Tag: Harshit Rana

  • ಬಾರ್ಬಡೋಸ್‌ನಲ್ಲೇ ಸಿಲುಕಿದ ಟೀಂ ಇಂಡಿಯಾ – ಜಿಂಬಾಬ್ವೆ ಸರಣಿಗೆ ಸುದರ್ಶನ್‌, ರಾಣಾ, ಜಿತೇಶ್‌ ಆಯ್ಕೆ!

    ಬಾರ್ಬಡೋಸ್‌ನಲ್ಲೇ ಸಿಲುಕಿದ ಟೀಂ ಇಂಡಿಯಾ – ಜಿಂಬಾಬ್ವೆ ಸರಣಿಗೆ ಸುದರ್ಶನ್‌, ರಾಣಾ, ಜಿತೇಶ್‌ ಆಯ್ಕೆ!

    ಹರಾರೆ: ಚಂಡಮಾರುತ ಅಪ್ಪಳಿಸಿದ್ದರಿಂದಾಗಿ ಜಿಂಬಾಬ್ವೆ ವಿರುದ್ಧ ಟಿ20 ಸರಣಿಗೆ ಆಯ್ಕೆಯಾಗಿದ್ದ ಯಶಸ್ವಿ ಜೈಸ್ವಾಲ್‌ (Yashasvi Jaiswal), ಶಿವಂ ದುಬೆ ಹಾಗೂ ಸಂಜು ಸ್ಯಾಮ್ಸನ್‌ ಬಾರ್ಬಡೋಸ್‌ನಲ್ಲೇ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಟಿ20 ಆಯ್ಕೆ ಸಮಿತಿ ಮೊದಲ 2 ಪಂದ್ಯಗಳಿಗೆ ಸಾಯಿ ಸುದರ್ಶನ್‌, ಹರ್ಷಿತ್‌ ರಾಣಾ (Harshit Rana) ಹಾಗೂ ಜಿತೇಶ್‌ ಶರ್ಮಾ ಅವರನ್ನ ಆಯ್ಕೆ ಮಾಡಿದೆ.

    ಜೈಸ್ವಾಲ್‌, ಶಿವಂ ದುಬೆ, ಸಂಜು ಸ್ಯಾಮ್ಸನ್‌ (Sanju Samson) ಭಾರತ ಟಿ20 ವಿಶ್ವಕಪ್‌ ತಂಡದ ಭಾಗವಾಗಿದ್ದರು. ಆದ್ರೆ ಚಂಡಮಾರುತದಿಂದಾಗಿ ಇಡೀ ತಂಡ ಬಾರ್ಬಡೋಸ್‌ನಲ್ಲೇ ಬೀಡುಬಿಟ್ಟಿದೆ. ಅವರು ಭಾರತಕ್ಕೆ ಬಂದ ನಂತರ ಜಿಂಬಾಬ್ವೆ ಸರಣಿಗೆ ಕಳುಹಿಸಲಾಗುತ್ತದೆ. ಹಾಗಾಗಿ 5 ಪಂದ್ಯಗಳ ಸರಣಿಯ ಮೊದಲ 2 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಗೆ ಸ್ಯಾಮ್ಸನ್‌, ದುಬೆ ಹಾಗೂ ಜೈಸ್ವಾಲ್‌ ಬದಲಿಗೆ ಸುದರ್ಶನ್‌, ರಾಣಾ ಹಾಗೂ ಜಿತೇಶ್‌ ಶರ್ಮಾ ಅವರನ್ನ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಇದೇ ಜುಲೈ 6 ರಿಂದ ಜುಲೈ 14ರ ವರೆಗೆ ಜಿಂಬಾಬ್ವೆ ವಿರುದ್ಧ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ 4 ಪಂದ್ಯಗಳು ಸಂಜೆ 4:30ಕ್ಕೆ ಹಾಗೂ ಒಂದು ಪಂದ್ಯ ರಾತ್ರಿ 9:30ಕ್ಕೆ ಆರಂಭವಾಗಲಿದೆ. 5 ಪಂದ್ಯಗಳು ಜಿಂಬಾಬ್ವೆಯ ಹರಾರೆ ಸ್ಫೋರ್ಟ್‌ಕ್ಲಬ್‌ ಮೈದಾನದಲ್ಲಿ ನಡೆಯಲಿದೆ. ಇದನ್ನೂ ಓದಿ: ಭೀಕರ ಚಂಡಮಾರುತ – ಬಾರ್ಬಡೋಸ್‌ನಲ್ಲೇ ಬೀಡುಬಿಟ್ಟ ಟೀಂ ಇಂಡಿಯಾ!

