Tag: Haryana Government

  • ಅಗ್ನಿವೀರರಿಗೆ 10% ಮೀಸಲಾತಿ – ಸ್ವಂತ ಉದ್ಯಮ ಆರಂಭಿಸುವವರಿಗೆ 5 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ: ಸಿಎಂ ಘೋಷಣೆ

    ಅಗ್ನಿವೀರರಿಗೆ 10% ಮೀಸಲಾತಿ – ಸ್ವಂತ ಉದ್ಯಮ ಆರಂಭಿಸುವವರಿಗೆ 5 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ: ಸಿಎಂ ಘೋಷಣೆ

    ಚಂಡೀಗಢ: ಅಗ್ನಿಪಥ್‌ ಯೋಜನೆಗೆ (Agnipath Scheme) ಸಂಬಂಧಿಸಿದಂತೆ ಹರಿಯಾಣ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಬಿಜೆಪಿ ನೇತೃತ್ವದ ಸರ್ಕಾರವು ಅಗ್ನಿಪಥ್‌ ಯೋಜನೆಯ ಮೂಲಕ ಸೇನೆಗೆ ನೇಮಕಗೊಂಡಿರುವ ಪೊಲೀಸ್, ಫಾರೆಸ್ಟ್ ಗಾರ್ಡ್, ಮೈನಿಂಗ್ ವಾರ್ಡ್, ಜೈಲ್ ವಾರ್ಡನ್ ಸೇರಿ ವಿವಿಧ ನೇಮಕಾತಿಗಳಲ್ಲಿ ಅಗ್ನಿವೀರರಿಗೆ ಶೇ.10 ರಷ್ಟು ಮೀಸಲಾತಿ (Reservation For Agniveers) ಘೋಷಿಸಿದೆ.

    ಹರಿಯಾಣ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವ ಹೊತ್ತಿನಲ್ಲೇ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ. ನೇಮಕಾತಿ ವೇಳೆ ಅಗ್ನಿವೀರರಿಗೆ ವಯೋಮಿತಿ ಸಡಿಲಿಕೆ ಸೇರಿ ಹಲವು ರಿಯಾಯ್ತಿಗಳನ್ನು ನೀಡುವುದಾಗಿಯೂ ಸಿಎಂ ನಯಾಬ್ ಸಿಂಗ್ ಸೈನಿ (Nayab Singh Saini) ಪ್ರಕಟಿಸಿದ್ದಾರೆ. ಇದನ್ನೂ ಓದಿ: ಕನ್ನಡಿಗರಿಗೆ ಮೀಸಲಾತಿ ವಿಚಾರ – ಸಾಧಕ ಬಾದಕ ನೋಡಿ ತೀರ್ಮಾನ ಮಾಡುತ್ತೇವೆ: ಪ್ರಿಯಾಂಕ್‌ ಖರ್ಗೆ

    ಗ್ರೂಪ್ ಸಿ ಹುದ್ದೆಗಳ ನೇಮಕಾತಿಯಲ್ಲಿ ಶೇ.5ರ ಷ್ಟು ಮೀಸಲಾತಿ ನೀಡೋದಾಗಿ ಘೋಷಿಸಿದ್ದಾರೆ. ಜೊತೆಗೆ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ. ಸ್ವಂತ ಉದ್ಯಮ ಆರಂಭಿಸಲು ಬಯಸುವವರಿಗೆ 5 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ ಸಿಎಂ ಸೈನಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಕನ್ನಡಿಗರಿಗೆ ಮೀಸಲಾತಿ ನೀಡುವ ಮೂಲಕ ಸರ್ಕಾರ ಕನ್ನಡಿಗರ ಸ್ವಾಭಿಮಾನ ಎತ್ತಿ ಹಿಡಿಯುತ್ತಿದೆ: ಡಿಕೆಶಿ

    2022ರಲ್ಲಿ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿತ್ತು. ಯೋಜನೆಯಡಿಯಲ್ಲಿ, 4 ವರ್ಷಗಳ ಅಲ್ಪಾವಧಿಯ ಒಪ್ಪಂದದ ಮೇಲೆ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತದೆ. ಒಟ್ಟು ವಾರ್ಷಿಕ ನೇಮಕಾತಿಗಳಲ್ಲಿ 25% ಮಂದಿಗೆ ಮಾತ್ರ ಹೆಚ್ಚುವರಿ 15 ವರ್ಷಗಳವರೆಗೆ ಮುಂದುವರಿಯಲು ಅನುಮತಿಸಲಾಗಿದೆ. ಇದನ್ನೂ ಓದಿ:  Valmiki Corporation Scam | ನಿಗಮದ ಹಣವನ್ನ ಚುನಾವಣೆಯಲ್ಲಿ ಮದ್ಯ ಖರೀದಿಗೆ ಬಳಸಿದ್ದಾರೆ – ಇಡಿ ಸ್ಫೋಟಕ ಹೇಳಿಕೆ!

