ಇನ್ನು ಕೆಲವೇ ದಿನಗಳಲ್ಲಿ ಚೊಚ್ಚಲ ಮಗುವಿಗೆ ಜನ್ಮ ನೀಡಲು ತಯಾರಾಗಿರುವ ತುಂಬು ಗರ್ಭಿಣಿ ಹರ್ಷಿಕಾ ಪೂಣಚ್ಚ (Harshika Poonachcha) ಹೊಸದೊಂದು ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಬೆಲೆಕಟ್ಟಲಾಗದ ಕುಂಚ ಮಾಂತ್ರಿಕ ರವಿಮರ್ಮರ ಪೇಂಟಿಂಗ್ ರೀತಿ ಪೋಸ್ ಕೊಟ್ಟಿದ್ದಾರೆ. ಗುಲಾಬಿ ಬಣ್ಣದ ಸೀರೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕ ನೋಟದಲ್ಲಿ ಕಂಗೊಳಿಸಿದ್ದಾರೆ.
ಹಿಂದೆಯೂ ಹರ್ಷಿಕಾ ಪೂಣಚ್ಚ ರವಿವರ್ಮರ ಕುಂಚದಲ್ಲಿ ಅರಳಿದ ಸುಂದರ ನಾರಿಯ ಪೋಸ್‌ನ್ನೇ ಹೋಲುವಂತೆ ಫೋಟೋಶೂಟ್ ಮಾಡಿಸಿದ್ದರು. ಅದು ಬಹಳ ಮೆಚ್ಚುಗೆ ಬಂದ ಕಾರಣ ಇದೀಗ ರವಿವರ್ಮರ ಇನ್ನೊಂದು ಕಲಾಕೃತಿ ಹಂಸ ದಮಯಂತಿ ಚಿತ್ರದಂತೆ ಪೋಸ್ ಕೊಟ್ಟಿದ್ದಾರೆ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚಾ.
ಅಕ್ಟೋಬರ್ ತಿಂಗಳಲ್ಲಿ ಹರ್ಷಿಕಾ ಹಾಗೂ ಭುವನ್ ಪೊನ್ನಣ್ಣ ತಾರಾದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಮಗುವಿನ ಆಗಮನದ ಖುಷಿಯನ್ನ ಇನ್ಸ್ಟಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗ ಮತ್ತೊಂದು ವಿಭಿನ್ನ ಶೈಲಿಯಲ್ಲಿ ಫೋಟೂಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ ಗರ್ಭಿಣಿ ನಟಿ ಹರ್ಷಿಕಾ.
ನಟಿ ಹರ್ಷಿಕಾ (Harshika Poonachcha) ಮತ್ತು ನಟ ಭುವನ್ (Bhuvan) ನಾಳೆ ಕೊಡಗಿನಲ್ಲಿ (Kodagu) ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದಕ್ಕೂ ಮುನ್ನ ಭಾವಿ ಪತ್ನಿ ಹರ್ಷಿಕಾಗೆ ಭರ್ಜರಿ ಉಡುಗೊರೆಯೊಂದನ್ನು ನೀಡಿದ್ದಾರೆ ಭುವನ್. ಹರ್ಷಿಕಾಗಾಗಿಯೇ ಭುವನ್ ತೋಟದ ಮನೆ ಕಟ್ಟಿಸಿದ್ದು, ಮದುವೆ ಮುನ್ನವೇ ಹೊಸ ಮನೆ ಗೃಹ ಪ್ರವೇಶ ಮಾಡಿದ ಭುವನ್-ಹರ್ಷಿಕಾ ಜೋಡಿ. ಸಂಪ್ರದಾಯದಂತೆ ದೀಪ ಹಿಡಿದು ಹರ್ಷಿಕಾ ಹೊಸ ಮನೆಗೆ ಎಂಟ್ರಿಕೊಟ್ಟಿದ್ದರೆ, ಕೊಡವ ಶೈಲಿಯಲ್ಲಿ ಗನ್ ಹಿಡಿದು ಗುಂಡು ಹಾರಿಸಿ ಶುಭಕಾರ್ಯ ಶುರು ಮಾಡಿದ್ದಾರೆ ಭುವನ್.
ಕೇವಲ ಮನೆ ಮಾತ್ರವಲ್ಲ, ವಾರದ ಹಿಂದೆಯಷ್ಟೇ ಅವರು ಮತ್ತೊಂದು ಉಡುಗೊರೆಯನ್ನು ಹರ್ಷಿಕಾಗೆ ನೀಡಿದ್ದರು. ತಮ್ಮದೇ ಸ್ವಂತ ಪ್ರೊಡಕ್ಷನ್ ಹೌಸ್ ಶುರು ಮಾಡಿ, ಜೊತೆಗೆ ಹೊಸ ಸಿನಿಮಾದ ಟೈಟಲ್ ಕೂಡ ಅನೌನ್ಸ್ ಮಾಡಿತ್ತು ಈ ಜೋಡಿ. ಹರ್ಷಿಕಾ ಈ ಚಿತ್ರಕ್ಕೆ ನಿರ್ಮಾಪಕಿಯಾದರೆ, ಭುವನ್ ಹೀರೋ.
