Tag: Harshika Pooncha

  • ಹರ್ಷಿಕಾ ಹಲ್ಲೆ ಪ್ರಕರಣ- ಪ್ರಹ್ಲಾದ್ ಜೋಶಿ ನಿವಾಸಕ್ಕೆ ಭುವನ್ ದಂಪತಿ ಭೇಟಿ

    ಹರ್ಷಿಕಾ ಹಲ್ಲೆ ಪ್ರಕರಣ- ಪ್ರಹ್ಲಾದ್ ಜೋಶಿ ನಿವಾಸಕ್ಕೆ ಭುವನ್ ದಂಪತಿ ಭೇಟಿ

    ಹುಬ್ಬಳ್ಳಿ: ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ (Harshika Poonacha) ದಂಪತಿ ಇಂದು (ಏ.24) ಸಚಿವ ಪ್ರಹ್ಲಾದ್ ಜೋಶಿ (Prahalad Joshi) ನಿವಾಸಕ್ಕೆ ಭೇಟಿಯಾಗಿದ್ದಾರೆ. ಎಲೆಕ್ಷನ್ ಮುಗಿದ ನಂತರ ಹರ್ಷಿಕಾ ದಂಪತಿ ಮೇಲಿನ ಹಲ್ಲೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಹರ್ಷಿಕಾ ತಿಳಿಸಿದ್ದಾರೆ.

    ಪ್ರಹ್ಲಾದ್ ಜೋಶಿರನ್ನು ಭೇಟಿಯಾಗಿ ತಮ್ಮ ಮೇಲಿನ ಹಲ್ಲೆ ಬಗ್ಗೆ ವಿವರಿಸಿದ್ದಾರೆ. ದೌರ್ಜನ್ಯದ ವಿಚಾರ ತಿಳಿದ್ಮೇಲೆ ಸಚಿವ ಪ್ರಹ್ಲಾದ್ ಜೋಶಿ ಕಾನೂನು ಕ್ರಮ ಜರುಗಿಸೋದಾಗಿ ದಂಪತಿಗೆ ಭರವಸೆ ನೀಡಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ. ಭೇಟಿಯ ಬಳಿಕ ಬಗ್ಗೆ ಹರ್ಷಿಕಾ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

    ನೇಹಾ ಹಿರೇಮಠ ಕುಟುಂಬಕ್ಕೆ ಸಾಂತ್ವನ ಹೇಳಲು ಹುಬ್ಬಳ್ಳಿಗೆ ಬಂದಿದ್ದೇವೆ ಎಂದು ಹರ್ಷಿಕಾ ಮಾತನಾಡಿದ್ದಾರೆ. ನಮಗೆ ಆದ ತೊಂದರೆಗೆ ಪ್ರಹ್ಲಾದ್ ಜೋಶಿಯವರು ಸ್ಪಂಧಿಸಿದ್ದರು. ಇಲ್ಲಿ ಬರುವ ಮುಂಚೆಯೇ ತಮ್ಮ ಮೇಲಿನ ಹಲ್ಲೆ ಬಗ್ಗೆ ಪ್ರಹ್ಲಾದ್ ಜೋಶಿಯವರು ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಅವರಿಗೆ ಧನ್ಯವಾದ ತಿಳಿಸಲು ಮನೆಗೆ ಬಂದಿದ್ದೇವೆ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಕಾಂಗ್ರೆಸ್ ಪರ ತಮ್ಮ ವಿಡಿಯೋ ದುರ್ಬಳಕೆ: ಗರಂ ಆದ ಅಲ್ಲು ಅರ್ಜುನ್