    ಆಡಳಿತ ಎನ್‌ಡಿಎ ಪಕ್ಷದ ಭಾಗವಾಗಿರುವ ಜೆಡಿಯು ಸೇರಿದಂತೆ ಬಿಜೆಪಿಯ ಮಿತ್ರಪಕ್ಷಗಳು ಯೋಜನೆಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿವೆ. ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ಸಹ ಕೇಂದ್ರೀಯ ಪಡೆಗಳ ನೇಮಕಾತಿಗಳಲ್ಲಿ ಶೇ.10ರಷ್ಟು ಮೀಸಲಾತಿ ಪ್ರಕಟಿಸಿತ್ತು.

  • ಹರಿಯಾಣದಲ್ಲಿ ಬುಲ್ಡೋಜರ್ ಸೌಂಡ್ ಜೋರು – 3ನೇ ದಿನ 50-60 ಮಳಿಗೆಗಳು ಧ್ವಂಸ, 202 ಕೇಸ್ ದಾಖಲು

    ಹರಿಯಾಣದಲ್ಲಿ ಬುಲ್ಡೋಜರ್ ಸೌಂಡ್ ಜೋರು – 3ನೇ ದಿನ 50-60 ಮಳಿಗೆಗಳು ಧ್ವಂಸ, 202 ಕೇಸ್ ದಾಖಲು

    ಚಂಡೀಗಢ: ಕೋಮು ಸಂಘರ್ಷಕ್ಕೆ ಹರಿಯಾಣದಲ್ಲಿ (Haryan) ತತ್ತರಿಸಿದೆ. ನೂಹ್ ಮತ್ತು ಗುರುಗ್ರಾಮ್ ಜಿಲ್ಲೆಗಳು ಹೊತ್ತಿ ಉರಿಯುತ್ತಿದ್ದು, ಕರ್ಫ್ಯೂ ಲೆಕ್ಕಿಸದೇ ಉಭಯ ಕೋಮುಗಳು ಜನ ಬೀದಿಗಿಳಿದು ಹಿಂಸಾಚಾರದಲ್ಲಿ ತೊಡಗಿದ್ದಾರೆ. ಶನಿವಾರವೂ ಅಲ್ಲಲ್ಲಿ ಮಳಿಗೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಈ ನಡುವೆ ಸತತ 3ನೇ ದಿನ ಹರಿಯಾಣದಲ್ಲಿ ಬುಲ್ಡೋಜರ್‌ (Bulldozer) ಕಾರ್ಯಾಚರಣೆ ನಡೆದಿದೆ.

    ಇನ್ನೂ ಹರಿಯಾಣದಲ್ಲಿ ನಡೆದ ಕೋಮು ಗಲಭೆ ಪ್ರಕರಣದ ಆರೋಪಿಗಳಿಗೆ ಅಲ್ಲಿನ ಸರ್ಕಾರ ಕೂಡ ಬುಲ್ಡೋಜರ್ ಶಾಕ್ ನೀಡಿದೆ. ಸತತ 3ನೇ ದಿನವೂ ಭರ್ಜರಿ ಕಾರ್ಯಾಚರಣೆ ಮುಂದುವರಿಸಿದೆ. ಹಿಂಸಾಚಾರಪೀಡಿತ ನೂಹ್‌ನಿಂದ ಸುಮಾರು 20 ಕಿಮೀ ದೂರದಲ್ಲಿರುವ ತೌರುದಲ್ಲಿ ವಾಸಿಸುತ್ತಿರುವ ವಲಸಿಗರ ಗುಡಿಸಲುಗಳನ್ನ ಬುಲ್ಡೋಜರ್ ಬಳಸಿ ಹರಿಯಾಣ ಸರ್ಕಾರ ಗುರುವಾರ ನೆಲಸಮಗೊಳಿಸಿದೆ. ಇದನ್ನೂ ಓದಿ: Chandrayaan-3: ಭೂಮಿಯಿಂದ ಹಾರಿದ 22 ದಿನಗಳ ಬಳಿಕ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ-3 ನೌಕೆ

    ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು, ಶನಿವಾರ 24 ಮೆಡಿಕಲ್ ಸ್ಟೋರ್‌ಗಳು ಸೇರಿದಂತೆ 50-60 ಮಳಿಗೆಗಳನ್ನ ಧ್ವಂಸಗೊಳಿಸಲಾಗಿದೆ. ಶುಕ್ರವಾರ ಸುಮಾರು ಒಂದು ಎಕರೆ ಜಮೀನಿನಲ್ಲಿ ಅಕ್ರಮ ವಲಸಿಗರು ನಿರ್ಮಿಸಿಕೊಂಡಿದ್ದ 250ಕ್ಕೂ ಅಧಿಕ ಗುಡಿಸಲುಗಳನ್ನ ಕೆಡವಲಾಗಿತ್ತು. ಇದನ್ನೂ ಓದಿ: ಹರಿಯಾಣ ಧಗಧಗ: ಅಕ್ರಮ ವಲಸಿಗರ 250 ಗುಡಿಸಲುಗಳು ನೆಲಸಮ, 41 ಕೇಸ್, 176 ಮಂದಿ ಅರೆಸ್ಟ್, 90 ಮಂದಿ ವಶಕ್ಕೆ

    ಇನ್ನೂ ಹರಿಯಾಣದಲ್ಲಿ ಈವರೆಗೆ ಒಟ್ಟು 102 ಕೇಸ್‌ಗಳು ದಾಖಲಾಗಿದ್ದು, 202 ಮಂದಿಯನ್ನ ಬಂಧಿಸಲಾಗಿದೆ. 80 ಮಂದಿಯನ್ನ ವಶಕ್ಕೆ ಪಡೆದಿದ್ದಾರೆ. ಘಟನೆ ಹಿಂದೆ ಯಾವುದೇ ಮಾಸ್ಟರ್ ಮೈಂಡಗ್ ಪತ್ತೆಯಾಗಿಲ್ಲ ಎಂದು ನುಹ್ ಜಿಲ್ಲೆಯ ಪೊಲೀಸರು ತಿಳಿಸಿದ್ದಾರೆ. ಹಿಂಸಾಚಾರ ಸಂಬಂಧ ಪರಸ್ಪರ ಕೆಸರೆರಚಾಟಗಳು ನಡೆಯುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹರಿಯಾಣ ಧಗಧಗ: ಅಕ್ರಮ ವಲಸಿಗರ 250 ಗುಡಿಸಲುಗಳು ನೆಲಸಮ, 41 ಕೇಸ್, 176 ಮಂದಿ ಅರೆಸ್ಟ್, 90 ಮಂದಿ ವಶಕ್ಕೆ

    ಹರಿಯಾಣ ಧಗಧಗ: ಅಕ್ರಮ ವಲಸಿಗರ 250 ಗುಡಿಸಲುಗಳು ನೆಲಸಮ, 41 ಕೇಸ್, 176 ಮಂದಿ ಅರೆಸ್ಟ್, 90 ಮಂದಿ ವಶಕ್ಕೆ

    ಚಂಡೀಗಢ: ಕೋಮು ಸಂಘರ್ಷಕ್ಕೆ ಹರಿಯಾಣದಲ್ಲಿ (Haryana) ತತ್ತರಿಸಿದೆ. ನಿನ್ನೆಯಿಂದ ನೂಹ್ ಮತ್ತು ಗುರುಗ್ರಾಮ್ ಜಿಲ್ಲೆಗಳು ಹೊತ್ತಿ ಉರಿಯುತ್ತಿವೆ. ಕರ್ಫ್ಯೂ ಲೆಕ್ಕಿಸದೇ ಉಭಯ ಕೋಮುಗಳು ಜನ ಬೀದಿಗಿಳಿದು ಹಿಂಸಾಚಾರದಲ್ಲಿ ತೊಡಗಿದ್ದಾರೆ. ಆಸ್ತಿ-ಪಾಸ್ತಿಗಳನ್ನೂ ಹಾನಿ ಮಾಡಿದ್ದಾರೆ.

