Tag: Harshika Poonacha

  • ಆಗಸ್ಟ್‌ 24ಕ್ಕೆ ಹರ್ಷಿಕಾ-ಭುವನ್‌ ಕಲ್ಯಾಣ

    ಆಗಸ್ಟ್‌ 24ಕ್ಕೆ ಹರ್ಷಿಕಾ-ಭುವನ್‌ ಕಲ್ಯಾಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Breaking- ಆಗಸ್ಟ್ 24ಕ್ಕೆ ನಟಿ ಹರ್ಷಿಕಾ-ನಟ ಭುವನ್ ಮ್ಯಾರೇಜ್

    Breaking- ಆಗಸ್ಟ್ 24ಕ್ಕೆ ನಟಿ ಹರ್ಷಿಕಾ-ನಟ ಭುವನ್ ಮ್ಯಾರೇಜ್

    ಸ್ಯಾಂಡಲ್ ವುಡ್ (Sandalwood) ಜೋಡಿ ಹರ್ಷಿಕಾ ಪೂಣಚ್ಚ (Harshika Poonacha) ಮತ್ತು ಭುವನ್ ಪೊನ್ನಣ್ಣ (Bhuvan Ponnanna) ಕೊನೆಗೂ ಹಸೆಮಣೆ ಏರುತ್ತಿದ್ದಾರೆ. ತುಂಬಾ ವರ್ಷಗಳಿಂದ ಈ ಜೋಡಿ ಪ್ರೀತಿ ಪ್ರೇಮದ ಗೀತೆಗಳನ್ನು ಹಾಡಿಕೊಂಡಿದ್ದರು. ಮದುವೆ (Marriage) ವಿಚಾರವಾಗಿ ಇಬ್ಬರೂ ತಪ್ಪಿಸಿಕೊಳ್ಳುತ್ತಿದ್ದರು. ಇದೀಗ ಮದುವೆ ಆಮಂತ್ರಣ ನೀಡುವ ಮೂಲಕ ಸತಿಪತಿಯಾಗುತ್ತಿದ್ದಾರೆ.

    ಮೊನ್ನೆಯಷ್ಟೇ ಕೊಡಗಿನ (Kodagu) ಇಗ್ಗುತ್ತಪ್ಪ ದೇವಾಲಯದಲ್ಲಿ ಲಗ್ನಪತ್ರಿಕೆ ಕಾರ್ಯ ಸರಳವಾಗಿ ನಡೆದಿದೆ. ಎರಡೂ ಕುಟುಂಬದ ಸದಸ್ಯರು ಮತ್ತು ಆತ್ಮೀಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮದುವೆಯಲ್ಲಿ ಈ ಜೋಡಿಯ ಆತ್ಮೀಯರು, ಸಿನಿಮಾ ರಂಗದ ಗಣ್ಯರು ಭಾಗಿಯಾಗಲಿದ್ದಾರೆ.  ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ 30 ಸೆಕೆಂಡ್ ಲಿಪ್ ಲಾಕ್: ಕಣ್ಮುಚ್ಚಿಕೊಂಡ ಪೂಜಾ ಭಟ್

     

    ಮದುವೆ ಆಮಂತ್ರಣ ಪತ್ರಿಕೆ ಕೂಡ ಸಿದ್ಧವಾಗಿದ್ದು, ಕೊಡಗು ಭಾಷೆಯಲ್ಲೇ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗಿದೆ. ಕೊಡಗು ಸಂಪ್ರದಾಯದಂತೆಯೇ ಇಬ್ಬರೂ ಮದುವೆ ಆಗುತ್ತಿದ್ದು, ಮುಹೂರ್ತ ಕಾರ್ಯಗಳು ಬಹುತೇಕವಾಗಿ ಕೊಡಗಿನಲ್ಲೇ ನಡೆಯಲಿವೆ. ಭುವನ್ ಮತ್ತು ಹರ್ಷಿಕಾ ಇಬ್ಬರೂ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಒಟ್ಟಿಗೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರತಾಪ್ ಸಿಂಹ ನಟನೆಯ ‘ಸ್ಥಬ್ಧ’ ಚಿತ್ರದ ಟ್ರೈಲರ್ ರಿಲೀಸ್

    ಪ್ರತಾಪ್ ಸಿಂಹ ನಟನೆಯ ‘ಸ್ಥಬ್ಧ’ ಚಿತ್ರದ ಟ್ರೈಲರ್ ರಿಲೀಸ್

    ಸಾಯಿಸಾಗರ್ ಫಿಲ್ಮ್ ಫ್ಯಾಕ್ಟರಿ ಲಾಂಛನದಲ್ಲಿ ವಿದ್ಯಾಸಾಗರ್ ಅವರು ನಿರ್ಮಿಸಿರುವ, ಲಾಲಿ ರಾಘವ ನಿರ್ದೇಶನದಲ್ಲಿ ಪ್ರತಾಪ್ ಸಿಂಹ ನಾಯಕರಾಗಿ ನಟಿಸಿರುವ ‘ಸ್ಥಬ್ಧ’ (Stabdha) ಚಿತ್ರದ ಟ್ರೈಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ರಾಘವೇಂದ್ರ ರಾಜಕುಮಾರ್ (Raghavendra Rajkumar) ಸೇರಿದಂತೆ ಅನೇಕ ಗಣ್ಯರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು‌.

