Tag: Haryana Assembly Elections

  • ಹರಿಯಾಣದಲ್ಲಿ ಬಿಜೆಪಿ ಧೂಳಿಪಟ ಆಗುತ್ತೆ ಅಂತ ವಿಪಕ್ಷಗಳು ಬೊಬ್ಬೆ ಹಾಕ್ತಿದ್ವು – ವಿಜಯೇಂದ್ರ

    ಹರಿಯಾಣದಲ್ಲಿ ಬಿಜೆಪಿ ಧೂಳಿಪಟ ಆಗುತ್ತೆ ಅಂತ ವಿಪಕ್ಷಗಳು ಬೊಬ್ಬೆ ಹಾಕ್ತಿದ್ವು – ವಿಜಯೇಂದ್ರ

    – ಮೋದಿ ಅವರ ಕೆಲಸ, ವರ್ಚಸ್ಸು ಗೆಲುವು ತರಲಿದೆ ಎಂದ ಆರ್.ಅಶೋಕ್

    ಬೆಂಗಳೂರು: ಹರಿಯಾಣದಲ್ಲಿ (Hariyana) ಬಿಜೆಪಿ (BJP) ಧೂಳಿಪಟ ಆಗುತ್ತದೆ ಎಂದು ವಿಪಕ್ಷಗಳು ಬೊಬ್ಬೆ ಹಾಕುತ್ತೀವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಹೇಳಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹರಿಯಾಣದಲ್ಲಿ ಬಿಜೆಪಿ ಧೂಳಿಪಟ ಆಗುತ್ತದೆ ಎಂದು ವಿಪಕ್ಷಗಳು ಬೊಬ್ಬೆ ಹಾಕುತ್ತಿದ್ದವು. ಆದರೆ ಬಿಜೆಪಿ ಸತತವಾಗಿ ಮೂರನೇ ಬಾರಿಗೆ ಅಧಿಕಾರದತ್ತ ದಾಪುಗಾಲು ಇಡುತ್ತಿದೆ. 3ನೇ ಬಾರಿ ಬಿಜೆಪಿ ಅಧಿಕಾರದತ್ತ ಬರ್ತಿದೆ ಎನ್ನುವುದು ಸಂತೋಷದ ವಿಷಯವಾಗಿದೆ ಎಂದರು.

    ಚುನಾವಣಾ ಫಲಿತಾಂಶ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ (R Ashok) ಮಾತನಾಡಿ, ಚುನಾವಣಾ ಫಲಿತಾಂಶ ಬಿಜೆಪಿ ಪರವಾಗಿ ಬರುತ್ತಿದೆ ಎನ್ನುವದು ಮೇಲ್ನೋಟಕ್ಕೆ ಕಂಡು ಬರ್ತಿದೆ. ಇದೇ ಮುಂದುವರೆದರೆ ಬಿಜೆಪಿ ಬಹುಮತ ಶತಸಿದ್ದ. ಸಮೀಕ್ಷೆ ಫಲಿತಾಂಶಕ್ಕೆ ಅಜಗಜಾಂತರ ವ್ಯತ್ಯಾಸ ಇದೆ. ಬಿಜೆಪಿ ಎರಡೂ ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಬಹುದು. ಮೋದಿ ಅವರ ಕೆಲಸ, ವರ್ಚಸ್ಸು ಈ ಗೆಲುವು ತರಲಿದೆ. ಇದೇ ಟ್ರೆಂಡ್ ಇದ್ದರೆ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರು.ಇದನ್ನೂ ಓದಿ: Jammu Kashmir Results | ಅಧಿಕಾರದತ್ತ ಎನ್‌ಸಿ, ಕಾಂಗ್ರೆಸ್‌ ಮೈತ್ರಿ – ಬಿಜೆಪಿಗೆ ಹಿನ್ನಡೆ

