Tag: Hasana

  • ಉತ್ತರ ಕನ್ನಡ, ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಭಾರೀ ಮಳೆ – ಯಾವ ತಾಲೂಕಿನ ಶಾಲೆಗಳಿಗೆ ರಜೆ?

    ಉತ್ತರ ಕನ್ನಡ, ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಭಾರೀ ಮಳೆ – ಯಾವ ತಾಲೂಕಿನ ಶಾಲೆಗಳಿಗೆ ರಜೆ?

    ಬೆಂಗಳೂರು: ಭಾರೀ ಮಳೆಯಾಗುತ್ತಿರುವ (Heavy Rain) ಹಿನ್ನೆಲೆಯಲ್ಲಿ ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು ಹಾಸನ ಜಿಲ್ಲೆಯ ಕೆಲ ತಾಲೂಕಿಗಳಿಗೆ ಸೋಮವಾರ(ಆ.18) ಜಿಲ್ಲಾಧಿಕಾರಿಗಳು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ (School holiday) ಘೋಷಣೆ ಮಾಡಿದ್ದಾರೆ.

    ಉತ್ತರ ಕನ್ನಡ: ಕಾರವಾರ, ಅಂಕೋಲ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಜೋಯಿಡಾ, ಯಲ್ಲಾಪುರ, ದಾಂಡೇಲಿ ತಾಲೂಕುಗಳಿಗೆ ರಜೆ ಘೋಷಣೆಯಾಗಿದೆ.

    ಕೊಡಗು: ಕೊಡಗು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಇದ್ದು, ಗಾಳಿ ಸಹಿತ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟರಾಜ ಅವರು ಆದೇಶಿಸಿದ್ದಾರೆ.

    ಹಾಸನ: ಸಕಲೇಶಪುರ, ಬೇಲೂರು ತಾಲ್ಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆಯಾಗಿದೆ. ಆಲೂರು ತಾಲ್ಲೂಕಿನ, ಕೆಂಚಮ್ಮನ ಹೊಸಕೋಟೆ ಹೋಬಳಿಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಾತ್ರ ರಜೆ ಘೋಷಣೆಯಾಗಿದೆ.

    ಚಿಕ್ಕಮಗಳೂರು: ಕೊಪ್ಪ, ಶೃಂಗೇರಿ, ಮೂಡಿಗೆರೆ, ಎನ್ ಆರ್.ಪುರ, ಕಳಸ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ನೀಡಲಾಗಿದೆ.

    ಶಿವಮೊಗ್ಗ: ಹೊಸನರ, ಸಾಗರ ತಾಲೂಕಿನ ಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ.

  • ಪೂರ್ವಜನ್ಮದ ಪುಣ್ಯದಿಂದ ಮಂತ್ರಿ ಆಗಿದ್ದೇವೆ – ಸಚಿವ ಚೆಲುವರಾಯಸ್ವಾಮಿ

    ಪೂರ್ವಜನ್ಮದ ಪುಣ್ಯದಿಂದ ಮಂತ್ರಿ ಆಗಿದ್ದೇವೆ – ಸಚಿವ ಚೆಲುವರಾಯಸ್ವಾಮಿ

    – ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ಕೊಡಬಾರದು ಎಂದು ತೀರ್ಮಾನಿಸಿದ್ದೇನೆ ಎಂದ ಸಚಿವ

    ಹಾಸನ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಹೇಳಿಕೆಗೆ ಪ್ರತಿಕ್ರಿಯೆ ಕೊಡಬಾರದು ಎಂದು ತೀರ್ಮಾನಿಸಿದ್ದೇನೆ. ಸತ್ಯ ಇದ್ದರೆ ಪ್ರತಿಕ್ರಿಯಿಸುವುದು ಒಳ್ಳೆಯದು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ (Chaluvarayaswamy) ಹೇಳಿದ್ದಾರೆ.

    ಚನ್ನರಾಯಪಟ್ಟಣದಲ್ಲಿ ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ ಅವರ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಆಲ್ ಇಂಡಿಯಾ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸತ್ಯ ಇಲ್ಲದಿದ್ದಾಗ ನಾವೂ ಅವರ ತರಹ ಆಗಿಬಿಡ್ತೀವಿ. ಇಲ್ಲದಿದ್ದರೆ ಚೆಲುವರಾಯಸ್ವಾಮೀನೂ, ಕುಮಾರಸ್ವಾಮಿ ತರಹ ಆಗೋದ್ನಲ್ಲಾ ಅಂತಾರೆ ಜನ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಹಾಸನದಲ್ಲಿ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ- ವಾಹನ ಸವಾರರ ಪರದಾಟ

