Tag: Harshika Ponachha

  • ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಲು ರೆಡಿಯಾದ ಹರ್ಷಿಕಾ-ಭುವನ್

    ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಲು ರೆಡಿಯಾದ ಹರ್ಷಿಕಾ-ಭುವನ್

    ಸ್ಯಾಂಡಲ್‌ವುಡ್ ಚಿಟ್ಟೆ ಹರ್ಷಿಕಾ (Harshika) ಮೇಲೆ ಕೊಡಗಿನ ಕುವರ ಭುವನ್ ಪೊನ್ನಣ್ಣಗೆ ಪ್ಯಾರ್ ಆಗಿದೆ. ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಲು ಈ ಜೋಡಿ ರೆಡಿಯಾಗಿದೆ. ಅಷ್ಟಕ್ಕೂ ಇಬ್ಬರಿಗೂ ಲವ್ ಆಗಿದ್ದು ಹೇಗೆ, ಮೊದಲ ಭೇಟಿ ಪ್ರೀತಿಗೆ ತಿರುಗಿದ್ದು ಹೇಗೆ? ಹರ್ಷಿಕಾ- ಭುವನ್ (Bhuvan) ಪ್ರೇಮ ಕಹಾನಿ ಬಗ್ಗೆ ಇಂಚಿಂಚು ಕಥೆ ಇಲ್ಲಿದೆ ನೋಡಿ.

    ವಸಿಷ್ಠ ಸಿಂಹ- ಹರಿಪ್ರಿಯಾ, ಅಭಿಷೇಕ್-ಅವಿವಾ ಮದುವೆ ನಂತರ ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಮದುವೆಯ ಸಂಭ್ರಮ ಮನೆಮಾಡಿದೆ. ಈ ಮೂಲಕ ಚಂದನವನದ ಮತ್ತೊಂದು ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದೆ. ಭವನ್‌ಗೆ ಹರ್ಷಿಕಾ ಮನಸೋತಿದ್ದು ಹೇಗೆ.? ಹರ್ಷಿಕಾ ಚಿತ್ರ ಜೀವನದಿಂದ ಭುವನ್ ಜೊತೆಗಿನ ಲವ್ ಸ್ಟೋರಿವರೆಗೂ ಇಲ್ಲಿದೆ ಅಪ್‌ಡೇಟ್. ಇದನ್ನೂ ಓದಿ:ಕೋಟಿ ಕೊಟ್ರೂ ಸಿನಿಮಾದಲ್ಲಿ ಕಿಸ್‌ ಮಾಡಲ್ಲ- ಪ್ರಿಯಾಮಣಿ ಖಡಕ್‌ ಉತ್ತರ

    ‘ಪಿಯುಸಿ’ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಪರಿಚಿತರಾದ ನಟಿ ಹರ್ಷಿಕಾ ಪೂಣಚ್ಚ ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದರು. ತಮಸ್ಸು, ಜಾಕಿ ಚಿತ್ರದಲ್ಲಿ ಹರ್ಷಿಕಾ ಅದ್ಭುತವಾಗಿ ನಟಿಸಿದ್ದರು. ಕೊಡಗಿನ ಕುವರಿ ಹರ್ಷಿಕಾ ಅವರು ಸಾಲು ಸಾಲು ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಗಟ್ಟಿ ಸ್ಥಾನ ಗಿಟ್ಟಿಸಿಕೊಳ್ಳುವ ಸಂದರ್ಭದಲ್ಲಿ 2010ರಲ್ಲಿ ಭುವನ್ ಪೊನ್ನಣ್ಣ ಅವರು ‘ಜಸ್ಟ್ ಮಾತ್ ಮಾತಲ್ಲಿ’ ಚಿತ್ರದ ಮೂಲಕ ಎಂಟ್ರಿ ಕೊಟ್ಟರು. ಗಣೇಶ್ ನಟನೆಯ ಕೂಲ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಭುವನ್ ನಟಿಸಿದ್ರು. ಆದರೆ ಗುರುತಿಸುವಂತಹ ಪಾತ್ರ ಅವರಿಗೆ ಸಿಗಲೇ ಇಲ್ಲಾ. ಅದ್ಯಾವಾಗ ಸುದೀಪ್ ನಿರೂಪಣೆಯ ಬಿಗ್ ಬಾಸ್ ಶೋ ಮೂಲಕ ದೊಡ್ಮನೆಗೆ ಕಾಲಿಟ್ರೋ ಅಂದಿನಿಂದ ಕನ್ನಡಿಗರ ಕಣ್ಣಿಗೆ ಭುವನ್ ಗಮನ ಸೆಳೆದರು.