    ಕೆರೀಬಿಯನ್ ದ್ವೀಪಗಳಲ್ಲಿ ಜುಲೈ 1ರ ಬೆಳಗ್ಗಿನ ಜಾವದಿಂದಲೇ ಚಂಡಮಾರುತ ಬೀಸುತ್ತಿರುವುದರಿಂದ ವಿಮಾನಯಾನವೂ ಸೇರಿದಂತೆ ಎಲ್ಲ ನಾಗರಿಕ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮುಖ್ಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಸದ್ಯಕ್ಕೆ ಸೇವೆ ಸ್ಥಗಿತಗೊಳಿಸಲಾಗಿದೆ .ಬಾರ್ಬಡೋಸ್ ಮತ್ತು ಸುತ್ತಮುತ್ತಲಿನ ದ್ವೀಪಗಳಲ್ಲಿ ಬಿರುಗಾಳಿಯ ತೀವ್ರತೆಯೂ ಹೆಚ್ಚಾಗಿದ್ದು, ಅಪಾಯಮಟ್ಟದಲ್ಲಿದೆ. ಹಾಗಾಗಿ ಟೀಂ ಇಂಡಿಯಾ ತವರಿಗೆ ಮರಳುವುದು ಇನ್ನೂ ಮೂರು ದಿನ ತಡವಾಗಲಿದೆ ಎಂದು ಬಿಸಿಸಿಐ ತಿಳಿಸಿದೆ.

    ಭಾರತ ತಂಡ:
    ಶುಭಮನ್‌ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್‌), ಧ್ರುವ್ ಜುರೆಲ್ (ವಿಕೆಟ್‌ ಕೀಪರ್‌), ಶಿವಂ ದುಬೆ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಅವೇಶ್ ಖಾನ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ. ಬದಲಾದ ಆಟಗಾರರು ಸಾಯಿ ಸುದರ್ಶನ್‌, ಹರ್ಷಿತ್‌ ರಾಣಾ ಹಾಗೂ ಜಿತೇಶ್‌ ಶರ್ಮಾ. ಇದನ್ನೂ ಓದಿ: ಐಸಿಸಿ ಕನಸಿನ ತಂಡ ಪ್ರಕಟ – ಕೊಹ್ಲಿಗಿಲ್ಲ ಸ್ಥಾನ, ಪಟ್ಟಿಯಲ್ಲಿದ್ದಾರೆ 6 ಟೀಂ ಇಂಡಿಯಾ ಆಟಗಾರರು

    ಜಿಂಬಾಬ್ವೆ ತಂಡ:
    ಸಿಕಂದರ್‌ ರಾಝಾ (ಸಿ), ಅಕ್ರಮ್ ಫರಾಜ್, ಬೆನೆಟ್ ಬ್ರಿಯಾನ್, ಕ್ಯಾಂಪ್ಬೆಲ್ ಜೊನಾಥನ್, ಚತಾರಾ, ಜೊಂಗ್ವೆ, ಇನೋಸೆಂಟ್, ಮದಂಡೆ ಕ್ಲೈವ್, ಮಾಧೆವೆರೆ, ತಡಿವಾನಾಶೆ, ವೆಲ್ಲಿಂಗ್ಟನ್, ಮಾವುತಾ ಬ್ರಾಂಡನ್, ಮುಜರಾಬಾನಿ, ಮೈಯರ್ಸ್ ಡಿಯೋನ್, ನಖ್ವಿ ಅಂತುಮ್, ನ್ಗರವ ಮತ್ತು ಶುಂಬಾ ಮಿಲ್ಟನ್. ಇದನ್ನೂ ಓದಿ: ವಿಶ್ವಕಪ್‌ ಗೆಲ್ಲಲು ಕಾರಣವಾಗಿದ್ದು 3 ಮಹತ್ವದ ನಿರ್ಧಾರ – ಟೀಂ ಇಂಡಿಯಾ ಸಿದ್ಧಗೊಂಡಿದ್ದು ಹೇಗೆ?

