Tag: Harshika Poonachka

  • ಅಂಬಿ ಸಾವಿನ ಸುದ್ದಿಯನ್ನ ಇಂದು ತಿಳಿದುಕೊಂಡ ಹರ್ಷಿಕಾ ಪೂಣಚ್ಚ

    ಅಂಬಿ ಸಾವಿನ ಸುದ್ದಿಯನ್ನ ಇಂದು ತಿಳಿದುಕೊಂಡ ಹರ್ಷಿಕಾ ಪೂಣಚ್ಚ

    ಬೆಂಗಳೂರು: ಹಿರಿಯ ನಟ ಅಂಬರೀಶ್ ದಿವಂಗತರಾಗಿ ಇಂದಿಗೆ ಆರು ದಿನಗಳೇ ಕಳೆದಿದೆ. ಆದರೆ ಅಂಬಿ ಸಾವಿನ ಸುದ್ದಿ ಇಂದು ನನಗೆ ತಿಳಿಯಿತು ಎಂದು ನಟಿ ಹರ್ಷಿಕಾ ಪೂಣಚ್ಚ ಹೇಳಿಕೊಂಡಿದ್ದಾರೆ.

    ನಟಿ ಹರ್ಷಿಕಾ ಪೂಣಚ್ಚ ಸಾಮಾಜಿಕ ಜಾಲತಾಣಗಳಲ್ಲಿ ಅಂಬರೀಶ್ ಅಂಕಲ್ ಸಾವಿನ ಸುದ್ದಿ ನನಗೆ ಈಗ ತಿಳಿಯಿತು ಎಂದು ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಹರ್ಷಿಕಾ ಪೂಣಚ್ಚ, “ಇಂದು ನನ್ನ ಅತ್ಯಂತ ದುಃಖದ ದಿನ. ನಾನು ಒಂದು ಶೂಟ್ ಗಾಗಿ ದಿನಾಂಕ 23 ರ ರಿಂದ ನೆಟ್‍ವರ್ಕ್ ಇಲ್ಲದ ಪ್ರದೇಶದಲ್ಲಿ ಇರಬೇಕಾಯಿತು. ನನ್ನ ನೆಚ್ಚಿನ ಅಂಬರೀಶ್ ಅಂಕಲ್ ನಿಧನದ ಸುದ್ದಿ ನನಗೆ ಈಗ ತಿಳಿಯಿತು. ನಾನು ಎಂಥ ದುರದೃಷ್ಟವಂತೆ, ಅವರನ್ನು ಕೊನೆಯದಾಗಿ ನೋಡಲು ಅವಕಾಶವೂ ನನಗೆ ಸಿಕ್ಕಿಲ್ಲ. ಮಿಸ್ ಯೂ ಅಂಬರೀಶ್ ಅಂಕಲ್” ಎಂದು ಬರೆದು ಅಳುತ್ತಿರುವ ಎಮೋಜಿಯನ್ನು ಹಾಕಿ ಉತ್ತರಾಖಂಡದ ಪುರೋಲಾದಿಂದ ಟ್ವೀಟ್ ಮಾಡಿದ್ದಾರೆ.

    ನಟಿ ಹರ್ಷಿಕಾ ಪೂಣಚ್ಚ 2 ಗಂಟೆಯ ಹಿಂದೆ ಈ ಟ್ವೀಟ್ ಮಾಡಿದ್ದಾರೆ. ಕಾರ್ಯಕ್ರಮವೊಂದಲ್ಲಿ ಅಂಬರೀಶ್ ಅವರನ್ನು ಅಪ್ಪಿಕೊಂಡು ಮುತ್ತು ಕೊಡುತ್ತಿರುವ ಫೋಟೋವನ್ನು ಹಾಕಿ ದುಃಖವನ್ನು ವ್ಯಕ್ತಪಡಿಸಿದ್ದಾರೆ.

    ಈ ಹಿಂದೆ ಅಂದರೆ ನವೆಂಬರ್ 24 ರಂದು ಹರ್ಷಿಕಾ ಅಂಬಿ ಸಾವಿನ ಬಗ್ಗೆ ತಿಳಿದು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ಆದರೆ ಇಂದು ಮತ್ತೆ ಅಂಬರೀಶ್ ಸಾವಿನ ಸುದ್ದಿ ಗೊತ್ತೆ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇದರಿಂದ ನೆಟ್ಟಿಗರು ಹರ್ಷಿಕಾ ಅವರಿಗೆ ಈ ಹಿಂದಿನ ಟ್ವೀಟ್ ಕಾಪಿಯನ್ನು ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

    https://twitter.com/actressharshika/status/1068395378222006272

    https://twitter.com/actressharshika/status/1066419314436317184

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv