Tag: hasaan

  • ಕುಮಾರಸ್ವಾಮಿ, ನಾನು ಸೇರಿ ರಾಮನಗರ ಜಿಲ್ಲೆ ಮಾಡಿದ್ದು: ಎಚ್‍ಡಿ ರೇವಣ್ಣ

    ಕುಮಾರಸ್ವಾಮಿ, ನಾನು ಸೇರಿ ರಾಮನಗರ ಜಿಲ್ಲೆ ಮಾಡಿದ್ದು: ಎಚ್‍ಡಿ ರೇವಣ್ಣ

    ಹಾಸನ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಗೂ ನಾನು ಸೇರಿ ರಾಮನಗರವನ್ನು ಜಿಲ್ಲೆಯನ್ನಾಗಿ ಮಾಡಿದ್ದು ಎಂದು ಮಾಜಿ ಸಚಿವ ಎಚ್‍ಡಿ ರೇವಣ್ಣ ಹೇಳಿದ್ದಾರೆ.

    ಸಚಿವ ಅಶ್ವಥ್ ನಾರಾಯಣ್ ಸಂಸದ ಡಿ.ಕೆ.ಸುರೇಶ್ ನಡುವೆ ನಡೆದ ವಾಗ್ವಾದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ, ನಾನು ಸೇರಿ ರಾಮನಗರ ಜಿಲ್ಲೆ ಮಾಡಿದ್ದು. ರಾಮನಗರದಲ್ಲಿ ಡೈರಿ, ಡಿಸಿಸಿ ಬ್ಯಾಂಕ್ ಮಾಡಲು ಈ ಅಣ್ಣತಮ್ಮ ಬಿಡಲಿಲ್ಲ ಅಡ್ಡಗಾಲು ಹಾಕಿ ನಿಲ್ಲಿಸಿದ್ದರು. ರಾಮನಗರ ಜಿಲ್ಲೆಗೆ ಕುಮಾರಸ್ವಾಮಿ ಅವರದ್ದೇ ಹೆಚ್ಚು ಕೊಡುಗೆ ಇದೆ ಎಂದು ಡಿಕೆ ಬ್ರದರ್ಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ:  ಮೋದಿಯ ಎಲ್ಲಾ ರ‍್ಯಾಲಿಗಳನ್ನು ಬಂದ್ ಮಾಡಿ ನಂತರ ನಮ್ಮ ಪಾದಯಾತ್ರೆ ಬಗ್ಗೆ ಯೋಚಿಸುತ್ತೇವೆ: ಡಿ.ಕೆ.ಸುರೇಶ್

    ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಮುಳುಗುತ್ತಿರುವುದಕ್ಕೆ ಕೃಷ್ಣ ನಡೆ, ಮೇಕೆದಾಟು ನಡೆ ಮಾಡಲು ಹೊರಟಿದ್ದಾರೆ. ಮೇಕೆದಾಟು ಪಾದಯಾತ್ರೆ ಹದಿನೈದು ದಿನ ಬಿಟ್ಟು ಮಾಡಿದರೆ ಏನಾಗುತ್ತೆ, ಒಂದೆರಡು ತಿಂಗಳು ಬಿಟ್ಟು ಮಾಡಲಿ ಎಂದರು.

    ಬಿಜೆಪಿ ಸರ್ಕಾರ 40% ಕಮೀಷನ್ ಸರ್ಕಾರ ಎಂಬ ಕೈ ಪಕ್ಷದ ಆರೋಪದ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಅದನ್ನು ಶುರು ಮಾಡಿದ್ದೇ ಕಾಂಗ್ರೆಸ್ ಪಕ್ಷದವರು. ಅಧಿಕಾರದಲ್ಲಿದ್ದಾಗ ಎರಡು ಸರ್ಕಾರಗಳು ಮೇಕೆದಾಟು ಯೋಜನೆ ಯಾಕೆ ಮಾಡಲಿಲ್ಲ. ಇವರಿಗೆ ಜನ ಸತ್ತರೂ ಪರ್ವಾಗಿಲ್ಲ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಸತ್ತು ಹೋಗಿದೆ. ಅದಕ್ಕೆ ಪಕ್ಷವನ್ನು ಮೇಲೆಳಿಸಲು ಈ ಗಿಮಿಕ್ ಮಾಡುತ್ತಿದ್ದಾರೆ. ಎರಡನೇ ಅಲೆಯಲ್ಲಿ ಚುನಾವಣೆ ಮಾಡಲು ಹೋಗಿ ಸಾವಿರಾರು ಜನ ಬೀದಿಪಾಲಾಗಿದ್ದಾರೆ. ಜನರು ದೇವೇಗೌಡರನ್ನು ಐವತ್ತು ವರ್ಷ ರಾಜಕೀಯದಲ್ಲಿ ಉಳಿಸಿದ್ದಾರೆ. ಹಾಸನ, ಮಂಡ್ಯ, ರಾಮನಗರ ಜನ ನಮ್ಮ ಕುಟುಂಬ ಉಳಿಸಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ನಾವು ರ‍್ಯಾಲಿ ಮಾಡಲ್ಲ, ಸಮಾವೇಶ ಮಾಡಲ್ಲ, ಕಾವೇರಿಗಾಗಿ ನಡೆಯುತ್ತೇವೆ: ಡಿಕೆಶಿ

    ಕುಮಾರಸ್ವಾಮಿ ಹತ್ತಿರ ಜನ ಇಲ್ಲಾ ಎಂಬ ಮಾಜಿ ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ ಹತ್ರ ಜನ, ದೇವರು ಇದ್ದಾರೆ. ಕುಮಾರಸ್ವಾಮಿ ಬಿಟ್ಟು ಹೋದವರು ಮನೆಯಲ್ಲಿ ಇದ್ದಾರೆ. ಕುಟುಂಬ ರಾಜಕಾರಣ ಅಂಥಾ ಎಲ್ಲಾ ಹೇಳಿದ್ದರು. ಈ ಕುಟುಂಬದ ಜೊತೆ ಜನ ಇದ್ದಾರೆ. ಅದಕ್ಕೆ ಎಂ.ಎಲ್.ಸಿ. ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ಗೆಲ್ಲಿಸಿದ್ದಾರೆ. 2023 ಕ್ಕೆ ನೋಡೋಣ, ನಾನು ಎಲ್ಲೂ ಹೋಗಲ್ಲ. ದೇವರ ಆಶೀರ್ವಾದ, ಜನತೆ ಶಕ್ತಿ ಕೊಟ್ಟರೆ ಕೆಲಸ ಮಾಡುತ್ತೇವೆ ಎಂದರು.

    ನೂತನ ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನಕ್ಕೆ ಡಾ.ಸೂರಜ್ ರೇವಣ್ಣ ಗೈರು ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಕೊರೊನಾ ವೇಳೆ ವಿಧಾನ ಪರಿಷತ್ ಸದಸ್ಯರ ಪ್ರಮಾಣವಚನ ಕಾರ್ಯಕ್ರಮ ಏಕೆ ಬೇಕಿತ್ತು? ನನ್ನ ಮಗ ಹೋಗುತ್ತೇನೆ ಎಂದಿದ್ದ. ಆದರೆ ಕೊರೊನಾ ಇದೆ ಬೇಡ ಅಂತಾ ನಾನೇ ಹೇಳಿದೆ. ಸೂರಜ್ ಜೊತೆ ಇಪ್ಪತ್ತೈದು ಜನ ಹೋಗುವುದು, ಕೊರೊನ ಮಾರ್ಗಸೂಚಿ ಉಲ್ಲಂಘನೆ ಆಗುವುದು ಏಕೆ ಬೇಕು? ಲಾಕ್ ಡೌನ್ ಮುಗಿಯಲಿ ಆಮೇಲೆ ಪ್ರಮಾಣವಚನ ತೆಗೆದುಕೊಂಡರೆ ಆಯ್ತು ಅಂತಾ ಹೇಳಿದೆ. 15 ದಿನದ ಸಂಬಳ ಹೋಗಲಿ ಬಿಡು ಅಂತಾ ತಡೆದಿದ್ದೇನೆ ಎಂದು ಹೇಳಿದರು.