    ಜಾತಿ ಜನಗಣತಿ ವಿಚಾರ:
    ವಿಜಯೇಂದ್ರ ಮಾತನಾಡಿ, ಇದು ನನ್ನ ವೈಯಕ್ತಿಕ ಅಭಿಪ್ರಾಯ ವರದಿ ಅವೈಜ್ಞಾನಿಕವಾಗಿ ಇದೆ. ಕಾಂಗ್ರೆಸ್ (Congress) ನಾಯಕರು ಸಹ ಇದೇ ಹೇಳಿದ್ದಾರೆ. ಬಿಜೆಪಿ ಸ್ಪಷ್ಟ ನಿಲುವನ್ನು ಹೊಂದಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ, ಹಿಂದುಳಿದ ದಲಿತ ವರ್ಗಕ್ಕೂ ಸಾಮಾಜಿಕ ನ್ಯಾಯ ಸಿಗಬೇಕು. ಈಗ ಸಿದ್ದರಾಮಯ್ಯ ಅವರ ಕುರ್ಚಿ ಅಲ್ಲಾಡುತ್ತಿದೆ. ಅದಕ್ಕಾಗಿ ಈಗ ಜಾತಿಗಣತಿ ವಿಚಾರ ಮುನ್ನೆಲೆಗೆ ಬಂದಿದೆ. ಆದರೆ ಇದು ಅವೈಜ್ಞಾನಿಕ ಎಂದು ಶಾಮನೂರು ಹೇಳಿದ್ದಾರೆ. ಡಿಕೆಶಿ ಕೂಡ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಆಗುತ್ತದೆ ಎಂದಿದ್ದಾರೆ. ಖರ್ಗೆ ಹೇಳಿದ್ದನ್ನು ಎಲ್ಲರೂ ಗಮನಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಜಾತಿಗಣತಿ ಮಾಡೋಕೆ ಅವಕಾಶ ಇಲ್ಲ. ವರದಿ ಜಾರಿಗೆ ಯಾಕೆ ಇಷ್ಟೊಂದು ಆತುರ? ಈ ಮೊದಲು ನೀವೇ ಅಧಿಕಾರದಲ್ಲಿ ಇದ್ದಾಗ ಯಾಕೆ ಬಿಡುಗಡೆ ಮಾಡಿಲ್ಲ. ಖರ್ಚಿಯಲ್ಲಿ ಸಿದ್ದರಾಮಯ್ಯ ಜಾಸ್ತಿ ದಿನ ಇರುವುದಿಲ್ಲ. ಆದರೆ ಅವರ ಮೊಂಡುತನ ಜಾಸ್ತಿ ದಿನ ನಡೆಯಲ್ಲ. ಹೀಗಾಗಿ ಇದೊಂದು ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ ಎಂದರು.

    ಸಿಎಂ ಕುರ್ಚಿ ವಿಚಾರ:
    ಆರ್.ಅಶೋಕ್ ಮಾತನಾಡಿ, ಮುಡಾ ಹಗರಣ ಮುಚ್ಚಿ ಹಾಕಲು ಸಿದ್ದರಾಮಯ್ಯ (CM Siddaramaiah) ಇಲ್ಲಸಲ್ಲದ ಕಸರತ್ತು ನಡೆಸುತ್ತಿದ್ದಾರೆ. ಬಿಜೆಪಿಯವರನ್ನು ಟೀಕಿಸುವ ಮೊದಲು ನಿಮ್ಮ ಪಕ್ಷದಲ್ಲಿ ಏನಾಗುತ್ತಿದೆ ಎಂದು ನೋಡಿ. ನಿಮ್ಮ ಪಕ್ಷದಲ್ಲಿ ಸಿಎಂ ಆಗಲು ರನ್ನಿಂಗ್ ರೇಸ್ ನಡೆಯುತ್ತಿದೆ. ನಿತ್ಯ ಪ್ರತ್ಯೇಕ ಸಭೆಗಳನ್ನು ಮಾಡುತ್ತಿದ್ದಾರೆ. ಪರಸ್ಪರ ಸಭೆ ನಡೆಸಿ, ತಿಂಡಿ ಭಾಗ್ಯ ಮಾಡಿಕೊಂಡಿದ್ದಾರೆ. ಸಿಎಂ ಇಳಿಸಲು ಸಚಿವರು ಬ್ರೇಕ್‌ಫಾಸ್ಟ್ ಮೀಟಿಂಗ್, ಡಿನ್ನರ್ ಮೀಟಿಂಗ್‌ಗಳಲ್ಲಿ ಮುಳುಗಿದ್ದಾರೆ ಎಂದು ವ್ಯಂಗ್ಯವಾಡಿದರು.