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿ, ಮಂತ್ರಿ ಆಗೋದು ಅಪರೂಪ. ಪೂರ್ವಜನ್ಮದ ಪುಣ್ಯದಿಂದ ಆಗಿದ್ದೇವೆ. ಅವರು ಎರಡು ಜನ ಗೆದ್ದು ಮಂತ್ರಿಯಾಗಿದ್ದಾರೆ. ಅವರಿಗೆ ಸಾಕಷ್ಟು ಕೆಲಸ ಇರುತ್ತೆ. ರಾಷ್ಟ್ರದಲ್ಲಿ ಮಂತ್ರಿಯಾಗಿರುವವರು ಶನಿವಾರ, ಭಾನುವಾರ ಇಲ್ಲಿಗೆ ಬಂದು ಬರೀ ಬಯ್ಯುವುದರಿಂದ ಅರ್ಥ ಇರದು ಎಂದು ಕುಟುಕಿದರು. ಸಿದ್ದರಾಮಯ್ಯ ಅವರು ಆರ್ಡಿನರಿ ಲೀಡರ್ ಅಲ್ಲ. ಸಣ್ಣಪುಟ್ಟ ವ್ಯತ್ಯಾಸ ಅಥವಾ ಯಾರೋ ಮಾಡಿದ ನಿರ್ಧಾರಕ್ಕೆ ಅವರನ್ನೇ ಹೊಣೆ ಮಾಡುವುದು ಅಪರಾಧ. ಕುಮಾರಸ್ವಾಮಿ ಹದಿನಾಲ್ಕು ತಿಂಗಳು ಸಿಎಂ ಆಗಿದ್ದಾಗ ಏನು ಮಾಡಿದ್ರು ಒಮ್ಮೆ ತಿರುಗಿ ನೋಡಲಿ ಎಂದರು. ಇದನ್ನೂ ಓದಿ: ಮಾಡಿರುವ ತಪ್ಪುಗಳು, ಹಗರಣವನ್ನು ಹೊರ ತೆಗೆಯುತ್ತೇವೆಂದು ಬಿಜೆಪಿಯವರಿಗೆ ಭಯ – ಜಿ. ಪರಮೇಶ್ವರ್

    ನಮ್ಮ ಸರ್ಕಾರ ಬಂದು 14 ತಿಂಗಳಾಗಿವೆ. ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿ ಸೇರಿ ಹಲವು ಕೆಲಸ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು. ಕೆಲವರನ್ನು ನೆಗ್ಲೆಟ್ ಮಾಡುವುದು ಅನಿವಾರ್ಯ. ನಮ್ಮ ಜೊತೆಯಲ್ಲಿರುವವರು ನಾವು ತಪ್ಪು ಮಾಡಿದ್ರೂ, ಒಳ್ಳೆಯದನ್ನೂ ಹೇಳಿದ್ರೂ ಚೆಪ್ಪಾಳೆ ಹೊಡೀತಾರೆ, ಹಾಗಾಗಿ ಕುಮಾರಸ್ವಾಮಿಗೆ ಖುಷಿ ಆಗಿದೆ ಎಂದರು. ಇದನ್ನೂ ಓದಿ: Bengaluru Rains | ಎಲೆಕ್ಟ್ರಾನಿಕ್ ಸಿಟಿ ಮತ್ತೆ ಜಲಾವೃತ – ಸಣ್ಣ ಮಳೆಗೆ ತತ್ತರಿಸಿದ ಐಟಿಬಿಟಿ ಮಂದಿ

    ಕುಮಾರಸ್ವಾಮಿ, ಯಡಿಯೂರಪ್ಪ (B S Yediyurappa), ಬೊಮ್ಮಾಯಿ ಮೂರು ಜನ ಮುಖ್ಯಮಂತ್ರಿ ಆಗಿದ್ರು, ಅವರು ಕೊಟ್ಟ ಕಾರ್ಯಕ್ರಮದಿಂದ ರೊಚ್ಚಿಗೆದ್ದು ಜನ ಅವರನ್ನು ತಿರಸ್ಕರಿಸಿ ನಮಗೆ 136 ಜನ ಗೆಲ್ಲಿಸಿ ಕೊಟ್ಟಿದ್ದಾರೆ. 30 ವರ್ಷದಲ್ಲಿ 115 ಶಾಸಕರು ಒಂದೇ ಪಕ್ಷದಿಂದ ಆಯ್ಕೆಯಾಗಿಲ್ಲ. ನಾವು 136 ಜನ ಗೆದ್ದಿದ್ದರೂ ಸರ್ಕಾರ ತೆಗೆಯಲು ಒದ್ದಾಡುತ್ತಿದ್ದಾರೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ನಮ್ಮ ಮೆಟ್ರೋದಿಂದ ಮತ್ತೊಂದು ಗುಡ್‌ನ್ಯೂಸ್ – ಹೊಸ ವರ್ಷದಿಂದ್ಲೇ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ರೈಲು!

    ಜಾತಿಗಣತಿ ಜಾರಿ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ (D K Shivakumar) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೆಲ ಸತ್ಯನಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತನಾಡುವುದು ಕಷ್ಟ. ಸಮಯ ನೋಡಿ ಮಾತಾಡಬೇಕು. ಜಾತಿ ಗಣತಿ ವರದಿ ಜಾರಿಯಿಂದ ಆಗಬಾರದ್ದು ಏನೂ ಆಗಲ್ಲ. ಒಕ್ಕಲಿಗರು, ಲಿಂಗಾಯತರು ಜಾರಿ ಮಾಡುವುದು ಬೇಡ ಎಂದು ಅರ್ಜಿ ಕೊಟ್ಟಿದ್ದಾರೆ. ಆದರೆ ನನ್ನ ಪ್ರಕಾರ ಯಾರಿಗೂ ಅನ್ಯಾಯ ಆಗಲ್ಲ. ವರದಿ ಕ್ಯಾಬಿನೆಟ್‌ನಲ್ಲಿ ಸಲ್ಲಿಕೆ ಆಗುತ್ತೆ. ಅಲ್ಲಿ ಚರ್ಚೆ ಆಗುತ್ತೆ. ಅಂತಿಮವಾಗಿ ಸಿಎಂ ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಯಾವ ಸಮಾಜಕ್ಕೂ ಅನ್ಯಾಯ ಆಗುವ ಅವಕಾಶ ಆಗಲ್ಲ ಎಂದರು. ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್ ಅರೆಬಿಯನ್ ನೈಟ್ಸ್ ಕಥೆಯಂತಿದೆ: ದರ್ಶನ್ ಪರ ಸಿ.ವಿ ನಾಗೇಶ್ ವಾದ ಹೇಗಿತ್ತು?

