Tag: Haryana

  • ಬೇಲೆಕೇರಿ ಬಂದರಿನಲ್ಲಿ ಅಕ್ರಮ ಕಬ್ಬಿಣದ ಅದಿರು ರಫ್ತು ಕೇಸ್;‌ ಹರಿಯಾಣ, ಕರ್ನಾಟಕದಲ್ಲಿ ಇಡಿ ದಾಳಿ

    ಬೇಲೆಕೇರಿ ಬಂದರಿನಲ್ಲಿ ಅಕ್ರಮ ಕಬ್ಬಿಣದ ಅದಿರು ರಫ್ತು ಕೇಸ್;‌ ಹರಿಯಾಣ, ಕರ್ನಾಟಕದಲ್ಲಿ ಇಡಿ ದಾಳಿ

    ನವದೆಹಲಿ: ಬೇಲೆಕೇರಿ ಬಂದರಿನ ಮೂಲಕ ಅಕ್ರಮ (Belekeri Illegal Iron Ore Case) ಕಬ್ಬಿಣದ ಅದಿರು ರಫ್ತು ಮಾಡಿದ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಕರ್ನಾಟಕ ಮತ್ತು ಹರಿಯಾಣದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ.

    ಹರಿಯಾಣದ ಗುರುಗ್ರಾಮ್‌ನ ಕೆಲವು ಸ್ಥಳಗಳು ಹಾಗೂ ಬೆಂಗಳೂರು ಮತ್ತು ಹೊಸಪೇಟೆ (ವಿಜಯನಗರ ಜಿಲ್ಲೆ)ಯಲ್ಲಿ ಕನಿಷ್ಠ 20 ಸ್ಥಳಗಳ ಮೇಲೆ ಹಣ ವರ್ಗಾವಣೆ ತಡೆ ಕಾಯ್ದೆ ನಿಬಂಧನೆಗಳ ಅಡಿಯಲ್ಲಿ ದಾಳಿ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೇಲೆಕೇರಿ ಅದಿರು ನಾಪತ್ತೆ ಕೇಸ್‌- ಸೈಲ್‌ಗೆ ರಿಲೀಫ್‌, ಶಿಕ್ಷೆಯನ್ನು ಅಮಾನತಿನಲ್ಲಿಟ್ಟ ಹೈಕೋರ್ಟ್‌

    ಬೇಲೆಕೇರಿ ಬಂದರಿನಿಂದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ ಪ್ರಕರಣಗಳನ್ನು ತನಿಖೆ ಮಾಡಲು ಸುಪ್ರೀಂ ಕೋರ್ಟ್ ನಿರ್ದೇಶಿಸಿದ ನಂತರ, ಈ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ಹಲವಾರು FIRಗಳು ಮತ್ತು ಚಾರ್ಜ್‌ಶೀಟ್‌ಗಳಿಂದ ಹಣ ವರ್ಗಾವಣೆ ತನಿಖೆ ಹುಟ್ಟಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇಡಿ ಶೋಧದಲ್ಲಿ ಒಳಗೊಂಡಿರುವ ಕಂಪನಿಗಳಲ್ಲಿ MSPL ಲಿಮಿಟೆಡ್ (ಬಾಲ್ಡೋಟಾ ಗ್ರೂಪ್), ಗ್ರೀನ್‌ಟೆಕ್ಸ್ ಮೈನಿಂಗ್ ಇಂಡಸ್ಟ್ರೀಸ್ ಲಿಮಿಟೆಡ್, ಶ್ರೀನಿವಾಸ ಮಿನರಲ್ಸ್ ಟ್ರೇಡಿಂಗ್ ಕಂ., ಅರ್ಷದ್ ಎಕ್ಸ್‌ಪೋರ್ಟ್ಸ್, SVM ನೆಟ್ ಪ್ರಾಜೆಕ್ಟ್ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್ ಮತ್ತು ಆಲ್ಫೈನ್ ಮಿನ್‌ಮೆಟಲ್ಸ್ ಇಂಡಿಯಾ ಪ್ರೈ. ಲಿ. ಕಂಪನಿಗಳು ಮತ್ತು ಪ್ರಮುಖ ನಿರ್ವಹಣಾ ವ್ಯಕ್ತಿಗಳು ಸೇರಿದ್ದಾರೆ.

    ಆರೋಪಿಗಳು ಕಬ್ಬಿಣದ ಅದಿರನ್ನು ಅಕ್ರಮವಾಗಿ ಅಗೆದು, ಖರೀದಿಸಿ, ಮಾರಾಟ ಮಾಡಿ, ಸರಿಯಾದ ತೆರಿಗೆ ಮತ್ತು ರಾಯಧನವನ್ನು ಪಾವತಿಸದೆ ಸಾಗಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದು ರಾಜ್ಯದ ಖಜಾನೆಗೆ ಭಾರಿ ನಷ್ಟವನ್ನುಂಟು ಮಾಡಿತು. ಪರಿಸರಕ್ಕೆ ಅಪಾರ ಹಾನಿಯನ್ನುಂಟು ಮಾಡಿತು ಎಂದು ಇಡಿ ಮೂಲವೊಂದು ತಿಳಿಸಿದೆ. ಇದನ್ನೂ ಓದಿ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ತೀರ್ಪು ಸಿಎಂ ಪಾದಯಾತ್ರೆಗೆ ಸಿಕ್ಕ ಫಲ – ಹೆಚ್.ಕೆ ಪಾಟೀಲ್

    ಈ ಬಂದರಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ, ಬಳ್ಳಾರಿಯಿಂದ ಬೇಲೆಕೇರಿಗೆ ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಿಸುವುದಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಸಂಸ್ಥೆಯು ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಕೃಷ್ಣ ಸೈಲ್ ಅವರನ್ನು ಬಂಧಿಸಿತ್ತು.

  • IPS ಅಧಿಕಾರಿ ಪೂರನ್‌ ಆತ್ಮಹತ್ಯೆ ಕೇಸ್‌ ತನಿಖೆ ಮಾಡುತ್ತಿದ್ದ ಪೊಲೀಸ್‌ ಅಧಿಕಾರಿ ಕೂಡ ಸೂಸೈಡ್‌