    ನಿಮ್ಮ ಪಕ್ಷದಲ್ಲೇ ಒಡಕಿದೆ, ಅದನ್ನು ಸರಿ ಮಾಡದೇ ಬಿಜೆಪಿ, ಜೆಡಿಎಸ್ (JDS) ಮೇಲೆ ವಕ್ರದೃಷ್ಟಿ ಬೀರುತ್ತಿದ್ದಾರೆ. ಸಿಎಂ ಎಷ್ಟು ದಿನ ಅಧಿಕಾರದಲ್ಲಿ ಇರುತ್ತಾರೆ? ಸಿಎಂ ಇಳಿತಾರೆ ಎಂದು ನಿಮ್ಮ ಪಕ್ಷದಲ್ಲೇ ದೊಡ್ಡ ಗಾಳಿ ಸುದ್ದಿ ಹಬ್ಬಿದೆ. ಮಂತ್ರಿಗಳು ಜಿಲ್ಲಾ ಪ್ರವಾಸ ಮಾಡುತ್ತಿಲ್ಲ. ಈ ಸರ್ಕಾರ ತೊಲಗಲಿ ಎಂದು ಜನ ಕೂಡ ಬಯಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಚುನಾವಣಾ ಫಲಿತಾಂಶದಲ್ಲಿ ಹಿನ್ನಡೆ – ಆಯೋಗದ ವೆಬ್‌ಸೈಟ್‌ ದೂರಿದ ಕಾಂಗ್ರೆಸ್‌

  • Haryana | ಮಾಜಿ ಸಚಿವ ಸೇರಿ 8 ಬಂಡಾಯ ನಾಯಕರು ಬಿಜೆಪಿಯಿಂದ ಉಚ್ಛಾಟನೆ

    Haryana | ಮಾಜಿ ಸಚಿವ ಸೇರಿ 8 ಬಂಡಾಯ ನಾಯಕರು ಬಿಜೆಪಿಯಿಂದ ಉಚ್ಛಾಟನೆ

    ಚಂಡೀಗಢ: ಅಕ್ಟೋಬರ್ 5 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ (Haryana Assembly Elections) ಕೆಲವೇ ದಿನಗಳು ಬಾಕಿಯಿರುವ ಹೊತ್ತಿನಲ್ಲೇ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ನಿರ್ಧರಿಸಿದ ನಂತರ ಹರಿಯಾಣದ ಮಾಜಿ ಸಚಿವ ರಂಜಿತ್ ಸಿಂಗ್ ಚೌಟಾಲಾ ಸೇರಿ 8 ಮಂಡಿಯನ್ನು ಬಿಜೆಪಿ ಪಕ್ಷದಿಂದಲೇ ಉಚ್ಛಾಟಿಸಿದೆ.

    ಈ 8 ಮಂದಿ ನಾಯಕರು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ (Nayab Singh Saini) ಸೇರಿದಂತೆ ಬಿಜೆಪಿಯ ನಾಯಕರ ವಿರುದ್ಧ ಸ್ಪರ್ಧಿಸಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಇದರಿಂದಾಗಿ ತಕ್ಷಣವೇ ಜಾರಿಗೆ ಬರುವಂತೆ 6 ವರ್ಷಗಳ ಕಾಲ ನಾಯಕರನ್ನು ಉಚ್ಚಾಟಿಸಿರುವುದಾಗಿ ಹರಿಯಾಣ ಬಿಜೆಪಿಯ ಮುಖ್ಯಸ್ಥ ಮೋಹನ್ ಲಾಲ್ (Mohan Lal) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಎಡಿಜಿಪಿ ಕುಮಾರಸ್ವಾಮಿಯನ್ನ ಹಂದಿ ಎಂದಿದ್ದಾರಾ? – ಸಿದ್ದರಾಮಯ್ಯ ಪ್ರಶ್ನೆ

