Tag: Harshika Poonacha

  • ಕೂಲ್ ಚೆಲುವೆಯ ಹಾಟ್ ಫೋಟೋಶೂಟ್

    ಕೂಲ್ ಚೆಲುವೆಯ ಹಾಟ್ ಫೋಟೋಶೂಟ್

    ಬೆಂಗಳೂರು: ಸ್ಯಾಂಡಲ್‍ವುಡ್ ಸ್ಮೈಲಿಂಗ್ ಕ್ವೀನ್ ಹರ್ಷಿಕಾ ಪೂಣಚ್ಚರ ಹೊಸ ಫೋಟೋಶೂಟ್ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ.

    ಬಹುತೇಕ ಕಲಾವಿದರು ಪ್ರತಿವರ್ಷ ತಮ್ಮ ಬಗೆ ಬಗೆಯ ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ. ಹೊಸ ಫೋಟೋಶೂಟ್ ಮೂಲಕ ತಮ್ಮಲ್ಲಿಯ ಬದಲಾವಣೆಯನ್ನು ತಾವೇ ಕಂಡುಕೊಳ್ಳುತ್ತಾರೆ. ಇದೀಗ ಚಂದನವನದ ಮುಗಳ್ನಗೆ ಚೆಲುವೆ ಹರ್ಷಿಕಾ ಪೂಣಚ್ಚ ಫೋಟೋಶೂಟ್ ಮಾಡಿಸಿಕೊಂಡಿದ್ದು, ನಟಿಯ ಚೆಂದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಹರ್ಷಿಕಾ ತಮ್ಮ ಹೊಸ ಫೋಟೋಗಳನ್ನು ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಹೊಸ ಸಿನಿಮಗಾನೇದರೂ ಹರ್ಷಿಕಾ ಫೋಟೋಶೂಟ್ ಮಾಡಿಸಿಕೊಂದ್ರಾ ಎಂಬುದನ್ನು ಸ್ಮೈಲಿಂಗ್ ಕ್ವೀನ್ ರಿವೀಲ್ ಮಾಡಿಲ್ಲ.

    https://www.instagram.com/p/B3W8q6in-_Y/

    https://www.instagram.com/p/B3gpATHHZaE/

  • ನಟಿ ಹರ್ಷಿಕಾ ಪೂಣಚ್ಚಗೆ ಪಿತೃ ವಿಯೋಗ

    ನಟಿ ಹರ್ಷಿಕಾ ಪೂಣಚ್ಚಗೆ ಪಿತೃ ವಿಯೋಗ

    ಮಡಿಕೇರಿ: ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಅವರ ತಂದೆ ಇಂದು ನಿಧನರಾಗಿದ್ದಾರೆ.

    68 ವರ್ಷದ ಉದ್ದಪಂಡ ಪೂಣಚ್ಚ ಅವರು ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ.

    ಉದ್ದಪಂಡ ಅವರ ಸಣ್ಣ ಕರುಳಿನಲ್ಲಿ ರಂದ್ರ ಬಿದ್ದಿತ್ತು. ಇದರಿಂದ ಅವರಿಗೆ ಊಟ ಮಾಡಲು ಸಾಧ್ಯವಾಗದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ತಿಂಗಳ ಹಿಂದೆಯಷ್ಟೇ ಸರ್ಜರಿ ಕೂಡ ಆಗಿತ್ತು. ಇದರಿಂದ ಸ್ವಲ್ಪಮಟ್ಟಿಗೆ ಸುಧಾರಿಸಿಕೊಳ್ಳುವ ಸಂದರ್ಭದಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ.

    ಕೊಡಗು ಜಿಲ್ಲೆಯಲ್ಲಿರುವ ಸ್ವಗ್ರಾಮ ಅಮ್ಮೇತೋಡುವಿನಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂಬುದಾಗಿ ಹರ್ಷಿಕಾ ಕುಟುಂಬಸ್ಥರು ತಿಳಿಸಿದ್ದಾರೆ.

     

    View this post on Instagram

     

    ನನ್ನ ಪುಟ್ಟ ಸಂಸಾರ ನಮ್ಮ ಕೊಡವ ಶೈಲಿಯ ಉಡುಪಿನಲ್ಲಿ ????

    A post shared by SmilingQueen Harshika Poonacha (@harshikapoonachaofficial) on

  • ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದಂಗಾಯ್ತು- ಸಚಿವರಿಗೆ ಹರ್ಷಿಕಾ ತಿರುಗೇಟು

    ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದಂಗಾಯ್ತು- ಸಚಿವರಿಗೆ ಹರ್ಷಿಕಾ ತಿರುಗೇಟು

    ಬೆಂಗಳೂರು: ಇದ್ದಿದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದಂಗಾಯ್ತು ಎಂಬುವುದು ನನ್ನ ಪರಿಸ್ಥತಿ. ನಾನು ಯಾರನ್ನು ದೋಷಿಸಿಲ್ಲ. ಕೊಡಗು ಸಂತ್ರಸ್ಥರಿಗೆ ಸರ್ಕಾರ ಚೆನ್ನಾಗಿರುವ ಮನೆ ನಿರ್ಮಿಸಿ ಕೊಡಲಿ ಎಂದು ಮನವಿ ಮಾಡಿದ್ದು ಎಂದು ಸಚಿವ ಸಾರಾ ಮಹೇಶ್‍ಗೆ ನಟಿ ಹರ್ಷಿಕಾ ಪೂಣಚ್ಚ ತಿರುಗೇಟು ನೀಡಿದ್ದಾರೆ.