    IPS ಅಧಿಕಾರಿ ಪೂರನ್‌ ಆತ್ಮಹತ್ಯೆ ಕೇಸ್‌ ತನಿಖೆ ಮಾಡುತ್ತಿದ್ದ ಪೊಲೀಸ್‌ ಅಧಿಕಾರಿ ಕೂಡ ಸೂಸೈಡ್‌

    ಚಂಡೀಗಢ: ಹರಿಯಾಣ (Haryana IPS Officer) ಐಪಿಎಸ್‌ ಅಧಿಕಾರಿ ವೈ.ಪೂರನ್‌ ಕುಮಾರ್‌ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಶಾಕಿಂಗ್‌ ಸುದ್ದಿ ಎದುರಾಗಿದೆ. ಇದೇ ಪ್ರಕರಣದ ತನಿಖೆಯಲ್ಲಿದ್ದ ಮತ್ತೊಬ್ಬ ಪೊಲೀಸ್‌ ಅಧಿಕಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ರೋಹ್ಟಕ್‌ನ ಸೈಬರ್ ಸೆಲ್‌ನಲ್ಲಿ ಸಹಾಯಕ ಸಬ್-ಇನ್ಸ್‌ಪೆಕ್ಟರ್ ಆಗಿ ಕರ್ತವ್ಯನಿರ್ವಹಿಸುತ್ತಿದ್ದ ಸಂದೀಪ್ ಕುಮಾರ್, ವೈ.ಪೂರನ್ ಕುಮಾರ್ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದರು. ಅವರು‌, ‘ಸತ್ಯಕ್ಕಾಗಿ’ ತಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತಿರುವುದಾಗಿ ಡೆತ್‌ನೋಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಜಾತಿ ಕಿರುಕುಳಕ್ಕೆ ಬೇಸತ್ತು IPS ಅಧಿಕಾರಿ ಸಾವು – IAS ಪತ್ನಿ ದೂರು ನೀಡಿದ್ರೂ FIR ದಾಖಲಿಸದ ಪೊಲೀಸರು

    ರೋಹ್ಟಕ್‌ನ ಹೊಲವೊಂದರಲ್ಲಿ ಸಂದೀಪ್ ಕುಮಾರ್ ತನ್ನ ಸೇವಾ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ವೀಡಿಯೊ ಮತ್ತು ಮೂರು ಪುಟಗಳ ಡೆತ್‌ನೋಟ್‌ ಬಿಟ್ಟು ಹೋಗಿದ್ದಾರೆ. ವೈ.ಪೂರನ್ ಕುಮಾರ್ ಒಬ್ಬ ‘ಭ್ರಷ್ಟ ಪೊಲೀಸ್’ ಆಗಿದ್ದರು. ತಮ್ಮ ಭ್ರಷ್ಟಾಚಾರ ಬಯಲಾಗುತ್ತದೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡರು ಎಂದು ಸಂದೀಪ್ ಕುಮಾರ್ ಆರೋಪಿಸಿದ್ದಾರೆ.

    ಭ್ರಷ್ಟಾಚಾರದ ಆರೋಪಗಳು ಬೆಳಕಿಗೆ ಬಂದ ನಂತರ ವೈ ಪೂರನ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿತ್ತು ಎಂದು ಪೊಲೀಸ್ ಅಧಿಕಾರಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಪೂರನ್ ಕುಮಾರ್ ಅವರ ಗನ್‌ಮ್ಯಾನ್ ಮದ್ಯ ಗುತ್ತಿಗೆದಾರರಿಂದ 2.5 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಸಂದೀಪ್ ಕುಮಾರ್ ಅವರನ್ನು ಹಿಡಿದಿದ್ದರು ಎಂದು ತಿಳಿದುಬಂದಿದೆ. ಗ್ಯಾಂಗ್‌ಸ್ಟರ್ ಬೆದರಿಕೆ ಹಾಕಿದ ನಂತರ ಗುತ್ತಿಗೆದಾರ ಪೂರನ್ ಅವರನ್ನು ಭೇಟಿಯಾಗಿದ್ದ. ಲಂಚದ ಆರೋಪಗಳು ಬೆಳಕಿಗೆ ಬಂದಾಗ, ಐಪಿಎಸ್ ಅಧಿಕಾರಿ ಅದಕ್ಕೆ ಜಾತಿ ಬಣ್ಣ ನೀಡಲು ಪ್ರಯತ್ನಿಸಿದ್ದರು. ಕೊನೆಗೆ ಭ್ರಷ್ಟಾಚಾರ ಬೆಳಕಿಗೆ ಬರುತ್ತೆಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಆರೋಪ ಕೇಳಿಬಂದಿದೆ.

    ಪೂರನ್‌ ಅವರನ್ನು ರೋಹ್ಟಕ್ ವ್ಯಾಪ್ತಿಯಲ್ಲಿ ನಿಯೋಜಿಸಿದ ನಂತರ, ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳನ್ನು ಭ್ರಷ್ಟ ಅಧಿಕಾರಿಗಳಾಗಿ ಬದಲಾಯಿಸಿದರು. ಇವರೆಲ್ಲ ಈ ಜನರು ಫೈಲ್‌ಗಳನ್ನು ನಿರ್ಬಂಧಿಸಿದರು. ಅರ್ಜಿದಾರರಿಗೆ ಕರೆ ಮಾಡಿ ಹಣ ಕೇಳುವ ಮೂಲಕ ಮಾನಸಿಕವಾಗಿ ಹಿಂಸೆ ನೀಡಿದರು. ವರ್ಗಾವಣೆಗೆ ಪ್ರತಿಯಾಗಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಯಿತು ಎಂದು ಸಂದೀಪ್‌ ತಮ್ಮ ಡೆತ್‌ನೋಟ್‌ನಲ್ಲಿ ಆರೋಪಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ಗುಂಡು ಹಾರಿಸಿಕೊಂಡು ಎಡಿಜಿಪಿ ಆತ್ಮಹತ್ಯೆ – ಜಪಾನ್‌ ಪ್ರವಾಸದಲ್ಲಿರೋ ಪತ್ನಿ ಐಎಎಸ್‌ ಅಧಿಕಾರಿ

    ಅವರ ಭ್ರಷ್ಟಾಚಾರದ ಬೇರುಗಳು ತುಂಬಾ ಆಳವಾಗಿ ಬೇರೂರಿವೆ. ತಮ್ಮ ವಿರುದ್ಧದ ದೂರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆಸ್ತಿಗಳ ತನಿಖೆಯಾಗಬೇಕು. ಇದು ಜಾತಿ ಸಮಸ್ಯೆಯಲ್ಲ. ಸತ್ಯ ಹೊರಬರಬೇಕು. ಅವರು ಭ್ರಷ್ಟರಾಗಿದ್ದರು ಎಂದು ಸಂದೀಪ್‌ ಗಂಭೀರ ಆರೋಪ ಮಾಡಿದ್ದಾರೆ.

    ನಾನು ಈ ಸತ್ಯಕ್ಕಾಗಿ ನನ್ನ ಪ್ರಾಣವನ್ನೇ ತ್ಯಾಗ ಮಾಡುತ್ತಿದ್ದೇನೆ. ನಾನು ಪ್ರಾಮಾಣಿಕತೆಯೊಂದಿಗೆ ನಿಲ್ಲುತ್ತೇನೆ ಎಂದು ನನಗೆ ಹೆಮ್ಮೆ ಇದೆ. ದೇಶವನ್ನು ಜಾಗೃತಗೊಳಿಸಲು ಇದು ಮುಖ್ಯವಾಗಿದೆ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

    ಐಪಿಎಸ್‌ ಅಧಿಕಾರಿಯಾಗಿದ್ದ ವೈ.ಪೂರನ್‌ ಆತ್ಮಹತ್ಯೆಗೂ ಮುನ್ನ ಆರೋಪ ಮಾಡಿದ್ದ 10 ಪೊಲೀಸ್‌ ಅಧಿಕಾರಿಗಳ ಪೈಕಿ ರೋಹ್ಟಕ್‌ ಪೊಲೀಸ್‌ ಮುಖ್ಯಸ್ಥ ನರೇಂದ್ರ ಬಿಜಾರ್ನಿಯಾ ಹೆಸರು ಕೂಡ ಇತ್ತು. ನರೇಂದ್ರ ಅವರನ್ನು ಸಂದೀಪ್‌ ಹೊಗಳಿದ್ದಾರೆ.