    ನಮ್ಮ ಕುಟುಂಬ ಯಾರ ತಂಟೆಗೂ ಹೋಗದೆ ನಮ್ಮ ಪಾಡಿಗೆ ನಾವಿದ್ದೇವೆ. ಬೆಂಗಳೂರಿನ ರೆಸ್ಟೋರೆಂಟ್‌ಗೆ ಹೋದಾಗ ಕೆಲವರು ತೊಂದರೆ ಮಾಡಿದ್ದಾರೆ. ಕನ್ನಡ ಮಾತಾಡಿದ್ದಕ್ಕೆ ನಮ್ಮ ಜೊತೆ ಜಗಳ ತೆಗೆದಿದ್ದಾರೆ. ನಮ್ಮ ರಾಜ್ಯದಲ್ಲಿ ನಾವು ಕನ್ನಡ ಮಾತನಾಡಿದ್ದೇ ತಪ್ಪಾ ಎಂದು ನಟಿ ಪ್ರಶ್ನಿಸಿದ್ದಾರೆ. ಅಂದು ಸಾಕಷ್ಟು ಜನರು ಜಮಾಯಿಸಿ ದೌರ್ಜನ್ಯ ಮಾಡಿದ್ದರು. ಕತ್ತಲ್ಲಿದ್ದ ಚೈನ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಸೆಲೆಬ್ರಿಟಿಗಳಿಗೆ ಹೀಗಾದರೆ ಜನಸಾಮಾನ್ಯರ ಸ್ಥಿತಿಯೇನು ಎಂದ ಹರ್ಷಿಕಾ ಬೇಸರ ಹೊರಹಾಕಿದ್ದಾರೆ.

    ಈ ವೇಳೆ, ಭುವನ್ ಪೊನ್ನಣ್ಣ ಪ್ರತಿಕ್ರಿಯಿಸಿ, ಜೋಶಿ ಸರ್‌ಗೆ ಭೇಟಿಯಾಗಿ ನಮಗಾದ ತೊಂದರೆ ಬಗ್ಗೆ ಹೇಳಿದ್ದೇವೆ. ಎಲೆಕ್ಷನ್ ಆದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಜೋಶಿ ಸರ್ ಭೇಟಿಯಾಗಿ ನಮಗೆ ಧೈರ್ಯ ಬಂದಿದೆ. ಬೆಂಗಳೂರು ಪೊಲೀಸರು ಸಮರ್ಪಕ ತನಿಖೆ ಮಾಡುತ್ತಿದ್ದಾರೆ. ಆರೋಪಿಗಳನ್ನು ಗುರುತಿಸಿದ್ದು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಪ್ರಕರಣಕ್ಕೆ ಪೊಲೀಸರು ಸಾಕಷ್ಟು ಬೆಂಬಲ ನೀಡಿದ್ದಾರೆ ಎಂದು ಮಾತನಾಡಿದ್ದಾರೆ.

  • ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಮದುವೆ ಆದ್ರಾ? ಹುಡುಗ ಯಾರು?

    ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಮದುವೆ ಆದ್ರಾ? ಹುಡುಗ ಯಾರು?

    ಸ್ಯಾಂಡಲ್ ವುಡ್ ನ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಮದುವೆ ವಿಚಾರ ಆಗಾಗ್ಗೆ ಸ್ಯಾಂಡಲ್ ವುಡ್ ನಲ್ಲಿ ಗಿರಕಿ ಹೊಡೆಯುತ್ತಲೇ ಇರುತ್ತದೆ. ಹರ್ಷಿಕಾ ಜತೆ ಸದಾ ಸಮಾಜಮುಖಿ ಕೆಲಸಗಳನ್ನು ಮಾಡುವ ನಟ ಭುವನ್ ಜತೆ ಪ್ರೀತಿಸುತ್ತಿದ್ದಾರೆ ಎನ್ನುವ ಗಾಸಿಪ್ ಕೂಡ ಇತ್ತು. ಇವೆಲ್ಲವುಗಳನ್ನೂ ಹರ್ಷಿಕಾ ಅಲ್ಲಗಳೆಯುತ್ತಲೇ ಬಂದಿದ್ದಾರೆ. ಆದರೆ, ಇದೀಗ ಅವರಿಗೆ ಮದುವೆ ಆಗಿದೆಯಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಇದನ್ನೂ ಓದಿ : ಟರ್ಕಿಯಲ್ಲಿ ರಜಾಮಜಾ ಮಾಡುತ್ತಿರೋ ಬ್ಯೂಟಿಫುಲ್‌ ಗರ್ಲ್ ಕಾರುಣ್ಯ ರಾಮ್