    ವಿಡಿಯೋ ಮೂಲಕ ಶನಿವಾರ ತಾವು ಕೊಡಗು ಸಂಸ್ರಸ್ಥರ ಬಗ್ಗೆ ನೀಡಿದ ಹೇಳಿಕೆಗೆ ಹರ್ಷಿಕಾ ಪೂಣಚ್ಚ ಸ್ಪಷ್ಟನೆ ನೀಡಿದ್ದಾರೆ. ವಿಡಿಯೋದಲ್ಲಿ ಇದ್ದಿದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದಂಗಾಯ್ತು ನನ್ನ ಪರಿಸ್ಥತಿ. ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾನು ಹೇಳಿದ್ದು, ಕೆಲವು ಮಾಡೆಲ್ ಮನೆಗಳ ಫೋಟೋ ನೋಡದೆ. ಅದು ನನಗೆ ಇಷ್ಟವಾಗಿಲ್ಲ. ಯಾಕೆಂದರೆ ಆ ಮನೆಗಳು ಶೀಟ್ ಮನೆ ತರಹ, ಗಾಳಿ ಬೆಳಕಿಲ್ಲದಂತೆ ಕೆಟ್ಟದಾಗಿ ಇತ್ತು. ಹೀಗಾಗಿ ರಾಜ್ಯ ಸರ್ಕಾರ ಕೊಡಗು ಸಂತ್ರಸ್ಥರಿಗೆ ಮನೆ ಕಟ್ಟಿಕೊಡುವಾಗ ಚೆನ್ನಾಗಿರುವ ಮನೆ ಕಟ್ಟಿಕೊಡಿ. ಕೊಡಗಿನ ಸಂತ್ರಸ್ಥರ ಸ್ವಾಭಿಮಾನಕ್ಕೆ ದಕ್ಕೆ ಬರದಂತೆ ಒಳ್ಳೆಯ ಮನೆಗಳನ್ನ ಕಟ್ಟಿಕೊಡಿ ಎಂದು ನಾನು ಮನವಿ ಮಾಡಿದ್ದೇನೆ ಅಷ್ಟೆ. ನಾನು ಈ ವಿಷಯಕ್ಕೆ ಯಾರನ್ನೂ ದೂರಿಲ್ಲ ಎಂದು ಸ್ಪಷ್ಟಪಡಿಸಿದರು.

    ಈ ಬಗ್ಗೆ ಮಾತನಾಡಲು ಅವರು ಯಾರು? ಏನು ಓದಿದ್ದಾರೆ? ಎಂದು ಕೇಳಿದ್ದಾರೆ. ನಾನು ಇಂಜಿನಿಯರ್ ಬಿ.ಇ ಪದವಿ ಪಡೆದಿದ್ದೇನೆ. ನಾನು ಕೊಡಗಿನ ಮಗಳು, ಭಾರತದ ಪ್ರಜೆ ನನಗೆ ಈ ಬಗ್ಗೆ ಕೇಳುವ ಎಲ್ಲಾ ಹಕ್ಕಿದೆ. ನಮ್ಮ ದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಕೂಡ ಸಿನಿಮಾದವರು. ತಮಿಳುನಾಡಿನ ಸಾಕಷ್ಟು ಮಂತ್ರಿಗಳು ಸಿನಿಮಾದವರು. ಅಷ್ಟೇ ಅಲ್ಲದೆ ಸಿನಿಮಾದವರು ಏನು ಮಾಡಬಹುದು ಅನ್ನೋದು ಇತ್ತೀಚಿಗೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೊತ್ತಾಗಿದೆ. ದಯವಿಟ್ಟು ಸಿನಿಮಾದವರ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಸಚಿವ ಸಾರಾ ಮಹೇಶ್ ಅವರಿಗೆ ಮಾತಿನ ಚಾಟಿ ಬೀಸಿದ್ದಾರೆ.

    ಹಾಗೆಯೇ ಕೊಡಗಿನಲ್ಲಿ ತುರ್ತು ಚಿಕಿತ್ಸಾ ಆಸ್ಪತ್ರೆ ಮಾಡಿ ಎನ್ನುವುದು ನಮ್ಮ ಮನವಿ. ಕೊಡಗಿನಲ್ಲಿ 7 ಲಕ್ಷಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ. ಅಲ್ಲದೆ 35 ಲಕ್ಷಕ್ಕೂ ಅಧಿಕ ಮಂದಿ ಪ್ರವಾಸಿಗರು ಪ್ರತಿ ವರ್ಷ ಕೊಡಗಿಗೆ ಪ್ರವಾಸಕ್ಕೆ ಬರುತ್ತಾರೆ. ಇಷ್ಟೆಲ್ಲಾ ಜನಸಂಖ್ಯೆ ಇರುವ ಜಿಲ್ಲೆಯಲ್ಲಿ ಒಂದು ತುರ್ತು ಚಿಕಿತ್ಸಾ ಆಸ್ಪತ್ರೆ ಇಲ್ಲವೆಂದರೆ ಅದಕ್ಕಿಂತ ಬೇಸರದ ಸಂಗತಿ ಮತ್ತೊಂದಿಲ್ಲ. ಹೀಗಾಗಿ ಕೊಡಗಿಗೆ ತುರ್ತು ಚಿಕಿತ್ಸಾ ಆಸ್ಪತ್ರೆ ಬೇಕು ಎಂದು ನಾವು ಅಭಿಯಾನ ಮಾಡುತ್ತಿದ್ದೇವೆ. ಅದಕ್ಕೆ ನಿಮ್ಮ ಸಹಕಾರ ಬೇಕು. ಆಸ್ಪತ್ರೆ ನಿರ್ಮಾಣ ಮಾಡಿ ಎಂದು ಮನವಿ ಮಾಡುತ್ತಿದ್ದೇವೆ. ಅಲ್ಲದೆ ಮಳೆಗಾಲ ಆರಂಭವಾಗುವ ಮುನ್ನ ಕೊಡಗು ಜನರಿಗೆ ಮನೆ ನಿರ್ಮಿಸಿಕೊಡಿ, ಮಳೆ ಆರಂಭವಾದರೆ ಅವರಿಗೆ ಬೇರೆ ಕಡೆ ಶಿಫ್ಟ್ ಆಗಲು ಕಷ್ಟವಾಗುತ್ತೆ ಎಂದು ಮನವಿ ಮಾಡಿಕೊಂಡರು.

    ಸಾರಾ ಮಹೇಶ್ ಹೇಳಿದ್ದೇನು?
    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ ಮಹೇಶ್, ಯಾರವರು? ಹರ್ಷಿಕಾ ಪೂಣಚ್ಚ ಏನಾಗಿದ್ದಾರೆ?. ಅವರೇನು ಸಿನಿಮಾ ನಟಿನಾ? ಸಿನಿಮಾ ನಟಿ ಆದರೆ ಅವರು ಸಿನಿಮಾ ಬಗ್ಗೆ ಮಾತ್ರ ಮಾತನಾಡಬೇಕು. ಅದನ್ನು ಬಿಟ್ಟು ಕೊಡಗು ಸಂತ್ರಸ್ತರ ಮನೆಗಳ ಬಗ್ಗೆ ಹರ್ಷಿಕಾ ಪೂಣಚ್ಚ ಅವರಿಗೆ ಏನು ಗೊತ್ತು? ಅವರ ವಿದ್ಯಾಭ್ಯಾಸ ಹಿನ್ನೆಲೆ ಏನು?. ವಾಸ್ತವ ಅರ್ಥ ಮಾಡಿಕೊಳ್ಳದೆ ತಜ್ಞರಂತೆ ಮಾತನಾಡಬಾರದು ಎಂದು ಪೂಣಚ್ಚ ವಿರುದ್ಧ ಸಚಿವರು ಕಿಡಿಕಾರಿದ್ದರು.