ಭುವನ್ ಹಾಗೂ ಹರ್ಷಿಕಾ ಅವರ ಪ್ರೊಡಕ್ಷನ್ ಹೌಸ್ ಗೆ ‘ಭುವನಂ ಎಂಟಟೈನ್ ಮೆಂಟ್’ ಎಂದು ಹೆಸರಿಡಲಾಗಿದ್ದು ಅದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ (Movie) ‘ಭುವನಂ ಶ್ರೇಷ್ಠಮ್ ಗಚ್ಚಾಮಿ’ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ:ಎಲ್ಲೆಲ್ಲೂ ‘ಜೈಲರ್’ ಚಿತ್ರದ ಹವಾ, ನಿಲ್ಲುತ್ತಿಲ್ಲ ರಜನಿ ತಾಕತ್ತು
ಇದೊಂದು ಬಾಕ್ಸರ್ ನ ಕಥೆಯಾಗಿದ್ದು ಆರು ವರ್ಷದ ಹಿಂದೆಯೇ ಈ ರೀತಿಯ ಸಿನಿಮಾ ಒಂದನ್ನ ಮಾಡಬೇಕು ಎಂದು ಭುವನ್ ಹಾಗೂ ಹರ್ಷಿಕಾ ಪ್ಲಾನ್ ಮಾಡಿಕೊಂಡಿದ್ದರಂತೆ. ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಭುವನ್ ಪೊನ್ನಣ್ಣ ಸಾಕಷ್ಟು ತರಬೇತಿ ಪಡೆದುಕೊಂಡಿದ್ದಾರೆ. ಈ ಪಾತ್ರಕ್ಕೆ ಹಲವು ಶೇಡ್ ಇರಲಿದೆ. ಈ ಚಿತ್ರದಲ್ಲಿ ರೆಟ್ರೊ ಶೈಲಿಯಲ್ಲೂ ಭುವನ್ ಅವರನ್ನು ನೋಡಬಹುದು. ಸಿನಿಮಾಗಳ ಸಂಖ್ಯೆಗಿಂತಲೂ ಗುಣಮಟ್ಟ ಮುಖ್ಯ ಎನ್ನುವ ಭುವನ್ ಗಡಿಬಿಡಿಯಲ್ಲಿ ಬೇರೆ ಯಾವುದೇ ಸಿನಿಮಾ ಒಪ್ಪಿಕೊಳ್ಳದೇ ಕಳೆದ ಎರಡು ವರ್ಷಗಳಿಂದ ಈ ಸಿನಿಮಾದ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುತ್ತಿದ್ದಾರೆ.
ಸದ್ಯ ಮದುವೆಯ (Marriage) ಸಂದರ್ಭದಲ್ಲಿ ಈ ಖುಷಿಯ ಸುದ್ದಿಯನ್ನು ಕೂಡ ಭುವನ್ ಹಾಗೂ ಹರ್ಷಿಕಾ ಮಾಧ್ಯಮ ಮಿತ್ರರ ಜೊತೆ ಹಂಚಿಕೊಂಡಿದ್ದಾರೆ. ಮದುವೆ ಸಮಾರಂಭ ಎಲ್ಲವನ್ನು ಮುಗಿಸಿಕೊಂಡು ಶೀಘ್ರದಲ್ಲಿ ಸಿನಿಮಾ ಚಿತ್ರೀಕರಣವನ್ನು ಶುರು ಮಾಡಲಿದ್ದಾರೆ. ಇನ್ನು ಈ ಸಿನಿಮಾಗೆ ಭುವನ್ ಅವರೇ ಕಥೆ ಬರೆದು ನಿರ್ದೇಶನವನ್ನು ಮಾಡುತ್ತಿದ್ದಾರೆ ಚಿತ್ರದಲ್ಲಿ ಭುವನ್ ಅವರೇ ನಾಯಕನಾಗಿ ಕಾಣಿಸಿಕೊಳ್ಳಲಿದ್ದು ಹರ್ಷಿಕಾ ನಿರ್ಮಾಪಕಿಯಾಗಿ ಮೊದಲ ಬಾರಿಗೆ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ಕೊಡಗು ಮೂಲದ ಹೊಸ ಪ್ರತಿಭೆಯನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಭುವನ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಒಟ್ಟಾಗಿ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಸಿಲೆಬ್ರಿಟಿಗಳ ಮನೆಗೆ ಹೋಗಿ ನೀಡುತ್ತಿದ್ದಾರೆ. ಈ ಜೋಡಿಗೆ ಮದುವೆ ಆಮಂತ್ರಣ ಪತ್ರಿಕೆ ಹಂಚುವಾಗಲೇ ವಿಶೇಷ ಉಡುಗೊರೆಯೊಂದು ದೊರೆತಿದೆ. ಹಿರಿಯ ನಟಿ ಜಯಮಾಲ (Jayamala) ಅವರು ಹರ್ಷಿಕಾಗೆ ಚಿನ್ನದ ಓಲೆ ಗಿಫ್ಟ್ (Gift) ನೀಡಿದ್ದಾರೆ. ಭುವನ್–ಹರ್ಷಿಕಾಗೆ ವಿವಾಹಕ್ಕೂ ಮುನ್ನ ಚಿನ್ನದ ಉಡುಗೊರೆ ಕೊಟ್ಟು ಸರ್ ಪ್ರೈಸ್ ನೀಡಿದ್ದಾರೆ ಜಯಮಾಲ. ಜೊತೆಗೆ ತಾವೇ ಕೈಯಾರೆ ಕಿವಿಯೋಲೆ ಹಾಕಿ ಸಂಭ್ರಮಿಸಿದ್ದಾರೆ.