  • ಹಾಸನಾಂಭಾ ದೇವಾಲಯದ ಕಾಣಿಕೆ ಹಣಕ್ಕೆ ಭಾರೀ ಖೋತಾ

    ಹಾಸನಾಂಭಾ ದೇವಾಲಯದ ಕಾಣಿಕೆ ಹಣಕ್ಕೆ ಭಾರೀ ಖೋತಾ

    ಹಾಸನ: ನವೆಂಬರ್ 1 ರಿಂದ 9 ರ ವರೆಗೆ ನಡೆದ ಹಾಸನಾಂಭೆ ದರ್ಶನೋತ್ಸವದಲ್ಲಿ ಭಕ್ತರು ಕಾಣಿಕೆ ರೂಪದಲ್ಲಿ ಈ ಬಾರಿ 2.64 ಕೋಟಿ ರೂ. ನೀಡಿದ್ದಾರೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ದೇವಾಲಯದ ಆದಾಯಕ್ಕೆ ಒಂದೂವರೆ ಕೋಟಿ ರೂ. ಕಡಿಮೆ ಆಗಿದೆ.

    ವರ್ಷಕ್ಕೊಮ್ಮೆಯಷ್ಟೇ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಭೆಗೆ ಪ್ರತಿವರ್ಷ ಕಾಣಿಕೆ ರೂಪದಲ್ಲಿ ಕೋಟಿ ಆದಾಯ ಹರಿದು ಬರುತ್ತಿತ್ತು. ಅಲ್ಲದೇ ವರ್ಷದಿಂದ ವರ್ಷಕ್ಕೆ ದೇವಾಲಯದ ಆದಾಯ ಪ್ರಮಾಣ ಏರಿಕೆಯಾಗುತ್ತಲೇ ಇತ್ತು. ಇದಕ್ಕೆ ಪುಷ್ಟಿ ಎಂಬಂತೆ 2013 ರಲ್ಲಿ 1,21 ಕೋಟಿ ರೂ., 2014 ರಲ್ಲಿ 1,27 ಕೋಟಿ ರೂ, 2015 ರಲ್ಲಿ 1.46 ಕೋಟಿ ರೂ, 2016 ರಲ್ಲಿ 2.67 ಕೋಟಿ ರೂ. ಮತ್ತು 2017 ರಲ್ಲಿ 4.14 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು.

    ಈ ಬಾರಿ ಕಾಣಿಕೆ ರೂಪದ ಆದಾಯ ಕಳೆದ ವರ್ಷಕ್ಕೆ ಹೋಲಿಸಿದರೆ ಒಂದೂವರೆ ಕೋಟಿ ರೂ. ಕಡಿಮೆ ಆಗಿದೆ. ನವೆಂಬರ್ 1 ರಿಂದ 9 ರವರೆಗೆ ನಡೆದ ದರ್ಶನ ಅವಧಿಯಲ್ಲಿ ಹರಕೆಯ ಕಾಣಿಕೆ, ಟಿಕೆಟ್, ಲಾಡು ಮತ್ತು ಸೀರೆ ಮಾರಾಟದಿಂದ ಒಟ್ಟು 2,64,14,911 ರೂ. ಹಣ ಸಂಗ್ರಹವಾಗಿದೆ. ಈ ಪೈಕಿ 1 ಸಾವಿರ ರೂ. ಬೆಲೆಯ ಟಿಕೆಟ್ ಮಾರಾಟದಿಂದ 90.87.400 ಲಕ್ಷ ರೂ., 300 ರೂ. ಟಿಕೆಟ್ ಮಾರಾಟದಿಂದ 53,78,400 ರೂ., ಲಾಡು ಪ್ರಸಾದ ಮಾರಾಟದಿಂದ 13,39,440 ರೂ. ಮತ್ತು ಸೀರೆ ಮಾರಾಟದಿಂದ 56,200 ರೂ. ಸಂಗ್ರಹವಾಗಿದೆ.