    ಇನ್ನೂ ಹರಿಯಾಣದಲ್ಲಿ ನಡೆದ ಕೋಮುಗಲಭೆ ಪ್ರಕರಣದ ಆರೋಪಿಗಳಿಗೆ ಅಲ್ಲಿನ ಸರ್ಕಾರ ಕೂಡ ಬುಲ್ಡೋಜರ್ (Bulldozer) ಶಾಕ್ ನೀಡಿದೆ. ಹಿಂಸಾಚಾರಪೀಡಿತ ನೂಹ್‌ನಿಂದ ಸುಮಾರು 20 ಕಿಮೀ ದೂರದಲ್ಲಿರುವ ತೌರುದಲ್ಲಿ ವಾಸಿಸುತ್ತಿರುವ ವಲಸಿಗರ ಗುಡಿಸಲುಗಳನ್ನ ಬುಲ್ಡೋಜರ್ ಬಳಸಿ ಹರಿಯಾಣ ಸರ್ಕಾರ (Haryana Government) ಗುರುವಾರ ನೆಲಸಮಗೊಳಿಸಿದೆ. ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಬಿಜೆಪಿ ಭರ್ಜರಿ ತಯಾರಿ – ಶನಿವಾರ `ಕೈ’ನಾಯಕರ ಹೈವೋಲ್ಟೇಜ್ ಮೀಟಿಂಗ್

    ಸರ್ಕಾರಿ ಜಮೀನನ್ನು ಅತಿಕ್ರಮಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರ ಆದೇಶದಂತೆ ಗಲಭೆಕೋರರು ವಾಸವಿರುವ ಮನೆಗಳನ್ನ ತೆರವುಗೊಳಿಸಲಾಗಿದೆ. ಬಾಂಗ್ಲಾದೇಶದಿಂದ ಬಂದ ಅಕ್ರಮವಾಗಿ ಮೊದಲು ಅಸ್ಸಾಂನಲ್ಲಿ ವಾಸವಿದ್ದರು. ಅವರೀಗ ನೂಹ್ ಜಿಲ್ಲೆಯ ತೌರು ಪಟ್ಟಣದ ಮಹಮ್ಮದಪುರ ರಸ್ತೆಯ ವಾರ್ಡ್ ನಂ.1 ಹರಿಯಾಣ ನಗರ ಪ್ರಾಧಿಕಾರಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದನ್ನೂ ಓದಿ: ಫಾರಿನ್‍ನಿಂದ ಬಂದ ಹೆಚ್‍ಡಿಕೆಯಿಂದ ಮಿಡ್‍ನೈಟ್ ಬಾಂಬ್?: ಮೆಸ್‍ನಲ್ಲಿ ನಡೆದ ಸಭೆಯಲ್ಲಿ YST!

    ಸುಮಾರು ಒಂದು ಎಕರೆ ಜಮೀನಿನಲ್ಲಿ 250ಕ್ಕೂ ಅಧಿಕ ಗುಡಿಸಲುಗಳನ್ನ ನಿರ್ಮಿಸಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಅವರು ಇದೇ ಜಾಗದಲ್ಲಿ ವಾಸವಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಗುಡಿಸಲುಗಳನ್ನ ನೆಲಸಮಗೊಳಿಸಲಾಗಿದೆ.

    ಇನ್ನೂ ಗುರುಗ್ರಾಮದಲ್ಲಿ ಇವತ್ತೂ ಕೂಡ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗುತ್ತಾ ರೆಸ್ಟೋರೆಂಟ್, ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ನಿನ್ನೆ ರಾತ್ರಿ ನಡೆದ ಘರ್ಷಣೆಯಲ್ಲಿ ಐವರು ಬಲಿ ಆಗಿದ್ದಾರೆ. ನಿನ್ನೆ ಮೆವಾತ್‌ನಲ್ಲಿ ವಿಹೆಚ್‌ಪಿ- ಬಜರಂಗದಳದ ಶೋಭಾಯಾತ್ರೆ ವೇಳೆ ನಡೆದ ಮತ ಘರ್ಷಣೆಯಲ್ಲಿ ಇಬ್ಬರು ಹೋಂಗಾರ್ಡ್ಗಳು ಸಾವನ್ನಪ್ಪಿದ್ರು. ರಾತ್ರಿ ಮತ್ತೆ ನಡೆದ ಘರ್ಷಣೆಯಲ್ಲಿ ಇನ್ನಿಬ್ಬರು ಬಲಿಯಾಗಿದ್ದಾರೆ.