  • ಜಾತಿ ಕಿರುಕುಳಕ್ಕೆ ಬೇಸತ್ತು IPS ಅಧಿಕಾರಿ ಸಾವು – IAS ಪತ್ನಿ ದೂರು ನೀಡಿದ್ರೂ FIR ದಾಖಲಿಸದ ಪೊಲೀಸರು

    ಜಾತಿ ಕಿರುಕುಳಕ್ಕೆ ಬೇಸತ್ತು IPS ಅಧಿಕಾರಿ ಸಾವು – IAS ಪತ್ನಿ ದೂರು ನೀಡಿದ್ರೂ FIR ದಾಖಲಿಸದ ಪೊಲೀಸರು

    – ಡಿಜಿಪಿ, ಎಸ್ಪಿ ವಿರುದ್ಧವೇ ಪೊಲೀಸರಿಗೆ ಪತ್ನಿ ದೂರು; ಸಿಎಂಗೆ ಪತ್ರ ಬರೆದು ನ್ಯಾಯಕ್ಕೆ ಮನವಿ
    – ಒಂದಲ್ಲ 3 ಸೂಸೈಡ್ ನೋಟ್ ಬರೆದಿಟ್ಟಿದ್ದ ಐಪಿಎಸ್ ಅಧಿಕಾರಿ

    ಚಂಡೀಗಢ: ಇದೇ ಅಕ್ಟೋಬರ್ 7 ರಂದು ಚಂಡೀಗಢದ (Chandigarh) ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹರಿಯಾಣದ ಹಿರಿಯ ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಅವರ ಪತ್ನಿ ಹಿರಿಯ ಐಎಎಸ್ ಅಧಿಕಾರಿ (IPS officer) ಅಮ್ನೀತ್ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿಗೆ ಪತ್ರ ಬರೆದಿದ್ದಾರೆ.

    8 ಪುಟಗಳ ಆತ್ಮಹತ್ಯೆ ಟಿಪ್ಪಣಿ ಮತ್ತು ಔಪಚಾರಿಕ ದೂರಿನ ಹೊರತಾಗಿಯೂ ಯಾವುದೇ ಎಫ್‌ಐಆರ್ (FIR) ದಾಖಲಿಸಲಾಗಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

    ಪತಿಯ ಆತ್ಮಹತ್ಯೆ ಪತ್ರವನ್ನು ಉಲ್ಲೇಖಿಸಿ ಬರೆದ ಪತ್ರದಲ್ಲಿ, ಕಿರುಕುಳ, ಅವಮಾನ ಮತ್ತು ಮಾನಸಿಕ ಹಿಂಸೆಯಲ್ಲಿ ಭಾಗಿಯಾಗಿರುವ ಹಿರಿಯ ಅಧಿಕಾರಿಗಳ ಎಲ್ಲಾ ವಿವರಗಳನ್ನು ನೀಡಿದರು, ಚಂಡೀಗಢ ಪೊಲೀಸರು, ನಿರ್ಲಕ್ಷಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಟೇಕಾಫ್‌ ಆದ ಕೆಲವೇ ಹೊತ್ತಲ್ಲಿ ಸ್ಕಿಡ್‌ ಆಗಿ ಹುಲ್ಲಿನ ಮೇಲೆ ಬಿದ್ದ ಪ್ರೈವೆಟ್ ಜೆಟ್‌

    ಹರಿಯಾಣ ಪೊಲೀಸ್ (Haryana Police) ಮತ್ತು ಆಡಳಿತದ ಪ್ರಭಾವಿ ಉನ್ನತ ಅಧಿಕಾರಿಗಳು ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಅವರು ಚಂಡೀಗಢ ಪೊಲೀಸರ ಮೇಲೆ ಪ್ರಭಾವ ಬೀರುತ್ತಿರುವುದೇ ಯಾವುದೇ ಕ್ರಮ ಕೈಗೊಳ್ಳದಿರಲು ಕಾರಣ. ಈ ಉನ್ನತ ಹುದ್ದೆಯಲ್ಲಿರುವ, ಪ್ರಭಾವಿ ಅಧಿಕಾರಿಗಳು ನನ್ನ ಮತ್ತು ನನ್ನ ಕುಟುಂಬದ ಮೇಲೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಾರೆ ಮತ್ತು ಬೇರೆ ರೀತಿಯಲ್ಲಿ ನನ್ನನ್ನು ಸಿಲುಕಿಸಲು ಪ್ರಯತ್ನಿಸಬಹುದು ಎಂದು ಅವರು ಪತ್ರದಲ್ಲಿ ಹೇಳಿಕೊಂಡಿದ್ದಾರೆ.

    ಮುಖ್ಯಮಂತ್ರಿ ನಯಾಬ್‌ ಸಿಂಗ್​ ಸೈನಿ ನೇತೃತ್ವದಲ್ಲಿ ಹರಿಯಾಣ ಸರ್ಕಾರದ ನಿಯೋಗದೊಂದಿಗೆ ಅಮ್ನೀತ್ ಅವರು ಜಪಾನ್​ಗೆ ತೆರಳಿದಾಗ ಪತಿ ಆತ್ಮಹತ್ಯೆಗೆ ಶರಣಾಗಿದ್ದು, ವಿಷಯ ತಿಳಿದು ಅವರು ತಕ್ಷಣವೇ ಅವರು ಪ್ರವಾಸದಿಂದ ಹಿಂತಿರುಗಿದ್ದರು. ಇದನ್ನೂ ಓದಿ: ಭಾರತದಲ್ಲಿ 9 ಬ್ರಿಟಿಷ್‌ ವಿವಿ ಕ್ಯಾಂಪಸ್‌ಗಳ ಸ್ಥಾಪನೆ: ಬ್ರಿಟನ್‌ ಪ್ರಧಾನಿ ಘೋಷಣೆ