    ಪ್ರತಾಪ್ ಸಿಂಹ (Pratap Simha) ನಾಯಕರಾಗಿ ನಟಿಸಿರುವ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಚೆನ್ನಾಗಿದೆ. ನಾನು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ರಾಘವೇಂದ್ರ ರಾಜಕುಮಾರ್ ಹಾರೈಸಿದರು. ಇದನ್ನೂ ಓದಿ:ಮುದ್ದು ಮಗಳ ಜೊತೆಗಿನ ಚೆಂದದ ವೀಡಿಯೋ ಹಂಚಿಕೊಂಡ ಧ್ರುವ ಸರ್ಜಾ

    ಸ್ಥಬ್ಧ ಇದೊಂದು ಭ್ರಮೆಯ ಸುತ್ತ ನಡೆಯುವ ಕಥೆ. ಹಾರಾರ್, ಸಸ್ಪೆನ್ಸ್ ಥ್ರಿಲ್ಲರ್ ಎನ್ನಬಹುದು. ನಲವತ್ತೈದು ‌ದಿನಗಳ ಕಾಲ ಬೆಂಗಳೂರು, ಮಂಗಳೂರು, ಉಡುಪಿಯಲ್ಲಿ ಚಿತ್ರೀಕರಣ ‌ನಡೆದಿದೆ. ಹರ್ಷಿಕಾ ಪೂಣಚ್ಛ, ರಾಘವೇಂದ್ರ ರಾಜಕುಮಾರ್, ಪ್ರಿಯಾಂಕ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ಲಾಲಿ ರಾಘವ ಸೇರಿದಂತೆ ಎಲ್ಲಾ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ. ನಿರ್ಮಾಪಕರಿಗೆ ಧನ್ಯವಾದ ಎಂದರು ನಾಯಕ ಪ್ರತಾಪ್ ಸಿಂಹ.

    ನಿರ್ಮಾಪಕ ವಿದ್ಯಾ ಸಾಗರ್ ನಮ್ಮಣ್ಣನ ಸ್ನೇಹಿತರು. ಚಿತ್ರದ ಕಥೆ ಕೇಳಿದ ಅವರು, ನಿರ್ಮಾಣಕ್ಕೆ ಮುಂದಾದರು. ನಮ್ಮ ತಂಡದ ಸಹಕಾರದಿಂದ ಚಿತ್ರ ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಎಲ್ಲರಿಗೂ ಧನ್ಯವಾದ ಎಂದರು ನಿರ್ದೇಶಕ ಲಾಲಿ ರಾಘವ. ಒಂದೊಳ್ಳೆ ಚಿತ್ರ ನಿರ್ಮಾಣ ಮಾಡಿರುವ ಖುಷಿಯಿದೆ ಎಂದು ನಿರ್ಮಾಪಕ ವಿದ್ಯಾಸಾಗರ್ ತಿಳಿಸಿದರು. ತಮ್ಮ ಪಾತ್ರದ ಬಗ್ಗೆ ನಾಯಕಿ ಹರ್ಷಿಕಾ ಪೂಣಚ್ಛ (Harshika Poonacha) ಮಾಹಿತಿ ನೀಡಿದರು. ನಟ ಭಜರಂಗಿ ಪ್ರಸನ್ನ,  ಸಂಗೀತ ನಿರ್ದೇಶಕ ಆರವ್ ರಿಷಿಕ್, ಛಾಯಾಗ್ರಹಕ ಪಿ.ವಿ.ಆರ್ ಸ್ವಾಮಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

  • ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ತಾರಾ ಮೆರುಗು

    ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ತಾರಾ ಮೆರುಗು

    ಗದಗ: ಬಿಜೆಪಿ (BJP) ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಪರ ಚುನಾವಣಾ (Election) ಪ್ರಚಾರಕ್ಕೆ ತಾರಾ ಮೆರುಗು ಸಿಕ್ಕಿದೆ.

    ಸ್ಯಾಂಡಲ್‍ವುಡ್‍ನ ಖ್ಯಾತ ನಟ ಭುವನ್ ಹಾಗೂ ಬಹುಭಾಷಾ ನಟಿ ಹರ್ಷಿಕಾ ಪೂಣಚ್ಚಾ (Harshika Poonacha) ಗದಗ (Gadag) ಹಾಗೂ ಬೆಟಗೇರಿ ಅವಳಿ ನಗರದ ಅನೇಕ ವಾರ್ಡ್‍ಗಳಲ್ಲಿ ಭಾನುವಾರ ಸಂಚರಿಸಿ ಅನಿಲ್ ಪರ ಪ್ರಚಾರ ಮಾಡಿದ್ದಾರೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಬಿಸಿಲಿನ ಬೇಗೆಯನ್ನು ಲೆಕ್ಕಿಸದೆ ನಟ ನಟಿಯರಿಬ್ಬರೂ ಮತದಾರರ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಲ್ಲೇ ಕುಳಿತು ಪ್ರಚಾರದ ರೂಟ್ ಮ್ಯಾಪ್ ಸಿದ್ಧಪಡಿಸಿದ ಹೆಚ್‌ಡಿಕೆ

    ಈ ವೇಳೆ ಹರ್ಷಿಕಾ ಪೂಣಚ್ಚಾ ಮಾತನಾಡಿ, ನನಗೆ ಮತ್ತು ಅನಿಲ್ ಮೆಣಸಿನಕಾಯಿ ಅವರಿಗೆ ಬಹಳ ವರ್ಷಗಳಿಂದ ಪರಿಚಯವಿದೆ. ಅವರು ಉತ್ತಮ ಅಭ್ಯರ್ಥಿಯಾಗಿದ್ದು, ಸ್ವ-ಇಚ್ಛೆಯಿಂದ ಅವರ ಪರ ಪ್ರಚಾರಕ್ಕೆ ಬಂದಿದ್ದೇನೆ. ಅವರಿಗೆ ಗದಗದ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿ ಇದೆ. ಆದರೆ ದುರದೃಷ್ಟವಶಾತ್ ಕಳೆದ ಬಾರಿ ಕಡಿಮೆ ಅಂತರದಿಂದ ಸೋತಿದ್ದರು. ಈಗಿನ ಕಾಂಗ್ರೆಸ್ ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ವಸತಿ ರಹಿತರಿಗೆ ಮನೆ ಹಂಚಿಕೆ ಮಾಡಿಲ್ಲ. ಸರಿಯಾಗಿ ಕುಡಿಯುವ ನೀರು ಸಿಗುತ್ತಿಲ್ಲ. ಚರಂಡಿ ವ್ಯವಸ್ಥೆ ಸರಿ ಇಲ್ಲ. ಅಲ್ಲದೆ ಗದಗ ಹಾಗೂ ಬೆಟಗೇರಿಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಇವು ದೂರವಾಗಬೇಕಾದರೆ ಈ ಬಾರಿ ಅನಿಲ್ ಅವರನ್ನು ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.

