Tag: Harsimrat Kaur Badal

  • ರಾಹುಲ್ ಗಾಂಧಿ ಜೇಬಿಗೆ ಕತ್ತರಿ ಹಾಕಿದ್ದು ಯಾರು?: ಹರ್ಸಿಮ್ರತ್ ಕೌರ್ ಬಾದಲ್

    ರಾಹುಲ್ ಗಾಂಧಿ ಜೇಬಿಗೆ ಕತ್ತರಿ ಹಾಕಿದ್ದು ಯಾರು?: ಹರ್ಸಿಮ್ರತ್ ಕೌರ್ ಬಾದಲ್

    ಚಂಡೀಗಢ: ಶ್ರೀ ಹರ್ಮಂದಿರ್ ಸಾಹಿಬ್‍ನಲ್ಲಿ ರಾಹುಲ್ ಗಾಂಧಿ ಅವರ ಜೇಬಿಗೆ ಕತ್ತರಿ ಹಾಕಿದ್ದು ಯಾರು? ಕಾಂಗ್ರೆಸ್ ಅವರು ಸುಳ್ಳು ಸುದ್ದಿಗಳನ್ನು ಹರಡಬೇಡಿ ಎಂದು ಮಾಜಿ ಕೇಂದ್ರ ಸಚಿವೆ ಮತ್ತು ಎಸ್‍ಎಡಿ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಹೇಳಿದ್ದಾರೆ.

    ಫೆಬ್ರವರಿ 20ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಲವಾರು ಪಕ್ಷದ ಅಭ್ಯರ್ಥಿಗಳು ಹಾಗೂ ರಾಹುಲ್ ಗಾಂಧಿ ಅವರು ಬುಧವಾರ ಅಮೃತಸರದ ಗೋಲ್ಡನ್ ಟೆಂಪಲ್‍ಗೆ ಭೇಟಿ ನೀಡಿದ್ದರು. ಈ ವೇಳೆ ರಾಹುಲ್ ಗಾಂಧಿ ಅವರೊಂದಿಗೆ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ, ಉಪ ಮುಖ್ಯಮಂತ್ರಿಗಳಾದ ಸುಖಜಿಂದರ್ ಸಿಂಗ್ ರಾಂಧವಾ ಮತ್ತು ಒಪಿ ಸೋನಿ ಉಪಸ್ಥಿತರಿದ್ದರು. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಭಾರತದ ನೆರವು – ಇರಾನ್ ಸಹಾಯ

    ಈ ಕುರಿತಂತೆ ಟ್ವೀಟ್ ಮಾಡಿರುವ ಹರ್ಸಿಮ್ರತ್ ಕೌರ್ ಬಾದಲ್ ಅವರು, ಶ್ರೀ ಹರ್ಮಂದಿರ್ ಸಾಹಿಬ್‍ನಲ್ಲಿ ರಾಹುಲ್ ಗಾಂಧಿ ಅವರ ಜೇಬಿಗೆ ಕೈ ಹಾಕಿದವರು ಯಾರು? ಚರಣ್‍ಜಿತ್ ಸಿಂಗ್ ಚನ್ನಿ ಅವರಾ? ಅಥವಾ ಸುಖಜಿಂದರ್ ಸಿಂಗ್ ರಾಂಧವಾ ಅವರಾ? ಇವರ ಹತ್ತಿರ ಬರಲು ಸೆಕ್ಯೂರಿಟಿ ಗಾರ್ಡ್‍ಗಳು ಅನುಮತಿ ನೀಡಿದ್ದು, ಕೇವಲ ಮೂವರಿಗೆ ಮಾತ್ರ. ಈ ರೀತಿ ಸುಳ್ಳು ಹೇಳುವ ಮೂಲಕ ನಮ್ಮ ಪವಿತ್ರ ದೇಗುಲಕ್ಕೆ ಕೆಟ್ಟ ಹೆಸರು ತರುವ ಒಂದು ಪ್ರಯತ್ನವಾಗಿದೆ ಎಂದು ಕಿಡಿಕಾರಿದ್ದಾರೆ.

