Tag: Harshita

  • ‘ಸೂರ್ಯ’ನ ಹೋರಾಟಕ್ಕೆ ಬೆಂಬಲಿಸಿದ ಟೀಸರ್: ಇದು ಸಾಗರ್ ನಿರ್ದೇಶನದ ಸಿನಿಮಾ

    ‘ಸೂರ್ಯ’ನ ಹೋರಾಟಕ್ಕೆ ಬೆಂಬಲಿಸಿದ ಟೀಸರ್: ಇದು ಸಾಗರ್ ನಿರ್ದೇಶನದ ಸಿನಿಮಾ

    ಗಿನ ಕಾಲದ ಯುವಕ, ಯುವತಿಯರು ಪ್ರೀತಿಗಾಗಿ ಏನೆಲ್ಲ ಸಾಹಸಗಳನ್ನು ಮಾಡಬಹುದು ಎಂದು ಈಗಾಗಲೇ ಸಾಕಷ್ಟು ಚಲನಚಿತ್ರಗಳ ಮೂಲಕ ನಿರ್ದೇಶಕರು ಹೇಳಿದ್ದಾರೆ. ಅದೆಲ್ಲಕ್ಕಿಂತ ವಿಭಿನ್ನವಾದ, ಹೊಸ ತರಹದ ಕಥೆಯೊಂದನ್ನು ಯುವ ನಿರ್ದೇಶಕ ಸಾಗರ್ ಅವರು ಸೂರ್ಯ ಚಿತ್ರದ ಮೂಲಕ ಹೇಳುತಿದ್ದಾರೆ. ಖ್ಯಾತ ನಿರ್ದೇಶಕ ಬಿ.ಸುರೇಶ ಅವರ ಜೊತೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಸಾಗರ್, ಮಾಸ್ ಲವ್‌ಸ್ಟೋರಿ ಇಟ್ಟುಕೊಂಡು ಸೂರ್ಯ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರೀಕರಣದ ಕೊನೆಯಹಂತ ತಲುಪಿರುವ ಈ ಸಿನಿಮಾದಲ್ಲಿ ಯುವನಟ ಪ್ರಶಾಂತ್ ನಾಯಕನಾಗಿ ನಟಿಸಿದ್ದು, ಹರ್ಷಿತಾ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಂದಿ ಸಿನಿಮಾಸ್ ಮೂಲಕ ಬಸವರಾಜ್ ಬೆಣ್ಣೆ ಹಾಗೂ ರವಿ ಬೆಣ್ಣೆ ಸಹೋದರರು ಈ ಚಿತ್ರವನ್ನು  ನಿರ್ಮಾಣ  ಮಾಡುತ್ತಿದ್ದಾರೆ.