    ತಾವು ಜಪಾನ್​ನಿಂದ ಮರಳಿದ ತಕ್ಷಣ ಪತಿಯ ಲ್ಯಾಪ್​ಟಾಪ್​ ಬ್ಯಾಗ್​ನಲ್ಲಿ ಡೆತ್‌ನೋಟ್‌ನ 2ನೇ ಪ್ರತಿ ಸಿಕ್ಕಿದೆ. ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ಹಿನ್ನೆಲೆಯಲ್ಲಿ ಜಾತಿ ತಾರತಮ್ಯಕ್ಕೆ ಒಳಗಾಗಿದ್ದರು. ರೋಹ್ಟಕ್​ ಎಸ್​ಪಿ ನರೇಂದ್ರ ಬಿಜರ್ನಿಯಾ, ಡಿಜಿಪಿ ಕಪೂರ್​ ಅವರ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದು, ಅರ್ಬನ್​ ಎಸ್ಟೇಟ್​​ ಪೊಲೀಸ್​ ಠಾಣೆಯಲ್ಲಿ ಅವರ ವಿರುದ್ಧ ಸುಳ್ಳು ಎಫ್​ಐಆರ್​ ದಾಖಲಿಸಲಾಗಿದೆ. ಈ ಘಟನೆಯಿಂದಾಗಿ ಪತಿ ಹೆಚ್ಚು ಒತ್ತಡಕ್ಕೆ ಒಳಗಾಗಿದ್ದರು. ಈ ವಿಷಯವನ್ನು ಡಿಜಿಪಿ ಮತ್ತು ಎಸ್ಪಿ ಜೊತೆ ಚರ್ಚಿಸಲು ಪತಿ ಮಾಡಿದ ಪ್ರಯತ್ನಗಳು ವಿಫಲವಾದ ಕಾರಣ ಅವರು ಈ ರೀತಿಯ ನಿರ್ಧಾರ ತೆಗೆದುಕೊಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸ್ಪೆಷಲ್‌ ರಾವಲ್ಪಿಂಡಿ ಚಿಕನ್ ಟಿಕ್ಕಾ ಮಸಾಲಾ, ಬಾಲಕೋಟ್ ತಿರಮಿಸು ತಿಂದ ಭಾರತೀಯ ವಾಯುಸೇನೆ

    ಅಮ್ನಿತ್‌ ತಮ್ಮ ಪತಿಯನ್ನು ಸಂಪರ್ಕಿಸಲು ಪ್ರಯತ್ನಿಸಿದರು ಮತ್ತು ಅವರ ಆತ್ಮಹತ್ಯೆ ಪತ್ರ ಮತ್ತು ಉಯಿಲು ಪತ್ರವನ್ನು ಸ್ವೀಕರಿಸಿದ ನಂತರ ಅವರಿಗೆ 15 ಬಾರಿ ಕರೆ ಮಾಡಿರುವುದಾಗಿ ಹೇಳಿದರು. ಅವರ ಕರೆಗಳಿಗೆ ಉತ್ತರಿಸದ ಹಿನ್ನಲೆ ತಮ್ಮ ಚಿಕ್ಕ ಮಗಳಿಗೆ ವಿಚಾರಿಸಲು ಕರೆ ಮಾಡಲಾಯಿತು, ಅವರು ಮನೆಗೆ ಧಾವಿಸಿದಾಗ, ನೆಲಮಾಳಿಗೆಯಲ್ಲಿ ರೆಕ್ಲೈನರ್ ಮೇಲೆ ತನ್ನ ಪತಿಯ ನಿರ್ಜೀವ ದೇಹವು ಕಂಡುಬಂದಿತು ಎಂದು ವಿವರಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಧಿಕಾರಿಗಳ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಬೇಕು. ತನಿಖೆಯ ಮೇಲೆ ಹಸ್ತಕ್ಷೇಪ, ಸಾಕ್ಷ್ಯಾಧಾರಗಳ ತಿರುಚುವಿಕೆ ಅಥವಾ ಪ್ರಭಾವ ತಡೆಯಲು ಆರೋಪಿತರನ್ನು ಅಮಾನತುಗೊಳಿಸುವಂತೆಯೂ ಅವರು ಕೋರಿದ್ದಾರೆ.

  • 7 ವರ್ಷದ ಬಾಲಕನ ಮೇಲೆ ಶಿಕ್ಷಕಿಯಿಂದ ಇದೆಂಥಾ ಕ್ರೌರ್ಯ – ಹೋಂ ವರ್ಕ್‌ ಮಾಡದಿದ್ದಕ್ಕೆ ತಲೆ ಕೆಳಗಾಗಿ ನೇತುಹಾಕಿ ಹಿಂಸೆ

    7 ವರ್ಷದ ಬಾಲಕನ ಮೇಲೆ ಶಿಕ್ಷಕಿಯಿಂದ ಇದೆಂಥಾ ಕ್ರೌರ್ಯ – ಹೋಂ ವರ್ಕ್‌ ಮಾಡದಿದ್ದಕ್ಕೆ ತಲೆ ಕೆಳಗಾಗಿ ನೇತುಹಾಕಿ ಹಿಂಸೆ

    ಚಂಡೀಗಢ: ಯಾವುದೇ ಒಬ್ಬ ವಿದ್ಯಾರ್ಥಿ ತನ್ನ ಗುರಿ ತಲುಪಬೇಕಾದ್ರೆ ಹಿಂದೆ ಶಿಕ್ಷಕರೊಬ್ಬರು ಇರಲೇಬೇಕು. ವಿದ್ಯಾರ್ಥಿಗಳ ತಪ್ಪುಗಳನ್ನು ತಿದ್ದುತ್ತಾ, ಜೀವನಕ್ಕೆ ದಾರಿ ದೀಪವಾಗಬೇಕಿರುವುದು ಶಿಕ್ಷಕರು (Teachers). ಆದ್ರೆ ಇಲ್ಲೊಬ್ಬಳು ಶಿಕ್ಷಕಿ ಅದಕ್ಕೆ ವ್ಯತಿರಿಕ್ತವಾಗಿದ್ದಾಳೆ. ವಿದ್ಯಾರ್ಥಿ ಹೋಂ ವರ್ಕ್‌ ಮಾಡಿಲ್ಲ ಅನ್ನೋ ಕಾರಣಕ್ಕೆ ಆತನ ಕೈಕಾಲು ಕಟ್ಟಿ, ತಲೆಕೆಳಗಾಗಿ ನೇತು ಹಾಕಿ ಹಿಂಸೆ ನೀಡಿ ಕ್ರೌರ್ಯ ಮೆರೆದಿದ್ದಾಳೆ.

    ಹೌದು. ಹರಿಯಾಣದ (Haryana) ಪಾಣಿಪತ್‌ನ ಶ್ರೀಜನ್ ಪಬ್ಲಿಕ್ ಶಾಲೆಯಲ್ಲಿ (Srijan Public School) ಈ ಘಟನೆ ನಡೆದಿದೆ. ವಿದ್ಯಾರ್ಥಿ ಹೋಂ ವರ್ಕ್‌ ಮಾಡಿಲ್ಲ ಅಂತ ಶಿಕ್ಷಕಿಯೊಬ್ಬಳು ಆತನ ಕೈಕಾಲು ಕಟ್ಟಿ, ತಲೆಕೆಳಗಾಗಿಸಿ ನೇತುಹಾಕಿದ್ದಾಳೆ, ವಿದ್ಯಾರ್ಥಿಯನ್ನ ಚೆನ್ನಾಗಿ ಥಳಿಸಿದ್ದಾಳೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹಿಟ್ ಅಂಡ್‌ ರನ್‌ಗೆ ಬಿ.ಕಾಂ ಪದವೀಧರೆ ಬಲಿ

    ಆಗಸ್ಟ್‌ 13ರಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಾಲಾ ಆಡಳಿಯ ಮಂಡಳಿಗೆ ಈ ವಿಷಯ ತಿಳಿದಿದ್ದೂ ಮುಚ್ಚಿಟ್ಟಿದ್ದರು. ಆದ್ರೆ ಹಲ್ಲೆ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದಮೇಲೆ ವಿಷಯ ಗೊತ್ತಾಗಿದೆ.