    ಇನ್ನೂ ಹರಿಯಾಣದಲ್ಲಿ ಈವರೆಗೆ ಒಟ್ಟು 41 ಕೇಸ್‌ಗಳು ದಾಖಲಾಗಿದ್ದು, 176 ಮಂದಿಯನ್ನ ಬಂಧಿಸಲಾಗಿದೆ. 90 ಮಂದಿಯನ್ನ ವಶಕ್ಕೆ ಪಡೆದಿದ್ದಾರೆ. ಹಿಂಸಾಚಾರ ಸಂಬಂಧ ಪರಸ್ಪರ ಕೆಸರೆರಚಾಟಗಳು ನಡೆಯುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇನ್ಮುಂದೆ 21 ವಯಸ್ಸಿನವರೂ ʻಎಣ್ಣೆʼ ಹೊಡಿಯಬಹುದು – ಹರಿಯಾಣ

    ಇನ್ಮುಂದೆ 21 ವಯಸ್ಸಿನವರೂ ʻಎಣ್ಣೆʼ ಹೊಡಿಯಬಹುದು – ಹರಿಯಾಣ

    ಚಂಡೀಗಢ: ಹರಿಯಾಣ ಸರ್ಕಾರವು ಬುಧವಾರ ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದಿದ್ದು, ರಾಜ್ಯದಲ್ಲಿ ಮದ್ಯ ಸೇವನೆ ಮತ್ತು ಅದರ ಖರೀದಿ, ಮಾರಾಟದ ಕಾನೂನುಬದ್ಧ ವಯಸ್ಸನ್ನು 25ರಿಂದ 21ಕ್ಕೆ ಇಳಿಸಿದೆ.

    ಹರಿಯಾಣ ಅಬಕಾರಿ (ತಿದ್ದುಪಡಿ) ಮಸೂದೆ- 2021 ಅನ್ನು ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಈಚೆಗಷ್ಟೇ ಮದ್ಯ ಸೇವನೆ ವಯಸ್ಸಿನ ಮಿತಿಯನ್ನು 21 ವರ್ಷಕ್ಕೆ ಇಳಿಸಿದೆ. ಇದನ್ನೂ ಓದಿ: ರಿಲಯನ್ಸ್‌, ಪತಂಜಲಿ, ಟಾಟಾ, ಇನ್ಫೋಸಿಸ್‌ ಸೇರಿ 11 ಖಾಸಗಿ ಸಂಸ್ಥೆಗಳಿಗೆ ಸಿಐಎಸ್‌ಎಫ್‌ ಭದ್ರತೆ

    ಅಬಕಾರಿ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ದುಷ್ಯಂತ್‌ ಚೌತಾಲ್‌ ಅವರು ಮಸೂದೆ ಮಂಡಿಸಿದರು. ಈ ವೇಳೆ ಮಾತನಾಡಿದ ಅವರು, ಹೊಸ ನಿಬಂಧನೆಗಳನ್ನು ಅಬಕಾರಿ ಕಾಯ್ದೆಯಲ್ಲಿ ಅಳವಡಿಸಿರುವುದರಿಂದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯಲ್ಲಿ ಬದಲಾವಣೆ ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಜನರು ಈಗ ಹೆಚ್ಚು ವಿದ್ಯಾವಂತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕುಡಿಯುವ ವಿಚಾರದಲ್ಲೂ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: 1.5 ಕೋಟಿ ರೂ. ಮೌಲ್ಯದ ತಿಮಿಂಗಲ ವಾಂತಿ ವಶಕ್ಕೆ – 6 ಮಂದಿ ಅರೆಸ್ಟ್

    2021-22ರ ಅಬಕಾರಿ ನೀತಿಯನ್ನು ರೂಪಿಸುವಾಗ ದೆಹಲಿ ಸೇರಿದಂತೆ ಹಲವು ರಾಜ್ಯಗಳು ಮದ್ಯ ಸೇವನೆಯ ವಯಸ್ಸಿನ ಮಿತಿಯನ್ನು ಇಳಿಸಿವೆ. ಈ ಕುರಿತು ಆಮೂಲಾಗ್ರ ಚರ್ಚೆ ನಡೆಸಿ ಹರಿಯಾಣ ಸರ್ಕಾರವೂ ಮಸೂದೆ ತಂದಿದೆ. ಅಬಕಾರಿಗೆ ಸಂಬಂಧಿಸಿದಂತೆ 6 ಮಸೂದೆಗಳನ್ನು ಹರಿಯಾಣ ವಿಧಾನಸಭೆಯಲ್ಲಿ ಬುಧವಾರ ಅಂಗೀಕರಿಸಲಾಯಿತು.