    ಅಸ್ಸಾಂದ್ ಕ್ಷೇತ್ರದಿಂದ ಸ್ಪರ್ಧಿಸಿರುವ ಜಿಲೆ ರಾಮ್ ಶರ್ಮಾ, ಸಫಿಡೊದಿಂದ ಮಾಜಿ ಸಚಿವ ಬಚನ್ ಸಿಂಗ್ ಆರ್ಯ, ಮೆಹಮ್‌ನಿಂದ ರಾಧಾ ಅಹ್ಲಾವತ್, ಗುರ್ಗಾಂವ್‌ನಿಂದ ನವೀನ್ ಗೋಯಲ್ ಮತ್ತು ಹಥಿನ್‌ನಿಂದ ಕೆಹರ್ ಸಿಂಗ್ ರಾವತ್ ಮತ್ತು ಮಾಜಿ ಶಾಸಕ ದೇವೇಂದ್ರ ಕಡ್ಯಾನ್ ಉಚ್ಛಾಟಿತ ಆರು ನಾಯಕರು. ಇದನ್ನೂ ಓದಿ: ಮೊದಲ ಬಾರಿಗೆ ಜಮೈಕಾ ಪ್ರಧಾನಿ ಭಾರತ ಪ್ರವಾಸ – ಸೋಮವಾರದಿಂದ 4 ದಿನಗಳ ಭೇಟಿ

    ಚೌಟಾಲಾ ಪಕ್ಷೇತರ ಶಾಸಕರಾಗಿದ್ದಾಗ ವಿಧಾನಸಭೆ ಪ್ರತಿನಿಧಿಸುತ್ತಿದ್ದ ರಾನಿಯಾ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿದ ನಂತರ ಬಿಜೆಪಿ ತೊರೆಯಲು ನಿರ್ಧರಿಸಿದರು. ಈ ವರ್ಷದ ಆರಂಭದಲ್ಲಿ ನಡೆದ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸೇರುವ ಮುನ್ನ ಚೌಟಾಲಾ ವಿಧಾನಸಭೆಯ ಸದಸ್ಯತ್ವ ತೊರೆದಿದ್ದರು. ಅವರು ಹಿಸಾರ್‌ನಿಂದ ಸಂಸತ್ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು.

    ಕಾಂಗ್ರೆಸ್‌ನಲ್ಲೂ ಬಂಡಾಯ ಭೀತಿ:
    ಸದ್ಯ ಹರಿಯಾಣದಲ್ಲಿ ಕಾಂಗ್ರೆಸ್ ಕೂಡ ಬಂಡಾಯ ಭೀತಿ ಎದುರಿಸುತ್ತಿದೆ. ಇತ್ತೀಚೆಗಷ್ಟೇ ಬಿಜೆಪಿಯ ಮಾಜಿ ಸಚಿವ ಅನಿಲ್ ವಿಜ್ ವಿರುದ್ಧ ಅಂಬಾಲಾ ಕಂಟೋನ್ಮೆಂಟ್‌ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಂಡಾಯ ಅಭ್ಯರ್ಥಿ ಚಿತ್ರಾ ಸರ್ವರಾ ಅವರನ್ನು ಪಕ್ಷದಿಂದ ಹೊರಹಾಕಲಾಗಿತ್ತು. ಅಲ್ಲದೇ ಕಳೆದ ಶುಕ್ರವಾರವೂ ಪಕ್ಷ ವಿರೋಧಿ ಚಟುವಟಿಕೆಗಾಗಿ 13 ನಾಯಕರನ್ನು ಕಾಂಗ್ರೆಸ್‌ ಉಚ್ಛಾಟಿಸಿತ್ತು.