ಹಲವು ವರ್ಷಗಳಿಂದ ಸ್ನೇಹಿತರಾಗಿದ್ದ ನಟ ಭುವನ್ (Bhuvan) ಹಾಗೂ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಸಹವಾಜವಾಗಿಯೇ ಅಭಿಮಾನಿಗಳಿಗೆ ಸಂಭ್ರಮ ತಂದಿದೆ. ಈಗಾಗಲೇ ಬ್ಯಾಚುಲರ್ ಪಾರ್ಟಿ ಮುಗಿಸಿಕೊಂಡು ಬಂದಿರುವ ಈ ಜೋಡಿ, ಇದೀಗ ತಮ್ಮ ಮದುವೆಗೆ ಗಣ್ಯರನ್ನು ಆಹ್ವಾನಿಸುತ್ತಿದೆ.
ಆಗಸ್ಟ್ 24ರಂದು ವಿರಾಜಪೇಟೆಯಲ್ಲಿ (Virajpet) ಅದ್ದೂರಿಯಾಗಿ ವಿವಾಹ ಮಹೋತ್ಸವ ನಡೆಯಲಿದ್ದು, ಸಾಕಷ್ಟು ಸಿದ್ದತೆಗಳನ್ನು ಮಾಡಲಾಗುತ್ತಿದೆ. ಕೊಡವ (Kodava) ಶೈಲಿಯಲ್ಲಿ ಭುವನ್ ಹಾಗೂ ಹರ್ಷಿಕಾ ಮದುವೆಯಾಗುತ್ತಿದ್ದು (Marriage), ಅದಕ್ಕಾಗಿ ವಿರಾಜಪೇಟೆಯ ‘ಅಮ್ಮತಿ ಕೊಡವ ಸಮಾಜ’ ಸಿಂಗಾರಗೊಳ್ಳಲಿದೆ. ಇದನ್ನೂ ಓದಿ:ವೀರ ಮದಕರಿಯಲ್ಲಿ ಕಿಚ್ಚನ ಮಗಳಾಗಿ ನಟಿಸಿದ್ದ ಹುಡುಗಿ ಈಗ ಹೀರೋಯಿನ್
ಈಗಾಗಲೇ ಸಿನಿಮಾ ಹಾಗೂ ರಾಜಕೀಯ ಗಣ್ಯರಿಗೆ ಮದುವೆ ಆಮಂತ್ರಣ ನೀಡಿರುವ ಜೋಡಿ, ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ರಾಜಕೀಯ ಗಣ್ಯರನ್ನು ಮದುವೆಗೆ ಈ ಜೋಡಿ ಆಹ್ವಾನಿಸಿದೆ.
ಸಿನಿಮಾ ತಾರೆಯರಾದ ಶಿವರಾಜ್ ಕುಮಾರ್, ರವಿಚಂದ್ರನ್, ಗಣೇಶ್ , ದೊಡ್ಡಣ್ಣ, ಶ್ರೀನಾಥ್ ಜಯಮಾಲ, ಸುಧಾರಾಣಿ, ತಾರಾ, ಮಾಲಾಶ್ರೀ, ಅನುಪ್ರಭಾಕರ್, ಅಮೂಲ್ಯ, ದಿಗಂತ್, ಅಶ್ವಿನಿ ಪುನೀತ್ ರಾಜ್ ಕುಮಾರ್ , ರಾಘವೇಂದ್ರ ರಾಜ್ ಕುಮಾರ್, ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ, ದುನಿಯಾ ವಿಜಯ್ ಸೇರಿದಂತೆ ಅನೇಕ ಗಣ್ಯರಿಗೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದ್ದಾರೆ ಭುವನ್ ಮತ್ತು ಹರ್ಷಿಕಾ.
ನಟಿ ಹರ್ಷಿಕಾ (Harshika Poonachcha) ಹಾಗೂ ಭುವನ್ (Bhuvan) ದಾಂಪತ್ಯ ಜೀವನಕ್ಕೆ ಕಾಲಿಡ್ತಿರೋ ವಿಚಾರ ಎಲ್ಲರಿಗೂ ಗೊತ್ತಿರುವ ವಿಚಾರ ಇದೆ. ಮದುವೆ (Marriage) ಶುಭ ಸುಖ ನೀಡುವ ಜೊತೆಗೆ ನಟ ಭುವನ್ ಹಾಗೂ ಹರ್ಷಿಕಾ ಪೂಣಚ್ಚ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮದೇ ಸ್ವಂತ ಪ್ರೊಡಕ್ಷನ್ ಹೌಸ್ ಶುರು ಮಾಡಿದ್ದಾರೆ. ಅದರ ಜೊತೆಗೆ ಹೊಸ ಸಿನಿಮಾದ ಟೈಟಲ್ ಕೂಡ ಅನೌನ್ಸ್ ಮಾಡಿದ್ದಾರೆ.