    ವಿಡಿಯೋ ಆಧರಿಸಿ ಮಾಡೆಲ್‌ ಪೊಲೀಸ್‌ ಠಾಣೆಗೆ ಪೋಷಕರು ದೂರು ನೀಡಿದ್ದಾರೆ. ದೂರು ನೀಡುತ್ತಿದ್ದಂತೆ ಶಿಕ್ಷಕಿ ಕಡೆಯವರು ಎನ್ನಲಾದ ಕೆಲವರು ಪೋಷಕರಿಗೆ ದೂರು ಹಿಂಪಡೆಯುವಂತೆ ಬೆದರಿಕೆ ಹಾಕಿದ್ದಾರೆಂದು ತಿಳಿದುಬಂದಿದೆ. ಇದನ್ನೂ ಓದಿ: TVK Vijay Rally Stampede | ಮದ್ರಾಸ್‌ ಹೈಕೋರ್ಟ್‌ನಲ್ಲಿಂದು ವಿಚಾರಣೆ – ಸಾವಿನ ಸಂಖ್ಯೆ 41ಕ್ಕೆ ಏರಿಕೆ

    ಮತ್ತೊಂದು ವಿಡಿಯೋ ವೈರಲ್‌
    ಇನ್ನೂ ಅದೇ ಶಾಲೆಯಲ್ಲಿ ಇತರ ಮಕ್ಕಳನ್ನು ಥಳಿಸುತ್ತಿರುವ ಇನ್ನೊಂದು ವಿಡಿಯೋ ಸಹ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಒಬ್ಬ ಶಿಕ್ಷಕಿ ಮಗುವನ್ನ ಹೊಡೆಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸತತ ಒಂಬತ್ತು ಬಾರಿ ಮಗುವಿಗೆ ಕಪಾಳಮೋಕ್ಷ ಮಾಡುತ್ತಿದ್ದಾಳೆ. ವಿಡಿಯೋಗಳನ್ನ ವಶಕ್ಕೆ ಪಡೆದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಲ್ಲದೇ ಚಾಲಕನ ಕೈಯಿಂದಲೂ ಥಳಿಸಿದ್ದಳು ಎನ್ನಲಾಗಿ ಕಾಲೇಜು ಪ್ರಾಂಶುಪಾಲರು ಹಾಗೂ ಬಸ್‌ ಚಾಲಕನನ್ನ ಬಂಧಿಸಲಾಗಿದೆ.

  • ನಿಯಂತ್ರಣ ತಪ್ಪಿ ಡಿವೈಡರ್‌ಗೆ ಥಾರ್ ಡಿಕ್ಕಿ – ಐವರು ದುರ್ಮರಣ, ಓರ್ವ ಗಂಭೀರ

    ನಿಯಂತ್ರಣ ತಪ್ಪಿ ಡಿವೈಡರ್‌ಗೆ ಥಾರ್ ಡಿಕ್ಕಿ – ಐವರು ದುರ್ಮರಣ, ಓರ್ವ ಗಂಭೀರ

    ಚಂಡೀಗಢ: ವೇಗವಾಗಿ ಬಂದ ಥಾರ್ (Thar) ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡ ಘಟನೆ ಹರಿಯಾಣದ ಗುರುಗ್ರಾಮದಲ್ಲಿ (Gurugram) ನಡೆದಿದೆ.

    ಶನಿವಾರ ಮುಂಜಾನೆ 4:30ರ ಸುಮಾರಿಗೆ ಗುರುಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಮೂವರು ಪುರುಷರು ಹಾಗೂ ಮೂವರು ಮಹಿಳೆಯರು ಸೇರಿದಂತೆ ಒಟ್ಟು ಆರು ಮಂದಿ ಕೆಲಸದ ನಿಮಿತ್ತ ಉತ್ತರ ಪ್ರದೇಶದಿಂದ ಗುರುಗ್ರಾಮಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಉಂಟಾಗಿದೆ. ಇದನ್ನೂ ಓದಿ: ಬುರುಡೆ ದೆಹಲಿಗೆ ಎತ್ತಿಕೊಂಡು ಹೋಗಿದ್ದು, ಸುಪ್ರೀಂ ಕೋರ್ಟ್‌ಗೆ ಹೋಗಿದ್ದು ಎಲ್ಲಾ ಗೊತ್ತು: ಡಿಕೆಶಿ ಬಾಂಬ್‌

    ಅತಿವೇಗದ ಚಾಲನೆಯಿಂದ ಚಾಲಕನ ನಿಯಂತ್ರಣ ತಪ್ಪಿ ಥಾರ್ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಇನ್ನೋರ್ವ ಗಾಯಾಳುವಿನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಭೀಕರ ಅಪಘಾತದ ಪರಿಣಾಮ ಥಾರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ನಿರಂತರ ಮಳೆ – ಮನೆಯ ಮೇಲ್ಛಾವಣಿ, ಗೋಡೆ ಕುಸಿದು ಬಾಲಕ ಸಾವು

  • ಇಲ್ಲಿ ಮೂತ್ರ ವಿಸರ್ಜಿಸ್ಬೇಡ ಎಂದಿದ್ದೆ ತಪ್ಪಾಯ್ತಾ? – ಅಮೆರಿಕದಲ್ಲಿ ಹರಿಯಾಣದ ಯುವಕನ ಗುಂಡಿಕ್ಕಿ ಹತ್ಯೆ

    ಇಲ್ಲಿ ಮೂತ್ರ ವಿಸರ್ಜಿಸ್ಬೇಡ ಎಂದಿದ್ದೆ ತಪ್ಪಾಯ್ತಾ? – ಅಮೆರಿಕದಲ್ಲಿ ಹರಿಯಾಣದ ಯುವಕನ ಗುಂಡಿಕ್ಕಿ ಹತ್ಯೆ

    ವಾಷಿಂಗ್ಟನ್: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜಿಸದಂತೆ ಹೇಳಿದ್ದಕ್ಕೆ ಹರಿಯಾಣದ (Haryana) ಯುವಕನನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಅಮೆರಿಕದ (America) ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

    ಹರಿಯಾಣದ ಜಿಂದ್ ಜಿಲ್ಲೆಯ ಬರಾಹ್ ಕಲಾ ಗ್ರಾಮದ ಕಪಿಲ್ (26) ಹತ್ಯೆಯಾದ ಯುವಕ. ಕಪಿಲ್ ಮೂರು ವರ್ಷದ ಹಿಂದೆಯೇ ಕೆಲಸದ ನಿಮಿತ್ತ ಅಮೆರಿಕಕ್ಕೆ ತೆರಳಿದ್ದರು. ಇದನ್ನೂ ಓದಿ: ಹರಿಯಾಣ | ಎಸಿ ಸ್ಫೋಟ – ಒಂದೇ ಕುಟುಂಬದ ಮೂವರ ದುರ್ಮರಣ, ಮತ್ತೊಬ್ಬನ ಸ್ಥಿತಿ ಗಂಭೀರ