    ದೇವಾಲದಯ ಆದಾಯ ಕಡಿಮೆ ಆಗಲು ಜಿಲ್ಲಾಡಳಿತದ ಬೇಜವಾಬ್ದಾರಿ ನಡೆ ಕಾರಣ ಎಂದು ಕಾಂಗ್ರೆಸ್ ಪಕ್ಷದ ಚುನಾಯಿತ ಸದಸ್ಯರು ಆರೋಪಿಸಿದ್ದಾರೆ. ಕಳೆದ ಆರೇಳು ವರ್ಷಗಳಿಂದ ದೇವಾಲಯ ಖಾತೆಗೆ ವಿವಿಧ ಮೂಲಗಳಿಂದ ಕೋಟಿ ಕೋಟಿ ರೂ. ಆದಾಯ ಬರುತ್ತಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ದೇಗುಲ ಪ್ರಾಂಗಣ ಅಭಿವೃದ್ಧಿಯಾಗಿಲ್ಲ. ಇದಕ್ಕೆ ಒತ್ತು ನೀಡುವುದರ ಜೊತೆಗೆ ವರ್ಷ ವರ್ಷ ಬರುವ ಭಕ್ತರಿಗೆ ಬೇಕಾದ ಶೌಚಾಲಯ ಸೇರಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಬೇಕಿತ್ತು ಎಂದು ಆಗ್ರಹಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಧಾನ ಪರಿಷತ್ ಸದಸ್ಯ ಎಂಎ ಗೋಪಾಲಸ್ವಾಮಿ ಅವರು, ಜನಪ್ರತಿನಿಧಿಯಾದ ನನ್ನನ್ನೇ ಹಾಸನಾಂಭೆ ಉತ್ಸವದ ಸಭೆಗೆ ಆಹ್ವಾನಿಸಿಲ್ಲ. ಇತ್ತೀಚಿನ ವರ್ಷಗಳಲ್ಲಿ ಹಾಸನಾಂಭೆ ಮಹಿಮೆ, ವಿಶೇಷತೆ ಬಗ್ಗೆ ದೊಡ್ಡ ಮಟ್ಟದ ಪ್ರಚಾರ ನೀಡಿದ್ದ ಮಾಧ್ಯಮಗಳನ್ನು ನಿರ್ಲಕ್ಷ್ಯ ಮಾಡಲಾಗಿತ್ತು. ಈ ರೀತಿಯ ಹಲವು ಗೊಂದಲಗಳಿಂದಾಗಿ ಭಕ್ತರ ಸಂಖ್ಯೆ ಕಡಿಮೆಯಾಗಿ, ಆದಾಯವೂ ಕುಗ್ಗಿದೆ. ಮುಂದೆ ಹೀಗಾಗದಂತೆ ಎಚ್ಚರವಹಿಸುವಂತೆ ಮನವಿ ಮಾಡಿದ್ದಾರೆ.