    ಸೂರ್ಯ ಚಿತ್ರದ ಟೀಸರ್ ಅನಾವರಣ ಸಮಾರಂಭ ಇತ್ತೀಚೆಗೆ ನೆರವೇರಿತು. ನಿರ್ದೇಶಕ ಬಹದ್ದೂರ್ ಚೇತನ್ ಅವರು ಟೀಸರ್ ಬಿಡುಗಡೆಮಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ಸಾಗರ್, ಸೂರ್ಯ ನಾಯಕನ ಹೆಸರು. ಆತ ತನ್ನ ಪ್ರೀತಿಗೋಸ್ಕರ ಯುದ್ದದ ರೀತಿಯಲ್ಲಿ ಸಮರ ಸಾರಿ ಅದನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಎನ್ನುವುದೇ ಚಿತ್ರದ ಕಾನ್ಸೆಪ್ಟ್. ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಲೇ ನಾನೊಂದು ಕಥೆ ಮಾಡಿಕೊಂಡಿದ್ದೆ, ಆ ಕಥೆಯನ್ನು ಇಷ್ಟಪಟ್ಟ ನನ್ನ ಸ್ನೇಹಿತ, ಈ ನಿರ್ಮಾಪಕರ ಬಳಿ ಮಾತನಾಡಿ ಅವರನ್ನು ಒಪ್ಪಿಸಿದರು. ಬೆಂಗಳೂರು ಸುತ್ತಮುತ್ತ ಹಾಗೂ ಪೂನಾದಲ್ಲಿ ಮಾತಿನ ಭಾಗದ ಚಿತ್ರೀಕರಣ ನಡೆಸಿದ್ದೇವೆ, ಈಗಾಗಲೇ 3 ಹಾಡುಗಳನ್ನು ಚಿತ್ರೀಕರಿಸಿದ್ದು, ಉಳಿದ 2 ಸೆಟ್ ಸಾಂಗ್ ಹಾಗೂ ಹೆಚ್‌ಎಂಟಿಯಲ್ಲಿ ಮಾಡಬೇಕೆಂದಿರುವ ಸಾಹಸ ದೃಶ್ಯದ ಚಿತ್ರೀಕರಣವಷ್ಟೇ ಬಾಕಿಯಿದೆ. ಆರ್ಮುಗಂ ರವಿಶಂಕರ್ ಅವರನ್ನು ಈವರೆಗೆ ನೋಡಿರದಂಥ ಪಾತ್ರದಲ್ಲಿ ಕಾಣಬಹುದು. ಅಲ್ಲದೆ ನಟಿ ಶ್ರುತಿ ಅವರು ಒಬ್ಬ ಡಾಕ್ಟರ್ ಜೊತೆಗೆ ಈಗಿನ ಕಾಲದ ಅಮ್ಮನಾಗೂ ಕಾಣಿಸಿಕೊಂಡಿದ್ದಾರೆ, ಕಾಂತಾರ ಖ್ಯಾತಿಯ ಪ್ರಮೋದ್ ಶೆಟ್ಟಿ ಅವರಿಲ್ಲಿ ಉತ್ತರ ಕರ್ನಾಟಕ ಭಾಗದ ವಿಲನ್ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದ 5 ಹಾಡುಗಳಿಗೆ ಶ್ರೀಶಾಸ್ತ ಸಂಗೀತ ಸಂಯೋಜನೆ ಮಾಡಿದ್ದು, ಬಹದ್ದೂರ್ ಚೇತನ್, ಯೋಗರಾಜ ಭಟ್ ಸಾಹಿತ್ಯ ರಚಿಸಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ:ನಟಿ ಮಹಾಲಕ್ಷ್ಮಿ ಪತಿ ರವೀಂದ್ರ ಬಂಧನ

    ನಾಯಕ ಪ್ರಶಾಂತ್ ಮಾತನಾಡುತ್ತ ಪೂನಾ ಫಿಲಂ ಇನ್ ಸ್ಟಿಟ್ಯೂಟ್‌ನಲ್ಲಿ ಅಭಿನಯ ಕಲಿತ ನಂತರ ಸೀರಿಯಲ್‌ಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿಕೊಂಡಿದ್ದೆ. ಸಾಗರ್ ಅವರು ಕರೆದು ನನಗೀ  ಅವಕಾಶ ಕೊಟ್ಟಿದ್ದಾರೆ. ಈ ಚಿತ್ರದ ಮೂಲಕ ಮೊದಲಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದೇನೆ. ಒಬ್ಬ ಮಿಡಲ್ ಕ್ಲಾಸ್ ಹುಡುಗ, ಲವರ್ ಬಾಯ್, ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಆತ ಹೇಗೆಲ್ಲ ಹೋರಾಡುತ್ತಾನೆಂದು ನನ್ನ ಪಾತ್ರದ ಮೂಲಕ ತೋರಿಸಿದ್ದಾರೆ ಎಂದು ಹೇಳಿದರು. ನಾಯಕಿ ಹರ್ಷಿತಾ ಮಾತನಾಡಿ ನನ್ನದು ತುಂಬಾ ವೇರಿಯೇಶನ್ಸ್ ಇರುವ ಪಾತ್ರ, ಪ್ರೀತಿಯ ವಿಷಯದಲ್ಲಿ ಆಕೆ ಯಾವ ನಿರ್ಧಾರ ತಗೋತಾಳೆ ಅನ್ನುವುದೇ ಈ ಚಿತ್ರದ ಕಥೆ ಎಂದು ವಿವರಿಸಿದರು.

     

