Tag: Haryana Election

  • Haryana Results| ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸ್ಪರ್ಧಿ: ಕೈ ಸಂಸದೆ ಸೆಲ್ಜಾ

    Haryana Results| ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸ್ಪರ್ಧಿ: ಕೈ ಸಂಸದೆ ಸೆಲ್ಜಾ

    ನವದೆಹಲಿ: ಮುಖ್ಯಮಂತ್ರಿ ಸ್ಥಾನಕ್ಕೆ (Chief Minister) ನಾನು ಸ್ಪರ್ಧಿ ಎಂದು ಹರ್ಯಾಣದ ಸಿರ್ಸಾದ ಕಾಂಗ್ರೆಸ್‌ ಸಂಸದೆ ಕುಮಾರಿ ಸೆಲ್ಜಾ (Kumari Selja) ಹೇಳಿದ್ದಾರೆ.

    ಚುನಾವಣಾ ಮತ ಎಣಿಕೆ (Haryana Election Results) ನಡೆಯುತ್ತಿರುವ ಸಮಯದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಗೆದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ನಾನೇ ಸ್ಪರ್ಧಿ. ಆದರೆ ಅಂತಿಮ ನಿರ್ಧಾರ ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Haryana Results| ಮಾಜಿ ಕುಸ್ತಿಪಟು ವಿನೇಶ್‌ ಫೋಗಟ್‌ಗೆ ಹಿನ್ನಡೆ

     

    ಬಿಜೆಪಿ ದುರಾಡಳಿತ ಮತ್ತು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಹರ್ಯಾಣದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಏರುವುದು ನಿಶ್ಚಿತ ಎಂದು ತಿಳಿಸಿದರು.

    ಆರಂಭದ ಮತ ಎಣಿಕೆಯಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿತ್ತು. ಆದರೆ ನಂತರ ಹಿನ್ನಡೆ ಸಾಧಿಸಿದೆ. ಬೆಳಗ್ಗೆ 11 ಗಂಟೆಯ ಟ್ರೆಂಡ್‌ ಪ್ರಕಾರ ಬಿಜೆಪಿ 47, ಕಾಂಗ್ರೆಸ್‌ 36, ಇತರರು 07 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

    ಹರ್ಯಾಣ ಚುನಾವಣಾ ಫಲಿತಾಂಶಕ್ಕೆ ಮೊದಲೇ ಮಾಜಿ ಸಿಎಂ ಭೂಪಿಂದರ್‌ ಸಿಂಗ್‌ ಹೂಡಾ, ಸಿರ್ಸಾ ಸಂಸದೆ ಕುಮಾರಿ ಸೆಲ್ಜಾ, ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರು ಹೆಸರು ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿದೆ.

     

  • Haryana Results| ಮಾಜಿ ಕುಸ್ತಿಪಟು ವಿನೇಶ್‌ ಫೋಗಟ್‌ಗೆ ಹಿನ್ನಡೆ

    Haryana Results| ಮಾಜಿ ಕುಸ್ತಿಪಟು ವಿನೇಶ್‌ ಫೋಗಟ್‌ಗೆ ಹಿನ್ನಡೆ

    ನವದೆಹಲಿ: ಹರ್ಯಾಣ ಚುನಾವಣೆಯಲ್ಲಿ (Haryana Election Results) ಜೂಲಾನಾ (Julana) ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಕುಸ್ತಿ ಪಟು ವಿನೇಶ್‌ ಫೋಗಟ್‌ (Vinesh Phogat) ಅವರಿಗೆ ಹಿನ್ನಡೆಯಾಗಿದೆ.

    ಬಿಜೆಪಿ ಅಭ್ಯರ್ಥಿ ಯೋಗೇಶ್‌ ಕುಮಾರ್‌ 2,128 ಮತಗಳ ಮುನ್ನಡೆ ಸಾಧಿಸಿದ್ದಾರೆ. ಯೋಗೇಶ್‌ ಕುಮಾರ್‌ ಅವರಿಗೆ 9,404 ಮತಗಳು ಬಿದ್ದರೆ ವಿನೇಶ್‌ ಫೋಗಟ್‌ ಅವರಿಗೆ 7,276 ಮತಗಳು ಬಿದ್ದಿದೆ.

    ಬೆಳಗ್ಗೆ ಬೆಳಗ್ಗೆ 9 ಗಂಟೆಯ ವೇಳೆಗೆ ವಿನೇಶ್‌ ಫೋಗಟ್‌ 2012 ಮತಗಳ ಮುನ್ನಡೆ ಸಾಧಿಸಿದ್ದರು. ಒಟ್ಟು 15 ಸುತ್ತುಗಳಲ್ಲಿ ಎರಡನೇ ಸುತ್ತಿನ ಮತ ಎಣಿಕೆ ಮಾತ್ರ ಮುಕ್ತಾಯವಾಗಿದೆ.

    ಹಾವು ಏಣಿ ಆಟ:
    ಹರ್ಯಾಣ ಚುನಾವಣಾ ಫಲಿತಾಂಶದ ಮೇಲೆ ಈಗ ಎಲ್ಲರ ಗಮನ ನೆಟ್ಟಿದೆ. ಆರಂಭದ ಮತ ಎಣಿಕೆ ವೇಳೆ ಕಾಂಗ್ರೆಸ್‌ ಭಾರೀ ಮುನ್ನಡೆ ಸಾಧಿಸಿತ್ತು. ಆದರೆ ನಂತರ ಬಿಜೆಪಿ ಮುನ್ನಡೆ ಸಾಧಿಸಿದೆ.