    https://www.youtube.com/watch?v=XQf4MGyd18E

  • ಹರ್ಷಿಕಾ ಪೂಣಚ್ಚ ಸಿನಿಮಾ ಬಗ್ಗೆ ಮಾತ್ರ ಮಾತನಾಡಬೇಕು: ಸಾರಾ ಮಹೇಶ್

    ಹರ್ಷಿಕಾ ಪೂಣಚ್ಚ ಸಿನಿಮಾ ಬಗ್ಗೆ ಮಾತ್ರ ಮಾತನಾಡಬೇಕು: ಸಾರಾ ಮಹೇಶ್

    ಮೈಸೂರು: ಕೊಡಗು ಸಂತ್ರಸ್ತರ ಮನೆಗಳ ಗುಣಮಟ್ಟದ ಬಗ್ಗೆ ನಟಿ ಹರ್ಷಿಕಾ ಪೂಣಚ್ಚ ಆಕ್ಷೇಪ ವ್ಯಕ್ತಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ತಿರುಗೇಟು ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ ಮಹೇಶ್, ಯಾರವರು? ಹರ್ಷಿಕಾ ಪೂಣಚ್ಚ ಏನಾಗಿದ್ದಾರೆ?. ಅವರೇನು ಸಿನಿಮಾ ನಟಿನಾ? ಸಿನಿಮಾ ನಟಿ ಆದರೆ ಅವರು ಸಿನಿಮಾ ಬಗ್ಗೆ ಮಾತ್ರ ಮಾತನಾಡಬೇಕು. ಅದನ್ನು ಬಿಟ್ಟು ಕೊಡಗು ಸಂತ್ರಸ್ತರ ಮನೆಗಳ ಬಗ್ಗೆ ಹರ್ಷಿಕಾ ಪೂಣಚ್ಚ ಅವರಿಗೆ ಏನು ಗೊತ್ತು? ಅವರ ವಿದ್ಯಾಭ್ಯಾಸ ಹಿನ್ನೆಲೆ ಏನು?. ವಾಸ್ತವ ಅರ್ಥ ಮಾಡಿಕೊಳ್ಳದೆ ತಜ್ಞರಂತೆ ಮಾತನಾಡಬಾರದು ಎಂದು ಪೂಣಚ್ಚ ವಿರುದ್ಧ ಸಚಿವರು ಕಿಡಿಕಾರಿದ್ದಾರೆ.

    ಹರ್ಷಿಕಾ ಹೇಳಿದ್ದೇನು?:
    ಶನಿವಾರ ಮೈಸೂರಿನಲ್ಲಿ ಮಾತನಾಡಿದ್ದ ಸ್ಯಾಂಡಲ್‍ವುಡ್ ನಟಿ, ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ, ಕೊಡಗು ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ನಿರ್ಮಿಸುತ್ತಿರುವ ಮನೆಗಳು ಚೆನ್ನಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ನಾನು ಇತ್ತೀಚೆಗೆ ಕೊಡಗು ನೆರೆ ಸಂತ್ರಸ್ತರಿಗೆ ನಿರ್ಮಿಸುತ್ತಿರುವ ಮನೆಯ ಮಾದರಿಯನ್ನು ನೋಡಿದೆ. ಅದು ಚೆನ್ನಾಗಿಲ್ಲ. ಅವರಿಗೆ ಒಳ್ಳೆಯ ಮನೆ ನಿರ್ಮಿಸಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

    ಅಲ್ಲದೆ ಪ್ರವಾಹ ನೈಸರ್ಗಿಕವಾಗಿ ಸಂಭವಿಸಿದೆ. ಯಾರೋ ತಾವಾಗಿಯೇ ಮಾಡಿಕೊಂಡಿದ್ದಲ್ಲ. ಹೀಗಾಗಿ ನೆರೆ ಸಂತ್ರಸ್ತರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಘಟನೆಯ ಬಳಿಕ ರಾಜ್ಯ ಸರ್ಕಾರ ಶೀಘ್ರವೇ ಮನೆ ವಿತರಣೆ ಮಾಡುವುದಾಗಿ ಹೇಳಿತ್ತು. ಆದರೆ ಇದುವರೆಗೂ ಮನೆ ಹಂಚಿಕೆಯಾಗಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದರು.

  • ಕೊಡಗು ಸಂತ್ರಸ್ತರಿಗೆ ನಿರ್ಮಿಸುತ್ತಿರೋ ಮನೆಗಳು ಚೆನ್ನಾಗಿಲ್ಲ: ಹರ್ಷಿಕಾ ಪೂಣಚ್ಚ

    ಕೊಡಗು ಸಂತ್ರಸ್ತರಿಗೆ ನಿರ್ಮಿಸುತ್ತಿರೋ ಮನೆಗಳು ಚೆನ್ನಾಗಿಲ್ಲ: ಹರ್ಷಿಕಾ ಪೂಣಚ್ಚ

    ಕೊಡಗು: ಕೊಡಗು ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ನಿರ್ಮಿಸುತ್ತಿರುವ ಮನೆಗಳು ಚೆನ್ನಾಗಿಲ್ಲ ಎಂದು ಸ್ಯಾಂಡಲ್‍ವುಡ್‍ನಟಿ, ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಬೇಸರ ವ್ಯಕ್ತಪಡಿಸಿದ್ದಾರೆ.

    ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಇತ್ತೀಚೆಗೆ ಕೊಡಗು ನೆರೆ ಸಂತ್ರಸ್ತರಿಗೆ ನಿರ್ಮಿಸುತ್ತಿರುವ ಮನೆಯ ಮಾದರಿಯನ್ನು ನೋಡಿದೆ. ಅದು ಚೆನ್ನಾಗಿಲ್ಲ. ಅವರಿಗೆ ಒಳ್ಳೆಯ ಮನೆ ನಿರ್ಮಿಸಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