    90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 5 ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಹಳಿ ಮಧ್ಯೆ ಅಗ್ನಿಶಾಮಕ ಸಿಲಿಂಡರ್‌ ಪತ್ತೆ – ರೈಲು ದುಷ್ಕೃತ್ಯಕ್ಕೆ ಸಂಚು; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ

  • ಹರ್ಯಾಣದಲ್ಲಿ ಅತಂತ್ರ ಇದ್ದರೂ ಬಿಜೆಪಿ ಸರ್ಕಾರ

    ಹರ್ಯಾಣದಲ್ಲಿ ಅತಂತ್ರ ಇದ್ದರೂ ಬಿಜೆಪಿ ಸರ್ಕಾರ

    – ಕಿಂಗ್ ಮೇಕರ್ ಚೌಟಾಲ್‍ಗೆ ಸಖತ್ ಡಿಮಾಂಡ್
    – ಕಾಂಗ್ರೆಸ್‍ಗೆ ಆಕ್ಸಿಜನ್ ಆದ ಸೋನಿಯಾ ಸಾರಥ್ಯ

    ಚಂಡೀಗಢ: ಮಹಾರಾಷ್ಟ್ರದಲ್ಲಿ ಬಹುಮತದೊಂದಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ್ದರೂ, ಹರಿಯಾಣದಲ್ಲಿ ಭಾರೀ ಪ್ರಮಾಣದಲ್ಲಿ ಹಿನ್ನಡೆ ಅನುಭವಿಸಿದೆ. ಎರಡನೇ ಬಾರಿಗೆ ಅಧಿಕಾರಕ್ಕೇರಲು ಸರಳ ಬಹುಮತ ಪಡೆಯದಿದ್ದರೂ ಪಕ್ಷೇತರರೊಂದಿಗೆ ಸರ್ಕಾರ ರಚನೆಗೆ ಕೈ ಹಾಕಿದೆ.

    ಹೊಸ ಪಕ್ಷ ಹುಟ್ಟುಹಾಕಿದ ಜನನಾಯಕ್ ಜನತಾ ಪಾರ್ಟಿಯ ದುಶ್ಯಂತ್ ಚೌಟಾಲಾ ಈಗ ಕಿಂಗ್ ಮೇಕರ್ ಆಗಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆಗೆ ಕಾಂಗ್ರೆಸ್ ಕೈ ಹಾಕಿದ್ದರೂ, ಕರ್ನಾಟಕದಂತೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಲು ಚೌಟಾಲಾ ಬಿಗಿಪಟ್ಟು ಹಿಡಿದಿದ್ದರಿಂದ ಮಾತುಕತೆ ಮುರಿದು ಬಿದ್ದಿದೆ. ದುಶ್ಯಂತ್ ಚೌಟಾಲಾ ಅವರನ್ನು ಬಿಜೆಪಿ ಕೂಡ ಸಂಪರ್ಕಿಸಿದ್ದು, ಪಕ್ಷೇತರರೊಂದಿಗೆ ಸರ್ಕಾರ ರಚನೆಗೆ ಬಿಜೆಪಿ ಹಕ್ಕು ಪ್ರತಿಪಾದಿಸಿದೆ.

    ಹರ್ಯಾಣ ಫಲಿತಾಂಶ: ಹರ್ಯಾಣದ ಒಟ್ಟು 90 ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ಕಾರ ರಚಿಸಲು 46 ಸ್ಥಾನಗಳ ಸರಳ ಬಹುಮತ ಅಗತ್ಯವಿದೆ. ಚುನಾವಣೆಯಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಕೇವಲ 40ಕ್ಕೆ ಸೀಮಿತವಾಗಿದೆ. ಕಾಂಗ್ರೆಸ್ 31 ಸ್ಥಾನಗಳು ಲಭಿಸಿದರೆ, ಜೆಜೆಪಿ 10 ಕ್ಷೇತ್ರದಲ್ಲಿ ಗೆದ್ದು ಕಿಂಗ್ ಮೇಕರ್ ಆಗಿ ಹೊರ ಹೊಮ್ಮಿದೆ. ಐಎನ್‍ಎಲ್‍ಡಿ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟರೆ, ಇತರೆ 8 ಸ್ಥಾನ ಬಂದಿದೆ.