    ಹರ್ಷಿಕಾ- ಭುವನ್ ಒಂದೇ ಜಿಲ್ಲೆ ಕೂರ್ಗ್‌ನವರಾಗಿದ್ದಾರೆ. ಆ ಆಪ್ತತೆಯೇ ಇಬ್ಬರನ್ನು ಲವ್ ರಿಂಗ್‌ಗೆ ಬೀಳುವಂತೆ ಮಾಡಿತ್ತು. ಹಲವು ವರ್ಷಗಳ ಗೆಳೆತನವೇ ಇಂದು ಮದುವೆಯೆಂಬ ಹೊಸ ಹೆಜ್ಜೆ ಇಡಲು ಸಾಕ್ಷಿಯಾಗಿದೆ. ಈ ಜೋಡಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಬ್ಬರೂ ಜೊತೆಯಾಗಿ ಸಮಾಜಮುಖಿ ಕಾರ್ಯಗಳನ್ನೂ ಮಾಡಿದ್ದಾರೆ. ಕೊವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಅನೇಕರಿಗೆ ಅವರು ನೆರವು ನೀಡಿದ್ದರು. ಇಬ್ಬರ ನಡುವೆ ಪ್ರೀತಿ ಇದೆ ಎಂದು ಅನೇಕ ಬಾರಿ ಗಾಸಿಪ್ ಹಬ್ಬಿತ್ತು. ಆದರೆ ಆ ಕುರಿತು ಅವರು ಬಹಿರಂಗವಾಗಿ ಏನನ್ನೂ ಹೇಳಿಕೊಂಡಿರಲಿಲ್ಲ. ಈಗ ಅವರಿಬ್ಬರು ವೈವಾಹಿಕ ಜೀವನ (Wedding)ಆರಂಭಿಸುವ ಸಿದ್ಧತೆಯಲಿದ್ದಾರೆ. ಎರಡೂ ಕುಟುಂಬಗಳು ಮದುವೆಗೆ ತಯಾರಿ ಮಾಡಿಕೊಳ್ಳುತ್ತಿವೆ.

    ಇದೇ ಜುಲೈ 15ಕ್ಕೆ ಕೊಡಗಿನಲ್ಲಿ ಭುವನ್ ಮನೆಯ ಗೃಹಪ್ರವೇಶ. ಇದಾದ ಬಳಿಕ ಕೊಡವ ಸಂಪ್ರದಾಯದಂತೆ ಹರ್ಷಿಕಾ-ಭುವನ್ ಅವರು ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗುತ್ತಿದ್ದಾರೆ. ಆಗಸ್ಟ್ 24ಕ್ಕೆ ವಿರಾಜ್‌ಪೇಟೆಯಲ್ಲಿ ಹರ್ಷಿಕಾ-ಭುವನ್ ಅದ್ದೂರಿ ಮದುವೆ ನಡೆಯಲಿದೆ. ರಾಜಕೀಯ- ಚಿತ್ರರಂಗದ ಗಣ್ಯರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಮದುವೆಯ ಆಮಂತ್ರಣ ಪತ್ರಿಕೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೆಬ್ ಸಿರೀಸ್‌ನತ್ತ ಮುಖ ಮಾಡಿದ ಹರ್ಷಿಕಾ ಪೂಣಚ್ಚ