  • ಕೊನೇ ಓವರ್‌ನಲ್ಲಿ ಮ್ಯಾಚ್‌ ಗೆಲ್ಲಿಸಿದ ಕೆಕೆಆರ್‌ ಹೀರೋ – ಹರ್ಷಿತ್‌ ರಾಣಾಗೆ ಭಾರೀ ದಂಡ

    ಕೊನೇ ಓವರ್‌ನಲ್ಲಿ ಮ್ಯಾಚ್‌ ಗೆಲ್ಲಿಸಿದ ಕೆಕೆಆರ್‌ ಹೀರೋ – ಹರ್ಷಿತ್‌ ರಾಣಾಗೆ ಭಾರೀ ದಂಡ

    ಕೋಲ್ಕತ್ತಾ: ಇಲ್ಲಿನ ಈಡನ್‌ ಗಾರ್ಡನ್‌ ಮೈದಾನದಲ್ಲಿ ಹೈದರಾಬಾದ್‌ (SRH) ವಿರುದ್ಧ ನಡೆದ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಹರ್ಷಿತ್ ರಾಣಾಗೆ (Harshit Rana) ಭಾರೀ ದಂಡ ವಿಧಿಸಲಾಗಿದೆ.

    ಸನ್ ರೈಸರ್ಸ್ ಹೈದರಾಬಾದ್‌ನ ಆಟಗಾರರಾದ ಮಯಾಂಕ್ ಅಗರ್ವಾಲ್ (Mayank Agarwal) ಹಾಗೂ ಹೆನ್ರಿಕ್ ಕ್ಲಾಸೆನ್ (Heinrich Klaasen) ಅವರು ಮೈದಾನ ತೊರೆಯುವಾಗ ಹರ್ಷಿತ್ ರಾಣಾ ಫ್ಲೈಯಿಂಗ್‌ ಕಿಸ್‌ ಸನ್ನೆ ಮಾಡುವ ಮೂಲಕ ದಂಡಕ್ಕೆ ಗುರಿಯಾಗಿದ್ದಾರೆ. ಇದನ್ನೂ ಓದಿ: IPL 2024: 21 ರನ್‌ ಬಾರಿಸಿದ್ರೂ ಎರಡೆರಡು ದಾಖಲೆ ಬರೆದ ಕಿಂಗ್‌ ಕೊಹ್ಲಿ!

    ಕೆಕೆಆರ್‌ ಹೀರೋ ವಿಲನ್‌ ಆಯ್ತು ಕೈಸನ್ನೆ:
    ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಯುವ ಆಟಗಾರ ಹರ್ಷಿತ್‌ ರಾಣಾ ತಮ್ಮ ಅಂತಿಮ ಓವರ್‌ನಲ್ಲಿ ನೀಡಿದ ಪ್ರದರ್ಶನದಿಂದ ಕೆಕೆಆರ್‌ ತಂಡದ ಪಾಲಿನ ಹೀರೋ ಆಗಿ ಅಭಿಮಾನಿಗಳ ಮನ ಗೆದ್ದಿದ್ದರು. ಆದ್ರೆ ಪಂದ್ಯದ ಮಧ್ಯೆ ಅವರ ನಡವಳಿಕೆ ಹಲವರ ಅಸಮಾಧಾನಕ್ಕೂ ಕಾರಣವಾಯಿತು. ಮೈದಾನದಲ್ಲಿ ಅಶಿಸ್ತು ವರ್ತನೆ ತೋರಿಸಿದ ಕಾರಣ ಹರ್ಷಿತ್ ರಾಣಾಗೆ ಪಂದ್ಯದ ಒಟ್ಟು ಶುಲ್ಕದ ಶೇ.60 ರಷ್ಟು ಮೊತ್ತವನ್ನು ದಂಡವಾಗಿ ಪಾವತಿಸುವಂತೆ ಐಪಿಎಲ್‌ ಸಮಿತಿ ಸೂಚಿಸಿದೆ.