    ಬಿಜೆಪಿ ಸೋಲಿಗೆ ಕಾರಣಗಳೇನು?
    ಬಿಜೆಪಿಯಲ್ಲಿ ಪಕ್ಷ ನಿಷ್ಠರ ಕಡೆಗಣಿಸಿ, ಪಕ್ಷಾಂತರಿಗಳಿಗೆ ಮಣೆ ಹಾಕಲಾಯಿತು. ಇದರಿಂದಾಗಿ ಟಿಕೆಟ್ ಹಂಚಿಕೆಯಲ್ಲಿ ಅಸಮಾಧಾನ ಸ್ಫೋಟಗೊಂಡಿತ್ತು. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ರಾಜ್ಯದಲ್ಲಿ ಮಿತಿಮೀರಿದ ನಿರುದ್ಯೋಗ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ತೋರಿದ್ದರು. ರಾಜ್ಯದಲ್ಲಿ ಜಾಟ್ ಸಮುದಾಯ ಹೆಚ್ಚಿದ್ದರೂ ಬ್ರಾಹ್ಮಣ ಸಮುದಾಯದ ಖಟ್ಟರ್ ಅವರಿಗೆ ಸಿಎಂ ಪಟ್ಟ ಕೊಟ್ಟಿದ್ದು ಅಸಮಾಧಾನಕ್ಕೆ ಕಾರಣವಾಗಿತ್ತು. ಇದರಿಂದಾಗಿ ಜಾಟ್ ಸಮುದಾಯದ ಮತ ವಿಭಜನೆ ಆಯಿತು. ಬಿಜೆಪಿ ನಾಯಕರು ಪ್ರಚಾರದ ವೇಳೆ ಸಂವಿಧಾನದ 370ನೇ ವಿಧಿ ರದ್ದತಿ, ವೀರ್ ಸಾವರ್ಕರ್ ಅವರಿಗೆ ಭಾರತರತ್ನ ವಿಚಾರ ನೀಡುವ ವಿಚಾರವನ್ನು ಅಸ್ತ್ರವಾಗಿ ಬಳಸಿಕೊಂಡಿತ್ತು. ಅದು ಕೂಡ ಬಿಜೆಪಿಗೆ ಫಲಿಸಲಿಲ್ಲ. ಜೊತೆಗೆ ಅತಿಯಾದ ಆತ್ಮವಿಶ್ವಾಸ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಪ್ರಚಾರ ಫಲಕೊಡಲಿಲ್ಲ.

    ಕಿಂಗ್ ಮೇಕರ್:
    ಕರ್ನಾಟಕದಲ್ಲಿ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಅವರಂತೆ ಹರ್ಯಾಣದಲ್ಲಿ ಜನನಾಯಕ್ ಜನತಾ ಪಾರ್ಟಿಯ ದುಶ್ಯಂತ್ ಚೌಟಾಲಾ ಕಿಂಗ್ ಮೇಕರ್ ಆಗಿದ್ದಾರೆ. ಕರ್ನಾಟಕದಂತೆ ಹೇಗಾದರೂ ಅಧಿಕಾರಕ್ಕೇರಬೇಕು ಅಂತ ಸೋನಿಯಾ ಗಾಂಧಿ ಅವರು ಚೌಟಾಲಾ ಅವರನ್ನು ಸಂಪರ್ಕಿಸಿದ್ದಾರೆ. ಬೆಳಗ್ಗೆ ಅತಂತ್ರ ಫಲಿತಾಂಶದ ಲಕ್ಷಣ ಅರಿತ ತಕ್ಷಣವೇ ದುಶ್ಯಂತ್ ಅವರನ್ನ ಸಂಪರ್ಕಿಸಿದರು. ಬಳಿಕ ಭೂಪಿಂದರ್ ಸಿಂಗ್ ಹೂಡ ಮೂಲಕ ಕೇವಲ ಅರ್ಧಗಂಟೆಯೊಳಗೆ 7 ಬಾರಿ ಸಂಪರ್ಕಿಸಿ ಡಿಸಿಎಂ ಸ್ಥಾನ ನೀಡುವುದಾಗಿ ಹೇಳಿದರು. ಆದರೆ ದುಶ್ಯಂತ್ ಅವರು ಮಾತ್ರ ಸಿಎಂ ಸ್ಥಾನಕ್ಕೆ ಪಟ್ಟುಹಿಡಿದ್ದಾರೆ. ಇತ್ತ ಬಿಜೆಪಿ ಕೂಡ ದುಶ್ಯಂತ್‍ಗೆ ಡಿಸಿಎಂ ಸ್ಥಾನ ಕೊಡುವುದಾಗಿ ಹೇಳಿದೆ.