    ಯುವಕರಿಗೆ ಉದ್ಯೋಗ, ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಬೇಕು ಎಂಬ ಹಂಬಲವಿದ್ದರೆ ಈ ಬಾರಿ ಗದಗದಲ್ಲಿ ಅನಿಲ ಮೆಣಸಿನಕಾಯಿ ಅವರನ್ನು ಗೆಲ್ಲಿಸಲೇಬೇಕೆಂದು ಮನವಿ ಮಾಡಿಕೊಂಡರು. ಈ ವೇಳೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಹಾಜರಿದ್ದರು.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ನಾಮಪತ್ರ ಸಲ್ಲಿಕೆ ದಿನ ನಟ ಕಿಚ್ಚ ಸುದೀಪ್ (Sudeep), ಸಿಎಂ ಜೊತೆ ರೋಡ್ ಶೋನಲ್ಲಿ ಭಾಗಿಯಾಗಿದ್ದರು. ಶಿಗ್ಗಾಂವಿ ಕ್ಷೇತ್ರದ ಜನರ ಸಹಕಾರದೊಂದಿಗೆ ಬೊಮ್ಮಾಯಿಯವರನ್ನು ಗೆಲ್ಲಿಸುತ್ತೇನೆ ಎಂದಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ ಮೇಲಿನ ಆರೋಪ ಇಡೀ ಕುರುಬ ಸಮಾಜಕ್ಕೆ ಮಾಡ್ತಿರೋ ಅವಮಾನವಲ್ಲವೇ – ಕಾಂಗ್ರೆಸ್‌ ಪ್ರಶ್ನೆ

  • ‘ಕಾಸಿನಸರ’ ಸಿನಿಮಾದ ಆಡಿಯೋ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

    ‘ಕಾಸಿನಸರ’ ಸಿನಿಮಾದ ಆಡಿಯೋ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

    ದಭಿರುಚಿಯ ಚಿತ್ರಗಳ ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಅವರ ನಿರ್ದೇಶನ ಸಾರಥ್ಯದಲ್ಲಿ  ನಟ  ವಿಜಯ ರಾಘವೇಂದ್ರ ಒಬ್ಬ ಪ್ರಗತಿಪರ ರೈತನಾಗಿ ಕಾಣಿಸಿಕೊಂಡಿರುವ ಚಿತ್ರ ಕಾಸಿನಸರ. ಈ  ಚಿತ್ರದ ಆಡಿಯೋ, ಟ್ದೈಲರ್ ಬಿಡುಗಡೆ ಸಮಾರಂಭ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಿತು, ಸಿಎಂ. ಬಸವರಾಜ ಬೊಮ್ಮಾಯಿ ಅವರು ಚಿತ್ರದ ಹಾಡುಗಳ ಸಿಡಿ ಬಿಡುಗಡೆ ಮಾಡಿ ಶುಭ ಹಾರೈಸಿದರು. ನಂತರ ಸುರೇಶ್ ಹೆಬ್ಳೀಕರ ಅನಸೂಯಮ್ಮ, ಬಸವರಾಜ್ ಸೇರಿ ಐವರು  ಕೃಷಿ ಸಾಧಕರಿಗೆ ಸನ್ಮಾನಿಸಲಾಯಿತು.

    ವೇದಿಕೆಯಲ್ಲಿ ಸಿಎಂ ಮಾತನಾಡುತ್ತ ಹಳ್ಳಿಯ ಬದುಕು ಬಹಳ ಸೊಗಸಾದ್ದು, ಪ್ರತಿಯೊಬ್ಬರೂ ಸುಖ ದುಃಖಗಳಲ್ಲಿ ಭಾಗಿಯಾಗುತ್ತಾರೆ. ಈ ಥರದ ಜೀವನ ನಮ್ಮ ದೇಶದಲ್ಲಿ ಬಿಟ್ಟು ಬೇರೆಲ್ಲೂ ಇಲ್ಲ. ಮೌಲ್ಯಗಳಿಗೆ ಒಂದು ಬೆಲೆಯಿದೆ. ಕೃಷಿಕಾಯಕ ಬಹಳ ಪವಿತ್ರವಾದುದು. ಗುಡ್ಡಗಾಡಿನ ಜನ ಪರಿಶ್ರಮವಂತರು. ಕರಾವಳಿಯ ಜನರ ಬದುಕು ಅನಿಶ್ಚಿತ. ಆದರೆ ಬಯಲುಸೀಮೆಯ ಜನ ಭರವಸೆಯಲ್ಲಿ ಬದುಕುತ್ತಾರೆ. ಅನಿಶ್ಚಿತತೆಯ ಮಧ್ಯೆ ಭರವಸೆ, ಇದು ಭೂಮಿತಾಯ ಬಳುವಳಿ. ಒಂದು ಕಾಳು ಹಾಕಿದರೆ ನೂರಾರು ಕಾಳು ವಾಪಸ್  ಬರುತ್ತದೆ. ನಮಗೆ ಸ್ವತಂತ್ರ ಬಂದಾಗ ಜನಸಂಖ್ಯೆ 33 ಕೋಟಿ ಇತ್ತು. ಈಗ 133 ಕೋಟಿ ಆಗಿದೆ. ಅದು ಸಾವಯುವ ಕೃಷಿ ಇರಬಹುದು, ನೈಸರ್ಗಿಕ ಕೃಷಿ ಇರಬಹುದು, ಹೆಚ್ಚು ಆಹಾರ ಉತ್ಪಾದನೆ ಮಾಡಬೇಕಿದೆ. ಕಾಸಿನಸರ ಚಿತ್ರದಲ್ಲಿ ಈ ಪ್ರಯತ್ನ ನಡೆದಿದೆ ಎಂದುಕೊಂಡಿದ್ದೇನೆ. ಎಲ್ಲರೂ ಈ ಚಿತ್ರವನ್ನು  ನೋಡಬೇಕು, ಅದರ ಮೌಲ್ಯ ಅರಿತುಕೊಳ್ಳಬೇಕು. ನಾನು ನಿರ್ಮಾಪಕ, ನಟನಲ್ಲ, ನಟನೆ ನನಗೆ ಬರಲ್ಲ, ಸಹಜ ಬದುಕು ನನ್ನದು, ಗೌಡರು ಸೂಕ್ಷ್ಮ ವಿಚಾರಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಅಕ್ಷಯ್ ಕುಮಾರ್ ಜೊತೆಗಿನ ನಿಶ್ಚಿತಾರ್ಥ ಮುರಿದ ಬಗ್ಗೆ ಅಸಲಿ ಕಾರಣ ತಿಳಿಸಿದ `ಕೆಜಿಎಫ್ 2′ ನಟಿ

