Tag: Harsika Poonacha

  • ಚಂದನವನ ವಿಮರ್ಶಕರ ಪ್ರಶಸ್ತಿ: ರಾಜ್ ಬಿ ಶೆಟ್ಟಿ ಅತ್ಯುತ್ತಮ ನಟ, ಗಾನವಿ ಲಕ್ಷ್ಮಣ್ ನಟಿ, ಉಳಿದ ಪ್ರಶಸ್ತಿ ವಿವರ

    ಚಂದನವನ ವಿಮರ್ಶಕರ ಪ್ರಶಸ್ತಿ: ರಾಜ್ ಬಿ ಶೆಟ್ಟಿ ಅತ್ಯುತ್ತಮ ನಟ, ಗಾನವಿ ಲಕ್ಷ್ಮಣ್ ನಟಿ, ಉಳಿದ ಪ್ರಶಸ್ತಿ ವಿವರ

    ಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಅವರು 3ನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ 2022 ರಲ್ಲಿ ತಮ್ಮ ಗರುಡ ಗಮನ ವೃಷಬ ವಾಹನ ಚಿತ್ರಕ್ಕಾಗಿ ಪ್ರಶಸ್ತಿಗಳ ಬೇಟೆಯಾಡಿದ್ದಾರೆ. ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಚಿತ್ರಕಥೆಗಾಗಿ ಮೂರು ವೈಯಕ್ತಿಕ ಪ್ರಶಸ್ತಿಗಳನ್ನು ಗಳಿಸಿ ಇತಿಹಾಸ ಸೃಷ್ಟಿಸಿದ್ದಾರೆ.

    ಹೀರೋ ಚಿತ್ರದಲ್ಲಿನ ಅಭಿನಯಕ್ಕಾಗಿ ನಟಿಸಿದ ಮೊದಲ ಚಿತ್ರಕ್ಕೆ ನಟಿ ಗಾನವಿ ಲಕ್ಷ್ಮಣ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆಯುವುದರ ಮೂಲಕ ಸಂಭ್ರಮಿಸಿದ್ದಾರೆ. ಮೂರು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದ ಪುಗ್ಸಟ್ಟೆ ಲೈಫ್ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರೆತಿದ್ದು, ಮೊದಲ ಸಿನಿಮಾದ ನಿರ್ದೇಶನಕಕ್ಕಾಗಿ ನಿರ್ದೇಶಕ ಅರವಿಂದ್ ಕುಪ್ಲಿಕರ್ ಅವರು ಪುಕ್ಸಟ್ಟೆ ಲೈಫು ಚಿತ್ರಕ್ಕಾಗಿ ಪ್ರಶಸ್ತಿ ಪಡೆದದ್ದು ವಿಶೇಷ. ಇದನ್ನೂ ಓದಿ : ಕಾಂಗ್ರೆಸ್ ಅವಧಿಯಲ್ಲಿ ನಡೆದ ಭಯೋತ್ಪಾದನೆ ತಿಳಿಯಲು ‘ದಿ ಕಾಶ್ಮೀರ್ ಫೈಲ್ಸ್’ ನೋಡಿ: ಅಮಿತ್ ಶಾ

    ಪ್ರವೀಣ್ ಶ್ರೀಯಾನ್ ಅತ್ಯುತ್ತಮ ಸಂಕಲನ ಪ್ರಶಸ್ತಿಯನ್ನು ಗೆಲ್ಲುವ ಮೂಲಕ GGVV ಗಾಗಿ ನಾಲ್ಕನೇ ಪ್ರಶಸ್ತಿ ಗಳಿಸಿದರು. ತರುಣ್ ಸುಧೀರ್ ನಿರ್ದೇಶನದ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದೆ. (ಅತ್ಯುತ್ತಮ ಸಂಗೀತ ಸಂಯೋಜಕ – ಅರ್ಜುನ್ ಜನ್ಯ, ಅತ್ಯುತ್ತಮ ಗೀತರಚನೆಕಾರ – ಕಣ್ಣು ಹೊಡೆಯಾಕೆ ಹಾಡಿಗೆ ಯೋಗರಾಜ್ ಭಟ್, ಸುಧಾಕರ್ ಎಸ್ ರಾಜ್ ಅತ್ಯುತ್ತಮ ಛಾಯಾಗ್ರಹಣ ಮತ್ತು ಭೂಷಣ್ ಅತ್ಯುತ್ತಮ ನೃತ್ಯ ಸಂಯೋಜನೆ)ಈ ನಾಲ್ಕು ಪ್ರಶಸ್ತಿಗಳು ರಾಬರ್ಟ್ ಚಿತ್ರಕ್ಕಾಗಿ ಬಂದಿದ್ದು ಮತ್ತೊಂದು ವಿಶೇಷ.