    ಅಖಾಲಿದಳದ ಬಾದಲ್‍ಗಳ ಮೂಲಕ ಚೌಟಾಲಾ ಮನವೊಲಿಕೆಗೆ ಅಮಿತ್ ಶಾ ಯತ್ನಿಸಿದ್ದಾರೆ. ಡಿಮಾಂಡ್ ಹೆಚ್ಚಿಸಿದ್ದರ ಲಾಭಕ್ಕೆ ಹವಣಿಸಿದ ಚೌಟಾಲಾ, ವಿಧಾನಸಭೆಯ ಕೀ ನನ್ನಲ್ಲಿದೆ. ತಾನೂ ಯಾವ ಪಕ್ಷದೊಂದಿಗೆ ಮಾತನಾಡಿಲ್ಲ. ನಾಳೆ ಮಾತನಾಡುತ್ತೇನೆ. ಯಾರು ನನಗೆ ಸಿಎಂ ಪಟ್ಟ ಕೊಡುತ್ತಾರೋ ಅವರ ಜೊತೆ ಕೈಜೋಡಿಸುವುದಾಗಿ ದುಶ್ಯಂತ್ ಹೇಳಿದ್ದಾರೆ. ಈ ಎಲ್ಲ ವಿದ್ಯಮಾನಗಳ ನಡುವೆ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಲುವಾಗಿ ರಾಜ್ಯಪಾಲರ ಭೇಟಿಗೆ ಮನೋಹರ್ ಲಾಲ್ ಖಟ್ಟರ್ ಸಮಯ ಕೇಳಿದ್ದಾರೆ.

    ಸೋತ ಪ್ರಮುಖರು, ಸೆಲೆಬ್ರಿಟಿಗಳು:
    ಹರ್ಯಾಣದ ತೋಹಾನಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್ ಬರಾಲಾ ಸೋಲು ಕಂಡಿದ್ದಾರೆ. ಸೋಲಿನ ಹೊಣೆಹೊತ್ತು ರಾಜೀನಾಮೆ ಕೊಟ್ಟಿದ್ದಾರೆ ಅಂತ ಸುದ್ದಿಯಾಗಿತ್ತು. ಆದರೆ ಇದೆಲ್ಲಾ ವದಂತಿ ಅಂತ ಸುಭಾಷ್ ಬರಾಲಾ ಅಲ್ಲಗಳೆದಿದ್ದಾರೆ. ಕೈಥಾಲ್ ಕ್ಷೇತ್ರದಿಂದ ಚುನಾವಣೆ ಎದುರಿಸಿದ್ದ ಕಾಂಗ್ರೆಸ್‍ನ ರಂದೀಪ್ ಸುರ್ಜೇವಾಲಾ ಸೋತಿದ್ದಾರೆ. ಇತ್ತೀಚೆಗೆ ಬಿಜೆಪಿಗೆ ಸೇರಿದ್ದ ಕುಸ್ತಿಪಟುಗಳಾದ ಬಬಿತಾ ಪೋಗಟ್ ದಾದ್ರಿ ಕ್ಷೇತ್ರದಿಂದ ಹಾಗೂ ಯೋಗೇಶ್ವರ್ ದತ್ ಬರೋದಾ ಕ್ಷೇತ್ರದಿಂದ ಚುನಾವಣೆಗೆ ನಿಂತು ಪರಾಭವಗೊಂಡಿದ್ದಾರೆ. ಬಿಜೆಪಿ ಟಿಕೆಟ್ ನೀಡಿದ್ದ ಟಿಕ್‍ಟಾಕ್ ಸ್ಟಾರ್, ಅದಂಪುರ್ ದ ಅಭ್ಯರ್ಥಿ ಸೋನಾಲಿ ಪೋಗಟ್ ಸೋತಿದ್ದಾರೆ.