    ಪ್ರವಾಹ ನೈಸರ್ಗಿಕವಾಗಿ ಸಂಭವಿಸಿದೆ. ಯಾರೋ ತಾವಾಗಿಯೇ ಮಾಡಿಕೊಂಡಿದ್ದಲ್ಲ. ಹೀಗಾಗಿ ನೆರೆ ಸಂತ್ರಸ್ತರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಘಟನೆಯ ಬಳಿಕ ರಾಜ್ಯ ಸರ್ಕಾರ ಶೀಘ್ರವೇ ಮನೆ ವಿತರಣೆ ಮಾಡುವುದಾಗಿ ಹೇಳಿತ್ತು. ಆದರೆ ಇದುವರೆಗೂ ಮನೆ ಹಂಚಿಕೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಇದೇ ವೇಳೆ ಕೊಡಗಿಗೆ ಸುಸಜ್ಜಿತವಾದ ಒಂದು ಆಸ್ಪತ್ರೆ ಬೇಕು ಎಂದು ಕೊಡಗಿನ ಜನತೆ ಆರಂಭಿಸಿದ ಟ್ವಿಟ್ಟರ್ ಅಭಿಯಾನದ ಬಗ್ಗೆ ಮಾತನಾಡಿ, ಅಪಘಾತ ಅಥವಾ ತುರ್ತು ಸಂದರ್ಭವಿದ್ದರೆ ರೋಗಿಗಳನ್ನು ನಾವು 100-200 ಕಿ.ಮೀ. ಕರೆದುಕೊಂಡು ಹೋಗುವ ಪರಿಸ್ಥಿತಿ ಇದೆ. ಇತ್ತೀಚೆಗೆ ನನ್ನ ತಂದೆ ಕೂಡ ಅನಾರೋಗ್ಯಕ್ಕೀಡಾಗಿದ್ದರು. ಆ ಸಮಯದಲ್ಲಿ ನಮ್ಮ ಜಿಲ್ಲೆಯಲ್ಲಿ ಸರಿಯಾದ ಆಸ್ಪತ್ರೆ ಇಲ್ಲದ ಕಾರಣ ಅನಿವಾರ್ಯವಾಗಿ ನಾವು ಬೆಂಗಳೂರಿಗೆ ಕರೆದೊಯ್ಯಬೇಕಾಯಿತು. ಕೊಡಗು ಜಿಲ್ಲೆಯಲ್ಲೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾದರೆ ಜಿಲ್ಲೆಯ ಜನತೆಗೆ ತುಂಬಾ ಅನುಕೂಲವಾಗುತ್ತದೆ ಎಂದು ಹೇಳಿದರು.

    https://twitter.com/actressharshika/status/1139493122834964480

    ಶಿವಣ್ಣ ನಂತರ ಅಭಿಯಾನ ಬೆಂಬಲಿಸಿ ಟ್ವಿಟ್ಟರ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದೇನೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇನೆ ಮುಂದಿನ ದಿನದಲ್ಲಿ ನಮ್ಮ ಸರ್ಕಾರ ಯಾವ ರೀತಿಯಲ್ಲಿ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕು ಎಂದು ಹೇಳಿದರು.

  • ಸ್ಯಾಂಡಲ್‍ವುಡ್ ನಟಿ ಹರ್ಷಿಕಾ ಪೂಣಚ್ಚಗೆ ಕಿರುಕುಳ!

    ಸ್ಯಾಂಡಲ್‍ವುಡ್ ನಟಿ ಹರ್ಷಿಕಾ ಪೂಣಚ್ಚಗೆ ಕಿರುಕುಳ!

    ಮಡಿಕೇರಿ: ಸ್ಯಾಂಡಲ್‍ವುಡ್ ನಟಿ ಹರ್ಷಿಕಾ ಪೂಣಚ್ಚಗೆ ಸಂಬಂಧಿಕರ ನಿಶ್ಚಿತಾರ್ಥದಲ್ಲಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.

    ಮಡಿಕೇರಿಯ ನೀರುಕೊಲ್ಲಿ ಗ್ರಾಮದಲ್ಲಿನ ರೆಸಾರ್ಟ್ ನಲ್ಲಿ ಈ ಘಟನೆ ನಡೆದಿದ್ದು, ಬನ್ಸಿ ನಾಣಯ್ಯ ಮತ್ತು ಬಿಪಿನ್ ದೇವಯ್ಯ ಎಂಬವರು ಕಿರುಕುಳ ನೀಡಿದ್ದಾರೆ. ಗುರುವಾರ ರೆಸಾರ್ಟ್ ನಲ್ಲಿ ಸಂಬಂಧಿಕರ ನಿಶ್ಚಿತಾರ್ಥ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದಲ್ಲಿ ಹರ್ಷಿಕಾ ಜೊತೆ ಬನ್ಸಿ ನಾಣಯ್ಯ ಮತ್ತು ಬಿಪಿನ್ ದೇವಯ್ಯ ಅಸಭ್ಯವಾಗಿ ವರ್ತಿಸಿದ್ದರು.

    ನಂತರ ಹರ್ಷಿಕಾ ಪೂಣ್ಣಚ್ಚ ಮತ್ತು ನಟ ಭುವನ್ ಇಬ್ಬರು ಬನ್ಸಿ ನಾಣಯ್ಯ ಮತ್ತು ಬಿಪಿನ್ ದೇವಯ್ಯ ಇಬ್ಬರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇಬ್ಬರ ಮೇಲೆ ಐಪಿಸಿ ಸೆಕ್ಷನ್ 232, 242, 354 ಮತ್ತು 506 ಅಡಿಯಲ್ಲಿ ದೂರು ದಾಖಲಾಗಿತ್ತು.

    ಗ್ರಾಮಾಂತರ ಪೊಲೀಸರು ಇಂದು ಬನ್ಸಿ ನಾಣಯ್ಯನನ್ನು ಬಂಧಿಸಿದ್ದು, ಮಡಿಕೇರಿ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇತ್ತ ತಲೆಮರೆಸಿಕೊಂಡಿರುವ ಬಿಪಿನ್ ದೇವಯ್ಯನಿಗಾಗಿ ಪೊಲೀಸರು ಶೋಧಕಾರ್ಯ ಶುರು ಮಾಡಿದ್ದಾರೆ. ಗುರುವಾರ ರಾತ್ರಿ ನಡೆದ ಘಟನೆಯಲ್ಲಿ ಭುವನ್ ಗಾಯಗೊಂಡಿದ್ದರು. ಆದ್ದರಿಂದ ರಾತ್ರಿಯೇ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಭುವನ್ ಬೆಂಗಳೂರಿಗೆ ತೆರಳಿದ್ದಾರೆ. ಹರ್ಷಿಕಾ ಪೂಣಚ್ಚ ಕೂಡ ಭುವನ್ ಜೊತೆಯಲ್ಲೇ  ಬೆಂಗಳೂರಿಗೆ ಬಂದಿದ್ದಾರೆ.