    ಸಾಮಾನ್ಯವಾಗಿ ಮದುವೆಯಾದವರನ್ನು ‘ಶ್ರೀಮತಿ’ ಎಂದು ಕರೆಯಲಾಗುತ್ತದೆ. ಮದುವೆ ಆಗದೇ ಇರುವ ಹುಡುಗಿಯರನ್ನು ‘ಕುಮಾರಿ’  ಎಂದು ಕರೆಯುವುದು ರೂಢಿ. ಕಾರ್ಯಕ್ರಮವೊಂದರ ಜಾಹೀರಾತಿನಲ್ಲಿ ಹರ್ಷಿಕಾ ಅವರನ್ನು ಶ್ರೀಮತಿ ಹರ್ಷಿಕಾ ಪೂಣಚ್ಚ ಎಂದು ಬರೆಯಲಾಗಿದೆ. ಈ ವಿಷಯವನ್ನು ಟ್ವಿಟರ್ ನಲ್ಲಿ ಟ್ಯಾಗ್ ಮಾಡಿ ಹರ್ಷಿಕಾ ಅವರ ಗಮನಕ್ಕೆ ತರಲಾಗಿದೆ. ಕೂಡಲೇ ಎಚ್ಚೆತ್ತುಕೊಂಡಿರುವ ಹರ್ಷಿಕಾ ‘ಸಚ್ ಬ್ಲಂಡರ್ಸ್’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ತಾಳಿಕಟ್ಟಿ ಹೆಂಡತಿಯನ್ನು ಎತ್ತಿಕೊಂಡ ರಣಬೀರ್ ಕಪೂರ್

    ಸದ್ಯ ಹರ್ಷಿಕಾ ಅವರು ಭೋಜಪುರಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಎರಡು ಭೋಜಪುರಿ ಸಿನಿಮಾದಲ್ಲಿ ನಟಿಸಿ ಬಂದಿದ್ದಾರೆ. ಸಿನಿಮಾಗಳ ನಟನೆಯ ಜತೆ ಜತೆಗೆ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಕೋವಿಡ್ ಸಂದರ್ಭದಲ್ಲಿ ಅವರು ಮಾಡಿದ ಕೆಲಸವನ್ನು ಯಾರೂ ಮರೆಯುವಂತಿಲ್ಲ. ಇದನ್ನೂ ಓದಿ: ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    ಹರ್ಷಿಕಾ ಕನ್ನಡದಲ್ಲಿ ಮಾತ್ರವಲ್ಲ, ಮಲಯಾಳಂ, ಕೊಂಕಣಿ, ಕೊಡವ,  ಭೋಜಪುರಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಸಾಕಷ್ಟು ಜಾಹೀರಾತುಗಳಿಗೆ ರೂಪದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ. ಅಲ್ಲದೇ, ಸದ್ಯ ಕನ್ನಡದಲ್ಲಿ ಒಂದಷ್ಟು ಕಥೆಗಳನ್ನು ಕೇಳಿದ್ದಾರೆ.

  • ಬೆಟ್ಟಗುಡ್ಡದಲ್ಲಿ ಸೀಲ್ ಡೌನ್ ಆದ ಸೋಂಕಿತರ ಮನೆಗಳಿಗೆ ಭುವನ್ ಹರ್ಷಿಕಾ ನೆರವು

    ಬೆಟ್ಟಗುಡ್ಡದಲ್ಲಿ ಸೀಲ್ ಡೌನ್ ಆದ ಸೋಂಕಿತರ ಮನೆಗಳಿಗೆ ಭುವನ್ ಹರ್ಷಿಕಾ ನೆರವು

    ಮಡಿಕೇರಿ: ಕೊರೊನಾ ಸೋಂಕಿನಿಂದ ಬಳಲುತ್ತಿರುವ ಮನೆಗಳಿಗೆ ಭೇಟಿ ನೀಡಿ ನಟ ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ ನೆರವು ನೀಡಿದ್ದಾರೆ.