  • ಹಾಸನದಲ್ಲಿ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ-  ವಾಹನ ಸವಾರರ ಪರದಾಟ

    ಹಾಸನದಲ್ಲಿ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ- ವಾಹನ ಸವಾರರ ಪರದಾಟ

    ಹಾಸನ: ಜಿಲ್ಲೆಯ ಬಹುತೇಕ ಕಡೆ ಇಂದು ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ನಂತರ ಹಾಸನ (Hasan) ನಗರ ಸೇರಿದಂತೆ ಹಲವು ಕಡೆಗಳಲ್ಲಿ ಭಾರೀ ಮಳೆಯಾಗಿದೆ. ಇದರಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡಬೇಕಾಯಿತು.

    ಹಾಸನ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿತ್ತು. ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತೆ ಇರುವ ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿತ್ತು. ಇದನ್ನೂ ಓದಿ: Exit Poll Result | ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್‌-ಎನ್‌ಸಿ ಮೈತ್ರಿಕೂಟಕ್ಕೆ ಅಧಿಕಾರ – ಬಿಜೆಪಿಗೆ ಹಿಂದಿಗಿಂತ ಹೆಚ್ಚು ಸ್ಥಾನ

    ಹಾಸನ, ಚನ್ನರಾಯಪಟ್ಟಣ (Channarayapatna) ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಒಂದು ಕಡೆ ಅತಿವೃಷ್ಟಿ ಮತ್ತೊಂದು ಕಡೆ ಅನಾವೃಷ್ಟಿಯಿಂದ ರೈತರು, ಕಾಫಿ ಬೆಳೆಗಾರರು ತ್ರಿಶಂಕು ಸ್ಥಿತಿಗೆ ಸಿಲುಕಿ ತೊಂದರೆ ಅನುಭವಿಸುವಂತಾಗಿದೆ. ಇದನ್ನೂ ಓದಿ: Exit Poll Results: ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್‌ ಕನಸು ಭಗ್ನ – ಕಾಂಗ್ರೆಸ್‌ ಅಧಿಕಾರಕ್ಕೆ

  • ನೂರಾರು ಕೋಟಿ ಆಸ್ತಿಗೆ ಕಡಿಮೆ ಮೌಲ್ಯ ತೋರಿಸಿದ್ದಾರೆ, ಶ್ರೇಯಸ್ ಪಟೇಲ್ ಅನರ್ಹಗೊಳ್ಳಬೇಕು: ದೇವರಾಜೇಗೌಡ

    ನೂರಾರು ಕೋಟಿ ಆಸ್ತಿಗೆ ಕಡಿಮೆ ಮೌಲ್ಯ ತೋರಿಸಿದ್ದಾರೆ, ಶ್ರೇಯಸ್ ಪಟೇಲ್ ಅನರ್ಹಗೊಳ್ಳಬೇಕು: ದೇವರಾಜೇಗೌಡ

    ಹಾಸನ: ನೂರಾರು ಕೋಟಿ ಮೌಲ್ಯದ ಆಸ್ತಿಗೆ ಕಡಿಮೆ ಮೌಲ್ಯವನ್ನು ಅಫಿಡವಿಟ್‌ನಲ್ಲಿ ಉಲ್ಲೇಖ ಮಾಡಿರುವ ಸಂಸದ ಶ್ರೇಯಸ್ ಪಟೇಲ್ ಅವರನ್ನು ಸಂಸತ್ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ದೇವರಾಜೇಗೌಡ (Devaraje Gowda)  ಆಗ್ರಹಿಸಿದ್ದಾರೆ.