    ಎ.ಹರ್ಷ ನಿರ್ದೇಶನದ ಭಜರಂಗಿ 2 ಮತ್ತು ದುನಿಯಾ ವಿಜಯ್ ನಿರ್ದೇಶನದ ಚೊಚ್ಚಲು ಸಿನಿಮಾ ಸಲಗ ಮತ್ತು ಧನಂಜಯ್ ನಟನೆಯ ಬಡವ ರಾಸ್ಕಲ್ ತಲಾ ಮೂರು ಪ್ರಶಸ್ತಿ ಗಳಿಸಿವೆ. ಭಜರಂಗಿ 2 ಸಿನಿಮಾ ತಾಂತ್ರಿಕ ವಿಭಾಗಗಳಲ್ಲಿ ಅತ್ಯುತ್ತಮ VFX (ಶಿಬೀಶ್ ಮತ್ತು ಇಳಂಗೋವ್), ಅತ್ಯುತ್ತಮ ಸಾಹಸ ನಿರ್ದೇಶಕ (ರವಿ ವರ್ಮ) ಮತ್ತು ಅತ್ಯುತ್ತಮ ಕಲಾ ನಿರ್ದೇಶನ (ರವಿ ಸಂತೆಹೈಕ್ಲು) ಪ್ರಶಸ್ತಿ ಪಡೆದಿದೆ. ಇದನ್ನೂ ಓದಿ: ಫ್ಯಾನ್ಸ್ ಜೊತೆ ‘ಜೇಮ್ಸ್’ ವೀಕ್ಷಿಸಿದ ಶಿವಣ್ಣ ದಂಪತಿ – ಏನ್ ಹೇಳಲಿ ನನ್ನ ತಮ್ಮನ ಆ್ಯಕ್ಟಿಂಗ್ ಬಗ್ಗೆ

    ಬಡವ ರಾಸ್ಕಲ್ ಚಿತ್ರವು ಅತ್ಯುತ್ತಮ ಪೋಷಕ ನಟಿ ಸ್ಪರ್ಶ ರೇಖಾ  ಮತ್ತು ಅತ್ಯತ್ತಮ ಪೋಷಕ ನಟ ರಂಗಾಯಣ ರಘು ಹಾಗೂ ಇದೇ ಚಿತ್ರಕ್ಕಾಗಿ ವಾಸುಕಿ ವೈಭವ್ ಅತ್ಯುತ್ತಮ ಗಾಯಕಿ ಪ್ರಶಸ್ತಿಯನ್ನೂ ಪಡೆದರು. ನಟ ದುನಿಯಾ ವಿಜಯ್ ಅವರ ಚೊಚ್ಚಲ ನಿರ್ದೇಶನದ ಚಿತ್ರಕ್ಕಾಗಿ ಅತ್ಯುತ್ತಮ ಸಂಭಾಷಣೆ (ಮಾಸ್ತಿ), ಅತ್ಯುತ್ತಮ ಬಿಜಿಎಂ (ಚರಣ್ ರಾಜ್) ಮತ್ತು ಅತ್ಯುತ್ತಮ ಗಾಯಕಿಯಾಗಿ ಗಿರಿಜಾ ಅವರಿಗೆ ಪ್ರಶಸ್ತಿ ಬಂದಿವೆ.