    ವೆಬ್ ಸಿರೀಸ್‌ನತ್ತ ಮುಖ ಮಾಡಿದ ಹರ್ಷಿಕಾ ಪೂಣಚ್ಚ

    ಕೊಡಗಿನ ಬ್ಯೂಟಿ ಹರ್ಷಿಕಾ ಪೂಣಚ್ಚ (Harshika Poonacha) ಎಂಟು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದಾ ವಿಭಿನ್ನ ಪಾತ್ರಗಳ ಮೂಲಕ ಕಮಾಲ್ ಮಾಡುವ ನಟಿ ಈಗ ಸಿನಿಮಾ ನಂತರ ಹೊಸದೊಂದು ವೆಬ್ ಸಿರೀಸ್‌ಗೆ ಹರ್ಷಿಕಾ ಬಣ್ಣ ಹಚ್ಚುತ್ತಿದ್ದಾರೆ.

    ಬ್ಯೂಟಿ ಜೊತೆ ಪ್ರತಿಭೆ ಇರುವ ನಟಿ ಹರ್ಷಿಕಾ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದಾ ಪ್ರಯೋಗಾತ್ಮಕ ಪಾತ್ರಗಳ ಮೂಲಕ ಕಾಣಿಸಿಕೊಳ್ಳುವ ಈ ನಟಿ, ಇದೀಗ ವೆಬ್ ಸಿರೀಸ್‌ನತ್ತ (Web Series) ಮುಖ ಮಾಡಿದ್ದಾರೆ. ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿ ವಿಜೇತ ನಟಿಯನ್ನೇ ಬಿಡಲಿಲ್ಲ ಬಾಡಿ ಶೇಮಿಂಗ್‌ ಭೂತ

    ಕಮರ್ ಫಿಲ್ಮ್ ಪ್ಯಾಕ್ಟರಿಯಿಂದ ನಿರ್ಮಾಣವಾಗುತ್ತಿರುವ ಈ ವೆಬ್ ಸಿರೀಸ್‌ನಲ್ಲಿ ಎಂದೂ ಮಾಡಿರದ ಭಿನ್ನ ಪಾತ್ರದ ಮೂಲಕ ಹರ್ಷಿಕಾ ಕಾಣಿಸಿಕೊಳ್ತಿದ್ದಾರೆ. ವೆಬ್ ಸಿರೀಸ್‌ನ ಮೊದಲ ಟ್ರೈಲರ್ ಮುಂದಿನ ಅಕ್ಟೋಬರ್‌ನಲ್ಲಿ ತೆರೆಕಾಣುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ವಿಜಯ್-ಹರ್ಷಿಕಾ ನಟನೆಯ `ಕಾಸಿನ ಸರ’ ಚಿತ್ರಕ್ಕೆ ಮುಹೂರ್ತ

    ವಿಜಯ್-ಹರ್ಷಿಕಾ ನಟನೆಯ `ಕಾಸಿನ ಸರ’ ಚಿತ್ರಕ್ಕೆ ಮುಹೂರ್ತ

    ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಇದೀಗ `ಕಾಸಿನ ಸರ’ ಚಿತ್ರದ ಮೂಲಕ ಸೌಂಡ್ ಮಾಡ್ತಿದ್ದಾರೆ. ಹರ್ಷಿಕಾಗೆ ವಿಜಯ್ ರಾಘವೇಂದ್ರ ಸಾಥ್ ನೀಡ್ತಿದ್ದಾರೆ.