    ನಿರ್ಮಾಪಕ ಬಸವರಾಜ್ ಬೆಣ್ಣೆ ಮಾತನಾಡಿ ರವಿಬೆಣ್ಣೆ ಹಾಗೂ ನಾನು ಇಬ್ಬರೂ ಸಹೋದರರು. ಬೆಳಗಾವಿಯ ರೈತ ಕುಟುಂಬದಿಂದ ಬಂದವರು. ಪೂನಾದಲ್ಲಿ ಇಂಡಸ್ಟ್ರಿ ನಡೆಸುತ್ತಿದ್ದೇವೆ. ಸಾಗರ್ ನಮ್ಮನ್ನು ಭೇಟಿಯಾಗಿ ಈ ಕಥೆ ಹೇಳಿದರು. ಹೊಸಬರಿಗೆ ಅವಕಾಶ ಕೊಡಬೇಕೆಂದು ಈ ಸಿನಿಮಾ ನಿರ್ಮಾಣ ಮಾಡಿದ್ದೇವೆ ಎಂದು ಹೇಳಿದರು. ವಿಲನ್ ರೋಲ್ ಮಾಡಿರುವ ಪ್ರಶಾಂತ್ ಶೆಟ್ಟಿ ಮಾತನಾಡಿ ನನ್ನ ಪಾತ್ರ ರವಿಶಂಕರ್ ಅವರಜೊತೆ ಬರುತ್ತದೆ ಎಂದರು. ಛಾಯಾಗ್ರಾಹಕ ಮನುರಾಜ್ ಮಾತನಾಡಿ ಈ ಹಿಂದೆ ಮೆಲೋಡಿ ಡ್ರಾಮಾ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದೆ, ಇದು ಎರಡನೇ ಚಿತ್ರ. ಬೆಂಗಳೂರು ಸುತ್ತಮುತ್ತ ಈವರೆಗೆ 35 ದಿನಗಳ ಕಾಲ ಚಿತ್ರದ ಶೂಟಿಂಗ್  ನಡೆಸಿದ್ದೇವೆ ಎಂದರು. ಟಿ.ಎಸ್. ನಾಗಾಭರಣ, ಬಲ ರಾಜವಾಡಿ, ಪ್ರಸನ್ನ ಉಳಿದ ಪಾತ್ರ ವರ್ಗದಲ್ಲಿದ್ದಾರೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಳ್ಳಿ ಪರದೆ ಮೇಲೆ ‘ಸೂರ್ಯ’ನ ಮಾಸ್ ಲವ್ ಸ್ಟೋರಿ

    ಬೆಳ್ಳಿ ಪರದೆ ಮೇಲೆ ‘ಸೂರ್ಯ’ನ ಮಾಸ್ ಲವ್ ಸ್ಟೋರಿ

    ಬಿ.ಸುರೇಶ್ ಅವರ ಬಹುತೇಕ ಚಿತ್ರಗಳಿಗೆ  ಸಹನಿರ್ದೇಶಕರಾಗಿ  ಕೆಲಸ ಮಾಡಿರುವ  ಸಾಗರ್ ಈಗ ನಿರ್ದೇಶಕರಾಗಿದ್ದಾರೆ. ವಿಭಿನ್ನವಾದ ಮಾಸ್ ಲವ್ ಸ್ಟೋರಿ ಒಳಗೊಂಡ “ಸೂರ್ಯ” ಎಂಬ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು  ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಬ ಕಳೆದ ಸೋಮವಾರ ಮಹಾಲಕ್ಷ್ಮಿ ಲೇಔಟ್ ನ ಶ್ರೀ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಹೊಸ ಪ್ರತಿಭೆ ಪ್ರಶಾಂತ್ ಈ ಚಿತ್ರದ ನಾಯಕನಾಗಿದ್ದು, ಹರ್ಷಿತಾ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಮುಹೂರ್ತದ ನಂತರ ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ಸಾಗರ್, ಸೂರ್ಯ ನಮ್ಮ ಚಿತ್ರದ ನಾಯಕನ ಹೆಸರು. ನಾಯಕ ಪ್ರೀತಿಗೋಸ್ಕರ ಯುದ್ದವನ್ನೇ ಮಾಡಿ ಹೇಗೆ ತನ್ನ ಪ್ರೀತಿಯನ್ನು ಉಳಿಸಿಕೊಳ್ಳುತ್ತಾನೆ ಎನ್ನುವುದೇ ಸೂರ್ಯ ಚಿತ್ರದ ಕಾನ್ಸೆಪ್ಟ್. ಬೆಂಗಳೂರು ಸುತ್ತಮುತ್ತ ಮಾತಿನ ಭಾಗದ ಚಿತ್ರೀಕರಣ ನಡೆಸಿ ಹಾಡುಗಳಿಗೆ ಮಡಿಕೇರಿ, ಮೈಸೂರು, ಪೂನಾಗೆ ಹೋಗುವ ಯೋಜನೆಯಿದೆ. ಇದನ್ನೂ ಓದಿ:ಏಕಾಂಗಿಯಾಗಿ ಹನಿಮೂನ್ ಸ್ಪಾಟ್, ಬಾಲಿಗೆ ಹಾರಿದ ನಿವೇದಿತಾ ಗೌಡ