     ಕಪಿಲ್ ಕೆಲಸ ಮಾಡುತ್ತಿದ್ದ ಸ್ಟೋರ್‌ನ ಹೊರಗಡೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಇದನ್ನು ಗಮನಿಸಿದ ಕಪಿಲ್ ಆತನ ಬಳಿ, ಸಾರ್ವಜನಿಕ ಸ್ಥಳವಾದ ಇಲ್ಲಿ ಮೂತ್ರ ವಿಸರ್ಜಿಸಬೇಡ ಎಂದಿದ್ದರು. ಈ ವೇಳೆ ಕೋಪಗೊಂಡ ವ್ಯಕ್ತಿ ಕಪಿಲ್‌ನ ಮೇಲೆ ಗುಂಡಿನ ದಾಳಿ ನಡೆಸಿದ್ದ. ಇದನ್ನೂ ಓದಿ: ಬೈಕ್‌ ಅಪಘಾತ – ರಸ್ತೆಗೆ ಬಿದ್ದ ಯುವತಿ ಮೇಲೆ ಹರಿದ ಬಸ್‌; 15 ದಿನದಲ್ಲಿ ಹಸೆಮಣೆ ಏರಬೇಕಾಗಿದ್ದವಳ ದುರಂತ ಅಂತ್ಯ

    ತಕ್ಷಣವೇ ಅಲ್ಲಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ಕಪಿಲ್‌ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕಪಿಲ್ ಮೃತಪಟ್ಟಿದ್ದಾರೆ.

     ಕುಟುಂಬಕ್ಕೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ತಂದೆ, ತಾಯಿ ಕಣ್ಣೀರಿಟ್ಟಿದ್ದಾರೆ. ಕಪಿಲ್ ಬಡ ಕುಟುಂಬದಲ್ಲಿ ಜನಿಸಿದ್ದ. ಕಪಿಲ್‌ನನ್ನು ಸಾಲ ಮಾಡಿ ಅಮೆರಿಕಕ್ಕೆ ಕಳುಹಿಸಿದರು. ಇದೀಗ ಮಗನ ಸಾವಿನ ಸುದ್ದಿ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ.

  • ಹರಿಯಾಣ | ಎಸಿ ಸ್ಫೋಟ – ಒಂದೇ ಕುಟುಂಬದ ಮೂವರ ದುರ್ಮರಣ, ಮತ್ತೊಬ್ಬನ ಸ್ಥಿತಿ ಗಂಭೀರ

    ಹರಿಯಾಣ | ಎಸಿ ಸ್ಫೋಟ – ಒಂದೇ ಕುಟುಂಬದ ಮೂವರ ದುರ್ಮರಣ, ಮತ್ತೊಬ್ಬನ ಸ್ಥಿತಿ ಗಂಭೀರ

    ಚಂಡೀಗಢ: ಹರಿಯಾಣದ (Haryana) ಫರಿದಾಬಾದ್‌ನ (Faridabad) ಕಟ್ಟಡ ಒಂದರಲ್ಲಿ ಎಸಿಯ ಕಂಪ್ರೆಸರ್ ಸ್ಫೋಟಗೊಂಡು (AC Blast) ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಈ ಅವಘಡದಲ್ಲಿ ಅವರ ಸಾಕು ನಾಯಿ ಕೂಡ ಸಾವಿಗೀಡಾಗಿದೆ.

    ಮೃತರನ್ನು ಸಚಿನ್ ಕಪೂರ್, ಅವರ ಪತ್ನಿ ರಿಂಕು ಕಪೂರ್ ಮತ್ತು ಅವರ ಮಗಳು ಸುಜನ್ ಕಪೂರ್ ಎಂದು ಗುರುತಿಸಲಾಗಿದೆ. ನಾಲ್ಕು ಅಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿ ಸೋಮವಾರ (ಸೆ.8) ಬೆಳಗಿನ ಜಾವ 1:30ರ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ. ಈ ವೇಳೆ, ಅವರು ವಾಸವಾಗಿದ್ದ ಎರಡನೇ ಮಹಡಿಯಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬಳ್ಳಾರಿಯ ಜ್ಯುವೆಲ್ಲರಿ ಅಂಗಡಿಯಲ್ಲಿ ಎಸಿ ಸ್ಫೋಟ – ಮೂವರಿಗೆ ಗಂಭೀರ ಗಾಯ

    ಮತ್ತೊಂದು ಕೋಣೆಯಲ್ಲಿ ಸಚಿನ್‌ ಅವರ ಮಗ ಬಚಾವ್‌ ಆಗಲು ಕಿಟಕಿಯಿಂದ ಹಾರಿದ್ದಾನೆ. ಆತ ಗಂಭೀರವಾಗಿ ಗಾಯಗೊಂಡಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ಸ್ಫೋಟದ ಶಬ್ಧಕ್ಕೆ ಅಕ್ಕಪಕ್ಕದ ಜನ ಎದ್ದು ಕಟ್ಟಡದಲ್ಲಿದ್ದ ಇತರರನ್ನು ರಕ್ಷಿಸಿದ್ದಾರೆ.

    ಆ ಕಟ್ಟಡದ ನಾಲ್ಕನೇ ಮಹಡಿಯಲ್ಲಿ 7 ಜನ ವಾಸವಾಗಿದ್ದರು. ಇನ್ನೂ ಮೊದಲನೇ ಮಹಡಿಯನ್ನು ಸಚಿನ್‌ ಕಪೂರ್‌ ಕಚೇರಿಯಾಗಿ ಮಾಡಿಕೊಂಡಿದ್ದರು. ಅಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಕಾರ್ ಡ್ರೈವರ್‌ನ ಭೀಕರ ಕೊಲೆ – ಸ್ನೇಹಿತರಿಂದಲೇ ಹತ್ಯೆ ಶಂಕೆ

  • ಉತ್ತರ ಭಾರತದಲ್ಲಿ ನಿರಂತರ ಮಳೆಯಿಂದ ಭಾರೀ ಹಾನಿ – ಪಂಜಾಬ್‌ನಲ್ಲಿ ಪ್ರವಾಹದಿಂದಾಗಿ 45 ಮಂದಿ ಸಾವು

    ಉತ್ತರ ಭಾರತದಲ್ಲಿ ನಿರಂತರ ಮಳೆಯಿಂದ ಭಾರೀ ಹಾನಿ – ಪಂಜಾಬ್‌ನಲ್ಲಿ ಪ್ರವಾಹದಿಂದಾಗಿ 45 ಮಂದಿ ಸಾವು

    – 1.71 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದ ಬೆಳೆಗಳು ನಾಶ
    – ಹರಿಯಾಣದಲ್ಲೂ ಭಾರೀ ಮಳೆ, ಶಾಲೆಗಳಿಗೆ ರಜೆ ಘೋಷಣೆ