ಭುವನ್ ಹಾಗೂ ಹರ್ಷಿಕಾ ಅವರ ಪ್ರೊಡಕ್ಷನ್ ಹೌಸ್ ಗೆ ‘ಭುವನಂ ಎಂಟಟೈನ್ ಮೆಂಟ್’ ಎಂದು ಹೆಸರಿಡಲಾಗಿದ್ದು ಅದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ (Movie) ‘ಭುವನಂ ಶ್ರೇಷ್ಠಮ್ ಗಚ್ಚಾಮಿ’ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ:ಉರ್ಫಿಗೆ ಕೊಲೆ ಬೆದರಿಕೆ: ವ್ಯಕ್ತಿಯ ಹೆಸರು ಬಹಿರಂಗ ಪಡಿಸಿದ ನಟಿ
ಇದೊಂದು ಬಾಕ್ಸರ್ ನ ಕಥೆಯಾಗಿದ್ದು ಆರು ವರ್ಷದ ಹಿಂದೆಯೇ ಈ ರೀತಿಯ ಸಿನಿಮಾ ಒಂದನ್ನ ಮಾಡಬೇಕು ಎಂದು ಭುವನ್ ಹಾಗೂ ಹರ್ಷಿಕಾ ಪ್ಲಾನ್ ಮಾಡಿಕೊಂಡಿದ್ದರಂತೆ. ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಭುವನ್ ಪೊನ್ನಣ್ಣ ಸಾಕಷ್ಟು ತರಬೇತಿ ಪಡೆದುಕೊಂಡಿದ್ದಾರೆ. ಈ ಪಾತ್ರಕ್ಕೆ ಹಲವು ಶೇಡ್ ಇರಲಿದೆ. ಈ ಚಿತ್ರದಲ್ಲಿ ರೆಟ್ರೊ ಶೈಲಿಯಲ್ಲೂ ಭುವನ್ ಅವರನ್ನು ನೋಡಬಹುದು. ಸಿನಿಮಾಗಳ ಸಂಖ್ಯೆಗಿಂತಲೂ ಗುಣಮಟ್ಟ ಮುಖ್ಯ ಎನ್ನುವ ಭುವನ್ ಗಡಿಬಿಡಿಯಲ್ಲಿ ಬೇರೆ ಯಾವುದೇ ಸಿನಿಮಾ ಒಪ್ಪಿಕೊಳ್ಳದೇ ಕಳೆದ ಎರಡು ವರ್ಷಗಳಿಂದ ಈ ಸಿನಿಮಾದ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುತ್ತಿದ್ದಾರೆ.
ಸದ್ಯ ಮದುವೆಯ ಸಂದರ್ಭದಲ್ಲಿ ಈ ಖುಷಿಯ ಸುದ್ದಿಯನ್ನು ಕೂಡ ಭುವನ್ ಹಾಗೂ ಹರ್ಷಿಕಾ ಮಾಧ್ಯಮ ಮಿತ್ರರ ಜೊತೆ ಹಂಚಿಕೊಂಡಿದ್ದಾರೆ. ಮದುವೆ ಸಮಾರಂಭ ಎಲ್ಲವನ್ನು ಮುಗಿಸಿಕೊಂಡು ಶೀಘ್ರದಲ್ಲಿ ಸಿನಿಮಾ ಚಿತ್ರೀಕರಣವನ್ನು ಶುರು ಮಾಡಲಿದ್ದಾರೆ. ಇನ್ನು ಈ ಸಿನಿಮಾಗೆ ಭುವನ್ ಅವರೇ ಕಥೆ ಬರೆದು ನಿರ್ದೇಶನವನ್ನು ಮಾಡುತ್ತಿದ್ದಾರೆ ಚಿತ್ರದಲ್ಲಿ ಭುವನ್ ಅವರೇ ನಾಯಕನಾಗಿ ಕಾಣಿಸಿಕೊಳ್ಳಲಿದ್ದು ಹರ್ಷಿಕಾ ನಿರ್ಮಾಪಕಿಯಾಗಿ ಮೊದಲ ಬಾರಿಗೆ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ಕೊಡಗು ಮೂಲದ ಹೊಸ ಪ್ರತಿಭೆಯನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಭುವನ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಶಾಹಿದ್ ನಿರ್ಮಿಸಿರುವ, ಲಯ ಕೋಕಿಲ (Laya Kokila) ನಿರ್ದೇಶನದ ‘ತಾಯ್ತ’ (Taytha) ಚಿತ್ರದ ಟೀಸರ್ (Teaser) ಇತ್ತೀಚೆಗೆ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ಹಿರಿಯ ನಿರ್ದೇಶಕ ಸಾಯಿಪ್ರಕಾಶ್, ನಟ ಧರ್ಮ ಮುಖ್ಯ ಅತಿಥಿಗಳಾಗಿ ಆಗಮಿಸಿ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು.