  • ಮಧು ಅನುಮಾನಾಸ್ಪದ ಸಾವು – ಮೃತಳ ಕುಟುಂಬಕ್ಕೆ ನಟನಟಿಯರು ಸಾಂತ್ವನ

    ಮಧು ಅನುಮಾನಾಸ್ಪದ ಸಾವು – ಮೃತಳ ಕುಟುಂಬಕ್ಕೆ ನಟನಟಿಯರು ಸಾಂತ್ವನ

    ರಾಯಚೂರು: ನಗರದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಮಧು ಅನುಮಾನಾಸ್ಪದ ಸಾವು ಪ್ರಕರಣದ ಹಿನ್ನೆಲೆಯಲ್ಲಿ ಇಂದು ನಟ ಭುವನ್, ನಟಿ ಹರ್ಷಿಕಾ ಪೂಣಚ್ಚ ರಾಯಚೂರಿಗೆ ಭೇಟಿ ನೀಡಿ ಮಧು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

    ಈ ವೇಳೆ ಮಾತನಾಡಿದ ನಟ ಭುವನ್, “ಈ ಕೇಸಿನ ತನಿಖೆ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಕೇಸ್ ಮೊದಲು ಆತ್ಮಹತ್ಯೆ ಎಂದು ಪ್ರಕರಣ ದಾಖಲಾಗಿತ್ತು. ಬಳಿಕ ಇದು ರೇಪ್ ಹಾಗೂ ಮರ್ಡರ್ ಎಂದು ಹೇಳಲಾಗಿತ್ತು. ಈ ರೇಪ್ ಹಾಗೂ ಮರ್ಡರ್ ಕೇಸ್ ಸೂಸೈಡ್ ಆಗಬೇಕೆಂದೆರೆ ಇದರ ಹಿಂದೆ ತುಂಬಾ ಶಕ್ತಿಯಿರುವ ಜನರ ಕೈವಾಡವಿದೆ ಎನ್ನುವ ಶಂಕೆ ಎಲ್ಲರಲ್ಲೂ ಇದೆ” ಎಂದರು.

    ಇಡೀ ಕರ್ನಾಟಕಕ್ಕೆ ಇಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ತಿಳಿಯಬೇಕು. ಹೆಣ್ಣು ಮಗು ಹಾಗೂ ಆಕೆಯ ಅಪ್ಪ- ಅಮ್ಮನಿಗೆ ನ್ಯಾಯ ಸಿಗಬೇಕು. ಚುನಾವಣೆ ದೊಡ್ಡ ವಿಷಯ. ಇಡೀ ಭಾರತದ ವಿಷಯನೇ. ಆದರೆ ಅಪ್ಪ-ಅಮ್ಮ ತಮ್ಮ ಮಗಳನ್ನು ಕಳೆದುಕೊಂಡ ನೋವು ಯಾರಿಗೂ ಅರ್ಥವಾಗಲ್ಲ. ಹಾಗಾಗಿ ಇಡೀ ಕರ್ನಾಟಕಕ್ಕೆ ಈ ವಿಷಯ ಗೊತ್ತಾಗಿ ಆ ಹೆಣ್ಣು ಮಗುವಿನ ಆತ್ಮಕ್ಕೆ ಶಾಂತಿ ಸಿಗಬೇಕು ಎಂಬುದು ನನ್ನ ಆಶಯ. ಮಗಳ ಹುಟ್ಟುಹಬ್ಬದ ದಿನ ಮಗಳ ಚಿತೆಗೆ ಬೆಂಕಿ ಹಚ್ಚಬೇಕು ತುಂಬಾ ನೋವಾಗುತ್ತೆ ಎಂದು ಭುವನ್ ತಿಳಿಸಿದರು.

    ಇದೇ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಹರ್ಷಿಕಾ ಪೂಣಚ್ಚ, “ರಾಯಚೂರು ವಿದ್ಯಾರ್ಥಿಗಳಿಂದ ನನಗೆ ಈ ವಿಷಯ ತಿಳಿಯಿತು. ಸಾಮಾಜಿಕ ಜಾಲತಾಣದಲ್ಲಿ ನಾನು ಆಕ್ಟೀವ್ ಆಗಿರುತ್ತೇನೆ. ಎಲ್ಲರು ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ನಮ್ಮ ಜಿಲ್ಲೆಯ ಮಧು ಎನ್ನುವ ಯುವತಿಯ ಬರ್ಬರವಾಗಿ ಕೊಲೆ ಮಾಡಿದ್ದಾರೆ ನೋಡಿ ಎಂದು ಮೆಸೇಜ್ ಮಾಡಿ ಫೋಟೋ ಕಳುಹಿಸಿದ್ದರು. ನನಗೆ ಆ ಫೋಟೋ ನೋಡಿ ಶಾಕ್ ಆದೆ. ಈಗಲೂ ಆ ಫೋಟೋ ನೋಡಿದರೆ ನನಗೆ ಶಾಕ್ ಆಗುತ್ತದೆ” ಎಂದರು.

    ಕಾಲೇಜಿಗೆ ಹೋಗುವ ಚಿಕ್ಕ ಯುವತಿಯನ್ನು ಕೊಲೆ ಮಾಡಬೇಕೆಂದರೆ ಅವರಿಗೆ ಯಾವ ಮಟ್ಟದಲ್ಲಿ ದ್ವೇಷ ಇರಬಹುದು ಎಂದು ಊಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಕೆಲವೊಂದು ವಿಷಯಗಳು ಫೇಕ್ ಆಗಿರುತ್ತೆ. ನಾವು ತಕ್ಷಣ ನಂಬುವುದಕ್ಕೆ ಆಗಲ್ಲ. ಎಡಿಟ್ ಮಾಡಿರುವ ಫೋಟೋವೇ ಎಂದು ಪರಿಶೀಲಿಸಿದ್ದಾಗ ಕಾಲೇಜು ವಿದ್ಯಾರ್ಥಿಗಳು ನಿರಂತರವಾಗಿ ಮೆಸೇಜ್ ಮಾಡುತ್ತಿದ್ದರು. ಆಗ ಈ ವಿಷಯ ನಿಜ ಎಂದು ನನಗೆ ತಿಳಿಯಿತು ಎಂದರು.