    ನವದೆಹಲಿ: ಉತ್ತರ ಭಾರತದಲ್ಲಿ (North India) ನಿರಂತರವಾಗಿ ಮಳೆ (Rain) ಸುರಿಯುತ್ತಿರುವ ಪರಿಣಾಮ ಭಾರೀ ಪ್ರಮಾಣದ ಹಾನಿಯುಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

    ಪಂಜಾಬ್‌ನಲ್ಲಿ (Punjab) ಪ್ರವಾಹದಿಂದಾಗಿ 45 ಜನರು ಸಾವನ್ನಪ್ಪಿದ್ದು, ರಾಜ್ಯದ 23 ಜಿಲ್ಲೆಗಳ 1,655 ಹಳ್ಳಿಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. 20,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಭಾರೀ ಮಳೆಯಿಂದಾಗಿ 1.71 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದ ಬೆಳೆಗಳು ನಾಶವಾಗಿವೆ. ಇನ್ನು ಜಮ್ಮು-ಶ್ರೀನಗರ ಹೆದ್ದಾರಿ ಮತ್ತು ಸಿಂಥಾನ್ ರಸ್ತೆಯ ಹಲವಾರು ಸ್ಥಳಗಳಲ್ಲಿ ಭೂಕುಸಿತ, ಮಣ್ಣು ಕುಸಿತ ಮತ್ತು ಕಲ್ಲುಗಳು ಬೀಳುವುದರಿಂದ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಕಳೆದ ನಾಲ್ಕು ದಿನಗಳಿಂದ ಜಮ್ಮು-ಶ್ರೀನಗರ ಹೆದ್ದಾರಿಯನ್ನು ಮುಚ್ಚಲಾಗಿದೆ. ಮೊಘಲ್ ರಸ್ತೆಯಲ್ಲಿ ಸಂಚಾರವನ್ನು ಪುನಃಸ್ಥಾಪಿಸಲಾಗಿದೆ. ಇದನ್ನೂ ಓದಿ: ಹನಿಮೂನ್ ಮರ್ಡರ್‌ ಕೇಸ್ | 790 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ – ಕೊಲೆಯಾದ ರಘುವಂಶಿ ಪತ್ನಿಯೇ ಪ್ರಮುಖ ಆರೋಪಿ

    ಭದ್ರತಾ ಕಾರಣಗಳಿಂದಾಗಿ ಮಾತಾ ವೈಷ್ಣೋ ದೇವಿಯ ಯಾತ್ರೆಯನ್ನು 11ನೇ ದಿನವೂ ಸ್ಥಗಿತಗೊಳಿಸಲಾಗಿದೆ. ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯಲ್ಲಿ ಭೂಕುಸಿತದ ಸಂಭವಿಸಿದ್ದು, ಕನಿಷ್ಠ ನಾಲ್ಕು ಜನರನ್ನು ಹೊತ್ತ ವ್ಯಾನ್ ತೆರೆದ ಗುಂಡಿಯ ಕೆಳಭಾಗದಲ್ಲಿ ಸಂಗ್ರಹವಾದ ನೀರಿನಲ್ಲಿ 150 ಅಡಿ ಆಳಕ್ಕೆ ಬಿದ್ದಿದೆ. ಹರಿಯಾಣದಲ್ಲೂ ಭಾರಿ ಮಳೆ ಮುಂದುವರಿದ ಪರಿಣಾಮ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರಾಜಸ್ಥಾನ, ಗುಜರಾತ್‌ನ ಕೆಲ ಭಾಗಗಳಲ್ಲಿ ಇಂದು ಮಳೆ ಮುಂದುವರಿಯಲಿದೆ. ದೆಹಲಿಯಲ್ಲಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಸ್ಥಿತಿ ಇನ್ನಷ್ಟು ಹೆಚ್ಚಲಿದೆ. ಇದನ್ನೂ ಓದಿ: ದೆಹಲಿಯಲ್ಲಿ ಅಪಾಯಮಟ್ಟ ಮೀರಿದ ಯಮುನೆ – ಹಲವು ಪ್ರದೇಶಗಳು ಜಲಾವೃತ

  • ಅತ್ಯಾಚಾರ ಆರೋಪದಲ್ಲಿ ಬಂಧನ; ಪೊಲೀಸರ ಮೇಲೆ ಗುಂಡು ಹಾರಿಸಿ ಆಪ್ ಶಾಸಕ ಪರಾರಿ

    ಅತ್ಯಾಚಾರ ಆರೋಪದಲ್ಲಿ ಬಂಧನ; ಪೊಲೀಸರ ಮೇಲೆ ಗುಂಡು ಹಾರಿಸಿ ಆಪ್ ಶಾಸಕ ಪರಾರಿ

    ಚಂಡೀಗಢ: ಅತ್ಯಾಚಾರ ಮತ್ತು ವಂಚನೆ ಆರೋಪದ ಮೇಲೆ ಪಂಜಾಬ್‌ನ ಆಪ್ ಶಾಸಕನನ್ನು ಬಂಧಿಸಿ ಕರೆದೊಯ್ಯುವಾಗ ಹರಿಯಾಣದ (Haryana) ಕರ್ನಾಲ್ ಬಳಿ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

    ಅತ್ಯಾಚಾರ ಆರೋಪದ ಮೇಲೆ ಪಂಜಾಬ್ ಶಾಸಕ ಹರ್ಮೀತ್ ಸಿಂಗ್ ಧಿಲ್ಲೋನ್ ಪಠಾಣಮಜ್ರರನ್ನು (Harmeet Singh Pathanmajra) ಪೊಲೀಸರು ಬಂಧಿಸಿದ್ದರು. ಸ್ಥಳೀಯ ಠಾಣೆಗೆ ಅವರನ್ನು ಕರೆದೊಯ್ಯುತ್ತಿದ್ದಾಗ ಕಾರಿನಲ್ಲಿ ಬಂದ ಅವರ ಬೆಂಬಲಿಗರು ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದರು. ಈ ವೇಳೆ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಬಳಿಕ ಹರ್ಮೀತ್ ಸಿಂಗ್, ತಮ್ಮ ಬೆಂಬಲಿಗರು ಬಂದಿದ್ದ ಸ್ಕಾರ್ಪಿಯೋ, ಎಸ್‌ಯುವಿಯಲ್ಲಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಪ್ರೀಮಿಯಂ ಬ್ರ‍್ಯಾಂಡ್‌ಗಳ ಮದ್ಯದ ದರ ಇಳಿಕೆ ಮಾಡೋ ಚಿಂತನೆ ಇದೆ – ಆರ್.ಬಿ ತಿಮ್ಮಾಪುರ್