ಯಾರಾದರೂ ತುಂಬಾ ಹೆದರಿಕೊಂಡಾಗ ‘ತಾಯ್ತ’ ಕಟ್ಟಿಸಿಕೊ ಎಂದು ಹೇಳುತ್ತಾರೆ. ನನ್ನ ಮೊದಲ ನಿರ್ದೇಶನದ ಚಿತ್ರಕ್ಕೆ ‘ತಾಯ್ತ’ ಎಂದು ಹೆಸರಿಟ್ಟಿದ್ದೀನಿ. ಇದು ಪ್ರೇಮಕಥೆಯಾದರೂ, ಇದರಲ್ಲಿ ಹಾರರ್, ಥ್ರಿಲ್ಲರ್, ಕಾಮಿಡಿ ಎಲ್ಲವೂ ಇದೆ. ಶಾಹಿದ್ ಈ ಚಿತ್ರದ ನಿರ್ಮಾಪಕರು. ರಿಯಾನ್ (Riyan) ಈ ಚಿತ್ರದ ನಾಯಕ. ಹರ್ಷಿಕಾ ಪೂಣಚ್ಛ ನಾಯಕಿ. ಸಾಧುಕೋಕಿಲ, ಪುಷ್ಪಸ್ವಾಮಿ, ಶಾಹಿದ್, ಶೋಭ್ ರಾಜ್ ಅವರ ಜೊತೆಗೆ ನಾನು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಸಂಗೀತ ಕೂಡ ನೀಡಿದ್ದೇನೆ. ಇಂದು ಟೀಸರ್ ಬಿಡುಗಡೆಯಾಗಿದೆ. ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಧನ್ಯವಾದ ಎಂದರು ಲಯಕೋಕಿಲ.
ಈ ಚಿತ್ರದ ಕಥೆ ಇಷ್ಟವಾಯಿತು. ಇದು ನನ್ನ ಮೊದಲ ಚಿತ್ರ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ರಿಯಾನ್. ಈ ಚಿತ್ರದಲ್ಲಿ ನಾನು ಖುಷಿ ಎಂಬ ಹೆಸರಿನ ಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ನಟಿಸಿದ್ದೇನೆ. ಇದು ನಾನು ಅಭಿನಯಿಸಿರುವ ಮೊದಲ ಹಾರರ್ ಚಿತ್ರ. ಕಾಲೇಜ್ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಒಂದು ಸ್ಥಳಕ್ಕೆ ಹೋದಾಗ ಅಲ್ಲಿ ಏನೇನು ಆಗುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು ಎಂದು ನಾಯಕಿ ಹರ್ಷಿಕಾ ಪೂಣಚ್ಚ (Harshika Poonachcha)ತಿಳಿಸಿದರು. ಇದನ್ನೂ ಓದಿ: ಪಿಂಕ್ ಕಲರ್ ಡ್ರೆಸ್‌ನಲ್ಲಿ ದೀಪಿಕಾ ದಾಸ್ ಮಿಂಚಿಂಗ್
ಕಥೆ ಇಷ್ಟವಾಗಿ, ನಿರ್ಮಾಣಕ್ಕೆ ಮುಂದಾದೆ. ಚಿಕ್ಕಮಗಳೂರು, ಬೇಲೂರು ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ನಾನು ಕೂಡ ನಟಿಸಿದ್ದೇನೆ. ಚಿತ್ರ ತರೆಗೆ ಬರಲು ಸಿದ್ದವಾಗಿದೆ ಎಂದರು ನಿರ್ಮಾಪಕ ಶಾಹಿದ್. ಹಿರಿಯ ನಟಿ ಪುಷ್ಪಸ್ವಾಮಿ ಸಹ ತಮ್ಮ ಪಾತ್ರದ ಕುರಿತು ಮಾತನಾಡಿದರು.
ಬೆಂಗಳೂರು: ನಟಿ ಹರ್ಷಿಕಾ ಪೂನಚ್ಚ ಅವರು ಪುನೀತ್ ರಾಜ್ ಕುಮಾರ್ ಅವರನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದಾರೆ.
ಬೇಲೂರಿನಲ್ಲಿ ಇನ್ ಸ್ಟಾದಲ್ಲಿ ಲೈವ್ ಬಂದು ಮಾತನಾಡಿದ ಅವರು, ಈಗಲೂ ಅರಗಿಸಿಕೊಳ್ಳಲು ಕಷ್ಟ ಆಗುತ್ತಿದೆ. ಅಪ್ಪು ಸರ್ ಅವರು ನಮ್ಮ ಸುತ್ತ ಮುತ್ತ ಇಲ್ಲ ಅನ್ನೋ ಮಾತನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪ್ಪು ಸರ್ ಅವರ ಮನೆಯಲ್ಲಿ ಇದ್ದಾರೆ. ಅವರನ್ನು ಆದಷ್ಟು ಬೇಗ ಭೇಟಿಯಾಗ್ತೀವಿ ಅಂತಾನೇ ನನಗೆ ಈಗಲೂ ಅನಿಸ್ತಿದೆ ಎಂದರು.