    ಸ್ಯಾಂಡಲ್‍ವುಡ್ ಕಲಾವಿದರಾದ ನಟ ಭುವನ್ ಹಾಗೂ ನಟಿ ಹರ್ಷಿಕಾ ಪೂಣಚ್ಚ ಕೊಡಗು ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಕಳೆದ ನಾಲ್ಕು ಐದು ದಿನಗಳಿಂದ ಸಹಾಯ ಹಸ್ತ ಚಾಚುತ್ತಿದ್ದಾರೆ.

    ಕೊರೊನಾ ಮಾಹಾಮಾರಿಯಿಂದ ಸೋಂಕಿತರ ಮನೆಗಳಿಗೆ ಸೀಲ್ ಡೌನ್ ಮಾಡಿ ಮನೆಯಿಂದ ಹೊರಗೆ ಬರದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾಕಾರ್ಯಕರ್ತರು ತಿಳಿಸಿದ್ದಾರೆ. ಹೀಗಾಗಿ ಬಡ ಕೂಲಿ ಕಾರ್ಮಿಕರು ತೋಟದ ಲೈನ್ ಮನೆಗಳಲ್ಲಿ ವಾಸವಾಗಿದ್ದಾರೆ. ಅದರಲ್ಲೂ ಮಡಿಕೇರಿ ತಾಲೂಕಿನ ಕಾಲೂರು ಗ್ರಾಮದಲ್ಲಿ ಸಾಕಷ್ಟು ಜನರು ಬೆಟ್ಟಗುಡ್ಡದ ವಾಸ ಮಾಡುವ ನಿವಾಸಿಗಳು ಮನೆಯಿಂದ ಹೊರ ಬರದೇ ಕಷ್ಟ ಪಡುತ್ತಿದ್ದಾರೆ. ಅಷ್ಟೇ ಅಲ್ಲದೇ ಕಾಲೂರಿನಲ್ಲಿ ಕೊರೊನಾದಿಂದ ಸೀಲ್ ಡೌನ್ ಆಗಿರುವ 40 ಮನೆಗಳಿಗೆ ಬೆಟ್ಟ ಗುಡ್ಡಗಳನ್ನು ಹತ್ತಿ ಭುವನಂ ತಂಡ ಹಾಗೂ ನಟಿ ಹರ್ಷಿಕಾ ಪೂಣಚ್ಚ ಭೇಟಿ ನೀಡಿ ಕಷ್ಟದಲ್ಲಿರುವ ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸಿದ್ದಾರೆ.

    ಸದ್ಯ ಭುವನ್ ತಂಡದ ಕಾರ್ಯಕ್ಕೆ ಗುಡ್ಡಗಾಡಿನ ಪ್ರದೇಶದ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಕನ್ನಡ ಹಾಡನ್ನು ಹಾಡಿ ಮಿಂಚಿದ ಬಾಲಿವುಡ್ ನಟ