    ಈಗಾಗಲೇ ಸಾಕಷ್ಟು ಚಿತ್ರಗಳ ಮೂಲಕ ಮೋಡಿ ಮಾಡಿರುವ ನಟಿ ಹರ್ಷಿಕಾ ಈಗ `ಕಾಸಿನ ಸರ’ ಚಿತ್ರದಲ್ಲಿ ಸಂಪಿಗೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹರ್ಷಿಕಾ ಕೃಷಿ ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಟ ವಿಜಯ್ ರಾಘವೇಂದ್ರ ಕೂಡ ನಟಿಸಲಿದ್ದಾರೆ. ಈ ಚಿತ್ರದ ಮುಹೂರ್ತ ನೆರವೇರಿದ್ದು,  ಚಿತ್ರಕ್ಕೆಸಚಿವ ಎಸ್.ಟಿ ಸೋಮಶೇಖರ್‌ ಚಾಲನೆ ನೀಡಿದ್ದಾರೆ.

    ಎಂದೂ ಮಾಡಿರದ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಯುವತಿಯ ಪಾತ್ರದಲ್ಲಿ ಹರ್ಷಿಕಾ ನಟಿಸಲಿದ್ದಾರೆ. ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಿರಿಯ ನಿರ್ದೇಶಕ ನಂಜುಂಡೇಗೌಡ ನಿರ್ದೇಶನದ ಚಿತ್ರದಲ್ಲಿ ನಟ ವಿಜಯ್ ರಾಘವೇಂದ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದೊಡ್ಡ ನಾಗಯ್ಯ `ಕಾಸಿನ ಸರ’ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಗ್ರಾಮೀಣ ಭಾಗದ ಕಥೆಯಾದ್ದರಿಂದ ಚೆನ್ನಪಟ್ಟಣ್ಣ, ಮಳವಳ್ಳಿ ಮುಂತಾದ ಕಡೆ 40 ದಿನಗಳ ಚಿತ್ರೀಕರಣ ನಡೆಯಲಿದೆ. ಇದನ್ನೂ ಓದಿ:ಅಫೇರ್ ಆರೋಪ ಬೆನ್ನಲ್ಲೇ ಧಿಡೀರ್ ಸಂಭಾವನೆ ಹೆಚ್ಚಿಸಿಕೊಂಡ ಪವಿತ್ರಾ ಲೋಕೇಶ್

    ಈ ಚಿತ್ರದ ಮುಹೂರ್ತದ ಸಂದರ್ಭದಲ್ಲಿ ಛಾಯಗ್ರಾಹಕ ವೇಣುಗೋಪಾಲ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್, ಹಿರಿಯ ನಿರ್ಮಾಪಕರಾದ ಚಿನ್ನೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು

    Live Tv
    [brid partner=56869869 player=32851 video=960834 autoplay=true]

  • ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಹರ್ಷಿಕಾ ಪೂಣಚ್ಚ

    ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಹರ್ಷಿಕಾ ಪೂಣಚ್ಚ

    ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ತಾವು ತೆರೆಯ ಮೇಲೆ ಮಾತ್ರ ನಾಯಕಿಯಲ್ಲ. ತೆರೆಯ ಹಿಂದೆಯೂ ನಾಯಕಿ ಅಂತಾ ಕೊರೊನಾ ವೇಳೆಯಲ್ಲಿ ತಮ್ಮ ಸಾಮಾಜಿಕ ಕಾರ್ಯದ ಮೂಲಕ ತೋರಿಸಿ ಕೊಟ್ಟವರು. ಭುವನಂ ಸಂಸ್ಥೆಯ ಮೂಲಕ ನಟ ಭುವನ್‌ಗೆ ಹರ್ಷಿಕಾ ಸಾಥ್ ನೀಡಿದ್ದರು. ಈಗ ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಅನ್ನು ಹರ್ಷಿಕಾ ಪೂಣಚ್ಚ ಸ್ವೀಕರಿಸಿದ್ದಾರೆ.