    ಹರ್ಷಿತ್‌ ರಾಣಾ ತಮ್ಮ ಕೈಸನ್ನೆ ಮೂಲಕ ಆಟಗಾರರನ್ನು ವ್ಯಂಗ್ಯಮಾಡಿರುವುದು ಕಂಡುಬಂದಿತು. ಇದು ಐಪಿಎಲ್‌ ನೀತಿ ಸಂಹಿತೆ ಆರ್ಟಿಕಲ್‌ 2.4ರ ಅಡಿಯಲ್ಲಿ ಅಪರಾಧವಾಗಿದೆ ಎಂದು ಐಪಿಎಲ್‌ ಸಮಿತಿ ತಿಳಿಸಿದೆ. ಇದನ್ನೂ ಓದಿ: 20 ಬಾಲ್‌ಗೆ ರಸೆಲ್‌ ಫಿಫ್ಟಿ – ಹೈದರಾಬಾದ್‌ ವಿರುದ್ಧ ಕೆಕೆಆರ್‌ಗೆ 4 ರನ್‌ಗಳ ರೋಚಕ ಜಯ

    ಕೊನೇ ಕ್ಷಣದ ರೋಚಕತೆ ಹೇಗಿತ್ತು?
    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಕೆಕೆಆರ್‌ 208 ರನ್‌ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಹೈದರಾಬಾದ್‌ ತಂಡದ ಗೆಲುವಿಗೆ ಕೊನೇ ಓವರ್‌ನಲ್ಲಿ 13 ರನ್‌ಗಳ ಅಗತ್ಯವಿತ್ತು. ಹರ್ಷಿತ್‌ ರಾಣಾ ಬೌಲಿಂಗ್‌ನಲ್ಲಿದ್ದರು. ಸ್ಟ್ರೈಕ್‌ನಲ್ಲಿದ್ದ ಹೆನ್ರಿಚ್‌ ಕ್ಲಾಸೆನ್‌ ಮೊದಲ ಎಸೆತದಲ್ಲೇ ಸಿಕ್ಸರ್‌ ಬಾರಿಸಿ, 2ನೇ ಎಸೆತದಲ್ಲಿ 1 ರನ್‌ ಕದ್ದರು. 3ನೇ ಎಸೆತದಲ್ಲಿ ಸಿಕ್ಸರ್‌ ಪ್ರಯತ್ನಿಸಿದ ಶಹಬಾಜ್ ಅಹಮದ್ ಬೌಂಡರಿ ಲೈನ್‌ನಲ್ಲಿ ಕ್ಯಾಚ್‌ ನೀಡಿ ಔಟಾದರು. ಬಳಿಕ ಸ್ಟ್ರೈಕ್‌ಗೆ ಬಂದ ಮಾರ್ಕೋ ಜಾನ್ಸೆನ್‌ 1 ರನ್‌ ಗಳಿಸಿ, ಕ್ಲಾಸೆನ್‌ಗೆ ಸ್ಟ್ರೈಕ್‌ ಬಿಟ್ಟುಕೊಟ್ಟರು. 5ನೇ ಎಸೆತದಲ್ಲಿ ಬೌಂಡರಿ ಸಿಡಿಸಲು ಯತ್ನಿಸಿ, ಕ್ಲಾಸೆನ್‌ ಕ್ಯಾಚ್‌ಗೆ ತುತ್ತಾದರು. ಕೊನೇ ಎಸೆತದಲ್ಲಿ 5 ರನ್‌ ಬೇಕಿತ್ತು. ಆದ್ರೆ ಕ್ರೀಸ್‌ಗೆ ಬಂದ ನಾಯಕ ಪ್ಯಾಟ್‌ ಕಮ್ಮಿನ್ಸ್‌ ಬಾಲ್‌ ಎದುರಿಸುವಲ್ಲಿ ವಿಫಲರಾದರು. ಅಂತಿಮವಾಗಿ ಕೆಕೆಆರ್‌ ನಾಲ್ಕು ರನ್‌ಗಳ ರೋಚಕ ಗೆಲುವು ಸಾಧಿಸಿತು.