    ಡಾ.ರಾಘವೇಂದ್ರ ಬಿಎಸ್ ಅವರು ಪ್ರೇಮಂ ಪೂಜ್ಯಂ ಚಿತ್ರಕ್ಕಾಗಿ ಅತ್ಯುತ್ತಮ ಚೊಚ್ಚಲ ನಿರ್ದೇಶನ ಪ್ರಶಸ್ತಿ ಪಡೆದರೆ, ಅರ್ಜುನ್ ಗೌಡ ಚಿತ್ರದ ಹಾಡಿಗೆ ರಾಘವೇಂದ್ರ ಕಾಮತ್ ಅವರು ಅತ್ಯುತ್ತಮ ಸಾಹಿತ್ಯ ಪ್ರಶಸ್ತಿಯನ್ನು ಯೋಗರಾಜ್ ಭಟ್ ಜತೆ ಹಂಚಿಕೊಂಡಿದ್ದಾರೆ. ಅತ್ಯುತ್ತಮ ಬಾಲ ನಟ ಪ್ರಶಸ್ತಿ ಅಕ್ಷಿ ಸಿನಿಮಾ ನಟನೆಗಾಗಿ ಮಾಸ್ಟರ್ ಮಿಥುನ್ ಪಡೆದುಕೊಂಡಿದ್ದಾರೆ. ಇದನ್ನು ಓದಿ : ಮತ್ತೆ ನಟನೆಗೆ ಮರಳಿದ ಮಾಲಾಶ್ರೀ

    ಶನಿವಾರ ಸಂಜೆ ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. 2021 ರಲ್ಲಿ ಬಿಡುಗಡೆಯಾದ ಚಲನಚಿತ್ರಗಳಿಗಾಗಿ ಒಟ್ಟು 23 ಸಿನಿಮಾ ತಾರೆಯರು 21 ವಿಭಾಗಗಳಲ್ಲಿದ್ದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ಚಲನಚಿತ್ರ ವಿಮರ್ಶಕರು ಮತ್ತು ಪತ್ರಕರ್ತರು ನಾಮನಿರ್ದೇಶನ ಮೂಲಕ ಪ್ರಶಸ್ತಿಗಳನ್ನು ಆಯ್ಕೆ ಮಾಡಿದ್ದರೆ, ಬಿಬಿಎಂಪಿಯ ಸ್ವಚ್ಛ ಬೆಂಗಳೂರು ಅಭಿಯಾನವನ್ನು ಪ್ರಶಸ್ತಿ ಸಮಾರಂಭದ ವಿಷಯವಾಗಿ ಅಳವಡಿಸಿಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸಿನಿಮಾ ರಂಗದ ಸಾಕಷ್ಟು ತಾರೆಯರು, ಗಣ್ಯರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    3ನೇ ಚಂದನವನ ಫಿಲ್ಮ್ಸ್ ಕ್ರಿಟಿಕ್ಸ್ ಅಕಾಡಮಿ ಪ್ರಶಸ್ತಿ ವಿಜೇತರು ಪಟ್ಟಿ – 2022

    1. ಅತ್ಯುತ್ತಮ ಚಿತ್ರ

    ಪುಗ್ಸಟ್ಟೆ ಲೈಫ್

    1. ಅತ್ಯುತ್ತಮ ನಿರ್ದೇಶಕ

    ರಾಜ್ .ಬಿ. ಶೆಟ್ಟಿ (ಗರುಡ ಗಮನ ವೃಷಭ ವಾಹನ)

    1. ಅತ್ಯುತ್ತಮ ನಟ

    ರಾಜ್. ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ)

    1. ಅತ್ಯುತ್ತಮ ನಟಿ

    ಗಾನವಿ ಲಕ್ಷ್ಮಣ್ (ಹೀರೋ)

    1. ಅತ್ಯುತ್ತಮ ಚಿತ್ರಕಥೆ

    ಗರುಡ ಗಮನ ವೃಷಭ ವಾಹನ

    1. ಅತ್ಯುತ್ತಮ ಪೋಷಕ ನಟ

    ರಂಗಾಯಣ ರಘು (ಬಡವ ರಾಸ್ಕಲ್)

    1. ಅತ್ಯುತ್ತಮ ಪೋಷಕ ನಟಿ

    ಸ್ಪರ್ಷ ರೇಖಾ (ಬಡವ ರಾಸ್ಕಲ್)

    1. ಅತ್ಯುತ್ತಮ ಬಾಲ ಕಲಾವಿದ

    ಮಾಸ್ಟರ್ ಮಿಥುನ್ (ಅಕ್ಷಿ)

    1. ಅತ್ಯುತ್ತಮ ಸಂಗೀತ ನಿರ್ದೇಶಕ

    ಅರ್ಜುನ್ ಜನ್ಯ (ರಾಬರ್ಟ್)

    1. ಅತ್ಯುತ್ತಮ ಹಿನ್ನೆಲೆ ಸಂಗೀತ

    ಚರಣ್ ರಾಜ್ (ಸಲಗ)