    ನಾನು ವಿದ್ಯಾರ್ಥಿಗಳ ಹೋರಾಟದಲ್ಲಿ ಭಾಗಿಯಾಗುತ್ತಿದ್ದೇನೆ. ಇದು ಕೇವಲ ಮಧು ಪತ್ತಾರ್ ವಿಷಯ ಅಲ್ಲ. ಹೆಣ್ಣು ಮಕ್ಕಳ ಏನೂ ಶೋಷಣೆ ಆಗುತ್ತಿದೆ ಅದು ನಿಲ್ಲಬೇಕು. ಇನ್ಮೇಲೆ ಆ ರೀತಿ ರೇಪ್, ಕಿರುಕುಳ ಎಂದು ಯೋಚಿಸಿದರೆ ನಡುಕ ಹುಟ್ಟಬೇಕು. ಆ ಮಟ್ಟಕ್ಕೆ ಹೋರಾಟ ನಡೆಯಬೇಕು. ರಾಯಚೂರು ಶಾಂತಿಯುತ ಜಿಲ್ಲೆ. ಇಂತಹ ಜಾಗದಲ್ಲಿ ಈ ರೀತಿ ಆಗಿದೆ ಎಂದರೆ, ಎಂತಹ ಕ್ರೂರ ಮನೋಭಾವದವರು ಇದ್ದಾರೆ ಅಂದರೆ ಅವರನ್ನು ಅಲ್ಲಿಯೇ ನಾಶ ಮಾಡಬೇಕು. ಯಾರು ಅವರ ತರ ಬೆಳೆಯಬಾರದು ಎಂದರು.

    ರಾಯಚೂರು ಯುವಕ -ಯುವತಿಯರು ಈ ಅಭಿಯಾನವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡಿದ್ದಾರೆ. ಇಡೀ ಭಾರತದಲ್ಲಿ ರೇಪ್ ನಿಲ್ಲಬೇಕು. ಜಸ್ಟಿಸ್ ಫಾರ್ ಮಧು ಅಭಿಯಾನ ಆ ಮಟ್ಟಕ್ಕೆ ತಲುಪಬೇಕು. ನಾನು ಮಧು ಅವರ ಪೋಷಕರನ್ನು ಭೇಟಿ ಮಾಡಿ ಸಾಂತ್ವನ ಹೇಳುವುದಕ್ಕೆ ಬಂದಿದ್ದೇನೆ. ಇಲ್ಲಿ ವಿದ್ಯಾರ್ಥಿಗಳು ಮಾಡುತ್ತಿರುವ ಅಭಿಯಾನ ದೊಡ್ಡ ಮಟ್ಟಕ್ಕೆ ಹೋಗಬೇಕು ಹಾಗೂ ಮಧು ಆತ್ಮಕ್ಕೆ ಶಾಂತಿ ಸಿಗಬೇಕು ಎಂದು ನಟಿ ಹರ್ಷಿಕಾ ಪೂಣಚ್ಚ ತಿಳಿಸಿದರು.

    https://www.youtube.com/watch?v=vpkln0JPKkc

    https://www.youtube.com/watch?v=0S-0M2EM8pc

  • ಏಷ್ಯಾ ಜ್ಯೂವೆಲ್ಸ್ ಫೇರ್- ಕಣ್ಣು ಕುಕ್ಕುವ ಆಭರಣಗಳು

    ಏಷ್ಯಾ ಜ್ಯೂವೆಲ್ಸ್ ಫೇರ್- ಕಣ್ಣು ಕುಕ್ಕುವ ಆಭರಣಗಳು

    ಬೆಂಗಳೂರು: ಚಿನ್ನ ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಮಹಿಳೆಯರು ಆಭರಣ ಪ್ರಿಯರು. ಈಗ ಮದುವೆ ಸೀಜನ್ ಆರಂಭಗೊಂಡಿದ್ದು ಜ್ಯೂವೆಲರಿಗಳಿಗೆ ಸಖತ್ ಡಿಮ್ಯಾಂಡ್ ಬಂದಿದೆ. ಹೀಗಾಗಿ ನಗರದ ಖಾಸಗಿ ಹೋಟೆಲ್ ನಲ್ಲಿ ಏಷ್ಯಾ ಜ್ಯೂವೆಲ್ಸ್ ಫೇರ್-2019 ನಡೆದಿದ್ದು, ಇವತ್ತು ತೆರೆಬೀಳಲಿದೆ.

    ಕಲರ್ ಕಲರ್ ಸ್ಟೋನ್ಸ್ ನೆಕ್‍ಲೆಸ್, ಪುಟ್ಟ ಪುಟ್ಟ ಇಯರಿಂಗ್ಸ್ ಹಾಗೂ ರಿಂಗ್ಸ್ ಎಲ್ಲರನ್ನೂ ಆಕರ್ಷಿಸಿದ್ದವು. ಒಂದಕ್ಕಿಂತ ಒಂದು ಸೂಪರ್ ಆಗಿದ್ದು, ಡಿಸೈನ್ ನಂತೂ ಬೊಂಬಾಟ್ ಆಗಿವೆ. ಇವುಗಳನ್ನು ನೋಡುತ್ತಿದ್ದರೆ ಯಾವುದು ಖರೀದಿಸಬೇಕು? ಯಾವುದು ಬಿಡಬೇಕು ಅಂತಾ ಮಹಿಳೆಯರು ಕನ್ಪ್ಯೂಸ್ ಆಗೋದು ಗ್ಯಾರೆಂಟಿ. ಇಲ್ಲಿ ಭಾರತದ ಅತ್ಯುತ್ತಮ ಬ್ರಾಂಡೆಡ್ ಚಿನ್ನ ಹಾಗೂ ವಜ್ರಾಭರಣಗಳ ಪ್ರದರ್ಶನ ನಡೆದಿದ್ದು, ಅತಿಥಿಯಾಗಿದ್ದ ಆಗಮಿಸಿದ್ದ ನಟಿ ಹರ್ಷಿಕಾ ಪೂನಚ್ಚ ಆಭರಣಗಳನ್ನು ತೊಟ್ಟು ಮಿಂಚಿದರು.