    ಈ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‍ನ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಅಂತಹ ಸುಳ್ಳು ಸುದ್ದಿಗಳನ್ನು ಹರಡುವುದು ಅಪಹಾಸ್ಯ. ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿ ಜವಾಬ್ದಾರಿ ಮತ್ತು ಪ್ರಬುದ್ಧತೆಯನ್ನು ತೋರಿಸಬೇಕು ಎಂದು ಹೇಳಿದ್ದಾರೆ.  ಇದನ್ನೂ ಓದಿ: ಆಕಾಶ ಬೆಳಗಿದವು 1,000 ಮೇಡ್ ಇನ್ ಇಂಡಿಯಾ ಡ್ರೋನ್‍ಗಳು

  • ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ರಾಜೀನಾಮೆ

    ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ರಾಜೀನಾಮೆ

    – ಎನ್‍ಡಿಎ ಮೈತ್ರಿಕೂಟಕ್ಕೆ ಶಿರೋಮಣಿ ಅಕಾಲಿದಳ ಬಿಗ್ ಶಾಕ್

    ನವದೆಹಲಿ: ಎನ್‍ಡಿಎ ಮೈತ್ರಿಕೂಟಕ್ಕೆ ಅಂಗ ಪಕ್ಷ ಶಿರೋಮಣಿ ಅಕಾಲಿದಳ ಬಿಗ್ ಶಾಕ್ ನೀಡಿದೆ. ಬಿಜೆಪಿ ರೈತ ವಿರೋಧಿ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿ ಕೇಂದ್ರ ಸಚಿವ ಸ್ಥಾನಕ್ಕೆ ಹರ್ಸಿಮ್ರತ್ ಕೌರ್ ಬಾದಲ್ ರಾಜೀನಾಮೆ ನೀಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿರುವ ಕೌರ್, ರೈತ ವಿರೋಧಿ ಸುಗ್ರೀವಾಜ್ಞೆ ಮತ್ತು ಬಿಲ್ಲನ್ನು ವಿರೋಧಿಸಿ ನಾನು ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದ್ದೇನೆ. ರೈತರೊಂದಿಗೆ ಅವರ ಮಗಳಗಾಗಿ, ಸಹೋದರಿಯಾಗಿ ನಿಲ್ಲುವುದಕ್ಕೆ ಹೆಮ್ಮೆ ಇದೆ ಎಂದಿದ್ದಾರೆ.

    ರೈತರು ಮತ್ತು ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದ ಅಗತ್ಯ ವಸ್ತುಗಳ ತಿದ್ದುಪಡಿ ಬಿಲ್ಲನ್ನು ಲೋಕಸಭೆಯಲ್ಲಿ ಮಂಡಿಸಿದ ಬೆನ್ನಲ್ಲೇ ಕೌರ್ ರಾಜೀನಾಮೆ ನೀಡಿದ್ದು, ವೋಟಿಂಗ್‍ಗೆ ಮುಂಚೆ ಕೇಂದ್ರ ಸರ್ಕಾರ ಮುಜುಗರ ಅನುಭವಿಸಿತು. ಈ ಬಿಲ್‍ಗೆ ವಿರುದ್ಧವಾಗಿ ಅಕಾಲಿದಳ ಮತ ಹಾಕಿತ್ತು.

    ಸಂಸತ್‍ನಲ್ಲಿ ಮಾತನಾಡಿದ ಕೌರ್ ಪತಿ ಸುಖ್‍ಬೀರ್ ಸಿಂಗ್ ಬಾದಲ್, ಈ ಮಸೂದೆ ನಮ್ಮ ವಿರೋಧವಿದೆ. ರೈತ ವಿರೋಧಿ ರಾಜಕೀಯಕ್ಕೆ ನಮ್ಮ ವಿರೋಧವಿದೆ. ಆದರೆ ಬಿಜೆಪಿ ಸರ್ಕಾರಕ್ಕೆ ತಮ್ಮ ಬೆಂಬಲ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು. ಕೇಂದ್ರ ಸರ್ಕಾರ ತರುತ್ತಿರುವ ಕಾಯ್ದೆಗಳನ್ನು ವಿರೋಧಿಸಿ ಉತ್ತರ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ರೈತ ಪ್ರತಿಭಟನೆಗಳು ನಡೆಯುತ್ತಿವೆ.