    ಆರ್ಮುಗಂ ರವಿಶಂಕರ್ ಅವರನ್ನು ಈವರೆಗೆ ನೋಡಿರದಂಥ ಪಾತ್ರದಲ್ಲಿ ನೋಡಬಹುದು. ಅಲ್ಲದೆ ಶೃತಿ  ಅವರು ಒಬ್ಬ ಡಾಕ್ಟರ್ ಅಗಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಈಗಿನ ಕಾಲದ ಅಮ್ಮನೂ ಹೌದು ಕಾಂತಾರ ಖ್ಯಾತಿಯ ಪ್ರಮೋದ್ ಶೆಟ್ಟಿ ಅವರು ಉತ್ತರ ಕರ್ನಾಟಕ ಶೈಲಿಯ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನಮ್ಮ ಚಿತ್ರದಲ್ಲಿ ೫ ಹಾಡುಗಳಿದ್ದು ಶ್ರೀಶಾಸ್ತ  ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಬಹದ್ದೂರ್ ಚೇತನ್, ನಾನು ಯೋಗರಾಜ ಭಟ್ ಸಾಹಿತ್ಯ ರಚಿಸಿದ್ದೇವೆ. ಮುಂದಿನ ವಾರದಿಂದ ಶೂಟಿಂಗ್ ಹೊರಡಲಿದ್ದೇವೆ ಎಂದು ಹೇಳಿದರು.  ನಂದಿ ಸಿನಿಮಾಸ್ ಮೂಲಕ ಬಸವರಾಜ್ ಬೆಣ್ಣೆ ಹಾಗೂ ರವಿ ಬೆಣ್ಣೆ ಸಹೋದರರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಮನುರಾಜ್ ಈ ಚಿತ್ರದ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ನನ್ನ ಪ್ರೀತಿಯ ಹುಡುಗಿ’ ಮುಹೂರ್ತ

    ‘ನನ್ನ ಪ್ರೀತಿಯ ಹುಡುಗಿ’ ಮುಹೂರ್ತ

    ಬೆಂಗಳೂರು: ಭೀರೇಶ್ವರ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಮೋಹನ್ ಸುರೇಶ್, ಪಿ.ಕೃಷ್ಣಪ್ಪ ನಿರ್ಮಾಣದ ‘ನನ್ನ ಪ್ರೀತಿಯ ಹುಡುಗಿ’ ಚಿತ್ರಕ್ಕೆ ನಾಗಮಂಗಲ ತಾಲೂಕಿನ ಮದ್ದೇನಹಟ್ಟಿ ಅಮ್ಮನವರ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು.

    ಕೀರ್ತಿ ಕೃಷ್ಣ, ರಾಘವ್, ಅಂಜೆಶ್ರೀ ಅಭಿನಯಿಸಿದ ದೃಶ್ಯಗಳ ಚಿತ್ರೀಕರಣ ಇದೇ ವೇಳೆ ನಡೆಯಿತು. ನಿರ್ದೇಶನ- ಕಿರಣ್ ದೇವಿ (ಪಾವಗಡ), ಛಾಯಾಗ್ರಹಣ – ಎನ್‍ಟಿಎ ವೀರೇಶ್, ಸಂಗೀತ – ವಿಜಯ್ ಹ್ಯಾಡ್ಲಿ, ಸಾಹಸ – ಮೈಸೂರ್ ವೇಲು, ನೃತ್ಯ – ಲಕ್ಷ್ಮೀಶ್‍ವಿಯ್, ಆರ್ವಿನ್‍ಫ್ರಾನ್ಸಿಸ್, ವಜಾದ್ ಸರ್ಜಾರಿಯಾ, ಸಾಹಿತ್ಯ-ಯೋಗರಾಜ್ ಭಟ್, ಬಹದ್ದೂರ್ ಚೇತನ್, ಅಭಿಜಿತ್ ಆಳದಂಗಡಿ, ಮಧುಮಿಲನ್ ಮಂಡ್ಯ, ತಾರಾಗಣದಲ್ಲಿ – ಕೀರ್ತಿ ಕೃಷ್ಣ, ರಾಘವ್, ಅಂಜೆಶ್ರೀ, ನಿಖಿತ, ಬಾಲು, ಸುರಕ್ಷ, ಹರ್ಷಿತ, ಕೋಟಾಶಂಕರ್, ಕರಾಟರಾಜ, ಸಂಗೀತ, ಸುಲೋಚನ, ಡಿಂಗ್ರಿ ನಾಗರಾಜ್, ಪವನ್, ಕೆಂಪೇಗೌಡ ಮುಂತಾದವರಿದ್ದಾರೆ.