    ನೂತನ ಸಂಸದ ಶ್ರೇಯಸ್ ಪಟೇಲ್ (Shreyas Patel) ವಿರುದ್ಧ ಕೇಸ್ ಬಗ್ಗೆ ಸದಸ್ಯತ್ವ ಅನರ್ಹಗೊಳಿಸಬೇಕೆಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಮಾತನಾಡಿದ ಅವರು, ಮಾಜಿ ಸಂಸದ ಪ್ರಜ್ವಲ್ ರೇವಣ್ಣರ (Prajwal Revanna) ಅಶ್ಲೀಲ ಬಿಡುಗಡೆ ಮಾಡಿ ಅದರ ಲಾಭವನ್ನು ಶ್ರೇಯಸ್ ಪಟೇಲ್ ಪಡೆದುಕೊಂಡಿದ್ದಾರೆ. ಅವರ ತಪ್ಪು ಮಾಹಿತಿ ಬಗ್ಗೆ ಕೋರ್ಟ್ ಜೊತೆಗೆ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿದೆ. ಈ ಪ್ರಕರಣದಲ್ಲಿ ನನ್ನ ಮಗನಿಂದಲೇ ದೂರು ಕೊಡಿಸಿದ್ದೇನೆ. ಯಾವುದೇ ಆಮಿಷಕ್ಕೆ ಬಲಿಯಾಗಬಾರದು ಎಂದು ಹೀಗೆ ಮಾಡಿದ್ದೇನೆ. ಇನ್ನು ಮೂರ್ನಾಲ್ಕು ತಿಂಗಳಲ್ಲಿ ಶ್ರೇಯಸ್ ಸದಸ್ಯತ್ವ ಅನರ್ಹತೆ ಆಗಲಿದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಗಿರೀಶ್‌ನಿಂದ ದೂರವಾಗಿದ್ದಕ್ಕೆ ಹುಬ್ಬಳ್ಳಿ ಅಂಜಲಿ ಕೊಲೆ – ಚಾರ್ಜ್‌ಶೀಟ್‌ ಸಲ್ಲಿಸಿದ ಸಿಐಡಿ

    ಪ್ರಜ್ಚಲ್ ರೇವಣ್ಣ ಕೇಸ್‌ನಲ್ಲಿ ನಮಗೆ ಅನುಭವ ಇರಲಿಲ್ಲ. ಈಗ ನಾವು ಸೂಕ್ತ ರೀತಿಯಲ್ಲಿ ದಾಖಲೆ ನೀಡಿದ್ದೇವೆ. ಶ್ರೇಯಸ್ ಶೀಘ್ರವಾಗಿ ಅನರ್ಹತೆ ಆಗಲಿದ್ದಾರೆ. ಸೆಪ್ಟೆಂಬರ್‌ನಲ್ಲಿ ಖುದ್ದು ಹಾಜರಿಗೆ ಕೋರ್ಟ್ ಸೂಚನೆ ನೀಡಿದೆ. ಶ್ರೇಯಸ್ ಜನರ ಸಿಂಪತಿ ಗಳಿಸಲು ಬೆಲೆ ಬಾಳುವ ಆಸ್ತಿಗೆ ಕಡಿಮೆ ಮೌಲ್ಯ ಇರುವ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಹೆಚ್ಚುವರಿಯಾಗಿ 21 ಲಕ್ಷ ರೂ. ಖರ್ಚು ಮಾಡಿರುವ ಬಗ್ಗೆ ದೂರು ನೀಡಲಾಗಿದೆ. ಅಂದಿನ ಚುನಾವಣಾ ಅಧಿಕಾರಿ ಜೊತೆ ಶಾಮೀಲಾಗಿ ಖರ್ಚು ವೆಚ್ಚವನ್ನು ಮುಚ್ಚಿಡಲಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸೇರ್ಪಡೆಯಾಗ್ತಾರಾ ಕುಸ್ತಿಪಟು ವಿನೇಶ್ ಫೋಗಟ್?

    ಆದಾಯ ತೆರಿಗೆ ಇಲಾಖೆಗೂ ಕೂಡ ತಪ್ಪು ಮಾಹಿತಿ ನೀಡಲಾಗಿದೆ. ತಪ್ಪು ಮಾಹಿತಿ ನೀಡುವುದು ಕೂಡ ಚುನಾವಣಾ ಅಕ್ರಮ ಆಗಲಿದೆ ಎಂದರು. ಇದನ್ನೂ ಓದಿ:KSRTC ಬಸ್ ದರ ಏರಿಕೆ – ಮತ್ತೆ ಸುಳಿವು ನೀಡಿದ ರಾಮಲಿಂಗಾ ರೆಡ್ಡಿ

    ಹಾಸನದ ಮಾಜಿ ಸಂಸದ ಪ್ರಜ್ಚಲ್ ರೇವಣ್ಣ ಸದಸ್ಯತ್ವ ಅನರ್ಹತೆಗೂ ಹೋರಾಟ ನಡೆಸಿ, ಹೈಕೋರ್ಟ್ನಲ್ಲಿ ರೇವಣ್ಣ ಸದಸ್ಯತ್ವ ಅನರ್ಹತೆಗೊಳಿಸುವಲ್ಲಿ ದೇವರಾಜೇಗೌಡ ಯಶಸ್ವಿಯಾಗಿದ್ದರು. ಇದನ್ನೂ ಓದಿ: ನಾವು ತಟಸ್ಥವಾಗಿಲ್ಲ, ಶಾಂತಿ ಕಡೆ ಇದ್ದೇವೆ: ಉಕ್ರೇನ್‌ ಭೇಟಿ ಬಗ್ಗೆ ಮೋದಿ ಮಾತು

  • ಹಾಸನ ನಗರ ಪ್ರದೇಶದ ನಿವಾಸಿಗಳಿಗೆ ನೀರಿನ ಸಮಸ್ಯೆ

    ಹಾಸನ ನಗರ ಪ್ರದೇಶದ ನಿವಾಸಿಗಳಿಗೆ ನೀರಿನ ಸಮಸ್ಯೆ

    ಹಾಸನ: ಹೆಚ್ಚು ಮಳೆಯಾಗದ ಕಾರಣ ಹಾಸನ ನಗರ (Hasana) ಪ್ರದೇಶದ ನಿವಾಸಿಗಳಿಗೆಈಗ ನೀರಿನ ಸಮಸ್ಯೆ ಎದುರಾಗುತ್ತಿದೆ.

    ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಿಂದ (Hemavati Dam) ನಗರ ಪ್ರದೇಶಕ್ಕೆ ನೀರು (Drinking Water) ಪೂರೈಕೆ ಮಾಡುವ ಕೊಳವೆ ಪೈಪ್‌ನಿಂದ ಕೆಳಮಟ್ಟಕ್ಕೆ ನೀರು ಕುಸಿದಿದೆ. ಇದರಿಂದಾಗಿ ಹಾಸನ ನಗರ ನೀರು ಸರಬರಾಜು ಯೋಜನೆಯ ಕೆಳಮಟ್ಟದ ನೀರೆತ್ತುವ ಯಂತ್ರಗಾರಕ್ಕೆ ನೀರು ಪೂರೈಕೆ ಸ್ಥಗಿತಗೊಂಡಿದೆ.  ಇದನ್ನೂ ಓದಿ: ಜೆಡಿಎಸ್‌ ಜೊತೆ ಮೈತ್ರಿಗೆ ಹೈಕಮಾಂಡ್‌ಗೆ ಒಲವು, ಕೆಲ ನಾಯಕರಿಂದ ವಿರೋಧ

    ಮಳೆ ಕೊರತೆಯಿಂದ ಈ ಬಾರಿ ಹೇಮಾವತಿ ಜಲಾಶಯ ಭರ್ತಿಯಾಗಿಲ್ಲ. ಇದರ ನಡುವೆಯೂ ನಾಲೆಗಳಿಗೆ ಹಾಗೂ ನದಿಗೆ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಹೇಮಾವತಿ ನದಿ ನೀರು ಖಾಲಿಯಾಗುತ್ತಿದ್ದು, ಕುಡಿಯುವ ನೀರು ಪೂರೈಕೆ ಮಾಡುವ ನೀರಿನ ಪೈಪ್‌ನಿಂದ ಕೆಳಮಟ್ಟಕ್ಕೆ ನೀರು ಕುಸಿದಿದೆ.

    ಮುಂದಿನ ದಿನಗಳಲ್ಲಿ ನಗರ ಪ್ರದೇಶಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.


    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಯಿ ಆರಿಸುವಾಗ ತೆಂಗಿನಕಾಯಿ ಗೊನೆ ಬಿದ್ದು ಬಾಲಕ ಸಾವು

    ಕಾಯಿ ಆರಿಸುವಾಗ ತೆಂಗಿನಕಾಯಿ ಗೊನೆ ಬಿದ್ದು ಬಾಲಕ ಸಾವು

    ಹಾಸನ: ತೆಂಗಿನಕಾಯಿ ಗೊನೆ (Coconut Shell) ಬಿದ್ದು ಬಾಲಕನೊಬ್ಬ ಮೃತಪಟ್ಟ ದುರ್ಘಟನೆ ಚನ್ನರಾಯಪಟ್ಟಣದ (Channarayapatna) ಬಿ.ಚೋಳೇನಹಳ್ಳಿಯಲ್ಲಿ ನಡೆದಿದೆ.

    ಪ್ರಜ್ವಲ್ (16) ಮೃತಪಟ್ಟ ಬಾಲಕ. ಗಾಳಿ, ಮಳೆಗೆ ಬಿದ್ದಿದ್ದ ಕಾಯಿಗಳನ್ನು ಒಂದೆಡೆ ಸಂಗ್ರಹಿಸುವಾಗ ಏಕಾಏಕಿ ಮರದಿಂದ ಕಾಯಿ ಗೊನೆ ಬಾಲಕನ ಮೇಲೆ ಬಿದ್ದಿದೆ. ತೀವ್ರವಾಗಿ ಪೆಟ್ಟಾಗಿದ್ದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾನೆ.

    ಶ್ರವಣಬೆಳಗೊಳ (Shravanabelagola) ಹೊರವಲಯದ ಉತ್ತೇನಹಳ್ಳಿ ಗ್ರಾಮದ ರವಿ ಮತ್ತು ಅನಸೂಯ ದಂಪತಿ ಮಗ ಪ್ರಜ್ವಲ್‍ನೊಂದಿಗೆ ಬಿ.ಚೋಳೇನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದರು. ಪ್ರಜ್ವಲ್ ಪ್ರತಿನಿತ್ಯ ತೋಟಕ್ಕೆ ಹೋಗಿ ಕಾಯಿ ಎತ್ತಿ ಹಾಕಿ ಇತರೆ ಸಣ್ಣಪುಟ್ಟ ಕೆಲಸ ಮುಗಿಸಿ ಕಾಲೇಜಿಗೆ ಹೋಗುತ್ತಿದ್ದ. ಭಾರೀ ಮಳೆ, ಗಾಳಿಯಿಂದ ಮರದಿಂದ ತೆಂಗಿನಕಾಯಿಗಳು ನೆಲಕ್ಕೆ ಬಿದ್ದಿದ್ದವು. ಬಿದ್ದಿದ್ದ ತೆಂಗಿನಕಾಯಿಗಳನ್ನು ಒಂದೆಡೆ ಸಂಗ್ರಹಿಸುತ್ತಿದ್ದ ವೇಳೆ ಏಕಾಏಕಿ ತೆಂಗಿನಮರದಿಂದ ಬಾಲಕನ ಮೇಲೆ ತೆಂಗಿನಕಾಯಿ ಗೊನೆಗಳು ಬಿದ್ದಿದ್ದವು. ಇದನ್ನೂ ಓದಿ: ಆಷಾಢದ ಮೊದಲ ಶುಕ್ರವಾರಕ್ಕೆ ತಾಯಿ ಚಾಮುಂಡಿಯ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ

    ಪ್ರಜ್ವಲ್ ಶ್ರವಣಬೆಳಗೊಳದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 2024ಕ್ಕೆ ನಾಸಾ-ಇಸ್ರೋ ಜಂಟಿ ಬಾಹ್ಯಾಕಾಶ ಯಾನ – ಭಾರತ-US ನಡುವೆ ಒಪ್ಪಂದ

  • ಮೇಕೆದಾಟು ಪಾದಯಾತ್ರೆ – ಹಾಸನದಿಂದ ಹೊರಟಿದ್ದಾರೆ 300 ಮಂದಿ

    ಮೇಕೆದಾಟು ಪಾದಯಾತ್ರೆ – ಹಾಸನದಿಂದ ಹೊರಟಿದ್ದಾರೆ 300 ಮಂದಿ

    ಹಾಸನ: ಮೇಕೆದಾಟು ಪಾದಯಾತ್ರೆಗೆ ಹಾಸನ ಜಿಲ್ಲೆಯಿಂದ ಸುಮಾರು 6 ಸಾವಿರ ಜನ ಹೊರಟಿದ್ದು, ಕಾಂಗ್ರೆಸ್ ಮುಖಂಡರಿಂದ ಕೊರೊನಾ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಿದಂತಾಗಿದೆ.

    ಮಾಜಿ ಎಂಎಲ್‍ಸಿ ಗೋಪಾಲಸ್ವಾಮಿ, ಮಾಜಿ ಶಾಸಕ ಪುಟ್ಟೇಗೌಡ, ಬಾಗೂರು ಮಂಜೇಗೌಡ, ಕೃಷ್ಣೇಗೌಡ ನೇತೃತ್ವದಲ್ಲಿ ಸುಮಾರು 300 ವಾಹನದಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಕಾರ್ಯಕರ್ತರು ಹೊರಟಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೊರೊನಾ ಪಾಸಿಟಿವ್

    ಜಿಲ್ಲೆಯ ಗಡಿಭಾಗ ಹಿರೀಸಾವೆ ಬಳಿ ಆಜನೇಯ ಸ್ವಾಮಿ ದೇವಾಲಯದ ಬಳಿ ಪೂಜೆ ಸಲ್ಲಿಸಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕರು, ಸಚಿವರು, ನಾಯಕರಿಗೆ ಹೈಕಮಾಂಡ್ ಕ್ಲಾಸ್

  • ಕಾಲಮೇಲೆ ಕಾಲು ಹಾಕಿ ಕುಳಿತಿದ್ದ ಯುವಕನಿಗೆ ಶಿವಲಿಂಗೇಗೌಡ ಕ್ಲಾಸ್

    ಕಾಲಮೇಲೆ ಕಾಲು ಹಾಕಿ ಕುಳಿತಿದ್ದ ಯುವಕನಿಗೆ ಶಿವಲಿಂಗೇಗೌಡ ಕ್ಲಾಸ್

    ಹಾಸನ: ನಗರದ ಕಾರ್ಯಕ್ರಮವೊಂದರಲ್ಲಿ ಕಾಲಮೇಲೆ ಕಾಲು ಹಾಕಿ ಕುಳಿತಿದ್ದ ಯುವಕನ ಮೇಲೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆಯುತ್ತಿದ್ದ ಸಾಲಮೇಳ ಕಾರ್ಯಕ್ರಮದಲ್ಲಿ ಶಿವಲಿಂಗೇಗೌಡ ಭಾಗವಹಿಸಿದ್ದರು. ಭಾಷಣ ಮಾಡಲು ಎದ್ದು ನಿಂತಾಗ ವೇದಿಕೆ ಮುಂದೆ ಕುಳಿತಿದ್ದ ಯುವಕ ಕಾಲ ಮೇಲೆ ಕಾಲು ಹಾಕಿ ಕುಳಿತಿರುವುದನ್ನು ನೋಡಿದ್ದಾರೆ. ಇದನ್ನೂ ಓದಿ: ದಿನದಲ್ಲಿ 50 ಸಾವಿರಕ್ಕೂ ಹೆಚ್ಚು ಕೋವಿಡ್-19 ಕೇಸ್!