ಅಪ್ಪು ಸರ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಕುಟುಂಬದವರ ಜೊತೆ ಇದ್ದಾರೆ. ಅವರು ಸಿಕ್ಕಾಗ ಮಾತಾಡಿಸಬೇಕು ಅಂತೆಲ್ಲ ಅನಿಸ್ತಿದೆ. ಸದ್ಯ ನಾನು ಬೇಲೂರಿನಲ್ಲಿ ಶೂಟಿಂಗ್ ನಲ್ಲಿ ಇದ್ದೇನೆ. ಕ್ಯಾರವಾನ್ ಅಥವಾ ವ್ಯಾನಿಟಿ ವ್ಯಾನ್ ಅನ್ನು ಮೊದಲು ಪರಿಚಯಿಸಿದ್ದು ಅಪ್ಪು ಸರ್. 15-16ನೇ ವಯಸ್ಸಿನಲ್ಲಿ ನನ್ನ ಎರಡನೇಯ ಸಿನಿಮಾ ಜಾಕಿ ಶೂಟಿಂಗ್ ಸಮಯದಲ್ಲಿ ಸೆಟ್ ನಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದಾಗ ಅಪ್ಪು ಸರ್ ಅವರು. ಯಾಕಮ್ಮಾ ಹರ್ಷಿಕಾ ನನ್ನ ಕ್ಯಾರವನ್ ನಲ್ಲಿ ಹೋಗಿ ಕುಳಿತುಕೊಳ್ಳಬಹುದಲ್ವಾ..? ಎಂದು ಹೇಳಿದ್ದರು. ಯಾಕಂದ್ರೆ ಆ ಸಮಯದಲ್ಲಿ ಸ್ಟಂಟ್, ಫೈಟ್ ನಡೀತಾ ಇತ್ತು. ಧೂಳು ತುಂಬಿತ್ತು. ಹೀಗಾಗಿ ಅಪ್ಪು ಸರ್ ನನ್ನ ಅಲ್ಲಿಂದ ಹೋಗುವಂತೆ ಹೇಳಿದ್ದರು.
actress-harshika-poonachcha
ಆಗ ನಾನು ಇಲ್ಲ ಸರ್ ಪರವಾಗಿಲ್ಲ ನಾನು ಇಲ್ಲೇ ಕುಳಿತಿರುತ್ತೇನೆ ಅಂತ ಹೇಳಿದೆ. ಇಲ್ಲ ನೀನು ಹೋಗು ಅಲ್ಲಿ ಡ್ರೈಫ್ರೂಟ್ಸ್, ಹಣ್ಣುಗಳಿವೆ. ನಿಂಗೆ ಏನು ಬೇಕು ತಿನ್ನು, ರೆಸ್ಟ್ ಮಾಡು ಅಂತೆಲ್ಲ ಹೇಳಿದರು. ಇದೇ ಮಾತನ್ನು ನನ್ನ ತಾಯಿಗೂ ಹೇಳಿದರು. ಹೀಗಾಗಿ ನಂಗೆ ಹಾಗೂ ನನ್ನ ಅಮ್ಮನಿಗೆ ಅರಗಿಸಿಕೊಳ್ಳಲು ಆಗ್ತಿಲ್ಲ ಎಂದು ಗದ್ಗದಿತರಾದರು. ಇದನ್ನೂ ಓದಿ: ಮೈತ್ರಿ ಸರ್ಕಾರದಲ್ಲಿ ಕಡಿಮೆಯಾಗಿದ್ದ ಆತ್ಮಹತ್ಯೆ ಪ್ರಕರಣಗಳು ಈಗ ಹೆಚ್ಚಾಗ್ತಿವೆ: ಹೆಚ್‍ಡಿಕೆ
ಎಷ್ಟು ದೊಡ್ಡ ಮನುಷ್ಯ. ಎಷ್ಟು ಒಳ್ಳೆಯ ಫ್ಯಾಮಿಲಿಯಿಂದ ಬಂದಿದ್ದಾರೆ. ಆಗಿನ್ನು ನಾನು ಇಂಡಸ್ಟಿಗೆ ಹೊಸಬಳು. ಆದರೆ ನನಗೆ ಅವರ ಜೊತೆ ನಟಿಸಲು ಅವಕಾಶ ಮಾಡಿಕೊಟ್ಟರು. ದೇವರು ಯಾಕೆ ಇಷ್ಟೊಂದು ಕಟುಕ ಆದರು. ಯಾವ ಕಾರಣಕ್ಕೆ ಅವರನ್ನು ಕರೆದುಕೊಂಡ್ರು. ಅವರು ಮಾಡಿರುವ ಒಳ್ಳೆಯ ವಿಚಾರಗಳು ಈವಾಗ ಬಯಲಾಗುತ್ತಿವೆ ಎಂದು ಅಪ್ಪು ನೆನಪಿಸಿಕೊಂಡು ಹರ್ಷಿಕಾ ಬೇಸರ ವ್ಯಕ್ತಪಡಿಸಿದರು.