    ಕನ್ನಡ ಹಾಡನ್ನು ಹಾಡಿ ಮಿಂಚಿದ ಬಾಲಿವುಡ್ ನಟ

    ಬೆಂಗಳೂರು: ಬಾಲಿವುಡ್ ನಟ ಗೋವಿಂದ್ ಅವರು ಕನ್ನಡ ಹಾಡೊಂದನ್ನು ಹಾಡಿದ್ದಾರೆ. ಈ ವೀಡಿಯೋವನ್ನು ಹರ್ಷಿಕಾ ಪೂಣಚ್ಚ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಡಾ.ರಾಜ್‍ಕುಮಾರ್ ಅಭಿನಯದ ಎರಡು ಕನಸು ಸಿನಿಮಾದ ‘ಎಂದೆಂದೂ ನಿನ್ನನೂ ಮರೆತೂ ನಾನಿರಲಾರೇ..’ ಎಂದು ಕನ್ನಡ ಸಾಂಗ್‍ನ ಎರಡು ಲೈನ್ ಹಾಡಿದ್ದಾರೆ. ಈ ವೀಡಿಯೋವನ್ನು ಹರ್ಷಿಕಾ ನನ್ನ ಜೀವನದ ಅತ್ಯುತ್ತಮ ದಿನ ಇಂದಾಗಿದೆ. ಎವರ್‍ಗ್ರೀನ್ ಸೂಪರ್‍ಸ್ಟಾರ್ ಗೋವಿಂದ ಸರ್ ಅವರನ್ನು ಭೇಟಿ ಮಾಡಿದೆ. ಅವರು ನನ್ನೊಂದಿಗೆ ಒಂದು ಕನ್ನಡ ಹಾಡನ್ನು ಹಾಡಿದ್ದಾರೆ. ಅವರು ಡಾ.ರಾಜ್‍ಕುಮಾರ್ ಸರ್ ಮತ್ತು ಅವರ ಹಾಡುಗಳನ್ನು ಪ್ರೀತಿಸುತ್ತಾರೆ ಎಂದು ಬರೆದುಕೊಂಡು ವೀಡಿಯೋ ಹಂಚಿಕೊಂಡಿದ್ದಾರೆ. ಈ ವೀಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.

    ಬಾಲಿವುಡ್ ನಟನ ಕನ್ನಡ ಪ್ರೀತಿಯನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಕರ್ನಾಟಕದಲ್ಲೇ ಕನ್ನಡ ಹಾಡನ್ನು ಕಡೆಗಣಿಸಲಾಗುತ್ತದೆ ಎಂಬ ಬೇಸರ ಆಗಾಗ ಕೇಳಿ ಬರುತ್ತದೆ. ಆದರೆ ಪರಭಾಷೆಯವರು ನಮ್ಮ ಕನ್ನಡ ಸಿನಿಮಾ ಗೀತೆಯನ್ನು ಹಾಡುವುದಕ್ಕೆ ನೆಟ್ಟೆಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಗೋವಿಂದ್ ಅವರಿಗೆ ಹರ್ಷಿಕಾ ಪೂಣಚ್ಚ ಕನ್ನಡ ಹಾಡನ್ನು ಹಾಡುವಂತೆ ಹೇಳ್ತಿದ್ದಂತೆಯೇ ನಟ ಎಷ್ಟೊಂದು ಪ್ರೀತಿಯಿಂದ ಹಾಡಿದ್ದಾರೆ ಎಂಬುದನ್ನು ನಾವು ಈ ವೀಡಿಯೋದಲ್ಲಿ ನೋಡಬಹುದಾಗಿದೆ.

  • ಪರಿಹಾರ ಕೆಂದ್ರದಲ್ಲಿ ಮಗುವಿನ ನಾಮಕರಣ- ಹರ್ಷಿಕಾ, ಭುವನ್ ಭಾಗಿ

    ಪರಿಹಾರ ಕೆಂದ್ರದಲ್ಲಿ ಮಗುವಿನ ನಾಮಕರಣ- ಹರ್ಷಿಕಾ, ಭುವನ್ ಭಾಗಿ

    – ತೊಟ್ಟಿಲು ಗಿಫ್ಟ್

    ಬೆಳಗಾವಿ: ಪ್ರವಾಹ ಪೀಡಿತ ಪ್ರದೇಶದಲ್ಲಿ ಮಗುವಿನ ನಾಮಕರಣ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಇಬ್ಬರು ಭಾಗಿಯಾಗಿದ್ದರು.