    ಯುವಕನನ್ನು ನೋಡಿ ಸಿಟ್ಟಾದ ಅವರು, ನೀನು ಕಾಲುಮೇಲೆ ಕಾಲು ಹಾಕಿ ಕುಳಿತರೆ ನನ್ನ ಗೌರವ ಹೋಗುತ್ತಾ? ನನ್ನನ್ನು ಎಂಎಲ್‍ಎ ಗಿರಿಯಿಂದ ಇಳಿಸಲು ನಿನಗೆ ಆಗುತ್ತಾ? ಕಾಲಮೇಲೆ ಕಾಲು ಅಲ್ಲದಿದ್ದರೆ ಇನ್ನೊಂದಷ್ಟು ದೊಡ್ಡದಾಗಿ ಸಿಂಹಾಸನ ಹಾಕಿಕೊಂಡು ಮೇಲೆ ಕುಳಿತುಕೋ. ಸಭ್ಯತೆ ಇಲ್ಲದೆ ಜನರಿಗೆ ನಾನು ಏನು ಹೇಳಲು ಆಗಲ್ಲ ಎಂದು ಹೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿಯವರಿಗೆ ಮೆದುಳಿಗೆ ನಾಲಿಗೆಗೆ ಕನೆಕ್ಷನ್ ಇಲ್ಲ: ಶಿವರಾಜ್ ತಂಗಡಗಿ

    ಯುವಕನು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದು, ಶಾಸಕರ ಮಾತು ಕೇಳಿ ಕಾಲನ್ನು ಕೆಳಗಡೆ ಇಳಿಸಿದ್ದಾನೆ.

  • ಅನಧಿಕೃತ ಕಸಾಯಿಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಭು ಚವ್ಹಾಣ್ ಸೂಚನೆ

    ಅನಧಿಕೃತ ಕಸಾಯಿಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಭು ಚವ್ಹಾಣ್ ಸೂಚನೆ

    ಹಾಸನ: ಜಿಲ್ಲೆಯ ಅರಸೀಕೆರೆ ಪ್ರದೇಶದಲ್ಲಿ 4 ರಿಂದ 5 ಕಸಾಯಿಖಾನೆಗಳು ಅನಧಿಕೃತವಾಗಿ ನಡೆಯುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳಲು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಅನಧಿಕೃತ ಕಸಾಯಿಖಾನೆಯ ವಿರುದ್ಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಚಿವರು, ಕೆಲದಿನಗಳ ಹಿಂದೆ ಕಸಾಯಿಖಾನೆಯ ಬಗ್ಗೆ ಆರೋಪ ಕೇಳಿ ಬಂದಿದೆ. ಹೀಗಾಗಿ ಇವುಗಳ ವಿರುದ್ಧ ಕ್ರಮಕೈಗೊಳ್ಳಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಹಾಸನ ಜಿಲ್ಲೆಗೆ ಕೆಲ ದಿನಗಳ ಹಿಂದೆ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಕೆಲ ಗೋಪಾಲಕರು ಈ ವಿಷಯವನ್ನು ಸಚಿವರ ಗಮನಕ್ಕೆ ತಂದಿದ್ದರು. ಇದೀಗ ಸಚಿವರು ಪತ್ರಿಕಾ ಪ್ರಕಟನೆ ಹೊರಡಿಸಿದ್ದು, ಅರಸಿಕೆರೆ ನಗರ ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಸಂಗ್ರಹ ಮಾಡಿದ ಸುಮಾರು 1 ಟನ್ ಗೋಮಾಂಸವನ್ನು ಪೊಲೀಸ್ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವುದು ನನ್ನ ಗಮನಕ್ಕೆ ಬಂದಿದೆ. ಅಲ್ಲದೇ ಅನಧಿಕೃತವಾಗಿ ಮೂಳೆಗಳ ಸಂಗ್ರಹಣೆ ಮಾಡಿರುವುದು ತಿಳಿದು ಬಂದಿದೆ. ಯಾವುದೇ ಮುಲಾಜಿಲ್ಲದೆ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

    ಗೌಗ್ಯಾನ ಫೌಂಡೇಷನ್ ಸ್ವಯಂ ಸೇವಕರ ಸಹಾಯದಿಂದ ಪೊಲೀಸ್ ಇಲಾಖೆ ಕಾರ್ಯಾಚರಣೆ ನಡೆಸಿ ಗೋಮಾಂಸ ಮತ್ತು ಮೂಳೆಗಳನ್ನು ವಶಪಡಿಸಿಕೊಂಡಿದ್ದರು. ಇದೀಗ ಸಚಿವರಿಂದ ಪಶುಸಂಗೋಪನೆ ಇಲಾಖೆಯ ಆಯುಕ್ತರು ಹಾಗೂ ಉಪನಿರ್ದೇಶಕರುಗಳಿಗೆ ಸೂಚನೆ ನೀಡಲಾಗಿದ್ದು ಪೊಲೀಸ್ ಇಲಾಖೆ ಸಹಾಯದಿಂದ ಎಲ್ಲ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ತಿಳಿಸಲಾಗಿದೆ.

  • ಹಾಸನ, ಬೆಂಗ್ಳೂರು, ಅತ್ತಿಬೆಲೆ, ರಾಮನಗರದಲ್ಲಿ ಡ್ಯೂಟಿ – ಆತಂಕ ಮೂಡಿಸಿದ ಪೇದೆಯ ಟ್ರಾವೆಲ್ ಹಿಸ್ಟರಿ

    ಹಾಸನ, ಬೆಂಗ್ಳೂರು, ಅತ್ತಿಬೆಲೆ, ರಾಮನಗರದಲ್ಲಿ ಡ್ಯೂಟಿ – ಆತಂಕ ಮೂಡಿಸಿದ ಪೇದೆಯ ಟ್ರಾವೆಲ್ ಹಿಸ್ಟರಿ