    ಚಿನ್ನ, ವಜ್ರ, ಜಡಾ, ಪ್ಲಾಟಿನಂ ಹಾಗೂ ಬೆಳ್ಳಿಗಳ ವಿವಿಧ ಆಭರಣಗಳಿವೆ. ಸಖತ್ ಟ್ರೆಂಡಿ ಬಳೆಗಳು ಹಾಗೂ ಸೊಂಟದ ಪಟ್ಟಿಯನ್ನು ಜನರು ಮುಗಿಬಿದ್ದು ಕೊಳ್ಳುತ್ತಿದ್ದಾರೆ. ಡಿಫೆರೆಂಟ್ ಆದ ಹರಳಿ, ಕುಂದನ್, ಜಡೌ ಹಾಗೂ ಪೋಲ್ಕಿ ಆಭರಣಗಳಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಇವುಗಳನ್ನು ತೊಟ್ಟು ಹುಡುಗಿಯರಂತೂ ಮಿರ ಮಿರ ಮಿಂಚುತ್ತಿದ್ದಾರೆ. ಇವುಗಳನ್ನು ನೋಡಿದ್ರೆ ನೀವು ಫಿದಾ ಆಗುತ್ತೀರಿ. ಆದರೆ ಬೆಲೆ ಮಾತ್ರ ಸ್ವಲ್ಪ ಹೆಚ್ಚು. ಒಟ್ಟಿನಲ್ಲಿ ವೆಡ್ಡಿಂಗ್ ಸೀಜನ್ ಗೆ ಈ ಜ್ಯೂವೆಲ್ಸ್ ಹೊಸ ಲುಕ್ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಬ್ಲಿಸಿಟಿಗೆ ಮೀಟೂ ವೇದಿಕೆಯಾಗುತ್ತಿದೆ: ಹರ್ಷಿಕಾ ಪೂಣಚ್ಛ

    ಪಬ್ಲಿಸಿಟಿಗೆ ಮೀಟೂ ವೇದಿಕೆಯಾಗುತ್ತಿದೆ: ಹರ್ಷಿಕಾ ಪೂಣಚ್ಛ

    ಹುಬ್ಬಳ್ಳಿ: ಕಷ್ಟದಲ್ಲಿರುವ ಮಹಿಳೆಯರಿಗೆ ಸಹಾಯವಾಗಬೇಕಿದ್ದ ಮೀಟೂ ಅಭಿಯಾನವನ್ನು ಪಬ್ಲಿಸಿಟಿಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಸ್ಯಾಂಡಲ್‍ವುಡ್ ನಟಿ ಹರ್ಷಿಕಾ ಪೂಣಚ್ಛ ಬೇಸರ ವ್ಯಕ್ತಪಡಿಸಿದ್ದಾರೆ.

    ಖಾಸಗಿ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಮೀಟೂ ಅಭಿಯಾನ ಹೆಣ್ಣು ಮಕ್ಕಳ ಮೇಲಿನ ಶೋಷಣೆಯನ್ನು ಹೇಳಿಕೊಳ್ಳಲು ಉತ್ತಮ ವೇದಿಕೆಯಾಗಿದೆ. ಆದರೆ ಇಂದು ಅದನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಕಷ್ಟದಲ್ಲಿರುವ ಹೆಣ್ಣು ಮಕ್ಕಳಿಗೆ ಈ ಅಭಿಯಾನ ಉತ್ತಮವಾಗಿದೆ. ಆದರೆ ಸುಮ್ಮ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಚಿತ್ರರಂಗದಲ್ಲಿ ಕಷ್ಟ ಪಟ್ಟು 10-12 ವರ್ಷಗಳ ಕಾಲ ಹೆಸರನ್ನು ಗಳಿಸಿರುತ್ತಾರೆ. ಆದರೆ ಈ ಮೀಟೂ ಆರೋಪದ ಮೂಲಕ ಒಂದೇ ನಿಮಿಷದಲ್ಲಿ ಅವರ ಬದುಕನ್ನು ನಾಶಮಾಡುತ್ತಾರೆಂದು ಹೇಳಿದರು.

    ಅರ್ಜುನ್ ಸರ್ಜಾ ಮೇಲೆ ಹಾಗೂ ಶೃತಿ ಹರಿಹರನ್ ಮೀಟೂ ಆರೋಪ ಕುರಿತು ಪ್ರತಿಕ್ರಿಯಿಸಿ, ಅವರ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ. ನಾನು ಸತ್ಯದ ಪರವಾಗಿದ್ದೇನೆ. ಸತ್ಯ ಯಾವ ಕಡೆ ಇರುತ್ತದೆಯೋ, ನಾನು ಆ ಕಡೆ ಇರುತ್ತೇನೆ. ಅನ್ಯಾಯಕ್ಕೊಳಗಾದವರು ಪೊಲೀಸ್ ಠಾಣೆ, ಚಲನಚಿತ್ರ ವಾಣಿಜ್ಯ ಮಂಡಳಿ ಅಥವಾ ನ್ಯಾಯಾಲಯಕ್ಕೆ ಹೋಗಬೇಕು. ಇವೆಲ್ಲವನ್ನೂ ಬಿಟ್ಟು ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ. ಇದನ್ನು ನೋಡಿದರೇ, ಪ್ರಚಾರಕ್ಕಲ್ಲದೇ ಮತ್ತೇನು ಎಂದು ಪ್ರಶ್ನಿಸುವ ಮೂಲಕ ನಟಿ ಶೃತಿ ಹರಿಹರನ್‍ಗೆ ಪರೋಕ್ಷವಾಗಿ ಟಾಂಗ್ ನೀಡಿದರು.

    ನನಗೂ ಸಹ ಮೀಟೂ ಅನುಭವ ಆಗಿತ್ತು. ಹೀಗಾಗಿ ನಾನು ಬಾಲಿವುಡ್ ಸಿನೆಮಾದಿಂದ ಅರ್ಧಕ್ಕೆ ವಾಪಾಸ್ಸು ಬಂದೆ. ಚಿತ್ರವನ್ನು ನಿರ್ಮಾಣ ಮಾಡಿ, ಬಿಡುಗಡೆಯಾಗಿ ಎಲ್ಲಾ ಮುಗಿದ ನಂತರ ಹೀಗೆ ಆರೋಪ ಮಾಡುತ್ತಿರುವುದು ಸರಿಯಲ್ಲ. ಹಾಗೆನಾದರೂ ಆಗಿದ್ದರೇ, ಮೊದಲೇ ದೂರ ಉಳಿಯಬಹುದಿತ್ತು ಎಂದು ತಿಳಿಸಿದರು.

    ಈಗಲೇ ಮದುವೆ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ. ಇನ್ನು ಒಳ್ಳೆಯ ಸಿನೆಮಾಗಳನ್ನು ಮಾಡಬೇಕೆಂಬ ಆಸೆ ಇದೆ. ಮದುವೆಯಾಗುವಾಗ ಎಲ್ಲರಿಗೂ ತಿಳಿಸಿ ಮದುವೆಯಾಗುತ್ತೇನೆ. ಯಾರಿಗೋ ಹೆದರಿಕೊಂಡು ರಿಜಿಸ್ಟ್ರಾರ್ ಮದುವೆಯಾಗಲ್ಲ ಎಂದು ಹೇಳುವ ಮೂಲಕ ಮತ್ತೊಮ್ಮೆ ಶೃತಿ ಹರಿಹರನ್ ಕಾಲೆಳೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಚಿತ್ರರಂಗದ ಮೀಟೂ ಸತ್ಯ ಬಯಲು ಮಾಡಿದ್ದೇ ತಪ್ಪಾಯ್ತು!