    ಬೆಳ್ಳಿಪರದೆಯಲ್ಲಿ ಸ್ಟಾರ್ ಆಗಿ ಮಿಂಚುವ ಅದೆಷ್ಟು ಕಲಾವಿದರು ನಿಜ ಜೀವನದಲ್ಲೂ ಸ್ಟಾರ್ ಆಗಿ ಇನ್ನೊಬ್ಬರ ಕಷ್ಟಕ್ಕೆ ಸಾಥ್ ನೀಡುವುದು ತುಂಬಾ ಕಮ್ಮಿ. ಆದರೆ ರಿಯಲ್ ಲೈಫ್‌ನಲ್ಲೂ ತಾವು ಹೀರೋನೇ ಅಂತಾ ನಟ ಭುವನ್ ಮತ್ತು ಹರ್ಷಿಕಾ ಪೂಣಚ್ಚ ತೋರಿಸಿ ಕೊಟ್ಟಿದ್ದರು. ಭುವನಂ ಸಂಸ್ಥೆಯ ಮೂಲಕ ಅದೆಷ್ಟೋ ಸಂಕಷ್ಟದಲ್ಲಿರುವವರಿಗೆ ನೆರವಾಗಿ ಭುವನ್ ಜೊತೆ ಹರ್ಷಿಕಾ ಸಾಥ್ ನೀಡಿದ್ದರು. ಇದನ್ನೂ ಓದಿ:ಕಿರುತೆರೆಗೆ ಮರಳಿದ ಎವರ್‌ಗ್ರೀನ್ ನಟಿ ಸುಧಾರಾಣಿ

    ಇದೀಗ ಇವರ ಸಮಾಜಮುಖಿ ಕಾರ್ಯ ಗುರುತಿಸಿ ಭುವನಂ ಸಂಸ್ಥೆಯ ಪರವಾಗಿ ನಟಿ ಹರ್ಷಿಕಾ, ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಅನ್ನು ಸ್ವೀಕರಿಸಿದ್ದಾರೆ. ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ನಟಿ ಹರ್ಷಿಕಾ ಅವರಿಗೆ ಮದರ್‌ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದ್ದರು. ಈ ಪ್ರಶಸ್ತಿಯಿಂದ ಭುವನಂ ಸಂಸ್ಥೆಯ ಮೂಲಕ ಮತ್ತಷ್ಟು ಸಮಾಜಮುಖಿ ಕೆಲಸ ಮಾಡಲು ನಟಿಗೆ ಪ್ರೇರಣೆ ಸಿಕ್ಕಂತಾಗಿದೆ. ಪ್ರಶಸ್ತಿಯ ಕುರಿತು ಹರ್ಷಿಕಾ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ನಟಿಗೆ ಶುಭಹಾರೈಸಿದ್ದಾರೆ.