    ಹಾಸನ: ಭಾನುವಾರ ಬೆಳಕಿಗೆ ಬಂದ ಹಾಸನ ಕೆಎಸ್‌ಆರ್‌ಪಿ ಪೇದೆ (ರೋಗಿ ಸಂಖ್ಯೆ 1993)ಯ ಟ್ರಾವೆಲ್ ಹಿಸ್ಟರಿ ಎಲ್ಲರ ಆತಂಕಕ್ಕೆ ಕಾರಣ ಆಗಿದೆ. ಮೇ 17 ರಿಂದ ಮೇ 19ರವರೆಗೆ ವಿವಿಧ ಕಡೆ ಕರ್ತವ್ಯ ನಿರ್ವಹಿಸಿದ್ದಾರೆ. ನೂರಕ್ಕೂ ಅಧಿಕ ಜನರ ಜೊತೆ ಸಂಪರ್ಕ ಹೊಂದಿದ್ದರಿಂದ ಈಗ ಆತಂಕ ಎದುರಾಗಿದೆ.

    ಟ್ರಾವೆಲ್ ಹಿಸ್ಟರಿ ಹೀಗಿದೆ:
    ಮೇ 7 ರಂದು ಹಾಸನದಿಂದ 20 ಸಹೋದ್ಯೋಗಿಗಳ ಜೊತೆ ಬೆಂಗಳೂರಿಗೆ ಬಂದಿದ್ದ ಇವರನ್ನು ಮಾದನಾಯಕನಹಳ್ಳಿ ಬಳಿ ಬಿಹಾರಿ ಕಾರ್ಮಿಕರ ಬಂದೋಬಸ್ತ್ ಮಾಡಲು ಡ್ಯೂಟಿಗೆ ಹಾಕಲಾಗಿತ್ತು. ಈ ವೇಳೆ ಅಂಚೆಪಾಳ್ಯದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಸಹೋದ್ಯೋಗಿಗಳು, ಗೃಹ ರಕ್ಷಕ ದಳದ ಸಿಬ್ಬಂದಿ ಜೊತೆ ವಾಸ್ತವ್ಯ ಮಾಡಿದ್ದರು.

    ಮೇ 8-9 ರಂದು ಮಾದನಾಯಕನಹಳ್ಳಿಯಲ್ಲಿ ಎಲ್ಲರೊಂದಿಗೆ ಕರ್ತವ್ಯ ನಿರ್ವಹಿಸಿದ್ದ ಇವರು ಮೇ 10ರಿಂದ 14ರವರೆಗೆ ಅತ್ತಿಬೆಲೆ ಚೆಕ್‍ಪೋಸ್ಟ್ ನಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದರು.

    ಮೇ 14ರವರೆಗೂ ಅತ್ತಿಬೆಲೆ ಸಮೀಪದ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಿದ್ದ ಇವರು ಮೇ 14ರ ಮಧ್ಯಾಹ್ನ ಬಿಡದಿಯಲ್ಲಿ ಮುತ್ತಪ್ಪ ರೈ ಶವಯಾತ್ರೆಯ ಬಂದೋಬಸ್ತ್ ಡ್ಯೂಟಿ ಮಾಡಿದ್ದರು. ಅಂದು ರಾತ್ರಿ ರಾಮನಗರದ ಚಾಮುಂಡೇಶ್ವರಿ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಿದ್ದರು.

    ಮೇ 15ರಿಂದ 17ರವರೆಗೆ ರಾಮನಗರ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡಿ, ಮೇ 17ರ ಸಂಜೆ ಹಾಸನಕ್ಕೆ ಮರಳಿದ್ದಾರೆ. ಹಾಸನಕ್ಕೆ ಬಂದ ಬಳಿಕ ಆಟೋದಲ್ಲಿ ಎನ್ ಆರ್ ವೃತ್ತಕ್ಕೆ ಪ್ರಯಾಣಿಸಿ ಪುಸ್ತಕ ಮಳಿಗೆ, ಬಟ್ಟೆ ಅಂಗಡಿ, ದಿನಸಿ ಅಂಗಡಿಗೆ ಭೇಟಿ ನೀಡಿದ್ದಾರೆ. ಇದಾದ ಬಳಿಕ ಮೇ 19 ರಂದು 94 ಸಹೋದ್ಯೋಗಿಗಳ ಜೊತೆ ಪಿ.ಟಿಯಲ್ಲಿ ಭಾಗಿಯಾಗಿದ್ದರು. ಅದೇ ದಿನ ರಾತ್ರಿ ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಗಂಟಲ ದ್ರವವನ್ನು ಪಡೆದು ಲ್ಯಾಬ್ ಗೆ ಕಳುಹಿಸಲಾಗಿತ್ತು. ಭಾನುವಾರ ವರದಿಯಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ.

    12 ದಿನದಲ್ಲಿ ಹಲವು ಜನರ ಜೊತೆ ನೇರ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಅವರನ್ನೆಲ್ಲ ಪರೀಕ್ಷೆಗೆ ಒಳಪಡಿಸಲಾಗಿದೆ. ಹೆಚ್ಚಿನ ಅನಾಹುತ ಆಗದಂತೆ ತಡೆಯಲು ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದ್ದು ಸದ್ಯಕ್ಕೆ ಸಮಾಧಾನ ನೀಡುವ ಸಂಗತಿಯಾಗಿದೆ.