    ಚಿತ್ರದಲ್ಲಿ ಒಂದು ಪಾತ್ರವನ್ನೂ ನಿರ್ವಹಿಸಿರುವ ಸಚಿವ ಸೋಮಶೇಖರ್ ಮಾತನಾಡುತ್ತ, ಗ್ರಾಮೀಣ  ಸೊಗಡಿನಲ್ಲಿ  ನಡೆಯುವ ಕೌಟುಂಬಿಕ ಕಥಾಹಂದರ  ಈ ಚಿತ್ರದಲ್ಲಿದೆ.  ನನ್ನ ಸ್ನೇಹಿತ ದೊಡ್ಡನಾಗಯ್ಯ ಅವರಿಗೆ ಕೃಷಿ ಎಂದರೆ ತುಂಬಾ ಅಚ್ಚುಮೆಚ್ಚು. ಗ್ರಾಮೀಣ ಭಾಗದಿಂದಲೇ ಬಂದ ಅವರು ಅನೇಕ  ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.  ಈಗ ಚಿತ್ರನಿರ್ಮಾಣವನ್ನೂ ಮಾಡಿದ್ದಾರೆ ಎಂದು ಹೇಳಿದರು.

    ನಾಯಕ ವಿಜಯ ವಿಜಯ್ ರಾಘವೇಂದ್ರ ಮಾತನಾಡಿ, ಒಬ್ಬ ನಟನಿಗೆ ಎಲ್ಲಾ ಥರದ ಪಾತ್ರಗಳನ್ನು ಮಾಡುವ ಅವಕಾಶ ಸಿಗುತ್ತದೆ. ಆದರೆ ಒಬ್ಬ ರೈತನ ಪಾತ್ರ ಸಿಗುವುದು ಅಪರೂಪ, ಗೌಡರು ಈ ಸಿನಿಮಾದ ಕಥೆ, ಟೈಟಲ್  ಹೇಳಿದಾಗ ತುಂಬಾ  ಖುಷಿಯಾಯ್ತು. ಕಾಸಿನಸರ ತುಂಬಾ ತೂಕವಾದ ಹೆಸರು, ಅದರ ಹಿಂದೆ ದೊಡ್ಡ ಶ್ರಮವಿದೆ. ಇಲ್ಲಿ ಕಾಸಿನಸರ ಎನ್ನುವುದು ಬರೀ ಒಡವೆಯಲ್ಲ. ಅದಕ್ಕೊಂದು ಒಳಾರ್ಥವಿದೆ.  ಶ್ರೀಧರ್ ಸಂಭ್ರಮ್  ಅವರು ಭರಣಿಯ ಮಳೆ ಎಂಬ ಅದ್ಭುತವಾಗಿ ಮಾಡಿದ್ದಾರೆ. ವೇಣು ಚಿತ್ರವನ್ನು ಅಷ್ಟೇ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಚಿತ್ರದಲ್ಲಿ ಸುಂದರೇಶ ಎಂಬ  ವ್ಯವಸಾಯದ ಮೇಲೆ ಭರವಸೆ ಇಟ್ಟಿರುವ ರೈತ ಹೋರಾಟಗಾರನಾಗಿ ನಟಿಸಿದ್ದೇನೆ ಎಂದರು.

    ನಾಯಕಿ ಹರ್ಷಿಕಾ ಪೂಣಚ್ಛ ಮಾತನಾಡಿ, ಈ ಚಿತ್ರದಲ್ಲಿ ನಾನು ಕೃಷಿ ವಿದ್ಯಾರ್ಥಿನಿ  ಸಂಪಿಗೆಯ ಪಾತ್ರ ಮಾಡಿದ್ದೇನೆ. ಈಗಿನ ಹುಡುಗಿಯರು ಓದುಮುಗಿಸಿ ಐಟಿ ಕಂಪನಿಗಳಲ್ಲಿ, ವಿದೇಶಗಳಲ್ಲಿ ಕೆಲಸ ಹುಡುಕುತ್ತಾರೆ,  ಆದರೆ ನಾನು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಅಭಿನಯಕ್ಕೆ ಸಾಕಷ್ಟು ಪ್ರಾಮುಖ್ಯತೆ ಇರೋ ಪಾತ್ರ  ಎಂದರು. ಸಚಿವೆ, ನಟಿ ತಾರಾ ಮಾತನಾಡಿ ನಾನು ಹಿಂದೆ ಹೆಬ್ಬೆಟ್ ರಾಮಕ್ಕದಲ್ಲಿ ಉಳುಮೆಯನ್ನೂ ಮಾಡಿದ್ದೇನೆ. ರಾಜ್ಯವನ್ನೂ ಆಳಿದ್ದೇನೆ. ಈ ಸಿನಿಮಾದಲ್ಲಿ ನಾನೂ ಅಭಿನಯಿಸಬೇಕಿತ್ತು, ಒತ್ತಡದಿಂದ ಆಗಲಿಲ್ಲ, ದೊಡ್ಡನಾಗಯ್ಯ ನಮ್ಮ ಮಣ್ಣಿನ ಕಥೆಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ ಎಂದರು.

