಗಿದೆ. ಬೈಸರನ್ ಸುತ್ತಮುತ್ತಲಿನ ಕಾಡುಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    Pahalgam 2 1

    ಪಾಕಿಸ್ತಾನದ ಪ್ಯಾರಾ ಕಮಾಂಡೊ (Pakistani Para Commando) ಆಗಿದ್ದ ಮೂಶಾ ವಿಶೇಷ ತರಬೇತಿ ಪಡೆದಿದ್ದ. ಲಷ್ಕರ್-ಎ-ತೈಬಾದಲ್ಲೂ ಪ್ರಮುಖನಾಗಿ ಗುರುತಿಸಿಕೊಂಡಿದ್ದ, ಅದಕ್ಕಾಗಿಯೇ ಸ್ಥಳೀಯರಲ್ಲದವರನ್ನ ಕೊಲ್ಲಲು, ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಮೂಸಾನನ್ನ ಭಾರತಕ್ಕೆ ಕಳುಹಿಸಲಾಗಿದೆ ಎಂದು ತನಿಖಾ ತಂಡದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಭಾರತ – ಪಾಕ್‌ ನಡುವೆ ಉದ್ವಿಗ್ನತೆ ಮೇಲೆ ಚೀನಾ ನಿಗಾ – ಪಾಕಿಸ್ತಾನದ ಈ ಬೇಡಿಕೆಗೆ ಬೆಂಬಲ

    ಹಾಶೀಮ್ ಮೂಸಾ LeT ಸಂಘಟನೆಗೆ ಸೇರಿದವನು. ಆತನನ್ನು ಪಾಕಿಸ್ತಾನದ ವಿಶೇಷ ಪಡೆಗಳು LeTಗೆ ಕಳುಹಿಸಿರಬಹುದು ಎಂದು ಶಂಕಿಸಲಾಗಿದೆ. SSG ಕಮಾಂಡೋಗಳು ಯುದ್ಧದಲ್ಲಿ ಪರಿಣತಿ ಹೊಂದಿದವರು. ಅವರು ಗುಪ್ತ ಕಾರ್ಯಾಚರಣೆಗಳನ್ನು ನಡೆಸುವಲ್ಲಿ ತರಬೇತಿ ಪಡೆದಿದ್ದಾರೆ. ಅವರಿಗೆ ದೈಹಿಕ ಮತ್ತು ಮಾನಸಿಕ ತರಬೇತಿ ನೀಡಲಾಗುತ್ತದೆ. ಅಲ್ಲದೇ, ದಾಳಿ ನಡೆಸುವ ತಂತ್ರಗಾರಿಕೆ ಬಗ್ಗೆಯೂ ತರಬೇತಿ ನೀಡಲಾಗುತ್ತದೆ. SSG ಕಮಾಂಡೋಗಳು ಅತ್ಯಾಧುನಿಕ ಆಯುಧಗಳನ್ನು ಬಳಸಲು ಸಮರ್ಥರು. ಅವರು ಯಾವುದೇ ಆಯುಧಗಳಿಲ್ಲದೆ ಹೊಡೆದಾಟ ನಡೆಸಿ ಜಯಿಸುವಲ್ಲಿಯೂ ಪರಿಣತಿ ಹೊಂದಿದ್ದಾರೆ.

    NIA Investigation

    ಜೊತೆಗೆ ಈ ದಾಳಿಯಲ್ಲಿ ಪಾಕಿಸ್ತಾನ ಸೇನೆ ಮತ್ತು ಐಎಸ್‌ಐ ನೇರವಾಗಿ ಭಾಗಿಯಾಗಿರುವುದು ಕಂಡುಬಂದಿದೆ. ಅಲ್ಲದೇ, 2024ರ ಅಕ್ಟೋಬರ್‌ನಲ್ಲಿ ಗಂಡರ್‌ಬಾಲ್‌ನ ಗಗಂಗಿರ್‌ನಲ್ಲಿ ಆರು ಮಂದಿ ಸ್ಥಳೀಯರಲ್ಲದವರು ಹಾಗೂ ಓರ್ವ ವೈದ್ಯನನ್ನ ಹತ್ಯೆ ಮಾಡಲಾಗಿತ್ತು. ನಂತರ ಬಾರಾಮುಲ್ಲಾದ ಬುಟಾ ಪತ್ರಿ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ನಾಲ್ವರು ಸೇನಾ ಸಿಬ್ಬಂದಿಯನ್ನ ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ದಾಳಿಯೂ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅನೇಕ ಕೃತ್ಯಗಳಲ್ಲಿ ಮೂಸಾನ ಕೈವಾಡವಿದೆ ಎಂಬುದು ಎನ್‌ಐಎ ತನಿಖೆಯಲ್ಲಿ ತಿಳಿದುಬಂದಿದೆ.

    ದಟ್ಟ ಕಾಡಿನಲ್ಲಿ 22 ಗಂಟೆ ಕಾಲ್ನಡಿಗೆಯಲ್ಲೇ ಬಂದಿದ್ದ ಉಗ್ರರು
    ಮೂಲಗಳ ಪ್ರಕಾರ, ಶಸ್ತ್ರಸಜ್ಜಿತ ಭಯೋತ್ಪಾದಕರು ಬೈಸರನ್‌ (Baisaran) ಕಣಿವೆ ಪ್ರದೇಶಕ್ಕೆ ತಲುಪಲು ದಟ್ಟ ಕಾಡಿನೊಳಗೆ ಸುಮಾರು 20-22 ಗಂಟೆಗಳ ಕಾಲ ನಡೆದುಕೊಂಡೇ ಬಂದಿದ್ದರು. ದಾಳಿಯಲ್ಲಿ AK-47 ಮತ್ತು ಅಮೆರಿಕ ನಿರ್ಮಿತ M4 ರೈಫಲ್‌ಗಳನ್ನ ಬಳಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: Pahalgam Attack | AK-47, M4 ರೈಫಲ್‌ ಹೊತ್ತು, ದಟ್ಟ ಕಾಡಿನಲ್ಲಿ 22 ಗಂಟೆ ನಡೆದುಕೊಂಡೇ ಬಂದಿದ್ದ ಉಗ್ರರು