     ಇದೀಗ ಪೊಲೀಸರು ಫಾರ್ಚೂನರ್ ಅನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಶಾಸಕ ಇನ್ನೊಂದು ಕಾರಿನಲ್ಲಿದ್ದಿದ್ದರಿಂದ ಎಸ್ಕೇಪ್ ಆಗಿದ್ದಾರೆ. ಇದೀಗ ಶಾಸಕನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಜಿರಾಕ್‌ಪುರದ ಮಹಿಳೆಯ ನೀಡಿದ ದೂರಿನಾಧಾರವಾಗಿ ಶಾಸಕ ಹರ್ಮೀತ್ ಸಿಂಗ್ ವಿರುದ್ಧ ಅತ್ಯಾಚಾರ, ವಂಚನೆ ಹಾಗೂ ಜೀವ ಬೆದರಿಕೆ ಪ್ರಕರಣದಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಪಿತೂರಿಗೆ ವಿದೇಶಿ ಫಂಡಿಂಗ್‌ – ತನಿಖೆಗೆ ಇಡಿ ಎಂಟ್ರಿ

    ಹರ್ಮೀತ್ ಸಿಂಗ್, ತಮ್ಮ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಫೇಸ್‌ಬುಕ್‌ನಲ್ಲಿ ಲೈವ್ ಬಂದು, ದೆಹಲಿಯಲ್ಲಿರುವ ನಾಯಕತ್ವವು ಪಂಜಾಬ್ ಅನ್ನು ಅಕ್ರಮವಾಗಿ ಆಳುತ್ತಿದೆ ಎಂದು ಆರೋಪಿಸಿದ್ದರು.

    ಕೇಂದ್ರ ನಾಯಕರ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ನನ್ನನ್ನು ಗುರಿಯಾಗಿಸಿದ್ದಾರೆ. ಅವರು ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಿ, ನನ್ನನ್ನು ಜೈಲಿಗೆ ಕಳುಹಿಸಬಹುದು. ಆದರೆ ನನ್ನ ಧ್ವನಿಯನ್ನು ನಿಗ್ರಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

  • ಜನರ ಆಶೀರ್ವಾದ ಇನ್ನೂ ಜೀರ್ಣಿಸಿಕೊಳ್ಳೋಕೆ ಆಗ್ತಿಲ್ಲ – ಮತಗಳವು ಆರೋಪ ಮಾಡಿದ್ದ ರಾಗಾ ವಿರುದ್ಧ ಮೋದಿ ಕಿಡಿ

    ಜನರ ಆಶೀರ್ವಾದ ಇನ್ನೂ ಜೀರ್ಣಿಸಿಕೊಳ್ಳೋಕೆ ಆಗ್ತಿಲ್ಲ – ಮತಗಳವು ಆರೋಪ ಮಾಡಿದ್ದ ರಾಗಾ ವಿರುದ್ಧ ಮೋದಿ ಕಿಡಿ

    ನವದೆಹಲಿ: ದೆಹಲಿಯಲ್ಲಿ ಬಿಜೆಪಿ (BJP) ಸರ್ಕಾರ ಆಡಳಿತಕ್ಕೆ ಬಂದಿದೆ. ಈ ಮೂಲಕ ಜನರ ಆಶೀರ್ವಾದ ನಮ್ಮೊಂದಿಗಿದೆ ಎಂಬುವುದು ಗೊತ್ತಾಗುತ್ತದೆ. ಆದರೆ ಕೆಲವು ಜನರಿಗೆ ಈ ಆಶೀರ್ವಾದವನ್ನು ಸಹಿಸೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆರೋಪ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಕಿಡಿಕಾರಿದರು.

    ಭಾನುವಾರ (ಆ.17) ಹರಿಯಾಣದಲ್ಲಿ (Hariyana) ಸುಮಾರು 11,000 ಕೋಟಿ ರೂ. ಮೌಲ್ಯದ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಾದ ದ್ವಾರಕಾ ಎಕ್ಸ್‌ಪ್ರೆಸ್‌ವೇ ಮತ್ತು ದೆಹಲಿ ವಿಭಾಗದ ನಗರ ವಿಸ್ತರಣಾ ರಸ್ತೆ-2 ಯೋಜನೆಗಳನ್ನು ಉದ್ಘಾಟಿಸಿದರು.ಇದನ್ನೂ ಓದಿ: ಮುಸುಕುದಾರಿಯ ಮಂಪರು ಪರೀಕ್ಷೆ ಮಾಡಿ : ಕೈ ಶಾಸಕ ಸವದಿ ಒತ್ತಾಯ

    ಈ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಾದ್ಯಂತ ಬಿಜೆಪಿ ಸರ್ಕಾರ ಅಡಳಿತದಲ್ಲಿದೆ. ಈ ಮೂಲಕ ಈ ಪ್ರದೇಶದ ಜನರು ಬಿಜೆಪಿ ಹಾಗೂ ನಮ್ಮೆಲ್ಲರನ್ನು ಎಷ್ಟು ಆಶೀರ್ವದಿಸಿದೆ ಎಂಬುದನ್ನು ತೋರಿಸುತ್ತದೆ. ಅದಕ್ಕಾಗಿಯೇ ಬಿಜೆಪಿ ಜನರಿಗೆ ಅಗತ್ಯವಿರುವ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಲೇ ಬಂದಿದೆ, ಈಗಲೂ ಮಾಡುತ್ತಿದೆ. ನಾವು ನಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳುವ ಮೂಲಕ ದೆಹಲಿ-ಎನ್‌ಸಿಆರ್ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದೇವೆ. ಆದರೆ ಇದೆಲ್ಲದರ ನಡುವೆ ಸಾರ್ವಜನಿಕರ ಈ ಆಶೀರ್ವಾದವನ್ನು ಇನ್ನೂ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಕೆಲವು ರಾಜಕೀಯ ಪಕ್ಷಗಳಿವೆ. ಅವರು ಸಾರ್ವಜನಿಕರ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಕುಟುಕಿದರು.

    ಇನ್ನೂ ಈ ಎರಡು ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿನ ಜನರ ಪ್ರಯಾಣಕ್ಕೆ ಸಹಾಯಕವಾಗುತ್ತದೆ. ಬಹಳ ದಿನಗಳ ನಂತರ ದೆಹಲಿಯಲ್ಲಿ ಬಿಜೆಪಿ ಸರ್ಕಾರಕ್ಕೆ ಆಡಳಿತಕ್ಕೆ ಬಂದಿದೆ. ಆದರೆ ಈ ಹಿಂದಿನ ಸರ್ಕಾರಗಳು ದೆಹಲಿಯನ್ನು ಕಂದಕಕ್ಕೆ ತಳ್ಳಿದ್ದವು. ಬಿಜೆಪಿ ಸರ್ಕಾರ ದೆಹಲಿಯನ್ನು ಪ್ರಗತಿಪಥದತ್ತ ಕೊಂಡೊಯ್ಯಲಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಹರಿಯಾಣ ಮುಖ್ಯಮಂತ್ರಿ ನಯಬ್ ಸಿಂಗ್ ಸೈನಿ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಇದನ್ನೂ ಓದಿ: Bengaluru | ಪ್ರೇಯಸಿಯ ಹೊಸ ಲವ್ವರ್‌ಗೆ ಚಾಕು ಇರಿದ ಮಾಜಿ ಬಾಯ್‌ಫ್ರೆಂಡ್