    ನಿರ್ದೇಶಕ ನಂಜುಂಡೇಗೌಡ ಮಾತನಾಡಿ, ‘ಇಲ್ಲಿ ಕಾಸಿನ ಸರಕ್ಕೆ  ಅದರದೇ ಮೌಲ್ಯ,  ಪರಂಪರೆ, ಸಂಪ್ರದಾಯವಿದೆ. ಅದೇ ರೀತಿ ಕೃಷಿಗೂ ತನ್ನದೇ ಆದ ಪರಂಪರೆ ಸಂಪ್ರದಾಯವಿದೆ. ಅದನ್ನು  ಇಲ್ಲಿ ಕೃಷಿಭೂಮಿಗೆ ಹೋಲಿಸಿದ್ದೇನೆ ಎಂದರು. ನಿರ್ಮಾಪಕರಾದ ದೊಡ್ಡನಾಗಯ್ಯ ಮಾತನಾಡಿ, ನಾನೂ ಒಬ್ಬ ರೈತ, ಇಂದಿನ ದಿನಗಳಲ್ಲಿ ಕೌಟುಂಬಿಕ ಸಂಬಂಧಗಳು ದೂರವಾಗುತ್ತಿವೆ. ನಮ್ಮ ಸಂಸ್ಕೃತಿ ಮರೆಯಾಗುತ್ತಿದೆ. ಜನ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ಇವುಗಳ ಮಹತ್ವವನ್ನು ಸಾರುವ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರವನ್ನು  ಮಾಡಿದ್ದೇವೆ ಎಂದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವೈರಲ್‌ ಆಯ್ತು ಹರ್ಷಿಕಾ ನಟನೆಯ `ತಾಯ್ತ’ ಚಿತ್ರದ ಲುಕ್

    ವೈರಲ್‌ ಆಯ್ತು ಹರ್ಷಿಕಾ ನಟನೆಯ `ತಾಯ್ತ’ ಚಿತ್ರದ ಲುಕ್

    ಸ್ಯಾಂಡಲ್‌ವುಡ್ ಚಿಟ್ಟೆ ಹರ್ಷಿಕಾ ಪೂಣಚ್ಚ ಸದ್ಯದ ಕನ್ನಡದ ಬ್ಯುಸಿ ನಟಿ. ಬಹುಭಾಷಾ ಚಿತ್ರಗಳಲ್ಲಿ ಮಿಂಚ್ತಿರೋ ಪ್ರತಿಭೆ, ಇದೀಗ `ತಾಯ್ತ’ ಚಿತ್ರದ ಮೂಲಕ ಗಾಂಧಿನಗರದಲ್ಲಿ ಸೌಂಡ್ ಮಾಡ್ತಿದ್ದಾರೆ. ಈ ಸಿನಿಮಾ ಚಿತ್ರೀಕರಣದ ಫೋಟೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

     

    View this post on Instagram

     

    A post shared by Layakokila Laya (@layakokila)

    ಕನ್ನಡ ಸಿನಿಮಾಗಳ ಜೊತೆಗೆ ಪರಭಾಷಾ ಚಿತ್ರಗಳಲ್ಲಿ ಆಕ್ಟೀವ್ ಆಗಿರೋ ನಟಿ ಹರ್ಷಿಕಾ, ಇತ್ತೀಚೆಗೆ ಬೋಜಪುರಿ ಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ರು. ಈಗ ಕನ್ನಡದ `ತಾಯ್ತ’ ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ವಿಭಿನ್ನ ಪಾತ್ರದ ಮೂಲಕ ರಂಜಿಸಲು ಸಜ್ಜಾಗಿದ್ದಾರೆ.

    ಕನ್ನಡದ ಜನಪ್ರಿಯ ಹಾಸ್ಯನಟ ಸಾಧುಕೋಕಿಲ ಅವರ ಸಹೋದರ ಲಯಕೋಕಿಲ ನಿರ್ದೇಶನದಲ್ಲಿ `ತಾಯ್ತ’ ಚಿತ್ರ ಮೂಡಿ ಬಂದಿದೆ. ಪವರ್‌ಫುಲ್ ಪಾತ್ರದ ಜೊತೆ ಡಿಫರೆಂಟ್ ಶೇಡ್‌ನಲ್ಲಿ ಹರ್ಷಿಕಾ ಕಾಣಸಿಕೊಂಡಿದ್ದಾರೆ. ಸದ್ಯ ಸಿನಿಮಾದ ಹಾಡಿನ ಚಿತ್ರೀಕರಣದ ಫೋಟೋ ಶೇರ್ ಮಾಡಿದ್ದು ಸದ್ಯ ಈ ಫೋಟೋ ವೈರಲ್ ಆಗ್ತಿದೆ. ಚಿಕ್ಕಮಗಳೂರಿನ ಸುಂದರ ತಾಣಗಳಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಇದನ್ನು ಓದಿ:ಮೋಸ್ಟ್ ಬ್ಯಾಚುಲರ್ ಹುಡುಗಿ ನಿಧಿ ಅಗರ್ವಾಲ್ ಕಾಂಡೋಮ್ ಕಂಟಕ

    ಶಾಹಿದ್ ನಿರ್ಮಾಣದಲ್ಲಿ ಮೂಡಿ ಬಂದಿರೋ `ತಾಯ್ತ’ ಚಿತ್ರದಲ್ಲಿ ನವ ನಟ ರಿಹಾನ್‌ಗೆ ಜೋಡಿಯಾಗಿ ನಟಿ ಹರ್ಷಿಕಾ ನಟಿಸಿದ್ದಾರೆ. ಸದ್ಯದಲ್ಲೇ `ತಾಯ್ತ’ ಚಿತ್ರ ತೆರೆಗೆ ಅಪ್ಪಳಿಸಲಿದೆ. ಕನ್ನಡ ಚಿತ್ರಗಳ ಜೊತೆಗೆ ಪರಭಾಷಾ ಚಿತ್ರಗಳಲ್ಲೂ ನಟಿಸ್ತಿರೋ ಹರ್ಷಿಕಾ ನಟಿಸಿರುವ ಚಿತ್ರಕ್ಕಾಗಿ ಅಭಿಮಾನಿಗಳು ಕಾಯ್ತಿದ್ದಾರೆ.

  • ಜನರ ಮುಖದ ಮೇಲೆ ನಗು ಮೂಡಿದಾಗಲೇ ನನ್ನ ಹುಟ್ಟುಹಬ್ಬ: ಹರ್ಷಿಕಾ ಪೂಣಚ್ಚ

    ಜನರ ಮುಖದ ಮೇಲೆ ನಗು ಮೂಡಿದಾಗಲೇ ನನ್ನ ಹುಟ್ಟುಹಬ್ಬ: ಹರ್ಷಿಕಾ ಪೂಣಚ್ಚ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಹರ್ಷಿಕಾ ಪೂಣಚ್ಚ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ ಕೊರೊನಾದಿಂದಾಗಿ ಉಂಟಾಗಿರುವ ಸಂಕಷ್ಟದಿಂದಾಗಿ ಅವರು ಈ ಸಲ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಜನರ ಮುಖದ ಮೇಲೆ ನಗು ಮೂಡಿದ ನಂತರ ಬರ್ತ್ ಡೇ ಆಚರಿಸಿಕೊಳ್ಳುವುದಾಗಿ ನಿರ್ಧರಿದ್ದಾರೆ.