    1. ಅತ್ಯುತ್ತಮ ಗೀತ ಸಾಹಿತ್ಯ

    ಯೋಗರಾಜ್ ಭಟ್ (ಕಣ್ಣು ಹೊಡಿಯಾಕೆ, ರಾಬರ್ಟ್) and ರಾಘವೇಂದ್ರ ಕಾಮತ್ (ಕನವರಿಕೆ.. ಅರ್ಜುನ್ ಗೌಡ)

    1. ಅತ್ಯುತ್ತಮ ಗಾಯಕ

    ವಾಸುಕಿ ವೈಭವ್ (ಆಗಾಗ ನೆನಪಾಗುತ್ತಿದೆ, ಬಡವ ರಾಸ್ಕಲ್)

    1. ಅತ್ಯುತ್ತಮ ಗಾಯಕಿ

    ಗಿರಿಜಾ ಸಿದ್ದಿ (ಟಿನಿಂಗ್ ಮಿನಿಂಗ್, ಸಲಗ)

    1. ಅತ್ಯುತ್ತಮ ಛಾಯಾಗ್ರಹಣ

    ಸುಧಾಕರ್ ರಾಜ್ (ರಾಬರ್ಟ್)

    1. ಅತ್ಯುತ್ತಮ ಸಂಭಾಷಣೆ

    ಮಾಸ್ತಿ (ಸಲಗ)

    1. ಅತ್ಯುತ್ತಮ ಸಂಕಲನ

    ಪ್ರವೀಣ್ ಶ್ರೀಯಾನ್ (ಗರುಡ ಗಮನ ವೃಷಭ ವಾಹನ)

    1. ಅತ್ಯುತ್ತಮ ಕಲಾ ನಿರ್ದೇಶನ

    ರವಿ ಸಂತೆಹೈಕ್ಳು (ಭಜರಂಗಿ 2)

    1. ಅತ್ಯುತ್ತಮ ನೃತ್ಯ ನಿರ್ದೇಶಕ

    ಭೂಷಣ್ (ರಾಬರ್ಟ್)

    1. ಅತ್ಯುತ್ತಮ ಸಾಹಸ ನಿರ್ದೇಶಕ

    ರವಿ ವರ್ಮಾ (ಭಜರಂಗಿ 2)

    1. ಅತ್ಯುತ್ತಮ ವಿಎಫ್ಎಕ್ಸ್

    ಶಿಬೀಶ್ and ಏಲಂಗೋ

    ಭಜರಂಗಿ 2

    1. ಅತ್ಯುತ್ತಮ ಚೊಚ್ಚಲ ಚಿತ್ರ

    ಪ್ರೇಮಮ್ ಪೂಜ್ಯಮ್

  • ಕಿಚ್ಚ ಸುದೀಪ್ ಅಭಿಮಾನಿಯ ಚಳಿ ಬಿಡಿಸಿದ ಹರ್ಷಿಕಾ ಪೂಣಚ್ಚ!

    ಕಿಚ್ಚ ಸುದೀಪ್ ಅಭಿಮಾನಿಯ ಚಳಿ ಬಿಡಿಸಿದ ಹರ್ಷಿಕಾ ಪೂಣಚ್ಚ!

    ಬೆಂಗಳೂರು: ಸ್ಯಾಂಡಲ್‍ವುಡ್ ಚಿಟ್ಟೆ, ನಟಿ ಹರ್ಷಿಕಾ ಪೂಣಚ್ಚ ಅವರು ಕಿಚ್ಚ ಸುದೀಪ್ ಅಭಿಮಾನಿಗಳ ಮೇಲೆ ಗರಂ ಆಗಿದ್ದಾರೆ.

    ಹರ್ಷಿಕಾ ಪೂಣಚ್ಚ ಇತ್ತೀಚೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಿಂದಿ ಚಿತ್ರದ ಹಾಡೊಂದಕ್ಕೆ ಡಬ್ ಸ್ಮ್ಯಾಶ್ ಮಾಡಿ ವಿಡಿಯೋ ಪೋಸ್ಟ್ ಮಾಡಿದ್ದರು. ಆದರೆ ವ್ಯಕ್ತಿಯೊಬ್ಬ ಈ ವಿಡಿಯೋಗೆ ಕಾಮೆಂಟ್ ಮಾಡುವ ಮೂಲಕ ನಟಿಯ ಕಾಲೆಳೆದಿದ್ದಾರೆ. ಇದರಿಂದ ಕೋಪಗೊಂಡ ನಟಿ ಟ್ವಿಟ್ಟರ್ ನಲ್ಲೇ ಹಿಗ್ಗಾಮುಗ್ಗಾ ಜಾಡಿಸಿ ಬೈದಿದ್ದಾರೆ.