    Live Tv

  • ನ್ಯೂಸ್ ರಿರ್ಪೋಟರ್ ಆದ್ರು ನಟಿ ಹರ್ಷಿಕಾ ಪೂಣಚ್ಚ

    ನ್ಯೂಸ್ ರಿರ್ಪೋಟರ್ ಆದ್ರು ನಟಿ ಹರ್ಷಿಕಾ ಪೂಣಚ್ಚ

    ಸ್ಯಾಂಡಲ್‌ವುಡ್ ಚಿಟ್ಟೆ ಹರ್ಷಿಕಾ ಪೂಣಚ್ಚ ಕನ್ನಡ ಮಾತ್ರವಲ್ಲದೇ ಬಹುಭಾಷಾ ಚಿತ್ರಗಳಲ್ಲೂ ಆಕ್ಟೀವ್ ಆಗಿರೋ ನಟಿ, ಈಗ ನ್ಯೂಸ್ ರಿರ್ಪೋಟರ್ ಆಗಿ ಬಣ್ಣ ಹಚ್ಚೋದಕ್ಕೆ ರೆಡಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳು ಕೈಯಲ್ಲಿರಬೇಕಾದರೆ ಕನ್ನಡದ ಥ್ರೀಲರ್ ಚಿತ್ರವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಇದೀಗ ಬೋಜಪರಿ ಚಿತ್ರರಂಗದಲ್ಲೂ ಬ್ಯುಸಿಯಿರೋ ಹರ್ಷಿಕಾ, ಕನ್ನಡದ `ಮಾರಕಾಸ್ತç’ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ನ್ಯೂಸ್ ರಿರ್ಪೋಟರ್ ಆಗಿ ಗಟ್ಟಿ ಪಾತ್ರದಲ್ಲಿ ನಟಿಸಲು ರೆಡಿಯಾಗಿದ್ದಾರೆ. ಎಲ್ಲೆ ಕ್ರೈಂ ನಡೆದರು ಅದನ್ನು ಭೇದಿಸುವ ಕ್ರೈಂ ವರದಿಗಾರ್ತಿ ಪಾತ್ರಕ್ಕೆ ನಟಿ ಜೀವ ತುಂಬಲಿದ್ದಾರೆ.

    ಗುರುಮೂರ್ತಿ ಸುನಾಮಿ ನಿರ್ದೇಶನದ ಸಸ್ಪೆನ್ಸ್ ಥ್ರಿಲರ್ ಚಿತ್ರದಲ್ಲಿ ಹೊಸ ಪ್ರತಿಭೆ ಆನಂದ್ ಆರ್ಯಗೆ ನಾಯಕಿಯಾಗಿ ಹರ್ಷಿಕಾ ಕಾಣಿಸಿಕೊಳ್ಳತ್ತಿದ್ದಾರೆ. ಕ್ರೈಂ ಪ್ರಕರಣವನ್ನು ಭೇದಿಸುವ ವರದಿಗಾರ್ತಿಯಾಗಿ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿದ್ದಾರೆ. ಇನ್ನು ನಟಿ ಹರ್ಷಿಕಾ ಕೈಯಲ್ಲಿ ಎರಡು ಬೋಜಪುರಿ ಚಿತ್ರಗಳಿದ್ದು, ತಾಯ್ತ, ಓ ಪ್ರೇಮ, ಸ್ತಬ್ಧ, ಸೂಪರ್ ಆಗಿದೆ ಲವ್ ಸ್ಟೋರಿ ಚಿತ್ರಗಳು ರಿಲೀಸ್‌ಗೆ ರೆಡಿಯಿದೆ. ಇದನ್ನೂ ಓದಿ: ಹೈದರಾಬಾದ್ ನಲ್ಲಿ ‘ಕೆಜಿಎಫ್ 2’ ಡೈರೆಕ್ಟರ್ ಪ್ರಶಾಂತ್ ನೀಲ್ ಗೆ ಮನೆ ಬೇಕಾಗಿದೆ

    ಬಹುಭಾಷಾ ನಟಿಯಾಗಿ ಗುರುತಿಸಿಕೊಳ್ತಿರೋ ಹರ್ಷಿಕಾ ನಟನೆಯ ಚಿತ್ರಕ್ಕಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಡಿಫರೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ತಿರೋ ಹರ್ಷಿಕಾ ಅಭಿನಯದ ಸಿನಿಮಾ ನೋಡಲು ಥ್ರೀಲ್ ಆಗಿದ್ದಾರೆ.

  • ಕೊಡವ ನೃತ್ಯ ಮಾಡಿ ಕೊರೊನಾ ಸೋಂಕಿತರನ್ನು ರಂಜಿಸಿದ ಹರ್ಷಿಕಾ, ಭುವನ್

    ಕೊಡವ ನೃತ್ಯ ಮಾಡಿ ಕೊರೊನಾ ಸೋಂಕಿತರನ್ನು ರಂಜಿಸಿದ ಹರ್ಷಿಕಾ, ಭುವನ್

    ಮಡಿಕೇರಿ: ಸ್ಯಾಂಡಲ್‍ವುಡ್ ಕಲಾವಿದರಾದ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ತೆರಳಿ ಕೊಡವ ನೃತ್ಯ ಮಾಡುವ ಮೂಲಕ ಕೊರೊನಾ ಸೋಂಕಿತರಿಗೆ ಮನರಂಜನೆ ನೀಡಿದ್ದಾರೆ.