    ಜನರ ಮುಖದಲ್ಲಿ ನಗುವನ್ನು ಮತ್ತೆ ನೋಡಲು ನಾನು ಬಯಸುತ್ತೇನೆ. ಆ ದಿನ ಈ ನಗುತ್ತಿರುವ ರಾಣಿ ತನ್ನ ಜನ್ಮದಿನವನ್ನು ಆಚರಿಸುತ್ತಾರೆ. ಎಲ್ಲಾ ಶುಭಾಶಯಗಳು ಮತ್ತು ಆಶ್ಚರ್ಯಕರ ಉಡುಗೊರೆಗಳಿಗೆ ಧನ್ಯವಾದಗಳು. ನಾನು ಅವರನ್ನು ಪ್ರೀತಿಸುತ್ತೇನೆ ಆದರೆ ನೀವು ಕೊರೊನಾ ರೋಗಿಗಳಿಗೆ ಹಾಸಿಗೆಗಳು, ಆಮ್ಲಜನಕ ಮತ್ತು ಸಹಾಯವನ್ನು ಪಡೆಯಲು ಸಹಾಯ ಮಾಡಿದರೆ ನನ್ನ ಅತ್ಯುತ್ತಮ ಹುಟ್ಟುಹಬ್ಬದ ಉಡುಗೊರೆ ಆಗುತ್ತದೆಎಂದು ಬರೆದುಕೊಂಡು ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದಾರೆ.

    ನಟಿ ಹರ್ಷಿಕಾ ಪೂಣಚ್ಚ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಆದರೆ ಹರ್ಷಿಕಾ ಮಾತ್ರ ನಾನು ಈ ಸಲ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲಎಂದು ಹೇಳಿದ್ದಾರೆ. ಕಾರಣ ಕೊರೊನಾದಿಂದಾಗಿ ಜನರು ಸಂಕಷ್ಟದಲ್ಲಿರುವಾಗ ತಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ನಿರ್ಧರಿಸಿದ್ದಾರೆ.

    ಜನರ ಮೊಗದ ಮೇಲೆ ನಗು ಮೂಡಿದ ನಂತರವೇ ತನ್ನ ಹುಟ್ಟುಹಬ್ಬ ಆಚರಣೆ ಎಂದು ಹರ್ಷಿಕಾ ಸಾಮಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಜನರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಸೆಲೆಬ್ರಿಟಿಗಳು, ಸಿನಿಮಾ ತಾರೆಯರು ಕೊರೊನಾ ಕುರಿತಾಗಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಹಾಗೇ ಅವರಿಂದ ಆದಷ್ಟು ಸಹಾಯವನ್ನು ಮಾಡುತ್ತಿದ್ದಾರೆ.

  • ಬ್ರಿಟನ್‍ನಲ್ಲಿ ಹೊಸ ತಳಿಯಿಂದ ರಾಜ್ಯದಲ್ಲಿ ಟಫ್ ರೂಲ್ಸ್- ಹೋಂ ಕ್ವಾರಂಟೈನ್‍ಗೆ ಒಳಗಾಗ್ತಾರಾ ಹರ್ಷಿಕಾ…?

    ಬ್ರಿಟನ್‍ನಲ್ಲಿ ಹೊಸ ತಳಿಯಿಂದ ರಾಜ್ಯದಲ್ಲಿ ಟಫ್ ರೂಲ್ಸ್- ಹೋಂ ಕ್ವಾರಂಟೈನ್‍ಗೆ ಒಳಗಾಗ್ತಾರಾ ಹರ್ಷಿಕಾ…?

    ಬೆಂಗಳೂರು: ಬ್ರಿಟನ್‍ನಲ್ಲಿ ಕೊರೊನಾ ಹೊಸ ತಳಿಯಿಂದ ರಾಜ್ಯದಲ್ಲಿ ಟಫ್ ರೂಲ್ಸ್ ಘೋಷಣೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ನಟಿ ಹರ್ಷಿಕಾ ಪೂನಚ್ಚ ಹೋಂ ಕ್ವಾರಂಟೈನ್‍ಗೆ ಒಳಗಾಗುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

    14 ದಿನಗಳ ಹಿಂದೆ ವಿದೇಶದಿಂದ ಬಂದವರಿಗೆ ಪಾಸಿಟಿವ್, ನೆಗೆಟಿವ್ ಇದ್ದರೂ ಟೆಸ್ಟ್ ಗೆ ಸರ್ಕಾರ ಸೂಚನೆ ನೀಡಿದೆ. ಹರ್ಷಿಕಾ ಅವರು 8 ದಿನಗಳ ಹಿಂದೆಯಷ್ಟೇ ಲಂಡನ್ ಅಡ್ಡಾಡಿ ಮೊನ್ನೆ ಮೊನ್ನೆಯಷ್ಟೇ ಬೆಂಗಳೂರಿಗೆ ಬಂದಿದ್ದರು. ಇದೀಗ ಅವರು ಟೆಸ್ಟ್‍ಗೆ ಒಳಗಾಗುತ್ತಾರಾ…?, ಸರ್ಕಾರದ ಆದೇಶದಂತೆ ಹೋಂ ಕ್ವಾರಂಟೈನ್‍ಗೆ ಒಳಗಾಗುತ್ತಾರಾ ಎಂಬ ಪ್ರಶ್ನೆ ಮೂಡಿದೆ.

    ಮಾರಕ ರೂಪಾಂತರ ವೈರಸ್ ಹರಡ್ತಿರೋ ಲಂಡನ್‍ನಿಂದ ಕಳೆದ ವಾರವಷ್ಟೇ ನಟಿ ಬೆಂಗಳೂರಿಗೆ ವಾಪಸ್ ಆಗಿದ್ದರು. ಲಂಡನ್‍ನ ಬೀದಿ ಬೀದಿಯಲ್ಲಿಯೂ ಸುತ್ತಾಡಿದ್ದು, ಲಂಡನ್‍ನಿಂದ ಬಂದ ಮೇಲೆ ನಟಿ ಕ್ವಾರಂಟೈನ್ ಕೂಡ ಆಗಿಲ್ಲ.