    ಬೆಳಗ್ಗೆ 10:30ರ ಟ್ರೆಂಡ್‌ ಪ್ರಕಾರ ಬಿಜೆಪಿ 47, ಕಾಂಗ್ರೆಸ್‌ 35, ಇತರರು 8 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇತರರು 8 ಮಂದಿ ಪೈಕಿ 3 ಮಂದಿ ಬಿಜೆಪಿ ರೆಬೆಲ್‌ಗಳಾಗಿರುವುದು ವಿಶೇಷ.

  • ಚಾಲಕನಿಲ್ಲದ ಚಲಿಸುವ ರೈಲಿನಂತಾಗಿದೆ ಕಾಂಗ್ರೆಸ್: ಸಿಎಂ ಯೋಗಿ ಆದಿತ್ಯನಾಥ್

    ಚಾಲಕನಿಲ್ಲದ ಚಲಿಸುವ ರೈಲಿನಂತಾಗಿದೆ ಕಾಂಗ್ರೆಸ್: ಸಿಎಂ ಯೋಗಿ ಆದಿತ್ಯನಾಥ್

    ಚಂಡೀಗಢ: ಕಾಂಗ್ರೆಸ್ ಚಾಲಕನಿಲ್ಲದ ರೈಲು, ಪೈಲಟ್ ಇಲ್ಲದ ವಿಮಾನದಂತಾಗಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವ್ಯಂಗ್ಯವಾಡಿದ್ದಾರೆ. ಹರ್ಯಾಣದ ಜುಲಾನಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗಿಯಾಗಿದ್ದ ವೇಳೆ ಸಿಎಂ ಯೋಗಿ ನೇರವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ಇದೇ ಅಕ್ಟೋಬರ್ 21ರಂದು ನಡೆಯುವ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಯೋಗಿ ಆದಿತ್ಯನಾಥ್ ಭಾಗಿಯಾಗಿದ್ದಾರೆ. ಜುಲನಾದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡುತ್ತಾ, ಡ್ರೈವರ್ ಇಲ್ಲದ ಚಾಲಕ, ಪೈಲಟ್ ಇಲ್ಲದ ವಿಮಾನದಂತೆ ಕಾಂಗ್ರೆಸ್ ಆಗಿದೆ. ವಿರೋಧ ಪಕ್ಷದಲ್ಲಿ ನಾಯಕನೇ ಇಲ್ಲ ಎಂದು ಕಿಚಾಯಿಸಿದರು.

    ಕಾಂಗ್ರೆಸ್ ನಾಯಕರಿಗೆ ಭಾರತ್ ಮಾತಾ ಕೀ ಜೈ ಎಂದು ಹೇಳಲು ನಾಚಿಕೆ ಬರುತ್ತೆ. ಈ ನಾಯಕರು ದೇಶದ ಗೌರವವನ್ನು ಹೆಚ್ಚಿಸುವ ವ್ಯಕ್ತಿಗಳನ್ನು ಅಗೌರವಿಸುತ್ತಾರೆ. ಕಾಂಗ್ರೆಸ್ ರಕ್ತದಲ್ಲಿಯೇ ಭ್ರಷ್ಟಾಚಾರವಿದೆ. ಕಾಮನ್‍ವೆಲ್ತ್ ಗೇಮ್ಸ್, 2ಜಿ ಹಗರಣ, ಹರ್ಯಾಣದಲ್ಲಿ ಭೂಕಬಳಿಕ ಆರೋಪದಲ್ಲಿ ಕಾಂಗ್ರೆಸ್ ಭಾಗಿಯಾಗಿದೆ ಎಂದು ಆರೋಪಿಸಿದರು.

    ಈ ಹಿಂದೆ ಹರ್ಯಾಣದಲ್ಲಿ ಕೈ ಸರ್ಕಾರವಿದ್ದಾದ, ಕಾಂಗ್ರೆಸ್ ಅಳಿಯ ಗುರುಗ್ರಾಮ, ರೋಹ್ಟಕ್, ಪಂಚಕುಲದಲ್ಲಿ ಕೋಟ್ಯಂತರ ಬೆಲೆ ಬಾಳುವ ಭೂಮಿಯನ್ನು ಕಡಿಮೆ ಬೆಲೆಯಲ್ಲಿ ಖರೀದಿಸಿದರು. ಕಾಂಗ್ರೆಸ್‍ಗೆ ರಾಷ್ಟ್ರೀಯತೆ, ಜಗತ್ತಿನೊಂದಿಗೆ ದೇಶದ ಅಭಿವೃದ್ಧಿಯ ಬಗ್ಗೆ ಕಾಳಜಿಯೇ ಇಲ್ಲ. ಭಯೋತ್ಪಾದನೆ ಮತ್ತು ನಕ್ಸಲ್ ಚಟುವಟಿಕೆಗಳೇ ಕಾಂಗ್ರೆಸ್‍ನ ಕುಟುಂಬವಾಗಿದೆ ಎಂದು ಆರೋಪಿಸಿ ಕಿಡಿಕಾರಿದರು.