    ಅಪಾರ ಪ್ರಮಾಣದಲ್ಲಿ ಹಾಸನಾಂಭ ದೇವಾಲಯಕ್ಕೆ ಭಕ್ತರು ಹಣ ನೀಡಿದ್ದರು, ದೇವಾಲಯ ಹಾಗೂ ಸುತ್ತಮುತ್ತಲಿನ ವಾತಾವರಣದ ಅಂದ ಹೆಚ್ಚಿಸಲು ಬಳಕೆಯಾಗುತ್ತಿಲ್ಲ. ಹಾಸನಾಂಭೆ ದೇಗುಲ ನಗರದ ಹೃದಯ ಭಾಗದಲ್ಲಿದ್ದು, ಆದರೆ ದೇವಾಲಯದ ಸುತ್ತಮುತ್ತ ಇರುವ ಹಳೆಯ ಕಾಲದ ಮನೆಗಳನ್ನು ತೆರವು ಗೊಳಿಸಿ ವಿಶಾಲಗೊಳಿಸಬೇಕು ಎಂಬ ಮಾತು ಸಾರ್ವಜನಿಕರ ವಲಯದಿಂದ ಕೇಳಿ ಬಂದಿದೆ. ಅಲ್ಲದೇ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಶಾಶ್ವತ ಕುಡಿಯುವ ನೀರು, ಶೌಚಾಲಯ ಎಲ್ಲಕ್ಕಿಂತ ಮುಖ್ಯವಾಗಿ ಸ್ವಚ್ಛತೆಗೆ ಒತ್ತು ನೀಡಬೇಕು ಎಂಬ ಒತ್ತಡ ಕೇಳಿ ಬಂದಿತ್ತು.

    ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತನಾಡಿ. ಈ ಬಾರಿಯ ಕಾಣಿಕೆ ಹಣವೂ ಸೇರಿ ದೇವಾಲಯ ಖಾತೆಯಲ್ಲಿ ಬರೋಬ್ಬರಿ 10 ಕೋಟಿ ಹಣವಿದ್ದು, ಅದನ್ನು ಅಭಿವೃದ್ಧಿಗೆ ಬಳಸಲಾಗುವುದು ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಗಂಡನನ್ನು ಕೊಂದು ರೈತ ಆತ್ಮಹತ್ಯೆ ಎಂದು ಬಿಂಬಿಸಿದ ಪತ್ನಿ ಅರೆಸ್ಟ್

    ಗಂಡನನ್ನು ಕೊಂದು ರೈತ ಆತ್ಮಹತ್ಯೆ ಎಂದು ಬಿಂಬಿಸಿದ ಪತ್ನಿ ಅರೆಸ್ಟ್

    ಹಾಸನ: ಬೇಲೂರು ತಾಲೂಕಿನ ಮತ್ತಾವರದ ರೈತ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ತನಿಖೆ ವೇಳೆ ಪತ್ನಿಯೇ ಪತಿಯನ್ನು ಕೊಲೆ ಮಾಡಿದ ವಿಚಾರ ಬೆಳಕಿಗೆ ಬಂದಿದೆ.

    ಕಳೆದ ಜೂನ್ 8 ರಂದು ರೈತ ಯೋಗೇಶ್ (45) ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆದರೆ ಸಾಲದ ಬಾಧೆಯಿಂದ ಗಂಡ ರೂಮಿನಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ಪತ್ನಿ ಗಾಯತ್ರಿ ದೂರು ದಾಖಲಿಸಿದ್ದಳು.

    ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪತ್ನಿ ಮತ್ತು ಪುತ್ರ ದರ್ಶನ್ ನ್ನನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಾವೇ ಕೊಲೆ ಮಾಡಿದ್ದಾಗಿ ಸತ್ಯವನ್ನು ಒಪ್ಪಿಕೊಂಡಿದ್ದಾರೆ.

    ಆತ್ಮಹತ್ಯೆ ಎಂದು ಬಿಂಬಿಸಿ ಪರಿಹಾರದ ಹಣ ಪಡೆಯಲು ಯೋಗೇಶ್ ಮಲಗಿದ್ದಾಗ ಕತ್ತು ಹಿಸುಕಿ ಕೊಂದಿದ್ದೇವೆ. ನಂತರ ಆತ್ಮಹತ್ಯೆ ಎಂದು ಬಿಂಬಿಸಲು ಕೋಣೆಯಲ್ಲೇ ನೇಣು ಹಾಕಿದ್ದೇವೆ ಎಂದು ವಿಚಾರಣೆಯಲ್ಲಿ ತಿಳಿಸಿದ್ದರು. ಈಗ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.