    ಚಿತ್ರರಂಗದ ಮೀಟೂ ಸತ್ಯ ಬಯಲು ಮಾಡಿದ್ದೇ ತಪ್ಪಾಯ್ತು!

    ಬೆಂಗಳೂರು: ಮೀಟೂ ಅಭಿಯಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದ್ದ ನಟಿ ಹರ್ಷಿಕಾ ಪೂಣಚ್ಚ ಅವರಿಗೆ ಈಗ ಬೆದರಿಕೆ ಕರೆಗಳು ಬರಲು ಆರಂಭವಾಗಿದೆ.

    ಮೀಟೂ ಬೆಳವಣಿಗೆಯಲ್ಲಿ ಹರ್ಷಿಕಾ ಪೂಣಚ್ಚ ಅವರು ಮೀಟೂ ಆರೋಪ ಮಾಡಿದವರಿಗೆ ಖಡಕ್ ಆಗಿ ಉತ್ತರ ಕೊಟ್ಟಿದ್ದರು. ಆದ್ದರಿಂದ ಅವರಿಗೆ ವಾಟ್ಸಪ್ ಮೂಲಕ ಕಳೆದ 2 ದಿನಗಳಿಂದ ನಿರಂತರ ಬೆದರಿಕೆ ಕರೆಗಳನ್ನು ಮಾಡುತ್ತಿದ್ದು, ಜೊತೆಗೆ ಮೆಸೇಜ್ ಕೂಡ ಮಾಡುತ್ತಿದ್ದಾರೆ. ಇದನ್ನೂ ಓದಿ:ಚಿತ್ರರಂಗವನ್ನೇ ಬಿಟ್ಟು ಹೋಗಲಿ – ನಟಿ ಹರ್ಷಿಕಾ ಪೂಣಚ್ಚ ಖಡಕ್ ಮಾತು

    ಬಾಯಿ ಮುಚ್ಚಿಕೊಂಡು ಇರಿ ಎಂದು ವಾಟ್ಸಪ್ ಗೆ ಮೆಸೇಜ್ ಕಳುಹಿಸಿದ್ದಾರೆ. 555ನಿಂದ ಕೊನೆಗೊಳ್ಳುವ ಮೊಬೈಲ್ ನಂಬರ್ ನಿಂದ ಬೆದರಿಕೆ ಕರೆ ಬರುತ್ತಿದೆ ಎಂದು ಹೇಳಿದ್ದಾರೆ. ಆದರೆ ಹರ್ಷಿಕಾ ಪೂಣಚ್ಚಗೆ ಬೆದರಿಕೆ ಹಾಕುತ್ತಿರುವ ಆ ಖ್ಯಾತನಾಮರು ಯಾರು ಎನ್ನುವ ಪ್ರಶ್ನೆ ಮೂಡಿದೆ.

    ಹರ್ಷಿಕಾ ಪೂಣಚ್ಚ ಅವರು, ಕಳೆದ ಎರಡು ದಿನಗಳಿಂದ ಕೆಲವು ಹೆಸರಾಂತ ವ್ಯಕ್ತಿಗಳಿಂದ ನನಗೆ ಬೆದರಿಕೆ ಕರೆ ಹಾಗೂ ಮೆಸೆಜ್‍ಗಳು ಬರುತ್ತಿವೆ. ಕೆಲವರು ನನ್ನ ಬಾಯಿ ಮುಚ್ಚಿಸಲು ಹಣದ ಆಮಿಷವನ್ನು ಒಡ್ಡಿದರು. ಹೀಗೆ ಮುಂದುವರಿದಲ್ಲಿ ನಾನು ಪೊಲೀಸ್ ಕಂಪ್ಲೇಂಟ್ ಕೊಡಲು ಸಿದ್ಧಳಾಗಬೇಕಾಗುತ್ತದೆ. ಸತ್ಯವನ್ನು ಮುಚ್ಚುವ ಕೆಲಸ ಯಾರಿಂದಲೂ ಸಾಧ್ಯವಿಲ್ಲ. ಕೆಚ್ಚೆದೆಯ ಕನ್ನಡತಿಯಾದ ನಾನು ಸದಾ ಸತ್ಯದ ಪರ” ಎಂದು ಮೆಸೇಜ್ ಮಾಡಿದ್ದಾರೆ.

    https://twitter.com/actressharshika/status/1055764584018014208

    ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಹರ್ಷಿಕಾ ಪೂಣಚ್ಚ, ಚಿತ್ರರಂಗದಲ್ಲಿ ಹೆಸರು ಮಾಡಲು 15 ವರ್ಷ ಕಷ್ಟಪಡಬೇಕು. ಆದರೆ ಒಂದು ಕ್ಷಣದಲ್ಲಿ ಅವರ ಕಷ್ಟವನ್ನು ಹಾಳು ಮಾಡಬಾರದು. ಪ್ರಚಾರಕ್ಕಾಗಿ ಒಬ್ಬರ ಹೆಸರನ್ನ ಹಾಳು ಮಾಡಬಾರದು. ಒಂದೊಮ್ಮೆ ಅಂತಹ ಪರಿಸ್ಥಿತಿ ಎದುರಾದರೆ ಆ ಅವಕಾಶವನ್ನು ಬಿಟ್ಟು ಹೋಗುವುದೇ ಉತ್ತಮ ಎಂದು ತಿಳಿಸಿದ್ದರು.

    ಕಷ್ಟದಲ್ಲಿ ಇರುವ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಅಭಿಯಾನ ಮೀಟೂ. ಆದರೆ ಅದನ್ನು ಪ್ರಚಾರಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ನಿಜವಾಗಿ ತೊಂದರೆ ಅನುಭವಿಸಿದ ಹೆಣ್ಣು ಮಕ್ಕಳು ಅಭಿಯಾನದಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ. ನಾವು ಬೇಡ ಅಂದರೆ ಚಿತ್ರರಂಗದಲ್ಲಿ ಯಾರೂ ಬಲವಂತ ಮಾಡಲ್ಲ. ನಿಮಗೆ ತೊಂದರೆ ಆದರೆ ಚಿತ್ರರಂಗ ಬಿಟ್ಟು ಹೋಗಿ ಎಂದು ಹರ್ಷಿಕಾ ಪೂಣಚ್ಚ ಖಡಕ್ ಆಗಿ ಹೇಳಿಕೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=iCz49tD85ZI