    `ಸಿನಿಮಾದಲ್ಲಿ ಅವಕಾಶ ಸಿಕ್ತಿಲ್ಲ ಅಂತ ಡಬ್ ಸ್ಮ್ಯಾಶ್ ಮಾಡಿದ್ಯಾ ಚಿನ್ನಾ’ ಎಂದು ಮಲ್ಲಿಕಾರ್ಜುನ ಎಂಬ ವ್ಯಕ್ತಿ ಟ್ವೀಟ್ ಮಾಡಿದ್ದಾರೆ. ಮತ್ತೋರ್ವ ವ್ಯಕ್ತಿ, ಎಲ್ಲಾರೂ ಆಕೆಯ ಫಿಲ್ಮ್ ನೋಡ್ಬೇಡಿ, ನಾವು ನೋಡಿದ್ರೆ ಜಾಬ್ ಲೆಸ್ ಆಗ್ತಿವಿ’ ಎಂದಿದ್ದಾರೆ.

    ನನ್ನ ಮನಸ್ಸಿಗೆ ನೋವಾದಾಗ ನೇರವಾಗಿ ಮಾತನಾಡೋದನ್ನ ಕಿಚ್ಚ ಸುದೀಪ್ ಅವರಿಂದ ಕಲಿತಿದ್ದೇನೆ. ಅಂತವರ ಅಭಿಮಾನಿಯಾಗಿ ಈ ರೀತಿ ಮಾತನಾಡಲು ನಾಚಿಕೆ ಆಗೋದಿಲ್ವ. `ಥೂ ನಿನ್ನ ಜನ್ಮಕ್ಕೆ. ಟ್ವೀಟ್ ಮಾಡಿದ್ರೆ ಯಾರು ಲೈಕ್ ಮಾಡುತ್ತಿಲ್ಲ ಎಂದು ಈ ರೀತಿ ಸ್ಟುಪಿಡ್ ಆಗಿ ಬರೆಯೋಕೆ ನಾಚಿಕೆ ಆಗಬೇಕು ನಿನಗೆ. ನಾನು ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಈ ರೀತಿ ವಿಡಿಯೋ ಮಾಡುತ್ತೇನೆ. ನೀನು ಕೆಲಸ ಇಲ್ಲದೆ ಕೂತಿರಬಹುದು, ನಾನಲ್ಲ. ನಾನು ಮೂರು ದೊಡ್ಡ ಸಿನಿಮಾಗಳನ್ನ ಮಾಡುತ್ತಿದ್ದೇನೆ’ ಎಂದು ರೀ ಟ್ವೀಟ್ ಮಾಡೋ ಮೂಲಕ ಸುದೀಪ್ ಅಭಿಮಾನಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    `ಉಪೇಂದ್ರ ಮತ್ತೆ ಬಾ’ ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಿಸಿದ್ದ ಹರ್ಷಿಕಾ ಪೂಣಚ್ಚ ಸದ್ಯಕ್ಕೆ ಮಲಯಾಳಂನ `ಚಾರ್ ಮಿನರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ `ಚಿಟ್ಟೆ’, ‘ಅಧಿತಿ’ ಚಿತ್ರಗಳಲ್ಲಿ ನಟಿಸುತ್ತಿರುವ ಹರ್ಷಿಕಾ, ತೆಲುಗು ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ. ಚಿತ್ರದ ಅಭಿನಯಕ್ಕಾಗಿ ತನ್ನ ಮೈಮೇಲೆ ಚಿಟ್ಟೆಯ ಹಚ್ಚೆ ಹಾಕಿಸಿ ಫೋಟೋ ಶೂಟ್ ಮಾಡಿಕೊಳ್ಳುವ ಮೂಲಕ ಇತ್ತೀಚೆಗಷ್ಟೇ ಸುದ್ದಿಯಾಗಿದ್ದರು.

    https://twitter.com/actressharshika/status/937892248858984448

    https://twitter.com/actressharshika/status/939408118693314560

    https://twitter.com/actressharshika/status/939552071946080256