    ಇಂಗ್ಲೆಂಡ್‍ಗೆ ವಿಮಾನ ಹಾರಾಟ ಬ್ಯಾನ್ ಮಾಡುವ ಮುನ್ನ ಹರ್ಷಿಕಾ ಬೆಂಗಳೂರಿಗೆ ಆಗಮಿಸಿದ್ದರು. ಭೋಜ್‍ಪುರಿ ಚಿತ್ರದ ಶೂಟಿಂಗ್‍ಗಾಗಿ ತೆರಳಿದ್ದ ಹರ್ಷಿಕಾ ಚಿತ್ರೀಕರಣಕ್ಕಾಗಿ ಲಂಡನ್‍ನಲ್ಲಿ ಬೀಡು ಬಿಟ್ಟಿದ್ದರು. ನವೆಂಬರ್-ಡಿಸೆಂಬರ್‍ನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಪವನ್ ಸಿಂಗ್ ಈ ಸಿನಿಮಾ ಹೀರೋ ಆಗಿ ನಟಿಸಿದ್ದಾರೆ. ಹರ್ಷಿಕಾ ಅಭಿನಯದ ಮೊದಲು ಭೋಜ್‍ಪುರಿ ಸಿನಿಮಾವನ್ನು ಪ್ರೇಮಾಂಶು ಸಿಂಗ್ ನಿರ್ದೇಶನ ಮಾಡಿದ್ದಾರೆ.

     

  • ಮತದಾನ ಮಾಡಿ ಕಣ್ಣೀರಿಟ್ಟ ಹರ್ಷಿಕಾ ಪೂಣಚ್ಚ

    ಮತದಾನ ಮಾಡಿ ಕಣ್ಣೀರಿಟ್ಟ ಹರ್ಷಿಕಾ ಪೂಣಚ್ಚ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಹರ್ಷಿಕಾ ಪೂಣಚ್ಚ ಮತದಾನ ಮಾಡಲು ಬಂದು ತನ್ನ ತಂದೆಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

    ಮತ ಚಲಾಯಿಸಿ ಮಾಧ್ಯಮಗಳ ಜೊತೆ ಮಾತನಾಡಿ ಹರ್ಷಿಕಾ, ಪ್ರತಿ ಬಾರಿ ನಾನು ನನ್ನ ತಂದೆ ಜೊತೆ ಬಂದು ವೋಟ್ ಮಾಡುತ್ತಿದ್ದೆ. ಆದರೆ 2 ತಿಂಗಳ ಹಿಂದೆ ತಂದೆ ನಿಧನರಾದರು. ಈ ಬಾರಿ ವೋಟ್ ಮಾಡಲು ಇಷ್ಟವಿಲ್ಲ ಎಂದು ನಾನು ಕಾರಣ ಕೊಡಬಹುದಿತ್ತು. ಪ್ರಜೆಯಾಗಿ ನಾವು ನಮ್ಮ ಹಕ್ಕನ್ನು ಚಲಾಯಿಸಲೇಬೇಕು. ನಮ್ಮ ದೇಶದಲ್ಲಿ ನಮಗೆ ಈಗ ಹಕ್ಕು ನೀಡಿದ್ದಾರೆ. ಸಾಕಷ್ಟು ದೇಶದಲ್ಲಿ ಹೆಣ್ಣು ಮಕ್ಕಳಿಗೆ ಹೊರಗೆ ಬರಲು ಬಿಡುವುದಿಲ್ಲ. ರಾಜರ ಆಳ್ವಿಕೆ ಇದೆ. ಅವನಿಗೆ ಗಲ್ಲು ಹಾಕಿ ಎಂದರೆ ಗಲ್ಲು ಹಾಕುತ್ತಾರೆ. ಅಂತಹದರಲ್ಲಿ ನಮಗೆ ಹಕ್ಕು ನೀಡಿದ್ದಾರೆ. ಬಂದು ಮತ ಚಲಾಯಿಸಿ ನಮ್ಮ ನಾಯಕರನ್ನು ಗೆಲ್ಲಿಸಿ. ಇದಕ್ಕೆ ಒಂದು ಕಾರಣ ಕೊಟ್ಟು ಸುಮ್ಮನೆ ಮನೆಯಲ್ಲಿ ಇರಬೇಡಿ ಎಂದರು.

    ಇಂದು ಬೆಳಗ್ಗೆಯಿಂದ ನನ್ನ ಮನಸ್ಸು ತುಂಬಾ ಭಾರವಾಗಿತ್ತು. ಮತ ಮಾಡಲು ನಾನು ಇಂದು ತಡವಾಗಿ ಬಂದೆ. ಏಕೆಂದರೆ ಚುನಾವಣೆ ಎಂದು ಬಂದಾಗ ನನ್ನ ಪ್ರತಿಯೊಂದು ಹೆಜ್ಜೆಯಲ್ಲಿ ನನ್ನ ತಂದೆ ನೆನಪಾಗುತ್ತಾರೆ. ಏಕೆಂದರೆ ಚುನಾವಣೆ ಇದ್ದರೆ ನನ್ನ ತಂದೆ ಬೆಳಗ್ಗೆ ಎದ್ದ ತಕ್ಷಣ ನಾವು ಮತ ಚಲಾಯಿಸಬೇಕು ಎದ್ದೇಳಿ ಹೋಗೋಣ ಎಂದು ಎಲ್ಲರಿಗೂ ಮೊದಲೇ ತಯಾರಾಗಿ ನಮಗೆ ಕಾಯುತ್ತಿದ್ದರು. ಆದರೆ ಇಂದು ನಮ್ಮನ್ನು ಈ ರೀತಿ ಕರೆಯುವುದಕ್ಕೆ ನನ್ನ ತಂದೆ ಇರಲಿಲ್ಲ. ಇದು ನಮ್ಮ ಹಕ್ಕು. ನಾವು ಇದನ್ನೇ ಮಾಡಲೇಬೇಕು ಎಂದು ಹೇಳಿದೆ ಎಂದು ಹರ್ಷಿಕಾ ತಿಳಿಸಿದರು.