  • ಕೇಂದ್ರ ಸಚಿವೆಯರ ಡ್ಯಾನ್ಸ್

    ಕೇಂದ್ರ ಸಚಿವೆಯರ ಡ್ಯಾನ್ಸ್

    -ಪಕ್ಷ ಬೇಧ ಮರೆತು ಕುಣಿದು ಕುಪ್ಪಳಿಸಿದ ಸಂಸದೆಯರು

    ನವದೆಹಲಿ: ಬಾಲಿವುಡ್ ತಾರೆಗಳು ಒಂದೆಡೆ ಸೇರಿದ್ರೆ ಸಾಕು ನಾಲ್ಕು ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸುತ್ತಾರೆ. ಕೇಂದ್ರ ಸಚಿವೆಯರಾದ ಸ್ಮೃತಿ ಇರಾನಿ, ಹರ್ ಸಿಮ್ರತ್ ಕೌರ್ ಬಾದಲ್, ಬಿಜೆಪಿ ಸಂಸದೆ ಕಿರಣ್ ಖೇರ್ ಮತ್ತು ಇತರೆ ನಾಯಕಿಯರು ಕೈ ಕೈ ಹಿಡಿದುಕೊಂಡು ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋವನ್ನು ಹರ್ ಸಿಮ್ರತ್ ಕೌರ್ ಬಾದಲ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಶುಕ್ರವಾರ ಬಜೆಟ್ ಮಂಡನೆ ಬಳಿಕ ಮಧ್ಯಾಹ್ನ ಒಟ್ಟಾಗಿ ಊಟ ಮಾಡಿದ ನಾಯಕಿಯರು ಬಾಲ್ಯದ ಆಟಗಳನ್ನು ನೆನಪು ಮಾಡಿಕೊಂಡರು. ಸ್ಮೃತಿ ರಾನಿ, ಹರ್ ಸಿಮ್ರತ್ ಕೌರ್ ಬಾದಲ್, ಕಿರಣ್ ಖೇರ್, ಡಿಎಂಕೆ ಸಂಸದೆ ಕನ್ನಿಮೋಳಿ, ಎನ್‍ಸಿಪಿ ಸಂಸದೆ ಸುಪ್ರಿಯಾ ಸುಳೆ ಎಲ್ಲರು ಜೊತೆಯಾಗಿ ಕೆಲ ಸಮಯ ಕಳೆದರು. ಎಲ್ಲರು ಕೈ ಕೈ ಹಿಡಿದು ಸುತ್ತುವರಿದು ಹೆಜ್ಜೆ ಹಾಕಿದರು. ಕೊನೆಗೆ ಸ್ಮೃತಿ ಇರಾನಿ ಮತ್ತು ಹರ್ ಸಿಮ್ರತ್ ಕೌರ್ ಇಬ್ಬರು ಕೈ ಹಿಡಿದುಕೊಂಡು ಒಂದೆರಡು ಸುತ್ತು ಹಾಕುವ ಮೂಲಕ ಎಲ್ಲರನ್ನು ಚಕಿತಗೊಳಿಸಿದರು.

    ನಿನ್ನೆ ಮಧ್ಯಾಹ್ನ ಬದುಕು ನಮ್ಮ ಮೇಲೆ ಜಾದೂ ಮಾಡಿತ್ತು. ನಾವೆಲ್ಲ ಜೊತೆಯಾಗಿ ಊಟ ಮಾಡಿದಾಗ ಸಮಯದೊಂದಿಗೆ ಬಾಲ್ಯದ ನೆನಪಾಯ್ತು ಎಂದು ಬರೆದುಕೊಂಡು ಹರ್ ಸಿಮ್ರತ್ ಕೌರ್ ಬಾದಲ್ ವಿಡಿಯೋವನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ. 19 ಸೆಕೆಂಡ್ ಅವಧಿಯ ವಿಡಿಯೋ ಇದೂವರೆಗೂ 98 ಸಾವಿರಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದ್ದು, 2 ಸಾವಿರಕ್ಕೂ ಅಧಿಕ ಬಾರಿ ರೀಟ್ವೀಟ್ ಆಗಿದೆ.