    ಮಡಿಕೇರಿಯ ಕೋವಿಡ್ ಸೋಂಕಿತರಿರುವ ಜಿಲ್ಲಾಸ್ಪತ್ರೆಗೆ ಪಿಪಿಇ ಕಿಟ್ ಧರಿಸಿ ಭೇಟಿಕೊಟ್ಟ ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ನಾಲ್ಕು ನೂರಕ್ಕೂ ಹೆಚ್ಚು ಸೋಂಕಿತರೊಂದಿಗೆ ಮಾತುಕತೆ ನಡೆಸಿ ಧೈರ್ಯ ತುಂಬಿದರು. ಬಳಿಕ ಸೋಂಕಿತರೊಂದಿಗೆ ಕೊಡವ ಓಲಗ ನೃತ್ಯ ಮಾಡುವ ಮೂಲಕ ರಂಜಿಸಿದ್ದಾರೆ. ಬೆಡ್ ಮೇಲೆ ಮಲಗಿದ್ದ ಸೋಂಕಿತರು ಮಲಗಿದ್ದಲ್ಲಿಂದಲೇ ನೃತ್ಯ ನೋಡಿ ಎಂಜಾಯ್ ಮಾಡಿದ್ದಾರೆ. ಇದನ್ನೂ ಓದಿ: ಕಷ್ಟದಲ್ಲಿದ್ದವರ ಕಣ್ಣೀರು ಒರೆಸಲು ಮುಂದಾದ ನಟಿ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ

    ಕೆಲ ಸೋಂಕಿತರು ಬೆಡ್ ಮೇಲೆ ಎದ್ದು ಕುಳಿತು ಡ್ಯಾನ್ಸ್ ಮಾಡಿ ರಿಲ್ಯಾಕ್ಸ್ ಆಗಿದ್ದಾರೆ. ಸೋಂಕಿತ ಮಹಿಳೆಯೊಬ್ಬರು ಕೊಡವ ಓಲಗ ಸೌಂಡ್ ಕೇಳುತ್ತಿದ್ದಂತೆ ಬೆಡ್ ನಿಂದ ಕೆಳಗಿಳಿದು ಫುಲ್ ಡ್ಯಾನ್ಸ್ ಮಾಡಿದ್ದಾರೆ. ಇದಾದ ಬಳಿಕ ಕೆಲ ವಾರ್ಡ್‍ಗಳಲ್ಲಿ ವರನಟ ರಾಜ್ ಕುಮಾರ್ ಅವರ ಸಿನಿಮಾದ ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಹಾಡಿಗೆ ಸೋಂಕಿತರು ಹೆಜ್ಜೆ ಹಾಕಿದ್ದಾರೆ. ಭುವನ್ ಮತ್ತು ಹರ್ಷಿಕಾ ಜೋಡಿ ಕಳೆದ ಒಂದು ವಾರದಿಂದ ಹಳ್ಳಿ, ಹಳ್ಳಿಗಳಿಗೆ ತೆರಳಿ ಹೋಂಕ್ವಾರಂಟೈನ್ ಆಗಿರುವ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಿ ಸೋಂಕಿತರಿಗೆ ನೆರವಾಗಿದ್ದರು.ಇದನ್ನೂ ಓದಿ: ಬೆಟ್ಟಗುಡ್ಡದಲ್ಲಿ ಸೀಲ್ ಡೌನ್ ಆದ ಸೋಂಕಿತರ ಮನೆಗಳಿಗೆ ಭುವನ್ ಹರ್ಷಿಕಾ ನೆರವು