    ಪ್ರಜಾಪ್ರಭುತ್ವದಲ್ಲಿ ಇದ್ದುಕೊಂಡು ಎಲ್ಲರೂ ತಪ್ಪದೆ ಮತದಾನ ಮಾಡಬೇಕು. ನಿಮಗೆ ಯಾರು ಸೂಕ್ತ ಎಂದು ಎನಿಸುತ್ತಾರೋ ಅವರಿಗೆ ಮತದಾನ ಮಾಡಿ. ಇಂದು ಸುಮಾರು ಕಂಪನಿಗಳಿಗೆ ರಜೆ ಕೊಟ್ಟಿದಾರೆ. ಅವರೆಲ್ಲರು ಬಂದು ಮತದಾನ ಮಾಡಿ. ಯಾರಿಗೂ ವೋಟ್ ಮಾಡಿಲ್ಲ ಎಂದರೆ ನಾವೇ ಮುಂದೆ ಕಷ್ಟಪಡಬೇಕಾಗುತ್ತೆ. ವೈಯಕ್ತಿಕ ಕೆಲಸ ಇದೆ ಎಂದು ಮತ ಚಲಾಯಿಸುವುದನ್ನು ಮರೆಯಬಾರದು. ಎಲ್ಲರಿಗೂ ವೈಯಕ್ತಿಕ ಕೆಲಸ ಇರುತ್ತದೆ. ನನಗೂ ವೈಯಕ್ತಿಕ ಕೆಲಸ ಇದೆ. ಆದರೂ ಸಹ ನಾನು ಮತ ಚಲಾವಣೆಗೆ ಬಂದಿದ್ದೇನೆ. ನೀವು ಕೂಡ ಮತ ಚಲಾಯಿಸಿ ಎಂದು ಹರ್ಷಿಕಾ ಮತದಾರರಲ್ಲಿ ಮನವಿ ಮಾಡಿಕೊಂಡರು.

  • ಸುಧಾಕರ್ ಮಂತ್ರಿ ಆಗಬೇಕು – ಬಿಜೆಪಿ ಪರ ನಟಿ ಹರ್ಷಿಕಾ ಪೂಣಚ್ಚ ಪ್ರಚಾರ

    ಸುಧಾಕರ್ ಮಂತ್ರಿ ಆಗಬೇಕು – ಬಿಜೆಪಿ ಪರ ನಟಿ ಹರ್ಷಿಕಾ ಪೂಣಚ್ಚ ಪ್ರಚಾರ

    ಚಿಕ್ಕಬಳ್ಳಾಪುರ: ಉಪಚುನಾವಣೆಯ ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ನಟಿ ಹರ್ಷಿಕಾ ಪೂಣಚ್ಚ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

    ಚಿಕ್ಕಬಳ್ಳಾಪುರ ನಗರದ 1ನೇ ವಾರ್ಡಿನಲ್ಲಿ ಹರ್ಷಿಕಾ ಪೂಣಚ್ಚ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಅಭಿವೃದ್ಧಿಯ ಹರಿಕಾರರಾಗಿರುವ ಸುಧಾಕರ್ ಈ ಬಾರಿಯೂ ಗೆಲುವು ಸಾಧಿಸಲಿದ್ದು ಮಂತ್ರಿಯಾಗಬೇಕು ಎಂಬುದು ನಮ್ಮ ಆಸೆ ಎಂದು ಹರ್ಷಿಕಾ ಪೂಣಚ್ಚ ಹೇಳಿದ್ದಾರೆ.

    ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸುಧಾಕರ್ ಅವರು ತುಂಬಾ ಒಳ್ಳೆಯ ನಾಯಕ, ಅವರು ಈ ಚುನಾವಣೆಯಲ್ಲಿ ಗೆಲ್ಲಬೇಕು. ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಸಾಕಷ್ಟು ಶ್ರಮಿಸಿದ್ದಾರೆ. ಎಲ್ಲಾ ಕಡೆ ರೋಡ್ ಮಾಡಿಸಿದ್ದಾರೆ. ಸುಧಾಕರ್ ರೀತಿಯ ಡೈನಾಮಿಕ್ ನಾಯಕರು ಈ ಚಿಕ್ಕಬಳ್ಳಾಪುರ ಜಿಲ್ಲೆಗೆ ಬೇಕಾಗಿದ್ದಾರೆ. ಜನರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುವ ರಾಜಕಾರಣಿಗಳು ನಮಗೆ ಬೇಕು ಎಂದು ಹೇಳಿದರು.

    ನಾನು ಚಿಕ್ಕಬಳ್ಳಾಪುರವನ್ನು ಬಹಳ ದಿನಗಳಿಂದ ನೋಡಿದ್ದೇನೆ. ಈ ಜಿಲ್ಲೆ ಹಿಂದೆ ಹೇಗಿತ್ತು? ಈಗ ಹೇಗೆ ಅಭಿವೃದ್ಧಿಯಾಗಿದೆ. ಇದಕ್ಕೆಲ್ಲ ಕಾರಣ ಯಾರು ಎಂಬುದು ನನಗೆ ಗೊತ್ತು. ಸುಧಾಕರ್ ಗೆದ್ದು ಶಾಸಕರಾಗಿ ನಂತರ ಮಂತ್ರಿಯಾಗಬೇಕು. ಒಂದು ಹೊಸ ತಾಲೂಕನ್ನು ಮಾಡಿಸುವುದು ಸುಲಭದ ಕೆಲಸವಲ್ಲ. ಆದರೆ ಸುಧಾಕರ್ ಅವರು ಮಂಚೇನಹಳ್ಳಿಯನ್ನು ಹೊಸ ತಾಲೂಕನ್ನಾಗಿ ಮಾಡಿದ್ದಾರೆ. ಐದು ಸಾವಿರ ಸೈಟ್ ಹಂಚಿದ್ದಾರೆ. ಮೆಡಿಕಲ್ ಕಾಲೇಜು ಕಟ್ಟಿಸುತ್ತಿದ್ದಾರೆ ಹಾಗಾಗಿ ಅವರು ಮತ್ತೆ ಗೆಲ್ಲಬೇಕು. ಈ ಕಾರಣಕ್ಕೆ ನಾನು ಪ್ರಚಾರಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.