  • ಟಿಕ್-ಟಾಕ್ ಸ್ಟಾರ್‌ಗೆ ಸಿಕ್ತು ಬಿಜೆಪಿ ಟಿಕೆಟ್

    ಟಿಕ್-ಟಾಕ್ ಸ್ಟಾರ್‌ಗೆ ಸಿಕ್ತು ಬಿಜೆಪಿ ಟಿಕೆಟ್

    ಚಂಡೀಗಢ: ಜನಪ್ರಿಯ ಟಿಕ್-ಟಾಕ್ ಸ್ಟಾರ್ ಸೋನಾಲಿ ಪೋಗಟ್ ಅವರಿಗೆ ಬಿಜೆಪಿಯು ಹರ್ಯಾಣ ವಿಧಾನಸಭಾ ಚುನಾವಣೆ ಟಿಕೆಟ್ ನೀಡಿದೆ.

    ಈ ಮೂಲಕ ಸೋನಾಲಿ ಪೋಗಟ್ ಕಾಂಗ್ರೆಸ್ ಪ್ರಾಬಲ್ಯದ ಆದಂಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ. ಸೋನಾಲಿ ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮಾಡಿ, ವಿಡಿಯೋವನ್ನು ಟಿಕ್-ಟಾಕ್‍ನಲ್ಲಿ ಪೋಸ್ಟ್ ಮಾಡುತ್ತಾ ಬಂದಿದ್ದಾರೆ. ಈ ಮೂಲಕ 1 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಸೋನಾಲಿ ಅವರು ಇತ್ತೀಚೆಗೆ ಪೋಸ್ಟ್ ಮಾಡಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

    https://twitter.com/jyotiyadaav/status/1179684177609777153

    ಕಾಂಗ್ರೆಸ್ ಭದ್ರಕೋಟೆ ಭೇದಿಸಲು ಬಿಜೆಪಿಯು ಸೋನಾಲಿ ಅವರನ್ನು ಚುನಾವಣಾ ಕಣಕ್ಕೆ ಇಳಿಸಿದೆ. ಇದನ್ನು ಎದುರಿಸಲು ‘ಕೈ’ ಪಡೆ ಭರ್ಜರಿ ಪ್ರಚಾರಕ್ಕೆ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.

    ಆದಂಪುರ ಕ್ಷೇತ್ರದಲ್ಲಿ ಕಾಂಗ್ರೆಸ್ 1969ರಿಂದಲೂ ಪ್ರಾಬಲ್ಯ ಸಾಧಿಸುತ್ತಾ ಬಂದಿದೆ. 1969 ರಿಂದ ಕಾಂಗ್ರೆಸ್ ಮುಖಂಡ ಭಜನ್ ಲಾಲ್ ಎಂಟು ಬಾರಿ ಗೆಲುಸು ಸಾಧಿಸಿದ್ದರು. ನಂತರ ಭಜನ್ ಲಾಲ್ ಪತ್ನಿ ಜಸ್ಮಾ ದೇವಿ ಹಾಗೂ ಪುತ್ರ ಕುಲ್ದೀಪ್ ಬಿಶ್ನೋಯ್ ಕ್ರಮವಾಗಿ 1987 ಹಾಗೂ 1998ರಲ್ಲಿ ಗೆಲುವು ಕಂಡಿದ್ದರು. 2014ರ ವಿಧಾನಸಭಾ ಚುನಾವಣೆಯಲ್ಲಿ ಹರ್ಯಾಣ ಜನಹಿತ ಪಕ್ಷವು (ಎಚ್‍ಜೆಪಿ) ಗೆಲುವು ಸಾಧಿಸಿತ್ತು. ಆದರೆ 2019ರಲ್ಲಿ ಎಚ್‍ಜೆಪಿ ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಂಡಿತು.

    ಹರ್ಯಾಣದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಅಕ್ಟೋಬರ್ 21ರಂದು ಮತದಾನ ನಡೆಯಲಿದೆ. ಅಕ್ಟೋಬರ್ 24ರಂದು ಫಲಿತಾಂಶ ಹೊರ ಬೀಳಲಿದೆ.