ಜಾಕಿ ಸಿನಿಮಾ ಶೂಟಿಂಗ್ ಸಮಯದಲ್ಲಿ ಕ್ಲೈಮ್ಯಾಕ್ಸ್ ಸೀನ್ ನಲ್ಲಿ ನನ್ನ ಹಾಗೂ ಅಪ್ಪು ಸರ್ ನ ಒಂದು ಗುಂಡಿ ತೋಡಿ ಒಳಗೆ ಹಾಕಿರುತ್ತಾರೆ. ಆ ಬಳಿಕ ನಮ್ಮ ಮೇಲೆ ಮಣ್ಣು ಹಾಕಿರುತ್ತಾರೆ. ಅದರ ಮೇಲೆ ಒಂದು ಕಲ್ಲು ಹಾಕಿ ಕ್ಲೋಸ್ ಮಾಡಿ ಬಿಡುತ್ತಾರೆ. ಆ ಸಂದರ್ಭದಲ್ಲಿ ಒಂದಷ್ಟು ಸೆಕೆಂಡ್ ನಲ್ಲಿ ಅದರೊಳಗಡೆಯೇ ಉಸಿರಾಡದೆ ನಾವು ಇರಬೇಕಿತ್ತು. ಇದಾದ ಬಳಿಕ ನಮ್ಮನ್ನ ಆ ಗುಂಡಿಯಿಂದ ನಮ್ಮನ್ನು ಹೊರಗೆ ತೆಗೆಯುತ್ತಾರೆ. ಈ ವೇಳೆ ಅಪ್ಪು ಸರ್ ಮೈ, ಮುಖದಲ್ಲೆಲ್ಲ ಪೂರ್ತಿ ಮಣ್ಣಿದೆ. ಆದರೆ ಮೊದಲು ನನ್ನ ಮುಖ ಒರೆಸಿ ನೀರು ಹಾಕಿ ಹರ್ಷಿಕಾ ಆರ್ ಯು ಓಕೆ ಅಂತೆಲ್ಲ ಕೇಳಿದ್ರು. ಆದರೆ ಇಂದು ಇಂತಹ ಒಂದು ಒಬ್ಬ ದೇವತಾ ಮನುಷ್ಯನನ್ನು ಕರೆದುಕೊಳ್ಳುವಷ್ಟು ದೇವರು ಕಟುಕ ಯಾಕೆ ಆದ ಅಂತ ಕಣ್ಣೀರಾಕಿದ್ರು. ಇದನ್ನೂ ಓದಿ: ಮೆಟ್ರೋ ಕಾಸ್ಟ್ ಇಂಡಿಯಾದ ನೂತನ ಕಚೇರಿ ಬೆಂಗಳೂರಿನಲ್ಲಿ ಉದ್ಘಾಟನೆ
ಅನೇಕ ಮಂದಿ ಕಟುಕರು ಈ ಭೂಮಿ ಮೇಲೆ ಇದ್ದಾರೆ. ಆದರೆ ಇಂತಹ ಒಳ್ಳೆಯ ಮನುಷ್ಯನನ್ನು ದೇವರು ಯಾಕೆ ಕರೆದುಕೊಂಡು ಹೋದ್ರು ಅಂತ ದೇವರ ಮೇಲೆ ಕೋಪ ಬರುತ್ತಿದೆ. ಅಪ್ಪು ಸರ್ ತುಂಬಾ ಜನರನ್ನು ತಮ್ಮದೇ ಕುಟುಂಬದವರಂತೆ ನೋಡಿಕೊಳ್ಳುತ್ತಾರೆ. ಸಿಕ್ಕಾಗಲ್ಲೆಲ್ಲಾ ಆರೋಗ್ಯದ ಬಗ್ಗೆಯೇ ಮಾತಾಡ್ತಾರೆ. ಹೇಗೆ ಸಣ್ಣ ಆಗಿದ್ದೀಯಾ.. ಏನು ಡಯೆಟ್ ಮಾಡ್ತೀಯಾ ಅಂತೆಲ್ಲ ಕೇಳುತ್ತಿದ್ದರು. ಹಾಗೆಯೇ ಅವರನ್ನು ಕೊನೆಯ ಬಾರಿ ಆಸ್ಪತ್ರೆಗೆ ನೋಡಲು ಹೋದಾಗಲೂ ಎದ್ದು ಮಾತನಾಡಿಸುತ್ತಾರೆ ಅಂತ ಅಂದುಕೊಂಡೆ ಆದರೆ ಅವರು ಎದ್ದು ಮಾತನಾಡಲೇ ಇಲ್ಲ ಎಂದು ಹರ್ಷಿಕಾ ಗಳ ಗಳನೇ ಅತ್ತರು.
ಚಾಮರಾಜನಗರ: ಗುಂಡ್ಲುಪೇಟೆ ಬುದ್ಧಿಮಾಂದ್ಯ ಮಕ್ಕಳಿಗೆ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ನೆರವಿನ ಹಸ್ತ ಚಾಚಿದ್ದಾರೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿರುವ ಪೃಥ್ವಿ ಬುದ್ಧಿಮಾಂಧ್ಯ ಮಕ್ಕಳ ವಸತಿ ಶಾಲೆಯ ವಿಧ್ಯಾರ್ಥಿಗಳು ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದ ಪರಿಸ್ಥಿತಿ ಇತ್ತು. 30ಕ್ಕೂ ಹೆಚ್ಚು ಬುದ್ಧಿಮಾಂದ್ಯ ಮಕ್ಕಳಿರುವ ವಸತಿ ಶಾಲೆ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ, ಮಳೆ ಬಂದರೆ ಸೋರುವ ಶಾಲೆಯಾಗಿತ್ತು.