    ಅಧಿಕ ಮಳೆಯಿಂದಾಗಿ ಜಿಲ್ಲೆಯ ಗೋಕಾಕ್‍ನಲ್ಲಿ ಪ್ರವಾಹ ಉಂಟಾಗಿ ಜನರ ಜೀವನ ಅಸ್ತವ್ಯಸ್ತವಾಗಿದೆ. ಮತ್ತೊಂದೆಡೆ ಪ್ರವಾಹದಿಂದ ಮನೆ, ಆಸ್ತಿ ಎಲ್ಲವನ್ನೂ ಕಳೆದುಕೊಂಡ ಜನರು ಸದ್ಯಕ್ಕೆ ಗೋಕಾಕ್ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇದೇ ಪರಿಹಾರ ಕೇಂದ್ರದಲ್ಲಿ ನಡೆಯುತ್ತಿದ್ದ ಮಗುವಿನ ನಾಮಕರಣದಲ್ಲಿ ನಟ ಭುವನ್ ಮತ್ತು ಹರ್ಷಿಕಾ ಭಾಗಿಯಾಗಿದ್ದರು. ಇದನ್ನೂ ಓದಿ: ಮಗುವಿಗೆ ಹತ್ತು ದಿನಗಳಾದ್ರೂ ಸ್ನಾನ ಮಾಡಿಸಿಲ್ಲ: ಬಾಣಂತಿಯ ಕಣ್ಣೀರು

    ಮಗುವಿನ ನಾಮಕರಣಕ್ಕೆ ಅವರೇ ತೊಟ್ಟಿಲನ್ನು ತೆಗೆದುಕೊಂಡು ಹೋಗಿ ನೀಡಿದ್ದಾರೆ. ಮಗುವನ್ನು ಎತ್ತಿಕೊಂಡು ತೊಟ್ಟಿಲಲ್ಲಿ ಮಲಗಿಸಿ, ಮಗುವಿನ ಅಳು ನಿಲ್ಲಿಸಲು ಭುವನ್ ಮತ್ತು ಹರ್ಷಿಕಾ ಇಬ್ಬರು ಪ್ರಯತ್ನ ಮಾಡಿದ್ದಾರೆ. ನಾಮಕರಣದ ವಿಡಿಯೋವನ್ನು ಹರ್ಷಿಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

    “ಗೋಕಾಕ್‍ನಲ್ಲಿ ಪ್ರವಾಹದಿಂದ ಸಂತ್ರಸ್ತರು ಎಲ್ಲವನ್ನು ಕಳೆದುಕೊಂಡಿದ್ದಾರೆ. ಆದರೂ ಈ ಪುಟ್ಟ ರಾಜಕುಮಾರಿ ತನ್ನ ನಗುವನ್ನು ಕಳೆದುಕೊಳ್ಳದಂತೆ ನೋಡಿಕೊಂಡಿದ್ದಾರೆ. ನಾವು ಖರೀದಿಸಿ ಕೊಟ್ಟಿರುವ ತೊಟ್ಟಿಲು ಆಕೆಗೆ ಇಷ್ಟವಾಗಿದೆ. ಮಕ್ಕಳು ದೇವರ ಸಮಾನ ಎಂದು ಹೇಳುತ್ತಾರೆ, ಅದು ನಿಜ” ಎಂದು ಬರೆದು ಹರ್ಷಿಕಾ ವಿಡಿಯೋ ಪೋಸ್ಟ್ ಮಾಡಿದ್ದಾರೆ.

    ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಸಾಮಾನ್ಯ ಜನರು ಸೇರಿದಂತೆ ನಟ-ನಟಿಯರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಕಳೆದ ದಿನವಷ್ಟೆ ಭುವನ್ ಅಭಿನಯದ ‘ರಾಂಧವ’ ಚಿತ್ರತಂಡ ಭುವನ್ ನೇತೃತ್ವದಲ್ಲಿ ಚಿಕ್ಕೋಡಿ, ಗೋಕಾಕ್ ಸೇರಿದಂತೆ ಕೆಲವು ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದು, ಅಲ್ಲಿನ ಜನರಿಗೆ ಅಗತ್ಯವಿರುವ ಕೆಲ ವಸ್ತುಗಳನ್ನು ಸಾಗಿಸುತ್ತಿದ್ದಾರೆ.

    https://www.instagram.com/p/B1Ig1H0Hj2G/