  • ಹರಿಯಾಣ ಸರ್ಕಾರ 6 ಕೋಟಿ, ಆನಂದ್ ಮಹೀಂದ್ರ ಕಾರ್ ಗಿಫ್ಟ್- ಚಿನ್ನದ ನೀರಜ್‍ಗೆ ಭರ್ಜರಿ ಉಡುಗೊರೆ

    ಹರಿಯಾಣ ಸರ್ಕಾರ 6 ಕೋಟಿ, ಆನಂದ್ ಮಹೀಂದ್ರ ಕಾರ್ ಗಿಫ್ಟ್- ಚಿನ್ನದ ನೀರಜ್‍ಗೆ ಭರ್ಜರಿ ಉಡುಗೊರೆ

    ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಜಾವಲಿನ್ ಎಸೆತದಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ನೀರಜ್ ಚೋಪ್ರಾಗೆ ಹರಿಯಾಣ ಸರ್ಕಾರ 6 ಕೋಟಿ ರೂ. ಹಾಗೂ ಮಹೀಂದ್ರ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಬ್ರ್ಯಾಂಡ್ ನ್ಯೂ ಎಕ್ಸ್ ಯುವಿ 700 ಕಾರ್ ನ್ನು ಉಡುಗೊರೆಯಾಗಿ ನೀಡುವುದಾಗಿ ಘೊಷಿಸಿದ್ದಾರೆ.

    ನೀರಜ್ ಚೋಪ್ರಾ ಶನಿವಾರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಎರಡನೇ ಎಸೆತದಲ್ಲೇ 87.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಅಥ್ಲೆಟಿಕ್ ಲೋಕ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಅಲ್ಲದೆ ಹೊಸ ದಾಖಲೆಯನ್ನು ಬರೆದಿದ್ದಾರೆ. ಹೀಗಾಗಿ ಸರ್ಕಾರಗಳು ಸೇರಿದಂತೆ ಹಲವರು ಅವರಿಗೆ ಉಡುಗೊರೆಗಳನ್ನು ಘೊಷಿಸುತ್ತಿದ್ದಾರೆ. ಇದನ್ನೂ ಓದಿ: ರೈತನ ಮಗ 23 ವರ್ಷದ ನೀರಜ್ ಚೋಪ್ರಾ ಚಿನ್ನದ ಸಾಧನೆ

    ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು 6 ಕೋಟಿ ರೂ.ಗಳ ನಗದು ಬಹುಮಾನವನ್ನು ಘೊಷಿಸಿದ್ದಾರೆ. ಇದರ ಬೆನ್ನಲ್ಲೇ ಆನಂದ್ ಮಹೀದ್ರಾ ಸಹ ಟ್ವೀಟ್ ಮಾಡುವ ಮೂಲಕ ನೀರಜ್‍ಗೆ ಹೊಸ ಎಸ್‍ಯುವಿ ಕಾರ್ ಗಿಫ್ಟ್ ಕೊಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಶತಕೋಟಿ ಭಾರತೀಯರ ಕನಸು ನನಸು – ಚಿನ್ನ ಗೆದ್ದ ನೀರಜ್

    ಬರೋಬ್ಬರಿ 6 ಕೋಟಿ ನಗದು ಬಹುಮಾನದ ಜೊತೆಗೆ ನಿಯಮದಂತೆ ಸರ್ಕಾರದಲ್ಲಿ ಉನ್ನತ ಮಟ್ಟದ ಕೆಲಸ ನೀಡುವುದಾಗಿ ಹರಿಯಾಣ ಸಿಎಂ ಘೊಷಿಸಿದ್ದಾರೆ. ಅಲ್ಲದೆ ಅಥ್ಲೆಟ್ಸ್‍ಗಳಿಗಾಗಿ ಪಂಚಕುಲದಲ್ಲಿ ಸೆಂಟರ್ ಆಫ್ ಎಕ್ಸೆಲೆನ್ಸ್ ಕಟ್ಟಡ ನಿರ್ಮಿಸುವುದಾಗಿ ತಿಳಿಸಿದ್ದಾರೆ. ಈ ಮೂಲಕ ನೀರಜ್‍ಗೆ ಗೌರವ ಸಲ್ಲಿಸಿದ್ದಾರೆ.