ಗುಂಡ್ಲುಪೇಟೆಗೆ ತೆರಳಿ ಬುದ್ಧಿಮಾಂದ್ಯ ಮಕ್ಕಳಿಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಭುವನಂ ಫೌಂಡೇಷನ್ ನಿಂದ ಎರಡು ತಿಂಗಳಿಗೆ ಆಗುವಷ್ಟು ಆಹಾರಧಾನ್ಯ, ನಿತ್ಯೋಪಯೋಗಿ ವಸ್ತುಗಳ ವಿತರಣೆ ಮಾಡಿದ್ದಾರೆ. ಇದನ್ನೂ ಓದಿ: ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರಿಗೆ ಯಶ್ ಸಹಾಯ ಹಸ್ತ
ಬುದ್ಧಿಮಾಂದ್ಯ ಮಕ್ಕಳೊಡನೆ ಕೆಲಕಾಲ ಕಳೆದಿರುವ ನಟ, ನಟಿ ತಾವೂ ನೃತ್ಯ ಮಾಡಿ ಅಲ್ಲದೆ ಅವರಿಂದಲೂ ನೃತ್ಯ ಮಾಡಿಸಿ ರಂಜಿಸಿದ್ದಾರೆ. ಇಲ್ಲಿನ ಬುದ್ಧಿಮಾಂದ್ಯ ಮಕ್ಕಳ ಪರಿಸ್ಥಿತಿ ಶೋಚನೀಯವಾಗಿದೆ. ಸದ್ಯಕ್ಕೆ ತಾತ್ಕಾಲಿಕ ನೆರವು ನೀಡಿದ್ದೇವೆ. ನಮ್ಮ ಸೇವೆಗೆ ಉತ್ತಮ ಅವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಶಾಲೆಗೆ ಇನ್ನೂ ಹೆಚ್ಚಿನ ನೆರವು ನೀಡೋದಾಗಿ ಭರವಸೆ ಕೊಟ್ಟಿದ್ದಾರೆ. ಇದನ್ನೂ ಓದಿ: ವಿಶೇಷ ಚೇತನ ಮಕ್ಕಳ ಶಾಲೆಯ ನೆರವಿಗೆ ನಿಂತ ನಟ ಸುದೀಪ್
ನಿನ್ನೆಯಷ್ಟೇ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ ಸಹ ನೆರವು ನೀಡಿತ್ತು. ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಶಾಶ್ವತ ಪರಿಹಾರ ಒದಗಿಸುವ ಭರವಸೆ ಕೊಟ್ಟಿದ್ದಾರೆ.
ನಟಿ ಹರ್ಷಿಕಾ ಪೂಣಚ್ಚ, ಗಾಯಕ ನವೀನ್ ಸಜ್ಜು, ಚಂದನಾ ಗೌಡ ಸೇರಿದಂತೆ ಕನ್ನಡದ ನವ ನಟ-ನಟಿಯರು, ಹೊಸಾ ಸೆಲೆಬ್ರೆಟಿಗಳೆಲ್ಲಾ ಹೋಳಿ ಹಬ್ಬ ಆಚರಿಸಲು ಮುಂದಾಗಿದ್ದಾರೆ. ನಾಗರಬಾವಿ ಬಳಿ ಮೀಡಿಯ ಸ್ಟೇಷನ್ ಆಯೋಜಿಸಿರುವ ಈ ಈವೆಂಟ್‍ನಲ್ಲಿ ಐಪಿಎಲ್ ಕ್ರಿಕೆಟ್ ನೋಡುತ್ತಲೇ ಹೋಳಿ ಹಬ್ಬ ಆಚರಿಸುವ ವಿನೂತನ ಐಡಿಯಾ ಮಾಡಲಾಗಿದೆಯಂತೆ. ಇದೇ ಮಾರ್ಚ್ 23ರಂದು ಬೆಳಿಗ್ಗೆ 11ರಿಂದ ರಾತ್ರಿ 11ರ ತನಕ ನಡೆಯುವ `ರಂಗ್ ದೆ ಬೆಂಗಳೂರು 2019′ ಹೆಸರಿನ ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಲೋಕದ ಅನೇಕರು ಪಾಲ್ಗೊಳ್ಳಲಿದ್ದಾರೆ.
ದಿನನಿತ್ಯದ ಒತ್ತಡದ ಬದುಕಿನಲ್ಲಿ ಜನ ಸಾಕಷ್ಟು ಹೈರಾಣಾಗಿರುತ್ತಾರೆ. ಕ್ರಿಕೆಟ್ ಮ್ಯಾಚ್ ಶುರುವಾಯಿತೆಂದರೆ, ಟೀವಿ ಮುಂದಷ್ಟೇ ಕೂತು ಎಂಜಾಯ್ ಮಾಡುತ್ತಾರೆ. ಇಷ್ಟಪಟ್ಟ ಆಟವನ್ನು ಓಕುಳಿಯಾಟದೊಂದಿಗೆ ಬ್ಲೆಂಡ್ ಮಾಡಿದರೆ ಸುಂದರವಾಗಿರುತ್ತದೆ ಅನ್ನಿಸಿತು. ಮನೆಮಂದಿಯೆಲ್ಲಾ ಪೂಲ್ ಪಾರ್ಟಿ, ರೈನ್ ಡ್ಯಾನ್ಸ್ ಜೊತೆಗೆ ಕ್ರಿಕೆಟ್ ನೋಡುತ್ತಾ ಥ್ರಿಲ್ ಅನುಭವಿಸುವ ಹೊಸಾ ಕಾನ್ಸೆಪ್ಟ್ ಇದು ಎನ್ನುವುದು ಈ ಕಾರ್ಯಕ್ರಮವನ್ನು ಆಯೋಜಿಸಿರುವ ಮೀಡಿಯಾ ಸ್ಟೇಷನ್‍ನ ವರುಣ್ ಅವರ ಅಭಿಪ್ರಾಯ.